ನಡೆದು ಪರಬಲ ಮಧ್ಯದಲಿ ನೀರ್ಗುಡಿಸಿ ಹರಿಯನು ಸಕಲ ಸುಭಟರ ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ
naḍedu parabala madhyadali nīrguḍisi hariyanu sakala subhaṭara maḍuhi phaluguṇa gelidanaggada kauravēśvarana
ದ್ರೋಣ ಪರ್ವ — ಸಂಧಿ ೧೦ · ದ್ರೋಣ ಪರ್ವ — ಸಂಧಿ ೧೦
drōṇa parva — saṃdhi 10
The complete drona parva · sandhi 10 in Kannada.
63 passagesKannada with transliteration
Invocation
ನಡೆದು ಪರಬಲ ಮಧ್ಯದಲಿ ನೀರ್ಗುಡಿಸಿ ಹರಿಯನು ಸಕಲ ಸುಭಟರ ಮಡುಹಿ ಫಲುಗುಣ ಗೆಲಿದನಗ್ಗದ ಕೌರವೇಶ್ವರನ
naḍedu parabala madhyadali nīrguḍisi hariyanu sakala subhaṭara maḍuhi phaluguṇa gelidanaggada kauravēśvarana
ನರನು ಕಳುಹಿಸಿಕೊಳಲು ಗುರುಮೋ ಹರವನಪಸವ್ಯದಲಿ ವಂಚಿಸಿ ಮುರುಹಿದನು ಮುರವೈರಿ ರಥವನು ಮುಂದಣೊಡ್ಡಿಂಗೆ ಅರರೆ ನರನೋ ನೂಕು ನೂಕರಿ ಬಿರುದರಾವಡೆ ಪೂತು ಮಝ ಎಂ ದುರವಣಿಸಿದರು ಮುರಿದು ಮಕರವ್ಯೂಹದತಿರಥರು
naranu kaḷuhisikoḷalu gurumō haravanapasavyadali vaṃcisi muruhidanu muravairi rathavanu muṃdaṇoḍḍiṃge arare naranō nūku nūkari birudarāvaḍe pūtu majha eṃ duravaṇisidaru muridu makaravyūhadatiratharu
ನೂಕಿತರಿಚತುರಂಗಬಲ ನೆಲ ನೋಕರಿಸಿತೋ ಪ್ರಳಯಜಲಧಿಯ ನೂಕುತೆರೆಗಳ ಲಹರಿಯೋ ನಿಲುವಾತನಾರಿದಕೆ ನಾಕು ಕಡೆಯಲಿ ಕವಿದುದಳವಿಗೆ ನೂಕುನೂಕಾಯಿತ್ತು ನರನ ವ್ಯಾಕುಳತೆಯಲಿ ಸವರತೊಡಗಿದನಹಿತಬಲ ವನವ
nūkitaricaturaṃgabala nela nōkarisitō praḷayajaladhiya nūkuteregaḷa lahariyō niluvātanāridake nāku kaḍeyali kavidudaḷavige nūkunūkāyittu narana vyākuḷateyali savaratoḍagidanahitabala vanava
ಕುಸುರಿದರಿದವು ಜೋಡು ವಜ್ರದ ರಸುಮೆಗಳು ಹಾರಿದವು ರಿಪುಗಳ ಯೆಸೆವ ಸೀಸಕ ಕವಚವನು ಸೀಳಿದನು ಕೋಲಿನಲಿ ನೊಸಲ ಸೀಸಕ ನುಗ್ಗುನುಸಿ ಬಂ ಧಿಸಿದ ಸರಪಣಿ ಹಿಳಿದವರಿಬಲ ದೆಸಕ ನಿಂದುದು ಪಾರ್ಥನೆಚ್ಚನು ವೈರಿಮೋಹರವ
kusuridaridavu jōḍu vajrada rasumegaḷu hāridavu ripugaḷa yeseva sīsaka kavacavanu sīḷidanu kōlinali nosala sīsaka nuggunusi baṃ dhisida sarapaṇi hiḷidavaribala desaka niṃdudu pārthaneccanu vairimōharava
ಕುಳುವೆಳಗು ಕಿಡಿಗೆದರೆ ಹೊಗರಿನ ಹೊಳಹು ಗಗನವನುಗುಳೆ ಧಾರೆಯ ಬಲುಗಿಡಿಗಳುರಿ ಮಸಗೆ ತಳಿಹದ ಬಣ್ಣ ಗಜಗಜಿಸೆ ಹಿಳುಕು ಬೊಬ್ಬಿಡೆ ಹೊದರಡಸಿ ಕಣ ಗಿಲೆಯ ಕೋಲುಳಿಯಂಬು ಕವಲಂ ಬಲಗಿನಂಬೀಸಾಡಿದವು ಪರಸೈನ್ಯಸಾಗರವ
kuḷuveḷagu kiḍigedare hogarina hoḷahu gaganavanuguḷe dhāreya balugiḍigaḷuri masage taḷihada baṇṇa gajagajise hiḷuku bobbiḍe hodaraḍasi kaṇa gileya kōluḷiyaṃbu kavalaṃ balaginaṃbīsāḍidavu parasainyasāgarava
ವ್ರಣದ ಬಲುವೊನಲೊಳಗೆ ತಲೆಗಳು ಕುಣಿದವರ್ಜುನನಂಬಿನುರುಬೆಗೆ ಹೆಣನ ದಾವಣಿ ಹಾಸಿದವು ಸೂಸಿದವು ದೊಂಡೆಗಳು ತಣಿದನಂತಕನಟ್ಟೆಗಳ ರಿಂ ಗಣದ ನಾಟಕದೊಳಗೆ ಸಮರಾಂ ಗಣದ ರೌರವ ರೌದ್ರವಾಯಿತು ಕಳನ ಚೌಕದಲಿ
vraṇada baluvonaloḷage talegaḷu kuṇidavarjunanaṃbinurubege heṇana dāvaṇi hāsidavu sūsidavu doṃḍegaḷu taṇidanaṃtakanaṭṭegaḷa riṃ gaṇada nāṭakadoḷage samarāṃ gaṇada raurava raudravāyitu kaḷana caukadali
ಏರುಗಳು ಬುದುಬುದಿಸಿ ರಕುತವ ಕಾರಿ ಕಾಳಿಜ ಖಂಡ ನೆಣ ಜಿಗಿ ದೋರಿ ಬೆಳುನೊರೆ ಮಸಗಿ ನಸುಬಿಸಿರಕುತ ಹೊನಲಿಡಲು ಕೌರಿಡಲು ಕಡಿದುಡಿದವೆಲು ಮೊಗ ದೋರುಗಳ ಪೂರಾಯ ಘಾಯದ ತಾರುಥಟ್ಟಿನ ಹೆಣನ ಮೆದೆ ಹೇರಾಳ ರಂಜಿಸಿತು
ērugaḷu budubudisi rakutava kāri kāḷija khaṃḍa neṇa jigi dōri beḷunore masagi nasubisirakuta honaliḍalu kauriḍalu kaḍiduḍidavelu moga dōrugaḷa pūrāya ghāyada tāruthaṭṭina heṇana mede hērāḷa raṃjisitu
ಎಲೆಲೆ ಪ್ರಳಯದ ರುದ್ರನನು ತಲೆ ಬಳಿಚಿಬಿಟ್ಟನು ದ್ರೋಣನಕಟಾ ನೆಲನೊಡೆಯನಾಪ್ತಿಗರು ಬಗೆದರು ಸ್ವಾಮಿದ್ರೋಹಿಕೆಯ ಕೊಲುವವನು ಫಲುಗುಣನೊ ದ್ರೋಣನೊ ಕೊಲೆಗಡಿಗನೋ ಕೊಂದನೋ ಕುರು ಕುಲತಿಲಕ ನೆರೆ ಪಾಪಿಯೆಂದರು ನಿಖಿಳ ಪರಿವಾರ
elele praḷayada rudrananu tale baḷicibiṭṭanu drōṇanakaṭā nelanoḍeyanāptigaru bagedaru svāmidrōhikeya koluvavanu phaluguṇano drōṇano kolegaḍiganō koṃdanō kuru kulatilaka nere pāpiyeṃdaru nikhiḷa parivāra
ಈತನರ್ಜುನನಿತ್ತಲಿದೆ ಪುರು ಹೂತಸುತನ ವರೂಥವಿದೆ ಕಪಿ ಕೇತನನ ಬೊಬ್ಬಾಟವಿದೆ ಫಲುಗುಣನ ಶರಜಾಲ ಈತ ಪಾರ್ಥನು ಹೊಕ್ಕನಿತ್ತಲು ಶ್ವೇತಹಯನಿತ್ತಲು ಧನಂಜಯ ನೀತನೆನೆ ಫಲುಗುಣನ ಮಯವಾಯ್ತಖಿಳ ತಳತಂತ್ರ
ītanarjunanittalide puru hūtasutana varūthavide kapi kētanana bobbāṭavide phaluguṇana śarajāla īta pārthanu hokkanittalu śvētahayanittalu dhanaṃjaya nītanene phaluguṇana mayavāytakhiḷa taḷataṃtra
ಇದೆ ಕಿರೀಟಿಯ ಬಿಲ್ಲ ಜೀವಡೆ ಯದೆ ಸಿತಾಶ್ವನ ಸಿಂಹಗರ್ಜನೆ ಯಿದೆ ಮುರಾರಿಯ ಮನಕೆ ಮುಂಚುವ ಹಯದ ಖುರನಿನದ ಅದೆ ವಿಜಯನಸ್ತ್ರೌಘವತ್ತಲು ಕದನ ಕಾಲಾನಲನ ತೀವ್ರತೆ ಯದೆಯೆನುತ ಹೆದರೆದೆಯ ಸುಭಟರು ಬಿಸುಟರುತ್ಸಹವ
ide kirīṭiya billa jīvaḍe yade sitāśvana siṃhagarjane yide murāriya manake muṃcuva hayada khuraninada ade vijayanastraughavattalu kadana kālānalana tīvrate yadeyenuta hedaredeya subhaṭaru bisuṭarutsahava
ಉಡಿದು ಕುಪ್ಪಳಿಸಿದವು ರಥ ಕಡಿ ವಡೆದುದಗ್ಗದ ಸಾರಥಿಗಳೆಡೆ ಗೆಡೆದುದತಿರಥ ಸಮರಥಾರ್ಧ ಮಹಾರಥಾದಿಗಳು ಹೊಡೆಗೆಡೆದ ದಂತಿಗಳು ರಕ್ತದ ಕಡಲೊಳೀಸಾಡಿದವು ತೇಜಿಯ ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ
uḍidu kuppaḷisidavu ratha kaḍi vaḍedudaggada sārathigaḷeḍe geḍedudatiratha samarathārdha mahārathādigaḷu hoḍegeḍeda daṃtigaḷu raktada kaḍaloḷīsāḍidavu tējiya kaḍiku haridavu horedanaṃtakanuruparigrahava
ಸರಳು ಸೇನೆಯ ತಾಗಿ ರಿಪುಗಳ ಕೊರಳ ಕೊಯ್ಯದ ಮುನ್ನವರಿಮೋ ಹರವ ಹಿಂದಿಕ್ಕುವುದು ರಥವತಿಜವದ ಜೋಕೆಯಲಿ ಹೊರಳಿದವು ಭಟರಟ್ಟೆ ಶೋಣಿತ ಶರಧಿ ಮಸಗಿತು ಮಕುಟಬದ್ಧರ ಹರಣದನಿಲಸಮೂಹ ಬೀಸಿತು ನಭಕೆ ಬಿರುಬಿನಲಿ
saraḷu sēneya tāgi ripugaḷa koraḷa koyyada munnavarimō harava hiṃdikkuvudu rathavatijavada jōkeyali horaḷidavu bhaṭaraṭṭe śōṇita śaradhi masagitu makuṭabaddhara haraṇadanilasamūha bīsitu nabhake birubinali
ಮುರಿವಡೆದು ಚತುರಂಗವರ್ಜುನ ನುರುಬೆಗಾರದೆ ನಿಲೆ ಶ್ರುತಾಯುಧ ನಿರಿಯಲುತ್ಸಾಹಿಸಿದನಿದಿರಾದನು ಧನಂಜಯನ ಮುರಿಯೆಸುತ ಮುಂಕೊಂಡು ಪಾರ್ಥನ ತರುಬಿದನು ಬಳಿಕೀತನಾತನ ನೆರೆವಣಿಗೆ ಲೇಸೆನುತ ತುಳುಕಿದನಂಬಿನಂಬುಧಿಯ
murivaḍedu caturaṃgavarjuna nurubegārade nile śrutāyudha niriyalutsāhisidanidirādanu dhanaṃjayana muriyesuta muṃkoṃḍu pārthana tarubidanu baḷikītanātana nerevaṇige lēsenuta tuḷukidanaṃbinaṃbudhiya
ನರನ ಬಾಣಾನೀಕವನು ಕ ತ್ತರಿಸಿದನು ನಿಜಗದೆಯಲಾತನ ಧುರಚಮತ್ಕಾರವನು ನೋಡುತ ಪಾರ್ಥ ಬೆರಗಾಗೆ ಕೆರಳಿ ವಾಘೆಯ ಕೊಂಡು ರಥವನು ಧುರಕೆ ದುವ್ವಾಳಿಸಲು ಮುರಹರ ನುರವಣೆಗೆ ಕನಲುತ ಶ್ರುತಾಯುಧ ಹೊಯ್ದನಚ್ಯುತನ
narana bāṇānīkavanu ka ttarisidanu nijagadeyalātana dhuracamatkāravanu nōḍuta pārtha beragāge keraḷi vāgheya koṃḍu rathavanu dhurake duvvāḷisalu murahara nuravaṇege kanaluta śrutāyudha hoydanacyutana
ವರುಣನಿತ್ತುಪದೇಶ ಬರಿದಿ ದ್ದರನು ಹೊಯ್ದರೆ ತನ್ನ ಕೊಲುವುದು ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ ಕೆರಳಿ ಗದೆ ಮುರಹರನ ಮುಟ್ಟದೆ ಮರಳಿ ತನ್ನನೆ ಕೊಂದುದೇನ ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ
varuṇanittupadēśa baridi ddaranu hoydare tanna koluvudu nirutavenalada maredu hoydanu hariya mastakava keraḷi gade muraharana muṭṭade maraḷi tannane koṃdudēna ccariyo daivadrōhigettaṇa lēsubahudeṃda
ಆ ಶ್ರುತಾಯುಧ ಮಡಿದನಲ್ಲಿ ಮ ಹಾಸುರದ ರಣವಾಯ್ತು ಕಾಂಭೋ ಜೇಶ ಕೈದುಡುಕಿದನು ಕದನವನಿಂದ್ರಸುತನೊಡನೆ ಸೂಸಿದನು ಸರಳುಗಳನಾತನ ಸಾಸವನು ಮನ್ನಿಸುತ ಫಲುಗುಣ ಬೇಸರದೆ ಕೊಂಡಾಡಿ ಕಾದಿದನೊಂದು ನಿಮಿಷದಲಿ
ā śrutāyudha maḍidanalli ma hāsurada raṇavāytu kāṃbhō jēśa kaiduḍukidanu kadanavaniṃdrasutanoḍane sūsidanu saraḷugaḷanātana sāsavanu mannisuta phaluguṇa bēsarade koṃḍāḍi kādidanoṃdu nimiṣadali
ಸರಳು ಸವೆಯಲು ಶಕ್ತಿಯಲಿ ಕಾ ತರಿಸಿ ಕವಿದಿಡೆ ಶಕ್ತಿಯನು ಕ ತ್ತರಿಸಿದನು ಕಾಂಭೋಜಭೂಪನ ಮುಕುಟಮಸ್ತಕವ ಕೊರಳ ತೊಲಗಿಸಿ ಮುಂದೆ ನೂಕುವ ವರ ಶ್ರುತಾಯುವಿನೊಡನೆ ಘನಸಂ ಗರಕೆ ತೆಗೆದನು ಕಳುಹಿದನು ಕಾಂಭೋಜನೊಡನವನ
saraḷu saveyalu śaktiyali kā tarisi kavidiḍe śaktiyanu ka ttarisidanu kāṃbhōjabhūpana mukuṭamastakava koraḷa tolagisi muṃde nūkuva vara śrutāyuvinoḍane ghanasaṃ garake tegedanu kaḷuhidanu kāṃbhōjanoḍanavana
ಹರಿಬದಯುತಾಯುವನು ಮಗುಳಿ ಬ್ಬರು ಸುತರು ನಿಯತಾಯು ಘನಸಂ ಗರದ ದೀರ್ಘಾಯುವನು ಕಳುಹಿದನಮರಮಂದಿರಕೆ ಧುರಕೆ ನೂಕಿದವಂಗರಾಜನ ಕರಿಘಟೆಗಳಂಬಟ್ಟ ಮೊದಲಾ ದರಿ ಸುಭಟ ಸಂದೋಹ ಮುತ್ತಿತು ಮತ್ತೆ ಫಲುಗುಣನ
haribadayutāyuvanu maguḷi bbaru sutaru niyatāyu ghanasaṃ garada dīrghāyuvanu kaḷuhidanamaramaṃdirake dhurake nūkidavaṃgarājana karighaṭegaḷaṃbaṭṭa modalā dari subhaṭa saṃdōha muttitu matte phaluguṇana
ಕರಿಘಟೆಯನಂಬಟ್ಟಭೂಪನ ಶಿರವನೆಚ್ಚನು ಪಾರಸೀಕರ ತುರಗ ಕವಿಯಲು ಕುಸುರಿದರಿದನು ಕೋಟಿ ಸಂಖ್ಯೆಗಳ ಬಿರುದ ಹೊಗಳಿಸಿಕೊಂಡು ದಾತಾ ರರ ಹಣವ ಸಲೆ ತಿಂದು ಹೆಚ್ಚಿದ ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ
karighaṭeyanaṃbaṭṭabhūpana śiravaneccanu pārasīkara turaga kaviyalu kusuridaridanu kōṭi saṃkhyegaḷa biruda hogaḷisikoṃḍu dātā rara haṇava sale tiṃdu heccida hiriya ḍoḷḷina rāvutara keḍahidanu nimiṣadali
ಇರಿದು ಚಕ್ರವ್ಯೂಹವನು ಕುರಿ ದರಿಯ ಮಾಡಿ ಕಿರೀಟಿಯದರಿಂ ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ ತುರುಗಿದವು ತೂರಂಬು ತಲೆಗಳ ತರಿದು ಬಿಸುಟವು ಘಮ್ಮು ಘಲಿಲೆನೆ ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ
iridu cakravyūhavanu kuri dariya māḍi kirīṭiyadariṃ horage haṃsavyūhadali keṇakidanu kāḷegava turugidavu tūraṃbu talegaḷa taridu bisuṭavu ghammu ghalilene niriniḷilugaredoralidavu phaluguṇana śarajāla
ಬಿಲುರವದ ಮೊಳಗಿನಲಿ ಕೃಷ್ಣನ ಫಲುಗುಣನ ಮೈಕಾಂತಿ ಮೇಘಾ ವಳಿಗಳಲಿ ಹೊಂಗರಿಯ ಗಾಳಿಯ ಸರಳಸೋನೆಯಲಿ ನಿಲುವ ಹಂಸವ್ಯೂಹವೆಲ್ಲಿಯ ದೆಲೆ ಮಹೀಪತಿ ಕೇಳು ನಿನ್ನ ಗ್ಗಳೆಯ ಸುಭಟರ ವಿಧಿಯನೆಂದನು ಸಂಜಯನು ನಗುತ
biluravada moḷaginali kr̥ṣṇana phaluguṇana maikāṃti mēghā vaḷigaḷali hoṃgariya gāḷiya saraḷasōneyali niluva haṃsavyūhavelliya dele mahīpati kēḷu ninna ggaḷeya subhaṭara vidhiyaneṃdanu saṃjayanu naguta
ಅಳಿದುದೈನೂರರಸುಗಳು ಮು ಮ್ಮುಳಿತವಾಯ್ತೈವತ್ತು ಸಾವಿರ ಬಲುಗುದುರೆ ನುಗ್ಗಾದುದೊಂಬೈನೂರು ಭದ್ರಗಜ ಅಳಿದುದಕೆ ಕೊಲೆಕೊತ್ತುವಡೆದ ಗ್ಗಳ ಪದಾತಿಗೆ ಗಣನೆಯೆಲ್ಲೀ ಬಲದ ಮೈವಶವವರ ಕೈವಶವೇನು ಹೊಸತೆಂದ
aḷidudainūrarasugaḷu mu mmuḷitavāytaivattu sāvira balugudure nuggādudoṃbainūru bhadragaja aḷidudake kolekottuvaḍeda ggaḷa padātige gaṇaneyellī balada maivaśavavara kaivaśavēnu hosateṃda
ಕೆಡಹಿದನು ವಿಂದಾನುವಿಂದರ ನಡಗುದರಿಯಾಯ್ತಖಿಳಬಲದು ಗ್ಗಡದ ವೀರರು ಕಾದಿ ಬಿದ್ದುದು ಕಾಯಮಾರಿಗಳು ನಡುಹಗಲು ಪರಿಯಂತ ಕಾಳೆಗ ಬಿಡದೆ ಬಲುಹಾಯ್ತಖಿಳ ವೇಗದ ಕಡುಗುದುರೆ ಬಳಲಿದವು ಬಗೆಯದೆ ಹರಿಯ ಗರ್ಜನೆಯ
keḍahidanu viṃdānuviṃdara naḍagudariyāytakhiḷabaladu ggaḍada vīraru kādi biddudu kāyamārigaḷu naḍuhagalu pariyaṃta kāḷega biḍade baluhāytakhiḷa vēgada kaḍugudure baḷalidavu bageyade hariya garjaneya
ಭಾರಿಸಿತು ಮೈ ಮುಷ್ಟಿಯಲಿ ಲುಳಿ ಸಾರತರ ಲಂಬಿಸಿತು ತಾಗಿದ ಕೂರಲಗು ಗರಿದೋರಿದವು ನಿಜ ಹಯದ ಮೈಗಳಲಿ ಹಾರಿದರ್ಜುನನರಿದನಾ ದೈ ತ್ಯಾರಿಗೆಂದನು ದೇವ ಬಿನ್ನಹ ವಾರುವಂಗಳ ವಹಿಲತೆಯ ಚಿತ್ತೈಸಿದಿರೆಯೆಂದ
bhārisitu mai muṣṭiyali luḷi sāratara laṃbisitu tāgida kūralagu garidōridavu nija hayada maigaḷali hāridarjunanaridanā dai tyārigeṃdanu dēva binnaha vāruvaṃgaḷa vahilateya cittaisidireyeṃda
ಕಡಿಯಣವ ಕಾರಿದವು ಕಂದವ ನಡಿಗಡಿಗೆ ಹಾಯ್ಕಿದವು ಸುತ್ತಿದ ಕುಡಿನೊರೆಯ ಕಟವಾಯ ಲೋಳೆಯ ನಿಮಿರ್ದಮೈಲುಳಿಯ ತಡಿನೆನೆದ ಬಲುಬೆಮರ ಘುಡುಘುಡು ಘುಡಿಪ ನಾಸಾಶ್ವಾಸ ಲಹರಿಯ ಕಡುಮನದ ರಥತುರಗ ಮಿಕ್ಕವು ಸರಳಸೂಠಿಯಲಿ
kaḍiyaṇava kāridavu kaṃdava naḍigaḍige hāykidavu suttida kuḍinoreya kaṭavāya lōḷeya nimirdamailuḷiya taḍineneda balubemara ghuḍughuḍu ghuḍipa nāsāśvāsa lahariya kaḍumanada rathaturaga mikkavu saraḷasūṭhiyali
ಗಮನ ತಟ್ಟಿಯವಾಯ್ತು ವೇಗ ಭ್ರಮಣ ಜಡವಾಯ್ತಡಿಗಡಿಗೆ ನಿ ಗ್ಗಮದೊಳಗೆ ರಥವದ್ದುದರಿ ಭಾರಣೆಯ ಭರವಸದ ಸಮತೆ ನಿಂದುದು ಸಾಹಸೀಕರು ಭ್ರಮಿಸುತಿದೆ ಭಟಜಲಧಿ ತುರಗ ಶ್ರಮವ ನಾವ್ ಪರಿಹರಿಸಿದಲ್ಲದೆ ಕಾದಲರಿದೆಂದ
gamana taṭṭiyavāytu vēga bhramaṇa jaḍavāytaḍigaḍige ni ggamadoḷage rathavaddudari bhāraṇeya bharavasada samate niṃdudu sāhasīkaru bhramisutide bhaṭajaladhi turaga śramava nāv pariharisidallade kādalarideṃda
ಉಂಟು ಹೊಲ್ಲೆಹವಲ್ಲ ರಣದೊಳ ಗೆಂಟುಮಡಿ ಬಳಲಿದವು ತೇಜಿಗ ಳೀಂಟುವರೆ ನೀರಿಲ್ಲ ಮುರಿದರೆ ಬೆನ್ನ ಬಿಡರಿವರು ಗೆಂಟರಲಿ ನಮ್ಮೊಡ್ಡ ಸುತ್ತಲು ವೆಂಟಣಿಸಿ ರಿಪುಸೇನೆಯಿದೆ ಏ ನುಂಟು ಮಾಡುವುಪಾಯವೆಂದನು ನಗುತ ಮುರವೈರಿ
uṃṭu hollehavalla raṇadoḷa geṃṭumaḍi baḷalidavu tējiga ḷīṃṭuvare nīrilla muridare benna biḍarivaru geṃṭarali nammoḍḍa suttalu veṃṭaṇisi ripusēneyide ē nuṃṭu māḍuvupāyaveṃdanu naguta muravairi
ದೇವ ಕಾಳೆಗ ಬಲುಹು ಬಿಸಿಲಿನ ಡಾವರಕೆ ರಥತುರಗವತಿ ನಿ ರ್ಜೀವಿಯಾದವು ಹರಿಯ ಗಮನದ ಹದನನರಿಯೆನಲು ಆ ವಿನೋದಿಗಳರಸ ಶರಣರ ಕಾವ ಭರದಲಿ ದನುಜಕುಲ ವಿ ದ್ರಾವಣನು ನಸುನಗುತ ಬೋಳೈಸಿದನು ತೇಜಿಗಳ
dēva kāḷega baluhu bisilina ḍāvarake rathaturagavati ni rjīviyādavu hariya gamanada hadananariyenalu ā vinōdigaḷarasa śaraṇara kāva bharadali danujakula vi drāvaṇanu nasunaguta bōḷaisidanu tējigaḷa
ದೇವ ವಾಘೆಯ ಹಿಡಿ ತುರಂಗಕೆ ಜೀವನವನೀ ಕಳನೊಳಗೆ ಸಂ ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ ತೀವಿ ತೆಗೆದನು ವಜ್ರಶರದಲಿ ಡಾವರಿಸಿದನು ಕಳನೊಳುದಕದ ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ
dēva vāgheya hiḍi turaṃgake jīvanavanī kaḷanoḷage saṃ bhāvisuve nōḍenuta dhummikkidanu dhāruṇige tīvi tegedanu vajraśaradali ḍāvarisidanu kaḷanoḷudakada saivaḷeya seleyaridu caukake sīḷidanu nelana
ನೋಡಿ ನರನುದ್ದಂಡತನವನು ತೋಡುತೈದನೆ ತುರಗ ಲೀಲೆಗೆ ಖೇಡಕುಳಿಯನು ಶೌರ‍್ಯಗರ್ವಿತನೈ ಶಿವಾ ಎನುತ ಕೂಡೆ ಮಸಗಿತು ರಿಪುಚತುರ್ಬಲ ಜೋಡು ಮಾಡಿತು ಕಡಹದಮರರು ಹೂಡಿದದ್ರಿಯನಂಬುಧಿಯ ತೆರೆಮಾಲೆ ಕವಿದಂತೆ
nōḍi naranuddaṃḍatanavanu tōḍutaidane turaga līlege khēḍakuḷiyanu śauryagarvitanai śivā enuta kūḍe masagitu ripucaturbala jōḍu māḍitu kaḍahadamararu hūḍidadriyanaṃbudhiya teremāle kavidaṃte
ಒದರಿ ಮೇಲಿಕ್ಕಿದರು ನಿಸ್ಸಾ ಳದ ನಿರಂತರ ಸೂಳುವೊಯ್ಲಿನ ಹೊದರುಗಳ ಹೊಸ ಮಸೆಯಡಾಯ್ದದ ಸಾಲ ಸಂದಣಿಯ ಸದರವೀ ಹೊತ್ತೆನುತ ಗೆಲವಿನ ಕುದುಕುಳಿಗಳುರವಣಿಸೆ ಕಾಣುತ ಗದಗದಿಸಿ ಮುರವೈರಿ ಚಾಚಿದನರ್ಜುನಗೆ ರಥವ
odari mēlikkidaru nissā ḷada niraṃtara sūḷuvoylina hodarugaḷa hosa maseyaḍāydada sāla saṃdaṇiya sadaravī hottenuta gelavina kudukuḷigaḷuravaṇise kāṇuta gadagadisi muravairi cācidanarjunage rathava
ಆಲಿಕಲುಗಳ ಕಡಿವಡುಕ್ಕಿನ ಚೀಲಣದ ಹಂಗೇಕೆ ನಿಮ್ಮಡಿ ಮೇಲುನೋಟವ ನೋಡೆ ರಥ ಪರಿಯಂತ ಕಾಳೆಗವೆ ಹೋಳುಗಳೆವೆನು ಹುಗ್ಗಿಗರನೆನು ತಾಳೊಳಗೆ ಬೆರಸಿದನು ಬರಿಗಾ ಲಾಳುತನದಲಿ ಕಾದಿ ಕೊಂದನು ಕೋಟಿ ರಿಪುಭಟರ
ālikalugaḷa kaḍivaḍukkina cīlaṇada haṃgēke nimmaḍi mēlunōṭava nōḍe ratha pariyaṃta kāḷegave hōḷugaḷevenu huggigaranenu tāḷoḷage berasidanu barigā lāḷutanadali kādi koṃdanu kōṭi ripubhaṭara
ವರುಣ ಬಾಣದಲುದಕವನು ತ ತ್ಸರಸಿಯಲಿ ತುಂಬಿದನು ತಮಗವ ಸರವಿದೆಂದೌಕುವ ಮಹೀಶರ ಮತ್ತೆ ಬರಿಕೈದು ಕರಿ ರಥಾಶ್ವ ಪದಾತಿಯನು ಸಂ ಗರದ ಮಧ್ಯದೊಳೊಬ್ಬನೇ ಸಂ ಹರಿಸಿದನು ಶತಗುಣವನೊಂದೇ ಲೋಭ ಗೆಲುವಂತೆ
varuṇa bāṇadaludakavanu ta tsarasiyali tuṃbidanu tamagava saravideṃdaukuva mahīśara matte barikaidu kari rathāśva padātiyanu saṃ garada madhyadoḷobbanē saṃ harisidanu śataguṇavanoṃdē lōbha geluvaṃte
ಕೊಳನ ತಡಿಯಲಿ ಹೂಡಿದನು ಶರ ವಳಯದಲಿ ಚಪ್ಪರವನಾತನ ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ ಕಳಚಿ ನೊಗನನು ತೆಗೆದು ಕಬ್ಬಿಯ ನಿಳುಹಿ ಪಡಿವಾಘೆಗಳ ಸರಿದನು ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ
koḷana taḍiyali hūḍidanu śara vaḷayadali capparavanātana baluha kaṃḍasurāri meccidanaḍigaḍige hogaḷi kaḷaci nogananu tegedu kabbiya niḷuhi paḍivāghegaḷa saridanu koḷisi piḍiyalu pāḍigaidavu maraḷideḍabalake
ಮುರುಹಿ ನಿಂದವು ಕೊಡಹಿದವು ಕೇ ಸರವನಧ್ವ ಶ್ರಮದ ಢಗೆ ಪರಿ ಹರಿಸೆ ನೀರೊಳು ಹೊಗಿಸಿದನು ಹರಿ ಹಯ ಚತುಷ್ಟಯವ ಸರಸಿಯಲಿ ಮೊಗವಿಟ್ಟು ಮೊಗೆದವು ವರ ಜಲವನೆರಡಳ್ಳೆ ಹಿಗ್ಗಲು ಮುರುಹಿದವು ಮುಖವನು ಮುರಾಂತಕ ತಡಿಯನಡರಿಸಿದ
muruhi niṃdavu koḍahidavu kē saravanadhva śramada ḍhage pari harise nīroḷu hogisidanu hari haya catuṣṭayava sarasiyali mogaviṭṭu mogedavu vara jalavaneraḍaḷḷe higgalu muruhidavu mukhavanu murāṃtaka taḍiyanaḍarisida
ಕರತಳದಿ ಮೈದಡವಿ ಗಾಯದ ಸರಳ ಕಿತ್ತೌಷಧಿಯ ಲೇಪವ ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ ಹರುಷ ಮಿಗೆ ಕೊರಳೆತ್ತಿ ನಯನವ ತಿರುಹಿ ದೇವನ ನೋಡುತಿರ್ದುವು ತುರಗ ನಾಲ್ಕರ ಪುಣ್ಯ ಸನಕಾದಿಗಳಿಗಿಲ್ಲೆಂದ
karataḷadi maidaḍavi gāyada saraḷa kittauṣadhiya lēpava norasidanu karuṇadali capparisidanu kaṃdharava haruṣa mige koraḷetti nayanava tiruhi dēvana nōḍutirduvu turaga nālkara puṇya sanakādigaḷigilleṃda
ಮೊಗಕೆ ಭಾಣವ ಕಟ್ಟಿ ನೆಳಲಲಿ ಬಿಗಿದು ಫಲುಗುಣ ಸಹಿತ ಕೊಳನನು ನಗುತ ಹೊಕ್ಕನು ನೋಡುತಿದ್ದುದು ಕೂಡೆ ಕುರುಸೇನೆ ಬಿಗಿದ ಕತ್ತಲೆ ದೂರದಲಿ ದೀ ವಿಗೆಯ ಸುತ್ತಲು ಕಟ್ಟಿ ನಿಂದವೊ ಲಗಣಿತ ಪ್ರತಿಸುಭಟರಿದ್ದುದು ನರನ ಬಳಸಿನಲಿ
mogake bhāṇava kaṭṭi neḷalali bigidu phaluguṇa sahita koḷananu naguta hokkanu nōḍutiddudu kūḍe kurusēne bigida kattale dūradali dī vigeya suttalu kaṭṭi niṃdavo lagaṇita pratisubhaṭariddudu narana baḷasinali
ಚರಣ ವದನವ ತೊಳೆದು ನಿರ್ಮಳ ವರಜಲವನೀಂಟಿದರು ನಿರುಪಮ ಪರಮ ಕರುಣಾರ್ಣವನು ಮೈದುನಸಹಿತ ಸರಸಿಯಲಿ ಪರಿಹೃತಶ್ರಮನಾಗಿ ಹರುಷೋ ತ್ಕರುಷದಲಿ ಹರಿ ಕಳೆದುಕೊಂಡನು ನರಗೆ ಕೊಟ್ಟನು ಹೋಳಿಸಿದ ಕರ್ಪುರದ ವೀಳೆಯವ
caraṇa vadanava toḷedu nirmaḷa varajalavanīṃṭidaru nirupama parama karuṇārṇavanu maidunasahita sarasiyali parihr̥taśramanāgi haruṣō tkaruṣadali hari kaḷedukoṃḍanu narage koṭṭanu hōḷisida karpurada vīḷeyava
ರಾಗ ಮಿಗೆ ಬ್ರಹ್ಮಾಂಡಕೋಟಿಯ ನಾಗುಮಾಡುವನಲಸಿದರೆ ಮುನಿ ದಾಗ ನುಂಗುವುದೊಂದು ಲೀಲೆ ಮನುಷ್ಯ ದೇಹದಲಿ ಲೋಗರೆಂದುದನೈದೆ ಮಾಡುವ ನಾಗಿ ಜನಿಸಿಹುದೊಂದು ಲೀಲಾ ಸಾಗರನು ಲಕ್ಷ್ಮೀಪತಿಗೆ ನಮೊ ಎಂದುದಮರಗಣ
rāga mige brahmāṃḍakōṭiya nāgumāḍuvanalasidare muni dāga nuṃguvudoṃdu līle manuṣya dēhadali lōgareṃdudanaide māḍuva nāgi janisihudoṃdu līlā sāgaranu lakṣmīpatige namo eṃdudamaragaṇa
ಸೆಳೆದು ಪಡಿವಾಘೆಯಲಿ ತುರಗಾ ವಳಿಯನನುಕೊಳಿಸಿದನು ಹರಿ ಕೈ ಚಳಕದಲಿ ತುಡುಕಿದನು ಫಲುಗುಣನತುಳ ಗಾಂಡಿವವ ಉಲಿದುದಾಹವ ಸೇನೆ ರಿಪುಮಂ ಡಳಿಕರೋರಣಗೆಡಲು ರಣಮಂ ಡಲದ ಪದ್ಮವ್ಯೂಹದಲಿ ಕೆಣಕಿದನು ಕಾಳೆಗವ
seḷedu paḍivāgheyali turagā vaḷiyananukoḷisidanu hari kai caḷakadali tuḍukidanu phaluguṇanatuḷa gāṃḍivava ulidudāhava sēne ripumaṃ ḍaḷikarōraṇageḍalu raṇamaṃ ḍalada padmavyūhadali keṇakidanu kāḷegava
ಇದು ಕೃತಾಂತನ ಸೀಮೆಗಳವ ಟ್ಟುದು ಸುಯೋಧನನೃಪತಿ ವಿಗತಾ ಭ್ಯುದಯನಾದನೆನುತ್ತ ಕರ್ಣಾದಿಗಳು ಕಳವಳಿಸೆ ಹೆದರೆದೆಯ ಹೇರಾಳ ವೀರರ ಕದನದನುವನು ಕಂಡು ಕಡುಗೋ ಪದಲಿ ಕೌರವರಾಯ ಸಮರೋದ್ಯೋಗಪರನಾದ
idu kr̥tāṃtana sīmegaḷava ṭṭudu suyōdhananr̥pati vigatā bhyudayanādanenutta karṇādigaḷu kaḷavaḷise hedaredeya hērāḷa vīrara kadanadanuvanu kaṃḍu kaḍugō padali kauravarāya samarōdyōgaparanāda
ತಳಿತವಮಳಚ್ಛತ್ರ ಚಾಮರ ವಲುಗಿದವು ನವಹೇಮ ದಂಡದ ಹಳವಿಗೆಯ ತುದಿವಲಗೆಯಲಿ ಹಾಯ್ಕಿದರು ಪನ್ನಗನ ಮೊಳಗಿದವು ನಿಸ್ಸಾಳ ಬಿರುದಾ ವಳಿಯ ಕಹಳೆಗಳೂದಿದವು ನೆಲ ಮೊಳಗಿದಂತಿರೆ ಬಿರುದ ಹೊಗಳಿತು ಭಟ್ಟ ಸಂದೋಹ
taḷitavamaḷacchatra cāmara valugidavu navahēma daṃḍada haḷavigeya tudivalageyali hāykidaru pannagana moḷagidavu nissāḷa birudā vaḷiya kahaḷegaḷūdidavu nela moḷagidaṃtire biruda hogaḷitu bhaṭṭa saṃdōha
ತಳಿತುದರನೆಲೆ ರಾಯ ಥಟ್ಟಿನ ಕಳವಳಿಗರುರವಣಿಸಿದರು ಮುರಿ ದೊಳಸರಿವ ಮನ್ನೆಯರ ಹೊಯ್ದರು ಮುಂದೆ ಕಂಬಿಯಲಿ ಉಲಿವ ಪಾಠಕರೋದುಗಳ ಕಳ ಕಳಿಕೆಯಲಿ ನೃಪ ಬಂದು ಗುರುವಿನ ದಳವ ಹೊಕ್ಕನು ನಮಿಸಿ ಬಿನ್ನಹಮಾಡಿದನು ನಗುತ
taḷitudaranele rāya thaṭṭina kaḷavaḷigaruravaṇisidaru muri doḷasariva manneyara hoydaru muṃde kaṃbiyali uliva pāṭhakarōdugaḷa kaḷa kaḷikeyali nr̥pa baṃdu guruvina daḷava hokkanu namisi binnahamāḍidanu naguta
ನರನ ಬಲುಗೈತನವನೀ ಮೋ ಹರದ ಹೆಂಗುಸುತನವ ನೀವವ ಧರಿಸಿದಿರೆ ಜಗಭಂಡರಿವರಿಗೆ ಮತ್ತೆ ಬಿರುದುಗಳೆ ತುರಗ ನೀರಡಸಿದರೆ ರಣದಲಿ ಸರಸಿಯನು ತೋಡಿದನು ನಮ್ಮನು ಸರಕುಮಾಡನು ಕಂಡು ಬಲ್ಲಿರೆ ಮುನ್ನ ನೀವೆಂದ
narana balugaitanavanī mō harada heṃgusutanava nīvava dharisidire jagabhaṃḍarivarige matte birudugaḷe turaga nīraḍasidare raṇadali sarasiyanu tōḍidanu nammanu sarakumāḍanu kaṃḍu ballire munna nīveṃda
ಅರಸ ಮೃತಸಂಜೀವಿನಿಯ ಬಲು ಹಿರಲು ಬಹಳವ್ಯಾಧಿ ಮಾಡುವ ದುರುಳತನ ತಾನೇನು ನರರಿಗೆ ದಿಟ ವಿಚಾರಿಸಲು ಪರಮಪುರುಷೋತ್ತಮ ಮುಕುಂದನ ಕರುಣಕವಚದ ಬಲದಿನಮರಾ ಸುರರ ಬಗೆಯನು ಪಾರ್ಥನಿದು ನಮ್ಮಾರ ಹವಣೆಂದ
arasa mr̥tasaṃjīviniya balu hiralu bahaḷavyādhi māḍuva duruḷatana tānēnu nararige diṭa vicārisalu paramapuruṣōttama mukuṃdana karuṇakavacada baladinamarā surara bageyanu pārthanidu nammāra havaṇeṃda
ಹಗೆಯ ಪತಿಕರಿಸುವರೆ ನಾಲಗೆ ನಿಗುರುವುದು ನೂರು ಮಡಿಯಲಿ ಕಾ ಳೆಗಕೆ ತನ್ನನು ಬಿಟ್ಟು ನೋಡಿರೆ ನುಡಿದು ಫಲವೇನು ತೆಗೆಸುವೆನು ಫಲುಗುಣನನೆನೆ ನಸು ನಗುತ ಗುರು ಕೌರವ ಮಹೀಶನ ಮೊಗದ ಸುಮ್ಮಾನಕ್ಕೆ ಹರುಷಿತನಾಗುತಿಂತೆಂದ
hageya patikarisuvare nālage niguruvudu nūru maḍiyali kā ḷegake tannanu biṭṭu nōḍire nuḍidu phalavēnu tegesuvenu phaluguṇananene nasu naguta guru kaurava mahīśana mogada summānakke haruṣitanāgutiṃteṃda
ಆದಡೆಲೆ ಭೂಪಾಲ ನರನೊಳು ಕಾದಲೀಶಂಗರಿದು ನೀನಿದಿ ರಾದಡಪಜಯವಾಗದಿದ್ದರೆ ನಮ್ಮ ಪುಣ್ಯವದು ಕಾದಲಾಪರೆ ಮಗನೆ ಪರರಿಗೆ ಭೇದಿಸುವರಳವಲ್ಲ ಕವಚವ ನಾದಿಯಿದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು
ādaḍele bhūpāla naranoḷu kādalīśaṃgaridu nīnidi rādaḍapajayavāgadiddare namma puṇyavadu kādalāpare magane pararige bhēdisuvaraḷavalla kavacava nādiyidu koḷḷeṃdu koṭṭanu gavasaṇigedegedu
ಇದು ಮಹಾದೇವರದು ವೃತ್ರನ ಕದನದಲಿ ಕೈಸಾರ್ದುದೀಶಂ ಗಿದು ಸುರೇಂದ್ರಂಗಾ ಸುರೇಶ್ವರನಾಂಗಿರಂಗಿತ್ತ ಇದು ಬೃಹಸ್ಪತಿಗಾಂಗಿರನಿನಾ ದುದು ಭರದ್ವಾಜಂಗೆ ಬಳಿಕಾ ದುದು ಭರದ್ವಾಜಾಖ್ಯನಿತ್ತನು ತನಗೆ ಕರುಣದಲಿ
idu mahādēvaradu vr̥trana kadanadali kaisārdudīśaṃ gidu surēṃdraṃgā surēśvaranāṃgiraṃgitta idu br̥haspatigāṃgiraninā dudu bharadvājaṃge baḷikā dudu bharadvājākhyanittanu tanage karuṇadali
ನರ ಸುರಾಸುರರಿದನು ಭೇದಿಸ ಲರಿದು ಕೈಕೊಳ್ಳೆಂದು ಮಂತ್ರಿಸಿ ಬರಿಗೆ ಕವಚವ ಕಟ್ಟಿದನು ಕೌರವ ಮಹೀಪತಿಗೆ ಗುರುವಿನಂಘ್ರಿಯೊಳೆರಗಿ ಮರಳಿದು ಧುರವ ಹೊಕ್ಕನು ಶಕ್ರತನುಜನ ಕರೆದು ಮೂದಲಿಸಿದನು ತುಳುಕಿದನಂಬಿನಂಬುಧಿಯ
nara surāsuraridanu bhēdisa laridu kaikoḷḷeṃdu maṃtrisi barige kavacava kaṭṭidanu kaurava mahīpatige guruvinaṃghriyoḷeragi maraḷidu dhurava hokkanu śakratanujana karedu mūdalisidanu tuḷukidanaṃbinaṃbudhiya
ಎಲವೊ ಕೌರವ ಹಿಂದೆ ವಂಚಿಸಿ ಕಳವಿನಲಿ ಜೂಜಾಡಿ ರಾಜ್ಯವ ಗೆಲಿದ ಗರ್ವವನುಗುಳು ಸಮರದ್ಯೂತಕೇಳಿಯಲಿ ಹಲಗೆಯೈ ಕುರುಭೂಮಿ ಕೌರವ ಕುಲದ ತಲೆ ಸಾರಿಗಳು ಸೆರೆಯಲಿ ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ
elavo kaurava hiṃde vaṃcisi kaḷavinali jūjāḍi rājyava gelida garvavanuguḷu samaradyūtakēḷiyali halageyai kurubhūmi kaurava kulada tale sārigaḷu sereyali gelalu baṃdenu koḷḷu hāsaṃgigaḷanenutecca
ಎಸಲು ಪಾರ್ಥನ ಬಾಣವನು ಖಂ ಡಿಸಿದನೆಲವೋ ತಮ್ಮ ನಿಮಗಿಂ ದಸುರರಿಪು ತೆತ್ತಿಗನಲೇ ತುಡುಕಲಿ ಸುದರ್ಶನವ ನುಸಿಗಳೌಕಿದರಕಟ ದಿಗ್ಗಜ ಘಸಣಿಗೊಂಬುದೆ ನಿನ್ನ ಬಾಣ ಪ್ರಸರಕಾನಂಜುವೆನೆ ಫಡ ಹೋಗೆನುತ ತೆಗೆದೆಚ್ಚ
esalu pārthana bāṇavanu khaṃ ḍisidanelavō tamma nimagiṃ dasuraripu tettiganalē tuḍukali sudarśanava nusigaḷaukidarakaṭa diggaja ghasaṇigoṃbude ninna bāṇa prasarakānaṃjuvene phaḍa hōgenuta tegedecca
ಕಾಲುವೊಳೆಗೇಕವನಿಪತಿ ಹರು ಗೋಲು ನೀವಿನ್ನರಿಯದಿದ್ದರೆ ಹೇಳೆವಾತ್ಮಸ್ತುತಿಯ ಮಾಡೆವು ಸಾಕದಂತಿರಲಿ ಮೇಲುಗವಚವ ನಂಬಿ ನಮ್ಮೊಳು ಕಾಳೆಗವ ನೀ ಬಯಸಿ ಬಂದೆ ನೃ ಪಾಲ ಜೋಡಿನ ಬಲದಿ ನಮ್ಮನು ಜಯಸುವೈ ಎಂದ
kāluvoḷegēkavanipati haru gōlu nīvinnariyadiddare hēḷevātmastutiya māḍevu sākadaṃtirali mēlugavacava naṃbi nammoḷu kāḷegava nī bayasi baṃde nr̥ pāla jōḍina baladi nammanu jayasuvai eṃda
ಆರ ದೀಪನಚೂರ್ಣ ಬಲದಲಿ ವೀರರುದ್ರನು ಜಗವ ನುಂಗುವ ನೋರೆಗೆಡೆಯದಿರಂಬ ಸುರಿ ಸುರಿ ಹೊಳ್ಳುನುಡಿಯೇಕೆ ಸಾರು ನೀ ಬರಹೇಳು ಕೀಚಕ ವೈರಿಯನು ಪಡಿಸಣವ ನೋಡಲಿ ಭೂರಿಬಾಣದ ಸವಿಯನೆಂದನು ಕೌರವರರಾಯ
āra dīpanacūrṇa baladali vīrarudranu jagava nuṃguva nōregeḍeyadiraṃba suri suri hoḷḷunuḍiyēke sāru nī barahēḷu kīcaka vairiyanu paḍisaṇava nōḍali bhūribāṇada saviyaneṃdanu kauravararāya
ಗರುಡನಾರೋಗಣೆಯ ಬೋನಕೆ ಮರಳಿ ಪಡಿಸಣವೇಕೆ ಮಾತಿನ ಮುರಿವುಗಳು ಗೆಲ್ಲವಲೆ ನೀ ನೆರೆ ನೋಡು ಕೈಗುಣವ ಅರಸ ನಿನ್ನಯ ಕೊರಳಕಡಿತಕೆ ಸರಳು ಕುದಿತದಲೆನಗೆ ತನಗೆಂ ದೊರಲುತಿದೆ ನಿನಗಿಂದಿನಲಿ ಸಾವಿಲ್ಲ ಹೋಗೆಂದ
garuḍanārōgaṇeya bōnake maraḷi paḍisaṇavēke mātina murivugaḷu gellavale nī nere nōḍu kaiguṇava arasa ninnaya koraḷakaḍitake saraḷu kuditadalenage tanageṃ doralutide ninagiṃdinali sāvilla hōgeṃda
ಎನುತ ಕೂರಂಬಿನಲಿ ದುರ್ಯೋ ಧನನನೆಚ್ಚನು ವಜ್ರ ಕವಚದ ಲನಿತು ಶರವಕ್ಕಾಡಿದವು ಸೊಪ್ಪಾದವೇಣುಗಳು ಅನಲ ಗಿರಿ ವಜ್ರಾಸ್ತ್ರದಲಿ ಫಲು ಗುಣನು ಬೊಬ್ಬಿರಿದೆಚ್ಚನೆಚ್ಚಂ ಬನಿತು ಮುರಿದವು ಮಸೆಯ ಕಾಣದು ಮೈ ಮಹೀಪತಿಯ
enuta kūraṃbinali duryō dhanananeccanu vajra kavacada lanitu śaravakkāḍidavu soppādavēṇugaḷu anala giri vajrāstradali phalu guṇanu bobbirideccaneccaṃ banitu muridavu maseya kāṇadu mai mahīpatiya
ಹರಿಯನೆಚ್ಚನು ಫಲುಗುಣನ ತನು ಬಿರಿಯೆ ಬಿಗಿದನು ಶರವನಾ ರಥ ತುರಗದೊಡಲಲಿ ಹೂಳಿದನು ಹೇರಾಳದಂಬುಗಳ ವರ ಕಪೀಂದ್ರನ ಘಾಸಿಮಾಡಿದ ನುರವಣಿಸಿ ಕವಿದೆಸುವ ಭೂಪನ ಭರದ ಬಲುವೇಗಾಯ್ಲತನವನು ಹೊಗಳಿದನು ಪಾರ್ಥ
hariyaneccanu phaluguṇana tanu biriye bigidanu śaravanā ratha turagadoḍalali hūḷidanu hērāḷadaṃbugaḷa vara kapīṃdrana ghāsimāḍida nuravaṇisi kavidesuva bhūpana bharada baluvēgāylatanavanu hogaḷidanu pārtha
ಕವಚವಿದೆ ಸರ್ವಾಂಗದಲಿ ನೃಪ ನವಯವಕೆ ಕೇಡಿಲ್ಲ ಕೆಲಬಲ ದವರು ನೆರೆ ಕೈಮಾಡುತಿದೆ ಕರ್ಣಾದಿನಾಯಕರು ರವಿಯ ಕೈಗಳನಸ್ತಗಿರಿಯಾ ನುವವೊಲಿದೆ ಮುನಿದಿವನ ಕೊಂದರೆ ಪವನಜನ ಕೊಂದವನು ಹದನೇನೆಂದು ಚಿಂತಿಸಿದ
kavacavide sarvāṃgadali nr̥pa navayavake kēḍilla kelabala davaru nere kaimāḍutide karṇādināyakaru raviya kaigaḷanastagiriyā nuvavolide munidivana koṃdare pavanajana koṃdavanu hadanēneṃdu ciṃtisida
ಎನುತ ಮೂರಂಬಿನಲಿ ರಾಯನ ಧನುವ ಖಂಡಿಸಿ ಮತ್ತೆ ಕೂರಂ ಬಿನಲಿ ನೃಪನಂಗೈಯನೆಚ್ಚನು ಬಾಣ ಥಟ್ಟುಗಿಯೆ ಜನಪ ನೊಂದನು ಬಳಿಕ ಕೃತವ ರ್ಮನು ಕೃಪಾಚಾರಿಯನು ನಿನ್ನಯ ತನುಜನನು ತೊಲಗಿಸಿದರೈ ಧೃತರಾಷ್ಟ್ರ ಕೇಳೆಂದ
enuta mūraṃbinali rāyana dhanuva khaṃḍisi matte kūraṃ binali nr̥panaṃgaiyaneccanu bāṇa thaṭṭugiye janapa noṃdanu baḷika kr̥tava rmanu kr̥pācāriyanu ninnaya tanujananu tolagisidarai dhr̥tarāṣṭra kēḷeṃda
ರಾಯ ನೊಂದನು ಹರಿಬಕಿಲ್ಲದ ನಾಯಕರ ಸುಡು ಹೊಟ್ಟೆ ಹೊರೆಕರ ವಾಯಕಿವದಿರ ಸಂತವಿಟ್ಟನು ಸ್ವಾಮಿಕಂಟಕರ ಆಯುಧವ ಹಿಡಿದಕಟ ರಣದಲಿ ಸಾಯಲಮ್ಮರು ಬಿರುದ ಹೊಗಳುವ ಬಾಯ ನೋಡೆನುತಿದ್ದುದಾ ದುಶ್ಶಾಸನಾದಿಗಳು
rāya noṃdanu haribakillada nāyakara suḍu hoṭṭe horekara vāyakivadira saṃtaviṭṭanu svāmikaṃṭakara āyudhava hiḍidakaṭa raṇadali sāyalammaru biruda hogaḷuva bāya nōḍenutiddudā duśśāsanādigaḷu
ಕದಡಿತೀ ಬಲಜಲಧಿ ಸುಭಟರು ಹೊದರುಗಟ್ಟಿತು ಹೊಳೆವಡಾಯುಧ ಹೊದಕೆಗಳ ಸತ್ತಿಗೆಯ ಸೂಸುವ ಚಮರ ಸೀಗುರಿಯ ತುದಿವೆರಳ ಕಿರುದನಿಯ ಕೆಂಪಿನ ಕದಡುಗಂಗಳ ಕುಣಿವಮೀಸೆಯ ಕದನಗಲಿಗಳು ಕವಿದರೀ ಕರ್ಣಾದಿ ನಾಯಕರು
kadaḍitī balajaladhi subhaṭaru hodarugaṭṭitu hoḷevaḍāyudha hodakegaḷa sattigeya sūsuva camara sīguriya tudiveraḷa kirudaniya keṃpina kadaḍugaṃgaḷa kuṇivamīseya kadanagaligaḷu kavidarī karṇādi nāyakaru
ಮುತ್ತಿದರು ಹಿಂದೆಡಬಲನ ಮುಂ ದೆತ್ತಲೀಕ್ಷಿಸಲತ್ತ ರಾಯನ ತೆತ್ತಿಗರ ಕೂರಂಬು ಕವಿದವು ನರನ ಹಯರಥವ ಎತ್ತ ನೋಡುವಡತ್ತ ಬಲ ದು ರ್ವೃತ್ತ ಸುಭಟರ ಬಲಶರೌಘದ ಕತ್ತಲೆಗೆ ಹದನೇನೆನುತ ದೈತ್ಯಾರಿ ಚಿಂತಿಸಿದ
muttidaru hiṃdeḍabalana muṃ dettalīkṣisalatta rāyana tettigara kūraṃbu kavidavu narana hayarathava etta nōḍuvaḍatta bala du rvr̥tta subhaṭara balaśaraughada kattalege hadanēnenuta daityāri ciṃtisida
ಅರಿಭಟರು ಕಟ್ಟಳವಿಯಲಿ ಮು ಕ್ಕುರುಕೆ ಮುರರಿಪು ಪಾಂಚಜನ್ಯವ ನಿರದೆ ಮೊಳಗಿದ ಹನುಮ ಗರ್ಜಿಸಿದನು ಪತಾಕೆಯಲಿ ಸುರರ ದೈತ್ಯರ ಸಮರಸಿರಿ ವಿ ಸ್ತರಿಸಿತಿತ್ತಲು ದ್ರೋಣನತ್ತಲು ತೆರಳಿಚಿದನೈ ಪಾಂಡುಪುತ್ರರ ಸೈನ್ಯ ಸಾಗರವ
aribhaṭaru kaṭṭaḷaviyali mu kkuruke muraripu pāṃcajanyava nirade moḷagida hanuma garjisidanu patākeyali surara daityara samarasiri vi starisitittalu drōṇanattalu teraḷicidanai pāṃḍuputrara sainya sāgarava
ನಕುಲನನು ಮಸೆಗಾಣಿಸಿಯೆ ಸಾ ತ್ಯಕಿಯ ವಿರಥನ ಮಾಡಿ ಪಾಂಚಾ ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು ಸಕಲ ಸನ್ನಾಹದಲಿ ಚೈದ್ಯ ಪ್ರಕರವನು ತವೆ ಕೊಂದು ಭೂಪಾ ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ
nakulananu masegāṇisiye sā tyakiya virathana māḍi pāṃcā lakaranōḍisi matsya kēkeya balava barikaidu sakala sannāhadali caidya prakaravanu tave koṃdu bhūpā lakana beṃbattidanu bhīma ghaṭōtkacara gelida
ದಾನವರು ಬಲುಗೈಗಳಪ್ರತಿ ಮಾನರಹುದಾದಡೆಯು ಸಮರದೊ ಳಾನಲಸದಳವಸುರರಿಗೆ ಸುರರಿಗೆ ಜಯಾಭ್ಯುದಯ ಏನ ಹೇಳುವುದಲ್ಲಿ ಸುಭಟ ನಿ ಧಾನರಿದ್ದುದು ಪಾಂಡವರೊಳವ ಧಾನಗುಂದನು ರಾಯ ಗದುಗಿನ ವೀರನಾರಯಣ
dānavaru balugaigaḷaprati mānarahudādaḍeyu samarado ḷānalasadaḷavasurarige surarige jayābhyudaya ēna hēḷuvudalli subhaṭa ni dhānariddudu pāṃḍavaroḷava dhānaguṃdanu rāya gadugina vīranārayaṇa
Keys: ← → turn the page, J K step through the verses.
Illustration: Verse & Place (Project-owned).