Skip to content

ದ್ರೋಣ ಪರ್ವ — ಸಂಧಿ ೧೫ · ದ್ರೋಣ ಪರ್ವ — ಸಂಧಿ ೧೫

Drona Parva · Sandhi 15

drōṇa parva — saṃdhi 15

The complete drona parva · sandhi 15 in Kannada.

71 passagesKannada with transliteration

An original emblem for Drona Parva.

Invocation

7.15.opening

ರಾಯ ಕಟಕಾಚಾರ‍್ಯನೊಡ್ಡಿ ರಾಯಥಟ್ಟಿನೊಳಿರುಳು ಕೊಂದನುವಾಯುತನಯನ ತನುಜನಗ್ಗದ ದೈತ್ಯಕೋಟಿಗಳ

rāya kaṭakācāryanoḍḍi rāyathaṭṭinoḷiruḷu koṃdanuvāyutanayana tanujanaggada daityakōṭigaḷa

ಕೇಳು ಜನಮೇಜಯ ಧರಿತ್ರೀ ಪಾಲ ಕೃಷ್ಣಾರ್ಜುನರು ಬರೆ ಭೂ ಪಾಲನಂದಿದಿರಾಗಿ ಬಂದನು ಸಕಲ ದಳಸಹಿತ ಹೇಳಲರಿಯೆನು ಹರುಷದುದಯವ ನಾಲಿ ಹೂಳಿದವಶ್ರುಜಲದಲಿ ಮೇಲುವಾಯ್ದಪ್ಪಿದನು ದೇವನ ಪಾದಪಂಕಜವ

kēḷu janamējaya dharitrī pāla kr̥ṣṇārjunaru bare bhū pālanaṃdidirāgi baṃdanu sakala daḷasahita hēḷalariyenu haruṣadudayava nāli hūḷidavaśrujaladali mēluvāydappidanu dēvana pādapaṃkajava

Report an error

ಮಾತುದೋರದು ಹೆಚ್ಚಿದಾನಂ ದಾತಿರೇಕಕೆ ಚಿತ್ತ ನೆರೆಯದು ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ ಕಾತರಿಸಿದನು ಮೇಲೆ ಮೇಲೆ ಮ ಹೀತಳಾಧಿಪ ಮೈಮರೆಯೆ ತೆಗೆ ದಾತನನು ತಕ್ಕೈಸಿದನು ಕಾರುಣ್ಯನಿಧಿ ನಗುತ

mātudōradu heccidānaṃ dātirēkake citta nereyadu hūtu higguva puḷakarājige dēha kiridenuta kātarisidanu mēle mēle ma hītaḷādhipa maimareye tege dātananu takkaisidanu kāruṇyanidhi naguta

Report an error

ಫಲಿಸಿತರಸಾ ನಿನ್ನ ಭಾಗ್ಯದ ಬೆಳಸು ನಿನ್ನೊಡವುಟ್ಟಿದನ ನುಡಿ ಕಳಸಗಂಡುದು ಕದನವಿದು ಭಾರಾಂಕವುಳಿದರಿಗೆ ಕಳಿದುದೊಂದಪಮೃತ್ಯುವೆನೆ ನೃಪ ತಿಲಕ ನುಡಿದನು ನಿನ್ನ ಭಾಷೆಯ ಬಲಿದೆ ನಿನ್ನಯ ಬಿರುದ ಸಲಿಸಿದೆ ನಮಗಿದೇನೆಂದ

phalisitarasā ninna bhāgyada beḷasu ninnoḍavuṭṭidana nuḍi kaḷasagaṃḍudu kadanavidu bhārāṃkavuḷidarige kaḷidudoṃdapamr̥tyuvene nr̥pa tilaka nuḍidanu ninna bhāṣeya balide ninnaya biruda saliside namagidēneṃda

Report an error

ತೆಗೆಸು ದಳವನು ಸಾಕು ಬರಿದೇ ಹೊಗಳುತಿಹೆ ನೀ ನಮ್ಮನೀ ಕಾ ಳೆಗದೊಳಳಿದುದು ಹಗೆಯೊಳೇಳಕ್ಷೋಹಿಣೀ ಸೇನೆ ಬಗೆಯದಿರಿದರು ಭೀಮ ಪಾರ್ಥರು ಜಗದೊಳದ್ಭುತ ವೀರರಿವರೆಂ ದಗಧರನು ಪತಿಕರಿಸಿದನು ಪವನಜನ ಫಲುಗುಣನ

tegesu daḷavanu sāku baridē hogaḷutihe nī nammanī kā ḷegadoḷaḷidudu hageyoḷēḷakṣōhiṇī sēne bageyadiridaru bhīma pārtharu jagadoḷadbhuta vīrarivareṃ dagadharanu patikarisidanu pavanajana phaluguṇana

Report an error

ಇತ್ತ ದುಗುಡವ ಹಿಡಿದ ರಾಯನ ಕೆತ್ತ ಮುಖವನು ಕಂಡು ಭಟರೆದೆ ಹೊತ್ತಿದವು ಹೊಗೆದೋರಿದವು ಮೋರೆಗಳು ಪಟುಭಟರ ಇತ್ತ ನೋಡವನೀಶ ಸೈಂಧವ ನೆತ್ತಲಿಹನತ್ತಲು ಮುರಾರಿಯ ತೆತ್ತಿಗರ ಕಳುಹಿಸುವೆನೆಂದನು ಖಾತಿಯಲಿ ಕರ್ಣ

itta duguḍava hiḍida rāyana ketta mukhavanu kaṃḍu bhaṭarede hottidavu hogedōridavu mōregaḷu paṭubhaṭara itta nōḍavanīśa saiṃdhava nettalihanattalu murāriya tettigara kaḷuhisuveneṃdanu khātiyali karṇa

Report an error

ಇನ್ನು ನೋಡಾದಡೆ ಕಿರೀಟಿಯ ಬೆನ್ನಲುಗಿವೆನು ಕರುಳನರ್ಜುನ ಗನ್ನಗತಕದಲರಿಯ ಹೊಯ್ದನು ಹಾಯ್ಕು ವೀಳೆಯವ ನಿನ್ನ ಕಂಗಳ ಬರನ ಕಳೆವೆನು ಬೆನ್ನಲಿರು ನೃಪ ನೋಡು ಚಿತ್ರವ ನಿನ್ನು ತೋರುವೆನೆನುತ ಭಾಷೆಯ ಕೊಟ್ಟನಾ ಕರ್ಣ

innu nōḍādaḍe kirīṭiya bennalugivenu karuḷanarjuna gannagatakadalariya hoydanu hāyku vīḷeyava ninna kaṃgaḷa barana kaḷevenu bennaliru nr̥pa nōḍu citrava ninnu tōruvenenuta bhāṣeya koṭṭanā karṇa

Report an error

ಉಂಟು ಗರುಡನನೊಳ್ಳೆ ತುಡುಕುವ ದುಂಟಲೇ ಲೋಕದಲಿ ರಾಯನ ನಂಟರಿಷ್ಟರೊಳಧಿಕನಲ್ಲಾ ಕರ್ಣ ಕಿರುಕುಳನೆ ಕಂಟಣಿಸಬೇಡಿನ್ನು ಭಾಷೆಗ ಳುಂಟು ನಿನ್ನಲಿ ನಗುವರಾವ ಲ್ಲೆಂಟು ಮಡಿಯನು ಸೊರಹು ಸಾಕೆಂದನು ಕೃಪಾಚಾರ‍್ಯ

uṃṭu garuḍananoḷḷe tuḍukuva duṃṭalē lōkadali rāyana naṃṭariṣṭaroḷadhikanallā karṇa kirukuḷane kaṃṭaṇisabēḍinnu bhāṣega ḷuṃṭu ninnali naguvarāva lleṃṭu maḍiyanu sorahu sākeṃdanu kr̥pācārya

Report an error

ಗರುವರನು ಮಾನ್ಯರನು ರಣಧೀ ರರನು ದೂರದಲಿರಿಸುವರು ಹ ತ್ತಿರಕೆ ಕರೆವರು ಬಾಯಿಬಡಿಕರ ಜಗದ ಭಂಡರನು ಅರಸುಗಳು ದುಶ್ಶೀಲರೆಂಬುದ ನರಿಯದೇ ಜಗವಕಟ ಟೆಕ್ಕೆಯ ಹರಳು ಗಡ ಕೌಸ್ತುಭಕೆ ಸರಿಯೆಂದನು ಕೃಪಾಚಾರ‍್ಯ

garuvaranu mānyaranu raṇadhī raranu dūradalirisuvaru ha ttirake karevaru bāyibaḍikara jagada bhaṃḍaranu arasugaḷu duśśīlareṃbuda nariyadē jagavakaṭa ṭekkeya haraḷu gaḍa kaustubhake sariyeṃdanu kr̥pācārya

Report an error

ನೀವು ಮಾಡುವುದೇನು ರಣದಲಿ ಕಾವೆವೆಂದಿರಿ ಸೈಂಧವನ ನಾ ನಾವಿಧದ ವ್ಯೂಹದಲಿ ನಿಮ್ಮೀ ದ್ರೋಣನೇಗಿದನು ತಾವು ಭಟರಾದರೆ ವಿಭಾಡಿಸಿ ಹೇವಗೆಡಿಸುವುದುಚಿತ ಭಂಡರು ತಾವು ಲೋಗರ ಚುನ್ನವಾಡುವರೆಂದನಾ ಕರ್ಣ

nīvu māḍuvudēnu raṇadali kāveveṃdiri saiṃdhavana nā nāvidhada vyūhadali nimmī drōṇanēgidanu tāvu bhaṭarādare vibhāḍisi hēvageḍisuvuducita bhaṃḍaru tāvu lōgara cunnavāḍuvareṃdanā karṇa

Report an error

ಎಲವೊ ಫಡ ಮಾವನ ವಿಭಾಡಿಸಿ ಗಳಹುವೀ ನಾಲಗೆಯ ಕೀಳುವೆ ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ ಸೆಳೆದು ಝೊಂಪಿಸಿ ಗುರುತನುಜನ ವ್ವಳಿಸಲುಗಿದನಡಾಯುಧವನ ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ

elavo phaḍa māvana vibhāḍisi gaḷahuvī nālageya kīḷuve nele mahādēvilli mēḷavenutta khaṃḍeyava seḷedu jhoṃpisi gurutanujana vvaḷisalugidanaḍāyudhavana ggaḷeya ravisuta mēluvāydanu drōṇanaṃdanana

Report an error

ಬೆಂದುದೊಳತೋಟಿಯಲಿ ಕೌರವ ವೃಂದವಕಟಕಟೆನಲು ಜನವೈ ತಂದು ನಿಂದನು ನಡುವೆ ಕೌರವರಾಯ ಖಾತಿಯಲಿ ಇಂದಿನಾಹವ ಲೇಸು ಲೇಸಿದು ಮಂದಭಾಗ್ಯನು ತಾನು ಸಾಕಿ ನ್ನೆಂದು ಮಾಡುವುದೇನು ನಿಮ್ಮೊಳು ಕದನ ಬೇಡೆಂದ

beṃdudoḷatōṭiyali kaurava vr̥ṃdavakaṭakaṭenalu janavai taṃdu niṃdanu naḍuve kauravarāya khātiyali iṃdināhava lēsu lēsidu maṃdabhāgyanu tānu sāki nneṃdu māḍuvudēnu nimmoḷu kadana bēḍeṃda

Report an error

ಹೇವವುಳ್ಳರೆ ಭೀಮ ಪಾರ್ಥರ ನೀವು ಕೊಲುವುದು ಮೇಣು ರಣದಲಿ ಸಾವುದಲ್ಲದೆ ಗರುವರೊಳತೋಟಿಯಲಿ ತೊಡಕುವರೆ ಕಾವೆವೆಂದಿರಿ ಸೈಂಧವನ ಸುಭ ಟಾವಳಿಯ ಮೂಗುಗಳನರ್ಜುನ ದೇವ ಕೊಯ್ದನು ಸಾರಿ ನೀವೆಂದರಸ ಮಾಣಿಸಿದ

hēvavuḷḷare bhīma pārthara nīvu koluvudu mēṇu raṇadali sāvudallade garuvaroḷatōṭiyali toḍakuvare kāveveṃdiri saiṃdhavana subha ṭāvaḷiya mūgugaḷanarjuna dēva koydanu sāri nīveṃdarasa māṇisida

Report an error

ನೆರೆವಣಿಗೆಯುಳ್ಳರೆ ವಿರೋಧಿಯ ನಿರಿವುದೋಲೆಯಕಾಱತನವನು ಮೆರೆವುದುಚಿತವಿದೇಕೆ ಡೊಂಬಿನ ಶೌರ‍್ಯವೊಳಗೊಳಗೆ ಕಿರುಕುಳರು ನೀವಲ್ಲ ನಿಮ್ಮಲಿ ಕೊರತೆಯಿಲ್ಲದು ನಮ್ಮ ಪುಣ್ಯದ ಬರನ ದಿನ ನೀವೇನ ಮಾಡುವಿರೆಂದು ಬಿಸುಸುಯ್ದ

nerevaṇigeyuḷḷare virōdhiya nirivudōleyakāṟatanavanu merevuducitavidēke ḍoṃbina śauryavoḷagoḷage kirukuḷaru nīvalla nimmali korateyilladu namma puṇyada barana dina nīvēna māḍuvireṃdu bisusuyda

Report an error

ಖಾತಿಯೇಕೈ ಸೈಂಧವನ ಕಾ ವಾತನಾರೈ ತ್ರಿಪುರದಹನದ ಭೂತನಾಥನ ಬಾಣ ಬಂದುದು ನರನ ಗಾಂಡಿವಕೆ ಆತನೆಚ್ಚುದು ಪಾಶುಪತವದ ನಾತುಕೊಂಬವರಾರು ಬರಿದೆ ಭ ಟಾತಿಶಯವನು ಹುರುಳುಗೆಡಿಸುವಿರೆಂದನಾ ದ್ರೋಣ

khātiyēkai saiṃdhavana kā vātanārai tripuradahanada bhūtanāthana bāṇa baṃdudu narana gāṃḍivake ātaneccudu pāśupatavada nātukoṃbavarāru baride bha ṭātiśayavanu huruḷugeḍisuvireṃdanā drōṇa

Report an error

ಒಂದು ಹರ ಹಿಡಿವಂಬು ಶಕ್ರನ ದೊಂದು ಕೌಬೇರಾಗ್ನಿ ವಾಯುವ ದೊಂದು ಪಾರ್ಥನ ಬತ್ತಳಿಕೆ ದಿವ್ಯಾಸ್ತ್ರ ತುಂಬಿಹವು ಕೊಂದಡಲ್ಲದೆ ಮಾಣವವು ನಾ ವೊಂದಕೊಬ್ಬರು ಗುರಿ ನಿದಾನಿಸ ಲಿಂದು ನಮಗಳವಡದು ಜಯವಿಲ್ಲೆಂದನಾ ದ್ರೋಣ

oṃdu hara hiḍivaṃbu śakrana doṃdu kaubērāgni vāyuva doṃdu pārthana battaḷike divyāstra tuṃbihavu koṃdaḍallade māṇavavu nā voṃdakobbaru guri nidānisa liṃdu namagaḷavaḍadu jayavilleṃdanā drōṇa

Report an error

ಅರಸ ಮರುಳೈ ನೀನು ಸುರರನು ಸರಕುಮಾಡನು ಸಕಲ ದೈವದ ದೊರೆಯಲೇ ಹರನಾತನಸ್ತ್ರವನಾರು ತರುಬುವರು ಹರನ ಶರವಿಲ್ಲಿನ್ನು ಹಗೆಗಳ ನಿರುಳು ರಣದಲಿ ಹಿಂಡುವೆನು ಸಂ ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ

arasa maruḷai nīnu suraranu sarakumāḍanu sakala daivada doreyalē haranātanastravanāru tarubuvaru harana śaravillinnu hagegaḷa niruḷu raṇadali hiṃḍuvenu saṃ varisu kaidīvigeyaneṃdanu drōṇanubbinali

Report an error

ಘಾಯವಡೆದಾನೆಗಳ ಕೈ ಮೈ ನೋಯೆ ಕಾದಿದ ರಾಜಪುತ್ರರ ನಾಯುಧದ ಮಳೆಗಳಲಿ ನನೆದ ಜವಾಯ್ಲ ತೇಜಿಗಳ ಹಾಯಿದುರೆ ಸೊಪ್ಪಾದ ಶಕಟ ನಿ ಕಾಯವನು ಪೂರಾಯದೇರಿನ ನಾಯಕರ ಕರೆಕರೆದು ಬವರಕೆ ಕಳುಹಿದನು ದ್ರೋಣ

ghāyavaḍedānegaḷa kai mai nōye kādida rājaputrara nāyudhada maḷegaḷali naneda javāyla tējigaḷa hāyidure soppāda śakaṭa ni kāyavanu pūrāyadērina nāyakara karekaredu bavarake kaḷuhidanu drōṇa

Report an error

ಜರಿದ ಜೋಡನು ನೆರೆ ಹರಿದ ಹ ಕ್ಕರಿಕೆಗಳ ನುಗ್ಗಾದ ಗುಳವನು ಬಿರಿದ ಸೀಸಕ ಬಾಹುರಕ್ಕೆಯ ಮುರಿದ ಬಲ್ಲೆಹದ ಅರೆಗಡಿದ ಬಿಲ್ಲುಗಳ ನೆಗ್ಗಿದ ಹರಿಗೆಯನು ಮುಕ್ಕಾದ ಕೈದುವ ತರಿಸಿ ಕಳುಹಿಸುತಿರ್ದನತಿರಭಸದಲಿ ಕಲಿದ್ರೋಣ

jarida jōḍanu nere harida ha kkarikegaḷa nuggāda guḷavanu birida sīsaka bāhurakkeya murida ballehada aregaḍida billugaḷa neggida harigeyanu mukkāda kaiduva tarisi kaḷuhisutirdanatirabhasadali kalidrōṇa

Report an error

ಎಣಿಸಲರಿಯೆನು ಬಂಡಿಗಳು ಸಂ ದಣಿಸಿದವು ಹಕ್ಕರಿಕೆಗಳ ಹ ಲ್ಲಣದ ಕವಚದ ಸೀಸಕದ ಜೋಡುಗಳ ರೆಂಚೆಗಳ ಮಣಿಮಯದ ಮೋಹಳದ ಹಿರಿಯು ಬ್ಬಣದ ಸಬಳದ ಶೂಲ ಸುರಗಿಯ ಕಣೆಯ ಹೊರೆ ಚಾಚಿದವು ಕಟಕಾಚಾರ‍್ಯನಿದಿರಿನಲಿ

eṇisalariyenu baṃḍigaḷu saṃ daṇisidavu hakkarikegaḷa ha llaṇada kavacada sīsakada jōḍugaḷa reṃcegaḷa maṇimayada mōhaḷada hiriyu bbaṇada sabaḷada śūla suragiya kaṇeya hore cācidavu kaṭakācāryanidirinali

Report an error

ಕರೆಕರೆದು ರಥಿಕರಿಗೆ ಮಾವಂ ತರಿಗೆ ಕಾಲಾಳಿಂಗೆ ರಾವು ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ ತರಿಸಿ ಸಾದು ಜವಾದಿಯನು ಕ ರ್ಪುರದ ವೀಳೆಯವುಡುಗೊರೆಗಳಲಿ ಹಿರಿದು ಪತಿಕರಿಸಿದನು ಪರಿವಾರವನು ಕಲಿದ್ರೋಣ

karekaredu rathikarige māvaṃ tarige kālāḷiṃge rāvu ttarige koḍisidanavaravarigavaraṃgadāyudhava tarisi sādu javādiyanu ka rpurada vīḷeyavuḍugoregaḷali hiridu patikarisidanu parivāravanu kalidrōṇa

Report an error

ಉರವಣಿಸುವುದು ಕೊಂಡ ಹಜ್ಜೆಗೆ ಮುರಿಯಲಾಗದು ಶಸ್ತ್ರಧಾರಾ ಪರಮತೀರ್ಥಸ್ನಾನ ತೊಳೆವುದು ಭವದ ಕಿಲ್ಬಿಷವ ಹರಣದಲಿ ಕಕ್ಕುಲಿತೆ ಬೇಡು ದ್ಧರಿಸುವುದು ಸತ್ಕುಲತೆಯನು ಸಂ ವರಿಸುವುದು ಸದ್ಗತಿಯನೆಂದನು ದ್ರೋಣ ನಿಜಬಲಕೆ

uravaṇisuvudu koṃḍa hajjege muriyalāgadu śastradhārā paramatīrthasnāna toḷevudu bhavada kilbiṣava haraṇadali kakkulite bēḍu ddharisuvudu satkulateyanu saṃ varisuvudu sadgatiyaneṃdanu drōṇa nijabalake

Report an error

ಲಟಕಟಿಸಿತಾಹವಕೆ ರಾಯನ ಕಟಕ ಸುಮ್ಮಾನದಲಿ ಮೊಳಗುವ ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ ಚಟುಳ ಕಹಳೆಯ ಗಜರು ಮಿಗಲು ತ್ಕಟಿಸಿತಂಬುಜಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ

laṭakaṭisitāhavake rāyana kaṭaka summānadali moḷaguva paṭaha ḍamaru mr̥daṃga ghanagaṃbhīra bhērigaḷa caṭuḷa kahaḷeya gajaru migalu tkaṭisitaṃbujabhavana nirmita ghaṭa biriye biguhāytu drōṇana samarasannāha

Report an error

ನರನ ಕರೆ ಕರೆ ಸಿಂಧುರಾಜನ ಹರಿಬವೆಮ್ಮದು ತಮ್ಮದೆಂದ ಬ್ಬರಿಸಿ ನೂಕಿತು ಕದನಲಂಪಟರಾಗಿ ಪಟುಭಟರು ಸರಿಸದಲಿ ಲಟಕಟಿಸಿ ಮೋಹರ ಮರಳಿ ನಿಂದುದು ರಣಕೆ ರಜನೀ ಚರರ ಥಟ್ಟಣೆ ಧಾತುಗೆಡಿಸಿತು ದಿಟ್ಟರುಬ್ಬಟೆಯ

narana kare kare siṃdhurājana haribavemmadu tammadeṃda bbarisi nūkitu kadanalaṃpaṭarāgi paṭubhaṭaru sarisadali laṭakaṭisi mōhara maraḷi niṃdudu raṇake rajanī carara thaṭṭaṇe dhātugeḍisitu diṭṭarubbaṭeya

Report an error

ಹಿಂದೆ ಸೆಳೆದುದು ವೈರಿಬಲ ಭಟ ವೃಂದ ನಿಲಲಿ ಕಿರೀಟಿ ಭೀಮರ ಕುಂದುಗಾಬುದು ಲೋಕ ನಮ್ಮನು ತೆಗೆದು ಹಿಂಗಿದರೆ ಬಂದ ಜಯವಕ್ಕುವುದು ರಜನಿಯ ಕೊಂದೆವಾದರೆ ನಮಗೆ ಸರಿಯಿ ಲ್ಲೆಂದು ಧೃಷ್ಟದ್ಯುಮ್ನ ಕರೆಸಿದನಖಿಳನಾಯಕರ

hiṃde seḷedudu vairibala bhaṭa vr̥ṃda nilali kirīṭi bhīmara kuṃdugābudu lōka nammanu tegedu hiṃgidare baṃda jayavakkuvudu rajaniya koṃdevādare namage sariyi lleṃdu dhr̥ṣṭadyumna karesidanakhiḷanāyakara

Report an error

ಸೋತಬಲ ಸಂವರಿಸಿಕೊಂಡುದು ಪೂತುರೇ ರಣವೆಂಬುದೆಮ್ಮಯ ಧಾತು ಕಲಿ ಮೂದಲಿಸಿ ಕರೆದರೆ ರಾಜ್ಯಸಿರಿಯೇಕೆ ಭೀತಿ ಮನದಲಿ ಪೌರುಷಾಂಗದ ಮಾತು ಮುಖದಲಿ ಮುರಿವು ಕಾಲಲಿ ಬೂತುಗಳು ಕುರುವೀರರೆನುತಿದಿರಾದುದರಿಸೇನೆ

sōtabala saṃvarisikoṃḍudu pūturē raṇaveṃbudemmaya dhātu kali mūdalisi karedare rājyasiriyēke bhīti manadali pauruṣāṃgada mātu mukhadali murivu kālali būtugaḷu kuruvīrarenutidirādudarisēne

Report an error

ಇಳಿದುದೀ ಕಣನೊಳಗೆ ದಿಗುಮಂ ಡಲದ ಸಂಧ್ಯಾರಾಗವೆನೆ ಪರಿ ದಳಿತ ಚತುರಂಗದಲಿ ಮಸಗಿದುದರುಣಜಲರಾಶಿ ಕಲಿಗಳುಬ್ಬಿನ ರೋಷತಾಮಸ ತುಳುಕಿತೆನೆ ದಿಗುವಳಯದಲಿ ಕುಡಿ ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ

iḷidudī kaṇanoḷage digumaṃ ḍalada saṃdhyārāgavene pari daḷita caturaṃgadali masagidudaruṇajalarāśi kaligaḷubbina rōṣatāmasa tuḷukitene diguvaḷayadali kuḍi veḷaga kuḍi kuḍidaḍarutirdudu timiralate jagava

Report an error

ಜಡಿವ ಖಡುಗದ ಕಿಡಿಗಳಲಿ ಬೇ ಗಡೆಯನಾಂತುದು ಮಕುಟಬದ್ಧರ ಮುಡಿಯ ರತ್ನಪ್ರಭೆಗಳಲಿ ಜರ್ಝರಿತ ತನುವಾಯ್ತು ಗಡಣದಂಬಿನ ಮಸೆಯ ಬೆಳಗಿನೊ ಳಡಸಿದಾಕ್ಷಣ ಮತ್ತೆ ನಿಮಿಷಕೆ ಹೊಡಕರಿಸಿ ಹಬ್ಬಿದುದು ಮಬ್ಬಿನ ಧಾಳಿ ದೆಸೆದೆಸೆಗೆ

jaḍiva khaḍugada kiḍigaḷali bē gaḍeyanāṃtudu makuṭabaddhara muḍiya ratnaprabhegaḷali jarjharita tanuvāytu gaḍaṇadaṃbina maseya beḷagino ḷaḍasidākṣaṇa matte nimiṣake hoḍakarisi habbidudu mabbina dhāḷi desedesege

Report an error

ಖಳರ ಹೃದಯದ ಗರುಡಿ ಘೂಕಾ ವಳಿಯ ನಯನಾಂಜನ ಧರಿತ್ರಿಯ ನಳಿನಕೆರಗಿದ ತುಂಬಿ ಸುಭಟಸ್ವಾಂತ ಶಶಿ ರಾಹು ಪ್ರಳಯ ತಿಮಿರದ ಬೀಜ ನೀಲಾ ಚಳದ ಸಾಯುಜ್ಯವೊ ನಭೋಮಂ ಡಲದೊಳದನೇವೊಗಳುವೆನು ಮಸಗಿತು ತಮಸ್ತೋಮ

khaḷara hr̥dayada garuḍi ghūkā vaḷiya nayanāṃjana dharitriya naḷinakeragida tuṃbi subhaṭasvāṃta śaśi rāhu praḷaya timirada bīja nīlā caḷada sāyujyavo nabhōmaṃ ḍaladoḷadanēvogaḷuvenu masagitu tamastōma

Report an error

ದಳದ ಬೊಬ್ಬೆಯ ಸಿಡಿಲ ಬಲುಗ ತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ ಬಲುಸರಿಯ ನಾರಾಚ ಜಾಳದ ಮಳೆಯ ನೆತ್ತರ ಹೊನಲುಗಳ ರೌ ಕುಳದ ಮಳೆಗಾಲದಲಿ ಹೆಚ್ಚಿತು ಭಟರ ಶೌರ‍್ಯಶಿಖಿ

daḷada bobbeya siḍila baluga ttaleya jhāḍiya mugila mige hoḷe hoḷeva mahipara makuṭaratnada baḷḷimiṃcugaḷa balusariya nārāca jāḷada maḷeya nettara honalugaḷa rau kuḷada maḷegāladali heccitu bhaṭara śauryaśikhi

Report an error

ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು ಹಣಿದದಲಿ ತಮ್ಮೊಳಗೊಳಗೆ ಸಂ ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ ರಣಮಹೀಸಂತಮಸಶಾಂತೇ ಕ್ಷಣರು ದಿಗುಭ್ರಮೆಯಲಿ ಸ್ವಕೀಯ ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ

heṇagi mige taleyotti hoydaru haṇidadali tammoḷagoḷage saṃ daṇigaḷali saigaredaraṃbina siriyanuravaṇisi raṇamahīsaṃtamasaśāṃtē kṣaṇaru digubhrameyali svakīya kṣaṇanavanu racisidaru rauravavāytu rātriyali

Report an error

ಆರ ವಂಗಡದಾಳಿವನು ನೀ ನಾರು ಹೇಸರೇನೆಂದು ಬಳಿಕ ವಿ ಚಾರ ಮಿಗೆ ಹೊಯ್ದಾಡಿದರು ಕರೆಕರೆದು ಮೂದಲಿಸಿ ಭಾರಿಸಿತು ಬಲುತಿಮಿರ ಬಲ ಸಂ ಹಾರವನು ವಿವರಿಸುವನಾವನು ಭೂರಿ ಭಟರಂಘವಣೆ ಬೀತುದು ಭೂಪ ಕೇಳೆಂದ

āra vaṃgaḍadāḷivanu nī nāru hēsarēneṃdu baḷika vi cāra mige hoydāḍidaru karekaredu mūdalisi bhārisitu balutimira bala saṃ hāravanu vivarisuvanāvanu bhūri bhaṭaraṃghavaṇe bītudu bhūpa kēḷeṃda

Report an error

ತೆಗೆಸು ಚೂಣಿಯ ಬಲವ ದೀವ ಟ್ಟಿಗರ ಕರೆ ಕರೆ ತೈಲಪೂರ್ಣದ ತೊಗಲ ಕುನಿಕಿಲ ಬಂಡಿ ಕವಿಯಲಿ ಕೋಟಿ ಸಂಖ್ಯೆಯಲಿ ಬಿಗಿದ ಮಳವೆಯನೆಣ್ಣೆಗೊಪ್ಪರಿ ಗೆಗಳೊಳದ್ದಲಿ ಗಳೆಗಳಲಿ ಸೀ ರೆಗಳ ಸುತ್ತಲಿಯೆಂದು ಕೈವೀಸಿದನು ಕಲಿದ್ರೋಣ

tegesu cūṇiya balava dīva ṭṭigara kare kare tailapūrṇada togala kunikila baṃḍi kaviyali kōṭi saṃkhyeyali bigida maḷaveyaneṇṇegoppari gegaḷoḷaddali gaḷegaḷali sī regaḷa suttaliyeṃdu kaivīsidanu kalidrōṇa

Report an error

ಬೆಳಗಿದವು ಬೊಂಬಾಳ ದೀವಿಗೆ ಬಲದೊಳಾನೆಗೆ ಹತ್ತು ರಥಿಕಾ ವಳಿಗೆ ನಾಲುಕು ಹಯಕೆರಡು ಕಾಲಾಳಿಗೊಂದೊಂದು ಬಲಸಮುದ್ರದೊಳೊಗೆದ ವಡಬಾ ನಳನ ಝಳವೋ ಮೃತ್ಯುವಿನ ದೀ ವಳಿಗೆಯಿರುಳೋ ತಿಳಿಯಲರಿದೆನೆ ಚಿತ್ರವಾಯ್ತೆಂದ

beḷagidavu boṃbāḷa dīvige baladoḷānege hattu rathikā vaḷige nāluku hayakeraḍu kālāḷigoṃdoṃdu balasamudradoḷogeda vaḍabā naḷana jhaḷavō mr̥tyuvina dī vaḷigeyiruḷō tiḷiyalaridene citravāyteṃda

Report an error

ಬಗೆಯಲರಿದಿದು ಗರ್ಭ ಬಲಿಯದೆ ಹಗಲನೀದುದೊ ರಾತ್ರಿ ಕುಡಿಕುಡಿ ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು ಹೊಗರುಗೆಟ್ಟುದು ಕುಮುದ ಕಮಳದ ಬಿಗುಹು ಬಿಟ್ಟುದು ಚಕ್ರವಾಕದ ತಗಹು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ

bageyalarididu garbha baliyade hagalanīdudo rātri kuḍikuḍi duguḷutirduvu timiravanu karadīptikāḷigaḷu hogarugeṭṭudu kumuda kamaḷada biguhu biṭṭudu cakravākada tagahu keṭṭudu hēḷenalu raṃjisitu dīpāḷi

Report an error

ತಿಮಿರವಡಗಿತು ಮನದ ರೋಷದ ತಿಮಿರವಡಗದ ಮುನ್ನ ಭುಜವಿ ಕ್ರಮದ ವಿತರಣೆಯುಳ್ಳಡವಸರವಿದು ನೃಪಾಲರಿಗೆ ನಿಮನಿಮಗೆ ಮುಂಕೊಂಡು ವಂಶ ಕ್ರಮ ಸಮಾಗತ ಕೀರ್ತಿಸತಿಯಲಿ ಮಮತೆಗಳ ನೆರೆಮಾಡಿಯೆಂದನು ದ್ರೋಣ ನಿಜಬಲಕೆ

timiravaḍagitu manada rōṣada timiravaḍagada munna bhujavi kramada vitaraṇeyuḷḷaḍavasaravidu nr̥pālarige nimanimage muṃkoṃḍu vaṃśa krama samāgata kīrtisatiyali mamategaḷa neremāḍiyeṃdanu drōṇa nijabalake

Report an error

ಮತ್ತೆ ಹೊಕ್ಕುದು ಭಟರಮಮ ದಿಗು ಭಿತ್ತಿ ಬಿರಿಯಲು ಮೊರೆವ ಭೇರಿಯ ಕಿತ್ತು ನೆಲ ಹೊಡೆಮರಳೆ ಮೊಳಗುವ ಪಟಹ ಡಿಂಡಿಮದ ಹತ್ತು ಸಾವಿರ ನೃಪರು ರಿಪುಗಳ ಮುತ್ತಿದರು ಮುಸುಕಿದರು ಮೆಯ್ಯಲಿ ಮೆತ್ತಿದರು ಮೊನೆಗಣೆಗಳನು ಪಾಂಡವರ ಬಲದೊಳಗೆ

matte hokkudu bhaṭaramama digu bhitti biriyalu moreva bhēriya kittu nela hoḍemaraḷe moḷaguva paṭaha ḍiṃḍimada hattu sāvira nr̥paru ripugaḷa muttidaru musukidaru meyyali mettidaru monegaṇegaḷanu pāṃḍavara baladoḷage

Report an error

ಅಕಟ ಫಡ ಕುನ್ನಿಗಳಿಗಸುರಾಂ ತಕನ ಕಪಟದ ಮಂತ್ರವೇ ಬಾ ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ ಸಕಲ ಸನ್ನಾಹದಲಿ ಯಾದವ ನಿಕರ ಸಹಿತೀಯಿರುಳುರಣದಲಿ ಚಕಿತರಾದರೆ ಜೋಡಿಸೆನುತಿದಿರಾದನಾ ದ್ರೋಣ

akaṭa phaḍa kunnigaḷigasurāṃ takana kapaṭada maṃtravē bā dhakavidallade nimage sōluvuduṃṭe kurusēne sakala sannāhadali yādava nikara sahitīyiruḷuraṇadali cakitarādare jōḍisenutidirādanā drōṇa

Report an error

ತವಕ ತಗ್ಗಿತು ಭಟರ ತಾಳಿಗೆ ಜವಳಿದೆಗೆದುದು ಮನಕೆ ಭೀತಿಯ ಗವಸಣಿಗೆ ಘಾಡಿಸಿತು ಜಾಳಿಸಿತದಟರಪಸರಣ ಸವೆದ ಶೌರ‍್ಯದ ಘಾಯ ಘಲ್ಲಿಸಿ ತವಯವದ ಮಡಮುರಿವ ಮೋಹರ ದವನಿಪತಿಗಳ ನಿಲವ ನೋಡಿದನಸುರರಿಪು ನಗುತ

tavaka taggitu bhaṭara tāḷige javaḷidegedudu manake bhītiya gavasaṇige ghāḍisitu jāḷisitadaṭarapasaraṇa saveda śauryada ghāya ghallisi tavayavada maḍamuriva mōhara davanipatigaḷa nilava nōḍidanasuraripu naguta

Report an error

ನಿಲ್ಲಿ ಭಯ ಬೇಡಾವ ರಣವಿದು ತಲ್ಲಣಕೆ ತರುವಾಯೆ ದೀವಿಗೆ ಪಲ್ಲವಿಸಿದರೆ ತಳಿತುದೇ ಭುಜಶೌರ‍್ಯ ಕುರುಬಲಕೆ ಖುಲ್ಲರಾರೋ ಬಲವ ತಿರುಹಿದ ರಿಲ್ಲಿ ನಿಲಲಂಜಿದರೆನುತ ಕರ ಪಲ್ಲವವ ನೆಗಹಿದನು ಲಕ್ಷ್ಮೀಕಾಂತ ಕರುಣದಲಿ

nilli bhaya bēḍāva raṇavidu tallaṇake taruvāye dīvige pallavisidare taḷitudē bhujaśaurya kurubalake khullarārō balava tiruhida rilli nilalaṃjidarenuta kara pallavava negahidanu lakṣmīkāṃta karuṇadali

Report an error

ಆವನೊಬ್ಬನ ಮಧುರವಚನ ಕೃ ಪಾವಲೋಕನದಿಂದ ಶತ ಜ ನ್ಮಾವಳಿಯ ಘನ ದುರಿತವಹ್ನಿಯ ಝಳಕೆ ಕಡೆಯಹುದು ದೇವರೀತನ ಲಲಿತವಚನಸು ಧಾವಸೇಚನದಿಂದ ಭಟರುರೆ ಜೀವಿಸುವುದೇನರಿದೆ ಕೇಳ್ ಜನಮೇಜಯಕ್ಷಿತಿಪ

āvanobbana madhuravacana kr̥ pāvalōkanadiṃda śata ja nmāvaḷiya ghana duritavahniya jhaḷake kaḍeyahudu dēvarītana lalitavacanasu dhāvasēcanadiṃda bhaṭarure jīvisuvudēnaride kēḷ janamējayakṣitipa

Report an error

ಹಿಂಗಿದುದು ಭಯ ಕಂಠದಸು ಸ ರ್ವಾಂಗದಲಿ ಪಸರಿಸಿತು ಕಾಳೆಗ ದಂಘವಣೆ ಹೊಗರೇರಿದುದು ವಿಕ್ರಮ ಛಡಾಳಿಸಿತು ಹೊಂಗಿದರು ಹೊಂಪುಳಿಯ ಪುಳಕದ ಮುಂಗುಡಿಯ ರೋಮಾಂಚನದ ರಣ ರಂಗ ಧೀರರು ತಱುಬಿ ನಿಂದರು ಮತ್ತೆ ಕಾಳೆಗವ

hiṃgidudu bhaya kaṃṭhadasu sa rvāṃgadali pasarisitu kāḷega daṃghavaṇe hogarēridudu vikrama chaḍāḷisitu hoṃgidaru hoṃpuḷiya puḷakada muṃguḍiya rōmāṃcanada raṇa raṃga dhīraru taṟubi niṃdaru matte kāḷegava

Report an error

ಭಟರು ಬಳಲಿದರಿಂದು ರಣವು ತ್ಕಟವು ಧೀವಶಿಗಳು ಮಹಾರಥ ರಟಕಟಿಸುತಿದೆ ಮತ್ತೆ ನಾವಿದನೇನ ಹೇಳುವೆವು ಕುಟಿಲ ಭಾರದ್ವಾಜನಿವನು ಬ್ಬಟೆಗೆ ಮದ್ದರೆವೆನು ನಿಶಾಪರಿ ಯಟನಪಟುಗಳು ಬರಲಿ ಕಾಳೆಗಕೆಂದನಸುರಾರಿ

bhaṭaru baḷalidariṃdu raṇavu tkaṭavu dhīvaśigaḷu mahāratha raṭakaṭisutide matte nāvidanēna hēḷuvevu kuṭila bhāradvājanivanu bbaṭege maddarevenu niśāpari yaṭanapaṭugaḷu barali kāḷegakeṃdanasurāri

Report an error

ಕರಸು ಧರ್ಮಜ ಕಲಿಘಟೋತ್ಕಚ ನಿರುಳುಬವರಕೆ ನಿಲಲಿ ಸಾತ್ಯಕಿ ನರ ವೃಕೋದರ ನಕುಲ ಸಹದೇವಾದಿಗಳಿಗರಿದು ಇರುಳು ರಣದಾಯತವನವನೇ ಹಿರಿದು ಬಲ್ಲನು ಗೆಲುವನೆನೆ ಮುರ ಹರನ ನೇಮದಲನಿಲತನಯನತನಯನೈತಂದ

karasu dharmaja kalighaṭōtkaca niruḷubavarake nilali sātyaki nara vr̥kōdara nakula sahadēvādigaḷigaridu iruḷu raṇadāyatavanavanē hiridu ballanu geluvanene mura harana nēmadalanilatanayanatanayanaitaṃda

Report an error

ಜಡಿವ ಹಿರಿಯುಬ್ಬಣದ ಹೆಚ್ಚಿದ ಮುಡುಹುಗಳ ಮುರಿದಲೆಯ ಚರಣದ ತೊಡರ ಮೊಳಗಿನ ಬಾವುಲಿಗಳಲಿ ಘಣಘಣ ಧ್ವನಿಯ ನಿಡಿಯೊಡಲ ಮುರಿಮೀಸೆಗಳ ಕೆಂ ಪಡರ್ದ ಕಂಗಳ ಹೊಳೆವ ದಾಡೆಯ ದಡಿಗ ದಾನವನವನಿ ಹೆಜ್ಜೆಗೆ ನೆಗ್ಗಲೈತಂದ

jaḍiva hiriyubbaṇada heccida muḍuhugaḷa muridaleya caraṇada toḍara moḷagina bāvuligaḷali ghaṇaghaṇa dhvaniya niḍiyoḍala murimīsegaḷa keṃ paḍarda kaṃgaḷa hoḷeva dāḍeya daḍiga dānavanavani hejjege neggalaitaṃda

Report an error

ಏನು ಧರ್ಮಜ ಕರಸಿದೈ ಕುರು ಸೇನೆ ಮಲೆತುದೆ ಬಿಡು ಬಿಡಾ ತಡ ವೇನು ತಾ ವೀಳೆಯವನೆನುತೆಡಗಯ್ಯನರಳಿಚುತ ದಾನವಾಮರರೊಳಗೆ ನಿನ್ನಯ ಸೂನುವಿಗೆ ಸರಿಯಿಲ್ಲೆನಿಸಿ ನಿಲ ಲಾನು ಬಲ್ಲೆನು ನೋಡೆನುತ ಬಿದಿರಿದನು ಖಂಡೆಯವ

ēnu dharmaja karasidai kuru sēne maletude biḍu biḍā taḍa vēnu tā vīḷeyavanenuteḍagayyanaraḷicuta dānavāmararoḷage ninnaya sūnuvige sariyillenisi nila lānu ballenu nōḍenuta bidiridanu khaṃḍeyava

Report an error

ಜಡಿದು ಝೊಂಪಿಸಿ ವೀಳೆಯವ ಕೊಂ ಡೆಡದ ಕಯ್ಯಿಂದೆರಗಿ ಮದಮುಖ ನೆಡಬಲನ ನೋಡಿದರೆ ರಕ್ಕಸಕೋಟಿ ಜೀಯೆನುತ ಸಿಡಿಲ ಸೆರೆ ಬಿಟ್ಟಂತೆ ಭುಜವನು ಹೊಡೆದು ಮುಂಚಿತು ದೈತ್ಯಬಲವುಲಿ ದಡಿಯಿಡಲು ಮೇಲುಸುರು ಮಸಗಿತು ಫಣಿಪ ಕಮಠರಿಗೆ

jaḍidu jhoṃpisi vīḷeyava koṃ ḍeḍada kayyiṃderagi madamukha neḍabalana nōḍidare rakkasakōṭi jīyenuta siḍila sere biṭṭaṃte bhujavanu hoḍedu muṃcitu daityabalavuli daḍiyiḍalu mēlusuru masagitu phaṇipa kamaṭharige

Report an error

ಕಾಳರಾತ್ರಿಯ ಕಟಕವೋ ಮೇಣ್ ಕಾಲರುದ್ರನ ಪಡೆಯೊ ದಾನವ ನಾಳಿನಗ್ಗಳಿಕೆಗಳ ಬಣ್ಣಿಸಬಲ್ಲ ಕವಿಯಾರು ಆಳ ಬೋಳೈಸಿದನು ಕಪ್ಪುರ ವೀಳೆಯವ ಹಾಯ್ಕಿದನು ಲೋಹದ ಗಾಲಿ ಘೀಳಿಡೆ ರಥವನೇರಿದನನಿಲಸುತಸೂನು

kāḷarātriya kaṭakavō mēṇ kālarudrana paḍeyo dānava nāḷinaggaḷikegaḷa baṇṇisaballa kaviyāru āḷa bōḷaisidanu kappura vīḷeyava hāykidanu lōhada gāli ghīḷiḍe rathavanēridananilasutasūnu

Report an error

ಸಾಲು ಮಿಗೆ ಮೋಹರದೊಳಗೆ ಬೊಂ ಬಾಳ ದೀವಿಗೆ ಬೆಳಗಿದವು ಶರ ಜಾಳ ದೀಧಿತಿ ತೊಳಗಿದವು ರಕ್ಕಸರ ಕೈಗಳಲಿ ಬಾಳ ಹೊಳಹನು ಜರಿದು ದಾಡೆಯ ಢಾಳ ಮಿಗೆ ಗಜಗಲಿಸೆ ದಾನವ ಕಾಳೆಗಕ್ಕನುವಾಗಿ ನಿಂದನು ಬಿಗಿದ ಬಿಲುದೆಗೆದು

sālu mige mōharadoḷage boṃ bāḷa dīvige beḷagidavu śara jāḷa dīdhiti toḷagidavu rakkasara kaigaḷali bāḷa hoḷahanu jaridu dāḍeya ḍhāḷa mige gajagalise dānava kāḷegakkanuvāgi niṃdanu bigida biludegedu

Report an error

ಹಯಕೆ ಹಯ ರಥ ರಥಕೆ ಪಯದಳ ಪಯದಳಕೆ ಗಜಸೇನೆ ಗಜಸೇ ನೆಯಲಿ ಭಾಷೆಯ ಭಟರು ಭಾಷೆಯ ಭಟರ ಗಡಣದಲಿ ನಿಯತ ಚಾತುರ್ಬಲವೆರಡು ನಿ ರ್ಭಯದಲೊದಗಿತು ಮಕುಟಮಸ್ತಕ ಮಯ ಮಹೀತಳವೆನಲು ಹಳಚಿದು ಹೊಯ್ದುದುಭಯಬಲ

hayake haya ratha rathake payadaḷa payadaḷake gajasēne gajasē neyali bhāṣeya bhaṭaru bhāṣeya bhaṭara gaḍaṇadali niyata cāturbalaveraḍu ni rbhayadalodagitu makuṭamastaka maya mahītaḷavenalu haḷacidu hoydudubhayabala

Report an error

ಕೌರವನ ತಳತಂತ್ರ ಕಟಕಾ ಚಾರಿಯನ ಕಾಹಿನಲಿ ರಿಪುಪರಿ ವಾರ ನಿಂದುದು ಭೀಮಸೇನನ ಸುತನ ಬಳಸಿನಲಿ ಆರಿದನು ಜಗ ನಡುಗೆ ಬೊಬ್ಬೆಯ ಭಾರದಲಿ ವೈರಿಗಳ ಬಲಸಂ ಹಾರ ರುದ್ರನು ಕಲಿಘಟೋತ್ಕಚ ಹೊಕ್ಕನಾಹವವ

kauravana taḷataṃtra kaṭakā cāriyana kāhinali ripupari vāra niṃdudu bhīmasēnana sutana baḷasinali āridanu jaga naḍuge bobbeya bhāradali vairigaḷa balasaṃ hāra rudranu kalighaṭōtkaca hokkanāhavava

Report an error

ಬೆಳೆದವೋ ಕೈಕಾಲು ನೀಲಾ ಚಲಕೆ ಹೇಳೆನೆ ಮುಗಿಲ ತುಡುಕುವ ತಲೆಯ ತೋಕೆಯ ತೋರಹತ್ತನ ಕಂಡು ಕುರುಸೇನೆ ಕಳವಳಿಸಿದರು ಕಾಯದಲಿ ಕ ಕ್ಕುಲಿತೆಗಾರರು ಕೈದೆಗೆದರ ಗ್ಗಳೆಯನುರುಬೆಗೆ ಬೀಳುಕೊಟ್ಟರು ಭಟರು ಸೈರಣೆಯ

beḷedavō kaikālu nīlā calake hēḷene mugila tuḍukuva taleya tōkeya tōrahattana kaṃḍu kurusēne kaḷavaḷisidaru kāyadali ka kkulitegāraru kaidegedara ggaḷeyanurubege bīḷukoṭṭaru bhaṭaru sairaṇeya

Report an error

ಏನ ಹೇಳುವೆನವರ ರಣಸು ಮ್ಮಾನವನು ನಮ್ಮವರ ಮೊಗದು ಮ್ಮಾನವನು ಪ್ರಥಮಪ್ರವೇಶದೊಳಾದುದೀ ಹದನು ದಾನವರ ಥಟ್ಟಣೆಗೆ ನಿಲುವರ ನಾನು ಕಾಣೆನು ದಿಟ್ಟತನದಲಿ ತಾನೆ ನಿಂದನು ಕೌರವೇಂದ್ರನು ಸಕಲ ಬಲಸಹಿತ

ēna hēḷuvenavara raṇasu mmānavanu nammavara mogadu mmānavanu prathamapravēśadoḷādudī hadanu dānavara thaṭṭaṇege niluvara nānu kāṇenu diṭṭatanadali tāne niṃdanu kauravēṃdranu sakala balasahita

Report an error

ಫಡ ನಿಶಾಚರ ಹೋಗು ಹೋಗಳ ವಡದು ಕರೆ ನಿಮ್ಮಯ್ಯನನು ಹೇ ರೊಡಲ ತೋರಿಸಿ ಬಲವ ಬೆದರಿಸಲಗ್ಗಳಿಕೆಯಹುದೇ ಮಿಡುಕುವರೆ ಕರೆ ನಿಮ್ಮ ತೆತ್ತಿಗ ನಡಗಲೇತಕೆ ಕೃಷ್ಣ ನಿಮಗಿ ನ್ನೊಡಲ ಬಳಿನೆಳಲವಸಹಿತ ಬಾಯೆಂದು ಗರ್ಜಿಸಿದ

phaḍa niśācara hōgu hōgaḷa vaḍadu kare nimmayyananu hē roḍala tōrisi balava bedarisalaggaḷikeyahudē miḍukuvare kare nimma tettiga naḍagalētake kr̥ṣṇa nimagi nnoḍala baḷineḷalavasahita bāyeṃdu garjisida

Report an error

ಮರಳು ಕೌರವ ಜಂಗಮ ಸ್ಥಾ ವರದ ದೇಹಕೆ ನೆಳಲಹುದು ದಿನ ಕರನ ದೇಹಕೆ ನೆಳಲು ಶ್ರುತವೋ ದೃಷ್ಟವೋ ನಿನಗೆ ಸುರ ನಿಶಾಚರ ಮರ್ತ್ಯರೊಳು ತಾ ನೆರವ ಬಯಸುವುದುಂಟೆ ಹರಿಯಂ ತಿರಲಿ ಚೈತನ್ಯಾತ್ಮನಾತನ ಮಾತದೇಕೆಂದ

maraḷu kaurava jaṃgama sthā varada dēhake neḷalahudu dina karana dēhake neḷalu śrutavō dr̥ṣṭavō ninage sura niśācara martyaroḷu tā nerava bayasuvuduṃṭe hariyaṃ tirali caitanyātmanātana mātadēkeṃda

Report an error

ಹೆಣನನರಸುತ ರಕುತಪಾನಕೆ ಸೆಣಸಿ ಶಾಕಿನಿ ಢಾಕಿನಿಯರೊಳು ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ ರಣದೊಳಗ್ಗದ ಕೈದುಕಾರರ ಕೆಣಕಿ ಗೆಲುವುದ ಕೇಳಿದರಿಯೆವು ಹೆಣದಿನಿಹಿಗಳು ಹೇವಮಾರಿಗಳೆಂದನಾ ಭೂಪ

heṇananarasuta rakutapānake seṇasi śākini ḍhākiniyaroḷu heṇagi geluvudeyāytu dānavavidye jagavariye raṇadoḷaggada kaidukārara keṇaki geluvuda kēḷidariyevu heṇadinihigaḷu hēvamārigaḷeṃdanā bhūpa

Report an error

ಬಯ್ಯಲರಿವೆ ದುರುಕ್ತಿ ಶರದಲಿ ಮೆಯ್ಯನೆಸುವೆಯೊ ಮೇಣು ಮಾರ್ಗಣೆ ಕಯ್ಯಲುಂಟೇ ನಿನಗೆ ಸಂಬಳವೇನು ಸಮರದಲಿ ಅಯ್ಯನನು ಕರೆಯೆಂಬ ಬಾಯನು ಕೊಯ್ಯಬೇಡಾ ಸಿಂಹಕೇಸರ ದುಯ್ಯಲಾಡುವ ಗಜವ ನೋಡೆಂದುರುಬಿದನು ನೃಪನ

bayyalarive durukti śaradali meyyanesuveyo mēṇu mārgaṇe kayyaluṃṭē ninage saṃbaḷavēnu samaradali ayyananu kareyeṃba bāyanu koyyabēḍā siṃhakēsara duyyalāḍuva gajava nōḍeṃdurubidanu nr̥pana

Report an error

ಎಸುತ ಹೊಕ್ಕನು ದಳ್ಳಿಸುವ ಹೊಸ ಮಸೆಯ ಕಣೆ ಮುಕ್ಕುರುಕಿದವು ನಿ ಪ್ಪಸರದಲಿ ನೃಪನೆಚ್ಚು ಕಾಣನು ಹರಿವನಾ ಕಣೆಗೆ ಕುಸುರಿದರಿದವು ಜೋಡು ಸೀಸಕ ಬೆಸುಗೆಯೊಡೆದುದು ಘಾಯದಲಿ ಮೈ ಬಸಿಯೆ ಬಿರಿದುದು ಶೌರ‍್ಯ ಬಿಗಿದುದು ಭೀತಿ ಭೂಪತಿಗೆ

esuta hokkanu daḷḷisuva hosa maseya kaṇe mukkurukidavu ni ppasaradali nr̥paneccu kāṇanu harivanā kaṇege kusuridaridavu jōḍu sīsaka besugeyoḍedudu ghāyadali mai basiye biridudu śaurya bigidudu bhīti bhūpatige

Report an error

ಅಕಟ ದೊರೆಯೋ ಸಿಕ್ಕಿದನು ಪಾ ತಕರು ರಥಿಕರು ಶಿವ ಹಿಡಿಂಬಾ ರ್ಭಕನಿಗೊಪ್ಪಿಸಿಕೊಟ್ಟು ಕೊಂದರು ದ್ರೋಣ ಕೃಪರೆನುತ ಸಕಲ ಪರಿಚಾರಕರು ಮಂತ್ರಿ ಪ್ರಕರವೊರಲಲು ಕೇಳಿ ಬದ್ಧ ಭ್ರುಕುಟಿ ಭೀಷಣಮುಖರು ಮಸಗಿತು ದೈತ್ಯಬಲಜಲಧಿ

akaṭa doreyō sikkidanu pā takaru rathikaru śiva hiḍiṃbā rbhakanigoppisikoṭṭu koṃdaru drōṇa kr̥parenuta sakala paricārakaru maṃtri prakaravoralalu kēḷi baddha bhrukuṭi bhīṣaṇamukharu masagitu daityabalajaladhi

Report an error

ಬಕನ ಮಕ್ಕಳು ಜಟನ ಕಿಮ್ಮೀ ರಕನ ಸುತರು ಹಿಡಿಂಬತನುಜರು ವೃಕ ಜರಾಸಂಧಾತ್ಮಜರು ಶಿಶುಪಾಲನಂದನರು ಸಕಲ ಸನ್ನಾಹದಲಿ ದೈತ್ಯ ಪ್ರಕರ ಹೊಕ್ಕುದು ರಾಯ ರಥಪಾ ಲಕರು ಕವಿದರು ತುಡುಕಿದರು ರಣವನು ಘಟೋತ್ಕಚನ

bakana makkaḷu jaṭana kimmī rakana sutaru hiḍiṃbatanujaru vr̥ka jarāsaṃdhātmajaru śiśupālanaṃdanaru sakala sannāhadali daitya prakara hokkudu rāya rathapā lakaru kavidaru tuḍukidaru raṇavanu ghaṭōtkacana

Report an error

ಕೆಣಕಿದರಲಾ ರಣವ ರಕ್ಕಸ ಬಣಗುಗಳು ಮಝ ಪೂತು ಸಮರಾಂ ಗಣದೊಳಗೆ ನಾವಾವ ಸದರವೊ ನೋಡಿರೈ ಭಟರು ಸೆಣಸು ಗಡ ನಮ್ಮೊಡನೆ ಸಲೆ ಟೆಂ ಠಣಿಸುವರು ಗಡ ಬವರಕೋಸುಗ ಹೊಣಕೆ ಗಡ ನಮ್ಮೊಡನೆನುತ ಸಾರಥಿಯ ಕೈವೊಯ್ದ

keṇakidaralā raṇava rakkasa baṇagugaḷu majha pūtu samarāṃ gaṇadoḷage nāvāva sadaravo nōḍirai bhaṭaru seṇasu gaḍa nammoḍane sale ṭeṃ ṭhaṇisuvaru gaḍa bavarakōsuga hoṇake gaḍa nammoḍanenuta sārathiya kaivoyda

Report an error

ಹೆಸರುಗೊಂಡರೆ ಕಿವಿಗಳಿಗೆ ಕ ರ್ಕಶರು ರಕ್ಕಸರೆಂಬ ಹೆಸರಿದು ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ ಹೊಸ ಮಸೆಯ ಹೊಗರಂಬುಗಳನೆ ಬ್ಬಿಸಿದನುಬ್ಬಿಸಿದನು ವಿರೋಧಿಗ ಳಸು ಸಮೀರಣನಿಂದ ನಿಜಭುಜ ವಿಕ್ರಮಾನಳನ

hesarugoṃḍare kivigaḷige ka rkaśaru rakkasareṃba hesaridu nusigaḷoḷagāśrayisi keṭṭudu śiva śivāyenuta hosa maseya hogaraṃbugaḷane bbisidanubbisidanu virōdhiga ḷasu samīraṇaniṃda nijabhuja vikramānaḷana

Report an error

ಓಡಲೀಯದೆ ಸದರಗೊಡುತ ವಿ ಭಾಡಿಸುತ ಮೇಲಿಕ್ಕಿದರೆ ಕೈ ಮಾಡಿದರೆ ಶರಹತಿಗೆ ದೇಹವ ಕೊಟ್ಟು ಸೈರಿಸುತ ಖೇಡತನವನು ಬಿಡಿಸಿ ಸಲೆ ಕೊಂ ಡಾಡಿ ಕಾದಿದನಸುರಜಾತಿಯೊ ಳೋಡೆ ಪರಿಭವ ತನ್ನದೆಂಬ ಪದಸ್ತತನದಿಂದ

ōḍalīyade sadaragoḍuta vi bhāḍisuta mēlikkidare kai māḍidare śarahatige dēhava koṭṭu sairisuta khēḍatanavanu biḍisi sale koṃ ḍāḍi kādidanasurajātiyo ḷōḍe paribhava tannadeṃba padastatanadiṃda

Report an error

ಎಸುಗೆಯೊಳ್ಳಿತಲಾಯುಧನಲಂ ಬುಸನ ಪರಿ ತಪ್ಪಲ್ಲ ತಪ್ಪ ಲ್ಲಸುರನಹೆಯೋ ಜಾಗು ಕಿಮ್ಮೀರಾತ್ಮಜಾಯೆನುತ ಅಸಿ ಪರಶು ಪಟ್ಟಿಸ ಮುಸುಂಡಿ ಪ್ರಸರ ಧಾರಾಪಾತದಲಿ ಮೈ ಬಸಿಯೆ ರಕುತದ ಸಾರ ಸಾಲಿಡೆ ಬಲದೊಳೊಳಹೊಕ್ಕ

esugeyoḷḷitalāyudhanalaṃ busana pari tappalla tappa llasuranaheyō jāgu kimmīrātmajāyenuta asi paraśu paṭṭisa musuṃḍi prasara dhārāpātadali mai basiye rakutada sāra sāliḍe baladoḷoḷahokka

Report an error

ಉರು ತಿಮಿಂಗಿಳನಬುಧಿಯಲಿ ಡಾ ವರಿಸುವುದು ಹುಲುಮೀನಿನಂತಿರ ಲರಸ ಹೇಳುವುದೇನು ಮೊಗೆದನು ದೈತ್ಯ ಜಲನಿಧಿಯ ಅರಿದ ಕೊರಳಿನ ಬಸಿವ ಬಂಬಲು ಗರುಳ ಜರಿವ ಕಪಾಲದೊಗುನೆ ತ್ತರ ರಣಾವನಿ ಕರೆವುತಿರ್ದುದು ರೌದ್ರಮಯರಸವ

uru timiṃgiḷanabudhiyali ḍā varisuvudu hulumīninaṃtira larasa hēḷuvudēnu mogedanu daitya jalanidhiya arida koraḷina basiva baṃbalu garuḷa jariva kapāladogune ttara raṇāvani karevutirdudu raudramayarasava

Report an error

ಜಾಗು ದೈತ್ಯರ ರಭಸದಲಿ ಲೇ ಸಾಗಿ ಕಾದಿದಿರೀಸು ನಮ್ಮಲಿ ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ ಆಗಲಿನ್ನಾವುದು ನಮಗೆ ಕೈ ಲಾಗು ನಿಮ್ಮಸುಗಳು ಶರೀರವ ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ

jāgu daityara rabhasadali lē sāgi kādidirīsu nammali tāgi niṃdavarāru keccuḷḷavaru kalitanada āgalinnāvudu namage kai lāgu nimmasugaḷu śarīrava nīgi kaḷeyali eṃdu bobbirideccanatirathara

Report an error

ಸಿಡಿಲು ಮೊರೆದರೆ ಸರ್ಪನಂಜುವು ದಡಗುವನೆ ಗರುಡನು ವೃಥಾ ಕೆಡೆ ನುಡಿಯ ನುಡಿದರೆ ದಿಟ್ಟನೆಂಬರೆ ವೀರರಾದವರು ಫಡ ಫಡೆನುತ ಬಕಾಸುರನ ಮಗ ನಡಸಿದನು ಕೂರಂಬನಾತನ ಕಡುಹ ಹೊಗಳುತ ಹೊಕ್ಕು ಹಿಡಿದನು ಬೀಸಿದನು ಖಳನ

siḍilu moredare sarpanaṃjuvu daḍaguvane garuḍanu vr̥thā keḍe nuḍiya nuḍidare diṭṭaneṃbare vīrarādavaru phaḍa phaḍenuta bakāsurana maga naḍasidanu kūraṃbanātana kaḍuha hogaḷuta hokku hiḍidanu bīsidanu khaḷana

Report an error

ರಥಚಯವ ನುಗ್ಗೊತ್ತಿದನು ಸಾ ರಥಿಗಳನು ಸೀಳಿದನು ಸುಮಹಾ ರಥರ ಬಿಂಕದ ಬಿಗುಹ ಮುರಿದನು ಹೊಕ್ಕು ಬೀದಿಯಲಿ ಶಿಥಿಲವಾಯಿತು ವೈರಿಬಲವತಿ ಮಥನವಾಯಿತು ದೈತ್ಯನೂಳಿಗ ಪೃಥುವಿ ಲಘುತರವಾಯ್ತು ಫಣಿಪನ ಕೊರಳು ಸೈನಿಮಿರೆ

rathacayava nuggottidanu sā rathigaḷanu sīḷidanu sumahā rathara biṃkada biguha muridanu hokku bīdiyali śithilavāyitu vairibalavati mathanavāyitu daityanūḷiga pr̥thuvi laghutaravāytu phaṇipana koraḷu sainimire

Report an error

ಬರಿಸಿದನು ರಣದಲಿ ಹಿಡಿಂಬಾ ಸುರನ ಮಕ್ಕಳ ಚೈದ್ಯ ಮಾಗಧ ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ ಬರಲಿ ಕರ್ಣ ದ್ರೋಣರುಳಿದೀ ಜರಡ ಜೋಡಿಸಬೇಡ ಭೀಮನ ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ

barisidanu raṇadali hiḍiṃbā surana makkaḷa caidya māgadha naraka kimmīraka jaṭāsurasūnu saṃtatiya barali karṇa drōṇaruḷidī jaraḍa jōḍisabēḍa bhīmana narana bayasuvarennoḍane kaimāḍahēḷeṃda

Report an error

ಎನಲು ಕವಿದುದು ಸೇನೆ ಕಂಗನೆ ಗನಲಿ ಕರ್ಣ ದ್ರೋಣರಿಗೆ ನೀ ನೆನಿತರವ ಫಡ ಬಾಯಿಬಡಿಕನು ಭೀಮಸುತನೆನುತ ತನತನಗೆ ಕಾಲಾಳು ಮೇಲಾ ಳನುಪಮಿತರೌಕಿದರು ಚಾಪ ಧ್ವನಿಯೊಳಗೆ ನೆರೆ ಮುಳುಗೆ ಬಹುವಿಧವಾದ್ಯ ನಿರ್ಘೋಷ

enalu kavidudu sēne kaṃgane ganali karṇa drōṇarige nī nenitarava phaḍa bāyibaḍikanu bhīmasutanenuta tanatanage kālāḷu mēlā ḷanupamitaraukidaru cāpa dhvaniyoḷage nere muḷuge bahuvidhavādya nirghōṣa

Report an error

ಆಳಹಿರಿ ನಿಮಗಂಜುವೆನು ಕಾ ಲಾಳ ಹೊಯ್ಯೆನು ಕುದುರೆಕಾರರು ಮೇಲುವಾಯಲಿ ರಥಿಕರೊಡೆಹಾಯಿಸಲಿ ತೇರುಗಳ ತೂಳಿಸಲಿ ಗಜದಳವನವರಿಗೆ ಕೋಲ ತೊಡಚುವನಲ್ಲ ನೆರೆ ಹೀ ಹಾಳಿಯುಳ್ಳರೆ ಬರಲಿ ಕರ್ಣ ದ್ರೋಣ ಕೃಪರೆನುತ

āḷahiri nimagaṃjuvenu kā lāḷa hoyyenu kudurekāraru mēluvāyali rathikaroḍehāyisali tērugaḷa tūḷisali gajadaḷavanavarige kōla toḍacuvanalla nere hī hāḷiyuḷḷare barali karṇa drōṇa kr̥parenuta

Report an error

ಹಲಬರಸುರರು ಮಡಿದರಿವನ ಗ್ಗಳೆಯನಿರುಳಿನ ಬವರದಾಯತ ತಿಳಿವುದೀತಂಗೆನುತಲಾ ದ್ರೋಣಾದಿ ನಾಯಕರು ಅಳುಕಿದರು ಬಳಿಕೇನು ಭಕುತಿಯ ಲೊಲಿಸಿದರಲೈ ಪಾಂಡವರು ಯದು ಕುಲಲಲಾಮನನಮಳ ಗದುಗಿನ ವೀರನರಯಣನ

halabarasuraru maḍidarivana ggaḷeyaniruḷina bavaradāyata tiḷivudītaṃgenutalā drōṇādi nāyakaru aḷukidaru baḷikēnu bhakutiya lolisidaralai pāṃḍavaru yadu kulalalāmananamaḷa gadugina vīranarayaṇana

Report an error

Illustration: Verse & Place (Project-owned).