ವೀರಕುಂತೀ ತನುಜರಿರುಳಂ ಗಾರವರ್ಮನ ಗೆಲಿದು ಹೊಕ್ಕರು ಧಾರುಣೀಸುರ ವೇಷದಲಿ ಪಾಂಚಾಲ ಪಟ್ಟಣವ
vīrakuṃtī tanujariruḷaṃ gāravarmana gelidu hokkaru dhāruṇīsura vēṣadali pāṃcāla paṭṭaṇava
ಆದಿ ಪರ್ವ — ಸಂಧಿ ೧೧ · ಆದಿ ಪರ್ವ — ಸಂಧಿ ೧೧
ādi parva — saṃdhi 11
The complete adi parva · sandhi 11 in Kannada.
46 passagesKannada with transliteration
Invocation
ವೀರಕುಂತೀ ತನುಜರಿರುಳಂ ಗಾರವರ್ಮನ ಗೆಲಿದು ಹೊಕ್ಕರು ಧಾರುಣೀಸುರ ವೇಷದಲಿ ಪಾಂಚಾಲ ಪಟ್ಟಣವ
vīrakuṃtī tanujariruḷaṃ gāravarmana gelidu hokkaru dhāruṇīsura vēṣadali pāṃcāla paṭṭaṇava
ಅರಸ ಕೇಳೈ ಕಲಿ ಬಕಾಸುರ ಮರಣ ಸಮನಂತರದೊಳಾ ಪುರ ವರದೊಳಿರ್ದರು ವಿಮಲ ವಿಪ್ರಸ್ತೋಮದೊಡಗೂಡಿ ವರುಷ ತುಂಬಿತು ನಮ್ಮ ಹಸ್ತಿನ ಪುರವ ಹೊರವಂಟಂದಿನಲಿಯೆಂ ದರಸ ಕುಂತೀದೇವಿಗೆಂದನು ಧರ್ಮಸುತ ನಗುತ
arasa kēḷai kali bakāsura maraṇa samanaṃtaradoḷā pura varadoḷirdaru vimala viprastōmadoḍagūḍi varuṣa tuṃbitu namma hastina purava horavaṃṭaṃdinaliyeṃ darasa kuṃtīdēvigeṃdanu dharmasuta naguta
ಆ ಸಮಯದಲಿ ಬಂದನೊಬ್ಬನು ಭೂಸುರನು ಸಕುತೂಹಲನು ಬಹು ದೇಶ ಪರಿಯಟಣ ಪ್ರವಾಸಾಭ್ಯಾಸ ಶಿಕ್ಷೆಯಲಿ ಗ್ರಾಸ ಯಾಚಕನಾಗಿ ತಮ್ಮ ನಿ ವಾಸದಲಿ ಸಲೆ ತುಷ್ಟನಾದ ಮ ಹೀಸುರನ ಮಾತಾಡಿಸಿದನಂದರಸ ವಿನಯದಲಿ
ā samayadali baṃdanobbanu bhūsuranu sakutūhalanu bahu dēśa pariyaṭaṇa pravāsābhyāsa śikṣeyali grāsa yācakanāgi tamma ni vāsadali sale tuṣṭanāda ma hīsurana mātāḍisidanaṃdarasa vinayadali
ಎತ್ತಣಿಂದಲಿ ಬರವು ಬಳಿಕಿ ನ್ನೆತ್ತ ಗಮನವು ಪೂರ್ವ ಸುಕೃತವ ಹೊತ್ತುದಿಂದಿನ ದಿವಸವಿದೆಲಾ ಸುಜನ ಸಂಸರ್ಗಸ ಉತ್ತರೋತ್ತರ ಸಿದ್ಧಿಯಿಲ್ಲಿಂ ದಿತ್ತಲೆಮಗೆನೆ ಹಸ್ತಿನಾಪುರ ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ
ettaṇiṃdali baravu baḷiki nnetta gamanavu pūrva sukr̥tava hottudiṃdina divasavidelā sujana saṃsargasa uttarōttara siddhiyilliṃ dittalemagene hastināpura dattaṇiṃdave baṃdevāvudu dēśa nimageṃda
ನಾವು ನಿಮ್ಮೋಪಾದಿಯಲಿ ತೀ ರ್ಥಾವಲೋಕನಪರರು ಭಿಕ್ಷಾ ಜೀವಿಗಳು ನೀವೇಸು ದಿನ ಗಜಪುರವ ಹೊರವಂಟು ಆವನಲ್ಲಿಗೆ ಪತಿ ಯುಧಿಷ್ಠಿರ ದೇವನೋ ದುರ್ಯೋಧನನೊ ಬಳಿ ಕಾವುದುಂಟು ವಿಶೇಷ ಕೌರವ ಪಾಂಡುತನಯರಲಿ
nāvu nimmōpādiyali tī rthāvalōkanapararu bhikṣā jīvigaḷu nīvēsu dina gajapurava horavaṃṭu āvanallige pati yudhiṣṭhira dēvanō duryōdhanano baḷi kāvuduṃṭu viśēṣa kaurava pāṃḍutanayarali
ಮರುಳುಗಳೊ ನೀವ್ ಮೇಣು ನಮ್ಮನು ಮರುಳು ಮಾಡುವ ಪರಿಯೊ ಪಾಂಡವ ರರಗು ಮನೆಯಲಿ ಬೆಂದರಿದು ಲೋಕಪ್ರಸಿದ್ಧವಲೆ ಅರಸು ಕೌರವರಾಯನಾತನ ಸಿರಿಯನಾತನ ಬಲುಹನಾತನ ಪರಿಯನಭಿವರ್ಣಿಸುವಡರಿಯೆನು ವಿಪ್ರ ಕೇಳೆಂದ
maruḷugaḷo nīv mēṇu nammanu maruḷu māḍuva pariyo pāṃḍava raragu maneyali beṃdaridu lōkaprasiddhavale arasu kauravarāyanātana siriyanātana baluhanātana pariyanabhivarṇisuvaḍariyenu vipra kēḷeṃda
ಅಕಟ ಪಾಂಡವರಳಿದರೇ ಬಾ ಧಕರೆ ಪರರಿಗೆ ಲೇಸಿನಲಿ ಕಂ ಟಕವು ದುಗ್ಧ ವಿಷಂಗಳಲಿ ಹಾವಿಂಗೆ ಹಾನಿಯಲೆ ವಿಕಳ ಪುಣ್ಯರು ನಿಲಲಿ ಕುರು ರಾ ಜಕದೊಳಗೆ ಭೀಷ್ಮಾದಿ ವೃದ್ಧ ಪ್ರಕರ ಗುರುಸುತ ಗುರು ಕೃಪಾದ್ಯರು ಕುಶಲರೇಯೆಂದ
akaṭa pāṃḍavaraḷidarē bā dhakare pararige lēsinali kaṃ ṭakavu dugdha viṣaṃgaḷali hāviṃge hāniyale vikaḷa puṇyaru nilali kuru rā jakadoḷage bhīṣmādi vr̥ddha prakara gurusuta guru kr̥pādyaru kuśalarēyeṃda
ಗುರುಸುತಾದಿ ಸಮಸ್ತ ಪರಿಜನ ಪುರಜನಕೆ ಸುಕ್ಷೇಮ ದ್ರುಪದನ ವರ ಕುಮಾರಿಯ ಮದುವೆ ಗಡ ಪಾಂಚಾಲನಗರದಲಿ ನೆರವುತಿದೆ ನಾನಾ ದಿಗಂತದ ಧರಣಿಪತಿಗಳು ಭೂರಿಯಲಿ ಮಿಗೆ ಭರಿತ ದಕ್ಷಿಣೆ ಮೃಷ್ಟ ಭೋಜನವುಂಟು ನಮಗೆಂದ
gurusutādi samasta parijana purajanake sukṣēma drupadana vara kumāriya maduve gaḍa pāṃcālanagaradali neravutide nānā digaṃtada dharaṇipatigaḷu bhūriyali mige bharita dakṣiṇe mr̥ṣṭa bhōjanavuṃṭu namageṃda
ಸಾರವಿದು ನೃಪ ಕನ್ನಿಕೆಗೆ ವರ ನಾರು ಲಗ್ನವದೆಂದು ಬಳಿಕಾ ರಾರು ಬಂದರು ಭೂಪತಿಗಳಿದನೆಂದು ಕೇಳಿದಿರಿ ಭೂರಿಯಲಿ ನಮಗುಂಟೆ ಮೃಷ್ಟಾ ಹಾರ ದಕ್ಷಿಣೆ ನಮ್ಮಭೀಷ್ಟ ವಿ ಹಾರ ವಾರ್ತೆಯಿದೆಂದು ಧರ್ಮಜ ನುಡಿದನಾ ದ್ವಿಜಗೆ
sāravidu nr̥pa kannikege vara nāru lagnavadeṃdu baḷikā rāru baṃdaru bhūpatigaḷidaneṃdu kēḷidiri bhūriyali namaguṃṭe mr̥ṣṭā hāra dakṣiṇe nammabhīṣṭa vi hāra vārteyideṃdu dharmaja nuḍidanā dvijage
ಇವರು ಕಪಟೋಪಾಧ್ಯರೆಂಬುದ ನವನು ಬಲ್ಲನೆ ಭೂಮಿದೇವ ಪ್ರವರನೈಸಲೆಯೆಂದು ಬಗೆದನು ಧರ್ಮನಂದನನ ಅವನಿಯಲಿ ಪಾತಾಳದಲಿ ಸುರ ಭವನದಲಿ ಪಾಂಚಾಲ ತನುಜೆಗೆ ಯುವತಿಯರು ಸರಿಯಲ್ಲವೆಂಬುದ ಕೇಳ್ದೆವಾವೆಂದ
ivaru kapaṭōpādhyareṃbuda navanu ballane bhūmidēva pravaranaisaleyeṃdu bagedanu dharmanaṃdanana avaniyali pātāḷadali sura bhavanadali pāṃcāla tanujege yuvatiyaru sariyallaveṃbuda kēḷdevāveṃda
ಈಟೆಗೆಣೆಯಹ ವರನನೀ ನರ ಲೋಕದಲಿ ತಾ ಕಾಣೆನರ್ಜುನ ನೀ ಕುಮಾರಿಯ ರಮಣನೆಂದೇ ಮನದ ಸಂಕಲ್ಪ ಈಕೆಯಪದೆಸೆಯುದಯದಲಿ ಕುಂ ತೀಕುಮಾರಕರನಲ ಮುಖದಲಿ ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ
īṭegeṇeyaha varananī nara lōkadali tā kāṇenarjuna nī kumāriya ramaṇaneṃdē manada saṃkalpa īkeyapadeseyudayadali kuṃ tīkumārakaranala mukhadali nākadali nelegoṃḍareṃdummaḷisuvanu drupada
ಜ್ವಲನ ನೆರೆ ನುಂಗಿದನೊ ಮೇಣೆಂ ಜಲಿಸಿ ಬಿಟ್ಟನೊ ಬಲ್ಲನಾವನು ಕಲು ಹೃದಯನೈ ಕಮಲಭವನೀ ಪಾಂಡುನಂದನರ ಸುಳಿವ ಸೈರಿಸನಕಟ ಹೂಹೆಗ ಳಳಿವ ಹರೆಯವೆ ಶಿವಶಿವಾಯೆಂ ದಳಲುದೊರೆಯಲಿ ಮುಳುಗಿ ಮೂಡುವ ದ್ರುಪದಪತಿಯೆಂದ
jvalana nere nuṃgidano mēṇeṃ jalisi biṭṭano ballanāvanu kalu hr̥dayanai kamalabhavanī pāṃḍunaṃdanara suḷiva sairisanakaṭa hūhega ḷaḷiva hareyave śivaśivāyeṃ daḷaludoreyali muḷugi mūḍuva drupadapatiyeṃda
ಅರಸ ಕೇಳ್ವನು ಸಕಲ ದೈವ ಜ್ಞರಲುಪಶ್ರುತಿಗಳಲಿ ಋಷಿಗಳ ಪರಮಸಿದ್ಧಾಂತದಲಿ ಮಂತ್ರಾವೇಶ ವಚನದಲಿ ಧರಯೊಳೀಗಳು ಪಾಂಡುಸುತ ಸಂ ಚರಣೆಯುಂಟದು ಸತ್ಯವೆಂದುಪ ಚರಿಸಿ ನುಡಿದು ಪುರೋಹಿತನು ಸಂತವಿಸುವನು ನೃಪನ
arasa kēḷvanu sakala daiva jñaralupaśrutigaḷali r̥ṣigaḷa paramasiddhāṃtadali maṃtrāvēśa vacanadali dharayoḷīgaḷu pāṃḍusuta saṃ caraṇeyuṃṭadu satyaveṃdupa carisi nuḍidu purōhitanu saṃtavisuvanu nr̥pana
ಸರಸಿಜಾನನೆ ನೋಡಿ ನೃಪರಲಿ ವರಿಸುವಳು ವಲ್ಲಭನನೆಂದುಪ ಚರಿಸುವನು ಸವಿವಾತುಗಳ ಸಾರಾಯ ಸೋನೆಯಲಿ ಬರಿಸುವುದು ಬಹುದೇಶ ಭೂಮೀ ಶ್ವರರನವರೊಳು ಪುಣ್ಯದಲಿ ಗೋ ಚರಿಸರೇ ಗರುವೆಯರ ದೇವಿಗೆ ಪಾಂಡುಸುತರೆಂದ
sarasijānane nōḍi nr̥parali varisuvaḷu vallabhananeṃdupa carisuvanu savivātugaḷa sārāya sōneyali barisuvudu bahudēśa bhūmī śvararanavaroḷu puṇyadali gō carisarē garuveyara dēvige pāṃḍusutareṃda
ಆದೊಡೀ ಮಗುವಿನ ಮಹಾಪು ಣ್ಯೋದಯದ ಫಲವೈಸಲೇ ಬರೆ ಮೇದಿನೀಶ್ವರರೆಲ್ಲರಿಗೆ ಲೇಖಾರ್ಥ ಸಂಗತಿಯ ಸೋದರರು ಸಹಿತಾ ಸುಯೋಧನ ನಾದಿಯಾದ ಸಮಸ್ತ ನೃಪರು ವಿ ವಾದವಿಲ್ಲದೆ ಬರಲಿ ಕಟ್ಟಿಸು ಪಾವುಡವನೆಂದ
ādoḍī maguvina mahāpu ṇyōdayada phalavaisalē bare mēdinīśvararellarige lēkhārtha saṃgatiya sōdararu sahitā suyōdhana nādiyāda samasta nr̥paru vi vādavillade barali kaṭṭisu pāvuḍavaneṃda
ಬರೆದ ವೋಲೆಗಳಖಿಳ ಭೂಮೀ ಶ್ವರರಿಗುಡುಗೊರೆ ಸಹಿತ ದೂತರು ಹರಿದರುತ್ತರ ಪೂರ್ವ ದಕ್ಷಿಣ ಪಶ್ಚಿಮಂಗಳಿಗೆ ಧರೆಯ ಕನ್ಯಾಜನ ಶಿರೋಮಣಿ ವರ ದ್ರುಪದ ತನುಜಾ ಸ್ವಯಂವರ ಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ
bareda vōlegaḷakhiḷa bhūmī śvarariguḍugore sahita dūtaru haridaruttara pūrva dakṣiṇa paścimaṃgaḷige dhareya kanyājana śirōmaṇi vara drupada tanujā svayaṃvara karasugaḷu bahudeṃdu vācisitakhiḷa lēkhārtha
ಮಾಡಿದರೆ ಶತ ಯಾಗವನು ಕೈ ಗೂಡುವಳು ಶಚಿ ಮಖ ಸಹಸ್ರವ ಮಾಡಿ ಮೇಣ್ ಜನಿಸದೊಡೆ ಬಹಳೇ ದ್ರೌಪದಾದೇವಿ ನೋಡುವೆವು ನಡೆ ಜನ್ಮ ಶತದಲಿ ಕೂಡಿ ಕೊಬ್ಬಿದ ಪುಣ್ಯಫಲ ಕೈ ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೋಮ
māḍidare śata yāgavanu kai gūḍuvaḷu śaci makha sahasrava māḍi mēṇ janisadoḍe bahaḷē draupadādēvi nōḍuvevu naḍe janma śatadali kūḍi kobbida puṇyaphala kai gūḍuvudo tappēnenuta neredudu nr̥pastōma
ಆ ಪುರೋಹಿತ ವಚನದಲಿ ನಿ ರ್ವ್ಯಾಪಿತಾಂತರ್ವ್ಯಥೆಯಲವನಿಪ ನಾ ಪುರಪ್ರಾಂತ್ಯದಲಿ ಸುತ್ತಲು ಮೂರು ಯೋಜನದ ತೋಪಿನಲಿ ಕಟ್ಟಿಸಿದನಗ್ಗದ ಭೂಪರಿಗೆ ಭವನವನು ಕೇಳೈ ದ್ರೌಪದಿಯ ವೈವಾಹ ರಚನಾ ರಾಮಾಣೀಯಕವ
ā purōhita vacanadali ni rvyāpitāṃtarvyatheyalavanipa nā puraprāṃtyadali suttalu mūru yōjanada tōpinali kaṭṭisidanaggada bhūparige bhavanavanu kēḷai draupadiya vaivāha racanā rāmāṇīyakava
ನೆರವುತಿದೆ ನಾನಾ ದಿಂಗತದ ಧರಣಿಪರು ಕನ್ಯಾರ್ಥಿಗಳು ಭೂ ಸುರ ಸಮೂಹದ ಸಾಲು ನೆರೆದುದು ದಕ್ಷಿಣಾರ್ಥದಲಿ ಎರಡರೊಳು ನಿಮಗೇನು ಕನ್ಯಾ ವರಣವೋ ಮೇಣ್ ದಕ್ಷಿಣಾರ್ಥವೊ ಬರವು ನಿಮಗುಂಟೇಯೆನುತ ದ್ವಿಜನಿವರ ಬೆಸಗೊಂಡ
neravutide nānā diṃgatada dharaṇiparu kanyārthigaḷu bhū sura samūhada sālu neredudu dakṣiṇārthadali eraḍaroḷu nimagēnu kanyā varaṇavō mēṇ dakṣiṇārthavo baravu nimaguṃṭēyenuta dvijanivara besagoṃḍa
ಈಸು ಪರಿಯಲಿ ನಮ್ಮ ನೀವಪ ಹಾಸ ಮಾಡುವಿರಾವು ಭಿಕ್ಷಕ ರೈಸಲೇ ಕನ್ಯಾರ್ಥದಲಿ ನಾವೆತ್ತ ನೃಪರೆತ್ತ ಐಸೆ ನಿಮ್ಮೊಡೆ ನಾವು ಬಹೆವೀ ಭೂಸುರರ ನೆರವುಂಟಲಾ ಶುಭ ವಾಸರವ ಬೆಸಗೊಂಬೆನೆಂದನು ಧರ್ಮಸುತ ನಗುತ
īsu pariyali namma nīvapa hāsa māḍuvirāvu bhikṣaka raisalē kanyārthadali nāvetta nr̥paretta aise nimmoḍe nāvu bahevī bhūsurara neravuṃṭalā śubha vāsarava besagoṃbeneṃdanu dharmasuta naguta
ಇವನು ಬಳಿಕ ನಿಜ ಪ್ರಯೋಜನ ಭವನಕೈದಿದನಖಿಳ ವಾರ್ತಾ ವಿವರಣ ವ್ಯಾಖ್ಯಾನ ಸಮನಂತರದ ಸಮಯದಲಿ ಇವರು ತಮ್ಮೊಳಗೆಂದರವನೀ ದಿವಿಜಪುರದಲಿ ದೈನ್ಯವೃತ್ತಿಯ ನಿವಹ ನಿಲಲಿ ನಿರೀಕ್ಷಿಸುವೆವಾ ದ್ರುಪದ ಪಟ್ಟಣವ
ivanu baḷika nija prayōjana bhavanakaididanakhiḷa vārtā vivaraṇa vyākhyāna samanaṃtarada samayadali ivaru tammoḷageṃdaravanī divijapuradali dainyavr̥ttiya nivaha nilali nirīkṣisuvevā drupada paṭṭaṇava
ಆ ಲತಾಂಗಿಯ ಮದುವೆಗವನೀ ಪಾಲವರ್ಗದ ಬರವು ಗಡ ಹರ ನೂಳಿಗದ ಹೆಚ್ಚಾಳು ಮಕರಧ್ವಜನಮೌಳಿ ಗಡ ಮೇಳವಹ ಕಿವಿಗಳಿಗೆ ಹಂಗಹ ವಾಲಿಗಳು ಪರಿವಿಡಿಯ ವೇಧೆಗೆ ಸೋಲುವವೆಯೆಂದೈವರಾಳೋಚಿಸಿದರೊಳಗೊಳಗೆ
ā latāṃgiya maduvegavanī pālavargada baravu gaḍa hara nūḷigada heccāḷu makaradhvajanamauḷi gaḍa mēḷavaha kivigaḷige haṃgaha vāligaḷu pariviḍiya vēdhege sōluvaveyeṃdaivarāḷōcisidaroḷagoḷage
ಅರಸ ಚಿತ್ತೈಸಮಳ ಲಗ್ನಾಂ ತರದಲಿವರುದಯದಲಿ ಹೊರವಂ ಟರು ಸುವಿದ್ಯಾ ಪರಿಣತರ ಪಂಡಿತರ ಗಡಣದಲಿ ಬರುತ ಕಂಡರು ಕಳಶ ಕನ್ನಡಿ ವರ ಯುವತಿ ಖಗಮೃಗದ ಬಲು ಸು ಸ್ವರ ಸುಗಂಧಾನಿಲ ಸುಸಂಗತ ಶಕುನ ಸೂಚಕವ
arasa cittaisamaḷa lagnāṃ taradalivarudayadali horavaṃ ṭaru suvidyā pariṇatara paṃḍitara gaḍaṇadali baruta kaṃḍaru kaḷaśa kannaḍi vara yuvati khagamr̥gada balu su svara sugaṃdhānila susaṃgata śakuna sūcakava
ಚಾರು ಶಕುನವಿದುತ್ತರೋತ್ತರ ವಾರಿಗಿದು ಫಲಿಸುವುದೊ ನಮ್ಮೊಳು ಹಾರುವರ ಹುಲು ಮೊತ್ತ ಕನ್ಯಾಲಾಭ ಫಲವಿದಕೆ ಭೂರಿ ಭಾಗ್ಯನು ನಮ್ಮ ವಿಪ್ರರೊ ಳಾರೆನುತ ತತ್ ಶಕುನಫಲ ವಿ ಸ್ತಾರವನು ನೆರೆ ವಿವರಿಸುತ ನಡೆದುದು ಬುಧಸ್ತೊಮ
cāru śakunaviduttarōttara vārigidu phalisuvudo nammoḷu hāruvara hulu motta kanyālābha phalavidake bhūri bhāgyanu namma vipraro ḷārenuta tat śakunaphala vi stāravanu nere vivarisuta naḍedudu budhastoma
ಧರಣಿಯಮರರ ಗಡಣದಲಿ ನಾ ಲ್ಕೆರಡು ಪಯಣಾಂತರದಲವನೀ ಸುರರನುಳಿದಾಶ್ರಮದೊಳಗೆ ಪಾರಾಶರವ್ರತಿಯ ದರುಶನವ ಮಾಡಿದರು ಬಕ ಸಂ ಹರಣ ವೃತ್ತಾಂತವನು ನೆರೆ ವಿ ಸ್ತರಿಸಿದರು ವಿನಯದಲಿ ಬೀಳ್ಕೊಂಡರು ಮುನೀಶ್ವರನ
dharaṇiyamarara gaḍaṇadali nā lkeraḍu payaṇāṃtaradalavanī suraranuḷidāśramadoḷage pārāśaravratiya daruśanava māḍidaru baka saṃ haraṇa vr̥ttāṃtavanu nere vi starisidaru vinayadali bīḷkoṃḍaru munīśvarana
ಗಮನ ಭರದಲಿ ಭಾರಿಯದ್ವ ಶ್ರಮವ ನೋಡದೆ ಭೂಮಿ ನಭದಲಿ ತಮದ ಚಾವಡಿಯಿಕ್ಕಿದರೆ ಗತಿ ಚಾಪಳವ ಬಿಡದೆ ದ್ಯುಮಣಿ ಕೈಸೆರೆಯಾಗಲಟವೀ ಭ್ರಮಣದಲಿ ಬೆಳಗಡಗೆ ಭೂಪೋ ತ್ತಮರು ಬಂದರು ಬಹಳಗಮನದೊಳರ್ಧ ರಾತ್ರಿಯಲಿ
gamana bharadali bhāriyadva śramava nōḍade bhūmi nabhadali tamada cāvaḍiyikkidare gati cāpaḷava biḍade dyumaṇi kaisereyāgalaṭavī bhramaṇadali beḷagaḍage bhūpō ttamaru baṃdaru bahaḷagamanadoḷardha rātriyali
ಮುಂದೆ ಪಾರ್ಥನ ಬೀಸುಗೊಳ್ಳಿಗ ಳಿಂದ ತಮದಾವಳಿ ಮುರಿಯೆ ಬಳಿ ಸಂದು ಕುಂತೀದೇವಿ ಧರ್ಮಜನಕುಲ ಸಹದೇವ ಹಿಂದೆ ಭೀಮನ ಕೈಯ ಕೊಳ್ಳಿಯ ಬಿಂದು ಬೆಳಗಿನಲನಿಬರಟವೀ ವೃಂದದಲಿ ಬರುತಿರ್ದರಿರುಳವನೀಶ ಕೇಳೆಂದ
muṃde pārthana bīsugoḷḷiga ḷiṃda tamadāvaḷi muriye baḷi saṃdu kuṃtīdēvi dharmajanakula sahadēva hiṃde bhīmana kaiya koḷḷiya biṃdu beḷaginalanibaraṭavī vr̥ṃdadali barutirdariruḷavanīśa kēḷeṃda
ಬರುತ ಕಂಡರು ಮುಂದೆ ಗಂಧ ರ್ವರ ವಧೂ ನಿಕುರುಂಬವನು ನೇ ವುರದ ಝಣ ಝಣ ರವದ ಕಂಕಣ ಝೇಂಕೃತಿಧ್ವನಿಯ ಅರಳುಗಂಗಳ ಬೆಳಗಿನಲಿ ತಮ ವಿರುಳು ಬೀತುದು ಬೆಸುವುದಾಗಲೆ ಕುರುಳ ಕಾಳಿಕೆಯಿಂದ ತತ್ಕಾಂತಾ ಕದಂಬದಲಿ
baruta kaṃḍaru muṃde gaṃdha rvara vadhū nikuruṃbavanu nē vurada jhaṇa jhaṇa ravada kaṃkaṇa jhēṃkr̥tidhvaniya araḷugaṃgaḷa beḷaginali tama viruḷu bītudu besuvudāgale kuruḷa kāḷikeyiṃda tatkāṃtā kadaṃbadali
ಲಲಿತ ತನುಕಾಂತಿಗಳ ಮೊಗೆದರು ತಿಳಿಗೊಳನ ಜಲವೆಂದು ಕಂಗಳು ಹೊಳೆಯೆ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ ಅಲರಿದಂಬುಜವೆಂದು ವದನಕೆ ನಿಲುಕಿ ತುಂಬಿಗಳೆಂದು ಕುರುಳಿಂ ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು
lalita tanukāṃtigaḷa mogedaru tiḷigoḷana jalaveṃdu kaṃgaḷu hoḷeye marimīneṃdu hekkaḷisidaru hiḍuhinali alaridaṃbujaveṃdu vadanake niluki tuṃbigaḷeṃdu kuruḷiṃ gaḷuki kaigaḷa teredarati mugudeyaru khacariyaru
ಅವರ ಮುಖಕಾಂತಿಗಳಲಂಗ ಚ್ಛವಿಗಳಲಿ ಕಂಕಣದ ಹಾರದ ವಿವಿಧ ರತ್ನಾಭರಣ ಕಿರಣದ ಲಲಿತ ಲಹರಿಯಲಿ ಸವೆದುದಗ್ಗದ ತಿಮಿರವವದಿರ ನಿವರು ಕಂಡರು ಜಲವಿಹಾರದ ದಿವಿಜಸತಿಯರಲಾಯೆನುತ ಬರುತಿರ್ದರಡವಿಯಲಿ
avara mukhakāṃtigaḷalaṃga cchavigaḷali kaṃkaṇada hārada vividha ratnābharaṇa kiraṇada lalita lahariyali savedudaggada timiravavadira nivaru kaṃḍaru jalavihārada divijasatiyaralāyenuta barutirdaraḍaviyali
ನಾರಿಯರು ಕಂಡರು ಸುಲಜ್ಜಾ ಭಾರದಲಿ ತಡಿಗಡೆಗೆ ಹಾಯಿದು ಸೀರೆಗಳ ತೆರೆವಿಡಿದರಂಗೋಪಾಂಗ ಲತೆಗಳಿಗೆ ಆರಿವರು ನಡುವಿರಳು ದರ್ಪ ವಿ ಕಾರದಲಿ ಕೈಕೊಳ್ಳಿರೆನುತಂ ಗಾರವರ್ಮನು ಧನುವ ಕೊಂಡನು ನುಡಿಸಿದನು ನರನ
nāriyaru kaṃḍaru sulajjā bhāradali taḍigaḍege hāyidu sīregaḷa tereviḍidaraṃgōpāṃga lategaḷige ārivaru naḍuviraḷu darpa vi kāradali kaikoḷḷirenutaṃ gāravarmanu dhanuva koṃḍanu nuḍisidanu narana
ಈಸು ಭರದಲಿ ಗಮನವೆಲ್ಲಿಗೆ ದೇಶಕಾಲವ ನೋಡದೀ ಸ ರ್ವಾಸುರದ ಸೌರಂಭವೇನೆನೆ ಪಾರ್ಥ ನಸುನಗುತ ದೇಶವಿದು ವನ ಕಾಲ ನಡುವಿರು ಳೈಸಲೇ ನಿಜಕಾರ್ಯ ಸಂಗತಿ ಗೋಸುಗವೆ ಗತಿಯೆಂದನಾ ಗಂಧರ್ವರಾಜಂಗೆ
īsu bharadali gamanavellige dēśakālava nōḍadī sa rvāsurada sauraṃbhavēnene pārtha nasunaguta dēśavidu vana kāla naḍuviru ḷaisalē nijakārya saṃgati gōsugave gatiyeṃdanā gaṃdharvarājaṃge
ನರರು ಸುಳಿವುದು ಪೂರ್ವಭಾಗದ ಲಿರುಳಿನುತ್ತರ ಭಾಗದಲಿ ಖೇ ಚರರು ಸುಳಿವುದು ಸೀಮೆ ಚತುರಾನನನ ಸೃಷ್ಟಿಯಲಿ ಇರುಳಿನುತ್ತರ ಭಾಗವಿದು ನೀವ್ ನರರು ಬಹುದುದ್ದಂಡ ದರ್ಪ ಜ್ವರಿತವಿದಕೌಷಧಿಯನೆರೆವೆನೆನುತ್ತ ತೆಗೆದೆಚ್ಚ
nararu suḷivudu pūrvabhāgada liruḷinuttara bhāgadali khē cararu suḷivudu sīme caturānanana sr̥ṣṭiyali iruḷinuttara bhāgavidu nīv nararu bahududdaṃḍa darpa jvaritavidakauṣadhiyanerevenenutta tegedecca
ಕನಲಿ ಫಲುಗುಣನಾದಡಿದ ಕೊ ಳ್ಳೆನುತ ಕೊಳ್ಳಿಯೊಳಿಟ್ಟನಗ್ನಿಯ ನೆನೆದು ಮಂತ್ರಿಸಲುರಿಮುಖದ ಕಾರ್ಬೊಗೆಯ ಮೊಬ್ಬಿನಲಿ ಹೊನಲುಗಿಡಿಗಳ ತಗಡುರಿಯ ಕೊಂ ಡಿನಲಿ ಮುತ್ತಿತು ರಥವನಾತನ ಧನುವನಾತನ ತನುವನಾತನ ಸರಳ ಸಾರಥಿಯ
kanali phaluguṇanādaḍida ko ḷḷenuta koḷḷiyoḷiṭṭanagniya nenedu maṃtrisalurimukhada kārbogeya mobbinali honalugiḍigaḷa tagaḍuriya koṃ ḍinali muttitu rathavanātana dhanuvanātana tanuvanātana saraḷa sārathiya
ಉರಿದುದಾ ರಥವವನ ಮೈಯಲಿ ಕರಿಕುವರಿತರಲೋಡಿ ಹೊಕ್ಕನು ಸರಸಿಯನು ಶಿಖಿಯೊಡನೆ ಹೊಕ್ಕುದು ನೀರನುರೆ ಸುರಿದು ತರುಣಿ ಹಾಹಾ ಕೆಟ್ಟೆನೆಂದ ಬ್ಬರಿಸಲಾ ಗಂಧರ್ವನಂಗನೆ ಹರಿದಳೆಡೆಗೈಯಿಂದ ಸಂವರಿಸುತ್ತ ಬಿಡುಮುಡಿಯ
uridudā rathavavana maiyali karikuvaritaralōḍi hokkanu sarasiyanu śikhiyoḍane hokkudu nīranure suridu taruṇi hāhā keṭṭeneṃda bbarisalā gaṃdharvanaṃgane haridaḷeḍegaiyiṃda saṃvarisutta biḍumuḍiya
ಬಂದು ಯಮನಂದನನ ಚರಣ ದ್ವಂದ್ವದಲಿ ಚಾಚಿದಳು ನೊಸಲನು ತಂದೆ ಕರುಣಿಸು ಕಾಂತಭಿಕ್ಷವ ಕರುಣಿಸೆನಗೆನಲು ಮುಂದುವರಿಯದಿರೆಲೆ ಧನಂಜಯ ಕೊಂದರೆನ್ನಾಣೀಕೆಯರಸನ ತಂದುಕೊಡು ಬೇಗದಲಿ ಉಪಸಂಹರಿಸು ಶಿಖಿಶರವ
baṃdu yamanaṃdanana caraṇa dvaṃdvadali cācidaḷu nosalanu taṃde karuṇisu kāṃtabhikṣava karuṇisenagenalu muṃduvariyadirele dhanaṃjaya koṃdarennāṇīkeyarasana taṃdukoḍu bēgadali upasaṃharisu śikhiśarava
ಎನೆ ಹಸಾದವೆನುತ್ತ ನಿಮಿಷದೊ ಳನಲನನು ನಂದಿಸಿದನಿತ್ತಲು ಮನದ ದುಮ್ಮಾನದಲಿ ಲಜ್ಜಾವನತ ಮುಖನಾಗಿ ಮನುಜರಲ್ಲಿವರಾರೊ ನೋಡುವೆ ನೆನುತ ಹತ್ತಿರೆ ಬಂದು ನೀವಾ ರಿನಿತು ಸಾಹಸ ಮಲ್ಲರೆಂದರ್ಜುನನ ಬೆಸಗೊಂಡ
ene hasādavenutta nimiṣado ḷanalananu naṃdisidanittalu manada dummānadali lajjāvanata mukhanāgi manujarallivarāro nōḍuve nenuta hattire baṃdu nīvā rinitu sāhasa mallareṃdarjunana besagoṃḍa
ನರರು ವೈದೇಶಿಗರು ಕಾರ್ಯಾ ತುರರು ನಾವೆನಲರ್ಜುನನನುಪ ಚರಿಸಿ ವಿವಿಧ ಗುಣಾನುಮುಖದಲ್ಲಿವರನಂಡಲೆಯೆ ಧರೆಯೊಳುಂಟೇ ಪಾಂಡುಸುತರೆಂ ಬರಸುಗಳು ನೀ ಕೇಳಿ ಬಲ್ಲೈ ನಿರುತವಾದವರೆಂದು ನುಡಿದನು ನಗುತ ಕಲಿಪಾರ್ಥ
nararu vaidēśigaru kāryā turaru nāvenalarjunananupa carisi vividha guṇānumukhadallivaranaṃḍaleye dhareyoḷuṃṭē pāṃḍusutareṃ barasugaḷu nī kēḷi ballai nirutavādavareṃdu nuḍidanu naguta kalipārtha
ಶಿವ ಶಿವಾದೊಡೆ ಯಮ ಪುರಂದರ ಪವನನಶ್ವಿನಿಯರಿಗೆ ನೀವ್ ಸಂ ಭವಿಸಿದವರೇ ನೀವೆಮಗೆ ಸಂಭಾವನೀಯರಲ ಇವೆ ಸಹಸ್ರ ತುರಂಗ ದಿವ್ಯೋ ದ್ಭವವನರ್ಘ್ಯಾಭರಣರತ್ನ ಪ್ರವರವಿವೆ ಕಾರುಣ್ಯದಲಿ ಕೈಕೊಂಬುದಿವನೆಂದ
śiva śivādoḍe yama puraṃdara pavananaśviniyarige nīv saṃ bhavisidavarē nīvemage saṃbhāvanīyarala ive sahasra turaṃga divyō dbhavavanarghyābharaṇaratna pravaravive kāruṇyadali kaikoṃbudivaneṃda
ಬಂದವೆಮಗಿವು ನಿನ್ನ ನಾವ್ ಬೇ ರೆಂದು ಕಾಣೆವು ಪರಮ ಬಾಂಧವ ರಿಂದು ಮೊದಲಾಗೆಮಗೆ ನೀನೇ ಮೌಲ್ಯಧನವೆಂದ ಇಂದು ನಿಜರೂಪಡಗಿ ರಾಯರ ವೃಂದವನು ನೋಡುವೆವು ದ್ರುಪದನ ನಂದನೆಯ ವೈವಾಹ ರಚನೆಯೊಳೆಂದನಾ ಪಾರ್ಥ
baṃdavemagivu ninna nāv bē reṃdu kāṇevu parama bāṃdhava riṃdu modalāgemage nīnē maulyadhanaveṃda iṃdu nijarūpaḍagi rāyara vr̥ṃdavanu nōḍuvevu drupadana naṃdaneya vaivāha racaneyoḷeṃdanā pārtha
ಇವು ಮದೀಯ ಸುವಸ್ತು ನಿನ್ನಯ ಭವನದೊಳಗಿರಲೊಂದು ಸಮಯದೊ ಳಿವನು ತರಿಸುವೆವೆಂದು ಬಳಿಕಂಗಾರವರ್ಮಂಗೆ ಇವರು ವಿನಯವ ಮಾಡಿ ಗಮನೋ ತ್ಸವದಲಿರೆ ಗಂಧರ್ವ ನಸು ನಗು ತಿವರಿಗೆಂದನು ಧರ್ಮಶಾಸ್ತ್ರದ ಸಾರ ಸಂಗತಿಯ
ivu madīya suvastu ninnaya bhavanadoḷagiraloṃdu samayado ḷivanu tarisuveveṃdu baḷikaṃgāravarmaṃge ivaru vinayava māḍi gamanō tsavadalire gaṃdharva nasu nagu tivarigeṃdanu dharmaśāstrada sāra saṃgatiya
ಮುನಿಯದಿರು ಕಲಿಪಾರ್ಥ ನಿನ್ನಯ ಘನತರದ ವಿಕ್ರಮಕೆ ದಿವಿಜರು ದನುಜ ಭುಜಗರು ನೆರೆಯರುಳಿದೀ ನರರ ಪಾಡೇನು ಅನುಪಮಾನಕ್ಷತ್ರವಹ್ನಿಗೆ ವಿನುತ ವಿಮಲ ಬ್ರಹ್ಮತೇಜೋ ಘನ ಸಮೀರ ಸಹಾಯವಾಗಲಸಾಧ್ಯವೇನೆಂದ
muniyadiru kalipārtha ninnaya ghanatarada vikramake divijaru danuja bhujagaru nereyaruḷidī narara pāḍēnu anupamānakṣatravahnige vinuta vimala brahmatējō ghana samīra sahāyavāgalasādhyavēneṃda
ಅರಸ ನಿಮ್ಮೊಳು ಪೂರ್ವದಲಿ ಸಂ ವರಣನೆಂಬನು ಸೂರ್ಯತನುಜೆಗೆ ಮರುಳುಗೊಂಡನು ಮರೆದು ಕಳೆದನು ರಾಜ್ಯವೈಭವವ ಬರಿಯ ಪಾರ್ಥಿವತೇಜದಲಿ ಗೋ ಚರಿಸದಿರೆ ತತ್ಸತಿ ವಿವಾಹೋ ತ್ಕರುಷವಾಯ್ತು ವಸಿಷ್ಠನಮಲ ಬ್ರಹ್ಮತೇಜದಲಿ
arasa nimmoḷu pūrvadali saṃ varaṇaneṃbanu sūryatanujege maruḷugoṃḍanu maredu kaḷedanu rājyavaibhavava bariya pārthivatējadali gō carisadire tatsati vivāhō tkaruṣavāytu vasiṣṭhanamala brahmatējadali
ಆ ವಸಿಷ್ಠನ ಕೌಶಿಕನ ಯು ದ್ಧಾವಲಂಬನವೇನನೆಂಬೆನು ದೇವಕುಲವಂಜುವುದು ವಿಶ್ವಾಮಿತ್ರನುಬ್ಬಟೆಗೆ ಆ ವಿವಿಧ ಮಂತ್ರಾಸ್ತ್ರವನು ಶತ ಸಾವಿರವನಾ ಬ್ರಹ್ಮದಂಡದ ಢಾವರದಲೇ ಗೆಲಿದನೊಬ್ಬ ವಸಿಷ್ಠಮುನಿಯೆಂದ
ā vasiṣṭhana kauśikana yu ddhāvalaṃbanavēnaneṃbenu dēvakulavaṃjuvudu viśvāmitranubbaṭege ā vividha maṃtrāstravanu śata sāviravanā brahmadaṃḍada ḍhāvaradalē gelidanobba vasiṣṭhamuniyeṃda
ಒದಗಲಾರದೆ ತನ್ನ ಸುಕ್ಷ ತ್ರದ ಮಹತ್ವದ ಬಿಸುಟು ಸುಬ್ರಾ ಹ್ಮದಲಿ ಹೊಕ್ಕನು ವಿಗಡ ವಿಶ್ವಾಮಿತ್ರಮುನಿಯಂದು ಅದರಿನಿಂದೀ ಕ್ಷತ್ರತೇಜದೊ ಳುದಿತ ವಿಮಲಬ್ರಹ್ಮವನು ಕೂ ಡಿದೊಡೆ ಕೌತುಕವೆಂದನಾ ಗಂಧರ್ವನರ್ಜುನಗೆ
odagalārade tanna sukṣa trada mahatvada bisuṭu subrā hmadali hokkanu vigaḍa viśvāmitramuniyaṃdu adariniṃdī kṣatratējado ḷudita vimalabrahmavanu kū ḍidoḍe kautukaveṃdanā gaṃdharvanarjunage
ಇಲ್ಲಿಗಿದೆ ನಾಲ್ಕೈದು ಯೋಜನ ದಲ್ಲಿ ಧೌಮ್ಯಾಶ್ರಮ ವಸಿಷ್ಠಂ ಗಲ್ಲಿ ಸನ್ನಿಧಿಯಾ ವಸಿಷ್ಠಂಗಾತನನುಜಾತ ಅಲ್ಲಿ ಪೌರೋಹಿತ್ಯವನು ನಿಮ ಗೊಲ್ಲೆನೆನ್ನದೆ ಮುನಿಪ ಮಾಡಿದ ಡೆಲ್ಲ ಲೇಸಹುದೆಂದು ಕಳುಹಿದನಿವರನಾ ಖಚರ
illigide nālkaidu yōjana dalli dhaumyāśrama vasiṣṭhaṃ galli sannidhiyā vasiṣṭhaṃgātananujāta alli paurōhityavanu nima gollenennade munipa māḍida ḍella lēsahudeṃdu kaḷuhidanivaranā khacara
ಗಮಿಸಿದರು ಬಳಿಕವರು ಧೌಮ್ಯಾ ಶ್ರಮಕೆ ಬಂದರು ಮುನಿಪನರ್ಘ್ಯಾ ದ್ಯಮಲ ಸತ್ಕಾರೋಚಿತವ ಕೈಕೊಂಡು ವಿನಯದಲಿ ಎಮಗೆ ಪೌರೋಹಿತ್ಯದಲಿ ಸಂ ಕ್ರಮಿಸಬೇಕೆಂದೊಡಬಡಿಸಿ ಭೂ ರಮಣರಲ್ಲಿಂದೈದಿದರು ಪಾಂಚಾಲ ಪಟ್ಟಣವ
gamisidaru baḷikavaru dhaumyā śramake baṃdaru munipanarghyā dyamala satkārōcitava kaikoṃḍu vinayadali emage paurōhityadali saṃ kramisabēkeṃdoḍabaḍisi bhū ramaṇaralliṃdaididaru pāṃcāla paṭṭaṇava
Keys: ← → turn the page, J K step through the verses.
Illustration: Verse & Place (Project-owned).