ರಾಯರಿಪುಭಟಗಿರಿನಿವಹ ವ ಜ್ರಾಯುಧನು ಕಲಿಪಾರ್ಥನಂಭೋ ಜಾಯತಾಂಬಕ ಸಹಿತ ಕಂಡನು ಧರ್ಮನಂದನನ
rāyaripubhaṭagirinivaha va jrāyudhanu kalipārthanaṃbhō jāyatāṃbaka sahita kaṃḍanu dharmanaṃdanana
ಕರ್ಣ ಪರ್ವ — ಸಂಧಿ ೧೬ · ಕರ್ಣ ಪರ್ವ — ಸಂಧಿ ೧೬
karṇa parva — saṃdhi 16
The complete karna parva · sandhi 16 in Kannada.
34 passagesKannada with transliteration
Invocation
ರಾಯರಿಪುಭಟಗಿರಿನಿವಹ ವ ಜ್ರಾಯುಧನು ಕಲಿಪಾರ್ಥನಂಭೋ ಜಾಯತಾಂಬಕ ಸಹಿತ ಕಂಡನು ಧರ್ಮನಂದನನ
rāyaripubhaṭagirinivaha va jrāyudhanu kalipārthanaṃbhō jāyatāṃbaka sahita kaṃḍanu dharmanaṃdanana
ಕೇಳು ಧೃತರಾಷ್ಟ್ರಾವನಿಪ ಬಲು ಗಾಳೆಗವ ಭೀಮಂಗೆ ಸೇರಿಸಿ ಪಾಳೆಯಕೆ ತಿರುಗಿದರು ಕೃಷ್ಣಾರ್ಜುನರು ದುಗುಡದಲಿ ಹೇಳು ಮುರಹರ ಬುದ್ಧಿ ಕದಡಿ ಛ ಡಾಳಿಸಿತು ಪರಿಭೇದವೊಸಗೆಯ ಕೇಳಲರಿಯೆನು ರಾಜವಾರ್ತೆಯನೆಂದನಾ ಪಾರ್ಥ
kēḷu dhr̥tarāṣṭrāvanipa balu gāḷegava bhīmaṃge sērisi pāḷeyake tirugidaru kr̥ṣṇārjunaru duguḍadali hēḷu murahara buddhi kadaḍi cha ḍāḷisitu paribhēdavosageya kēḷalariyenu rājavārteyaneṃdanā pārtha
ನೋಡುವೆವು ನಡೆ ಧರ್ಮಪುತ್ರನ ಕೇಡು ಕಲಿಯುಗ ಬೀಜವೀ ಪರಿ ಕೂಡದೀ ಹೊತ್ತಿನಲಿ ಧರ್ಮಸ್ಥಿತಿಗೆ ಲಯವಿಲ್ಲ ಖೇಡನಾಗದಿರಿದಕೆ ಚಿಂತಿಸ ಬೇಡೆನುತ ಫಲುಗುಣನ ಚಿತ್ತದ ಪಾಡರಿದು ನುಡಿವುತ್ತ ತಂದನು ಪಾಳೆಯಕೆ ರಥವ
nōḍuvevu naḍe dharmaputrana kēḍu kaliyuga bījavī pari kūḍadī hottinali dharmasthitige layavilla khēḍanāgadiridake ciṃtisa bēḍenuta phaluguṇana cittada pāḍaridu nuḍivutta taṃdanu pāḷeyake rathava
ಬರಲು ಪಾರ್ಥನ ಕಂಡು ಪುರಜನ ಹರೆದುದಲ್ಲಿಯದಲ್ಲಿ ದುಗುಡದ ಭರದ ಗುಜುಗುಜು ಗೋಷ್ಠಿಗಳ ಜನಜನದ ಮುಸುಕುಗಳ ಮುರಿದ ನೀಹಾರದ ವಿಹಾರದ ಸರಸಿರುಹವನದಂತೆ ಪಾಳೆಯ ದಿರವು ಲೇಸಲ್ಲೆನುತ ಬಂದನು ರಾಜಮಂದಿರಕೆ
baralu pārthana kaṃḍu purajana haredudalliyadalli duguḍada bharada gujuguju gōṣṭhigaḷa janajanada musukugaḷa murida nīhārada vihārada sarasiruhavanadaṃte pāḷeya diravu lēsallenuta baṃdanu rājamaṃdirake
ಕಳಚಿದನು ಸೀಸಕವ ಬೆಂಬ ತ್ತಳಿಕೆಯನು ವಜ್ರಾಂಗಿ ಮೊಚ್ಚೆಯ ಬಿಲುಸರಳನಿಳುಹಿದನು ರಥದಲಿ ದೈತ್ಯರಿಪು ಸಹಿತ ಇಳಿದು ರಥವನು ರಣದ ಭಾರಿಯ ಬಳಲಿಕೆಯ ಕೈಕೊಳ್ಳದರಸನ ನಿಳಯವನು ಹೊಕ್ಕನು ಧನಂಜಯ ಕಂಡನವನಿಪನ
kaḷacidanu sīsakava beṃba ttaḷikeyanu vajrāṃgi mocceya bilusaraḷaniḷuhidanu rathadali daityaripu sahita iḷidu rathavanu raṇada bhāriya baḷalikeya kaikoḷḷadarasana niḷayavanu hokkanu dhanaṃjaya kaṃḍanavanipana
ಝೊಂಪಿಸುವ ಸಿರಿಮೊಗದ ನೋಟದ ಸೊಂಪಡಗಿದಾಲಿಗಳ ಧೈರ‍್ಯದ ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ ಬಿಂಪಗಿವ ಬೇಸರಿರಿನ ತುರುಗಿದ ತಂಪಿನಗ್ಗಳಿಕೆಯ ವಿಘಾತಿಯ ಝೊಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ
jhoṃpisuva sirimogada nōṭada soṃpaḍagidāligaḷa dhairyada guṃpaḷida nija rājatējada vipuḷa vēdaneya biṃpagiva bēsaririna turugida taṃpinaggaḷikeya vighātiya jhoṃpinali hudugida mahīśana kaṃḍanā pārtha
ಬಿಗಿದು ಕಟ್ಟಿದ ಘಾಯ ಮದ್ದಿನ ಜಿಗಿಯ ತೈಲದ ತಳಿತ ಲೇಪದ ಲುಗಿದ ಬಾಣವ್ಯಥೆಯ ಕರ್ಣಧ್ಯಾನಚೇತನದ ಸೊಗಸು ಮಿಗೆ ದ್ರೌಪದಿಯ ತುದಿವೆರ ಳುಗುರುವೆರಸಿದ ಸಿರಿಮುಡಿಯ ಬಲು ದುಗುಡ ಭರದಲಿ ಕುಸಿದ ಭೂಪನ ಕಂಡನಾ ಪಾರ್ಥ
bigidu kaṭṭida ghāya maddina jigiya tailada taḷita lēpada lugida bāṇavyatheya karṇadhyānacētanada sogasu mige draupadiya tudivera ḷuguruverasida sirimuḍiya balu duguḍa bharadali kusida bhūpana kaṃḍanā pārtha
ನಕುಳ ಧೃಷ್ಟದ್ಯುಮ್ನ ಸಹದೇ ವಕ ಯುಧಾಮನ್ಯುಕನು ಸುತಸೋ ಮಕ ಶತಾನೀಕ ಪ್ರಬುದ್ಧಕ ಚೇಕಿತಾನಕರು ಸಕಲ ಕೈಕೆಯ ಮತ್ಸ್ಯಸುತ ಸಾ ತ್ಯಕಿ ಯುಯುತ್ಸು ಶಿಖಂಡಿ ಪ್ರತಿವಿಂ ಧ್ಯಕರು ಪಾರ್ಥನನುಪಚರಿಸಿ ಕುಳ್ಳಿರ್ದರಲ್ಲಲ್ಲಿ
nakuḷa dhr̥ṣṭadyumna sahadē vaka yudhāmanyukanu sutasō maka śatānīka prabuddhaka cēkitānakaru sakala kaikeya matsyasuta sā tyaki yuyutsu śikhaṃḍi prativiṃ dhyakaru pārthananupacarisi kuḷḷirdarallalli
ಕರಗಿತಂತಃಕರಣವಾಲಿಗ ಳೊರತೆಯೆನೆ ಕಣ್ಣಾಲಿಯಲಿ ಕಾ ತರಿಸಿದವು ಜಲಬಿಂದುಗಳು ಪುರುಹೂತ ನಂದನನ ಅರಸನಿರವಿದೆಯೆನುತ ನೊಸಲನು ಚರಣದಲಿ ಚಾಚಿದನು ಚೇಷ್ಟಾ ಪರಿಗತಿಯನಾರೈವುತಭಿಮುಖನಾಗಿ ಕುಳ್ಳಿರ್ದ
karagitaṃtaḥkaraṇavāliga ḷorateyene kaṇṇāliyali kā tarisidavu jalabiṃdugaḷu puruhūta naṃdanana arasaniravideyenuta nosalanu caraṇadali cācidanu cēṣṭā parigatiyanāraivutabhimukhanāgi kuḷḷirda
ನೊಂದೆಲಾ ನರನಾಥ ವಿಧಿಯೇ ನೆಂದು ಮುನಿದುದೊ ನಿನಗೆನುತ್ತ ಮು ಕುಂದನತಿ ಕಾರುಣ್ಯ ದೃಷ್ಟಿಯಲವನಿಪನ ನೋಡಿ ಮಂದಮಂದದಿ ಪಾಣಿಪಲ್ಲವ ದಿಂದ ತಡವಿದನೇರನಾಗಳೆ ಕಂದೆರೆದು ನೋಡಿದನು ಭೂಪತಿ ಕೃಷ್ಣ ಫಲುಗುಣರ
noṃdelā naranātha vidhiyē neṃdu munidudo ninagenutta mu kuṃdanati kāruṇya dr̥ṣṭiyalavanipana nōḍi maṃdamaṃdadi pāṇipallava diṃda taḍavidanēranāgaḷe kaṃderedu nōḍidanu bhūpati kr̥ṣṇa phaluguṇara
ಹರಿ ಕರಾಬ್ಜಸ್ಪರ್ಶ ಮಾತ್ರ ಸ್ಫುರಣದಿಂದಾಪ್ಯಾಯಿತಾಂತಃ ಕರಣನಾದನು ನನೆದನುದ್ಗತ ಬಾಷ್ಪವಾರಿಯಲಿ ಮುರಿಯದೇರಿನ ಮೈವಳಿಗೆ ಲಘು ತರದ ಲುಳಿಯಲಿ ಮೈಯ ಬಲಿದಾ ದರಿಸಿ ಕುಳ್ಳಿರ್ದನು ಮಹೀಪತಿ ಮಾನಿನಿಯ ಮಲಗಿ
hari karābjasparśa mātra sphuraṇadiṃdāpyāyitāṃtaḥ karaṇanādanu nanedanudgata bāṣpavāriyali muriyadērina maivaḷige laghu tarada luḷiyali maiya balidā darisi kuḷḷirdanu mahīpati māniniya malagi
ಹದುಳವೇ ಪಾರ್ಥಂಗೆ ಹೇರಾ ಳದಲಿ ಕಾದಿದನಾ ಸುಶರ್ಮನ ಕದನ ಬೆಟ್ಟಿತು ಶಪಥವಲ್ಲಾ ತಮ್ಮೊಳನಿಬರಿಗೆ ಕೆದರಿದನು ಕೊಲ್ಲಣಿಗೆಯಲಿ ಬಂ ದೊದಗಿ ನೀವವದಿರಲಿ ಸುಯ್ದಾ ನದಲಿ ಬಂದುದೆ ಲಕ್ಷವೆಂದನು ನೃಪತಿ ಕೃಷ್ಣಂಗೆ
haduḷavē pārthaṃge hērā ḷadali kādidanā suśarmana kadana beṭṭitu śapathavallā tammoḷanibarige kedaridanu kollaṇigeyali baṃ dodagi nīvavadirali suydā nadali baṃdude lakṣaveṃdanu nr̥pati kr̥ṣṇaṃge
ಆಯಿತಿದು ನೀ ಬಂದ ಪರಿ ರಿಪು ರಾಯ ಥಟ್ಟಿನೊಳೊಕ್ಕಲಿಕ್ಕಿದ ದಾಯವೊಳ್ಳಿತು ದಿಟ್ಟನಾವನು ನಿನ್ನ ಹೋಲಿಸಲು ಕಾಯದರಿ ಕಳುಹಿದನೊ ಮೇಣಡ ಹಾಯಿದನೊ ಕರ್ಣಂಗೆ ಮಾಡಿದು ಪಾಯವಾವುದು ಪಾರ್ಥ ಹೇಳೆಂದವನಿಪತಿ ನುಡಿದ
āyitidu nī baṃda pari ripu rāya thaṭṭinoḷokkalikkida dāyavoḷḷitu diṭṭanāvanu ninna hōlisalu kāyadari kaḷuhidano mēṇaḍa hāyidano karṇaṃge māḍidu pāyavāvudu pārtha hēḷeṃdavanipati nuḍida
ಬೇರೆ ಸಮಸಪ್ತಕರೊಳೆಕ್ಕಟಿ ತೋರಿಸಿದೆ ನೀ ತೊಂಡಿನೋಲೆಯ ಕಾರತನವನು ಸೂತಸುತನಿಲ್ಲವರ ಥಟ್ಟಿನಲಿ ಹಾರಲೂದಿ ಸುಶರ್ಮನವದಿರ ತೂರಿ ತಿರುಗಿದ ಬಳಿಕ ಕೈ ಮೈ ತೋರಿದನೆ ಕಲಿಕರ್ಣ ನಿನ್ನೊಡನೆಂದನಾ ಭೂಪ
bēre samasaptakaroḷekkaṭi tōriside nī toṃḍinōleya kāratanavanu sūtasutanillavara thaṭṭinali hāralūdi suśarmanavadira tūri tirugida baḷika kai mai tōridane kalikarṇa ninnoḍaneṃdanā bhūpa
ಎಲೆ ಧನಂಜಯ ಸೂತತನಯನ ಗೆಲಿದು ಬಂದೆಯೊ ದಿವಿಜ ನಗರಿಗೆ ಕಳುಹಿ ಬಂದೆಯೊ ಕಂಡು ಕೆಣಕದೆ ಬಂದೆಯೋ ಮೇಣು ಉಳುಹಿ ಬಿಡುವನೆ ಸಮರ ಮುಖದಲಿ ಮಲೆತನಾದರೆ ಕರ್ಣನೇನ ಗ್ಗಳಿಕೆವಡೆದನೊ ಶಿವ ಶಿವಾ ಎಂದರಸ ಬಿಸುಸುಯ್ದ
ele dhanaṃjaya sūtatanayana gelidu baṃdeyo divija nagarige kaḷuhi baṃdeyo kaṃḍu keṇakade baṃdeyō mēṇu uḷuhi biḍuvane samara mukhadali maletanādare karṇanēna ggaḷikevaḍedano śiva śivā eṃdarasa bisusuyda
ಜೀಯ ಖಾತಿಯಿದೇಕೆ ಕರ್ಣನ ಕಾಯಿದುಳುಹಿದೆನೊಂದು ಬಾರಿ ವಿ ಘಾಯದಲಿ ಘಟ್ಟಿಸುವೆನೀಗಳೆ ಹಾಯ್ಕು ವೀಳೆಯವ ರಾಯದಳಗಿಳವೆನ್ನ ಕೂಡೆ ನ ವಾಯಿಯೇ ಕಲಿಕರ್ಣನಾಯುಷ ಹೋಯಿತಿದೆಯೆಂದೊರಸಿದನು ವಾಮಾಂಘ್ರಿಯಲಿನೆಲನ
jīya khātiyidēke karṇana kāyiduḷuhidenoṃdu bāri vi ghāyadali ghaṭṭisuvenīgaḷe hāyku vīḷeyava rāyadaḷagiḷavenna kūḍe na vāyiyē kalikarṇanāyuṣa hōyitideyeṃdorasidanu vāmāṃghriyalinelana
ಈಸು ಪರಿಯಲಿ ನಿಮ್ಮ ಚಿತ್ತದೊ ಳಾಸರಾಯಿತೆ ನಮ್ಮ ದುಷ್ಕೃತ ವಾಸನಾ ಫಲವೈಸಲೇ ತಾನಿದ್ದು ಫಲವೇನು ಆ ಸುಯೋಧನ ವಿಗಡ ಭಟ ವಾ ರಾಸಿಯನು ಮುಕ್ಕುಳಿಸುವೆನು ಧರ ಣೀಶ ನಿಮ್ಮಡಿಯಾಣೆ ನೇಮವ ಕೊಂಡೆ ನಾನೆಂದ
īsu pariyali nimma cittado ḷāsarāyite namma duṣkr̥ta vāsanā phalavaisalē tāniddu phalavēnu ā suyōdhana vigaḍa bhaṭa vā rāsiyanu mukkuḷisuvenu dhara ṇīśa nimmaḍiyāṇe nēmava koṃḍe nāneṃda
ನಾಲಗೆಯ ನೆಣಗೊಬ್ಬು ಮಿಕ್ಕು ಛ ಢಾಳಿಸಿದರೇನಹುದು ಕರ್ಣನ ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ ವೀಳೆಯವ ತಾ ಕರ್ಣನಾಯುಷ ಕೋಳುವೋಯಿತ್ತೆಂಬ ಗರ್ವನ ಗಾಳುತನವನು ನಂಬಲರಿವೆನೆ ಪಾರ್ಥ ಹೇಳೆಂದ
nālageya neṇagobbu mikku cha ḍhāḷisidarēnahudu karṇana kōlagari sōṃkidare sīyade sitagatana ninage vīḷeyava tā karṇanāyuṣa kōḷuvōyitteṃba garvana gāḷutanavanu naṃbalarivene pārtha hēḷeṃda
ನಿನಗೆ ಮಣಿವವನಲ್ಲ ರಾಧಾ ತನಯನವ ಹೆಚ್ಚಾಳು ಕಡ್ಡಿಯ ಮೊನೆಗೆ ಕೊಂಬನೆ ನಿನ್ನನೀ ಹೆಮ್ಮಕ್ಕಳಿದಿರಿನಲಿ ಕನಲಿ ಕಳವಳಿಸಿದರೆ ನೀನಾ ತನ ವಿಭಾಡಿಸಲಾಪ ಸತ್ವದ ಮನವ ಬಲ್ಲೆನು ಪಾರ್ಥ ನುಡಿಯದಿರೆಂದನಾ ಭೂಪ
ninage maṇivavanalla rādhā tanayanava heccāḷu kaḍḍiya monege koṃbane ninnanī hemmakkaḷidirinali kanali kaḷavaḷisidare nīnā tana vibhāḍisalāpa satvada manava ballenu pārtha nuḍiyadireṃdanā bhūpa
ಬಲನ ಜಂಭನ ಕೈಟಭನ ದಶ ಗಳನ ನಮುಚಿಯ ಕಾಲನೇಮಿಯ ಬಲ ನಿಶುಂಭ ಹಿರಣ್ಯಕಾದಿಯ ಖಳರ ಸಂದೋಹ ಅಳವಿಗೊಡುವರೆ ಪಾಡಹುದು ನೀ ನಿಲುಕಲಳವೇ ಕರ್ಣಜಯವತಿ ಸುಲಭವೇ ನಿನ್ನಂದದವರಿಗೆ ಪಾರ್ಥ ಹೇಳೆಂದ
balana jaṃbhana kaiṭabhana daśa gaḷana namuciya kālanēmiya bala niśuṃbha hiraṇyakādiya khaḷara saṃdōha aḷavigoḍuvare pāḍahudu nī nilukalaḷavē karṇajayavati sulabhavē ninnaṃdadavarige pārtha hēḷeṃda
ಜಾಣತನದಲಿ ಕಾದಿ ಹಿಂಗುವ ದ್ರೋಣನಲ್ಲಳವಿಯಲಿ ಕಳವಿನ ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ ಸಾಣೆಗಂಡಲಗಿವನು ಸಮರಕೆ ಹೂಣಿಗನು ರಿಪುಬಲದ ಹಾಣಾ ಹಾಣಿಕಾರನು ಕರ್ಣನಳುಕುವನಲ್ಲ ನಿನಗೆಂದ
jāṇatanadali kādi hiṃguva drōṇanallaḷaviyali kaḷavina kēṇadali koṃḍāḍuvare gāṃgēyanivanalla sāṇegaṃḍalagivanu samarake hūṇiganu ripubalada hāṇā hāṇikāranu karṇanaḷukuvanalla ninageṃda
ಜಾಳ ಜರಿದು ಜಡಾತ್ಮರಿಗೆ ಜಂ ಘಾಳತನವನು ಮೆರೆದು ಖೋಡಿಯ ಖೂಳರನು ಖೊಪ್ಪರಿಸಿ ಚೂಣಿಯ ಚರರ ಚಪ್ಪರಿಸಿ ಆಳುತನದಲಿ ಬೆರೆವ ನಿನಗವ ಸೋಲಲರಿಯನು ನಿನ್ನ ಗಂಟಲ ಗಾಳ ನಿನಗಳುಕುವನೆ ಕರ್ಣನು ಪಾರ್ಥ ಹೇಳೆಂದ
jāḷa jaridu jaḍātmarige jaṃ ghāḷatanavanu meredu khōḍiya khūḷaranu khopparisi cūṇiya carara capparisi āḷutanadali bereva ninagava sōlalariyanu ninna gaṃṭala gāḷa ninagaḷukuvane karṇanu pārtha hēḷeṃda
ಏನ ಹೇಳುವೆನೆನ್ನ ದಳದಲಿ ತಾನು ಭೀಮನ ಥಟ್ಟಿನಲಿ ಬಳಿ ಕೀ ನಕುಲ ಸಹದೇವ ಸಾತ್ಯಕಿ ದ್ರುಪದರೊಡ್ಡಿನಲಿ ಮಾನನಿಧಿ ರಾಧೇಯನತ್ತಲು ತಾನೆ ತನುಮಯವಾಯ್ತು ಪಾಂಡವ ಸೇನೆ ಬಡ ಸಾಹಸಿಕರೆಣೆಯೇ ಸೂತತನಯಂಗೆ
ēna hēḷuvenenna daḷadali tānu bhīmana thaṭṭinali baḷi kī nakula sahadēva sātyaki drupadaroḍḍinali mānanidhi rādhēyanattalu tāne tanumayavāytu pāṃḍava sēne baḍa sāhasikareṇeyē sūtatanayaṃge
ಎಲ್ಲಿ ಕರ್ಣನು ತಿರುಗಿ ನೋಡಿದ ಡಲ್ಲಿ ತಾನೆಡವಂಕ ಬಲಮುಖ ದಲ್ಲಿ ಸೂತಜನೆಂಟು ದೆಸೆಗಳ ನೋಡೆ ಕರ್ಣಮಯ ಎಲ್ಲಿ ನೋಡಿದಡಲ್ಲಿ ಕರ್ಣನ ಬಿಲ್ಲ ಬೊಬ್ಬೆ ರಥಾಶ್ವರವವೆದೆ ದಲ್ಲಣದ ದೆಖ್ಖಾಳ ರಚನಾ ರಸಿಕನವನೆಂದ
elli karṇanu tirugi nōḍida ḍalli tāneḍavaṃka balamukha dalli sūtajaneṃṭu desegaḷa nōḍe karṇamaya elli nōḍidaḍalli karṇana billa bobbe rathāśvaravavede dallaṇada dekhkhāḷa racanā rasikanavaneṃda
ಮುರಿದು ಹರಿಹಂಚಾದ ನಿಜ ಮೋ ಹರವ ನೆರೆ ಸಂತೈಸಿ ಜೋಡಿಸಿ ಜರೆದು ಗರಿಗಟ್ಟಿದ ವಿರೋಧಿ ವ್ರಜದ ಥಟ್ಟಣೆಯ ಮುರಿದು ಕುರಿದರಿ ಮಾಡಿ ದೊರೆಗಳ ನರಸಿ ಕಾದಿ ವಿಭಾಡಿಸುವ ರಣ ದುರುಬೆಕಾರನನೆಂತು ಸೈರಿಸಿ ಗೆಲುವೆ ನೀನೆಂದ
muridu harihaṃcāda nija mō harava nere saṃtaisi jōḍisi jaredu garigaṭṭida virōdhi vrajada thaṭṭaṇeya muridu kuridari māḍi doregaḷa narasi kādi vibhāḍisuva raṇa durubekārananeṃtu sairisi geluve nīneṃda
ಕಾದಿ ನೊಂದೆನು ತಾನು ಬಳಿಕ ವೃ ಕೋದರನೆಯಡಹಾಯ್ದನಾತನ ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು ಮೂದಲಿಸಿ ಸಹದೇವ ನಕುಲರು ಕಾದಲಿವದಿರ ಮುರಿದನಗ್ಗದ ಕೈದುಕಾರರ ದೇವ ಕರ್ಣನ ಗೆಲುವರಾರೆಂದ
kādi noṃdenu tānu baḷika vr̥ kōdaraneyaḍahāydanātana kādi nilisi madīya rathavanu matte keṇakidanu mūdalisi sahadēva nakularu kādalivadira muridanaggada kaidukārara dēva karṇana geluvarāreṃda
ಮಲೆತು ಧಾಳಾಧೂಳಿಯಲಿ ಬಲ ಸುಳಿ ಮಸಗಿಯೆನ್ನೊಬ್ಬನನು ಮೈ ಬಳಸಿ ಕಾದಿತು ವೀರಕರ್ಣನ ಕೂಡೆ ತಲೆಯೊತ್ತಿ ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ ಬಂದು ಬಯಲ ಗ್ಗಳಿಕೆಯನೆ ಬಿಡೆ ಕೆದರುತಿಹೆ ಮಾಣೆಂದು ನೃಪ ನುಡಿದ
maletu dhāḷādhūḷiyali bala suḷi masagiyennobbananu mai baḷasi kāditu vīrakarṇana kūḍe taleyotti olavaravu ninaguḷḷarāgaḷe nilisidā nī baṃdu bayala ggaḷikeyane biḍe kedarutihe māṇeṃdu nr̥pa nuḍida
ಉಕ್ಕಿದುದು ತನಿವೀರರಸ ಕುದಿ ದುಕ್ಕಿ ಹರಿದುದು ರೌದ್ರರಸವವ ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ ಮಿಕ್ಕು ಬಹಳ ಕ್ರೋಧವೊಡಲೊಳ ಗುಕ್ಕಿತಮಳೋತ್ಸಾಹ ಚಾಪಳ ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ
ukkidudu tanivīrarasa kudi dukki haridudu raudrarasavava rakkajava nabhakotti paridudu śāṃtirasalahari mikku bahaḷa krōdhavoḍaloḷa gukkitamaḷōtsāha cāpaḷa sukkitoṃdē nimiṣa mōnadoḷirdanā pārtha
ಹೇಳಲಂಜುವೆನಾ ಸುಶರ್ಮಕ ನಾಳು ತಾಯಿಗೆ ಮಕ್ಕಳಾಗದೆ ಬೀಳಹೊಯ್ದು ನಿಹಾರದಲಿ ತಿರುಗಿದೆನು ಹರಿಸಹಿತ ಕೋಲಗುರುವಿನ ಮಗನಲೇ ಹರಿ ಧಾಳಿ ಹರಿದಡಗಟ್ಟಿ ತಡೆದನು ಹೇಳಿ ಫಲವಿನ್ನೇನೆನುತ ಬಿಸುಸುಯ್ದನಾ ಪಾರ್ಥ
hēḷalaṃjuvenā suśarmaka nāḷu tāyige makkaḷāgade bīḷahoydu nihāradali tirugidenu harisahita kōlaguruvina maganalē hari dhāḷi haridaḍagaṭṭi taḍedanu hēḷi phalavinnēnenuta bisusuydanā pārtha
ಇಟ್ಟಣಿಸಿಕೊಂಡೆನ್ನೊಡನೆ ಸರಿ ಗಟ್ಟಿ ಕಾದಿದ ರವಿಸುತನ ಹುಡಿ ಗುಟ್ಟಿದೆನು ರಥವಾಜಿ ಸೂತ ಶರಾಸನಾದಿಗಳ ಮುಟ್ಟೆ ಬಂದನು ಖಡುಗದಲಿ ಮೈ ಮುಟ್ಟಿ ಹೆಣಗಿದೆನಾಕ್ಷಣಕೆ ಸಾ ಲಿಟ್ಟು ಸರಿದುದು ಸಕಲ ಕೌರವಸೇನೆ ಸರಿಸದಲಿ
iṭṭaṇisikoṃḍennoḍane sari gaṭṭi kādida ravisutana huḍi guṭṭidenu rathavāji sūta śarāsanādigaḷa muṭṭe baṃdanu khaḍugadali mai muṭṭi heṇagidenākṣaṇake sā liṭṭu saridudu sakala kauravasēne sarisadali
ತೊಡಕಿದನು ಗಡ ಗರುಡ ಹಾವಿನ ತಡಿಕೆವಲೆಯಲಿ ನಿನ್ನ ಗಮನವ ತಡೆದರೈ ತಪ್ಪೇನು ಕೌರವದಳದ ನಾಯಕರು ಕಡುಹಿನಲಿ ತಡವಾದುದುಳಿದಂ ತೆಡೆಯಲುಳಿವರ್ಜುನನೆ ನಮ್ಮವ ಗಡವ ಕೇಳಿದು ನಿಲ್ಲನೆಂದನು ನಗುತ ಯಮಸೂನು
toḍakidanu gaḍa garuḍa hāvina taḍikevaleyali ninna gamanava taḍedarai tappēnu kauravadaḷada nāyakaru kaḍuhinali taḍavāduduḷidaṃ teḍeyaluḷivarjunane nammava gaḍava kēḷidu nillaneṃdanu naguta yamasūnu
ಏನನೆಂಬೆನು ನಮ್ಮ ಪುಣ್ಯದ ಹಾನಿ ತಲೆದೋರಿದರೆ ಭೀಮನ ಸೂನುವಿರಲಭಿಮನ್ಯುವಿರಲೆವಗೀ ವಿಪತ್ತಹುದೆ ಆ ನದೀಜ ದ್ರೋಣರಲಿ ತಾ ಹಾನಿಯನು ಮಿಗೆ ಕಂಡೆನೇ ನೆರೆ ಹೀನನನು ಕಂಡಾದಡೆಯು ಬದುಕುವುದು ಲೇಸೆಂದ
ēnaneṃbenu namma puṇyada hāni taledōridare bhīmana sūnuviralabhimanyuviralevagī vipattahude ā nadīja drōṇarali tā hāniyanu mige kaṃḍenē nere hīnananu kaṃḍādaḍeyu badukuvudu lēseṃda
ಅರಳಿಚದೆ ಮಧುಮಾಸ ಮಾಣಲಿ ವರುಷ ಋತುವೇ ಸಾಕು ಜಾತಿಗೆ ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ ಸಿರಿಗೆ ಕಕ್ಕುಲಿತೆಯೆ ವಿಪಕ್ಷವ ಬೆರಸಿ ಬದುಕುವೆವೈಸಲೇ ವರ ಗುರುವಲಾ ಧೃತರಾಷ್ಟ್ರನೂಣೆಯವೇನು ಹೇಳೆಂದ
araḷicade madhumāsa māṇali varuṣa r̥tuvē sāku jātige jaraḍaremaginnēnu pūrvaprakr̥ti vanavāsa sirige kakkuliteye vipakṣava berasi badukuvevaisalē vara guruvalā dhr̥tarāṣṭranūṇeyavēnu hēḷeṃda
ಬರಿದೆ ಬಯಸಿದಡಹುದೆ ರಾಜ್ಯದ ಹೊರಿಗೆಯನು ನಿಶ್ಯಂಕೆಯಲಿ ಹೊ ಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ ಇರಿದು ಮೇಣ್ ರಿಪುರಾಯರನು ಕು ಕ್ಕುರಿಸುವರೆ ರಾಧೇಯನಂತಿರ ಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ
baride bayasidaḍahude rājyada horigeyanu niśyaṃkeyali ho kkiridu baha satvātiśaya bēhudu raṇāgradali iridu mēṇ ripurāyaranu ku kkurisuvare rādhēyanaṃtira luruvanobbane bēhudalladaḍilla jayaveṃda
ಎವಗೆ ವಿಕ್ರಮವೆಂಬಡೀ ರೌ ರವವ ಕಂಡೆನು ಕರ್ಣನಂತಿರ ಲೆವಗೆ ಧೀವಸಿಯಾಗಿ ಕಾದುವರೆಂಬರವರಿಲ್ಲ ಬವರ ಗೆಲುವರೆ ಹರಿಗೆ ಕೊಡು ಗಾಂ ಡಿವವ ಸಾರಥಿಯಾಗು ನೀನೆಂ ದವಗಡಿಸಿದನು ವೀರನಾರಾಯಣನ ಮೈದುನನ
evage vikramaveṃbaḍī rau ravava kaṃḍenu karṇanaṃtira levage dhīvasiyāgi kāduvareṃbaravarilla bavara geluvare harige koḍu gāṃ ḍivava sārathiyāgu nīneṃ davagaḍisidanu vīranārāyaṇana maidunana
Keys: ← → turn the page, J K step through the verses.
Illustration: Verse & Place (Project-owned).