Skip to content

ಆದಿ ಪರ್ವ — ಸಂಧಿ ೧೭ · ಆದಿ ಪರ್ವ — ಸಂಧಿ ೧೭

Adi Parva · Sandhi 17

ādi parva — saṃdhi 17

The complete adi parva · sandhi 17 in Kannada.

33 passagesKannada with transliteration

An original emblem for Adi Parva.

Invocation

1.17.opening

ಧಾಳಿಯಲಿ ಬಂದರಿಬಲದ ಹೆ ಚ್ಚಾಳುತನವನು ಮುರಿದು ಸಂಧಿಯ ಮೇಲೆ ಧರ್ಮಜ ಬಂದು ಹೊಕ್ಕನು ಹಸ್ತಿನಾಪುರವ -----

dhāḷiyali baṃdaribalada he ccāḷutanavanu muridu saṃdhiya mēle dharmaja baṃdu hokkanu hastināpurava -----

ಕೇಳು ಜನಮೇಜಯ ನೃಪತಿ ಪಾಂ ಚಾಲಸುತೆಯ ವಿವಾಹ ವಾರ್ತೆಯ ಕೇಳಿದರಲೈ ಕೌರವರು ಮರುಗಿದರು ಮರುಕೊಳಿಸಿ ಆಳ ನೆರಹಿದರಖಿಳದಳ ದೆ ಖ್ಖಾಳವನು ನೋಡಿದರು ಭೂಮೀ ಪಾಲಸಂಕುಲ ಸಹಿತ ಬಂದರು ದ್ರುಪದ ಪುರಿಗಾಗಿ

kēḷu janamējaya nr̥pati pāṃ cālasuteya vivāha vārteya kēḷidaralai kauravaru marugidaru marukoḷisi āḷa nerahidarakhiḷadaḷa de khkhāḷavanu nōḍidaru bhūmī pālasaṃkula sahita baṃdaru drupada purigāgi

Report an error

ಏನ ಹೇಳುವೆ ನಿನ್ನವರ ಜಯ ಮಾನವನು ಮತ್ತೊಂದು ಪೈಕದ ಮಾನಭಂಗ ಸ್ಥಿತಿಯನೆಲೆ ಜನಮೇಜಯಜಕ್ಷಿತಿಪ ಭಾನುವಿನ ಮಂಜಿನ ಶಿಲೋಚ್ಚಯ ಸಾನುವಿನ ವಜ್ರದ ತರಕ್ಷುವ ಧೇನುವಿನ ಹೋರಟೆಯ ಹವಣದು ಭೂಪ ಕೇಳೆಂದ

ēna hēḷuve ninnavara jaya mānavanu mattoṃdu paikada mānabhaṃga sthitiyanele janamējayajakṣitipa bhānuvina maṃjina śilōccaya sānuvina vajrada tarakṣuva dhēnuvina hōraṭeya havaṇadu bhūpa kēḷeṃda

Report an error

ಮುರಿದುದಾ ಹೆಬ್ಬಲ ವಿಘಾತಿಯ ಲೊರಗಿದರು ಪಟುಭಟರು ಗಜಹಯ ದೊರತೆ ಬತ್ತಿತು ಭೀಮ ಪಾರ್ಥರ ಶರನಿದಾಘದಲಿ ಉರುಕುಗೊಂಡರು ನಿಚ್ಚಟರು ಕೈ ಮರೆದುದಾಚೆಯ ದೊರೆಗಳಿವದಿರು ನೆರೆ ವಿಭಾಡಿಸೆ ತೆಗೆದು ಹಾಯ್ದರು ಹಸ್ತಿನಾಪುರಕೆ

muridudā hebbala vighātiya loragidaru paṭubhaṭaru gajahaya dorate battitu bhīma pārthara śaranidāghadali urukugoṃḍaru niccaṭaru kai maredudāceya doregaḷivadiru nere vibhāḍise tegedu hāydaru hastināpurake

Report an error

ಬಳಿಕ ಪಾಂಚಾಲಕನ ಭೀತಿಯ ಮೊಳಕೆಯುರಿದುದು ಹರಿದುದುತ್ಸವ ಜಲಧಿವಳಯದ ಭೂತಳಾಗ್ರದ ಭೂತಳೇಂದ್ರರಲಿ ಹೊಳೆಹೊಳೆವ ರವಿರಶ್ಮಿಗಳ್ಪ್ರ ಜ್ವಲಿಸುವಂತಿರೆ ಪಾಂಡುನಂದನ ರಳವಿನುಬ್ಬಟೆ ಬಿಸಿಲು ನೆರೆ ಪಸರಿಸಿತು ದೆಸೆದೆಸೆಗೆ

baḷika pāṃcālakana bhītiya moḷakeyuridudu haridudutsava jaladhivaḷayada bhūtaḷāgrada bhūtaḷēṃdrarali hoḷehoḷeva raviraśmigaḷpra jvalisuvaṃtire pāṃḍunaṃdana raḷavinubbaṭe bisilu nere pasarisitu desedesege

Report an error

ಬಂದನಲ್ಲಿಗೆ ಸಕಲ ಯಾದವ ವೃಂದ ಸಹಿತ ಮುರಾರಿ ಕುಂತೀ ನಂದನರು ಬರಲಿದಿರುಗಣಿಸಿಕೊಂಡನುಚಿತದಲಿ ತಂದ ಬಹುವಿಧ ವಸ್ತುಗಳ ತಾ ನಂದು ಕೊಟ್ಟನು ಗಜರಥಾಶ್ವವ ನಿಂದುವದನೆಯರಿಗೆ ವಿಚಿತ್ರಾಂಬರ ವಿಭೂಷಣವ

baṃdanallige sakala yādava vr̥ṃda sahita murāri kuṃtī naṃdanaru baralidirugaṇisikoṃḍanucitadali taṃda bahuvidha vastugaḷa tā naṃdu koṭṭanu gajarathāśvava niṃduvadaneyarige vicitrāṃbara vibhūṣaṇava

Report an error

ಮಗನೆ ಧರ್ಮಜ ಕೇಳು ಭೀಮಾ ದಿಗಳೆ ಹರಿಯೆಮ್ಮಣ್ಣದೇವನ ಮಗನು ಸೋದರಮಾವನಾತನು ನಿಮಗೆ ವಸುದೇವ ವಿಗಡರೀ ಯಾದವ ನೃಪರು ಬಂ ಧುಗಳು ನಿಮಗೆಂದೈವರನು ಕೈ ನೆಗಹಿ ಕಮಲೋದರನ ಕೈಯಲಿ ಕೊಟ್ಟಳಾ ಕುಂತಿ

magane dharmaja kēḷu bhīmā digaḷe hariyemmaṇṇadēvana maganu sōdaramāvanātanu nimage vasudēva vigaḍarī yādava nr̥paru baṃ dhugaḷu nimageṃdaivaranu kai negahi kamalōdarana kaiyali koṭṭaḷā kuṃti

Report an error

ವನದೊಳಪಗತನಾದನಿವರ ಯ್ಯನು ಕುಮಾರರ ಬಾಲ್ಯಕಾಲದೊ ಳೆನಗೆ ರಕ್ಷಾಭಾರ ಬಿದ್ದುದು ಪತಿಪರೋಕ್ಷದಲಿ ಇನಿಬರನು ಗಜಪುರಿಗೆ ಕೊಂಡೊ ಯ್ದೆನು ಸುಯೋಧನನಿಂದ ವೈರವು ಜನಿತವಾಯಿತು ಬಳಿಕ ಲಾಕ್ಷಾಭವನ ದಹನದಲಿ

vanadoḷapagatanādanivara yyanu kumārara bālyakālado ḷenage rakṣābhāra biddudu patiparōkṣadali inibaranu gajapurige koṃḍo ydenu suyōdhananiṃda vairavu janitavāyitu baḷika lākṣābhavana dahanadali

Report an error

ಉರಿಯೊಳುಳಿದೆವು ನಿಮ್ಮ ಚರಣ ಸ್ಮರಣ ಬಲದಲಿ ಬಹಳ ವಿಪಿನಾಂ ತರದೊಳಗೆ ತೊಳಲಿದೆವು ಹೊರೆದೆವು ಸಾಯದೊಡಲುಗಳ ಬರಬರಲು ತತ್ಸರ್ವ ದುಃಖೋ ತ್ತರ ನಿವಾರಣ ದ್ರುಪದ ಕನ್ಯಾ ವರಣ ನಿನ್ನೀಯಂಘ್ರಿದರುಶನವೆಂದಳಾ ಕುಂತಿ

uriyoḷuḷidevu nimma caraṇa smaraṇa baladali bahaḷa vipināṃ taradoḷage toḷalidevu horedevu sāyadoḍalugaḷa barabaralu tatsarva duḥkhō ttara nivāraṇa drupada kanyā varaṇa ninnīyaṃghridaruśanaveṃdaḷā kuṃti

Report an error

ದೇವಿ ಚಿತ್ತವಿಸೋಪಚಾರಕ ಭಾವವೇ ಧರ್ಮಜನು ಭೀಮನು ಭಾವನವರು ಧನಂಜಯಾದಿಗಳೆಮಗೆ ಮೈದುನರು ಈ ಉಪಾಧಿ ಸ್ಥಳದೊಳಂತ ರ್ಜೀವನವು ಪ್ರಾಣಾದಿ ವಾಯುಗ ಳಾವು ನಿಮ್ಮೈವರಿಗೆ ಕಾರಣವೆಂದನಸುರಾರಿ

dēvi cittavisōpacāraka bhāvavē dharmajanu bhīmanu bhāvanavaru dhanaṃjayādigaḷemage maidunaru ī upādhi sthaḷadoḷaṃta rjīvanavu prāṇādi vāyuga ḷāvu nimmaivarige kāraṇaveṃdanasurāri

Report an error

ದ್ರುಪದ ಗುಡಿಗಟ್ಟಿದನು ಕುಂತಿಯ ವಿಪುಳ ಹರುಷವನೇನನೆಂಬೆನು ದ್ರುಪದ ಯದು ಪರಿವಾರವುಲಿದುದು ಜಲಧಿ ಘೋಷದಲಿ ಅಪದೆಸೆಯ ಮುಗಿಲೊಡೆದು ಹೊಳೆ ಹೊಳೆ ದು ಪರಿಚರ ರವಿಯಂತೆ ತತ್ಕ್ಷಣ ವಿಪುಳ ತೇಜಃಪುಂಜರೆಸೆದರು ಪಾಂಡುನಂದನರು

drupada guḍigaṭṭidanu kuṃtiya vipuḷa haruṣavanēnaneṃbenu drupada yadu parivāravulidudu jaladhi ghōṣadali apadeseya mugiloḍedu hoḷe hoḷe du paricara raviyaṃte tatkṣaṇa vipuḷa tējaḥpuṃjaresedaru pāṃḍunaṃdanaru

Report an error

ಇದಿರೊಳವನಿಪ ಭೀಮನೆಡವಂ ಕದಲಿ ಮಾದ್ರೀಸುತರು ಬಲವಂ ಕದಲಿ ದೇವಕಿ ಕುಂತಿ ವಸುದೇವಾದಿ ಯದುನಿಕರ ಮುದದಿಯೈವರ ರಮಣಿ ಬಲವಂ ಕದಲಿ ಕರುಣಾಳುವಿನ ವಾಮಾಂ ಕದಲಿ ಫಲುಗುಣನೊಪ್ಪೆ ಮೆರೆದನು ದಾನವಧ್ವಂಸಿ

idiroḷavanipa bhīmaneḍavaṃ kadali mādrīsutaru balavaṃ kadali dēvaki kuṃti vasudēvādi yadunikara mudadiyaivara ramaṇi balavaṃ kadali karuṇāḷuvina vāmāṃ kadali phaluguṇanoppe meredanu dānavadhvaṃsi

Report an error

ಆವುದೋ ಧರ್ಮಜನ ಭೀಮನ ಭಾವಶುದ್ಧಿ ಧನಂಜಯನ ಸುಕೃ ತಾವಲಂಬನ ಸಾರವೆಂತುಟೊ ಶಿವಮಹಾದೇವ ಠಾವುಗಾಣವು ವೇದವುಪನಿಷ ದಾವಳಿಗಳೋಲೈಸಿ ಕೃಷ್ಣ ಕೃ ಪಾವಿಲಾಸವ ನೋಡಿಯೆಂದುದು ಸಕಲ ಸುರನಿಕರ

āvudō dharmajana bhīmana bhāvaśuddhi dhanaṃjayana sukr̥ tāvalaṃbana sāraveṃtuṭo śivamahādēva ṭhāvugāṇavu vēdavupaniṣa dāvaḷigaḷōlaisi kr̥ṣṇa kr̥ pāvilāsava nōḍiyeṃdudu sakala suranikara

Report an error

ಅರಸ ಚಿತ್ತೈಸಂದಿನೋಲಗ ಹರಿದುದಾ ಹರಿಸೇನೆ ಬಿಟ್ಟುದು ಪುರದ ಬಹಿರುದ್ಯಾನ ವೀಧಿಗಳೊಳಗೆ ಹರಹಿನಲಿ ಕುರುನೃಪಾಲನ ಗುಪ್ತಚಾರರು ಅರಿದರೀವಾರ್ತೆಯನು ಪುರದಲಿ ಹರಹಿದರು ನೆರೆ ಕೇಳಿದನು ಧೃತರಾಷ್ಟ್ರನೀ ಹದನ

arasa cittaisaṃdinōlaga haridudā harisēne biṭṭudu purada bahirudyāna vīdhigaḷoḷage harahinali kurunr̥pālana guptacāraru aridarīvārteyanu puradali harahidaru nere kēḷidanu dhr̥tarāṣṭranī hadana

Report an error

ಕರೆಸಿದನು ಗಾಂಗೇಯ ಗೌತಮ ಗುರು ಸುಯೋಧನ ಶಲ್ಯ ಸೈಂಧವ ಗುರುತನುಜ ರಾಧೇಯ ವಿದುರ ಕಳಿಂಗ ಸೌಬಲರ ಚರಮುಖಪ್ರತಿಪನ್ನ ಬಂಧುರ ತರ ವಚೋವಿನ್ಯಾಸ ಕರ್ಣ ಜ್ವರವೊ ಕರ್ಣಾಮೃತವೊ ಹೇಳಿರೆ ಎಂದನಂಧನೃಪ

karesidanu gāṃgēya gautama guru suyōdhana śalya saiṃdhava gurutanuja rādhēya vidura kaḷiṃga saubalara caramukhapratipanna baṃdhura tara vacōvinyāsa karṇa jvaravo karṇāmr̥tavo hēḷire eṃdanaṃdhanr̥pa

Report an error

ಕೇಳಿರೈ ಹೇಳುವೆನು ಯಾದವ ರಾಳು ಬಂದುದು ಗಡ ಜನಾರ್ದನ ಕೋಳುವೋದನು ಗಡ ಯುಧಿಷ್ಠಿರ ಭೀಮ ಪಾರ್ಥರಿಗೆ ಗಾಳಿ ಬೆಂಬಲವಾಗಲುರಿಯ ಛ ಡಾಳವನು ನಿರ್ಣೈಸಬಹುದೆ ವಿ ತಾಳಿಸಿತಲೈ ನಿಮ್ಮ ಗಾರುಡವೆಂದನಾ ನೃಪತಿ

kēḷirai hēḷuvenu yādava rāḷu baṃdudu gaḍa janārdana kōḷuvōdanu gaḍa yudhiṣṭhira bhīma pārtharige gāḷi beṃbalavāgaluriya cha ḍāḷavanu nirṇaisabahude vi tāḷisitalai nimma gāruḍaveṃdanā nr̥pati

Report an error

ಎನಲು ಘರ್ಜಿಸುತರಸ ಮುರರಿಪು ಜಿನುಗಿದರೆ ಗಿರಿ ಜರಿವುದೇ ಯಮ ತನುಜ ಭೀಮಾರ್ಜುನರು ಹಿಡಿದರೆ ಗಗನವಡಗುವುದೆ ದನುಜರಿಪುವಿನೊಳೇನಹುದು ಬರ ಲನಿಮಿಷರು ನೆರವಾಗಿ ರಣದಲಿ ಜನಪ ನೋಡೆಂದರು ಜಯದ್ರಥ ಸೌಬಲಾದಿಗಳು

enalu gharjisutarasa muraripu jinugidare giri jarivudē yama tanuja bhīmārjunaru hiḍidare gaganavaḍaguvude danujaripuvinoḷēnahudu bara lanimiṣaru neravāgi raṇadali janapa nōḍeṃdaru jayadratha saubalādigaḷu

Report an error

ಕೊರತೆಯಲ್ಲಿದು ನಿನ್ನೆ ನಾವ್ಕಂ ಡರಿದೆವಿವರತಿ ಬಲರು ಕೃಷ್ಣನ ಬರಿಸಹಾಯದಲೇನು ಭೀಮಾರ್ಜುನರ ಬಲುಹೇನು ನೆರವಣಿಗೆಯುಳ್ಳವರಲೈ ಹೊ ಕ್ಕಿರಿದ ರಣ ಹಸಿಯಾರಿತೇ ನೀ ವರಿಯಿರೇ ಭೂಪಾಲ ಎಂದನು ನಗುತ ಗಾಂಗೇಯ

korateyallidu ninne nāvkaṃ ḍaridevivarati balaru kr̥ṣṇana barisahāyadalēnu bhīmārjunara baluhēnu neravaṇigeyuḷḷavaralai ho kkirida raṇa hasiyāritē nī variyirē bhūpāla eṃdanu naguta gāṃgēya

Report an error

ಇವರ ಬಲುಹಂತಿರಲಿ ಸಾಕಿ ನ್ನವರ ಕರೆಸು ವಿರೋಧ ಬಂಧ ವ್ಯವಹೃತಿಗೆ ಫಲವಿಲ್ಲ ಮೂಲಚ್ಛೇದ ಕರ್ಮವಿದು ಅವರು ಮುನ್ನತಿಬಲರು ಕೃಷ್ಣನ ಹವಣ ನೀನೇ ಬಲ್ಲೆಯಿನ್ನೀ ಸವಡಿ ಮಾರಿಯ ಸೋಕು ಲೇಸಲ್ಲೆಂದನಾ ಭೀಷ್ಮ

ivara baluhaṃtirali sāki nnavara karesu virōdha baṃdha vyavahr̥tige phalavilla mūlacchēda karmavidu avaru munnatibalaru kr̥ṣṇana havaṇa nīnē balleyinnī savaḍi māriya sōku lēsalleṃdanā bhīṣma

Report an error

ಕರೆಸು ವಿದುರನ ಕಳುಹಿ ವಾರಣ ಪುರದ ರಾಜ್ಯವಿಭಾಗವನು ವಿ ಸ್ತರಿಸಿಕೊಡು ಭಂಡಾರವನು ದಾಯಾದ ಮಾರ್ಗದಲಿ ನರಯುಧಿಷ್ಠಿರ ಭೀಮರನು ನೀ ಬರಿಸು ನಿಮ್ಮವಗುಣವ ನೋಡದೆ ಬೆರಸಿಕೊಡುವೆವು ಕೂಡಿ ಬದುಕುವುದೆಂದನಾ ಭೀಷ್ಮ

karesu vidurana kaḷuhi vāraṇa purada rājyavibhāgavanu vi starisikoḍu bhaṃḍāravanu dāyāda mārgadali narayudhiṣṭhira bhīmaranu nī barisu nimmavaguṇava nōḍade berasikoḍuvevu kūḍi badukuvudeṃdanā bhīṣma

Report an error

ಕರೆಸಿಕೊಡಿರೈ ನಿಮ್ಮ ಚಿತ್ತಕೆ ಬರಿಸಿ ನಡೆಸುವೆನೆನ್ನ ಮಕ್ಕಳ ದುರುಳತನದಿಂದಾದ ಹಿಂದಿನ ಮಕ್ಕಳಾಟಿಕೆಯ ಮರೆದು ಕಳೆಯಲಿ ಪಾಂಡುನಂದನ ರೆರವಿಗರೆ ಬಾ ವಿದುರ ಭೀಷ್ಮನ ಪರಮ ಮತವೇ ನನ್ನ ಮತ ಹೋಗೆಂದ ಧೃತರಾಷ್ಟ್ರ

karesikoḍirai nimma cittake barisi naḍesuvenenna makkaḷa duruḷatanadiṃdāda hiṃdina makkaḷāṭikeya maredu kaḷeyali pāṃḍunaṃdana reravigare bā vidura bhīṣmana parama matavē nanna mata hōgeṃda dhr̥tarāṣṭra

Report an error

ಕಳುಹಿದರು ವಿದುರನನು ಬುದ್ಧಿಯ ಕಲಿಸಿ ಭೀಷ್ಮಾದಿಗಳು ಪಯಣದ ಲಲಿತ ಸನ್ನಾಹದೊಳು ಪರುಠವಿಸಿದನು ಪಾವುಡವ ಬಳಿಕ ಸುಮುಹೂರ್ತದಲಿ ವಿಪ್ರಾ ವಳಿಗಳಾಶೀರ್ವಾದದಲಿ ಮಂ ಗಳತೆ ಮಿಗಲೊಲವಿಂದ ಹಸ್ತಿನಪುರವ ಹೊರವಂಟ

kaḷuhidaru vidurananu buddhiya kalisi bhīṣmādigaḷu payaṇada lalita sannāhadoḷu paruṭhavisidanu pāvuḍava baḷika sumuhūrtadali viprā vaḷigaḷāśīrvādadali maṃ gaḷate migalolaviṃda hastinapurava horavaṃṭa

Report an error

ಕೇಳು ಭೂಪತಿ ಹಲವು ಪಯಣದ ಮೇಲೆ ಪಯಣ್ದಲೈದಿದನು ಪಾಂ ಚಾಲ ಪುರವನು ಬಂದನರಮನೆಗಧಿಕ ಹರ್ಷದಲಿ ಕೇಳಿದರು ಕೌಂತೇಯರೀತನ ಲಾಲಿಸಿದರಿದಿರೈದಿ ತನು ಪುಳ ಕಾಳಿಯಲಿ ಮೈಮುಳುಗೆ ತೆಗೆದಪ್ಪಿದರು ತಮತಮಗೆ

kēḷu bhūpati halavu payaṇada mēle payaṇdalaididanu pāṃ cāla puravanu baṃdanaramanegadhika harṣadali kēḷidaru kauṃtēyarītana lālisidaridiraidi tanu puḷa kāḷiyali maimuḷuge tegedappidaru tamatamage

Report an error

ಕ್ಷೇಮವನು ಕುಶಲವನು ಬಂಧು ಸ್ತೋಮದಲಿ ಕೇಳಿದರು ತಮ್ಮಯ ಕ್ಷೇಮಕುಶಲವ ಹೇಳಿದರು ಪೂರ್ವಾಪರ ಸ್ಥಿತಿಯ ಭೂಮಿಪತಿ ಚಿತ್ತೈಸು ಬಳಿಕಿನ ರಾಮಣೀಯಕ ಯಾದವೇಂದ್ರ ಶಿ ರೋಮಣಿಯ ಸಮ್ಮೇಳವನು ಹೇಳಿದರು ವಿದುರಂಗೆ

kṣēmavanu kuśalavanu baṃdhu stōmadali kēḷidaru tammaya kṣēmakuśalava hēḷidaru pūrvāpara sthitiya bhūmipati cittaisu baḷikina rāmaṇīyaka yādavēṃdra śi rōmaṇiya sammēḷavanu hēḷidaru viduraṃge

Report an error

ತಂದ ಪಾವುಡವನಿತವನು ಯಮ ನಂದನಂಗೊಪ್ಪಿಸಿದ ದ್ರುಪದ ಮು ಕುಂದ ಧೃಷ್ಟದ್ಯುಮ್ನ ಕಂದರ್ಪಾನಿರುದ್ಧರಿಗೆ ತಂದ ವಸ್ತುವನಿತ್ತವನು ಸಾ ನಂದದಲಿ ನೀಡಿದನು ನಗುತರ ವಿಂದನಾಭನ ಪದಕೆ ಮೈಯಿಕ್ಕಿದನು ಹರುಷದಲಿ

taṃda pāvuḍavanitavanu yama naṃdanaṃgoppisida drupada mu kuṃda dhr̥ṣṭadyumna kaṃdarpāniruddharige taṃda vastuvanittavanu sā naṃdadali nīḍidanu nagutara viṃdanābhana padake maiyikkidanu haruṣadali

Report an error

ತೆಗೆದು ತಕೈಸಿದನು ಭೀಷ್ಮಾ ದಿಗಳ ಕುಶಲವ ಕೇಳಿದನು ನಸು ನಗುತ ಮೈದಡವ್ವಿದನು ವಿದುರನನಾ ಕೃಪಾಜಲಧಿ ವಿಗಡನಾ ಧೃತರಾಷ್ಟ್ರನೀ ಬಂ ಧುಗಳ ನೆನೆವನೆ ಪಾಂಡುಸುತರಿಗೆ ಸೊಗಸುವನೆ ನೀ ಬಂದೆ ಲೇಸಾಯ್ತೆಂದನಸುರಾರಿ

tegedu takaisidanu bhīṣmā digaḷa kuśalava kēḷidanu nasu naguta maidaḍavvidanu vidurananā kr̥pājaladhi vigaḍanā dhr̥tarāṣṭranī baṃ dhugaḷa nenevane pāṃḍusutarige sogasuvane nī baṃde lēsāyteṃdanasurāri

Report an error

ಕಳುಹಿದನು ಬಿಡಾರಕಾತನ ಬಳಿಯ ಪರಿವಾರವನು ಮನ್ನಿಸಿ ಬಳಿಕ ಮರುದಿನ ಮೇಳವಿಸಿದರು ಮಂತ್ರಶಾಲೆಯಲಿ ತಿಳುಹಿದನು ಧೃತರಾಷ್ಟ್ರಭೀಷ್ಮರ ಲಲಿತಮತವನು ಬಂಧುವರ್ಗ ಸ್ಖಲಿತವನು ಸೈರಿಸುವುದೆಂದನು ವಿನಯದಲಿ ವಿದುರ

kaḷuhidanu biḍārakātana baḷiya parivāravanu mannisi baḷika marudina mēḷavisidaru maṃtraśāleyali tiḷuhidanu dhr̥tarāṣṭrabhīṣmara lalitamatavanu baṃdhuvarga skhalitavanu sairisuvudeṃdanu vinayadali vidura

Report an error

ಕರೆಸಿದನು ಧೃತರಾಷ್ಟ್ರನಾತನ ಚರಣವನು ಕಾಂಬುದು ನದೀಸುತ ಗುರುಕೃಪರು ನಿಮಗೊಳ್ಳಿದರು ನೀವಖಿಳ ರಾಜ್ಯದಲಿ ಸರಿಯಕೊಂಬುದು ಸೇರುವಡೆ ಗಜ ಪುರದೊಳಿಹುದಲ್ಲದೊಡೆ ನಿಮ್ಮಯ ಪುರದಲಿರಿ ನೀವಾತ್ಮನಿರ್ಮಿತ ರಾಜಧಾನಿಯಲಿ

karesidanu dhr̥tarāṣṭranātana caraṇavanu kāṃbudu nadīsuta gurukr̥paru nimagoḷḷidaru nīvakhiḷa rājyadali sariyakoṃbudu sēruvaḍe gaja puradoḷihudalladoḍe nimmaya puradaliri nīvātmanirmita rājadhāniyali

Report an error

ಮುರಹರನನಹುದೆನಿಸಿ ಭೂಮೀ ಶ್ವರನ ಮೆಚ್ಚಿಸಿ ಭೀಮನನು ಮನ ಬರಿಸಿ ಪಾರ್ಥನನೊಲಿಸಿ ಮಾದ್ರೀಸುತನನೊಡಬಡಿಸಿ ಅರಸಿಗಭಿಮತವೆನಿಸಿ ಪಾಂಚಾ ಲರಿಗೆ ಕಾರ್ಯವಿದೆನಿಸಿ ಕುಂತಿಗೆ ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ

muraharananahudenisi bhūmī śvarana meccisi bhīmananu mana barisi pārthananolisi mādrīsutananoḍabaḍisi arasigabhimatavenisi pāṃcā larige kāryavidenisi kuṃtige parama haruṣava racisi nuḍidanu saṃdhiyanu vidura

Report an error

ಕದಡು ತಿಳಿದುದು ಕಾರ್ಯಗತಿಗಾ ಸ್ಪದವ ಕೊಟ್ಟರು ಬಳಿಕ ಸುಮುಹೂ ರ್ತದಲಿ ಪಯಣವ ಮಾಡಿದರು ಪಾಂಚಾಲದಳಸಹಿತ ಯದು ಶಿರೋಮಣಿವೆರಸಿ ಬಹು ಪಯ ಣದಲಿ ಬಂದರು ಮೇಲೆ ಕೌರವ ರಿದಿರುಗೊಂಡರು ಕೂಡೆ ಹೊಕ್ಕರು ಹಸ್ತಿನಾಪುರವ

kadaḍu tiḷidudu kāryagatigā spadava koṭṭaru baḷika sumuhū rtadali payaṇava māḍidaru pāṃcāladaḷasahita yadu śirōmaṇiverasi bahu paya ṇadali baṃdaru mēle kaurava ridirugoṃḍaru kūḍe hokkaru hastināpurava

Report an error

ಬಂದು ಕಾಣಿಕೆಗೊಟ್ಟು ಗಂಗಾ ನಂದನನ ಧೃತರಾಷ್ಟ್ರನನು ಸಾ ನಂದದಲಿ ಗಾಂಧಾರಿಯನು ಗುರುಗೌತಮಾದಿಗಳ ವಂದಿಸಿದರಿವರೈವರವರಾ ನಂದಜಲ ಪರಿಲುಳಿತ ನಯನಾ ಸ್ಪಂದ ಪರಿತೋಷದಲಿ ತೆಗೆದಪ್ಪಿದರು ಪಾಂಡವರ

baṃdu kāṇikegoṭṭu gaṃgā naṃdanana dhr̥tarāṣṭrananu sā naṃdadali gāṃdhāriyanu gurugautamādigaḷa vaṃdisidarivaraivaravarā naṃdajala pariluḷita nayanā spaṃda paritōṣadali tegedappidaru pāṃḍavara

Report an error

ಕರೆಸಿ ತನ್ನ ಕುಮಾರಕರ ನೂ ರ್ವರನು ಕಾಣಿಸಿದನು ಪರಸ್ಪರ ಪರಮ ಸಂಪ್ರೀತಿಗಳ ನಿಬಿಡಾಲಿಂಗನೋತ್ಸವದ ದರುಶನೋಚಿತ ಮಾನ್ಯಮಾನ ಸ್ಫುರಣದಲಿ ವಿಸ್ತರಿಸಿ ಸೈಂಧವ ಗುರುತನುಜ ರಾಧೇಯ ಸೌಬಲರಪ್ಪಿದರು ನೃಪನ

karesi tanna kumārakara nū rvaranu kāṇisidanu paraspara parama saṃprītigaḷa nibiḍāliṃganōtsavada daruśanōcita mānyamāna sphuraṇadali vistarisi saiṃdhava gurutanuja rādhēya saubalarappidaru nr̥pana

Report an error

ಯಾದವರು ಪಾಂಚಾಲರಲಿ ಸಂ ಪಾದಿಸಿದುದನ್ಯೋನ್ಯ ಘನ ಸಂ ವಾದ ಸುಖ ಸಂಪ್ರೀತಿ ಮೆರೆಯಲ್ಕಿಷ್ಟಸತ್ಕಾರ ಆದುದುತ್ಸವ ಜನಜನಿತ ಹರು ಷೋದಧಿಯ ಹೊನಲಿನಲಿ ಹಿಂದಣ ಭೇದ ಕರ್ದಮವಡಗಿ ಹೋಯ್ತವನೀಶ ಕೇಳೆಂದ

yādavaru pāṃcālarali saṃ pādisidudanyōnya ghana saṃ vāda sukha saṃprīti mereyalkiṣṭasatkāra ādudutsava janajanita haru ṣōdadhiya honalinali hiṃdaṇa bhēda kardamavaḍagi hōytavanīśa kēḷeṃda

Report an error

ವೀತಭಯರನ್ಯೋನ್ಯ ಪರಮ ಪ್ರೀತಿಗಳ ಬೆಳವಿಗೆಯಲಿದ್ದರು ಭೂತಳಾಧಿಪರೈದು ಸಂವತ್ಸರಗಳೊಂದಾಗಿ ಖ್ಯಾತವಿದು ಪಾಂಚಾಲಪುರದೊಳ ತೀತವಾಯಿತ್ತೊಂದು ವರುಷವ ಭೀತಿ ಧರ್ಮಸುತಂಗೆ ಮೂವತ್ತಾರು ಸಮಯವಾಯ್ತು

vītabhayaranyōnya parama prītigaḷa beḷavigeyaliddaru bhūtaḷādhiparaidu saṃvatsaragaḷoṃdāgi khyātavidu pāṃcālapuradoḷa tītavāyittoṃdu varuṣava bhīti dharmasutaṃge mūvattāru samayavāytu

Report an error

Illustration: Verse & Place (Project-owned).