ಬಲಿಮಥನ ಫಲುಗುಣರು ಸಹಿತ ಗ್ಗಳೆಯನೇಕಾಂಗದಲಿ ರಣದಲಿ ಕಲಿ ಜರಾಸಂಧನನ ಸೀಳಿದು ಬಿಸುಟನಾ ಭೀಮ
balimathana phaluguṇaru sahita ggaḷeyanēkāṃgadali raṇadali kali jarāsaṃdhanana sīḷidu bisuṭanā bhīma
ಸಭಾ ಪರ್ವ — ಸಂಧಿ ೨ · ಸಭಾ ಪರ್ವ — ಸಂಧಿ ೨
sabhā parva — saṃdhi 2
The complete sabha parva · sandhi 2 in Kannada.
129 passagesKannada with transliteration
Invocation
ಬಲಿಮಥನ ಫಲುಗುಣರು ಸಹಿತ ಗ್ಗಳೆಯನೇಕಾಂಗದಲಿ ರಣದಲಿ ಕಲಿ ಜರಾಸಂಧನನ ಸೀಳಿದು ಬಿಸುಟನಾ ಭೀಮ
balimathana phaluguṇaru sahita ggaḷeyanēkāṃgadali raṇadali kali jarāsaṃdhanana sīḷidu bisuṭanā bhīma
ಕೇಳು ಜನಮೇಜಯ ಧರಿತ್ರೀ ಪಾಲ ಮಂತ್ರಾಳೋಚನೆಗೆ ಭೂ ಪಾಲ ಕರೆಸಿದನನುಜರನು ಧೌಮ್ಯಾದಿ ಮಂತ್ರಿಗಳ ಮೇಳವದ ತನಿವೆಳಗುಗಳ ಮಣಿ ಮೌಳಿ ಮಂಡಿತರುಪ್ಪರದ ಪಡಿ ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ
kēḷu janamējaya dharitrī pāla maṃtrāḷōcanege bhū pāla karesidananujaranu dhaumyādi maṃtrigaḷa mēḷavada taniveḷagugaḷa maṇi mauḷi maṃḍitarupparada paḍi sūḷu pāyavadhārinali hokkaru sabhā sthaḷava
ದ್ರುಪದ ಧೈಷ್ಟದ್ಯುಮ್ನ ಮತ್ಸ್ಯಾ ಧಿಪತಿ ಕೇಕಯ ಪಾಂಡವಾತ್ಮಜ ರು ಪತಿಕಾರ‍್ಯ ವಿಚಾರನಿಷ್ಠರು ಬಂದರೋಲಗಕೆ ನೃಪತಿ ಹದನೇನಮರ ಮುನಿಪರ ನುಪಚರಿತ ಮಂತ್ರಾರ್ಥ ಸಿದ್ಧಿಗೆ ರಪಣ ನಮಗುಂಟೀಗ ಬೆಸಸೆಂದರು ಯುಧಿಷ್ಠಿರಗೆ
drupada dhaiṣṭadyumna matsyā dhipati kēkaya pāṃḍavātmaja ru patikārya vicāraniṣṭharu baṃdarōlagake nr̥pati hadanēnamara munipara nupacarita maṃtrārtha siddhige rapaṇa namaguṃṭīga besaseṃdaru yudhiṣṭhirage
ಧರೆ ನಮಗೆ ವಶವರ್ತಿ ಖಂಡೆಯ ಸಿರಿ ನಮಗೆ ಮೈವಳಿ ಯುಧಿಷ್ಠಿರ ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ ಮರೆಸಿತೆಂಬುದು ಲೋಕವೀ ನಿ ಬ್ಬರದ ಹೆಸರೆಮಗಿಂದು ಬೊಪ್ಪನ ಸಿರಿಯನೇವಣ್ಣಿಸುವೆನೆಂದನು ಸುಯ್ದು ಯಮಸೂನು
dhare namage vaśavarti khaṃḍeya siri namage maivaḷi yudhiṣṭhira narasutana naḷa nahuṣa nr̥ga bharatādi bhūmipara maresiteṃbudu lōkavī ni bbarada hesaremagiṃdu boppana siriyanēvaṇṇisuveneṃdanu suydu yamasūnu
ಅಲ್ಲಿ ಸುರರಲಿ ಸುಪ್ರತಿಷ್ಠಿತ ನಲ್ಲಗಡ ಪಾಂಡು ಕ್ಷಿತೀಶ್ವರ ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ ಇಲ್ಲಿ ರಚಿಸಿದ ರಾಜಸೂಯದಿ ನೆಲ್ಲವಹುದಯ್ಯಂಗೆ ಮಖವಿದು ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ
alli surarali supratiṣṭhita nallagaḍa pāṃḍu kṣitīśvara nilli vaibhavakēnu phala nāvavara sadgatige illi racisida rājasūyadi nellavahudayyaṃge makhavidu durlabhavu kaikoṃḍevāvudu maṃtravidakeṃda
ಆಗಲಿದಕೇನರಸ ದೀಕ್ಷಿತ ನಾಗು ನಿರುಪಮ ರಾಜಸೂಯಕೆ ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆಂದು ಆ ಗರುವರುಬ್ಬೇಳೆ ತಪ್ಪೇ ನಾಗಲೀ ಗೋವಿಂದ ಮತದಲಿ ತೂಗಿ ನೋಡುವೆವಿದರ ತೂಕವನೆಂದನಾ ಭೂಪ
āgalidakēnarasa dīkṣita nāgu nirupama rājasūyake bhāga dhanavanu bhūmipara sadedeḷedu taheveṃdu ā garuvarubbēḷe tappē nāgalī gōviṃda matadali tūgi nōḍuvevidara tūkavaneṃdanā bhūpa
ಕಳುಹಿದನು ಸಾರಥಿಯನಾ ರಥ ಕೆಲವು ದಿವಸಕೆ ಕೃಷ್ಣಭವನ ಸ್ಥಳದ ಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ ಒಳಗೆ ಬಂದನು ಪಾವುಡವ ಮುಂ ದಿಳುಹಿದನು ಕೃಷ್ಣಂಗೆ ಪಾಂಡವ ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ
kaḷuhidanu sārathiyanā ratha kelavu divasake kr̥ṣṇabhavana sthaḷada hora bāheyali cācitu capaḷa gamanadali oḷage baṃdanu pāvuḍava muṃ diḷuhidanu kr̥ṣṇaṃge pāṃḍava tilakanaṭṭida hadana binnaha māḍidanu baḷika
ತಿಳಿದನಲ್ಲಿಯ ರಾಜಕಾರ್ಯದ ನೆಲೆಯನಕ್ರೂರಾದಿ ಸಚಿವರ ತಿಳುಹಿದನು ಶಿಶುಪಾಲ ಕಂಸನ ಮಾವನಿಂತಿವರ ಕೊಲುವಡಿದು ಹದ ನಮ್ಮ ಭಾವನ ನಿಳಯದುತ್ಸಹ ಸೌಮನಸ್ಯವ ಬಳಸುವರೆ ಹೊತ್ತಿದು ಮನೋರಥ ಸಿದ್ಧಿ ನಮಗೆಂದ
tiḷidanalliya rājakāryada neleyanakrūrādi sacivara tiḷuhidanu śiśupāla kaṃsana māvaniṃtivara koluvaḍidu hada namma bhāvana niḷayadutsaha saumanasyava baḷasuvare hottidu manōratha siddhi namageṃda
ಎಂದು ವಸುದೇವಾದಿ ಯಾದವ ವೃಂದವನು ಬಲಭದ್ರರಾಮನ ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ ಬಂದನಿಂದ್ರಪ್ರಸ್ಥ ಪಟ್ಟಣ ಕಂದು ವೊಸಗೆಯ ಗುಡಿಯ ತೋರಣ ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ
eṃdu vasudēvādi yādava vr̥ṃdavanu balabhadrarāmana hiṃdirisi baḷikiṃdrasēnana kūḍe volavinali baṃdaniṃdraprastha paṭṭaṇa kaṃdu vosageya guḍiya tōraṇa diṃda kannaḍi kaḷaśadali koṃḍāḍidaru hariya
ಪುರಕೆ ಬಿಜಯಂಗೈಸಿ ತಂದರು ಹರಿಯನರಮನೆಗನಿಬರಂತಃ ಪುರದ ಕಾಣಿಕೆಗೊಂಡು ಬಾಂಧವ ಜನವನುಚಿತದಲಿ ಹರಸಿ ಮಧುರ ಪ್ರೀತಿಯಿಂದಾ ದರಿಸಿ ಮಂತ್ರಾಳೋಚನೆಯ ಮಂ ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ
purake bijayaṃgaisi taṃdaru hariyanaramaneganibaraṃtaḥ purada kāṇikegoṃḍu bāṃdhava janavanucitadali harasi madhura prītiyiṃdā darisi maṃtrāḷōcaneya maṃ diradoḷēkāṃtadali bhūpatigeṃdanasurāri
ಏನು ಕರೆಸಿದಿರೈ ಪ್ರಯೋಜನ ವೇನು ನಿಮ್ಮುತ್ಸಾಹ ಶಕ್ತಿಯೊ ಳೇನು ದುರ್ಘಟವೇನು ಶಂಕಿತವೇನು ಸಂಸ್ಖಲಿತ ದಾನವರ ಕೌರವರ ವೈರದೊ ಳೇನು ವಿಗ್ರಹವಿಲ್ಲಲೇ ಹದ ನೇನೆನಲು ಕೃಷ್ಣಂಗೆ ಬಿನ್ನಹ ಮಾಡಿದನು ನೃಪತಿ
ēnu karesidirai prayōjana vēnu nimmutsāha śaktiyo ḷēnu durghaṭavēnu śaṃkitavēnu saṃskhalita dānavara kauravara vairado ḷēnu vigrahavillalē hada nēnenalu kr̥ṣṇaṃge binnaha māḍidanu nr̥pati
ದನುಜರಲಿ ಕುರುಸೇನೆಯಲಿ ಭಯ ವೆನಗೆ ಭಾರಿಯೆ ನಿಮ್ಮ ಘನ ಪದ ವನಜವಿದು ಸೀಸಕವಲೇ ತನ್ನುತ್ತಮಾಂಗದಲಿ ಮುನಿಯ ಹೇಳಿಕೆ ಬೊಪ್ಪಗಮರೇಂ ದ್ರನಲಿ ಸಮರಸವಿಲ್ಲ ಗಡ ನ ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆಂದ
danujarali kurusēneyali bhaya venage bhāriye nimma ghana pada vanajavidu sīsakavalē tannuttamāṃgadali muniya hēḷike boppagamarēṃ dranali samarasavilla gaḍa na mminibarali sāmarthyaviddudakēnu phalaveṃda
ಪಿತನ ಪರಮಪ್ರೀತಿಗುನ್ನತ ಗತಿಗೆ ನಿರ್ಮಳ ರಾಜಸೂಯ ಕ್ರತುವೆ ಸಾಧನವೆಂದು ಮುನಿಯುಪದೇಶಿಸಿದ ತನಗೆ ಕ್ರತು ಮಹಾಕ್ರತು ಸಕಲಧರಣೀ ಪತಿಗಳರ್ಥವ ಗುಣದಲೀಯರು ವ್ರತವೆನಗೆ ಸಂಕಲ್ಪವಾಯ್ತಿದಕೇನು ಹದನೆಂದ
pitana paramaprītigunnata gatige nirmaḷa rājasūya kratuve sādhanaveṃdu muniyupadēśisida tanage kratu mahākratu sakaladharaṇī patigaḷarthava guṇadalīyaru vratavenage saṃkalpavāytidakēnu hadaneṃda
ತಿರುಗಿದರೆ ಸಂಕಲ್ಪ ಹಾನಿಯ ಪರಮ ಪಾತಕವಿದು ಮಹಾ ನಿ ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ ಹರಹುವನು ಪರಿಹಾಸ್ಯಮಯ ಸಾ ಗರವ ದಾಟಿಸು ಜೀಯ ಭವ ಸಾ ಗರದಿನಿದು ಮಿಗಿಲೇ ಮುರಾಂತಕಯೆಂದನಾ ಭೂಪ
tirugidare saṃkalpa hāniya parama pātakavidu mahā ni ṣṭhurada makhavinnamara munipati dēvalōkadali harahuvanu parihāsyamaya sā garava dāṭisu jīya bhava sā garadinidu migilē murāṃtakayeṃdanā bhūpa
ನಕ್ಕನಸುರವಿರೋಧಿ ಮುನಿ ಹಾ ಯಿಕ್ಕಿದನಲಾ ಬಲೆಯನಕಟಾ ಸಿಕ್ಕಿದಿರಲಾ ಸ್ವಾಮಿ ದ್ರೋಹರು ಸದರವೇ ನೃಪರು ಅಕ್ಕಜರ ಮಖವಿದರ ಚೂಣಿಗೆ ಚುಕ್ಕಿಯಾಯಿತು ಮನ ಮಹೀಶನ ಮಕ್ಕಳಾಟಿಕೆಯಾಯ್ತೆನುತ ತೂಗಿದನು ಸಿರಿಮುಡಿಯ
nakkanasuravirōdhi muni hā yikkidanalā baleyanakaṭā sikkidiralā svāmi drōharu sadaravē nr̥paru akkajara makhavidara cūṇige cukkiyāyitu mana mahīśana makkaḷāṭikeyāytenuta tūgidanu sirimuḍiya
ಕೆದರಿ ಸಪ್ತದ್ವೀಪ ಪತಿಗಳ ಸದೆದು ರಚಿಸುವ ರಾಜಸೂಯದ ಹದನನಂಗೈಸುವನದಾರೀ ವರ್ತಮಾನದಲಿ ಸುದತಿಯರ ಸೂಳೆಯರ ಮುಂದು ಬ್ಬಿದೆಯಲಾ ನಾರದನ ಘಲ್ಲಣೆ ಗಿದು ಸುದುರ್ಘಟವಿಂದು ಬಿದ್ದ ವಿಘಾತಿ ಬಲುಹೆಂದ
kedari saptadvīpa patigaḷa sadedu racisuva rājasūyada hadananaṃgaisuvanadārī vartamānadali sudatiyara sūḷeyara muṃdu bbideyalā nāradana ghallaṇe gidu sudurghaṭaviṃdu bidda vighāti baluheṃda
ಮೊದಲಲೇ ನಿಮ್ಮವರು ನಿಮ್ಮ ಭ್ಯುದಯವನು ಸೇರುವರೆ ಕೌರವ ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು ಕುದುಕುಳಿಗಳೀಚೆಯಲಿ ಕಂಸನ ಮದಮುಖನ ಪರಿವಾರವಿದೆ ದೂ ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆಂದ
modalalē nimmavaru nimma bhyudayavanu sēruvare kaurava radaroḷaggada karṇa śakuni jayadrathādigaḷu kudukuḷigaḷīceyali kaṃsana madamukhana parivāravide dū radali magadhana horeyaladanē baṇṇisuveneṃda
ಕಾಲ ಯವನಾ ದಂತವಕ್ರ ನೃ ಪಾಲರಲಿ ದುರುದುಂಬಿಯೈ ಶಿಶು ಪಾಲ ಪೌಂಡ್ರಕರೆಂಬರಿಗೆ ಸಮದಂಡಿಯೆಮ್ಮೊಡನೆ ಖೂಳರೀರ್ವರು ಹಂಸ ಡಿಬಿಕರು ಸಾಲುವನ ಮುರ ನರಕರಾಳನ ಮೇಳವವನೇನೆಂಬೆನೈ ಭೂಪಾಲ ಕೇಳೆಂದ
kāla yavanā daṃtavakra nr̥ pālarali duruduṃbiyai śiśu pāla pauṃḍrakareṃbarige samadaṃḍiyemmoḍane khūḷarīrvaru haṃsa ḍibikaru sāluvana mura narakarāḷana mēḷavavanēneṃbenai bhūpāla kēḷeṃda
ಕೆಲವರಿದರೊಳು ನಮ್ಮ ಕೈಯಲಿ ಕೊಲೆಗೆ ಭಂಗಕೆ ಬಂದು ಬಿಟ್ಟರು ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು ಬಳಿಕೆಮಗೆ ಬಲವದ್ವಿರೋಧದ ತೊಳಸು ಬಿದ್ದುದು ತೋಟಿಗಾರದೆ ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆಂದ
kelavaridaroḷu namma kaiyali kolege bhaṃgake baṃdu biṭṭaru kelake sarivavanalla malevara māri māgadhanu baḷikemage balavadvirōdhada toḷasu biddudu tōṭigārade jaladhi madhyadalūra kaṭṭidevarasa kēḷeṃda
ಮಾವದೇವನ ಮುರಿದಡಾತನ ದೇವಿಯರು ಬಳಿಕೆಮ್ಮ ದೂರಿದ ರಾ ವಿಗಡ ಮಗಧಂಗೆ ಮಧುರೆಯ ಮೇಲೆ ದಂಡಾಯ್ತು ನಾವು ನಾನಾ ದುರ್ಗದಲಿ ಸಂ ಭಾವಿಸಿದೆವಾತನನು ನಿಮ್ಮೊಡ ನಾವು ಕೂಡಿದಡಾತ ಮುನಿಯನೆ ಭೂಪ ಕೇಳೆಂದ
māvadēvana muridaḍātana dēviyaru baḷikemma dūrida rā vigaḍa magadhaṃge madhureya mēle daṃḍāytu nāvu nānā durgadali saṃ bhāvisidevātananu nimmoḍa nāvu kūḍidaḍāta muniyane bhūpa kēḷeṃda
ಅರಸ ಕೇಳ್ನೂರೊಂದು ವಂಶದ ಧರಣಿಪರು ಮಾಗಧನ ಮನೆಯಲಿ ಸೆರೆಯಲೈದರೆ ಬಿಡಿಸಬೇಕು ನಿರಂತರಾಯದಲಿ ದುರುಳನವ ಭಗದತ್ತ ಬಾಹ್ಲಿಕ ನರಕ ವೃದ್ಧಕ್ಷತ್ರ ಮೊದಲಾ ದರಸುಗಳು ಬಲಗರ್ವಿತರಸಂಖ್ಯಾತರಹರೆಂದ
arasa kēḷnūroṃdu vaṃśada dharaṇiparu māgadhana maneyali sereyalaidare biḍisabēku niraṃtarāyadali duruḷanava bhagadatta bāhlika naraka vr̥ddhakṣatra modalā darasugaḷu balagarvitarasaṃkhyātarahareṃda
ಅವರಿರಲಿ ಮತ್ತಿತ್ತಲುತ್ತರ ದವನಿಪರು ಧಕ್ಕೆಡರು ಧರಣೀ ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು ರವಿಯುದಯಗಿರಿ ಶಿಖರದಲಿ ಪಾ ರ್ಥಿವರು ದಕ್ಷಿಣ ಚೋಳ ಪಾಂಡ್ಯ ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆಂದ
avarirali mattittaluttara davaniparu dhakkeḍaru dharaṇī dhavaroḷadhika doṭhāraraggada cīna bōṭakaru raviyudayagiri śikharadali pā rthivaru dakṣiṇa cōḷa pāṃḍya pravararade vikrama hiraṇya madāṃdharavareṃda
ಔಕಿ ಚತುರಂಗದ ನೃಪಾಲರ ನೂಕಬಹುದಿದಕೇನು ಯಾಗ ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ ಈ ಕುಠಾರರು ಕದನ ಮುಖದವಿ ವೇಕಿಗಳು ಶಿಶುಪಾಲ ಮಾಗಧ ರಾಕೆವಾಳರು ವೈರಿರಾಯರೊಳರಸ ಕೇಳೆಂದ
auki caturaṃgada nr̥pālara nūkabahudidakēnu yāga vyākaraṇakivaribbarē dūṣakaru dharaṇiyali ī kuṭhāraru kadana mukhadavi vēkigaḷu śiśupāla māgadha rākevāḷaru vairirāyaroḷarasa kēḷeṃda
ಅಧಿಕರಿವರಿಬ್ಬರೊಳಗಾ ಮಾ ಗಧನೆ ಬಲುಗೈ ರಾಜಸೂಯಕೆ ಸದರವನು ನಾ ಕಾಣೆನಾತನ ಖಂಡೆಯದ ಮೊನೆಗೆ ನಿಧನವಲ್ಲದೆ ಧನವ ನೆರಹುವ ಹದನ ನೀನೇ ಕಾಂಬೆಯಾತನ ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆಂದ
adhikarivaribbaroḷagā mā gadhane balugai rājasūyake sadaravanu nā kāṇenātana khaṃḍeyada monege nidhanavallade dhanava nerahuva hadana nīnē kāṃbeyātana vadheyu hariyadu namma kaiyali rāya kēḷeṃda
ಕಂಸನನು ಕೆಡಹಿದೆವು ಮುರಿದೆವು ಹಂಸ ಡಿಬಿಕರ ಪೌಂಡ್ರಕರ ನಿ ರ್ವಂಶವೆನೆ ಸವರಿದೆವು ಮುರ ನರಕಾದಿ ದಾನವರ ಹಿಂಸೆಯಿವನಲಿ ಹರಿಯದಿವ ನಿ ಸ್ಸಂಶಯನು ವಿಜಯದಲಿ ಯಾಗ ಧ್ವಂಸಕನ ನೆರೆ ಮುರಿವುಪಾಯವ ಕಾಣೆ ನಾನೆಂದ
kaṃsananu keḍahidevu muridevu haṃsa ḍibikara pauṃḍrakara ni rvaṃśavene savaridevu mura narakādi dānavara hiṃseyivanali hariyadiva ni ssaṃśayanu vijayadali yāga dhvaṃsakana nere murivupāyava kāṇe nāneṃda
ಈಸು ಘನವೇ ಕೃಷ್ಣ ಯಾಗ ದ್ವೇಷಿಗಳು ಪಿರಿದಾಗಲೆವಗಿ ನ್ನೈಸಲೇ ವರ ರಾಜಸೂಯಾಧ್ವರಕೆ ಸಂನ್ಯಾಸ ಈಸು ದೈತ್ಯರು ನಿನ್ನ ಕೈಯಲಿ ಘಾಸಿಯಾದರು ಮಗಧನೊಬ್ಬನು ಮೀಸಲಳಿಯನು ಗಡ ಮಹಾದೇವೆಂದನಾ ಭೂಪ
īsu ghanavē kr̥ṣṇa yāga dvēṣigaḷu piridāgalevagi nnaisalē vara rājasūyādhvarake saṃnyāsa īsu daityaru ninna kaiyali ghāsiyādaru magadhanobbanu mīsalaḷiyanu gaḍa mahādēveṃdanā bhūpa
ಅಹಹ ಯಾಗವ್ರತಕೆ ಭಂಗವ ತಹುದೆ ಜೀಯ ಮುರಾರಿ ಕೃಪೆ ಸ ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ ಬಹಳ ಬಲನೇ ಮಾಗಧನು ನಿನ ಗಹಿತನೇ ತಾ ವೀಳೆಯವ ಸುರ ಮಹಿಳೆಯರ ತೋಳಿನಲಿ ತೋರುವೆನೆಂದನಾ ಭೀಮ
ahaha yāgavratake bhaṃgava tahude jīya murāri kr̥pe sa nnihitavāgali sāku nōḍā tanna kaiguṇava bahaḷa balanē māgadhanu nina gahitanē tā vīḷeyava sura mahiḷeyara tōḷinali tōruveneṃdanā bhīma
ಮುರುಕಿಸುವ ಮನ್ನೆಯರ ನಾಳವ ಮುರಿವೆನಖಿಳ ದ್ವೀಪಪತಿಗಳ ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ ಕರುಬನೇ ಮಾಗಧನು ರಣದಲಿ ತರಿವೆನಾತನ ನಿಮ್ಮ ಯಾಗದ ಹೊರಿಗೆ ತನ್ನದು ಕರೆಸು ಋಷಿಗಳನೆಂದನಾ ಭೀಮ
murukisuva manneyara nāḷava murivenakhiḷa dvīpapatigaḷa terisuvenu horisuvenu nettiyalavara vastugaḷa karubanē māgadhanu raṇadali tarivenātana nimma yāgada horige tannadu karesu r̥ṣigaḷaneṃdanā bhīma
ಅಹುದಲೇ ಬಳಿಕೇನು ಯಾಗೋ ಪಹರಣಕೆ ಸಂನ್ಯಾಸ ಗಡ ವಿ ಗ್ರಹದಲಧಿಕರು ಗಡ ಜರಾಸಂಧಾದಿ ನಾಯಕರು ಮಹಿಯ ಮನ್ನೆಯರಧ್ವರವ ನಿ ರ್ವಹಿಸಲೀಯರು ಗಡ ಶಿವಾ ಶಿವ ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ
ahudalē baḷikēnu yāgō paharaṇake saṃnyāsa gaḍa vi grahadaladhikaru gaḍa jarāsaṃdhādi nāyakaru mahiya manneyaradhvarava ni rvahisalīyaru gaḍa śivā śiva rahava māḍidanarasaneṃdanu naguta kalipārtha
ಏಕೆ ಗಾಂಡಿವವಿದು ಶರಾವಳಿ ಯೇಕೆ ಇಂದ್ರಾಗ್ನೇಯ ವಾರುಣ ವೇಕೆ ರಥವಿದು ರಾಮಭೃತ್ಯಧ್ವಜ ವಿಳಾಸವಿದು ಲೋಕರಕ್ಷಾ ಶಿಕ್ಷೆಗಿಂತಿವು ಸಾಕು ಹುಲುಮಂಡಳಿಕರಿವದಿರ ನೂಕಲರಿಯದೆ ಜೀಯ ಜಂಜಡವೇಕೆ ಬೆಸಸೆಂದ
ēke gāṃḍivavidu śarāvaḷi yēke iṃdrāgnēya vāruṇa vēke rathavidu rāmabhr̥tyadhvaja viḷāsavidu lōkarakṣā śikṣegiṃtivu sāku hulumaṃḍaḷikarivadira nūkalariyade jīya jaṃjaḍavēke besaseṃda
ನೆರಹು ಹಾರುವರನು ದಿಗಂತಕೆ ಹರಹು ನಮ್ಮನು ಬಂಧುವರ್ಗವ ಕರೆಸು ರಚಿಸಲಿ ಕಾಣಬೇಹುದು ಕದನ ಕಾಮುಕರ ಸೊರಹಲರಿಯೆನು ಸಾಧುಗಳನಾ ದರಿಸುವೆನು ಚಾವಟೆಯರನು ಚಿ ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ
nerahu hāruvaranu digaṃtake harahu nammanu baṃdhuvargava karesu racisali kāṇabēhudu kadana kāmukara sorahalariyenu sādhugaḷanā darisuvenu cāvaṭeyaranu ci mmuriya bigisuvenamariyara kaḍegaṇṇa kaṇṇiyali
ಅಹುದು ಭೀಮಾರ್ಜುನರ ನುಡಿ ನಿ ರ್ವಹಿಸದೇ ಬಳಿಕೇನು ನಿಜಕುಲ ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ ಗಹನವೇ ಗಂಡುಗರಿಗಿದಿರಾ ರಹಿತ ಬಲವಿನ್ನರಸ ಚಿಂತಾ ಮಹಿಳೆಗವಸರವಲ್ಲ ಮನ ಮಾಡೆಂದನಸುರಾರಿ
ahudu bhīmārjunara nuḍi ni rvahisadē baḷikēnu nijakula vihitavallā vinaya vikrama vidye nr̥panīti gahanavē gaṃḍugarigidirā rahita balavinnarasa ciṃtā mahiḷegavasaravalla mana māḍeṃdanasurāri
ಎಮಗೆ ಭೀಮಾರ್ಜುನರ ಕೊಡು ರಿಪು ರಮಣಿಯರ ಸೀಮಂತ ಮಣಿಗಳ ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ ಸಮರ ಜಯವಿನ್ನಾಯ್ತು ಯಜ್ಞೋ ದ್ಯಮಕೆ ನಿಷ್ಪ್ರತ್ಯೂಹವಿನ್ನು ಭ್ರಮೆಯ ಮಾಡದಿರೆಂದು ನೃಪತಿಗೆ ನುಡಿದನಸುರಾರಿ
emage bhīmārjunara koḍu ripu ramaṇiyara sīmaṃta maṇigaḷa nimiṣadali tarisuvenu harisuvenahita bhūmipara samara jayavinnāytu yajñō dyamake niṣpratyūhavinnu bhrameya māḍadireṃdu nr̥patige nuḍidanasurāri
ಕಂಗಳನುಜರ ಚಿತ್ರ ನೀವೆ ನ್ನಂಗವಣೆಗಿನ್ನೇನು ಭಯವಾ ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ ಸಂಗರದ ಜಯ ನಿನ್ನದಲ್ಲಿಯ ಭಂಗ ನಿನ್ನದು ಭಕ್ತ ಜನದನು ಸಂಗಿ ನೀನಿರಲೇನು ನಮಗರಿದೆಂದನಾ ಭೂಪ
kaṃgaḷanujara citra nīve nnaṃgavaṇeginnēnu bhayavā vaṃgadali naṃbihevalē nimmaṃghri paṃkajava saṃgarada jaya ninnadalliya bhaṃga ninnadu bhakta janadanu saṃgi nīniralēnu namagarideṃdanā bhūpa
ವಿಗಡ ಯಾಗಕೆ ಸಕಲ ರಾಯರು ಹಗೆ ಮರುತ್ತನು ಕಾರ್ತವೀರ‍್ಯಾ ದಿಗಳು ಕೆಲವರಶಕ್ತರಾದರು ರಾಜಸೂಯದಲಿ ಬಗೆಯಲಿದು ದುಷ್ಕಾಲವಸುರರೊ ಳಗಡು ಮಾಗಧನವನ ಮುರಿದರೆ ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ
vigaḍa yāgake sakala rāyaru hage maruttanu kārtavīryā digaḷu kelavaraśaktarādaru rājasūyadali bageyalidu duṣkālavasuraro ḷagaḍu māgadhanavana muridare sugama nimmayyaṃge surapadaveṃdanasurāri
ಆರವನು ಹಿರಿದಾಗಿ ನೀ ಕೈ ವಾರಿಸುವೆ ಕಮಲಾಕ್ಷ ಮಾಗಧ ನಾರುಭಟೆ ತಾನೇನು ವರವೋ ಸಹಜ ವಿಕ್ರಮವೊ ವೀರರಿಗೆ ಸಿಡಿಲಂತೆ ಸಕಲ ಮ ಹೀ ರಮಣರಿದರೊಳಗೆ ನೃಪಮಖ ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ
āravanu hiridāgi nī kai vārisuve kamalākṣa māgadha nārubhaṭe tānēnu varavō sahaja vikramavo vīrarige siḍilaṃte sakala ma hī ramaṇaridaroḷage nr̥pamakha vairi gaḍa besaseṃdaḍeṃdanu naguta muravairi
ಧರಣಿಪತಿ ಕೇಳೈ ಬೃಹದ್ರಥ ನರಸು ಮಾಗಧಮಂಡಲಕೆ ತ ತ್ಪುರಿ ಗಿರಿವ್ರಜಮೆಂಬುದಲ್ಲಿ ಸಮಸ್ತ ವಿಭವದಲಿ ಧರೆಯ ಪಾಲಿಸುತಿದ್ದ ನಾತಂ ಗರಸಿಯರು ಸೇರಿದರು ಕಾಶೀ ಶ್ವರನ ತನುಜೆಯರಿಬ್ಬರದು ಭುತ ರೂಪು ಗುಣಯುತರು
dharaṇipati kēḷai br̥hadratha narasu māgadhamaṃḍalake ta tpuri girivrajameṃbudalli samasta vibhavadali dhareya pālisutidda nātaṃ garasiyaru sēridaru kāśī śvarana tanujeyaribbaradu bhuta rūpu guṇayutaru
ಅವರೊಡನೆ ಸುಖ ಸತ್ಕಥಾ ಸಂ ಭವ ವಿನೋದದಲಿದ್ದನೀ ವೈ ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು ಅವನಿಪತಿ ವೈರಾಗ್ಯದಲಿ ರಾ ಜ್ಯವನು ಬಿಸುಟು ತಪಃಪ್ರಭಾವ ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ
avaroḍane sukha satkathā saṃ bhava vinōdadaliddanī vai bhava phalavaputrarige bahu duḥkhōpacayaveṃdu avanipati vairāgyadali rā jyavanu bisuṭu tapaḥprabhāva vyavaharaṇeyali tanuva nūkuvenenuta horavaṃṭa
ಊರ ಹೊರವಡುವುತ್ತ ಕಂಡನು ಪಾರಿಕಾಂಕ್ಷಿಯನೊಬ್ಬನನು ಮುನಿ ವೀರಕಾಂಕ್ಷಿಯನಾಂಗಿರಾತ್ಮಜ ಚಂಡ ಕೌಶಿಕನ ನಾರಿಯರು ಸಹಿತವನ ಚರಣಾಂ ಭೋರುಹಕ್ಕಭಿನಮಿಸಲತಿ ವಿ ಸ್ತಾರಿಸಿದನಾಶಿರ್ವಚನವನು ಮುನಿ ನೃಪಾಲಂಗೆ
ūra horavaḍuvutta kaṃḍanu pārikāṃkṣiyanobbananu muni vīrakāṃkṣiyanāṃgirātmaja caṃḍa kauśikana nāriyaru sahitavana caraṇāṃ bhōruhakkabhinamisalati vi stārisidanāśirvacanavanu muni nr̥pālaṃge
ಏನಿದರಸನೆ ವದನದಲಿ ದು ಮ್ಮಾನವೆನಲನಪತ್ಯತಾ ಚಿಂ ತಾನುರೂಪದ ದುಗುಡವಿದು ನಿಮ್ಮಂಘ್ರಿ ಸೇವೆಯಲಿ ಹಾನಿ ದುಷ್ಕೃತಕಹುದಲೇ ಸುತ ಹೀನ ರಾಜ್ಯವ ಬಿಸುಟೆನೆನಗೀ ಕಾನನದ ಸಿರಿ ಸಾಕೆನುತ ಬಿಸುಸುಯ್ದನಾ ಭೂಪ
ēnidarasane vadanadali du mmānavenalanapatyatā ciṃ tānurūpada duguḍavidu nimmaṃghri sēveyali hāni duṣkr̥takahudalē suta hīna rājyava bisuṭenenagī kānanada siri sākenuta bisusuydanā bhūpa
ಐಸಲೇ ಸುತಹೀನ ರಾಜ್ಯ ವಿ ಳಾಸ ನಿಷ್ಫಲವಹುದಲೇ ಸಂ ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ ಆ ಸಮರ್ಥ ಮುನೀಂದ್ರನಂತ ರ್ಭಾಸಿತಾತ್ಮ ಧ್ಯಾನಸುಖ ವಿ ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ
aisalē sutahīna rājya vi ḷāsa niṣphalavahudalē saṃ tōṣavē sutalābhavādare holleyēnidake ā samartha munīṃdranaṃta rbhāsitātma dhyānasukha vi nyāsadiralaṃkadali biddudu madhura cūtaphala
ಕಂದೆರೆದು ಮುನಿ ಬಳಿಕ ಭೂಪತಿ ಗೆಂದನಿದ ಕೋ ಪುತ್ರಸಂತತಿ ಗೆಂದು ಸಾಧನವಿದನು ಕೊಡು ನೀನೊಲಿದು ವಧುಗೆನಲು ಕಂದಿದಾನನನ ಉಜ್ವಲ ಪ್ರಭೆ ಯಿಂದ ಬೆಳಗಿತು ರಾಣಿಯರು ಸಹಿ ತಂದು ಮುನಿ ಪದಕೆರಗಿ ಪರಿತೋಷದಲಿ ನಿಂದಿರ್ದ
kaṃderedu muni baḷika bhūpati geṃdanida kō putrasaṃtati geṃdu sādhanavidanu koḍu nīnolidu vadhugenalu kaṃdidānanana ujvala prabhe yiṃda beḷagitu rāṇiyaru sahi taṃdu muni padakeragi paritōṣadali niṃdirda
ವರವನೊಂದನು ಹೆಸರುಗೊಂಡೀ ಧರಣಿಪತಿಗಾ ಮುನಿಪ ಕೊಟ್ಟನು ಪುರಕೆ ಮರಳಿದನರಸನಾ ಮುನಿ ತೀರ್ಥಯಾತ್ರೆಯಲಿ ಸರಿದನತ್ತಲು ಚೂತಫಲವಿದ ನೆರಡು ಮಾಡಿ ಬೃಹದ್ರಥನು ತ ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ
varavanoṃdanu hesarugoṃḍī dharaṇipatigā munipa koṭṭanu purake maraḷidanarasanā muni tīrthayātreyali saridanattalu cūtaphalavida neraḍu māḍi br̥hadrathanu ta nnarasiyarigittanu yudhiṣṭhira kēḷu kautukava
ಬಲಿದುದವರಿಗೆ ಗರ್ಭ ಜನನದ ನೆಲೆಯ ಕಾಲಕೆ ಸತಿಯರುದರದೊ ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ ಬಳಿಕ ಕಂಡವರಕಟ ದುಷ್ಕೃತ ಫಲವೆ ಸುಡಲಿವನೆನುತ ಬಿಸುಟರು ಹೊಳಲ ಹೊರ ಬಾಹೆಯಲಿ ನಡುವಿರುಳರಸ ಕೇಳೆಂದ
balidudavarige garbha jananada neleya kālake satiyarudarado ḷiḷidudoṃdoṃdavayavada sīḷeraḍu samavāgi baḷika kaṃḍavarakaṭa duṣkr̥ta phalave suḍalivanenuta bisuṭaru hoḷala hora bāheyali naḍuviruḷarasa kēḷeṃda
ನಡುವಿರುಳು ಜರೆಯೆಂಬ ರಕ್ಕಸಿ ಯಡಗನರಸುತ ಬಂದು ಕಂಡಳು ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ ತುಡುಕಿದಳು ಸೀಳ್ದೇಕೆ ತಿನ್ನದೆ ಮಡಗಿದರೊ ಕೌತುಕವದೇನೀ ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ
naḍuviruḷu jareyeṃba rakkasi yaḍaganarasuta baṃdu kaṃḍaḷu miḍukuvī sīḷeraḍavanu hora hoḷala bāheyali tuḍukidaḷu sīḷdēke tinnade maḍagidaro kautukavadēnī yeḍabalanideṃdasure diṭṭisi nōḍidaḷu śiśuva
ಶಿಶುವನಾರೋ ಸೀಳ್ದು ತಿನ್ನದೆ ಬಿಸುಟು ಹೋದರೆನುತ್ತ ಜರೆ ಸಂ ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ ಪಸರಿಸಿದುದಸು ಮೇಘರವ ಘೂ ರ್ಮಿಸುವವೋಲ್ ಚೀರಿದನು ಗಿರಿಗಳ ಬೆಸುಗೆ ಬಿಡೆ ನಡುವಿರುಳು ಕೋಳಾಹಳಸಿತಾ ರಭಸ
śiśuvanārō sīḷdu tinnade bisuṭu hōdarenutta jare saṃ dhisidaḷākasmikada sīḷeraḍanu vinōdadali pasarisidudasu mēgharava ghū rmisuvavōl cīridanu girigaḷa besuge biḍe naḍuviruḷu kōḷāhaḷasitā rabhasa
ಊರ ಹೊರವಳಯದಲಿದೇನು ಮ ಹಾ ರಭಸವಿರುಳೆನುತ ಹರಿದುದು ಪೌರಜನ ಝೋಂಪಿಸುವ ಕೈದೀವಿಗೆಯ ಬೆಳಗಿನಲಿ ಆರಿವಳು ತಾನೆನುತ ಕಂಡುದು ದೂರದಲಿ ದಾನವಿಯನವಳ ಘ ನೋರುಗಳ ಸೋಗಿನಲಿ ಕೈದೊಟ್ಟಿಲ ಕುಮಾರಕನ
ūra horavaḷayadalidēnu ma hā rabhasaviruḷenuta haridudu paurajana jhōṃpisuva kaidīvigeya beḷaginali ārivaḷu tānenuta kaṃḍudu dūradali dānaviyanavaḷa gha nōrugaḷa sōginali kaidoṭṭila kumārakana
ನಿಂದುದಲ್ಲಿಯದಲ್ಲಿ ರಕ್ಕಸಿ ಯೆಂದು ಭಯದಲಿ ಬಳಿಕ ಕರುಣದ ಲೆಂದಳವಳಂಜದಿರಿ ಹೋಹೋಯೆನುತ ಕೈ ನೆಗಹಿ ಇಂದಿನವನು ಮಗನೆನಗೆ ಭೂಪತಿ ಬಂದನಾದರೆ ಕೊಡುವೆನೀತನ ನೆಂದಡಾಕ್ಷಣ ಕೇಳಿ ಹರಿತಂದನು ಮಹೀಪಾಲ
niṃdudalliyadalli rakkasi yeṃdu bhayadali baḷika karuṇada leṃdaḷavaḷaṃjadiri hōhōyenuta kai negahi iṃdinavanu maganenage bhūpati baṃdanādare koḍuvenītana neṃdaḍākṣaṇa kēḷi haritaṃdanu mahīpāla
ಅರಸ ಕೋ ನಿನ್ನವನನೀ ಮುನಿ ವರ ಕುಮಾರನನೆನ್ನ ಹೆಸರಲಿ ಕರೆವುದಿತನ ಸೀಳ ಬೆಚ್ಚವಳಾನು ಬೆದರದಿರು ಜರೆಯೆ ನಿಪುದಭಿಧಾನವೆನ್ನದು ವರ ಜರಾಸಂಧಕನಿವನು ಸುರ ನರರೊಳಗೆ ಬಲುಗೈಯನಹನೆಂದಿತ್ತಳರ್ಭಕನ
arasa kō ninnavananī muni vara kumārananenna hesarali karevuditana sīḷa beccavaḷānu bedaradiru jareye nipudabhidhānavennadu vara jarāsaṃdhakanivanu sura nararoḷage balugaiyanahaneṃdittaḷarbhakana
ಅಸುರೆಯನು ಮನ್ನಿಸಿದನಾಕೆಯ ಪೆಸರ ಮಗನಿವನೆಂದು ಲೋಕ ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ ಅಸುರರಲಿ ಮರ್ತ್ಯರಲಿ ಸುರರಲಿ ಯೆಸಕವುಳ್ಳವನೆನಿಸಿದನು ಸಾ ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆಂದ
asureyanu mannisidanākeya pesara maganivaneṃdu lōka prasaravariyalu nalavinali sākidanu māgadhana asurarali martyarali surarali yesakavuḷḷavanenisidanu sā hasada jōḍaṇe jaḍidudavanali rāya kēḷeṃda
ಅದರಿನಾ ಮಾಗಧನ ಮುರಿದ ಲ್ಲದೆ ನೃಪಾಲಕರಂಜಿ ಕಪ್ಪದೊ ಳೊದಗಲರಿಯರು ಮೆರೆಯಲೀಯರು ಯಾಗ ಮಂಟಪವ ಇದು ನಿಧಾನವು ಭೀಮ ಪಾರ್ಥರಿ ಗಿದು ಮುಹೂರ್ತವು ವೀಳೆಯವ ತಾ ಕದನ ವಿಜಯದ ವೀರ ಸೇಸೆಯನಿಕ್ಕಿ ಕಳುಹೆಂದ
adarinā māgadhana murida llade nr̥pālakaraṃji kappado ḷodagalariyaru mereyalīyaru yāga maṃṭapava idu nidhānavu bhīma pārthari gidu muhūrtavu vīḷeyava tā kadana vijayada vīra sēseyanikki kaḷuheṃda
ಮರೆಯದೇತಕೆ ರಾಜಸೂಯದ ಹೊರಿಗೆ ನಿನ್ನದು ರಾಣಿಕವ ನಾ ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನೆಲೆ ಕಿರಿಯರಿವದಿರು ರಾಜಸೂಯದ ಕರುಬರತಿ ಬಲ್ಲಿದರು ಕೃಪೆಯನು ಮೆರೆವುದೆಂದಸುರಾರಿಯಂಘ್ರಿಗೆ ಚಾಚಿದನು ಶಿರವ
mareyadētake rājasūyada horige ninnadu rāṇikava nā nariyenemmarthābhimāna prāṇadoḍeyanele kiriyarivadiru rājasūyada karubarati ballidaru kr̥peyanu merevudeṃdasurāriyaṃghrige cācidanu śirava
ಎತ್ತಿದನು ಮುರವೈರಿ ರಾಯನ ಮಸ್ತಕವ ನಸುನಗುತ ಕರೆ ಸುಮು ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ ಸುತ್ತಣರಸರಿಗೋಲೆಯುಡುಗೊರೆ ಯಿತ್ತು ದೂತರ ಕಳುಹು ಬಳಿಕಿನೊ ಳುತ್ತರೋತ್ತರಸಿದ್ಧಿ ನಿನಗಹುದೆಂದನಸುರಾರಿ
ettidanu muravairi rāyana mastakava nasunaguta kare sumu hūrtikaranakṣōhiṇiya barahēḷu daḷapatiya suttaṇarasarigōleyuḍugore yittu dūtara kaḷuhu baḷikino ḷuttarōttarasiddhi ninagahudeṃdanasurāri
ರೂಢಿಸಿದ ಸುಮುಹೂರ್ತದಲಿ ಹೊರ ಬೀಡು ಬಿಟ್ಟುದು ದಧಿಯ ದೂರ್ವೆಯ ಕೂಡಿದಕ್ಷತೆಗಳ ಸುಲಾಜಾವಳಿಯ ಮಂಗಳದ ಜೋಡಿಗಳ ಜಯರವದ ದೈತ್ಯ ವಿ ಭಾಡ ಸೂಕ್ತದ ವಿಗಡ ಬಿರುದು ಪ ವಾಡಗಳ ಪಾಠಕರ ಗಡಬಡೆ ಗಾಡಿಸಿತು ನಭವ
rūḍhisida sumuhūrtadali hora bīḍu biṭṭudu dadhiya dūrveya kūḍidakṣategaḷa sulājāvaḷiya maṃgaḷada jōḍigaḷa jayaravada daitya vi bhāḍa sūktada vigaḍa birudu pa vāḍagaḷa pāṭhakara gaḍabaḍe gāḍisitu nabhava
ಆಳು ನಡೆಯಲಿ ಮಗಧರಾಯನ ಮೇಲೆ ದಂಡು ಮುಕುಂದ ದಳಪತಿ ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ ಆಳು ಸಾರಿದರವನಿಪತಿಗಳು ಮೇಳದಲಿ ಹೊರವಂಟು ಬರೆ ದೆ ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ
āḷu naḍeyali magadharāyana mēle daṃḍu mukuṃda daḷapati hēḷikege bhīmārjunara barahēḷu hēḷenuta āḷu sāridaravanipatigaḷu mēḷadali horavaṃṭu bare de khkhāḷavanu nōḍidaru naḍedaru payaṇagatigaḷali
ಜನಪ ಕೇಳೈ ಕೃಷ್ಣ ಭೀಮಾ ರ್ಜುನರು ವಿಮಳ ಸ್ನಾತಕವ್ರತ ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ ಜನದ ಕಾಣಿಕೆಗೊಳುತ ನಾನಾ ಜನಪದಂಗಳ ಕಳೆದು ಗಂಗಾ ವಿನುತ ನದಿಯನು ಹಾಯ್ದು ಬಂದರು ಪೂರ್ವಮುಖವಾಗಿ
janapa kēḷai kr̥ṣṇa bhīmā rjunaru vimaḷa snātakavrata munigaḷādaru naḍedu payaṇada mēle payaṇadali janada kāṇikegoḷuta nānā janapadaṃgaḷa kaḷedu gaṃgā vinuta nadiyanu hāydu baṃdaru pūrvamukhavāgi
ಬರುತ ಕಂಡರು ಕೂಡೆ ಕೊಬ್ಬಿದ ಸಿರಿಯನೂರೂರುಗಳ ಸೊಂಪಿನ ಭರಿತವನು ಗೋಧನ ಸಮೃದ್ಧಿಯ ಧಾನ್ಯ ರಾಶಿಗಳ ವರನದಿಯ ಕಾಲುವೆಯ ತೋಟದ ತೆರಳಿಕೆಯ ಪನಸಾಮ್ರ ಪೂಗೋ ತ್ಕರದ ರಮ್ಯಾರಾಮ ಮಂಡಿತ ಮಗಧ ಮಂಡಲವ
baruta kaṃḍaru kūḍe kobbida siriyanūrūrugaḷa soṃpina bharitavanu gōdhana samr̥ddhiya dhānya rāśigaḷa varanadiya kāluveya tōṭada teraḷikeya panasāmra pūgō tkarada ramyārāma maṃḍita magadha maṃḍalava
ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ ವಳಿಗಳೇ ಸಹಕಾರ ದಾಡಿಮ ಫಲಿತ ಪನಸಕ್ರಮುಕ ಜಂಬೂ ಮಾತುಳಂಗಮಯ ಕಳವೆ ಶಾಲೀಮಯವು ಹೊನಲ ಸ್ಖಳಿತ ಲಕ್ಷ್ಮೀಮಯವು ನಗರಾ ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ
meḷegaḷē drākṣegaḷu vr̥kṣā vaḷigaḷē sahakāra dāḍima phalita panasakramuka jaṃbū mātuḷaṃgamaya kaḷave śālīmayavu honala skhaḷita lakṣmīmayavu nagarā vaḷigaḷene śōbhisitu janapadavivara kaṇumanake
ದೇಶ ಹಗೆವನದೆಂದು ಕಡ್ಡಿಯ ಘಾಸಿ ಮಾಡದೆ ಮಿಗೆ ವಿನೋದದ ಲೈಸು ಪಡೆ ನಡೆತಂದು ಬಿಟ್ಟುದು ಗಿರಿಯ ತಪ್ಪಲಲಿ ಆ ಸರೋರರುಹಬಂಧು ಚರಮಾ ಶಾ ಸತಿಯ ಚುಂಬಿಸೆ ಗಿರಿವ್ರಜ ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು
dēśa hagevanadeṃdu kaḍḍiya ghāsi māḍade mige vinōdada laisu paḍe naḍetaṃdu biṭṭudu giriya tappalali ā sarōraruhabaṃdhu caramā śā satiya cuṃbise girivraja dā śikharavanu hattidaru hari bhīma phaluguṇaru
ವೃಷಭ ಚರ್ಮ ನಿಬದ್ಧ ಭೇರಿಗ ಳೆಸೆದವಕ್ಷತೆ ಗಂಧಮೌಲ್ಯ ಪ್ರಸರದಲಿ ಶೈಲಾಗ್ರದಲಿ ಸಂಪನ್ನ ಪೂಜೆಯಲಿ ಅಸುರರಿಪು ಭೀಮಾರ್ಜುನರು ತ ದ್ವಿಷಮ ಭೇರೀತ್ರಯವ ಹೊಯ್ದೆ ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ
vr̥ṣabha carma nibaddha bhēriga ḷesedavakṣate gaṃdhamaulya prasaradali śailāgradali saṃpanna pūjeyali asuraripu bhīmārjunaru ta dviṣama bhērītrayava hoyde bbisidaradubhuta rava migilu keḍedudu dharitriyali
ಏನಿದದುಭುತವೆಂದು ನಡುವಿರು ಳಾ ನರೇಶ್ವರನಮಳವೇದ ವಿ ಧಾನದಲಿ ತಚ್ಛಾಂತಿಗೋಸುಗ ಕರೆಸಿ ಭೂಸುರರ ದಾನದಲಿ ವಿವಿಧಾಗ್ನಿಕಾರ್ಯವಿ ಧಾನದಲಿ ವಿಪ್ರೌಘವಚನಸ ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ
ēnidadubhutaveṃdu naḍuviru ḷā narēśvaranamaḷavēda vi dhānadali tacchāṃtigōsuga karesi bhūsurara dānadali vividhāgnikāryavi dhānadali vipraughavacanasa ghānadali magadhēśaniddanu rāya kēḷeṃda
ಇವರು ಗಿರಿಯಿಂದಿಳಿದು ರಾತ್ರಿಯೊ ಳವನ ನಗರಿಯ ರಾಜಬೀದಿಯ ವಿವಿಧ ವಸ್ತುವ ಸೂರೆಗೊಂಡರು ಹಾಯ್ದು ದಳದುಳವ ತಿವಿದರಡ್ಡೈಸಿದರನುಬ್ಬಿದ ತವಕಿಗರು ಮಗಧೇಂದ್ರ ರಾಯನ ಭವನವನು ಹೊಕ್ಕರು ವಿಡಂಬದ ವಿಪ್ರವೇಷದಲಿ
ivaru giriyiṃdiḷidu rātriyo ḷavana nagariya rājabīdiya vividha vastuva sūregoṃḍaru hāydu daḷaduḷava tividaraḍḍaisidaranubbida tavakigaru magadhēṃdra rāyana bhavanavanu hokkaru viḍaṃbada vipravēṣadali
ಉರವಣಿಸಿದರು ಮೂರು ಕೋಟೆಯ ಮುರಿದರಾ ದ್ವಾರದಲಿ ರಾಯನ ಹೊರೆಗೆ ಬಂದರು ಕಂಡರಿದಿರೆದ್ದನು ಜರಾಸಂಧ ಧರಣಿಯಮರರಪೂರ್ವಿಗರು ಭಾ ಸುರರು ಭದ್ರಾಕಾರರೆಂದಾ ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ
uravaṇisidaru mūru kōṭeya muridarā dvāradali rāyana horege baṃdaru kaṃḍaridireddanu jarāsaṃdha dharaṇiyamararapūrvigaru bhā suraru bhadrākārareṃdā darisi madhuparkādigaḷa māḍidanu bhaktiyali
ಕೇಳಿದನು ಕುಶಲವನು ಕುಶಲವ ಹೇಳಿದರು ಕುಳ್ಳಿರಿಯೆನಲು ಭೂ ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ ಹೇಳಿರೈ ನಿಮಗಾವ ದೇಶ ವಿ ಶಾಲಗೋತ್ರವದಾವುದೆನುತ ವಿ ಲೋಲ ಮತಿ ಚಿಂತಿಸಿದನಿವದಿರು ವಿಪ್ರರಲ್ಲೆಂದು
kēḷidanu kuśalavanu kuśalava hēḷidaru kuḷḷiriyenalu bhū pālakaru kuḷḷirdareveyikkade nirīkṣisuta hēḷirai nimagāva dēśa vi śālagōtravadāvudenuta vi lōla mati ciṃtisidanivadiru vipraralleṃdu
ಸ್ನಾತಕವ್ರತ ವೇಷದಲಿ ಬಂ ದಾತಗಳು ತಾವಿವರು ಶಸ್ತ್ರ ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು ಕೈತವದಿನೈತಂದರರ್ಥವ ನೀತಗಳು ಬಯಸರು ವಿರೋಧ ಪ್ರೀತಿಮುಖರಿವರಾರೊ ಶಿವಶಿವಯೆನುತ ಚಿಂತಿಸಿದ
snātakavrata vēṣadali baṃ dātagaḷu tāvivaru śastra vrātadali śikṣitaru karkaśa bāhupāṇigaḷu kaitavadinaitaṃdararthava nītagaḷu bayasaru virōdha prītimukharivarāro śivaśivayenuta ciṃtisida
ಆರಿವರು ದೇವತ್ರಯವೊ ಜಂ ಭಾರಿ ಯಮ ಮಾರುತರೊ ರವಿ ರಜ ನೀ ರಮಣ ಪಾವಕರೊ ಕಟಪಸ್ನಾತಕವ್ರತದ ಧಾರುಣೀಶ್ವರರೊಳಗೆ ಧಿಟ್ಟರ ದಾರು ತನ್ನೊಳು ತೊಡಕಿ ನಿಲುವ ವಿ ಕಾರಿಗಳ ನಾ ಕಾಣೆನೆಂದನು ತನ್ನ ಮನದೊಳಗೆ
ārivaru dēvatrayavo jaṃ bhāri yama mārutaro ravi raja nī ramaṇa pāvakaro kaṭapasnātakavratada dhāruṇīśvararoḷage dhiṭṭara dāru tannoḷu toḍaki niluva vi kārigaḷa nā kāṇeneṃdanu tanna manadoḷage
ಈಗ ಮಿಡುಕುಳ್ಳವರು ಮಹಿಯಲಿ ನಾಗಪುರದರಸುಗಳು ನಮ್ಮವ ರಾಗಿಹರು ಪಾಂಡುವಿನ ಮಕ್ಕಳು ಮೀರಿ ಖಳರಲ್ಲ ಸಾಗರೋಪಾಂತ್ಯದ ನರೇಂದ್ರರು ಭೋಗಿಸಿದ ಮುತ್ತುಗಳು ಭಾವಿಸ ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆಂದ
īga miḍukuḷḷavaru mahiyali nāgapuradarasugaḷu nammava rāgiharu pāṃḍuvina makkaḷu mīri khaḷaralla sāgarōpāṃtyada narēṃdraru bhōgisida muttugaḷu bhāvisa lī gayāḷara garvavēnu nimittavāyteṃda
ಯಾದವರು ಹಿಂದೆಮ್ಮೊಡನೆ ಹಗೆ ಯಾದವರು ಬಳಿಕವರೊಳಗೆ ತುರು ಗಾದವನ ಕರುಗಾದವನ ಮಾಧವನ ಮಾತೇನು ಮೇದಿನಿಯ ಮಂಡಳಿಕ ಮನ್ನೆಯ ರಾದವರು ನಮ್ಮೊಡನೆ ಸೆಣಸುವ ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆಂದ
yādavaru hiṃdemmoḍane hage yādavaru baḷikavaroḷage turu gādavana karugādavana mādhavana mātēnu mēdiniya maṃḍaḷika manneya rādavaru nammoḍane seṇasuva rādaḍidu duṣkāla vaśavidu citravāyteṃda
ಬವರಿಗರು ನೀವ್ ವಿಪ್ರವೇಷದ ಜವನಿಕೆಯ ಜಾಣಾಯ್ಲತನದಿಂ ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ ನಿವಗಿದೇನೀ ವಸನ ಕಪಟ ವ್ಯವಹರಣೆ ಕೃತ್ರಿಮವೊ ಸಹಜವೊ ರವಣ ಮತ್ತೇನುಂಟು ಹೇಳಿನ್ನಂಜ ಬೇಡೆಂದ
bavarigaru nīv vipravēṣada javanikeya jāṇāylatanadiṃ davagaḍisi hokkiriyapadvāradali nr̥pasabheya nivagidēnī vasana kapaṭa vyavaharaṇe kr̥trimavo sahajavo ravaṇa mattēnuṃṭu hēḷinnaṃja bēḍeṃda
ಸ್ನಾತಕವ್ರತವೇನು ಪಾರ್ಥಿವ ಜಾತಿಗಿಲ್ಲಲೆ ವೈಶ್ಯ ಕುಲಕಿದು ಪಾತಕವು ನಾವಿಂದು ಪಾರ್ಥಿವ ಜಾತಿ ಸಂಭವರು ಸ್ನಾತಕರು ನಾವ್ ವೈರಿ ಗೃಹದಲಿ ಭೀತರದ್ವಾರಪ್ರವೇಶವ ನೀತಿಯಲ್ಲ ಪುರಾಣಸಿದ್ಧವಿದೆಂದನಸುರಾರಿ
snātakavratavēnu pārthiva jātigillale vaiśya kulakidu pātakavu nāviṃdu pārthiva jāti saṃbhavaru snātakaru nāv vairi gr̥hadali bhītaradvārapravēśava nītiyalla purāṇasiddhavideṃdanasurāri
ವೈರಿ ಭವನವೆ ನಮ್ಮದಿದು ನಾವ್ ವೈರಿಗಳೆ ನಿಮಗೆಮಗೆ ಜನಿಸಿದ ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ ಆರು ನೀವೀ ಬ್ರಾಹ್ಮಣರು ನಿಮ ಗಾರುಪಾಧ್ಯರು ಹೇಳಿ ನಿಮ್ಮ ವಿ ಕಾರ ಬರಿದೇ ಹೋಗದೆಂದನು ಮಗಧಪತಿ ನಗುತ
vairi bhavanave nammadidu nāv vairigaḷe nimagemage janisida vairabaṃdha nimittavāvudu nimma pakṣadali āru nīvī brāhmaṇaru nima gārupādhyaru hēḷi nimma vi kāra baridē hōgadeṃdanu magadhapati naguta
ಮುರಿದು ಹಲಬರಿಳಾಧಿನಾಥರ ಸೆರೆಯಲಿಕ್ಕಿದೆ ರಾಜ್ಯ ಮದದಲಿ ಮರೆದು ಮಾನ್ಯರನಿರಿದು ಹೆಚ್ಚಿಸಿಕೊಂಡೆ ಭುಜಬಲವ ಅರಿಯದಳುಪಿದ ಪಾತಕಕೆ ಬಿಡು ಸೆರೆಯ ಪ್ರಾಯಶ್ಚಿತ್ತವಿದು ನಾ ವುರುವ ವೇಷದುಪಾಧ್ಯರೆಂದನು ನಗುತ ಮುರಹರನು
muridu halabariḷādhināthara sereyalikkide rājya madadali maredu mānyaraniridu heccisikoṃḍe bhujabalava ariyadaḷupida pātakake biḍu sereya prāyaścittavidu nā vuruva vēṣadupādhyareṃdanu naguta muraharanu
ಆ ನೃಪಾಲರ ಮಗನೊ ಮೊಮ್ಮನೊ ನೀನವರ ಬಾಂಧವನೊ ಭೃತ್ಯನೊ ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ ಏನು ನಿನ್ನಂಘವಣೆ ನೀನಾ ರಾ ನರೇಂದ್ರರ ಸೆರೆಯ ಬಿಡುಗಡೆ ಗೇನನೆಂಬೆನು ರಹವನೆಂದನು ತೂಗಿ ಮಣಿಶಿರವ
ā nr̥pālara magano mommano nīnavara bāṃdhavano bhr̥tyano nūnavakṣano beraḷa badegano kuruḷa kōmaḷano ēnu ninnaṃghavaṇe nīnā rā narēṃdrara sereya biḍugaḍe gēnaneṃbenu rahavaneṃdanu tūgi maṇiśirava
ಎಲವೊ ಧರೆಯಲಧರ್ಮಶೀಲರ ತಲೆಯ ಚೆಂಡಾಡುವೆವು ಧರ್ಮವ ನೊಲಿದು ಕೊಂಡಾಡುವೆವು ಶಿಕ್ಷಾ ರಕ್ಷಣ ವ್ಯಸನ ನೆಲೆ ನಮಗೆ ನೀನರಿಯೆ ರಾಜಾ ವಳಿಯ ಬಿಡು ಫಡ ಭಂಡ ವಿದ್ಯೆಯ ಬಳಸುವಾ ನಮ್ಮೊಡನೆಯೆಂದನು ದಾನವಧ್ವಂಸಿ
elavo dhareyaladharmaśīlara taleya ceṃḍāḍuvevu dharmava nolidu koṃḍāḍuvevu śikṣā rakṣaṇa vyasana nele namage nīnariye rājā vaḷiya biḍu phaḍa bhaṃḍa vidyeya baḷasuvā nammoḍaneyeṃdanu dānavadhvaṃsi
ಇವರು ಗಡ ಗಜದವನ ಶಿಕ್ಷಾ ಸವನದಲಿ ದೀಕ್ಷಿತರು ಗಡ ಕೈ ತವದ ಭಂಡರು ನೀವೊ ನಾವೋ ಸಾಕದಂತಿರಲಿ ಕವಡುತನದಲಿ ದಿಟ್ಟರಹಿರಂ ಘವಣೆಯೊಳ್ಳಿತು ನಿಮ್ಮ ನಿಜವನು ವಿವರಿಸಿರೆ ನೀವಾರು ಹೇಳೆಂದನು ಜರಾಸಂಧ
ivaru gaḍa gajadavana śikṣā savanadali dīkṣitaru gaḍa kai tavada bhaṃḍaru nīvo nāvō sākadaṃtirali kavaḍutanadali diṭṭarahiraṃ ghavaṇeyoḷḷitu nimma nijavanu vivarisire nīvāru hēḷeṃdanu jarāsaṃdha
ಕೇಳಿ ಮಾಡುವುದೇನು ತಾನಸು ರಾಳಿ ಧೂಳೀಪಟಲ ವೈರಿ ನೃ ಪಾಲ ಚೌಪಟ ಮಲ್ಲನೀತನು ಭೀಮಸೇನ ಕಣಾ ಭಾಳನೇತ್ರನ ಭುಜಬಲದ ಸಮ ಪಾಳಿಯರ್ಜುನನೀತನೇಳಾ ಕಾಳಗವ ಕೊಡು ನಮ್ಮೊಳೊಬ್ಬರಿಗೆಂದನಸುರಾರಿ
kēḷi māḍuvudēnu tānasu rāḷi dhūḷīpaṭala vairi nr̥ pāla caupaṭa mallanītanu bhīmasēna kaṇā bhāḷanētrana bhujabalada sama pāḷiyarjunanītanēḷā kāḷagava koḍu nammoḷobbarigeṃdanasurāri
ಕೇಳಿ ಕೆದರಿದ ಕಡುನಗೆಯಲಡ ಬೀಳುತೇಳುತ ಬಿರುವನಿಯ ಕ ಣ್ಣಾಲಿಗಳ ಝೊಮ್ಮೆದ್ದ ರೋಮದ ಜಡಿವ ಬಿಡುದಲೆಯ ಸೂಳುನಗೆ ಬಿಳಿನಗೆಯಲಡಿಗಡಿ ಗಾಳಿ ಮುಸುಗುಬ್ಬಸದಲಿದ್ದು ಕ ರಾಳಮತಿ ಸಂತೈಸಿ ನೆರೆ ತನ್ನವರಿಗಿಂತೆಂದ
kēḷi kedarida kaḍunageyalaḍa bīḷutēḷuta biruvaniya ka ṇṇāligaḷa jhommedda rōmada jaḍiva biḍudaleya sūḷunage biḷinageyalaḍigaḍi gāḷi musugubbasadaliddu ka rāḷamati saṃtaisi nere tannavarigiṃteṃda
ಈತನಾರೆಂದರಿವಿರೈ ನ ಮ್ಮಾತನೀತನು ನಮ್ಮ ಕಂಸಂ ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ ಈತ ಕಾಣಿರೆ ಹಿಂದೆ ಚೌರಾ ಶೀತಿ ದುರ್ಗದೊಳೋಡಿ ಬದುಕಿದ ನೀತ ಬಲುಗೈ ಬಂಟನೆಂದನು ಮಗಧಪತಿ ನಗುತ
ītanāreṃdarivirai na mmātanītanu namma kaṃsaṃ gītanaḷiyanu namage mommanu maganu dēvakige īta kāṇire hiṃde caurā śīti durgadoḷōḍi badukida nīta balugai baṃṭaneṃdanu magadhapati naguta
ಕೊಳಲ ರಾಗದ ರಹಿಯೊ ಕಲ್ಲಿಯ ಕಲಸುಗೂಳೋ ಹಳ್ಳಿಕಾತಿಯ ರೊಳಗುಡಿಯ ಹಾದರವೊ ತುರಗಾಹಿಗಳ ತೋಹುಗಳೊ ಬಲು ಸರಳ ಸರಿವಳೆಯ ಮಿದುಳೊಡೆ ಗಲಸುಗಳಡಾಯುಧದ ತಳುಕಿನ ಕೊಳುಗುಳದ ಜಯಸಿರಿಯ ಕಾಹಿನೊಳಾರು ನೀನೆಂದ
koḷala rāgada rahiyo kalliya kalasugūḷō haḷḷikātiya roḷaguḍiya hādaravo turagāhigaḷa tōhugaḷo balu saraḷa sarivaḷeya miduḷoḍe galasugaḷaḍāyudhada taḷukina koḷuguḷada jayasiriya kāhinoḷāru nīneṃda
ಹೋರಿ ಹೆಂಗುಸು ಬಂಡಿ ಪಕ್ಷಿ ಸ ಮೀರಣಾಶ್ವಾಜಗರ ಗಾರ್ದಭ ವೀರರೀತನ ಘಾತಿಗಳುಕಿತು ಕಂಸಪರಿವಾರ ಆರುಭಟೆಯುಳ್ಳವನು ಕಂಸನ ತೋರಹತ್ತನ ತೊಡಕಿದನು ಗಡ ಭಾರಿಯಾಳಹನುಂಟು ಶಿವಶಿವಯೆಂದನಾ ಮಗಧ
hōri heṃgusu baṃḍi pakṣi sa mīraṇāśvājagara gārdabha vīrarītana ghātigaḷukitu kaṃsaparivāra ārubhaṭeyuḷḷavanu kaṃsana tōrahattana toḍakidanu gaḍa bhāriyāḷahanuṃṭu śivaśivayeṃdanā magadha
ಎಲವೊ ಗೋವಳ ನಿನ್ನ ಕಂಸನ ನಿಳಯವೋ ಪೌಂಡ್ರಕನ ಕದನದ ಕಳನೊ ಹಂಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ ಹುಲಿಗೆ ಮೊಲನಭ್ಯಾಗತನೆ ಕರಿ ಕಳಭ ಸಿಂಹಕೆ ಸರಿಯೆ ನೀ ನಿ ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆಂದ
elavo gōvaḷa ninna kaṃsana niḷayavō pauṃḍrakana kadanada kaḷano haṃsana hōraṭeyo mēṇ ḍibikanaḍupāyo hulige molanabhyāgatane kari kaḷabha siṃhake sariye nī ni nnaḷavanariyade hokku keṇakide keṭṭe hōgeṃda
ಇದುವೆ ಪಿತ್ತದ ವಿಕಳವೋ ಮ ದ್ಯದ ವಿಕಾರವೊ ಭಂಗಿ ತಲೆಗೇ ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ ಸದನ ನಿನ್ನದು ಸೂಳೆಯರ ಮುಂ ದೊದರಿ ಫಲವೇನೆದ್ದು ಬಾ ಭಾ ಳದಲಿ ಬರೆದುದ ತೊಡೆವೆನೆಂದನು ದಾನವಧ್ವಂಸಿ
iduve pittada vikaḷavō ma dyada vikāravo bhaṃgi talegē ridudo bhaṭanādare vighātadalēḷu kāḷagake sadana ninnadu sūḷeyara muṃ dodari phalavēneddu bā bhā ḷadali bareduda toḍeveneṃdanu dānavadhvaṃsi
ಎಲವೊ ಗೋಪಕುಮಾರ ಕಂಸನ ಲಲನೆಯರ ವೈಧವ್ಯ ದುಃಖಾ ನಲನ ನಂದಿಸಲಾಯ್ತು ನಿನ್ನಯ ರುಧಿರ ಜಲಧಾರೆ ಅಳಿದ ಕಂಸನ ಕಾಲಯವನನ ಕಳನ ಹರಿಬವ ಗೆಲಿದು ದೈತ್ಯಾ ವಳಿಯ ಬಂಧುತ್ವವನು ಬಳಸುವೆನೆಂದನಾ ಮಗಧ
elavo gōpakumāra kaṃsana lalaneyara vaidhavya duḥkhā nalana naṃdisalāytu ninnaya rudhira jaladhāre aḷida kaṃsana kālayavanana kaḷana haribava gelidu daityā vaḷiya baṃdhutvavanu baḷasuveneṃdanā magadha
ಗೋವಳರು ನಿರ್ಲಜ್ಜರದರೊಳು ನೀವು ಗರುವರು ರಾಜಪುತ್ರರು ಸಾವ ಬಯಸುವನೊಡನೆ ಬಂದಿರಿ ತಪ್ಪ ಮಾಡಿದಿರಿ ನೀವು ಮಕ್ಕಳು ನಿಮ್ಮ ಹಿರಿಯರ ಠಾವಿನಲಿ ಬುಧರಿಲ್ಲಲಾ ನಿಮ ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ
gōvaḷaru nirlajjaradaroḷu nīvu garuvaru rājaputraru sāva bayasuvanoḍane baṃdiri tappa māḍidiri nīvu makkaḷu nimma hiriyara ṭhāvinali budharillalā nima gāva hadanahudenuta nuḍidanu bhīma phaluguṇara
ಸಾಕಿದೇತಕೆ ಹೊಳ್ಳು ನುಡಿಗೆ ವಿ ವೇಕಿಗಳು ಮೆಚ್ಚುವರೆ ಯುದ್ಧ ವ್ಯಾಕರಣ ಪಾಂಡಿತ್ಯವುಳ್ಳರೆ ತೋರಿಸುವುದೆಮಗೆ ಈ ಕಮಲನೇತ್ರಂಗೆ ಫಡ ನೀ ನಾಕೆವಾಳನೆ ಶಿವಶಿವಾ ಜಗ ದೇಕದೈವದ ಕೂಡೆ ದಂಡಿಯೆಯೆಂದನಾ ಭೀಮ
sākidētake hoḷḷu nuḍige vi vēkigaḷu meccuvare yuddha vyākaraṇa pāṃḍityavuḷḷare tōrisuvudemage ī kamalanētraṃge phaḍa nī nākevāḷane śivaśivā jaga dēkadaivada kūḍe daṃḍiyeyeṃdanā bhīma
ದಿಟ್ಟರಹಿರೋ ಸಾವನರಿಯದೆ ಕೆಟ್ಟಿರಕಟಾ ಕಾಳುಗೋಪನ ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ ಚಟ್ಟಳೆಯ ಚತುರಾಸ್ಯನಿವರೊಡ ಹುಟ್ಟಿದರ ಸಮಜೋಳಿ ಗಡ ಜಗ ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ
diṭṭarahirō sāvanariyade keṭṭirakaṭā kāḷugōpana goṭṭiyāṭake gurigaḷādiri nimma gurusahita caṭṭaḷeya caturāsyanivaroḍa huṭṭidara samajōḷi gaḍa jaga jaṭṭigaḷu tāvivarenuta taledūgidanu magadha
ಬೈದು ಫಲವೇನೆಮಗೆ ಮೇಳದ ಮೈದುನರು ನೀವಲ್ಲಲೇ ದಳ ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ ಕೈದುವುಂಟೇ ತರಿಸಿಕೊಡಿಸುವೆ ನೈದಿ ನೀವಾಳಾಗಿ ನಿಮ್ಮೊಡ ನೈದುವೆನು ಬಲರಾಮನುಳಿದಾನೆಂದನಾ ಮಗಧ
baidu phalavēnemage mēḷada maidunaru nīvallalē daḷa vaide nūkali nimma mūvaru sahita nammoḍane kaiduvuṃṭē tarisikoḍisuve naidi nīvāḷāgi nimmoḍa naiduvenu balarāmanuḷidāneṃdanā magadha
ಎಲವೊ ಬಾಹಿರ ಮಗಧ ಹಲಧರ ನುಳಿಯೆ ಪಾಂಡವನೃಪರು ಪರಿಯಂ ತಳವು ನಿನಗೊಬ್ಬಂಗೆ ಸೇರುವುದೇ ಮಹಾದೇವ ಅಳಿವು ತಪ್ಪದು ನುಡಿಯೊಳಲ್ಪವ ಬಳಸಲೇತಕೆ ವೀರನಹೆ ನ ಮ್ಮೊಳಗೆ ಮೂವರೊಳೊಬ್ಬನನು ವರಿಸೆಂದನಸುರಾರಿ
elavo bāhira magadha haladhara nuḷiye pāṃḍavanr̥paru pariyaṃ taḷavu ninagobbaṃge sēruvudē mahādēva aḷivu tappadu nuḍiyoḷalpava baḷasalētake vīranahe na mmoḷage mūvaroḷobbananu variseṃdanasurāri
ಅಕಟ ನಿಮಗೀ ಸಮರವಾವ ಶ್ಯಕವೆ ನಮಗಖ್ಯಾತಿಯಲ್ಲಿದು ಸಕಲ ಜನವರಿದಿರೆಯೆನುತ ನೋಡಿದನು ತನ್ನವರ ಪ್ರಕಟವೈ ನಿಮ್ಮಾಳುತನ ಯದು ನಿಕರಕಾವಂಜುವೆವು ರಣ ನಾ ಟಕಪಲಾಯನ ಪಂಡಿತರು ನೀವೆಂದನಾ ಮಗಧ
akaṭa nimagī samaravāva śyakave namagakhyātiyallidu sakala janavaridireyenuta nōḍidanu tannavara prakaṭavai nimmāḷutana yadu nikarakāvaṃjuvevu raṇa nā ṭakapalāyana paṃḍitaru nīveṃdanā magadha
ಪಾರ್ಥ ನೀ ಮಗುವೆಮ್ಮೊಡನೆ ರಣ ದರ್ಥಿಯಾದರೆ ಭೀಮಸೇನ ಸ ಮರ್ಥನಹನಾತಂಗೆ ಕೊಟ್ಟೆನು ಕಳನ ಕಾಳಗವ ವ್ಯರ್ಥವಿದು ತಾ ಹೋಗಲಿನ್ನು ಪ ರಾರ್ಥ ಕಂಟಕವಾಗಲೇತಕೆ ತೀರ್ಥವೈಸಲೆ ಶಸ್ತ್ರಧಾರೆಯಿದೆಂದನಾ ಮಗಧ
pārtha nī maguvemmoḍane raṇa darthiyādare bhīmasēna sa marthanahanātaṃge koṭṭenu kaḷana kāḷagava vyarthavidu tā hōgalinnu pa rārtha kaṃṭakavāgalētake tīrthavaisale śastradhāreyideṃdanā magadha
ತರಿಸಿದನು ಚಂದನದ ಸಾದಿನ ಭರಣಿಗಳ ಕರ್ಪೂರ ವರಕ ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ ಹರಿವೃಕೋದರ ಪಾರ್ಥರಿದಿರಲಿ ಭರಣಿಗಳ ನೂಕಿದನು ಮಾಲ್ಯಾಂ ಬರ ವಿಲೇಪನದಿಂದಲಂಕರಿಸಿದರು ನಿಜತನುವ
tarisidanu caṃdanada sādina bharaṇigaḷa karpūra varaka tturi javājipramukha bahuvidha yakṣakardamava harivr̥kōdara pārtharidirali bharaṇigaḷa nūkidanu mālyāṃ bara vilēpanadiṃdalaṃkarisidaru nijatanuva
ಅಂಕಕಿಬ್ಬರು ಭಟರು ತಿಲಕಾ ಲಂಕರಣ ಶೋಭೆಯಲಿ ರಣ ನಿ ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು ಬಿಂಕದುಬ್ಬಿನ ರೋಮ ಪುಳಕದ ಮುಂಕುಡಿಯ ಸುಮ್ಮಾನದಂಕೆಯ ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ
aṃkakibbaru bhaṭaru tilakā laṃkaraṇa śōbheyali raṇa ni śśaṃkaranuvādaru sukarpura vīḷeyaṃgoṃḍu biṃkadubbina rōma puḷakada muṃkuḍiya summānadaṃkeya jhaṃkegaḷa bhara bhullavisidudu bhīma māgadhara
ರಣದೊಳಾವುದು ಕೈದು ಹಿರಿಯು ಬ್ಬಣವೊ ಪರಿಘವೊ ಸುರಗಿಯೋ ಡೊಂ ಕಣಿಯೊ ಗದೆಯೋ ಭಿಂಡಿವಾಳವೊ ಪರಶು ತೋಮರವೊ ಕಣೆ ಧನುವೊ ಕಕ್ಕಡೆಯೊ ಮುಷ್ಟಿಯೊ ಹಣಿದಕಾವುದು ಸದರವದರಲಿ ಕೆಣಕಿ ನೋಡಾ ತನ್ನನೆಂದನು ಭೀಮ ಮಾಗಧನ
raṇadoḷāvudu kaidu hiriyu bbaṇavo parighavo suragiyō ḍoṃ kaṇiyo gadeyō bhiṃḍivāḷavo paraśu tōmaravo kaṇe dhanuvo kakkaḍeyo muṣṭiyo haṇidakāvudu sadaravadarali keṇaki nōḍā tannaneṃdanu bhīma māgadhana
ಆಯುಧಂಗಳಲೇನು ನೀ ನಾ ಗಾಯುತದ ಬಲನೆಂಬರಾ ನುಡಿ ವಾಯವೋ ಕಲಿಭೀಮ ದಿಟವೋ ನೋಡ ಬೇಹುದಲೆ ಆಯಿತೇ ಸಮಜೋಳಿ ನಿನಗದು ಪಾಯವೋ ಚೊಕ್ಕೆಯವೊ ನುಡಿ ಮನ ದಾಯತವನೆನಗೆನುತ ಹತ್ತಾಹತ್ತಿಗನುವಾದ
āyudhaṃgaḷalēnu nī nā gāyutada balaneṃbarā nuḍi vāyavō kalibhīma diṭavō nōḍa bēhudale āyitē samajōḷi ninagadu pāyavō cokkeyavo nuḍi mana dāyatavanenagenuta hattāhattiganuvāda
ಧರಣಿಪತಿ ಕೇಳ್ಮಾಗಧನ ಮಂ ದಿರದ ರಾಜಾಂಗಣದೊಳವನೀ ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು ಎರಡು ಬಲ ಮೋಹರಿಸಿ ನಿಂದುದು ಪುರದ ಹೊರ ಬಾಹೆಯಲಿ ಕೃತ ಸಂ ಚರಣ ಕಾರ್ತಿಕಶುದ್ಧಪಾಡ್ಯದೊಳಾಹವಾರಂಭ
dharaṇipati kēḷmāgadhana maṃ dirada rājāṃgaṇadoḷavanī suraru nōṭakarādarilli murāri phaluguṇaru eraḍu bala mōharisi niṃdudu purada hora bāheyali kr̥ta saṃ caraṇa kārtikaśuddhapāḍyadoḷāhavāraṃbha
ಸಿಡಿಲು ಬೊಬ್ಬಿಡುವಂತೆ ಹೊಯ್ದರು ಮುಡುಹುಗಳ ಮಝ ಪೂತು ಮಲ್ಲೆನು ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ ತುಡುಕಲೀಯದೆ ತಿರುಗಿದರು ಗಡ ಬಡಿಸಿ ದಂಡೆಯೊಳೊತ್ತಿದರು ಸಮ ಚಡಿಸಿ ನಿಂದರು ನೀಲ ನಿಷಧಾಚಲಕೆ ಮಲೆವಂತೆ
siḍilu bobbiḍuvaṃte hoydaru muḍuhugaḷa majha pūtu mallenu taḍigaḍige nūkidaru lavaṇiya nīḍi sāradali tuḍukalīyade tirugidaru gaḍa baḍisi daṃḍeyoḷottidaru sama caḍisi niṃdaru nīla niṣadhācalake malevaṃte
ಸಿಕ್ಕರೊಬ್ಬರಿಗೊಬ್ಬರುರೆ ಕೈ ಮಿಕ್ಕು ಹರಿಯರು ಕೊಂಡ ಹೆಜ್ಜೆಯ ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮಂಡಿಗಳು ಇಕ್ಕಿದರು ಗಳಹತ್ತದಲಿ ಸಲೆ ಮಿಕ್ಕು ಸತ್ರಾಣದಲಿ ಮಿಗೆ ಸರಿ ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ
sikkarobbarigobbarure kai mikku hariyaru koṃḍa hejjeya ṭhakkinali maigoḍaru tirimurivugaḷa maṃḍigaḷu ikkidaru gaḷahattadali sale mikku satrāṇadali mige sari vokku hiḍidaru binnaṇada cokkeyada jōḍiyali
ಬಿಡಿಸಿ ಗಳಹತ್ತವನು ಡೊಕ್ಕರ ಕೊಡೆಮುರಿವ ಸಕುಟುಂಬ ಡೊಕ್ಕರ ಕಡಸಿ ಕತ್ತರಿ ಘಟ್ಟಿಸುವ ಗಳಹತ್ತಡೊಕ್ಕರವ ತಡೆವ ಚೌವಂಗುಲ ದುವಂಗುಲ ಕೊಡೆಮುರಿವ ಪಟ್ಟಸಕೆ ಚಾಚುವ ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆಂದ
biḍisi gaḷahattavanu ḍokkara koḍemuriva sakuṭuṃba ḍokkara kaḍasi kattari ghaṭṭisuva gaḷahattaḍokkarava taḍeva cauvaṃgula duvaṃgula koḍemuriva paṭṭasake cācuva jhaḍitegodaguva bhaṭaru heṇagidararasa kēḷeṃda
ಎಳೆದು ದಣುವಟ್ಟೆಯಲಿ ಬೊಪ್ಪರ ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ ಸುಳಿದು ಮರ್ಕಟ ಬಂಧದಲಿ ಕರ ವಳಯದಲಿ ಕೈದುಡುಕಿ ಶಿರವ ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು
eḷedu daṇuvaṭṭeyali boppara doḷage jāḷisi cimmi jhaḍiteya seḷedu muḍuhinalauki bigidaru paṭṭa muḍuhinali suḷidu markaṭa baṃdhadali kara vaḷayadali kaiduḍuki śirava ṭṭaḷeya callaṇa paṭṭiyavarodagidaru paṭubhaṭaru
ಅಗಡಿಯಲಿ ಲೋಟಿಸಿ ನಿರಂತರ ಲಗಡಿಯಲಿ ಲಾಗಿಸಿ ನಿಬಂಧದ ಬಿಗುಹುಗಳ ಕುಮ್ಮರಿಯ ಕುಹರದ ನಾಗಬಂಧಗಳ ತೆಗಹುಗಳ ತೊಡಕುಗಳ ತುಳುಕಿನ ಜಗಳುಗಳ ಜೋಡಣೆಯ ನಿಡು ಸು ಯ್ಲುಗಳ ಸೌರಂಭದ ಸಗಾಢರು ಹೊಕ್ಕು ಹೆಣಗಿದರು
agaḍiyali lōṭisi niraṃtara lagaḍiyali lāgisi nibaṃdhada biguhugaḷa kummariya kuharada nāgabaṃdhagaḷa tegahugaḷa toḍakugaḷa tuḷukina jagaḷugaḷa jōḍaṇeya niḍu su ylugaḷa sauraṃbhada sagāḍharu hokku heṇagidaru
ಧೂಳಿ ಕುಡಿದುದು ಬೆಮರನಾ ಕೆಂ ಧೂಳಿ ನೆನೆದುದು ಬೆವರಿನಲಿ ತಳ ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ ಸೂಳು ನಾಸಾಪುಟದ ಪವನನ ತಾಳಿಗೆಯ ಕರ್ಪುರದ ಕವಳದ ತೋಳ ತೆಕ್ಕೆಯ ತವಕಿಗರು ಹೆಣಗಿದರು ಪುಟಭಟರು
dhūḷi kuḍidudu bemaranā keṃ dhūḷi nenedudu bevarinali taḷa mēlu nimiṣake mēlu taḷa biḍuhugaḷa biguhugaḷa sūḷu nāsāpuṭada pavanana tāḷigeya karpurada kavaḷada tōḷa tekkeya tavakigaru heṇagidaru puṭabhaṭaru
ತೀರದಿಬ್ಬರ ಸತ್ವವವನಿಯ ಸಾರದಿಬ್ಬರ ಬಲುಹುಗಾಣದು ಪಾರುಖಾಣೆಯವದಟರಿಬ್ಬರ ಭುಜಬಲಾಟೋಪ ಸಾರವಳಿಯದು ಮುಳಿಸು ದರ್ಪದ ಧಾರೆ ಮುರಿಯದು ಜಯದ ತೃಷ್ಣೆಯ ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು
tīradibbara satvavavaniya sāradibbara baluhugāṇadu pārukhāṇeyavadaṭaribbara bhujabalāṭōpa sāravaḷiyadu muḷisu darpada dhāre muriyadu jayada tr̥ṣṇeya tōrahattaru heṇagidaru kalibhīma māgadharu
ಪೂತು ಮಝ ಜಗಜಟ್ಟಿ ಧಣು ಧಣು ವಾತಸುತ ಪರಬಲ ಭಯಂಕರ ಸೋತನೋ ಪ್ರತಿಮಲ್ಲನೆಂದರು ಕೃಷ್ಣ ಫಲುಗುಣರು ಭೀತನಾದನು ಭೀಮನಹಿತ ವಿ ಘಾತಿ ಮಾಗಧರಾಯ ಮಲ್ಲ ವ್ರಾತ ಕುಲಗಿರಿ ವಜ್ರನೆಂದುದು ಮಗಧ ಪರಿವಾರ
pūtu majha jagajaṭṭi dhaṇu dhaṇu vātasuta parabala bhayaṃkara sōtanō pratimallaneṃdaru kr̥ṣṇa phaluguṇaru bhītanādanu bhīmanahita vi ghāti māgadharāya malla vrāta kulagiri vajraneṃdudu magadha parivāra
ಅಲಸಿದರು ಬಿನ್ನಣಕೆ ಬಿಗುಹಿನ ಕಳಿವುಗಳ ಬೇಸರಿಕೆಯಲಿ ಕಡು ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ ತೂಲಗಿ ನಿಂದರು ಕರ್ಪುರದ ತನಿ ಹಳುಕನಣಲೊಳಗಡಸಿ ದಂಡೆಯ ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ
alasidaru binnaṇake biguhina kaḷivugaḷa bēsarikeyali kaḍu luḷi masagi ḍāvarisi manavanupāya ḍāvarake tūlagi niṃdaru karpurada tani haḷukanaṇaloḷagaḍasi daṃḍeya balidu barasiḍilerakavene tāgidaru baḷasinali
ಬಾಳ ಹೋಯ್ಲೋ ಸಿಡಿಲ ತೊಡರಿನ ಸೂಳುಗಳೊ ಸಿಡಿದಲೆಯ ಗಿರಿಗಳ ಬೀಳುಗಳೊ ಬಿರು ಹೊಯ್ಲ ಧಾರೆಯ ಕಿಡಿಯ ತುಂಡುಗಳೊ ತೋಳ ನೆಗಹಿನ ಮುಷ್ಟಿ ಘಾತದ ಮೇಲು ಘಾಯದ ಲುಳಿಯ ಘೋಳಾ ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ
bāḷa hōylō siḍila toḍarina sūḷugaḷo siḍidaleya girigaḷa bīḷugaḷo biru hoyla dhāreya kiḍiya tuṃḍugaḷo tōḷa negahina muṣṭi ghātada mēlu ghāyada luḷiya ghōḷā ghōḷigaḷanāreṇisuvaru kalibhīma māgadhara
ಕುಸಿದು ಘಾಯವ ಕಳೆದು ವಕ್ಷದ ಬೆಸುಗೆ ಬಿಡೆ ಸಿಡಿದೆದ್ದು ಹೊಯ್ಲಿಗೆ ಮುಸುಡ ತಿರುಹುವ ಮೈಯನೊಡ್ಡಿ ದಡೌಕಿ ಧಟ್ಟಿಸುವ ಅಸಮಸೆಗೆ ಮೈಯಳುಕದೆರಗುವ ಹುಸಿವ ಜಾರುವ ಹೊಳೆವ ಹಣುಗುವ ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು
kusidu ghāyava kaḷedu vakṣada besuge biḍe siḍideddu hoylige musuḍa tiruhuva maiyanoḍḍi daḍauki dhaṭṭisuva asamasege maiyaḷukaderaguva husiva jāruva hoḷeva haṇuguva besuva biḍisuva diṣṭivāḷaru hokku heṇagidaru
ಪವನಜನ ರಾವಣನ ಝಾಡಿಯ ತಿವಿತಗಳು ಚಾಣೂರ ಕೃಷ್ಣರ ಜವಳಿ ಹೊಯ್ಲಿವರೊಳಗೆ ಜೋಡಿಸವೇನ ಹೇಳುವೆನು ಶಿವನ ಡಮರುಗದಾಟವೋ ಭೈ ರವನ ಫಣೆಗಣ್ಣಾಟವೋ ಬಿರು ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ
pavanajana rāvaṇana jhāḍiya tivitagaḷu cāṇūra kr̥ṣṇara javaḷi hoylivaroḷage jōḍisavēna hēḷuvenu śivana ḍamarugadāṭavō bhai ravana phaṇegaṇṇāṭavō biru diviguḷina dekhkhāḷa masagitu bhīma māgadhara
ಕುಣಿದವಿಬ್ಬರ ಮುಷ್ಟಿಯಿಬ್ಬರ ಹಣೆಯಲೆದೆಯಲಿ ಮೋರೆಯಲಿ ಭುಜ ದಣಸಿನಲಿ ಕಂದದಲಿ ಶಿರದಲಿ ಬದಿಯಲುದರದಲಿ ಝಣು ವಿರೋಧಿ ವಿಭಾಡ ಝಣು ಝಣು ಝಣು ಜಗತ್ರಯ ಜಟ್ಟಿ ಝಣು ಝಣು ಝಣು ಝಣೆಂಬಬ್ಬರಣೆ ಮಸಗಿದುದೆರಡು ಬಾಹೆಯಲಿ
kuṇidavibbara muṣṭiyibbara haṇeyaledeyali mōreyali bhuja daṇasinali kaṃdadali śiradali badiyaludaradali jhaṇu virōdhi vibhāḍa jhaṇu jhaṇu jhaṇu jagatraya jaṭṭi jhaṇu jhaṇu jhaṇu jhaṇeṃbabbaraṇe masagiduderaḍu bāheyali
ಹೊಯ್ಲ ಹೊದರೆದ್ದವು ವಿಘಾತದ ಕಯ್ಲುಳಿಯ ಕಡುಘಾಯ ಘಾಯಕೆ ಮೆಯ್ಲವಣೆ ಲಂಬಿಸಿತು ಕಡುಹಿನ ಖತಿಯ ಕೈಮಸಕ ಹೊಯ್ಲ ಹೊಗೆಗಳ ಹೋರಟೆಯ ವೇ ಗಾಯ್ಲ ಮುಷ್ಟಾಮುಷ್ಟಿ ಗತಿಯ ದೃ ಢಾಯ್ಲ ರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ
hoyla hodareddavu vighātada kayluḷiya kaḍughāya ghāyake meylavaṇe laṃbisitu kaḍuhina khatiya kaimasaka hoyla hogegaḷa hōraṭeya vē gāyla muṣṭāmuṣṭi gatiya dr̥ ḍhāyla rappaḷisidaru pada ghaṭṭaṇege nela kusiye
ಆವ ಸಾಧನೆಯೋ ವಿಘಾತಿಯ ಲಾವಣಿಗೆಗದ್ರಿಗಳು ಬಿರಿದವು ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ ತಾವರೆಯ ತೆತ್ತಿಗನ ಕುಮುದದ ಜೀವಿಗನ ಮಿಗೆ ಮೇಲು ನೋಟದೊ ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ
āva sādhaneyō vighātiya lāvaṇigegadrigaḷu biridavu maivaḷiyalukkidudu kaḍuhina khatiya kaimasaka tāvareya tettigana kumudada jīvigana mige mēlu nōṭado ḷā vigaḍarugaḷaḍasi tividāḍidaru bēsarade
ತೆಗೆಯರರ್ಜುನ ಕೃಷ್ಣರೀತನ ನುಗಿಯರವನವರವನನಿರುಳಿನ ಹಗಲ ವಿವರಣೆಯಿಲ್ಲ ಮಜ್ಜನ ಭೋಜನಾದಿಗಳ ಬಗೆಗೆ ತಾರರು ಬಾಹು ಸತ್ವದ ಹೊಗರು ಹೋಗದು ಮನದ ಖಾತಿಯ ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ
tegeyararjuna kr̥ṣṇarītana nugiyaravanavaravananiruḷina hagala vivaraṇeyilla majjana bhōjanādigaḷa bagege tāraru bāhu satvada hogaru hōgadu manada khātiya tegahu taggadu hokku tividāḍidaru bēsarade
ಸತ್ವ ಸವೆಯದು ಮನದ ಮುಳಿಸಿನ ಬಿತ್ತು ಬೀಯದು ಜಯದ ಬಯಕೆಯ ಸುತ್ತು ಸಡಿಲದು ಬಿಂಕ ಬೀಯದು ನೋಯದಾಟೋಪ ತೆತ್ತ ಕೈ ಕಂಪಿಸದು ಮುಷ್ಟಿಯ ಹತ್ತುಗೆಗೆ ಮನ ಝೋಂಪಿಸದು ಮದ ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ
satva saveyadu manada muḷisina bittu bīyadu jayada bayakeya suttu saḍiladu biṃka bīyadu nōyadāṭōpa tetta kai kaṃpisadu muṣṭiya hattugege mana jhōṃpisadu mada vetti meṭṭidarobbarobbara marmaghātadali
ಅರಸ ಕೇಳೈದನೆಯ ದಿವಸದೊ ಳುರುಭಯಂಕರವಾಯ್ತು ಕದನದ ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ ಎರಡು ದೆಸೆಯಲಿ ವೀಳೆಯದ ಕ ರ್ಪುರದ ಕವಳದ ಕೈ ಚಳಕದಲಿ ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರಂಗದಲಿ
arasa kēḷaidaneya divasado ḷurubhayaṃkaravāytu kadanada bharadoḷeḍederahilla viśramavilla nimiṣadali eraḍu deseyali vīḷeyada ka rpurada kavaḷada kai caḷakadali terahanallade matte kāṇenu yuddharaṃgadali
ಭರದ ಭಾರಣೆಯಲಿ ಚತುರ್ದಶಿ ಯಿರುಳು ಮಗಧನ ಬಾಹುಸತ್ವದ ಮುರಿವು ಮೊಳೆತುದು ಶೌರ್ಯ ಸೆಡೆದುದುಭಯದಬಿಗುಹಿನಲಿ ಉರುಪರಾಕ್ರಮ ತೇಜ ಪಡುವಣ ತರಣಿಯಾದುದು ಧಟ್ಟಣೆಯ ಧರ ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ
bharada bhāraṇeyali caturdaśi yiruḷu magadhana bāhusatvada murivu moḷetudu śaurya seḍedudubhayadabiguhinali uruparākrama tēja paḍuvaṇa taraṇiyādudu dhaṭṭaṇeya dhara dhurake nirdrava jihveyādudu nimiṣa nimiṣadali
ಬೇಸರಿಕೆ ಬೇರೂರಿದುದು ಜಯ ದಾಸೆ ಜಾರಿತು ದಿಟ್ಟತನದ ವಿ ಳಾಸ ಹಾರಿತು ಸುಪ್ರತಾಪದ ಕೆಂಪು ಕರಿದಾಯ್ತು ಮೀಸಲಳಿದುದು ಮುಳಿಸು ಶೌರ್ಯದ ವಾಸಿ ಪೈಸರವಾಯ್ತು ರಣದಾ ವೇಶವಿಳಿದುದು ಮಗಧಪತಿಗಿದನರಿದನಸುರಾರಿ
bēsarike bērūridudu jaya dāse jāritu diṭṭatanada vi ḷāsa hāritu supratāpada keṃpu karidāytu mīsalaḷidudu muḷisu śauryada vāsi paisaravāytu raṇadā vēśaviḷidudu magadhapatigidanaridanasurāri
ಹೊರಗೆ ಬಲಿದೊಳಡಿಳ್ಳವನು ಪರ ರರಿಯದಂತಿರೆ ತಿವಿದ ಮಗಧನ ಪರಿಯನರಿದನು ದನುಜರಿಪು ಪರರಿಂಗಿತಜ್ಜನಲೆ ಅರಿವುದರಿದೆ ಚರಾಚರಂಗಳ ಹೊರಗೊಳಗು ತಾನದಿಲ್ಲಿದ ನರಿಯನೇ ಶಿವಯೆಂದನಾ ಜನಮೇಜಯನು ನಗುತ
horage balidoḷaḍiḷḷavanu para rariyadaṃtire tivida magadhana pariyanaridanu danujaripu parariṃgitajjanale arivudaride carācaraṃgaḷa horagoḷagu tānadillida nariyanē śivayeṃdanā janamējayanu naguta
ಎಲೆಲೆ ಪವನಜ ಮಾಗಧೇಶ್ವರ ನಳವನರಿದಾ ನಿನ್ನ ತಂದೆಯ ಬಲುಹು ಕೊಂಡೀ ರಿಪುವ ಮುರಿ ನೆನೆ ನೆನೆ ಸಮೀರಣನ ಬಲುಮುಗಿಲು ಬಿರುಗಾಳಿಯೊಡ್ಡಿ ನೊ ಳಳುಕದೇ ಫಡ ಬೇಗ ಮಾಡೆನೆ ಕಲಿವೃಕೋದರನನಿಲರೂಪ ಧ್ಯಾನಪರನಾದ
elele pavanaja māgadhēśvara naḷavanaridā ninna taṃdeya baluhu koṃḍī ripuva muri nene nene samīraṇana balumugilu birugāḷiyoḍḍi no ḷaḷukadē phaḍa bēga māḍene kalivr̥kōdarananilarūpa dhyānaparanāda
ಧ್ಯಾನದಲಿ ತನ್ಮಯತೆಯಾಗಲ ನೂನ ಸಾಹಸನಾಗಿ ಮಗಧ ಮ ಹಾ ನರೇಂದ್ರನ ತುಡುಕಿ ಹಿಡಿದನು ಮಲ್ಲಗಂಟಿನಲಿ ಆ ನಗೆಯನೇ ವಣ್ಣಿಸುವೆನನು ಮಾನಿಸದೆ ಬೀಸಿದನು ಬವಣೆಯ ಭಾನುಮಂಡಲದಂತೆ ತಿರುಗಿದನಾ ಜರಾಸಂಧ
dhyānadali tanmayateyāgala nūna sāhasanāgi magadha ma hā narēṃdrana tuḍuki hiḍidanu mallagaṃṭinali ā nageyanē vaṇṇisuvenanu mānisade bīsidanu bavaṇeya bhānumaṃḍaladaṃte tirugidanā jarāsaṃdha
ಬರಸೆಳೆದು ಕರದಿಂದ ಮಾಗಧ ನೆರಡು ಕಾಲನು ಹಿಡಿದು ಸೀಳಿದು ಧರೆಗೆ ಬಿಸುಟನು ಸಂಧಿಸಿದವಾ ಸೀಳ್ ತತುಕ್ಷಣಕೆ ಮರಳಿ ಪವನಜ ಹಿಡಿದು ಸೀಳುವ ನಿರದೆ ಮಗುಳವು ಸಂಧಿಸುವವೀ ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ
baraseḷedu karadiṃda māgadha neraḍu kālanu hiḍidu sīḷidu dharege bisuṭanu saṃdhisidavā sīḷ tatukṣaṇake maraḷi pavanaja hiḍidu sīḷuva nirade maguḷavu saṃdhisuvavī pari halavu sūḷinali bhīmanoḷodagidanu magadha
ಮುರಮಥನನದನರಿತು ನಿಜಕರ ವೆರಡ ಪಲ್ಲಟವಾಗಿ ಸಂಧಿಸ ಲರಿವಿದಾರಣಭೀಮ ನೋಡುತ ಮರಳಿ ಮಾಗಧನ ಎರಡು ಸೀಳನು ಮಾಡಿ ಹೊಯ್ದ ಬ್ಬರಿಸಿ ಪಲ್ಲಟವಾಗಿ ಸೇರಿಸಿ ತಿರುಗಿಸಿದನೇನೆಂಬೆನುನ್ನತ ಬಾಹು ಸತ್ವದಲಿ
muramathananadanaritu nijakara veraḍa pallaṭavāgi saṃdhisa larividāraṇabhīma nōḍuta maraḷi māgadhana eraḍu sīḷanu māḍi hoyda bbarisi pallaṭavāgi sērisi tirugisidanēneṃbenunnata bāhu satvadali
ತಿರುಹಿದನು ನೂರೆಂಟು ಸೂಳನು ಧರೆಯೊಳಪ್ಪಳಿಸಿದನು ಬಳಿಕಾ ಪುರ ಜನದ ಪರಿಜನದ ಹಾಹಾ ರವದ ರಹಿ ಮಸಗೆ ತೆರಳಿತಲ್ಲಿಯದಲ್ಲಿ ಮಾಗಧ ನರಸಿಯರು ಬಿಡುಮುಡಿಯ ಜಠರದ ಕರದ ಬಿರುಹೊಯ್ಲಿನಲಿ ಹೊರವಂಟರು ನಿಜಾಲಯವ
tiruhidanu nūreṃṭu sūḷanu dhareyoḷappaḷisidanu baḷikā pura janada parijanada hāhā ravada rahi masage teraḷitalliyadalli māgadha narasiyaru biḍumuḍiya jaṭharada karada biruhoylinali horavaṃṭaru nijālayava
ಮನೆಮನೆಯ ಕದವಿಕ್ಕಿದವು ನೃಪ ವನಿತೆಯರು ಹೊರವಂಟರಲ್ಲಿಯ ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು ಜನದ ಕೋಲಾಹಲವನಾತನ ತನುಜರೋಟವನವನ ಸತಿಯರ ನಿನದವನು ಕಂಡಸುರಹರ ಸಾರಿದನು ಕೈ ನೆಗಹಿ
manemaneya kadavikkidavu nr̥pa vaniteyaru horavaṃṭaralliya manujaraḍagidaradri guheyali bēha bēhavaru janada kōlāhalavanātana tanujarōṭavanavana satiyara ninadavanu kaṃḍasurahara sāridanu kai negahi
ಅಂಜದಿರಿ ಪುರದವರು ವನಿತೆಯ ರಂಜದಿರಿ ಮಾಗಧನ ಪರಿಜನ ವಂಜದಿರಿ ಮಂತ್ರಿ ಪ್ರಧಾನ ಪಸಾಯ್ತರಾದವರು ಅಂಜದಿರಿ ಕರೆಯಿವನ ಮಗನನು ಭಂಜಿಸುವುದಿಲ್ಲಕಟ ಭೀಮ ಧ ನಂಜಯರು ಕೊಟ್ಟಭಯವೆಂದನು ನಗುತ ಮುರವೈರಿ
aṃjadiri puradavaru vaniteya raṃjadiri māgadhana parijana vaṃjadiri maṃtri pradhāna pasāytarādavaru aṃjadiri kareyivana magananu bhaṃjisuvudillakaṭa bhīma dha naṃjayaru koṭṭabhayaveṃdanu naguta muravairi
ಮುರಿದು ಕೆಡಹಿದರರಿಯನಲ್ಲಿಯ ಸೆರೆಯ ಮನೆಗಳ ಹೊಕ್ಕು ರಾಯರ ಸೆರೆಗಳನು ಬಿಡಿಸಿದನು ನಾನಾ ದ್ವೀಪಪಾಲಕರ ಮೆರೆವ ಮಣಿಮಯ ರಶ್ಮಿವಳಯದ ಮಿರುಪ ರಥವನು ಕೊಂಡು ನಗರದ ಹೊರವಳಯದಲಿ ಬಂದು ಹೊಕ್ಕರು ತಮ್ಮ ಪಾಳೆಯವ
muridu keḍahidarariyanalliya sereya manegaḷa hokku rāyara seregaḷanu biḍisidanu nānā dvīpapālakara mereva maṇimaya raśmivaḷayada mirupa rathavanu koṃḍu nagarada horavaḷayadali baṃdu hokkaru tamma pāḷeyava
ಪೌರಜನ ಕಾಣಿಕೆಗಳಲಿ ಕಂ ಸಾರಿ ಭೀಮಾರ್ಜುನರ ಕಂಡುದು ಧಾರುಣೀಪಾಲಕರು ಬಂದರು ಬೆನ್ನಲಿವರುಗಳ ಘೋರವಡಗಿದುದೆಮ್ಮ ಕಾರಾ ಗಾರ ಬಂಧವಿಮುಕ್ತವಾಯ್ತುಪ ಕಾರವೆಮ್ಮಿಂದಾವುದೆಂದರು ನೃಪರು ಕೈಮುಗಿದು
paurajana kāṇikegaḷali kaṃ sāri bhīmārjunara kaṃḍudu dhāruṇīpālakaru baṃdaru bennalivarugaḷa ghōravaḍagidudemma kārā gāra baṃdhavimuktavāytupa kāravemmiṃdāvudeṃdaru nr̥paru kaimugidu
ನವೆದಿರತಿ ದುಃಖದಲಿ ಬಿಡುಗಡೆ ಪವನಸುತನಿಂದಾಯ್ತು ನಿಜ ರಾ ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು ಎವಗೆ ಮಾಳ್ಪುಪಕಾರ ಬೇರಿ ಲ್ಲವನಿಪನ ವರ ರಾಜಸೂಯಕೆ ನಿವನಿವಗೆ ಮುಂಕೊಂಡು ಬಹುದೆಂದನು ಮುರಾಂತಕನು
navedirati duḥkhadali biḍugaḍe pavanasutaniṃdāytu nija rā jyavanu hoguvudu paurajana parijanava salahuvudu evage māḷpupakāra bēri llavanipana vara rājasūyake nivanivage muṃkoṃḍu bahudeṃdanu murāṃtakanu
ನಗರಜನ ಮಂತ್ರಿಪ್ರಧಾನಾ ದಿಗಳು ಸಹಿತ ಕುಮಾರನೈತಂ ದಗಧರನ ಪದಕೆರಗಿದನು ಭೀಮಾರ್ಜುನಾಂಘ್ರಿಯಲಿ ಮಗಗೆ ತಂದೆಯ ಮಾರ್ಗದಲಿ ನಂ ಬುಗೆಯೊ ಕರುಣಾರಕ್ಷಣದ ನಂ ಬುಗೆಯೊ ಚಿತ್ತವಿಸೆಂದರಾ ಮಂತ್ರಿಗಳು ಕೈಮುಗಿದು
nagarajana maṃtripradhānā digaḷu sahita kumāranaitaṃ dagadharana padakeragidanu bhīmārjunāṃghriyali magage taṃdeya mārgadali naṃ bugeyo karuṇārakṣaṇada naṃ bugeyo cittaviseṃdarā maṃtrigaḷu kaimugidu
ಶವವ ಸಂಸ್ಕರಿಸುವುದು ಮಾಗಧ ನವನಿಯಲಿ ಸಹದೇವಗಭಿಷೇ ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆಂದು ಅವರಿಗಭಯವನಿತ್ತು ಪರಿವಾ ರವನು ಕಳುಹಿದರಿತ್ತಲಾತನ ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು
śavava saṃskarisuvudu māgadha navaniyali sahadēvagabhiṣē kavanu māḍisidalladettalu murivudilleṃdu avarigabhayavanittu parivā ravanu kaḷuhidarittalātana yuvatiyaru bēḍidaru vahniya paḍedu maraḷidaru
ಅವನ ಸಂಸ್ಕಾರದಲಿ ನಾರೀ ನಿವಹ ಸಹಗತವಾಯ್ತು ವೈದಿಕ ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ ಅವನ ಮಗ ಸಹದೇವನಾತಂ ಗವನಿಯಲಿ ಪಟ್ಟಾಭಿಷೇಕೋ ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ
avana saṃskāradali nārī nivaha sahagatavāytu vaidika vividha vidhiyali māḍidaru śēṣakriyādigaḷa avana maga sahadēvanātaṃ gavaniyali paṭṭābhiṣēkō tsavava māḍisi koṭṭanabhayavanā parigrahake
ತೇರುಗಳ ತೇಜಿಗಳನಾ ಭಂ ಡಾರವನು ಗಜಘಟೆ ಸಹಿತ ವಿ ಸ್ತಾರ ವಿಭವವನೊಪ್ಪುಗೊಂಡರು ಮಗಧ ನಂದನನ ಧಾರುಣಿಯನವಗಿತ್ತು ಸಕಳ ಮ ಹೀರಮಣರನು ಕಳುಹಿ ಬಂದನು ವೀರನಾರಾಯಣನು ಶಕ್ರಪ್ರಸ್ಥಪುರವರಕೆ
tērugaḷa tējigaḷanā bhaṃ ḍāravanu gajaghaṭe sahita vi stāra vibhavavanoppugoṃḍaru magadha naṃdanana dhāruṇiyanavagittu sakaḷa ma hīramaṇaranu kaḷuhi baṃdanu vīranārāyaṇanu śakraprasthapuravarake
Keys: ← → turn the page, J K step through the verses.
Illustration: Verse & Place (Project-owned).