ಯಾಗಸಿದ್ಧಿಗೆ ನಡೆದು ಪೂರ್ವ ವಿ ಭಾಗದಲಿ ಭೂಮಿಪರ ಕೈಯಲಿ ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ
yāgasiddhige naḍedu pūrva vi bhāgadali bhūmipara kaiyali sāgarōpama dhanava mēḷaisidanu kali bhīma
ಸಭಾ ಪರ್ವ — ಸಂಧಿ ೪ · ಸಭಾ ಪರ್ವ — ಸಂಧಿ ೪
sabhā parva — saṃdhi 4
The complete sabha parva · sandhi 4 in Kannada.
14 passagesKannada with transliteration
Invocation
ಯಾಗಸಿದ್ಧಿಗೆ ನಡೆದು ಪೂರ್ವ ವಿ ಭಾಗದಲಿ ಭೂಮಿಪರ ಕೈಯಲಿ ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ
yāgasiddhige naḍedu pūrva vi bhāgadali bhūmipara kaiyali sāgarōpama dhanava mēḷaisidanu kali bhīma
ಕೇಳು ಜನಮೇಜಯ ಧರಿತ್ರೀ ಪಾಲ ಯಮ ನಂದನನ ಭಾಗ್ಯದ ಹೋಲಿಕೆಗೆ ಬಹರುಂಟೆ ನಳ ನಹುಪಾದಿ ರಾಯರಲಿ ಆಳು ನಡೆದುದು ಭೀಮಸೇನನ ಧಾಳಿಯಿದೆಯೆನೆ ತೆತ್ತುದವನೀ ಪಾಲಕರು ತಂತಮ್ಮ ನಿಜ ವಿತ್ತಾನುರೂಪದಲಿ
kēḷu janamējaya dharitrī pāla yama naṃdanana bhāgyada hōlikege baharuṃṭe naḷa nahupādi rāyarali āḷu naḍedudu bhīmasēnana dhāḷiyideyene tettudavanī pālakaru taṃtamma nija vittānurūpadali
ನಡೆದು ಶೋಧಿಸಿ ರೋಚಮಾನನ ಹಿಡಿದು ಬಿಟ್ಟನು ಸವರ ವಿತ್ತವ ನಡಕಿತನಿಲಜನಾಳು ಮುಂದಣ ಚೇದಿ ದೇಶದಲಿ ಘುಡಿಘುಡಿಸೆ ನಿಸ್ಸಾಳವೀ ಗಡ ಬಡೆಯಿದೇನೆನೆ ಭೀಮಸೇನನ ಪಡೆಯೆನಲು ಶಿಶುಪಾಲ ಬಂದನು ಕಂಡನುಚಿತದಲಿ
naḍedu śōdhisi rōcamānana hiḍidu biṭṭanu savara vittava naḍakitanilajanāḷu muṃdaṇa cēdi dēśadali ghuḍighuḍise nissāḷavī gaḍa baḍeyidēnene bhīmasēnana paḍeyenalu śiśupāla baṃdanu kaṃḍanucitadali
ಏನು ಬಂದೆಯಪೂರ್ವವೆನೆ ಯಾ ಗಾನುರಾಗವನರುಪಲತಿ ಸು ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ ಮಾನಿಸರ ಕಳುಹಿದರೆ ಸಾಲದೆ ನೀನಿದೇಕೆಂದುಚಿತದಲಿ ಸ ನ್ಮಾನಿಸುತ ನಿಲಿಸಿದನು ತಿಂಗಳು ಪವನನಂದನನ
ēnu baṃdeyapūrvavene yā gānurāgavanarupalati su mmānadali śiśupāla hērisidanu mahādhanava mānisara kaḷuhidare sālade nīnidēkeṃducitadali sa nmānisuta nilisidanu tiṃgaḷu pavananaṃdanana
ನಡೆದು ಮುಂದೆ ಕಳಿಂಗ ದೇಶದೊ ಳಡಸಿ ಬಿಟ್ಟನು ಶೋಣಿವಂತನ ಹಿಡಿದು ಕಪ್ಪವ ಕೊಂಡು ಸದೆದನು ಕೋಸಲೇಶ್ವರನ ಅಡಕಿತಲ್ಲಿಯ ಧನ ಪಯೋಧಿಯ ಕಡೆಯ ಕೋಟೆಯ ಮುರಿಯಲವನೆದೆ ಯೊಡೆದು ದೀರ್ಘಪ್ರಜ್ಜ ನಿತ್ತನು ಬೇಹ ವಸ್ತುಗಳ
naḍedu muṃde kaḷiṃga dēśado ḷaḍasi biṭṭanu śōṇivaṃtana hiḍidu kappava koṃḍu sadedanu kōsalēśvarana aḍakitalliya dhana payōdhiya kaḍeya kōṭeya muriyalavanede yoḍedu dīrghaprajja nittanu bēha vastugaḷa
ಆಳು ನಡೆದುದು ಚೂಣಿಯಲಿ ಗೋ ಪಾಲನೆಂಬನ ಮುರಿಯೆ ತೆತ್ತುದ ಹೇಳಲರಿಯೆನು ಸಂಖ್ಯೆಯನು ಮುಂದತ್ತಪಾಲಕನ ಜಾಳಿಸಿದನಾ ಕಾಶಿ ರಾಜನ ಧಾಳಿಯಲಿ ಕೊಂದನು ಸುಪಾರ್ಶ್ವನ ಮೇಲೆ ನಡೆದನು ಗಯನ ಮತ್ಸ್ಯನ ಗೆಲಿದನಾ ಭೀಮ
āḷu naḍedudu cūṇiyali gō pālaneṃbana muriye tettuda hēḷalariyenu saṃkhyeyanu muṃdattapālakana jāḷisidanā kāśi rājana dhāḷiyali koṃdanu supārśvana mēle naḍedanu gayana matsyana gelidanā bhīma
ನಡೆದು ಮುಂದೆ ವಿದೇಹನನು ಸದೆ ಬಡಿದು ಮತ್ತೆ ಕಿರಾತ ಬಲವವ ಗಡಿಸಿ ಕಾದಿತನಂತವದರೊಳಗೇಳು ಮಾನಿಸರು ಒಡೆಯರವದಿರವಂಗಡವ ಹುಡಿ ಹುಡಿಯ ಮಾಡಿ ನಿಷಾದ ವರ್ಗವ ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ
naḍedu muṃde vidēhananu sade baḍidu matte kirāta balavava gaḍisi kāditanaṃtavadaroḷagēḷu mānisaru oḍeyaravadiravaṃgaḍava huḍi huḍiya māḍi niṣāda vargava keḍahi niṣadhana hoydu seḷedanu sakala vastugaḷa
ಮಲೆತು ಕಾದಿದ ದಂಡಧಾರನ ಗೆಲಿದು ಮುಗಧೇಶ ಗಿರಿವ್ರಜ ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತಂದು ದಳವ ಹೇಳಿದನಾತನಲ್ಲಿಂ ದಿಳಿದು ಕರ್ಣನ ಗೆಲಿದು ಕಪ್ಪವ ಸೆಳೆದು ಕೊಂಡದ್ರಿಯಲಿ ಸದೆದನು ಬಹಳ ವನಚರರ
maletu kādida daṃḍadhārana gelidu mugadhēśa girivraja doḷage pāḷeya biṭṭudavanidirāgi naḍetaṃdu daḷava hēḷidanātanalliṃ diḷidu karṇana gelidu kappava seḷedu koṃḍadriyali sadedanu bahaḷa vanacarara
ಸೂರೆಗೊಂಡಲ್ಲಿಂದ ನಡೆದನು ಮೀರಿ ಗಂಗಾಸಂಗಮವ ಕೈ ಮೀರಲರಿಯದೆ ಸಂಧಿಗವವೀಶ್ವರರು ವಶವಾಯ್ತು ಹೇರಿಸಿದನನುಪಮದ ವಸ್ತುವ ನಾರು ಸಾವಿರ ಭಂಡಿಯಲಿ ನಡೆ ದೇರಿ ಹೊಯ್ದನು ವಾಸುದೇವನ ಪೌಂಡ್ರಕಾಹ್ವಯನ
sūregoṃḍalliṃda naḍedanu mīri gaṃgāsaṃgamava kai mīralariyade saṃdhigavavīśvararu vaśavāytu hērisidananupamada vastuva nāru sāvira bhaṃḍiyali naḍe dēri hoydanu vāsudēvana pauṃḍrakāhvayana
ಪುರವರವನಲ್ಲಿಂದ ಮೌಲ್ಯದ ತೆರಳಿಕೆಯ ಮಾಡಿದನು ಮೂಡಲು ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ ತೆರಳಿಯಲ್ಲಿಂದಿಂದ್ರ ಸೇನನ ನೊರೆಸಿ ಭಂಡಾರವನು ಹೇರಿಸಿ ಮರಳಿ ವಂಗನನಪ್ಪಳಿಸಿದನು ಲುಬ್ಧಕರು ಸಹಿತ
puravaravanalliṃda maulyada teraḷikeya māḍidanu mūḍalu haridu muridu samudrasēnana sarvagavateyali teraḷiyalliṃdiṃdra sēnana noresi bhaṃḍāravanu hērisi maraḷi vaṃgananappaḷisidanu lubdhakaru sahita
ಸಾರಲೋಹಿತನೆಂಬ ಸಾಗರ ತೀರವಾಸಿಗಳೊಳಕುರುವದ ವಿ ಕಾರ ಚೋನೆಗೆ ಚೀನ ಬೋಟಕರನು ನಿವಾಸಿಗಳ ಓರೆ ಬಾಗಿನ ಕುರುವ ಕೊಳ್ಳದ ಗೌರಿಕರನಪ್ಪಳಿಸಿ ಮಲೆಯ ವಿ ಹಾರಿಗಳ ಬರಿಗೈದು ತುಂಬಿಸಿದನು ಸುವಸ್ತುಗಳ
sāralōhitaneṃba sāgara tīravāsigaḷoḷakuruvada vi kāra cōnege cīna bōṭakaranu nivāsigaḷa ōre bāgina kuruva koḷḷada gaurikaranappaḷisi maleya vi hārigaḷa barigaidu tuṃbisidanu suvastugaḷa
ಧಾಳಿ ಹರಿದುದು ಪಂಚ ಗೌಳವ ರಾಳವೊಡ್ಡಿಯರಾಂಧ್ರ ಜಾಳಾಂ ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ ಮೇಲು ದುರ್ಗದ ಪಾರ್ವತೇಯರಿ ಗಾಳು ಹರಿದುದು ಸಂದುಗೊಂದಿಯ ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ
dhāḷi haridudu paṃca gauḷava rāḷavoḍḍiyarāṃdhra jāḷāṃ drāḷigaḷanappaḷisi hūḍisidanu mahādhanava mēlu durgada pārvatēyari gāḷu haridudu saṃdugoṃdiya śaila guhegaḷoḷarasi hiḍidanu bahaḷa dhanayutara
ಅರಸಿದನು ನಾವೆಗಳಲಬ್ಧಿಯ ಕುರುವದಲಿ ಕೊಬ್ಬಿದ ಧನಾಢ್ಯರ ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ ಸೆರೆವಿಡಿದು ತನಿ ಸೂರೆಯಲಿ ಪಡೆ ನೆರೆದಣಿಯಲಾ ಮ್ಲೇಚ್ಛ ವರ್ಗವ ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ
arasidanu nāvegaḷalabdhiya kuruvadali kobbida dhanāḍhyara muridu maraḷidu kelabaladalā dvīpa pālakara sereviḍidu tani sūreyali paḍe neredaṇiyalā mlēccha vargava taridu śōdhisi tegedanalliya sāra vastugaḷa
ಆ ಮಹಾ ಭೋಟಕ ಮಹಾಹ್ವಯ ಧಾಮದಲಿ ದಸ್ಯುಗಳನತಿ ನಿ ಸ್ಸೀಮ ಯವನಕ ರೂಷರನು ತಾಗಿದನು ವಹಿಲದಲಿ ಹೇಮಮುಕ್ತಾ ರಜತ ಚಂದನ ರಾಮಣೀಯಕ ವಸ್ತು ನಿಚಯದ ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ
ā mahā bhōṭaka mahāhvaya dhāmadali dasyugaḷanati ni ssīma yavanaka rūṣaranu tāgidanu vahiladali hēmamuktā rajata caṃdana rāmaṇīyaka vastu nicayada sīmegaḷa nānariyenaḷavaḍisidanu kalibhīma
ಮರಳೆಯನಿಲಜನಾ ಮಹಾದ್ಭುತ ತರದ ವಸ್ತುವನಾನಲಾಪುದೆ ಧರಣಿಯೆನೆ ಸಂದಣಿಸಿದವಸಂಖ್ಯಾತ ರಥಯೂಥ ಅರಸುಗಳ ಸಹಿತೀ ಮಹಾಬಲ ವೆರೆಸಿ ಬಂದನು ಭೀಮನಣ್ಣನ ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ
maraḷeyanilajanā mahādbhuta tarada vastuvanānalāpude dharaṇiyene saṃdaṇisidavasaṃkhyāta rathayūtha arasugaḷa sahitī mahābala veresi baṃdanu bhīmanaṇṇana caraṇakeragidanarjunana takkaisidanu naguta
Keys: ← → turn the page, J K step through the verses.
Illustration: Verse & Place (Project-owned).