Skip to content

ಸಭಾ ಪರ್ವ — ಸಂಧಿ ೧೦ · ಸಭಾ ಪರ್ವ — ಸಂಧಿ ೧೦

Sabha Parva · Sandhi 10

sabhā parva — saṃdhi 10

The complete sabha parva · sandhi 10 in Kannada.

81 passagesKannada with transliteration

An original emblem for Sabha Parva.

Invocation

2.10.opening

ಅಗ್ರಪೂಜಾವ್ಯಾಜ ಮುಖದಲಿ ವಿಗ್ರಹದ ಶಿಶುಪಾಲಶಿರ ಗಗ ನಾಗ್ರದಲಿ ಕುಣಿದಾಡಲೆಸೆದನು ವೀರ ನಾರಾಯಣ

agrapūjāvyāja mukhadali vigrahada śiśupālaśira gaga nāgradali kuṇidāḍalesedanu vīra nārāyaṇa

ಕೇಳು ಜನಮೇಜಯ ಧರಿತ್ರೀ ಪಾಲ ಸಹದೇವನ ವಚೋಗ್ರ ವ್ಯಾಳ ವಿಷವೆಡೆಯಲ್ಲಿ ಸಿಲುಕಿತು ಮನ ಮಹೀಶ್ವರರ ಸೂಳು ನೆನಹಿನ ಸುಳಿಮನದ ಸಮ ಪಾಳಿ ಕೋಪದಲಳಿದ ಮೌನದ ಮೇಲು ಬುದ್ಧಿಯ ಜೋಡಿ ಬೇರೊಂದಾಯ್ತು ಭಾವದಲಿ

kēḷu janamējaya dharitrī pāla sahadēvana vacōgra vyāḷa viṣaveḍeyalli silukitu mana mahīśvarara sūḷu nenahina suḷimanada sama pāḷi kōpadalaḷida maunada mēlu buddhiya jōḍi bēroṃdāytu bhāvadali

Report an error

ಕಿವಿವಳೆಯ ಮೋರೆಗಳ ಮುಷ್ಟಿಯ ಬವರಿಗಳ ಕಡೆಗಣ್ಣ ಸನ್ನೆಯ ಸವಡಿಗೈಗಳ ನಂಬುಗೆಯ ಮನಮನದ ಬೆಸುಗೆಗಳ ಅವಸರದ ಮೈತ್ರಿಗಳ ಮಂತ್ರಿ ಪ್ರವರ ವಚನೋಪೇಕ್ಷೆಗಳ ರಣ ದವಕದಲಿ ಕಳವಳಿಸುತಿರ್ದುದು ಕೂಡೆ ನೃಪಕಟಕ

kivivaḷeya mōregaḷa muṣṭiya bavarigaḷa kaḍegaṇṇa sanneya savaḍigaigaḷa naṃbugeya manamanada besugegaḷa avasarada maitrigaḷa maṃtri pravara vacanōpēkṣegaḷa raṇa davakadali kaḷavaḷisutirdudu kūḍe nr̥pakaṭaka

Report an error

ಪರಿಣತರ ನುಡಿಗಳನು ಕಿವಿಯೋ ಕರಿಸಿದವು ದುರುದುಂಬಿಗಳ ಬಾ ಹಿರರ ನುಡಿಗಳನಡಿಗಡಿಗೆ ಕುಡಿದು ತೇಗಿದವು ಕರೆಸಿದರು ಖೂಳರನು ನೀತಿಯ ಗರುವರನು ನೂಕಿದರು ರಾಯನ ಪರಮ ಯಾಗವನಳಿಯಲನುವಾಯಿತು ನೃಪಕಟಕ

pariṇatara nuḍigaḷanu kiviyō karisidavu duruduṃbigaḷa bā hirara nuḍigaḷanaḍigaḍige kuḍidu tēgidavu karesidaru khūḷaranu nītiya garuvaranu nūkidaru rāyana parama yāgavanaḷiyalanuvāyitu nr̥pakaṭaka

Report an error

ನೀವು ಪರಿಯಂತೇಕೆ ನಿಮ್ಮವ ರಾವಲೇ ನಿಮ್ಮಾಳು ಕುದುರೆಗೆ ನಾವಲೇ ದಳಪತಿಗಳಿವದಿರ ಯಜ್ಞಮಂಟಪವ ಆವ ಬೇಗದಲುರುಹುವೆನು ಚಿ ತ್ತಾವಧಾನವ ಮಾಡಿಯೆಂದು ನೃ ಪಾವಳಿಯ ಶಿಶುಪಾಲ ಸಂತೈಸಿದನು ಸಾಮದಲಿ

nīvu pariyaṃtēke nimmava rāvalē nimmāḷu kudurege nāvalē daḷapatigaḷivadira yajñamaṃṭapava āva bēgadaluruhuvenu ci ttāvadhānava māḍiyeṃdu nr̥ pāvaḷiya śiśupāla saṃtaisidanu sāmadali

Report an error

ಧರಣಿಪರ ಸನ್ನೆಯಲಿ ಬಲ ಸಂ ವರಿಸಿ ತಾಚೆಯಲಿತ್ತ ಸಾತ್ಯಕಿ ನರ ವೃಕೋದರ ನಕುಲ ಧೃಷ್ಟದ್ಯುಮ್ನ ಮೊದಲಾದ ಕರಿತುರಗ ರಥಪತ್ತಿಗಳ ಸಂ ವರಣೆ ತಳಿತುದ ಕಂಡು ಮೂಗಿನ ಬೆರಳ ಬೆರಗಿನಲೊಲೆದು ಭೀಷ್ಮಂಗೆಂದನಾ ಭೂಪ

dharaṇipara sanneyali bala saṃ varisi tāceyalitta sātyaki nara vr̥kōdara nakula dhr̥ṣṭadyumna modalāda karituraga rathapattigaḷa saṃ varaṇe taḷituda kaṃḍu mūgina beraḷa beraginaloledu bhīṣmaṃgeṃdanā bhūpa

Report an error

ಈಸು ಪೌರುಷ ದೈವ ಘಟನೆಯೊ ಳೀಸು ಪರಿಯಂತಾಯ್ತು ಯಜ್ಞದ ಮೀಸಲಳಿಯದ ನಡೆದುದಿನ್ನೆಗ ನಿಮ್ಮ ಕರುಣದಲಿ ಈ ಸಮಸ್ತ ನೃಪಾಲಜನ ವಾ ರಾಸಿ ಮೇರೆಯನೊದೆವುತಿದೆ ನಿಮ ಗೇಸು ಭಾರವಿದೆಂದು ಬಿನ್ನವಿಸಿದನು ಭೀಷ್ಮಂಗೆ

īsu pauruṣa daiva ghaṭaneyo ḷīsu pariyaṃtāytu yajñada mīsalaḷiyada naḍedudinnega nimma karuṇadali ī samasta nr̥pālajana vā rāsi mēreyanodevutide nima gēsu bhāravideṃdu binnavisidanu bhīṣmaṃge

Report an error

ಕಾದುವರೆ ನಮ್ಮುತ್ಸವಕೆ ನೆರ ವಾದವರು ಸೈರಿಸುವರಗ್ಗದ ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ ಈ ದುರಂತದ ಚಿಂತೆಯಲಿ ಬೇ ಳಾದುದೆನ್ನಯ ಚಿತ್ತವದ್ದೆನು ಖೇದ ಪಂಕದೊಳೆನ್ನ ನುದ್ಧರಿಸೆಂದನಾ ಭೂಪ

kāduvare nammutsavake nera vādavaru sairisuvaraggada yādavēṃdrana niṃde mēladhvara visaṃghaṭana ī duraṃtada ciṃteyali bē ḷādudennaya cittavaddenu khēda paṃkadoḷenna nuddhariseṃdanā bhūpa

Report an error

ಅಂಜದಿರು ಭಯಬೇಡ ನರರಿಗೆ ನಂಜು ಪಥ್ಯವೆ ಗಿಳಿಯ ಮರಿಗಳು ಮಂಜರನ ಮೇಲ್ವಾಯ್ದು ಬದುಕುವವೇ ಮಹೀಪತಿಯೆ ಮಂಜು ಮಧ್ಯಾಹ್ನದ ದಿನೇಶನ ನೆಂಜಲಿಸುವುದೆ ಕುಪಿತ ಸಿಂಹವ ನಂಜಿಸುವವೇ ನಾಯ್ಗಳೆಂದನು ಭೂಪತಿಗೆ ಭೀಷ್ಮ

aṃjadiru bhayabēḍa nararige naṃju pathyave giḷiya marigaḷu maṃjarana mēlvāydu badukuvavē mahīpatiye maṃju madhyāhnada dinēśana neṃjalisuvude kupita siṃhava naṃjisuvavē nāygaḷeṃdanu bhūpatige bhīṣma

Report an error

ಬಗುಳುವಿವದಿರು ಹರಿಯ ಬಡಿ ಹೋ ರಿಗಳಲಾ ಜಗವರಿಯದೇ ಜ ಳ್ಳುಗಳ ಜೋಡಿಯ ಜಂಜಡಕೆ ನೀ ಜರುಗುವೈ ಭೂಪ ಉಗಿವನಿನಿಬರ ಜೀವವನು ಜೊ ತ್ತಗೆಯಲೀ ಶೀಶುಪಾಲ ನಾಯನು ತೆಗೆದು ಕಟ್ಟು ವನುರ ಮರ್ಧನನೆಂದನಾ ಭೀಷ್ಮ

baguḷuvivadiru hariya baḍi hō rigaḷalā jagavariyadē ja ḷḷugaḷa jōḍiya jaṃjaḍake nī jaruguvai bhūpa ugivaninibara jīvavanu jo ttageyalī śīśupāla nāyanu tegedu kaṭṭu vanura mardhananeṃdanā bhīṣma

Report an error

ಜಗವ ಹೂಡುವ ಹೊರೆವ ಬಲುಗೈ ಯಗಧರಂಗೀ ನೃಪರ ಕುರಿವಿಂ ಡುಗಳ ಕುಮ್ಮರಿಗಡಿತಕಾವುದು ಬೇಕು ಭುಜಸತ್ವ ಬಗೆವುದೇ ಬಲುಗಡಲು ಮಂಜಿನ ಮುಗಿಲವಳೆಯನು ಚೈದ್ಯ ಭೂಪನ ಜಗದ ಭಂಡನನೀ ಜನಾರ್ದನ ಗಣಿಸುವನೆಯೆಂದ

jagava hūḍuva horeva balugai yagadharaṃgī nr̥para kuriviṃ ḍugaḷa kummarigaḍitakāvudu bēku bhujasatva bagevudē balugaḍalu maṃjina mugilavaḷeyanu caidya bhūpana jagada bhaṃḍananī janārdana gaṇisuvaneyeṃda

Report an error

ಎಲೆ ನಪುಂಸಕ ಭೀಷ್ಮ ಸುಡು ಬೈ ಗುಳಿನ ಭಂಡನು ನೀನಲಾ ಗೋ ಕುಲದ ಗರ್ವನ ಗುಣವ ಕಂಡಿತುಗೊಂಡೆ ಬೇಸರದೆ ಹಳಿವಿನಲಿ ಹೆಮ್ಮೆಯನು ಕುಂದಿನ ಕುಲದೊಳಗ್ಗಳಿಕೆಯನು ತಮದಲಿ ಬೆಳಗ ಬಣ್ಣಿಸುತಿಹೆ ನಿರಂತರವೆಂದನಾ ಚೈದ್ಯ

ele napuṃsaka bhīṣma suḍu bai guḷina bhaṃḍanu nīnalā gō kulada garvana guṇava kaṃḍitugoṃḍe bēsarade haḷivinali hemmeyanu kuṃdina kuladoḷaggaḷikeyanu tamadali beḷaga baṇṇisutihe niraṃtaraveṃdanā caidya

Report an error

ಅವಗುಣದಲುದ್ಭಾವಿಸುವೆ ಗುಣ ನಿವಹವನು ರಾಜಾಧಮರು ಯಾ ದವರು ಪೂಜಾರುಹರೆ ಸುಡುಸುಡು ನಿನ್ನ ನಾಲಗೆಯ ಸವಿನುಡಿಯ ದುರ್ವ್ಯಸನಿ ತೊಂಡಿನ ತವರುಮನೆ ಬಾಹಿರರಿಗಾಶ್ರಯ ಭವನ ಖಳರಧಿದೈವ ಭೀಷ್ಮನ ಕೊಲುವರಿಲ್ಲೆಂದ

avaguṇadaludbhāvisuve guṇa nivahavanu rājādhamaru yā davaru pūjāruhare suḍusuḍu ninna nālageya savinuḍiya durvyasani toṃḍina tavarumane bāhirarigāśraya bhavana khaḷaradhidaiva bhīṣmana koluvarilleṃda

Report an error

ಇವನು ಗಡ ಚಿಕ್ಕಂದು ಮೊಲೆಗೊ ಟ್ಟವಳ ಹಿಂಡಿದ ಗಂಡ ಬಂಡಿಯ ಜವಳಿಗಾಲಲಿ ಮುರಿದನೈ ಮಾಮಾ ಸಮರ್ಥನಲೆ ಸವಡಿ ಮರ ನೆಗ್ಗಿದವು ಗಡ ಮೈ ಯವುಚಿದರೆ ಬಲುಗತ್ತೆ ಗೂಳಿಯ ನಿವ ವಿಭಾಡಿಸಿದನೆ ಮಹಾದ್ಭುತವೆಂದನಾ ಚೈದ್ಯ

ivanu gaḍa cikkaṃdu molego ṭṭavaḷa hiṃḍida gaṃḍa baṃḍiya javaḷigālali muridanai māmā samarthanale savaḍi mara neggidavu gaḍa mai yavucidare balugatte gūḷiya niva vibhāḍisidane mahādbhutaveṃdanā caidya

Report an error

ಹಕ್ಕಿ ಹರಿಣಿಯ ತರಿದ ಗಡ ಕೈ ಯಿಕ್ಕಿದರೆ ಕಡುಗುದುರೆಯನು ನೆಲ ಕಿಕ್ಕಿದನೆ ನೆರೆ ಹೇಳು ಹೇಳಾ ಕೃಷ್ಣನಾಳ್ತನವ ಹೊಕ್ಕು ಹೆಬ್ಬಾವಿನ ಬಸುರ ಸೀ ಳಿಕ್ಕಿದನೆ ಯಾದವನ ಪೌರುಷ ವಕ್ಕಜವಲಾ ಭೀಷ್ಮ ತೂಪಿರಿಯೆಂದನಾ ಚೈದ್ಯ

hakki hariṇiya tarida gaḍa kai yikkidare kaḍugudureyanu nela kikkidane nere hēḷu hēḷā kr̥ṣṇanāḷtanava hokku hebbāvina basura sī ḷikkidane yādavana pauruṣa vakkajavalā bhīṣma tūpiriyeṃdanā caidya

Report an error

ಗಾಳಿಯನು ಘಲ್ಲಿಸಿದ ಕರುವಿನ ಕಾಲ ಹಿಡಿದೊಗೆದನು ಗಡುರಗನ ಮೇಲೆ ಕುಣಿದಾಡಿದನು ಗಡ ಹಾವಡಿಗ ವಿದ್ಯೆಯಲಿ ಖೂಳ ಗೋವರ ಹಳ್ಳಿಯಲಿ ಕ ಕ್ಟಾಳಲಾ ಬಳಿಕೇನು ಪೃಥ್ವೀ ಪಾಲರೀತಗೆ ಸರಿಯೆ ದಿಟದಿಟವೆಂದನಾ ಚೈದ್ಯ

gāḷiyanu ghallisida karuvina kāla hiḍidogedanu gaḍuragana mēle kuṇidāḍidanu gaḍa hāvaḍiga vidyeyali khūḷa gōvara haḷḷiyali ka kṭāḷalā baḷikēnu pr̥thvī pālarītage sariye diṭadiṭaveṃdanā caidya

Report an error

ಏಳು ದಿನ ಪರಿಯಂತ ಮೊರಡಿಯ ಮೇಲುಗೊಡೆಯನು ಹಿಡಿದು ಬಲು ಮಳೆ ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ ಹೇಳು ಹೇಳಿಂದ್ರಂಗೆ ಮಾಡಿದ ಖೂಳ ರಾಶಿಯನೊಬ್ಬನೇ ಕೈ ಮೇಳವಿಸಿದನೆ ಕಂದನಾಣೆ ವಿಚಿತ್ರವಾಯ್ತೆಂದ

ēḷu dina pariyaṃta moraḍiya mēlugoḍeyanu hiḍidu balu maḷe gālavanu māṇisida gaḍa harahara viśēṣavala hēḷu hēḷiṃdraṃge māḍida khūḷa rāśiyanobbanē kai mēḷavisidane kaṃdanāṇe vicitravāyteṃda

Report an error

ಅಸಗನನು ಕೆಡೆ ತಿವಿದು ಕಂಸನ ವಸನವೆಲ್ಲವ ಸೆಳೆದ ಗಡ ಮಾ ಣಿಸಿದನೈ ದಿಟ ಘಟ್ಟಿವಾಳ್ತಿಯ ಮೈಯ ಮೂಹೊರಡ ಮಸಗಿ ಬೀಸುವ ಕಂಸನಾನೆಯ ನಸು ಬಡಿದ ಗಡ ಮಲ್ಲರನು ಮ ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ

asagananu keḍe tividu kaṃsana vasanavellava seḷeda gaḍa mā ṇisidanai diṭa ghaṭṭivāḷtiya maiya mūhoraḍa masagi bīsuva kaṃsanāneya nasu baḍida gaḍa mallaranu ma rdisidanē ḍoḷḷāsadali ḍāvariganahaneṃda

Report an error

ಆದರಿವನನು ತುತಿಸುವೊಡೆ ಮೇ ಲಾದ ಕಷ್ಟವನೇನ ಹೇಳುವೆ ನೀ ದುರಾತ್ಮಕ ಸಾಕಿದೊಡೆಯನನಿರಿದ ಸಬಳವಲೆ ಸೋದರಿಯಲಾ ಕೃಷ್ಣನವ್ವೆ ವಿ ವಾದವೇ ಸಾಕಿದನಲಾ ಕೈ ಗಾದನೇ ಕಂಸಂಗೆ ಮುನಿವುದಿದಾವ ಘನವೆಂದ

ādarivananu tutisuvoḍe mē lāda kaṣṭavanēna hēḷuve nī durātmaka sākidoḍeyananirida sabaḷavale sōdariyalā kr̥ṣṇanavve vi vādavē sākidanalā kai gādanē kaṃsaṃge munivudidāva ghanaveṃda

Report an error

ಆದರಿಸಿ ಬಣ್ಣಿಸಿದೆ ನಾಚದೆ ಯಾದವನ ಕೌಳಿಕ ಪರಾಕ್ರಮ ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ ಆದರಾ ಗೋವಳರ ಹೆಂಡಿರ ಹಾದರದ ಹೆಕ್ಕಳವ ಬಣ್ಣಿಸ ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ

ādarisi baṇṇiside nācade yādavana kauḷika parākrama vādiyāda samastaguṇa vistāra vaibhavava ādarā gōvaḷara heṃḍira hādarada hekkaḷava baṇṇisa dāde ninagēkakaṭa nācikeyeṃdanā caidya

Report an error

ಓಡಿ ಕೊಲಿಸಿದ ಕಾಲಯವನನು ಮೂಡಿದವೆ ಹುಲು ಕಲುಗಳಕಟಾ ವೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ ಆಡಲರಿಯೆ ವಿಜಾತಿರತ್ನದ ಖೋಡಿಗಳ ಹಳಿವಾತನೇ ಹರಿ ತೋಡಿ ಬಡಿಸುವೆ ಕಿವಿಗರೋಚಕವಾಯ್ತು ತೆಗೆಯೆಂದ

ōḍi kolisida kālayavananu mūḍidave hulu kalugaḷakaṭā vōḍukuḷi hōdalli magadhana rājakāryadali āḍalariye vijātiratnada khōḍigaḷa haḷivātanē hari tōḍi baḍisuve kivigarōcakavāytu tegeyeṃda

Report an error

ಕಪಟದಲಿ ಭೀಮಾರ್ಜುನರು ಸಹಿ ತುಪಚಿತ ದ್ವಿಜವೇಷದಲಿ ನಿ ಷ್ಕಪಟ ಮಗಧನ ಮನೆಯನದ್ವಾರದಲಿ ಹೊಕ್ಕರಲ ಕೃಪಣರಿವದಿರು ವಿಪ್ರವೇಷದ ಲಪಸದರು ಕಾದಿದರು ಭೀಷ್ಮಗೆ ಜಪವಲಾ ಕಂಸಾರಿ ಮಾಡಿದ ಕಷ್ಟ ಕೃತಿಯೆಂದ

kapaṭadali bhīmārjunaru sahi tupacita dvijavēṣadali ni ṣkapaṭa magadhana maneyanadvāradali hokkarala kr̥paṇarivadiru vipravēṣada lapasadaru kādidaru bhīṣmage japavalā kaṃsāri māḍida kaṣṭa kr̥tiyeṃda

Report an error

ಬೆರತನಗ್ಗದ ಮಾಗಧೇಂದ್ರನ ಮುರಿದ ಮುರುಕಕೆ ಭೀಮನಾತನ ಸೆರೆಯ ಮನೆಯಲಿ ಸಿಕ್ಕಿದವನೀಪಾಲ ಪಂತಿಗಳ ಸೆರೆಯನಿವ ಬಿಡಿಸಿದನು ಗಡ ಬೊ ಬ್ಬಿರಿವ ಪೌರುಷವೇಕೆ ಕಡೆಯಲಿ ಕರುಬುವವರಾವೈಸಲೇ ನಿಮಗೆಂದನಾ ಚೈದ್ಯ

beratanaggada māgadhēṃdrana murida murukake bhīmanātana sereya maneyali sikkidavanīpāla paṃtigaḷa sereyaniva biḍisidanu gaḍa bo bbiriva pauruṣavēke kaḍeyali karubuvavarāvaisalē nimageṃdanā caidya

Report an error

ಕೇಳಿ ಕಿಡಿಕಿಡಿಗೆದರಿ ತನು ರೋ ಮಾಳಿ ತಳಿತುದು ರೋಷವಹ್ನಿ ಜ್ವಾಲೆ ಝಳಪಿಸೆ ಜಡಿದವರುಣಚ್ಛವಿಯಲಕ್ಷಿಗಳು ಸೂಳುರಿಯ ನಿಡುಸುಯ್ಲ ಕಬ್ಬೊಗೆ ಜಾಳಿಗೆಯಲೇಕಾವಳಿಯ ಮು ಕ್ತಾಳಿ ಕಂದಿತು ಖತಿಯ ಮೊನೆಯಲಿ ಮಸಗಿದನು ಭೀಮ

kēḷi kiḍikiḍigedari tanu rō māḷi taḷitudu rōṣavahni jvāle jhaḷapise jaḍidavaruṇacchaviyalakṣigaḷu sūḷuriya niḍusuyla kabboge jāḷigeyalēkāvaḷiya mu ktāḷi kaṃditu khatiya moneyali masagidanu bhīma

Report an error

ಸೆರಗ ಸಂವರಿಸಿದನು ಮಕುಟವ ನುರುಗದಂತಿರೆ ಮುರುಹಿ ಸಚಿವಂ ಗರುಹಿದನು ಸನ್ನೆಯಲಿ ಸಮರಕೆ ಚಾಪ ಮಾರ್ಗಣವ ಹೊರಗೆ ಸಂವರಿಸಿರಲಿ ದಳ ಕೈ ಮರೆಯಬೇಡ ಸುನೀತನನು ನಾ ವ್ತರುಬಿ ನಿಂದಾಕ್ಷಣದಲೊದಗುವುದೆಂದು ಸೂಚಿಸಿದ

seraga saṃvarisidanu makuṭava nurugadaṃtire muruhi sacivaṃ garuhidanu sanneyali samarake cāpa mārgaṇava horage saṃvarisirali daḷa kai mareyabēḍa sunītananu nā vtarubi niṃdākṣaṇadalodaguvudeṃdu sūcisida

Report an error

ಪವನತನಯನ ಖತಿಯ ಝಾಡಿಯ ಹವಣ ಕಂಡರು ಮಸಗಿದರು ಯಾ ದವರ ಪಡೆಯಲಿ ಸಾಂಬ ಸಾತ್ಯಕಿ ಕಾಮ ಕೃತವರ್ಮ ತವತವಗೆ ಪಾಂಚಾಲ ಕೇಕಯ ನಿವಹ ಪಾಂಡವ ಸುತರು ಮೊದಲಾ ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ

pavanatanayana khatiya jhāḍiya havaṇa kaṃḍaru masagidaru yā davara paḍeyali sāṃba sātyaki kāma kr̥tavarma tavatavage pāṃcāla kēkaya nivaha pāṃḍava sutaru modalā davagaḍeyaranuvāge gajabajavāytu nimiṣadali

Report an error

ಸೆಳೆದಡಾಯುಧವುತ್ತರೀಯವ ನಿಳುಹಿ ಮುಂಗೈಯಲಿ ವೃಕೋದರ ಮೊಳಗುವನುವನು ಕಂಡು ಧಿಮ್ಮನೆ ಭೀಷ್ಮನಡಹಾಯ್ದು ಸೆಳೆದುಕೊಂಡನು ಖಡುಗವನು ಭುಜ ವಳಯದಿಂದವುಚಿದನು ತೋಟಿಯ ತೊಳಸುಗರ ಹೊಯ್ ಹೊಯ್ಯೆನುತ ಗರ್ಜಿಸಿದನಾ ಭೀಷ್ಮ

seḷedaḍāyudhavuttarīyava niḷuhi muṃgaiyali vr̥kōdara moḷaguvanuvanu kaṃḍu dhimmane bhīṣmanaḍahāydu seḷedukoṃḍanu khaḍugavanu bhuja vaḷayadiṃdavucidanu tōṭiya toḷasugara hoy hoyyenuta garjisidanā bhīṣma

Report an error

ನೆರಹಿದಿರಿ ಚತುರಾಬ್ಧಿ ವಳೆಯದ ಧರಣಿಪಾಲ ಸಮುದ್ರವನು ಕಾ ಹುರವ ಮಾಡಿದರಕಟ ಕೆಡದೇ ರಾಜಸೂಯ ಮಖ ಧರಧುರದ ದುರ್ವ್ಯಸನಿಗಳ ನಿ ಟ್ಟೊರಸಿ ತೆಗೆ ನಿನ್ನವರನೆನುತು ಬ್ಬರವ ಮಾಣಿಸಿ ಹೂಣೆಗರ ಹೊಯ್ಸಿದನು ಕಲಿ ಭೀಷ್ಮ

nerahidiri caturābdhi vaḷeyada dharaṇipāla samudravanu kā hurava māḍidarakaṭa keḍadē rājasūya makha dharadhurada durvyasanigaḷa ni ṭṭorasi tege ninnavaranenutu bbarava māṇisi hūṇegara hoysidanu kali bhīṣma

Report an error

ಬಿಡು ಬಿಡೆಲೆ ಗಾಂಗೇಯ ಭೀಮನ ಕಡಿದು ಪೂರ್ಣಾಹುತಿಯನಗ್ನಿಗೆ ಬಡಿಸಿ ಕೊಡುವೆನು ಸ್ವಾಮಿದ್ರೋಹಿಯ ಕರುಳ ದಂಡೆಗಳ ಮುಡಿಸುವೆನು ಜಯಸಿರಿಗೆ ನೋಡೆ ನ್ನೊಡನೆ ಮೇಳವೆ ದಕ್ಷಯಜ್ಞದ ಮೃಡನ ಮರೆಸುವೆನೆನುತ ಮಿಗೆ ಬೊಬ್ಬಿರಿದನಾ ಚೈದ್ಯ

biḍu biḍele gāṃgēya bhīmana kaḍidu pūrṇāhutiyanagnige baḍisi koḍuvenu svāmidrōhiya karuḷa daṃḍegaḷa muḍisuvenu jayasirige nōḍe nnoḍane mēḷave dakṣayajñada mr̥ḍana maresuvenenuta mige bobbiridanā caidya

Report an error

ಬಿಡಿಬಿಡಕಟಾ ಭೀಷ್ಮ ದರ್ಪದಿ ಕಡುಜರೆದ ಕಳವಳದ ಕುನ್ನಿಗೆ ಕುಡಿಸುವೆನು ದಿವ್ಯಾಸ್ತ್ರ ವಿಶಿಖ ವಿಶೇಷ ದೌಷಧಿಯ ತಡೆದು ತನ್ನನು ರಾಜಕಾರ್ಯವ ಕೆಡಿಸಿದೆಯಲಾ ದಕ್ಷಯಜ್ಞದ ಮೃಡನ ಮುರುಕವ ಕಾಬೆನೆನುತೊಡೆಮುರುಚಿದನು ಭೀಮ

biḍibiḍakaṭā bhīṣma darpadi kaḍujareda kaḷavaḷada kunnige kuḍisuvenu divyāstra viśikha viśēṣa dauṣadhiya taḍedu tannanu rājakāryava keḍisideyalā dakṣayajñada mr̥ḍana murukava kābenenutoḍemurucidanu bhīma

Report an error

ಮತ್ತೆ ಹಿಡಿದನು ಪವನಜನ ಬಾ ಗೊತ್ತಿದನು ಮುರುಳೇ ಸುರೌಘದ ತುತ್ತು ಗಂಟಲಲಿಳಿವುದೇ ಗಜಬಜವ ಮಾಡಿದರೆ ತೆತ್ತಿಗನು ಹರಿ ಯಜ್ಞರಿಪುಗಳ ಮೃತ್ಯುವರಿಯಾ ನೀನು ಮೀರುವ ದುತ್ತಮಿಕೆಯಲ್ಲೆನುತ ಮಿಗೆ ತಿಳುಹಿದನು ಗಾಂಗೇಯ

matte hiḍidanu pavanajana bā gottidanu muruḷē suraughada tuttu gaṃṭalaliḷivudē gajabajava māḍidare tettiganu hari yajñaripugaḷa mr̥tyuvariyā nīnu mīruva duttamikeyallenuta mige tiḷuhidanu gāṃgēya

Report an error

ಇವನ ಕೊಲುವನು ಮಿಕ್ಕ ಭೂಪರ ನಿವಹವನು ಮನ್ನಿಸುವೆನೆನೆ ನೀ ನಿವನ ಕೊಲುವುದಸಾಧ್ಯವೀತನ ನಿಜವನರಿಯೆಯಲ ಇವ ಹಿರಣ್ಯಾಕ್ಷಕ ಕಣಾ ಮರು ಭವದೊಳಗೆ ದಶವದನನಿವ ಸಂ ಭವಿಸಿದನು ಶಿಶುಪಾಲವೆಸರಲಿ ಭೀಮ ಕೇಳೆಂದ

ivana koluvanu mikka bhūpara nivahavanu mannisuvenene nī nivana koluvudasādhyavītana nijavanariyeyala iva hiraṇyākṣaka kaṇā maru bhavadoḷage daśavadananiva saṃ bhavisidanu śiśupālavesarali bhīma kēḷeṃda

Report an error

ಜನಿಸಿದಾಗಳೆ ಭಾಳದಲಿ ಲೋ ಚನ ಚತುರ್ಭುಜನಾದನದ್ಭುತ ನಿನದದಲಿ ನೆಲ ಬಿರಿಯಲೊದರಿದನಂದು ಬಾಲ್ಯದಲಿ ತನತನಗೆ ಜನ ಬೆದರಿತೀತನ ಮನೆಗೆ ನಾರದ ಬಂದನೀತನ ಜನನಿ ಬಿನ್ನಹ ಮಾಡಿದಳು ಶಿಶುಪಾಲ ಸಂಗತಿಯ

janisidāgaḷe bhāḷadali lō cana caturbhujanādanadbhuta ninadadali nela biriyalodaridanaṃdu bālyadali tanatanage jana bedaritītana manege nārada baṃdanītana janani binnaha māḍidaḷu śiśupāla saṃgatiya

Report an error

ಆತನೆಂದನು ತಾಯೆ ಶಿಶು ವಿ ಖ್ಯಾತನಹ ನೀನಾರ ಹಸ್ತದೊ ಳೀತನನು ಕೊಟ್ಟಾಗಲಡಗುವವಕ್ಷಿ ಭುಜ ಯುಗಳ ಆತನೀತನ ಮೃತ್ಯುವಿದು ಸಂ ಭೂತ ನಿಶ್ಚಯವೆಂದು ಶಿಶುವಿನ ಮಾತೆಯನು ಸಂತೈಸಿ ನಾರದನಡರಿದನು ನಭವ

ātaneṃdanu tāye śiśu vi khyātanaha nīnāra hastado ḷītananu koṭṭāgalaḍaguvavakṣi bhuja yugaḷa ātanītana mr̥tyuvidu saṃ bhūta niścayaveṃdu śiśuvina māteyanu saṃtaisi nāradanaḍaridanu nabhava

Report an error

ಇವನ ಕಾಣಲು ಬಂದರವನಿಪ ರವರವರ ಕೈಗಳಲಿ ತಾಯ್ತಂ ದಿವನನಿತ್ತಳು ಮಾಣವಿವನಧಿಕಾಕ್ಷಿ ಬಾಹುಗಳು ಇವನ ತಾಯ್ ತಮ್ಮತ್ತೆಯೆಂದು ತ್ಸವದಲಿ ಮುರವೈರಿ ಬರಲಂ ದಿವನ ತಂದಿವನವ್ವೆ ಕೊಟ್ಟಳು ಹರಿಯ ಹಸ್ತದಲಿ

ivana kāṇalu baṃdaravanipa ravaravara kaigaḷali tāytaṃ divananittaḷu māṇavivanadhikākṣi bāhugaḷu ivana tāy tammatteyeṃdu tsavadali muravairi baralaṃ divana taṃdivanavve koṭṭaḷu hariya hastadali

Report an error

ಆಗೆಳಿವನಧಿಕಾಕ್ಷಿ ಬಾಹುವು ನೀಗಿದೊಡನಿವನವ್ವೆ ಕಂಡು ಬ್ಬೇಗದಲಿ ಕಮಲಾಕ್ಷನಂಘ್ರಿಯಲೆರಗಿ ಕೈ ಮುಗಿದು ಮೇಗರೆಯೆ ಮಾತಲ್ಲ ಬಾಲಕ ನಾಗುಹೋಗಿನ ಕೊರತೆ ನಿನ್ನನು ತಾಗುವುದು ನೀ ಸೈರಿಸೆಂದಭಯವನು ಬೇಡಿದಳು

āgeḷivanadhikākṣi bāhuvu nīgidoḍanivanavve kaṃḍu bbēgadali kamalākṣanaṃghriyaleragi kai mugidu mēgareye mātalla bālaka nāguhōgina korate ninnanu tāguvudu nī sairiseṃdabhayavanu bēḍidaḷu

Report an error

ಸೈರಿಸುವೆನಪರಾಧ ಶತವ ಕು ಮಾರಕನ ತಾ ಕೊಲ್ಲೆನೆಂದೀ ಶೌರಿ ಭಾಷೆಯ ಮಾಡಿ ಹಿಂಗಿದನಿವನ ತಾಯೊಡನೆ ಆರಿವನ ಮರಣಕ್ಕೆ ಮೊದಲು ಮು ರಾರಿಯೋ ನೀನೋ ವಿಚಾರಿಸು ವೀರ ಮಾರುತಿಯೆನಲು ಕೇಳಿದನಂದು ಶಿಶುಪಾಲ

sairisuvenaparādha śatava ku mārakana tā kolleneṃdī śauri bhāṣeya māḍi hiṃgidanivana tāyoḍane ārivana maraṇakke modalu mu rāriyō nīnō vicārisu vīra mārutiyenalu kēḷidanaṃdu śiśupāla

Report an error

ಎಲವೊ ಗೋಪಕುಮಾರನೆನ್ನನು ಕೊಲುವನೇ ತಾನಿವನ ಕೈಯ್ಯಿಂ ದಳಿವವನೆ ಶಿವ ಶಿವ ವಿಕಾರಿಯನೇನ ಮಾಡುವೆನು ಗಳಹ ಬೀಷ್ಮ ವೃಕೋದರನ ಮೈ ವಳಿಯ ಭಟನೋ ಮೇಣು ನೀ ಗೋ ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ

elavo gōpakumāranennanu koluvanē tānivana kaiyyiṃ daḷivavane śiva śiva vikāriyanēna māḍuvenu gaḷaha bīṣma vr̥kōdarana mai vaḷiya bhaṭanō mēṇu nī gō vaḷara haḷḷiya bhaṭṭanō hēḷeṃdanā caidya

Report an error

ಈ ಕುರುಕ್ಷಿತಿಪಾಲರಲಿ ನೀ ನಾಕೆವಾಳನು ಗಡ ವಯಃಪರಿ ಪಾಕವುಳ್ಳವನೀಸು ಕಾಲದಲೋದಿದರಿತವಿದೆ ಕಾಕನುರೆ ಕೊಂಡಾಡಿ ಗೊಲ್ಲರ ಗೋಕುಲದ ಗೋಪಪ್ರಸಂಗ ವ್ಯಾಕರಣ ಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ

ī kurukṣitipālarali nī nākevāḷanu gaḍa vayaḥpari pākavuḷḷavanīsu kāladalōdidaritavide kākanure koṃḍāḍi gollara gōkulada gōpaprasaṃga vyākaraṇa pāṃḍitya meredudu bhīṣma ninageṃda

Report an error

ಇದು ಮಹಾ ಮುಖವಿಲ್ಲಿ ಪೂಜ್ಯನು ಯದುಗಳರಸನು ಭಟ್ಟನಿಲ್ಲಿಗೆ ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು ಹುದಿದ ಮರುಭೂಮಿಯಲಿ ಮಾನ್ಯನು ಖದಿರನಲ್ಲಿಗೆ ಗೂಗೆ ಕೋಗಿಲೆ ಮುದಿನರಿಗಳಲ್ಲಿಗೆ ಸಭಾಸದರೆಂದನಾ ಚೈದ್ಯ

idu mahā mukhavilli pūjyanu yadugaḷarasanu bhaṭṭanillige nadiya maganillige sadasyaru nāradādigaḷu hudida marubhūmiyali mānyanu khadiranallige gūge kōgile mudinarigaḷallige sabhāsadareṃdanā caidya

Report an error

ನೀನಲಾ ಧರ್ಮಜ್ಞನಂದಾ ಮಾನಿನಿಯರ ವಿವಾಹದಲಿ ನೀ ನೇನ ಮಾಡಿದೆ ಬೇಸರಿಸಿ ಬಳಲಿಸಿದೆ ಬಾಲಕಿಯ ಏನ ಹೇಳುವೆನೊಂದು ಹಂಸನು ಮಾನಸದ ತೀರದಲಿ ಪಕ್ಷಿವಿ ತಾನದಲಿ ಧರ್ಮಜ್ಞನಾಯ್ತಾ ಹಂಸ ನೀನೆಂದ

nīnalā dharmajñanaṃdā māniniyara vivāhadali nī nēna māḍide bēsarisi baḷaliside bālakiya ēna hēḷuvenoṃdu haṃsanu mānasada tīradali pakṣivi tānadali dharmajñanāytā haṃsa nīneṃda

Report an error

ನುಡಿಗಳಲಿ ಸದ್ಧರ್ಮ ಸಂಗತಿ ನಡವಳಿಯಲನ್ಯಾಯವೆಂದೇ ಕೆಡಹಿದವು ಹಂಸೆಯನು ನಾನಾ ವಿಹಗಸಂದೋಹ ನುಡಿವುದಲ್ಲದೆ ಮೇಣು ನಯದಲಿ ನಡೆದುದಿಲ್ಲೆಲ ಭೀಷ್ಮ ನಿನ್ನನು ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ

nuḍigaḷali saddharma saṃgati naḍavaḷiyalanyāyaveṃdē keḍahidavu haṃseyanu nānā vihagasaṃdōha nuḍivudallade mēṇu nayadali naḍedudillela bhīṣma ninnanu kaḍidu bhūtake baḍisidare kr̥takr̥tyanaheneṃda

Report an error

ಕಳೆದ ಕಾಲದ ವೃದ್ಧ ಮೇಲ ಗ್ಗಳದ ನಿಯಮವ್ರತ ಶ್ರುತಿ ಸ್ಮೃತಿ ಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ ಬೆಳವಿಗೆಯ ಮಾಡಿದೆ ಮಹೀ ಮಂ ಡಲದ ರಾಯರನಕಟ ಲಜ್ಜಾ ಕುಳರ ಮಾಡಿದೆ ಭಂಡ ಫಡ ಹೋಗೆಂದನಾ ಚೈದ್ಯ

kaḷeda kālada vr̥ddha mēla ggaḷada niyamavrata śruti smr̥ti gaḷali pariṇataneṃbe kaḍeyali gōpanaṃdanana beḷavigeya māḍide mahī maṃ ḍalada rāyaranakaṭa lajjā kuḷara māḍide bhaṃḍa phaḍa hōgeṃdanā caidya

Report an error

ಪರಗುಣ ಸ್ತುತಿ ನಿಂದೆಗಳು ಹಿರಿ ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ ವರ ಗುಣಸ್ತವದಿಂದ ಮೇಣ್ಕಂಡೂತಿ ಹರವಹರೆ ಹಿರಿಯರಿದೆಲಾ ಕಣ್ವ ಪೌಲಾಂ ಗಿರಸ ಜೈಮಿನಿ ಯಾಜ್ಞವಲ್ಕ್ಯರು ವರ ಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ

paraguṇa stuti niṃdegaḷu hiri yarige sāmyave ninna jihvege vara guṇastavadiṃda mēṇkaṃḍūti haravahare hiriyaridelā kaṇva paulāṃ girasa jaimini yājñavalkyaru vara supaikadoḷadhikaridelā bhīṣma kēḷeṃda

Report an error

ನಾವು ಮೊದಲಲಿ ನಮ್ಮೊಳಗೆ ಕುಂ ದಾವುದೇತಕೆ ಹೊಗಳೆಯಿವರಲ ದಾವಕೊರತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ ಈ ವೃಕೋದರ ಪಾರ್ಥರನು ಸಹ ದೇವ ನಕುಲರನೇಕೆ ಹೊಗಳೆಯ ದಾವ ಗುಣನಿಧಿಯೆಂದು ಕೃಷ್ಣನ ಬಣ್ಣಿಸಿದೆಯೆಂದ

nāvu modalali nammoḷage kuṃ dāvudētake hogaḷeyivarala dāvakorate yudhiṣṭhirana nīnēkupēkṣiside ī vr̥kōdara pārtharanu saha dēva nakularanēke hogaḷeya dāva guṇanidhiyeṃdu kr̥ṣṇana baṇṇisideyeṃda

Report an error

ಗರುವನಲ್ಲಾ ಕೌರವೇಶ್ವರ ನರಸಲಾ ಬಾಹ್ಲಿಕನು ರಾಯರ ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ ಗುರುಸುತನು ಸಾಮಾನ್ಯನೇ ಸಂ ಗರ ಭಯಂಕರನಲ್ಲವೇ ವಿ ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ

garuvanallā kauravēśvara narasalā bāhlikanu rāyara guruvalā koṃḍāḍalāgade cāpa dhūrjaṭiya gurusutanu sāmānyanē saṃ gara bhayaṃkaranallavē vi starisalāgade ninna kr̥ṣṇana havaṇeyivareṃda

Report an error

ಕವಚಕುಂಡಲ ಸಹಿತ ತಾನುದು ಭವಿಸನೇ ಶೌರ್ಯಾದಿ ಗುಣದಲಿ ಭುವನದಲಿ ಭಾರಾಂಕ ವೀರರು ಪಡಿಯೆ ಕರ್ಣಂಗೆ ಇವನನೇಕಗ್ಗಳಿಸೆ ಭೂರಿ ಶ್ರವನ ಹೊಗಳೆ ಜಯದ್ರಥನು ನಿ ನ್ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಳೆಂದ

kavacakuṃḍala sahita tānudu bhavisanē śauryādi guṇadali bhuvanadali bhārāṃka vīraru paḍiye karṇaṃge ivananēkaggaḷise bhūri śravana hogaḷe jayadrathanu ni nnavana havaṇē śalya muniyane ninage hēḷeṃda

Report an error

ಕುಲದಲಧಿಕರು ಶೌರ‍್ಯದಲಿ ವೆ ಗ್ಗಳರು ಶೀಲದಲುನ್ನತರು ನಿ ರ‍್ಮಲಿನರಾಚಾರದಲಿ ಕೋವಿದರಖಿಳ ಕಳೆಗಳಲಿ ಇಳೆಯ ವಲ್ಲಭರಿನಿಬರನು ನೀ ಕಳೆದು ನೊಣ ನೆರೆ ಹೂತ ವನವನು ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ

kuladaladhikaru śauryadali ve ggaḷaru śīladalunnataru ni rmalinarācāradali kōvidarakhiḷa kaḷegaḷali iḷeya vallabharinibaranu nī kaḷedu noṇa nere hūta vanavanu haḷidu haginiṃgeraguvavolāyteṃdanā caidya

Report an error

ಘನನಲಾ ಭಗದತ್ತ ಕಾಂಭೋ ಜನು ಪದಸ್ಥನಲಾ ವಿರಾಟನ ತನುಜನೀ ಪಾಂಚಾಲ ಕೇಕಯರೀ ಮಹೀಭುಜರು ವಿನುತರಲ್ಲಾ ದಂತವಕ್ರನು ನಿನಗೆ ಕಿರುಕುಳನೇ ಜರಾಸಂ ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮ ಹೇಳೆಂದ

ghananalā bhagadatta kāṃbhō janu padasthanalā virāṭana tanujanī pāṃcāla kēkayarī mahībhujaru vinutarallā daṃtavakranu ninage kirukuḷanē jarāsaṃ dhana sutana nīnēke baṇṇise bhīṣma hēḷeṃda

Report an error

ದ್ರುಮನ ಕಿಂಪುರುಷಾಧಿಪನ ವಿ ಕ್ರಮವ ಬಣ್ಣಿಸಲಾಗದೇ ಭೂ ರಮಣರಿದೆಲಾ ಮಾಳವಂಗ ಕಳಿಂಗ ಕೌಸಲರು ವಿಮಳರಿನಿಬರನುಳಿದು ಕೃಷ್ಣ ಭ್ರಮೆ ಹಿಡಿದುದೈ ನಿನಗೆ ನಿನ್ನ ಕ್ರಮದ ಭಣಿತೆಯ ಕರ್ಮಬೀಜವನರಿಯೆ ನಾನೆಂದ

drumana kiṃpuruṣādhipana vi kramava baṇṇisalāgadē bhū ramaṇaridelā māḷavaṃga kaḷiṃga kausalaru vimaḷarinibaranuḷidu kr̥ṣṇa bhrame hiḍidudai ninage ninna kramada bhaṇiteya karmabījavanariye nāneṃda

Report an error

ಕುಮತಿ ಕೇಳ್ ಬೊಬ್ಬುಲಿಯ ಬನದಲಿ ರಮಿಸುವುದೆ ಕಳಹಂಸ ಮಾಯಾ ಭ್ರಮಿತದಲಿ ಯಾಚಿಸುವನೇ ವರಯೋಗಿ ನಿಜಪದವ ಸಮರ ಪಟುಭಟ ದರ್ಪಪಿತ್ತ ಭ್ರಮ ವಿಸಂಸ್ಥುಲ ಚಪಳಚಿತ್ತ ಸ್ಥಿಮಿತ ಭೂಪರ ಬಗೆವನೇ ತಾನೆಂದನಾ ಭೀಷ್ಮ

kumati kēḷ bobbuliya banadali ramisuvude kaḷahaṃsa māyā bhramitadali yācisuvanē varayōgi nijapadava samara paṭubhaṭa darpapitta bhrama visaṃsthula capaḷacitta sthimita bhūpara bagevanē tāneṃdanā bhīṣma

Report an error

ಖತಿಯ ಹಿಡಿದುದು ಸಕಲ ತಾಜ ಪ್ರತತಿಗಳು ದುರ್ಮಾರ್ಗಮಾನ ವ್ಯಥಿಕರದೊಳುಬ್ಬೆದ್ದರನಿಬರು ಜಲಧಿ ಘೋಷದಲಿ ಕ್ರತುವ ಜಲದಲಿ ಕದಡು ಗಂಗಾ ಸುತನ ಹೊಯ್ ಕಟವಾಯ ಕೊಯ್ ನಿ ಶ್ಚಿತ ಘಟಾಗ್ನಿ ಯಲಿವನ ಸುಡಿಯೆಂದುದು ನೃಪವ್ರಾತ

khatiya hiḍidudu sakala tāja pratatigaḷu durmārgamāna vyathikaradoḷubbeddaranibaru jaladhi ghōṣadali kratuva jaladali kadaḍu gaṃgā sutana hoy kaṭavāya koy ni ścita ghaṭāgni yalivana suḍiyeṃdudu nr̥pavrāta

Report an error

ಬರಿಯ ಮಾತನೆ ಮೆರೆದು ಕಾರ್ಯದ ಕೊರತೆಯಾದರೆ ನಾಯ್ಗಳೊರಲಿದ ತೆರನಹುದಲೇ ತೋರಿರೈ ನೀವ್ನಿಮ್ಮ ಪೌರುಷವ ಇರಿದು ನೀವ್ಕೊಲಲಾರದಿದ್ದರೆ ನೆರೆ ಘಟಾಗ್ನಿಯೊಳುರುಹದಿದ್ದರೆ ಕೆರಹು ನಿಮ್ಮಯ ಬಾಯಲೆಂದನು ಭೂಪರಿಗೆ ಭೀಷ್ಮ

bariya mātane meredu kāryada korateyādare nāygaḷoralida teranahudalē tōrirai nīvnimma pauruṣava iridu nīvkolalāradiddare nere ghaṭāgniyoḷuruhadiddare kerahu nimmaya bāyaleṃdanu bhūparige bhīṣma

Report an error

ನೆರೆದ ನರಿಗಳ ಮಧ್ಯದಲಿ ಕೇ ಸರಿಯ ಮನ್ನಿಸುವಂತೆ ಕೃಷ್ಣನ ಚರಣವನು ಪೂಜಿಸಿದೆವರ್ಘ್ಯಾರುಹನು ಮುರವೈರಿ ಎರಡುಗಳು ನೀವೀ ಜನಾರ್ದನ ನೊರೆಗೆ ಬಹರೇ ಪ್ರೀತಿಯೇನೀ ಪರಿ ವಿಷಾದವೆ ಹೋಗಿಯೆಂದನು ಭೂಪರಿಗೆ ಭೀಷ್ಮ

nereda narigaḷa madhyadali kē sariya mannisuvaṃte kr̥ṣṇana caraṇavanu pūjisidevarghyāruhanu muravairi eraḍugaḷu nīvī janārdana norege baharē prītiyēnī pari viṣādave hōgiyeṃdanu bhūparige bhīṣma

Report an error

ಅಣಕಿಸುವರೆನ್ನೊಡನೆ ಹಿರಿಯು ಬ್ಬಣವ ತೆಗೆಯಿರಿ ಈ ಮುರಾರಿಯ ಕೆಣಕಲಾಪರೆ ಕರೆದು ನೋಡಿ ವೃಥಾಭಿಮಾನದಲಿ ಹಣುಕಿ ಬಾಯ್ಬಡಿದೇನಹುದು ಕೈ ಗುಣವ ತೋರಿರೆ ಸಾವಿರೊಳ್ಳೆಗೆ ಮಣಿವನೇ ವಿಹಗೇಂದ್ರನೆಂದನು ಭೂಪರಿಗೆ ಭೀಷ್ಮ

aṇakisuvarennoḍane hiriyu bbaṇava tegeyiri ī murāriya keṇakalāpare karedu nōḍi vr̥thābhimānadali haṇuki bāybaḍidēnahudu kai guṇava tōrire sāviroḷḷege maṇivanē vihagēṃdraneṃdanu bhūparige bhīṣma

Report an error

ಶಿವಶಿವಾ ಮುದುಗೂಗೆ ಮೆಚ್ಚದು ರವಿಯನೆಲವೋ ಭೀಷ್ಮ ನಿಲು ಮಾ ಧವನ ಮರ್ದಿಸಿ ನಿನಗೆ ಜೋಡಿಸುವೆನು ಮಹಾನಳನ ಯುವತಿಯರು ಹಾರುವರು ಹುಲು ಪಾಂ ಡವರು ಪತಿಕರಿಸಿದರೆ ನೀನಿಂ ದೆವಗೆ ಮಾನ್ಯನೆ ಕೃಷ್ಣ ಸಿಂಹಾಸನವನಿಳಿಯೆಂದ

śivaśivā mudugūge meccadu raviyanelavō bhīṣma nilu mā dhavana mardisi ninage jōḍisuvenu mahānaḷana yuvatiyaru hāruvaru hulu pāṃ ḍavaru patikarisidare nīniṃ devage mānyane kr̥ṣṇa siṃhāsanavaniḷiyeṃda

Report an error

ನಿನಗೆ ಮೊದಲೊಳು ನಿಶಿತ ವಿಶಿಖದ ಮೊನೆಯೊಳರ್ಚಿಸಿ ಬಳಿಕ ಭೀಷ್ಮನ ಘನ ಘಟಾನಳ ಕುಂಡದೊಳ್ಸ್ವಾಹಾಸ್ವಧಾಹುತಿಯ ಅನುಕರಿಸಿ ಬಳಿಕಿನಲಿ ಕುಂತೀ ತನಯರೈವರ ರಕುತ ಘೃತದಲಿ ವಿನುತ ರೋಷಾಧ್ವರವ ರಚಿಸುವೆನೆಂದನಾ ಚೈದ್ಯ

ninage modaloḷu niśita viśikhada moneyoḷarcisi baḷika bhīṣmana ghana ghaṭānaḷa kuṃḍadoḷsvāhāsvadhāhutiya anukarisi baḷikinali kuṃtī tanayaraivara rakuta ghr̥tadali vinuta rōṣādhvarava racisuveneṃdanā caidya

Report an error

ಎಂದು ಚಾಪವ ತರಿಸಿ ಚಪ್ಪರ ದಿಂದ ಹೊರವಡುತವನಿಪಾಲಕ ವೃಂದವನು ಕೈವೀಸಿದನು ಕರೆ ಗೋಕುಲೇಶ್ವರನ ಇಂದಲೇ ರಿಪು ರುಧಿರ ಪಾನಾ ನಂದಕೃತ ಮದ ಶಾಕಿನೀ ಸ್ವ ಚ್ಛಮದ ಲೀಲಾ ನೃತ್ಯದರ್ಶನವೆಂದನಾ ಚೈದ್ಯ

eṃdu cāpava tarisi cappara diṃda horavaḍutavanipālaka vr̥ṃdavanu kaivīsidanu kare gōkulēśvarana iṃdalē ripu rudhira pānā naṃdakr̥ta mada śākinī sva cchamada līlā nr̥tyadarśanaveṃdanā caidya

Report an error

ಡಾವರಿಸಿದುದು ವಿವಿಧ ವಾದ್ಯವಿ ರಾವವಬುಜೋದ್ಭವನ ಭವನವ ನಾ ವಿಗಡ ಭಟ ಕಟಕವಿದ್ದುದು ಬಲಿದ ಬೊಬ್ಬೆಯಲಿ ಗೋವಳನ ಬರಹೇಳು ತೋರಾ ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ

ḍāvarisidudu vividha vādyavi rāvavabujōdbhavana bhavanava nā vigaḍa bhaṭa kaṭakaviddudu balida bobbeyali gōvaḷana barahēḷu tōrā kāvavara tā koluveneṃdodaridanu kali caidya

Report an error

ಮಿನುಗುದುಟಿಗಳ ವಿಕಲ ಮಂತ್ರದ ಬಿನುಗುಗಳ ಕೈಯಾಹುತಿಗೆ ಕರೆ ದನಿಮಿಷರ ಪಲ್ಲಟದ ವಿಚಲಿತ ಸೂಕ್ತಿಮಯ ನಿನದ ತನಿಭಯದ ತರಳಾಕ್ಷಿಗಳ ದು ರ್ಮನದ ಮೋಡಿಯ ಮೊಗದ ಬರಿದೇ ತೊನೆವ ಗಡ್ಡದ ಮುನಿಗಳಿದ್ದರು ಬಲಿದ ಬೆರಗಿನಲಿ

minuguduṭigaḷa vikala maṃtrada binugugaḷa kaiyāhutige kare danimiṣara pallaṭada vicalita sūktimaya ninada tanibhayada taraḷākṣigaḷa du rmanada mōḍiya mogada baridē toneva gaḍḍada munigaḷiddaru balida beraginali

Report an error

ಹಲ್ಲಣಿಸಿದುದು ಯಾದವರ ಪಡೆ ಘಲ್ಲಣೆಯ ಘರ್ಘರದ ಘೋಷದ ಭುಲ್ಲಣೆಯ ಗಂಭೀರ ಭೇರಿಯ ಬಹಳ ರಭಸದಲಿ ನಿಲ್ಲದಿಳೆ ಪದಹತಿಗೆನಲು ಬಲ ವೆಲ್ಲ ಭೀಮನ ಸನ್ನೆಯಲಿ ರಣ ಮಲ್ಲರೊಡ್ಡಿತು ಹೊರಗೆ ನೃಪಮೋಹರದ ಬಾಹೆಯಲಿ

hallaṇisidudu yādavara paḍe ghallaṇeya ghargharada ghōṣada bhullaṇeya gaṃbhīra bhēriya bahaḷa rabhasadali nilladiḷe padahatigenalu bala vella bhīmana sanneyali raṇa mallaroḍḍitu horage nr̥pamōharada bāheyali

Report an error

ಮುನಿಗಳಂಜದಿರಂಜದಿರಿ ಪರಿ ಜನಕೆ ಗಜಬಜ ಬೇಡ ಯಾದವ ಜನಪರುಬ್ಬಟೆ ನಿಲಲಿ ಸೈರಿಸಿ ಪಾಂಡುಸುತರೆನುತ ಮೊನೆ ನಗೆಯ ಸಿರಿಮೊಗದ ನೆಗಹಿದ ಜನದಭಯ ಹಸ್ತಾಂಬುಜದ ಹರಿ ವಿನುತ ಸಿಂಹಾಸನವನಿಳಿದಾ ಧುರಕೆ ಹೊರವಂಟ

munigaḷaṃjadiraṃjadiri pari janake gajabaja bēḍa yādava janaparubbaṭe nilali sairisi pāṃḍusutarenuta mone nageya sirimogada negahida janadabhaya hastāṃbujada hari vinuta siṃhāsanavaniḷidā dhurake horavaṃṭa

Report an error

ಅಂದಿನಲಿ ಶಿಶುಪಾಲಕನ ತಾ ಯ್ಬಂದು ಮಗನಪರಾಧ ಶತದಲಿ ಕಂದಲಾಗದು ಚಿತ್ತವೆಂದಳು ನಮ್ಮನನುಸರಿಸಿ ಇಂದು ಖತಿಯಿಲ್ಲೆಮಗೆ ಸೈರಿಸ ಬಂದುದಿಲ್ಲವಗೆರಡು ತಪ್ಪಿನೊ ಳೆಂದು ಮುರಹರ ನಗುತ ನುಡಿದನು ನಾರದಾದ್ಯರಿಗೆ

aṃdinali śiśupālakana tā ybaṃdu maganaparādha śatadali kaṃdalāgadu cittaveṃdaḷu nammananusarisi iṃdu khatiyillemage sairisa baṃdudillavageraḍu tappino ḷeṃdu murahara naguta nuḍidanu nāradādyarige

Report an error

ಈ ಮಹಾ ಯಜ್ಞವನು ಕೆಡಿಸುವೆ ನೀ ಮಹೀಶನ ಮುರಿವೆನೆಂದೇ ವೈಮನಸ್ಯದಿ ಬಗೆದು ಮೊನೆ ಮಾಡಿದನು ನುಡಿಯೆರಡ ತಾಮಸನ ತರಿದಖಿಳ ಭೂತ ಸ್ತೋಮ ತುಷ್ಟಿಯ ಕೀರ್ತಿ ಫಲಿಸಲಿ ಯೀ ಮಹಾಶರಕೆನುತ ಕೊಂಡನು ದಿವ್ಯಕಾರ‍್ಮುಕವ

ī mahā yajñavanu keḍisuve nī mahīśana muriveneṃdē vaimanasyadi bagedu mone māḍidanu nuḍiyeraḍa tāmasana taridakhiḷa bhūta stōma tuṣṭiya kīrti phalisali yī mahāśarakenuta koṃḍanu divyakārmukava

Report an error

ಝಂಕೆ ಮಿಗೆ ಹೊರವಂಟುದೆಡಬಲ ವಂಕದಲಿ ಯದುಸೇನೆ ಪಾಂಡವ ರಂಕೆಯಲಿ ದಳ ಜೋಡಿಸಿತು ಝಳಪಿಸುವ ಕೈದುಗಳ ಮುಂಕುಡಿಯ ಮೋಹರದ ದಳ ನಿ ಶ್ಶಂಕೆಯಲಿ ಜೋಡಿಸಿತು ಭೂಪರ ಬಿಂಕ ಬೀತುದು ಭೀತಿ ಹೂತುದು ಹುದುಗಿತಾಟೋಪ

jhaṃke mige horavaṃṭudeḍabala vaṃkadali yadusēne pāṃḍava raṃkeyali daḷa jōḍisitu jhaḷapisuva kaidugaḷa muṃkuḍiya mōharada daḷa ni śśaṃkeyali jōḍisitu bhūpara biṃka bītudu bhīti hūtudu hudugitāṭōpa

Report an error

ತೊಲಗಿದನು ಕುರುರಾಯ ಪಾಂಡವ ರೊಳಗೆ ತಪ್ಪಿಲ್ಲೆನುತ ಮಿಗೆ ಕುರು ತಿಲಕನಾವೆಡೆಯೆನುತ ಬಳಿವಿಡಿದರು ನೃಪಾಲಕರು ಕಲಿ ಜಯದ್ರಥ ಮಾದ್ರಪತಿ ಸೌ ಬಲ ಕಳಿಂಗ ಕರೂಪ ನೃಪ ಕೌ ಸಲರು ತಿರುಗಿತು ಬೇರೆ ಭಗದತ್ತಾದಿಗಳು ಸಹಿತ

tolagidanu kururāya pāṃḍava roḷage tappillenuta mige kuru tilakanāveḍeyenuta baḷiviḍidaru nr̥pālakaru kali jayadratha mādrapati sau bala kaḷiṃga karūpa nr̥pa kau salaru tirugitu bēre bhagadattādigaḷu sahita

Report an error

ಚೆಲ್ಲಿತೀ ನೃಪಯೂಥ ಜಾರಲಿ ಜಳ್ಳುಗಳು ಜಲಜಾಕ್ಷನ ಪ್ರತಿ ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ ಖುಲ್ಲರಾಯರು ನಿಲಲಿ ಗೊಲ್ಲರ ಹಳ್ಳಿಗಾರ ಕೂಡೆ ಬಿರುದಿನ ಕಲ್ಲಿಗಳ ತಮ್ಮೆದೆಯಲೊತ್ತಲಿಯೆಂದನಾ ಚೈದ್ಯ

cellitī nr̥payūtha jārali jaḷḷugaḷu jalajākṣana prati malla tānē sāladē hāruvene kelabalana khullarāyaru nilali gollara haḷḷigāra kūḍe birudina kalligaḷa tammedeyalottaliyeṃdanā caidya

Report an error

ಎನುತ ಖಳಿನಿದಿರಾಗಿ ಮಧು ಮ ರ್ದನನ ಹಳಚಿದನಸುರ ರಿಪುವಿನ ಮೊನೆಗಣೆಯಲೇ ಮುಳುಗಿದನು ಬಳಿಕಾ ಮುಹೂರ್ತದಲಿ ದನುಜ ವೈರಿಯ ಮುಸುಕಿದನು ತನ ತನಗೆ ನೋಟಕವಾಯ್ತು ಭೂಪತಿ ಜನ ಸುನೀತ ಮುರಾರಿಗಳ ಕೌತೂಹಲಾಹವಕೆ

enuta khaḷinidirāgi madhu ma rdanana haḷacidanasura ripuvina monegaṇeyalē muḷugidanu baḷikā muhūrtadali danuja vairiya musukidanu tana tanage nōṭakavāytu bhūpati jana sunīta murārigaḷa kautūhalāhavake

Report an error

ಬಿಡುವ ತೊಡಚುವ ಸಂಧಿಸುವ ಜೇ ವಡೆವ ಹೂಡುವ ತಾಗಿಸುವ ಹಿಳು ಕಿಡುವ ಹರಿಕುವ ಬೆಸುವ ಭೇದಿಸುವ ಸಮ ಚಾಪಳವ ನುಡಿವ ಕವಿ ಯಾರೈ ಬರಿಯ ಬಾ ಯ್ಬಡಿಕನೇ ಶಿಶುಪಾಲನೀ ಪರಿ ನಡೆವುದೇಕೈ ಹರಿಯೊಡನೆ ಸಮಬೆಸನ ಬಿಂಕದಲಿ

biḍuva toḍacuva saṃdhisuva jē vaḍeva hūḍuva tāgisuva hiḷu kiḍuva harikuva besuva bhēdisuva sama cāpaḷava nuḍiva kavi yārai bariya bā ybaḍikanē śiśupālanī pari naḍevudēkai hariyoḍane samabesana biṃkadali

Report an error

ಸೋತನೈ ಹರಿಯೆಂದು ಚೈದ್ಯನ ಬೂತುಗಳು ಬಣ್ಣಿಸಿದರೀ ನಿ ರ್ಭೀತ ಯಾದವ ಸೈನ್ಯವಿದ್ದುದು ಹರುಷ ಕೇಳಿಯಲಿ ಈತ ರಾವಣ ಮುನ್ನ ಭುವನ ಖ್ಯಾತನೆಂದಮರರು ವಿಮಾನ ವ್ರಾತದಲಿ ನೆರೆ ನೋಡುತಿರ್ದುದು ಸಮರ ಸಂಭ್ರಮವ

sōtanai hariyeṃdu caidyana būtugaḷu baṇṇisidarī ni rbhīta yādava sainyaviddudu haruṣa kēḷiyali īta rāvaṇa munna bhuvana khyātaneṃdamararu vimāna vrātadali nere nōḍutirdudu samara saṃbhramava

Report an error

ಧರಣಿಪತಿ ಕೇಳ್ ಕೃಷ್ಣ ಶಿಶುಪಾ ಲರ ಮಹಾ ಸಂಗ್ರಾಮ ಮಧ್ಯದೊ ಳುರಿದುದಿಳೆ ಹೊಗೆದುದು ದಿಶಾವಳಿ ಧೂಮಕೇತುಗಳು ತರಣಿಮಂಡಲ ಮಾಲೆಗಳು ವಿ ಸ್ತರಿಸಿತಾಕಾಶದಲಿ ಪರ್ವದ ಲುರವಣಿಸಿದನು ರಾಹು ಚಂದ್ರಾದಿತ್ಯ ಮಂಡಲವ

dharaṇipati kēḷ kr̥ṣṇa śiśupā lara mahā saṃgrāma madhyado ḷuridudiḷe hogedudu diśāvaḷi dhūmakētugaḷu taraṇimaṃḍala mālegaḷu vi starisitākāśadali parvada luravaṇisidanu rāhu caṃdrāditya maṃḍalava

Report an error

ನಡುಗಿತವನಿಯಕಾಲದಲಿ ಬರ ಸಿಡಿಲು ಸುಳಿದುದು ಹಗಲು ತಾರೆಗ ಳಿಡಿದವಭ್ರದಲಿಳೆಗೆ ಸುರಿದುದು ರುಧಿರಮಯ ವರ್ಷ ಮಿಡುಕಿದವು ಪ್ರತಿಮೆಗಳು ಶಿಖರದಿ ನುಡಿದು ಬಿದ್ದುದು ಕಳಶ ಹೆಮ್ಮರ ವಡಿಗಡಿಗೆ ಕಾರಿದವು ರುಧಿರವನರಸ ಕೇಳೆಂದ

naḍugitavaniyakāladali bara siḍilu suḷidudu hagalu tārega ḷiḍidavabhradaliḷege suridudu rudhiramaya varṣa miḍukidavu pratimegaḷu śikharadi nuḍidu biddudu kaḷaśa hemmara vaḍigaḍige kāridavu rudhiravanarasa kēḷeṃda

Report an error

ನೆಳಲು ಸುತ್ತಲು ಸುಳಿದುದಿನ ಮಂ ಡಳಕೆ ಕಾಳಿಕೆಯಾಯ್ತು ಫಲದಲಿ ಫಲದ ಬೆಳವಿಗೆ ಹೂವಿನಲಿ ಹೂವಾಯ್ತು ತರುಗಳಲಿ ತಳಿತ ಮರನೊಣಗಿದವು ಕಾಷ್ಠಾ ವಳಿಗಳುರೆ ತಳಿತವು ತಟಾಕದ ಸಲಿಲವುಕ್ಕಿತು ಪಾಂಡುಪುತ್ರರ ಪುರದ ವಳಯದಲಿ

neḷalu suttalu suḷidudina maṃ ḍaḷake kāḷikeyāytu phaladali phalada beḷavige hūvinali hūvāytu tarugaḷali taḷita maranoṇagidavu kāṣṭhā vaḷigaḷure taḷitavu taṭākada salilavukkitu pāṃḍuputrara purada vaḷayadali

Report an error

ಬೆದರಿದನು ಯಮಸೂನು ಭಯದಲಿ ಗದಗದಿಸಿ ನಾರದನ ಕೇಳಿದ ನಿದನಿದೇನೀ ಪ್ರಕೃತಿ ವಿಕೃತಿಯ ಸಕಳ ಚೇಷ್ಟೆಗಳು ಇದು ಕಣಾ ಚೈದ್ಯಾದಿಗಳ ವಧೆ ಗುದುಭವಿಸಿದುದಲೇ ಮುರಾರಿಯೊ ಳುದಯಿಸುವವುತ್ಪಾತ ಚೇಷ್ಟೆಗಳೆಂದನಾ ಮುನಿಪ

bedaridanu yamasūnu bhayadali gadagadisi nāradana kēḷida nidanidēnī prakr̥ti vikr̥tiya sakaḷa cēṣṭegaḷu idu kaṇā caidyādigaḷa vadhe gudubhavisidudalē murāriyo ḷudayisuvavutpāta cēṣṭegaḷeṃdanā munipa

Report an error

ಈ ನೆಗಳಿದುತ್ಪಾತ ಶಾಂತಿ ವಿ ಧಾನವೇನೆನೆ ಕೃಷ್ಣ ಚೇಷ್ಟೆಯೆ ಹಾನಿ ವೃದ್ಧಿ ವಿನಾಶವಭ್ಯುದಯ ಪ್ರಪಂಚದಲಿ ಮಾನನಿಧಿಯೇ ವೇದಸೂಕ್ತ ವಿ ಧಾನದಲಿ ಪರಿಹಾರ ವಿಶ್ವ ಕ್ಸೇನಮಯವೀ ಲೋಕ ಯಾತ್ರೆಗಳೆಂದನಾ ಮುನಿಪ

ī negaḷidutpāta śāṃti vi dhānavēnene kr̥ṣṇa cēṣṭeye hāni vr̥ddhi vināśavabhyudaya prapaṃcadali mānanidhiyē vēdasūkta vi dhānadali parihāra viśva ksēnamayavī lōka yātregaḷeṃdanā munipa

Report an error

ಆ ಹರಿಯೆ ನಿಮಗಿಂದು ಜೀವ ಸ್ನೇಹಿತನು ನಿಮಗಾವ ಚಿಂತೆ ವಿ ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು ಊಹಿಸಲು ಬೇಡೆಂದು ಮುನಿಪತಿ ಗಾಹಿನಲಿ ತಿಳುಹಿದನು ಘನ ಸ ನ್ನಾ ಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು

ā hariye nimagiṃdu jīva snēhitanu nimagāva ciṃte vi mōha cēṣṭegaḷivana vadhegō ballarāridanu ūhisalu bēḍeṃdu munipati gāhinali tiḷuhidanu ghana sa nnā hareccāḍidaru śiśupālaka murāṃtakaru

Report an error

ಕಾದಿದರು ವಿವಿಧಾಸ್ತ್ರ ವಿದ್ಯಾ ಭೇದದಲಿ ರಥಭಂಗ ಚಾಪ ವಿ ಭೇದ ಶಸ್ತ್ರಾಸ್ತ್ರೌ ಘ ಸಂಹರಣ ಪ್ರಪಂಚದಲಿ ಈ ದುರಾತ್ಮನ ನಿಲಿಸಿ ನಿಮಿಷದೊ ಳಾ ದಯಾಂಬುಧಿ ತುಡುಕಿದನು ತ್ರೈ ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ

kādidaru vividhāstra vidyā bhēdadali rathabhaṃga cāpa vi bhēda śastrāstrau gha saṃharaṇa prapaṃcadali ī durātmana nilisi nimiṣado ḷā dayāṃbudhi tuḍukidanu trai vēdamaya mūrtitrayātmaka vara sudarśanava

Report an error

ಬೆಸಸಿದನು ಚಕ್ರವನು ಧಾರಾ ವಿಸರ ಧೂತ ಪರಿಸ್ಫುಲಿಂಗ ಪ್ರಸರ ತೇಜಃಕಣ ಪರಿಷ್ಕೃತನವ್ಯ ಶತಭಾನು ದೆಸೆದೆಸೆಗೆ ದುವ್ವಾಳಿಸುವ ಬೆಳ ಗೆಸೆಯೆ ಬಂದು ಸುನೀತ ಕಂಠದ ಬೆಸುಗೆ ಬಿಡಲೆರಗಿದುದು ಹಾಯ್ದುದು ತಲೆ ನಭಸ್ಥಳಕೆ

besasidanu cakravanu dhārā visara dhūta parisphuliṃga prasara tējaḥkaṇa pariṣkr̥tanavya śatabhānu desedesege duvvāḷisuva beḷa geseye baṃdu sunīta kaṃṭhada besuge biḍaleragidudu hāydudu tale nabhasthaḷake

Report an error

ಹರಿಗೊರಳ ಚೌಧಾರೆಯಲಿ ಧುರು ಧುರಿಸಿ ನೂಕಿತು ರಕುತವದರೊಳು ಮಿರುಪ ತೇಜಃಪುಂಜವುಕ್ಕಿತು ಹೊದರ ಹೊಳಹಿನಲಿ ತುರುಗುವೆಳಗಿನ ಜೋಕೆಯಲಿ ಜಗ ವರಿಯೆ ಬಂದು ಮುರಾರಿಯಂಘ್ರಿಯೊ ಳೆರಗಿ ನಿಂದುದು ನಿಜ ನೆಲೆಗೆ ವಿಜಯಾಭಿಧಾನದಲಿ

harigoraḷa caudhāreyali dhuru dhurisi nūkitu rakutavadaroḷu mirupa tējaḥpuṃjavukkitu hodara hoḷahinali turuguveḷagina jōkeyali jaga variye baṃdu murāriyaṃghriyo ḷeragi niṃdudu nija nelege vijayābhidhānadali

Report an error

ತಗ್ಗಿ ತುರು ಕಳಕಳ ವಿಷಾದದ ಸುಗ್ಗಿ ಬೀತುದು ರಾಯರೀಚೆಯ ಮಗ್ಗುಲಲಿ ಮೇಳೈಸಿ ಮೆರೆದರು ಮತ್ತೆ ಬಾಂಧವರು ನೆಗ್ಗಿದವು ನೆನಹವನ ಸಖಿಗಳು ಮುಗ್ಗಿದರು ಹುರಡಿನ ವಿಘಾತಿಯ ಲಗ್ಗಿಗರು ಹಣುಗಿದರು ಶಿಶುಪಾಲಾವಸಾನದಲಿ

taggi turu kaḷakaḷa viṣādada suggi bītudu rāyarīceya maggulali mēḷaisi meredaru matte bāṃdhavaru neggidavu nenahavana sakhigaḷu muggidaru huraḍina vighātiya laggigaru haṇugidaru śiśupālāvasānadali

Report an error

ಈಸು ಹಿರಿದಿಲ್ಲೆಂದು ಕೆಲಬರು ಲೇಸ ಮಾಡಿದನಸುರ ರಿಪುವಿವ ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು ಐಸಲೇ ಕೃಷ್ಣಂಗೆ ಮುನಿದವ ರೇಸು ದಿನ ಬದುಕುವರು ಲೇಸಾ ಯ್ತಾ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ

īsu hiridilleṃdu kelabaru lēsa māḍidanasura ripuviva nīsu bāhiraneṃdariyevāveṃdu kelakelaru aisalē kr̥ṣṇaṃge munidava rēsu dina badukuvaru lēsā ytā sunītaṃgeṃdu nagutirdudu nr̥pastōma

Report an error

ಗೋಳಿಡುತ ಬಂದೆರಗಿದರು ಶಿಶು ಪಾಲ ತನುಜರು ಕೃಷ್ಣನಂಘ್ರಿಗೆ ಲಾಲಿಸಿದನನಿಬರನು ಸಂತೈಸಿದನು ಕರುಣದಲಿ ಮೇಲು ಪೋಗಿನ ವಿಧಿವಿಹಿತ ಕ ರ್ಮಾಳಿಗಳ ಮಾಳ್ದವನ ಮಗಗೆ ಕೃ ಪಾಳು ಪಟ್ಟದ ಸೇಸೆದಳಿದನು ವೀರನಾರಯಣ

gōḷiḍuta baṃderagidaru śiśu pāla tanujaru kr̥ṣṇanaṃghrige lālisidananibaranu saṃtaisidanu karuṇadali mēlu pōgina vidhivihita ka rmāḷigaḷa māḷdavana magage kr̥ pāḷu paṭṭada sēsedaḷidanu vīranārayaṇa

Report an error

Illustration: Verse & Place (Project-owned).