Skip to content

ಸಭಾ ಪರ್ವ — ಸಂಧಿ ೧೬ · ಸಭಾ ಪರ್ವ — ಸಂಧಿ ೧೬

Sabha Parva · Sandhi 16

sabhā parva — saṃdhi 16

The complete sabha parva · sandhi 16 in Kannada.

78 passagesKannada with transliteration

An original emblem for Sabha Parva.

Invocation

2.16.opening

ದ್ಯೂತ ಮುಖದಲಿ ನಿಖಿಳ ರಾಜ್ಯವ ಸೋತು ತನ್ನನುಜಾತ ಮುನಿ ಸಂ ಘಾತ ಸಹಿತವನೀಶ ವನವಾಸಕ್ಕೆ ಹೊರವಂಟ ||

dyūta mukhadali nikhiḷa rājyava sōtu tannanujāta muni saṃ ghāta sahitavanīśa vanavāsakke horavaṃṭa ||

ಕೇಳು ಜನಮೇಜಯ ಧರಿತ್ರೀ ಪಾಲ ಕುಂತಿಯ ನಂದನರು ತ ಮ್ಮಾಳೊಡನೆ ಹೇಳಿದರು ಸೌಭದ್ರಾದಿ ತನಯರಿಗೆ ಬಾಲಕಿಯ ಬೇಳಂಬವನು ಜೂ ಜಾಳಿಗಳ ಜಜಾರತನವನು ಕೇಳಿ ಬೈದುದು ಸೇನೆ ಖತಿಯಲಿ ಖಳ ಚತುಷ್ಟಯವ

kēḷu janamējaya dharitrī pāla kuṃtiya naṃdanaru ta mmāḷoḍane hēḷidaru saubhadrādi tanayarige bālakiya bēḷaṃbavanu jū jāḷigaḷa jajāratanavanu kēḷi baidudu sēne khatiyali khaḷa catuṣṭayava

Report an error

ಎತ್ತಿತೀ ಪಾಳಯವು ನಿಜಪುರ ದತ್ತ ತಿರುಗಿತು ಜನಜನಿತ ರಾ ಜೋತ್ತಮನ ಕಡೆಯಾಯ್ತು ಸತ್ಯಕ್ಷಮೆ ಪರಾಕ್ರಮಕೆ ಇತ್ತಲಡುಪಾಯ್ಬೇಗೆ ಬಿಸುಗುದಿ ಕಿತ್ತಡವು ಕಾರ್ಪಣ್ಯ ಕಪಟ ಖ ಳೋತ್ತಮರ ಹೃದಯದಲಿ ಹುದುಗಿತು ನೃಪತಿ ಕೇಳೆಂದ

ettitī pāḷayavu nijapura datta tirugitu janajanita rā jōttamana kaḍeyāytu satyakṣame parākramake ittalaḍupāybēge bisugudi kittaḍavu kārpaṇya kapaṭa kha ḷōttamara hr̥dayadali hudugitu nr̥pati kēḷeṃda

Report an error

ರವಿಯುದಯದಲಿ ಕೌರವೇಂದ್ರನ ಭವನಕೈತಂದನು ಕುಠಾರರ ಜವಳಿಯನು ಕರೆಸಿದನು ರಾಧಾಸುತನ ಸೌಬಲನ ಅವನಿಪತಿ ಗಾಂಧಾರಿಯರು ಪಾಂ ಡವರ ಮನ್ನಿಸಿ ಕಳುಹಿದರು ತ ಮ್ಮವನಿಗೈದಿದರೆಂದನಾ ದುಶ್ಶಾಸನನು ನಗುತ

raviyudayadali kauravēṃdrana bhavanakaitaṃdanu kuṭhārara javaḷiyanu karesidanu rādhāsutana saubalana avanipati gāṃdhāriyaru pāṃ ḍavara mannisi kaḷuhidaru ta mmavanigaididareṃdanā duśśāsananu naguta

Report an error

ಮುರಿಮುರಿದು ಪಟ್ಟಣವ ನೋಡುತ ನರ ವೃಕೋದರರೌಡುಗಚ್ಚುತ ತಿರುಗಿದರು ಗಡ ಗಾಢ ಬದ್ಧಭೃಕುಟಿ ಭೀಷಣರು ಕರಿಯ ಸೊಗಡಿನ ಮೃಗಪತಿಗೆ ಮೈ ಹರಿದ ಹಂದಿಗೆ ನೊಂದ ಹಾವಿಂ ಗರಸ ಮೈ ಚಾಚಿದೆಯಲಾ ನೀನೆಂದನಾ ಶಕುನಿ

murimuridu paṭṭaṇava nōḍuta nara vr̥kōdararauḍugaccuta tirugidaru gaḍa gāḍha baddhabhr̥kuṭi bhīṣaṇaru kariya sogaḍina mr̥gapatige mai harida haṃdige noṃda hāviṃ garasa mai cācideyalā nīneṃdanā śakuni

Report an error

ಅವರ ಹೆಂಡಿರ ಮುಂದಲೆಯ ಹಿಡಿ ದವಗಡವ ಮಾಡಿಸಿದೆ ಪಟ್ಟದ ಯುವತಿಯಾಕೆಯ ಭಂಗಬಡಿಸಿದೆ ನಿನ್ನಲಾಪನಿತ ಅವಳ ದೈವೋದಯವದೈಸಲೆ ಸವಡಿ ಸೀರೆಯ ಸುತ್ತು ಸಡಿಲದು ನಿವಗದಾಗಳೆ ಮರೆದು ಹಿಂಗಿದುದೆಂದನಾ ಕರ್ಣ

avara heṃḍira muṃdaleya hiḍi davagaḍava māḍiside paṭṭada yuvatiyākeya bhaṃgabaḍiside ninnalāpanita avaḷa daivōdayavadaisale savaḍi sīreya suttu saḍiladu nivagadāgaḷe maredu hiṃgidudeṃdanā karṇa

Report an error

ಬೊಪ್ಪನಿತ್ತನು ವರವನೆವಗದು ತಪ್ಪಿಸಲು ತೀರುವುದೆ ಭೀಮನ ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ ತಪ್ಪಿಸಿತಲೇ ದೈವಗತಿ ನ ಮ್ಮಪ್ಪನೇ ಕೆಡಿಸಿದನು ನವಗಿ ನ್ನಪ್ಪುದಾಗಲಿಯೆಂದು ಸುಯ್ದನು ಕೌರವರರಾಯ

boppanittanu varavanevagadu tappisalu tīruvude bhīmana darpakarjunanubbaṭege māḍidevu maddugaḷa tappisitalē daivagati na mmappanē keḍisidanu navagi nnappudāgaliyeṃdu suydanu kauravararāya

Report an error

ಜಯವಹುದೆ ನಿರ್ವೇದದಲಿ ನಿ ರ್ಭಯವಹುದೆ ಬಿಸುಸುಯ್ಲಿನಲಿ ನಿ ರ್ನಯವಹುದೆ ರಿಪುನೃಪರಿಗಿದು ತಾ ನೀತಿ ಮಾರ್ಗದಲಿ ನಿಯತವಿದು ನಿಶ್ಶೇಷ ನಿಮ್ಮ ನ್ವಯಕೆ ನಿರ್ವಾಹವನು ಗಾಂಧಾ ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ

jayavahude nirvēdadali ni rbhayavahude bisusuylinali ni rnayavahude ripunr̥parigidu tā nīti mārgadali niyatavidu niśśēṣa nimma nvayake nirvāhavanu gāṃdhā riyali nimmayyanali besagoḷḷeṃdanā śakuni

Report an error

ಅರಸ ಕೇಳ್ ಧೃತರಾಷ್ಟ್ರ ಭೂಪತಿ ಯರಮನೆಗೆ ನಡೆತಂದರೀ ನಾ ಲ್ವರು ವಿಷಾದ ವಿಡಂಬ ವಿಹ್ವಲ ಕರಣವೃತ್ತಿಯಲಿ ಪರಿಮಿತದಿ ಕುಳ್ಳಿರಿಸಿದರು ಸಹ ಚರನ ಶೋಧಿಸಿ ಕಡು ರಹಸ್ಯದೊ ಳರಸಿಯನು ಬರಹೇಳಿದರು ಗಾಂಧಾರಿ ದೇವಿಯನು

arasa kēḷ dhr̥tarāṣṭra bhūpati yaramanege naḍetaṃdarī nā lvaru viṣāda viḍaṃba vihvala karaṇavr̥ttiyali parimitadi kuḷḷirisidaru saha carana śōdhisi kaḍu rahasyado ḷarasiyanu barahēḷidaru gāṃdhāri dēviyanu

Report an error

ಅವರ ದಾಸ್ಯವ ಬಿಡಿಸಿ ನೀ ರಾ ಜ್ಯವನು ಕರುಣಿಸಿ ನೀತಿಯಲಿ ನಿ ಮ್ಮವರ ಕಳುಹಿದಿರೆಂದು ಕೇಳಿದೆವಾಯ್ತು ಪರಿತೋಷ ಅವರು ನಿವಗತಿ ಭಕ್ತರೈ ಬಾಂ ಧವರೆಲೇ ತಪ್ಪೇನು ಧರ್ಮ ಪ್ರವರರಿಗೆ ನೀವೊಲಿದಿರೆಂದನು ಕೌರವರರಾಯ

avara dāsyava biḍisi nī rā jyavanu karuṇisi nītiyali ni mmavara kaḷuhidireṃdu kēḷidevāytu paritōṣa avaru nivagati bhaktarai bāṃ dhavarelē tappēnu dharma pravararige nīvolidireṃdanu kauravararāya

Report an error

ನಾವಲೇ ಹೊರಗವರ ಹೆಂಡಿರ ಹೇವಗೆಡಿಸಿದೆವವರ ಸೋಲಿಸಿ ಜೀವಮಾತ್ರವನುಳುಹಿ ಸೆಳೆದೆವು ಸಕಲ ವಸ್ತುಗಳ ನೀವು ಕರುಣಿಸಿದಿರಿ ಕೃಪಾರಸ ಭಾವ ಹಿರಿಯರಲುಂಟೆಲೇ ತ ಪ್ಪಾವುದೈ ತಪ್ಪಾವುದೆನುತಲ್ಲಾಡಿದನು ಶಿರವ

nāvalē horagavara heṃḍira hēvageḍisidevavara sōlisi jīvamātravanuḷuhi seḷedevu sakala vastugaḷa nīvu karuṇisidiri kr̥pārasa bhāva hiriyaraluṃṭelē ta ppāvudai tappāvudenutallāḍidanu śirava

Report an error

ತಾಯೆ ನೇಮವೆ ಹಗೆಯ ಕೈಯಲಿ ಸಾಯಲಾರೆವು ಸಾಗರಾಂತದ ರಾಯರಿಲ್ಲಾ ಹೊರೆಯಲಾಪೆವು ಬೆಂದ ಬಸುರುಗಳ ಕಾಯಿದನು ಕರುಣದಲಿ ತಂದೆ ಸ ಹಾಯವಹ ಪಾಂಡವರ ಕೂಡಿಯೆ ರಾಯ ಬದುಕಿರಲೆಮ್ಮ ಕಳುಹೆಂದೆರಗಿದನು ಪದಕೆ

tāye nēmave hageya kaiyali sāyalārevu sāgarāṃtada rāyarillā horeyalāpevu beṃda basurugaḷa kāyidanu karuṇadali taṃde sa hāyavaha pāṃḍavara kūḍiye rāya badukiralemma kaḷuheṃderagidanu padake

Report an error

ಏಕೆ ಬೆಸಗೊಳ್ಳಬಲೆ ಸುತರವಿ ವೇಕ ವಿಷಮಗ್ರಹ ವಿಕಾರ ವ್ಯಾಕರಣ ದುರ್ಲಲಿತ ದುಷ್ಕೃತವೀ ಪ್ರಳಾಪವಿದು ಈ ಕುಲವನೀ ಪುರವನೀ ಲ ಕ್ಷ್ಮೀ ಕರವನೀ ಜಗವನೀ ವಿಭ ವಾಕೃತಿಯನಂಬುಧಿಯೊಳದ್ದುವ ನಿನ್ನ ಮಗನೆಂದ

ēke besagoḷḷabale sutaravi vēka viṣamagraha vikāra vyākaraṇa durlalita duṣkr̥tavī praḷāpavidu ī kulavanī puravanī la kṣmī karavanī jagavanī vibha vākr̥tiyanaṃbudhiyoḷadduva ninna maganeṃda

Report an error

ಸರಿಹಸುಗೆಯಿಂದರ್ಧ ರಾಜ್ಯದ ಸಿರಿಗೆ ಯೋಗ್ಯರು ಬಾಹುಸತ್ವಕೆ ಸುರರು ಸರಿಯಿಲ್ಲಿವರ ಪಾಡೇ ಮನುಜ ಜಂತುಗಳು ಚರಿತದವರಾಚರಣೆ ನಿನಗೆಂ ತರಿ ವಿನಾಶನ ಸಿದ್ಧಿಯೆಂದನು ಮಗಗೆ ಧೃತರಾಷ್ಟ್ರ

sarihasugeyiṃdardha rājyada sirige yōgyaru bāhusatvake suraru sariyillivara pāḍē manuja jaṃtugaḷu caritadavarācaraṇe ninageṃ tari vināśana siddhiyeṃdanu magage dhr̥tarāṣṭra

Report an error

ಬೇಹವರು ಸರಿರಾಜ್ಯಕದು ಸಂ ದೇಹವೇ ಮೇಲವರು ಸತ್ವದ ಸಾಹಸದ ಸತ್ಯದ ಸದಾಚಾರದ ನಿವಾಸರಲೆ ಸ್ನೇಹಿತರು ನಿನಗವರ ಮೇಗವ ಗಾಹಿಸಿದೆವನ್ಯಾಯದಲಿ ಸ ದ್ರೋಹರಾವಿನ್ನೆಮಗೆ ನೇಮವೆಯೆನುತ ಹೊರವಂಟ

bēhavaru sarirājyakadu saṃ dēhavē mēlavaru satvada sāhasada satyada sadācārada nivāsarale snēhitaru ninagavara mēgava gāhisidevanyāyadali sa drōharāvinnemage nēmaveyenuta horavaṃṭa

Report an error

ಕಲಕಿತರಸನ ಕರಣ ಕಂಗಳ ಕುಳಿಗಳಲಿ ನೀರೊರೆತವಕಟಕ ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ ಸೆಳೆದು ತಂದರು ಕರ್ಣ ಶಕುನಿಗ ಳಳಲಿಗನ ತೆಗೆದಪ್ಪಿದನು ಕುರು ತಿಲಕ ನಿನ್ನುಳಿದೊಡಲ ಹಿಡಿವೆನೆಯಂದನಂಧ ನೃಪ

kalakitarasana karaṇa kaṃgaḷa kuḷigaḷali nīroretavakaṭaka ṭelege kareyā pāpi magananu kurukulāṃtakana seḷedu taṃdaru karṇa śakuniga ḷaḷaligana tegedappidanu kuru tilaka ninnuḷidoḍala hiḍiveneyaṃdanaṃdha nr̥pa

Report an error

ಏನು ಮಾಡುವೆವವರ ಕೆಡಿಸುವ ಡೇನು ಹದನನು ಕಂಡೆ ದೈವಾ ಧೀನ ನಿಷ್ಠರ ಮುರಿವುದರಿದನ್ಯಾಯ ತಂತ್ರದಲಿ ಏನು ನಿನ್ನಭಿಮತವು ನಿನ್ನೊಳ ಗಾನು ಹೊರಗೇ ಕಂದ ನುಡಿ ದು ಮ್ಮಾನ ಬೇಡೆನ್ನಾಣೆನುತ ಸಂತೈಸಿದನು ಮಗನ

ēnu māḍuvevavara keḍisuva ḍēnu hadananu kaṃḍe daivā dhīna niṣṭhara murivudaridanyāya taṃtradali ēnu ninnabhimatavu ninnoḷa gānu horagē kaṃda nuḍi du mmāna bēḍennāṇenuta saṃtaisidanu magana

Report an error

ನೊಂದರವರಗ್ಗಳಿಸಿ ಹೃದಯದೊ ಳೊಂದಿ ಬೆರಸರು ಮರಹು ತೆರಹಿನೊ ಳಂದಗೆಡಿಸುವರಲ್ಲದುಳುಹರು ನಿನ್ನ ಸಂತತಿಯ ಒಂದು ಸತ್ತಿಗೆ ನಮ್ಮದಿಲ್ಲಿಗೆ ನಿಂದುದೆನಿಸಲಿ ನಾವು ನಿಲಲವ ರೊಂದು ಸತ್ತಿಗೆಯಾಗಿ ಸಲಹಲಿ ಸಕಳ ಭೂತಳವ

noṃdaravaraggaḷisi hr̥dayado ḷoṃdi berasaru marahu terahino ḷaṃdageḍisuvaralladuḷuharu ninna saṃtatiya oṃdu sattige nammadillige niṃdudenisali nāvu nilalava roṃdu sattigeyāgi salahali sakaḷa bhūtaḷava

Report an error

ಹುದುವ ಸೈರಿಸಿ ಬಳಸಿದರು ದುರು ಪದಿಯನವರೈವರು ಧರಿತ್ರಿಯ ಹುದುವ ಸೈರಿಸಲಾರೆನವರೊಡನಿಂದು ಮೊದಲಾಗಿ ಒದೆದು ಕಳೆ ನಮ್ಮಿನಿಬರನು ನೇ ಹದಲಿ ಸಲಹೈವರನು ನೀನಿಂ ದೊದೆವುದೈವರ ನಮ್ಮ ಹಿಡಿ ಬೇರಿಲ್ಲ ಮತವೆಂದ

huduva sairisi baḷasidaru duru padiyanavaraivaru dharitriya huduva sairisalārenavaroḍaniṃdu modalāgi odedu kaḷe namminibaranu nē hadali salahaivaranu nīniṃ dodevudaivara namma hiḍi bērilla mataveṃda

Report an error

ಅನಿಲಜನ ಬಾಯ್ಬಡಿಕತನವ ರ್ಜುನನ ಬರಿಬೊಬ್ಬಾಟ ಸಹದೇ ವನ ಸಗರ್ವದ ಮಾತು ಮೈಯಿಕ್ಕುವವು ಬಳಿಕಿನಲಿ ಮನೆಮೊಗವ ಕಾಣಿಸದೆ ಘನ ಕಾ ನನದೊಳಗೆ ಸುಳಿವಂತೆ ಮಂತ್ರವ ನೆನೆದೆನಿದು ನಿಮ್ಮಡಿಯ ಚಿತ್ತಕೆ ಬಹರೆ ಬೆಸಸೆಂದ

anilajana bāybaḍikatanava rjunana baribobbāṭa sahadē vana sagarvada mātu maiyikkuvavu baḷikinali manemogava kāṇisade ghana kā nanadoḷage suḷivaṃte maṃtrava nenedenidu nimmaḍiya cittake bahare besaseṃda

Report an error

ಮರುಳು ಮಗನೇ ಶಿವಶಿವಾ ಮನ ಬರಡನೇ ತಾನಕಟ ನಿಮ್ಮೈ ಶ್ವರಿಯ ಹಗೆ ದಾಯಾದ್ಯರುಗಳಭ್ಯುದಯದಲಿ ಸೊಗಸೆ ದುರುಳರವದಿರು ದೈವಮುಖದೆ ಚ್ಚರಿಕೆ ಘನಕೆಡರೆಂದು ಮೇಗರೆ ಹೊರೆಮನದ ಸೂಸಕದ ನೇಹವನರಸುತಿಹೆನೆಂದ

maruḷu maganē śivaśivā mana baraḍanē tānakaṭa nimmai śvariya hage dāyādyarugaḷabhyudayadali sogase duruḷaravadiru daivamukhade ccarike ghanakeḍareṃdu mēgare horemanada sūsakada nēhavanarasutiheneṃda

Report an error

ಕರೆಸಿಕೊಡಿ ನೀವಿಲ್ಲಿಗವರೈ ವರನು ಜೂಜಿನಲೊಂದು ಹಲಗೆಯ ಲರಸ ನೀ ಚಿತ್ತವಿಸು ಹನ್ನೆರಡಬುದ ವಿಪಿನದಲಿ ವರುಷವೊಂದಜ್ಞಾತವದರೊಳ ಗರಿದೆವಾದೊಡೆ ಮರಳಿ ವಿಪಿನಕೆ ವರುಷ ಹನ್ನೆರಡಕ್ಕೆ ಕೊಡುವೆವು ಮತ್ತೆ ವೀಳಯವ

karesikoḍi nīvilligavarai varanu jūjinaloṃdu halageya larasa nī cittavisu hanneraḍabuda vipinadali varuṣavoṃdajñātavadaroḷa garidevādoḍe maraḷi vipinake varuṣa hanneraḍakke koḍuvevu matte vīḷayava

Report an error

ಅಹುದು ಮಂತ್ರವಿದೆಂದು ಚಿತ್ತಕೆ ಬಹರೆ ಕಳುಹಿ ಮನುಷ್ಯರನು ಕರೆ ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ ಕುಹಕವುಂಟೇ ನಮ್ಮ ಕಳುಹುವು ದೆಹ ಮತವ ಬೆಸೆಸೆನಲು ನಿಮ್ಮೊಳು ಕುಹಕವುಂಟೇ ಮಗನೆ ಕರೆಸುವೆನೀಗ ಪಾಂಡವರ

ahudu maṃtravideṃdu cittake bahare kaḷuhi manuṣyaranu kare sahitaranu vidurādigaḷa koṃḍeyake kivigoḍade kuhakavuṃṭē namma kaḷuhuvu deha matava besesenalu nimmoḷu kuhakavuṃṭē magane karesuvenīga pāṃḍavara

Report an error

ಪ್ರಾತಿಕಾಮಿಕ ಬಾ ಯುಧಿಷ್ಠಿರ ಭೂತಳೇಶನ ಕರೆದು ತಾರೈ ತಾತ ಕಳುಹಿದನೆಂಬುದಿಂದ್ರಪ್ರಸ್ಥದಲ್ಲಿರಲಿ ಪ್ರೀತಿಪೂರ್ವಕವಲ್ಲದಲ್ಲಿ ವಿ ಘಾತಿಯಿಲ್ಲೆಂದುಚಿತ ವಚನದೊ ಳಾತಗಳನೊಡಗೊಂಡು ಬಾ ಹೋಗೆಂದನಂಧನೃಪ

prātikāmika bā yudhiṣṭhira bhūtaḷēśana karedu tārai tāta kaḷuhidaneṃbudiṃdraprasthadallirali prītipūrvakavalladalli vi ghātiyilleṃducita vacanado ḷātagaḷanoḍagoṃḍu bā hōgeṃdanaṃdhanr̥pa

Report an error

ಕೇಳಿದರು ಭೀಷ್ಮಾದಿಗಳು ಬರ ಹೇಳಿದರೆ ಪಾಂಡವರನಕಟಾ ಹೇಳಿದರೆ ಕೌರವರ ನೂರ್ವರನಂತಕಾಲಯಕೆ ಹೇಳಿದರೆ ಹೇಳಿಗೆಯ ಹಾವಿನ ಮೇಲು ಮುಚ್ಚಳ ಮುರಿಯಲೆಂದಿದ ಕೇಳಿದೆವೆ ಕೌತುಕವನೆಂದರು ಕುದಿದು ತಮ್ಮೊಳಗೆ

kēḷidaru bhīṣmādigaḷu bara hēḷidare pāṃḍavaranakaṭā hēḷidare kauravara nūrvaranaṃtakālayake hēḷidare hēḷigeya hāvina mēlu muccaḷa muriyaleṃdida kēḷideve kautukavaneṃdaru kudidu tammoḷage

Report an error

ಉರುವ ಮಕ್ಕಳನಿಕ್ಕಿ ಸಾಧಿಸು ವರಿಕೆ ಯಾವುದು ಹೇಳಲಾಗದೆ ಕುರಿಗಳೇ ನಿನ್ನವರು ಬಲ್ಲರೆ ಮೇಲಣಪಜಯವ ಮರುಗುವಳು ಗಾಂಧಾರಿ ಮಕ್ಕಳ ಹರುವ ಕಂಡರೆ ಮೇಲೆ ನಿನಗೇ ನರಿಯಬಾರದಲಾ ಮರುಳೆಯೆಂದಳಲಿದನು ಭೀಷ್ಮ

uruva makkaḷanikki sādhisu varike yāvudu hēḷalāgade kurigaḷē ninnavaru ballare mēlaṇapajayava maruguvaḷu gāṃdhāri makkaḷa haruva kaṃḍare mēle ninagē nariyabāradalā maruḷeyeṃdaḷalidanu bhīṣma

Report an error

ಕೊಂಬುದೇ ಖಳಜನಕೆ ಸಾಧುಗ ಳೆಂಬ ಮಾತು ವಿಧಾತೃಕಲ್ಪಿತ ವೆಂಬ ವಿಷದುಗ್ಗಡಕೆ ಗಾರುಡವೇನ ಮಾಡುವದು ತುಂಬುವುದು ಬತ್ತುವುದು ಕಾಲನ ಡೊಂಬಿದಾರಿಗೆ ಸಾಧ್ಯ ನಾವೇ ನೆಂಬುದಿದಕೆಂದಳಲಿದರು ಭೀಷ್ಮಾದಿ ಸಜ್ಜನರು

koṃbudē khaḷajanake sādhuga ḷeṃba mātu vidhātr̥kalpita veṃba viṣaduggaḍake gāruḍavēna māḍuvadu tuṃbuvudu battuvudu kālana ḍoṃbidārige sādhya nāvē neṃbudidakeṃdaḷalidaru bhīṣmādi sajjanaru

Report an error

ಇವರ ವಂಚಿಸಿ ರಜನಿ ಮಧ್ಯದೊ ಳವನ ಕಳುಹಿದಡಾತನೈತಂ ದಿವರ ಪಾಳಯದೊಳಗೆ ಹೊಕ್ಕನು ಹಲವು ಪಯಣದಲಿ ಅವನಿಪತಿ ಮರುದಿವಸ ಬೀಡೆ ತ್ತುವ ನಿಧಾನವನರಿದು ರಾಯನ ಭವನಿಕೆಯ ಹೊರಬಾಹೆಯಲಿ ದಂಡಿಗೆಯನವನಿಳಿದ

ivara vaṃcisi rajani madhyado ḷavana kaḷuhidaḍātanaitaṃ divara pāḷayadoḷage hokkanu halavu payaṇadali avanipati marudivasa bīḍe ttuva nidhānavanaridu rāyana bhavanikeya horabāheyali daṃḍigeyanavaniḷida

Report an error

ಕರೆದು ಹೇಳಿದನಾತ ಪಡಿಹಾ ರಿರಿಗೆ ತಾನೈ ಪ್ರಾತಿಕಾಮಿಕ ನರಸ ಕಳುಹಲು ಬಂದೆನಗ್ಗದ ರಾಜಕಾರಿಯಕೆ ಧರಣಿಪಾಲಂಗರುಹಿಯೆನೆ ನೃಪ ವರಗೆ ಬಿನ್ನಹ ಮಾಡೆ ಕರೆಸಿದ ಡಿರದೆ ಹೊಕ್ಕನು ದೂತನಂದಾ ರಾಯನೋಲಗವ

karedu hēḷidanāta paḍihā ririge tānai prātikāmika narasa kaḷuhalu baṃdenaggada rājakāriyake dharaṇipālaṃgaruhiyene nr̥pa varage binnaha māḍe karesida ḍirade hokkanu dūtanaṃdā rāyanōlagava

Report an error

ದರುಶನವನಿತ್ತವನಿಪಾಲನ ಚರಣದಲಿ ಮೈಯಿಕ್ಕಿ ನಿಂದನು ನರ ವೃಕೋದರ ನಕುಲ ಸಹದೇವರಿಗೆ ಕೈಮುಗಿದು ಧರಣಿಪನ ಮೊಗಸನ್ನೆಯಲಿ ಕು ಳ್ಳಿರಲಿದೇನೈ ಪ್ರಾತಿಕಾಮಿಕ ಬರವು ಬೇಗದೊಳಾಯ್ತೆನುತ ಬೆಸಗೊಂಡನಾ ಭೀಮ

daruśanavanittavanipālana caraṇadali maiyikki niṃdanu nara vr̥kōdara nakula sahadēvarige kaimugidu dharaṇipana mogasanneyali ku ḷḷiralidēnai prātikāmika baravu bēgadoḷāytenuta besagoṃḍanā bhīma

Report an error

ಬರವು ಬೇರೇನೊಡೆಯರಟ್ಟಿದ ರರಸನಲ್ಲಿಗೆ ಹಿಂದೆ ಜೂಜಿನೊ ಳೊರಸೊರಸು ಮಿಗೆ ಮಸೆದುದಿತ್ತಂಡಕ್ಕೆ ಮನ ಮುನಿಸು ಹರೆದು ಹೋಯ್ತದು ಹೃದಯ ಶುದ್ಧಿಯೊ ಳೆರಡರಸುಗಳು ಜೂಜನಾಡಲಿ ಮರಳಿ ಬಿಜಯಂಗೈವುದೆಂದಟ್ಟಿದನು ಧೃತರಾಷ್ಟ್ರ

baravu bērēnoḍeyaraṭṭida rarasanallige hiṃde jūjino ḷorasorasu mige masedudittaṃḍakke mana munisu haredu hōytadu hr̥daya śuddhiyo ḷeraḍarasugaḷu jūjanāḍali maraḷi bijayaṃgaivudeṃdaṭṭidanu dhr̥tarāṣṭra

Report an error

ಮರಳಿ ಕರೆಸುವುದೆಂದು ಕಂಬನಿ ವೆರೆಸಿ ಕುರುಪತಿ ಪಿತನ ಚಿತ್ತವ ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ ಕರೆಸುವವದಿರು ಭಂಡರೋ ಮೇ ಣ್ಮರಳಿ ಹೋಹರು ಭಂಡರೋ ನೀ ನರಿವುದೇನೈ ಪ್ರಾತಿಕಾಮಿಕನೆಂದನಾ ಭೀಮ

maraḷi karesuvudeṃdu kaṃbani veresi kurupati pitana cittava karagisidanō mēṇu tā karesidaḷo gāṃdhāri karesuvavadiru bhaṃḍarō mē ṇmaraḷi hōharu bhaṃḍarō nī narivudēnai prātikāmikaneṃdanā bhīma

Report an error

ಬೊಪ್ಪನವರಟ್ಟಿದರೆ ಶಿವ ಶಿವ ತಪ್ಪ ನೆನೆವರೆ ಭೀಮ ಸೈರಿಸು ತಪ್ಪನಾಡಿದೆ ನಮಗೆ ಮುನಿವಳೆ ತಾಯಿ ಗಾಂಧಾರಿ ತಪ್ಪಲೊಮ್ಮಿಗೆ ಪಾಂಡು ಕುಂತಿಗೆ ಮುಪ್ಪಿನಲಿ ಮರುಳಾಟವಾಗಲಿ ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು

boppanavaraṭṭidare śiva śiva tappa nenevare bhīma sairisu tappanāḍide namage munivaḷe tāyi gāṃdhāri tappalommige pāṃḍu kuṃtige muppinali maruḷāṭavāgali tappuvane dhr̥tarāṣṭraneṃdanu naguta yamasūnu

Report an error

ಖಳರು ಮೊದಲಲಿ ಕೌರವರು ಕಲಿ ಮೊಳೆಯನಂಕುರಿಸುವ ಕುವಿದ್ಯಾ ಕಲಿತ ಮಾಯರು ಕರ್ಣ ಶಕುನಿಗಳವರ ಸಂಗದಲಿ ತಿಳಿದು ನಡೆವವನಲ್ಲವಿದು ನಿ ರ್ಮಲದ ನೀತಿಗೆ ಸಲ್ಲ ನಿಜಪಿತ ನೊಳಗು ನಿರ್ಮಳವಿಲ್ಲವೆಂದನು ನಗುತ ಕಲಿಭೀಮ

khaḷaru modalali kauravaru kali moḷeyanaṃkurisuva kuvidyā kalita māyaru karṇa śakunigaḷavara saṃgadali tiḷidu naḍevavanallavidu ni rmalada nītige salla nijapita noḷagu nirmaḷavillaveṃdanu naguta kalibhīma

Report an error

ನೆನಹಿನಭಿಮತವಲ್ಲ ದುರ್ಯೋ ಧನನ ಸೌಬಲ ಕರ್ಣರಭಿಮತ ಜನಪ ಧೃತರಾಷ್ಟ್ರನಿಗೆ ಗಾಂಧಾರಿಗೆಯಲಂಘ್ಯವಿದು ಅನುನಯದ ಹೊತ್ತಲ್ಲ ನೀವ್ ಹ ಸ್ತಿನಪುರಿಯ ಹೊಕ್ಕಾಗ ಘನಕಾ ನನಕೆ ಗಮಿಸುವಿರೆಂದರಾ ಧೌಮ್ಯಾದಿ ಮಂತ್ರಿಗಳು

nenahinabhimatavalla duryō dhanana saubala karṇarabhimata janapa dhr̥tarāṣṭranige gāṃdhārigeyalaṃghyavidu anunayada hottalla nīv ha stinapuriya hokkāga ghanakā nanake gamisuvireṃdarā dhaumyādi maṃtrigaḷu

Report an error

ಕರೆಯೆ ಕಾದುವುದಾಡುವದು ಸಂ ಗರಕೆ ಜೂಜಿಂಗಿದು ಮಹೀಶರ ಪರಮ ಧರ್ಮವಲೇ ನಿಧಾನಿಸೆ ವೈದಿಕಾಂಗದಲಿ ಗುರುವಲಾ ಧೃತರಾಷ್ಟ್ರನಾತನು ಕರೆಸಿದಲ್ಲಿ ವಿಘಾತಿ ಬಂದರೆ ಬರಲಿ ಸೈರಿಸಬಲ್ಲೆನೆಂದನು ಧರ್ಮನಂದನನು

kareye kāduvudāḍuvadu saṃ garake jūjiṃgidu mahīśara parama dharmavalē nidhānise vaidikāṃgadali guruvalā dhr̥tarāṣṭranātanu karesidalli vighāti baṃdare barali sairisaballeneṃdanu dharmanaṃdananu

Report an error

ಜನಪದಾಜ್ಞಾಯ ಮೀರಿ ಬಳಸುವು ದನುಚಿತವು ನಮಗಿನ್ನು ಭೀಮಾ ರ್ಜುನ ನಕುಲ ಸಹದೇವರಭಿಮತವೆಮ್ಮ ಮತವೆನಲು ಮನ ಮೊದಲು ಕರಣಂಗಳಾತ್ಮಂ ಗನುಚರರೊ ಬಾಧಕರೊ ನಿಮ್ಮಯ ಮನಕೆ ಚೆಮ್ಮಾವುಗೆಗಳೆಂದರು ಪವನಜಾದಿಗಳು

janapadājñāya mīri baḷasuvu danucitavu namaginnu bhīmā rjuna nakula sahadēvarabhimatavemma matavenalu mana modalu karaṇaṃgaḷātmaṃ ganucararo bādhakaro nimmaya manake cemmāvugegaḷeṃdaru pavanajādigaḷu

Report an error

ಮರಳಿ ಪಾಳೆಯ ಬಿಡಲಿ ಶಿಷ್ಟರ ಕರೆಸಿ ಪೇಳೆನುತವನಿಪತಿ ಗಜ ಪುರಿಗೆ ತಿರುಗಿದನರಿಯನೇ ಕೌರವನ ಕೃತ್ರಿಮವ ಕೊರಳಲಿಕ್ಕಿದ ವಿಧಿಯ ಕಣ್ಣಿಯ ಹುರಿ ಬಲುಹಲೇ ಧರ್ಮಸುತ ನೊಡ ಮುರಿಚಲಾಪನೆ ಕೇಳೆ ಜನಮೇಜಯ ಮಹೀಪಾಲ

maraḷi pāḷeya biḍali śiṣṭara karesi pēḷenutavanipati gaja purige tirugidanariyanē kauravana kr̥trimava koraḷalikkida vidhiya kaṇṇiya huri baluhalē dharmasuta noḍa muricalāpane kēḷe janamējaya mahīpāla

Report an error

ಸುತರು ಸಚಿವರು ಮಂತ್ರಿಗಳು ನಿಜ ಸತಿಯರಾಪ್ತರು ಬಂಧುಗಳು ಭೂ ಪತಿಗಳನುಜರು ಬುಧರು ಚಾತುರ್ಬಲದ ನಾಯಕರು ಮತವು ಮರಳುವದಲ್ಲ ಧರಣೀ ಪತಿಯನುತ್ಸಾಹಿಸುವ ಗತಿ ಸಂ ಗತವಲೇ ನವಗೆನುತ ನಡೆದುದು ಬುಧಜನಸ್ತೋಮ

sutaru sacivaru maṃtrigaḷu nija satiyarāptaru baṃdhugaḷu bhū patigaḷanujaru budharu cāturbalada nāyakaru matavu maraḷuvadalla dharaṇī patiyanutsāhisuva gati saṃ gatavalē navagenuta naḍedudu budhajanastōma

Report an error

ಭರದ ಪಯಣದಲಿವರು ಹಸ್ತಿನ ಪುರದ ಹೊರಬಾಹೆಯಲಿ ಬಿಟ್ಟರು ಪರಿರಚಿತ ಗಜ ತುರಗಶಾಲೆಯ ವಿಪುಳ ವೀಧಿಯಲಿ ಬಿರಿಯೆ ನೆಲನಳ್ಳಿರಿವ ವಾದ್ಯದ ಮೊರೆವ ಭೇರಿಯ ಬಹಳ ಕಹಳ ಸ್ವರದ ಕಳಕಳ ತೀವಿತಬುಜ ಭವಾಂಡ ಖರ್ಪರವ

bharada payaṇadalivaru hastina purada horabāheyali biṭṭaru pariracita gaja turagaśāleya vipuḷa vīdhiyali biriye nelanaḷḷiriva vādyada moreva bhēriya bahaḷa kahaḷa svarada kaḷakaḷa tīvitabuja bhavāṃḍa kharparava

Report an error

ಏನಿದದ್ಭುತ ರಭಸವಿದೆಲಾ ಮಾನನಿಧಿಗಳು ಮರಳಿ ಕುಂತೀ ಸೂನುಗಳ ಬಲ ಬಂದು ಬಿಟ್ಟುದು ಪುರದ ಬಾಹೆಯಲಿ ಏನು ಕೌರವರೊಡನೆ ಶರ ಸಂ ಧಾನವೋ ವಿನಯಾನುಗುಣ ಸಂ ಧಾನವೋ ತಾನೆನುತ ಗಜಬಜಿಸುದುದು ಗಜನಗರ

ēnidadbhuta rabhasavidelā mānanidhigaḷu maraḷi kuṃtī sūnugaḷa bala baṃdu biṭṭudu purada bāheyali ēnu kauravaroḍane śara saṃ dhānavō vinayānuguṇa saṃ dhānavō tānenuta gajabajisududu gajanagara

Report an error

ಪುರವ ಹೊಕ್ಕನು ನೃಪತಿ ಪರಿಮಿತ ಪರಿಜನದಲಾ ರಾಜ ಬೀದಿಯ ನೆರವಿ ನೆರವಿಯ ಜನದ ಪುನರಾಗಮನ ವಿಸ್ಮಯವ ಪರಿಣತ ಸ್ತ್ರೀ ಬಾಲ ವೃದ್ಧರ ವಿರಸ ವಚನವನಾಲಿಸುತ ನೃಪ ನರಮನೆಗೆ ಬಂದೆರಗಿದನು ಧೃತರಾಷ್ಟ್ರನಂಘ್ರಿಯಲಿ

purava hokkanu nr̥pati parimita parijanadalā rāja bīdiya neravi neraviya janada punarāgamana vismayava pariṇata strī bāla vr̥ddhara virasa vacanavanālisuta nr̥pa naramanege baṃderagidanu dhr̥tarāṣṭranaṃghriyali

Report an error

ಸೋಲದಲಿ ಮನ ನೊಂದು ಹೋದುದು ಹೋಲದೆಮ್ಮಭಿಮತಕೆ ನಿಮ್ಮೊಳು ಮೇಳದಿಂದೊಂದಾಗಿ ಮಜ್ಜನ ಭೋಜನಾದಿಗಳ ಲೀಲೆಯಲಿ ಮಾಡುವದು ಸದ್ಯೂ ತಾಳಿಯಲಿ ರಮಿಸುವದು ಮನದ ವಿ ಟಾಳವಿಲ್ಲದೆ ಬದುಕಿ ನಿಮ್ಮೊಳಗೆಂದನಂಧನೃಪ

sōladali mana noṃdu hōdudu hōlademmabhimatake nimmoḷu mēḷadiṃdoṃdāgi majjana bhōjanādigaḷa līleyali māḍuvadu sadyū tāḷiyali ramisuvadu manada vi ṭāḷavillade baduki nimmoḷageṃdanaṃdhanr̥pa

Report an error

ಕೃತಕವಿಲ್ಲದೆ ಬಂದೆ ನೀನೀ ವ್ಯಥಿಕರಕೆ ಮನಬಹರೆ ಸುಖ ಸಂ ಗತ ಸುಹೃದ್ದ್ಯೂತದಲಿ ರಮಿಸೈ ಕಂದ ಹೋಗೆಂದು ಸುತತನದ ಸೌಹಾರ್ದ ಸಂಭಾ ವಿತದ ಹೊರಬಾಹೆಯಲಿ ಧರಣೀ ಪತಿಯನುಪಚರಿಸಿದನು ಚದುರಿಗತನದಿ ಧೃತರಾಷ್ಟ್ರ

kr̥takavillade baṃde nīnī vyathikarake manabahare sukha saṃ gata suhr̥ddyūtadali ramisai kaṃda hōgeṃdu sutatanada sauhārda saṃbhā vitada horabāheyali dharaṇī patiyanupacarisidanu cadurigatanadi dhr̥tarāṣṭra

Report an error

ಸರ್ವಲೋಕ ವಿನಾಶಕರವೀ ಗುರ್ವಣೆಯ ದೈವಾಭಿಪಾಕಕೆ ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ ಸರ್ವಜನವೊಂದೆಸೆ ಯುಧಿಷ್ಠಿರ ನೋರ್ವನೊಂದೆಸೆ ಶಕುನಿ ಕೌರವ ರೀರ್ವರೊಂದೆಸೆ ಜೂಜಿನಭಿಮತವರಸ ಕೇಳೆಂದ

sarvalōka vināśakaravī gurvaṇeya daivābhipākake darviyāyitu dharmaputrana buddhivistāra sarvajanavoṃdese yudhiṣṭhira nōrvanoṃdese śakuni kaurava rīrvaroṃdese jūjinabhimatavarasa kēḷeṃda

Report an error

ಕಂದು ಕುಳ್ಳಿರ್ದುದು ಸಭಾಸದ ವೃಂದ ನೆರೆದುದು ಮತ್ತೆ ಜೂಜಿನ ದಂದುಗದ ದುರ್ವ್ಯಸನ ಮುಸುಕಿತು ಧರ್ಮನಂದನನ ತಂದು ಮಣಿಮಯ ಸಾರಿವಲಗೆಯ ನಂದು ಮೋಹರಿಸಿದರು ಜೂಜಿಂ ಗಿಂದುಕುಲದ ಮಹೀಶನನುವಾದನು ಸರಾಗದಲಿ

kaṃdu kuḷḷirdudu sabhāsada vr̥ṃda neredudu matte jūjina daṃdugada durvyasana musukitu dharmanaṃdanana taṃdu maṇimaya sārivalageya naṃdu mōharisidaru jūjiṃ giṃdukulada mahīśananuvādanu sarāgadali

Report an error

ಎಳ್ಳನಿತು ಖಯಖೋಡಿ ಚಿತ್ತದೊ ಳಿಲ್ಲ ನಿಜಪಾಂಡಿತ್ಯ ಪರಿಣತಿ ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕವಿಸ್ತಾರ ಖುಲ್ಲರೊಡನೆಯೆ ಖೇಳಮೇಳಕೆ ಚಲ್ಲಣವ ವೆಂಟಣಿಸಲಾ ಜನ ವೆಲ್ಲ ಮರುಗಿತು ಧರ್ಮಜನ ಮರುಜೂಜಿನುಬ್ಬಟೆಗೆ

eḷḷanitu khayakhōḍi cittado ḷilla nijapāṃḍitya pariṇati billa bisuṭudu bedarihōytu vivēkavistāra khullaroḍaneye khēḷamēḷake callaṇava veṃṭaṇisalā jana vella marugitu dharmajana marujūjinubbaṭege

Report an error

ತೆಗೆದು ಸಾರಿಯ ಹೂಡಿ ಹಾಸಂ ಗಿಗಳ ಹೊಸೆದನು ಶಕುನಿ ಧರ್ಮಜ ಹೊಗಳು ಹೊಣೆಯನು ವಚನಿಸೊಡ್ಡವನಿದು ವಿನೋದವಲೆ ಬಗೆವಡೊಂದೇ ಹಲಗೆ ಮೇಲಣ ದುಗುಣ ಸಲ್ಲದು ಜೂಜುಗಾರರ ವಿಗಡತನವಲ್ಲೆಂದು ನೃಪತಿಗೆ ಸೂಸಿದನು ನಗೆಯ

tegedu sāriya hūḍi hāsaṃ gigaḷa hosedanu śakuni dharmaja hogaḷu hoṇeyanu vacanisoḍḍavanidu vinōdavale bagevaḍoṃdē halage mēlaṇa duguṇa salladu jūjugārara vigaḍatanavalleṃdu nr̥patige sūsidanu nageya

Report an error

ಲಲಿತ ರಾಗದ ರಸದ ಗೋರಿಯ ಬಿಲುಸವಿಯ ಮೃಗದಂತೆ ವಿಷಯದ ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ ಕಲಿತ ವಿಕಳಾವೇಶದಲಿ ವಿ ಹ್ವಲಿತ ವಿವಿಧಶ್ರೋತ್ರನಯ ಸಂ ಕಲಿತನೆಂದನು ಶಕುನಿ ನೀ ನುಡಿಯೊಡ್ಡವೇನೆಂದು

lalita rāgada rasada gōriya bilusaviya mr̥gadaṃte viṣayada kuḷiyoḷage kāldoḍaki bidda suyōgiyaṃdadali kalita vikaḷāvēśadali vi hvalita vividhaśrōtranaya saṃ kalitaneṃdanu śakuni nī nuḍiyoḍḍavēneṃdu

Report an error

ಧರಣಿಪತಿ ಕೇಳ್ ನಿನ್ನ ಧಾರುಣಿ ಕುರುಪತಿಯ ನೆಲನೊಡ್ಡ ನಿಮ್ಮೀ ಯೆರಡರಸುಗಳೊಳಾರು ಸೋತರು ಸೋತ ಭೂಪತಿಗೆ ವರುಷ ಹನ್ನೆರಡರಲಿ ವನದೊಳ ಗಿರವು ಮೇಣಜ್ಞಾತವೊಂದೇ ವರುಷ ಹದಿನಾಲ್ಕರಲಿ ಹೊಗುವುದು ತಮ್ಮ ಪಟ್ಟಣವ

dharaṇipati kēḷ ninna dhāruṇi kurupatiya nelanoḍḍa nimmī yeraḍarasugaḷoḷāru sōtaru sōta bhūpatige varuṣa hanneraḍarali vanadoḷa giravu mēṇajñātavoṃdē varuṣa hadinālkarali hoguvudu tamma paṭṭaṇava

Report an error

ಮರೆಯಲಿಹುದಜ್ಞಾತವಾಸದೊ ಳರಿದರಾದೊಡೆ ಮತ್ತೆ ವನದಲಿ ಚರಿಸುವುದು ಹನ್ನೆರಡು ವರುಷವು ಸತ್ಯಭಾಷೆಯಲಿ ಮುರಿದು ತಪ್ಪಿದ ನೃಪನನೀಶ್ವರ ನರಿವನೈಸಲೆ ರಾಜಧರ್ಮವ ಮೆರೆವರಾಡುವುದೊಡ್ಡವೀ ಪರಿಯೆಂದನಾ ಶಕುನಿ

mareyalihudajñātavāsado ḷaridarādoḍe matte vanadali carisuvudu hanneraḍu varuṣavu satyabhāṣeyali muridu tappida nr̥pananīśvara narivanaisale rājadharmava merevarāḍuvudoḍḍavī pariyeṃdanā śakuni

Report an error

ಅಂಜುವರೆ ನಿಲು ಜೂಜುಗಾರರ ಭಂಜವಣೆಗೊಳಗಹರೆ ಬಾ ನೃಪ ರೆಂಜಲಿಸಿ ಬಿಡಬಹುದೆ ಪರಮದ್ಯೂತ ರಸಸುಧೆಯ ರಂಜಕರು ನಾವಲ್ಲ ಜೂಜಿಗೆ ಕಂಜಭವ ತಾನೆನ್ನೊಡನೆ ಕೆಲ ರಂಜದಿಹರಾರೆಂದು ಗರುವವ ಸೂಸಿದನು ಶಕುನಿ

aṃjuvare nilu jūjugārara bhaṃjavaṇegoḷagahare bā nr̥pa reṃjalisi biḍabahude paramadyūta rasasudheya raṃjakaru nāvalla jūjige kaṃjabhava tānennoḍane kela raṃjadiharāreṃdu garuvava sūsidanu śakuni

Report an error

ಉಗ್ರಭಾಷೆಯದೇಕೆ ಶಿವಶಿವ ವಿಗ್ರಹ ಪ್ರತಿಮುಖದ ವಿಷಮಾ ವಗ್ರಹದಲಿದು ಬೆಂದುಹೋಗದೆ ಭರತಸಂತಾನ ನಿಗ್ರಹಿಸಲೇಕಕಟ ಕುರುಕುಲ ದಗ್ರಿಯನನೆಂದಖಿಳ ಸಚಿವರು ದಗ್ರಚರಿತರು ಮುರಿದು ನುಡಿದರು ನೀತಿವಚನದಲಿ

ugrabhāṣeyadēke śivaśiva vigraha pratimukhada viṣamā vagrahadalidu beṃduhōgade bharatasaṃtāna nigrahisalēkakaṭa kurukula dagriyananeṃdakhiḷa sacivaru dagracaritaru muridu nuḍidaru nītivacanadali

Report an error

ವಿದುರ ಗುರು ಗುರುಸೂನು ಬಾಹ್ಲಿಕ ನದಿಯ ಮಗ ಗಾಂಧಾರಿ ಕುಂತೀ ಸುದತಿ ಭೂರಿಶ್ರವ ಯುಯುತ್ಸು ವಿಕರ್ಣ ಸೃಂಜಯರು ಇದು ವಿಷಮವೆಂದಾ ಕೃಪ ದ್ರೌ ಪದಿ ವೃಕೋದರ ಪಾರ್ಥ ಯಮಳರು ಕುದಿದರೊಳಗೊಳಗಾಡಲಮ್ಮದೆ ರಾಯನಿದಿರಿನಲಿ

vidura guru gurusūnu bāhlika nadiya maga gāṃdhāri kuṃtī sudati bhūriśrava yuyutsu vikarṇa sr̥ṃjayaru idu viṣamaveṃdā kr̥pa drau padi vr̥kōdara pārtha yamaḷaru kudidaroḷagoḷagāḍalammade rāyanidirinali

Report an error

ಕ್ಷಿತಿಪ ಕೇಳ್ ದುರ್ವ್ಯಸನ ವಿಷಮ ವ್ಯತಿಕರದ ಭಾಷೆಯನು ನೃಪ ಮಿಗೆ ಪತಿಕರಿಸಿದನು ಹೊಸೆದು ಹಾಸಂಗಿಗಳ ಹಾಯ್ಕಿದನು ಸತಿಯ ದಕ್ಷಿಣ ನಯನವೀ ಭೂ ಪತಿಯ ವಾಮ ಭುಜಾಕ್ಷಿಗಳು ದು ರ್ಗತಿಯ ಸೂಚಿಸಿ ತೋರುತಿರ್ದವು ಧರ್ಮನಂದನನ

kṣitipa kēḷ durvyasana viṣama vyatikarada bhāṣeyanu nr̥pa mige patikarisidanu hosedu hāsaṃgigaḷa hāykidanu satiya dakṣiṇa nayanavī bhū patiya vāma bhujākṣigaḷu du rgatiya sūcisi tōrutirdavu dharmanaṃdanana

Report an error

ದಾಯವೇ ಮಝ ಪೂತು ದುಗತಿಗ ನಾಯಸವಲೇ ಚೌಕವೊಂದೆ ಕಾಯಲಾಗದೆ ಹಾಯ್ದು ಹಾಯ್ಕೆಂದೊದರಿ ಗರ್ಜಿಸಿದ ರಾಯ ಸೋತನು ಧರ್ಮಸುತ ಕುರು ರಾಯ ಗೆಲಿದನು ಕಟ್ಟು ಗುಡಿಯನು ರಾಯನೂರೊಳಗೆಂದು ಮಿಗೆ ಬೊಬ್ಬಿರಿದನಾ ಶಕುನಿ

dāyavē majha pūtu dugatiga nāyasavalē caukavoṃde kāyalāgade hāydu hāykeṃdodari garjisida rāya sōtanu dharmasuta kuru rāya gelidanu kaṭṭu guḍiyanu rāyanūroḷageṃdu mige bobbiridanā śakuni

Report an error

ಹಣುಗಿತರಸನ ವದನ ತಾಳಿಗೆ ಯೊಣಗಿತವನಿಗೆ ನಟ್ಟದಿಟ್ಟಿಯ ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ ಜುಣುಗಿದುಬ್ಬಿನ ಸತ್ಯದಲಿ ಕೇ ವಣಿಸಿದರಿವಿನ ವಿಕೃತ ಕರ್ಮದ ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ

haṇugitarasana vadana tāḷige yoṇagitavanige naṭṭadiṭṭiya maṇida nenahina murida mahimeya tāgidapadeseya juṇugidubbina satyadali kē vaṇisidarivina vikr̥ta karmada kuṇikegoledoledarasaniddanu hotta duguḍadali

Report an error

ಉಬ್ಬು ಮುರಿದುದು ತಮ್ಮೊಳೊಬ್ಬರ ನೊಬ್ಬ ನೀಕ್ಷಿಸಿ ಕೈಯ್ಯಗಲ್ಲದ ನಿಬ್ಬರದ ನಿಡುಸುಯ್ಲ ಖೋಡಿಯ ಮನದ ಕಳ್ಗುದಿಯ ಜಬ್ಬುಲಿಯ ಜಾಣಿಕೆಯ ಚಿಂತೆಯ ಹಬ್ಬುಗೆಯ ಹರವಸದ ಖೇದದ ಮಬ್ಬಿನಲಿ ಹಣಗಿದರು ಪವನಜ ಫಲುಗುಣಾದಿಗಳು

ubbu muridudu tammoḷobbara nobba nīkṣisi kaiyyagallada nibbarada niḍusuyla khōḍiya manada kaḷgudiya jabbuliya jāṇikeya ciṃteya habbugeya haravasada khēdada mabbinali haṇagidaru pavanaja phaluguṇādigaḷu

Report an error

ಕಂಡನೇ ಧೃತರಾಷ್ಟ್ರನನು ಕೈ ಕೊಂಡನೇ ವನ ದೀಕ್ಷೆಯನು ಪಿತ ನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ ಚಂಡಿಗೊಂಡರೆ ನನಗೆ ನಿನ್ನಿನ ಭಂಡತನ ಬಾರದಲೆ ವನವಾ ಖಂಡಲಪ್ರಸ್ಥವಲೆ ನಿನಗಿನ್ನೆಂದಳಿಂದುಮುಖಿ

kaṃḍanē dhr̥tarāṣṭrananu kai koṃḍanē vana dīkṣeyanu pita naṃḍaledu kr̥ṣṇājinavanuḍugoreyanittanale caṃḍigoṃḍare nanage ninnina bhaṃḍatana bāradale vanavā khaṃḍalaprasthavale ninaginneṃdaḷiṃdumukhi

Report an error

ಕಳೆದು ಬಿಸುಟರು ಮತ್ತೆ ರತ್ನಾ ವಳಿಯ ವಿವಿಧಾಭರಣವನು ಪರಿ ಲಲಿತ ಕೃಷ್ಣಾಜಿನವ ಹೊದೆದರು ಹಾಯ್ಕಿ ಹಚ್ಚಡವ ನಳಿನಮುಖಿ ನಳನಳಿಪ ಮುಕ್ತಾ ವಳಿಯಲಂಕಾರವನುಗಿದು ಸಭೆ ಯೊಳಗೆ ಬಿಸುಟಳು ನಿಂದಳಬಲೆ ನಿಜಾಭಿರೂಪದಲಿ

kaḷedu bisuṭaru matte ratnā vaḷiya vividhābharaṇavanu pari lalita kr̥ṣṇājinava hodedaru hāyki haccaḍava naḷinamukhi naḷanaḷipa muktā vaḷiyalaṃkāravanugidu sabhe yoḷage bisuṭaḷu niṃdaḷabale nijābhirūpadali

Report an error

ಸಾಲದೇ ನಿಮಗಿನ್ನು ಕೌರವ ರೋಲಗದ ಫಲವಾಯ್ತಲಾ ವನ ಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತೆಲೆ ಬೀಳುಕೊಳಿರೇ ಬೊಪ್ಪನವರನು ಮೇಲೆ ಮೋಹದ ತಾಯಲಾ ನಡೆ ಹೇಳಿ ಕಳುಹಿಸಿಕೊಂಬೆವೆಂದನು ಭೂಪತಿಗೆ ಭೀಮ

sāladē nimaginnu kaurava rōlagada phalavāytalā vana māle koraḷiṃgalla caraṇābharaṇavāyitele bīḷukoḷirē boppanavaranu mēle mōhada tāyalā naḍe hēḷi kaḷuhisikoṃbeveṃdanu bhūpatige bhīma

Report an error

ಬಂದರಿವರರಮನೆಗೆ ನೇಮವೆ ಯೆಂದು ಪದಕೆರಗಿದರೆ ಕಣು ನೀ ರಿಂದ ನನೆದನು ತಂದೆ ಮಕ್ಕಳ ಬಿಟ್ಟು ಬದುಕುವನೆ ಇಂದುಮುಖಿ ಮರುಗಿದಳು ನಾವಿ ನ್ನೆಂದು ಕಾಬೆವು ನಿಮ್ಮನಕಟಕ ಟೆಂದಳತಿ ಮೋಹಿತೆಯಲಾ ಕುಂತೀ ಕುಮಾರರಿಗೆ

baṃdarivararamanege nēmave yeṃdu padakeragidare kaṇu nī riṃda nanedanu taṃde makkaḷa biṭṭu badukuvane iṃdumukhi marugidaḷu nāvi nneṃdu kābevu nimmanakaṭaka ṭeṃdaḷati mōhiteyalā kuṃtī kumārarige

Report an error

ವನದೊಳತ್ಯಾಯಾಸ ನೀವೆಂ ತನುಭವಿಸುವಿರಿ ಪಾಪಿ ದುರ್ಯೋ ಧನನ ದುರ್ಜನ ಸಂಗ ನಿವಗಿದು ಸಿಂಗಿಯಾದುದಲೆ ವನಿತೆ ನಿಮ್ಮೊಡನೆಂತು ತೊಳಲುವ ಳನವರತ ಗಿರಿ ಗುಹೆಯ ಘಟ್ಟವ ನೆನುತ ನುಡಿದಳು ಕುಟಿಲಗರ್ಭದ ಗುಣದ ಬೆಳವಿಗೆಯ

vanadoḷatyāyāsa nīveṃ tanubhavisuviri pāpi duryō dhanana durjana saṃga nivagidu siṃgiyādudale vanite nimmoḍaneṃtu toḷaluva ḷanavarata giri guheya ghaṭṭava nenuta nuḍidaḷu kuṭilagarbhada guṇada beḷavigeya

Report an error

ಬೀಳುಕೊಡಿರೇ ಸಾಕು ಬಹಳ ಕೃ ಪಾಳುಗಳೆಲಾ ವಿಧಿಯ ಚಿತ್ತ ವಿ ಟಾಳ ಗತಿಗೇನಾಯ್ತು ಹದಿಮೂರಬುದವವಧಿಯಲೆ ಮೇಲೆ ನಿಮ್ಮಾತ್ಮಜರಿಗವನೀ ಪಾಲನೆಯ ಪರುಟವದ ಪಟ್ಟವ ಪಾಲಿಸುವರೀದಕೇನು ಹೊಲ್ಲೆಹವೆಂದನಾ ಧೌಮ್ಯ

bīḷukoḍirē sāku bahaḷa kr̥ pāḷugaḷelā vidhiya citta vi ṭāḷa gatigēnāytu hadimūrabudavavadhiyale mēle nimmātmajarigavanī pālaneya paruṭavada paṭṭava pālisuvarīdakēnu hollehaveṃdanā dhaumya

Report an error

ಫಲಕುಜದ ಪಲ್ಲವದ ಪದ ಕರ ತಳದ ವಿಪುಲ ತಮಾಲ ಪತ್ರದ ಲಲಿತ ಕೇತಕಿ ನಖದ ದಾಡಿಮ ದಂತ ಪಂಗ್ತಿಗಳ ನಳಿನ ನಯನದ ಮಧುಪ ಕುಲ ಕುಂ ತಳದ ವನಸಿರಿ ಸವತಿಯಾದಳು ಜಲಜಮುಖಿ ಪಾಂಚಾಲೆಗೆಂದನು ಧೌಮ್ಯಮುನಿ ನಗುತ

phalakujada pallavada pada kara taḷada vipula tamāla patrada lalita kētaki nakhada dāḍima daṃta paṃgtigaḷa naḷina nayanada madhupa kula kuṃ taḷada vanasiri savatiyādaḷu jalajamukhi pāṃcālegeṃdanu dhaumyamuni naguta

Report an error

ಇವರು ಕಳುಹಿಸಿಕೊಂಡರಾ ನೃಪ ಭವನವನು ಹೊರವಂಟರೊಡನು ತ್ಸ ವವಿಹೀನರು ವಿದುರ ಭೀಷ್ಮ ದ್ರೋಣ ಗೌತಮರು ಅವನಿಪತಿ ದುರ್ಯೋಧನಾದಿಗ ಳವನ ಸಹಭವರುಳಿಯೆ ಬಂದುದು ವಿವಿಧಜನದೊತೊತ್ತೆ ಮಸಗಿತು ರಾಜಬೀದಿಯಲಿ

ivaru kaḷuhisikoṃḍarā nr̥pa bhavanavanu horavaṃṭaroḍanu tsa vavihīnaru vidura bhīṣma drōṇa gautamaru avanipati duryōdhanādiga ḷavana sahabhavaruḷiye baṃdudu vividhajanadototte masagitu rājabīdiyali

Report an error

ಸಂದಣಿಸಿದುದು ಕೇರಿ ಕೇರಿಯ ಮಂದಿ ಮನೆಮನೆ ಮೇಲೆ ಘನತರು ವೃಂದದಲಿ ಪುರಸದನ ಶಿಖರೌಘದಲಿ ಶೋಕಿಸುತ ನಿಂದುದಲ್ಲಿಯದಲ್ಲಿ ನೋಟಕ ರಿಂದ ಕೆತ್ತುದು ಬೀದಿ ಪುರಜನ ಬಂಧಿಯಲಿ ಸಿಲುಕಿದ ನೃಪಾಲರು ನಡೆದರೊಗ್ಗಿನಲಿ

saṃdaṇisidudu kēri kēriya maṃdi manemane mēle ghanataru vr̥ṃdadali purasadana śikharaughadali śōkisuta niṃdudalliyadalli nōṭaka riṃda kettudu bīdi purajana baṃdhiyali silukida nr̥pālaru naḍedarogginali

Report an error

ಕುತ್ತುದಲೆಗಳ ಮೃಗದ ತೊಗಲಿನ ಸುತ್ತು ಹೊದಕೆಗಳೆಡದ ಕೈಗಳೊ ಳೆತ್ತಿದಾಯುಧ ತತಿಯ ಭಂಗದ ಭೂರಿ ತಾಪದಲಿ ಹೊತ್ತು ವೆದೆಗಳ ಹೊಗೆವ ಮೋರೆಯ ಕಿತ್ತಡದ ಕಡುಗೋಪ ಸುವತೆಗ ಳಿತ್ತಡಿಯ ತಡವಾಯ್ವ ನೃಪರೈತಂದರೊಗ್ಗಿನಲಿ

kuttudalegaḷa mr̥gada togalina suttu hodakegaḷeḍada kaigaḷo ḷettidāyudha tatiya bhaṃgada bhūri tāpadali hottu vedegaḷa hogeva mōreya kittaḍada kaḍugōpa suvatega ḷittaḍiya taḍavāyva nr̥paraitaṃdarogginali

Report an error

ಮುಂದಣಾತನು ಪಾರ್ಥನಾತನ ಹಿಂದೆ ಭೂಪತಿ ಧರ್ಮಪುತ್ರನ ಹಿಂದೆ ಮಾದ್ರೀತನಯರಿಬ್ಬರ ಹಿಂದೆ ಪಾಂಚಾಲೆ ಹಿಂದೆ ಕುಂತೀದೇವಿಯಾಕೆಯ ಹಿಂದಣಾತನು ಭೀಮನೆಂದಾ ಮಂದಿ ತೋರಿದುದೊಬ್ಬರೊಬ್ಬರಿಗಿವರನೀಕ್ಷಿಸುತ

muṃdaṇātanu pārthanātana hiṃde bhūpati dharmaputrana hiṃde mādrītanayaribbara hiṃde pāṃcāle hiṃde kuṃtīdēviyākeya hiṃdaṇātanu bhīmaneṃdā maṃdi tōridudobbarobbarigivaranīkṣisuta

Report an error

ಹರನ ಜೋಡು ಮುರಾಂತಕನ ಸಮ ದೊರೆ ವಿರಿಂಚನ ಪಾಡು ಶಕ್ರನ ಸರಿಸದವರಿಗೆ ಭಂಗವೀ ವಿಧಿಯೀ ವಿಪತ್ತುಗಳೆ ನರರನೀ ಕೌರವರ ಮಿಕ್ಕಿನ ನೊರಜುಗಳ ಪಾಡೇನು ಶಿವಶಿವ ಕರುಣಿಯಲ್ಲ ವಿಧಾತ್ರನೆಂದುದು ನೆರೆದ ಜನನಿಕರ

harana jōḍu murāṃtakana sama dore viriṃcana pāḍu śakrana sarisadavarige bhaṃgavī vidhiyī vipattugaḷe nararanī kauravara mikkina norajugaḷa pāḍēnu śivaśiva karuṇiyalla vidhātraneṃdudu nereda jananikara

Report an error

ಕೇಳಿದಭಿಮನ್ಯು ಪ್ರಮುಖ ಭೂ ಪಾಲ ತನುಜರು ಸಚಿವರಾಪ್ತರು ಪಾಳೆಯದ ತಲ್ಲಣದ ಖಯಖೋಡಿಯ ಮನೋವ್ಯಥೆಯ ಹೇಳಲರಿಯೆನು ಬಂದು ಕಂಡರು ಗೋಳಿಡುತ ಪದಕೆರಗಿದರು ನೃಪ ನಾಲಿ ನೀರೇರಿದುವು ನನೆದರು ನಯನವಾರಿಯಲಿ

kēḷidabhimanyu pramukha bhū pāla tanujaru sacivarāptaru pāḷeyada tallaṇada khayakhōḍiya manōvyatheya hēḷalariyenu baṃdu kaṃḍaru gōḷiḍuta padakeragidaru nr̥pa nāli nīrēriduvu nanedaru nayanavāriyali

Report an error

ಕರೆಸಿದನು ಪರಿವಾರವನು ನಿಮ ಗರಸು ಕೌರವನೆಮ್ಮ ಗಜ ರಥ ತುರಗ ಕೊಟ್ಟಿಗೆಯೆತ್ತು ಭಂಡಿ ಕೊಟಾರ ಕೊಪ್ಪರಿಗೆ ಸರಕು ಸರ್ವಸ್ವಗಳು ಕೌರವ ನರಮನೆಗೆ ನಡೆಯಲಿ ವನಾಂತದೊ ಳಿರವು ನಮಗೆಂದರುಹಿದನು ಸಚಿವರಿಗೆ ಸಹದೇವ

karesidanu parivāravanu nima garasu kauravanemma gaja ratha turaga koṭṭigeyettu bhaṃḍi koṭāra kopparige saraku sarvasvagaḷu kaurava naramanege naḍeyali vanāṃtado ḷiravu namageṃdaruhidanu sacivarige sahadēva

Report an error

ಕರಿಗಳನು ಕೌರವನ ಮಾವಂ ತರಿಗೆ ಕೈಗೊಳಿಸಿದರು ರಥ ಹಯ ತುರುಗಳುಂ ಕೈವರ್ತಿಸಿತು ಸೂತರಿಗೆ ಗೋವರಿಗೆ ಸರಕನವನಿಪನನುಚರರಿಗು ತ್ತರಿಸಿದರು ಪಾರಕವನೊಪ್ಪಿಸಿ ವರ ಸುಭಟರಳವಡಿಸಿಕೊಂಡರು ಕಾನನೋಚಿತವ

karigaḷanu kauravana māvaṃ tarige kaigoḷisidaru ratha haya turugaḷuṃ kaivartisitu sūtarige gōvarige sarakanavanipananucararigu ttarisidaru pārakavanoppisi vara subhaṭaraḷavaḍisikoṃḍaru kānanōcitava

Report an error

ಹರಿದರಿಂದ್ರಪ್ರಸ್ಥ ಕಾತನ ಚರರು ಸಚಿವರು ಹೊಕ್ಕು ಪಾಂಡವ ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ ಕರೆಸಿ ಕಾಣಿಕೆಗೊಂಡು ಠಾಣಾಂ ತರದ ನಾಯಕವಾಡಿಗಳ ಸಂ ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ

haridariṃdraprastha kātana cararu sacivaru hokku pāṃḍava raramaneya mudrisidaralliya nāḍu bīḍugaḷa karesi kāṇikegoṃḍu ṭhāṇāṃ tarada nāyakavāḍigaḷa saṃ varaṇegaḷa saṃtavisidaru kururāja mudreyali

Report an error

ಅರಸ ಕೇಳಾಶ್ಚರ್ಯವನು ಗಜ ಪುರದ ಬೀದಿಯೊಳಿವರು ಬರುತಿರೆ ದುರುಳ ದುಶ್ಶಾಸನನು ಮಿಗೆ ಹರಿತಂದನೇಡಿಸುತ ಬೆರಲನಾಡಿಸಿ ಹೋದರೀ ಹೋ ದರಸು ಕಾನನದೆತ್ತು ಪುನರಪಿ ಸರಿದವೆತ್ತುಗಳೆನುತ ಬಂದನು ಹಿಂದೆ ಪವನಜನ

arasa kēḷāścaryavanu gaja purada bīdiyoḷivaru barutire duruḷa duśśāsananu mige haritaṃdanēḍisuta beralanāḍisi hōdarī hō darasu kānanadettu punarapi saridavettugaḷenuta baṃdanu hiṃde pavanajana

Report an error

ತಿರುಗಿ ಕಂಡನು ಭೀಮನುಬ್ಬಿದ ಹರುಷಹೃದಯನ ಮನದ ರೋಷದೊ ಳರಸನನು ನೋಡಿದನು ಭೂಪತಿ ಮೊಗದ ಸನ್ನೆಯಲಿ ತಿರುಹಿದನು ತಮ್ಮನನು ಗದೆಯನು ತಿರುಗಿ ಹಾಯಿಕಿ ಹಿಡಿದು ಮಾರುತಿ ಯಸರನಾಜ್ಞೆಯೊಳಂಜಿ ನಡೆದನು ನೃಪತಿ ಕೇಳೆಂದ

tirugi kaṃḍanu bhīmanubbida haruṣahr̥dayana manada rōṣado ḷarasananu nōḍidanu bhūpati mogada sanneyali tiruhidanu tammananu gadeyanu tirugi hāyiki hiḍidu māruti yasaranājñeyoḷaṃji naḍedanu nr̥pati kēḷeṃda

Report an error

ಪುರವ ಹೊರವಂಟಿವರು ಗಂಗಾ ವರನದಿಯ ತೀರದಲಿ ನಿಂದರು ಪರಿಜನವ ಕಳುಹಿದರು ಧೃತರಾಷ್ಟ್ರನ ಪಸಾಯಿತರ ಗುರುಜನಕೆ ಪೊಡವಂಟು ಬೀಳ್ಕೊಂ ಡರು ನದೀಜ ದ್ರೋಣ ಕೃಪರನು ಕರೆದು ಕುಂತಿಯ ನಿಲಿಸಿದರು ವಿದುರನ ನಿವಾಸದಲಿ

purava horavaṃṭivaru gaṃgā varanadiya tīradali niṃdaru parijanava kaḷuhidaru dhr̥tarāṣṭrana pasāyitara gurujanake poḍavaṃṭu bīḷkoṃ ḍaru nadīja drōṇa kr̥paranu karedu kuṃtiya nilisidaru vidurana nivāsadali

Report an error

ಕಳುಹಿ ಮರಳಿದು ವಿದುರನರಸನ ನಿಲಯಕೈತಂದನು ಕುಮಾರರ ಕಳುಹಿ ಬಂದೈ ತಮ್ಮ ಮತವೇನಾ ಯುಧಿಷ್ಠಿರನ ಉಳಿದವರ ಹದನೇನು ದುರುಪದಿ ಲಲನೆಯೇನೆಂದಳು ನಿದಾನವ ತಿಳಿದು ಬಂದೈ ಹೇಳೆನುತ ಧೃತರಾಷ್ಟ್ರ ಬೆಸಗೊಂಡ

kaḷuhi maraḷidu viduranarasana nilayakaitaṃdanu kumārara kaḷuhi baṃdai tamma matavēnā yudhiṣṭhirana uḷidavara hadanēnu durupadi lalaneyēneṃdaḷu nidānava tiḷidu baṃdai hēḷenuta dhr̥tarāṣṭra besagoṃḍa

Report an error

ಮುನಿಪ ಜಪಿಸುತ ಹೋದನಗ್ನಿಯ ವಿನುತ ಸೂಕ್ತವನೆತ್ತುಗೈದುವಿ ನನಿಲಜನು ದುಗುಡದಲಿ ಫಲುಗುಣ ಯಮಳರೊಂದಾಗಿ ವನಿತೆಯನು ನಡುವಿಟ್ಟು ಹೊರವಂ ಟನು ಯುಧಿಷ್ಠಿರ ನೃಪತಿ ನಿಯತದಿ ನೆನೆವುತಿದ್ದನು ವೀರನಾರಾಯಣನ ಪದಯುಗವ

munipa japisuta hōdanagniya vinuta sūktavanettugaiduvi nanilajanu duguḍadali phaluguṇa yamaḷaroṃdāgi vaniteyanu naḍuviṭṭu horavaṃ ṭanu yudhiṣṭhira nr̥pati niyatadi nenevutiddanu vīranārāyaṇana padayugava

Report an error

Illustration: Verse & Place (Project-owned).