Skip to content

ಅರಣ್ಯ ಪರ್ವ — ಸಂಧಿ ೭ · ಅರಣ್ಯ ಪರ್ವ — ಸಂಧಿ ೭

Aranya Parva · Sandhi 7

araṇya parva — saṃdhi 7

The complete aranya parva · sandhi 7 in Kannada.

104 passagesKannada with transliteration

An original emblem for Aranya Parva.

Invocation

3.7.opening

ಹರನ ಪಾಶುಪತಾಸ್ತ್ರ ಲಾಭೋ ತ್ಕರುಷ ಹರ್ಷೋತ್ಸವದಲಿಂದ್ರನ ಪುರವ ಹೊಕ್ಕನು ಪಾರ್ಥನೆಸೆದನು ಶಕ್ರತೇಜದಲಿ

harana pāśupatāstra lābhō tkaruṣa harṣōtsavadaliṃdrana purava hokkanu pārthanesedanu śakratējadali

ಕೇಳು ಜನಮೇಜಯ ಧರಿತ್ರೀ ಪಾಲ ವರ ಕೈಲಾಸವಾಸಿಯ ಬೀಳುಗೊಂಡನು ತದ್ವಿಯೋಗದಲಿಂದ್ರ ಕೀಲದಲಿ ಮೇಲುದುಗುಡದಲಸ್ತ್ರ ಲಾಭವ ನಾಲಿಸದೆ ಶಂಕರ ಪದಾಂಬುಜ ದೋಲಗದ ಸಿರಿ ತಪ್ಪಿತೆನುತುಮ್ಮಳಿಸಿದನು ಪಾರ್ಥ

kēḷu janamējaya dharitrī pāla vara kailāsavāsiya bīḷugoṃḍanu tadviyōgadaliṃdra kīladali mēluduguḍadalastra lābhava nālisade śaṃkara padāṃbuja dōlagada siri tappitenutummaḷisidanu pārtha

Report an error

ಮರುಳ ದೇವಾರ್ಚನೆಯೊ ಕನಸಿನ ಸಿರಿಯೊ ಶಿಶುವಿನ ಕೈಯ ರತ್ನವೊ ಹರಿಯ ಹೂಮಾಲೆಯೊ ಮದೀಯ ವಿವೇಕ ವಿಭ್ರಮವೊ ಹರನನೀ ಚರ‍್ಮಾಕ್ಷಿಯಲಿ ಗೋ ಚರಿಸೆ ಬೇಡಿದುದಂಬು ಮರ್ತ್ಯದೊ ಳಿರವು ಮಝ ಭಾಪೆನ್ನ ಪುಣ್ಯವೆನುತ್ತ ಬಿಸುಸುಯ್ದ

maruḷa dēvārcaneyo kanasina siriyo śiśuvina kaiya ratnavo hariya hūmāleyo madīya vivēka vibhramavo harananī carmākṣiyali gō carise bēḍidudaṃbu martyado ḷiravu majha bhāpenna puṇyavenutta bisusuyda

Report an error

ಅರಸ ಕೇಳದ್ಭುತವನಿತ್ತಲು ಚರಮ ದಿಗ್ಭಾಗದಲಖಿಳ ಜಲ ಚರ ನಿಕಾಯದ ಮುಂಗುಡಿಯಲಿಕ್ಕೆಲದ ಫಣಿಕುಲದ ವರ ನದೀ ನದ ಕೋಟಿಗಳ ಸಾ ಗರದ ಪರಿವಾರದಲಿ ಬಂದನು ವರುಣನಮರೇಂದ್ರನ ಕುಮಾರನ ಕಾಂಬ ತವಕದಲಿ

arasa kēḷadbhutavanittalu carama digbhāgadalakhiḷa jala cara nikāyada muṃguḍiyalikkelada phaṇikulada vara nadī nada kōṭigaḷa sā garada parivāradali baṃdanu varuṇanamarēṃdrana kumārana kāṃba tavakadali

Report an error

ವಿಕಟ ರಾಕ್ಷಸ ಯಕ್ಷಜನ ಗು ಹ್ಯಕರು ಕಿನ್ನರಗಣ ಸಹಿತ ಪು ಷ್ಪಕದಲೈತಂದನು ಧನೇಶ್ವರನಾ ತಪೋವನಕೆ ಸಕಲ ಪಿತೃಗಣ ಸಹಿತ ದೂತ ಪ್ರಕರ ಧರ್ಮಾಧ್ಯಕ್ಷರೊಡನಂ ತಕನು ಬೆರಸಿದನಿಂದ್ರಕೀಲ ಮಹಾ ವನಾಂತರವ

vikaṭa rākṣasa yakṣajana gu hyakaru kinnaragaṇa sahita pu ṣpakadalaitaṃdanu dhanēśvaranā tapōvanake sakala pitr̥gaṇa sahita dūta prakara dharmādhyakṣaroḍanaṃ takanu berasidaniṃdrakīla mahā vanāṃtarava

Report an error

ಹಿಡಿಯ ಸಾಲಿನ ಸತ್ತಿಗೆಯ ಬಲ ಕೆಡಕೆ ಕೆದರುವ ಸೀಗುರಿಯ ಮುಂ ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ ಜಡಿವ ಕಹಳಾರವದ ನೆಲನು ಗ್ಗಡಣೆಗಳ ಕೈವಾರಿಗಳ ಗಡ ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ

hiḍiya sālina sattigeya bala keḍake kedaruva sīguriya muṃ guḍiya vidyādhara mahōraga yakṣa rākṣasara jaḍiva kahaḷāravada nelanu ggaḍaṇegaḷa kaivārigaḷa gaḍa baḍeya garuvāyiyali gaganadiniḷidanamarēṃdra

Report an error

ಕಂಡನನಿಬರ ಬರವನೊಲಿದಿದಿ ರ್ಗೊಂಡನವರವರುಚಿತದಲಿ ಮುಂ ಕೊಂಡು ಮನ್ನಿಸಿ ಮನವ ಪಡೆದನು ಲೋಕಪಾಲಕರ ಖಂಡಪರಶುವಿನಸ್ತ್ರವನು ಕೈ ಕೊಂಡೆ ನಿನಗೇನರಿದು ನೀನು ದ್ದಂಡ ಬಲನೆಂದನಿಬರುಪಚರಿಸಿದರು ಫಲುಗುಣನ

kaṃḍananibara baravanolididi rgoṃḍanavaravarucitadali muṃ koṃḍu mannisi manava paḍedanu lōkapālakara khaṃḍaparaśuvinastravanu kai koṃḍe ninagēnaridu nīnu ddaṃḍa balaneṃdanibarupacarisidaru phaluguṇana

Report an error

ಆ ಮಹಾಸ್ತ್ರಕೆ ಬಳುವಳಿಯ ಕೊ ಳ್ಳೀ ಮದೀಯಾಸ್ತ್ರವನೆನುತ ಸು ತ್ರಾಮನಿತ್ತನು ದಿವ್ಯ ಬಾಣವನಿಂದ್ರ ಸಂಜ್ಞಕವ ಸಾಮವರ್ತಿಕ ದಂಡ ವಾರುಣ ತಾಮಸದ ಸಮ್ಮೋಹನವಿದೆಂ ದಾ ಮಹಾಂತಕ ವರುಣ ಧನದರು ಕೊಟ್ಟರಂಬುಗಳ

ā mahāstrake baḷuvaḷiya ko ḷḷī madīyāstravanenuta su trāmanittanu divya bāṇavaniṃdra saṃjñakava sāmavartika daṃḍa vāruṇa tāmasada sammōhanavideṃ dā mahāṃtaka varuṇa dhanadaru koṭṭaraṃbugaḷa

Report an error

ಎಲೆ ಧನಂಜಯ ನಿನಗಿದೇನ ಗ್ಗಳದ ಶರವೇ ನಿನ್ನ ಭಕ್ತಿಗೆ ಸಿಲುಕಿದನು ಶಿವನಾತ ನಂಬಿದೆ ನಿನ್ನ ಸೀಮೆಯಲಿ ಸುಲಭ ನಿನಗಿಂದಮಳ ಲಕ್ಷ್ಮೀ ನಿಲಯ ನೀನೇ ಪೂರ್ವದಲಿ ನಿ ರ್ಮಲಿನ ನರಋಷಿಯೆಂದು ಹರಿ ತೆಗೆದಪ್ಪಿದನು ಮಗನ

ele dhanaṃjaya ninagidēna ggaḷada śaravē ninna bhaktige silukidanu śivanāta naṃbide ninna sīmeyali sulabha ninagiṃdamaḷa lakṣmī nilaya nīnē pūrvadali ni rmalina narar̥ṣiyeṃdu hari tegedappidanu magana

Report an error

ಕೃತ ತಪಸ್ಸಿಂ ಭಿನ್ನ ಖೇದ ಕ್ಷತ ಶರೀರ ವ್ಯಥೆಯನಮರಾ ವತಿಯೊಳಗೆ ಕಳೆ ರಥಸಹಿತ ಕಳುಹುವೆನು ಮಾತಲಿಯ ಕ್ರತುಶತದ ಕೈಗಾಣಿಕೆ ದೀ ಕ್ಷಿತರ ಸಿರಿಯಂತರವ ಮನವಾ ರತೆಯದೆಂತುಂಟೊ ಕಾಣಬೇಹುದು ಪಾರ್ಥ ನೀನೆಂದ

kr̥ta tapassiṃ bhinna khēda kṣata śarīra vyatheyanamarā vatiyoḷage kaḷe rathasahita kaḷuhuvenu mātaliya kratuśatada kaigāṇike dī kṣitara siriyaṃtarava manavā rateyadeṃtuṃṭo kāṇabēhudu pārtha nīneṃda

Report an error

ಹೈ ಹಸಾದವು ನೂರು ಯಜ್ಞದ ಮೇಹುಹಾಡನು ಮೆಟ್ಟಲೆಮ್ಮಿ ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ ಐಹಿಕದಲಾಮುಷ್ಮಿಕದ ಸಂ ನ್ನಾಹ ಸಂಭವಿಸುವುದೆ ನಿಷ್ಪ್ರ ತ್ಯೂಹವೆಂದೆರಗಿದನು ಫಲುಗುಣನಿಂದ್ರನಂಘ್ರಿಯಲಿ

hai hasādavu nūru yajñada mēhuhāḍanu meṭṭalemmi hūhegaḷigaḷavaḍuvadolleve nimma karuṇadali aihikadalāmuṣmikada saṃ nnāha saṃbhavisuvude niṣpra tyūhaveṃderagidanu phaluguṇaniṃdranaṃghriyali

Report an error

ಬೀಳುಗೊಟ್ಟನು ನರನನೀ ದಿ ಕ್ಪಾಲರಂತರ್ಧಾನದೊಡನೆ ಸ ಮೇಳರಾದರು ಶಕ್ರಸಾರಥಿ ಸುಳಿದನಭ್ರದಲಿ ಜಾಳಿಗೆಯ ಮಣಿವೆಳಗುಗಳ ವೈ ಹಾಳಿಗಳ ವೈಡೂರ್ಯದೀಪ್ತಿ ನಿ ವಾಳಿಗಳ ಸುಪತಾಕೆ ಬೆಳಗುವ ಹೇಮರಥ ಸಹಿತ

bīḷugoṭṭanu narananī di kpālaraṃtardhānadoḍane sa mēḷarādaru śakrasārathi suḷidanabhradali jāḷigeya maṇiveḷagugaḷa vai hāḷigaḷa vaiḍūryadīpti ni vāḷigaḷa supatāke beḷaguva hēmaratha sahita

Report an error

ಅರಸ ಕೇಳೈ ಹತ್ತು ಸಾವಿರ ತುರಗ ನಿಕರದ ಲಳಿಯ ದಿವ್ಯಾಂ ಬರದ ಸಿಂಧದ ಸಾಲ ಸತ್ತಿಗೆಗಳ ಪತಾಕೆಗಳ ಖರರುಚಿಯ ಮಾರಾಂಕವೋ ಸುರ ಗಿರಿಯ ಸೋದರವೋ ಮೃಗಾಂಕನ ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ

arasa kēḷai hattu sāvira turaga nikarada laḷiya divyāṃ barada siṃdhada sāla sattigegaḷa patākegaḷa khararuciya mārāṃkavō sura giriya sōdaravō mr̥gāṃkana marudaleyo mēṇenalu ratha hoḷediḷidudaṃbaradi

Report an error

ಏನಿದಚ್ಚರಿ ಮೇಲೆ ಮೇಲೆ ನ ವೀನ ದರ್ಶನವೆನ್ನ ಪುಣ್ಯ ಸ್ಥಾನವೈ ಸಲೆಯೆನುತ ನರನಿದಿರಾದನಾ ರಥಕೆ ನೀನಹೈ ಕಲಿ ಪಾರ್ಥನೆಂಬ ಮ ಹಾ ನರೇಶ್ವರನೆನುತ ಮಿಗೆ ಸ ನ್ಮಾನಿಸುತ ಸುರಪತಿಯ ಸಾರಥಿ ನಿಲಿಸಿದನು ರಥವ

ēnidaccari mēle mēle na vīna darśanavenna puṇya sthānavai saleyenuta naranidirādanā rathake nīnahai kali pārthaneṃba ma hā narēśvaranenuta mige sa nmānisuta surapatiya sārathi nilisidanu rathava

Report an error

ಲಲಿತ ಹೇಷಾ ಧ್ವನಿಯ ಹಯ ಮಂ ಡಲದ ಮೌಳಿಯ ಮೇಲು ದಾಯದ ಲುಳಿಯ ಚೀತ್ಕೃತಿ ರವದ ಪಲಪಲ ತೆರದ ಫಳಹರದ ಚಲತುರಗ ಖುರ ಹತಿಯ ರಭಸೋ ಚ್ಚಲಿತ ಧೂಳೀ ಧೂಸರದ ರಥ ದೊಳಗೆ ನಿಂದಾ ಶಕ್ರಸಾರಥಿ ನುಡಿಸಿದನು ನರನ

lalita hēṣā dhvaniya haya maṃ ḍalada mauḷiya mēlu dāyada luḷiya cītkr̥ti ravada palapala terada phaḷaharada calaturaga khura hatiya rabhasō ccalita dhūḷī dhūsarada ratha doḷage niṃdā śakrasārathi nuḍisidanu narana

Report an error

ಏಳು ಫಲುಗುಣ ಹರಿ ವರೂಥದ ಮೇಲೆ ಬಿಜಯಂಗೈವ ಬಹಳ ಫ ಲಾಳಿಯಿದೆಲಾ ನಿನ್ನ ಪುಣ್ಯದ್ರುಮದ ಬೇರೊಡೆದು ಸಾಲಕುರಿದರಿಹಿಗಳ ಕರ್ಮದ ಕೂಲಿಗರ ಜಡ ಜಂಝ ಪೂಗರ ಜಾಲ ಸಿರಿಯನಿಮಿಷರ ಪುರಿ ವಶವಾಯ್ತು ನಿನಗೆಂದ

ēḷu phaluguṇa hari varūthada mēle bijayaṃgaiva bahaḷa pha lāḷiyidelā ninna puṇyadrumada bēroḍedu sālakuridarihigaḷa karmada kūligara jaḍa jaṃjha pūgara jāla siriyanimiṣara puri vaśavāytu ninageṃda

Report an error

ಬಲ್ಲರಾರದನಶ್ವಮೇಧದ ಮಲ್ಲರನು ಕೃತ ರಾಜಸೂಯರು ಬಲ್ಲರೇ ಕಡೆಬೀಡ ಕೋಟೆಯ ಗುಡಿಯ ಬೊಡ್ಡಿಯರ ಎಲ್ಲಿಯಮರಾವತಿ ನರಾಧಮ ರೆಲ್ಲಿ ನಾವೀಶ್ವರನ ಕರುಣದ ಭುಲ್ಲವಣೆಯಲಿ ಭಾಗ್ಯನೆಂದನು ನಗುತ ಕಲಿಪಾರ್ಥ

ballarāradanaśvamēdhada mallaranu kr̥ta rājasūyaru ballarē kaḍebīḍa kōṭeya guḍiya boḍḍiyara elliyamarāvati narādhama relli nāvīśvarana karuṇada bhullavaṇeyali bhāgyaneṃdanu naguta kalipārtha

Report an error

ಎನುತ ತೇರಿನೊಳೊಂದು ಕಾಲಿ ಟ್ಟನು ಧನಂಜಯನಿಂದ್ರಕೀಲದ ವನಕೆ ಕೈಮುಗಿದೆರಗಿದನು ಮಧುರ ವಚನದಲಿ ಮುನಿಜನವೆ ಪರ್ವತವೆ ಪಂಕಜ ವನವೆ ತರು ಲತೆ ಗುಲ್ಮ ಖಗ ಮೃಗ ವನಚರವೆ ನಾಹೋಗಿಬಹೆನೀ ನಿಮ್ಮನುಜ್ಞೆಯಲಿ

enuta tērinoḷoṃdu kāli ṭṭanu dhanaṃjayaniṃdrakīlada vanake kaimugideragidanu madhura vacanadali munijanave parvatave paṃkaja vanave taru late gulma khaga mr̥ga vanacarave nāhōgibahenī nimmanujñeyali

Report an error

ಎಂದು ರಥವೇರಿದನು ಪಾರ್ಥ ಪು ರಂದರನ ಸಾರಥಿ ಗುಣೌಘವ ನೊಂದು ನಾಲಗೆಯಿಂದ ಹೊಗಳಿದನಾ ಧನಂಜಯನ ಗೊಂದಣದ ವಾಘೆಗಳನೆಲ್ಲವ ನೊಂದುಗೂಡಿ ಕಿರಟಿ ದೃಢವಾ ಗೆಂದು ಮಾತಲಿ ಚಪ್ಪರಿಸಿದನು ಚಪಲ ವಾಜಿಗಳ

eṃdu rathavēridanu pārtha pu raṃdarana sārathi guṇaughava noṃdu nālageyiṃda hogaḷidanā dhanaṃjayana goṃdaṇada vāghegaḷanellava noṃdugūḍi kiraṭi dr̥ḍhavā geṃdu mātali capparisidanu capala vājigaḷa

Report an error

ಆವ ಜವವೇನೆಂಬ ಗತಿ ಮೇ ಣಾವ ದೃಢ ವೇಗಾಯ್ಲತನ ತಾ ನಾವ ಸೂಟಿಯದಾರು ಬಲ್ಲರು ವಹಿಲ ವಿವರಣವ ತೀವಿತಾಕಾಶವನು ಹೇಷಾ ರಾವ ಸೂತನ ಹುಂಕೃತಿ ಧ್ವನಿ ಯೀವಿಗಡ ರಥಚಕ್ರ ಚೀತ್ಕೃತಿ ಚಪಲ ನಿರ್ಘೋಷ

āva javavēneṃba gati mē ṇāva dr̥ḍha vēgāylatana tā nāva sūṭiyadāru ballaru vahila vivaraṇava tīvitākāśavanu hēṣā rāva sūtana huṃkr̥ti dhvani yīvigaḍa rathacakra cītkr̥ti capala nirghōṣa

Report an error

ತೇರು ಮೇಲಕ್ಕಡರೆ ನುಡಿದನು ಸಾರಿಥಿಗೆ ಕಲಿ ಪಾರ್ಥ ವಿವರಿಸು ಧಾರುಣಿಯ ಪರ್ವತ ಸಮುದ್ರ ದ್ವೀಪ ನದನದಿಯ ತೋರುವೀ ಲೋಕಂಗಳಳತೆಯ ಸೂರಿಯನ ರಥಗತಿಯನೆಸೆವಾ ಮೇರುವನು ಪಸರಿಸಿದ ಗಿರಿಗಳ ತಿಳಿಯ ಹೇಳೆಂದ

tēru mēlakkaḍare nuḍidanu sārithige kali pārtha vivarisu dhāruṇiya parvata samudra dvīpa nadanadiya tōruvī lōkaṃgaḷaḷateya sūriyana rathagatiyanesevā mēruvanu pasarisida girigaḷa tiḷiya hēḷeṃda

Report an error

ಧರೆಯನಾಂತವರಾರು ಧಾರುಣಿ ಯಿರವದೇತರ ಮೇಲೆ ದಿಗ್ದೇ ವರ ಪುರಂಗಳವೆಲ್ಲಿಹವು ಬೊಮ್ಮಾಂಡವೆನಿತಗಲ ಉರುತರ ಗ್ರಹರಾಶಿಯಾ ಧ್ರುವ ನಿರವು ಮೇಲೆನಿತೆನಿತು ಯೋಜನ ವರುಹೆನಲು ಪಾರ್ಥಂಗೆ ಮಾತಲಿ ನಗುತ ವಿವರಿಸಿದ

dhareyanāṃtavarāru dhāruṇi yiravadētara mēle digdē vara puraṃgaḷavellihavu bommāṃḍavenitagala urutara graharāśiyā dhruva niravu mēlenitenitu yōjana varuhenalu pārthaṃge mātali naguta vivarisida

Report an error

ಕೇಳು ನೀನೆಲೆ ಪಾರ್ಥ ತಾರಾ ಮಾಲೆಗಳ ವಿವರವನು ರವಿರಥ ಕಾಲಚಕ್ರವನೈದಿ ಗಗನಾಂಗಣದಿ ಚರಿಯಿಪುದ ಲೀಲೆಯಿಂದಬುಜೋದರನು ಸಲೆ ಪಾಲಿಸುವ ಲೋಕಗಳನೆಂದವ ಶೂಲಿಯಂಘ್ರಿಯ ನೆನೆದು ಪೇಳಿದ ಭುವನ ಕೋಶವನು

kēḷu nīnele pārtha tārā mālegaḷa vivaravanu raviratha kālacakravanaidi gaganāṃgaṇadi cariyipuda līleyiṃdabujōdaranu sale pālisuva lōkagaḷaneṃdava śūliyaṃghriya nenedu pēḷida bhuvana kōśavanu

Report an error

ಕೆಳಗಣಂಡ ಕಟಾಹ ತೊಡಗಿಯೆ ಜಲವು ತುಂಬಿಹುದದರ ಘಾತವು ತಿಳಿಯಲಿಪ್ಪತ್ತೈದು ಕೋಟಿಯ ಪವಣ ಪಡೆದಿಹುದು ಇಳೆಯದರ ಮೇಲೊಂದು ಕೋಟಿಯ ದಳದಲಿಹುದಲ್ಲಿಂದ ಮೇಲಣ ದಳತೆಯದು ಚವ್ವೀಸ ಕೋಟಿಯಜಾಂಡ ಪರಿಯಂತ

keḷagaṇaṃḍa kaṭāha toḍagiye jalavu tuṃbihudadara ghātavu tiḷiyalippattaidu kōṭiya pavaṇa paḍedihudu iḷeyadara mēloṃdu kōṭiya daḷadalihudalliṃda mēlaṇa daḷateyadu cavvīsa kōṭiyajāṃḍa pariyaṃta

Report an error

ಹತ್ತಿರೆಯಲಿಹುದತಳವಲ್ಲಿಂ ದತ್ತ ವಿತಳ ಸುತಳ ತಳಾತಳ ದೊತ್ತಿನ ಮಹಾತಳ ರಸಾತಳ ಕೆಳಗೆ ಪಾತಾಳ ಬಿತ್ತರದ ಲೋಕಂಗಳೇಳು ಧ ರಿತ್ರಿಯೊಳಗೊಂದೊಂದರಂತರ ಹತ್ತು ಹತ್ತು ಸಹಸ್ರ ಯೋಜನ ಪಾರ್ಥ ಕೇಳೆಂದ

hattireyalihudataḷavalliṃ datta vitaḷa sutaḷa taḷātaḷa dottina mahātaḷa rasātaḷa keḷage pātāḷa bittarada lōkaṃgaḷēḷu dha ritriyoḷagoṃdoṃdaraṃtara hattu hattu sahasra yōjana pārtha kēḷeṃda

Report an error

ಉತ್ತಮವು ಭೂಲೋಕವಲ್ಲಿಂ ದತ್ತ ಭುವ ಸುವ ಲೋಕವಲ್ಲಿಂ ದತ್ತ ಮಹಜನ ಲೋಕವಲ್ಲಿಂದತ್ತ ತಪಲೋಕ ಉತ್ತಮೋತ್ತಮವಿವಕೆ ಮೇಲಣ ಸತ್ಯಲೋಕಾದಿಗಳ ನೋಡಿ ಧ ರಿತ್ರಿಯಲಿ ಬಲುಗಾಹಕೊಟ್ಟನು ಲೋಕ ಪಾಲಕರ

uttamavu bhūlōkavalliṃ datta bhuva suva lōkavalliṃ datta mahajana lōkavalliṃdatta tapalōka uttamōttamavivake mēlaṇa satyalōkādigaḷa nōḍi dha ritriyali balugāhakoṭṭanu lōka pālakara

Report an error

ತರವಿಡಿದ ಮೇಲಣ ಜಗಂಗಳು ತರಣಿ ಮಂಡಲ ತೊಡಗಿಯತಿ ವಿ ಸ್ತರವೆನಿಸಿ ಬೊಮ್ಮಾಂಡ ಪರಿಯಂತಡಕಿಲಾಗಿಹವು ಮರುತನಾಧಾರದಲಿ ಲಕ್ಷ್ಮೀ ಕರವೆನಿಸಿ ದೇವರುಗಳಿಂದವೆ ಭರಿತವಾಗಿಹವವರ ಮಹಿಮೆಯ ಹೇಳಲರಿದೆಂದ

taraviḍida mēlaṇa jagaṃgaḷu taraṇi maṃḍala toḍagiyati vi staravenisi bommāṃḍa pariyaṃtaḍakilāgihavu marutanādhāradali lakṣmī karavenisi dēvarugaḷiṃdave bharitavāgihavavara mahimeya hēḷalarideṃda

Report an error

ಧಾರುಣಿಯನಹ ತಾಳ್ದನಾತನ ವೀರ ಕಮಠನು ಹೊತ್ತನನಿತರ ಭಾರವನು ನಿಜಶಕ್ತಿ ಧರಿಸಿಹಳೊಂದು ಲೀಲೆಯಲಿ ತೋರ ಗಿರಿಗಳವೆರಸಿದಿಳೆ ತಾ ನೀರೊಳದ್ದು ವದೆಂದು ಸಲೆ ಮದ ವಾರಣಂಗಳು ಧರಿಸಿಕೊಂಡಿಹವೆಂಟು ದಿಕ್ಕಿನಲಿ

dhāruṇiyanaha tāḷdanātana vīra kamaṭhanu hottananitara bhāravanu nijaśakti dharisihaḷoṃdu līleyali tōra girigaḷaverasidiḷe tā nīroḷaddu vadeṃdu sale mada vāraṇaṃgaḷu dharisikoṃḍihaveṃṭu dikkinali

Report an error

ಧರಣಿ ತಾನೈವತ್ತು ಕೋಟಿಯ ಹರಹು ಸಪ್ತ ಸಮುದ್ರ ಹೊರಗಾ ವರಿಸಿ ಜಂಬೂದ್ವೀಪ ನಡುವಿಹುದಲ್ಲಿ ಭದ್ರಾಶ್ವ ವರುಷ ಭಾರತ ಕೇತುಮಾಲವು ಕುರುವರುಷವಿವು ಪತ್ರವಾ ಸುರ ಗಿರಿಯ ಹೊರಗಾಗಿಹವು ಕರ್ಣಿಕೆಯಂತೆ ಕನಕಾದ್ರಿ

dharaṇi tānaivattu kōṭiya harahu sapta samudra horagā varisi jaṃbūdvīpa naḍuvihudalli bhadrāśva varuṣa bhārata kētumālavu kuruvaruṣavivu patravā sura giriya horagāgihavu karṇikeyaṃte kanakādri

Report an error

ಲಕ್ಕದೊಳು ಹದಿನಾರು ಸಾವಿರ ಮಿಕ್ಕ ವಸುಧೆಯೊಳಾಳುಗೊಂಡುದು ಮಿಕ್ಕ ಚೌರಾಶೀತಿ ಸಾಸಿರ ಯೋಜನದ ನಿಲವು ಲೆಕ್ಕಿಸಲು ಗಿರಿ ಶಿಖರದಗಲವ ದಕ್ಕು ಮೂವತ್ತೆರಡು ಸಾವಿರ ದಿಕ್ಕಿನೊಡೆಯರಿಗೆಂಟು ಪಟ್ಟಣವದರ ಮೇಲಿಹವು

lakkadoḷu hadināru sāvira mikka vasudheyoḷāḷugoṃḍudu mikka caurāśīti sāsira yōjanada nilavu lekkisalu giri śikharadagalava dakku mūvatteraḍu sāvira dikkinoḍeyarigeṃṭu paṭṭaṇavadara mēlihavu

Report an error

ನಡುವೆ ಚತುರಾನನ ಪಟ್ಟಣ ದೆಡೆದೆರವು ಹದಿನಾರು ಸಾವಿರ ಕಡು ಚೆಲುವಿನಿಂದೆಸೆವ ಮಿಸುನಿಯ ಕೋಟೆ ನವರತ್ನ ಎಡೆಗೆಡೆಗೆ ಕೇವಣಿಸಿದಂಗಡಿ ಗಡಣೆಯಿಲ್ಲದ ಹರ್ಮ್ಯ ನಿಚಯಕೆ ಪಡಿ ಚತುರ್ದಶ ಭುವನದೊಳಗಿಲ್ಲೆನಿಸಿ ಮೆರೆದಿಹುದು

naḍuve caturānana paṭṭaṇa deḍederavu hadināru sāvira kaḍu celuviniṃdeseva misuniya kōṭe navaratna eḍegeḍege kēvaṇisidaṃgaḍi gaḍaṇeyillada harmya nicayake paḍi caturdaśa bhuvanadoḷagillenisi meredihudu

Report an error

ಹರಳುಗಳ ಕೇವಣದ ಮಂಗಳ ತರವೆನಿಪ ತೊಡಿಗೆಗಳ ದಿವ್ಯಾಂ ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ ತರಳ ಲೋಚನದಿಂದುವದನದ ಪರಮ ಸೌಭಾಗ್ಯದ ವಿಲಾಸದ ಪರಿಜನಂಗಳು ಕಮಲಭವ ಪುರದಲ್ಲಿ ನೆಲಸಿಹರು

haraḷugaḷa kēvaṇada maṃgaḷa taravenipa toḍigegaḷa divyāṃ baradi beḷaguva tanulateya navamaṇiya mauḷigaḷa taraḷa lōcanadiṃduvadanada parama saubhāgyada vilāsada parijanaṃgaḷu kamalabhava puradalli nelasiharu

Report an error

ಹಲವು ನೆಲೆ ಚೆಲುವಿಕೆಗೆ ಸಲೆ ಹೊಂ ಗಲಶ ಲೋಕಕೆ ವಿಲಸ ಹೇಮದ ಕೆಲಸ ಗತಿಯಲಿ ಚೆಲುವೆನಿಸಿದುಪ್ಪರಿಗೆ ನೋಳ್ಪರಿಗೆ ಹೊಳಹಿನಲಿ ಥಳಥಳಿಸುತಿಹುದದು ನಳಿನಪೀಠನ ಭವನ ನಭದಿಂ ದಿಳಿವ ಗಂಗೆಯ ಧಾರೆ ಮೆರೆದುದು ಪುರದ ಬಾಹೆಯಲಿ

halavu nele celuvikege sale hoṃ galaśa lōkake vilasa hēmada kelasa gatiyali celuvenisidupparige nōḷparige hoḷahinali thaḷathaḷisutihudadu naḷinapīṭhana bhavana nabhadiṃ diḷiva gaṃgeya dhāre meredudu purada bāheyali

Report an error

ಮೇರೆಯಿಲ್ಲದ ದೇವ ತತಿಗಳ ಭಾರದಿಂ ಜಗ ಜರಿವುದೆಂದಾ ಮೇರುವಿಂಗಾನಿಸಿದ ರಜತ ಸ್ತಂಭವೋ ಮೇಣು ಸಾರತರ ಸುಕೃತವನು ಸಂಚಿಸಿ ಧೀರರೈದುವ ಸತ್ಯಲೋಕದ ದಾರಿಯೆಂಬಂದದಲಿ ಗಂಗೆಯ ಧಾರೆ ಮೆರೆದಿಹುದು

mēreyillada dēva tatigaḷa bhāradiṃ jaga jarivudeṃdā mēruviṃgānisida rajata staṃbhavō mēṇu sāratara sukr̥tavanu saṃcisi dhīraraiduva satyalōkada dāriyeṃbaṃdadali gaṃgeya dhāre meredihudu

Report an error

ನರಸುರರು ಮೊದಲಾದ ಸಚರಾ ಚರದ ಜೀವರಘಂಗಳನು ಸಂ ಹರಿಸಲೋಸುಗ ಸತ್ಯಲೋಕದಿನಿಳಿದು ಬಹ ಗಂಗೆ ಧರೆ ಧರಿಸಲರಿದೆಂದು ಕನಕದ ಗಿರಿಯ ಶಿಖರದ ನಡುವೆ ಬರುತಿಹ ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ

narasuraru modalāda sacarā carada jīvaraghaṃgaḷanu saṃ harisalōsuga satyalōkadiniḷidu baha gaṃge dhare dharisalarideṃdu kanakada giriya śikharada naḍuve barutiha parama pāvane tirugi haridaḷu nālku mukhavāgi

Report an error

ಅಳಕನಂದೆ ಸುಚಕ್ಷು ನಿರ್ಮಲ ಜಲದ ಭದ್ರೆಯು ಸತ್ಯೆಯೆಂಬಿವು ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ಧದಲಿ ಸುಳಿದು ಮೇರುವಿನಿಂದ ಕುಲಗಿರಿ ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ ಜಲನಿಧಿಯ ಬೆರೆಸಿದಳು ಕೇಳ್ ಜಗದಘವನಪಹರಿಸಿ

aḷakanaṃde sucakṣu nirmala jalada bhadreyu satyeyeṃbivu tiḷiye dakṣiṇavādiyāgi pradakṣiṇārdhadali suḷidu mēruviniṃda kulagiri giḷidu jāhnavi nālku dikkina jalanidhiya beresidaḷu kēḷ jagadaghavanapaharisi

Report an error

ಸುರಗಿರಿಯ ಮೊದಲಲ್ಲಿ ಕೀಲಕ ಗಿರಿಯು ನಾಲ್ಕವರಲ್ಲಿ ಕೇಸರ ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ ಹೊರಗೆ ನಾಲ್ಕುದ್ಯಾನ ಕೀಲಕ ಗಿರಿಯುದಯವೈವತ್ತು ಯೋಜನ ಹರಹು ತಾನು ಸಹಸ್ರ ಯೋಜನವದರ ಶಿಖರದಲಿ

suragiriya modalalli kīlaka giriyu nālkavaralli kēsara sarasi nālkaruṇōde bhadre sitōde mānasada horage nālkudyāna kīlaka giriyudayavaivattu yōjana harahu tānu sahasra yōjanavadara śikharadali

Report an error

ಸುರಪತಿಯ ದಿಕ್ಕಿನಲಿ ಬೆಳೆದಿಹು ದರಳಿ ಜಂಬೂವೃಕ್ಷ ತೆಂಕಲು ಹಿರಿದೆನಿಪ ತನಿವಣ್ಣ ರಸ ನದಿಯಾಗಿ ಹರಿದಿಹುದು ವರುಣನಿಹ ದೆಸೆಯಲಿ ಕದಂಬವು ಹರಸಖನ ದಿಕ್ಕಿನಲಿ ವಟಕುಜ ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು

surapatiya dikkinali beḷedihu daraḷi jaṃbūvr̥kṣa teṃkalu hiridenipa tanivaṇṇa rasa nadiyāgi haridihudu varuṇaniha deseyali kadaṃbavu harasakhana dikkinali vaṭakuja surarigāśrayavenisi kīlaka giriya mēlihudu

Report an error

ಮಂದರಾಚಲ ಮೂಡ ತೆಂಕಲು ಗಂಧಮಾದನ ವಿಮಳ ಪಶ್ಚಿಮ ದಿಂದ ಬಡಗ ಸುಪಾರ್ಶ್ವವೆಂಬಿವು ಕೀಲಕಾದ್ರಿಗಳು ನಂದನವು ಬಡಗಣದು ಪಡುವಣ ಚಂದವಹ ವೈಭ್ರಾಜ ತೆಂಕಲು ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ

maṃdarācala mūḍa teṃkalu gaṃdhamādana vimaḷa paścima diṃda baḍaga supārśvaveṃbivu kīlakādrigaḷu naṃdanavu baḍagaṇadu paḍuvaṇa caṃdavaha vaibhrāja teṃkalu gaṃdhamādana caitraratha mūḍaṇadu kēḷeṃda

Report an error

ಸೀತಳಾಂತಕ ಕುಂಡ ಮಳಯ ಕು ರಾತಿ ವೈರಂತಕವು ಮೂಡಲು ನೀತಿವಿದನೆ ತ್ರಿಕೂಟ ಶಿಶಿರಪತಂಗರುಚಿ ನಿಷಧ ಖ್ಯಾತವಿವು ತೆಂಕಣದು ಕಪಿಲನ ಜಾತಿವಾರಿಧಿ ಗಂಧಮಾದನ ತಾತವಿವು ಸುಖವಾಸ ಮಿಗೆ ವೈಡೂರ್ಯ ಪಶ್ವಿಮದಿ

sītaḷāṃtaka kuṃḍa maḷaya ku rāti vairaṃtakavu mūḍalu nītividane trikūṭa śiśirapataṃgaruci niṣadha khyātavivu teṃkaṇadu kapilana jātivāridhi gaṃdhamādana tātavivu sukhavāsa mige vaiḍūrya paśvimadi

Report an error

ನಾಗ ಕಾಲಾಂಜನವು ಹಂಸನು ಮೇಗೆ ವೃಷಭನು ಶಂಖ ಕೂಟವ ನೀಗಳೀಕ್ಷಿಸು ಬಡಗ ಲೆಕ್ಕಕೆ ನಾಲ್ಕುವನು ಬಳಿಕ ಮೇಗೆ ಕೇಳೀರೈದು ದೆಸೆಗಳ ಲಾ ಗಿರಿಯ ಹೊರಗಿಹರು ಸುರಜನ ಯೋಗಿಸಿದ್ಧನಿಷೇವಿತರು ತಾವಾಗಿ ವಿಭವದಲಿ

nāga kālāṃjanavu haṃsanu mēge vr̥ṣabhanu śaṃkha kūṭava nīgaḷīkṣisu baḍaga lekkake nālkuvanu baḷika mēge kēḷīraidu desegaḷa lā giriya horagiharu surajana yōgisiddhaniṣēvitaru tāvāgi vibhavadali

Report an error

ಧಾರುಣಿಯ ನಡುವಳಸಿ ಬೆಳೆದಿಹ ಮೇರು ಗಿರಿಯನು ಬಳಸಿ ವೃತ್ತಾ ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ ಮೇರೆಯಾಗಿಹ ಗಿರಿಕುಲಂಗಳ ತೋರದಗಲವನುನ್ನತಂಗಳ ಸಾರಹೃದಯನೆ ನಿನಗೆ ಕಲಿಮಲದೂರ ತಿಳುಹುವೆನು

dhāruṇiya naḍuvaḷasi beḷediha mēru giriyanu baḷasi vr̥ttā kāravāgesedihudu jaṃbūdvīpa navakhaṃḍa mēreyāgiha girikulaṃgaḷa tōradagalavanunnataṃgaḷa sārahr̥dayane ninage kalimaladūra tiḷuhuvenu

Report an error

ಕುರು ಹಿರಣ್ಮಯ ರಮ್ಯಕವು ಸುರ ಗಿರಿಯನೊಳಕೊಂಡಿಪ್ಪಿಳಾವೃತ ಹರಿವರುಷ ಕಿಂಪುರುಷ ಭಾರತವುತ್ತರಾದಿಗಳು ಪಿರಿಯ ಶೃಂಗಶ್ವೇತ ನೀಲದ ಗಿರಿ ನಿಷಧವಾ ಹೇಮ ಕೂಟದ ಗಿರಿ ಹಿಮಾಲಯವಾಗಪರಜಲಧಿಯನು ಮುಟ್ಟಿಹವು

kuru hiraṇmaya ramyakavu sura giriyanoḷakoṃḍippiḷāvr̥ta harivaruṣa kiṃpuruṣa bhāratavuttarādigaḷu piriya śr̥ṃgaśvēta nīlada giri niṣadhavā hēma kūṭada giri himālayavāgaparajaladhiyanu muṭṭihavu

Report an error

ಸುರಗಿರಿಯ ಬಳಸಿಪ್ಪಿಳಾವೃತ ವರುಷದಿಂದವೆ ಮೂಡಲೊಪ್ಪುವ ಪಿರಿಯ ಗಿರಿ ಮಾಲ್ಯವತ ಜಲನಿಧಿ ತನಕ ಭದ್ರಾಶ್ವ ವರುಷ ಪಡುವಣ ಗಂಧಮಾದನ ಗಿರಿ ತೊಡಗಿಯಾ ಪಶ್ಚಿಮಾಶಾ ಶರಧಿ ಪರಿಯಂತಿಪ್ಪ ವರುಷವು ಕೇತುಮಾಲವದು

suragiriya baḷasippiḷāvr̥ta varuṣadiṃdave mūḍaloppuva piriya giri mālyavata jalanidhi tanaka bhadrāśva varuṣa paḍuvaṇa gaṃdhamādana giri toḍagiyā paścimāśā śaradhi pariyaṃtippa varuṣavu kētumālavadu

Report an error

ವರುಷ ಮಧ್ಯದ ಪರ್ವತಂಗಳ ಹರಹು ತಾನೆರಡೆರಡು ಸಾವಿರ ವರುಷ ನವನವ ನವಸಹಸ್ರವದಾರು ಮಧ್ಯದಲಿ ವರುಷವದು ಮೂವತ್ತನಾಲ್ಕರ ಪರಿಗಣಿತ ಮೂಡಣದು ಪಡುವಣ ದೆರಡು ತಾನದರಂತೆ ಮೆರೆವುದು ಹೊರಗೆ ಲವಣಾಬ್ಧಿ

varuṣa madhyada parvataṃgaḷa harahu tāneraḍeraḍu sāvira varuṣa navanava navasahasravadāru madhyadali varuṣavadu mūvattanālkara parigaṇita mūḍaṇadu paḍuvaṇa deraḍu tānadaraṃte merevudu horage lavaṇābdhi

Report an error

ದೇವ ಕೂಟದ ಜಠರವೆಂಬಿವು ಭಾವಿಸಲು ಮಾಲ್ಯವತದಿಕ್ಕೆಲ ನಾ ವಿಧದಿ ಕೈಲಾಸ ಪರ್ವತ ಗಂಧಮಾದನವು ಕೋವಿದನೆ ಕೇಳ್ ಭೂಮಿ ವಲಯದೊ ಳಾ ವಿಶಾಲದ ಪಾರಿಯಾತ್ರದ ದೇವಯೋಗ್ಯದ ಗಿರಿಗಳಿಕ್ಕೆಲ ನಿಷಧ ಪರ್ವತಕೆ

dēva kūṭada jaṭharaveṃbivu bhāvisalu mālyavatadikkela nā vidhadi kailāsa parvata gaṃdhamādanavu kōvidane kēḷ bhūmi valayado ḷā viśālada pāriyātrada dēvayōgyada girigaḷikkela niṣadha parvatake

Report an error

ನೀಲ ಗಿರಿಯಿಕ್ಕೆಲಕೆ ವಾರಿಧಿ ಮೇಲೆ ನಿಷ್ಪ್ರತಿ ಶೃಂಗವಿವು ಮೈ ನೀಳದಲಿ ಪೂರ್ವಾಪರದ ಜಲನಿಧಿಯ ಮುಟ್ಟಿಹವು ಹೇಳಿದೆಂಟುಪ ಪರ್ವತಾಗ್ರ ವಿ ಶಾಲ ತಾನೆಂಬತ್ತು ಯೋಜನ ಕೇಳಿಳಾವೃತ ಮೇಲೆಯಾಗಿಹ ಗಿರಿಯ ಲೆಕ್ಕವನು

nīla giriyikkelake vāridhi mēle niṣprati śr̥ṃgavivu mai nīḷadali pūrvāparada jalanidhiya muṭṭihavu hēḷideṃṭupa parvatāgra vi śāla tāneṃbattu yōjana kēḷiḷāvr̥ta mēleyāgiha giriya lekkavanu

Report an error

ವರುಷದೊಡೆಯನಿಳಾವೃತಕೆ ಸಂ ಕರುಷಣನು ಭದ್ರಾಶ್ವದೊಳು ಹಯ ಶಿರನು ಹರಿವರುಷಕ್ಕೆ ನರಹರಿ ಕೇತುಮಾಲದಲಿ ಸಿರಿಯರಸ ರಮ್ಯಕಕೆ ಮತ್ಸ್ಯನು ಪಿರಿಯ ಕಮಠ ಹಿರಣ್ಮಯಕೆ ಕುರು ವರುಷದಲ್ಲಿ ಮಹಾ ವರಾಹನು ಪಾರ್ಥ ಕೇಳೆಂದ

varuṣadoḍeyaniḷāvr̥take saṃ karuṣaṇanu bhadrāśvadoḷu haya śiranu harivaruṣakke narahari kētumāladali siriyarasa ramyakake matsyanu piriya kamaṭha hiraṇmayake kuru varuṣadalli mahā varāhanu pārtha kēḷeṃda

Report an error

ರಾಮ ಕಿಂಪುರುಷಕ್ಕೆ ಭಾರತ ಭೂಮಿ ನರ ನಾರಾಯಣನು ತಿಳಿ ನಾಮಧಾರಕ ಹನುಮ ವಸುಧಾದೇವಿ ನಾರದನು ಆ ಮನು ಜಗಚ್ಚಕ್ಷು ಲಕ್ಷ್ಮೀ ಪ್ರೇಮದಿಂ ಪ್ರಹ್ಲಾದ ನಿಜ ನಿ ಸ್ಸೀಮ ಭದ್ರಶ್ರವ ಸದಾಶಿವನಿವರು ಪಾಲಕರು

rāma kiṃpuruṣakke bhārata bhūmi nara nārāyaṇanu tiḷi nāmadhāraka hanuma vasudhādēvi nāradanu ā manu jagaccakṣu lakṣmī prēmadiṃ prahlāda nija ni ssīma bhadraśrava sadāśivanivaru pālakaru

Report an error

ವರುಷವನು ಗಿರಿಗಳನು ಬಳಸಿಹ ಪಿರಿಯ ಲವಣ ಸಮುದ್ರ ತದನಂ ತರದಿ ದೀಪಪ್ಲಕ್ಷಯಿಕ್ಷು ಸಮುದ್ರವಲ್ಲಿಂದ ಇರಲು ಶಾಲ್ಮಲವದರ ಹೊರಗಣ ಸುರೆಯ ಶರಧಿಯನೊಂದನೊಂದಾ ವರಿಸಿ ಪರಿಭಾವಿಸಲು ತದ್ದ್ವಿಗುಣಂಗಳಾಗಿಹವು

varuṣavanu girigaḷanu baḷasiha piriya lavaṇa samudra tadanaṃ taradi dīpaplakṣayikṣu samudravalliṃda iralu śālmalavadara horagaṇa sureya śaradhiyanoṃdanoṃdā varisi paribhāvisalu taddviguṇaṃgaḷāgihavu

Report an error

ತಿಳಿವೊಡಾ ಸುರೆಯಿಂದ ಕುಶಘೃತ ಜಲಧಿ ಕ್ರೌಂಚ ದ್ವೀಪವೆಂಬಿವ ರಳತೆಗಿಮ್ಮಡಿಯಾಗಿ ದಧಿಯ ಸಮುದ್ರವಲ್ಲಿಂದ ಇಳೆಯ ಮೇಲೆಸೆದಿಪ್ಪ ಶಾಕದ ಬಳಿಯ ದುಗ್ಧವಿದೊಂದನೊಂದನು ಬಳಸಿಕೊಂಡಿಹವಬುಜನಾಭನ ನಿಳಯವದ ನೋಡ

tiḷivoḍā sureyiṃda kuśaghr̥ta jaladhi krauṃca dvīpaveṃbiva raḷategimmaḍiyāgi dadhiya samudravalliṃda iḷeya mēlesedippa śākada baḷiya dugdhavidoṃdanoṃdanu baḷasikoṃḍihavabujanābhana niḷayavada nōḍa

Report an error

ಚೆಲುವಿಕೆಗೆ ನೆಲೆಯೆನಿಸಿ ಮೆರೆವುದು ಪ್ರಳಯವೆಂದೂಯಿಲ್ಲ ಲಕ್ಷ್ಮೀ ನಿಳಯನಿಹನನವರತ ಸುಳಿಯವು ಮೃತ್ಯು ಮಾಯೆಗಳು ಬಳಕೆ ಸಲ್ಲದು ಕಲಿಯ ಕಾಲದ ಹೊಲಬು ಹೊದ್ದದು ಹರಿಯ ರೂಪನು ತಳೆದ ಪುರವನು ಕ್ಷೀರವಾರಿಧಿ ಬಳಸಿಕೊಂಡಿಹುದು

celuvikege neleyenisi merevudu praḷayaveṃdūyilla lakṣmī niḷayanihananavarata suḷiyavu mr̥tyu māyegaḷu baḷake salladu kaliya kālada holabu hoddadu hariya rūpanu taḷeda puravanu kṣīravāridhi baḷasikoṃḍihudu

Report an error

ಯೋಗಿಗಳ ನೆಲೆವೀಡು ಬೊಮ್ಮದ ಸಾಗರವು ಸನಕಾದಿ ಮುನಿಗಳ ಭೋಗಭೂಮಿಯನಂತವೆನಿಸಿರ್ದುಪನಿಪತ್ತುಗಳ ಆಗರವು ಮೂಲೋಕ ದರ್ಪಣ ವಾಗಿ ದುಗ್ಧೋದಧಿಯೊಳೆಸೆವುದು ಶ್ರೀಗಧೀಶನ ನಗರ ನೋಡೆಲೆ ಪಾರ್ಥ ನೀನೆಂದ

yōgigaḷa nelevīḍu bommada sāgaravu sanakādi munigaḷa bhōgabhūmiyanaṃtavenisirdupanipattugaḷa āgaravu mūlōka darpaṇa vāgi dugdhōdadhiyoḷesevudu śrīgadhīśana nagara nōḍele pārtha nīneṃda

Report an error

ನಳಿನನಾಭನ ದುಗ್ಧ ಶರಧಿಯ ಬಳಸಿಕೊಂಡಿಹ ಪುಷ್ಕರದ ಹೊರ ವಳಯದಲಿ ಮೆರೆದಿಪ್ಪುದಾ ಸ್ವಾದೋದ ವಾರಾಶಿ ಇಳೆಗೆ ಕೋಟೆಯನಿಕ್ಕಿದಂತಿರೆ ಬೆಳೆದ ಲೋಕಾಲೋಕ ಪರ್ವತ ತಿಳಿವಡಲ್ಲಿಂದತ್ತ ತಿಮಿರವಜಾಂಡ ಪರಿಯಂತ

naḷinanābhana dugdha śaradhiya baḷasikoṃḍiha puṣkarada hora vaḷayadali meredippudā svādōda vārāśi iḷege kōṭeyanikkidaṃtire beḷeda lōkālōka parvata tiḷivaḍalliṃdatta timiravajāṃḍa pariyaṃta

Report an error

ಲಕ್ಕ ಜಂಬೂದ್ವೀಪವಾ ಪರಿ ಲಕ್ಕ ಲವಣ ಸಮುದ್ರ ನಾಲುಕು ಲಕ್ಕ ದ್ವೀಪ ಪ್ಲಕ್ಷವಿಕ್ಷು ಸಮುದ್ರವೊಂದಾಗಿ ಲಕ್ಕವೆಂಟು ಸುಶಾಲ್ಮಲಿಯು ಸುರೆ ಲಕ್ಕ ಷೋಡಶಕುಶ ಘೃತಂಗಳು ಲಕ್ಕ ಮೂವತ್ತೆರಡು ಕ್ರೌಂಚದ್ವೀಪ ದಧಿಗೂಡಿ

lakka jaṃbūdvīpavā pari lakka lavaṇa samudra nāluku lakka dvīpa plakṣavikṣu samudravoṃdāgi lakkaveṃṭu suśālmaliyu sure lakka ṣōḍaśakuśa ghr̥taṃgaḷu lakka mūvatteraḍu krauṃcadvīpa dadhigūḍi

Report an error

ಲಕ್ಕ ತಾನರವತ್ತು ನಾಲ್ಕು ಗಿಕ್ಕು ಶಾಕ ಕ್ಷೀರ ಕೋಟಿಯ ಲಕ್ಕವಿಪ್ಪತ್ತೆಂಟು ಪುಷ್ಕರ ಸುಜಲವೊಂದಾಗಿ ಮಿಕ್ಕ ಕೋಟಿ ದ್ವಯದ ಮೇಲಣ ಲಕ್ಕ ವೈವತ್ತಾರು ಯೋಜನ ವಕ್ಕು ಹೇಮದ ಭೂಮಿ ಲೋಕಾಲೋಕ ಗಿರಿಸಹಿತ

lakka tānaravattu nālku gikku śāka kṣīra kōṭiya lakkavippatteṃṭu puṣkara sujalavoṃdāgi mikka kōṭi dvayada mēlaṇa lakka vaivattāru yōjana vakku hēmada bhūmi lōkālōka girisahita

Report an error

ಹತ್ತು ಲಕ್ಕವು ಹೀನವಾಗಿ ಪ್ಪತ್ತು ಕೋಟಿ ತಮಂಧದುರ್ವರೆ ಸುತ್ತುವರೆ ಬೆಳೆದಿಹುದು ಗರ‍್ಭೋದಕದ ಪರಿಯಂತ ಇತ್ತ ಸುರಗಿರಿಯಿಂದ ಹಿಂದಿ ಪ್ಪತ್ತು ಕೋಟಿಯ ಕೂಡಿ ನೋಡೆ ಧ ರಿತ್ರಿ ತಾನೈವತ್ತು ಕೋಟಿಯ ಲೆಕ್ಕ ನೋಡೆಂದ

hattu lakkavu hīnavāgi ppattu kōṭi tamaṃdhadurvare suttuvare beḷedihudu garbhōdakada pariyaṃta itta suragiriyiṃda hiṃdi ppattu kōṭiya kūḍi nōḍe dha ritri tānaivattu kōṭiya lekka nōḍeṃda

Report an error

ವರುಷವೊಂಬತ್ತಾಗಿಹುದುಯ ವಿ ಸ್ತರದ ಜಂಬೂದ್ವೀಪವೊಂದೇ ವರುಷವೇಳಾಗಿಹವು ತಾ ಶತಸಂಖ್ಯೆಯಾ ದ್ವೀಪ ನಿರುತ ಕಡೆಯದ್ವೀಪವೆಂಬುದು ವರುಷವೆರಡಾಗಿರಲು ಮಾನಸ ಗಿರಿಯದರ ಮೇಲಿಹುದು ಚಕ್ರದ ಕಂಬಿಯಂದದಲಿ

varuṣavoṃbattāgihuduya vi starada jaṃbūdvīpavoṃdē varuṣavēḷāgihavu tā śatasaṃkhyeyā dvīpa niruta kaḍeyadvīpaveṃbudu varuṣaveraḍāgiralu mānasa giriyadara mēlihudu cakrada kaṃbiyaṃdadali

Report an error

ವರುಷವೆರಡಾಗೊಪ್ಪುತಿಹ ಪು ಷ್ಕರದ ನಡುವಣ ಮಾನಸೋತ್ತರ ಗಿರಿಯುದಯವೈವತ್ತು ಸಾವಿರ ಹರಹು ತದ್ದ್ವಗುಣ ಪಿರಿದು ಪುಣ್ಯಶ್ಲೊಖ ಕೇಳಾ ಗಿರಿಯ ಶಿಖರದ ಮೇಲೆ ದಿಗ್ದೇ ವರ ಪುರಂಗಳು ಸಿರಿಗೆ ನೆಲೆವನೆಯೆನಿಸಿ ಮೆರೆದಿಹವು

varuṣaveraḍāgopputiha pu ṣkarada naḍuvaṇa mānasōttara giriyudayavaivattu sāvira harahu taddvaguṇa piridu puṇyaślokha kēḷā giriya śikharada mēle digdē vara puraṃgaḷu sirige nelevaneyenisi meredihavu

Report an error

ಸುರಪನದುವೇ ಸ್ವರ್ಗ ಸಾರವು ನಿರುತದಲಿ ಸಂಯಮನಿಯೆಂಬಾ ಪುರವು ಕಾಲನ ನಗರಿ ತೆಂಕಲು ಪಶ್ಚಿಮಾದ್ರಿಯಲಿ ವರುಣನದು ಶುದ್ಧಿಮತಿ ಯಕ್ಷೇ ಶ್ವರಗೆ ಸೇವಾಕಾಂತಿ ಮತಿ ಶಿಖಿ ನಿರುತಿ ಮರುದೀಶಾನ್ಯರಿಗೆಯವರವರ ನಾಮದಲಿ

surapanaduvē svarga sāravu nirutadali saṃyamaniyeṃbā puravu kālana nagari teṃkalu paścimādriyali varuṇanadu śuddhimati yakṣē śvarage sēvākāṃti mati śikhi niruti marudīśānyarigeyavaravara nāmadali

Report an error

ಉರಗ ನಾಳಾಂಬುಜ ಕುಸುಮವೀ ಧರಣಿ ಕರ್ಣಿಕೆ ಮೇರುಗಿರಿ ಕೇ ಸರ ನಗಂಗಳು ಬಳಸಿ ಕೇಸರದಂತೆ ಸೊಗಯಿಪವು ಸರಸಿರುಹ ಸಂಭವನು ಮಧ್ಯದೊ ಳಿರಲು ಭೂತಲವೈದೆ ಮೆರೆವುದು ಸಿರಿ ಮಹಾವಿಷ್ಣುವಿನ ನಾಭೀಕಮಲದಂದದಲಿ

uraga nāḷāṃbuja kusumavī dharaṇi karṇike mērugiri kē sara nagaṃgaḷu baḷasi kēsaradaṃte sogayipavu sarasiruha saṃbhavanu madhyado ḷiralu bhūtalavaide merevudu siri mahāviṣṇuvina nābhīkamaladaṃdadali

Report an error

ಧರೆಯ ವರುಷ ದ್ವೀಪ ಗಿರಿಗಳ ಶರಧಿಗಳ ಸುರ ಶೈದಗ್ರದ ಹರನ ಚತುರಾನನನ ಪಟ್ಟಣದಿರವ ತಿಳುಹಿದೆನು ಸರಸಿರುಹ ಬಂಧುವಿನ ರಥವಿಹ ಪರಿಯ ಚರಿಸುವ ಪಥವ ತಾರೆಗ ಳಿರವ ನೀ ಕೇಳೆಂದು ಮಾತಲಿ ನುಡಿದನರ್ಜುನಗೆ

dhareya varuṣa dvīpa girigaḷa śaradhigaḷa sura śaidagrada harana caturānanana paṭṭaṇadirava tiḷuhidenu sarasiruha baṃdhuvina rathaviha pariya carisuva pathava tārega ḷirava nī kēḷeṃdu mātali nuḍidanarjunage

Report an error

ಗಾಲಿ ಮಾನಸ ಗಿರಿಯ ಶಿಖರದ ಮೇಲೆ ತಿರುಗುವುದೊಂದು ಕಡೆ ಸುರ ಶೈಲದಲಿ ಬಿಗಿದಚ್ಚು ಕೋಟಿಯ ಮೇಲೆಯೈವತ್ತು ಏಳು ಲಕ್ಕದ ನೀಳ ರಥದ ವಿ ಶಾಲವದು ಮುವ್ವತ್ತು ಸಾವಿರ ಮೇಲೆ ಧ್ರುವ ಮಂಡಲಕೆ ಬಿಗಿದಿಹುದನಿಲ ಪಾಶದಲಿ

gāli mānasa giriya śikharada mēle tiruguvudoṃdu kaḍe sura śailadali bigidaccu kōṭiya mēleyaivattu ēḷu lakkada nīḷa rathada vi śālavadu muvvattu sāvira mēle dhruva maṃḍalake bigidihudanila pāśadali

Report an error

ಹರಿಯ ಗಾಲಿಯ ನಾಭಿ ಮೂರ ಚ್ಚರಿಯ ಚಾತುರ್ಮಾಸಗಳು ಘನ ತರದ ಷಡುಋತು ಬಳೆ ಷಡಂಗವೆ ನೇಮಿ ಚತುರಯುಗ ತರವಿಡಿದ ಸಂವತ್ಸರವಿದಾ ವ ತ್ಸರವು ವಿದ್ವತ್ಸರವು ವತ್ಸರವೆನಿಪ ಮೊಳೆಯಾಯ್ತು

hariya gāliya nābhi mūra ccariya cāturmāsagaḷu ghana tarada ṣaḍur̥tu baḷe ṣaḍaṃgave nēmi caturayuga taraviḍida saṃvatsaravidā va tsaravu vidvatsaravu vatsaravenipa moḷeyāytu

Report an error

ಉರಗ ನಾಳದ ಹೊರಜೆ ನವ ಸಾ ವಿರದ ಕುರಿಗುಣಿಯೀಸುಗಳು ತಾ ವೆರಡು ಮಡಿ ತೊಂಬತ್ತುವೊಂದು ಸಹಸ್ರದರ್ಧವದು ಪರಿಯ ನೊಗನದರನಿತು ಸಂಖ್ಯೆಗೆ ಸರಿಯೆನಿಪ ಮೇಲಚ್ಚು ಮಂಗಳ ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ

uraga nāḷada horaje nava sā virada kuriguṇiyīsugaḷu tā veraḍu maḍi toṃbattuvoṃdu sahasradardhavadu pariya noganadaranitu saṃkhyege sariyenipa mēlaccu maṃgaḷa taravenipa navaratna racaneya citrarathaveṃda

Report an error

ಕರಸಹಸ್ರನ ರಥಕೆ ಹೂಡಿದ ತುರಗ ಛಂದೋಮಯವು ಸಾರಥಿ ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು ವರ ವರೂಥದ ಮಧ್ಯದಲಿ ವಿ ಸ್ತರದ ಮಣಿಪೀಠದಲಿ ಮಿಗೆ ದಿನ ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು

karasahasrana rathake hūḍida turaga chaṃdōmayavu sārathi yaruṇa kālave gāli navakōṭiyanu cariyisugu vara varūthada madhyadali vi starada maṇipīṭhadali mige dina karanu grahabhavanakke saleyādhāravāgihanu

Report an error

ಹರಿ ತರಣಿಗಿಂದುವಿಗೆ ಕರ್ಕಟ ಧರಣಿಜಂಗಜ ವೃಶ್ಚಿಕವು ಹಿಮ ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ ಪಿರಿಯ ಝಷತುಲೆ ವೃಷಭದಾನವ ಗುರುವಿನವು ಮೃಗಕುಂಭ ಮಂದಂ ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹರು

hari taraṇigiṃduvige karkaṭa dharaṇijaṃgaja vr̥ścikavu hima karana tanayage mithuna kanye br̥haspatige cāpa piriya jhaṣatule vr̥ṣabhadānava guruvinavu mr̥gakuṃbha maṃdaṃ giravu nijagr̥ha rāhukētugaḷavara kūḍiharu

Report an error

ಲಕ್ಕ ಉರ್ವಿಗೆ ರವಿಯ ಪಥ ಶಶಿ ಲಕ್ಕವೆರಡು ತ್ರಿಲಕ್ಕ ಯೋಜನ ಲೆಕ್ಕಿಸಲು ನಕ್ಷತ್ರ ಬುಧನಿಹನೈದು ಲಕ್ಕದಲಿ ಲಕ್ಕವೇಳಾ ಶುಕ್ರ ಕುಜ ನವ ಲಕ್ಕ ಗುರು ಹನ್ನೊಂದು ಲಕ್ಕವು ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ

lakka urvige raviya patha śaśi lakkaveraḍu trilakka yōjana lekkisalu nakṣatra budhanihanaidu lakkadali lakkavēḷā śukra kuja nava lakka guru hannoṃdu lakkavu mikka vasudhātaḷake śani hadimūruvare lakka

Report an error

ವಿದಿತವಿಂತಿದು ಸಪ್ತಋಷಿಗಳ ಸದನವದು ಹದಿನಾಲ್ಕು ಲಕ್ಕವು ಮುದದಿ ನೆಲಸಿಹ ಧ್ರುವನು ತಾ ಹದಿನೈದು ಲಕ್ಷದಲಿ ಅದರ ಮೇಲಿಹ ವಿಷ್ಣುಪದದಲಿ ಸದಮಳಾತ್ಮಕ ಶಿಂಶುಮಾರನು ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು

viditaviṃtidu saptar̥ṣigaḷa sadanavadu hadinālku lakkavu mudadi nelasiha dhruvanu tā hadinaidu lakṣadali adara mēliha viṣṇupadadali sadamaḷātmaka śiṃśumāranu paduḷadali sakalakke saleyādhāravāgihanu

Report an error

ವರ ಕುಮಾರಕ ನೀನು ಕೇಳೈ ಪಿರಿಯ ಲೋಕಾಲೋಕವೆಂಬಾ ಗಿರಿಯ ಬಳಸಿದ ಕಾಳಗತ್ತಲೆಯೊಳಗೆ ಮೆರೆದಿಪ್ಪ ಧರೆಯೊಳರುಣ ದ್ವೀಪವದರೊಳು ನೆರೆದ ಮಂದೇಹರುಗಳೆಂದ ಚ್ಚರಿಯದಲಿ ಸರಸಿರುಹದಾಸನನಿಂದ ಜನಿಸಿದರು

vara kumāraka nīnu kēḷai piriya lōkālōkaveṃbā giriya baḷasida kāḷagattaleyoḷage meredippa dhareyoḷaruṇa dvīpavadaroḷu nereda maṃdēharugaḷeṃda ccariyadali sarasiruhadāsananiṃda janisidaru

Report an error

ಹರಿಹರ ವಿರಿಂಚಿಗಳು ಮೊದಲಾ ದುರುವ ದೇವರುಗಳೊಳು ಮತ್ತಾ ತರವಿಡಿದ ಹದಿನಾಲ್ಕು ಜಗದೊಳಗುಳ್ಳ ದೇವರಲಿ ತರಣಿಯತಿ ಬಲವಂತನೆಂಬುದ ನರಿದು ಮಂದೇಹಾಸುರರು ಸಾ ಸಿರ ಕರದ ದಿನನಾಥನೊಳು ಕಾಳಗವ ಬಯಸಿಹರು

harihara viriṃcigaḷu modalā duruva dēvarugaḷoḷu mattā taraviḍida hadinālku jagadoḷaguḷḷa dēvarali taraṇiyati balavaṃtaneṃbuda naridu maṃdēhāsuraru sā sira karada dinanāthanoḷu kāḷagava bayasiharu

Report an error

ಪರಿಕಿಸಲು ಪರಮಾತ್ಮ ದಿನಕರ ಹರಿಹರ ವಿರಿಂಚಿಗಳು ಸೂರ್ಯನ ನೆರೆದು ಸುತಿ ಕೈವಾರಿಸುತ್ತಿರೆ ಘನಮಹಾಮಹಿಮ ಕಿರಣದುರಿಯ ಮಹಾ ಪ್ರತಾಪನು ತರಣಿಯೆಂದಾತನೊಳು ಕಾದಲು ಸರಸಿರುಹಸಂಭವನ ಮೆಚ್ಚಿಸಿ ವರವ ಪಡೆದಿಹರು

parikisalu paramātma dinakara harihara viriṃcigaḷu sūryana neredu suti kaivārisuttire ghanamahāmahima kiraṇaduriya mahā pratāpanu taraṇiyeṃdātanoḷu kādalu sarasiruhasaṃbhavana meccisi varava paḍediharu

Report an error

ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ ಸಲೆ ಕೃತಾಂತಗೆ ಲೀಲೆ ಸೃಷ್ಟಿಗೆ ಲಯವು ಸಚರಾಚರಗಳೆಂಬಿವನು ಕಾಲ ಚಕ್ರದ ಖಚರ ಗತಿಯಲಿ ಕಾಳಗತ್ತಲೆಯನು ನಿವಾರಿಸಿ ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ

kālaveṃbudu raviya gāliya kālagatiyai sale kr̥tāṃtage līle sr̥ṣṭige layavu sacarācaragaḷeṃbivanu kāla cakrada khacara gatiyali kāḷagattaleyanu nivārisi pālisuva lōkaṃgaḷinituva pārtha nōḍeṃda

Report an error

ಅನಿಪತಿ ಕೇಳಿಂದ್ರ ಸಾರಥಿ ವಿವರಿಸಿದನರ್ಜುನಗೆ ಭೂಮಿಯ ಭುವನ ಕೋಶದ ಸನ್ನಿವೇಶವನದ್ರಿ ಜಲಧಿಗಳ ಇವು ಕುಲಾದ್ರಿಗಳಿವು ಪಯೋಧಿಗ ಳಿವು ಮಹಾ ದ್ವೀಪಂಗಳಿವು ಮಾ ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ

anipati kēḷiṃdra sārathi vivarisidanarjunage bhūmiya bhuvana kōśada sannivēśavanadri jaladhigaḷa ivu kulādrigaḷivu payōdhiga ḷivu mahā dvīpaṃgaḷivu mā navara dharaṇī svarga mēlinnitta nōḍeṃda

Report an error

ಈ ವಿಮಾನದ ಸಾಲ ಸಂದಣಿ ತೀವಿಕೊಂಡಿದೆ ಗಗನ ತಳದಲಿ ದೇವಕನ್ಯಾ ಶತಸಹಸ್ರದ ಖೇಳಮೇಳದಲಿ ಭೂವಳಯದಲಿ ಸುಕೃತಿಗಳು ನಾ ನಾ ವಿಧದ ಜಪ ಯಜ್ಞ ದಾನ ತ ಪೋ ವಿಧಾನದಲೊದಗಿದವರನು ಪಾರ್ಥ ನೋಡೆಂದ

ī vimānada sāla saṃdaṇi tīvikoṃḍide gagana taḷadali dēvakanyā śatasahasrada khēḷamēḷadali bhūvaḷayadali sukr̥tigaḷu nā nā vidhada japa yajña dāna ta pō vidhānadalodagidavaranu pārtha nōḍeṃda

Report an error

ಭೂತ ದಯೆಯಲಿ ನಡೆವನೀ ತೋ ರ್ಪಾತ ನಿರ್ಮಳ ಸತ್ಯಭಾಷಿತ ನೀತ ತೀರ್ಥವಿಹಾರಿ ಸಜ್ಜನನೀತ ಗುಣಿಯೀತ ಈತ ನಿರ್ಮತ್ಸರನಸೂಯಾ ತೀತನಿವನತಿ ವಿಪ್ರ ಪೂಜಕ ನೀತ ಮಾತಾಪಿತರ ಭಕ್ತನು ಪಾರ್ಥ ನೋಡೆಂದ

bhūta dayeyali naḍevanī tō rpāta nirmaḷa satyabhāṣita nīta tīrthavihāri sajjananīta guṇiyīta īta nirmatsaranasūyā tītanivanati vipra pūjaka nīta mātāpitara bhaktanu pārtha nōḍeṃda

Report an error

ಈತನಿಂದ್ರಿಯ ವಿಜಯಿ ಸತ್ಕೃತ ನೀತನಿವ ವೇದಾಧ್ಯಯನ ಪರ ನೀತ ಪರಹಿತನಿವ ಯಥಾಲಾಭೈಕ ಸಂತೋಷಿ ಈತ ಶುಚಿ ರುಜುವೀತ ನಿಸ್ಪೃಹ ನೀತ ನಿರ್ಭಯನೀತ ನಿರ್ಮಳ ನೀತ ರಾಗದ್ವೇಷರಹಿತನು ಪಾರ್ಥ ನೋಡೆಂದ

ītaniṃdriya vijayi satkr̥ta nītaniva vēdādhyayana para nīta parahitaniva yathālābhaika saṃtōṣi īta śuci rujuvīta nispr̥ha nīta nirbhayanīta nirmaḷa nīta rāgadvēṣarahitanu pārtha nōḍeṃda

Report an error

ಇತ್ತ ನೋಡೈ ಸ್ವಾಮಿ ಕಾರ್ಯಕೆ ತೆತ್ತನೊಡಲನು ವರ ರಣಾಗ್ರದೊ ಳಿತ್ತಲೈದನೆ ಭೂಮಿ ಕನ್ಯಾ ಗೋಧನಾವಳಿಯ ಇತ್ತವನು ಸತ್ಪುತ್ರನನು ತಾ ಹೆತ್ತವನು ಗೋ ವಿಪ್ರ ಬಾಧೆಗೆ ಸತ್ತವನನೆಲೆ ಪಾರ್ಥ ನೋಡುತ್ತಮ ವಿಮಾನದಲಿ

itta nōḍai svāmi kāryake tettanoḍalanu vara raṇāgrado ḷittalaidane bhūmi kanyā gōdhanāvaḷiya ittavanu satputrananu tā hettavanu gō vipra bādhege sattavananele pārtha nōḍuttama vimānadali

Report an error

ಮೇಲೆ ಮೇಲೈದರೆ ಸುತಾರಾ ಮಾಲೆಗಳವೊಲು ರಾಜಸೂಯದ ಮೇಲು ಯಜ್ಞದ ವಾಜಿಮೇಧದ ಭೂರಿ ಸುಕೃತಿಗಳು ಕಾಳಗದೊಳರಿ ಸುಭಟ ಸಿತಕರ ವಾಲ ಧಾರಾತೀರ್ಥಸೇವಿ ನೃ ಪಾಲರೈದರೆ ದೀಪ್ಯಮಾನ ವಿಮಾನ ಮಧ್ಯದಲಿ

mēle mēlaidare sutārā mālegaḷavolu rājasūyada mēlu yajñada vājimēdhada bhūri sukr̥tigaḷu kāḷagadoḷari subhaṭa sitakara vāla dhārātīrthasēvi nr̥ pālaraidare dīpyamāna vimāna madhyadali

Report an error

ಈತ ಭರತನು ದೂರದಲಿ ತೋ ರ್ಪಾತನು ಹರಿಶ್ಚಂದ್ರ ನಳ ನೃಗ ರೀತಗಳು ಪುರು ಕುತ್ಸನೀತ ಮರುತ್ತ ನೃಪನೀತ ಈತ ಹೈಹಯ ದುಂದುಮಾರಕ ನೀತ ನಹುಷ ದಿಳೀಪ ದಶರಥ ನೀತ ರಘು ತಾನೀತ ಶಂತನು ಪಾರ್ಥ ನೋಡೆಂದ

īta bharatanu dūradali tō rpātanu hariścaṃdra naḷa nr̥ga rītagaḷu puru kutsanīta marutta nr̥panīta īta haihaya duṃdumāraka nīta nahuṣa diḷīpa daśaratha nīta raghu tānīta śaṃtanu pārtha nōḍeṃda

Report an error

ಇದೆಯಸಂಖ್ಯಾತ ಕ್ಷಿತೀಶ್ವರ ರುದಿತ ಕೃತಪುಣ್ಯೋಪಚಯ ಭೋ ಗದಲಿ ಭಾರತ ವರುಷ ನಿಮ್ಮದು ಪುಣ್ಯ ಭೂಮಿ ಕಣ ಇದರೊಳಗೆ ಜಪ ಯಜ್ಞದಾನಾ ಭ್ಯುದಯ ವೈದಿಕ ಕರ್ಮನಿಷ್ಠರ ಪದವಿಗಳ ಪರುಠವಣೆಯನು ಕಲಿಪಾರ್ಥ ನೋಡೆಂದ

ideyasaṃkhyāta kṣitīśvara rudita kr̥tapuṇyōpacaya bhō gadali bhārata varuṣa nimmadu puṇya bhūmi kaṇa idaroḷage japa yajñadānā bhyudaya vaidika karmaniṣṭhara padavigaḷa paruṭhavaṇeyanu kalipārtha nōḍeṃda

Report an error

ಹೊಳವುತಿದೆ ದೂರದಲಿ ರಜತಾ ಚಲವ ಕಂಡಂದದಲಿ ಕೆಲದಲಿ ಬಲವಿರೋಧಿಯ ಪಟ್ಟದಾನೆ ಸುರೇಂದ್ರ ನಂದನನೆ ನಿಳಯವದೆನೆ ಸುದೂರದಲಿ ತಳ ತಳಿಸುವಮಲ ಮುನಿಪ್ರಭಾ ಪರಿ ವಳಯ ರಶ್ಮಿ ನಿಬದ್ಧವಮರಾವತಿಯ ನೋಡೆಂದ

hoḷavutide dūradali rajatā calava kaṃḍaṃdadali keladali balavirōdhiya paṭṭadāne surēṃdra naṃdanane niḷayavadene sudūradali taḷa taḷisuvamala muniprabhā pari vaḷaya raśmi nibaddhavamarāvatiya nōḍeṃda

Report an error

ಹೊಕ್ಕನಮರಾವತಿಯನರ್ಜುನ ನೆಕ್ಕ ಸರದಲುಪಾರ್ಜಿಸಿದ ಪು ಣ್ಯಕ್ಕೆ ಸರಿಯೇ ನಳ ನಹುಷ ಭರತಾದಿ ಭೂಮಿಪರು ಉಕ್ಕಿದವು ಪರಿಮಳದ ತೇಜದ ತೆಕ್ಕೆಗಳು ಲಾವಣ್ಯ ಲಹರಿಯ ಸೊಕ್ಕುಗಳ ಸುರ ಸೂಳೆಗೇರಿಗಳೊಳಗೆ ನಡೆ ತಂದ

hokkanamarāvatiyanarjuna nekka saradalupārjisida pu ṇyakke sariyē naḷa nahuṣa bharatādi bhūmiparu ukkidavu parimaḷada tējada tekkegaḷu lāvaṇya lahariya sokkugaḷa sura sūḷegērigaḷoḷage naḍe taṃda

Report an error

ಇಳಿದು ರಥವನು ದಿವಿಜರಾಯನ ನಿಳಯವನು ಹೊಕ್ಕನು ಕಿರೀಟಿಯ ನಳವಿಯಲಿ ಕಂಡಿದಿರು ಬಂದನು ನಗುತ ಶತಮನ್ಯು ಸೆಳೆದು ಬಿಗಿಯಪ್ಪಿದನು ಕರದಲಿ ತುಳುಕಿ ಕರವನು ತಂದು ತನ್ನಯ ಕೆಲದೊಳಗೆ ಕುಳ್ಳಿರಿಸಿದನು ಸಿಂಹಾಸನಾರ್ಧದಲಿ

iḷidu rathavanu divijarāyana niḷayavanu hokkanu kirīṭiya naḷaviyali kaṃḍidiru baṃdanu naguta śatamanyu seḷedu bigiyappidanu karadali tuḷuki karavanu taṃdu tannaya keladoḷage kuḷḷirisidanu siṃhāsanārdhadali

Report an error

ನೂರು ಪಶುಗೆಡಹಿಗೆ ಸುರೇಂದ್ರನು ಮಾರುವನು ಗದ್ದುಗೆಯ ಬರಿದೇ ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ ಮೂರು ಯುಗದರಸುಗಳೊಳೀತಗೆ ತೋರಲೆಣೆಯಿಲ್ಲೆನಲು ಶಕ್ರನ ನೂರು ಮಡಿ ತೇಜದಲಿ ತೊಳ ತೊಳಗಿದನು ಕಲಿಪಾರ್ಥ

nūru paśugeḍahige surēṃdranu māruvanu gaddugeya baridē sūregoṃḍanu surapatiya siṃhāsanada siriya mūru yugadarasugaḷoḷītage tōraleṇeyillenalu śakrana nūru maḍi tējadali toḷa toḷagidanu kalipārtha

Report an error

ನುಸಿಗಳಿವದಿರು ಮರ್ತ್ಯರೆಂಬವ ರೊಸಗೆಯಮರಾವತಿಯೊಳೇನಿದು ಹೊಸತಲಾ ಬಂದಾತನಾರೋ ಪೂತುರೇ ಯೆನುತ ವಸುಗಳಾದಿತ್ಯರು ಭುಜಂಗಮ ವಿಸರ ಗಂಧರ್ವಾದಿ ದೇವ ಪ್ರಸರ ಬಂದುದು ಕಾಣಿಕೆಗೆ ಪುರುಹೂತ ನಂದನನ

nusigaḷivadiru martyareṃbava rosageyamarāvatiyoḷēnidu hosatalā baṃdātanārō pūturē yenuta vasugaḷādityaru bhujaṃgama visara gaṃdharvādi dēva prasara baṃdudu kāṇikege puruhūta naṃdanana

Report an error

ಅಂದಿನುತ್ಸವದಮರ ನಿಕರದ ಸಂದಣಿಯನೇನೆಂಬೆನಿಂದ್ರನ ಮಂದಿರದೊಳೊತ್ತೊತ್ತೆಯಾದುದು ಜನದ ದೊಂಬಿಯಲಿ ಮಂದಿ ತೊಲಗಲಿ ತೆರಹುಗೊಡು ಹೊಯ್ ಮುಂದಣವರನು ಗಜಬಜವ ಮಾ ಣೆಂದು ಗರ್ಜಿಸಿತಿಂದ್ರನಾಸ್ಥಾನದಲಿ ಸುರನಿಕರ

aṃdinutsavadamara nikarada saṃdaṇiyanēneṃbeniṃdrana maṃdiradoḷottotteyādudu janada doṃbiyali maṃdi tolagali terahugoḍu hoy muṃdaṇavaranu gajabajava mā ṇeṃdu garjisitiṃdranāsthānadali suranikara

Report an error

ನೂಕು ಬಾಗಿಲ ಚಾಚು ಬಣಗು ದಿ ವೌಕಸರ ನಿಲಿಸಲ್ಪಪುಣ್ಯರ ನೇಕೆ ಹೊಗಿಸಿದೆ ಬಹಳ ದಾನ ತಪೋವಿವರ್ಜಿತರ ಓಕುಳಿಯ ನೆವದಿಂದ ತೆಕ್ಕೆಯ ಬಾಕುಳಿಗಳುರವಣಿಸಿತೇ ತಮ ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ

nūku bāgila cācu baṇagu di vaukasara nilisalpapuṇyara nēke hogiside bahaḷa dāna tapōvivarjitara ōkuḷiya nevadiṃda tekkeya bākuḷigaḷuravaṇisitē tama gēke raṃbhādigaḷa sōṃkeṃdudu surastōma

Report an error

ತೊಲಗಿಸೋ ಮಂದಿಯನು ತೆಗೆ ಬಾ ಗಿಲನೆನಲು ಕವಿದುದು ಸುರೇಂದ್ರನ ಲಲನೆಯರು ಲಾವಣ್ಯ ಲಹರಿಯ ಲಲಿತ ವಿಭ್ರಮದ ಸುಳಿಗುರುಳ ನಿಟ್ಟೆಸಳುಗಂಗಳ ಹೊಳೆವ ಕದಪಿನ ನುಣ್ಗೊರಳ ಬಲು ಮೊಲೆಯ ಮೋಹರ ನೂಕಿತಮರೀ ವಾರನಾರಿಯರ

tolagisō maṃdiyanu tege bā gilanenalu kavidudu surēṃdrana lalaneyaru lāvaṇya lahariya lalita vibhramada suḷiguruḷa niṭṭesaḷugaṃgaḷa hoḷeva kadapina nuṇgoraḷa balu moleya mōhara nūkitamarī vāranāriyara

Report an error

ಉಗಿದರೋ ಕತ್ತುರಿಯ ತವಲಾ ಯಿಗಳ ಮುಚ್ಚಳವೆನೆ ಕವಾಟವ ತೆಗೆಯೆ ಕವಿದರು ದಿವ್ಯಪರಿಮಳಸಾರ ಪೂರವಿಸೆ ಹೊಗರಲಗು ಹೊಳಹುಗಳ ಕಡೆಗ ಣ್ಣುಗಳ ಬಲುಗರುವಾಯಿ ಮುಸುಕಿನ ಬಿಗುಹುಗಳ ಬಿರಿದಂಕಕಾತಿಯರಿಂದ್ರನೋಲಗದ

ugidarō katturiya tavalā yigaḷa muccaḷavene kavāṭava tegeye kavidaru divyaparimaḷasāra pūravise hogaralagu hoḷahugaḷa kaḍega ṇṇugaḷa balugaruvāyi musukina biguhugaḷa biridaṃkakātiyariṃdranōlagada

Report an error

ನೇವುರದ ನುಣ್ದನಿಯ ಕಾಂಚಿಯ ಕೇವಣದ ಕಿಂಕಿಣಿಯ ರಭಸದ ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ ಭಾವದುಬ್ಬಿನ ಚೆಲ್ಲಗಂಗಳ ಡಾವರದ ಡೊಳ್ಳಾಸಕಾತಿಯ ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ

nēvurada nuṇdaniya kāṃciya kēvaṇada kiṃkiṇiya rabhasada nēvaṇagaḷuluhugaḷa mauḷiya murida musukugaḷa bhāvadubbina cellagaṃgaḷa ḍāvarada ḍoḷḷāsakātiya rā vibudhapatiyōlagava hokkaru navāyiyali

Report an error

ವರ ತಿಲೋತ್ತಮೆ ರಂಭೆ ಮಧುರ ಸ್ವರೆ ಘೃತಾಚಿ ಸುಕೇಶಿ ಗೌರೀ ಶ್ವರೀ ವರೂಥಿನಿ ಪೂರ್ವಚಿತ್ತಿ ಸುಲೇಖೆ ಚಿತ್ರರಥಿ ಸುರಭಿಗಂಧಿನಿ ಚಾರುಮುಖಿ ಸೌಂ ದರಿಯನಿಧಿಯೂರ್ವಶಿ ಸುಲೋಚನೆ ಸುರಸೆಯೆನಿಪಂಗನೆಯರೈದಿತು ಕೋಟಿ ಸಂಖ್ಯೆಯಲಿ

vara tilōttame raṃbhe madhura svare ghr̥tāci sukēśi gaurī śvarī varūthini pūrvacitti sulēkhe citrarathi surabhigaṃdhini cārumukhi sauṃ dariyanidhiyūrvaśi sulōcane suraseyenipaṃganeyaraiditu kōṭi saṃkhyeyali

Report an error

ಏನನೆಂಬೆನು ಜೀಯ ಶಕ್ರಾ ಸ್ಥಾನವಲ್ಲಾ ದಿವ್ಯವಾದ್ಯ ಸು ಗಾನ ನರ್ತನ ವಿಮಳ ತೂರ್ಯತ್ರಯದ ಮೇಳವದ ಆ ನಿತಂಬಿನಿಯರ ಸುರೇಖಾ ಸ್ಥಾನಕದ ನಿರುಗೆಯ ಸುಢಾಳದ ನೂನ ಸಮ್ಮೋಹನದ ತೂಕದ ಭಾವಭಂಗಿಗಳ

ēnaneṃbenu jīya śakrā sthānavallā divyavādya su gāna nartana vimaḷa tūryatrayada mēḷavada ā nitaṃbiniyara surēkhā sthānakada nirugeya suḍhāḷada nūna sammōhanada tūkada bhāvabhaṃgigaḷa

Report an error

ರಸದ ಸಂಸ್ಥಾಪನೆಯ ಭಾವದ ಬೆಸುಗೆಗಳ ಹಸ್ತಾಭಿನಯ ದೃ ಕ್ಪ್ರಸರಣದವರ ಸಾತ್ವಿಕಾಂಗಿಕ ಸುಗತಿ ವಿಭ್ರಮದ ವಿಷಮ ಸಮಕರಣದ ಕಳಾಪದ ಕುಸುರಿಗಳ ವರಲಾಸ್ಯ ತಾಂಡವ ವೆಸೆದುದೈ ರಂಭಾದಿ ನರ್ತಕಿಯರಲಿ ಹೊಸತೆನಿಸಿ

rasada saṃsthāpaneya bhāvada besugegaḷa hastābhinaya dr̥ kprasaraṇadavara sātvikāṃgika sugati vibhramada viṣama samakaraṇada kaḷāpada kusurigaḷa varalāsya tāṃḍava vesedudai raṃbhādi nartakiyarali hosatenisi

Report an error

ಗಾನ ರಸದಲಿ ಮುಳುಗಿತಮರಾ ಸ್ಥಾನವೆತ್ತಣ ವಾದ್ಯ ನರ್ತನ ಗಾನ ನರ್ತನವೆನಲು ಸಮ್ಮೋಹಿಸಿತು ಘನವಾದ್ಯ ಗಾನ ವಾದ್ಯವಿದೆತ್ತ ನೃತ್ಯರ ಸಾನುಭವ ಭಾರವಿಸಿತನ್ಯೋ ನ್ಯಾನು ರಂಜಕವಾಯ್ತು ತೂರ್ಯತ್ರಯದ ಮೇಳಾಪ

gāna rasadali muḷugitamarā sthānavettaṇa vādya nartana gāna nartanavenalu sammōhisitu ghanavādya gāna vādyavidetta nr̥tyara sānubhava bhāravisitanyō nyānu raṃjakavāytu tūryatrayada mēḷāpa

Report an error

ಈಯಮಾನುಷ ನೃತ್ಯವಾದ್ಯ ಸು ಗೇಯ ರಸದಲಿ ಮುಳುಗಿ ಕರಣದ ಲಾಯ ತೊಡಕದೆ ಪಾರ್ಥನಿದ್ದನು ಧೈರ್ಯಶಿಖರದಲಿ ಈ ಯುವತಿ ತಾನಾವಳೋ ಕುಸು ಮಾಯುಧನ ಖಂಡೆಯವಲಾ ಮಝ ಮಾಯೆಯೆನುತೂರ್ವಶಿಯನೆವೆಯಿಕ್ಕದೆ ನಿರೀಕ್ಷಿಸಿದ

īyamānuṣa nr̥tyavādya su gēya rasadali muḷugi karaṇada lāya toḍakade pārthaniddanu dhairyaśikharadali ī yuvati tānāvaḷō kusu māyudhana khaṃḍeyavalā majha māyeyenutūrvaśiyaneveyikkade nirīkṣisida

Report an error

ಪಾರುಖಾಣೆಯವಿತ್ತನಾ ಜಂ ಭಾರಿಯೂರ್ವಶಿ ರಂಭೆ ಮೇನಕೆ ಗೌರಿ ಮೊದಲಾದಖಿಳ ಪಾತ್ರಕೆ ಪರಮ ಹರುಷದಲಿ ನಾರಿಯರು ನಿಖಿಳಾಮರರು ಬೀ ಡಾರಕೈದಿತು ಹರೆದುದೋಲಗ ವಾರತಿಯ ಹರಿವಾಣ ಸುಳಿದುದು ಸಾಲು ಸೊಡರುಗಳ

pārukhāṇeyavittanā jaṃ bhāriyūrvaśi raṃbhe mēnake gauri modalādakhiḷa pātrake parama haruṣadali nāriyaru nikhiḷāmararu bī ḍārakaiditu haredudōlaga vāratiya harivāṇa suḷidudu sālu soḍarugaḷa

Report an error

ಅರಸ ಕೇಳಾರೋಗಿಸಿದರಿ ಬ್ಬರು ಸಮೇಳದಲಿದ್ದು ಬೇರೊಂ ದರಮನೆಗೆ ಕಳುಹಿದನು ಪವಡಿಸುವೊಡೆ ನಿಜಾತ್ಮಜನ ಸುರಪನಿತ್ತಲು ಚಿತ್ರಸೇನನ ಕರೆಸಿದನು ಫಲುಗುಣನ ಭಾವವ ನರುಹಿದನು ನಮ್ಮೂರ್ವಶಿಯ ಕಳುಹೆಂದು ನೇಮಿಸಿದ

arasa kēḷārōgisidari bbaru samēḷadaliddu bēroṃ daramanege kaḷuhidanu pavaḍisuvoḍe nijātmajana surapanittalu citrasēnana karesidanu phaluguṇana bhāvava naruhidanu nammūrvaśiya kaḷuheṃdu nēmisida

Report an error

ಇನಿಬರಿರೆ ರಂಭಾದಿ ಸೀಮಂ ತಿನಿಯರೊಳಗೂರ್ವಶಿಯೊಳಾದುದು ಮನ ಧನಂಜಯನೀಕ್ಷಿಸಿದನನಿಮೇಷ ದೃಷ್ಟಿಯಲಿ ವನಿತೆಯನು ಕಳುಹೇಳು ನೀನೆಂ ದೆನೆ ಹಸಾದವೆನುತ್ತ ದೇವಾಂ ಗನೆಯ ಭವನಕೆ ಬಂದನೀತನು ಹರಿಯ ನೇಮದಲಿ

inibarire raṃbhādi sīmaṃ tiniyaroḷagūrvaśiyoḷādudu mana dhanaṃjayanīkṣisidananimēṣa dr̥ṣṭiyali vaniteyanu kaḷuhēḷu nīneṃ dene hasādavenutta dēvāṃ ganeya bhavanake baṃdanītanu hariya nēmadali

Report an error

ತಾಯೆ ಚಿತ್ತೈಸರಮನೆಯ ಸೂ ಳಾಯಿತನು ಬಂದೈದನೆನೆ ಕಮ ಲಾಯತಾಂಬಕಿ ಚಿತ್ರಸೇನನ ಕರೆಸಿದಳು ನಗುತ ತಾಯೆನುತ ವಸ್ತ್ರಾಭರಣದ ಪ ಸಾಯವಿತ್ತಳು ಪರಿಮಳದ ತವ ಲಾಯಿಗಳ ನೂಕಿದಳು ವರಕತ್ತುರಿಯ ಕರ್ಪುರದ

tāye cittaisaramaneya sū ḷāyitanu baṃdaidanene kama lāyatāṃbaki citrasēnana karesidaḷu naguta tāyenuta vastrābharaṇada pa sāyavittaḷu parimaḷada tava lāyigaḷa nūkidaḷu varakatturiya karpurada

Report an error

ಅಣಕವಲ್ಲಿದು ರಾಯನಟ್ಟಿದ ಮಣಿಹವೋ ನಿಜಕಾರ್ಯ ಗತಿಗಳ ಕುಣಿಕೆಯೋ ಕರ್ತವ್ಯವಾವುದು ನಿಮಗೆ ನಮ್ಮಲ್ಲಿ ಗುಣಭರಿತ ಹೇಳೆನಲು ನಸುನಗೆ ಕುಣಿಯೆ ಮುಖದಲಿ ಮಾನಿನಿಗೆ ವೆಂ ಟಣಿಸಿ ಲಜ್ಜಾಭರದಿ ನುಡಿದನು ದೂತನೀ ಮಾತ

aṇakavallidu rāyanaṭṭida maṇihavō nijakārya gatigaḷa kuṇikeyō kartavyavāvudu nimage nammalli guṇabharita hēḷenalu nasunage kuṇiye mukhadali māninige veṃ ṭaṇisi lajjābharadi nuḍidanu dūtanī māta

Report an error

ಎಮಗೆ ಮಗನರ್ಜುನನು ನೀನಿಂ ದೆಮಗೆ ಸೊಸೆಯಹುದಾತನಂತ ಸ್ತಿಮಿರವನು ಕಳೆ ನಿನ್ನ ಕುಚಯುಗ ಕಾಂತಿ ಲಹರಿಯಲಿ ಕಮಲಮುಖಿ ನೀ ಕಮಲವಾತನು ಭ್ರಮರ ನೀ ಸುರವನದ ಸಿರಿಮಧು ಸಮಯವರ್ಜುನನೆಂದು ಬೆಸಸಿದನಮರಪತಿಯೆಂದ

emage maganarjunanu nīniṃ demage soseyahudātanaṃta stimiravanu kaḷe ninna kucayuga kāṃti lahariyali kamalamukhi nī kamalavātanu bhramara nī suravanada sirimadhu samayavarjunaneṃdu besasidanamarapatiyeṃda

Report an error

ಕೇಳುತವೆ ರೋಮಾಂಚ ಲಜ್ಜೆಯ ಜೋಳಿಯೆದ್ದುದು ಝೋಂಪಿಸಿತು ಪುಳ ಕಾಳಿ ಭಯವನು ಪಂಟಿಸಿದುದನುರಾಗದಭಿಮಮಾನ ಮೇಲೆ ಮೇಲಭಿಲಾಷೆ ಧೈರ್ಯವ ಚಾಳವಿಸೆ ಪರಿತೋಷ ಪೂರಣ ದೇಳುಮುಳುಗಾಯ್ತುತ್ತರಕೆ ನಸುಬಾಗಿದಳು ಶಿರವ

kēḷutave rōmāṃca lajjeya jōḷiyeddudu jhōṃpisitu puḷa kāḷi bhayavanu paṃṭisidudanurāgadabhimamāna mēle mēlabhilāṣe dhairyava cāḷavise paritōṣa pūraṇa dēḷumuḷugāytuttarake nasubāgidaḷu śirava

Report an error

ಆತನುತ್ತಮ ನಾಯಕನು ವಿ ಖ್ಯಾತೆ ನೀ ಸುರಲೋಕದಲಿ ಲ ಜ್ಜಾತಿಶಯವೇಕಿಲ್ಲಿ ನಾವೇ ನಿಮ್ಮ ಪರಿವಾರ ಸೋತಡೆಯು ದಿಟ ಭಂಗವಲ್ಲ ಪು ರಾತನದ ನಳ ನಹುಷ ಭರತ ಯ ಯಾಯತಿ ನೃಪರೊಳಗೀತನಗ್ಗಳನಬಲೆ ಕೇಳೆಂದ

ātanuttama nāyakanu vi khyāte nī suralōkadali la jjātiśayavēkilli nāvē nimma parivāra sōtaḍeyu diṭa bhaṃgavalla pu rātanada naḷa nahuṣa bharata ya yāyati nr̥paroḷagītanaggaḷanabale kēḷeṃda

Report an error

ರಾಯನಟ್ಟಿದ ನೇಮ ಗಡ ಕಮ ನೀಯವಲ್ಲಾ ನಿನ್ನ ನುಡಿ ರಮ ಣೀಯತರವಿದು ನಿನ್ನ ರಚನೆ ಮಹಾನುಭಾವವಲೆ ಆಯಿತಿದು ನೀ ಹೋಗೆನುತಲಬು ಜಾಯತಾಕ್ಷಿ ಮಹೋತ್ಸವದಿ ನಾ ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ

rāyanaṭṭida nēma gaḍa kama nīyavallā ninna nuḍi rama ṇīyataravidu ninna racane mahānubhāvavale āyitidu nī hōgenutalabu jāyatākṣi mahōtsavadi nā rāyaṇana maidunana baredaḷu cittabhittiyali

Report an error

Illustration: Verse & Place (Project-owned).