ಭೀಮ ಕೊಂದನು ಕಲಿ ಜಟಾಸುರ ನಾ ಮಹಾ ಮಣಿಮಾನನನು ಬಳಿ ಕೀ ಮಹೀತಳಕಿಳಿದು ಕಂಡನು ಪಾರ್ಥ ನಗ್ರಜನ
bhīma koṃdanu kali jaṭāsura nā mahā maṇimānananu baḷi kī mahītaḷakiḷidu kaṃḍanu pārtha nagrajana
ಅರಣ್ಯ ಪರ್ವ — ಸಂಧಿ ೧೧ · ಅರಣ್ಯ ಪರ್ವ — ಸಂಧಿ ೧೧
araṇya parva — saṃdhi 11
The complete aranya parva · sandhi 11 in Kannada.
33 passagesKannada with transliteration
Invocation
ಭೀಮ ಕೊಂದನು ಕಲಿ ಜಟಾಸುರ ನಾ ಮಹಾ ಮಣಿಮಾನನನು ಬಳಿ ಕೀ ಮಹೀತಳಕಿಳಿದು ಕಂಡನು ಪಾರ್ಥ ನಗ್ರಜನ
bhīma koṃdanu kali jaṭāsura nā mahā maṇimānananu baḷi kī mahītaḷakiḷidu kaṃḍanu pārtha nagrajana
ಕೇಳು ಜನಮೇಜಯಯುಧಿಷ್ಠಿರ ನೋಲಗದೊಳುತ್ಪಾತ ಶತವಿವ ರಾಲಿಗಳನಂಜಿಸಿದವತಿ ರಂಜಿಸಿದವದುಭುತವ ಕೇಳಿದನಿದೇನೆಂದು ವರ ವಿ ಪ್ರಾಳಿಯನು ದೌಮ್ಯಾದಿ ಋಷಿಗಳು ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ
kēḷu janamējayayudhiṣṭhira nōlagadoḷutpāta śataviva rāligaḷanaṃjisidavati raṃjisidavadubhutava kēḷidanidēneṃdu vara vi prāḷiyanu daumyādi r̥ṣigaḷu hēḷidaru tacchakuna saṃgatigaḷa phalōttarava
ಸರಸಸೌಗಂಧಿಕದ ಪುಸ್ಪೋ ತ್ತರಕೆ ಪವನಜ ಹೋದನೆಂಬುದ ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ ನರನ ಹದನೇನೋ ವೃಕೋದರ ನಿರವು ತಾನೆಂತೆನುತ ಚಿಂತಾ ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ
sarasasaugaṃdhikada puspō ttarake pavanaja hōdaneṃbuda narasiyiṃdaridavanipati pūrāya duguḍadali narana hadanēnō vr̥kōdara niravu tāneṃtenuta ciṃtā bharitaniddanu bhīmasēnana kāṃba tavakadali
ಆ ಸಕಲ ಪರಿವಾರ ರಾಣೀ ವಾಸ ಸಹಿತಾರಣ್ಯ ಭವನಾ ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು ಆ ಸುಗಂಧಕ ಪದುಮ ಪರಿಮಳ ಬಾಸಣಿಸಿತೀ ಜನ ಮನೋ ವಿ ನ್ಯಾಸ ವನುಯಿದೆ ಬಂದ ಪವನಜನೆಂದುದೀ ಕಟಕ
ā sakala parivāra rāṇī vāsa sahitāraṇya bhavanā bhyāsi baṃdanu bhīmasēnana gamana pathaviḍidu ā sugaṃdhaka paduma parimaḷa bāsaṇisitī jana manō vi nyāsa vanuyide baṃda pavanajaneṃdudī kaṭaka
ಎನಲು ಬಂದನು ಭೀಮನಂಬುಜ ವನವಿದಿರು ಬಂದಂತೆ ಕಂಪಿನ ತನಿರಸದ ತಾವರೆಯ ತೆಕ್ಕೆಯ ತೋಳ ತೋರಿಕೆಯ ಜಿನುಗು ದುಂಬಿಯ ಜಾಳೀಗೆಯ ತನಿ ಮಿನುಗುಮೋರೆಯ ಕಣ್ಣಂಪಿನ ಘನ ಭಯಂಕರ ರೂಪ ಭೀಮನ ಕಂಡನವನೀಶ
enalu baṃdanu bhīmanaṃbuja vanavidiru baṃdaṃte kaṃpina tanirasada tāvareya tekkeya tōḷa tōrikeya jinugu duṃbiya jāḷīgeya tani minugumōreya kaṇṇaṃpina ghana bhayaṃkara rūpa bhīmana kaṃḍanavanīśa
ಸೆಳೆದು ತಕ್ಕೈಸಿದನು ತಾವರೆ ಗೋಳದ ತೋಟಿಯ ಹದಕೆ ಕಂಪಿಸಿ ಬಳಿಕ ಕಪಿ ದರ್ಶನದ ಕೌತೂಹಲಕೆ ಭುಲ್ಲವಿಸಿ ನಳಿನಗಂಧದ ಗಾಡತರ ಸುಖ ದೊಳಗೆ ಹೋಂಪುಳಿವೋಗಿ ಭೂಪತಿ ತಿಲಕನಿದ್ದನು ಗಂಧ ಮಾದನ ಗಿರಿಯ ತಪ್ಪಲಲಿ
seḷedu takkaisidanu tāvare gōḷada tōṭiya hadake kaṃpisi baḷika kapi darśanada kautūhalake bhullavisi naḷinagaṃdhada gāḍatara sukha doḷage hōṃpuḷivōgi bhūpati tilakaniddanu gaṃdha mādana giriya tappalali
ಗಿರಿಯ ತುದಿಗೇರುವ ಮಹೀಶನ ಭರವಸವನಶರೀರ ದನಿ ಪರಿ ಹರಿಸಲಿಳಿದನು ಮರಳಿ ಬಂದನು ಬದರಿಕಾಶ್ರಮಕೆ ಅರಸ ಕೇಳೈ ಮತ್ತೆ ಮಾರಿಯ ಪರುಠವವನನಿಲಜನು ಬೇಟೆಗೆ ಹರಿದನತ್ತಲು ಬಂದು ಮುತ್ತಿತುದಾನವರ ಧಾಳಿ
giriya tudigēruva mahīśana bharavasavanaśarīra dani pari harisaliḷidanu maraḷi baṃdanu badarikāśramake arasa kēḷai matte māriya paruṭhavavananilajanu bēṭege haridanattalu baṃdu muttitudānavara dhāḷi
ಖಳ ಜಟಾಸುರ ನೆಂಬನಾ ದ್ವಿಜ ಕುಲವನಂಜಿಸಿ ಯಮಳರೊಡ ನಿಟ್ಟಳಿಸಿ ಕಾದಿ ಕಠೋರದಲಿಪಿಡಿದನು ಮಹಾಸತಿಯ ಬಲುಗಡಿಯನಿವನೊಡನೆ ಹೋರಿದು ಬಳಲಿದರು ಬೆಂಬತ್ತಿದರು ಗಾ ವಳಿಯ ಗಜಬಜ ತಿರುಗಿತಿತ್ತಲು ಪವನಜನ ಹೊರೆಗೆ
khaḷa jaṭāsura neṃbanā dvija kulavanaṃjisi yamaḷaroḍa niṭṭaḷisi kādi kaṭhōradalipiḍidanu mahāsatiya balugaḍiyanivanoḍane hōridu baḷalidaru beṃbattidaru gā vaḷiya gajabaja tirugitittalu pavanajana horege
ತಳಿರ ಕೈಗಳ ಮೊರೆಯ ಬಾಯ್ಗಳ ಜಲದ ಕಂಗಳ ತಾಪದಿಂದೊಳ ಝಳದಿ ಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ ಕಳಕಳದ ಕಾಲುವೆಯ ಭಂಗದ ಹೊಳಹುಗಳ ಹೋಲುವೆಯ ಸವ್ಯಾ ಕುಲರ ಕಂಡಾನು ಭೀಮನೇನೆಂದು ಬೆಸಗೊಂಡ
taḷira kaigaḷa moreya bāygaḷa jalada kaṃgaḷa tāpadiṃdoḷa jhaḷadi yugivaḷḷegaḷa balu bhayavāṃta koraḷugaḷa kaḷakaḷada kāluveya bhaṃgada hoḷahugaḷa hōluveya savyā kulara kaṃḍānu bhīmanēneṃdu besagoṃḍa
ಹಿಡಿದರರಸಿಯನವನಿಪತಿ ಹಿಡಿ ವಡೆದನನುಜರುಸಹಿತ ಹಾರುವ ರಡವಿಯಲಿ ಹಾಯಿದರು ಚೆಲ್ಲಿತು ನಿಮ್ಮ ಪರಿವಾರ ಕಡುಹು ಘನವಿದೆ ದಾನವರವಂ ಗಡವೆನಲು ಘನ ಸಿಂಹ ನಾದದ ಸಿಡಿಲ ಶಿಕ್ಷಾ ಗುರುವೆನಲು ಮೊಳಗಿದನು ಕಲಿಭೀಮ
hiḍidararasiyanavanipati hiḍi vaḍedananujarusahita hāruva raḍaviyali hāyidaru cellitu nimma parivāra kaḍuhu ghanavide dānavaravaṃ gaḍavenalu ghana siṃha nādada siḍila śikṣā guruvenalu moḷagidanu kalibhīma
ಧಾಳಿಯಿಟ್ಟನು ದಾನವರ ದೆ ಖ್ಖಾಳದಲ್ಲಿಗೆ ಘಲ್ಲಿಸಿದನು ಬ್ಬಾಳುಗಳನಿಟ್ಟೊರಸಿ ಬಿಡಿಸಿದ ತನ್ನವರ ಸೆರೆಯ ಸೀಳಿ ನಾಯ್ಗಳ ನೆತ್ತರಿನ ತನಿ ಗಾಲುವೆಯಲೇ ಬೆಳಸುವೆನು ದಿವಿ ಜಾಳಿಗಳ ಸಂತೋಷ ಸಸಿ ಯೆನುತ್ತ ಗರ್ಜಿಸಿದ
dhāḷiyiṭṭanu dānavara de khkhāḷadallige ghallisidanu bbāḷugaḷaniṭṭorasi biḍisida tannavara sereya sīḷi nāygaḷa nettarina tani gāluveyalē beḷasuvenu divi jāḷigaḷa saṃtōṣa sasi yenutta garjisida
ಮಸಗಿತಿಬ್ಬರಿಗದುಭುತಾಹವ ವು ಸುರ ಧಾಳಾ ಧೂಳಿ ಮಿಗೆ ಘ ಟ್ಟಿಸಿದನವನನು ದಂಡೆಯಲಿ ತಡೆಗಾಲಲೊಡೆ ಹೊಯ್ದು ಬಿಸುಗುದಿಯ ನವರುಧಿರ ಜಲ ಜಾ ಳಿಸೆ ನವದ್ವಾರದಲಿ ದೈತ್ಯನ ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ
masagitibbarigadubhutāhava vu sura dhāḷā dhūḷi mige gha ṭṭisidanavananu daṃḍeyali taḍegālaloḍe hoydu bisugudiya navarudhira jala jā ḷise navadvāradali daityana kusukiridu tivitividu koṃdanu kali jaṭāsurana
ಅರಸ ಕೇಳಾದಾನವನ ತನು ಬಿರಿದು ಬಿದ್ದುದು ಬಾತ ಹೆಣನು ಬ್ಬರದ ಹೊಲಸಿನ ಗವಲು ಕವಿದುದು ಕೂಡೆ ವನದೊಳಗೆ ಧರಣಿಪತಿ ತದ್ಬದರಿಕಾಶ್ರಮ ವರ ತಪೋವನದಿಂದ ತೆಂಕಲು ತಿರುಗಿ ಬಂದನು ಸಾರಿದನು ವೃಷ ಪರ್ವತಾಶ್ರಮವ
arasa kēḷādānavana tanu biridu biddudu bāta heṇanu bbarada holasina gavalu kavidudu kūḍe vanadoḷage dharaṇipati tadbadarikāśrama vara tapōvanadiṃda teṃkalu tirugi baṃdanu sāridanu vr̥ṣa parvatāśramava
ಆ ತಪೋವನವಿವರ ಘಲ್ಲಣೆ ಗಾತುದಿಲ್ಲ ವಿನೋದದಲಿ ವಿ ಖ್ಯಾತ ಶೈಲದ ಮೇಖಲೆಯ ತುದಿಗೇರಿದನು ಭೀಮ ಈತನನು ಹಳಚಿದನು ದೈತ್ಯನ ಭೀತ ಮಣಿಮಾನೆಂಬುವನು ಪದ ಘಾತಿಯಲಿ ಲಟಕಟಿಸೆ ಗಿರಿ ಕಾದಿದರು ಪಟುಭಟರು
ā tapōvanavivara ghallaṇe gātudilla vinōdadali vi khyāta śailada mēkhaleya tudigēridanu bhīma ītananu haḷacidanu daityana bhīta maṇimāneṃbuvanu pada ghātiyali laṭakaṭise giri kādidaru paṭubhaṭaru
ಕೊಂದನವನನು ವಿಗತ ಶಾಪನು ನಿಂದನಿದಿರಲಿ ಯಕ್ಷರೂಪಿನ ಲಂದಗಸ್ತ್ಯನ ಶಾಪ ವೃತ್ತಾಂತವನು ವಿವರಿಸಿದ ಬಂದನಲ್ಲಿಗೆಯಕ್ಷಪತಿ ನಲ ವಿಂದ ಲಿವರನು ವಿವಿಧ ವಸ್ತುಗ ಳಿಂದ ಸತ್ಕರಿಸಿದನು ಕೊಂಡಾಡಿದನು ಪಾಂಡವರ
koṃdanavananu vigata śāpanu niṃdanidirali yakṣarūpina laṃdagastyana śāpa vr̥ttāṃtavanu vivarisida baṃdanalligeyakṣapati nala viṃda livaranu vividha vastuga ḷiṃda satkarisidanu koṃḍāḍidanu pāṃḍavara
ಅರಸನತಿ ಸಂತೋಷಮಯ ಸಾ ಗರದಿ ಮುಳುಗುವನೊಮ್ಮೆ ನಿಮಿಷಕೆ ನರನ ವಿರಹದ ದುಃಖಸಾಗರದೊಳಗೆ ಸೈಗೆಡೆವ ಪರಮ ಋಷಿಗಳಮಧುರ ವಚನೋ ತ್ತರಕೆ ತಿಳಿವನದೊಮ್ಮೆ ಪುನರಪಿ ಮರುಳಹನು ಫಲುಗುಣನ ನೆನೆದರಸ ಕೇಳೆಂದ
arasanati saṃtōṣamaya sā garadi muḷuguvanomme nimiṣake narana virahada duḥkhasāgaradoḷage saigeḍeva parama r̥ṣigaḷamadhura vacanō ttarake tiḷivanadomme punarapi maruḷahanu phaluguṇana nenedarasa kēḷeṃda
ಅರಸನಲಿ ಬೇರೂರಿ ಮಗುಳಂ ಕುರಿಸಿದುದು ಭೀಮನಲಿ ನಕುಲನ ಲೆರಡು ಮೂರೆಲೆಯಾಯ್ತು ಸಹದೇವನಲಿ ಕವಲೊಡೆದು ಅರಸಿಯಲಿ ಸಲೆಹೂತು ಕಾತು ಬ್ಬರಿಸುತಿದ್ದುದು ಶೋಕಲತೆ ತ ತ್ಪರಿಕರದಕರಣಾವಳಿಯ ಹಬ್ಬುಗೆಯ ಹರಹಿನಲಿ
arasanali bērūri maguḷaṃ kurisidudu bhīmanali nakulana leraḍu mūreleyāytu sahadēvanali kavaloḍedu arasiyali salehūtu kātu bbarisutiddudu śōkalate ta tparikaradakaraṇāvaḷiya habbugeya harahinali
ಮರೆದನೋ ನಮ್ಮಿನಿಬರನು ದಿಟ ಮರೆಯಲುಚಿತವಲೇ ಸುರೇಂದ್ರನ ಸೆರಗು ಸೋಂಕುವ ಸಲುಗೆಯುಂಟೇ ಮರ್ತ್ಯಜಾತಿಯಲಿ ಉರುವ ಸುರಪನ ಸಾರ ಸೌಖ್ಯದೊ ಳರಿಯನೋ ನಮ್ಮೀ ಪ್ರವಾಸದ ಸೆರೆಗೆ ನರನಂಗೈಸನೆಂದವನೀಶ ಚಿಂತಿಸಿದ
maredanō namminibaranu diṭa mareyalucitavalē surēṃdrana seragu sōṃkuva salugeyuṃṭē martyajātiyali uruva surapana sāra saukhyado ḷariyanō nammī pravāsada serege naranaṃgaisaneṃdavanīśa ciṃtisida
ವಾಮ ನಯನ ಸ್ಪುರಣ ಪರಿಗತ ವಾಮಭಾಹು ಸ್ಪಂದವಾದುದು ಭಾಮಿನಿಗೆ ಭೂಪತಿಗೆ ಚಲಿಸಿತು ದಕ್ಷಿಣಾಂಗದಲಿ ವೈಮನಸ್ಯ ವಸನ ನಿರಸನ ಕ್ಕೀ ಮಹಾ ಶಕುನಂಗಳಿವೆಯೆಂ ದಾ ಮಹೀಪತಿ ನೆನೆವುತಿರ್ದನು ಫಲುಗುಣನ ಬರವ
vāma nayana spuraṇa parigata vāmabhāhu spaṃdavādudu bhāminige bhūpatige calisitu dakṣiṇāṃgadali vaimanasya vasana nirasana kkī mahā śakunaṃgaḷiveyeṃ dā mahīpati nenevutirdanu phaluguṇana barava
ಅರಸ ಕೇಳೈ ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ ಶಿಶಿರದ ಸರಿದಲೆಯ ವನದಲಿ ವಸಂತ ಬರವಿನಂದದಲಿ ಸುರವಿಮಾನ ಶ್ರೇಣಿಗಳ ನವ ಪರಿಮಳದ ಪೂರದಲಿ ಭಾರತ ವರುಷಕಿಳಿದನು ಪಾರ್ಥ ಬಂದನು ಧರ್ಮಜನ ಹೊರೆಗೆ
arasa kēḷai himada hoylina sarasijake raviyaṃte śiśirada saridaleya vanadali vasaṃta baravinaṃdadali suravimāna śrēṇigaḷa nava parimaḷada pūradali bhārata varuṣakiḷidanu pārtha baṃdanu dharmajana horege
ಏನನೆಂಬೆನಯ ಜೀಯ ಕುಂತೀ ಸೂನು ಕಂಡನು ದೂರದಲಿ ಸುರ ಮಾನಿನೀಜನದಂಗವಟ್ಟದ ಪೂರ್ವ ಪರಿಮಳದ ಆನನೆಂದುಗಳಾಭರಣ ಮು ಕ್ತಾನುಕೃತ ತಾರಾ ಮಯೂಖ ವಿ ತಾನದಲಿ ಹೊಳೆ ಹೊಳೆದು ಮೆರೆವ ಮಹೇಂದ್ರ ಮಣಿರಥವಂ
ēnaneṃbenaya jīya kuṃtī sūnu kaṃḍanu dūradali sura māninījanadaṃgavaṭṭada pūrva parimaḷada ānaneṃdugaḷābharaṇa mu ktānukr̥ta tārā mayūkha vi tānadali hoḷe hoḷedu mereva mahēṃdra maṇirathavaṃ
ಆರದೀರಥವೆನುತತಿರುಗಿ ಮ ಹೀರಮಣನಾಲಿಗಳು ಹರಿದವು ಭಾರಣೆಯ ಜನ ನಯನ ಕೋಟಿಯ ಕೊಲ್ಲಣಿಗೆ ಮಿಗಿಲು ಭೂರಿ ಮಣಿ ರಶ್ಮಿಗಳ ಚಿಮ್ಮುವ ಚಾರು ಚಮರಿಯ ತುರಗ ನಿಕರ ಗ ಭೀರ ಹೇಷಾರವದಲಿಳಿದುದು ರಥ ಸುರೇಶ್ವರನ
āradīrathavenutatirugi ma hīramaṇanāligaḷu haridavu bhāraṇeya jana nayana kōṭiya kollaṇige migilu bhūri maṇi raśmigaḷa cimmuva cāru camariya turaga nikara ga bhīra hēṣāravadaliḷidudu ratha surēśvarana
ರಥ ಮಹೇಂದ್ರನ ದೀತನೆಮ್ಮತಿ ರಥನಲಾ ನೆರೆ ನೋಂತು ಪಡೆದಳೋ ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ ಮಥಿಥ ರಿಪುವವಧಾನ ಲೋಕ ಪ್ರಥಿಥ ನಿರುಪಮವೆಂಬ ಸುರ ಸಾ ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾ ರಥವ
ratha mahēṃdrana dītanemmati rathanalā nere nōṃtu paḍedaḷō pr̥theyenuta kavidudu munivraja mikkavara naguta mathitha ripuvavadhāna lōka prathitha nirupamaveṃba sura sā rathiya nelanuggaḍaṇeyali nagutiḷidanā rathava
ಅರಸ ಕೇಳುಬ್ಬಿನಲಿ ಧೌಮ್ಯನ ಧರಣಿಪನ ರೋಮಶನ ಭೀಮನ ಚರಣದಲಿ ಮೈಯಿಕ್ಕಿ ಕೈ ಮುಗಿದೆರಗಿ ಮುನಿಜನಕೆ ಹರಸಿದನು ಹೊರವಂಟ ನಕುಲಾ ದ್ಯರನು ಮಧುರ ಪ್ರೀತಿ ವಚನ ಸ್ಪುರದ ಮಂದಸ್ನೇಹದಲಿ ನೋಡಿದನು ಪರಿಜನವ
arasa kēḷubbinali dhaumyana dharaṇipana rōmaśana bhīmana caraṇadali maiyikki kai mugideragi munijanake harasidanu horavaṃṭa nakulā dyaranu madhura prīti vacana spurada maṃdasnēhadali nōḍidanu parijanava
ಬಿಗಿದ ಗವಸಣಿಗೆಯಲಿ ಸೂರ್ಯನ ನುಗಿವವೋಲ್ ಮಾಣೀಕ್ಯ ಮಣಿ ರ ಶ್ಮಿಗಳ ರಹಿ ರಂಜಿಸೆ ಸುರೇಶ್ವರನಿತ್ತ ಭೂಷಣವ ತೆಗೆತೆಗೆದು ಯಮನಂದನಂಗೋ ಲಗಿಸಿ ಭೀಮಂಗಿತ್ತು ನಕುಲಾ ದಿಗಳ ಮೈಯಲಿ ತೊಡೀಸಿದನು ಕೈಯಾರೆಕಲಿ ಪಾರ್ಥ
bigida gavasaṇigeyali sūryana nugivavōl māṇīkya maṇi ra śmigaḷa rahi raṃjise surēśvaranitta bhūṣaṇava tegetegedu yamanaṃdanaṃgō lagisi bhīmaṃgittu nakulā digaḷa maiyali toḍīsidanu kaiyārekali pārtha
ಕರಸಿ ಕಾಣಿಸಿದನು ಧನಂಜಯ ಸುರಪತಿಯ ಸಾರಥಿಯನಮರೇ ಶ್ವರ ವರೂಥದ ಸನ್ನಿವೇಶದಸಕಲ ಶೋಭೆಗಳ ಅರಸ ಮೊದಲಾದಖಿಳ ಜನಭೂ ಸುರರು ಕಂಡರು ಮಾತಲಿಯ ಸ ತ್ಕರಿಸಿ ಸಂಭಾವಿಸಿದನವನೀಪತಿ ಸರಾಗದಲಿ
karasi kāṇisidanu dhanaṃjaya surapatiya sārathiyanamarē śvara varūthada sannivēśadasakala śōbhegaḷa arasa modalādakhiḷa janabhū suraru kaṃḍaru mātaliya sa tkarisi saṃbhāvisidanavanīpati sarāgadali
ಕುಶಲವೇ ದೇವೇಂದ್ರನಾತನ ಶಶಿವದನೆಯರು ಸುಖಿಗಳೇ ರಾ ಕ್ಷಸರು ವಶವರ್ತಿಗಳೆ ನಿರ್ಜರ ನಗರಿ ನಿರ್ಭಯವೇ ದೆಸೆಯವರು ಮೂಲೆಗೆಳೆವರು ಮ ನ್ನಿಸುವರೇ ಸುರಲೋಕ ಸುಖವನು ವ್ಯಸನಭರ ಭಂಗಿಸದಲೇ ಹೇಳೆಂದನಾ ಭೂಪ
kuśalavē dēvēṃdranātana śaśivadaneyaru sukhigaḷē rā kṣasaru vaśavartigaḷe nirjara nagari nirbhayavē deseyavaru mūlegeḷevaru ma nnisuvarē suralōka sukhavanu vyasanabhara bhaṃgisadalē hēḷeṃdanā bhūpa
ಭಜಿಸಿದೈ ಭರ್ಗನನು ಶಾಂಭವ ಯಜನ ಸಾರ ಸಮಾಧಿ ಶಿವಪದ ರಜವ ಬೆರಸಿತೆ ಬಗೆಯ ಕುಣಿತೆವರಾಯ್ತೆ ತಡಿ ದೆಗೆದು ವಿಜಯ ಶಬ್ದವು ಪಾರ್ಥ ಕೃತಿಯಲಿ ಯಜಡವಲ್ಲಲೆ ವೈರಿ ರಾಯರ ಕುಜನತಾ ವಿಚ್ಛೇದ ಸಾದ್ಯವೆಯೆಂದನಾ ಭೂಪ
bhajisidai bhargananu śāṃbhava yajana sāra samādhi śivapada rajava berasite bageya kuṇitevarāyte taḍi degedu vijaya śabdavu pārtha kr̥tiyali yajaḍavallale vairi rāyara kujanatā vicchēda sādyaveyeṃdanā bhūpa
ಜೀಯ ಚಿತ್ತೈಂದ್ರನಲ್ಲಿ ಸ ಹಾಯವಾದನು ಶಿವನ ಕಾರು ಣ್ಯಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ ಆಯಿತೀ ದೂರ್ಜಟಿಯ ಶರ ಲೋ ಕಾಯಿತರಿಗೆನೆಂಬೆನದು ನಿ ರ್ದಾಯದಲಿ ವಶವರ್ತಿಯಾಯ್ತೆನಗೆಂದನಾ ಪಾರ್ಥ
jīya cittaiṃdranalli sa hāyavādanu śivana kāru ṇyāyudhave masedudu surēṃdra snēha sāṇeyali āyitī dūrjaṭiya śara lō kāyitarigeneṃbenadu ni rdāyadali vaśavartiyāytenageṃdanā pārtha
ಹರನ ಕರುಣಾಲಾಭ ಲೋಕೋ ತ್ತರದ ಪರಿತೋಷದಲಿ ನಾನಿರೆ ಸುರಪ ಕಳುಹಿದನೀ ರಥವನೀ ವಿಮಳ ಮಾತಲಿಯ ಕರಸಿದನು ನಿಜ ನಗರಿಗಾ ನಿ ರ್ಜರ ನಿಕರವಾ ಸತಿಯರಾ ದಿ ಕ್ಷರಿವೃಢರು ಕೊಂಡಾಡಿತೆನ್ನಯ ರಾಯ ಕೇಳೆಂದ
harana karuṇālābha lōkō ttarada paritōṣadali nānire surapa kaḷuhidanī rathavanī vimaḷa mātaliya karasidanu nija nagarigā ni rjara nikaravā satiyarā di kṣarivr̥ḍharu koṃḍāḍitennaya rāya kēḷeṃda
ಪಾಶುಪತ ಶರ ಭುವನದೂರ್ದ್ವ ಶ್ವಾಸ ಕೃತಿ ಕೋವಿದನಲೆ ಚಿ ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಯ ವೀದಿಯಲಿ ಆ ಶರವಲೇ ಸೇರಿತೆನಗೆ ಮ ಹೇಶನಿಂದಲ್ಲಿಂದ ಬಳಿಕ ಸು ರೇಶನತಿ ಮನ್ನಿಸಿದನಮರಾವತಿಯೊಳೊಲವಿನಲಿಂ
pāśupata śara bhuvanadūrdva śvāsa kr̥ti kōvidanale ci taisi balliri nimmaḍigaḷāmnaya vīdiyali ā śaravalē sēritenage ma hēśaniṃdalliṃda baḷika su rēśanati mannisidanamarāvatiyoḷolavinaliṃ
ಖ್ಯಾತಿವಡೆದನು ಶಿವನ ಕಾರು ಣ್ಯಾತಿಶಯಕಿದು ಫಲವೇ ಸಾಕಿ ನ್ನೇತಕಿದು ರಾಜಸ ವಿಡಂಬ ವಿಕಾರಕುಚಿತವಲೆ ವೀತಿಹೋತ್ರ ಪರೇತಪತಿ ಪುರು ಹೂತ ವರುಣಾದಿಗಳು ಕಾಂಡ ವ್ರಾತದಲಿ ತೊಳೆದರು ಮನೋರಥಕಲಿತ ಕರ್ದಮವ
khyātivaḍedanu śivana kāru ṇyātiśayakidu phalavē sāki nnētakidu rājasa viḍaṃba vikārakucitavale vītihōtra parētapati puru hūta varuṇādigaḷu kāṃḍa vrātadali toḷedaru manōrathakalita kardamava
ಕೇಳಿ ಮಿಗೆ ಹಿಗ್ಗಿದನು ತನು ಪುಳ ಕಾಳಿ ತಳಿತುದು ಹರುಷವಾರಿಗ ಳಾಲಿ ಹೂಳಿದವು ತೂಳಿದವಂತರವ್ಯಥೆಯ ತೋಳ ಹಿಡಿದೆಳದಪ್ಪಿ ಪಾರ್ಥನ ಬೋಳವಿಸಿದನು ಪೌರವಾನ್ವಯ ಪಾಲಕನೆಯೆಂದರಸ ಮುಂಡಾಡಿದನು ಫಳುಗುಣನ
kēḷi mige higgidanu tanu puḷa kāḷi taḷitudu haruṣavāriga ḷāli hūḷidavu tūḷidavaṃtaravyatheya tōḷa hiḍideḷadappi pārthana bōḷavisidanu pauravānvaya pālakaneyeṃdarasa muṃḍāḍidanu phaḷuguṇana
ಮುರಿದುದೀನ್ನೇನಹಿತ ಬಲ ಹಗೆ ಹರಿದುದೀ ದ್ರೌಪದಿಯ ಮೌಳಿಗೆ ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ ಕರೆದನೇ ಕರುಣವನು ಹರಹರ ಹೆರೆನೊಸಲ ಬಲುದೈವವಿನಿತರ ಹೊರಿಗೆ ಗದುಗಿನ ವೀರ ನಾರಾಯಣನ ಕರುಣದಲಿ
muridudīnnēnahita bala hage haridudī draupadiya mauḷige karubidavarige kāṇalāytu kr̥tāṃtanōlagava karedanē karuṇavanu harahara herenosala baludaivavinitara horige gadugina vīra nārāyaṇana karuṇadali
Keys: ← → turn the page, J K step through the verses.
Illustration: Verse & Place (Project-owned).