Skip to content

ಅರಣ್ಯ ಪರ್ವ — ಸಂಧಿ ೨೧ · ಅರಣ್ಯ ಪರ್ವ — ಸಂಧಿ ೨೧

Aranya Parva · Sandhi 21

araṇya parva — saṃdhi 21

The complete aranya parva · sandhi 21 in Kannada.

71 passagesKannada with transliteration

An original emblem for Aranya Parva.

Invocation

3.21.opening

ಕಳುಹಿದನು ಯಮಸೂನು ವಂಶ ಪ್ರಳಯನನು ಪ್ರಾಯೋಪವೇಶವ ತಿಳುಹಿ ದೈತ್ಯರು ಸಂತವಿಟ್ಟರು ಕೌರವೇಶ್ವರ

kaḷuhidanu yamasūnu vaṃśa praḷayananu prāyōpavēśava tiḷuhi daityaru saṃtaviṭṭaru kauravēśvara

ಕೇಳು ಜನಮೇಜಯ ಧರಿತ್ರೀ ಪಾಲ ಕೌರವ ನೃಪನ ತಂದು ಕೃ ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ ತೋಳ ಹಿಂಗಟ್ಟುಗಳ ಮೋರೆಯ ಕಾಳಿಕೆಯ ಬಿಡುದಲೆಯ ನೀರೊರೆ ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ

kēḷu janamējaya dharitrī pāla kaurava nr̥pana taṃdu kr̥ pāḷuvina caraṇāgradali keḍahidanu kalipārtha tōḷa hiṃgaṭṭugaḷa mōreya kāḷikeya biḍudaleya nīrore vāligaḷa kurubhūpaniddanu tammadiru sahita

Report an error

ಕೊಳ್ಳಿ ಸೆರೆಯನು ನಿಮ್ಮ ಸಹಭವ ರೆಲ್ಲರೂ ಕಡುಮೂರ್ಖರಿದು ನಿ ಮ್ಮೆಲ್ಲರಿಗೆ ಮತವೈಸಲೇ ನಾವೆಂದು ಫಲವೇನು ಖುಲ್ಲರಿವದಿರ ಬಿಡಿಸಿದೊಡೆ ತಳು ವಿಲ್ಲದಹುದಪಘಾತ ಸಾಕಿ ನ್ನೆಲ್ಲಿಯದು ನಯ ಬೀಳುಕೊಡಿ ನೀವೆಂದನಾ ಖಚರ

koḷḷi sereyanu nimma sahabhava rellarū kaḍumūrkharidu ni mmellarige matavaisalē nāveṃdu phalavēnu khullarivadira biḍisidoḍe taḷu villadahudapaghāta sāki nnelliyadu naya bīḷukoḍi nīveṃdanā khacara

Report an error

ಮಾನಭಂಗವೆ ಬರಲಿ ಮೇಣಭಿ ಮಾನವಾಲಿಂಗಿಸಲಿ ಚರಣದೊ ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು ನೀನೆಮಗೆ ಬಾಂಧವನೆನ್ನುತ ಸ ನ್ಮಾನದಲಿ ಕಳುಹಿಸಿದನು ಬಳಿಕು ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ

mānabhaṃgave barali mēṇabhi mānavāliṃgisali caraṇado ḷānatara pālisuvudē kṣatriyara dharmavidu nīnemage bāṃdhavanennuta sa nmānadali kaḷuhisidanu baḷiku dyānadali dēvēṃdranettidanaḷida khēcarara

Report an error

ಕಳುಹಿದನು ಖೇಚರನನವನಿಪ ತಿಲಕ ನೋಡಿದನೀತನನು ನಿಜ ಲಲನೆಯನು ಕರೆದನು ಸುಯೋಧನ ನೊಂದನಕಟೆನುತ ನಳಿನಮುಖಿ ಹೆಡಗೈಯ ಬಿಡು ಕಲು ನೆಲನು ಹಾಸಿಕೆ ಹಂಸತಲ್ಪದ ಪಳಿಕಿನಲಿ ಪವಡಿಸುವಗೀ ವಿಧಿಯೇ ಶಿವಾಯೆಂದ

kaḷuhidanu khēcarananavanipa tilaka nōḍidanītananu nija lalaneyanu karedanu suyōdhana noṃdanakaṭenuta naḷinamukhi heḍagaiya biḍu kalu nelanu hāsike haṃsatalpada paḷikinali pavaḍisuvagī vidhiyē śivāyeṃda

Report an error

ಬಂದಳಬುಜಾನನೆ ಸುಯೋಧನ ನಮ್ದವನು ನೋಡಿದಳು ಸುಯ್ದಳು ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ ಒಂದು ಕೈ ಗಲ್ಲದಲಿ ಬಿಡಿಸಿದ ಳೊಂದು ಕೈಯಲಿ ಭುಜದ ಪಾಶವ ನಿಂದುಮುಖಿ ದುರಿಯೋಧನನ ದುಶ್ಯಾಸನನು ಸಹಿತ

baṃdaḷabujānane suyōdhana namdavanu nōḍidaḷu suydaḷu beṃda vidhi baṃdhanava taṃdude sārvabhaumarige oṃdu kai galladali biḍisida ḷoṃdu kaiyali bhujada pāśava niṃdumukhi duriyōdhanana duśyāsananu sahita

Report an error

ಕೆಳದಿಯರ ಕೈಯಿಂದ ಕೊಯ್ಸಿದ ಳುಳಿದ ಕೌರವನನುಜವರ್ಗದ ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ ಅಳಲಿಸಿದನೇ ಖಚರನಾತನ ಕೊಲಿಸಬೇಹುದು ಕಳುಹಿ ಕಷ್ಟವ ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ

keḷadiyara kaiyiṃda koysida ḷuḷida kauravananujavargada balu huriya nēṇugaḷanavadira gōṇugaḷu maṇiye aḷalisidanē khacaranātana kolisabēhudu kaḷuhi kaṣṭava baḷasidiri bhūpālayeṃdaḷu naḷinamukhi naguta

Report an error

ಅರಸ ನೊಂದೈ ಮರ್ದನಕೆ ಮ ಲ್ಲರುಗಳಿಲ್ಲೆಮಗೊತ್ತುವವು ಕಲು ಹರಳು ಮಜ್ಜನ ಮಾಡುವೊಡೆ ಶೀತಾಂಬು ತಿಳಿಗೊಳದ ಹರಿಣ ಶಾರ್ದೂಲಾದಿ ಚರ್ಮಾಂ ಬರವೆ ಸಮಕಟ್ಟೆಮಗೆ ರತ್ನಾ ಭರಣವೇ ರುದ್ರಾಕ್ಷಿಯೆಂದಳು ನಗುತ ತರಳಾಕ್ಷಿ

arasa noṃdai mardanake ma llarugaḷillemagottuvavu kalu haraḷu majjana māḍuvoḍe śītāṃbu tiḷigoḷada hariṇa śārdūlādi carmāṃ barave samakaṭṭemage ratnā bharaṇavē rudrākṣiyeṃdaḷu naguta taraḷākṣi

Report an error

ವಾರುವವು ವಟಶಾಖೆ ಗಿರಿಗಳು ತೋರ ಕರಿಗಳು ಭದ್ರಗಜ ವನ ಭೂರುಹದ ನೆಳಲೆಮಗೆ ಸತ್ತಿಗೆ ಪಲ್ಲವವ್ರಾತ ಚಾರು ಚಾಮರ ಕಿರುಮೊರಡಿ ವಿ ಸ್ತಾರ ಪೀಠವು ಹಂತಿಗಾರರು ಭೂರಿ ಸರ್ಪಾವಳಿಗಳರಮನೆ ಹೊದರು ಹೊಸಮೆಳೆಯ

vāruvavu vaṭaśākhe girigaḷu tōra karigaḷu bhadragaja vana bhūruhada neḷalemage sattige pallavavrāta cāru cāmara kirumoraḍi vi stāra pīṭhavu haṃtigāraru bhūri sarpāvaḷigaḷaramane hodaru hosameḷeya

Report an error

ಈ ವಿಪತ್ತಿನ ನಿಮ್ಮಡಿಯ ಸಂ ಭಾವಿಸುವರೆಮಗಾದ ವಸ್ತುಗ ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ ದೇವನಿರ್ಪನು ಧರ್ಮಸುತನಿ ನ್ನಾವುದುಚಿತಾನುಚಿತವೆಂಬುದ ಭಾವನವರೇ ಬಲ್ಲಿರೆಂದಳು ದ್ರೌಪದಾ ದೇವಿ

ī vipattina nimmaḍiya saṃ bhāvisuvaremagāda vastuga ḷī vidhigaḷēkemma bāḷikeyeṃdu duguḍadali dēvanirpanu dharmasutani nnāvuducitānucitaveṃbuda bhāvanavarē ballireṃdaḷu draupadā dēvi

Report an error

ಮಾನಿನಿಯ ಕಟಕಿಯ ಮಹಾಸ್ತ್ರಕೆ ಮೌನವನು ಮರೆಗೊಂಡು ಕಲುಷ ಧ್ಯಾನನಿದ್ದನು ಚಿತ್ತದಲಿ ಬೇರೊಂದು ಚಿಂತಿಸುತ ಭಾನುಮತಿ ಕೈಮುಗಿದಳೀ ಕ ರ್ಣಾನುಗತ ತಾಟಂಕ ಮುದ್ರೆಯ ನೀನೆಲೈ ದಯೆಗೈದೆಯೆಂದೆರಗಿದಳು ಚರಣದಲಿ

māniniya kaṭakiya mahāstrake maunavanu maregoṃḍu kaluṣa dhyānaniddanu cittadali bēroṃdu ciṃtisuta bhānumati kaimugidaḷī ka rṇānugata tāṭaṃka mudreya nīnelai dayegaideyeṃderagidaḷu caraṇadali

Report an error

ಎತ್ತಿದನು ರಾಣಿಯನು ನೃಪ ತಲೆ ಗುತ್ತಲೇಕೈ ನಿನಗೆ ಬಂದಾ ಪತ್ತು ನಮ್ಮದು ನಮ್ಮ ತೊಡಕಿನ ತೋಟಿಗಳು ನಿನಗೆ ಹೆತ್ತತಾಯ್ಗಾಂಧಾರಿ ಸತಿ ನಾ ವಿತ್ತಡಿಗಳಕಟಕಟ ನೀದು ಶ್ಚಿತ್ತನಾಗದಿರೆಂದು ನುಡಿದನು ನೃಪತಿ ಕೌರವಗೆ

ettidanu rāṇiyanu nr̥pa tale guttalēkai ninage baṃdā pattu nammadu namma toḍakina tōṭigaḷu ninage hettatāygāṃdhāri sati nā vittaḍigaḷakaṭakaṭa nīdu ścittanāgadireṃdu nuḍidanu nr̥pati kauravage

Report an error

ದ್ರೋಣರೆಂದುದ ಮಾಡೆ ಭೀಷ್ಮನ ವಾಣಿ ವಿಷವೈ ನಿನಗೆ ವಿದುರನು ರಾಣಿಕವ ನಿನ್ನಲ್ಲಿ ಬಲ್ಲನೆ ಬಗೆಯ ನೀನವರ ಪ್ರಾಣ ವಾಯುಗಳವರು ಸುಭಟ ಶ್ರೇಣಿ ದೇಹಕೆ ನಿನ್ನ ತನುನಿ ತ್ರಾಣವದರಿಂದಾಯ್ತು ಪರಿಭವವೆಂದನಾ ಭೂಪ

drōṇareṃduda māḍe bhīṣmana vāṇi viṣavai ninage viduranu rāṇikava ninnalli ballane bageya nīnavara prāṇa vāyugaḷavaru subhaṭa śrēṇi dēhake ninna tanuni trāṇavadariṃdāytu paribhavaveṃdanā bhūpa

Report an error

ಬಿಡಿಸಿದಧರದ್ವಯ ವಿಷಾದದ ತಡಿಯ ಚಿತ್ರದ ನೆಯ್ಗೆ ಬೇರೊಂ ದೆಡೆಯಲಿದ್ದುದು ಬೀಳುಕೊಂಡನು ಧರ್ಮನಂದನನ ಒಡನೆ ಬಂದರು ರಾಣಿಯರು ಕೈ ಗುಡಿಯವರ ಸುದ್ದಿಯಲಿ ಸೂಸಿದ ಪಡೆಯು ನಿಮಿಷಕೆ ನೆರೆದುದಿನಸುತ ಸೌಬಲರು ಸಹಿತ

biḍisidadharadvaya viṣādada taḍiya citrada neyge bēroṃ deḍeyaliddudu bīḷukoṃḍanu dharmanaṃdanana oḍane baṃdaru rāṇiyaru kai guḍiyavara suddiyali sūsida paḍeyu nimiṣake neredudinasuta saubalaru sahita

Report an error

ಭಟರ ಬೊಬ್ಬೆಗಳಡಗಿದವು ಬಾ ಯ್ದುಟಿಗಳಾಡವು ವಂದಿನಿಕರಕೆ ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ ಚಟುಲಗಜಹಯರಥದವರು ಲಟ ಕಟಿಸದಿದ್ದರು ಕೌರವೇಂದ್ರನ ಕಟಕ ದುಮ್ಮಾನದಲಿ ಬಂದುದು ಹಸ್ತಿನಾಪುರಿಗೆ

bhaṭara bobbegaḷaḍagidavu bā yduṭigaḷāḍavu vaṃdinikarake paṭaha paṇava mr̥daṃgaviddavu maunadīkṣeyali caṭulagajahayarathadavaru laṭa kaṭisadiddaru kauravēṃdrana kaṭaka dummānadali baṃdudu hastināpurige

Report an error

ಹೊಗಲಿ ಪಾಳೆಯ ಪುರವನೆಂದು ಬ್ಬೆಗದ ಬೆಳೆ ಸಿರಿವಂತನೆತ್ತಿದ ದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ ಹೊಗೆವ ಮೋರೆಯ ನೆಲಕೆ ನೆಟ್ಟಾ ಲಿಗಳ ನಿಖಿಳೇಂದ್ರಿಯದ ರೋಚಕ ಬಿಗಿದ ಬೇಗೆಯ ಬೇಸರಿನ ಬಿಸುಗುದಿಯ ಸುಯ್ಲಿನಲಿ

hogali pāḷeya puravaneṃdu bbegada beḷe sirivaṃtanettida duguḍadali kuḷḷīrdanā suranadiya tīradali hogeva mōreya nelake neṭṭā ligaḷa nikhiḷēṃdriyada rōcaka bigida bēgeya bēsarina bisugudiya suylinali

Report an error

ತರಿಸಿ ಗಂಗಾಜಲವ ಗೋಮಯ ವೆರಸಿ ಕುಶ ಸಂಮಾರ್ಜುನವ ವಿ ಸ್ತರಿಸಿ ಪರಿಕರ ಸುದ್ಧಿಯಲಿ ಪಸರಿಸಿದ ಬಹಿರ್ಯಲಿ ನಿರಶನ ವ್ರತವೆಂದು ಮಂತ್ರೋ ಚ್ಚರಿತ ಸಂಕಲ್ಪದಲಿ ಕೌರವ ರರಸ ಪವಡಿಸಿದನು ಕೃತ ಪ್ರಾಯೊಪವೇಶದಲಿ

tarisi gaṃgājalava gōmaya verasi kuśa saṃmārjunava vi starisi parikara suddhiyali pasarisida bahiryali niraśana vrataveṃdu maṃtrō ccarita saṃkalpadali kaurava rarasa pavaḍisidanu kr̥ta prāyopavēśadali

Report an error

ಹೊಗಿಸ ಬೇಡಾರುವನು ಕರ್ಣಾ ದಿಗಳು ಮೊದಲಾಗೆಂದು ದಡ್ಡಿಯ ನುಗುಳುಗಂಡಿಯ ಕಾಹಕೊಟ್ಟನು ತನ್ನ ಬೇಹವರ ದುಗುಡದಲಿ ಪರಿವಾರ ಬಂದೋ ಲಗಿಸಿ ಹೊರಗೇ ಹೋಗುತಿರ್ದುದು ನಗುತ ಹೊಕ್ಕಳು ಭಾನುಮತಿ ಕಂಚಿಕಿಯನೊಡೆ ನೂಕಿ

hogisa bēḍāruvanu karṇā digaḷu modalāgeṃdu daḍḍiya nuguḷugaṃḍiya kāhakoṭṭanu tanna bēhavara duguḍadali parivāra baṃdō lagisi horagē hōgutirdudu naguta hokkaḷu bhānumati kaṃcikiyanoḍe nūki

Report an error

ಏನು ದಿಟ ಸಂಕಲ್ಪವಿನಿತಕೆ ನಾನು ಹೊರಗೇ ಹೊಗುವೆವೇಳು ಕೃ ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ ಮಾನನಿಧಿಯೇ ವಿವಿಧ ಗರಳ ವಿ ತಾನವನು ತರಿಸುವೆನು ನಿಶ್ಚಯ ವೇನು ನಿರಶನ ಮರಣವೇಕೆಂದಳು ಸರೋಜಮುಖಿ

ēnu diṭa saṃkalpavinitake nānu horagē hoguvevēḷu kr̥ śānuvanu bīḷuvevu naḍe bhāgīrathī maḍuva mānanidhiyē vividha garaḷa vi tānavanu tarisuvenu niścaya vēnu niraśana maraṇavēkeṃdaḷu sarōjamukhi

Report an error

ತರುಣಿ ನೀ ಹೆಸರಿಸಿದವಿವು ದು ರ್ಮರಣ ಸಾಧನವಮಲ ದರ್ಭಾ ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ ಪರಿಹರಿಸುವೆನು ದೇಹವನು ಸುಡ ಲರಸುತನವನು ಪಾಂಡುಪುತ್ರರ ಕರುಣ ಕಲುಷಿತ ಕಾಯವಿದನಾ ಧರಿಸುವೆನೆಯೆಂದ

taruṇi nī hesarisidavivu du rmaraṇa sādhanavamala darbhā staraṇavidu pāvanavalā prāyōpavēśadali pariharisuvenu dēhavanu suḍa larasutanavanu pāṃḍuputrara karuṇa kaluṣita kāyavidanā dharisuveneyeṃda

Report an error

ಈ ನಿರಾಹಾರವು ನಿರರ್ಥಕ ವೇನನೆಂಬೆನು ಜೀಯ ಮುರಿದಭಿ ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ ಆ ನದೀಸುತ ವಿದುರರೆಂದುದ ನೀನುಪೇಕ್ಷಿಸಿ ಕಳೆವೆ ಹೆಂಗಸು ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ

ī nirāhāravu nirarthaka vēnaneṃbenu jīya muridabhi māna besuvude baṇṇavaḷivude baṃda duriyaśada ā nadīsuta vidurareṃduda nīnupēkṣisi kaḷeve heṃgasu nīnariyeyenabēḍa cittaisoṃdu binnapava

Report an error

ತಮ್ಮ ನೆರೆವೊಟ್ಟೈಸಿ ರಣದಲಿ ನಮ್ಮ ಬಿಡಿಸಿದರವರು ನೀವಿ ನ್ನೆಮ್ಮ ಹಿಂದಣ ಗುಣವ ನೋಡದಿರೆಂದು ಯಮಸುತನ ನಮ್ಮ ನಗರಿಗೆ ಕರೆಸಿ ಧರೆಯನು ನಮ್ಮ ಪಟ್ಟಣ ಸಹಿತ ಕೊಟ್ಟರೆ ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ

tamma nerevoṭṭaisi raṇadali namma biḍisidaravaru nīvi nnemma hiṃdaṇa guṇava nōḍadireṃdu yamasutana namma nagarige karesi dhareyanu namma paṭṭaṇa sahita koṭṭare nimmanīgalu lōka meccuvudeṃdaḷiṃdumukhi

Report an error

ಕರೆಸಿದರೆ ದಿಟ ಬಾರರವರಾ ಧರಣಿಯನು ಕೈಕೊಂಡು ನಿಲುವರು ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ ಅರಿಗಳುಪಟಲದಿಂದ ತಪ್ಪಿಸಿ ಮರಳಿಚಿದ ಜೀವೋಪಕಾರಕೆ ಕುರುಕುಲಾಗ್ರಣಿ ಲೇಸುಮಾಡಿದನೆಂಬುದೀ ಲೋಕ

karesidare diṭa bāraravarā dharaṇiyanu kaikoṃḍu niluvaru varuṣa hadimūrādaḍallade meṭṭarī nelava arigaḷupaṭaladiṃda tappisi maraḷicida jīvōpakārake kurukulāgraṇi lēsumāḍidaneṃbudī lōka

Report an error

ನುಡಿದವಧಿ ಹದಿಮೂರು ವರುಷದ ಹೆಡತಲೆಯನೊದೆದೆದ್ದು ನಮ್ಮೀ ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ ನುಡಿಯ ಸಲಿಸದ ಮುನ್ನನೀ ಕೊ ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ

nuḍidavadhi hadimūru varuṣada heḍataleyanodededdu nammī poḍaviyardhake baleya bīsade biḍuvarē baḷika nuḍiya salisada munnanī ko ṭṭoḍe kr̥taghnate tappuvudu mige nuḍiyalammenu rājakāryavaneṃdaḷiṃdumukhi

Report an error

ಮರೆವ ಹಗೆಯೇ ನಾವು ಮಾಡಿದ ನರಿಯೆಲಾ ಮೂದಲಿಸಿ ಧರ್ಮಜ ನಿರಿವ ಕತ್ತಿ ಕಣಾ ಸದಾ ಪಾಂಚಾಲಿ ಪವನಜರು ಮರುಗಲೇತಕೆ ಭಾನುಮತಿನಿ ನ್ನುರುವ ಮಗನಲಿ ರಾಜ್ಯಭಾರವ ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ

mareva hageyē nāvu māḍida nariyelā mūdalisi dharmaja niriva katti kaṇā sadā pāṃcāli pavanajaru marugalētake bhānumatini nnuruva maganali rājyabhārava horisi badukuvudenna kāḍade hōgu nīneṃda

Report an error

ಸಾಕು ಸಾಕೀ ಮಾತಿನಲಿ ಜಗ ದೇಕ ರಾಜ್ಯದ ಪಟ್ಟವಾಯ್ತವಿ ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ ಮೂಕಭಾವದ ದೀಕ್ಷೆ ತನಗೆಂ ದಾ ಕಮಲಮುಖಿಯಿದ್ದಳಿತ್ತಲು ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ

sāku sākī mātinali jaga dēka rājyada paṭṭavāytavi vēkigaḷigadhidaiva tānenagīsu hiridalla mūkabhāvada dīkṣe tanageṃ dā kamalamukhiyiddaḷittalu nūkidavu daṃḍigegaḷaramaneyiṃda saṃdaṇisi

Report an error

ಬಂದಳಾ ಗಾಂಧಾರಿ ಸೊಸೆಯರ ವೃಂದಸಹಿತುರವಣಿಸಿ ಹೊಕ್ಕಳು ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ ಕಂದಿದಳು ಕಡುಶೋಕ ಶಿಖಿಯಲಿ ಬೆಂದಳೇನೈ ಮಗನೆ ಹಾಸಿಕೆ ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ

baṃdaḷā gāṃdhāri soseyara vr̥ṃdasahituravaṇisi hokkaḷu niṃdu nōḍidaḷātaniravanu kuśeya hakkeyali kaṃdidaḷu kaḍuśōka śikhiyali beṃdaḷēnai magane hāsike yaṃda lēsāytenuta kuḷḷirdaḷu samīpadali

Report an error

ಏನು ದರ್ಭಾಸ್ತರಣ ಶಯನ ವಿ ದೇನು ಕಾರಣ ನಿರಶನ ವ್ರತ ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ ಏನು ಸಿದ್ಧಿಯಿದಕ್ಕೆ ಮೋಹಿದ ಮೌನ ಮುದ್ರೆಯ ಬಿಸುಟು ಹೇಳೆ ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ

ēnu darbhāstaraṇa śayana vi dēnu kāraṇa niraśana vrata vēnu sādhisalādudī prāyōpavēśadali ēnu siddhiyidakke mōhida mauna mudreya bisuṭu hēḷe nnāṇeyenutave haṇeya haṇeyali cācidaḷu magana

Report an error

ತಾಯೆ ಹೇಳುವುದೇನು ಪಾಂಡವ ರಾಯರುಳುಹಿದವೊಡಲನಿದನಿದ ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು ನೋಯಲೇತಕೆ ನಿಮಗೆ ಮಕ್ಕಳು ತಾಯೆ ನೂರುಂಟನಿಬರಲಿ ಕುಂ ದಾಯಿತೊಂದೈಸಲೆ ಮನೋವ್ಯಥೆಯೇಕೆ ನಿಮಗೆಂದ

tāye hēḷuvudēnu pāṃḍava rāyaruḷuhidavoḍalanidanida rāyasava nā hēḷalariyenu horage kēḷuvudu nōyalētake nimage makkaḷu tāye nūruṃṭanibarali kuṃ dāyitoṃdaisale manōvyatheyēke nimageṃda

Report an error

ಮಾಡಿದೆನು ಸಂಕಲ್ಪವಿದರೊಳು ಗೂಡ ಕಳಚುವೆನೊಮ್ಮೆ ನೀವೇ ನೋಡಿ ಸಂತಸಪಡುವುದಾದುಶ್ಯಾಸನಾದಿಗಳ ಕೇಡಿಗನು ಕುರುವಂಶಕೆಂದಿಳೆ ಯಾಡುವುದು ತನ್ನೊಬ್ಬನನು ನಾ ಮೂಡಿದನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ

māḍidenu saṃkalpavidaroḷu gūḍa kaḷacuvenomme nīvē nōḍi saṃtasapaḍuvudāduśyāsanādigaḷa kēḍiganu kuruvaṃśakeṃdiḷe yāḍuvudu tannobbananu nā mūḍidanu nere muḷugidoḍe kulakella lēseṃda

Report an error

ಉಸುರು ಬೀಯದ ಮುನ್ನ ರಾಜ್ಯವ ನೊಸೆದು ಕೊಟ್ಟೆನು ಪಟ್ಟಬಂಧನ ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು ಅಸುವನಳುಕದೆ ಬಿಡುವೆನೌ ಶಂ ಕಿಸದೆ ದುಶ್ಯಾಸನಗೆ ಪಟ್ಟವ ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ

usuru bīyada munna rājyava nosedu koṭṭenu paṭṭabaṃdhana dosageyali kautukavanī kiviyāre kēḷuvenu asuvanaḷukade biḍuvenau śaṃ kisade duśyāsanage paṭṭava nesagi naḍeyau tāye bijayaṃgaiyi nīveṃda

Report an error

ಆ ಸಮಯದಲಿ ವಿಗತ ನಯನ ಮ ಹೀಶ ಬಂದನು ಜನಪದದ ವಿ ನ್ಯಾಸದುಗ್ಗಡಣೆಯಲಿ ವಿದುರನ ಹೆಗಲ ತೋಳಿನಲಿ ಆಸರಿನ ಬಿಸುಗುದಿಯ ಚಿಂತೆಯ ಬೇಸರಿನ ಬಿಸುಸುಯ್ಲ ರಾಣೀ ವಾಸಕುಲವಿದಿರೆದ್ದುದಖಿಳಾಭರಣ ರಭಸದಲಿ

ā samayadali vigata nayana ma hīśa baṃdanu janapadada vi nyāsaduggaḍaṇeyali vidurana hegala tōḷinali āsarina bisugudiya ciṃteya bēsarina bisusuyla rāṇī vāsakulavidireddudakhiḷābharaṇa rabhasadali

Report an error

ಸಂತವಿಡಿರೇ ಮಗನ ನಿಜ ದೇ ಹಾಂತ ಕೃತ ಸಂಕಲ್ಪ ಗಡ ನೃಪ ನಂತರಂಗರ ಕರೆಸಿಯೆಂದಳಲಿದಳು ಗಾಂಧಾರಿ ಭ್ರಾಂತಿ ಬಿಗಿದಿದೆ ಚತುರ ಚಿತ್ತಕೆ ಚಿಮ್ತೆ ಬೇರೊಂದಾಯ್ತು ರಾಯನ ಹಂತಿಕಾರರು ಬರಲಿ ಹಿಡಿಯಲಿ ನಿರಶನವ್ರತವ

saṃtaviḍirē magana nija dē hāṃta kr̥ta saṃkalpa gaḍa nr̥pa naṃtaraṃgara karesiyeṃdaḷalidaḷu gāṃdhāri bhrāṃti bigidide catura cittake cimte bēroṃdāytu rāyana haṃtikāraru barali hiḍiyali niraśanavratava

Report an error

ಸಾಕುಮಗನೆ ದುರಂತ ಇಂತೆಯಿ ದೇಕೆ ಸಂಕಲ್ಪಾಭಿಯೋಗ ವ್ಯಾಕುಲತೆ ಬೇಡೇಳು ಪಾಲಿಸು ಸಕಲಭೂತಳವ ಆ ಕುಮಾರರ ಕರೆಸಿ ಗುಣದಲಿ ಸಾಕುವುದು ಜೀವೋಪಕಾರಕೆ ಕಾಕ ನೆನೆಯದಿರೆನುತ ಮುಂಡಾಡಿದನು ನಂದನನ

sākumagane duraṃta iṃteyi dēke saṃkalpābhiyōga vyākulate bēḍēḷu pālisu sakalabhūtaḷava ā kumārara karesi guṇadali sākuvudu jīvōpakārake kāka neneyadirenuta muṃḍāḍidanu naṃdanana

Report an error

ಸವೆದು ಹೋಯ್ತಾಯುಷ್ಯ ತನಗಿ ನ್ನವನಿಯಾಗದು ಮರೆ ಯುಧಿಷ್ಠಿರ ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ ಅವರುಗಳ ನಿಲಿಸುವುದು ನೆಲದ ರ್ಧವನು ದುಶ್ಯಾಸನಗೆ ಕೊಡುವುದು ನಿಮಗೆ ಚಿತ್ತಕೆ ಬಹರೆ ಎಂದನು ತಂದೆಗವನೀಶ

savedu hōytāyuṣya tanagi nnavaniyāgadu mare yudhiṣṭhira pavanajaru ninaganyarē karesuvudu rājyadali avarugaḷa nilisuvudu nelada rdhavanu duśyāsanage koḍuvudu nimage cittake bahare eṃdanu taṃdegavanīśa

Report an error

ಆದರವರಂತಿರಲಿ ನಿನಗಿ ನ್ನೀ ದುರಾಗ್ರಹ ಬೇಡ ನಿನಗಳಿ ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ ಬೀದಿಗಲಹದೊಳೊಮ್ಮೆ ಪೈಸರ ವಾದಡದು ಪರಿಹರಿಸಿದವರೇ ಸೋದರರಲಾ ಹೆಚ್ಚುಕುಂದೇನೆಂದನಂಧನೃಪ

ādaravaraṃtirali ninagi nnī durāgraha bēḍa ninagaḷi vādōḍī kuruvaṃśavaḷivudu paṭṭavāvanali bīdigalahadoḷomme paisara vādaḍadu pariharisidavarē sōdararalā heccukuṃdēneṃdanaṃdhanr̥pa

Report an error

ಕಲಹ ಬೀದಿಯೊಳಾಯ್ತು ಕಟ್ಟಿದ ರಳಿವಿನೋದದಲಹಿತರದ ಹೊ ಯ್ದೆಳೆದು ತಂದನು ಪಾರ್ಥನೆಮ್ಮಯ ತೋಳ ನೇಣುಗಳ ನಳಿನ ಮುಖಿ ಕಡುಮೌಳಿಯಲಿ ಮೂ ದಲಿಸಿ ಕೊಯ್ದಳು ತನಗೆ ಭಂಗದ ಲುಳಿವುದೆತ್ತಣ ಮಾತು ಕರುಣಿಸಿ ಬೊಪ್ಪನೀವೆಂದ

kalaha bīdiyoḷāytu kaṭṭida raḷivinōdadalahitarada ho ydeḷedu taṃdanu pārthanemmaya tōḷa nēṇugaḷa naḷina mukhi kaḍumauḷiyali mū dalisi koydaḷu tanage bhaṃgada luḷivudettaṇa mātu karuṇisi boppanīveṃda

Report an error

ದೋಷ ನಿಮಗಿಲ್ಲೆನ್ನ ಮೇಲಭಿ ಲಾಷೆಯನು ಬಿಡಿ ನಿಮ್ಮ ಮಗ ಕುಲ ಭೂಷಣನಲಾ ಧರ್ಮಸುತನಾತನಲಿ ಹುರುಡಿಸುವ ರೋಷವುಂಟೇ ತನಗೆ ನಿಮಗಿದು ದೂಷಣವೆ ತಾನಲ್ಲ ನಾನೇ ಘೋಷಿಸುವೆನೈ ಧರ್ಮಸುತನರಸಾಗಬೇಕೆಂದು

dōṣa nimagillenna mēlabhi lāṣeyanu biḍi nimma maga kula bhūṣaṇanalā dharmasutanātanali huruḍisuva rōṣavuṃṭē tanage nimagidu dūṣaṇave tānalla nānē ghōṣisuvenai dharmasutanarasāgabēkeṃdu

Report an error

ಸಾರವೀ ನುಡಿ ಕಟಕಿಯಲ್ಲ ವಿ ಚಾರಪರರಿಗೆ ನಿಮ್ಮ ಚಿತ್ತಕೆ ಬಾರದಿದ್ದರೆ ನಿಲಲಿ ದುಶ್ಯಾಸನನ ಕರೆಸುವುದು ಸೇರಿಸುವುದವನಿಯನು ಮೇಣಿದು ಭಾರವೇ ನಿಮ್ಮರಮನೆಗೆ ವಿ ಸ್ತಾರದಿಂದವೆ ಬಿಜಯ ಮಾಡೆನೆನುತ್ತ ಮುಂದಾದ

sāravī nuḍi kaṭakiyalla vi cārapararige nimma cittake bāradiddare nilali duśyāsanana karesuvudu sērisuvudavaniyanu mēṇidu bhāravē nimmaramanege vi stāradiṃdave bijaya māḍenenutta muṃdāda

Report an error

ಮುನಿಸಿನಲಿ ಧೃತರಾಷ್ಟ್ರ ತನ್ನರ ಮನೆಗೆ ತಿರುಗಿದನಿತ್ತ ನಾರೀ ಜನವನೆಲ್ಲವ ಬೀಳುಕೊಟ್ಟನು ಬೈದು ಖಾತಿಯಲಿ ಮನಕತದಿ ಕಾತರಿಸಿ ಗಂಗಾ ತನುಜ ರವಿಜ ದ್ರೋಣ ಗೌತಮ ರನುಚಿತಪ್ರಾರಂಭ ಭೀತರು ಬಂದರೊಗ್ಗಿನಲಿ

munisinali dhr̥tarāṣṭra tannara manege tirugidanitta nārī janavanellava bīḷukoṭṭanu baidu khātiyali manakatadi kātarisi gaṃgā tanuja ravija drōṇa gautama ranucitaprāraṃbha bhītaru baṃdarogginali

Report an error

ರಾಯನಿಹ ಹದನೇನು ನಿದ್ರಾ ನಾಯಕಿಯ ಮೇಳವದಲೈದನೆ ಜೀಯಯೆನಲೊಳಹೊಕ್ಕು ನಿಂದರು ನೃಪಸಮೀಪದಲಿ ಆಯಿತೇ ನಾವೆಂದ ನುಡಿಯದು ಹೋಯಿತನಶನದಿಂದ ದೇಹದ ಬೀಯದಲಿ ಸಂಕಲ್ಪಗಡ ಹೇಳೆಂದನಾ ಭೀಷ್ಮ

rāyaniha hadanēnu nidrā nāyakiya mēḷavadalaidane jīyayenaloḷahokku niṃdaru nr̥pasamīpadali āyitē nāveṃda nuḍiyadu hōyitanaśanadiṃda dēhada bīyadali saṃkalpagaḍa hēḷeṃdanā bhīṣma

Report an error

ಈಸುದಿನ ಸಾಮ್ರಾಜ್ಯ ಸೌಖ್ಯವಿ ಲಾಸದಲಿ ಬಳಸಿದೆನು ಸಾಕಿ ನ್ನೀ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ ಆಶೆಯವನಿಯೊಳಿಲ್ಲ ವಿಷಯಾ ಭ್ಯಾಸಿಗೊಮ್ಮೆ ವಿರಕ್ತಿ ದೆಸೆಯಹು ದೈಸಲೇ ಗುರು ನೀವು ಬೆಸಸುವುದೆಂದನಾ ಭೂಪ

īsudina sāmrājya saukhyavi lāsadali baḷasidenu sāki nnī śarīrava nūki niluvenu muktirājyadali āśeyavaniyoḷilla viṣayā bhyāsigomme virakti deseyahu daisalē guru nīvu besasuvudeṃdanā bhūpa

Report an error

ಕೇಳಿದೆವು ಹಿಂದಾದ ಖೇಚರ ರೂಳಿಗವನಡಹಾಯ್ದು ನಿಮ್ಮುವ ನೋಲಯಿಸಿದಂದವನು ನಿನಗದರಿಂದ ಪರಿಭವವ ತಾಳದಂತಿರಲವರ ಕರೆಸುವೆ ವೇಳು ಭೀಮಾರ್ಜುನರ ನಿನಗಿ ನ್ನಾಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ

kēḷidevu hiṃdāda khēcara rūḷigavanaḍahāydu nimmuva nōlayisidaṃdavanu ninagadariṃda paribhavava tāḷadaṃtiralavara karesuve vēḷu bhīmārjunara ninagi nnāḷu kelasadoḷirisi naḍesuveveṃdanā bhīṣma

Report an error

ಮೊದಲು ಧೃತರಾಷ್ಟ್ರಂಗೆ ತಾ ಜನಿ ಸಿದುದು ಬಳಿಕೀ ದೇಹ ಧರ್ಮಜ ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ ಅದು ನಿಲಲಿ ದುರ್ವಿಷಯ ವೈರಾ ಗ್ಯದಲಿ ದೇಹವ ಬಿಡುವೆನಲ್ಲದೆ ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ

modalu dhr̥tarāṣṭraṃge tā jani sidudu baḷikī dēha dharmaja nudaradiṃdave baṃdudinnavaroḍane matsarave adu nilali durviṣaya vairā gyadali dēhava biḍuvenallade bedaru bhaṃgadoḷilla bijayaṃgaiyi nīveṃda

Report an error

ನಾವು ಪಡಿ ಬಾಹಿರರು ಬೀಯದ ಸೇವಕರು ಸಮಹಂತಿಕಾರರಿ ಗೀವುದೈ ದೃಢ ಮುದ್ರಿತಾಂತರ್ಮಾನಸಾಮೃತವ ಭೂವಧುವ ಬೋಳೈಸು ಕಾನನ ಜೀವಿಗಳು ತಮ್ಮೊಲಿದುದಾಗಲಿ ಸಾವುದನುಚಿತವೆಂದು ನುಡಿದರು ಭೀಷ್ಮಗುರು ಕೃಪರು

nāvu paḍi bāhiraru bīyada sēvakaru samahaṃtikārari gīvudai dr̥ḍha mudritāṃtarmānasāmr̥tava bhūvadhuva bōḷaisu kānana jīvigaḷu tammolidudāgali sāvudanucitaveṃdu nuḍidaru bhīṣmaguru kr̥paru

Report an error

ಎಮ್ಮ ನುಡಿಗಳಪಥ್ಯವಾದರೆ ನಿಮ್ಮ ಕರ್ಣಾದಿಗಳ ಕರೆಸುವು ದೆಮ್ಮನುಡಿಗವರೆಂದ ಮಾತನುಸಾರಿಯೆನಿಸಿದರೆ ಒಮ್ಮೆ ಕೈಕೊಂಬುದು ವೃಥಾನೃಪ ಧರ್ಮವನು ಬಿಡಬೇಡ ಸಮರವ ನೆಮ್ಮಿಸಾವುದು ಗುಣವು ಗರುವರಿಗೆಂದನಾ ಭೀಷ್ಮ

emma nuḍigaḷapathyavādare nimma karṇādigaḷa karesuvu demmanuḍigavareṃda mātanusāriyenisidare omme kaikoṃbudu vr̥thānr̥pa dharmavanu biḍabēḍa samarava nemmisāvudu guṇavu garuvarigeṃdanā bhīṣma

Report an error

ಕದನವಾರಲಿ ಪಾಂಡುಸುತರಲಿ ಕದನವಾಡುವುದುಚಿತವೇ ನಮ ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ ಇದನರಿತು ಸಂಕಲ್ಪ ಭಂಗಾ ಸ್ಪದವ ಮಾಡುವುದೊಳ್ಳಿತೇ ನಿಜ ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ

kadanavārali pāṃḍusutarali kadanavāḍuvuducitavē nama gidiru baḷikāruṃṭu bhārata varuṣa sīmeyali idanaritu saṃkalpa bhaṃgā spadava māḍuvudoḷḷitē nija sadanakabhimukharāgi karuṇipudeṃdanā bhūpa

Report an error

ಐಸಲೇ ದೈವೋಪಹತ ಮನ ದಾಸರಾರಿಮ್ದಡಗುವುದು ನಾ ವೇಸನೊರಲಿದಡಾಗದವರೇ ಬಂದು ನಿಲಿಸುವರು ಈಸರಲಿ ಮರಳುವೆವೆನುತ ನಿಜ ವಾಸಕೈದಿದರಿತ್ತ ಮೋಹಿದ ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ

aisalē daivōpahata mana dāsarārimdaḍaguvudu nā vēsanoralidaḍāgadavarē baṃdu nilisuvaru īsarali maraḷuvevenuta nija vāsakaididaritta mōhida vā śakuni karṇādigaḷa daṃḍigegaḷogginali

Report an error

ಹೊಕ್ಕು ರಾಯನ ಕಂಡಿದೇನೀ ಹಕ್ಕೆ ಹುಲ್ಲಿನಲಿರವು ಹರಹರ ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ ಸಿಕ್ಕುವನು ಹಗೆ ತನಗೆ ತಾನೇ ಸಿಕ್ಕುವನು ಹಗೆಗಳಿಗೆ ಲೋಕದೊ ಳಕ್ಕಜವೆ ಜಯವಿಜಯವೆಂದರು ಕರ್ಣ ಶಕುನಿಗಳು

hokku rāyana kaṃḍidēnī hakke hullinaliravu harahara makkaḷāṭikeyēnidaggada sārvabhaumarige sikkuvanu hage tanage tānē sikkuvanu hagegaḷige lōkado ḷakkajave jayavijayaveṃdaru karṇa śakunigaḷu

Report an error

ಹರಿಬಬೇಕೇ ಮತ್ತೆ ಗಂಧ ರ್ವರಿಗೆ ದೂತರನಟ್ಟು ಭೀಮನ ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ ಧರೆಯೊಳವರಿರದಂತೆ ಧಟ್ಟಿಸಿ ತೆರಳಿಚುವೆವಿದಕಕಟ ದರ್ಭೆಯ ಹರಹಿ ಹಕ್ಕೆಯ ನಿಕ್ಕಲೇಕೆಂದೊದರಿದರು ಖಳರು

haribabēkē matte gaṃdha rvarige dūtaranaṭṭu bhīmana naranoḷanusaṃdhānavē nālkeṃṭu divasadali dhareyoḷavariradaṃte dhaṭṭisi teraḷicuvevidakakaṭa darbheya harahi hakkeya nikkalēkeṃdodaridaru khaḷaru

Report an error

ದೂತನಮರರಿಗಟ್ಟುವೆನೆ ತಾ ಬೂತು ಭೀಮಾರ್ಜುನರ ಕೂಡೆ ವಿ ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ ಈ ತನುವನೀ ಪರಿಯಲೇ ನಿ ರ್ಧೂತವನೆ ಮಾಡುವೆನು ನನ್ನನು ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ

dūtanamararigaṭṭuvene tā būtu bhīmārjunara kūḍe vi ghāti kaiyoḍanucitavē keḍenuḍivudī lōka ī tanuvanī pariyalē ni rdhūtavane māḍuvenu nannanu jātanali bhūvadhuva sērisi baduki nīveṃda

Report an error

ನಿನ್ನೊಡನೆ ಹುತವಹನ ಹೊಗುವೆವು ಮನ್ನಣೆಯ ಮಾತಲ್ಲ ನಿನ್ನಿಂ ಮುನ್ನ ಮುಂಡಿತ ಶಿರದಲೆಸೆವೆವು ತೀರ್ಥಯಾತ್ರೆಯಲೊ ಎನ್ನ ಮತ ಸೌಬಲನ ಮತವಿದ ನಿನ್ನು ಕೆಲರಲಿ ಬೆರಸುವುದೆ ಬೇ ರಿನ್ನು ಮಾತೇಕೆನುತ ಮುರಿದರು ತಮ್ಮ ಮನೆಗಳಿಗೆ

ninnoḍane hutavahana hoguvevu mannaṇeya mātalla ninniṃ munna muṃḍita śiradalesevevu tīrthayātreyalo enna mata saubalana matavida ninnu kelarali berasuvude bē rinnu mātēkenuta muridaru tamma manegaḷige

Report an error

ಉಲಿವ ಭಟ್ಟರ ನಿಲಿಸಿದನು ಸಮ ನೆಲನ ಹೊಗಳುವ ವಾಹಕರ ಕಳ ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ ತಲೆಮುಸುಕಿನಲಿ ತಾರಿದೊಡಲಿನ ತಳಿತ ದುಗುಡದ ಮೋರೆಯಲಿ ಕುರು ಕುಲಭಯಂಕರ ನೈದಿದನು ದುಶ್ಯಾಸನನು ನೃಪನ

uliva bhaṭṭara nilisidanu sama nelana hogaḷuva vāhakara kaḷa kaḷava nabhakottidanu kahaḷāravake kōpisuta talemusukinali tāridoḍalina taḷita duguḍada mōreyali kuru kulabhayaṃkara naididanu duśyāsananu nr̥pana

Report an error

ಹೊಕ್ಕನೊಳಗನು ರಾಯನಂಘ್ರಿಯೊ ಳೊಕ್ಕನೊಡಲನು ಲೋಚನಾಂಬುಗ ಳುಕ್ಕಿದವು ಕಳವಳಿಸಿದವು ಕರಣೇಂದ್ರಿಯಾದಿಗಳು ಬಿಕ್ಕಿದನು ಬಿರಿಬಿರಿದು ಸೆರೆಗಳು ಮುಕ್ಕುರಿಕಿದವು ಕೊರಳ ಹೃದಯದೊ ಳೊಕ್ಕಲಿಕ್ಕಿತು ಶೋಕಪಾವಕವಾ ನೃಪಾಜುಜನ

hokkanoḷaganu rāyanaṃghriyo ḷokkanoḍalanu lōcanāṃbuga ḷukkidavu kaḷavaḷisidavu karaṇēṃdriyādigaḷu bikkidanu biribiridu seregaḷu mukkurikidavu koraḷa hr̥dayado ḷokkalikkitu śōkapāvakavā nr̥pājujana

Report an error

ಅನುಜನದ್ಭುತ ಶೋಕರಸದಲಿ ಕೊನರಿತರಸನ ಮೋಹ ಕುರುಕುಲ ವನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ ನಿನಗಿದೇನುಬ್ಬೇಗವೀ ಹ ಸ್ತಿನ ಪುರದ ಸಾಮ್ರಾಜ್ಯಸಿರಿ ರಿಪು ಜನಪರಿಗೆ ಹುರುಡಿಸಳೆ ಹೇಳೆನುತೆತ್ತಿದನು ಹಣೆಯ

anujanadbhuta śōkarasadali konaritarasana mōha kurukula vanaparaśu kuḷḷirdanoyyane māniniya malagi ninagidēnubbēgavī ha stina purada sāmrājyasiri ripu janaparige huruḍisaḷe hēḷenutettidanu haṇeya

Report an error

ಸೆಳೆದು ಬಿಗಿಯಪ್ಪಿದನು ಲೋಚನ ಜಲವ ತೊಡೆದನು ಪಾಂಡುಪುತ್ರರು ಸೆಳೆದುಕೊಳ್ಳರೆ ನೆಲನನಕಟಾ ಮತ್ಪರೋಕ್ಷದಲಿ ಕುಲವನೀನುದ್ಧರಿಸು ಸೇಸೆಯ ತಳಿವೆ ನಾಮುಂದಿಟ್ಟು ಬರಿದಿ ನ್ನಳಲದಿರು ಪ್ರಾಯೋಪವೇಶವ ಬಿಡೆನು ನಾನೆಂದ

seḷedu bigiyappidanu lōcana jalava toḍedanu pāṃḍuputraru seḷedukoḷḷare nelananakaṭā matparōkṣadali kulavanīnuddharisu sēseya taḷive nāmuṃdiṭṭu baridi nnaḷaladiru prāyōpavēśava biḍenu nāneṃda

Report an error

ಅಳಿದರಳಿವೆ ಭವತ್ಪರೋಕ್ಷದೊ ಳುಳಿವೆನೇ ನಿನ್ನರಸಿ ಧರೆಗಾ ನಳುಪುವೆನೆ ನಿನ್ನಳಿವನೀಕ್ಷಿಸಿ ಧೈರ್ಯವೇ ತನಗೆ ನೆಲನ ಕುಂತಿಯ ಮಕ್ಕಳೇ ಐ ಕೊಳಲಿ ಮಾಣಲಿ ಸಿರಿಗೆ ಸೇಸೆಯ ತಳಿವರಿಗೆ ತಳಿ ನಿನ್ನ ಬಿಡದಿಅಹ್ ಭಾಷೆ ನನಗೆಂದ

aḷidaraḷive bhavatparōkṣado ḷuḷivenē ninnarasi dharegā naḷupuvene ninnaḷivanīkṣisi dhairyavē tanage nelana kuṃtiya makkaḷē ai koḷali māṇali sirige sēseya taḷivarige taḷi ninna biḍadiah bhāṣe nanageṃda

Report an error

ಧಾತುಗೆಡಲೇಕೀಸು ಕಾತೊಡೆ ಬೀತುಹೋಹುದು ಬೀತಮರನೇ ಕಾತಿಹುದಲೈ ಹತವಿಧಿಗೆ ವಿಪರೀತ ಕೃತಿ ಸಹಜ ಆತಗಳು ನಮಗುಪಕರಿಸಿ ವಿ ಖ್ಯಾತರಾದರು ಮರಳಿ ತಾವಿ ನ್ನಾತಗಳನಳಲಿಸುವುಪಾಯವ ಕಂಡೊಡೇನೆಂದ

dhātugeḍalēkīsu kātoḍe bītuhōhudu bītamaranē kātihudalai hatavidhige viparīta kr̥ti sahaja ātagaḷu namagupakarisi vi khyātarādaru maraḷi tāvi nnātagaḷanaḷalisuvupāyava kaṃḍoḍēneṃda

Report an error

ಮರುಳು ತಮ್ಮ ವೃಥಾ ಖಳಾಡಂ ಬರವಿದಲ್ಲದೆ ಪಾಂಡುಪುತ್ರರ ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು ಅರಮನೆಗೆ ನೀ ಹೋಗು ಹಸ್ತಿನ ಪುರಕೆ ನೀನರಸಾಗು ಮೋಹದ ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳೆಂದ

maruḷu tamma vr̥thā khaḷāḍaṃ baravidallade pāṃḍuputrara paribhavisaloḍabaḍuvarē vidurādi bāhiraru aramanege nī hōgu hastina purake nīnarasāgu mōhada maruḷutanavī kṣatradharmadoḷilla kēḷeṃda

Report an error

ಮಗಗೆ ಮುನಿವನು ತಂದೆ ತಂದೆಗೆ ಮಗ ಮುನಿವನನೊಡಹುಟ್ಟಿದರು ಬಲು ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯೆಯಿದು ಜಗದ ಪರಿವಿಡಿಯೆಮ್ಮೊಳಲ್ಲದೆ ಸೊಗಸಿ ರಾಜ್ಯವನಿತ್ತೆ ನೀನಿದ ಮಗುಚಿದೊಡೆ ಯೆನ್ನಾಣೆಯೆನುತಪ್ಪಿದನು ಸಹಭವನ

magage munivanu taṃde taṃdege maga munivananoḍahuṭṭidaru balu page kaṇā tammoḷage bhūpara khulla vidyeyidu jagada pariviḍiyemmoḷallade sogasi rājyavanitte nīnida magucidoḍe yennāṇeyenutappidanu sahabhavana

Report an error

ಭ್ರಾಂತಿಯೇಕೆ ಭವತ್ಪರೋಕ್ಷದೊ ಳಂತಕನ ಪುರವಲ್ಲದುರ್ವೀ ಕಾಂತೆಗಲುಪಿದೆನಾದರೊಡಹುಟ್ಟಿದನೆ ನಿಮ್ಮಡಿಯ ಸಂತವಿಡುವೀಮಾತು ಸಾಕಿ ನ್ನಂತಿರಲಿ ನಿಮಗೇನು ಹದನಾ ಯ್ತಂತರದೊಳಾ ಹದನನೀಕ್ಷಿಪೆನೆನುತ ಹೊರವಂಟ

bhrāṃtiyēke bhavatparōkṣado ḷaṃtakana puravalladurvī kāṃtegalupidenādaroḍahuṭṭidane nimmaḍiya saṃtaviḍuvīmātu sāki nnaṃtirali nimagēnu hadanā ytaṃtaradoḷā hadananīkṣipenenuta horavaṃṭa

Report an error

ಧರಣಿಪತಿ ಕೇಳ್ ಬಳಿಕ ಹಸ್ತಿನ ಪುರದ ನಿಖಿಳಶ್ರೇಣಿಕುಲ ನಾ ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ ಅರಸ ಬಿಜಯಂಗೈದು ನಮ್ಮನು ಹೊರೆವುದಲ್ಲದೊಡಾ ವನಾಂತರ ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ

dharaṇipati kēḷ baḷika hastina purada nikhiḷaśrēṇikula nā garika jana parivāra pāḍi pasāyta paurajana arasa bijayaṃgaidu nammanu horevudalladoḍā vanāṃtara varake nēmava koḍuvudeṃdoralidaru tamatamage

Report an error

ಪರಿಜನದೊಳವರವರ ಮುಖ್ಯರ ಕರೆಸಿದನು ದುಶ್ಯಾಸನನು ನಿಮ ಗರಸು ನೃಪನೀತಿಯಲಿ ಪಾಲಿಸುವನು ಮಹೀತಳವ ಧರೆಯನಾತಂಗಿತ್ತೆವೆಮಗೀ ಸುರನದೀ ತೀರದಲಿ ಕಾಶೀ ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ

parijanadoḷavaravara mukhyara karesidanu duśyāsananu nima garasu nr̥panītiyali pālisuvanu mahītaḷava dhareyanātaṃgittevemagī suranadī tīradali kāśī śvarana sannidhiyiravu ghaṭisidudeṃdanā bhūpa

Report an error

ರಾಯನೀಪರಿನುಡಿದು ಜನ ಸಮು ದಾಯವನು ಕಳುಹಿದನು ಸುಮನೋ ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ ದಾಯವಿದು ತಮಗೆಂದು ದೈತ್ಯನಿ ಕಾಯ ಬಂದು ರಸಾತಳಕೆ ಕುರು ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ

rāyanīparinuḍidu jana samu dāyavanu kaḷuhidanu sumanō bhūya sāpēkṣeya samādhiyoḷiralu rātriyali dāyavidu tamageṃdu daityani kāya baṃdu rasātaḷake kuru rāyananu koṃḍoydu tiḷuhidaravaru sāmadali

Report an error

ಅರಸ ನೀ ಪ್ರಾಯೋಪವೇಶದಿ ಮರಣ ದೀಕ್ಷಿತನಾದೆ ಗಡ ನಿ ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ ಸುರರು ಪಾಂಡುಕುಮಾರರಾಗವ ತರಸಿದರು ಗೆಲವವದಿರಿಗೆ ತಾ ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು

arasa nī prāyōpavēśadi maraṇa dīkṣitanāde gaḍa ni mmarasu kulakanucitava nenedai kāka balesidelā suraru pāṃḍukumārarāgava tarasidaru gelavavadirige tā viralu suḍalī daitya janmavaneṃdarā khaḷaru

Report an error

ಸಾಯದಿರು ನಿನಗಿಂದು ಮೊದಲು ಸ ಹಾಯರಾವಾವಹಕೆ ರಿಪುಕೌಂ ತೇಯರಿಗೆ ಕೊಡಬೇಡವಿನ್ನು ತಿಲಾಂಶ ಭೂತಳವ ಲಾಯ ಸಹಿತೀ ಗಜರಥಾಶ್ವ ನಿ ಕಾಯ ನಿನ್ನದು ದೈತ್ಯ ಸಚಿವ ಪ ಸಾಯತರು ನಿನ್ನವರು ಸಾವೆವು ನಿಮ್ಮ ಸಮರದಲಿ

sāyadiru ninagiṃdu modalu sa hāyarāvāvahake ripukauṃ tēyarige koḍabēḍavinnu tilāṃśa bhūtaḷava lāya sahitī gajarathāśva ni kāya ninnadu daitya saciva pa sāyataru ninnavaru sāvevu nimma samaradali

Report an error

ಮಾನವನು ನಾನಿನ್ನು ನೀವೋ ದಾನವರು ಗಂಧರ್ವರಿಂದಭಿ ಮಾನವೆನಗಕ್ಕಾಡಿ ಹೋಯಿತು ಹೇಳಲೇನದನು ಮಾನಿನಿಯ ಮೂದಲೆಯ ನಾ ಪವ ಮಾನ ಸುತನ ಸಗರ್ವ ವಚನವ ನೇನ ಹೇಳುವೆನೆನುತ ಸುಯ್ದನು ಕೌರವರ ರಾಯ

mānavanu nāninnu nīvō dānavaru gaṃdharvariṃdabhi mānavenagakkāḍi hōyitu hēḷalēnadanu māniniya mūdaleya nā pava māna sutana sagarva vacanava nēna hēḷuvenenuta suydanu kauravara rāya

Report an error

ನರರು ನೀವ್ ದಾನವರು ನಾವೆಂ ದಿರದಿರೊಡಹುಟ್ಟಿದರು ನಿಮಗಿ ನ್ನರಸ ವೇಳಾಯಿತರು ವೆಗ್ಗಳ ದೈತ್ಯ ಭಟರೆಲ್ಲ ಸುರಪುರದ ಸೂಳೆಯರ ಪಡಿಗವ ನಿರಿಸುವರು ಗಂಧರ್ವರವದಿರ ಕರುಳ ತಿಂಬೆವು ನಾವೆನುತ ಗರ್ಜಿಸಿತು ಖಳನಿಕರ

nararu nīv dānavaru nāveṃ diradiroḍahuṭṭidaru nimagi nnarasa vēḷāyitaru veggaḷa daitya bhaṭarella surapurada sūḷeyara paḍigava nirisuvaru gaṃdharvaravadira karuḷa tiṃbevu nāvenuta garjisitu khaḷanikara

Report an error

ಎಂದು ಭೂಪನ ತಿಳುಹಿ ಕಳುಹಲು ಬಂದು ಮರಳಿ ಮಹೀತಳಕೆ ತ ನ್ನಿಂದು ವದನೆಯ ಮಾತಿನಲಿ ನಿಂದವನು ತಾನಾಗಿ ಬಂದನರಮನೆಗಖಿಳಜನವಾ ನಂದ ರಸದಲಿ ಮುಳುಗೆ ಪುರದಲಿ ಸಂದಣಿಸಿದವು ಗುಡಿಗಳೊಸಗೆಯ ಲಳಿಯ ಲಗ್ಗೆಗಳ

eṃdu bhūpana tiḷuhi kaḷuhalu baṃdu maraḷi mahītaḷake ta nniṃdu vadaneya mātinali niṃdavanu tānāgi baṃdanaramanegakhiḷajanavā naṃda rasadali muḷuge puradali saṃdaṇisidavu guḍigaḷosageya laḷiya laggegaḷa

Report an error

ಮತ್ತೆ ನೆಗ್ಗಿತು ನಯವಧರ್ಮದ ಕುತ್ತುದಲೆ ನೆಗಹಿದುದು ಸತ್ಯದ ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ ನೆತ್ತಿಗಣ್ಣಾಯ್ತಧಮತೆಗೆ ನಗೆ ಯೊತ್ತಿ ತಾರಡಿ ಸುಜನಮಾರ್ಗವ ಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ

matte neggitu nayavadharmada kuttudale negahidudu satyada bittu huridudu paṭṭagaṭṭidudā kr̥taghnatege nettigaṇṇāytadhamatege nage yotti tāraḍi sujanamārgava kettudaṭamaṭavī suyōdhana saumanasyadali

Report an error

ಮರೆದು ಕಳೆದನು ಬಂದಲಜ್ಜೆಯ ಬರನ ದಿನವನು ಮುಂದಣುಪಹತಿ ಗುರುವ ದೈತ್ಯರ ಮೈತ್ರಿಯನು ನೆನೆ ನೆನೆದು ಹಿಗ್ಗಿದನು ಮುರಿದುದಿನ್ನೇ ನಹಿತ ದರ್ಪದ ಹೊರಿಗೆಯೆಂದುತ್ಸವದಲವನಿಪ ಮೆರೆದನಧ್ವರ ಶಾಲೆಯಲಿ ಮಾಡಿದ ಮಹಾಕ್ರತುವ

maredu kaḷedanu baṃdalajjeya barana dinavanu muṃdaṇupahati guruva daityara maitriyanu nene nenedu higgidanu muridudinnē nahita darpada horigeyeṃdutsavadalavanipa meredanadhvara śāleyali māḍida mahākratuva

Report an error

ಕೇಳಿದರು ಪಾಂಡವರು ಕುರು ಭೂ ಪಾಲಕನ ಸಂಕಲ್ಪವನು ಪಾ ತಾಳದಲಿ ಸುರವೈರಿ ವರ್ಗದ ಸತ್ಯ ಸಂಗತಿಯ ಮೇಲಣಧ್ವರ ಕರ್ಮವನು ನಗು ತಾಲಿಸಿದರಡಿಗಡಿಗೆ ಲಕ್ಷ್ಮೀ ಲೋಲನಂಘ್ರಿಯ ನೆನೆವುತಿದ್ದರು ವೀರ ನರಯಣನ

kēḷidaru pāṃḍavaru kuru bhū pālakana saṃkalpavanu pā tāḷadali suravairi vargada satya saṃgatiya mēlaṇadhvara karmavanu nagu tālisidaraḍigaḍige lakṣmī lōlanaṃghriya nenevutiddaru vīra narayaṇana

Report an error

Illustration: Verse & Place (Project-owned).