ರಾಯ ಪಾಂಡವ ಜೀವ ಭಕ್ತನಿ ಕಾಯ ಲಂಪಟನಮಲ ಯಾದವ ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ
rāya pāṃḍava jīva bhaktani kāya laṃpaṭanamala yādava rāya bijayaṃgaidanabhimanyuvina pariṇayake
ವಿರಾಟ ಪರ್ವ — ಸಂಧಿ ೧೦ · ವಿರಾಟ ಪರ್ವ — ಸಂಧಿ ೧೦
virāṭa parva — saṃdhi 10
The complete virata parva · sandhi 10 in Kannada.
85 passagesKannada with transliteration
Invocation
ರಾಯ ಪಾಂಡವ ಜೀವ ಭಕ್ತನಿ ಕಾಯ ಲಂಪಟನಮಲ ಯಾದವ ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ
rāya pāṃḍava jīva bhaktani kāya laṃpaṭanamala yādava rāya bijayaṃgaidanabhimanyuvina pariṇayake
ಕೇಳು ಜನಮೇಜಯ ಧರಿತ್ರೀ ಪಾಲ ಚರಿತಜ್ಞಾತವಾಸವ ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು ಮೇಲಣವರಭ್ಯುದಯವನು ಕೈ ಮೇಳವಿಸಿ ಕೊಡುವಂತೆ ಮೂಡಣ ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ
kēḷu janamējaya dharitrī pāla caritajñātavāsava bīḷukoṭṭaru bahaḷa haruṣadaliruḷa nūkidaru mēlaṇavarabhyudayavanu kai mēḷavisi koḍuvaṃte mūḍaṇa śaila mukhadali keṃpu suḷidudu bhānumaṃḍalada
ಏಳು ಕುದುರೆಯ ಖುರಪುಟದ ಕೆಂ ದೂಳಿಯೋ ಕುಂತೀ ಕುಮಾರಕ ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ ಹೇಳಲೇನು ಮಹೇಂದ್ರ ವರ ದಿ ಗ್ಬಾಲಕಿಯ ಬೈತಲೆಯ ಕುಂಕುಮ ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು
ēḷu kudureya khurapuṭada keṃ dūḷiyō kuṃtī kumāraka rēḷigeya tanirāgarasavubbarisi pasarisito hēḷalēnu mahēṃdra vara di gbālakiya baitaleya kuṃkuma jālavō hēḷenalu dinapana cūṇi raṃjisitu
ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು ಚಂದ್ರಕಾಂತಕೆ ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು ಕೆರಳಿ ನೈದಿಲ ಸಿರಿಯ ಸೂರೆಯ ತರಿಸಿದನು ರಿಪುರಾಯ ರಾಜ್ಯವ ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ
sarasijada parimaḷake tuṃbiya barava koṭṭanu caṃdrakāṃtake beraganittanu jakkavakkiya sereya biḍisidanu keraḷi naidila siriya sūreya tarisidanu ripurāya rājyava norasidanu ravi mūḍaṇādriyoḷittanōlagava
ಹರ ಹರ ಶ್ರೀಕಾಂತನೆನುತೈ ವರು ಕುಮಾರಕರುಪ್ಪವಡಿಸಿದ ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ ವರ ವಿಭೂಷಣ ಗಂಧ ಮಾಲ್ಯಾಂ ಬರದಿ ಪರಿವೃತರಾದರವನೀ ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ
hara hara śrīkāṃtanenutai varu kumārakaruppavaḍisida rari vidāraru māḍidaru māṃgalya majjanava vara vibhūṣaṇa gaṃdha mālyāṃ baradi parivr̥tarādaravanī surarigittaru dhēnu maṇi kanakādi vastugaḷa
ತಮದ ಗಂಟಲನೊಡೆದ ಹರುಷ ದ್ಯುಮಣಿ ಮಂಡಲದಂತೆ ಜೀವ ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ ವಿಮಲ ಬಹಳ ಕ್ಷತ್ರ ರಶ್ಮಿಗ ಳಮರಿ ದೆಸೆಗಳ ಬೆಳಗೆ ರಾಜೋ ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ
tamada gaṃṭalanoḍeda haruṣa dyumaṇi maṃḍaladaṃte jīva bhrameya kavacava kaḷedu hoḷe hoḷevātmanaṃdadali vimala bahaḷa kṣatra raśmiga ḷamari desegaḷa beḷage rājō ttama yudhiṣṭhira dēvanesedanu rāja tējadali
ಪರಮ ಸತ್ಯವ್ರತ ಮಹಾಕ್ರತು ವರದಲವಭೃತ ಮಜ್ಜನವ ವಿ ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ ಅರಸ ಬಂದನು ಮಣಿಖಚಿತ ಕೇ ಸರಿಯ ಪೀಠವನಡರಿದನು ನಿಜ ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ
parama satyavrata mahākratu varadalavabhr̥ta majjanava vi starisi bhīmādigaḷu sahita virāṭanaramanege arasa baṃdanu maṇikhacita kē sariya pīṭhavanaḍaridanu nija caraṇa sēveyalesedaroḍa huṭṭidaru paruṭavisi
ಅವನಿಪನ ಸಿಂಹಾಸನವನೇ ರುವ ಸಗರ್ವಿತರಾರು ನೋಡಿದ ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು ಇವರನೀಕ್ಷಿಸಿ ಕ್ಷಾತ್ರ ತೇಜವ ನವಗಡಿಸಲಂಜಿದರು ಹರಿ ತಂ ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ
avanipana siṃhāsanavanē ruva sagarvitarāru nōḍida ḍevegaḷurivudu hāyenuta kaṃcukigaḷaitaṃdu ivaranīkṣisi kṣātra tējava navagaḍisalaṃjidaru hari taṃ davadirebbisi binnavisidaru matsyabhūpatige
ಜೀಯ ಸಿಂಹಾಸನಕೆ ದಿವಿಜರ ರಾಯನೋ ಶಂಕರನೊ ಮೇಣ್ ನಾ ರಾಯಣನೊ ನರರಲ್ಲ ದೇವರು ಬಂದು ನೋಡುವುದು ಕಾಯಲಸದಳವೆಮಗೆನಲು ನಿ ರ್ದಾಯದಲಿ ನೆಲೆಗೊಂಡ ನಿರ್ಜರ ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ
jīya siṃhāsanake divijara rāyanō śaṃkarano mēṇ nā rāyaṇano nararalla dēvaru baṃdu nōḍuvudu kāyalasadaḷavemagenalu ni rdāyadali nelegoṃḍa nirjara rāyanāreṃdenutalāga virāṭa ciṃtisida
ಕರೆಸಿಕೊಂಡು ಪುರೋಹಿತನನು ತ್ತರನನಖಿಳ ಮಹಾಪ್ರಧಾನರ ನರಮನೆಯ ಹೊರವಂಟು ವೋಲಗಶಾಲೆಗೈತರುತ ಕರಗಿ ಸೂಸಿದ ಚಂದ್ರ ಬಿಂಬದ ಕಿರಣ ಲಹರಿಗಳೆನಲು ವಿವಿಧಾ ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ
karesikoṃḍu purōhitananu ttarananakhiḷa mahāpradhānara naramaneya horavaṃṭu vōlagaśālegaitaruta karagi sūsida caṃdra biṃbada kiraṇa laharigaḷenalu vividhā bharaṇa muktā prabheya kaṃḍanu nr̥pati dūradali
ಹರನ ನಾಲಕು ಮುಖದ ಮಧ್ಯ ಸ್ಫುರಿತದೀಶಾನನದೊಲಿರೆ ಸೋ ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ ಅರಸಿಯನು ವಾಮದಲಿ ವಿವಿಧಾ ಭರಣ ಮಣಿ ರಶ್ಮಿಗಳ ಹೊದರಿನ ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ
harana nālaku mukhada madhya sphuritadīśānanadolire sō dara catuṣṭaya madhyadali kaṃḍanu yudhiṣṭhirana arasiyanu vāmadali vividhā bharaṇa maṇi raśmigaḷa hodarina horaḷiyali kaṇṇāli kōraisidavu nimiṣadali
ಮೇಳವೇ ಫಡ ಮನದ ಮತ್ಸರ ಕಾಲಿಡಲು ತೆರಹಿಲ್ಲ ಮನುಜರ ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು ಆಲಿಗಳು ಮೇಲಿಕ್ಕಲಮ್ಮವು ಶೂಲಪಾಣಿಯ ಪರಮ ತೇಜದ ಚೂಳಿಯೋ ಶಿವ ಶಿವ ಎನ್ನುತ್ತ ವಿರಾಟ ಬೆರಗಾದ
mēḷavē phaḍa manada matsara kāliḍalu terahilla manujara hōluveya nāṭakada nirjara maṃḍalēśvararu āligaḷu mēlikkalammavu śūlapāṇiya parama tējada cūḷiyō śiva śiva ennutta virāṭa beragāda
ವಲಲ ಕಂಕ ಬೃಹನ್ನಳೆಯ ಮೈ ಸುಳಿವ ಹೋಲುವರೆಂದು ಕೆಲಬರು ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು ತಿಳಿಯಲರಿದೆಮಗೆಂದು ಕೆಲಬರು ತಳವೆಳಗುಗೊಳುತಿರಲು ಮಂದಿಯ ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ
valala kaṃka br̥hannaḷeya mai suḷiva hōluvareṃdu kelabaru kelaridettaṇa nararu tege suralōka pālakaru tiḷiyalaridemageṃdu kelabaru taḷaveḷagugoḷutiralu maṃdiya kelake nūkiye taṃdeguttara naguta kaimugida
ತಾತ ಬಿನ್ನಹ ನಿನ್ನೆ ವೈರಿ ವ್ರಾತವನು ಗೆಲಿದಾತನೀ ತೋ ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು ಈತ ನಕುಲನು ವಾಮದಲಿ ನಿಂ ದಾತ ಸಹದೇವಾಂಕನನಿಬರಿ ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ
tāta binnaha ninne vairi vrātavanu gelidātanī tō rpātanītana muṃde merevava kīcakāṃtakanu īta nakulanu vāmadali niṃ dāta sahadēvāṃkananibari gīta hiriyanu dharmanaṃdananeṃdu tōrisida
ರಮಣಿಯೈವರಿಗೀಕೆ ಕೆಲದಲಿ ಕಮಲಮುಖಿಯನು ನೋಡು ತಾವಿವ ರಮಳ ಗುಣ ಗಂಭೀರ ರಾಯರು ಪಾಂಡು ನಂದನರು ನಮಗೆ ಭಾರಿಯ ಭಾಗ್ಯಲಕ್ಷ್ಮಿಯ ಮಮತೆಯಾಯ್ತಿನ್ನೇನು ನೃಪಪದ ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ
ramaṇiyaivarigīke keladali kamalamukhiyanu nōḍu tāviva ramaḷa guṇa gaṃbhīra rāyaru pāṃḍu naṃdanaru namage bhāriya bhāgyalakṣmiya mamateyāytinnēnu nr̥papada kamaladali bīḷuvevu naḍe naḍe dhanyaraheveṃda
ಈತನೇ ಧರ್ಮಜನು ದಿಟ ತಾ ನೀತನೇ ಪವನಜನು ನಿಶ್ಚಯ ವೀತನೇ ಫಲುಗುಣನು ಮಾದ್ರೀತನುಜರೇ ಇವರು ಈ ತಳೋದರಿ ದ್ರುಪದ ಸುತೆಯೇ ಕೌತುಕವಲೇ ಭುವನಜನ ವಿ ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ
ītanē dharmajanu diṭa tā nītanē pavanajanu niścaya vītanē phaluguṇanu mādrītanujarē ivaru ī taḷōdari drupada suteyē kautukavalē bhuvanajana vi khyātarelliṃdelli mūḍidarenuta beragāda
ವರುಷವೊಂದಜ್ಞಾತ ವಾಸವ ನಿರದೆ ನೂಕಿದರಿಲ್ಲಿ ಬಳಕೆಯ ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ ಮರುಳನಂತಿರೆ ಜಗಕೆ ತೋರನೆ ಪರಮ ತತ್ವಜ್ಞಾನಿ ನಮ್ಮೀ ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು
varuṣavoṃdajñāta vāsava nirade nūkidarilli baḷakeya horeya hesaravu bēre naḍavaḷiyaṃgavadu bēre maruḷanaṃtire jagake tōrane parama tatvajñāni nammī yarasutana phalavāytu naḍeyeṃdanu kumārakanu
ದರುಶನಕೆ ಮಣಿ ರತುನ ಕನಕವ ತರಿಸಿ ಮುದದಲಿ ಮುಳುಗಿ ನಿಜ ಪರಿ ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ ವರ ನೃಪಾಲ ತ್ರಾಹಿ ಭುವನೇ ಶ್ವರ ಪರಿತ್ರಾಯಸ್ವ ಕರುಣಿಸು ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ
daruśanake maṇi ratuna kanakava tarisi mudadali muḷugi nija pari kara sahita maiyikkidanu kāṇikeyanoppisida vara nr̥pāla trāhi bhuvanē śvara paritrāyasva karuṇisu karuṇiseṃdaṃghrigaḷa hiḍidanu matsya bhūpāla
ಬಗೆದೆನಪರಾಧವನು ಕರುಣಾ ಳುಗಳ ಬಲ್ಲಹ ನೀನು ನಿನ್ನಂ ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ ಮಿಗೆ ಭಕುತಿ ಭಾವದಲಿ ನಿಜ ಮಂ ತ್ರಿಗಳು ಮಕ್ಕಳು ಸಹಿತ ಮನ ನಂ ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ
bagedenaparādhavanu karuṇā ḷugaḷa ballaha nīnu ninnaṃ ghrigaḷigī tale baṃṭa nīnida kāyabēkenuta mige bhakuti bhāvadali nija maṃ trigaḷu makkaḷu sahita mana naṃ bugeya meredanu matsya bhūpa mahīśaridirinali
ಆ ಸುದೇಷ್ಣೆ ಕುಮಾರಿಯೊಡನೆ ವಿ ಳಾಸಿನೀಜನ ಸಹಿತ ರಾಣೀ ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು ಆ ಸಕಲ ಪರಿವಾರ ಪುರಜನ ದೇಶಜನ ಕಾಣಿಕೆಯನಿತ್ತು ಮ ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ
ā sudēṣṇe kumāriyoḍane vi ḷāsinījana sahita rāṇī vāsadallige baṃdu kāṇike koṭṭu poḍavaṃṭu ā sakala parivāra purajana dēśajana kāṇikeyanittu ma hīśanige maiyikki kaṃḍudu bahaḷa haruṣadali
ಮುಗುಳು ನಗೆಯಲಿ ಭೀಮ ಪಾರ್ಥರ ಮೊಗವ ನೋಡಿದನವನಿಪತಿ ಕೈ ಮುಗಿದು ತಲೆವಾಗಿದರು ತಮ್ಮಂದಿರು ಮಹಿಪತಿಗೆ ತೆಗೆಸಿದರು ಕಾಣಿಕೆಯನಾ ಮಂ ತ್ರಿಗಳನಾ ಪರಿವಾರವನು ದೃಗು ಯುಗದ ಕರುಣಾ ರಸದಲನಿಬರ ಹೊರೆದು ಮನ್ನಿಸಿದ
muguḷu nageyali bhīma pārthara mogava nōḍidanavanipati kai mugidu talevāgidaru tammaṃdiru mahipatige tegesidaru kāṇikeyanā maṃ trigaḷanā parivāravanu dr̥gu yugada karuṇā rasadalanibara horedu mannisida
ಶಿರವನೆತ್ತಿ ವಿರಾಟ ಭೂಪನ ಕರೆದು ಹತ್ತಿರ ಪೀಠದಲಿ ಕು ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು ಪರಮ ಸುಕೃತವಲಾ ಧರಾಧೀ ಶ್ವರನ ದರುಶನವಾಯ್ತು ಧನ್ಯರು ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ
śiravanetti virāṭa bhūpana karedu hattira pīṭhadali ku ḷḷirisaloḍe muricidanu keladali gaddugeya saridu parama sukr̥tavalā dharādhī śvarana daruśanavāytu dhanyaru dhareyoḷemaginnāru sariyeṃdanu virāṭa nr̥pa
ದೇಶ ನಿಮ್ಮದು ನಗರ ಹೆಚ್ಚಿದ ಕೋಶ ನಿಮ್ಮದು ನನ್ನ ಜೀವ ವಿ ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ ಈ ಸಮಂಜಸ ದಿವಸದಲಿ ಸಿಂ ಹಾಸನದಲಭಿಷೇಕವನು ಭೂ ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ
dēśa nimmadu nagara heccida kōśa nimmadu nanna jīva vi ḷāsa nimmadu salahabēhudu binnahada hadana ī samaṃjasa divasadali siṃ hāsanadalabhiṣēkavanu bhū mīśa vistarisuvenu cittaiseṃdanā bhūpa
ಎನಲು ನಗುತೆಂದನು ಮಹೀಪತಿ ವಿನಯ ಮಧುರ ರಸಾಭಿಷೇಕವ ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು ಜನವಿದೆಮ್ಮದು ನೀನು ನಮ್ಮಾ ತನು ಧರಿತ್ರಿಯಿದೆಮ್ಮದೆಂಬೀ ನೆನಹು ತಾನುಪಚಾರ ನಮಗೇಕೆಂದನಾ ಭೂಪ
enalu naguteṃdanu mahīpati vinaya madhura rasābhiṣēkava nenage māḍide sāku punaruktābhiṣēkavadu janavidemmadu nīnu nammā tanu dharitriyidemmadeṃbī nenahu tānupacāra namagēkeṃdanā bhūpa
ನೊಂದವರು ಭೀಮಾರ್ಜುನರು ಹಗೆ ಯಿಂದ ಹಳುವವ ಹೊಕ್ಕು ಮನಸಿನ ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ ಕೊಂದು ಕಳದಲಿ ಮತ್ತೆ ಗಜ ಪುರಿ ಗೆಂದು ಗಮಿಸುವೆವೆಂಬ ತವಕಿಗ ರಿಂದು ತಾನೇ ಬಲ್ಲರೆಂದನು ಧರ್ಮನಂದನನು
noṃdavaru bhīmārjunaru hage yiṃda haḷuvava hokku manasina kaṃdu kasarike hōgadā duryōdhanādigaḷa koṃdu kaḷadali matte gaja puri geṃdu gamisuveveṃba tavakiga riṃdu tānē ballareṃdanu dharmanaṃdananu
ಎಂದನುತ್ತರನರಸನಂಘ್ರಿಯೊ ಳಂದು ಮಕುಟವ ಚಾಚಿ ಬಿನ್ನಹ ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ ಎಂದಡೇಳೇಳೆಂದು ನಸು ನಗೆ ಯಿಂದ ಪಾರ್ಥನ ನೋಡೆ ಕೈ ಮುಗಿ ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ
eṃdanuttaranarasanaṃghriyo ḷaṃdu makuṭava cāci binnaha viṃdu nēmava koḍi kumāriyanīvenarjunage eṃdaḍēḷēḷeṃdu nasu nage yiṃda pārthana nōḍe kai mugi deṃdanātanu manada niścayavanu yudhiṣṭhirage
ವರುಷವಿವಳಲಿ ನಾಟ್ಯ ವಿದ್ಯೆಯ ಪರುಟವಿಸಿದೆನು ತಂದೆಯಂತೀ ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ ಗುರುತನದ ಗರುವಾಯಿಯೆತ್ತಲು ಅರಸಿಯೆಂಬುದಿದಾವ ಮತವೀ ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ
varuṣavivaḷali nāṭya vidyeya paruṭavisidenu taṃdeyaṃtī taruṇi bhajisidaḷā prakāra rahasya dēśadali gurutanada garuvāyiyettalu arasiyeṃbudidāva matavī vara kumāriyanīvaḍabhimanyuvige koḍaleṃda
ಎವಗೆ ನೀವೇನಾತನೇನು ತ್ಸವದೊಳಾಗಲಿಯೆನೆ ವಿರಾಟನ ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ ಎವಗೆ ಪರಮಸ್ವಾಮಿಯೆಮ್ಮು ತ್ಸವದ ನೆಲೆಯೆಮ್ಮೈವರಸು ಯಾ ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ
evage nīvēnātanēnu tsavadoḷāgaliyene virāṭana navanipati mannisidanittanu naguta vīḷeyava evage paramasvāmiyemmu tsavada neleyemmaivarasu yā dava śirōmaṇi kr̥ṣṇanabhimatavemma mataveṃda
ಪೊಡವಿಯೊಡೆತನವೆಮಗೆ ಕ ಟ್ಟೊಡೆಯ ಕೃಷ್ಣನು ಕೃಷ್ಣನೊಡಬ ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು ಒಡಬಡಲಿ ಮೇಣಿರಲಿ ಗುರು ನಿ ಮ್ಮಡಿ ಮುರಾರಿಯ ತೋರಿಸುವಿರಾ ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ
poḍaviyoḍetanavemage ka ṭṭoḍeya kr̥ṣṇanu kr̥ṣṇanoḍaba ṭṭoḍe vivāha niraṃtarāyavu ciṃte bēḍenalu oḍabaḍali mēṇirali guru ni mmaḍi murāriya tōrisuvirā doḍe kr̥tārthanu tānenuta higgidanu matsya nr̥pa
ಪರಿಪರಿಯ ಪಾವುಡವ ಕಟ್ಟಿಸಿ ಹರುಷದಲಿ ಬಿನ್ನಹದ ವೋಲೆಯ ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ ಚರರು ಪಯಣದ ಮೇಲೆ ಪಯಣದ ಭರದಿ ಬಂದರು ಕೃಷ್ಣರಾಯನ ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ
paripariya pāvuḍava kaṭṭisi haruṣadali binnahada vōleya baresidanu vēgāyla dūtaranaṭṭidanu bhūpa cararu payaṇada mēle payaṇada bharadi baṃdaru kr̥ṣṇarāyana purake paritōṣadali hokkaru rāja maṃdirava
ಬರವ ಬಿನ್ನಹ ಮಾಡೆ ಪಡಿಹಾ ರರು ಮುರಾರಿಯ ನೇಮದಲಿ ಚಾ ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ ದರುಶನವ ಮಾಡುತ್ತ ಚರಣಾಂ ಬುರುಹದಲಿ ಮೈಯಿಕ್ಕಿ ದೇವನ ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ
barava binnaha māḍe paḍihā raru murāriya nēmadali cā raranu hogisalu baṃdu hokkaru kr̥ṣṇanōlagava daruśanava māḍutta caraṇāṃ buruhadali maiyikki dēvana horeyaliḷuhidarivaru kaḷuhida binnavattaḷeya
ನಸುನಗುತ ಮುರವೈರಿ ಮಿಗೆ ಮ ನ್ನಿಸಿದನವರನು ಪಾಂಡು ತನಯರ ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು ಕುಶಲರನಿಬರು ಜೀಯ ಭಕ್ತ ವ್ಯಸನ ಭಾರವು ನಿಮ್ಮಲಿರೆ ಜೀ ವಿಸುವುದರಿದೇ ಪಾಂಡು ನಂದನರೆಂದರಾ ಚರರು
nasunaguta muravairi mige ma nnisidanavaranu pāṃḍu tanayara kuśalavanu durupadiya sukṣēmavanu besagoḷalu kuśalaranibaru jīya bhakta vyasana bhāravu nimmalire jī visuvudaridē pāṃḍu naṃdanareṃdarā cararu
ಕಳುಹಿದುಡುಗೊರೆ ಜೀಯ ನಿಮ್ಮಡಿ ಗಳಿಗೆ ರಾಣೀವಾಸ ವರ್ಗಕೆ ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ ಕುಲ ಗುರುಗಳಕ್ರೂರನುದ್ಧವ ಬಲುಭುಜನು ಕೃತವರ್ಮ ಸಾತ್ಯಕಿ ಲಲಿತ ಸಾಂಬ ಕುಮಾರ ಕಂದರ್ಪಾನಿರುದ್ಧರಿಗೆ
kaḷuhiduḍugore jīya nimmaḍi gaḷige rāṇīvāsa vargake balage vasudēvarige dēvakiyugrasēnarige kula gurugaḷakrūranuddhava balubhujanu kr̥tavarma sātyaki lalita sāṃba kumāra kaṃdarpāniruddharige
ಎನಲು ನಸುನಗೆಯಿಂದ ಕುಂತಿಯ ತನುಜರಟ್ಟಿದ ಪಾವುಡಂಗಳ ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ ದನುಜಹರನೀಕ್ಷಿಸಲು ಲಿಖಿತವ ನನುನಯದೊಳಳವಡಿಸಿ ಬಿನ್ನಹ ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ
enalu nasunageyiṃda kuṃtiya tanujaraṭṭida pāvuḍaṃgaḷa nanituvanu tegesidanu keladali saṃdhi vigrahiya danujaharanīkṣisalu likhitava nanunayadoḷaḷavaḍisi binnaha venuta nēmava koṃḍu kaḷakaḷavaḍage vācisida
ಸ್ವಸ್ತಿ ದಾನವರಾಯಕುಂಜರ ಮಸ್ತಕಾಂಕುಶ ಖೇಲನಾ ಪರಿ ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ ಹಸ್ತಕಲಿತ ಸುದರುಶನೋರ್ಧ್ವಗ ಭಸ್ತಿಲವಶಮಿತಾರ್ಕ ಪರಿವೃಢ ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ
svasti dānavarāyakuṃjara mastakāṃkuśa khēlanā pari yasta yadukula siṃha saṃhr̥ta janmaduritabhaya hastakalita sudaruśanōrdhvaga bhastilavaśamitārka parivr̥ḍha vistaraṇa cittaisu kuṃtiya sutara binnapava
ದೇವ ನಿಮ್ಮಡಿಗಳ ಕೃಪಾ ಸಂ ಜೀವನಿಯಲೆಮ್ಮಸುಗಳೊಡಲಿನ ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ ಈ ವರುಷದಜ್ಞಾತವಾಸ ಗ ತಾವಶೇಷಣವಾಯ್ತು ಕಂಗಳಿ ಗೀವುದವಯವ ದರುಶನಾಮೃತಪಾನ ಸಂಪದವ
dēva nimmaḍigaḷa kr̥pā saṃ jīvaniyalemmasugaḷoḍalina ṭhāva meccidavodedu hāydavu vipina maṃdirava ī varuṣadajñātavāsa ga tāvaśēṣaṇavāytu kaṃgaḷi gīvudavayava daruśanāmr̥tapāna saṃpadava
ದಾಟಿದೆವು ನುಡಿದವಧಿಯನು ವೈ ರಾಟ ಪುರದಲಿ ತುರುವಿಡಿದು ಮೈ ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ ತೋಟಿ ಜಯಿಸಿದೊಡೆಮ್ಮನರಿದು ವಿ ರಾಟ ಮನ್ನಿಸಿ ತನ್ನ ಮಗಳ ಕಿ ರೀಟಿ ತನಯಂಗೀವ ಭರವಿದೆ ದೇವರವಧರಿಸಿ
dāṭidevu nuḍidavadhiyanu vai rāṭa puradali turuviḍidu mai nōṭakōsuga baṃdu nuggāyittu kurusēne tōṭi jayisidoḍemmanaridu vi rāṭa mannisi tanna magaḷa ki rīṭi tanayaṃgīva bharavide dēvaravadharisi
ಮದುವೆಯೆಂಬುದು ನೆವ ನಿಜ ಶ್ರೀ ಪದವ ತೋರಿಸಬೇಕು ವನ ವಾ ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ ಕದಡು ಹೋಗಲು ಕಾಣಬೇಹುದು ಹದುಳವಿಟ್ಟೆಮಗುಚಿತ ವಚನದ ಹದವಳೆಯಲುತ್ಸಾಹಸಸಿಯನು ದೇವ ಸಲಹುವುದು
maduveyeṃbudu neva nija śrī padava tōrisabēku vana vā sada pariklēśānu saṃtāpavanu bīḷkoḍisi kadaḍu hōgalu kāṇabēhudu haduḷaviṭṭemagucita vacanada hadavaḷeyalutsāhasasiyanu dēva salahuvudu
ಕರುಣಿ ಬಿಜಯಂಗೈದು ಭಕ್ತರ ಹೊರೆಯ ಬೇಹುದು ಬೇಡಿಕೊಂಬೆನು ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ ಚರಣಭಜಕ ಕುಟುಂಬನೆಂಬೀ ಬಿರುದ ಪಾಲಿಸಿ ಬಿನ್ನಹವನವ ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು
karuṇi bijayaṃgaidu bhaktara horeya bēhudu bēḍikoṃbenu arasalēkeḷegaṃdi tāytānarasuvaṃdadali caraṇabhajaka kuṭuṃbaneṃbī biruda pālisi binnahavanava dharisi kāṇisi koḍuvudemage mahā prasādavanu
ಕೇಳಿ ಹರುಷಿತನಾಗಿ ಕಡು ಕರು ಣಾಳು ಹೊಂಪುಳಿಯೋಗಿ ಭಕ್ತರ ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು ಕೇಳಿದೆವೆ ಹರ ಹರ ಯುಧಿಷ್ಠಿರ ನೇಳಿಗೆಯನಾ ಕೌರವೇಶ್ವರ ನೂಳಿಗವನೆನುತಸುರರಿಪು ನೋಡಿದನು ಕೆಲಬಲನ
kēḷi haruṣitanāgi kaḍu karu ṇāḷu hoṃpuḷiyōgi bhaktara mēlaṇolavina bahaḷa parama snēha pasarisitu kēḷideve hara hara yudhiṣṭhira nēḷigeyanā kauravēśvara nūḷigavanenutasuraripu nōḍidanu kelabalana
ಚಿಂತೆ ಬೀತುದು ಪಾಂಡು ಮಾವನ ಸಂತತಿಗಳಜ್ಞಾತ ವಾಸವ ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು ಕುಂತಿ ದೇವಿಯರುಮ್ಮಳಿಸೆ ನಾ ವೆಂತು ಬದುಕುವೆವಕಟೆನುತ್ತ ನಿ ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ
ciṃte bītudu pāṃḍu māvana saṃtatigaḷajñāta vāsava neṃtu paṃthada mēle kaḷedaro namma puṇyavidu kuṃti dēviyarummaḷise nā veṃtu badukuvevakaṭenutta ni raṃtaravu maruguvanu boppanu śiva śivāyeṃda
ಭವಣಿಗೆಯ ಬಂದಡವಿಯಲಿ ಪಾಂ ಡವರು ನವೆದರು ರಾಜ್ಯವನು ಯಾ ದವರು ನಾವನುಭವಿಸುತಿದ್ದೆವು ನವೆದರಿನ್ನಬರ ಅವರ ಸೊಗಸೇ ನಮ್ಮ ಸೊಗಸುಗ ಳವರ ದುಗುಡವೆ ನಮ್ಮದದರಿಂ ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ
bhavaṇigeya baṃdaḍaviyali pāṃ ḍavaru navedaru rājyavanu yā davaru nāvanubhavisutiddevu navedarinnabara avara sogasē namma sogasuga ḷavara duguḍave nammadadariṃ davara vimaḷābhyudaya namageṃdasuraripu nuḍida
ಕಾಲ ಕೈಗೂಡುವೊಡೆ ಲೇಸಿನ ಮೇಲೆ ಲೇಸುಗಳೊದಗುವವು ಭೂ ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು ಮೇಲೆ ತಂಗಿಯ ಮಗನ ಮದುವೆ ವಿ ಶಾಲ ಸುಖವದು ನಿಖಿಳ ಯಾದವ ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ
kāla kaigūḍuvoḍe lēsina mēle lēsugaḷodaguvavu bhū pāla kuṃtiya sutara beḷavige modala maṃgaḷavu mēle taṃgiya magana maduve vi śāla sukhavadu nikhiḷa yādava jāla payaṇava māḍaleṃdasurāri nēmisida
ಚರರಿಗುಡುಗೊರೆ ಗಂಧ ನಿಖಿಲಾ ಭರಣ ಕತ್ತುರಿ ಕರ್ಪುರವನಿ ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ ಮರಳಿ ದೂತರು ಬಂದು ಮತ್ಸ್ಯನ ಪುರವ ಹೊಕ್ಕರು ಕೃಷ್ಣರಾಯನ ಕರುಣದಳತೆಯ ಬಿನ್ನವಿಸಿದರು ಪಾಂಡು ತನಯರಿಗೆ
carariguḍugore gaṃdha nikhilā bharaṇa katturi karpuravani ttaridiśāpaṭa bīḷugoṭṭanu rāyasava baresi maraḷi dūtaru baṃdu matsyana purava hokkaru kr̥ṣṇarāyana karuṇadaḷateya binnavisidaru pāṃḍu tanayarige
ಬಳಿಕ ಸುಮುಹೂರ್ತದಲಿ ಮತ್ಸ್ಯನ ಹೊಳಲ ಹೊರವಂಟುತ್ತರ ದಿಶಾ ವಳಯದಲಿ ರಚಿಸಿದರುಪಪ್ಲವ್ಯಾಖ್ಯ ಪುರವರವ ನೆಲನಗಲದಲಿ ಕಟ್ಟಿ ಕೇರಿಯ ನಳವಡಿಸಿದರು ನಿಖಿಳ ನೃಪರಿಗೆ ಬಳಿಯನಟ್ಟಿದನುತ್ತರೋತ್ತರವಾದುದಿವರುದಯ
baḷika sumuhūrtadali matsyana hoḷala horavaṃṭuttara diśā vaḷayadali racisidarupaplavyākhya puravarava nelanagaladali kaṭṭi kēriya naḷavaḍisidaru nikhiḷa nr̥parige baḷiyanaṭṭidanuttarōttaravādudivarudaya
ಜೋಳಿ ಹರಿದವು ನಿಖಿಳ ರಾಯರಿ ಗೋಲೆಯುಡುಗೊರೆಯಿಕ್ಕಿದವು ಪಾಂ ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ ನೀಲನು ಯುಧಾಮನ್ಯು ಸಮರ ಕ ರಾಳ ಧೃಷ್ಟದ್ಯುಮ್ನ ಕೀರ್ತಿ ವಿ ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ
jōḷi haridavu nikhiḷa rāyari gōleyuḍugoreyikkidavu pāṃ cālapati horavaṃṭa mūrakṣōṇi bala sahita nīlanu yudhāmanyu samara ka rāḷa dhr̥ṣṭadyumna kīrti vi śāla dhīra śikhaṃḍi sahitā drupadanaitaṃda
ಇದಿರುಗೊಂಡರು ಹರುಷದಲಿ ದುರು ಪದಿಯ ಬಾಂಧವ ಪೈಕವನು ಮಿಗೆ ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ ಒದಗಿತಖಿಳಕ್ಷೋಹಿಣಿ ಬಲ ಸಂ ಪದವನುನ್ನತ ವಸ್ತುಗಳ ಸೊಂ ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ
idirugoṃḍaru haruṣadali duru padiya bāṃdhava paikavanu mige mudadi kāṇisikoṃḍarakhiḷa mahā mahīśvarara odagitakhiḷakṣōhiṇi bala saṃ padavanunnata vastugaḷa soṃ podavidavu kaigaidu maduveya maṃgaḷābhyudaya
ದೇವನೀ ಬಹನೆಂದು ಬಂದರು ದಾವಣಿಯ ಹವಣರಿದು ಬಳಿಕ ಮ ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ ಹೂವಲಿಯ ವೀಧಿಗಳ ನವ ರ ತ್ನಾವಳಿಯ ಸೂಸಕದ ಭದ್ರದ ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು
dēvanī bahaneṃdu baṃdaru dāvaṇiya havaṇaridu baḷika ma hā viḷāsadaḷoppaviṭṭaru tamma nagarigaḷa hūvaliya vīdhigaḷa nava ra tnāvaḷiya sūsakada bhadrada lōvegaḷa laṃbaḷadalesedavu kēri kērigaḷu
ಚಾರುತರ ಕತ್ತುರಿಯ ಸಾದಿನ ಸಾರಣೆಯ ಕುಂಕುಮದ ರಸಗಳ ಕಾರಣೆಯ ನವಚಿತ್ರಪತ್ರದ ಬಹಳ ಭಿತ್ತಿಗಳ ಓರಣದ ಬೀದಿಗಳ ತಳಿಗೆಯ ತೋರಣದ ಹೊಂಜಗುಲಿಗಳ ಪ ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು
cārutara katturiya sādina sāraṇeya kuṃkumada rasagaḷa kāraṇeya navacitrapatrada bahaḷa bhittigaḷa ōraṇada bīdigaḷa taḷigeya tōraṇada hoṃjaguligaḷa pa nnīra caḷeyada racaneyali mane manegaḷoppidavu
ಕಟ್ಟಿದವು ಗುಡಿ ಮನೆಗಳಲಿ ಮೇ ಲ್ಕಟ್ಟು ಬಿಗಿದವು ಪುರದ ನಾರಿಯ ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ ಇಟ್ಟಣಿಸಿ ಗಜ ವಾಜಿ ರಥ ಸಾ ಲಿಟ್ಟು ತೋರುವ ದನುಜರಾಯ ಘ ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು
kaṭṭidavu guḍi manegaḷali mē lkaṭṭu bigidavu purada nāriya ruṭṭu toṭṭaru kaḷaśa kannaḍi sahita dēśiyali iṭṭaṇisi gaja vāji ratha sā liṭṭu tōruva danujarāya gha raṭṭananu naḍedidirugoṃḍaru pāṃḍu naṃdanaru
ಕಳಶ ಕನ್ನಡಿ ವಾದ್ಯರವ ಮಂ ಗಳ ಮಹಾಂಬುಧಿ ಮಸಗಿದವೊಲು ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ ಹೊಳೆವ ಕಂಗಳ ಮುಖದ ಕಾಂತಿಯ ಮೊಲೆಗಳೊಡ್ಡಿನ ಮಂದ ಗಮನದ ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ
kaḷaśa kannaḍi vādyarava maṃ gaḷa mahāṃbudhi masagidavolu jvala patākāvaḷiya vimaḷacchatra cāmarada hoḷeva kaṃgaḷa mukhada kāṃtiya molegaḷoḍḍina maṃda gamanada taḷida musukina mauḷikātiyaraiditogginali
ಹೊಳಹು ಮಿಗೆ ದೂರದಲಿ ಗರುಡನ ಹಳವಿಗೆಯ ಕಂಡಂದಣಂಗಳ ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು ಬಳಿಕ ಭೂಪರು ಕಾಲು ನಡೆಯಲಿ ನಲಿದು ಬರುತಿರಲಾನೆಯಿಂದಿಳೆ ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ
hoḷahu mige dūradali garuḍana haḷavigeya kaṃḍaṃdaṇaṃgaḷa niḷidu maiyikkidaru drupada virāṭa pāṃḍavaru baḷika bhūparu kālu naḍeyali nalidu barutiralāneyiṃdiḷe giḷidu bijayaṃgaidanasurārāti karuṇadali
ಇತ್ತನವರಿಗೆ ಸಮಯವನು ದೇ ವೋತ್ತಮನು ನಿಗಮೌಘವರಸಿದ ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ ಹೆತ್ತ ಮಕ್ಕಳು ನಿಲಲಿ ಭಕ್ತರ ನಿತ್ತ ಕರೆ ನೆನೆವರಿಗೆ ತನ್ನನು ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ
ittanavarige samayavanu dē vōttamanu nigamaughavarasida ḍattalittalu sariva munigaḷa manake maigoḍada hetta makkaḷu nilali bhaktara nitta kare nenevarige tannanu tettu badukuveneṃba bōḷeyararasa naḍetaṃda
ಬಲದ ಪದಘಟ್ಟಣೆಯ ರಜದಿಂ ಬೆಳುಪಡಗಿದಂಬರದ ಮಾರ್ಗದ ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ ಕೆಲದ ಪಾಯವಧಾರುಗಳ ಕಳ ಕಳದ ಕರುಣಾರಸವ ಸೂಸುವ ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ
balada padaghaṭṭaṇeya rajadiṃ beḷupaḍagidaṃbarada mārgada jhaḷada kirubemarugaḷa lalita kapōla maṃḍalava kelada pāyavadhārugaḷa kaḷa kaḷada karuṇārasava sūsuva melunageya sirimogada kr̥ṣṇana kaṃḍudā sēne
ಬಾಗಿದವು ಬರಿಕೈಗಳನು ಹಣೆ ಗಾಗಿ ಮುರುಹಿದವಾನೆಗಳು ತಲೆ ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು ತೂಗಿ ತನುವನು ಪುಳಕದಲಿ ಮನ ಲಾಗು ಮಿಗೆ ಮೈಮರೆದು ಹರುಷದ ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ
bāgidavu barikaigaḷanu haṇe gāgi muruhidavānegaḷu tale vāgi guḍigaṭṭidavu hēṣāravada tējigaḷu tūgi tanuvanu puḷakadali mana lāgu mige maimaredu haruṣada sāgaradalōlāḍutirdudu kūḍe taḷataṃtra
ಅಂಗನೆಯರರವಿಂದನಾಭನ ಮಂಗಳ ಶ್ರೀಮೂರ್ತಿ ಸುಧೆಯನು ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ ಅಂಗಜನ ಪೆತ್ತಯ್ಯ ನೀ ರೂ ಹಿಂಗೆ ಬಡವನೆಯೆನುತ ಮುರಹರ ನಂಗ ಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ
aṃganeyararaviṃdanābhana maṃgaḷa śrīmūrti sudheyanu kaṃgaḷali kuḍikuḍidu paḍeyaru matte daṇivugaḷa aṃgajana pettayya nī rū hiṃge baḍavaneyenuta murahara naṃga śōbheya baṃdiyali silukittu satinivaha
ಎರಡು ಸೇರೆಯ ತುಂಬಿ ರತ್ನವ ಸುರಿದು ಮೈಯಿಕ್ಕಿದನು ಭೂಪತಿ ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ ನರ ವೃಕೋದರ ನಕುಲ ಸಹದೇ ವರು ವಿರಾಟ ದ್ರುಪದ ಮೊದಲಾ ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ
eraḍu sēreya tuṃbi ratnava suridu maiyikkidanu bhūpati caraṇadali caturāsyajanakana vimaḷabhaktiyali nara vr̥kōdara nakula sahadē varu virāṭa drupada modalā gire samasta nr̥pālakaru maiyikkitogginali
ಶಿರವ ನೆಗಹಿ ಯುಧಿಷ್ಠಿರನ ಮೈ ಮುರಿಯಲೀಯದೆ ಕೃಷ್ಣನಪ್ಪಿದ ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು ಹರುಷದಲಿ ತೆಗೆದಪ್ಪಿ ಭೂಮೀ ಶ್ವರರ ಮನ್ನಿಸಿದನು ವಿಳಾಸಿನಿ ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ
śirava negahi yudhiṣṭhirana mai muriyalīyade kr̥ṣṇanappida nurutara prēmadali bhīmārjunara yamaḷaranu haruṣadali tegedappi bhūmī śvarara mannisidanu viḷāsini yara viḍāyiyalarasi kaṃḍaḷu baṃdu muraharana
ಕಾಣಿಕೆಯ ಕೈಕೊಂಡು ರಾಯನ ರಾಣಿಯನು ಮನ್ನಿಸಿದ ತನ್ನಯ ರಾಣಿವಾಸದ ಹೊರಗೆ ನೇಮವ ಕೊಟ್ಟು ಕಳುಹಿದನು ರಾಣಿ ರುಕುಮಿಣಿಯಾದಿಯಾದ ಕ್ಷೋಣಿಧರನರಸಿಯರನನಿಬರ ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ
kāṇikeya kaikoṃḍu rāyana rāṇiyanu mannisida tannaya rāṇivāsada horage nēmava koṭṭu kaḷuhidanu rāṇi rukumiṇiyādiyāda kṣōṇidharanarasiyarananibara kāṇikeya koṭṭeragi durupadi kaṃḍaḷolavinali
ದರುಶನವನೊಲಿದಿತ್ತು ವಸುದೇ ವರನು ದೇವಕಿ ದೇವಿಯರ ಸಂ ಕರುಷಣನ ಮಹದುಗ್ರಸೇನನ ಕಂಡನವನೀಶ ವರ ಸುಭದ್ರಾದೇವಿ ಭಾವಂ ದಿರಿಗೆ ವಂದಿಸಿದಳು ಕುಮಾರನು ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ
daruśanavanolidittu vasudē varanu dēvaki dēviyara saṃ karuṣaṇana mahadugrasēnana kaṃḍanavanīśa vara subhadrādēvi bhāvaṃ dirige vaṃdisidaḷu kumāranu haruṣadali bigiyappidanu abhimanyu pāṃḍavara
ಕೈದಣಿಯೆ ವಸುದೇವನಳಿಯನ ಮೈದಡವಿದನು ಮಗನೆ ಬನದೊಳ ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು ಬೈದು ಮಾಡುವುದೇನು ದುರುಪದಿ ಯೈದೆತನವುಂಟಾಗಿ ದುರಿತವ ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ
kaidaṇiye vasudēvanaḷiyana maidaḍavidanu magane banadoḷa goydu vidhi baṃdhisitalā sākinnu daivavanu baidu māḍuvudēnu durupadi yaidetanavuṃṭāgi duritava koydu naralōkakke baṃdiri namma puṇyadali
ಅರಸಿಯೈದೆತನಕ್ಕೆ ನಮ್ಮೈ ವರ ನಿಜಾಯುಷ್ಯಕ್ಕೆ ರಾಜ್ಯದ ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ ಸುರರು ಸರಿಯಿಲ್ಲೆಮಗೆ ಮಿಕ್ಕಿನ ನರರು ಗಣ್ಯವೆ ಮಾವ ಕೇಳೆಂ ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ
arasiyaidetanakke nammai vara nijāyuṣyakke rājyada siriya soṃpige nimma maganī kr̥ṣṇa hoṇe namage suraru sariyillemage mikkina nararu gaṇyave māva kēḷeṃ darasa vasudēvananu madhurōktiyali mannisida
ತಂದೆ ಬೇಡೆಮಗವ್ವೆ ಬೇಡೆಮ ಗಿಂದುಮುಖಿಯರನೊಲ್ಲೆವಾವ್ ಮನ ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ ನೊಂದೆನೆಂಬನು ತನ್ನವರು ಮನ ನೊಂದರಾದೊಡೆ ತನ್ನವರ ಸುಖ ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ
taṃde bēḍemagavve bēḍema giṃdumukhiyaranollevāv mana saṃdu meccihevemma bhaktarigeṃbananavarata noṃdeneṃbanu tannavaru mana noṃdarādoḍe tannavara sukha viṃdu tannadadeṃbudē sirikr̥ṣṇa mataveṃda
ಅರಸಿಯರ ಬಗೆಗೊಳ್ಳ ಮಕ್ಕಳ ಸರಕು ಮಾಡನು ದೇಶ ಕೋಶದ ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ ಹರಿ ಪರಾಯಣರೆಂದೊಡವರಿಗೆ ಹರಹಿಕೊಂಬನು ಮಗನ ಶೀಲವು ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ
arasiyara bagegoḷḷa makkaḷa saraku māḍanu dēśa kōśada siriya gaṇisanu khaḍḍigoḷḷanu gāḍhagarvitara hari parāyaṇareṃdoḍavarige harahikoṃbanu magana śīlavu narara pariyalleṃdanā vasudēvanaḷiyaṃge
ಲೋಗರೇ ನೀವೆಮಗೆ ನಿವಗರ ಗಾಗಿ ಕರಗುವನದು ನಿಲಲಿ ತನ ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ ಲೋಗರೆನ್ನವರೆಂದು ಲೋಗರಿ ಗಾಗಿ ಬದುಕುವೆನೆಂಬ ಬಲುಗೈ ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ
lōgarē nīvemage nivagara gāgi karaguvanadu nilali tana gāgadavarige tanna teruvanu koluva hagegoliva lōgarennavareṃdu lōgari gāgi badukuveneṃba balugai cāgi kr̥ṣṇananēna hēḷuveneṃdanarasaṃge
ಬೊಪ್ಪನವರೇಯೆಮ್ಮ ದೂರದೆ ಯಿಪ್ಪವರು ತಾವಲ್ಲ ಸಾಕಿ ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ ಚಪ್ಪರಿಸಿ ಕೌರವರು ತುರುಗಳ ತಪ್ಪಿಸಿದುದೇನಾಯ್ತು ಪಾರ್ಥನ ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ
boppanavarēyemma dūrade yippavaru tāvalla sāki nnoppadali bāyeṃdu muraripu karedanavanipana capparisi kauravaru turugaḷa tappisidudēnāytu pārthana darpadanuveṃteṃdu besagoṃḍanu muradhvaṃsi
ಹೂಹೆಗೆಲ್ಲಿಯ ದರ್ಪ ಮನುಜನ ಸಾಹಸವು ಬೇರೇನು ಯಂತ್ರದ ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ ದೇಹಿ ನೀ ನಾವೆಲ್ಲ ನಿನ್ನಯ ದೇಹವಿದರೊಳಗೆಮಗೆ ಗರ್ವದ ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು
hūhegelliya darpa manujana sāhasavu bērēnu yaṃtrada hāhe yaṃtravanuḷidu jīvisalarivudē bēre dēhi nī nāvella ninnaya dēhavidaroḷagemage garvada gāhidelliyadeṃdu binnavisidanu yamasūnu
ಎಸಳು ಮೊನೆಯೊಂದಾಗಿ ತಾವರೆ ಮುಸುಕುತಿದೆ ನೈದಿಲೆಯ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ ದೆಸೆದೆಸೆಯ ತಾಣಾಂತರದ ಹೊಂ ಬಿಸಿಲು ಬೀತುದು ಜೀಯ ಬಿನ್ನಹ ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ
esaḷu moneyoṃdāgi tāvare musukutide naidileya nettiya besuge biḍutide jakkavakkiya tekke saḍilutide desedeseya tāṇāṃtarada hoṃ bisilu bītudu jīya binnaha vasudhe taṃpērittu saṃdhyā samayavāyteṃda
ನಗುತ ಹರಿ ನಿಂದಿರಲು ಕೈ ದಂ ಡಿಗೆಯವರು ಹೊದ್ದಿದರು ರೂವಾ ರಿಗೆಗೆ ಬಿಜಯಂಗೈದನುಘೆಯೆಂದುದು ಸುರಸ್ತೋಮ ಬಿಗಿದ ದಡ್ಡಿಯ ಬದ್ದರದ ಬೀ ಯಗದ ರಾಣೀವಾಸದಂದಣ ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ
naguta hari niṃdiralu kai daṃ ḍigeyavaru hoddidaru rūvā rigege bijayaṃgaidanugheyeṃdudu surastōma bigida daḍḍiya baddarada bī yagada rāṇīvāsadaṃdaṇa tegedu naḍedudu muṃde saṃtōṣadali yadusēne
ಹೊಕ್ಕನಸುರಾರಾತಿ ಪಾಂಡವ ರಿಕ್ಕೆಲದಿ ಬರೆ ನಗರಜನ ಮೈ ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ ಹೊಕ್ಕು ಹೊಗಳುವ ಸುತಿಗಳಿಗೆ ಕೈ ಮಿಕ್ಕ ಕಳ್ಳನು ಪಾಂಡು ಸುತರಿಗೆ ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ
hokkanasurārāti pāṃḍava rikkeladi bare nagarajana mai yikki bīdiya dhūḷu kavidudu muṃde saṃdaṇisi hokku hogaḷuva sutigaḷige kai mikka kaḷḷanu pāṃḍu sutarige sikkidanu śivayenutalirdudu sūri saṃdōha
ಮೇಲೆ ಬೀಳುವ ಮಂದಿಯನು ಕೈ ಗೋಲಿನವರಪ್ಪಳಿಸೆ ಲಕ್ಷ್ಮೀ ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ ಮೇಲು ನೆಲೆಯುಪ್ಪರಿಗೆಗಳ ವರ ಬಾಲೆಯರ ಕಡೆಗಂಗಳೆಸೆವ ನಿ ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ
mēle bīḷuva maṃdiyanu kai gōlinavarappaḷise lakṣmī lōlanavadira jaredu kāṇisikoḷuta purajanava mēlu neleyupparigegaḷa vara bāleyara kaḍegaṃgaḷeseva ni vāḷigaḷa kaikoḷuta hokkanu rājamaṃdirava
ಹಿಡಿದರಾರತಿಗಳನು ಬಣ್ಣದ ಸೊಡರು ಸುಳಿದವು ಮುಂದೆ ನೆಲನು ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ ಹಿಡಿದ ಕೈದೀವಿಗೆಗಳನು ಕೈ ದುಡುಕಿ ತಿವಿದಾಡುತ್ತ ಕಾಂತಿಯ ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ
hiḍidarāratigaḷanu baṇṇada soḍaru suḷidavu muṃde nelanu ggaḍipa bhīmārjunara mēḷāpadali haruṣadali hiḍida kaidīvigegaḷanu kai duḍuki tividāḍutta kāṃtiya kaḍala maṇimaya pīṭhadali maṃḍisidanasurāri
ಬೀಳುಗೊಟ್ಟನು ಸಕಲ ಭೂಮೀ ಪಾಲರನು ಕುಂತಿಯ ಕುಮಾರರ ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ ಸೋಲದಲಿ ಮೈದಣಿದು ಕುರು ಭೂ ಪಾಲನುಚಿತವ ಮಾಡಿ ರಾಜ್ಯವ ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ
bīḷugoṭṭanu sakala bhūmī pālaranu kuṃtiya kumārara mēḷadali parimitadalasurārāti nasu naguta sōladali maidaṇidu kuru bhū pālanucitava māḍi rājyava nāḷisuva hadanuṃṭe nimmāḷāpavēneṃda
ಮರಳಿದವು ತುರುವಿತ್ತಲಹಿತರು ಸರಿದರತ್ತಲು ಮತ್ಸ್ಯನೆಮ್ಮೈ ವರನು ನಾವೆಂದರಿದು ಕೊಂಡಾಡಿದನು ವಿನಯದಲಿ ವರ ಸುಭದ್ರಾ ನಂದನಂಗು ತ್ತರೆಯನೀವರ್ಥಿಯಲಿಯಿರಲಾ ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ
maraḷidavu turuvittalahitaru saridarattalu matsyanemmai varanu nāveṃdaridu koṃḍāḍidanu vinayadali vara subhadrā naṃdanaṃgu ttareyanīvarthiyaliyiralā kareyalaṭṭideveṃdu binnavisidanu bhūpāla
ಕೊಳುಗೊಡೆಗೆ ಸೇರುವರೆ ಮದುವೆಯ ನೊಲಿದು ದೇವರು ಮಾಡುವುದು ಮೇ ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ ಬಳಿಕ ಬಿಜಯಂಗೈವುದಿದು ಹದ ನೆಲೆ ದಯಾಂಬುಧಿ ಕೇಳೆನಲು ನೃಪ ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ
koḷugoḍege sēruvare maduveya nolidu dēvaru māḍuvudu mē liḷeya kāryava buddhigalisuvademmanuddharisi baḷika bijayaṃgaivudidu hada nele dayāṃbudhi kēḷenalu nr̥pa tilakanucitada binnahake manavolidu hari nuḍida
ಕೊಳುಗೊಡೆಗೆ ತಪ್ಪೇನು ವಸುವಿನ ಕುಲ ವಿರಾಟನು ಇಂದು ವಂಶಾ ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು ಒಳನುಡಿಗಳಲಿ ದೈವ ಶಕುನಾ ವಳಿಗಳಾದೊಡೆ ಹರುಷದಲಿ ಮಂ ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ
koḷugoḍege tappēnu vasuvina kula virāṭanu iṃdu vaṃśā vaḷiyavaru nīvābhijātyadoḷilla haḷivugaḷu oḷanuḍigaḷali daiva śakunā vaḷigaḷādoḍe haruṣadali maṃ gaḷa muhūrtava māḍiyeṃdanu kr̥ṣṇa nasunaguta
ಒಸಗೆಯಲಿ ನಿಸ್ಸಾಳ ತತಿ ಗ ರ್ಜಿಸಿದವಖಿಳ ಜನಂಗಳುತ್ಸಾ ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ ಎಸೆಯಲಭಿಮನ್ಯುವನು ಸಿಂಗಾ ರಿಸಿತು ಯದು ಪಾಂಚಾಲ ಮತ್ಸ್ಯ ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು
osageyali nissāḷa tati ga rjisidavakhiḷa janaṃgaḷutsā hisitu kanyāvaraṇavāyitu vaidikōktiyali eseyalabhimanyuvanu siṃgā risitu yadu pāṃcāla matsya prasaradali meṭṭakki jīrige bellavanuvāytu
ವರ ಮುಹೂರ್ತದ ಘಳಿಗೆವಟ್ಟಲ ಭರಿತದೊಳು ಪುಣ್ಯಾಹವದ ವಿ ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ ಪರಮ ಋಷಿಗಳ ಹೋಮದಲಿ ಶಿಖಿ ವರನ ಬಲಗೊಂಡರು ಕುಮಾರಿಯ ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ
vara muhūrtada ghaḷigevaṭṭala bharitadoḷu puṇyāhavada vi staradalakṣate taḷidu taṃdaru vimala maṃṭapake parama r̥ṣigaḷa hōmadali śikhi varana balagoṃḍaru kumāriya varise vaidikadiṃda baṃdaḷu varana vāmadali
ವಿಭವವೈವಡಿಯಾಗೆ ಸದ್ವಿಜ ಸಭೆಯನಾರಾಧಿಸಿದನವನೀ ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ ಅಭವ ಸನ್ನಿಭ ವೀರನಾಗೆಂ ದಿಭಗಮನೆಯರು ಕೃಷ್ಣನರಸಿಯ ರಭಿಜನಾಮಲ ತಿಲಕನನು ಹರಸಿದರು ಹರುಷದಲಿ
vibhavavaivaḍiyāge sadvija sabheyanārādhisidanavanī vibhugaḷittaru muygaḷuḍugore ratna bhūṣaṇava abhava sannibha vīranāgeṃ dibhagamaneyaru kr̥ṣṇanarasiya rabhijanāmala tilakananu harasidaru haruṣadali
ಇದು ಶುಭೌಘದ ಗರುಡಿ ಬಹು ಸಂ ಪದದ ನೆಲೆಮನೆ ಸೊಂಪಿನಾಗರ ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು ಮುದದ ಕೇಳೀಸ್ಥಾನ ವಿಮಲಾ ಭ್ಯುದಯದೋಲಗಶಾಲೆ ಲಕ್ಷ್ಮೀ ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ
idu śubhaughada garuḍi bahu saṃ padada nelemane soṃpināgara vidu parānaṃda pravāhada janmabhūmiyidu mudada kēḷīsthāna vimalā bhyudayadōlagaśāle lakṣmī sadanavene raṃjisidudabhimanyuvina vaivāha
ಯಾದವರು ಪಾಂಚಾಲ ಮತ್ಸ್ಯರು ಮೇದಿನೀಪತಿ ಪಾಂಡು ಸೋಮಕ ರಾದಿಯಾದನ್ವಯವನಗಣಿತ ಬಂಧು ಬಳಗವನು ಆದರಿಸಿದನು ವಿನಯದಲಿ ವಿ ತ್ತಾದಿ ಸತ್ಕಾರದಲಿ ದಣಿದುದು ಮೇದಿನೀಜನವವನಿಪನ ಸನ್ಮಾನ ದಾನದಲಿ
yādavaru pāṃcāla matsyaru mēdinīpati pāṃḍu sōmaka rādiyādanvayavanagaṇita baṃdhu baḷagavanu ādarisidanu vinayadali vi ttādi satkāradali daṇidudu mēdinījanavavanipana sanmāna dānadali
ವರ ಚತುರ್ಥಿಯೊಳಿರುಳು ಮೆರೆದರು ಪುರದಲುತ್ಸಾಹದಲಿ ದಂಪತಿ ವರರು ಭೂಮೀಚಾರ ಚಮರದ ಚಾತುರಂಗದಲಿ ಮರುದಿವಸವವಭೃತವ ನೆರೆ ವಿ ಸ್ತರಿಸಿದರು ಪನ್ನೀರ ಹೊಂಗೊ ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ
vara caturthiyoḷiruḷu meredaru puradalutsāhadali daṃpati vararu bhūmīcāra camarada cāturaṃgadali marudivasavavabhr̥tava nere vi starisidaru pannīra hoṃgo pparigegaḷa kuṃkumada ghaṭavāsakada racaneyali
ಕನಕ ಮಣಿಗಳ ತೊಟ್ಟು ಜಾಜಿಯ ನನೆಯ ಆದಳಿಕೆಯಲಿ ಮದನನ ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು ದನುಜಹರನರಸಿಯರು ಕುಂತಿಯ ತನಯರರಸಿಯರೊಡನೆ ಮತ್ಸ್ಯನ ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು
kanaka maṇigaḷa toṭṭu jājiya naneya ādaḷikeyali madanana moneya khāḍākhāḍi khātiyaraide hoy hoydu danujaharanarasiyaru kuṃtiya tanayararasiyaroḍane matsyana vaniteyaru pāṃcāliniyarōkuḷiyanāḍidaru
ಧರಣಿ ನೆನೆದುದು ಗಂಧ ರಸ ಕ ತ್ತುರಿಯ ಪನ್ನೀರುಗಳ ಹೊನಲೊಡೆ ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ ತರಣಿ ಪರಿಮಳಿಸಿದನು ಪವನನ ಸುರಭಿತನವಚ್ಚರಿಯೆ ಗಗನದ ಪರಮ ಸೌರಭಕಲಸಿ ಕೊಂಡುದು ಸಕಲ ಸುರಕುಲವ
dharaṇi nenedudu gaṃdha rasa ka tturiya pannīrugaḷa honaloḍe verasi dese kaṃpiṭṭudaṃbudhi nava tuṣāradali taraṇi parimaḷisidanu pavanana surabhitanavaccariye gaganada parama saurabhakalasi koṃḍudu sakala surakulava
ಬಳುವಳಿಯ ನಿಖಿಳಾವನೀ ಮಂ ಡಲವನನುಪಮ ಕೋಶ ವರ್ಗದ ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ ಅಳಿಯಗಿತ್ತು ವಿರಾಟ ನೃಪ ಯದು ಕುಲವನಾ ಪಾಂಚಾಲ ಚೈದ್ಯಾ ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ
baḷuvaḷiya nikhiḷāvanī maṃ ḍalavananupama kōśa vargada lalaneyara gaja vāji ratha pādāti gōvrajava aḷiyagittu virāṭa nr̥pa yadu kulavanā pāṃcāla caidyā vaḷiyanuttama vastu vāhanadiṃda mannisida
ಆದುದಭಿಮನ್ಯುವಿನ ಮದುವೆ ಮ ಹಾ ದಯಾಂಬುಧಿ ಕೃಷ್ಣ ರಾಯನ ಪಾದ ದರುಶನವಾಗಲಿಮ್ಮಡಿಸಿತ್ತು ನಮ್ಮುದಯ ಮೇದಿನಿಯ ನಾವೊತ್ತೆಯಿಟ್ಟೆವು ಕಾದುಕೊಂಡೆವು ಸತ್ಯವನು ಮೇ ಲಾದುದನು ನೀ ಕರುಣಿಸೆಂದರು ವೀರ ನರಯಣನ
ādudabhimanyuvina maduve ma hā dayāṃbudhi kr̥ṣṇa rāyana pāda daruśanavāgalimmaḍisittu nammudaya mēdiniya nāvotteyiṭṭevu kādukoṃḍevu satyavanu mē lādudanu nī karuṇiseṃdaru vīra narayaṇana
Keys: ← → turn the page, J K step through the verses.
Illustration: Verse & Place (Project-owned).