ರಾಯದನುಜಘರಟ್ಟನಂಭೋ ಜಾಯತಾಕ್ಷನ ಖಾತಿಯನು ಗಾಂ ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ
rāyadanujagharaṭṭanaṃbhō jāyatākṣana khātiyanu gāṃ gēya bhayabhaktiyali gelidanu vara sudarśanava
ಭೀಷ್ಮ ಪರ್ವ — ಸಂಧಿ ೬ · ಭೀಷ್ಮ ಪರ್ವ — ಸಂಧಿ ೬
bhīṣma parva — saṃdhi 6
The complete bhishma parva · sandhi 6 in Kannada.
48 passagesKannada with transliteration
Invocation
ರಾಯದನುಜಘರಟ್ಟನಂಭೋ ಜಾಯತಾಕ್ಷನ ಖಾತಿಯನು ಗಾಂ ಗೇಯ ಭಯಭಕ್ತಿಯಲಿ ಗೆಲಿದನು ವರ ಸುದರ್ಶನವ
rāyadanujagharaṭṭanaṃbhō jāyatākṣana khātiyanu gāṃ gēya bhayabhaktiyali gelidanu vara sudarśanava
ಕೇಳು ಜನಮೇಜಯ ಧರಿತ್ರೀ ಪಾಲ ದಿನಕರನುದಯದಲಿ ಮು ಗಾಳೆಗದ ಗಾಢಾಭಿಲಾಷರು ಬಂದು ಕಣನೊಳಗೆ ಮೇಲುನೆಲನರಿದಖಿಲ ಕುರು ಭೂ ಪಾಲನವರೊಡ್ಡಿದರು ಲಕ್ಷ್ಮೀ ಲೋಲನಾಜ್ಞೆಯಲಿವರು ಬಲಿದರು ತಮ್ಮ ಮೋಹರವ
kēḷu janamējaya dharitrī pāla dinakaranudayadali mu gāḷegada gāḍhābhilāṣaru baṃdu kaṇanoḷage mēlunelanaridakhila kuru bhū pālanavaroḍḍidaru lakṣmī lōlanājñeyalivaru balidaru tamma mōharava
ದಳವೆರಡು ದಳಪತಿಗಳಿಬ್ಬರ ತಳಿತ ಸನ್ನೆಯ ಚೌರಿಯಲಿ ಬಿಡ ಹಳಚಿದುದು ಹೊಯ್ದಾಡಿ ಬಿದ್ದುದು ಪಾಯದಳವಂದು ತುಳಿದು ಹೊಕ್ಕವು ದಂತಿಘಟೆ ದಳ ವುಳಿಸಿ ಹರಿದವು ತೇರುಗಳು ತೋಳ ಬಳಲೆ ಹೊಯ್ದಾಡಿದರು ರಾವುತರಸಮ ಸಮರದಲಿ
daḷaveraḍu daḷapatigaḷibbara taḷita sanneya cauriyali biḍa haḷacidudu hoydāḍi biddudu pāyadaḷavaṃdu tuḷidu hokkavu daṃtighaṭe daḷa vuḷisi haridavu tērugaḷu tōḷa baḷale hoydāḍidaru rāvutarasama samaradali
ಏನ ಹೇಳುವೆನುಭಯ ಬಲದಲಿ ಲೂನ ನಿವಹದ ಹಯವನಡೆಗೆಡೆ ವಾನೆಗಳ ಹೊದರೆದ್ದು ಮುಗಿದ ರಥದ ವಾಜಿಗಳ ಮಾನವರ ಕಡಿಖಂಡ ದೊಂಡೆಯ ನೇನನೆಂಬೆನು ಹರಿವ ರುಧಿರಾಂ ಭೋನಿಧಿಯ ಹರಹುಗಳ ಪೂರದ ವಿಗಡ ವಿಗ್ರಹವ
ēna hēḷuvenubhaya baladali lūna nivahada hayavanaḍegeḍe vānegaḷa hodareddu mugida rathada vājigaḷa mānavara kaḍikhaṃḍa doṃḍeya nēnaneṃbenu hariva rudhirāṃ bhōnidhiya harahugaḷa pūrada vigaḍa vigrahava
ಅಳಿದುದರಡರ ಚೂಣಿ ದೊರೆಗಳ ಬಲಕೆ ಹೇಳಿಕೆಯಾಯ್ತು ಘನ ಸಂ ಕುಲ ಸುವಿಗ್ರಹ ಸಾಧನರು ಕೈಮಾಡಿ ಕಡಿವಡೆಯ ದಳವುಳಿಸಿದನು ಭೀಮ ಕೌರವ ದಳವ ತರುಬಿದನಡ್ಡಬಿದ್ದರಿ ಬಲದ ಸುಭಟರಿಗಿತ್ತನಮರಾವತಿಯ ಸಂಪದವ
aḷidudaraḍara cūṇi doregaḷa balake hēḷikeyāytu ghana saṃ kula suvigraha sādhanaru kaimāḍi kaḍivaḍeya daḷavuḷisidanu bhīma kaurava daḷava tarubidanaḍḍabiddari balada subhaṭarigittanamarāvatiya saṃpadava
ಮುರಿದು ಬಹ ನಿಜಸೇನೆಗಭಯದ ಸೆರಗ ಬೀಸುತ ಭೀಮಸೇನನ ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ ತೆರಹುಗೊಡವಂಬುಗಳು ಭೀಮಗೆ ಬೆರಗು ಬಲಿದುದು ಹೊಕ್ಕು ಸಾತ್ಯಕಿ ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ
muridu baha nijasēnegabhayada seraga bīsuta bhīmasēnana tarubi niṃdanu bhīṣma bigidanu saraḷalaṃbarava terahugoḍavaṃbugaḷu bhīmage beragu balidudu hokku sātyaki yiridu bhīṣmana baladalūḍidanakhiḷa khagakulava
ಬಳಿಕ ಸಾತ್ಯಕಿ ಭೀಷ್ಮರಿಗೆ ಬಲು ಗಲಹ ಬಲಿದುದು ವಿಲಯ ರುದ್ರನ ನಿಲವನೊಚ್ಚತಗೊಂಡು ಪರಬಲದೊಳಗೆ ಗಾಂಗೇಯ ತಳಪಟವ ಮಾಡಿದನು ಭಾಷೆಯ ಬಳಿಗೆ ಕೊಂದನು ಹತ್ತು ಸಾವಿರ ನೆಲನ ವಲ್ಲಭರನು ಯುಧಿಷ್ಠಿರರಾಯ ಸೇನೆಯಲಿ
baḷika sātyaki bhīṣmarige balu galaha balidudu vilaya rudrana nilavanoccatagoṃḍu parabaladoḷage gāṃgēya taḷapaṭava māḍidanu bhāṣeya baḷige koṃdanu hattu sāvira nelana vallabharanu yudhiṣṭhirarāya sēneyali
ಬೀಳಲವನೀಪತಿಗಳತಿ ಹೀ ಹಾಳಿಯಲಿ ಸಾತ್ಯಕಿ ಮುಳಿದು ಬಲು ಗೋಲಿನಲಿ ಗಂಗಾಕುಮಾರನ ಸಾರಥಿಯನೆಸಲು ಮೇಲುಗಾಳೆಗವವರ ಸೇರಿತು ಸೋಲು ಕುರುಪತಿಗಾಯ್ತು ಕಿರಣದ ಗೂಳಯವು ಪಡುವಣ ಸಮುದ್ರಕೆ ತೆಗೆಯಲಿನನಿಳಿದ
bīḷalavanīpatigaḷati hī hāḷiyali sātyaki muḷidu balu gōlinali gaṃgākumārana sārathiyanesalu mēlugāḷegavavara sēritu sōlu kurupatigāytu kiraṇada gūḷayavu paḍuvaṇa samudrake tegeyalinaniḷida
ದಿನವೆರಡು ಹಿಂದಾದುದಿದು ಮೂ ರನೆಯ ದಿವಸದ ಬಹಳ ವಿಗ್ರಹ ದನುವನಾಲಿಸು ರಾಯ ಜನಮೇಜಯ ಮಹೀಪಾಲ ದಿನಪನುದಯಾಚಲದ ಚಾವಡಿ ವನೆಗೆ ಬರೆ ಬಲವೆರಡು ಗಳ ಗ ರ್ಜನದಿ ಬಂದೊಡ್ಡಿದವು ಕಳನೊಳು ಖತಿಯ ಪಡಪಿನಲಿ
dinaveraḍu hiṃdādudidu mū raneya divasada bahaḷa vigraha danuvanālisu rāya janamējaya mahīpāla dinapanudayācalada cāvaḍi vanege bare balaveraḍu gaḷa ga rjanadi baṃdoḍḍidavu kaḷanoḷu khatiya paḍapinali
ಸೂಳು ಮಿಗಲಳ್ಳಿರಿವ ನಿಸ್ಸಾ ಕೋಳಿಗಳ ತಂಬಟದ ಕೊಂಬಿನ ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ ಮೇಳವಣೆ ಭುಗಿಲಿಡಲು ಬೊಬ್ಬೆಯ ಘೋಳ ಘೋಷದ ರಭಸ ದೆಸೆಗಳ ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ
sūḷu migalaḷḷiriva nissā kōḷigaḷa taṃbaṭada koṃbina gāḷugajarina kahaḷegaḷa kaḷakaḷada boggugaḷa mēḷavaṇe bhugiliḍalu bobbeya ghōḷa ghōṣada rabhasa desegaḷa sīḷe siḍiledderaḍu bala hoydāḍitoḍagalasi
ಜೋಳವಾಳಿಯೊಳುಂಡು ಮಾಡಿದ ಸಾಲವನು ತಲೆಗಳಲಿ ತಿದ್ದಿದ ರಾಳ ತರುಬುವ ಪತಿಗೆ ಹರುಷವ ಮಾಡಿ ತಮತಮಗೆ ಕಾಲನೂರೈದದು ಸುರ ಜಾಲ ನೆರೆಯದು ಗಗನ ಸುಭಟರ ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ
jōḷavāḷiyoḷuṃḍu māḍida sālavanu talegaḷali tiddida rāḷa tarubuva patige haruṣava māḍi tamatamage kālanūraidadu sura jāla nereyadu gagana subhaṭara sāloḷaḍagitu citravene hoydāḍitubhayabala
ಬರಲಿ ಸಮರಕೆ ಸಾತ್ಯಕಿಯ ನೀ ಕರೆಯೆನುತ ಬಿಲುದುಡುಕಿ ರಥದಲಿ ಸರಿಸ ತಾಳಧ್ವಜವನೆಸಿ ಸಮರಥರ ನೆರಹಿ ಸರಳ ತೂಗುತ ಮಾರುಬಲವನು ತರುಬಿ ನಿಂದನು ಭೀಷ್ಮನಗ್ಗದ ಬಿರುದ ಸಂಭಾವಿಸುತ ಪಾಠಕಕೋಟಿ ಗಡಬಡಿಸೆ
barali samarake sātyakiya nī kareyenuta biluduḍuki rathadali sarisa tāḷadhvajavanesi samarathara nerahi saraḷa tūguta mārubalavanu tarubi niṃdanu bhīṣmanaggada biruda saṃbhāvisuta pāṭhakakōṭi gaḍabaḍise
ಕಾಲಯಮನೋ ಭೀಷ್ಮನೋ ಪಡ ಮೇಳವೇ ಮಝ ಭಾಪು ಮಾರಿಯ ತಾಳಿಗೆಗೆ ತುತ್ತಾದವೇ ತಡವೇಕೆ ತೆಗೆಯೆನುತ ಆಳು ಮುರಿದುದು ಮೋಹರದ ಭೂ ಪಾಲಕರು ಹುರಿಯೊಡೆದು ದೊರೆಗಳ ಮೇಲೆ ಬಿಸುಟರು ವೀರಗಂಗಾತನುಜನುಪಟಳವ
kālayamanō bhīṣmanō paḍa mēḷavē majha bhāpu māriya tāḷigege tuttādavē taḍavēke tegeyenuta āḷu muridudu mōharada bhū pālakaru huriyoḍedu doregaḷa mēle bisuṭaru vīragaṃgātanujanupaṭaḷava
ಸೋಲ ಮಿಗಲೊಳಸರಿವ ಬಿರುದರ ಬೀಳಗೆಡಹಿಸಿ ಕಪಿಯ ಹಳವಿಗೆ ಗೋಲನೆತ್ತಿಸಿ ಕೆಲಬಲದ ಮನ್ನೆಯರ ಕೈವೀಸಿ ಆಲಿಯಲಿ ಕಿಡಿ ಸೂಸೆ ಮೀಸೆಯ ಮೇಲುದಿರುಹುತಲೌಡುಗಚ್ಚಿ ಕ ರಾಳರೋಷ ಮಹೋಗ್ರವೀರನು ಪಾರ್ಥನಿದಿರಾದ
sōla migaloḷasariva birudara bīḷageḍahisi kapiya haḷavige gōlanettisi kelabalada manneyara kaivīsi āliyali kiḍi sūse mīseya mēludiruhutalauḍugacci ka rāḷarōṣa mahōgravīranu pārthanidirāda
ತೊಲತೊಲಗು ಕಲಿ ಭೀಷ್ಮ ವೃದ್ಧರಿ ಗೆಳಭಟರ ಕೂಡಾವುದಂತರ ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ ತುಳುಕಿದನು ಕೆಂಗೋಲ ಜಲಧಿಯ ನೆಲನದಾವುದು ದಿಕ್ಕದಾವುದು ಸಲೆ ನಭೋಮಂಡಲವದಾವುದೆನಲ್ಕೆ ಕಲಿ ಪಾರ್ಥ
tolatolagu kali bhīṣma vr̥ddhari geḷabhaṭara kūḍāvudaṃtara vaḷibalara hedarisida hekkaḷavēke sārenuta tuḷukidanu keṃgōla jaladhiya nelanadāvudu dikkadāvudu sale nabhōmaṃḍalavadāvudenalke kali pārtha
ಪೂತುರೇ ಕಲಿ ಪಾರ್ಥ ವಿಶಿಖ ವ್ರಾತಮಯವಾಯ್ತವನಿ ಕಾರ್ಮುಕ ಭೂತನಾತನ ಗರುಡಿಯಲ್ಲಾ ಕಲಿತ ಮನೆ ನಿನಗೆ ಆತುಕೊಳ್ಳಾದಡೆಯೆನುತ ಕಪಿ ಕೇತನನ ಶರಹತಿಯನಾಂತಾ ಮಾತು ಹಿಂಚಿತು ಕಡಿದು ಬಿಸುಟನು ಕೃಷ್ಣಬೆರಗಾಗೆ
pūturē kali pārtha viśikha vrātamayavāytavani kārmuka bhūtanātana garuḍiyallā kalita mane ninage ātukoḷḷādaḍeyenuta kapi kētanana śarahatiyanāṃtā mātu hiṃcitu kaḍidu bisuṭanu kr̥ṣṇaberagāge
ಆ ಸಮಯದೊಳು ರಣದೊಳೌಕಿದ ರಾ ಸುಯೋಧನ ಶಲ್ಯ ಸಲೆ ದು ಶ್ಶಾಸನನು ಕೃಪ ಶಕುನಿ ಗುರುಸುತರಾದಿ ಯಾದವರು ಸೂಸಿದರು ಸರಳಗಳನರ್ಜುನ ಘಾಸಿಯಾದನು ವಿಲಯ ಮೇಘದ ಮೀಸಲಿನ ಮಳೆಗಾಲವೆನೆ ಮೋಹಿದುದು ಶರಜಾಲ
ā samayadoḷu raṇadoḷaukida rā suyōdhana śalya sale du śśāsananu kr̥pa śakuni gurusutarādi yādavaru sūsidaru saraḷagaḷanarjuna ghāsiyādanu vilaya mēghada mīsalina maḷegālavene mōhidudu śarajāla
ಕುದುರೆ ಕಂಗೆಟ್ಟವು ಮುರಾರಿಯ ಹೃದಯ ಸಂಚಲವಾಯ್ತು ಗಾಲಿಗ ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ ಹೆದರಿದರು ನಾಯಕರು ಪಾಂಡವ ರದಟು ಮುರಿದುದು ಸುರರು ಚಿಂತಿಸಿ ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದು
kudure kaṃgeṭṭavu murāriya hr̥daya saṃcalavāytu gāliga ḷaduriduvu garuvāyigeṭṭanu mēle hanumaṃta hedaridaru nāyakaru pāṃḍava radaṭu muridudu suraru ciṃtisi kudidararjunapakṣapāta vyarthavāyteṃdu
ತೆರಳುವನೆ ಬಿಲುಗಾರರಿಗೆ ವರ ಗುರುವಲಾ ಕಲಿ ಪಾರ್ತನನಿಬರ ಸರಳ ಕಡಿದನು ಕೃಪನನೆಚ್ಚನು ಗುರುಸುತನ ರಥವ ಉರುಳೆಗಡಿದನು ಶಲ್ಯನನು ಹೇ ವರಿಸಲೆಚ್ಚನು ಕೌರವರ ಹೇ ರುರದಲಂಬನು ಹೂಳಿದನು ಸೀಳಿದನು ಸಮರಥರ
teraḷuvane bilugārarige vara guruvalā kali pārtananibara saraḷa kaḍidanu kr̥pananeccanu gurusutana rathava uruḷegaḍidanu śalyananu hē varisaleccanu kauravara hē ruradalaṃbanu hūḷidanu sīḷidanu samarathara
ಏರುವಡೆದನು ಶಲ್ಯ ರಕುತವ ಕಾರಿದನು ದುಶ್ಶಾಸನನು ಕೈ ಮೀರಿ ಕೈಕೊಂಡೆಚ್ಚು ನೊಂದನು ಮತ್ತೆ ಗುರುಸೂನು ಹೇರಿದರು ಹಿಳುಕುಗಳ ಮೈಯಲಿ ಜೋರು ಮಸಗಲು ಭೀಷ್ಮ ಕಡುಗಾ ಹೇರಿದನು ರೋಷಾಗ್ನಿ ವಿಕಟಜ್ವಾಲೆಮುಖನಾದ
ēruvaḍedanu śalya rakutava kāridanu duśśāsananu kai mīri kaikoṃḍeccu noṃdanu matte gurusūnu hēridaru hiḷukugaḷa maiyali jōru masagalu bhīṣma kaḍugā hēridanu rōṣāgni vikaṭajvālemukhanāda
ಮೊಗದ ಹೊಗರವಗಡಿಸೆ ಸುಯಿಲಲಿ ಹೊಗೆಯ ಹೊದರಂಕುರಿಸೆ ಬಿಡುಗ ಣ್ಣುಗಳೊಳೊಕ್ಕುದು ಕೆಂಪು ಸೊಂಪಡಗಿತು ಮುಖಸ್ನೇಹ ತೆಗೆವೆನರ್ಜುನನಸುವನೆನುತಾ ಳುಗಳ ದೇವನು ಭೀಷ್ಮನಡಿಗಡ ಗೊಗುಮಿಗೆಯ ಕೋಪದಲಿ ತೋದನು ಸರಳಿನಲಿ ನರನ
mogada hogaravagaḍise suyilali hogeya hodaraṃkurise biḍuga ṇṇugaḷoḷokkudu keṃpu soṃpaḍagitu mukhasnēha tegevenarjunanasuvanenutā ḷugaḷa dēvanu bhīṣmanaḍigaḍa gogumigeya kōpadali tōdanu saraḷinali narana
ನೊಂದು ಸೈರಿಸಿ ಮತ್ತೆ ಸರಳಿನ ಸಂದಣಿಯ ಸೈಗರೆದನರ್ಜುನ ನಿಂದುಧರ ಮಝ ಭಾಪುರೆನೆ ಪಸರಿಸಿದವಂಬುಗಳು ಮುಂದೆ ನಿಲಲರಿಯದೆ ವಿತಾಳಿಸಿ ಮಂದಗತಿಯೊಳು ಕೆಲಸಿಡಿದು ಹರಿ ನಂದನನ ಬಿಡದೆಸುತ ಬಂದನು ಭೀಷ್ಮ ಮುಳಿಸಿನಲಿ
noṃdu sairisi matte saraḷina saṃdaṇiya saigaredanarjuna niṃdudhara majha bhāpurene pasarisidavaṃbugaḷu muṃde nilalariyade vitāḷisi maṃdagatiyoḷu kelasiḍidu hari naṃdanana biḍadesuta baṃdanu bhīṣma muḷisinali
ಎತ್ತಲೊಲೆದನದೆತ್ತ ಸರಿದನ ದೆತ್ತ ಜಾರಿದನೆತ್ತ ತಿರುಗಿದ ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು ಅತ್ತಲತ್ತಲು ರಥಹಯವ ಬಿಡ ದೊತ್ತಿ ಬೀದಿಗೆ ನೂಕಿ ಪಾರ್ಥನ ಮುತ್ತಯನ ಸಂಮ್ಮುಖಕೆ ಬಿಡದೌಕಿದನು ಮುರವೈರಿ
ettaloledanadetta saridana detta jāridanetta tirugida netta hiṃgidanettalaukidanettalurubidanu attalattalu rathahayava biḍa dotti bīdige nūki pārthana muttayana saṃmmukhake biḍadaukidanu muravairi
ಕೆರಳಿದನು ಕಲಿ ಭೀಷ್ಮನರ್ಜುನ ನುರವಣೆಯ ಗೆಲುವರೆ ಮುರಾರಿಯ ಭರವಸವ ತಗ್ಗಿಸಿದಡಲ್ಲದೆ ಕಾದಲರಿದೆನುತ ಹರಿಯ ಸಿರಿಯೊಡಲಿನಲಿ ಸರಳಿನ ಸರಿವಳೆಯ ಸೈಗರೆಯೆ ಜೋಡಿನ ಸರಪಳಿಯಲಕ್ಕಾಡಿದವು ಕಲಿ ಭೀಷ್ಮನಂಬುಗಳು
keraḷidanu kali bhīṣmanarjuna nuravaṇeya geluvare murāriya bharavasava taggisidaḍallade kādalaridenuta hariya siriyoḍalinali saraḷina sarivaḷeya saigareye jōḍina sarapaḷiyalakkāḍidavu kali bhīṣmanaṃbugaḷu
ಮತ್ತೆ ರಥವನು ಹರಿಸಿ ಭೀಷ್ಮನ ಹತ್ತೆ ಬರೆ ಕಟ್ಟಳವಿಯಲಿ ಹಾ ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ ಹತ್ತು ಶರದಲಿ ಕೃಷ್ಣರಾಯನ ಮತ್ತೆ ಮುಸುಕಿದ ಬಹಳ ಭಾರ್ಗವ ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ
matte rathavanu harisi bhīṣmana hatte bare kaṭṭaḷaviyali hā muttayanu silukidanu śivaśivayenuta bala bedare hattu śaradali kr̥ṣṇarāyana matte musukida bahaḷa bhārgava datta bāṇava toḍaci dēvana nosala kīlisida
ಕೆಂಗರಿಯ ಮರಿದುಂಬಿ ತಾವರೆ ಗಂಗವಿಸುವವೊಲಸುರರಿಪುವಿನ ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ ತುಂಗವಿಕ್ರಮನಂಬ ಕಿತ್ತು ತ ದಂಗರಕ್ತವಿಷೇಕರೌದ್ರಾ ಲಿಂಗಿತನು ಬಲುಖತಿಯ ಹಿಡಿದನು ಭೀಷತಮನುಪಟಳಕೆ
keṃgariya mariduṃbi tāvare gaṃgavisuvavolasuraripuvina maṃgaḷānanakamaladali śaravāḷe garigaḍiye tuṃgavikramanaṃba kittu ta daṃgaraktaviṣēkaraudrā liṃgitanu balukhatiya hiḍidanu bhīṣatamanupaṭaḷake
ಕೆಂಪ ಕಾರಿದವಾಲಿಗಳು ಮೈ ಕಂಪಿಸಿದುದಡಿಗಡಿಗೆ ರೋಷದ ಬಿಂಪಿನೊಳು ತಗ್ಗಿದನು ಗಂಟಿಕ್ಕಿದನು ಹುಬ್ಬುಗಳ ಸೊಂಪುಗೆಟ್ಟುದು ಸಿರಿವದನಮನ ದಿಂಪು ಬೀತುದು ಭಕ್ತ ಮೋಹದ ಲಂಪು ಮಸುಳಿತು ಬಿಸುಟು ಕಳೆದನು ಹಯದ ವಾಘೆಗಳ
keṃpa kāridavāligaḷu mai kaṃpisidudaḍigaḍige rōṣada biṃpinoḷu taggidanu gaṃṭikkidanu hubbugaḷa soṃpugeṭṭudu sirivadanamana diṃpu bītudu bhakta mōhada laṃpu masuḷitu bisuṭu kaḷedanu hayada vāghegaḷa
ಕೆಂಡವಾಗಲಿ ಲೋಕ ದಿವಿಜರ ಹೆಂಡಿರೋಲೆಯು ಕಳೆದು ಹೋಗಲಿ ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ ಗಂಡುಗೆಡಿಸಿದರಿಲ್ಲ ದಾನವ ದಿಂಡೆಯರು ಹಲರೆಮ್ಮೊಡನೆ ಮಾ ರ್ಕೊಂಡವರು ಮಾಮಾಪ್ರತಿಜ್ಞೆಯ ತೊಡಕು ಬೇಡೆಂದ
keṃḍavāgali lōka divijara heṃḍirōleyu kaḷedu hōgali diṃḍugeḍeyali mēru mēdini nilali vitaḷadali gaṃḍugeḍisidarilla dānava diṃḍeyaru halaremmoḍane mā rkoṃḍavaru māmāpratijñeya toḍaku bēḍeṃda
ಸಕಲ ಜಗದಳಿವಿನಲಿ ರುದ್ರಾ ತ್ಮಕನು ವಿಷ್ಣುವೆ ಎಂಬ ನುಡಿ ಸು ವ್ಯಕುತವಾಗಲು ತೋರಿದನು ಘನರೋಷತಾಮಸವ ಚಕಿತವದನದ ಕೆಂಪಿನಮುಜಾಂ ಬಕಯುಗಳನೊಲೆದೊಲೆದು ರೋಷ ಪ್ರಕಟಪಾವಕ ವಿಸ್ಫುಲಿಂಗಿತನಾದನಡಿಗಡಿಗೆ
sakala jagadaḷivinali rudrā tmakanu viṣṇuve eṃba nuḍi su vyakutavāgalu tōridanu ghanarōṣatāmasava cakitavadanada keṃpinamujāṃ bakayugaḷanoledoledu rōṣa prakaṭapāvaka visphuliṃgitanādanaḍigaḍige
ಎಲೆಲಿದೆತ್ತಣ ಧರಣಿಯೆತ್ತಣ ಕುಲಗಿರಿಗಳೆತ್ತಣ ದಿಶಾಗಜ ಕುಲವಿದೆತ್ತಣ ಸುರರಿದೆತ್ತಣ ಹರ ಚತುರ್ಮುಖರು ಸಲಹುವೈಯನು ಮುಳಿದು ಲೋಕದ ಕೊಲೆಗೆಲಸಕಂಗೈಸಿದನೆ ಹಾ ಪ್ರಳಯವಾದುದಕಾಲದಲಿಯೆಂದಮರೃಎದೆಯಾರೆ
elelidettaṇa dharaṇiyettaṇa kulagirigaḷettaṇa diśāgaja kulavidettaṇa suraridettaṇa hara caturmukharu salahuvaiyanu muḷidu lōkada kolegelasakaṃgaisidane hā praḷayavādudakāladaliyeṃdamarr̥edeyāre
ನಳಿನಪತ್ರೋದಕದವೊಲು ಮಾ ರೊಲೆದುದಬುಜಭವಾಂಡವಂಬುಧಿ ಯಿಳಿದು ಗುಲ್ಫಧ್ವಯಸವಾದುದು ಕಮಠನೆದೆಯೊಡೆಯೆ ನೆಲನನಿದ ಹಿಂದಿಕ್ಕಿಕೊಂಬ ಗ್ಗಳೆಯರಾರೋ ಶಿವಶಿವಾ ಜಗ ದಳಿವು ಜೋಡಿಸಿತೆನುತ ನಡುಗಿದನಬುಜಭವನಂದು
naḷinapatrōdakadavolu mā roledudabujabhavāṃḍavaṃbudhi yiḷidu gulphadhvayasavādudu kamaṭhanedeyoḍeye nelananida hiṃdikkikoṃba ggaḷeyarārō śivaśivā jaga daḷivu jōḍisitenuta naḍugidanabujabhavanaṃdu
ಮುರಮಥನ ಕೆಲ್ಲೈಸಿ ನೋಡಿದ ನುರುಭಯಂಕರ ಚಕ್ರವನು ದು ರ್ಧರುಷಧಾರಾ ಲೂಯಮಾನ ನಿಶಾತಚಕ್ರವನು ತರಳ ತರಣೀಚಕ್ರವನು ಸಂ ಗರ ವಿನಿರ್ಜಿತ ಚಕ್ರವನು ಭಯ ಭರ ವಿವರ್ಜಿತ ಚಕ್ರವನು ಕಡುಗೋಪ ಕುಡಿಯಿಡಲು
muramathana kellaisi nōḍida nurubhayaṃkara cakravanu du rdharuṣadhārā lūyamāna niśātacakravanu taraḷa taraṇīcakravanu saṃ gara vinirjita cakravanu bhaya bhara vivarjita cakravanu kaḍugōpa kuḍiyiḍalu
ನಿಶಿತ ಧಾರೆಯ ಹೊಳಹು ಸೂರ್ಯನ ಮುಸುಕಿದುದು ಪರಿಲೂನದೈತ್ಯ ಪ್ರಸರಗಳನಾಳೀವಿನಿಸ್ಸೃತ ರುಧಿರಬಂಧಗಳ ಮಿಸುಪ ಮೊಳೆಗಳ ಮುರಿವುಗಳ ನೆಣ ವಸೆಯ ತೊರಳೆಯ ತೊಂಗಲಿನೊಳಂ ದೆಸೆವ ಚಕ್ರವ ನೋಡಿದನು ದೈತ್ಯಾರಿ ಕೋಪದಲಿ
niśita dhāreya hoḷahu sūryana musukidudu parilūnadaitya prasaragaḷanāḷīvinissr̥ta rudhirabaṃdhagaḷa misupa moḷegaḷa murivugaḷa neṇa vaseya toraḷeya toṃgalinoḷaṃ deseva cakrava nōḍidanu daityāri kōpadali
ಹರಿದುಹಬ್ಬುವ ಬಳ್ಳಿವೆಳಗಿನ ಮುರಿವು ಮಂಡಳಿಸಿದುದು ಶತ ಸಾ ವಿರ ದಿವಾಕರ ಬಿಂಬವೆಸೆದುದು ಝಳದ ಹೊಯಿಲಿನಲಿ ಸುರ ನರೀರಗ ಜಗದ ಕಂಗಳ ತೆರಹು ಕೆತ್ತವು ಬತ್ತಿದುದಧಿಯೊ ಳುರಿಮಣಲು ಮಾಣಿಕವ ಹುರಿದುದು ಚಕ್ರದೂಷ್ಮೆಯಲಿ
hariduhabbuva baḷḷiveḷagina murivu maṃḍaḷisidudu śata sā vira divākara biṃbavesedudu jhaḷada hoyilinali sura narīraga jagada kaṃgaḷa terahu kettavu battidudadhiyo ḷurimaṇalu māṇikava huridudu cakradūṣmeyali
ನರನ ತೇರಿನ ಕುದುರೆಗಳು ಡಾ ವರಿಸಿದುವು ಡಗೆ ಹೊಯ್ದು ಮಿಗೆ ದ ಳ್ಳುರಿಯ ಸಸಿಯಂತಾದನರ್ಜುನದೇವ ನಿಮಿಷದಲಿ ಕರಗಿ ಕೊರಗಿತು ಲೋಕ ಕೌರವ ಧರಣಿಪಾಲರಿದೆತ್ತಣುರಿಯೋ ಹರನ ಕಣ್ಗಿಚ್ಚಲ್ಲಲೆ ಹಾಯೆನುತ ಹಲುಬಿದರು
narana tērina kuduregaḷu ḍā varisiduvu ḍage hoydu mige da ḷḷuriya sasiyaṃtādanarjunadēva nimiṣadali karagi koragitu lōka kaurava dharaṇipālaridettaṇuriyō harana kaṇgiccallale hāyenuta halubidaru
ತುಡುಕಿದನು ಚಕ್ರವನು ರಥದಿಂ ಪೊಡವಿಯೊಳು ಧುಮ್ಮಿಕ್ಕಿದನು ಹ ತ್ತಡವ ಹಾಯಿಕಿ ಹರಿದನೊಡಬಿದ್ದವರನೊಡೆ ತುಳಿದು ಸುಡುವೆನಹಿತಾನ್ವಯವ ಭೀಷ್ಮನ ಕಡಿದು ಭೂತಗಣಕ್ಕೆ ಬೋನವ ಬಡಿಸುವೆನು ನೋಡಿಲ್ಲಿ ಮೇಳವೆಯೆನುತ ಸೈವರಿದ
tuḍukidanu cakravanu rathadiṃ poḍaviyoḷu dhummikkidanu ha ttaḍava hāyiki haridanoḍabiddavaranoḍe tuḷidu suḍuvenahitānvayava bhīṣmana kaḍidu bhūtagaṇakke bōnava baḍisuvenu nōḍilli mēḷaveyenuta saivarida
ಶಿವಶಿವೆಂದುದು ನಿಖಿಳಜಗ ಕೌ ರವರು ಕಂಪಿಸಿ ಥಟ್ಟುಗೆಡೆದರು ಭುವನದಲಿ ಬಾರಿಸಿತು ಜಯಜಯ ಜಯಮಹಾದ್ಯಾನ ತವತವಗೆ ತಳ್ಳಂಕದಲಿ ಪಾಂ ಡವರು ನಡುಗಿತು ಪಾರ್ಥ ಬಲು ಗರ ವವಚಿದಂತಿರೆ ಮೂಕನಾದನು ಬೆರಳ ಮೂಗಿನಲಿ
śivaśiveṃdudu nikhiḷajaga kau ravaru kaṃpisi thaṭṭugeḍedaru bhuvanadali bārisitu jayajaya jayamahādyāna tavatavage taḷḷaṃkadali pāṃ ḍavaru naḍugitu pārtha balu gara vavacidaṃtire mūkanādanu beraḷa mūginali
ಹರಿ ಮುಕುಂದ ಮುಕುಂದ ಲಕ್ಷ್ಮೀ ವರ ನೃಕೇಸರಿಯೆನುತ ಚಾಪವ ಶರವನವನಿಗೆ ಬಿಸುಟು ಮೈಯಿಕ್ಕಿದನು ಕಲಿ ಭೀಷ್ಮ ಕರಯುಗವ ಮುಗಿದೆದ್ದು ಮುರಹರ ಸರಸಿಜಾಂಬಕ ರಾಮ ರಕ್ಷಿಸು ತರಳನಲಿ ಗುಣದೋಷದರಕೆಯೆ ದೇವ ಹೇಳೆಂದ
hari mukuṃda mukuṃda lakṣmī vara nr̥kēsariyenuta cāpava śaravanavanige bisuṭu maiyikkidanu kali bhīṣma karayugava mugideddu murahara sarasijāṃbaka rāma rakṣisu taraḷanali guṇadōṣadarakeye dēva hēḷeṃda
ದೇವ ನಿಮ್ಮಯ ಖಾತಿ ಪರಿಯಂ ತಾವು ಲಕ್ಷ್ಯವೆ ಜೀಯ ನೊರಜಿನ ದೇವಗಿರಿಯಂತರವೆ ಸಂಭಾವನೆಯೆ ನನ್ನೊಡನೆ ದೇವ ಮುನಿಗಳ ನಗೆಯ ನೋಡದಿ ದಾವುದುಚಿತವ ಮಾಡಿದಿರಿ ಮಹಿ ಮಾವಲಂಬವ ಮರೆದುದಕೆ ನಗೆ ಬಂದುದೆನಗೆಂದ
dēva nimmaya khāti pariyaṃ tāvu lakṣyave jīya norajina dēvagiriyaṃtarave saṃbhāvaneye nannoḍane dēva munigaḷa nageya nōḍadi dāvuducitava māḍidiri mahi māvalaṃbava maredudake nage baṃdudenageṃda
ಅಲಸಿಕೆಯೊಳೈನೂರು ಸಾವಿರ ನಳಿಭವರಡೆಗೆಡೆವರೆಂಬ ಗ್ಗಳಿಕೆಯೆತ್ತಲು ಹುಲುಮನುಜ ನಾನೆತ್ತಲಿದಿರಾಗಿ ಮುಳಿದು ಹರಿತಹುದೆತ್ತಲಿದು ನಿ ನ್ನಳತೆಗೈದುವುದಲ್ಲ ಲಜ್ಜೆಗೆ ನೆಲೆಯ ಮಾಡಿದೆ ಹೂಡಿದೈ ದುರಿಯಶವನೆನಗೆಂದ
alasikeyoḷainūru sāvira naḷibhavaraḍegeḍevareṃba ggaḷikeyettalu hulumanuja nānettalidirāgi muḷidu haritahudettalidu ni nnaḷategaiduvudalla lajjege neleya māḍide hūḍidai duriyaśavanenageṃda
ರೋಮ ರೋಮದೊಳಖಿಲ ಭುವನ ಸ್ತೋಮ ನಲಿದಾಡುವುದು ಗಡ ನಿ ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ ಈ ಮರುಳುತನವೆತ್ತಲೀ ರಣ ತಾಮಸಿಕೆ ತಾನೆತ್ತಣದು ರಘು ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ
rōma rōmadoḷakhila bhuvana stōma nalidāḍuvudu gaḍa ni ssīmatana gaḍa nāvu vairigaḷeṃdu kōpisuva ī maruḷutanavettalī raṇa tāmasike tānettaṇadu raghu rāma rakṣisu bayalināḍaṃbaravidēneṃda
ನೀನು ಖತಿಯನು ಹಿಡಿಯೆ ನಿನ್ನ ಸ ಘಾನತನವನು ಬಲ್ಲೆ ಯೋಗಿಗ ಳೆನನೆಂಬರು ತಮ್ಮೊಳಗೆ ಕೈಹೊಯ್ದು ಮಿಗೆ ನಗುತ ಮಾನವರು ಕಡುಮೂರ್ಖರೆಂದೇ ಮಾನಗರ್ವವ ತಳೆದೆ ಸಾಕಿ ನ್ನೇನ ಹೇಳುವೆ ನಿನ್ನ ಠಕ್ಕನು ಬಲ್ಲೆ ಹೋಗೆಂದ
nīnu khatiyanu hiḍiye ninna sa ghānatanavanu balle yōgiga ḷenaneṃbaru tammoḷage kaihoydu mige naguta mānavaru kaḍumūrkhareṃdē mānagarvava taḷede sāki nnēna hēḷuve ninna ṭhakkanu balle hōgeṃda
ಶತ ಪಿತಾಮಹರಡಗರೇ ನೀ ಮತಿ ಮುರಿಯೆ ಮೇಣ್ ಭ್ರೂವಿಲಾಸ ಸ್ಥಿತಿಯೊಳೇನುತ್ಪತ್ತಿಯಾಗದೆ ಬ್ರಹ್ಮಕೋಟಿಗಳು ಅತಿಶಯದ ಮಹಿಮಾಸ್ಪದನು ನೀ ನತಿ ಗಹನನೆಂಬಗ್ಗಳಿಕೆಗಿದು ಕೃತಕವಲ್ಲಾ ದೇವ ಹೇಳೆನ್ನಾಣೆ ಹೇಳೆಂದ
śata pitāmaharaḍagarē nī mati muriye mēṇ bhrūvilāsa sthitiyoḷēnutpattiyāgade brahmakōṭigaḷu atiśayada mahimāspadanu nī nati gahananeṃbaggaḷikegidu kr̥takavallā dēva hēḷennāṇe hēḷeṃda
ದೇವ ನೀ ದಿಟ ಕೊಲುವಡೆಯು ನಾ ಸಾವೆನೇ ತಾನಾವನೆಂಬುದ ದೇವರರಿಯಿರಲೈ ವೃಥಾ ಸಂಭಿನ್ನ ರೋಷದಲಿ ದೇವನಾಮದ ಜೋಡು ನಮ್ಮನು ಕಾವುದೈ ನೀ ಮುನಿದಡೆಯು ನಿಮ ಗಾವು ಹೆದರೆವು ನಾಮಧಾರಿಗಳತುಳ ಬಲರೆಂದ
dēva nī diṭa koluvaḍeyu nā sāvenē tānāvaneṃbuda dēvarariyiralai vr̥thā saṃbhinna rōṣadali dēvanāmada jōḍu nammanu kāvudai nī munidaḍeyu nima gāvu hedarevu nāmadhārigaḷatuḷa balareṃda
ಭಂಗವಲ್ಲಿದು ನಿನ್ನ ಘನತೆಗೆ ಡಿಂಗರಿಗರೇ ಮಿಗಿಲು ನಿನಗೆಯು ಡಿಂಗರಿಗರೇ ಬಲ್ಲಿದರು ದಾಕ್ಷಿಣ್ಯವೇನಿದಕೆ ಮಂಗಳಾತ್ಮಕ ಕೇಳು ನಿನ್ನಯ ಹಂಗನೊಲ್ಲೆನು ಮುಕುತಿ ಪಥದೊಳ ಭಂಗಪೆಂಡೆಯದಾಳಲೈ ನಿಮ್ಮಡಿಯ ಸಿರಿನಾಮ
bhaṃgavallidu ninna ghanatege ḍiṃgarigarē migilu ninageyu ḍiṃgarigarē ballidaru dākṣiṇyavēnidake maṃgaḷātmaka kēḷu ninnaya haṃganollenu mukuti pathadoḷa bhaṃgapeṃḍeyadāḷalai nimmaḍiya sirināma
ಕಳುಹಿ ಕಳೆವುದು ಖಾತಿಯನು ನೀ ನುಳುಹಿಕೊಂಬುದು ತೇಜವನು ದಿಟ ಕೊಲುವ ಮನವೇ ಬಿಸುಟು ಚಕ್ರವನೆನ್ನ ಕಾಯದಲಿ ಅಳುಕಿ ಕೂದಲು ಹರಿದುದಾದರೆ ಬಳಿಕ ನಾ ಡಿಂಗರಿಗನಲ್ಲೀ ಕಳಕಳಕೆ ನಾನಂಜುವವನೇ ದೇವ ಮರಳೆಂದ
kaḷuhi kaḷevudu khātiyanu nī nuḷuhikoṃbudu tējavanu diṭa koluva manavē bisuṭu cakravanenna kāyadali aḷuki kūdalu haridudādare baḷika nā ḍiṃgariganallī kaḷakaḷake nānaṃjuvavanē dēva maraḷeṃda
ನಚ್ಚಿನಾಳಿನ ಬಿನ್ನಹಕೆ ಹರಿ ಮೆಚ್ಚಿ ಮನದಲಿ ನಾಚಿ ಚಕ್ರವ ಮುಚ್ಚಿದನು ಮುರಿದನು ಕಿರೀಟಿಯ ರಥದ ಹೊರೆಗಾಗಿ ಬೆಚ್ಚಿ ಬೆದರುವ ಸೇನೆಗಭಯವ ಹಚ್ಚಿಕೊಟ್ಟನು ವೀರಭೀಷ್ಮನ ನಿಚ್ಚಟದ ಭಕ್ತಿಯನು ನೆನೆನೆನೆದೊಲೆದ ಹರಿ ಶಿರವ
naccināḷina binnahake hari mecci manadali nāci cakrava muccidanu muridanu kirīṭiya rathada horegāgi becci bedaruva sēnegabhayava haccikoṭṭanu vīrabhīṣmana niccaṭada bhaktiyanu nenenenedoleda hari śirava
ಹೋದುದೊಂದಪಮೃತ್ಯು ಲೋಕಕೆ ತೀದುದಿಲ್ಲಾಯುಷ್ಯ ಮಹದಪ ವಾದ ದೇವಂಗಾಗಿ ತಪ್ಪಿತು ಮುಚ್ಚುಮರೆಯೇಕೆ ಕಾದುಕೊಂಡನು ಭೀಷ್ಮನೀ ಕಮ ಲೋದರನ ಪುಣ್ಯವೆಂದನು ಕಮಲಭವ ನಗುತ
hōdudoṃdapamr̥tyu lōkake tīdudillāyuṣya mahadapa vāda dēvaṃgāgi tappitu muccumareyēke kādukoṃḍanu bhīṣmanī kama lōdarana puṇyaveṃdanu kamalabhava naguta
ನಡುಗುವರ್ಜುನದೇವನನು ತೆಗೆ ದಡಿಗಡಿಗೆ ತಕ್ಕೈಸಿ ಭೀತಿಯ ಬಿಡಿಸಿ ವಾಘೆಯ ಕೊಂಡು ತುರಗವನಡೆಬಲಕೆ ತಿರುಹಿ ನಡಸಿದನು ಕಾಳೆಗಕೆ ಬಳಿಕವ ಗಡ ಮುರಾಂತಕ ಮರಳಿ ಚಕ್ರವ ತುಡುಕದಿರನೆಂದಸ್ತಗಿರಿಯನು ಸೂರ್ಯ ಮರೆಗೊಂಡ
naḍuguvarjunadēvananu tege daḍigaḍige takkaisi bhītiya biḍisi vāgheya koṃḍu turagavanaḍebalake tiruhi naḍasidanu kāḷegake baḷikava gaḍa murāṃtaka maraḷi cakrava tuḍukadiraneṃdastagiriyanu sūrya maregoṃḍa
Keys: ← → turn the page, J K step through the verses.
Illustration: Verse & Place (Project-owned).