Skip to content

ಆದಿ ಪರ್ವ — ಸಂಧಿ ೯ · ಆದಿ ಪರ್ವ — ಸಂಧಿ ೯

Adi Parva · Sandhi 9

ādi parva — saṃdhi 9

The complete adi parva · sandhi 9 in Kannada.

25 passagesKannada with transliteration

An original emblem for Adi Parva.

Invocation

1.9.opening

ಬೆಂಬಿಡದೆ ಕಲಿಭೀಮ ಹಿಡಿದು ಹಿ ಡಿಂಬಕನ ಮುರಿದವನ ತಂಗಿ ಹಿ ಡಿಂಬಿಯನು ಕೂಡಿದನು ಪಡೆದನು ಕಲಿ ಘಟೋತ್ಕಚನ

beṃbiḍade kalibhīma hiḍidu hi ḍiṃbakana muridavana taṃgi hi ḍiṃbiyanu kūḍidanu paḍedanu kali ghaṭōtkacana

ಕೇಳು ಜನಮೇಜಯ ಧರಿತ್ರೀ ಪಾಲ ಯಮನಂದನನ ಪಾರ್ಥನ ಕಾಲೊಡೆದು ಬಸಿವರುಣ ಜಲದಲಿ ಬಟ್ಟೆ ಕೆಸರಾಯ್ತು ಮೇಲೆ ಯಮಳರ ಕುಂತಿಯರನೇ ವೇಳುವೆನು ಬೇಗದಲಿ ಕುರು ಭೂ ಪಾಲ ಹಿಡಿಯಲಿ ಕೊಲಲೆನುತ ಕುಳ್ಳಿರ್ದರಡವಿಯಲಿ

kēḷu janamējaya dharitrī pāla yamanaṃdanana pārthana kāloḍedu basivaruṇa jaladali baṭṭe kesarāytu mēle yamaḷara kuṃtiyaranē vēḷuvenu bēgadali kuru bhū pāla hiḍiyali kolalenuta kuḷḷirdaraḍaviyali

Report an error

ಉರಿಯ ಮನೆಯಲಿ ಸಾಯಲೀಯದೆ ಸೆರಗ ಹಿಡಿದೆಳತಂದು ಕೊಯ್ದನು ಕೊರಳನಕಟಾ ಭೀಮನೇ ಹಗೆಯೆಂದಳಾ ಕುಂತಿ ಅರಸ ಹಿಡಿಯಲಿ ದಾನವರು ನಿಂ ದಿರಿಕೆಯಲಿ ನುಂಗಲಿ ಕೃತಾರ್ಥರು ಧರೆಯೊಳಾವೆಂದೊದರಿದರು ಮಾದ್ರೀಕುಮಾರಕರು

uriya maneyali sāyalīyade seraga hiḍideḷataṃdu koydanu koraḷanakaṭā bhīmanē hageyeṃdaḷā kuṃti arasa hiḍiyali dānavaru niṃ dirikeyali nuṃgali kr̥tārtharu dhareyoḷāveṃdodaridaru mādrīkumārakaru

Report an error

ಸಾಕು ಸಾಕಾನಿರಲು ಹೆಕ್ಕಳ ವೇಕೆ ಹೋ ಹೋಯೆನುತ ಹೊತ್ತನು ನೂಕಿ ಹೆಗಲೆರಡರಲಿ ಕುಂತಿಯ ಧರ್ಮನಂದನನ ಆ ಕಿರೀಟಿಯನೆಡದಲಾ ಮಾ ದ್ರೀ ಕುಮಾರರ ಬಲದ ಬದಿಯೊಳ ಗೌಕಿ ನಡೆದನು ಭೀಮನೊಡೆಹಾಯ್ದೊದೆದು ಕಲು ಮರನ

sāku sākāniralu hekkaḷa vēke hō hōyenuta hottanu nūki hegaleraḍarali kuṃtiya dharmanaṃdanana ā kirīṭiyaneḍadalā mā drī kumārara balada badiyoḷa gauki naḍedanu bhīmanoḍehāydodedu kalu marana

Report an error

ಬಂದನೀ ಪರಿ ಹಲವು ಯೋಜನ ದಿಂದ ಹೇರಡವಿಯಲಿ ಬಳಲಿದೆ ನೆಂದನೇ ನೀರಡಿಸಿದನೆ ಮೇಣ್ ನಿದ್ರೆಗೆಳಸಿದನೆ ತಂದು ಕಾನನ ಮಧ್ಯದಲಿ ತರು ವೃಂದದಡಿಯೊಳಗಿಳುಹಿ ಬಳಿಕರ ವಿಂದದೆಲೆಯಲಿ ನೀರ ತಂದೆರೆದನು ಮಹೀಶರಿಗೆ

baṃdanī pari halavu yōjana diṃda hēraḍaviyali baḷalide neṃdanē nīraḍisidane mēṇ nidregeḷasidane taṃdu kānana madhyadali taru vr̥ṃdadaḍiyoḷagiḷuhi baḷikara viṃdadeleyali nīra taṃderedanu mahīśarige

Report an error

ಷಿಳಿರ ತರಿದೊಟ್ಟಿದನು ತರುವಿನ ನೆಳಲೊಳಗೆ ವಿಶ್ರಮಿಸಿದರು ತನು ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ ಝಳಕೆ ಕಂದಿದ ಮೈಯ ಬಾಡಿದ ಲಲಿತ ವದನದ ಮಾಸಿ ಕೆದರಿದ ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ

ṣiḷira taridoṭṭidanu taruvina neḷaloḷage viśramisidaru tanu baḷalikeya bhāraṇeya kaḍu jōḍisida jhōṃpinali jhaḷake kaṃdida maiya bāḍida lalita vadanada māsi kedarida taleyoḷire tannaivaranu kaṃḍaḷalidanu bhīma

Report an error

ತಾಯೆ ನೀ ದಿಟ ನಾಗ ನಗರಿಯ ರಾಯನರಸಿಯೆ ನಿನ್ನ ಮಕ್ಕಳು ರಾಯರೆದೆ ದಲ್ಲಣರೆ ಭಾರಿಯ ಬಾಹು ವಿಕ್ರಮರೆ ಈಯವಸ್ಥೆಗೆ ಸೋಮವಂಶದ ರಾಯತನವೆಂತಹುದು ಹೇಳೌ ತಾಯೆ ಹೇಳೆನ್ನಾಣೆ ಹೇಳೆಂದಳಲಿದನು ಭೀಮ

tāye nī diṭa nāga nagariya rāyanarasiye ninna makkaḷu rāyarede dallaṇare bhāriya bāhu vikramare īyavasthege sōmavaṃśada rāyatanaveṃtahudu hēḷau tāye hēḷennāṇe hēḷeṃdaḷalidanu bhīma

Report an error

ಜನನಿಯಂಘ್ರಿಯನೊತ್ತಿ ಯಮನಂ ದನನ ಚರಣವ ಮುರಿದು ಬಳಿಕ ರ್ಜುನನ ಯಮಳರ ಪದವನೆಚ್ಚರದಂತೆ ಹಿಡಿಕಿಸುತ ಅನಿಬರಿರವನು ನೋಡಿ ಪೂರ್ವವ ನೆನೆದು ಬಿರಿದಳುತ ಘನಕಾ ನನದ ಮಧ್ಯದಲೀತನಿದ್ದನು ಹಿರಿದು ಚಿಂತಿಸುತ

jananiyaṃghriyanotti yamanaṃ danana caraṇava muridu baḷika rjunana yamaḷara padavaneccaradaṃte hiḍikisuta anibariravanu nōḍi pūrvava nenedu biridaḷuta ghanakā nanada madhyadalītaniddanu hiridu ciṃtisuta

Report an error

ಔಕುವುದು ಬಲು ನಿದ್ರೆ ನಿದ್ರೆಯ ನೂಕುವನು ಕಣ್ಣೆವೆಗಳಲಿ ನಸು ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ ಸೋಕುವುದು ಮೈಮರವೆ ಮರವೆಯ ನೋಕರಿಸುವುದು ಚಿತ್ತವೃತ್ತಿ ನಿ ರಾಕುಲಾಂತಃಕರಣನಾದನು ಬಳಿಕ ಕಲಿಭೀಮ

aukuvudu balu nidre nidreya nūkuvanu kaṇṇevegaḷali nasu tūkaḍike tōridoḍe maigedaruvanu kaiyoḍane sōkuvudu maimarave maraveya nōkarisuvudu cittavr̥tti ni rākulāṃtaḥkaraṇanādanu baḷika kalibhīma

Report an error

ವ್ಯಾಳ ಗಜ ಭೂದಾರ ವೃಕ ಶಾ ರ್ದೂಲ ಸಿಂಹಾದಿಗಳ ಭಯವಾ ಕೀಳ ದೈತ್ಯ ಪ್ರಕರ ಭಯವಹುದೆನ್ನ ಮರವೆಯಲಿ ಹೇಳಲೇನದನಿನ್ನು ನಿದ್ರಾ ವ್ಯಾಳ ವಿಷವನು ಮೊಗೆದು ಸೂಸಿ ವಿ ಶಾಲ ಮತಿಯವಧಾನದಲಿ ಕಾದಿರ್ದನೈವರನು

vyāḷa gaja bhūdāra vr̥ka śā rdūla siṃhādigaḷa bhayavā kīḷa daitya prakara bhayavahudenna maraveyali hēḷalēnadaninnu nidrā vyāḷa viṣavanu mogedu sūsi vi śāla matiyavadhānadali kādirdanaivaranu

Report an error

ಧರಣಿಪತಿ ಕೇಳೊಂದು ಮಾರಿಯ ಮುರಿವನಿವರಿಗೆ ತದ್ವನಾಂತರ ದರಸು ದೈತ್ಯ ಹಿಡಿಂಬನೆಂಬವನತುಲ ಭುಜಬಲನು ಮುರಿಮುರಿದು ಮೇಗಾಳಿಯಲಿ ಮೂ ಗರಳಿ ಮಾನವ ಗಂಧವಿದು ಗೋ ಚರಿಸಿತೆತ್ತಣದೋ ಮಹಾದೇವೆನುತ ಬೆರಗಾದ

dharaṇipati kēḷoṃdu māriya murivanivarige tadvanāṃtara darasu daitya hiḍiṃbaneṃbavanatula bhujabalanu murimuridu mēgāḷiyali mū garaḷi mānava gaṃdhavidu gō carisitettaṇadō mahādēvenuta beragāda

Report an error

ತಾಯೆ ಬಾರೌ ತಂಗಿ ಗಂಧದ ವಾಯುವಿದೆ ಹೊಣೆಗಾರನಾಗಿ ನ ವಾಯ ಭೋಜನವಿಂದು ದೊರಕಿತು ಮನುಜಮಾಂಸದಲಿ ಸಾಯಲವದಿರ ಬಡಿದು ತಾ ತಮ ಗಾಯವಿದು ಕೃತಪುಣ್ಯಫಲವೆನೆ ಮಾಯಗಾತಿ ಹಸಾದವೆನುತ ಹಿಡಿಂಬಿ ಗಮಿಸಿದಳು

tāye bārau taṃgi gaṃdhada vāyuvide hoṇegāranāgi na vāya bhōjanaviṃdu dorakitu manujamāṃsadali sāyalavadira baḍidu tā tama gāyavidu kr̥tapuṇyaphalavene māyagāti hasādavenuta hiḍiṃbi gamisidaḷu

Report an error

ಬಂದಳವಳತಿ ರೌದ್ರರೂಪಿನೊ ಳಂದು ಕಂಡಳು ದೂರದಲಿ ಹರಿ ನಂದನನ ಸುಳಿದಲೆಯ ಕೆಮ್ಮೀಸೆಗಳ ಕರ್ಕಶದ ಕೆಂದಳದ ಕೇಸರಿಯ ಕಂಗಳ ಕುಂದ ರದನಚ್ಛವಿಯಲಿರೆ ಮನ ಸಂದಳಾ ಖಳನನುಜೆ ಸೋತಳು ಭೀಮಸೇನಂಗೆ

baṃdaḷavaḷati raudrarūpino ḷaṃdu kaṃḍaḷu dūradali hari naṃdanana suḷidaleya kemmīsegaḷa karkaśada keṃdaḷada kēsariya kaṃgaḷa kuṃda radanacchaviyalire mana saṃdaḷā khaḷananuje sōtaḷu bhīmasēnaṃge

Report an error

ಇವನ ರಮಣನ ಮಾಡಿಕೊಂಡೋ ಡುವೆನು ವಿಪಿನಾಂತರಕೆ ಮುನಿದವ ನಿವದಿರೈವರ ತಿನಲಿ ಮರದಡಿಯಲ್ಲಿ ಮಲಗಿದರ ಇವನು ತನ್ನಯ ರೌದ್ರಮಯ ರೂ ಪವನು ಕಂಡರೆ ಹೆದರುವನಲಾ ಯುವತಿಯಹೆನೆಂದಸುರೆ ಸುಳಿದಳು ದಿವ್ಯರೂಪಿನಲಿ

ivana ramaṇana māḍikoṃḍō ḍuvenu vipināṃtarake munidava nivadiraivara tinali maradaḍiyalli malagidara ivanu tannaya raudramaya rū pavanu kaṃḍare hedaruvanalā yuvatiyaheneṃdasure suḷidaḷu divyarūpinali

Report an error

ಹೊಳೆವ ಕಂಗಳ ಕಾಂತಿ ಮರಗ ತ್ತಲೆಯ ಮೊತ್ತವ ಬಿಗಿಯೆ ಮೈ ಪರಿ ಮಳಕೆ ತೂಳುವ ತುಂಬಿಗಳ ತನುಲತೆಯ ಚೆಲುವಿಕೆಯ ಲಲನೆ ಸುಳಿದಳು ಕುಚದ ಭಾರಕೆ ಬಳುಕೆ ನಡು ಬಿಡದೊಲೆದು ಮೇಲುದು ತಳೆಯೆ ಸುಳಿಗುರುಳೊಲೆಯಲಾ ಕಲಿಭೀಮನಿದಿರಿನಲಿ

hoḷeva kaṃgaḷa kāṃti maraga ttaleya mottava bigiye mai pari maḷake tūḷuva tuṃbigaḷa tanulateya celuvikeya lalane suḷidaḷu kucada bhārake baḷuke naḍu biḍadoledu mēludu taḷeye suḷiguruḷoleyalā kalibhīmanidirinali

Report an error

ಭೀಮ ನೋಡನು ನುಡಿಸನೊಯ್ಯನೆ ತಾಮರಸಮುಖಿ ಹೊದ್ದಿದಳು ನಿ ಸ್ಸೀಮನೈ ನೀನಾರು ಮಲಗಿದ ಮರ್ತ್ಯರಿವರಾರು ಈ ಮಹಾರಣ್ಯದಲಿ ಬರವಿದು ಕಾಮಿತವೆ ಕೋಮಲರಿಗೆನೆ ನಿ ಷ್ಕಾಮ ಮನದಲಿ ಸತಿಯ ನುಡಿಸಿದನಾರು ನೀನೆಂದು

bhīma nōḍanu nuḍisanoyyane tāmarasamukhi hoddidaḷu ni ssīmanai nīnāru malagida martyarivarāru ī mahāraṇyadali baravidu kāmitave kōmalarigene ni ṣkāma manadali satiya nuḍisidanāru nīneṃdu

Report an error

ವನ ಹಿಡಿಂಬನದಾ ಹಿಡಿಂಬಕ ನನುಜೆ ತಾನು ಹಿಡಿಂಬಿಯೀ ಕಾ ನನವಿದೆಮ್ಮಾಶ್ರಮವಗಮ್ಯವು ದಿವಿಜ ಮನುಜರಿಗೆ ನಿನಗೆ ಕಾಮಿಸಿ ಬಂದೆನಣ್ಣನು ಮುನಿದೊಡಿವದಿರ ತಿನಲಿ ನೀನೇ ಳೆನಗೆ ವಲ್ಲಭನಾಗು ಕೊಂಡೊಯ್ವೆನು ಹಿಮಾಚಲಕೆ

vana hiḍiṃbanadā hiḍiṃbaka nanuje tānu hiḍiṃbiyī kā nanavidemmāśramavagamyavu divija manujarige ninage kāmisi baṃdenaṇṇanu munidoḍivadira tinali nīnē ḷenage vallabhanāgu koṃḍoyvenu himācalake

Report an error

ನಿನ್ನನೊಲ್ಲೆನು ಮುನಿದೆಯಾದಡೆ ನಿನ್ನ ದೈತ್ಯನ ಕೊಂಡು ಬಾ ಹೋ ಗೆನ್ನ ಬಲುಹನು ನೋಡು ನೀನೆನಲಸುರೆ ವಿನಯದಲಿ ಮುನ್ನಲೇ ಮನುಮಥನ ಶರದಲಿ ಖಿನ್ನೆಯಾಗಿಹೆ ಮರೆಯ ಹೊಕ್ಕೆನು ತನ್ನನೀ ಪರಿ ಮುರಿದು ನುಡಿವರೆ ಎಂದಳಿಂದುಮುಖಿ

ninnanollenu munideyādaḍe ninna daityana koṃḍu bā hō genna baluhanu nōḍu nīnenalasure vinayadali munnalē manumathana śaradali khinneyāgihe mareya hokkenu tannanī pari muridu nuḍivare eṃdaḷiṃdumukhi

Report an error

ಅನುಜೆ ತಳುವಿದಳೆಂದು ರೋಷ ಸ್ತನಿತ ಗದ್ಗದ ಕಂಠನೊದೆದೆ ದ್ದನು ಮಹೀಮಂಡಲವನುಗ್ರಾಂಬಕನ ಡೊಂಬಿನಲಿ ಅನಿಲಸುತನಿದಿರೆದ್ದನೀತನೆ ದನುಜೆ ನಿನ್ನವನಾಯ್ತು ತಪ್ಪೇ ನೆನುತೆ ಹಳಚಿದೊಡಾ ಹಿಡಿಂಬಕ ಜಡಿದು ಬೊಬ್ಬಿರಿದ

anuje taḷuvidaḷeṃdu rōṣa stanita gadgada kaṃṭhanodede ddanu mahīmaṃḍalavanugrāṃbakana ḍoṃbinali anilasutanidireddanītane danuje ninnavanāytu tappē nenute haḷacidoḍā hiḍiṃbaka jaḍidu bobbirida

Report an error

ಒರಲ ಬೇಡವೊ ಕುನ್ನಿ ಮೆಲ್ಲನೆ ತರುಬಿ ಕಾದುವುದೆಲವೊ ಮೈಮರ ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ ತರುಬಿ ಹಿಡಿದಾ ಭೀಮ ಬೆನ್ನಿನೊ ಳೆರಗಿದನು ಹೆಮ್ಮರಕೆ ಹಾಯಿದು ಮುರಿದು ಹೊಯ್ದು ಹಿಡಿಂಬ ಕೊಡಹಿದನನಿಲ ನಂದನನ

orala bēḍavo kunni mellane tarubi kāduvudelavo maimara doragidavarēḷvaru kaṇā sattaṃte sārenuta tarubi hiḍidā bhīma bennino ḷeragidanu hemmarake hāyidu muridu hoydu hiḍiṃba koḍahidananila naṃdanana

Report an error

ಎದ್ದು ತಿವಿದನು ಖಳನ ಬದಿಯೊಳ ಗದ್ದು ದೀತನ ಮುಷ್ಟಿ ಮುರಿದೊಡ ನೆದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ ಗೆದ್ದೆಯಿದ ಕೊಳ್ಳೆನುತ ಖಳನು ಬ್ಬೆದ್ದು ಹೊಯ್ದರೆ ಮರ ಸಹಿತ ಹಿಡಿ ದುದ್ದಿ ನೆಲದೊಳಗೊರಸಿ ಕೊಂದನು ಕಲಿ ಹಿಡಿಂಬಕನ

eddu tividanu khaḷana badiyoḷa gaddu dītana muṣṭi muridoḍa neddu nimiṣake saṃtavisi hemmarana koṃbinali geddeyida koḷḷenuta khaḷanu bbeddu hoydare mara sahita hiḍi duddi neladoḷagorasi koṃdanu kali hiḍiṃbakana

Report an error

ಕಳಕಳದೊಳಿವರೆದ್ದುಯಿವನತಿ ಬಳ ಮಹಾದೇವೆಮ್ಮನೆಬ್ಬಿಸಿ ಬಳಿಕ ಕಾದದೆ ತಮ್ಮ ಕೆಡಿಸಲು ಕಾಕ ಬಳಸಿದೆಲ ಬಳಲಿದೆಮ್ಮನು ಹೊತ್ತು ತೊಳಲಿದ ಬಳಲಿಕೆಯಲೀ ಕೇಡು ಲೇಸಾ ಯ್ತುಳಿದೆ ಪುಣ್ಯವಿದೆಂದರಾ ಯಮನಂದನಾದಿಗಳು

kaḷakaḷadoḷivaredduyivanati baḷa mahādēvemmanebbisi baḷika kādade tamma keḍisalu kāka baḷasidela baḷalidemmanu hottu toḷalida baḷalikeyalī kēḍu lēsā ytuḷide puṇyavideṃdarā yamanaṃdanādigaḷu

Report an error

ಖಳ ಮಡಿಯಲವನನುಜೆ ಭೀಮನ ನೊಲಿಸಲರಿಯದೆ ಕುಂತಿಗೆಲ್ಲವ ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ ಹಲವು ಪರಿಯಲಿಯಿವರನವಳಂ ಡಲೆದು ಭೀಮಗೆ ಹೇಳಿಸಿದಳಾ ಫಲುಗುಣನ ಕೈಯಿಂದ ಧರ್ಮಜನಿಂದ ನುಡಿಸಿದಳು

khaḷa maḍiyalavananuje bhīmana nolisalariyade kuṃtigellava tiḷuhi nuḍidaḷu tanna pūrvāparada saṃgatiya halavu pariyaliyivaranavaḷaṃ ḍaledu bhīmage hēḷisidaḷā phaluguṇana kaiyiṃda dharmajaniṃda nuḍisidaḷu

Report an error

ಆರು ನುಡಿಯಲು ಸರ್ವಥಾ ಖಳ ನಾರಿಯನು ಕೈಕೊಳ್ಳೆನೆಂದೇ ವೀರ ಬಲಿದನು ಬಳಿಕ ವೇದವ್ಯಾಸಮುನಿ ಬಂದು ಸಾರ ನಯದಲಿ ತೋರಿ ತಿಳುಹಿ ಕು ಮಾರ ಸಂಭವವವಧಿಯೆಂದಾ ನಾರಿಯನು ಗಂಟಿಕ್ಕಿದನು ಮುನಿ ಭೀಮಸೇನಂಗೆ

āru nuḍiyalu sarvathā khaḷa nāriyanu kaikoḷḷeneṃdē vīra balidanu baḷika vēdavyāsamuni baṃdu sāra nayadali tōri tiḷuhi ku māra saṃbhavavavadhiyeṃdā nāriyanu gaṃṭikkidanu muni bhīmasēnaṃge

Report an error

ಎಲ್ಲಿ ಉಪವನ ವರ ಸರೋವರ ವೆಲ್ಲಿ ಕೇಳೀ ಶೈಲ ಹಿಮಗೃಹ ವೆಲ್ಲಿ ರಮ್ಯೋದ್ಯಾನವೆಲ್ಲಿ ವಿಹಾರ ವನಭೂಮಿ ಅಲ್ಲಿಗಲ್ಲಿಗೆ ಹರಿದು ಮಾರುತಿ ವಲ್ಲಭೆಯ ರಮಿಸಿದನು ಚೌಪಟ ಮಲ್ಲ ಜನಿಸಿದ ಕಲಿ ಘಟೋತ್ಕಚನಾ ಹಿಡಿಂಬಿಯಲಿ

elli upavana vara sarōvara velli kēḷī śaila himagr̥ha velli ramyōdyānavelli vihāra vanabhūmi alligallige haridu māruti vallabheya ramisidanu caupaṭa malla janisida kali ghaṭōtkacanā hiḍiṃbiyali

Report an error

ನುಡಿದ ಸಮಯಕೆ ತನ್ನ ರಮಣಿಯ ನೊಡಬಡಿಸಿ ಹೈಡಿಂಬ ರಾಜ್ಯವ ವೊಡೆತನವ ನೆರೆ ಮಾಡಿ ನಿಲಿಸಿದನಾ ಘಟೋತ್ಕಚನ ನಡೆದು ಬಂದರು ಶಾಲಿಹೋತ್ರನ ನಡುವೆ ಕಂಡುಪಚರಿಸಿ ಕೊಂಡರು ಪಡುವಲಭಿಮುಖರಾದರನಿಬರು ವಿಪ್ರವೇಷದಲಿ

nuḍida samayake tanna ramaṇiya noḍabaḍisi haiḍiṃba rājyava voḍetanava nere māḍi nilisidanā ghaṭōtkacana naḍedu baṃdaru śālihōtrana naḍuve kaṃḍupacarisi koṃḍaru paḍuvalabhimukharādaranibaru vipravēṣadali

Report an error

Illustration: Verse & Place (Project-owned).