ವೀರರಿಪುಕದಳೀವನಕೆ ಮದವಾರಣನು ಫಲುಗುಣನ ತನಯನು ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ
vīraripukadaḷīvanake madavāraṇanu phaluguṇana tanayanu dāra padmavyūhadali gelidanu kumārakara
ದ್ರೋಣ ಪರ್ವ — ಸಂಧಿ ೫ · ದ್ರೋಣ ಪರ್ವ — ಸಂಧಿ ೫
drōṇa parva — saṃdhi 5
The complete drona parva · sandhi 5 in Kannada.
82 passagesKannada with transliteration
Invocation
ವೀರರಿಪುಕದಳೀವನಕೆ ಮದವಾರಣನು ಫಲುಗುಣನ ತನಯನು ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ
vīraripukadaḷīvanake madavāraṇanu phaluguṇana tanayanu dāra padmavyūhadali gelidanu kumārakara
ಅವಧರಿಸು ಧೃತರಾಷ್ಟ್ರ ನೃಪ ಸೈಂ ಧವನ ಗೆಲಿದಾ ವ್ಯೂಹ ಭೇದಾ ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ ತಿವಿದನುರುಬುವ ರಥ ಪದಾತಿಯ ಕವಿವ ಗರುವ ತುರಂಗಗಳ ಬಲು ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ
avadharisu dhr̥tarāṣṭra nr̥pa saiṃ dhavana gelidā vyūha bhēdā havavijaya vijayātmakana kautuka raṇōdayava tividanurubuva ratha padātiya kaviva garuva turaṃgagaḷa balu javada ratha kōṭyānukōṭiya hodara hosa meḷeya
ಹರಿಯ ಚಕ್ರ ವರೂಥ ಚಕ್ರದೊ ಳುರವಣಿಪ ತೇಜಿಗಳ ಕಡುಹಿನ ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ ಹರನ ನಯನಜ್ವಾಲೆ ಪಾರ್ಥಿಯ ಸರಳ ಕಿಡಿಯಲಿ ಪಲ್ಲಟಿಸೆ ಸಂ ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ
hariya cakra varūtha cakrado ḷuravaṇipa tējigaḷa kaḍuhina khurada hoylali vilaya pavanana gariya gāḷiyali harana nayanajvāle pārthiya saraḷa kiḍiyali pallaṭise saṃ garadoḷage saivaridu sadedanu sakala sainikara
ಮಿಕ್ಕು ನೂಕುವ ಕುದುರೆಕಾರರು ತೆಕ್ಕೆಗೆಡೆದರು ಸಂದಣಿಸಿ ಕೈ ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ ಹೊಕ್ಕು ಹರಿಸುವ ರಥ ಪದಾತಿಯ ನೊಕ್ಕಲಿಕ್ಕಿದನಮಮ ಮಗುವಿನ ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ
mikku nūkuva kudurekāraru tekkegeḍedaru saṃdaṇisi kai yikkidāneyanēnaneṃbenu kāṇenaḷaviyali hokku harisuva ratha padātiya nokkalikkidanamama maguvina makkaḷāṭike māriyāyitu vairi rāyarige
ಕದಳಿಯೊಳು ಮದದಾನೆ ಹೊಕ್ಕಂ ದದಲಿ ಹೆಚ್ಚಿದ ಚಾತುರಂಗದ ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು ಇದಿರೊಳೆಚ್ಚನು ಕೆಲಬಲದೊಳಿಹ ಕದನಗಲಿಗಳ ಸೀಳಿದನು ಕಾ ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ
kadaḷiyoḷu madadāne hokkaṃ dadali heccida cāturaṃgada medeyanoṭṭidu hūṇe hokkanu thaṭṭanoḍetuḷidu idiroḷeccanu kelabaladoḷiha kadanagaligaḷa sīḷidanu kā didanu kālana līleyādudu viṣama samaraṃga
ಜೋಡೊಡೆದು ಥಟ್ಟುಗಿದು ಬೆನ್ನಲಿ ಮೂಡಲದಟರ ಸೀಳಿದನು ಖುರ ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ ನೋಡಲಮ್ಮುವರಿಲ್ಲ ಮಿಗೆ ಕೈ ಮಾಡಲಮ್ಮುವರಿಲ್ಲ ಬಲವ ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ
jōḍoḍedu thaṭṭugidu bennali mūḍaladaṭara sīḷidanu khura jōḍu huḍihuḍiyāge tējiya thaṭṭa khaṃḍisida nōḍalammuvarilla mige kai māḍalammuvarilla balava llāḍitobbane hasuḷe hokkanu vairi mōharava
ಆವ ವಹಿಲದೊಳಂಬ ತೊಡಚುವ ನಾವ ವೇಗದೊಳಿದಿರಲೆಸುವನ ದಾವ ನಿರುತದಲೊಡ್ಡುವನು ಕೊರಳಿಂಗೆ ಕೋಲುಗಳ ಆವ ದೃಢತೆಯೊ ದೃಷ್ಟಿವಾಳವಿ ದಾವ ಗರುಡಿಶ್ರಮವೆನುತ ದಿವಿ ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ
āva vahiladoḷaṃba toḍacuva nāva vēgadoḷidiralesuvana dāva nirutadaloḍḍuvanu koraḷiṃge kōlugaḷa āva dr̥ḍhateyo dr̥ṣṭivāḷavi dāva garuḍiśramavenuta divi jāvaḷigaḷuliyalu vibhāḍisidanu ripuvrajava
ಎಡದಲೌಕುವ ರಾವುತರ ವಂ ಗಡವನೆಚ್ಚನು ಸಮ್ಮುಖದೊಳವ ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ ಕಡುಗಿ ಬಲದಲಿ ಕವಿವ ರಥಿಕರ ಕೆಡಹಿದನು ಕಾಲಾಳು ತೇರಿನ ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ
eḍadalaukuva rāvutara vaṃ gaḍavaneccanu sammukhadoḷava gaḍisuvibha kōṭigaḷa koṃdanu saraḷa sāradali kaḍugi baladali kaviva rathikara keḍahidanu kālāḷu tērina gaḍaṇa huḍihuḍiyāytenalu savaridanu parabalava
ಉರವಣಿಸಿದರು ಮತ್ತೆ ಭಟರ ಬ್ಬರದ ಖತಿಯಲಿ ನಿಖಿಳ ಮನ್ವಂ ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ ಸರಳು ಕಡಿದವು ಸಕುತಿ ಸೆಲ್ಲೆಹ ಪರಶು ಕವಿದವು ಖಡ್ಗ ತೋಮರ ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ
uravaṇisidaru matte bhaṭara bbarada khatiyali nikhiḷa manvaṃ tarada kaḍeyali nelananadduva kaḍala kaḍuhinali saraḷu kaḍidavu sakuti selleha paraśu kavidavu khaḍga tōmara suragi hoḷedavu kaidu hēridavakhiḷa desegaḷali
ತೊಲಗಿರೈ ಕಾಲಾಳು ಮೇಲಾ ಳಳವಿಗೊಡಲಿ ಮಹಾರಥರು ಮುಂ ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ ಕೆಲದ ದೊರೆಗಳು ಬರಲಿ ಮಾರಿದ ತಲೆಯ ಭಂಡವ ಹೊತ್ತಿರದೆ ಕೈ ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು
tolagirai kālāḷu mēlā ḷaḷavigoḍali mahāratharu muṃ koḷali jōdaru diṭṭarādare kavisi karighaṭeya kelada doregaḷu barali mārida taleya bhaṃḍava hottirade kai koḷali karṇādigaḷenuta hokkeccanabhimanyu
ಕಾರಗಲಸಿದನಮಮ ರಾಜ ಕು ಮಾರ ಕಂಠೀರವನು ರಿಪು ಪರಿ ವಾರವನು ನಡೆಗೊಳಿಸಿದನು ಯಮರಾಜನಾಲಯಕೆ ಮಾರಿ ಮೊಗವಡದೆರೆದಳೋ ಕೈ ವಾರವೋ ತರುವಲಿಗಿದೆತ್ತಣ ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ
kāragalasidanamama rāja ku māra kaṃṭhīravanu ripu pari vāravanu naḍegoḷisidanu yamarājanālayake māri mogavaḍaderedaḷō kai vāravō taruvaligidettaṇa vīravō śiva enuta beragāyittu surakaṭaka
ಕೊಡೆನೆಗೆದವಟ್ಟೆಗಳು ರಕುತದ ಕಡಲೊಳರೆಜೀವದ ಭಟರು ಬಾ ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ ಅಡಸಿ ನೆಗೆವಾನೆಗಳ ತಲೆಗಳ ಗಡಣ ಮೆರೆದವು ಮಿಕ್ಕ ತೇಜಿಯ ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ
koḍenegedavaṭṭegaḷu rakutada kaḍaloḷarejīvada bhaṭaru bā yviḍuta tēkāḍidaru muṃḍada hiṃḍu muḷugāḍe aḍasi negevānegaḷa talegaḷa gaḍaṇa meredavu mikka tējiya kaḍikugaḷu kuṇidāḍidavu kiggaḍala rakutadali
ಕರಿಘಟೆಯ ಕಲಕಿದನು ಹಯ ಮೋ ಹರವ ಜರುಹಿದನೌಕಿ ಹರಿತಹ ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ ಹುರಿಯೊಡೆದು ಮೈದೆಗೆದು ಸಲೆ ಕೈ ಮರೆದು ಕೈದುವ ಹಾಯ್ಕಿ ಪಡೆ ಮೊಗ ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ
karighaṭeya kalakidanu haya mō harava jaruhidanauki haritaha vara rathava huḍimāḍidanu keḍahidanu kālāḷa huriyoḍedu maidegedu sale kai maredu kaiduva hāyki paḍe moga diruhaleccanu koccidanu kaurava caturbalava
ತಳಿತ ಹೊಗರಿನ ಬಾಯಿ ಧಾರೆಯ ಹೊಳಹುಗಳ ಹೊಸ ಮಸೆಯ ತಳಪದ ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ ಲುಳಿಯ ಹಂಗನ ಗರಿಯ ಬಿಗುಹಿನ ಹಿಳುಕುಗಳ ಹೊಗರಂಬು ಕವಿದವು ತುಳುಕಿದವು ತೂರಿದವು ಕೆದರಿದವಹಿತಬಲದಸುವ
taḷita hogarina bāyi dhāreya hoḷahugaḷa hosa maseya taḷapada beḷagugaḷa balidiṃgalīka suvarṇa rēkhegaḷa luḷiya haṃgana gariya biguhina hiḷukugaḷa hogaraṃbu kavidavu tuḷukidavu tūridavu kedaridavahitabaladasuva
ಅಳವಿಗೆಡೆ ಧುಮ್ಮಿಕ್ಕಿ ರಥದವ ರಿಳಿಯ ಬಿದ್ದರು ಭಯದಿ ತೇಜಿಯ ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ ಗುಳವ ಸಡಿಲಿಸಿ ಹಾಯ್ಕಿ ಜೋದಾ ವಳಿಗಳಿಳಿದುದು ಕೈಯ ಕೈದುವ ನಿಳುಹಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ
aḷavigeḍe dhummikki rathadava riḷiya biddaru bhayadi tējiya niḷidu rāvtaru karava mugidaru koraḷa salahenuta guḷava saḍilisi hāyki jōdā vaḷigaḷiḷidudu kaiya kaiduva niḷuhi bāyali beraḷaniṭṭudu vairi pāyadaḷa
ಎಸಳ ಮೊನೆ ಮೋಹರದ ಸಂದಣಿ ಯುಸಿರನುಳಿದುದು ಕೇಸರಾಕೃತಿ ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ ನುಸುಳಿದರು ಕರ್ಣಿಕೆಯ ಕಾಹಿನ ವಸುಮತೀಶರು ರಾಯನರನೆಲೆ ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ
esaḷa mone mōharada saṃdaṇi yusiranuḷidudu kēsarākr̥ti yasama vīraru pathikarādaru gagana mārgadali nusuḷidaru karṇikeya kāhina vasumatīśaru rāyanaranele desegeḍalu moḷagidanu pārthakumāranaḷaviyali
ಜರಿದುದಬ್ಜವ್ಯೂಹ ನೂಕಿದ ಕರಿ ತುರಗ ಕಾಲಾಳು ತೇರಿನ ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ ದೊರೆಗಳಹ ದ್ರೋಣಾದಿಗಳು ಕೈ ಮರೆದು ಕಳೆದರು ಪಾರ್ಥತನಯನ ಸರಿಯೊರೆಗೆ ಭಟನಾವನೆಂದನು ಕೌರವರ ರಾಯ
jaridudabjavyūha nūkida kari turaga kālāḷu tērina maraḷudale tānilla nere nuggāytu kurusēne doregaḷaha drōṇādigaḷu kai maredu kaḷedaru pārthatanayana sariyorege bhaṭanāvaneṃdanu kauravara rāya
ತಂದೆ ಹಡೆಯನೆ ಮಗನನಹುದೋ ಕಂದ ಕಲ್ಪ ಸಹಸ್ರ ನೋಂತಳೊ ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ ಇಂದಿನೀ ಬಲವೀ ಸಮರ ಜಯ ದಂದವೀ ಸೌರಂಭವೀ ಸರ ಳಂದವೀ ತೆರಳಿಕೆಯದಾವಂಗೆಂದನವನೀಶ
taṃde haḍeyane magananahudō kaṃda kalpa sahasra nōṃtaḷo iṃdudharananu ninna tāyi subhadreyalladaḍe iṃdinī balavī samara jaya daṃdavī sauraṃbhavī sara ḷaṃdavī teraḷikeyadāvaṃgeṃdanavanīśa
ಹುರುಡ ಮರೆದೆನು ಮಗನೆ ಸಾಲದೆ ಭರತಕುಲದಲಿ ನಿನ್ನ ಬೆಳವಿಗೆ ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ ಕರುಳು ಬೀಳವೆ ತನ್ನ ಬಸುರಿಂ ದುರುಳಿದವದಿರಲೇನು ಫಲ ಮ ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ
huruḍa maredenu magane sālade bharatakuladali ninna beḷavige yeraḍu kavalanvayake koḍadē sugati saṃpadava karuḷu bīḷave tanna basuriṃ duruḷidavadiralēnu phala ma tsarave pārtha kr̥tārthaneṃdanu kauravara rāya
ಎನುತ ಬಿಲುದುಡುಕಿದನು ಸೇನಾ ವನಧಿಗಭಯವನಿತ್ತು ಮರಳುವ ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ ಮೊನೆಗಣೆಯ ತೂಗುತ್ತ ನರ ನಂ ದನನ ರಥವನು ತರುಬಿ ನಿನ್ನಯ ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ
enuta biluduḍukidanu sēnā vanadhigabhayavanittu maraḷuva janaparanu jaredeḍabalada manneyara mūdalisi monegaṇeya tūgutta nara naṃ danana rathavanu tarubi ninnaya tanayanaḍḍaisidanu kaurava rāya khātiyali
ಮಗುವು ನೀ ಕೆಡಬೇಡ ಹೋಗೆನು ತಗಣಿತಾಸ್ತ್ರವ ಸುರಿವುತೈತರೆ ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ ಮಗುವು ತಾನಹೆ ತನ್ನ ಬಾಣಕೆ ಮಗುವುತನ ಬೇರಿಲ್ಲ ನೋಡೆಂ ದಗಲದಲಿ ಕೂರಂಬ ಸುರಿದನು ಪಾರ್ಥನಂದನನು
maguvu nī keḍabēḍa hōgenu tagaṇitāstrava surivutaitare naguta niṃdabhimanyu nuḍidanu kauravēśvarana maguvu tānahe tanna bāṇake maguvutana bērilla nōḍeṃ dagaladali kūraṃba suridanu pārthanaṃdananu
ಎಸಲು ಕಣೆ ಮುಕ್ಕುರುಕಿದವು ಹೊಸ ಮಸೆಯ ಧಾರೆಯ ತೋರ ಕಿಡಿಯಲಿ ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು ಬಸಿವ ರಕುತದ ಜರಿವ ಜೋಡಿನ ನಸಿದ ಗರ್ವದ ನೆಗ್ಗಿದಾಳ್ತನ ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ
esalu kaṇe mukkurukidavu hosa maseya dhāreya tōra kiḍiyali musukitarasana tēru taḷitavu meyyoḷaṃbugaḷu basiva rakutada jariva jōḍina nasida garvada neggidāḷtana desakadoṇagila bāya bhūpana kaṃḍanā drōṇa
ರಾಯ ಸಿಲುಕಿದನಕಟಕಟ ರಾ ಧೇಯ ನಡೆ ಕೃಪ ಹೋಗು ಮಗನೆ ನಿ ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ ರಾಯನನುಜರು ಕೈದುಗೊಳಿ ರಣ ದಾಯ ತಪ್ಪಿತು ನೃಪತಿ ಮಾರಿಯ ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ
rāya silukidanakaṭakaṭa rā dhēya naḍe kr̥pa hōgu magane ni jāyudhava hiḍi śalya taḍeyadirēḷu kr̥tavarma rāyananujaru kaidugoḷi raṇa dāya tappitu nr̥pati māriya bāya tuttādanu śivā eṃdoralidanu drōṇa
ಮಾತು ಹಿಂಚಿತು ಮುಂಚೆ ಸುಭಟ ವ್ರಾತ ಹೊಕ್ಕುದು ಸಿಕ್ಕಿದರಸನ ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ ಸೋತೆವಾವ್ ನೀ ಗೆಲಿದೆ ಕರೆ ನಿ ಮ್ಮಾತಗಳನೀ ಭ್ರೂಣಹತ್ಯಾ ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ
mātu hiṃcitu muṃce subhaṭa vrāta hokkudu sikkidarasana bhītiyanu biḍisidaru bīridaraṃbugaḷa maḷeya sōtevāv nī gelide kare ni mmātagaḷanī bhrūṇahatyā pātakakkaṃjuvenenuta kaikoṃḍanā drōṇa
ರಾಯನನು ತೊಲಗಿಸಿದರಾ ಕ ರ್ಣಾಯತಾಸ್ತ್ರರು ರಾಹುವಿನ ಕಟ ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭಟರಿಗೆ ಸಾಯಕವ ಸರಿಗೊಳಿಸಿದರು ವ ಜ್ರಾಯುಧನ ಮೊಮ್ಮನ ರಥವ ನಿ ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು
rāyananu tolagisidarā ka rṇāyatāstraru rāhuvina kaṭa vāya caṃdrana seḷevavōlaridāytu subhaṭarige sāyakava sarigoḷisidaru va jrāyudhana mommana rathava ni rdāyadali muttidaru kurusēnā mahāratharu
ಹಸುಳೆತನದಲಿ ಹರನ ಮಗನಾ ವಿಷಮ ದೈತ್ಯನ ಸೀಳಿ ಬಿಸುಡನೆ ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ ಶಿಶುವೆ ನೋಡಭಿಮನ್ಯು ಸುಭಟ ಪ್ರಸರದಿನಿಬರನೊಂದು ಘಾಯದೊ ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ
hasuḷetanadali harana maganā viṣama daityana sīḷi bisuḍane śiśuvalā pradyumna muriyane śaṃbarāsurana śiśuve nōḍabhimanyu subhaṭa prasaradinibaranoṃdu ghāyado ḷusira tegebage māḍidanu dhr̥tarāṣṭra kēḷeṃda
ಗುರುಸುತನನೊಟ್ಟೈಸಿ ಶಲ್ಯನ ಭರವಸವ ನಿಲಿಸಿದನು ಕೃಪನು ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ ಅರಸನನುಜರ ಸದೆದು ಬಾಹ್ಲಿಕ ದುರುಳ ಸೌಬಲ ಸೋಮದತ್ತರ ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ
gurusutananoṭṭaisi śalyana bharavasava nilisidanu kr̥panu bbarada garvava muridu kr̥tavarmakana nōyisida arasananujara sadedu bāhlika duruḷa saubala sōmadattara huruḷugeḍisidanobba śiśu gelidanu mahārathara
ಮುಳುಗಿದಂಬಿನ ಮರುಮೊನೆಯ ಮೈ ಗಳ ಮಹಾರಥರಾಜಿ ಕದನದ ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ ಬಿಲುದುಡುಕಿ ಸಾರಥಿಗೆ ಸೂಚಿಸಿ ಮಲೆತ ನೋಡೈ ಮಗುವು ಫಡ ಫಡ ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ
muḷugidaṃbina marumoneya mai gaḷa mahāratharāji kadanada nelana biḍe khatigoṃḍu muridōḍuvara mūdalisi biluduḍuki sārathige sūcisi maleta nōḍai maguvu phaḍa phaḍa tolagu tolageṃdenuta ripuvanu tarubidanu karṇa
ಗಾರುಗೆಡೆದರೆ ಮೆರೆಯದೋಲೆಯ ಕಾರತನವೆಮ್ಮೊಡನೆ ನೀ ಮೈ ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು ತೋರುವೆನು ಕೈಗುಣವನೆನುತೈ ದಾರು ಶರದಲಿ ಕರ್ಣನೆದೆಯನು ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ
gārugeḍedare mereyadōleya kāratanavemmoḍane nī mai dōri maḍamurivilladeccāḍidare saphalavidu tōruvenu kaiguṇavanenutai dāru śaradali karṇanedeyanu ḍōrugaḷeyalu baḷalidanu pūrāya ghāyadali
ಬೆದರಿ ಭೂಕಂಪದಲಿ ಕುಲಗಿರಿ ಯದಿರುವಂತಿರೆ ಚರಿಸಿ ಕಾಯವ ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ ಕೆದರಿತೀ ಬಲವಕಟ ಕರ್ಣನ ಸದೆದನೋ ಸಾಹಸಿಕ ಶಿಶು ಕಾ ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ
bedari bhūkaṃpadali kulagiri yadiruvaṃtire carisi kāyava bidiri maraḷuva kaṃgaḷali kalikarṇa maimareye kedaritī balavakaṭa karṇana sadedanō sāhasika śiśu kā didevu nāvinnenutalire kali śalyanidirāda
ಬಾಲಕನೆ ಹಿಮ್ಮೆಟ್ಟು ಹಿಮ್ಮೆ ಟ್ಟಾಳುತನವೆಮ್ಮೊಡನೆಯೇ ಮರು ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ ಮೇಲನರಿಯಾ ಶಲ್ಯನೊಡನೆಯು ಕಾಳೆಗವೆ ನಿಮ್ಮಯ್ಯನಿಂದಿನ ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ
bālakane himmeṭṭu himme ṭṭāḷutanavemmoḍaneyē maru ḷēḷigeyalubbeddu karṇana sadeda garvadali mēlanariyā śalyanoḍaneyu kāḷegave nimmayyaniṃdina lūḷigava tahudenuta suridanu saraḷa sarivaḷeya
ಬಾಲತನವೇನೂಣಯವೆ ಕ ಟ್ಟಾಳುತನವಾಭರಣವವನೀ ಪಾಲಸುತರಿಗೆ ವಿದ್ಯವೇ ವಿಪ್ರರಿಗಲಂಕಾರ ಆಳಿನಂಗವನೆತ್ತ ಬಲ್ಲೆ ಶ ರಾಳಿಯಲಿ ನಿನ್ನಂಘವಣೆಯ ಛ ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು
bālatanavēnūṇayave ka ṭṭāḷutanavābharaṇavavanī pālasutarige vidyavē viprarigalaṃkāra āḷinaṃgavanetta balle śa rāḷiyali ninnaṃghavaṇeya cha ḍāḷatanavanu mudrisuvenenuteccanabhimanyu
ಸರಳ ಸರಳಲಿ ಕಡಿದು ಸವೆಯದೆ ಸರಿ ಮಿಗಿಲ ಕಾದಿದರೆ ಶಲ್ಯನ ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ ಸರಳು ಹದಿನೈದರಲಿ ಶಲ್ಯನ ಬರಿಯ ಕೆತ್ತಿದನೈದು ಬಾಣದೊ ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ
saraḷa saraḷali kaḍidu saveyade sari migila kādidare śalyana dharadhurada dekhkhāḷatanavanu kaṃḍu khātiyali saraḷu hadinaidarali śalyana bariya kettidanaidu bāṇado ḷurava tōḍidanoṃdu nimiṣake śalya saigeḍeda
ತಲೆ ತಿರುಗಿ ತುಟಿಯೊಣಗಿ ಕಂಗಳ ಬಳೆ ಮರಳಿ ಬಸವಳಿಯೆ ಸಾರಥಿ ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ ನಿಲುಕಿ ಕಂಡನು ಶಲ್ಯನನುಜನು ಹಿಳುಕು ಹಿಳುಕಿನ ಮೇಲೆ ಸಂಧಿಸಿ ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ
tale tirugi tuṭiyoṇagi kaṃgaḷa baḷe maraḷi basavaḷiye sārathi tolagisidanā rathavanoḍahuṭṭidana vēdaneya niluki kaṃḍanu śalyananujanu hiḷuku hiḷukina mēle saṃdhisi muḷidesuta tāgidanu khatiyali pārthanaṃdanana
ಪೂತು ಶಲ್ಯನ ತಮ್ಮನೇ ಮಾ ಱಾತನಣ್ಣನ ಹರಿಬವನು ದಿಟ ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ ಆತನಂಬೈದಾರ ಮನ್ನಿಸಿ ಸೋತವೊಲು ಮನಗೆಲವ ಮಾಡಿ ನಿ ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ
pūtu śalyana tammanē mā ṟātanaṇṇana haribavanu diṭa sūta nōḍai sāhasikanai lēsu lēsenuta ātanaṃbaidāra mannisi sōtavolu managelava māḍi ni śāta śaradiṃdiḷuhidanu śalyānujana śirava
ದೊರೆ ಮಡಿಯೆ ಮಾದ್ರಾನುಜನ ಬಲ ತಿರುಗಿತಭಿಮನ್ಯುವಿನ ಹೊಯ್ಲಲಿ ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ ತರಹರವ ನಾ ಕಾಣೆನೀ ಮೋ ಹರಕೆ ಗತಿಯೇನೆನುತ ಭರದಲಿ ಕರೆದು ತೋರಿದನಾ ಕೃಪಾಚಾರ‍್ಯಂಗೆ ಕಲಿ ದ್ರೋಣ
dore maḍiye mādrānujana bala tirugitabhimanyuvina hoylali huruḷugeṭṭudu hesara nāyakavāḍi duguḍadali taraharava nā kāṇenī mō harake gatiyēnenuta bharadali karedu tōridanā kr̥pācāryaṃge kali drōṇa
ಮಗುವೆ ನೋಡಭಿಮನ್ಯು ನಮಗಿದು ಹೊಗುವಡಳವೇ ಕಾಲರುದ್ರನ ತಗಹು ಬಿಟ್ಟಂತಿದೆ ಕುಮಾರನ ಕೋಪದಾಟೋಪ ಮೊಗಸಲರಿದು ಭುಜಪ್ರತಾಪದ ಹೊಗರು ಹೊಸಪರಿಯೆನುತ ರಿಪುಗಳ ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ
maguve nōḍabhimanyu namagidu hoguvaḍaḷavē kālarudrana tagahu biṭṭaṃtide kumārana kōpadāṭōpa mogasalaridu bhujapratāpada hogaru hosapariyenuta ripugaḷa hogaḷutire kēḷidanu kaurava rāyanī nuḍiya
ಕೇಳುತಿರ್ದೈ ಕರ್ಣ ಸಲೆ ನ ಮ್ಮಾಳ ಬೆದರಿಸಿ ನುಡಿದು ರಿಪು ಭಟ ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು ಖೂಳರೆಂಬೆವೆ ಗುರುಗಳಿಂದು ವಿ ಶಾಲಮತಿಗಳು ತಮ್ಮ ಭಾಗ್ಯದ ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ
kēḷutirdai karṇa sale na mmāḷa bedarisi nuḍidu ripu bhaṭa nāḷanērisi nuḍiva bāhirarēna hēḷuvenu khūḷareṃbeve gurugaḷiṃdu vi śālamatigaḷu tamma bhāgyada mēle daivavaneṃdu phalavēnenuta bisusuyda
ವೀರರಂಗವನೆತ್ತ ಬಲ್ಲರು ಹಾರುವರು ಬೆಳದಿಂಗಳಿನ ಬಿರು ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು ವೈರಿಭಟನಿವ ಮಗುವಲಾ ಮನ ವಾರೆ ಕಾದಲು ಲಕ್ಷ್ಯವಿಲ್ಲೀ ಯೂರುಗರ ಬೈದೇನು ಫಲವೆಂದರಸ ಹೊರವಂಟ
vīraraṃgavanetta ballaru hāruvaru beḷadiṃgaḷina biru sāra suḍuvudu kaidu hiḍidare kaligaḷē dvijaru vairibhaṭaniva maguvalā mana vāre kādalu lakṣyavillī yūrugara baidēnu phalaveṃdarasa horavaṃṭa
ಎನಲು ದುಶ್ಶಾಸನನು ರಾಯನ ಕನಲಿದನು ಖತಿಯೇಕೆ ಜೀಯಿಂ ದೆನೆಗೆ ಬೆಸಸಾ ಸಾಕು ಭಂಡರ ಬೈದು ಫಲವೇನು ದಿನಪ ದೀವಿಗೆಯಾಗಲುಳಿದೀ ಬಿನುಗು ಬೆಳಗಿನ ಹಂಗು ಬೇಹುದೆ ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ
enalu duśśāsananu rāyana kanalidanu khatiyēke jīyiṃ denege besasā sāku bhaṃḍara baidu phalavēnu dinapa dīvigeyāgaluḷidī binugu beḷagina haṃgu bēhude danuja divijara daḷake tannanu biṭṭu nōḍeṃda
ತಳಿತುದೆಡಬಲವಂಕದಲಿ ಹೆ ಬ್ಬಲ ಛಡಾಳಿಸಿ ಮೊರೆವ ಭೇರಿಯ ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ ಹಳವಿಗೆಯ ಸೀಗುರಿಯ ಚಮರಾ ವಳಿಯ ವಿಮಳಚ್ಛತ್ರ ಪಂಙ್ತಿಯ ವಳಯದಲಿ ನಭ ಮುಳುಗೆ ಮುತ್ತಿತು ಸೇನೆ ರಿಪುಭಟನ
taḷitudeḍabalavaṃkadali he bbala chaḍāḷisi moreva bhēriya ghuḷughuḷu dhvani kūḍe jaḍidudu kamalajāṃḍaghaṭa haḷavigeya sīguriya camarā vaḷiya vimaḷacchatra paṃṅtiya vaḷayadali nabha muḷuge muttitu sēne ripubhaṭana
ತಿರುಹು ತೇಜಿಯನಿತ್ತಲಿವದಿರ ನೊರಸಿ ದುಶ್ಯಾಸನನ ಬೆನ್ನಲಿ ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ ಅರಗಿನರಸನ ಬಾಗಿಲಲಿ ದ ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ ಳೊರಸಿದನು ಚತುರಂಗ ಬಲವನು ಕೌರವಾನುಜನ
tiruhu tējiyanittalivadira norasi duśyāsanana bennali karuḷu tegevenu nōḍu sārathi beccabēḍenuta araginarasana bāgilali da ḷḷurige taḍavē hokku nimiṣado ḷorasidanu caturaṃga balavanu kauravānujana
ಎಲವೊ ಕೌರವ ಕೊಬ್ಬಿ ನರಿ ಹೆ ಬ್ಬುಲಿಯ ಕೂಸನು ಬೇಡುವಂದದಿ ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ ಮಲೆತು ನೀನೆನ್ನೊಡನೆ ರಣದಲಿ ಹಳಚಿ ನೀ ತಲೆವೆರಸಿ ಮರಳಿದ ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ
elavo kaurava kobbi nari he bbuliya kūsanu bēḍuvaṃdadi aḷavanariyade adhama rathikara kūḍe toḍakuvare maletu nīnennoḍane raṇadali haḷaci nī taleverasi maraḷida ḍiḷuhuvenu kaiduvanu śarasanyāsa nanageṃda
ಸಾಕು ತರುವಲಿತನದ ಮಾತುಗ ಳೇಕೆ ಗರುವರ ಮುಂದೆ ವೀರೋ ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ ಆ ಕಿರೀಟಿ ವೃಕೋದರರು ಮೈ ಸೋಕಿದರೆ ಸಂತೋಷ ನೀನವಿ ವೇಕಿ ಬಾಲಕನೇನ ಮಾಡುವೆನೆಂದನವ ನಗುತ
sāku taruvalitanada mātuga ḷēke garuvara muṃde vīrō drēkadali maimaredu raṇadali hoydu hoṭṭugara ā kirīṭi vr̥kōdararu mai sōkidare saṃtōṣa nīnavi vēki bālakanēna māḍuveneṃdanava naguta
ಕೊಳಚೆ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು ಬಳಿಕ ಭೀಮಾರ್ಜುನರ ಬಯಸುವು ದೆಲೆ ಮರುಳೆ ನಿನ್ನೊಡಲ ಸೀಳಿಯೆ ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ
koḷace nīroḷagāḷutēḷuta jaladhi kālvoḷeyeṃba bhaṃḍara muḷidu māḍuvudēnu modalali namma nī gelidu baḷika bhīmārjunara bayasuvu dele maruḷe ninnoḍala sīḷiye tiḷirakutadali tāya turubanu nādisuveneṃda
ಕಾತರಿಸದಿರು ಬಾಲಭಾಷೆಗ ಳೇತಕಿವು ನೀ ಕಲಿತ ಬಿಲು ವಿ ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ ಭೀತಭಟರನು ಹೊಳ್ಳುಗಳೆದ ಮ ದಾತಿರೇಕದ ಠಾವಿದಲ್ಲೆಂ ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ
kātarisadiru bālabhāṣega ḷētakivu nī kalita bilu vi dyātiśayavuṃṭādaḍemmoḷu tōru kaiguṇava bhītabhaṭaranu hoḷḷugaḷeda ma dātirēkada ṭhāvidalleṃ dītaneccanu nūru bāṇadaliṃdrasuta sutana
ಬಿಲ್ಲ ಹಿಡಿಯಲು ಕೌರವಾನುಜ ಬಲ್ಲ ನೋಡೈ ಸೂತ ಮಿಗೆ ತ ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ ನಿಲ್ಲು ನಿಲ್ಲಾದರೆಯೆನುತ ಬಲು ಬಿಲ್ಲಲುಗುಳಿಸಿದನು ಶರೌಘವ ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು
billa hiḍiyalu kauravānuja balla nōḍai sūta mige ta ppalla tappallaṃbu biddavu guriya sarisadali nillu nillādareyenuta balu billaluguḷisidanu śaraughava nelli nabha deseyettalene ghāḍisidavaṃbugaḷu
ಅವನ ನೂರಂಬುಗಳ ಕಡಿದವ ನವಯವವ ಕೀಲಿಸಿದಡಾಕ್ಷಣ ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ ಅವಗಡಿಸಿ ಖಾತಿಯಲಿ ಖಳ ಶರ ನಿವಹವನು ತುಡುಕಿದನು ಕೊಡಹಿದ ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು
avana nūraṃbugaḷa kaḍidava navayavava kīlisidaḍākṣaṇa vavaniyali balugaruḷu biddavu bhaṭana kibbariya avagaḍisi khātiyali khaḷa śara nivahavanu tuḍukidanu koḍahida vavana nimiṣadoḷarjunātmakanagaṇitāstragaḷu
ತಾಯ ತುರುಬಿಗೆ ಹಾಯ್ದ ಪಾತಕಿ ನಾಯ ಕೊಂಡಾಡುವರೆ ಕೊಬ್ಬಿದ ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ ತಾಯ ಕರಸುವೆನೆನುತ ಕಮಳದ ಳಾಯತಾಂಬಕನಳಿಯನನುಪಮ ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ
tāya turubige hāyda pātaki nāya koṃḍāḍuvare kobbida kāyavanu kadukiridu nettara noreya bāsaṇisi tāya karasuvenenuta kamaḷada ḷāyatāṃbakanaḷiyananupama sāyakava hūḍidanu nōḍidanoṃdu cittadali
ಇವನ ಕೊಂದರೆ ತಂದೆ ಮಿಗೆ ಮೆ ಚ್ಚುವನೊ ಮುನಿವನೊ ತನ್ನ ನುಡಿ ಸಂ ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು ಇವನ ತಾನೇ ಕೊಲಲಿ ನಮಗಿ ನ್ನಿವನ ತೊಡಕೇ ಬೇಡ ಕದನದೊ ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ
ivana koṃdare taṃde mige me ccuvano munivano tanna nuḍi saṃ bhavisadeṃbano bhīmasēnana bhāṣegaṃjuvenu ivana tānē kolali namagi nnivana toḍakē bēḍa kadanado ḷivana bhaṃgisi biḍuveneṃdanu tanna manadoḷage
ಕಾಯ್ದುಕೊಳ್ಳೈ ಕೌರವಾನುಜ ಹೊಯ್ದು ಹೋಗಲು ಬಹುದೆ ಹರನಡ ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು ಬಾಯ್ದೆಗೆದು ಕೇಸುರಿಯ ಕಾರುತ ಕೈದುವೆದೆಯಲಿ ಕೊಂಡು ಬೆನ್ನಲಿ ಹಾಯ್ದಡವನೊರ್ಗುಡಿಸಿದನು ಕುರುಸೇನೆ ಕಳವಳಿಸೆ
kāydukoḷḷai kauravānuja hoydu hōgalu bahude haranaḍa hāydaḍeyu geluvenu kaṇā nillenuta tegedesalu bāydegedu kēsuriya kāruta kaiduvedeyali koṃḍu bennali hāydaḍavanorguḍisidanu kurusēne kaḷavaḷise
ಅಹಹ ಕೈತಪ್ಪಾಯ್ತು ರಾಯನ ಸಹಭವನು ನೊಂದನು ಶಿವಾ ಎನು ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ ಬಹಳ ಬಲ ನುಗ್ಗಾಯ್ತು ಶಿಶುವಿನ ಸಹಸ ಕುಂದದೆನುತ್ತ ಖತಿಯಲಿ ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ
ahaha kaitappāytu rāyana sahabhavanu noṃdanu śivā enu tahita subhaṭaru sariye sārathi tiruhidanu rathava bahaḷa bala nuggāytu śiśuvina sahasa kuṃdadenutta khatiyali mihirasutanaḍahāydu taḍedanu matte bālakana
ಸಾರು ಸಾರಭಿಮನ್ಯು ಫಡಯಿ ನ್ನಾರ ಬಸುರನು ಹೊಗುವೆ ನಿನ್ನವ ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ ಭೂರಿ ಬಲವನು ಸದೆವ ಗರ್ವವಿ ದಾರ ಕೂಡೆ ಧನುರ್ಧರಾಗ್ರಣಿ ವೀರ ಕರ್ಣ ಕಣಾಯೆನುತ ತೆಗೆದೆಚ್ಚನತಿರಥನ
sāru sārabhimanyu phaḍayi nnāra basuranu hoguve ninnava rāra saṃtati māḍikoḷali bhavat parōkṣadali bhūri balavanu sadeva garvavi dāra kūḍe dhanurdharāgraṇi vīra karṇa kaṇāyenuta tegedeccanatirathana
ಬಲ್ಲೆನುಂಟುಂಟಖಿಳ ವೀರರೊ ಳಿಲ್ಲ ಸರಿದೊರೆ ನಿನಗೆ ಬಾಯಲಿ ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ ಒಳ್ಳೆ ಗಡ ಪಾವುಡವ ವಾಸುಗಿ ಯಲ್ಲಿಗಟ್ಟಿತು ಗಡ ಮಹಾಹವ ಮಲ್ಲ ಮಡಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು
ballenuṃṭuṃṭakhiḷa vīraro ḷilla saridore ninage bāyali ballidanu nīnahe bhaṭāṃgada mātadaṃtirali oḷḷe gaḍa pāvuḍava vāsugi yalligaṭṭitu gaḍa mahāhava malla maḍamuriyadirenuta hokkeccanabhimanyu
ಇರುಳುರಾಯನ ಮನೆಗೆ ಕಪ್ಪವ ತೆರುವುದೋ ಹಗಲೆಲವೊ ಕೆಲಬರ ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ ಕಿರುಮೊನೆಯ ಮುಗುಳಂಬುಗಳ ಸೈ ಗರೆದನುಭಿಮನ್ಯುವಿನ ಮೆಯ್ಯಲಿ ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ
iruḷurāyana manege kappava teruvudō hagalelavo kelabara nirida darpavadāroḍane phaḍa maraḷu maraḷenuta kirumoneya muguḷaṃbugaḷa sai garedanubhimanyuvina meyyali turugidavu mariduṃbi keṃdāvarege kavivaṃte
ಸುರಪನಂಕುಶವೌಕಿದರೆ ಮೆ ಯ್ಯರಿಯದೈರಾವತಕೆ ಕಬ್ಬಿನ ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ ತೆರಳುವನೆ ಅಭಿಮನ್ಯುವೆನುತ ಬ್ಬರಿಸಿ ಕರ್ಣನ ಕಾಯವನು ಹುಗಿ ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ
surapanaṃkuśavaukidare me yyariyadairāvatake kabbina liridaraṃjikeyuṃṭe ninnaya kaṇegaḷaukidare teraḷuvane abhimanyuvenuta bbarisi karṇana kāyavanu hugi liridaneṃṭaṃbinali tōdudu tēru raktadali
ಮಳೆಗೆ ಮೊಗದಿರುಹುವುದೆ ಬಡಬಾ ನಳನೆಲವೊ ನಿನ್ನಂಬು ತಾಕಿದ ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ ಹಿಳುಕು ಕವಿದವು ಭಟನ ಕೈ ಮೈ ಗಳಲಿ ಮಿನುಗಿದವಿರುಳು ಮರನಲಿ ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ
maḷege mogadiruhuvude baḍabā naḷanelavo ninnaṃbu tākida raḷukuvene tānenuta ravisutaneccanatirathana hiḷuku kavidavu bhaṭana kai mai gaḷali minugidaviruḷu maranali hoḷedu muttida miṃcubuḷuvina minuginaṃdadali
ಹೂಣಿಗರು ಕೆಲರಿವರು ಇವದಿರ ಗೋಣನರಿವರೆ ಇವರ ಜೀವದ ಕೇಣಿಕಾರರು ಖಾತಿಗೊಂಬರು ಭೀಮ ಫಲುಗುಣರು ಮಾಣರಿವದಿರು ಮತ್ತೆ ರಣದಲಿ ಕಾಣೆನಿದಕಿನ್ನನುವನೆನುತ ಕ್ಷೀಣಭುಜ ಬಲನೆಚ್ಚು ಕಡಿದನು ಸೂತಜನ ಧನುವ
hūṇigaru kelarivaru ivadira gōṇanarivare ivara jīvada kēṇikāraru khātigoṃbaru bhīma phaluguṇaru māṇarivadiru matte raṇadali kāṇenidakinnanuvanenuta kṣīṇabhuja balaneccu kaḍidanu sūtajana dhanuva
ಕೈದು ಮುರಿಯಲು ಮುಂದೆ ನೂಕದೆ ಹಾಯ್ದನಾ ರವಿಸೂನು ಬಳಿಕಡ ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ ಐದು ಬಾಣದಲವನ ಕೊರಳನು ಕೊಯ್ದನರ್ಜುನಸೂನುವಾತನ ನೊಯ್ದರಂತಕದೂತರದ್ಭುತವಾಯ್ತು ಸಂಗ್ರಾಮ
kaidu muriyalu muṃde nūkade hāydanā ravisūnu baḷikaḍa hāydu taḍedanu bavaravanu karṇātmajanu kaḍugi aidu bāṇadalavana koraḷanu koydanarjunasūnuvātana noydaraṃtakadūtaradbhutavāytu saṃgrāma
ಘಾಯವಡೆದನು ಶಲ್ಯ ರವಿಸುತ ನಾಯುಧವ ಬಿಟ್ಟೋಡಿದನು ಕುರು ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು ಸಾಯದುಳಿದವರಿಲ್ಲ ಮಿಕ್ಕಿನ ನಾಯಕರೊಳಕಟೆನಲು ಕುರುಬಲ ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ
ghāyavaḍedanu śalya ravisuta nāyudhava biṭṭōḍidanu kuru rāyananujanu badukuvare meyyella bādaṇavu sāyaduḷidavarilla mikkina nāyakaroḷakaṭenalu kurubala bāya biḍe śalyana kumāraka hokkanāhavava
ಆ ಕುಮಾರನ ಸೇನೆ ಗಡಣಿಸಿ ನೂಕಿತುರವಣಿಸಿದುದು ತುರಗಾ ನೀಕವಿಭತತಿ ತೂಳಿದವು ತುಡುಕಿದವು ರಥನಿಕರ ತೋಕಿದವು ಕೈದುಗಳ ಮಳೆ ರಣ ದಾಕೆವಾಳರ ಸನ್ನೆಯಲಿ ಸಮ ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ
ā kumārana sēne gaḍaṇisi nūkituravaṇisidudu turagā nīkavibhatati tūḷidavu tuḍukidavu rathanikara tōkidavu kaidugaḷa maḷe raṇa dākevāḷara sanneyali sama rākuḷaru keṇakidaru ripukalpāṃta bhairavana
ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು ರಣ ಚೌ ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ ನಿಟಿಲ ನೇತ್ರನ ಕೋಪಶಿಖಿ ಲಟ ಕಟಿಸುವಂತಿರೆ ಹೆಚ್ಚಿದತಿ ಬಲ ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ
bhaṭa chaḍāḷisidanu ghr̥tāhuti ghaṭisidagniyavōlu raṇa cau paṭa caturbaladoḷage hokkanu siṃhanādadali niṭila nētrana kōpaśikhi laṭa kaṭisuvaṃtire heccidati bala daṭaviyanu savaridudu pārthakumāra śarajāla
ಧರೆ ಬಿರಿಯೆ ಬೊಬ್ಬೆಯಲಿ ಬಲದ ಬ್ಬರಣೆ ದೆಖ್ಖಾದೆಖ್ಖೆಯಾಗಲು ಧರಣಿಪತಿ ಮರುಗಿದನು ಮಗನೇನಾದನೋ ಎನುತ ಕರೆದು ಭೀಮನ ನಕುಳನನು ಸಂ ಗರಕೆ ಧೃಷ್ಟದ್ಯುಮ್ನ ದ್ರುಪದರ ಪರುಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ
dhare biriye bobbeyali balada bbaraṇe dekhkhādekhkheyāgalu dharaṇipati marugidanu maganēnādanō enuta karedu bhīmana nakuḷananu saṃ garake dhr̥ṣṭadyumna drupadara paruṭhavisi kaḷuhidanu saubhadraṃge paḍibalava
ಗದೆಯ ತಿರುಹುತ ಸಿಂಹನಾದದ ಲೊದರಿ ಮಗನಾವೆಡೆಯೆನುತ ನೂ ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ ಅದಟನೈತರೆ ಹೋಗಲೀಯದೆ ಮೊದಲ ಬಾಗಿಲ ಕಟ್ಟಿಕೊಂಡ ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ
gadeya tiruhuta siṃhanādada lodari maganāveḍeyenuta nū kidanu rathavanu tanna sēnege sīguriya bīsi adaṭanaitare hōgalīyade modala bāgila kaṭṭikoṃḍa ggada jayadratha bhīmanoḷu balugāḷegava hiḍida
ತೆರಹುಗೊಡು ಫಡ ಫಡ ಜಯದ್ರಥ ಹೆರತೆಗೆದು ಸಾರೆನುತ ಹೂಣಿಗ ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು ಮರೆದು ಕಳೆಯಭಿಮನ್ಯುವನು ಮೈ ಮರೆಯದೆನ್ನಲಿ ಕಾದು ಮಾತಿನ ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು
terahugoḍu phaḍa phaḍa jayadratha herategedu sārenuta hūṇiga nurubidare mārāṃtu bhīmana kaḍuha nilisidanu maredu kaḷeyabhimanyuvanu mai mareyadennali kādu mātina birubinali phalavillenuta keṃgōla toḍacidanu
ಬವರದಲಿ ಕಲಿ ಪಾರ್ಥನಲ್ಲದೆ ಪವನತನಯಾದಿಗಳ ಗೆಲುವರೆ ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು ಕವಲುಗೋಲಲಿ ಭೀಮನನು ಪರಿ ಭವಿಸಿದನು ಸಹದೇವ ನಕುಳರ ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ
bavaradali kali pārthanallade pavanatanayādigaḷa geluvare śivana kr̥peyenaguṃṭu munnenutā jayadrathanu kavalugōlali bhīmananu pari bhavisidanu sahadēva nakuḷara tividu dhr̥ṣṭadyumna modalādagaṇitara gelida
ಪಡಿಬಲವ ಬರಲೀಯದನಿಲಜ ನೊಡನೆ ಸೈಂಧವ ಕಾದುತಿರಲಿ ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ ಕಡುಗಿ ನೂಕುವ ಕದನರಾಗಿಗ ಳೊಡನೆ ಕಾದುವ ಪಾರ್ಥತನಯನ ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ
paḍibalava baralīyadanilaja noḍane saiṃdhava kādutirali mmaḍisitāhavavitta mōhara madhya raṃgadali kaḍugi nūkuva kadanarāgiga ḷoḍane kāduva pārthatanayana biḍi saraḷu bīridavu ramaṇaranamara vadhugaḷige
ತರಿದನಾನೆಯ ಥಟ್ಟುಗಳ ಮು ಕ್ಕುರುಕಿದನು ಕಾಂಭೋಜ ತೇಜಿಯ ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ ಮುರಿದನೊಗ್ಗಿನ ಪಾಯ್ದಳವನ ಳ್ಳಿರಿವ ಹೆಣ ಕುಣಿದಾಡೆ ಭಟ ಬೇ ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ
taridanāneya thaṭṭugaḷa mu kkurukidanu kāṃbhōja tējiya nurubi hoydanu sūnigeya tērugaḷa tiṃtiṇiya muridanoggina pāydaḷavana ḷḷiriva heṇa kuṇidāḍe bhaṭa bē sarade koṃdanu vairisēneyanarasa kēḷeṃda
ಒರಸಿದನು ಹದಿನೆಂಟು ಸಾವಿರ ಕರಿ ಘಟೆಯನೈವತ್ತು ಸಾವಿರ ತುರಗವನು ಮೂವತ್ತು ಸಾವಿರ ವರ ಮಹಾರಥರ ಧುರದಿ ಲಕ್ಷ ಪದಾತಿಯನು ಸಂ ಹರಿಸಿ ಶಲ್ಯ ಕುಮಾರಕನ ಕ ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರ ಧಾರೆಯಲಿ
orasidanu hadineṃṭu sāvira kari ghaṭeyanaivattu sāvira turagavanu mūvattu sāvira vara mahārathara dhuradi lakṣa padātiyanu saṃ harisi śalya kumārakana ka ttarisidanu gōnāḷiyanu divyāstra dhāreyali
ಮಡಿದನಕಟಾ ತಮ್ಮ ಸಖನೆಂ ದಡಸಿದಳಲಿನೊಳೆದ್ದು ಕೋಪದ ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ ಸಿಡಿದ ಮೀಸೆಯ ಬಿಗಿದ ಹುಬ್ಬಿನ ಜಡಿವ ರೋಮಾಂಚನದ ಖಾತಿಯ ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು
maḍidanakaṭā tamma sakhaneṃ daḍasidaḷalinoḷeddu kōpada kaḍujhaḷada kālāgni rudrana kaṇṇa hōluveya siḍida mīseya bigida hubbina jaḍiva rōmāṃcanada khātiya kaḍuhukāraru masagidaru duryōdhanātmakaru
ಚಂಡ ಭುಜಬಲನೊಡನೆ ಮಕ್ಕಳ ತಂಡವೆದ್ದುದು ಬಿಗಿದ ಬಿಲ್ಲಿನ ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ ಗಂಡುಗಲಿಗಳು ಕವಿದರದಿರುವ ಖಂಡೆಯದ ಮುಡುಹುಗಳ ಗಂಧದ ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ
caṃḍa bhujabalanoḍane makkaḷa taṃḍaveddudu bigida billina daṃḍavalageya musuḍi mudga kaṭhāriyubbaṇada gaṃḍugaligaḷu kavidaradiruva khaṃḍeyada muḍuhugaḷa gaṃdhada maṃḍanada maisiriya parimaḷa pūrarogginali
ತಳಿತ ಸತ್ತಿಗೆಗಳ ವಿಡಾಯಿಯ ಲೊಲೆವ ಚಮರಿಯ ವಜ್ರ ಮಕುಟದ ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ ಕೆಲಬಲದ ವೇಲಾಯತರ ವೆ ಗ್ಗಳದ ರಾವ್ತರ ಗಡಣ ನಾಲಗೆ ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು
taḷita sattigegaḷa viḍāyiya loleva camariya vajra makuṭada hoḷahugaḷa hoge mīsegedarina birudinubbaṭeya kelabalada vēlāyatara ve ggaḷada rāvtara gaḍaṇa nālage daḷedudene hoḷehoḷevaḍāyudha bhaṭaru nūkidaru
ಭಾಪುರೇ ಕೌರವನ ಸುತರಾ ಟೋಪವೊಳ್ಳಿತು ಬಂದ ಬರವಿನ ಚಾಪಳದಲೊದಗಿದರೆ ಲೇಸಲ್ಲಿದರ ಫಲವೇನು ಕಾಪುರುಷರೇ ಕಾಣಬಹುದೆಂ ದಾ ಪುರಂದರಸುತನ ಸುತ ನಿಜ ಚಾಪವನು ನೇವರಿಸುತಿದ್ದನು ಬಗೆಯದರಿಬಲವ
bhāpurē kauravana sutarā ṭōpavoḷḷitu baṃda baravina cāpaḷadalodagidare lēsallidara phalavēnu kāpuruṣarē kāṇabahudeṃ dā puraṃdarasutana suta nija cāpavanu nēvarisutiddanu bageyadaribalava
ಮಗುಳದಿರು ಶಲ್ಯಾತ್ಮಕನನುಗು ಳುಗುಳು ನಿನ್ನಯ ಬಸಿರ ಸೀಳಿಯೆ ತೆಗೆವೆವೆಮ್ಮಯ ಸಖನನೆನುತಾ ಲಕ್ಷಣಾದಿಗಳು ತೆಗೆದೆಸುತ ಮೇಲಿಕ್ಕಿದರು ತಾ ರೆಗಳು ನೆಣಗೊಬ್ಬಿನಲಿ ರಾಹುವ ತೆಗೆದು ಬದುಕಲು ಬಲ್ಲವೇ ಧೃತರಾಷ್ಟ್ರ ಕೇಳೆಂದ
maguḷadiru śalyātmakananugu ḷuguḷu ninnaya basira sīḷiye tegevevemmaya sakhananenutā lakṣaṇādigaḷu tegedesuta mēlikkidaru tā regaḷu neṇagobbinali rāhuva tegedu badukalu ballavē dhr̥tarāṣṭra kēḷeṃda
ದಿಟ್ಟರೋ ಲಕ್ಷಣನವರು ಜಗ ಜಟ್ಟಿಗಳಲಾ ರಾಜಕುಲದಲಿ ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ ಕಟ್ಟಿದನು ಕಣೆಗಳಲಿ ಸುತ್ತಲು ತಟ್ಟಿವಲೆಗಳ ಸೋಹಿನಲಿ ಬೆ ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ
diṭṭarō lakṣaṇanavaru jaga jaṭṭigaḷalā rājakuladali huṭṭidare kelarīsu capaḷate yāriguṃṭenuta kaṭṭidanu kaṇegaḷali suttalu taṭṭivalegaḷa sōhinali be nnaṭṭi pārthakumāra sadedanu vairimr̥ga kulava
ಆ ಸುಯೋಧನಸುತರ ಸರಳ ವಿ ಳಾಸವನು ಖಂಡಿಸಿದನವದಿರ ಬೀಸರಕೆ ಬಂದಡ್ಡಬೀಳುವ ಭಟರ ಕೆಡೆಯೆಚ್ಚ ರೋಷವಹ್ನಿಯ ಕೆದರೆ ಕವಿವ ಮ ಹೀಶರನು ಮಾಣಿಸಿದನವನೀ ವಾಸವನು ವಾಸವನ ಮೊಮ್ಮನುದಾರ ಸಮರದಲಿ
ā suyōdhanasutara saraḷa vi ḷāsavanu khaṃḍisidanavadira bīsarake baṃdaḍḍabīḷuva bhaṭara keḍeyecca rōṣavahniya kedare kaviva ma hīśaranu māṇisidanavanī vāsavanu vāsavana mommanudāra samaradali
ಫಡ ಕುಮಾರಕ ದೊದ್ದೆಗರ ಸದೆ ಬಡಿದ ಗರ್ವಿತತನವಕಟ ನ ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ ಒಡನೊಡನೆ ನಾರಾಚ ನಿಚಯವ ಗಡಣಿಸಿದರೇನೆಂಬೆನವರು ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ
phaḍa kumāraka doddegara sade baḍida garvitatanavakaṭa na mmoḍaneyē nōḍilli mēḷave sāru sārenuta oḍanoḍane nārāca nicayava gaḍaṇisidarēneṃbenavaru ggaḍada bilu vidyātiśayavanu samarabhūmiyali
ಸರಳ ಮೊನೆಯಲಿ ವೈರಿ ಸುಭಟರ ಕರುಳ ತೆಗೆದನು ರಣದೊಳಾಡುವ ಮರುಳ ಬಳಗವ ತಣಿಸಿದನು ಕಡಲಾದುದರುಣ ಜಲ ತರಳನರೆಯಟ್ಟಿದನು ಧುರದಲಿ ದುರುಳ ದುರಿಯೋಧನನ ಮಕ್ಕಳ ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು
saraḷa moneyali vairi subhaṭara karuḷa tegedanu raṇadoḷāḍuva maruḷa baḷagava taṇisidanu kaḍalādudaruṇa jala taraḷanareyaṭṭidanu dhuradali duruḷa duriyōdhanana makkaḷa maraḷalīyade bhaṭara kēṇiya koṃḍanabhimanyu
ಉರಗನಿಕ್ಕಡಿಗಾರ ಹುಲ್ಲಿನ ಸರವಿಗಂಜುವುದುಂಟೆ ಕರ್ಣಾ ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ ಎರಡು ಶರದಲಿ ಲಕ್ಷಣನ ಸಂ ಹರಿಸಿದನು ಹದಿನೈದು ಬಾಣದ ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ
uraganikkaḍigāra hullina saravigaṃjuvuduṃṭe karṇā dyaranu kaḍḍige bageyanī hūhegaḷa gaṇisuvane eraḍu śaradali lakṣaṇana saṃ harisidanu hadinaidu bāṇada laridanuḷida kumārakaranabhimanyu nimiṣadali
ತಳಿತ ಚೂತದ ಸಸಿಗಳವನಿಗೆ ಮಲಗುವಂತಿರೆ ರಾಜಪುತ್ರರು ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ ಬಳಿರಕುತದಲಿ ನನೆದ ಸೀರೆಯ ತಳಿತ ಖಂಡದ ಬಿಗಿದ ಹುಬ್ಬಿನ ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ
taḷita cūtada sasigaḷavanige malaguvaṃtire rājaputraru hoḷeva padakada koraḷa talegiṃbāda tōḷugaḷa baḷirakutadali naneda sīreya taḷita khaṃḍada bigida hubbina daḷita daṃṣṭrānanadalesedaru sāla śayanadali
ಇಕ್ಕಿದಿರಲಾ ರಾಜಪುತ್ರರ ನಕ್ಕಟಕಟಾ ಸ್ವಾಮಿದ್ರೋಹರು ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು ಹಕ್ಕಲಾದುದು ನಮ್ಮ ಬಲ ಶಿಶು ಸಿಕ್ಕನಿನ್ನೂ ಪಾಂಡವರ ಪು ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ
ikkidiralā rājaputrara nakkaṭakaṭā svāmidrōharu hokkamane hāḷahudalā drōṇādi nāyakaru hakkalādudu namma bala śiśu sikkaninnū pāṃḍavara pu ṇyakke sariyillenuta kauravarāya garjisida
ಕುಲವ ನೋಡಿದಡಿಲ್ಲ ತನ್ನಯ ಬಲುಹ ನೋಡಿದಡಿಲ್ಲ ಕದನದೊ ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ ಇಳೆಯೊಳೋಲೆಯಕಾರರೆಂಬರ ತಲೆಗೆ ತಂದನು ತೃಣವನೆಂದ ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ
kulava nōḍidaḍilla tannaya baluha nōḍidaḍilla kadanado ḷuḷiva nōḍidarillalā patiyeṃba pātakiya iḷeyoḷōleyakārareṃbara talege taṃdanu tr̥ṇavaneṃda ggaḷeyaranu mūdalisi baydanu suydu kururāya
ಕೇಳುತಿದ್ದರು ಪತಿಯ ಮೂದಲೆ ಗಾಳಿಯಲೆ ದಳ್ಳಿಸುವ ಶೌರ‍್ಯ ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ ಆಳುತನವುಬ್ಬೆದ್ದು ಕಡು ಹೀ ಹಾಳಿಕಾರರು ಕೈದುಕೊಂಡರು ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ
kēḷutiddaru patiya mūdale gāḷiyale daḷḷisuva śaurya jvāle jaḍidudu khātiyali hogarēridānanada āḷutanavubbeddu kaḍu hī hāḷikāraru kaidukoṃḍaru bālakana tarubidaru doregaḷu kēḷu dhr̥tarāṣṭra
Keys: ← → turn the page, J K step through the verses.
Illustration: Verse & Place (Project-owned).