ಇದು ಪರಮಗುರು ಪರಮ ವೀರಶೈವ ಸಿದ್ಧಾಂತ ತತ್ವಜ್ಞಾನ, ಇದು ವೀರಶೈವಾಚಾರ ಪ್ರತಿಷ್ಠಾಪನಾಚಾರ್ಯ, ಇದು ದಿವ್ಯ ವೇದಾಂತ ಶಿರೋಮಣಿ, ಇದು ಸಮಸ್ತ ಶಾಸ್ತ್ರ ಮುಖ್ಯ ಮುಖ ದರ್ಪಣ, ಇದು ಮಹಾಜ್ಞಾನ ಪ್ರವರ್ತನ ಪರಮಾನುಭವ ಸಂಬೋಧೆ, ಇದು ಸರ್ವಾಚಾರ ಸಂಪನ್ನ ರಸಮಯಾರೂಢ ಸಂಗ್ರಹ, ಇದು ಪರಮ ರಾಜಯೋಗ, ಸಾಧ್ಯ ಸಂಪಾದನ, ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ರಸಾಮೃತ ಪ್ರಸನ್ನ ಪ್ರಸಾದ, ಇದು ಅಜ್ಞಾನ ತಿಮಿರಾಂಜನ ತಂತ್ರವಪ್ಪ ಪ್ರಭುದೇವರ ಶೂನ್ಯಸಂಪಾದನೆಯ ಮಹಾಪ್ರಸಂಗಮಂ ಬಸವರಾಜದೇವರು ಚನ್ನಬಸವರಾಜ ದೇವರು ಪ್ರಭುದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳ ವಚನಂಗಳಿಂದ ಕಥಾ ಸಾಂಗತ್ಯವಾಗಿ ಶಿವಗಣಂಗಳ ಪ್ರಸಾದಿ ಮಹಾದೇವಯ್ಯಗಳು ತದ್ಭವಗಣಂಗಳ ಶಿವಾನುಭಾವವನು ಭಾವಶ್ರೋತ್ರ ದ್ವಾರ ಮುಖಕ್ಕೆ ನಿರ್ಮಳ ದರ್ಪಣವನೆ ಸಮರ್ಪಿಸಿದನು. ಈ ಮಹಾ ಪ್ರಸಂಗದ ಸದುಹೃದಯವನರಿತಡೆ ನಿತ್ಯ ನಿರವಯವಪ್ಪುದು. ಭವಭಾರಕ್ಕಂಜಿ ಕೇಳಲು ಸದ್ಯೋನ್ಮುಕ್ತನು. ತತ್ಸಂಗದಿಂದ ಕೇಳಿ ಮನದಲ್ಲಿ ಧರಿಸಲು ನಿರ್ಮಳಾತ್ಮಕನಪ್ಪನು. ಆ ಧರಣಿಯಿಂದ ಶ್ರೋತ್ರಮುಖಕ್ಕೆ ಕೇಳಿಸಿದಾತನು ರುದ್ರಾಧಿಪತಿಯಪ್ಪನು. ಮನೋರತಿಯಿಂ ಬರೆದೊಡೆ, ಪಠಿಸಿದೊಡೆ, ಅರ್ಥವ ಹೇಳಿದೊಡೆ ಕೇಳಿದೊಡೆ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧ ಪದಂಗಳಂ ಪಡೆವನು. ಇದನು ಶಿವಶರಣರು ಕೇಳುವುದು, ಲಾಲಿಸುವುದು ಪಾಲಿಸುವುದು ಬರೆದೋದುವುದು. ಇಲ್ಲಿ ಈ ವಚನ ಕ್ರಮ ತಪ್ಪಿದಡೆ ನಿಮ್ಮ ಪರಿಪೂರ್ಣಜ್ಞಾನದಿಂದ ತಿದ್ದಿಕೊಂಬುದೆಂದು ಎನಲಾಗಿ ಆ ವಾಕ್ಯವಿಡಿದು ಗುಮ್ಮಳಾಪುರದ ಸಿದ್ಧಲಿಂಗದೇವರು ಅಲ್ಲಿ ಸಿದ್ಧರಾಮಯ್ಯ ದೇವರಿಗೆ ದೀಕ್ಷಾಕ್ರಮವಿಲ್ಲದಿರಲು, ಬಸವಾದಿ ಪ್ರಮಥರ ವಚನ ಪ್ರಸಿದ್ಧವಾಗಿ ಸೇರಿಸಿದರು. ಆ ಪರಿಯಲ್ಲಿ ಅನಿರ್ವಾಚ್ಯ ಪರಂಜ್ಯೋತಿ ಸ್ವರೂಪ ಷಟ್ಸ್ಥಲ ಸಂಪನ್ನ ಷಡುಲಿಂಗಾಂಗ ಭರಿತ ಶರಣಜನ
idu paramaguru parama vīraśaiva siddhāṃta tatvajñāna, idu vīraśaivācāra pratiṣṭhāpanācārya, idu divya vēdāṃta śirōmaṇi, idu samasta śāstra mukhya mukha darpaṇa, idu mahājñāna pravartana paramānubhava saṃbōdhe, idu sarvācāra saṃpanna rasamayārūḍha saṃgraha, idu parama rājayōga, sādhya saṃpādana, idu saccidānaṃda nitya paripūrṇa rasāmr̥ta prasanna prasāda, idu ajñāna timirāṃjana taṃtravappa prabhudēvara śūnyasaṃpādaneya mahāprasaṃgamaṃ basavarājadēvaru cannabasavarāja dēvaru prabhudēvaru mukhyavāda asaṃkhyāta mahāgaṇaṃgaḷa vacanaṃgaḷiṃda kathā sāṃgatyavāgi śivagaṇaṃgaḷa prasādi mahādēvayyagaḷu tadbhavagaṇaṃgaḷa śivānubhāvavanu bhāvaśrōtra dvāra mukhakke nirmaḷa darpaṇavane samarpisidanu. ī mahā prasaṃgada saduhr̥dayavanaritaḍe nitya niravayavappudu. bhavabhārakkaṃji kēḷalu sadyōnmuktanu. tatsaṃgadiṃda kēḷi manadalli dharisalu nirmaḷātmakanappanu. ā dharaṇiyiṃda śrōtramukhakke kēḷisidātanu rudrādhipatiyappanu. manōratiyiṃ baredoḍe, paṭhisidoḍe, arthava hēḷidoḍe kēḷidoḍe sālōkya, sāmīpya, sārūpya, sāyujyaveṃba caturvidha padaṃgaḷaṃ paḍevanu. idanu śivaśaraṇaru kēḷuvudu, lālisuvudu pālisuvudu baredōduvudu. illi ī vacana krama tappidaḍe nimma paripūrṇajñānadiṃda tiddikoṃbudeṃdu enalāgi ā vākyaviḍidu gummaḷāpurada siddhaliṃgadēvaru alli siddharāmayya dēvarige dīkṣākramavilladiralu, basavādi pramathara vacana prasiddhavāgi sērisidaru. ā pariyalli anirvācya paraṃjyōti svarūpa ṣaṭsthala saṃpanna ṣaḍuliṃgāṃga bharita śaraṇajana
Editor's note: Lines 1–15 of original source paragraph 123. Traditional rubric: ಗದ್ಯ||