Jaimini Bharata 30.13
ಕೂಲವನಡರ್ದು ನನೆದಂಗದೊಳ್ ಪೊತ್ತಿದ ದು । ಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿ । ಕೂಲ ಕೃತಿಗಳೊ ಮೋಹನದ ರಸದೊಳಾರ್ದತೆಯನಾಂತ ಚೆಲ್ವಿನಕಣಿಗಳೊ ॥ ಸಾಲ ಮಣಿಮಯದ ಸೋಪಾನದೊಳ್ ನಿಲಿಸಿರ್ದ । ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರ । ಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ್ ಕಣ್ಗೆಸೆದುವು
kūlavanaḍardu nanedaṃgadoḷ pottida du । kūladoḷiralke tāpasara dr̥ḍhamatige prati । kūla kr̥tigaḷo mōhanada rasadoḷārdateyanāṃta celvinakaṇigaḷo ॥ sāla maṇimayada sōpānadoḷ nilisirda । sālabhaṃjikegaḷo vicitramene raṃjita ra । sāla pallava pāṇi pāda taḷadabaleyara rūpugaḷ kaṇgeseduvu