Read / Jaimini Bharata / Sandhi 30 of 34 ಸಂಧಿ ೩೦ · ಸಂಧಿ ೩೦
Sandhi 30 saṃdhi 30
॥
Lakshmisha continues the story of the horse sacrifice in sandhi 30.
54 verses · Kannada with transliteration
ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ ।
ಳಿಂತು ಸುಖನಿದ್ರೆಯಿಂದಿರುತಿರ್ಪ ಸಮಯದೊಳ್ ।
ಕುಂತಳೇಂದ್ರಂಗೆ ಚಂಪಕಮಾಲಿನಿನಾಮದೊರ್ವ ಮಗಳುಂಟವಳ್ಗೆ ॥
ಸಂತತಂ ಮಂತ್ರಿಸುತೆ ವಿಷಯೆ ಸಖಿಯಾಗಿರ್ಪ ।
ಳಂತರಿಸದವರಿರ್ವರುಂ ಬಂದರಲ್ಲಿಗೆ ವ ।
ಸಂತಕಾಲಂ ಪ್ರಾಪ್ತಮಾಗಿರೆ ಜಲಕ್ರೀಡೆಗಾಳಿಯರ ಗಡಣದಿಂದೆ
kuṃtīkumāra kēḷ caṃdrahāsaṃ banado ।
ḷiṃtu sukhanidreyiṃdirutirpa samayadoḷ ।
kuṃtaḷēṃdraṃge caṃpakamālinināmadorva magaḷuṃṭavaḷge ॥
saṃtataṃ maṃtrisute viṣaye sakhiyāgirpa ।
ḷaṃtarisadavarirvaruṃ baṃdarallige va ।
saṃtakālaṃ prāptamāgire jalakrīḍegāḷiyara gaḍaṇadiṃde
ಒಚ್ಚೇರೆಗಣ್ಣ ಕೋಮಲೆಯರೊಪ್ಪಡಿ ನಡುವಿ ।
ನಚ್ಛಿಗದ ಬಾಲಕಿಯರೋರಣದ ಪೊಳೆವಲ್ಲ ।
ನಿಚ್ಛಳದ ಕದಪಿನ ನಿತಂಬನಿಯರೊಮ್ಮಾರುವೇಣಿಯ ವಿಲಾಸಿನಿಯರು ॥
ಒಚ್ಚತದ ಚೆಲ್ವಿನೆಳೆವೆಣ್ಗಳುಳ್ಗೈಕೊಳ್ಳ ।
ದಚ್ಚರಿಯ ಕಡುಗಕ್ಕಸದ ಬಟ್ಟಬಲ್ಮೊಲೆಯ ।
ಪೊಚ್ಚಪೊಸಜೌವನದ ನೀರೆಯರ್ ನಡೆತಂದರೊಗ್ಗಾಗಿ ಸಂಭ್ರಮದೊಳು
occēregaṇṇa kōmaleyaroppaḍi naḍuvi ।
nacchigada bālakiyarōraṇada poḷevalla ।
nicchaḷada kadapina nitaṃbaniyarommāruvēṇiya vilāsiniyaru ॥
occatada celvineḷeveṇgaḷuḷgaikoḷḷa ।
daccariya kaḍugakkasada baṭṭabalmoleya ।
poccaposajauvanada nīreyar naḍetaṃdaroggāgi saṃbhramadoḷu
ಕಲಕೀರವಾಣಿಯರ್ ಕಾಲಾಹಿವೇಣಿಯರ್ ।
ಕಲಭ ಮದೆಯಾನೆಯರ್ ಕಾಯಜ ನಿದಾನೆಯರ್ ।
ಕಲಧೌತಗಾತ್ರೆಯರ್ ಕಂಜದಳ ನೇತ್ರೆಯರ್ ಕಳೆವೆತ್ತ ಕಾಮಿನಿಯರು ॥
ಕಲಶಕುಚಯುಗಳೆಯರ್ ಕನಕ ಮಣಿನಿಗಳೆಯರ್ ।
ಕಳಕಳಿಪ ವದನೆಯರ್ ಕುಲಿಶಾಭ ರದನೆಯರ್ ।
ಕಳೆದುಳಿದ ರನ್ನೆಯರ್ ಕಾಂತಿಸಂಪನ್ನೆಯರ್ ನಂದನಕೆ ನಡೆತಂದರು
kalakīravāṇiyar kālāhivēṇiyar ।
kalabha madeyāneyar kāyaja nidāneyar ।
kaladhautagātreyar kaṃjadaḷa nētreyar kaḷevetta kāminiyaru ॥
kalaśakucayugaḷeyar kanaka maṇinigaḷeyar ।
kaḷakaḷipa vadaneyar kuliśābha radaneyar ।
kaḷeduḷida ranneyar kāṃtisaṃpanneyar naṃdanake naḍetaṃdaru
ತಳಿರಡಿಗೆ ತೊಂಡೆವಣ್ ತುಟಿಗೆ ತಾವರೆ ಮೊಗಕೆ ।
ಬೆಳಗಾಯಿ ಮೊಲೆಗೆ ನೈದಿಲೆ ಕಣ್ಗೆ ಬಾಳೆ ತೊಡೆ ।
ಗೆಳೆವಳ್ಳಿ ಮೈಗೆ ಸಂಪಗೆ ನಾಸಿಕಕ್ಕೆ ಮಲ್ಲಿಗೆ ನಗೆಗೆ ಮೊಲ್ಲೆ ಪಲ್ಗೆ ॥
ಅಳಿ ಕುಂತಳಕೆ ನವಿಲ್ ಮುಡಿಗಂಚೆ ನಡೆಗೆ, ಕೋ ।
ಗಿಲೆ ಗಿಳಿಗಳಿಂಚರಕೆ ಸೋಲ್ದವಯವಂಗಳೊಳ್ ।
ನೆಲಸಿದುವು ಪೆಣ್ಗಳ್ಗೆ ಸೋಲದವರಾರೆನಲ್ ನಡೆತಂದರಂಗನೆಯರು
taḷiraḍige toṃḍevaṇ tuṭige tāvare mogake ।
beḷagāyi molege naidile kaṇge bāḷe toḍe ।
geḷevaḷḷi maige saṃpage nāsikakke mallige nagege molle palge ॥
aḷi kuṃtaḷake navil muḍigaṃce naḍege, kō ।
gile giḷigaḷiṃcarake sōldavayavaṃgaḷoḷ ।
nelasiduvu peṇgaḷge sōladavarārenal naḍetaṃdaraṃganeyaru
ಮಿಂಡೆದ್ದ ಹೆಣ್ಗಳುಪವನಕೆ ನಡೆತಮದು ಮುಂ ।
ಕೊಂಡು ಬಹುವಿಧದ ಚೇಷ್ಟೆಗಳಿಂದೆ ಭುಲ್ಲವಿಸಿ ।
ಕಂಡ ಕಂಡವನಿಜಾತಂಗಳಂ ಚಿಗುರಿಸಿದರೊಡನೆ ಪೂದೋರಿಸಿದರು ॥
ತಂಡತಂಡದೊಳಲ್ಲಿ ಪರಿಪರಿಯಲರ್ಗೊಯ್ದು ।
ಬೆಂಡಾಗಿ ಬಂದು ನಿರ್ಮಲ ಸರೋವರನು ।
ದ್ದಂಡದೊಳ್‍ಪೊಕ್ಕರಂಬುಕ್ರೀಡೆಗಂಗಜನ ಸೊಕ್ಕಾನೆಗಳ ತೆರದೊಳು
miṃḍedda heṇgaḷupavanake naḍetamadu muṃ ।
koṃḍu bahuvidhada cēṣṭegaḷiṃde bhullavisi ।
kaṃḍa kaṃḍavanijātaṃgaḷaṃ cigurisidaroḍane pūdōrisidaru ॥
taṃḍataṃḍadoḷalli paripariyalargoydu ।
beṃḍāgi baṃdu nirmala sarōvaranu ।
ddaṃḍadoḷpokkaraṃbukrīḍegaṃgajana sokkānegaḷa teradoḷu
ನಿರಿ ಗುರುಳ್ಗಳ ತುಂಬಿಗಳ ಪೊಳೆವ ಲೋಚನದ ।
ಮರಿಮೀನ ಮೊಗದಲರ್ದಾವರೆಯ ತ್ರಿವಳಿಗಳ ।
ಕಿರುದೆರೆಯ ಕಂಧರದ ಕಂಬುವಿನ ಘನ ಕುಚಂಗಳ ಕುಂಜ ಮುಕುಳಂಗಳ ॥
ಪೊರೆವಾರ ಪುಳಿನದ ತನುಚ್ಛವಿಯ ತಿಳಿನೀರ ।
ಮೆರೆವ ಮಧ್ಯದ ಮೃಣಾಳದ ಬಗೆಯ ಭೇದಮಂ ।
ಕುರುಪಿಡುವೊಡರಿದೆನಲ್ ಸರಿಸಿಯೊಳ್ ತದಳೆಯರ ಜಲಕೇಳಿ ಕಣ್ಗೆಗೆಸೆದುದು
niri guruḷgaḷa tuṃbigaḷa poḷeva lōcanada ।
marimīna mogadalardāvareya trivaḷigaḷa ।
kirudereya kaṃdharada kaṃbuvina ghana kucaṃgaḷa kuṃja mukuḷaṃgaḷa ॥
porevāra puḷinada tanucchaviya tiḷinīra ।
mereva madhyada mr̥ṇāḷada bageya bhēdamaṃ ।
kurupiḍuvoḍaridenal sarisiyoḷ tadaḷeyara jalakēḷi kaṇgegesedudu
ಲಲನೆಯರ್ ತಾವರೆದೆರದ ಮೇಲುದಿನೊಳೆಸೆವ ।
ನೆಲೆಮೊಲೆಗಳಲುಗೆ ತಾವರೆದೆರೆದ ಕೈಗಳಿಂ ।
ತುಡುಕಿದರ್ ಚೆಲ್ವಕಂಕಣ ರವಂ ಮಿಗೆ ಚೆಲ್ವಕಂಕಣ ರವಂಗಳೊಡನೆ ॥
ವಿಲಸಿತದ ಕಾಸಾರದಂಬುಗಳನೆಸೆವ ಜೀ ।
ರ್ಕೊಳವಿಗಳ ಕದನ ಸಾಸಾರದಂಬುಗಳವೋ ।
ಲಳವಡಿಸಿ ಸರಸಕೇಳಿಗೆ ಪೊಕ್ಕರಡಿಗಡಿಗೆ ಸರಸಕೇಳಿಗೆಯಾಗಲು
lalaneyar tāvarederada mēludinoḷeseva ।
nelemolegaḷaluge tāvaredereda kaigaḷiṃ ।
tuḍukidar celvakaṃkaṇa ravaṃ mige celvakaṃkaṇa ravaṃgaḷoḍane ॥
vilasitada kāsāradaṃbugaḷaneseva jī ।
rkoḷavigaḷa kadana sāsāradaṃbugaḷavō ।
laḷavaḍisi sarasakēḷige pokkaraḍigaḍige sarasakēḷigeyāgalu
ಹೊಳೆವ ಹುಬ್ಬುಗಳ ಭಾಸುರ ಚಾಪಲತೆಯ ಮಂ ।
ಡಳಿಸಿದುನ್ನತ ಪಯೋಧರದ ಕಡೆಗಣ್ಣ ಚಂ ।
ಚಲದ ಭೂಷಣದ ಘನರವದ ಚಿತ್ರಾಂಗಿಯರ್ ತವೆ ಹಸ್ತದೊಳ್ ತೋಯದ ॥
ಮಳೆಗರೆವುದಚ್ಚರಿಯೆ ಪೇಳೆನೆ ಸುವಾರಿಯಂ ।
ತುಳುಕಿದರ್ ಬಿಂಕದಿಂದೊರ್ವರೋರ್ವರ ಮೇಲೆ ।
ಮೊಲೆಗೆಲದ ಕುಂಕುಮದ ಕದಡರುಣ ಗಿರಿತಟದ ಕೆಂಬೊನಲ್ಗಳವೊಲಾಗೆ
hoḷeva hubbugaḷa bhāsura cāpalateya maṃ ।
ḍaḷisidunnata payōdharada kaḍegaṇṇa caṃ ।
calada bhūṣaṇada ghanaravada citrāṃgiyar tave hastadoḷ tōyada ॥
maḷegarevudaccariye pēḷene suvāriyaṃ ।
tuḷukidar biṃkadiṃdorvarōrvara mēle ।
molegelada kuṃkumada kadaḍaruṇa giritaṭada keṃbonalgaḷavolāge
ಹರಿಯ ಲೋಚನಮಜಂ ಕುಳ್ಳಿರ್ಪ ತಾಣಮಿಂ ।
ದಿರೆಯ ನಿಳಯಂ ದಿವಾಕರನ ಕೆಳೆ ಮನ್ಮಥನ ।
ಸರಳಾರಡಿಗಳಿಕ್ಕೆ ಪರಿಮಳದ ಬೀಡೆನಿಸಿಕೊಂಡು ಸಂಪೂರ್ಣತೆಯೊಳು ॥
ಪರಿಶೋಭಿಸಿದುವಲ್ಲಿ ನೆರೆದಿಂಗಳಂ ಪೋಲ್ವ ।
ತರುಣೀಯರ ಚೆಲ್ವ ನಗೆಮೊಗದ ಮುಂದೀಗ ತಾ ।
ವರೆಯಾದುವೆಂಬಂತೆ ಪೆಣ್ಗಳಾಸ್ಯಕೆ ಸೋಲ್ದುವಾ ಕೊಳದ ಕಮಲಂಗಳು
hariya lōcanamajaṃ kuḷḷirpa tāṇamiṃ ।
direya niḷayaṃ divākarana keḷe manmathana ।
saraḷāraḍigaḷikke parimaḷada bīḍenisikoṃḍu saṃpūrṇateyoḷu ॥
pariśōbhisiduvalli nerediṃgaḷaṃ pōlva ।
taruṇīyara celva nagemogada muṃdīga tā ।
vareyāduveṃbaṃte peṇgaḷāsyake sōlduvā koḷada kamalaṃgaḷu
ಮೇಲಕುಪ್ಪರಿಸಿ ತಲೆಕೆಳಗಾಗಿ ಬಿದ್ದೊಡಂ ।
ಲೋಲ ಲೋಚನಕೆ ಪಾಸಟಿಯಾಗದಿರೆ ಮೀನ್ಗ ।
ಳಾಳದೊಳ್ ಮುಳೂಗಿದುವು ಗತಿಗಳ ವಿಲಾಸಮಂ ಕಂಡು ಕಲಹಂಸಂಗಳು ॥
ಕಾಲಿಂದ ನಡೆಯಲೊಲ್ಲದೆ ನಭಕೆ ಪಾರಿದುವು ।
ಬಾಲೆಯರ ಕಣ್ಣ ಹೊಳಹಿಗೆ ಗಮನದುಜ್ಜುಗಕೆ ।
ಸೋಲದವರಾರೆಂಬ ತೆರನಾಗೆ ಸಲಿಲದೊಳ್ ಕ್ರೀಡಿಸಿದರಂಗನೆಯರು
mēlakupparisi talekeḷagāgi biddoḍaṃ ।
lōla lōcanake pāsaṭiyāgadire mīnga ।
ḷāḷadoḷ muḷūgiduvu gatigaḷa vilāsamaṃ kaṃḍu kalahaṃsaṃgaḷu ॥
kāliṃda naḍeyalollade nabhake pāriduvu ।
bāleyara kaṇṇa hoḷahige gamanadujjugake ।
sōladavarāreṃba teranāge saliladoḷ krīḍisidaraṃganeyaru
ಶಿಖರಿ ದಶನ ದ್ಯುತಿಯ ಬೆಳ್ನಗೆಯ ಸೂಸಲೆನೆ ।
ನಖ ರುಚಿಯ ತೆರಳಿಕೆಯ ಹೊರಳಿಯೆನೆ ಲೋಚನ ವಿ ।
ಶಿಖಿದ ಮುಮ್ಮೊನೆವೊಗರ ಧಾಳಿಯೆನೆ ಹಾರಮಂ ಪರಿದು ಬೀರ್ದರೊ ಪೇಳೆನೆ ॥
ಸಖಿಯರಂ ಕೂಡಿಕೊಂಡೊರ್ವರೊರ್ವರ್ಗೆ ಸ ।
ಮ್ಮುಖವಾಗಿ ವಿಷಯೆ ಚಂಪಕಮಾಲಿನಿಯರಾಗ ।
ಸುಖ ಜಲಕ್ರೀಡೆಯೊಳ್ ಚೆಲ್ವ ತಿಳಿನೀರ ತುಂತುರ್ವನಿಗಳೆಸೆದಿರ್ದುವು
śikhari daśana dyutiya beḷnageya sūsalene ।
nakha ruciya teraḷikeya horaḷiyene lōcana vi ।
śikhida mummonevogara dhāḷiyene hāramaṃ paridu bīrdaro pēḷene ॥
sakhiyaraṃ kūḍikoṃḍorvarorvarge sa ।
mmukhavāgi viṣaye caṃpakamāliniyarāga ।
sukha jalakrīḍeyoḷ celva tiḷinīra tuṃturvanigaḷesedirduvu
ಮುದದಿಂದ ವಿಷಯೆ ಚಂಪಕಮಾಲಿನಿಯರೊಡನೆ ।
ಸುದತಿಯರ್ ನಾನಾಪ್ರಕಾರಿಂದ ಕ್ರೀಡಿಸಿದ ।
ರುದುಕದೊಳ್ ಬಳಿಕ ತಮ್ಮಾನನ ಶುಧಾಂಶು ಮಂಡಲ ಬೆಳ್ದಿಂಗಳಿಂದೆ ॥
ಸದಮಲ ಸರೋವರದ ತೀರದೊಳ್ ಬಳಸಿ ಕ ।
ಟ್ಟಿದ ಚಂದ್ರಕಾಂತ ಸೋಪಾನದೊಳೊಸರ್ವ ನೀ ।
ರೊದವಿತೆನೆ ಮೈಗಳ್ಗೆ ತಣ್ಣಸಂ ತೋರಲಾ ಕೊಳದಿಂದೆ ಪೊರೆಮಟ್ಟರು
mudadiṃda viṣaye caṃpakamāliniyaroḍane ।
sudatiyar nānāprakāriṃda krīḍisida ।
rudukadoḷ baḷika tammānana śudhāṃśu maṃḍala beḷdiṃgaḷiṃde ॥
sadamala sarōvarada tīradoḷ baḷasi ka ।
ṭṭida caṃdrakāṃta sōpānadoḷosarva nī ।
rodavitene maigaḷge taṇṇasaṃ tōralā koḷadiṃde poremaṭṭaru
ಕೂಲವನಡರ್ದು ನನೆದಂಗದೊಳ್ ಪೊತ್ತಿದ ದು ।
ಕೂಲದೊಳಿರಲ್ಕೆ ತಾಪಸರ ದೃಢಮತಿಗೆ ಪ್ರತಿ ।
ಕೂಲ ಕೃತಿಗಳೊ ಮೋಹನದ ರಸದೊಳಾರ್ದತೆಯನಾಂತ ಚೆಲ್ವಿನಕಣಿಗಳೊ ॥
ಸಾಲ ಮಣಿಮಯದ ಸೋಪಾನದೊಳ್ ನಿಲಿಸಿರ್ದ ।
ಸಾಲಭಂಜಿಕೆಗಳೊ ವಿಚಿತ್ರಮೆನೆ ರಂಜಿತ ರ ।
ಸಾಲ ಪಲ್ಲವ ಪಾಣಿ ಪಾದ ತಳದಬಲೆಯರ ರೂಪುಗಳ್ ಕಣ್ಗೆಸೆದುವು
kūlavanaḍardu nanedaṃgadoḷ pottida du ।
kūladoḷiralke tāpasara dr̥ḍhamatige prati ।
kūla kr̥tigaḷo mōhanada rasadoḷārdateyanāṃta celvinakaṇigaḷo ॥
sāla maṇimayada sōpānadoḷ nilisirda ।
sālabhaṃjikegaḷo vicitramene raṃjita ra ।
sāla pallava pāṇi pāda taḷadabaleyara rūpugaḷ kaṇgeseduvu
ಅದಟಿಂದೆ ಮನ್ಮಥಂ ತ್ರಿಜಗಮಂ ಗೆಲ್ವೆಡೆಯೊ ।
ಳೊದವಿದ ಪಲವು ಕೈದುಗಳನಲ್ಲಿ ಜಾಡಿಸಿ ತೊ ।
ಳೆದು ತೀರದೊಳ್ ನಿಲಿಸಿ ಮೇಲಣಿಂದೊರೆಗಳಂ ತುಡಿಸಿದನೊ ಪೇಳನಲ್ಕೆ ॥
ಉದಕದಿಂ ಪೊರಮಟ್ಟು ನಿಂದ ನೀರೆಯರ ಕಾ ।
ಯದ ಬಳಿಯೆ ನನೆದು ನಿಡಿದಾಗಿ ಮಿಡಿಪರಿಯಂತಿ ।
ಳಿದು ಜೋಲ್ವ ಕೇಶಪಾಶಂಗಳಾರಾಜಿಸಿದುವೇನೆಂಬೆನಚ್ಚರಿಯನು
adaṭiṃde manmathaṃ trijagamaṃ gelveḍeyo ।
ḷodavida palavu kaidugaḷanalli jāḍisi to ।
ḷedu tīradoḷ nilisi mēlaṇiṃdoregaḷaṃ tuḍisidano pēḷanalke ॥
udakadiṃ poramaṭṭu niṃda nīreyara kā ।
yada baḷiye nanedu niḍidāgi miḍipariyaṃti ।
ḷidu jōlva kēśapāśaṃgaḷārājisiduvēneṃbenaccariyanu
ತೊಳಗುವ ನಿತಂಬ ಗಿರಿಯಿಂದಾಗಸಕೆ ಪರ್ಬಿ ।
ದೆಳೆಯವಲ್ಲಿಯ ಮೇಲೆ ನೆಲಸಿದೆಣೆವಕ್ಕಿಗಳ್ ।
ಬಳಿವಿಡಿದು ಮದನ ಶಬರನ ಬಲೆಗೆ ಸಿಕ್ಕಿ ನಭಕುಬ್ಬಿಕೊಂಡೇಳ್ವ ತೆರದೆ ॥
ಸಲಿಲದೊಳ್ ನನೆದ ದೇವಾಂಗದೊಳಡರ್ದ ನೆಲೆ ।
ಮೊಲೆಗಳಾರಾಜಿಸೆ ಮೃಗಾಕ್ಷಿಯರ ಚೆಲ್ವುನಿ ।
ಚ್ಚಳದಿಂದೆ ಕಾಣಿಸಿತು ಕಾಸಾರ ತೀರದೊಳ್ ತೀರದೊಳ್ಪಿಂದೆ ಮೆರೆದು
toḷaguva nitaṃba giriyiṃdāgasake parbi ।
deḷeyavalliya mēle nelasideṇevakkigaḷ ।
baḷiviḍidu madana śabarana balege sikki nabhakubbikoṃḍēḷva terade ॥
saliladoḷ naneda dēvāṃgadoḷaḍarda nele ।
molegaḷārājise mr̥gākṣiyara celvuni ।
ccaḷadiṃde kāṇisitu kāsāra tīradoḷ tīradoḷpiṃde meredu
ಹಿಮದಿಂದೆ ತಣ್ಣಸಂಪಡೆದಿರ್ದ ಮಾಗಿಯಂ ।
ಕ್ರಮದಿಂದೆ ಜಾರಿಸಿ ವಸಂತರ್ತು ತಲೆದೋರ್ಪ ।
ಸಮಯದವೊಲೇಣಾಕ್ಷಿಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ ॥
ರಮಣೀಯ ಚಿತ್ರಾವಲಂಬನದ ಶೋಭೆಗಳ ।
ಸಮನಿಸಿದ ಚಂದ್ರಿಕೆಯ ಸೊಗಸುವೆಳೆಮಾದಳದ ।
ಸುಮನೋನುರಾಗದಿಂ ಫಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು
himadiṃde taṇṇasaṃpaḍedirda māgiyaṃ ।
kramadiṃde jārisi vasaṃtartu taledōrpa ।
samayadavolēṇākṣiyar naneda maiyoḷiha vasanaṃgaḷaṃ saḍilci ॥
ramaṇīya citrāvalaṃbanada śōbhegaḷa ।
samanisida caṃdrikeya sogasuveḷemādaḷada ।
sumanōnurāgadiṃ phalavu baṇṇaṃgaḷaṃ tegeduṭṭu raṃjisidaru
ತಡಿಗಡರ್ದೊಡನೆ ಮಡಿವರ್ಗಮಂ ತೆಗೆದುಟ್ಟು ।
ನಿಡುಗುರುಳ್ಗೆಸೆವ ಧೂಪದ ಪೊಗೆಗಳಂ ಕೊಟ್ಟು ।
ತೊಡವೆಲ್ಲಮಂ ತೊಟ್ಟು ಪಣೆಗೆ ತಿಲಕಮನಿಟ್ಟು ತಿಗುರಿಂದೆ ಸೊಬಗುಮಟ್ಟು ॥
ಅಡಿಗಲತಿಗೆಯನಕ್ಷಿಗಂಜನವನಲರ್ಗಳಂ ।
ಮುಡಿಗೆ ನುಣ್ಗದಪಿಂಗೆ ಮಕರ ಪತ್ರಮನಾಂತು ।
ಬಿಡದೆ ಮಧುಪಾನಮಂ ಮಾಡಿ ಕಪ್ಪುರವೀಳೆಯಂಗೊಂಡು ಸೊಗಯಿಸಿದರು
taḍigaḍardoḍane maḍivargamaṃ tegeduṭṭu ।
niḍuguruḷgeseva dhūpada pogegaḷaṃ koṭṭu ।
toḍavellamaṃ toṭṭu paṇege tilakamaniṭṭu tiguriṃde sobagumaṭṭu ॥
aḍigalatigeyanakṣigaṃjanavanalargaḷaṃ ।
muḍige nuṇgadapiṃge makara patramanāṃtu ।
biḍade madhupānamaṃ māḍi kappuravīḷeyaṃgoṃḍu sogayisidaru
ಬಳಿಕೊರ್ವರೊರ್ವರಂ ನೋಡುತ್ತೆ ದೂಡುತ್ತೆ ।
ನಲವಿಂದೆ ನೃತ್ತಮಂ ಮಾಡುತ್ತೆ ಪಾಡುತ್ತೆ ।
ಬಳಸಿ ಸರಸೋಕ್ತಿಗಳನಾಡುತ್ತೆ ತೀಡುತ್ತೆ ಬೆಳ್ನಗೆಯ ಬೆಡಗುಗಳನು ॥
ಅಲರ್ಗಳಂ ತೆಗೆತೆಗೆದು ನೀಡುತ್ತೆ ಸೂಡುತ್ತೆ ।
ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ ।
ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ಗೆಸೆದರೆಳೆವೆಣ್ಗಳು
baḷikorvarorvaraṃ nōḍutte dūḍutte ।
nalaviṃde nr̥ttamaṃ māḍutte pāḍutte ।
baḷasi sarasōktigaḷanāḍutte tīḍutte beḷnageya beḍagugaḷanu ॥
alargaḷaṃ tegetegedu nīḍutte sūḍutte ।
lalita madhu caṣakamaṃ bēḍutte kāḍutte ।
kalegaḷa vilāsamaṃ pūḍutte kūḍutte kaṇgesedareḷeveṇgaḷu
ಆಳಿಯರೊಳಿಂತು ಚಂಪಕಮಾಲಿನಿಗೆ ಸರಸ ।
ಕೇಳಿ ವೆಗ್ಗಳಿಸಿರ್ದ ಸಮಯದೊಳಲರ್ಗೊಯ್ವ ।
ಬೇಳಂಬದಿಂದೆ ಕೆಲಸಿಡಿದು ಬಂದಾ ವಿಷಯೆ ಚೂತದ್ರುಮದ ನೆಳಲೊಳು ॥
ತೋಳ ತಲೆಗಿಂಬಿನ ತಳಿರ್ವಸೆಯ ಮೇಲೆ ತಂ ।
ಗಾಳಿಗೊಡ್ಡಿದ ಮೆಯ್ಯ ಸೊಗಸಿಂದೆ ಮರೆದು ನಿ ।
ದ್ರಾಲೋಲನಾಗಿ ಮಲಗಿಹ ಚಂದ್ರಹಾಸನಂ ಕಂಡು ಸೈವೆರಗಾದಳು
āḷiyaroḷiṃtu caṃpakamālinige sarasa ।
kēḷi veggaḷisirda samayadoḷalargoyva ।
bēḷaṃbadiṃde kelasiḍidu baṃdā viṣaye cūtadrumada neḷaloḷu ॥
tōḷa talegiṃbina taḷirvaseya mēle taṃ ।
gāḷigoḍḍida meyya sogasiṃde maredu ni ।
drālōlanāgi malagiha caṃdrahāsanaṃ kaṃḍu saiveragādaḷu
ಲೋಕತ್ರಯಂ ತನಗೆ ವಶವರ್ತಿಯಾದುದಿ ।
ನ್ನೇಕೆ ಧಾವತಿಯೆಂದು ಸುಖದಿಂದೆ ಪವಡಿಸಿದ ।
ನೋ ಕಬ್ಬುವಿಲ್ಲನೆನೆ ಬೇಸರದೆ ಬಾಂದಳದೊಳಾವಗಂ ನಡೆವ ಬವಣಿ ॥
ಸಾಕೆಂದು ನಿದ್ರೆಗೈದನೊ ಸೋಮನೆನೆ ವನ ।
ಶ್ರೀ ಕಾಮಿನಿಯರತಿಶ್ರಮದೊಳೊರಗಿದನೊ ಕುಸು ।
ಮಾಕರನೆನಲ್ಕೆ ಮಲಗಿಹ ಚಂದ್ರಹಾಸನಂ ಕಂಡು ವಿಸ್ಮಿತೆಯಾದಳು
lōkatrayaṃ tanage vaśavartiyādudi ।
nnēke dhāvatiyeṃdu sukhadiṃde pavaḍisida ।
nō kabbuvillanene bēsarade bāṃdaḷadoḷāvagaṃ naḍeva bavaṇi ॥
sākeṃdu nidregaidano sōmanene vana ।
śrī kāminiyaratiśramadoḷoragidano kusu ।
mākaranenalke malagiha caṃdrahāsanaṃ kaṃḍu vismiteyādaḷu
ಒರ್ವರೊರ್ವರನಗಲ್ದಶ್ವಿನೀದೇವತೆಗ ।
ಳುರ್ವ ನಳಕೂಬರ ಜಯಂತಾದಿ ಸುರ ತನುಜ ।
ರುರ್ವರೆಗದೇಕೆ ಬಹರಿನಸಶಿಗಳಾದೊಡಿಹವುಷ್ಣಶೀತ ದ್ಯುತಿಗಳು ॥
ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ ।
ಧರ್ವರೋಲಗಾವನೋ ಮನುಜನಲ್ಲೆಂದವನ ।
ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ
orvarorvaranagaldaśvinīdēvatega ।
ḷurva naḷakūbara jayaṃtādi sura tanuja ।
rurvaregadēke baharinasaśigaḷādoḍihavuṣṇaśīta dyutigaḷu ॥
gīrvāṇa yakṣa kinnara siddha garuḍa gaṃ ।
dharvarōlagāvanō manujanalleṃdavana ।
sarvāṃgamaṃ biḍade nōḍidaḷ viṣaye viṣayāsakteyāgi baḷika
ಬೆಚ್ಚೆರಳೆಗಂಗಳವನವಯವದ ಚೆಲ್ವಿನೊಳ್ ।
ಬೆಚ್ಚುವಂಗಜನಾಗ ಕಿವಿವರೆಗೆ ತೆಗೆದು ತುಂ ।
ಬೆಚ್ಚಲರ್ಗೋಲಂತರಂಗದೊಳ್ ನಾಂಟಿದುವು ದಾಂಟಿದುವು ಗರಿಗಳೊಡನೆ ॥
ಬೆಚ್ಚನಾದೆದೆಯಿಂದೆ ಕಾತರಿಸಿ ಮುದುಡುಗೊಂ ।
ಡೆಚ್ಚರಿಂದೇಳ್ವ ರೋಮಾಂಚನದೊಳಾಸೆ ಮುಂ ।
ಬೆಚ್ಚೆ ಬೆವರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು
becceraḷegaṃgaḷavanavayavada celvinoḷ ।
beccuvaṃgajanāga kivivarege tegedu tuṃ ।
beccalargōlaṃtaraṃgadoḷ nāṃṭiduvu dāṃṭiduvu garigaḷoḍane ॥
beccanādedeyiṃde kātarisi muduḍugoṃ ।
ḍeccariṃdēḷva rōmāṃcanadoḷāse muṃ ।
becce bevaruva bāle bēsarade niṃdu niṭṭisutirdaḷēvēḷvenu
ಸುತ್ತನೋಡುವಳೊಮ್ಮೆ ನೂಪುರವಲುಗದಂತೆ ।
ಹತ್ತೆಸಾರುವಳೊಮ್ಮೆ ಸೋಂಕಲೆಂತಹುದೆಂದು ।
ಮತ್ತೆ ಮುರಿದಪಳೊಮ್ಮೆ ಹೆಜ್ಜೆಹಜ್ಜೆಯಮೇಲೆ ಸಲ್ವಳಮ್ಮದೆ ನಿಲ್ವಳು ॥
ಚಿತ್ತದೊಳ್ ನಿಶ್ಚೈಸಿ ನೆರೆಯಲೆಳಸುವಳೊಮ್ಮೆ ।
ಹೊತ್ತಲ್ಲದನುಚಿತಕೆ ಬೆದರಿ ಹಿಂಗುವಳೊಮ್ಮೆ।
ತತ್ತಳದ ಬೇಟದೊಳ್ ಬೆಂಡಾಗಿ ವಿಷಯೆ ನಿಂದಿರ್ದಳಾತನ ಪೊರೆಯೊಳು
suttanōḍuvaḷomme nūpuravalugadaṃte ।
hattesāruvaḷomme sōṃkaleṃtahudeṃdu ।
matte muridapaḷomme hejjehajjeyamēle salvaḷammade nilvaḷu ॥
cittadoḷ niścaisi nereyaleḷasuvaḷomme ।
hottalladanucitake bedari hiṃguvaḷomme।
tattaḷada bēṭadoḷ beṃḍāgi viṣaye niṃdirdaḷātana poreyoḷu
ದಿವಿಜೇಂದ್ರತನಯ ಕೇಳೀ ತೆರೆದೊಳಾಗ ನವ ।
ಯುವತಿ ನಿಂದೀಕ್ಷಿಸುತ ಕಂಡಳವನಂಗದೊಳೆ ।
ಸೆವ ರುಚಿರ ಕಂಚುಕದ ತುದಿಸೆರಗಿನೊಳ್ ಕಟ್ಟಿಕೊಂಡಿರ್ದ ಪತ್ರಿಕೆಯನು ॥
ತವಕದಿಂ ಬಿಟ್ಟು ಮುದ್ರೆಯನೋಸರಿಸಿ ತೆಗೆದು ।
ವಿವರದೊಳ್ ತನ್ನ ತಂದೆಯ ಹೆಸರ ಬರೆಹಮಿರೆ ।
ಲವಲವಿಕೆ ಮಿಗೆ ನೋಡಿ ಹರ್ಷಪುಳಕದೊಳಂದುನಿಂದೋದಿಕೊಳುತಿರ್ದಳು
divijēṃdratanaya kēḷī teredoḷāga nava ।
yuvati niṃdīkṣisuta kaṃḍaḷavanaṃgadoḷe ।
seva rucira kaṃcukada tudiseraginoḷ kaṭṭikoṃḍirda patrikeyanu ॥
tavakadiṃ biṭṭu mudreyanōsarisi tegedu ।
vivaradoḷ tanna taṃdeya hesara barehamire ।
lavalavike mige nōḍi harṣapuḷakadoḷaṃduniṃdōdikoḷutirdaḷu
ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು ।
ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ ।
ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ ॥
ಸೀಮೆಗರಸಾದಪಂ ಸಂದೇಹಮಿಲ್ಲಿದಕೆ ।
ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ ।
ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು
śrīmatsaciva śirōmaṇi duṣṭabuddhi su ।
prēmadiṃ tanna maga madanaṃge mige parasi ।
nēmisida kāryamī caṃdrahāsaṃ mahāhitanemage mēle namma ॥
sīmegarasādapaṃ saṃdēhamillidake ।
sāmānyadavanalla namage muṃdake sarva ।
thāmitranappaneṃdītanaṃ kaḷuhidevu ninna baḷigidanarivudu
ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ ।
ವಿತ್ತ ವಿದ್ಯಾವಯೋ ವಿಕ್ರಮಂಗಳ ನೀಕ್ಷಿ ।
ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳಮಗೆ ॥
ಉತ್ತರೋತ್ತಮಪ್ಪುದೆಂದು ಬರೆದಿಹ ಲಿಪಿಯ ।
ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ ।
ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು
hottugaḷeyade baṃda baḷikivana kula śīla ।
vitta vidyāvayō vikramaṃgaḷa nīkṣi ।
suttirade viṣava mōhisuvaṃte kuḍuvudītaṃge nīnidaroḷamage ॥
uttarōttamappudeṃdu barediha lipiya ।
netti vācisikoṃḍu taraḷākṣi tānadake ।
mattoṃdabhiprāyamaṃ tiḷidaḷullaṃghisuvaruṃṭe vidhikr̥tavanu
ಈತಂ ತಮಗೆ ಮಹಾಹಿತನೆಂದು ತಮ್ಮ ಧರೆ ।
ಗೀತನರಸಹನೆಂದು ಕುಲಶೀಲ ವಿದ್ಯೆಗಳ ।
ನೀತನೊಳರಸಬೇಡವೆಂದು ಮುಂದಕೆ ಸರ್ವಥಾಮಿತ್ರನಪ್ಪನೆಂದು ॥
ಈತಂಗೆ ವಿಷಯೆ ಮೋಹಿಸುವಂತೆ ಕುಡುವುದೆಂ ।
ದಾ ತಾತನಣ್ಣಂಗೆ ಬರೆಸಿ ಕಳುಹಿದ ಪತ್ರ ।
ವೇ ತಪ್ಪದಿದು ವರ್ಣಪಲ್ಲಟದ ಮೋಸವೆಂದಬಲೆ ಭಾವಿಸುತಿರ್ದಳು
ītaṃ tamage mahāhitaneṃdu tamma dhare ।
gītanarasahaneṃdu kulaśīla vidyegaḷa ।
nītanoḷarasabēḍaveṃdu muṃdake sarvathāmitranappaneṃdu ॥
ītaṃge viṣaye mōhisuvaṃte kuḍuvudeṃ ।
dā tātanaṇṇaṃge baresi kaḷuhida patra ।
vē tappadidu varṇapallaṭada mōsaveṃdabale bhāvisutirdaḷu
ಕಡುಚೆಲ್ವನಾದ ವರನಂ ಕಂಡು ನಿಶ್ಚೈಸಿ ।
ತಡೆಯದಿಂದೀತಂಗೆ ವಿಷಯೆ ಮೋಹಿಸುವಂತೆ ।
ಕಡುವುದೆಂದಲ್ಲಿಂದೆ ತನ್ನ ಪಿತನೀತನಂ ಕಳುಹಿದಂ ಸುತನ ಬಳಿಗೆ ॥
ಒಡಗೂಡದಿರದೆನ್ನ ಮನದೆಣಿಕೆ ಪತ್ರಿಕೆಯೊ ।
ಳೆಡಹಿ ಬರೆದಕ್ಕರದ ಬೀಳಿರ್ದೊಡದರಿಂದೆ ।
ಕೆಡುವುದಗ್ಗದ ಕಜ್ಜಮೆಂದಾ ತರುಣಿ ತಾನದಂ ತಿದ್ದಲನುಗೈದಳು
kaḍucelvanāda varanaṃ kaṃḍu niścaisi ।
taḍeyadiṃdītaṃge viṣaye mōhisuvaṃte ।
kaḍuvudeṃdalliṃde tanna pitanītanaṃ kaḷuhidaṃ sutana baḷige ॥
oḍagūḍadiradenna manadeṇike patrikeyo ।
ḷeḍahi baredakkarada bīḷirdoḍadariṃde ।
keḍuvudaggada kajjameṃdā taruṇi tānadaṃ tiddalanugaidaḷu
ತಪ್ಪಿರ್ದ ಲಿಪಿಯೊಳ್ ವಕಾರಮಂ ತೊಡೆದಲ್ಲಿ ।
ಗೊಪ್ಪುವ ಯಕಾರಮಂ ಕೆಲಬಲದ ಮಾಮರದೊ ।
ಲಿಪ್ಪ ನಿರ್ಯಾಸಮಂ ತೆಗೆದು ಕಿರುವೆರಳುಗುರ್ಗೊನೆಯಿಂದೆ ತಿದ್ದಿ ಬರೆದು ॥
ಅಪ್ಪಂತೆ ಮೊದಲಿರ್ದ ಮುದ್ರೆಯಂ ಸಂಘಟಿಸಿ ।
ಕುಪ್ಪಸದ ಸೆರಗಿನೊಳ್ ಕಟ್ಟಿ ಪಳೆಯವೊಲಿರಿಸಿ ।
ಸಪ್ಪುಳಾಗದ ತೆರದೊಳೆದ್ದು ಮೆಲ್ಲನೆ ಮಂತ್ರಿಸುತೆ ತೊಲಗಿ ಬರುತಿರ್ದಳು
tappirda lipiyoḷ vakāramaṃ toḍedalli ।
goppuva yakāramaṃ kelabalada māmarado ।
lippa niryāsamaṃ tegedu kiruveraḷugurgoneyiṃde tiddi baredu ॥
appaṃte modalirda mudreyaṃ saṃghaṭisi ।
kuppasada seraginoḷ kaṭṭi paḷeyavolirisi ।
sappuḷāgada teradoḷeddu mellane maṃtrisute tolagi barutirdaḷu
ದಿಟ್ಟಿ ಮುರಿಯದು ಕಾಳ್ಗಳಿತ್ತಬಾರವು ಮನಂ ।
ನಟ್ಟು ಬೇರೂರಿದುದು ಕಾಮನಂಬಿನ ಗಾಯ ।
ವಿಟ್ಟಣಿಸಿತಂಗಲತೆ ಕಾಹೇರಿತೊಡಲೊಳಗೆ ವಿರಹದುರಿ ತಲೆದೋರಿತು ॥
ಬಟ್ಟೆವಿಡಿದೊಡನೊಡನೆ ತಿರುತಿರುಗಿ ನೋಡುತಡಿ ।
ಯಿಟ್ಟಳೀಚೆಗೆ ಬಳಿಕ ಬೆರಸಿದಳ್ ಕೆಳದಿಯರ ।
ತಟ್ಟಿನೊಳ್ ಸಂಭ್ರಮದ ಸಂತಾಪದೆಡೆಯಾಟದಂತರಂಗದ ಬಾಲಿಕೆ
diṭṭi muriyadu kāḷgaḷittabāravu manaṃ ।
naṭṭu bērūridudu kāmanaṃbina gāya ।
viṭṭaṇisitaṃgalate kāhēritoḍaloḷage virahaduri taledōritu ॥
baṭṭeviḍidoḍanoḍane tirutirugi nōḍutaḍi ।
yiṭṭaḷīcege baḷika berasidaḷ keḷadiyara ।
taṭṭinoḷ saṃbhramada saṃtāpadeḍeyāṭadaṃtaraṃgada bālike
ಆಳಿಯರ್ ಕಂಡರೀಕೆಯ ಮೊಗದ ಭಾವಮಂ ।
ಕೇಳಿದರಿದೇನೆಲೆ ಮೃಗಾಕ್ಷಿ ತಳುವಿದೆ ಮನದ ।
ಬೇಳಂಬಮಾವುದುಕ್ಕುವಹರ್ಷರಸದೊಡನೆ ಬೆರಸಿಹುದು ಬೆಮರುವೊನಲು ॥
ಗಾಳಿ ಪರಿಮಳವನಡಗಿಪುದುಂಟೆ ತನು ಚಿತ್ತ ।
ದಾಳಾಪಮಂ ಮಾಜಲರಿದಪುದೆ ಸಾಕಿನ್ನು ।
ಹೇಳದೊಡೆ ಮಾಣಲಂತಸ್ಥಮದು ತಾನೆವುಬ್ಬುವುದೆಂದು ನಗುತಿರ್ದರು
āḷiyar kaṃḍarīkeya mogada bhāvamaṃ ।
kēḷidaridēnele mr̥gākṣi taḷuvide manada ।
bēḷaṃbamāvudukkuvaharṣarasadoḍane berasihudu bemaruvonalu ॥
gāḷi parimaḷavanaḍagipuduṃṭe tanu citta ।
dāḷāpamaṃ mājalaridapude sākinnu ।
hēḷadoḍe māṇalaṃtasthamadu tānevubbuvudeṃdu nagutirdaru
ಕೆಳದಿಯರ ನುಡಿಗೆ ನಸುನಗುತ ನಿಜ ಭಾವಮಂ ।
ಮೊಳೆಗಾಣಿಸದೆ ಪುಸಿಗೆ ಸರಸವಾಡುತೆ ಪೊತ್ತು ।
ಗಳೆವ ಮಂತ್ರಿಜೆ ಸಹಿತ ತಿರುಗಿದಳ್ ಬನದಿಂದೆ ಮನೆಗೆ ಚಂಪಕಮಾಲಿನಿ ॥
ಪೊಳಲೊಳ್ ವಿವಾಹೋತ್ಸವಂಗಳಾ ಸಮಯದೊಳ್ ।
ಸುಳಿದುವಗ್ಗದ ಗೀತ ನೃತ್ಯ ವಾದ್ಯಂಗಳಿಂ ।
ಕಳಸ ಕನ್ನಡಿಗಳ ವಿಲಾಸದ ಪುರಂಧ್ರಿಯರ ಶೋಭನದ ಸುಸ್ವರದೊಳು
keḷadiyara nuḍige nasunaguta nija bhāvamaṃ ।
moḷegāṇisade pusige sarasavāḍute pottu ।
gaḷeva maṃtrije sahita tirugidaḷ banadiṃde manege caṃpakamālini ॥
poḷaloḷ vivāhōtsavaṃgaḷā samayadoḷ ।
suḷiduvaggada gīta nr̥tya vādyaṃgaḷiṃ ।
kaḷasa kannaḍigaḷa vilāsada puraṃdhriyara śōbhanada susvaradoḷu
ಪದುಳದಿಂದೈತಂದು ಬಾಲಿಕೆಯರಂ ಕಳುಹಿ ।
ಸದನಮಂ ಪೊಕ್ಕಳವನೀಶ್ವರಾತ್ಮಜೆ ಬಳಿಕ ।
ಮದುವೆಗಳ ಮಂಗಳೋತ್ಸವದ ಮಧುರ ಸ್ವರಂಗಳನಾಲಿಸುತೆ ಮನದೊಳು ॥
ಇದು ಶುಭ ನಿಮಿತ್ತಮಿಂದೆನಗೆ ವೈವಾಹದ ।
ಭ್ಯುದಯಮಾದಪುದು ಕಾಂತನೊಳಂಬೆಣಿಕೆಯಿಂದೆ ।
ಮದನ ಶರದಿಂದೆ ಪೀಡಿತೆಯಾದ ಮಂತ್ರಿಸುತೆ ಮನೆಗೆ ಬರುತಿರ್ದಳಂದು
paduḷadiṃdaitaṃdu bālikeyaraṃ kaḷuhi ।
sadanamaṃ pokkaḷavanīśvarātmaje baḷika ।
maduvegaḷa maṃgaḷōtsavada madhura svaraṃgaḷanālisute manadoḷu ॥
idu śubha nimittamiṃdenage vaivāhada ।
bhyudayamādapudu kāṃtanoḷaṃbeṇikeyiṃde ।
madana śaradiṃde pīḍiteyāda maṃtrisute manege barutirdaḷaṃdu
ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ ।
ವಿರಹ ತಾಪದೊಳೊಂದು ಗಳಿಗೆಯಂ ಪತ್ತುಸಾ ।
ಸಿರ ಯುಗಕೆ ಸಮಮಾಗಿ ಭಾವಿಪಳ್ ನಿಂದಲ್ಲಿ ನಿಲ್ಲಳಾರಂ ನೋಡಳು ॥
ಪರಿಚಯದಬಲೆಯರ ನಗಿಸಳಾಪ್ತಸಖಿ ।
ಯರ ಮಾತನಾಲಿಸಳ್ ಸಂಗರಕೆ ಮೈಗುಡಳ್ ।
ಕರೆವ ಪಂಜರದ ಗಿಳಿಯಂ ನುಡಿಸಳೂಡಿಸಳ್ ಸಾಕುಮಿಗಪಕ್ಷಿಗಳನು
puruhūta saṃbhūta kēḷ vanadoḷ viṣaye ।
viraha tāpadoḷoṃdu gaḷigeyaṃ pattusā ।
sira yugake samamāgi bhāvipaḷ niṃdalli nillaḷāraṃ nōḍaḷu ॥
paricayadabaleyara nagisaḷāptasakhi ।
yara mātanālisaḷ saṃgarake maiguḍaḷ ।
kareva paṃjarada giḷiyaṃ nuḍisaḷūḍisaḷ sākumigapakṣigaḷanu
ಉಣ್ಣಳೊರಗಳ್ ನುಡಿಯಳುಡಳಿಡಳ್ ತೊಡಳುರಿಗೆ ।
ತಣ್ಣಸವನರಸುವಳ್ ಸುಕುಮಾರ ತನು ತನಗೆ ।
ತಿಣ್ಣಮೆಂದಲಸುವಳ್ ಬಿಸುಯ್ವಳೇನಿದೆಂದಂಡಲೆದು ಕೇಳ್ವವರೊಳು ॥
ಕಣ್ಣಳವನೊದವಿಪಳ್ ಶೈತ್ಯವಸ್ತುಗಳಿಂದೆ ।
ಪಣ್ಣಿದುಪಚಾರಮಂ ಹೃದಯದೊಳ್ ನೀರ್ಪೊಯ್ದ ।
ಸುಣ್ಣ ಮರಳ್ವಂತಾದುದೆಂದು ಕಾತರಿಸುವಳಬಲೆ ಕಾಮತಾಪದಿಂದೆ
uṇṇaḷoragaḷ nuḍiyaḷuḍaḷiḍaḷ toḍaḷurige ।
taṇṇasavanarasuvaḷ sukumāra tanu tanage ।
tiṇṇameṃdalasuvaḷ bisuyvaḷēnideṃdaṃḍaledu kēḷvavaroḷu ॥
kaṇṇaḷavanodavipaḷ śaityavastugaḷiṃde ।
paṇṇidupacāramaṃ hr̥dayadoḷ nīrpoyda ।
suṇṇa maraḷvaṃtādudeṃdu kātarisuvaḷabale kāmatāpadiṃde
ಜಲಯಂತ್ರದೆಡೆಯೊಳ್ ತಳಿರ್ವಸೆಯ ತಾಣದೊಳ್ ।
ಮಲಯಜದ ಮಾಡದೊಳ್ ಶಶಿಕಾಂತ ವೇದಿಯೊಳ್।
ಸುಲಲಿತ ಲತಾಮಂಟಪದೊಳೆಸೆವ ತಂಗೊಳದ ತಡಿಯ ಪುಳಿನಸ್ಥಳದೊಳು ॥
ಎಳೆವೆಲರ ತುಂಬಿಗಳ ಪಲ್ಲವದ ಕುಸುಮ ಸಂ ।
ಕುಲದ ಹಂಸದ ಗಿಳಿಯ ಕೋಗಿಲೆಯ ಕರ್ಕಶಕೆ ।
ನಿಲಲರಿಯದುಪ್ಪರಿಗೆದುದಿನೆಲೆಯ ಚಂದ್ರಶಾಲೆಗೆ ಬಂದಳಂಬುಜಾಕ್ಷಿ
jalayaṃtradeḍeyoḷ taḷirvaseya tāṇadoḷ ।
malayajada māḍadoḷ śaśikāṃta vēdiyoḷ।
sulalita latāmaṃṭapadoḷeseva taṃgoḷada taḍiya puḷinasthaḷadoḷu ॥
eḷevelara tuṃbigaḷa pallavada kusuma saṃ ।
kulada haṃsada giḷiya kōgileya karkaśake ।
nilalariyadupparigedudineleya caṃdraśālege baṃdaḷaṃbujākṣi
ಅಲ್ಲಿ ನಿಜ ಸಖಿಯರಬಲೆಯ ಚಿತ್ತದಾಸರಂ ।
ಮೆಲ್ಲಮೆಲ್ಲನೆ ಸವಿಸಲೆಂದುಪಚರಿಸಲವರ ।
ಸಲ್ಲಲಿತ ಮುಖವಾಣಿ ಲೋಚನ ಭ್ರೂಕುಂತಳಾಧರಂಗಳನೀಕ್ಷಿಸಿ ॥
ತಲ್ಲಣಿಸಿ ತಿಂಗಳರಗಿಳಿ ಪೂಸರಲ್ ಕಬ್ಬು ।
ವಿಲ್ಲಾರಡಿಗಳೊಳ್ದಳಿರ್ಗಳೆಂದೆಣಿಸಿ ನು ।
ಣ್ಗಲ್ಲದೊಳ್‍ಕೈಯಿಟ್ಟು ಬೆರಗಾಗಿ ಚಿಂತಿಸುವ ತೆರದೊಳವಳಿರುತಿರ್ದಳು
alli nija sakhiyarabaleya cittadāsaraṃ ।
mellamellane savisaleṃdupacarisalavara ।
sallalita mukhavāṇi lōcana bhrūkuṃtaḷādharaṃgaḷanīkṣisi ॥
tallaṇisi tiṃgaḷaragiḷi pūsaral kabbu ।
villāraḍigaḷoḷdaḷirgaḷeṃdeṇisi nu ।
ṇgalladoḷkaiyiṭṭu beragāgi ciṃtisuva teradoḷavaḷirutirdaḷu
ಪಾವಗದುಳಿದರುಂಟೆ ಹರನ ಕೋಪದೊಳುರಿದು ।
ಜೀವಿಸಿದರುಂಟೆ ಕಾಳ್ಕಿಚ್ಚಿನೊಳ್ ಕೆಳೆಗೊಂಡು ।
ಬೇವುತಸುವಿಡಿದು ಬಾಳ್ದವರುಂಟೆ ಚಂದ್ರ ಮನ್ಮಥಪವನರಬಲೆಯರ್ಗೆ ॥
ಹಾವಳಿಯ ನೊದವಿಸುವೆವೆಂದು ಬದುಕಿದರಲ್ಲ ।
ದಾವ ಕರುಣಿಗಳವರ್ ವಿರಹಮೀಕೆಯ ಮನವ ।
ನಾವರಿಸಲೇನಹುದೊ ಶಿವಶಿವಾ ತಾಳಲರಿದೆಂದೊರ್ವ ಸಖಿ ನುಡಿದಳು
pāvagaduḷidaruṃṭe harana kōpadoḷuridu ।
jīvisidaruṃṭe kāḷkiccinoḷ keḷegoṃḍu ।
bēvutasuviḍidu bāḷdavaruṃṭe caṃdra manmathapavanarabaleyarge ॥
hāvaḷiya nodavisuveveṃdu badukidaralla ।
dāva karuṇigaḷavar virahamīkeya manava ।
nāvarisalēnahudo śivaśivā tāḷalarideṃdorva sakhi nuḍidaḷu
ಬೆಳವಿಗೆಗೆ ಸುರರೊಂದು ಕಳೆಯನೇ ಕುಳುಹಿದರೊ ।
ಮುಳಿದಂದು ಶಿವನೇಕೆ ಮತ್ತೆ ಕರುಣಿಸಿದನೋ ।
ಮೆಲುತ ಮೆಲುತೇಕೆ ಬಿಟ್ಟುವೊ ಫಣಿಗಳಂದು ಶಶಿ ಮದನ ಮಂದಾನಿಲರನು ॥
ಸಲೆ ಬೈದು ಕೋಗಿಲೆಯ ತುಂಬಿಗಳ ಗಿಳಿಯ ಕಳ ।
ಕಳಕೆ ವಾಯಸಮಂ ಸರೋಜಮಂ ತನ್ನ ಕರ ।
ತಳಮಂ ಜರೆದು ನಿಂದಿಸಿದಳೊರ್ವ ಸಖಿ ಬಾಲೆಯಂ ನೋಡಿ ಬಿಸುಸುಯ್ಯುತೆ
beḷavigege suraroṃdu kaḷeyanē kuḷuhidaro ।
muḷidaṃdu śivanēke matte karuṇisidanō ।
meluta melutēke biṭṭuvo phaṇigaḷaṃdu śaśi madana maṃdānilaranu ॥
sale baidu kōgileya tuṃbigaḷa giḷiya kaḷa ।
kaḷake vāyasamaṃ sarōjamaṃ tanna kara ।
taḷamaṃ jaredu niṃdisidaḷorva sakhi bāleyaṃ nōḍi bisusuyyute
ಇವಳ ಮನದೆಣಿಕೆ ಕೈಗೂಡಲಾವೆಲ್ಲರುಂ ।
ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದೆ ।
ನವ ಪಕ್ವಫಲ ಮೋದಕಾದಿ ನೈವೇದ್ಯದಿಂ ಧೂಪ ದೀಪಂಗಳಿಂದೆ ॥
ಶಿವನ ವಲ್ಲಭೆಯನರ್ಚಿಸಿ ವರ್ಷವರ್ಷಕು ।
ತ್ಸವದಿಂದೆ ನೋಂಪಿಯಂ ಮಾಳ್ಪಿವೆಂದಾ ಸಕಲ ।
ಭುವನ ಮಾತೆಯನುಮಾದೇವಿಯಂ ಗೌರಿಯಂ ಪ್ರಾರ್ಥಿಸಿದರಾ ಸಖಿಯರು
ivaḷa manadeṇike kaigūḍalāvellaruṃ ।
vividha kusumōtkara sugaṃdhākṣategaḷiṃde ।
nava pakvaphala mōdakādi naivēdyadiṃ dhūpa dīpaṃgaḷiṃde ॥
śivana vallabheyanarcisi varṣavarṣaku ।
tsavadiṃde nōṃpiyaṃ māḷpiveṃdā sakala ।
bhuvana māteyanumādēviyaṃ gauriyaṃ prārthisidarā sakhiyaru
ಪ್ರಾಸಾದದಗ್ರದೇಳನೆಯ ನೆಲೆಯೊಳ್ಚಂದ್ರ ।
ಹಾಸನೈತಹ ಮಾರ್ಗಮಂ ನೋಡುತುಪಚರಿಸು ।
ವಾ ಸಖೀಜನದ ನುಡಿಗಳನಾಲಿಸುತ ವಿಷಯೆ ಚಿತ್ತದೊಳ್ ತನ್ನ ಪಿತನ ॥
ಶಾಸನವನಿಂದೆ ಮದನಂ ಪಾಲಿಪಂತೆ ನೀಂ ।
ಸೂಸು ಕಾರುಣ್ಯ ವರ್ಷವನೆನ್ನ ಮೇಲೆಂದು ।
ಮಾಸುದತಿ ಭಕ್ತಿಯಿಂಬೇಡಿಕೊಳುತಿರ್ದಳಾನತೆಯಾಗಿ ಪಾರ್ವತಿಯನು
prāsādadagradēḷaneya neleyoḷcaṃdra ।
hāsanaitaha mārgamaṃ nōḍutupacarisu ।
vā sakhījanada nuḍigaḷanālisuta viṣaye cittadoḷ tanna pitana ॥
śāsanavaniṃde madanaṃ pālipaṃte nīṃ ।
sūsu kāruṇya varṣavanenna mēleṃdu ।
māsudati bhaktiyiṃbēḍikoḷutirdaḷānateyāgi pārvatiyanu
ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ ।
ಬುಜ ಮಿತ್ರನಪರಾಹ್ಣಕೈದಲ್ಕೆ ನಿದ್ರೆಯಂ ।
ತ್ಯಜಿಸಿ ಮೊಗದೊಳೆದು ಮುಕ್ಕಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ ॥
ನಿಜ ವಾಜಿಯಂ ಬಂದಡರ್ದನು ಚರರ್ವೆರಸಿ ।
ಋಜುವಾದ ಶಕುನಂಗಳಂ ಕೇಳುತೊಲಿದು ಪೌ ।
ರ ಜನಮಿವನಾರೆಂದು ನೋಡಲ್ಕೆ ನಗರಮಂ ಪೊಕ್ಕು ನಡೆತರುತಿರ್ದನು
vijaya kēḷitta banadoḷ caṃdrahāsanaṃ ।
buja mitranaparāhṇakaidalke nidreyaṃ ।
tyajisi mogadoḷedu mukkaḷisi kappuravīḷeyaṃgoṃḍu baḷika bigisi ॥
nija vājiyaṃ baṃdaḍardanu cararverasi ।
r̥juvāda śakunaṃgaḷaṃ kēḷutolidu pau ।
ra janamivanāreṃdu nōḍalke nagaramaṃ pokku naḍetarutirdanu
ಆ ನಗರದೊಳ್ ಕುಂತಳೇಶ್ವರನು ನಿರ್ಮಲ ।
ಜ್ಞಾನದಿಂ ಗಾಲವನ ಸೂಕ್ತಮಂಕೇಳುತ ಸ ।
ದಾನಂದ ಯೋಗಮಂ ಕೈಕೊಂಡು ದುಷ್ಟಬುದ್ಧಿಗೆ ವಿಚಾರವನೊಪ್ಪಿಸಿ ॥
ಧ್ಯಾನಪರನಾಗಿರ್ಪನದರಿಂದೆ ಪೊಳಲಂ ಪ್ರ ।
ಧಾನಿ ಪಾಲಿಪನವಂ ಪೊರಮುಟ್ಟಿರಲ್ಕೆ ತ ।
ತ್ಸೂನು ಮದನಂ ಧುರಂಧರತೆವೆತ್ತಾ ಸಮಯಕೋಲಗದೊಳಿರತಿರ್ದನು
ā nagaradoḷ kuṃtaḷēśvaranu nirmala ।
jñānadiṃ gālavana sūktamaṃkēḷuta sa ।
dānaṃda yōgamaṃ kaikoṃḍu duṣṭabuddhige vicāravanoppisi ॥
dhyānaparanāgirpanadariṃde poḷalaṃ pra ।
dhāni pālipanavaṃ poramuṭṭiralke ta ।
tsūnu madanaṃ dhuraṃdharatevettā samayakōlagadoḷiratirdanu
ಶ್ರೀ ಕಂಠನಂ ಕೆಣಕಿ ಮೈಗೆಟ್ಟ ಮದನನಂ ।
ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ ।
ಸಾಕಾರದಿಂದೆಸೆವ ಮದನನಿವನೆಂಬಂತೆ ರಂಜಿಸುವ ಮಂತ್ರಿಸೂನು ॥
ವ್ಯಾಕೀರ್ಣ ರತ್ನರೋಚಿಗಳ ಚಾವಡಿಯ ಚಾ ।
ಮೀಕರದ ಸಿಂಹಾಸನದೊಳಿರ್ದನಿಕ್ಕೆಲದ ।
ಕೋಕನದ ನೇತ್ರೆಯರ್ ಚಿಮ್ಮಿಸುವ ಚಾರು ಚಂಚಲ ಚಾಮರಂಗಳಿಂದೆ
śrī kaṃṭhanaṃ keṇaki maigeṭṭa madananaṃ ।
lōkadoḷ jarevaṃte śaṃkara priyanāgi ।
sākāradiṃdeseva madananivaneṃbaṃte raṃjisuva maṃtrisūnu ॥
vyākīrṇa ratnarōcigaḷa cāvaḍiya cā ।
mīkarada siṃhāsanadoḷirdanikkelada ।
kōkanada nētreyar cimmisuva cāru caṃcala cāmaraṃgaḷiṃde
ಉಚಿತದಿಂದೊಪ್ಪುವ ಮಹೀಸುರರ ಭೂಭುಜರ ।
ನಿಚಯದ ನಿಯೋಗಿಗಳ ಗಣಕರ ಪುರೋಹಿತರ ।
ವಚನ ಕೋವಿದರ ಕವಿ ಗಮಕಿಗಳ ವಂದಿ ಗಾಯಕ ನಟರ ನರ್ತಕಿಯರ ॥
ರುಚಿರದಿಂ ಕೃಷ್ಣ ಚಾರಿತ್ರಮಂ ಸೊಗಸಾಗಿ ।
ರಚಿಸುತಿಹ ಭಾವಕರ ಸಂಗೀತಗೋಷ್ಠಿಯಿಂ ।
ಸಚಿವ ಸುತನೋಲಗಂ ರಮಣೀಯಮಾಗಿರ್ದದಿಂದ್ರನಾಸ್ಥಾನದಂತೆ
ucitadiṃdoppuva mahīsurara bhūbhujara ।
nicayada niyōgigaḷa gaṇakara purōhitara ।
vacana kōvidara kavi gamakigaḷa vaṃdi gāyaka naṭara nartakiyara ॥
ruciradiṃ kr̥ṣṇa cāritramaṃ sogasāgi ।
racisutiha bhāvakara saṃgītagōṣṭhiyiṃ ।
saciva sutanōlagaṃ ramaṇīyamāgirdadiṃdranāsthānadaṃte
ಲೀಲೆ ಮಿಗೆ ಸಗರದೊಳ್ ನಡೆತಂದು ಮಂತ್ರಿಸುತ ।
ನಾಲಯದ ಮುಂದೆವಾಜಿಯನಿಳಿದು ತದ್ಧ್ವಾರ ।
ಪಾಲಕರ್ಗಿಂದುಹಾಸಂ ಪೇಳ್ದೊಡವರಂತರಾಂತರದೊಳೆಚ್ಚರಿಸಲು ॥
ಏಳನೆಯ ಬಾಗಿಲ ವಿವೇಕನೆಂಬವನಿದಂ ।
ಕೇಳಿ ತಾಂ ಪಿಡಿದ ಶ್ರದ್ಧಾಯಷ್ಟಿಸಹಿತ ಬಂ ।
ದೋಲಗದೊಳಿರ್ದ ಮದನಂಗೆ ಬಿನ್ನೈಸಲ್ ಪರಾಕಾದೊಡಿಂತೆಂದನು
līle mige sagaradoḷ naḍetaṃdu maṃtrisuta ।
nālayada muṃdevājiyaniḷidu taddhvāra ।
pālakargiṃduhāsaṃ pēḷdoḍavaraṃtarāṃtaradoḷeccarisalu ॥
ēḷaneya bāgila vivēkaneṃbavanidaṃ ।
kēḷi tāṃ piḍida śraddhāyaṣṭisahita baṃ ।
dōlagadoḷirda madanaṃge binnaisal parākādoḍiṃteṃdanu
ಅವಧರಿಸು ಜೀಯ ನಿಮ್ಮಯ್ಯಂಗೆ ಕ್ರೋಧನೆಂ ।
ಬವನಾಪ್ತನಾಗಿ ಹಿಂಸಾಯುಷ್ಟಿವಿಡಿದು ಸ ।
ಲ್ವವನಲಾ ಬಾಗಿಲ್ಗೆ ತನಗಾತನಂತೆ ನಿನ್ನೊಳ್ ಸಲುಗೆಯುಂಟೆ ಬರಿದೆ ॥
ತವ ಭೃತ್ಯನಾಗಿಹೆಂ ಸಾಕದಂತಿರಖಿಳ ।
ಭವನಕಧಿಪತಿಯಾದ ಮುರಹರನ ಭಕ್ತನ ।
ಲ್ಲವೆ ಚಂದ್ರಹಾಸನಾತನ ಬರವನರಿಪಲೇತಕೆ ಸುಮ್ಮನಿಹೆಯೆಂದನು
avadharisu jīya nimmayyaṃge krōdhaneṃ ।
bavanāptanāgi hiṃsāyuṣṭiviḍidu sa ।
lvavanalā bāgilge tanagātanaṃte ninnoḷ salugeyuṃṭe baride ॥
tava bhr̥tyanāgiheṃ sākadaṃtirakhiḷa ।
bhavanakadhipatiyāda muraharana bhaktana ।
llave caṃdrahāsanātana baravanaripalētake summaniheyeṃdanu
ನೀತಿ ಸಮ್ಮತದಿಂ ವಿವೇಕನಿಂತೆನೆ ಕೇಳ್ದು ।
ಶಾತಕುಂಭಾಲಂಕೃತಾಸನವನಿಳಿದು ಹ ।
ರ್ಷಾತಿಶಯದಿಂದೆ ಮದನಂ ಚಂದ್ರಹಾಸನನಿದರ್ವಂಧು ಕಂಡು ನಗುತೆ ।
ಪ್ರೀತಿಯಿಂದಪ್ಪಿ ಕೈವಿಡಿದೊಡನೆ ಸಭೆಗೆ ತಂ ।
ದಾತನಂ ಸತ್ಕರಿಸಿ ಚಂದನಾವತಿಯ ತ ।
ದ್ಭೂತಳದ ಮೇಧಾವಿನಿಯ ಕುಳಿಂದನ ಕುಶಲದೇಳ್ಗೆಯಂ ಬೆಸಗೊಂಡನು
nīti sammatadiṃ vivēkaniṃtene kēḷdu ।
śātakuṃbhālaṃkr̥tāsanavaniḷidu ha ।
rṣātiśayadiṃde madanaṃ caṃdrahāsananidarvaṃdhu kaṃḍu nagute ।
prītiyiṃdappi kaiviḍidoḍane sabhege taṃ ।
dātanaṃ satkarisi caṃdanāvatiya ta ।
dbhūtaḷada mēdhāviniya kuḷiṃdana kuśaladēḷgeyaṃ besagoṃḍanu
ವಿನಯದಿಂ ಮತ್ತೆ ನಸುನಗೆವೆರಸಿ ನಿನ್ನ ದ ।
ರ್ಶನಮಿಂದಪೂರ್ವಮಾದುದು ಬಂದ ಕಾರ್ಯಮಂ ।
ತನಗೊರೆವುದೆಂದು ಮದನಂ ಚಂದ್ರಹಾಸನಂ ಕೇಳ್ದೊಡಾತಂಗೆ ನಿನ್ನ ॥
ಜನಕನೆನ್ನಂ ನಿನ್ನ ಬಳಿಗತಿರಹಸ್ಯದಿಂ ।
ದನುಮತಿಸಿ ಕಳುಹಲಾನೈತಂದೆನೆಂದು ಕುರು ।
ಪಿನ ಮುದ್ರೆ ಸಹಿತ ನಿಜ ಕರೆದೊಳಿಹ ಪತ್ರಮಂ ಕೊಟ್ಟನಾತನ ಕೈಯ್ಯೊಳು
vinayadiṃ matte nasunageverasi ninna da ।
rśanamiṃdapūrvamādudu baṃda kāryamaṃ ।
tanagorevudeṃdu madanaṃ caṃdrahāsanaṃ kēḷdoḍātaṃge ninna ॥
janakanennaṃ ninna baḷigatirahasyadiṃ ।
danumatisi kaḷuhalānaitaṃdeneṃdu kuru ।
pina mudre sahita nija karedoḷiha patramaṃ koṭṭanātana kaiyyoḷu
ಇದ್ದವರ ನಾ ಸಭೆಯೊಳಿರಿಸಿ ಶಶಿಹಾಸನಂ ।
ಗದ್ದುಗೆಗೆ ನೆಲೆಗೊಳಿಸಿ ಮದನನಾಸ್ಥಾನದಿಂ ।
ದೆದ್ದಮಲನೆಂಬ ತನ್ನನುಜನಂ ಕೂಡಿಕೊಂಡೇ ಕಾಂತ ಭವನಕೈದಿ ॥
ಹೊದ್ದಿಸಿದ ಮುದ್ರೆಯಂ ತೆಗೆದು ಪತ್ರವನೋದಿ ।
ತಿದ್ದಿದಕ್ಕರವ ನರಿಯದೆ ನಿಜದನರೆಹಮೆಂ ।
ದದ್ದನತಿ ಹರ್ಷಾರ್ಣವದೊಳಾಗ ಶತಯಾಗನತನಯಕೇಳ್ ಕೌತುಕವನು
iddavara nā sabheyoḷirisi śaśihāsanaṃ ।
gaddugege nelegoḷisi madananāsthānadiṃ ।
deddamalaneṃba tannanujanaṃ kūḍikoṃḍē kāṃta bhavanakaidi ॥
hoddisida mudreyaṃ tegedu patravanōdi ।
tiddidakkarava nariyade nijadanarehameṃ ।
daddanati harṣārṇavadoḷāga śatayāganatanayakēḷ kautukavanu
ಲೇಸಾದುದಯ್ಯನಿಂದೆನಗೆ ನೇಮಿಸಿ ಕಳುಹಿ ।
ದೀ ಸುವೊಕ್ಕಣಿಗಳ್ ಮಹಾಹಿತಂ ತನಗೀತ ।
ನೀ ಸೀಮೆಗರಸಾದಪಂ ಸರ್ವಧಾಮಿತ್ರನಪ್ಪವಂ ನಿಶ್ಚಯಮಿದು ॥
ಮೋಸವೇ ಕುಲಾಚಾರಗತಿಯ ನಾರೈವೊಡೆ ವಿ ।
ಲಾಸದಿಂ ವಿಷಯೆ ಮೋಹಿಸುವಂತೆ ಕುಡುವೆನಿದ ।
ಕೋಸರಿಸಲೇಕೆ ತಂಗಿಗೆ ತಕ್ಕ ವರನೀತನೆಂದು ಮದನಂ ತಿಳಿದನು
lēsādudayyaniṃdenage nēmisi kaḷuhi ।
dī suvokkaṇigaḷ mahāhitaṃ tanagīta ।
nī sīmegarasādapaṃ sarvadhāmitranappavaṃ niścayamidu ॥
mōsavē kulācāragatiya nāraivoḍe vi ।
lāsadiṃ viṣaye mōhisuvaṃte kuḍuvenida ।
kōsarisalēke taṃgige takka varanītaneṃdu madanaṃ tiḷidanu
ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ ।
ಲೆನ್ನಮನವಿವನೊಳಕ್ಕರ್ವೆರಸುತಿದೆ ರೂಪ ।
ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು ॥
ಇನ್ನು ಸಂಶಯವಿಲ್ಲವೀಚಂದ್ರಹಾಸಂಗೆ ।
ಕನ್ನೆಯ್ದಿಲಂದದಕ್ಷಿಯ ತಂಗಿಯಂ ಕೊಟ್ಟು ।
ಮನ್ನಿಸುವೆನೆಂದು ನಿಶ್ಚೈಸಿ ಮದನಂ ಮತ್ತೆ ಬಂದನೋಲಗದ ಸಭೆಗೆ
munna taṃdeya nirūpada kāryamadara mē ।
lennamanavivanoḷakkarverasutide rūpa ।
nunnisuvoḍanujegītaṃge pāsaṭi vicārise kr̥ṣṇabhaktanivanu ॥
innu saṃśayavillavīcaṃdrahāsaṃge ।
kanneydilaṃdadakṣiya taṃgiyaṃ koṭṭu ।
mannisuveneṃdu niścaisi madanaṃ matte baṃdanōlagada sabhege
ಗಣಿತಜ್ಞರಂ ಕರೆಸಿ ನೋಡಿಸಿದನಾಗಳನು ।
ಗುಣಮಾದ ರಾಶಿಕೂಟವನಮಲ ಲಗ್ನಮಂ ।
ಗುಣಿಸಿ ವಿಸ್ತಿರಿಸಿದರ್ ಬಳಿಕ ಮದನಂ ಮಾಡಿಸಿದನೊಸಗೆಯಂ ಪೊಳಲೊಳು ॥
ಅಣೆದುವುಭ್ರವನೆಸೆವ ಗುಡಿ ತೋರಣಂಗಳಿ ।
ಟ್ಟಣಿಸಿದುವು ಬೇಕಾದ ಮಂಗಳ ಸುವಸ್ತುಗಳ್ ।
ಮಣಿಮಯದ ವೇದಿಯಂ ವಿರಚಿಸಿದರೊಳ್ಪಿನಿಂ ವೈವಾಹ ಮಂಟಪವನು
gaṇitajñaraṃ karesi nōḍisidanāgaḷanu ।
guṇamāda rāśikūṭavanamala lagnamaṃ ।
guṇisi vistirisidar baḷika madanaṃ māḍisidanosageyaṃ poḷaloḷu ॥
aṇeduvubhravaneseva guḍi tōraṇaṃgaḷi ।
ṭṭaṇisiduvu bēkāda maṃgaḷa suvastugaḷ ।
maṇimayada vēdiyaṃ viracisidaroḷpiniṃ vaivāha maṃṭapavanu
ಬಳಿಕ ಮದನನ ಹೇಳಿಕೆಯೊಳಂದು ವಿದಿತ ಮಂ ।
ಗಳ ವಿವಾಹೋಚಿತ ಕ್ರಿಯೆಗಳಂ ವಿರಚಿಸಿದ ।
ರಿಳೆಯ ದಿವಿಜರ್ ಪುರಂಧ್ರಿಯೆರೈದೆ ಮಜ್ಜನದ ಮಂಡನದ ಮಾಳ್ಕೆಗಳನು ॥
ಆಳವಡಿಸಿದರ್ ಪಣೆಯೊಳೆಸೆವ ಬಾಸಿಗದ ಮದ ।
ವಳಿಗನಾಗಿರ್ದಂ ಕುಳಿಂದಜಂ ದೇವಪುರ ।
ನಿಳಯ ಲಕ್ಷ್ಮೀಕಾಂತನೊಲವಿಂದೆ ವಿಷಮಮೃತಮಹುದು ಪೊಸತೇನೆನಲ್ಕೆ
baḷika madanana hēḷikeyoḷaṃdu vidita maṃ ।
gaḷa vivāhōcita kriyegaḷaṃ viracisida ।
riḷeya divijar puraṃdhriyeraide majjanada maṃḍanada māḷkegaḷanu ॥
āḷavaḍisidar paṇeyoḷeseva bāsigada mada ।
vaḷiganāgirdaṃ kuḷiṃdajaṃ dēvapura ।
niḷaya lakṣmīkāṃtanolaviṃde viṣamamr̥tamahudu posatēnenalke
← Sandhi 29 Sandhi 29 Sandhi 31 → Sandhi 31 Keys: ← → turn the page, J K step through the verses.
Illustration: Verse & Place (Project-owned).