Jaimini Bharata 30.21
ಒರ್ವರೊರ್ವರನಗಲ್ದಶ್ವಿನೀದೇವತೆಗ । ಳುರ್ವ ನಳಕೂಬರ ಜಯಂತಾದಿ ಸುರ ತನುಜ । ರುರ್ವರೆಗದೇಕೆ ಬಹರಿನಸಶಿಗಳಾದೊಡಿಹವುಷ್ಣಶೀತ ದ್ಯುತಿಗಳು ॥ ಗೀರ್ವಾಣ ಯಕ್ಷ ಕಿನ್ನರ ಸಿದ್ಧ ಗರುಡ ಗಂ । ಧರ್ವರೋಲಗಾವನೋ ಮನುಜನಲ್ಲೆಂದವನ । ಸರ್ವಾಂಗಮಂ ಬಿಡದೆ ನೋಡಿದಳ್ ವಿಷಯೆ ವಿಷಯಾಸಕ್ತೆಯಾಗಿ ಬಳಿಕ
orvarorvaranagaldaśvinīdēvatega । ḷurva naḷakūbara jayaṃtādi sura tanuja । rurvaregadēke baharinasaśigaḷādoḍihavuṣṇaśīta dyutigaḷu ॥ gīrvāṇa yakṣa kinnara siddha garuḍa gaṃ । dharvarōlagāvanō manujanalleṃdavana । sarvāṃgamaṃ biḍade nōḍidaḷ viṣaye viṣayāsakteyāgi baḷika