Jaimini Bharata 30.40
ಇವಳ ಮನದೆಣಿಕೆ ಕೈಗೂಡಲಾವೆಲ್ಲರುಂ । ವಿವಿಧ ಕುಸುಮೋತ್ಕರ ಸುಗಂಧಾಕ್ಷತೆಗಳಿಂದೆ । ನವ ಪಕ್ವಫಲ ಮೋದಕಾದಿ ನೈವೇದ್ಯದಿಂ ಧೂಪ ದೀಪಂಗಳಿಂದೆ ॥ ಶಿವನ ವಲ್ಲಭೆಯನರ್ಚಿಸಿ ವರ್ಷವರ್ಷಕು । ತ್ಸವದಿಂದೆ ನೋಂಪಿಯಂ ಮಾಳ್ಪಿವೆಂದಾ ಸಕಲ । ಭುವನ ಮಾತೆಯನುಮಾದೇವಿಯಂ ಗೌರಿಯಂ ಪ್ರಾರ್ಥಿಸಿದರಾ ಸಖಿಯರು
ivaḷa manadeṇike kaigūḍalāvellaruṃ । vividha kusumōtkara sugaṃdhākṣategaḷiṃde । nava pakvaphala mōdakādi naivēdyadiṃ dhūpa dīpaṃgaḷiṃde ॥ śivana vallabheyanarcisi varṣavarṣaku । tsavadiṃde nōṃpiyaṃ māḷpiveṃdā sakala । bhuvana māteyanumādēviyaṃ gauriyaṃ prārthisidarā sakhiyaru