Jaimini Bharata 7.38
ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ । ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ । ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ ನಿನ್ನ ॥ ವಿಗ್ರಹಕೆ ನಮಗಿಕ್ಷುಚಾಪವಾರಡಿವೆದೆ ಸ । ಮಗ್ರಕುಸುಮಾಸ್ತ್ರಂಗಳಿಲ್ಲ ನೋಡೆಮ್ಮದೊಂ ॥ ದುಗ್ರಸಾಯಕವನೆಂದಾರ್ದು ತೆಗೆದೆಚ್ಚನನುಸಾಲ್ವನಚ್ಯುತನ ಸುತನ
vyagravētake ninage nāviṃdriyaṃgaḷaṃ । nigrahisidavaralla virahavemagilla sura । tagrāhya mōhanada paṃcabāṇaprayōgaṃgaḷēkīga ninna ॥ vigrahake namagikṣucāpavāraḍivede sa । magrakusumāstraṃgaḷilla nōḍemmadoṃ ॥ dugrasāyakavaneṃdārdu tegedeccananusālvanacyutana sutana