ಸಂಧಿ ೭ · ಸಂಧಿ ೭
Sandhi 7
saṃdhi 7
॥
Lakshmisha continues the story of the horse sacrifice in sandhi 7.
67 verses·Kannada with transliteration
ಭೂರಮಣಕೇಳನಿಲತನಯನಂ ಕೂಡಿಕೊಂ । ಡಾರೋಗಿಸಿದಬಳಿಕ ನವಕುಸುಮಗಂಧ ಕ । ರ್ಪೂರ ತಾಂಬೂಲಮಂ ಕೊಟ್ಟು ಕೃತವರ್ಮನಂ ಕರೆಸಿ ಧರ್ಮಜನ ಮುಖಕೆ ॥
ವಾರಣನಗರಿಗೀಗ ನಮ್ಮೊಡನೆ ನಡೆತರಲಿ । ದ್ವಾರಕೆಯೊಳಿರ್ದ ಜನರೆಲ್ಲರುಂ ಪೊಯ್ಸು ಗೂ । ಡಾರಮಂ ಪೊರಗೆ ಸಾರಿಸು ಪುರದೊಳೆಂದು ಮಧುಸೂದನಂ ನೇಮಿಸಿದನು
bhūramaṇakēḷanilatanayanaṃ kūḍikoṃ । ḍārōgisidabaḷika navakusumagaṃdha ka । rpūra tāṃbūlamaṃ koṭṭu kr̥tavarmanaṃ karesi dharmajana mukhake ॥
vāraṇanagarigīga nammoḍane naḍetarali । dvārakeyoḷirda janarellaruṃ poysu gū । ḍāramaṃ porage sārisu puradoḷeṃdu madhusūdanaṃ nēmisidanu
ವಸುದೇವ ಹಲಧರರ್ ಪೊಳಲಿನಲ್ಲಿರ್ದು ಪಾ । ಲಿಸಲುಳಿದ ಪ್ರದ್ಯುಮ್ಯ ಗದ ಸಾಂಬನನಿರುದ್ಧ । ನಿಶಠ ಶಠನಕ್ರೂರ ಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆ ಬರಲಿ ॥
ಒಸಗೆ ಮಿಗೆ ದೇವಕಿಯೊಡನೆ ತೆರಳಲರಸಿಯರ್ । ಪೊಸತೆನಿಪ ವಸ್ತುವಂ ತೆಗೆಸು ಭಂಡಾರದಿಂ । ದೆಸೆವ ಪುರಜನ ಪರಿಜನ ಸ್ತ್ರೀಯರೈದಲೆಂದಸುರಾರಿ ನೇಮಿಸಿದನು
vasudēva haladharar poḷalinallirdu pā । lisaluḷida pradyumya gada sāṃbananiruddha । niśaṭha śaṭhanakrūra sātyaki pramukha yādavaremma kūḍe barali ॥
osage mige dēvakiyoḍane teraḷalarasiyar । posatenipa vastuvaṃ tegesu bhaṃḍāradiṃ । deseva purajana parijana strīyaraidaleṃdasurāri nēmisidanu
ಬಳಿಕ ಕೃತಮರ್ಮಕನ ನೇಮದಿಂ ನಗರದೊಳ್ । ಮೊಳಗಿದುವು ನಿಸ್ಸಾಳಕೋಟಿಗಳ್ ಪೊರಮಟ್ಟು । ದುಳಿಯದೆ ಸಮಸ್ತ ಜನಮೈದಿದುವು ದೇವಕಿ ಯಶೋದೆಯರ ದಂಡಿಗೆಗಳು ॥
ಕೆಳದಿಯರ್ವೆರಸಿ ರುಕ್ಮಿಣಿ ಸತ್ಯಭಾಮಾದಿ । ಲಲನೆಯರ ಪಲ್ಲಕ್ಕಿಗಳ ಸಾಲ್ಗಳಂದು ಕೆಲ । ಬಲದ ಸುಯ್ದಾನದಿಂ ತೆರಳಿದುವು ಕೋಶದ ಸುವಸ್ತುಗಳನೆತ್ತಿಸಿದರು
baḷika kr̥tamarmakana nēmadiṃ nagaradoḷ । moḷagiduvu nissāḷakōṭigaḷ poramaṭṭu । duḷiyade samasta janamaididuvu dēvaki yaśōdeyara daṃḍigegaḷu ॥
keḷadiyarverasi rukmiṇi satyabhāmādi । lalaneyara pallakkigaḷa sālgaḷaṃdu kela । balada suydānadiṃ teraḷiduvu kōśada suvastugaḷanettisidaru
ಸುತಸೋದರ ಜ್ಞಾತಿ ಮಿತ್ರ ಬಾಂಧವ ಪುರೋ । ಹಿತರೊಡನೆ ಪೊರಮಟ್ಟನಸುರಾಂತಕಂ ಸಮಾ । ವೃತವಟುಗಳಿಂದೆ ಸನ್ನಿಹಿತಶಾಸ್ತ್ರಂಗಳಿಂದ ದ್ವಿಜರಾಯುಧಂಗಳಿಂದೆ ॥
ಚತುರಂಗ ಬಲದಿಂದೆ ಭೂಭುಜರ್ ದ್ರವ್ಯದಿಂ । ದತುಳ ಸಂಭಾರದಿಂ ವೈಶ್ಯರೈದಿತು ಶೂದ್ರ । ವಿತತಿ ನಾನಾಜಾತಿಗಳ ನೆರವಿಯಿಂ ತಮ್ಮ ತಮ್ಮ ವಿನಿಯೋಗದಿಂದೆ
sutasōdara jñāti mitra bāṃdhava purō । hitaroḍane poramaṭṭanasurāṃtakaṃ samā । vr̥tavaṭugaḷiṃde sannihitaśāstraṃgaḷiṃda dvijarāyudhaṃgaḷiṃde ॥
caturaṃga baladiṃde bhūbhujar dravyadiṃ । datuḷa saṃbhāradiṃ vaiśyaraiditu śūdra । vitati nānājātigaḷa neraviyiṃ tamma tamma viniyōgadiṃde
ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ । ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರ । ಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆಯ್ದಿತೊಡನೆ ॥
ದಟ್ಟಿಸಿದುವಾನೆ ಕುದುರೆಯ ರಥದ ಸೇನೆ ಪೊರ । ಮಟ್ಟುದಂದಣದ ಪಲ್ಲಕ್ಕಿಗಳ ರಾಜಿ ಸಾ । ಲಿಟ್ಟು ನಡೆದುವು ಛತ್ರಚಾಮರ ಪತಾಕೆಗಳ್ ತೆರಳಿತು ಜನಂ ಮುದದೊಳು
oṭṭegaḷa vēsarada poreyāḷa kaṃbigaḷa । koṭṭigeya kollārabaṃḍigaḷa mēle sara । kiṭṭaṇisi nūkidudu gōmahiṣikulada kīlāra biḍadeyditoḍane ॥
daṭṭisiduvāne kudureya rathada sēne pora । maṭṭudaṃdaṇada pallakkigaḷa rāji sā । liṭṭu naḍeduvu chatracāmara patākegaḷ teraḷitu janaṃ mudadoḷu
ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ । ನಟ ವಿದೂಷಕ ವಂದಿ ಗಾಯಕರ ತಂಡದಿಂ । ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ ॥
ನಟನೆಗಳ ನಡೆಯ ಭಂಗಿಯ ಬರಿಯ ಬೇಟದತಿ । ಕುಟಿಳಾಂಗದೊಲವುಗಳ ವಾರನಾರೀಜನಂ । ಕಟಕದೊಳ್ ಕಾಮುಕರ ನಡೆಗೆಡಿಸುತೊಗ್ಗಿನಿಂ ಪೊರಮಟ್ಟು ಬರುತಿರ್ದುದು
viṭara mēḷaṃgaḷiṃ cēṭiyara gaḍaṇadiṃ । naṭa vidūṣaka vaṃdi gāyakara taṃḍadiṃ । kaṭakidhvani vyaṃgya sarasōktigaḷa beḍagu bayalanage nōṭaṃgaḷa ॥
naṭanegaḷa naḍeya bhaṃgiya bariya bēṭadati । kuṭiḷāṃgadolavugaḷa vāranārījanaṃ । kaṭakadoḷ kāmukara naḍegeḍisutogginiṃ poramaṭṭu barutirdudu
ನಾಗಪತಿಗಸದಳಂ ಕಮಠಂಗರಿದು ದಿಶಾ । ನಾಗತತಿಗಳವಲ್ಲ ಧರಿಸಲರಿದೆಂಬಂತೆ । ನಾ ಗಣಿಸಲರಿಯೆನಿದು ಪೊಸತೆನಲ್ ಪಟಹ ನಿಸಾಳ ಕಹಳಾರವದೊಳು ॥
ಸಾಗರದ ಮರ್ಧಯದಿಂದೆದ್ದುದೋ ಮತ್ತೊಂದು । ಸಾಗರಂ ಪೇಳೆನಲ್ಕಖಿಳ ಯಾದವಕಟಕ । ಸಾಗರಂ ದ್ವಾರಕಾನಗರಮಂ ಪೊರಮಟ್ಟು ನಡೆಗೊಂಡುದೇವೇಳ್ವೆನು
nāgapatigasadaḷaṃ kamaṭhaṃgaridu diśā । nāgatatigaḷavalla dharisalarideṃbaṃte । nā gaṇisalariyenidu posatenal paṭaha nisāḷa kahaḷāravadoḷu ॥
sāgarada mardhayadiṃdeddudō mattoṃdu । sāgaraṃ pēḷenalkakhiḷa yādavakaṭaka । sāgaraṃ dvārakānagaramaṃ poramaṭṭu naḍegoṃḍudēvēḷvenu
ಕಳಿಪುತೈತಂದ ವಸುದೇವ ಬಲಭದ್ರರಂ । ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ । ನಿಳಯರಕ್ಷಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ ಹಯಾರೂಢನಾಗಿ ॥
ಉಳಿದ ಯಾದವರೆಲ್ಲರಂ ಕೂಡಿಕೊಂಡು ಮುಂ । ದಳೆದು ಮಧುಸೂದನಂ ಮಧ್ಯ ಮಾರ್ಗದೊಳೊಂದು । ಕೊಳನಿರಲ್ಕಲ್ಲಿ ಬೀಡಂಬಿಡಿಸಿ ನಸುನಗುತೆ ರುಕ್ಮಿಣಿಯೊಳಿಂತೆಂದನು
kaḷiputaitaṃda vasudēva balabhadraraṃ । baḷika vaṃdisi parakegoṃḍu saṃtaisi nija । niḷayarakṣage nilisi bhīmanaṃ bīḷkoḷisi sita hayārūḍhanāgi ॥
uḷida yādavarellaraṃ kūḍikoṃḍu muṃ । daḷedu madhusūdanaṃ madhya mārgadoḷoṃdu । koḷaniralkalli bīḍaṃbiḍisi nasunagute rukmiṇiyoḷiṃteṃdanu
ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ । ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ । ಭ್ರಾಜಿತಮಧುಪಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದೆಂತೋ ॥
ಸ್ತ್ರೀಜನಕೆ ಸಹಜಮಿದು ಮೇಲೆ ಕರ್ದಮಜಾತೆ । ಮಾಜುವಳೆದೆಯೊಳಿರ್ದ ಕೃಷ್ಣತೆಯನಿದು ಜಗಕೆ । ಸೋಜಿಗವೆ ಚಂಚಲೆಯಲಾ ಪತಿಯನೆಣೀಸುವಳೆ ಪೇಳೆಂದೊಡಿಂತೆಂದಳು
rājamukhi nōḍī sarōvarada padminige । rājahaṃsakrīḍe punnāgakēḷi vi । bhrājitamadhupagōṣṭhi saṃdapudu ravige tānarasiyādapaḷadeṃtō ॥
strījanake sahajamidu mēle kardamajāte । mājuvaḷedeyoḷirda kr̥ṣṇateyanidu jagake । sōjigave caṃcaleyalā patiyaneṇīsuvaḷe pēḷeṃdoḍiṃteṃdaḷu
ದೇವ ನೀ ಪದ್ಮಿನಿಗೆ ಪಳಿವನಾರೋಪಿಸುವು । ದಾವ ಸಮ್ಮತಿ ರಾಜಹಂಸ ಪುನ್ನಾಗ ಮಧು । ಪಾವಳಿಯನೋವಲಾಗದೆ ಮಾತೆ ಮಕ್ಕಳೊಡಗೂಡಿರ್ದೊಡೇಂ ಧರೆಯೊಳು ॥
ಜೀವನಂ ನಿಂದೊಡಾದುದದು ಪಂಕಮಿಲ್ಲಿ ತಾ । ನಾವಿರ್ಭವಿಸಿದೊಡೇಂ ಕೃಷ್ಣಹೃದಯಕೆ ದೋಷ । ಮಾವುದಾಣ್ಮಗೆ ನಡುನಡುಗಿದೊಡೆ ಚಂಚಲೆಯೆ ನಾವರಿಯೆವಿದನೆಂದಳು
dēva nī padminige paḷivanārōpisuvu । dāva sammati rājahaṃsa punnāga madhu । pāvaḷiyanōvalāgade māte makkaḷoḍagūḍirdoḍēṃ dhareyoḷu ॥
jīvanaṃ niṃdoḍādudadu paṃkamilli tā । nāvirbhavisidoḍēṃ kr̥ṣṇahr̥dayake dōṣa । māvudāṇmage naḍunaḍugidoḍe caṃcaleye nāvariyevidaneṃdaḷu
ಪುರಷನೊರ್ವಂಗೆ ನಾರಿಯರುಂಟು ಪಲಬರೀ । ಧರೆಯೊಳಂಗನೆಗೆ ಪತಿಯೊರ್ವನೇ ಗತಿಯೆಂಬ । ಪರಿವಿಡಿಯ ನರುಹಿಸುವೊಡಾವಿರ್ವರಲ್ಲದೊರ್ವರುಮಿಲ್ಲಮಿನ್ನು ಬರಿದೆ ॥
ಸರಸಿಯೊಳಗಣ ಪದ್ಮಿನಿಯನೆ ದೂಷಿಸಬೇಡ । ಪರಮಪಾವನೆಯೆಂದು ಶಿವನುತ್ತಮಾಂಗದೊಳ್ । ದುಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಳೆಂದು ರುಕ್ಮಿಣಿ ನುಡಿದಳು
puraṣanorvaṃge nāriyaruṃṭu palabarī । dhareyoḷaṃganege patiyorvanē gatiyeṃba । pariviḍiya naruhisuvoḍāvirvaralladorvarumillaminnu baride ॥
sarasiyoḷagaṇa padminiyane dūṣisabēḍa । paramapāvaneyeṃdu śivanuttamāṃgadoḷ । dusidanenal pativrateyalladihaḷe pēḷeṃdu rukmiṇi nuḍidaḷu
ನರಕಾಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ । ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ । ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು ॥
ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರ । ಸರದ ಸುಯ್ದಾನದಿಂದಿರ್ದನಂದು ಪರಿವಾ । ಸರದ ಸೂರ್ಯೋದಯದೊಳಲ್ಲಿಂದೆ ಯಾದವರ ದಂಡು ನಡೆದುದು ಪಥದೊಳು
narakāṃta kēḷ baḷika rukmiṇiya mātiṃge । narakāṃtakaṃ mecci nasunagute niṃdu vā । narakāṃtakētanāgrajanoḷ sarasavāḍutolaviṃde pāḷeyavanu ॥
sarada suttaṇa tīradoḷ biḍisi subhaṭapra । sarada suydānadiṃdirdanaṃdu parivā । sarada sūryōdayadoḷalliṃde yādavara daṃḍu naḍedudu pathadoḷu
ಆ ಮಾಧವಂ ಪಯಣಗತಿಯಿಂದೆ ಗಜಪುರದ । ಸೀಮೆಗೈತಂದು ಗಂಗಾನದಿಯ ತೀರದೊಳ್ । ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ ॥
ಭೂಮೀಶ ದರ್ಶನೋತ್ಸವಕೆ ಬಿಜಯಂಗೈದ । ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ । ತಾಮರಸನೇತ್ರನಂ ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ
ā mādhavaṃ payaṇagatiyiṃde gajapurada । sīmegaitaṃdu gaṃgānadiya tīradoḷ । bhīmanaṃ suydānakirisi yādavakaṭakasāgaravanalli biḍisi ॥
bhūmīśa darśanōtsavake bijayaṃgaida । nā madhyamārgadoḷ kaṃḍudu mahājanaṃ । tāmarasanētranaṃ tamatamage nutisidar nigamāgamōktiyiṃde
ಶ್ರುತಿ ಧರ್ಮಶಾಸ್ತ್ರಾಗಮ ಸ್ಮೃತಿ ವಿಚಾರದಿಂ । ಗತಿಗೆಟ್ಟ ಬ್ರಹ್ಮಹತ್ಯಾದಿಪಾತಕಕೆ ನಿ । ಷ್ಕೃತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೊಳ್ ಮಾಡಿದ ॥
ವ್ರತ ದಾನ ಜಪ ತಪಸ್ಸ್ಯಾಧ್ಯಾಯ ಪೂಜೆ ಸ । ತ್ಕ್ರತು ಸಮಾಧಿಗಳೆಮಗೆ ನಿನ್ನ ನೀಕ್ಷಿಸಲನು । ಷ್ಠಿತಮಾದುವೆಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ದರಾ ಪಾರ್ವರು
śruti dharmaśāstrāgama smr̥ti vicāradiṃ । gatigeṭṭa brahmahatyādipātakake ni । ṣkr̥ti tavasmaraṇamātradoḷappudeṃdoḍāśramanālkaroḷ māḍida ॥
vrata dāna japa tapassyādhyāya pūje sa । tkratu samādhigaḷemage ninna nīkṣisalanu । ṣṭhitamāduveṃbudēṃ nutiye ninageṃdu hariyaṃ pogaḷdarā pārvaru
ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ । ಶ್ರೇಣಿ ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ । ಪಾಣಿಗಳನಾ ಪಥದೊಳೊರ್ವ ನರ್ತಕಿ ಬಂದು ನಾನಾಪ್ರಕಾರದಿಂದೆ ॥
ವೇಣು ವೀಣಾದಿ ಸಂಗೀತ ವಾದ್ಯಶ್ರುತಿಯ । ಕೇಣಿಗೊಂಡುರುಪು ತಿರುಸಭಿನವಕಳಾ ಸಪ್ರ ಮಾಣದ ಸುವೃತ್ತದಿಂ ಮೆಚ್ಚಿಸಿದಳಚ್ಯುತನಚ್ಚರಿಯರಚ್ಚರಿಯೆನೆ
kāṇikeyanitteragi kaṃḍudu sakalajana । śrēṇi tamatamage mugidettidar nosaleḍege । pāṇigaḷanā pathadoḷorva nartaki baṃdu nānāprakāradiṃde ॥
vēṇu vīṇādi saṃgīta vādyaśrutiya । kēṇigoṃḍurupu tirusabhinavakaḷā sapra māṇada suvr̥ttadiṃ meccisidaḷacyutanaccariyaraccariyene
ನಾಗನಗರಿಯನಗಧರಂ ಪೊಕ್ಕು ಬರುತಿರ್ದ । ನಾಗ ನಗರಿಪು ಮುಖ್ಯರೈದೆ ಸಾಸಿರಪಡೆಯ । ನಾಗನ ಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ ॥
ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿಂ । ಬಾಗಿ ಲಂಬಿಸುವಲರ್ಮುಡಿಗಳ ಶಿರಂಗಳಿಂ । ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದೆ ರಾಜಮಾರ್ಗಾಂತರದೊಳು
nāganagariyanagadharaṃ pokku barutirda । nāga nagaripu mukhyaraide sāsirapaḍeya । nāgana garīyāṃgatalpadavanivaneṃdu gaganadoḷ kaivārise ॥
bāgilaṃ sārdu tamatamage kāminiyariṃ । bāgi laṃbisuvalarmuḍigaḷa śiraṃgaḷiṃ । bāgi lakṣmīpatige vaṃdisidarolaviṃde rājamārgāṃtaradoḷu
ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ । ರಾಜವದನೆಯರಗರು ಚಂದನ ಸುಧೂಪ ನೀ । ರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ ॥
ರಾಜಿಗಳನಳವಡಿಸೆ ಮಣಿತೋರಣ ಪ್ರಭೆ ವಿ । ರಾಜಿಸುವ ಧರ್ಮಸುತನರಮನೆಯ ಬಾಗಿಲ್ಗೆ । ರಾಜೀವಲೋಚನಂ ಬರೆ ಕೇಳ್ದು ಭೂವರನಿದಿರ್ಗೊಂಡನುತ್ಸವದೊಳು
rājamārgada kelabalada gōpuradoḷirda । rājavadaneyaragaru caṃdana sudhūpa nī । rājana phalāḷi tāṃbūla bahuvidha kusuma lāja dūrvākṣategaḷa ॥
rājigaḷanaḷavaḍise maṇitōraṇa prabhe vi । rājisuva dharmasutanaramaneya bāgilge । rājīvalōcanaṃ bare kēḷdu bhūvaranidirgoṃḍanutsavadoḷu
ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ । ನಿರ್ಮಿತವರೂಥದಿಂದಿಳಿದು ನೃಪವರನಡಿಗೆ । ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗರಸಂ ನಮಿಸಲು ॥
ಪೆರ್ಮೆಯಿಂ ತೆಗೆದು ಬಿಗಿಯಪ್ಪಲವನೀಶ್ವರಂ । ನಿರ್ಮಾಯನಂ ಮಗುಳೆ ತಕ್ಕೈಸಲಾಗಳಮ । ರರ್ಮಹೀಪಾಲಕನ ಪೂರ್ವಕೃತ ಪುಣ್ಯಮಂ ಬಣ್ಣಿಸಿದರಂಬರದೊಳು
dharmasutanaṃ kaṃḍu nagute muraripu hēma । nirmitavarūthadiṃdiḷidu nr̥pavaranaḍige । nirmalakirīṭamaṃ cācutire tolagi hariyaṃghrigarasaṃ namisalu ॥
permeyiṃ tegedu bigiyappalavanīśvaraṃ । nirmāyanaṃ maguḷe takkaisalāgaḷama । rarmahīpālakana pūrvakr̥ta puṇyamaṃ baṇṇisidaraṃbaradoḷu
ತದನಂತರದೊಳಾ ಮುರಾಂತಕಂ ಧೃತರಾಷ್ಟ್ರ । ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ । ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು ॥
ಪದಕಮಲಕೆರಗಿದೊಡೆ ತೆಗೆದು ತಕ್ಕೈಸಿ ದ್ರೌ । ಪದಿ ಸುಭದ್ರೆಯರನೊಲವಿಂದೆ ಕಾಣಿಸಿಕೊಂಡು । ಪದುಳಮಂ ಕೇಳ್ದು ಸುಖಗೋಷ್ಠಿಯಿಂ ಕುಳ್ಳಿರ್ದ ಬಳಿಕ ನೃಪನಿಂತೆಂದನು
tadanaṃtaradoḷā murāṃtakaṃ dhr̥tarāṣṭra । vidura kr̥pa gāṃdhāri kuṃtiyargabhinamisi । mudadiṃde nara nakula sahadēva vr̥ṣakētu yauvanāśvādigaḷanu ॥
padakamalakeragidoḍe tegedu takkaisi drau । padi subhadreyaranolaviṃde kāṇisikoṃḍu । paduḷamaṃ kēḷdu sukhagōṣṭhiyiṃ kuḷḷirda baḷika nr̥paniṃteṃdanu
ದೇವ ದೇವಕಿದೇವಿ ಮೊದಲಾದವರ್ಗೆ ವಸು । ದೇವ ಹಲಧರ ಮನ್ಮತಾದಿಗಳ್ಗಖಿಳರಾ । ಣೀವಾಸಕೈದೆ ಪದುಳಮೆ ಭೀಮಸೇನನೇಗೈದನಾರುಂ ಬಾರದೆ ॥
ನೀವೆ ಚಿತ್ತೈಸಿದಿರಿದೇನೆನೆ ಸಮಸ್ತ ಪ್ರ । ಜಾವಿಭವದಿಂದೆ ಮಾರುತಿ ಸಹಿತ ಬಂದು ಗಂ । ಗಾವರನದೀತೀರದೊಳ್ ಬಿಟ್ಟುದೆಮ್ಮಕಟಕಂ ನೋಳ್ಪೊಡೇಳೆಂದನು
dēva dēvakidēvi modalādavarge vasu । dēva haladhara manmatādigaḷgakhiḷarā । ṇīvāsakaide paduḷame bhīmasēnanēgaidanāruṃ bārade ॥
nīve cittaisidiridēnene samasta pra । jāvibhavadiṃde māruti sahita baṃdu gaṃ । gāvaranadītīradoḷ biṭṭudemmakaṭakaṃ nōḷpoḍēḷeṃdanu
ಎಂದು ಹರಿ ನುಡಿಯಲರ್ಜುನನ ಮೊಗನೋಡಿ ನಾ । ವಿಂದು ಧನ್ಯರ್ ಭಕ್ತರೆಡೆಗೀ ದಯಾರ್ಣವಂ । ಬಂದುದಚ್ಚರಿಯಲಾ ಬಾಂಧವರ ದರ್ಶನಂ ನಮಗೆ ಕೌತುಕಮಪ್ಪುದು ॥
ಮಂದಿಯಂ ಕರೆಸು ನಡೆ ನಗರಿ ಗುಡಿತೋರಣಗ । ಳಿಂದೆ ಮೆರೆಯಲಿ ಬರಲಿ ಸಿಂಗರದ ಬಾಳಕಿಯ । ರಂದಣಗಳಂ ಪಿಡಿಯಲರಸಿಯರ್ ಪೊರಮಡಲಿಜನಮೆಂದುನೃಪನೆದ್ದನು
eṃdu hari nuḍiyalarjunana moganōḍi nā । viṃdu dhanyar bhaktareḍegī dayārṇavaṃ । baṃdudaccariyalā bāṃdhavara darśanaṃ namage kautukamappudu ॥
maṃdiyaṃ karesu naḍe nagari guḍitōraṇaga । ḷiṃde mereyali barali siṃgarada bāḷakiya । raṃdaṇagaḷaṃ piḍiyalarasiyar poramaḍalijanameṃdunr̥paneddanu
ಬಳಿಕ ನೃಪನಾಜ್ಞೆಯಿಂದಾ ಹಸ್ತಿನಾವತಿಯ । ಪೊಳಲನುರೆ ಸಿಂಗರಿಸೆ ಮೊಳಗಿದುದು ಕೂಡೆ ಮಂ । ಗಳವಾದ್ಯಸಂಕುಲಂ ನೆರೆದುದು ಸಕಲಪೌರಜನಮಲಂಕಾರದಿಂದೆ ॥
ಪೊಳೆವ ಮಣಿಭೂಷಣದ ಪೆಣ್ಗಳಿಟ್ಟಣಿಸಿದರ್ । ತಳತಂತ್ರಮೈದೆ ಸಂದಣಿಸಿದುದು ಪಾಠಕರ । ಕಳಕಳದ ನೃತ್ತಗೀತಂಗಳ ವಿಲಾಸದಿಂದಿದಿರ್ಗೊಳಲ್ ಪೊರಮಟ್ಟರು
baḷika nr̥panājñeyiṃdā hastināvatiya । poḷalanure siṃgarise moḷagidudu kūḍe maṃ । gaḷavādyasaṃkulaṃ neredudu sakalapaurajanamalaṃkāradiṃde ॥
poḷeva maṇibhūṣaṇada peṇgaḷiṭṭaṇisidar । taḷataṃtramaide saṃdaṇisidudu pāṭhakara । kaḷakaḷada nr̥ttagītaṃgaḷa vilāsadiṃdidirgoḷal poramaṭṭaru
ಉತ್ಸವದೊಳಧ್ವರಹಯಂ ಮುಂದೆ ನಡೆಯೆ ಭೀ । ಭತ್ಸು ಮೊದಲಾದನುಜರೆಡದೊಳಡಿಯಿಡೆ ಭಕ್ತ । ವತ್ಸಲಂ ಬಲದ ಬಾಗದಿ ಬರಲ್ ಪಿಂತೆ ಮುನಿನಿಕರಮೈತರೆ ಮುದದೊಳು ॥
ಸತ್ಸಿಕತಮಯ ವಿರಾಜಿತ ವಿಮಲ ನಿರ್ಜರ ಸ । ರಿತ್ಸಮೀಪದೊಳೆಸವ ಯಾದವರ ಪಾಳೆಯವ । ನುತ್ಸುಕದೊಳವನೀಶ್ವರಂ ಸಾರ್ದನಂಬುಧಿಯನಂಭೋಧಿ ಬೆರಸಿದಂತೆ
utsavadoḷadhvarahayaṃ muṃde naḍeye bhī । bhatsu modalādanujareḍadoḷaḍiyiḍe bhakta । vatsalaṃ balada bāgadi baral piṃte muninikaramaitare mudadoḷu ॥
satsikatamaya virājita vimala nirjara sa । ritsamīpadoḷesava yādavara pāḷeyava । nutsukadoḷavanīśvaraṃ sārdanaṃbudhiyanaṃbhōdhi berasidaṃte
ದೇವಕಿ ಯಶೋದೆ ರೋಹಿಣಿಯರ್ಗೆ ಪಾಂಡವರ್ । ಭೂವರಾರ್ಜುನ ಕುಂತಿಯರ್ಗಖಿಳಯಾದವರ್ । ಭಾವಿಸಿದರುಳಿದವರ್ಗಾಲಿಂಗನೆಗಳಾದವನ್ಯೋನ್ಯಮವರವರ್ಗೆ ॥
ಆ ವಾಯುಜಂ ಕಂಡನರಸನಂ ರುಕ್ಮಿಣೀ । ದೇವಿ ಮೊದಲಾದರಂ ದ್ರೌಪದಿಸುಭದ್ರೆಯರ್ । ತಾವಪ್ಪದರ್ ಪ್ರಭಾವತಿ ಹರಿಯ ರಾಣಿಯರ್ಗೆರಗಿ ಕಾಣಿಕೆಗೊಟ್ಟಳು
dēvaki yaśōde rōhiṇiyarge pāṃḍavar । bhūvarārjuna kuṃtiyargakhiḷayādavar । bhāvisidaruḷidavargāliṃganegaḷādavanyōnyamavaravarge ॥
ā vāyujaṃ kaṃḍanarasanaṃ rukmiṇī । dēvi modalādaraṃ draupadisubhadreyar । tāvappadar prabhāvati hariya rāṇiyargeragi kāṇikegoṭṭaḷu
ಮೂಡುವೆಳನಗೆಗೂಡಿ ದ್ರುಪದನಂದನೆಯ ಮೊಗ । ನೋಡಿ ನೀನೆ ಚದುರೆ ಲೋಕದೊಳ್ ಕೃಷ್ಣ ನಂ । ಷೋಡಶ ಸಹಸ್ರ ನಾರಿಯರೈದಲರಿಯರಾತನನೊಲಿಸಿಕೊಂಡೆ ನಿನ್ನ ॥
ಗಾಡಿಗಿದು ಪೊಸತೆ ಗಂಡರನೈವರಂ ಮರುಳು । ಮಾಡುವ ಮಹಾಪತಿವ್ರತೆ ನಿನ್ನೊಳಾವು ಮಾ । ತಾಡಲಂಜುವೆವೆಂದು ಸತ್ಯಭಾಮಾದೇವಿ ನುಡಿಯಲವಳಿಂತೆಂದಳು
mūḍuveḷanagegūḍi drupadanaṃdaneya moga । nōḍi nīne cadure lōkadoḷ kr̥ṣṇa naṃ । ṣōḍaśa sahasra nāriyaraidalariyarātananolisikoṃḍe ninna ॥
gāḍigidu posate gaṃḍaranaivaraṃ maruḷu । māḍuva mahāpativrate ninnoḷāvu mā । tāḍalaṃjuveveṃdu satyabhāmādēvi nuḍiyalavaḷiṃteṃdaḷu
ಕಾರುಣ್ಯನಿಧಿಯನಾನೊಲಿಸಿಕೊಳದಿರ್ದೊಡೆ ವಿ । ಚಾರಿಸುವರುಂಟೆ ಎನ್ನಭಿಮಾನಹಾನಿಯಂ । ಕೌರವನ ಸಭೆಯೊಳುಳಿದವರಿರ್ದೊಡೇನಾಯ್ತು ಕೃಷ್ಣನೇ ಪಾಲಿಸಿದನು ॥
ಪಾರಿಜಾತದ ನೋಂಪಿಗೆಂದು ನಿಜರಮಣನಂ । ನಾರದಮುನಿಗೆ ಕೊಟ್ಟ ಬಳಿಕೊಡೆಯರುಂಟೆ ನಿನ । ಗೀರುಕ್ಮಿಣೀಧವನನಾಥರ್ಗೆ ನಾಥನೆಂಬುದು ಪುಸಿಯೆ ಪೇಳೆಂದಳು
kāruṇyanidhiyanānolisikoḷadirdoḍe vi । cārisuvaruṃṭe ennabhimānahāniyaṃ । kauravana sabheyoḷuḷidavarirdoḍēnāytu kr̥ṣṇanē pālisidanu ॥
pārijātada nōṃpigeṃdu nijaramaṇanaṃ । nāradamunige koṭṭa baḷikoḍeyaruṃṭe nina । gīrukmiṇīdhavananātharge nāthaneṃbudu pusiye pēḷeṃdaḷu
ಎಂದು ದ್ರೌಪದಿ ನುಡಿದ ಮಾತು ಮುಗಿವನಿತರೊಳ್ । ಮಂದಿಯಂ ಕಡೆಗೆ ತೊಲಗಿಸಿ ಯಜ್ಞತುರುಗಮಂ । ತಂದು ನಿಲ್ಲಿಸಿದರಲ್ಲಿ ಹರಿ ನಿರೂಪಿಸಲರಸನಾಜ್ಞೆಯಿಂದಾ ಕ್ಷಣದೊಳು ॥
ಇಂದೀವರಾಕ್ಷಿಯರ್ ನೋಡಿದರ್ ಕೌತುಕಮಿ । ದೆಂದು ವಸ್ತ್ರಾಭರಣ ಪುಷ್ಪ ಗಂಧಾಕ್ಷತೆಗ । ಳಿಂದ ಪೂಜಿಸುತಿರ್ದರಶ್ವಮಂ ಭೂಪ ಕೇಳ್ ಮೇಲಾದ ಸಂಗತಿಯನು
eṃdu draupadi nuḍida mātu mugivanitaroḷ । maṃdiyaṃ kaḍege tolagisi yajñaturugamaṃ । taṃdu nillisidaralli hari nirūpisalarasanājñeyiṃdā kṣaṇadoḷu ॥
iṃdīvarākṣiyar nōḍidar kautukami । deṃdu vastrābharaṇa puṣpa gaṃdhākṣatega । ḷiṃda pūjisutirdaraśvamaṃ bhūpa kēḷ mēlāda saṃgatiyanu
ಆ ಸಮಯದೊಳ್ ಸಾಲ್ವನನುಜನನುಸಾಲ್ವನೀ ॥ ವಾಸುದೇವನ ಪೂರ್ವವೈರಕಲ್ಲಿಗೆ ಬಂದು । ಮೋಸದೊಳ್ ತಾಗಿ ತತ್ತುರಗಂ ಪಿಡಿದೆತ್ತಿಕೊಂಡೊಯ್ದು ಕಟ್ಟಿ ಬಳಿಕ ॥
ಆ ಸುತ್ತು ವಳಯದೊಳ್ ಪದ್ರ್ದಿನಾಕಾರಕೆ ಮ । ಹಾಸೇನೆಯಂ ನಿಲಿಸಿ ತಾನದರ ಮುಖದೊಳ್ ಶ। ರಾಸನದೊಳಂಬನೇರಿಸಿ ನಿಂದು ನುಡಿದಂ ಸುಧಾರನೆಂಬಾಪ್ತದೊಡನೆ
ā samayadoḷ sālvananujananusālvanī ॥ vāsudēvana pūrvavairakallige baṃdu । mōsadoḷ tāgi tatturagaṃ piḍidettikoṃḍoydu kaṭṭi baḷika ॥
ā suttu vaḷayadoḷ padrdinākārake ma । hāsēneyaṃ nilisi tānadara mukhadoḷ śa। rāsanadoḷaṃbanērisi niṃdu nuḍidaṃ sudhāraneṃbāptadoḍane
ಅಣ್ಣನಂ ಕೊಂದೆಮ್ಮ ಸೌಭನಗರವನಿರಿದ । ಬೆಣ್ಣೆಗಳ್ಳನ ಕೊಬ್ಬಿದುದರದೊಳ್ ಪೊಚ್ಚ ಪೊಸ । ಸುಣ್ಣಮಂ ಪೊಯ್ದು ನೀರೆರೆದಂತೆ ಮಾಡಿ ಯಾದವಪಾಂಡವರ ಬಿಂಕದ ॥
ಬಣ್ಣಮಂ ಕೆಡಿಸಿ ಕಾಳಗದೊಳುಬ್ಬಸಮನುರೆ । ಹಣ್ಣಿದಲ್ಲದೆ ಮಾಣಿನಹಿತರ್ಗೆ ಪಗೆಯೆನ್ನ । ಕಣ್ಣಮುಂದೇಂ ಸುಳಿದು ಜೀವಿಪನೆ ಸೇನೆ ಸನ್ನದ್ಧಮಾಗಿರಲೆಂದನು
aṇṇanaṃ koṃdemma saubhanagaravanirida । beṇṇegaḷḷana kobbidudaradoḷ pocca posa । suṇṇamaṃ poydu nīreredaṃte māḍi yādavapāṃḍavara biṃkada ॥
baṇṇamaṃ keḍisi kāḷagadoḷubbasamanure । haṇṇidallade māṇinahitarge pageyenna । kaṇṇamuṃdēṃ suḷidu jīvipane sēne sannaddhamāgiraleṃdanu
ಇಂದು ತುರಗಾಹಿಯಂ ಬಂದಿರಿಯದವನೆನಗೆ । ಸಂದಪಗನೆ ಗೋವಳೆಯರುಪನಾಯಕನ ರಣಕೆ । ನಿಂದು ಕಾದುವನಾಪ್ತನನಿತರೊಳ್ ಸಂದೇಹಮಿಲ್ಲ ಪರಿವಾರದೊಳಗೆ ॥
ಹಿಂದಣಪರಾಧಮಂ ಮುಂದಣ ದ್ರೋಹಂಗ । ಳೊಂದುಮಂ ನೋಡೆ ನೂರುಂಬಳಿ ಗಜ್ಜಾಶ್ವ ಗೋ । ವೃಂದ ಧನ ಯುವತಿಯರ್ ಮೊದಲಾದ ಸಕಲವಸ್ತುಗಳನಿತ್ತಪೆನೆಂದನು
iṃdu turagāhiyaṃ baṃdiriyadavanenage । saṃdapagane gōvaḷeyarupanāyakana raṇake । niṃdu kāduvanāptananitaroḷ saṃdēhamilla parivāradoḷage ॥
hiṃdaṇaparādhamaṃ muṃdaṇa drōhaṃga । ḷoṃdumaṃ nōḍe nūruṃbaḷi gajjāśva gō । vr̥ṃda dhana yuvatiyar modalāda sakalavastugaḷanittapeneṃdanu
ಸೊಕ್ಕಿದನುಸಾಲ್ವನೀತೆರದಿಂದೆ ತನ್ನ ಪಡೆ । ಗಿಕ್ಕಿದೀ ಸೆಲವಂ ಸುಧಾರನೆಂಬಾ ಸಚಿವ । ನಕ್ಕರಿಂದಖಿಳ ಸೇನಾವಳಯದೊಳ್ ಸಾರಿಸಲ್ ಪ್ರಳಯ ಮೇಘಂಗಳ ॥
ಕಕ್ಕಸದ ಸಡಿಲ ಗರ್ಜನೆಗಳಂ ಕಲ್ಪಾಂತ । ಕುಕ್ಕುವಬ್ಧಿಗಳ ಪೆರ್ದೆರೆಗಳ ಸುಘೋಷಮಂ । ಮಿಕ್ಕುವು ಸಮಸ್ತ ವಾದ್ಯ ಧ್ವನಿಗಳತಿಬಲರ ಬೊಬ್ಬೆಯಬ್ಬರದ ಕೂಡೆ
sokkidanusālvanīteradiṃde tanna paḍe । gikkidī selavaṃ sudhāraneṃbā saciva । nakkariṃdakhiḷa sēnāvaḷayadoḷ sārisal praḷaya mēghaṃgaḷa ॥
kakkasada saḍila garjanegaḷaṃ kalpāṃta । kukkuvabdhigaḷa perderegaḷa sughōṣamaṃ । mikkuvu samasta vādya dhvanigaḷatibalara bobbeyabbarada kūḍe
ಇತ್ತಲಡಹಾಯ್ದು ಮೋಸದೊಳಾ ತುರಂಗಮವ । ನತ್ತಲನುಸಾಲ್ವನೆಳೆದುಯ್ದ ರಭರಕಬಲೆಯರ । ಮೊತ್ತಮಗಲಕೆ ಚೆಲ್ಲಿತಂಜಿದರ್ ಮುನಿಗಳೆಲ್ಲಾ ಜನಂ ತಲ್ಲಣಿಸಿತು ॥
ಮನಸ್ಸಿನಲ್ಲಿ ಚಿತ್ತದೊಳ್ ನೃಪನು ಎಣಿಕೆಗೊಳುತಿರ್ದನುಳಿದವರಿ । ದೆತ್ತಣದ್ಭುತವೆಂದು ಬೆರಗಾದರಸುರಹರ । ನುತ್ತಮಾಂಗವನೊಲೆಯುತಂದು ಸುಮ್ಮಾನದಿಂ ಪಟುಭಟರ್ಗಿಂತೆಂದನು
ittalaḍahāydu mōsadoḷā turaṃgamava । nattalanusālvaneḷeduyda rabharakabaleyara । mottamagalake cellitaṃjidar munigaḷellā janaṃ tallaṇisitu ॥
manassinalli cittadoḷ nr̥panu eṇikegoḷutirdanuḷidavari । dettaṇadbhutaveṃdu beragādarasurahara । nuttamāṃgavanoleyutaṃdu summānadiṃ paṭubhaṭargiṃteṃdanu
ಈತನನುಸಾಲ್ವನೆಂಬಾತನಿವನಣ್ಣ ನಂ । ಘಾತಿಸಿದೆವಂದದರ ಖಾತಿಗೆಮ್ಮೊಡನೆ ಸ । ತ್ವಾತೀಶಯಮಂ ತೋರುವಾತುರದೊಳತಿಬಲವ್ರಾತಮಂ ಕೂಡಿಕೊಂಡು ॥
ಭೀತಿಯಿಲ್ಲದೆ ಪರಮಹೀತಳಕೆ ಬಂದು ನ । ಮ್ಮೀತುರಗಮಂ ಪಿಡಿದನೇತರಪರಾಕ್ರಮದ । ಮಾತು ನಮಗಿನ್ನು ಮಝಪೂತು ದಾನವಯೆನುತ ಪೀತಾಂಬರಂ ಪೊಗಳ್ದನು
ītananusālvaneṃbātanivanaṇṇa naṃ । ghātisidevaṃdadara khātigemmoḍane sa । tvātīśayamaṃ tōruvāturadoḷatibalavrātamaṃ kūḍikoṃḍu ॥
bhītiyillade paramahītaḷake baṃdu na । mmīturagamaṃ piḍidanētaraparākramada । mātu namaginnu majhapūtu dānavayenuta pītāṃbaraṃ pogaḷdanu
ಅರೀತನಂ ಗೆಲ್ಬು ಕುದುರೆಯಂ ಬಿಡಿಸಿ ತಹ । ವೀರರೀ ಪಟುಭಟರೊಳವರ್ಗಿದೆಕೊ ವೀಳೆಯಂ । ಪೂರೈಸುವೊಡೆ ಪಿಡಿಯಲೆಂದು ಹರಿ ನುಡಿಯಲತಿಬಲರಂಜಿ ಸುಮ್ಮನಿರಲು ॥
ಚಾರುಹಯಮಂ ತಂದು ಕಡುವೆನಲ್ಲದೊಡೆ ವೃಷ । ಳೀರಮಣನುಗ್ರಗತಿಗಿಳಿವೆನೆಂದಸುರಸಂ । ಹಾರನಡಿಗೆರಗಿ ತಾಂಬೂಲಮಂ ಪ್ರದ್ಯುಮ್ನನಾಂತು ಕಳುಹಿಸಿಕೊಂಡನು
arītanaṃ gelbu kudureyaṃ biḍisi taha । vīrarī paṭubhaṭaroḷavargideko vīḷeyaṃ । pūraisuvoḍe piḍiyaleṃdu hari nuḍiyalatibalaraṃji summaniralu ॥
cāruhayamaṃ taṃdu kaḍuvenalladoḍe vr̥ṣa । ḷīramaṇanugragatigiḷiveneṃdasurasaṃ । hāranaḍigeragi tāṃbūlamaṃ pradyumnanāṃtu kaḷuhisikoṃḍanu
ಬಳಿಕ ವೃಷಕೇತು ಗರುಡಧ್ವಜನ ಮೃದುಪದಯು । ಗಳಕೆರಗಿ ದೇವ ಚಿತ್ತೈಸಾದೊಡಿನ್ನು ಕೊಳು । ಗುಳದೊಳನುಸಾಲ್ವನೆಂದೆಂಬ ಖಳನಂ ಪಿಡಿದು ನಿಮ್ಮಂಘ್ರಿಗೊಪ್ಪಿಸದೊಡೆ ॥
ಮುಳಿದು ವಿಪ್ರನ ವಧೆಗೆಳಸಿದವನ ಗತಿಗೆ ತಾ । ನಿಳಿವೆನೆನ್ನಂ ಕಳುಹಬೇಕೆಂದು ಕೈಮುಗಿಯೆ । ನಳಿನಾಕ್ಷನಾತನಂ ತೆಗೆದು ತಕ್ಕೈಸಿ ವೀಳೆಯವಿತ್ತು ಬೀಳ್ಕೊಟ್ಟನು
baḷika vr̥ṣakētu garuḍadhvajana mr̥dupadayu । gaḷakeragi dēva cittaisādoḍinnu koḷu । guḷadoḷanusālvaneṃdeṃba khaḷanaṃ piḍidu nimmaṃghrigoppisadoḍe ॥
muḷidu viprana vadhegeḷasidavana gatige tā । niḷivenennaṃ kaḷuhabēkeṃdu kaimugiye । naḷinākṣanātanaṃ tegedu takkaisi vīḷeyavittu bīḷkoṭṭanu
ಸದ್ಯೋಗಿಜಯದ ಮೀನಧ್ವಜವನಳವಡಿಸಿ । ವಿದ್ಯುತ್ಪ್ರಚಾರಮಂ ಗೆಲ್ವ ಹಯಮಂ ಪೂಡಿ । ಖದ್ಯೋತನಿಂಬಮಂ ಮಣಿಖಚಿತ ಕಾಂಚನಮಯ ಪ್ರಭೆಗಳಿಂದೆ ನಗುವ ।
ಉದ್ಯದ್ವರೂಥಮಂ ಜೋಡಿಸಿ ಮಹಾಸಮರ । ಕುದ್ಯುಕ್ತನಾಗಿ ಸಾರಥಿ ತಂದು ನಿಲಿಸಲಾ । ಪ್ರದ್ಯುಮ್ನನಡರ್ದು ನಿಜಚಾಪಮಂ ಜೇಗೈದು ಬಂದನಾಹವಕೆ ನಲಿದು
sadyōgijayada mīnadhvajavanaḷavaḍisi । vidyutpracāramaṃ gelva hayamaṃ pūḍi । khadyōtaniṃbamaṃ maṇikhacita kāṃcanamaya prabhegaḷiṃde naguva ।
udyadvarūthamaṃ jōḍisi mahāsamara । kudyuktanāgi sārathi taṃdu nilisalā । pradyumnanaḍardu nijacāpamaṃ jēgaidu baṃdanāhavake nalidu
ಕಂಡನನುಸಾಲ್ವನಿವನಾರೀಗ ರಣಕೆ ಮುಂಕೊಂಡು ಬಹ ವೀರನಸುರಾರಿಯಾದೊಡೆ ಕೇತು । ದಂಡದಗ್ರದೊಳಿರದು ಮತ್ಸ್ಯವಿವನವನ ಸುತನಾಗಬೇಕಿಲ್ಲಿ ಬರಲಿ ॥
ದಿಂಡುಗೆಡಪುವೆನೆನುತೆ ಸೇನೆಯಂ ಪಿಂದಿಕ್ಕಿ । ಪುಂಡರೀಕಾಕ್ಷನ ಕುಮಾರನಂ ತಡೆಯೆ ಕೋ । ದಂಡದೊಳ್ ಪ್ರದ್ಯುಮ್ನನೈದುಕಣೆಯಂ ಪೂಡಿ ದೈತ್ಯನಂ ತೆಗೆದೆಚ್ಚನು
kaṃḍananusālvanivanārīga raṇake muṃkoṃḍu baha vīranasurāriyādoḍe kētu । daṃḍadagradoḷiradu matsyavivanavana sutanāgabēkilli barali ॥
diṃḍugeḍapuvenenute sēneyaṃ piṃdikki । puṃḍarīkākṣana kumāranaṃ taḍeye kō । daṃḍadoḷ pradyumnanaidukaṇeyaṃ pūḍi daityanaṃ tegedeccanu
ವ್ಯಗ್ರವೇತಕೆ ನಿನಗೆ ನಾವಿಂದ್ರಿಯಂಗಳಂ । ನಿಗ್ರಹಿಸಿದವರಲ್ಲ ವಿರಹವೆಮಗಿಲ್ಲ ಸುರ । ತಗ್ರಾಹ್ಯ ಮೋಹನದ ಪಂಚಬಾಣಪ್ರಯೋಗಂಗಳೇಕೀಗ ನಿನ್ನ ॥
ವಿಗ್ರಹಕೆ ನಮಗಿಕ್ಷುಚಾಪವಾರಡಿವೆದೆ ಸ । ಮಗ್ರಕುಸುಮಾಸ್ತ್ರಂಗಳಿಲ್ಲ ನೋಡೆಮ್ಮದೊಂ ॥ ದುಗ್ರಸಾಯಕವನೆಂದಾರ್ದು ತೆಗೆದೆಚ್ಚನನುಸಾಲ್ವನಚ್ಯುತನ ಸುತನ
vyagravētake ninage nāviṃdriyaṃgaḷaṃ । nigrahisidavaralla virahavemagilla sura । tagrāhya mōhanada paṃcabāṇaprayōgaṃgaḷēkīga ninna ॥
vigrahake namagikṣucāpavāraḍivede sa । magrakusumāstraṃgaḷilla nōḍemmadoṃ ॥ dugrasāyakavaneṃdārdu tegedeccananusālvanacyutana sutana
ಪೃಥಿವಿಪತಿ ಕೇಳೆದೆಯಮೇಲೆ ಕೋಲ್ ಕೀಲಿಸಲ್ । ವ್ಯಥಿಸಿ ಮೈಮರೆದನಾ ಪ್ರದ್ಯುಮ್ನನೊಡನೆ ಸಾ । ರಥಿ ಕೃಷ್ಣನಿದ್ದೆಡೆಗೆ ತೇರನಾಗಳೆ ಕೊಂಡು ಬರೆ ಶೌರಿ ಕಂಡು ಬಳಿಕ ॥
ಪೃಥುಲಪೌರುಷದಿಂದೆ ನಮ್ಮ ಸುತನಿಂದು ರಿಪು । ಮಥನಮಂ ಮಾಡಿ ಬಳಲಿದನೆನುತೆ ಬಂದೆಲವೊ । ಶಿಥಿಲಪೌರುಷ ನಿನ್ನನೇಗೆಯ್ಯಲೆಂದು ಹರಿಯೊದೆದನೆಡಗಾಲ್ದುದಿಯೊಳು
pr̥thivipati kēḷedeyamēle kōl kīlisal । vyathisi maimaredanā pradyumnanoḍane sā । rathi kr̥ṣṇaniddeḍege tēranāgaḷe koṃḍu bare śauri kaṃḍu baḷika ॥
pr̥thulapauruṣadiṃde namma sutaniṃdu ripu । mathanamaṃ māḍi baḷalidanenute baṃdelavo । śithilapauruṣa ninnanēgeyyaleṃdu hariyodedaneḍagāldudiyoḷu
ದ್ವಾರಕೆಯನೆಂತಬಲೆಯರ ಮುಂದೆ ಪುಗುವೆ ಪೋ । ಗಾರಣ್ಯಕೆನಲಲ್ಲಿ ಮುನಿಗಳ್ಗೆ ಸೇರೆ ಕೆ । ಟ್ಟಾರೂರ ಸಾರ್ದೊಡಂ ನೀಂ ವಿರಹಿತನು ವಿಷಮನೆಂದೊರ್ವರಂ ಕೂಡರು ॥
ಆರಿನ್ನು ಗತಿ ನಿನಗೆ ಸಂಬಂಧಿ ಬಾಣನಂ । ಹಾರೈಸುಪೊಡೆ ನಿನ್ನ ಬೇರ್ಗೊಲೆಗೆ ಶಿವನಿಪ್ಪ । ಕಾರಣವನಂಗತ್ವಮೇ ಪ್ರಾಪ್ತಮೆಂದು ಹರಿ ತನ್ನ ಸುತನಂ ಜರೆದನು
dvārakeyaneṃtabaleyara muṃde puguve pō । gāraṇyakenalalli munigaḷge sēre ke । ṭṭārūra sārdoḍaṃ nīṃ virahitanu viṣamaneṃdorvaraṃ kūḍaru ॥
ārinnu gati ninage saṃbaṃdhi bāṇanaṃ । hāraisupoḍe ninna bērgolege śivanippa । kāraṇavanaṃgatvamē prāptameṃdu hari tanna sutanaṃ jaredanu
ಕಾಲ್ದುದಿಯೊಳೊದೆಯಲ್ಕೆ ನಿನ್ನ ಮಗನೀತಂಗೆ । ಸೋಲ್ದಪನೆ ಸಾಕಿನ್ನು ಕರ್ಣನ ಕುಮಾರಂಗೆ । ಮೇಲ್ದಳವನಟ್ಟೆಂದು ಮಾರುತಿ ನುಡಿಯೆ ಶೌರಿ ಪೋಗು ನೀನಾದೊಡೆನಲು ॥
ಸೋಲ್ದುದಿನ್ನಾಹವಂ ತನಗೆಂಬ ಹರ್ಷದಿಂ । ನಾಲ್ದೆಸೆಗಳದಿರೆ ಬೊಬ್ಬಿರಿದಾರ್ದು ಬಿಲ್ವೆದೆಗೆ । ಕೋಲ್ದುಡಿಸಿ ತೆಗೆದಿಸುತ ರಿಪುಚಾತುರಂಗಮಂ ತಾಗಿದಂ ಪವನಸೂನು
kāldudiyoḷodeyalke ninna maganītaṃge । sōldapane sākinnu karṇana kumāraṃge । mēldaḷavanaṭṭeṃdu māruti nuḍiye śauri pōgu nīnādoḍenalu ॥
sōldudinnāhavaṃ tanageṃba harṣadiṃ । nāldesegaḷadire bobbiridārdu bilvedege । kōlduḍisi tegedisuta ripucāturaṃgamaṃ tāgidaṃ pavanasūnu
ಆ ಭೀಮನುರುವಣಿಸೆ ಕಂಡು ವೃಷಕೇತು ನಗು । ತೀ ಭೂಮಿಗಿಂದು ಪೊಸತಾದುದೆಲೆ ತಾತಬಾ। ಲಾಭಿಲಾಷೆಯ ಫಲಕೆಳಸುವರೆ ಪಿತರ್ ತನಗೆ ಮೀಸಲೀ ಸಮರಮಿದಕೆ ॥
ಲೋಭದಿಂ ನೀಂ ಬರ್ಪುದುಚಿತಮೇ ಪೇಳನಲ್ । ಶೋಭಿಸುವ ಪಣ್ವಿಡಿದು ತಂದೆ ಸವಿಸದೊಡೆ ತಾ । ನೇ ಭುಂಜಿಪನೆ ಪಸುಳೆ ನಿನಗೆ ರಣದನುದೋರಬಂದೆನೆಂದಂ ಮಾರುತಿ
ā bhīmanuruvaṇise kaṃḍu vr̥ṣakētu nagu । tī bhūmigiṃdu posatādudele tātabā। lābhilāṣeya phalakeḷasuvare pitar tanage mīsalī samaramidake ॥
lōbhadiṃ nīṃ barpuducitamē pēḷanal । śōbhisuva paṇviḍidu taṃde savisadoḍe tā । nē bhuṃjipane pasuḷe ninage raṇadanudōrabaṃdeneṃdaṃ māruti
ನಸುನಗುತೆ ವೃಷಕೇತು ಬಳಿಕ ಕಾರ್ಮುಕವನೊದ । ರಿಸುತೆ ರಿಪುಸೈನ್ಯಮಂ ತಾಗಿದಂ ಮೀರ್ದು ಗ । ರ್ಜಿಸಿ ವನಾಂತರಕೆ ಸಿಡಿಲೆರಗಿದಂತಿದಿರಾಂತ ಭಟರ ಗೋಣ್ಗಳನರಿಯಲು ।
ಮಸಗಿ ಚಿಮ್ಮುವ ರಕ್ತಧಾರೆಗಳ್ ಕೂಡೆ ಕ । ಣ್ಗೆಸೆದುವಲ್ಲಿಯ ಕಿಚ್ಚಿನಂತೊಡನೆ ಮುಸುಕಿತೆ । ಣ್ದೆಸೆಯನಿಸುವಂಬು ಬಿರುವಳೆಯಂತೆ ಹೊನಲಾಯ್ತು ರುಧಿರಂ ಪ್ರವಾಹದಂತೆ
nasunagute vr̥ṣakētu baḷika kārmukavanoda । risute ripusainyamaṃ tāgidaṃ mīrdu ga । rjisi vanāṃtarake siḍileragidaṃtidirāṃta bhaṭara gōṇgaḷanariyalu ।
masagi cimmuva raktadhāregaḷ kūḍe ka । ṇgeseduvalliya kiccinaṃtoḍane musukite । ṇdeseyanisuvaṃbu biruvaḷeyaṃte honalāytu rudhiraṃ pravāhadaṃte
ಝಷಕೇತನಂ ತನಗೆ ಸೋಲ್ದು ಹಿಮ್ಮೆಟ್ಟಿದಂ । ವೃಷಭಾಂಕಿತಧ್ವಜಸ್ತಂಭದವನಾರಿವಂ । ವಿಷಮಗೋಪಾಲನಲ್ಲೆನುತೆ ಕಡುಗೋಪದಿಂದನುಸಾಲ್ವನಿವನ ಮೇಲೆ ॥
ಇಷುವೃಷ್ಟಿಯಂ ಕರೆಯಲಾ ಕರ್ಣಸಂಭವಂ । ಮೃಷೆಯಲ್ಲದೆನ್ನೊಡನೆ ತೋರಿಸಾ ನಿನ್ನ ಪೌ । ರುಷವನೆಂದೆನುತವಂಮುಸುಕಿದಂ ಪೊಸಮಸೆಯವಿಶಿಖದೊಳವನ ರಥವನು
jhaṣakētanaṃ tanage sōldu himmeṭṭidaṃ । vr̥ṣabhāṃkitadhvajastaṃbhadavanārivaṃ । viṣamagōpālanallenute kaḍugōpadiṃdanusālvanivana mēle ॥
iṣuvr̥ṣṭiyaṃ kareyalā karṇasaṃbhavaṃ । mr̥ṣeyalladennoḍane tōrisā ninna pau । ruṣavaneṃdenutavaṃmusukidaṃ posamaseyaviśikhadoḷavana rathavanu
ಉಚ್ಚಳಿಸಿ ಹಾಯ್ದುವಂಬುಗಳವನ ಕಾಯದಿಂ । ದೆಚ್ಚರಿಲ್ಲದೆ ನಿಮಿಷಮಿರ್ದು ಚೇತರಿಸಿ ಕೊಂ । ಡೆಚ್ಚನನುಸಾಲ್ವನೀ ಕರ್ಣಜನ ವಕ್ಷಸ್ಸ್ಥಲಪನೊಂದು ಬಾಣದಿಂದೆ ॥
ಅಚ್ಚಪೂರಾಯ ಗಾಯದೊಳೆ ಮೈಮರೆದು ಕ । ಣ್ಮುಚ್ಚುತೆ ವರೂಥದೊಳ್ ಮಲಗಲೈ ಕಂಡು ಖತಿ । ವೆಚ್ಚಿ ಪವಮಾನುಜಂ ಬಂದವನ ತೇರನಪ್ಪಳಿಸಿದಂ ಬಲ್ಗದೆಯೊಳು
uccaḷisi hāyduvaṃbugaḷavana kāyadiṃ । deccarillade nimiṣamirdu cētarisi koṃ । ḍeccananusālvanī karṇajana vakṣassthalapanoṃdu bāṇadiṃde ॥
accapūrāya gāyadoḷe maimaredu ka । ṇmuccute varūthadoḷ malagalai kaṃḍu khati । vecci pavamānujaṃ baṃdavana tēranappaḷisidaṃ balgadeyoḷu
ಮುಗ್ಗಿದುದು ಕುದುರೆ ಸಾರಥಿ ಮಡಿದನಾ ರಥಂ । ನೆಗ್ಗಿದುದು ಚಿಗಿದನನುಸಾಲ್ವನಾತನ ಬಲಂ । ಮುಗ್ಗಿದುದು ಸಂದಣಿಸಿ ಪವನಜನ ಮೇಲೆ ಶಸ್ತ್ರಾಸ್ತ್ರಪ್ರಯೋಗದಿಂದೆ ॥
ತಗ್ಗಿದುದು ದಿಗ್ದಂತಿ ಭೋಗಿರಾಜನ ಕೊರಲ್ । ಕುಗ್ಗಿದುದು ಧರಣಿತಲಮಿಬ್ಬಾಗಮಾಗಿ ಸಲೆ । ಹಿಗ್ಗಿದುದು ಪೋಗೆನಲ್ ಪೊಯ್ದುನುರುಗದೆಯಿಂದೆ ಪರಸೈನ್ಯಮಂ ಭೀಮನು
muggidudu kudure sārathi maḍidanā rathaṃ । neggidudu cigidananusālvanātana balaṃ । muggidudu saṃdaṇisi pavanajana mēle śastrāstraprayōgadiṃde ॥
taggidudu digdaṃti bhōgirājana koral । kuggidudu dharaṇitalamibbāgamāgi sale । higgidudu pōgenal poydunurugadeyiṃde parasainyamaṃ bhīmanu
ಕಾದಿ ದುಂದುಗವಡದ ಮುನ್ನವೇ ತನ್ನಳವಿ । ಗೈದಿದಂಕದ ಭಟರ ತೇರ್ಗಳಂ ತೆಗೆದಿಳೆಗೆ । ಮೋದದಿಂ ಕೊಂದನಡಗೆಡಹಿದಂ ಸದೆದನೊದೆದಂ ಹಿಡಿದು ಸುಂಡಿಲ್ಗಳ ॥
ಸೇದಿ ದಂತಿಗಳ ನೀಡಾಡಿದಂ ರುಧಿರದಿಂ । ನಾದಿದಂ ಧರೆಯನುಸಿರ್ಗಾಳಿಯಿಂದಂ ಪಾರ । ಲೂದಿದಂ ರಣದೊಳ್ ಪೆಣದ ರಾಶಿಮಾಡಿದಂ ಪರಬಲದೊಳಾ ಭೀಮನು
kādi duṃdugavaḍada munnavē tannaḷavi । gaididaṃkada bhaṭara tērgaḷaṃ tegediḷege । mōdadiṃ koṃdanaḍageḍahidaṃ sadedanodedaṃ hiḍidu suṃḍilgaḷa ॥
sēdi daṃtigaḷa nīḍāḍidaṃ rudhiradiṃ । nādidaṃ dhareyanusirgāḷiyiṃdaṃ pāra । lūdidaṃ raṇadoḷ peṇada rāśimāḍidaṃ parabaladoḷā bhīmanu
ಮೆಟ್ಟಿದಂ ಮಡದೊಳಿಟ್ಟೊರಸಿ ಕಾಲಾರ್ಳಗಳಂ । ಘಟ್ಟಿಸಿದನುರುಬುವ ಹಯಂಗಳಂ ನಭಕೆ ತೆಗೆ । ದಿಟ್ಟನಾನೆಗಳನಪ್ಪಳಿಸಿದಂ ತೇರ್ಗಳಂ ಧುರದೊಳನಿಲಜನ ಕೂಡೆ ॥
ಮುಟ್ಟಿ ಕಾದುವರುಂಟೆ ಸೇನೆ ನಿಮಿಷಾರ್ಧದೊಳ್ । ಬಟ್ಟಬಯಲಾಯ್ತು ಪೊಸರಥದೊಳೈತಂದಳವಿ । ಗೊಟ್ಟನನುಸಾಲ್ವನಂಬುಗಳ ಮಳೆಯಂ ಕರೆಯುತಾ ವೃಕೋದರನ ಮೇಲೆ
meṭṭidaṃ maḍadoḷiṭṭorasi kālārḷagaḷaṃ । ghaṭṭisidanurubuva hayaṃgaḷaṃ nabhake tege । diṭṭanānegaḷanappaḷisidaṃ tērgaḷaṃ dhuradoḷanilajana kūḍe ॥
muṭṭi kāduvaruṃṭe sēne nimiṣārdhadoḷ । baṭṭabayalāytu posarathadoḷaitaṃdaḷavi । goṭṭananusālvanaṃbugaḷa maḷeyaṃ kareyutā vr̥kōdarana mēle
ಸಾಲ್ವಾನುಜಂ ಪೂಣ್ದಿಸಲ್ಕೆ ಯಮದಂಡಮಂ । ಪೋಲ್ವ ದೆಯಂ ಕೊಂಡು ಮತ್ತೆ ಮಾರುತಸುತಂ । ಮೇಲ್ವಾಯ್ದು ಬರಲೊಂದುಬಾಣಮಂ ಕಿವಿವರೆಗೆ ತೆಗೆದೆಚ್ಚು ಬೊಬ್ಬಿರಿಯಲು ॥
ಕೋಲ್ವಕ್ಷದೊಳ್ ನಾಂಟಿತಳವಳಿದು ಪವನಜಂ । ತೇಲ್ವನಿತರೊಳ್ ಕಂಡು ದೈತ್ಯನುಳಿದದಟರ್ಗೆ । ಸೋಲ್ವನಲ್ಲೆಂದಚ್ಯತಂ ತಾನೆ ಕೋಪದಿಂದಾಹವಕೆ ನಡೆತಂದನು
sālvānujaṃ pūṇdisalke yamadaṃḍamaṃ । pōlva deyaṃ koṃḍu matte mārutasutaṃ । mēlvāydu baraloṃdubāṇamaṃ kivivarege tegedeccu bobbiriyalu ॥
kōlvakṣadoḷ nāṃṭitaḷavaḷidu pavanajaṃ । tēlvanitaroḷ kaṃḍu daityanuḷidadaṭarge । sōlvanalleṃdacyataṃ tāne kōpadiṃdāhavake naḍetaṃdanu
ದರ್ಪದಿಂ ಕುದುರೆಯಂ ಕೊಂಡುಬಹೆನೆಂದು ಕಂ । ದರ್ಪನೊಂದೆಸೆಯೊಳುರವಣಿಸಿದಂ ಕೂಡೆ ನಡೆ । ದರ್ಪರಬಲಕೆ ಸಾಂಬ ಕೃತವರ್ಮ ಗದ ಸಾತ್ಯಕಿ ಪ್ರಮುಖ ಯದುವೀರರು ॥
ಸರ್ಪವೈರಿಧ್ವಜನ ರಥಮೈದೆ ಕಂಡು ನೇ । ಸರ್ಪಲವನಡಗಿಸುವ ಚಕ್ರದಿಂ ದೈತ್ಯರ ಪೆ । ಸರ್ಪರೆಯದಂತೆ ಮಾಡುವ ಕೃಷ್ಣನಿವನೆಂದರಿದು ಮೊರೆದನನುಸಾಲ್ವನು
darpadiṃ kudureyaṃ koṃḍubaheneṃdu kaṃ । darpanoṃdeseyoḷuravaṇisidaṃ kūḍe naḍe । darparabalake sāṃba kr̥tavarma gada sātyaki pramukha yaduvīraru ॥
sarpavairidhvajana rathamaide kaṃḍu nē । sarpalavanaḍagisuva cakradiṃ daityara pe । sarpareyadaṃte māḍuva kr̥ṣṇanivaneṃdaridu moredananusālvanu
ಪೊಳೆವಮಿಂಚುಗಳೈಸೆ ತೇಜಿಗಳವಲ್ಲ ಬ । ಲ್ಮೊಳಗುಳಿವೈಸೆ ರಥಚಕ್ರ ಧ್ವನಿಗಳಲ್ಲ । ತೊಳಗುವಮರೇಂಧ್ರ ಕಾರ್ಮುಕಮೈಸೆ ಪಿಡಿದಿರ್ದ ಶಾಙ್ರ್ಗಧನುವಲ್ಲ ಬೀಳ್ವ ॥
ಮಳೆವನಿಗಳೈಸೆ ಕೂರಂಬುಗಳಿವಲ್ಲ ಕ । ಣ್ಗೊಳಿಪ ಕಾರ್ಮುಗಿಲೈಸೆ ಕೃಷ್ಣನಲ್ಲೆಂಬವೋಲ್ । ಕೊಳುಗುಳಕೆ ಮೈದೋರೆ ಕಂಡು ಕಲಿಸಿಂಹದಂತೆದಿರಾದನನುಸಾಲ್ವನು
poḷevamiṃcugaḷaise tējigaḷavalla ba । lmoḷaguḷivaise rathacakra dhvanigaḷalla । toḷaguvamarēṃdhra kārmukamaise piḍidirda śāṅrgadhanuvalla bīḷva ॥
maḷevanigaḷaise kūraṃbugaḷivalla ka । ṇgoḷipa kārmugilaise kr̥ṣṇanalleṃbavōl । koḷuguḷake maidōre kaṃḍu kalisiṃhadaṃtedirādananusālvanu
ವ್ಯಗ್ರದಿಂದೈದುವ ಮುರಾರಿಯಂ ಕಂಡು ತ । ನ್ನಗ್ರಜನನಂದು ಕೊಂದಾ ಪಗೆವನೀತನಂ । ನಿಗ್ರಹಿಪೆನೆಂದು ಕಣೆನಾಲ್ಕರಿಂದಚ್ಯುತನ ಹಯಚತುಷ್ಟಯವನಿಸಲು ॥
ಉಗ್ರಶರಘಾತಿಗವು ಸೂತನಂ ಕೈಕೊಳದೆ । ವಿಗ್ರಹವನುಳಿದೊಂದು ಕಡೆಗೆ ಹಾಯ್ದುವು ಯದುಕು । ಲಾಗ್ರಣಿಯನಿದಿರೆ ಕಾಣದೆ ನೊಂದು ತನ್ನವರ್ಗನುಸಾಲ್ವನಿಂತೆಂದನು
vyagradiṃdaiduva murāriyaṃ kaṃḍu ta । nnagrajananaṃdu koṃdā pagevanītanaṃ । nigrahipeneṃdu kaṇenālkariṃdacyutana hayacatuṣṭayavanisalu ॥
ugraśaraghātigavu sūtanaṃ kaikoḷade । vigrahavanuḷidoṃdu kaḍege hāyduvu yaduku । lāgraṇiyanidire kāṇade noṃdu tannavarganusālvaniṃteṃdanu
ನವೆದಪುದೊ ಪರಿವಾರಮೀವ ಧನಮಂ ತರಿಸ । ಲವಿಚಾರದಿಂ ಪ್ರಜೆಗಳಲಸಿದರೊ ದೇಶದೊಳ್ । ತವಕ ಮಿಗೆ ನಾರಿಯರ್ ಪತಿಗಳಿರಲನ್ಯರೊಳ ಮೆರೆದಪರೊ ಮತ್ಕೋಶಕೆ ॥
ತವೆ ಪುತ್ರರಿಲ್ಲದಳಿದವರೊಡವೆ ಸಾರ್ದಪುದೊ । ಬವರಕೈತಂದ ರಿಪು ಕೃಷ್ಣನಂ ಕಾಣದಿಹ । ಪವಣಾವುದಕಟ ಪೊಸತಿದು ತನ್ನ ಹಗೆ ಹರಿಯದೆಂದು ಚಿಂತಿಸುರ್ತಿದನು
navedapudo parivāramīva dhanamaṃ tarisa । lavicāradiṃ prajegaḷalasidaro dēśadoḷ । tavaka mige nāriyar patigaḷiralanyaroḷa meredaparo matkōśake ॥
tave putrarilladaḷidavaroḍave sārdapudo । bavarakaitaṃda ripu kr̥ṣṇanaṃ kāṇadiha । pavaṇāvudakaṭa posatidu tanna hage hariyadeṃdu ciṃtisurtidanu
ಅನ್ನೆಗಂ ಕುದುರೆಗಳನುಪಚರಿಸಿ ಸಾರಥಿಗೆ । ಸನ್ನೆಗೈದನುಸಾಲ್ವನಭಿಮುಖಕೆ ಮುರಹಂ । ಕೆನ್ನೆಗೇರಿಸಿ ಚಾಪದೊಳ್ ಪೂಡಿದಂಬನಾರ್ದಿಸುತೆ ಬರಲವನತ್ತಲು ॥
ಪನ್ನಗಾರಿಧ್ವಜಂ ಮಗುಳೈತರಲ್ ಕಂಡು । ತನ್ನೊಳ್ ಪೊಣರ್ವ ಭರದಿಂ ಬಂದು ಸಮರದೊಳ್ । ಗನ್ನಗತಕವನೆಸಗಲೇನಹುದು ಮಾರಾಂತು ನೋಡೆನುತೆ ತೆಗೆದೆಚ್ಚನು
annegaṃ kuduregaḷanupacarisi sārathige । sannegaidanusālvanabhimukhake murahaṃ । kennegērisi cāpadoḷ pūḍidaṃbanārdisute baralavanattalu ॥
pannagāridhvajaṃ maguḷaitaral kaṃḍu । tannoḷ poṇarva bharadiṃ baṃdu samaradoḷ । gannagatakavanesagalēnahudu mārāṃtu nōḍenute tegedeccanu
ಸಂಜನಿಸುವೆಳನಗೆಯೊಳಗಧರಂ ಮಾರಾಂಪೊ । ಡಂಜುವೆವು ನಿಮಗೆ ಸಂಗ್ರಾಮದೊಳ್ ದಾನವರ । ಭಂಜನೆಗಲಸಿದೊಡಂ ಬಿಡದಲಾ ನಮಗೆನುತೆ ತೆಗೆದಿಸಲದಂ ಸೈರಿಸಿ ॥
ಶಿಂಜಿನಿಯೊಳೊಂದು ಸರಳಂ ಪೂಡಿ ಬರಸೆಳೆದು । ರಂಜಿಪ ವಿಶಾಲವಕ್ಷಸ್ಥಳವನೆಚ್ಚನಂ । ದಂಜನಾದ್ರಿಯಮೇಲೆ ಸಿಡಿಲೆರಗಿದಂತಾಗೆ ದನುಜಾರಿ ಮೈಮರೆದನು
saṃjanisuveḷanageyoḷagadharaṃ mārāṃpo । ḍaṃjuvevu nimage saṃgrāmadoḷ dānavara । bhaṃjanegalasidoḍaṃ biḍadalā namagenute tegedisaladaṃ sairisi ॥
śiṃjiniyoḷoṃdu saraḷaṃ pūḍi baraseḷedu । raṃjipa viśālavakṣasthaḷavaneccanaṃ । daṃjanādriyamēle siḍileragidaṃtāge danujāri maimaredanu
ಪಾಥೋರುಹಾಕ್ಷನಂ ದಾರುಕಂ ನಿಟ್ಟಿಸಿ ವ । ರೂಥಮಂ ತಿರುಗಿಸಿದನಖೀಳ ಯಾದವರ ವರ । ಯೂಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ ॥
ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ ನರ । ನಾಥನಿರ್ದಲ್ಲಿ ಬೆರಗಾಗೆ ನಿಂದಂ ವಧೂ । ಯೂಥಮಸುರಾರಿಯಂ ಬಳಸಿತದರೊಳ್ ಸತ್ಯಭಾಮೆ ಬಗುತಿಂತೆಂದಳು
pāthōruhākṣanaṃ dārukaṃ niṭṭisi va । rūthamaṃ tirugisidanakhīḷa yādavara vara । yūthamadu masagitu bhayaṃgoṃḍu purajanada neravi perbāgilgaḷa ॥
vīthigaḷoḷiṭṭaṇisi paṭṭaṇake sariye nara । nāthanirdalli beragāge niṃdaṃ vadhū । yūthamasurāriyaṃ baḷasitadaroḷ satyabhāme bagutiṃteṃdaḷu
ದಾನವಂಗಿದಿರಾಗಿ ಪೋಗಿ ರಣದೊಳ್ ಪ್ರಾಣ । ದಾನಂ ಪಡೆದು ಮರಳಿದ ನಿನ್ನ ಸತ್ವದ ನಿ । ದಾನವಂ ತಿಳಿದಹಿತರೇಗೆಯ್ಯ ರಕಟ ನಿಜಶೌರ್ಯದಿಂ ಪ್ರದ್ಯುನ್ಮನ ॥
ಮಾನವಂ ಭಂಗಿಸಿದೆ ನಿನ್ನಂ ಜಗದೊಳಾವ । ಮಾನವಂ ಬಣ್ಣಿಸುವೆನಿನ್ನು ನಿನ್ನದಟಿಗೆ ಸ । ಮಾನಂ ಕಾಣೆನೆಂದಳ್ ಸತ್ಯಭಾಮೆ ನಗುತುರೆ ಜರೆದು ನಿಜಪತಿಯನು
dānavaṃgidirāgi pōgi raṇadoḷ prāṇa । dānaṃ paḍedu maraḷida ninna satvada ni । dānavaṃ tiḷidahitarēgeyya rakaṭa nijaśauryadiṃ pradyunmana ॥
mānavaṃ bhaṃgiside ninnaṃ jagadoḷāva । mānavaṃ baṇṇisuveninnu ninnadaṭige sa । mānaṃ kāṇeneṃdaḷ satyabhāme naguture jaredu nijapatiyanu
ಕಂದೆರೆದು ವಲ್ಲಭೆಯ ನುಡಿಗೆ ಲಜ್ಜಿಸಿ ಮನಂ । ಕಂದೆ ಕಣ್ಣಾಲಿಗಳ್ ಕೆಂಪಡರೆ ಖತಿ ಮಿಗ । ಲ್ಕಂಡೆಬಲಂಗಳಂ ನೋಡಿ ಹರಿ ಮತ್ತೆ ರಣಕನುವಾಗುತಿರಲಿತ್ತಲು ॥
ನಿಂದು ವೃಷಕೇತುವನುಸಾಲ್ವನಂ ತಡೆದು ನೀ ॥ ನಿಂದು ಮುರವೈರಿಯಂ ತೆರಳಿಚಿದೆ ವೀರ ಎ । ನ್ನಿಂದುಳಿದೆಯಾದೊಡಾಂ ಕರ್ಣಜನೆ ನಿಲ್ಲೆನುತೆ ತೆಗೆದೆಚ್ಚು ಬೊಬ್ಬಿರಿದನು
kaṃderedu vallabheya nuḍige lajjisi manaṃ । kaṃde kaṇṇāligaḷ keṃpaḍare khati miga । lkaṃḍebalaṃgaḷaṃ nōḍi hari matte raṇakanuvāgutiralittalu ॥
niṃdu vr̥ṣakētuvanusālvanaṃ taḍedu nī ॥ niṃdu muravairiyaṃ teraḷicide vīra e । nniṃduḷideyādoḍāṃ karṇajane nillenute tegedeccu bobbiridanu
ಹೆಂಗುಸಂ ಕೊಂದದಟತನದಿಂದೆ ಬಂಡಿಯಂ । ಭಂಗಿಸಿದ ಬಲ್ಪಿಂದಲೆತ್ತು ಕತ್ತೆಯನಿರಿದ । ತುಂಗವಿಕ್ರಮದಿಂದೆ ಹಕ್ಕಿ ಹಾವಂ ಸದೆದ ಸಾಹಸದೆ ಬೆರೆತಿರ್ದೊಡೆ ॥
ಸಂಗರದೊಳಾಳಹನೆ ಗೋಪನವನಂ ಯುದ್ಧ । ರಂಗದೊಳ್ ತೊಲಗಿಪುದೆನಗೆ ಪರಾಕ್ರಮವೆ ನಿ । ನ್ನಂಗವಣಿಯಾವುದೆಮ್ಮೊಡನೆ ಸೆಣಸಿದೆಯೆನಂತೆ ತೆಗೆದೆಚ್ಚನನುಸಾಲ್ವನು
heṃgusaṃ koṃdadaṭatanadiṃde baṃḍiyaṃ । bhaṃgisida balpiṃdalettu katteyanirida । tuṃgavikramadiṃde hakki hāvaṃ sadeda sāhasade beretirdoḍe ॥
saṃgaradoḷāḷahane gōpanavanaṃ yuddha । raṃgadoḷ tolagipudenage parākramave ni । nnaṃgavaṇiyāvudemmoḍane seṇasideyenaṃte tegedeccananusālvanu
ಎಲೆವೊ ಖಳ ನೀನರಿಯದಿರ್ದೊಡೇನಚ್ಯುತಂ । ತಿಳಿಯೆ ಗೋಪಾಲನಲ್ಲವೆ ಕಪಟರೂಪದಿಂ । ಮುಳಿದು ದುಷ್ಟರನೈದೆ ಶಿಕ್ಷಿಸಿದೆ ಮಾಣ್ದಪನೆ ನೊಣನೂರಿ ಮದಗಜವನು ॥
ಬಳಲಿಪುದು ಗಡ ದಿಟಂ ನಿನಗಸುರಕುಲಮಥನ । ನಳಕುವನೆ ಶೀವಾಶೀವಾ ನಿನ್ನೊಡನೆ ಸೆಣಸುವೊಡೆ । ಬಲವಂತರಾವಲ್ಲ ನೋಡು ಸಾಕಿನ್ನೆನುತೆ ತೆಗೆದೆಚ್ಚನಿನಜಸೂನು
elevo khaḷa nīnariyadirdoḍēnacyutaṃ । tiḷiye gōpālanallave kapaṭarūpadiṃ । muḷidu duṣṭaranaide śikṣiside māṇdapane noṇanūri madagajavanu ॥
baḷalipudu gaḍa diṭaṃ ninagasurakulamathana । naḷakuvane śīvāśīvā ninnoḍane seṇasuvoḍe । balavaṃtarāvalla nōḍu sākinnenute tegedeccaninajasūnu
ಕರ್ಣಜನ ಕಣೆಗಳಂ ಕತ್ತರಿಸಿ ಪೊಸಮಸೆವೊ । ಗರ್ನಭೋಮಂಡಲವನಂಡಲೆಯಲೊಪ್ಪುವ ಸು । ವರ್ಣಪುಂಖದ ಸರರ್ಳಗರೆದನನುಸಾಲ್ವನದನೆಲ್ಲಮಂ ತತ್‍ಕ್ಷಣದೊಳು ॥
ನಿರ್ಣಯಿಸಿ ವೃಷಕೇತು ಕೈಕೊಂಡನಿಸುಗೆಯಂ । ದುರ್ನಿರೀಕ್ಷಣಮಾದುದರಸ ಕೇಳದನೆನಗೆ । ವರ್ಣೀಸುವೊಡರಿದು ಕೂರಂಬುಗಳ್ಗಂಬರದೊಳಿಂಬಿಲ್ಲಮೆಂಬೊಲಾಯ್ತು
karṇajana kaṇegaḷaṃ kattarisi posamasevo । garnabhōmaṃḍalavanaṃḍaleyaloppuva su । varṇapuṃkhada sararḷagaredananusālvanadanellamaṃ tatkṣaṇadoḷu ॥
nirṇayisi vr̥ṣakētu kaikoṃḍanisugeyaṃ । durnirīkṣaṇamādudarasa kēḷadanenage । varṇīsuvoḍaridu kūraṃbugaḷgaṃbaradoḷiṃbillameṃbolāytu
ಮಂಡಲಾಕೃತಿಯಲ್ಲದಿರದು ನೋಡಲ್ಕೆ ಕೋ । ದಂಡವಂಬುಗಿವ ಹೂಡುವ ಬಿಡುವ ಭೇದಮಂ । ಕಂಡವರದಾರಸ್ತಮಯಮಾದುದೆಣ್ಣೆಸೆಗಳನುಸಾಲ್ವನಳವಳಿದನು ॥
ದಿಂಡುರುಳಿತಾತನ ಚತುರ್ಬಲಂ ಬಳಿಕ ಕೋ । ದಂಡಮಂ ಕೊಂಡವನ ರಥದೆಡೆಗೆ ಬಂದೆಳೆದು । ಕೊಂಡು ಕೃಷ್ಣನ ಪದಾಂಬುಜದ ಹೊರೆಗಾಗಿ ನಡೆತಂದಿಳುಹಿ ಕೈಮುಗಿದನು
maṃḍalākr̥tiyalladiradu nōḍalke kō । daṃḍavaṃbugiva hūḍuva biḍuva bhēdamaṃ । kaṃḍavaradārastamayamādudeṇṇesegaḷanusālvanaḷavaḷidanu ॥
diṃḍuruḷitātana caturbalaṃ baḷika kō । daṃḍamaṃ koṃḍavana rathadeḍege baṃdeḷedu । koṃḍu kr̥ṣṇana padāṃbujada horegāgi naḍetaṃdiḷuhi kaimugidanu
ಕೊಂಡಾಡಿ ಶೌರಿ ತಕ್ಕೈಸಿದಂ ನೃಪನಪ್ಪಿ । ಮುಂಡಾಡಿ ಮನ್ನಿಸಿದನರ್ಜುನಾದಿಗಳಿಳಿಗೆ । ಗೊಂಡಾಡಿದರ್ ತಮ್ಮ ಸಾಸಮಂ ಸತಿಯರ್ ಪೊಗಳ್ದರೀ ಕ್ಷತ್ರಿಯರೊಳು ॥
ಉಂಡಾಡಿಗಳ್ ಪಲಬರಿರ್ದೊಡೇನಹುದಿವಂ । ಗಂಡಾಡಿದುರಭಾಷೆಗರಿಗಳ ಶಿರಂಗಳಂ । ಚೆಂಡಾಡಿ ಪಗೆವನಂ ಪಿಡಿದೊಪ್ಪಿಸಿದನೆಂದರೆಲ್ಲರುಂ ಕರ್ಣಜನನು
koṃḍāḍi śauri takkaisidaṃ nr̥panappi । muṃḍāḍi mannisidanarjunādigaḷiḷige । goṃḍāḍidar tamma sāsamaṃ satiyar pogaḷdarī kṣatriyaroḷu ॥
uṃḍāḍigaḷ palabarirdoḍēnahudivaṃ । gaṃḍāḍidurabhāṣegarigaḷa śiraṃgaḷaṃ । ceṃḍāḍi pagevanaṃ piḍidoppisidaneṃdarellaruṃ karṇajananu
ಯುದ್ಧಶ್ರಮಂ ಪೋಗೆ ಕಂದೆರೆದನನಿತರೊಳ್ । ಬುದ್ಧಿ ಪಲ್ಲಟಿಸಿತನುಸಾಲ್ವಂಗೆ ಕಂಡನನಿ । ರುದ್ಧನ ಪಿತಾಮಹನ ಮೂರ್ತಿಯಂ ದೇವ ನೀನಾವನೆಂದಾನರಿಯದೆ ।
ಬದ್ಧಮಾಯಾಪಾಶನಾಗಿ ಬಿದ್ದಿ ಹೆನೆನ್ನ । ನುದ್ಧರಿಸು ಮರೆವೊಕ್ಕೆನೆನೆ ಕೇಳ್ದು ಕರ್ಣಜಂ । ಕ್ರುದ್ಧನಾದಂ ಜರೆದು ನುಡಿದ ಕಲಿತನಮೆಲ್ಲಿ ಸುಡು ನಿನ್ನೊಡಲನೆಂದನು
yuddhaśramaṃ pōge kaṃderedananitaroḷ । buddhi pallaṭisitanusālvaṃge kaṃḍanani । ruddhana pitāmahana mūrtiyaṃ dēva nīnāvaneṃdānariyade ।
baddhamāyāpāśanāgi biddi henenna । nuddharisu marevokkenene kēḷdu karṇajaṃ । kruddhanādaṃ jaredu nuḍida kalitanamelli suḍu ninnoḍalaneṃdanu
ರೋಷಮೇತಕೆ ಮರುಳೆ ವೃಷಕೇತು ಕೃಷ್ಣನಂ । ದ್ವೇಷದಿಂ ಬೈದೊಡಂ ತನ್ನ ಮನವಾರೆ ಸಂ । ತೋಷದಿಂ ನುತಿಗೈದೊಡಂ ಪೋಗದಿರ್ದಪುವೆ ಕೋಟಿಜನ್ಮದೊಳೊದವಿದ ॥
ದೋಷಂಗಳಿಂದು ವೀರಾವೇಶದಿಂದೆ ನಾಂ। ದೂಷೆಸಿದೊಡೀ ದಯಾಂಬುಧಿ ಕಾಯದುಳಿವನೆ ವಿ । ಶೇಷಸುಕೃತದ ಫಲಂ ದೊರೆದುದೆನಗೆಂದವಂ ಬಿದ್ದ ನಚ್ಚ್ಯುತನಂಘ್ರಿಗೆ
rōṣamētake maruḷe vr̥ṣakētu kr̥ṣṇanaṃ । dvēṣadiṃ baidoḍaṃ tanna manavāre saṃ । tōṣadiṃ nutigaidoḍaṃ pōgadirdapuve kōṭijanmadoḷodavida ॥
dōṣaṃgaḷiṃdu vīrāvēśadiṃde nāṃ। dūṣesidoḍī dayāṃbudhi kāyaduḷivane vi । śēṣasukr̥tada phalaṃ doredudenageṃdavaṃ bidda naccyutanaṃghrige
ನಗುತೆ ಮಧುಸೂದನಂ ಪ್ರೀತಿಯಿಂದಾತನಂ । ತೆಗೆದಪ್ಪಿ ನೀನಿಂದು ಮೊದಲಾಗಿ ದಿವಿಜರ್ಗೆ । ಪಗೆಯೆನಿಸದೆಮ್ಮೊಡನೆ ಧರ್ಮಜನ ಯಜ್ಞದ ಸಹಾಯಕಿಲ್ಲಿಪ್ಪುದೆಂದು ॥
ಮಿಗೆ ಮನ್ನಿಪನಿತರೊಳ್ ಪ್ರದ್ಯುಮ್ನನುಳಿದ ಸೇ । ನೆಗಳೆಲ್ಲಮಂ ಗೆಲ್ದು ತುರಗಮಂ ಬಿಡಿಸಿಕೊಂ । ಡಗಧರನ ಸಮ್ಮುಖಕೆ ತಂದು ನಿಲಿಸಿದನಿತ್ತಭಾಷೆಗುತ್ತಾರಮಾಗೆ
nagute madhusūdanaṃ prītiyiṃdātanaṃ । tegedappi nīniṃdu modalāgi divijarge । pageyenisademmoḍane dharmajana yajñada sahāyakillippudeṃdu ॥
mige mannipanitaroḷ pradyumnanuḷida sē । negaḷellamaṃ geldu turagamaṃ biḍisikoṃ । ḍagadharana sammukhake taṃdu nilisidanittabhāṣeguttāramāge
ಬಳಿಕ ಜಯಲಾಭದಿಂದಸುರಾರಿ ಪಾಂಡವರ್ । ಮೊಳಗುವ ನಿಖಿಳವಾದ್ಯಕುಲದಿಂದೆ ವಂದಿಗಳ । ಕಳಕಳದ ರಭಸದಿಂ ಬಳಸಿದ ಸಮಸ್ತ ಪುರುಷ ಸ್ತ್ರೀಕದಂಬದೊಡನೆ ॥
ಪೊಳಲಂ ಪುಗಲ್ಕಾ ಯುಧಿಷ್ಠಿರ ನರೇಶ್ವರಂ । ನಿಳಯಂಗಳಿತ್ತನಿಬರೆಲ್ಲರಂ ಸತ್ಕರಿಸಿ । ಕಳುಹಿ ನಿಜಭವನದೊಳ್ ದೇವಪುರಲಕ್ಷ್ಮೀಪತಿಯನುಪಚರಿಸುತಿರ್ದನು
baḷika jayalābhadiṃdasurāri pāṃḍavar । moḷaguva nikhiḷavādyakuladiṃde vaṃdigaḷa । kaḷakaḷada rabhasadiṃ baḷasida samasta puruṣa strīkadaṃbadoḍane ॥
poḷalaṃ pugalkā yudhiṣṭhira narēśvaraṃ । niḷayaṃgaḷittanibarellaraṃ satkarisi । kaḷuhi nijabhavanadoḷ dēvapuralakṣmīpatiyanupacarisutirdanu
Keys: ← → turn the page, J K step through the verses.
Illustration: Verse & Place (Project-owned).