Skip to content

Jaimini Bharata 8.14

ಊಹಿಸುವೊಡರಿದೆನೆ ತುರಂಗಮದ ಕೂಡೆ ಸ । ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ । ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ತಡೆಗೊಂಡ ಕಾನನಮೆನೆ ॥ ಮೋಹರಂ ಭೂತಳಮನೊಳಕೊಂಡು ಬರುತಿರ್ದು । ದಾಹಯಂ ಬಳಿಕ ದಕ್ಷಿಣದಿಶಾಮುಖಮಾಗಿ । ಮಾಹಿಷ್ಮತೀಪಟ್ಟನದ ಬಹಿರ್ಭಾಗದುಪವನದೆಡೆಗೆ ನಡೆತಂದುದು

ūhisuvoḍaridene turaṃgamada kūḍe sa । nnāhadiṃ mēredappida mahārṇavada pra । vāhamene taḷtiḍida tarugulmalategaḷiṃ taḍegoṃḍa kānanamene ॥ mōharaṃ bhūtaḷamanoḷakoṃḍu barutirdu । dāhayaṃ baḷika dakṣiṇadiśāmukhamāgi । māhiṣmatīpaṭṭanada bahirbhāgadupavanadeḍege naḍetaṃdudu

Report an error