ಸಂಧಿ ೮ · ಸಂಧಿ ೮
Sandhi 8
saṃdhi 8
॥
Lakshmisha continues the story of the horse sacrifice in sandhi 8.
49 verses·Kannada with transliteration
ರಾಯ ಕೇಳನುಸಾಲ್ವನಂ ಕೂಡಿಕೊಂಡು ಕಮ । ಲಾಯತಾಂಬಕನಖಿಳಯಾದವರ ಗಡಣದಿಂ । ದಾ ಯುಧಿಷ್ಠಿರನೃಪನ ಸನ್ಮಾನಮಂ ತಳೆಯತಿರೆ ಜಾಹ್ನವೀತಟದೊಳು ॥
ಆಯಿತಧ್ವರಶಾಲೆ ಶಾಸ್ತ್ರವಿಶ್ರುತದ ವಿವಿ । ಧಾಯತ ವಿಚಿತ್ರ ವೈಭವದಿಂದೆ ಬಳಿಕಾ ಮ । ಹಾ ಯಾಗದನುಪಮ ಪ್ರಾರಂಭಕಾಲದ ವಸಂತರ್ತು ಸಂಭಿವಿಸಿತು
rāya kēḷanusālvanaṃ kūḍikoṃḍu kama । lāyatāṃbakanakhiḷayādavara gaḍaṇadiṃ । dā yudhiṣṭhiranr̥pana sanmānamaṃ taḷeyatire jāhnavītaṭadoḷu ॥
āyitadhvaraśāle śāstraviśrutada vivi । dhāyata vicitra vaibhavadiṃde baḷikā ma । hā yāgadanupama prāraṃbhakālada vasaṃtartu saṃbhivisitu
ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗ । ದಿಂದೆ ನಿರುತಂ ಪ್ರಬಲಮಾಗಿ ಬೀಸುವ ಗಾಳಿ । ಚಂದನದ್ರುಮಮಂ ತೊಡರ್ದಹಿಗಳಾಹಾರವಂ ಕೊಂಡುಕೊಂಡು ಮಿಕ್ಕು ॥
ಮಂದತ್ವಮಂ ತಳೆದು ಮಲಯಾಚಲದ ಸೀಮೆ । ಯಿಂದೆ ಸರಸಿಜದೊಳ್ ಭ್ರಮಿಸುವ ಮರಿದುಂಬಿಗಳ । ವೃಂದಮಂ ಕೂಡಿಕೊಂಡಳೆವೆಲರ್ ಬಂದುದು ವಿರಹಿಗಳೆದೆಯಾರುವಂತೆ
oṃdeḍeyoḷaṃ tanage nilavilladativēga । diṃde nirutaṃ prabalamāgi bīsuva gāḷi । caṃdanadrumamaṃ toḍardahigaḷāhāravaṃ koṃḍukoṃḍu mikku ॥
maṃdatvamaṃ taḷedu malayācalada sīme । yiṃde sarasijadoḷ bhramisuva mariduṃbigaḷa । vr̥ṃdamaṃ kūḍikoṃḍaḷevelar baṃdudu virahigaḷedeyāruvaṃte
ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ । ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ । ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ ॥
ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ । ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ । ಪೊರಮುಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು
miruguva taḷirdōraṇaṃgaḷaṃ kaṭṭisute । marigōgilegaḷa bāygaḷa balida baṃdhanada । seregaḷaṃ biḍisutte tuṃbigaḷa daḷake kammalargaḷaṃ sūreviḍute ॥
kiruvelaroḷettaluṃ sārisute virahigaḷa । neragisute jonnada jasaṃ perce madhunr̥paṃ । poramuṭṭu māgiyannuḍugisi samasta vanarāṣṭramaṃ kaikoṃḍanu
ಫೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ । ಳೆಸೆವ ಸಂಪಗೆ ಪೊಚ್ಪ ಪೊಂದಾವರೆಯೊಳೊಳ್ಪವ। ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು ॥
ಎಸೆದುವೊಂದೊಂದರೊಳ್ ಮದುಮಾಸಕಂಗಜನ । ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ । ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ
phosamāvaśōkeyoḷ mariduṃbi kōgileyo । ḷeseva saṃpage pocpa poṃdāvareyoḷoḷpava। ḍasida malligeyalar beḷata beḷdiṃgaḷoḷ giḷiviṃḍu banasiriyoḷu ॥
eseduvoṃdoṃdaroḷ madumāsakaṃgajana । deseyaṃte khatiyaṃte dhanadaṃte jasadaṃte । pasurveḷasinaṃte keṃpasitaṃ paḷadi paḷukupaccegaḷa baṇṇadiṃde
ತಳಿತೆಸೆವ ತರುಗಳ ನೆಳಲ್ಗಳಂ ಸಾರ್ದು ಶೀ । ತಳದ ನಿರ್ಮಲಸುವಾರಿಯನೀಂಟಿ ನವ್ಯಪರಿ। ಮಳದಿಂದೆ ಸೊಗಸ ತೀಡುವ ತೆಳುವೆಲರ್ಗೆ ಮೆಯ್ಯೊಡ್ಡಿ ಮಾರ್ಗಶ್ರಮವನು ॥
ಕಳೆದರಧ್ವಗರೋಪದೊಳ್ ನೆರೆದು ವಿರಹಿಗಳ್ । ಮಲಯಜದ ಘನಸಾರದೊಳ್ ತಂಪುವೆತ್ತು ನಿ । ಚ್ಚಳದ ಕರುವಾಡದೊಳ್ ಭೋಗಿಸಿದರಂದು ಚೈತ್ರಾಗಮದ ಸಂಭ್ರಮದೊಳು
taḷiteseva tarugaḷa neḷalgaḷaṃ sārdu śī । taḷada nirmalasuvāriyanīṃṭi navyapari। maḷadiṃde sogasa tīḍuva teḷuvelarge meyyoḍḍi mārgaśramavanu ॥
kaḷedaradhvagarōpadoḷ neredu virahigaḷ । malayajada ghanasāradoḷ taṃpuvettu ni । ccaḷada karuvāḍadoḷ bhōgisidaraṃdu caitrāgamada saṃbhramadoḷu
ಆ ಚೈತ್ರ ಮಾಸಮೆಸೆದುದು ಧರ್ಮಜನ ಕೀರ್ತಿ । ಭೂಚಕ್ರಮಂ ಮುಸುಕಿದಂತೆ ಬೆಳುದಿಂಗಳಿರೆ । ಯಾಚಕರನೆತ್ತಲುಂ ಕೂಗಿ ಕರೆವಂತುಲಿಯೆ ಕೋಗಿಲೆಗಳಿಳೆಯ ಜನದ ॥
ಲೋಚನಕುದಯಿಪ ಪೊಸದಂತೆ ಚೂತಾಂಕುರಂ । ಗೋಚರಿಸೆ ಪಾತಕಕ್ಷಯದಂತೆ ಮಾಗಿಯ ವಿ । ಮೋಚನಂ ಕಾಣಿಸಲ್ ಪುಣ್ಯಯವಾಸನೆಯಂತೆ ದಕ್ಷಿಣದ ವಾಯು ಸುಳಿಯೆ
ā caitra māsamesedudu dharmajana kīrti । bhūcakramaṃ musukidaṃte beḷudiṃgaḷire । yācakaranettaluṃ kūgi karevaṃtuliye kōgilegaḷiḷeya janada ॥
lōcanakudayipa posadaṃte cūtāṃkuraṃ । gōcarise pātakakṣayadaṃte māgiya vi । mōcanaṃ kāṇisal puṇyayavāsaneyaṃte dakṣiṇada vāyu suḷiye
ಧಾತ್ರೀಶ ಕೇಳ್ ಬಳಿಕ ಧರ್ಮಜಂ ತಾಮರಸ । ನೇತ್ರ ವೇದವ್ಯಾಸರಾಜ್ಞೆಯಿಂದಖಿಳರ್ಷಿ । ಗೋತ್ರದ ಮುನಿಗಳೆಲ್ಲರಂ ಕರೆಸಿ ಮೇಲವರನುಜ್ಞೆಯಿಂದಾ ಯಜ್ಞದ ॥
ಸೂತ್ರಪ್ರಕಾರದಿಂದಾರಾಜಿಸುವ ಬಹಿಃ । ಕ್ಷೇತ್ರದಧ್ವರಶಾಲೆಯೊಳ್ ದೀಕ್ಷೆಯಂ ತಳೆದು । ಚೈತ್ರಸಿತಪೌರ್ಣಮಾಸಿಯ ದಿನದೆ ಬಿಟ್ಟನರ್ಚಿಸಿ ಹಯುವನುತ್ಸವದೊಳು
dhātrīśa kēḷ baḷika dharmajaṃ tāmarasa । nētra vēdavyāsarājñeyiṃdakhiḷarṣi । gōtrada munigaḷellaraṃ karesi mēlavaranujñeyiṃdā yajñada ॥
sūtraprakāradiṃdārājisuva bahiḥ । kṣētradadhvaraśāleyoḷ dīkṣeyaṃ taḷedu । caitrasitapaurṇamāsiya dinade biṭṭanarcisi hayuvanutsavadoḷu
ಇಂದುಕುಲದಗ್ಗಳೆಯ ಪಾಂಡುವಸುಧಾಪಾಲ । ನಂದನ ಯುಧಿಷ್ಠಿರ ನರೇಂದ್ರನಧ್ವರಹಯಮಿ । ದಂ ದಿಟ್ಟರಾರಾದೊಡಂ ಕಟ್ಟಿಕೊಳಲಾರ್ಪೊಡಿಳೆಯೊಳೆಂಬೀ ಲಿಪಿಯನು ॥
ಸಂದಿಸಿ ಬರೆದ ಕನಕಪಟ್ಟ ಮನದರ ಪಣೆಯೊ । ಳೊಂದಿಸಿ ತುರಂಗಮವನಮಲಸ್ತ್ರಾಭರಣ । ದಿಂ ದಿವ್ಯಗಂಧಮಾಲ್ಯಾಕ್ಷತೆಗಳಿಂದಲಂಕರಿಸಿ ಬಿಟ್ಟರ್ ಶುಭದೊಳು
iṃdukuladaggaḷeya pāṃḍuvasudhāpāla । naṃdana yudhiṣṭhira narēṃdranadhvarahayami । daṃ diṭṭarārādoḍaṃ kaṭṭikoḷalārpoḍiḷeyoḷeṃbī lipiyanu ॥
saṃdisi bareda kanakapaṭṭa manadara paṇeyo । ḷoṃdisi turaṃgamavanamalastrābharaṇa । diṃ divyagaṃdhamālyākṣategaḷiṃdalaṃkarisi biṭṭar śubhadoḷu
ಶ್ಲಾಘ್ಯದಿಂದಾದ ಮಜ್ಜನಭೋಜನದ ಸದಾ । ರೋಗ್ಯದಿಂ ತಾಂಬೂಲ ವಸ್ತ್ರ ಭೂಷಣದ ಸೌ । ಭಾಗ್ಯದಿಂ ಕುಸುಮ ಪರಿಮಳಲೇಪನಂಗಳಿಂ ಸ್ತ್ರೀಪುರುಷರೇಕಾಂತಕೆ ॥
ಯೋಗ್ಯವಹ ಸಜ್ಜೆವನೆಯೊಳಗೀರ್ವರುಂ ದಿವ್ಯ । ಭೋಗ್ಯಮೆನಿಪೊಂದು ಮಂಚದೊಳೊರಗಿ ಕಾಮವೈ । ರಾಗ್ಯಮಾರ್ಗಿರ್ಪುದಸಿಪತ್ರವ್ರತಂ ತದ್ವ್ರತದೊಳರಸನಿರುತಿರ್ದನು
ślāghyadiṃdāda majjanabhōjanada sadā । rōgyadiṃ tāṃbūla vastra bhūṣaṇada sau । bhāgyadiṃ kusuma parimaḷalēpanaṃgaḷiṃ strīpuruṣarēkāṃtake ॥
yōgyavaha sajjevaneyoḷagīrvaruṃ divya । bhōgyamenipoṃdu maṃcadoḷoragi kāmavai । rāgyamārgirpudasipatravrataṃ tadvratadoḷarasanirutirdanu
ತದ್ಯಾಗಮೊಂದು ಬರಿಸಕೆ ಮುಗಿವುದನ್ನೆಗಂ । ಸದ್ಯಾಜಮಾನದೀಕ್ಷೆಯನವನಿಪಂ ತಾಳ್ದ । ನುದ್ಯುಕ್ತರಾದರರ್ಜುನನೊಡನೆ ಹಯರಕ್ಷೆಗಸುರಹರನಾಜ್ಞೆಯಿಂದೆ ॥
ಉದ್ಯತ್ಪರಾಕ್ರಮಿಗಳನುಸಾಲ್ವ ಸಾತ್ಯಕಿ । ಪ್ರದ್ಯುಮ್ನ ಕೃತವರ್ಮ ಯೌವನಾಶ್ವಾತಿಬಲ । ಖದ್ಯೋತಸುತಸೂನು ಮೊದಲಾದ ವೀರರೊದಗಿತು ಚಾತುರಂಗದೊಡನೆ
tadyāgamoṃdu barisake mugivudannegaṃ । sadyājamānadīkṣeyanavanipaṃ tāḷda । nudyuktarādararjunanoḍane hayarakṣegasuraharanājñeyiṃde ॥
udyatparākramigaḷanusālva sātyaki । pradyumna kr̥tavarma yauvanāśvātibala । khadyōtasutasūnu modalāda vīrarodagitu cāturaṃgadoḍane
ಇಭಮುಖಾರ್ಚನೆಯಂ ನವಗ್ರಹದ ಪೂಜೆಯಂ । ವಿಭವದಿಂ ಮಾಡಿ ಧರ್ಮಜ ಭೀಮ ಕುಂತಿಗ । ಳ್ಗಭಿನಮಿಸಿ ಕೃಷ್ಣನ ಪದಾಂಬುಜಕ್ಕೆರಗಿ ದಿಕ್ಪಾಲರಂ ಬೇಡಿಕೊಂಡು ॥
ಶುಭಮಹೂರ್ತದೊಳರಸಿಯರ ಸೇಸೆವತ್ತ ಮುನಿ । ಸಭೆಗೆ ವಂದಿಸಿ ಪರಕೆಗೊಂಡು ಪಾಠಕರ ಜಯ । ರಭಸದಿಂದೆಸೆವ ಮಂಗಳವಾದಯ ಘೋಷದಿಂದರ್ಜುನಂ ಪೊರಮಟ್ಟನು
ibhamukhārcaneyaṃ navagrahada pūjeyaṃ । vibhavadiṃ māḍi dharmaja bhīma kuṃtiga । ḷgabhinamisi kr̥ṣṇana padāṃbujakkeragi dikpālaraṃ bēḍikoṃḍu ॥
śubhamahūrtadoḷarasiyara sēsevatta muni । sabhege vaṃdisi parakegoṃḍu pāṭhakara jaya । rabhasadiṃdeseva maṃgaḷavādaya ghōṣadiṃdarjunaṃ poramaṭṭanu
ಮುರಹರನ ರಾಣಿಯರ್ ಧುರಧೀರ ಕರ್ಣಸುತ । ನರಸಿಯೆಂದೆನ್ನ ಪೊಗಳ್ವಂತೆ ಮಿಗೆ ಸಂಗರದೊ । ಳರಿಗಳಂ ಗೆಲ್ವುದೆಂದಾರತಿಯನೆತ್ತಿ ಮುತ್ತಿನ ಸೇಸೆಗಳನೆ ಸೂಸಿ ॥
ಭರದಿಂದ ಬಂದಪ್ಪದಂಗನೆಯ ಮೊಗನೋಡಿ। ಕುರುಳುಗಳನುಗುರ್ಗಳಿಂ ತಿದ್ದಿ ಮುದ್ದಿಸಿ ತನ್ನ । ಬೆರಳುಂಗರಂಗೊಟ್ಟು ಸಂತೈಸಿ ವೃಷಕೇತು ಕಾಂತೆಯಂ ಬೀಳ್ಕೊಂಡನು
muraharana rāṇiyar dhuradhīra karṇasuta । narasiyeṃdenna pogaḷvaṃte mige saṃgarado । ḷarigaḷaṃ gelvudeṃdāratiyanetti muttina sēsegaḷane sūsi ॥
bharadiṃda baṃdappadaṃganeya moganōḍi। kuruḷugaḷanugurgaḷiṃ tiddi muddisi tanna । beraḷuṃgaraṃgoṭṭu saṃtaisi vr̥ṣakētu kāṃteyaṃ bīḷkoṃḍanu
ಅಂಕೆಯಿಂದರ್ಜುನಂಗಂದು ಯಾದವಸೈನ್ಯ । ಮಂ ಕೂಡಿಕೊಟ್ಟು ದಳಪತಿಯಾಗಿ ತನಯನಂ । ಮುಂಕೊಳಿಸಿ ಕರ್ಣಜ ಸುವೇಗಾನುಸಾಲ್ವರ ಸಹಾಯಮಂ ಕೈವರ್ತಿಸಿ ॥
ಪಂಕರುಹಲೋಚನಂ ಪೊರಮಟ್ಟನಿಬರೆಲ್ಲ । ರಂ ಕಳುಹಿ ತಿರುಗಿದಂ ಸ್ವೇಚ್ಛೆಯಿಂದಾ ಹಯಂ । ತೆಂಕಮೊಗಮಾಗಿ ನಡೆದುದು ಕರಿತುರಗರಥಪದಾತಿಗಳ್ ಸಂದಣಿಸಲು
aṃkeyiṃdarjunaṃgaṃdu yādavasainya । maṃ kūḍikoṭṭu daḷapatiyāgi tanayanaṃ । muṃkoḷisi karṇaja suvēgānusālvara sahāyamaṃ kaivartisi ॥
paṃkaruhalōcanaṃ poramaṭṭanibarella । raṃ kaḷuhi tirugidaṃ svēccheyiṃdā hayaṃ । teṃkamogamāgi naḍedudu karituragarathapadātigaḷ saṃdaṇisalu
ಊಹಿಸುವೊಡರಿದೆನೆ ತುರಂಗಮದ ಕೂಡೆ ಸ । ನ್ನಾಹದಿಂ ಮೇರೆದಪ್ಪಿದ ಮಹಾರ್ಣವದ ಪ್ರ । ವಾಹಮೆನೆ ತಳ್ತಿಡಿದ ತರುಗುಲ್ಮಲತೆಗಳಿಂ ತಡೆಗೊಂಡ ಕಾನನಮೆನೆ ॥
ಮೋಹರಂ ಭೂತಳಮನೊಳಕೊಂಡು ಬರುತಿರ್ದು । ದಾಹಯಂ ಬಳಿಕ ದಕ್ಷಿಣದಿಶಾಮುಖಮಾಗಿ । ಮಾಹಿಷ್ಮತೀಪಟ್ಟನದ ಬಹಿರ್ಭಾಗದುಪವನದೆಡೆಗೆ ನಡೆತಂದುದು
ūhisuvoḍaridene turaṃgamada kūḍe sa । nnāhadiṃ mēredappida mahārṇavada pra । vāhamene taḷtiḍida tarugulmalategaḷiṃ taḍegoṃḍa kānanamene ॥
mōharaṃ bhūtaḷamanoḷakoṃḍu barutirdu । dāhayaṃ baḷika dakṣiṇadiśāmukhamāgi । māhiṣmatīpaṭṭanada bahirbhāgadupavanadeḍege naḍetaṃdudu
ಆ ನಗರದರಸು ನೀಲಧ್ವಜಂ ಮೇಣವನ । ಸೂನು ಪ್ರವೀರನೆಂಬವನಾಗಲ್ಲಿಗು । ದ್ಯಾನಕೇಳಿಗೆ ಬಂದನೊಲವಿಂದೆ ಮದನಮಂಜರಿಯೆಂಬ ಕಾಂತೆಯೊಡನೆ ॥
ಆ ನಳಿನಲೋಚನೆಯ ಕೆಳದಿಯರ್ ಬಿಡಯದಿಂ । ದಾನಂದನದೊಳು ಸಂಚರಿಸುತಿರ್ದರ್ ಬಳಿಕ । ಮೀನಕೇತನ ಮಹೀಪಾನರಮನೆಯ ಸೊಕ್ಕಾನೆಗಳ ತಂಡದಂತೆ
ā nagaradarasu nīladhvajaṃ mēṇavana । sūnu pravīraneṃbavanāgalligu । dyānakēḷige baṃdanolaviṃde madanamaṃjariyeṃba kāṃteyoḍane ॥
ā naḷinalōcaneya keḷadiyar biḍayadiṃ । dānaṃdanadoḷu saṃcarisutirdar baḷika । mīnakētana mahīpānaramaneya sokkānegaḷa taṃḍadaṃte
ನೋಡಿ ತಿಲಕವನಪ್ಪಿ ಕುರುವಕವನೆಳನಗೆಯೊ । ಳೂಡಿ ಸಂಪಗೆಯಂ ಪ್ರಿಯಂಗುವಂ ಸೋಂಕಿ ಮುರಿ । ದಾಡಿ ಚೂತಮನೊದೆರಶೋಕೆಯಂ ಬಕುಳಮಂ ಮುಕ್ಕುಳಿಸಿ ಮದ್ಯದಿಂದೆ ॥
ಪಾಡಿ ಪುನ್ನಾಗವಂ ಕರ್ಣಿಕಾರವನೆ ಕೊಂ । ಡಾಡಿ ಮಂದಾರಮಂ ಜಾಣ್ಮುಡಿದು ಪುಷ್ಪಿತಂ । ಮಾಡಿ ತೋರಿದರಂಬುಜಾಕ್ಷಿಯರ್ ನಾನಾವಿಲಾಸದಿಂದಾ ನನದೊಳು
nōḍi tilakavanappi kuruvakavaneḷanageyo । ḷūḍi saṃpageyaṃ priyaṃguvaṃ sōṃki muri । dāḍi cūtamanoderaśōkeyaṃ bakuḷamaṃ mukkuḷisi madyadiṃde ॥
pāḍi punnāgavaṃ karṇikāravane koṃ । ḍāḍi maṃdāramaṃ jāṇmuḍidu puṣpitaṃ । māḍi tōridaraṃbujākṣiyar nānāvilāsadiṃdā nanadoḷu
ಮುಟ್ಟಲ್ ಪ್ರಿಯಂಗು ಪೂವಹ ತರಳೆಯರ ಕೈಗೆ । ನಿಟ್ಟಿಸಲ್ ತಿಲಕಮಲರಹ ನೀರೆಯರ ಕಣ್ಗೆ । ಮೆಟ್ಟಿದೊಡಶೋಕಮಂಕುರಮಪ್ಪ ಬಾಲೆಯರ ಮೆಲ್ಲಡಿಗೆ ಮಿಗೆ ಬೆಳ್ನಗೆ ॥
ಪುಟ್ಟಲ್ಕೆ ಸಂಪಗೆ ಮುಗುಳ್ದೋರ್ಪ ಸುದತಿಯರ । ಬಟ್ಟಮೊಗಕೆಣೆಯಹವೆ ತಾವರೆಗಳೆಂದವಂ । ಬಿಟ್ಟು ತುಂಬಿದ ಜೌವನೆಯರ ತನುಪರಿಮಳಕೆ ಕವಿದುವಾ ಬನದಳಿಗಳು
muṭṭal priyaṃgu pūvaha taraḷeyara kaige । niṭṭisal tilakamalaraha nīreyara kaṇge । meṭṭidoḍaśōkamaṃkuramappa bāleyara mellaḍige mige beḷnage ॥
puṭṭalke saṃpage muguḷdōrpa sudatiyara । baṭṭamogakeṇeyahave tāvaregaḷeṃdavaṃ । biṭṭu tuṃbida jauvaneyara tanuparimaḷake kaviduvā banadaḷigaḷu
ಸಣ್ಣನಡು ಸೈನಿಮಿರೆ ತೋಳಮೊದಲೊಳ್ಪೆಸೆಯೆ । ತಿಣ್ಣಮೊಲೆಗಳ್ ಪೊದಳೆ ಬೆನ್ನ ಸೋರ್ಮುಡಿಯಲೆಯೆ । ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು ॥
ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ । ತಣ್ಣೆಲರ್ಗೊಡ್ಡಿ ಮೈಬೆಮರನಾರಿಸಿಕೊಂಡು । ಪೆಣ್ಣುವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು
saṇṇanaḍu sainimire tōḷamodaloḷpeseye । tiṇṇamolegaḷ podaḷe benna sōrmuḍiyaleye । kaṇṇa beḷagāgasavanāvarise mogametti tudigālgaḷiṃde niṃdu ॥
baṇṇavaḷiyada pūgaḷaṃ koydu beṃḍāgi । taṇṇelargoḍḍi maibemaranārisikoṃḍu । peṇṇuviṃḍā banadoḷalargaḷaṃ tamma tanuvina kaṃpiniṃ poredaru
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟಬ । ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ । ಥಿಲಮೆಂದು ಹರಿನೀಲದೆಸೆವೊಂದು ಸಣ್ಣಸರಳಂ ಮನೋಜಂ ನಿರ್ಮಿಸಿ ॥
ನಿಲಿಸಿ ನಿಗಿದನೊ ಮೂರುಕಟ್ಟನೆಡೆಗೆಡೆಗೆನಲ್ । ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿಂದೆ । ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ
niluki pūgoyva lalitāṃgiyara baṭṭaba । lmolegaḷaṃ poralāradasiya seḷenaḍuvidu śi । thilameṃdu harinīladesevoṃdu saṇṇasaraḷaṃ manōjaṃ nirmisi ॥
nilisi nigidano mūrukaṭṭaneḍegeḍegenal । sale rājisitu vaḷitrayada celvikeyiṃde । lalaneyara madhyadoḷogeda bāse kusumāpacayasamayadoḷ posatene
ತುಂಬಿಗಳನೋಡಿಸದ ಚಂಪಕಂ ಸೊಕ್ಕಾನೆ । ಯಂ ಬೆದರಿಸದ ಸಿಂಗಮಿಡಿದಂಧಕಾರಮಂ । ತುಂಬಿಸದಚಂದ್ರಮಂಡಲಮಿರಲ್ ಕಂಡಿಲ್ಲಿ ನಾವುಮಿರ್ದೊಡೆ ನಮ್ಮನು ॥
ಶಂಬರಾರಿಯ ಶರಂ ಕಾಡದಿರುಳಿನ ವಿರಹ । ಕೆಂಬ ನಿಶ್ಚಯದೊಳಗಲದೆ ಬಾಲಿಕೆಯರುರವ । ನಿಂಬುಗೊಂಡೆಣಿವಕ್ಕಿಯೆನಲೆಸೆದುವಲರ್ಗೊಯ್ವ ನೀರೆಯರ ನೆಲೆಮೊಲೆಗಳು
tuṃbigaḷanōḍisada caṃpakaṃ sokkāne । yaṃ bedarisada siṃgamiḍidaṃdhakāramaṃ । tuṃbisadacaṃdramaṃḍalamiral kaṃḍilli nāvumirdoḍe nammanu ॥
śaṃbarāriya śaraṃ kāḍadiruḷina viraha । keṃba niścayadoḷagalade bālikeyarurava । niṃbugoṃḍeṇivakkiyenaleseduvalargoyva nīreyara nelemolegaḷu
ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ । ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ । ನಳಿತೋಳ ಸಿರಿಸಮಂ ಸೆಳ್ಳುಗುರು ಕೇತಕಿಯ ನುಣ್ಮೊಗದ ತಾವರೆಯನು ॥
ತೊಳಗುವ ಸುನಾಸಿಕದ ಸಂಪಗೆಯನವಯವದೊ । ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ । ಗಳನರಸಿ ಕೊಯ್ಯರೆಂದವರ ನಡು ಚಿಂತಿಸಿಯೆ ಬಡವಾದುದೆನೆಲೆಸೆದುದು
moḷevalla molleyaṃ ceṃduṭiya baṃdugeya । neḷanageya malligeya nesaḷgaṇṇa naidilaṃ । naḷitōḷa sirisamaṃ seḷḷuguru kētakiya nuṇmogada tāvareyanu ॥
toḷaguva sunāsikada saṃpageyanavayavado । ḷaḷavaḍisi kusumagaṃdhiyarētakinnu pū । gaḷanarasi koyyareṃdavara naḍu ciṃtisiye baḍavādudenelesedudu
ಕರವೀರವರ್ಗಮಂ ಬಾಗಿಸಿದರದಟರಂ । ತಿರದೆ ಪುನ್ನಾಗಮಂ ಪತ್ತಿರಂಜಿಸಿದರ್ ಚ । ದುರಮಾವುಗರಂತೆ ಜಾತಿಯಂತರವನರಿದಾಯ್ದುರವನೀಶರಂತೆ ॥
ಸುರಗಿಯಂ ತುಡುಕಿದರ್ ಭಟರಂತೆ ಬಗೆಗೆಳಸಿ । ಪರಿದರ್ ಸುವಿಟರಂತೆ ಪಾದರಿಯನರಸಿ ಪಿಡಿ ॥ ದುರವಣಿಸಿದರ್ ನಗರಶೋಧನೆಯ ತಳವಾರರಂತೆ ಬನದೊಳ್ ಪೆಣ್ಗಳು
karavīravargamaṃ bāgisidaradaṭaraṃ । tirade punnāgamaṃ pattiraṃjisidar ca । duramāvugaraṃte jātiyaṃtaravanaridāyduravanīśaraṃte ॥
suragiyaṃ tuḍukidar bhaṭaraṃte bagegeḷasi । paridar suviṭaraṃte pādariyanarasi piḍi ॥ duravaṇisidar nagaraśōdhaneya taḷavāraraṃte banadoḷ peṇgaḷu
ಜಾತಿ ಸೇವಂತಿಗೆ ಶಿರೀಷಮೊದಲಾದ ಪೂ । ಜಾತಿಗಳೊಳಿಂತಲರ್ಗೊಯ್ಯತುಪವನದೊಳ್ ನಿ । ಜಾತಿಶಯಲೀಲೆಯಿಂದಿರುತಿರ್ದಳಾ ಮದಮಂಜರಿ ಕೆಳೆದಿಯರೊಡನೆ ॥
ಭೂತಳದೊಳಿದು ಶುಭಾಕಾರದಿಂದಾಶ್ಚರ್ಯ । ಭೂತಮೆನೆ ಮೈದೋರಿತಾಗೆಳಮರೇಂದ್ರ ಸಂ । ಭೂತನ ತರಂಗಮಮದಂ ಕಂಡು ಮುತ್ತಿದರ್ ಮತ್ತಗಜಗಾಮಿನಿಯರು
jāti sēvaṃtige śirīṣamodalāda pū । jātigaḷoḷiṃtalargoyyatupavanadoḷ ni । jātiśayalīleyiṃdirutirdaḷā madamaṃjari keḷediyaroḍane ॥
bhūtaḷadoḷidu śubhākāradiṃdāścarya । bhūtamene maidōritāgeḷamarēṃdra saṃ । bhūtana taraṃgamamadaṃ kaṃḍu muttidar mattagajagāminiyaru
ವನಿತೆಯರೊಳಾ ಮದನಮಂಜರಿ ಹಯದ ಪಣಿಯ । ಕನಕಪಟ್ಟದ ಲೇಖನವನೋದಿಕೊಂಡು ಯಮ । ತನುಜನಗ್ಗಳಿಕೆಯಂ ಕಂಡು ನಸುನಗುತೆ ನಿಜಪತಿಗಾಗಳದನುಸಿರಲು ॥
ಕನಲ್ದಿನಿಯಳಂ ನೋಡುತವನೆದ್ದು ಕಾಣಬಹು । ದೆನುತ ಪಿಡಿದಶ್ವಮಂ ಕಟ್ಟಿ ಪಟ್ಟಣಕೆ ಮಾ । ನಿನಿಯರಂ ಕಳುಹಿ ಪರಿವಾರಮಂ ಕರೆಸಿ ನರನೊಳ್ ಕಾದಲನುವಾದನು
vaniteyaroḷā madanamaṃjari hayada paṇiya । kanakapaṭṭada lēkhanavanōdikoṃḍu yama । tanujanaggaḷikeyaṃ kaṃḍu nasunagute nijapatigāgaḷadanusiralu ॥
kanaldiniyaḷaṃ nōḍutavaneddu kāṇabahu । denuta piḍidaśvamaṃ kaṭṭi paṭṭaṇake mā । niniyaraṃ kaḷuhi parivāramaṃ karesi naranoḷ kādalanuvādanu
ಭೂಲೋಲ ಕೇಳಗ್ನಿ ಮನೆಯಳಿಯನಾಗಿಹಂ । ನೀಲದ್ವಜಂಗದೆಂತೆನೆ ಮುನ್ನವನ ಮಗಳ್ । ಮೂಲೋಕದೊಳ್ ಸುಭಗರಾರೆಂದರಸಿ ನೋಂತು ಪಾವಕನ ನೊಲಿಸೆಮೆಚ್ಚಿ ॥
ಬಾಲಿಕೆಯನಂದುಮೊದಲಾಗಿ ವೈಶ್ವಾನರಂ । ಪಾಲಿಪಂ ಪತಿರೂಪದಿಂದಾ ಪುರದೊಳವನ । ಮೂಲ ಬಲದಿಂ ಪ್ರವೀರಂ ಪಿಡಿದು ಕಟ್ಟಿದಂ ಪಾರ್ಥನ ತುರಂಗಮವನು
bhūlōla kēḷagni maneyaḷiyanāgihaṃ । nīladvajaṃgadeṃtene munnavana magaḷ । mūlōkadoḷ subhagarāreṃdarasi nōṃtu pāvakana nolisemecci ॥
bālikeyanaṃdumodalāgi vaiśvānaraṃ । pālipaṃ patirūpadiṃdā puradoḷavana । mūla baladiṃ pravīraṃ piḍidu kaṭṭidaṃ pārthana turaṃgamavanu
ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ । ದಟ್ಟಿಸಿದೊಡಾ ಪ್ರವೀರಂ ಕೆರಳ್ದಾಹವಂ । ಗೊಟ್ಟೆನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ॥
ತೊಟ್ಟಂ ಶರಾಸನದೊಳಂಬನವನೀ ಮಾತು । ಮುಟ್ಟದುದು ಫಲುಗುಣಂಗೆಳನಗೆಯ ಕೋಪದಿಂ । ದಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದೆ
kaṭṭirda kudureyaṃ kaṃḍu kāpina bhaṭar । daṭṭisidoḍā pravīraṃ keraḷdāhavaṃ । goṭṭenārpoḍe barali tannoḍane kāḷagake paḍesahita pārthaneṃdu ॥
toṭṭaṃ śarāsanadoḷaṃbanavanī mātu । muṭṭadudu phaluguṇaṃgeḷanageya kōpadiṃ । daṭṭi nōḍidoḍāga naḍedudu caturbalaṃ sarvasannāhadiṃde
ಚೂಳಿಯ ಚತುರ್ಬಲದ ದಾಳಿ ನಗರಿಗೆ ನಭಕೆ । ದೂಳಿ ದೆಸೆದೆಸೆಗಳ್ಗೆ ಘೀಳಿಡುವವಾದ್ಯರವ । ದೋಳಿ ನೆರೆ ಮುಸುಕಿತೊಂದೇ ಬಾರಿ ಪುರಜನಕೆ ರವಿಗೆ ದಿಕ್ಬಾಲಕರ್ಗೆ ॥
ಬಾಳುವೆ ಮಹಾತೇಜಮತಿಶಯದ ಪದವಿಗಳ್ । ಕಾಳಹುದು ಮಸುಳಿಪುದು ಚಲನಮಹುದೆಂದು ಹೇ । ರಾಳಭಯದಿಂ ಶಂಕೆಯಿಂದದ್ಭುತಂಗಳಿಂ ದೃತಿ ಗತಿ ಮತಿಗಳಳಿದುವು
cūḷiya caturbalada dāḷi nagarige nabhake । dūḷi desedesegaḷge ghīḷiḍuvavādyarava । dōḷi nere musukitoṃdē bāri purajanake ravige dikbālakarge ॥
bāḷuve mahātējamatiśayada padavigaḷ । kāḷahudu masuḷipudu calanamahudeṃdu hē । rāḷabhayadiṃ śaṃkeyiṃdadbhutaṃgaḷiṃ dr̥ti gati matigaḷaḷiduvu
ಮೇರೆದಪ್ಪಿದ ಮಹಾರ್ಣವದಂತೆ ಭುವನಸಂ । ಹಾರಕಾಲದ ಮೇಘಚಯದಂತೆ ಭರದಿಂದೆ ಪ್ರ । ವೀರನಂ ಮುಸುಕಿತರ್ಜುನನ ಮುಂಚೂಣಿಯ ಚತುರ್ಬಲಂದೆಸೆದೆಸೆಯೊಳು ।
ತೇರೈಸದಿರ್ದನವನತಿಸತ್ಯದಿಂದೆ ಸಂ ॥ ಸಾರಪ್ರಲಾಪಮಾಲಾಕುಲಮನಧ್ಯಾತ್ಮ । ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿನ ದಾತುಗೆಡದೆ
mēredappida mahārṇavadaṃte bhuvanasaṃ । hārakālada mēghacayadaṃte bharadiṃde pra । vīranaṃ musukitarjunana muṃcūṇiya caturbalaṃdesedeseyoḷu ।
tēraisadirdanavanatisatyadiṃde saṃ ॥ sārapralāpamālākulamanadhyātma । sāradiṃ taḍeva yōgīśvarana cittadaṃteccarina dātugeḍade
ಮೇಗೆ ಮುಸುಕಿದ ಚೂಣಿಯನಿತು ಚಾತುರ್ಬಲವ । ನಾಗಳೋರ್ವನೆ ಚಾರಿವರಿವರಿದು ಬಾಣಪ್ರ । ಯೋಗಂಗಳಿಂ ಪ್ರವೀರಂ ಕೊಲ್ವುದಂ ಕಂಡು ಬಿಲ್ಗೊಂಡು ಕೋಪದಿಂದೆ ॥
ಬೇಗದಿಂ ಪ್ರದ್ಯುಮ್ನ ಸಾತ್ಯಕಿ ವೃಷದ್ವಜಸು । ವೇಗಾನುಸಾಲ್ವ ಕೃತವರ್ಮಾದಿ ಪಟುಭಟರ್ ॥ ತಾಗಿದರ್ ಕಲ್ವಮೇಘಂಗಳಿಂ ತಡೆವಿಟ್ಟಮಳೆಯೆನಲ್ ಕಣೆಗರೆಯುತೆ
mēge musukida cūṇiyanitu cāturbalava । nāgaḷōrvane cārivarivaridu bāṇapra । yōgaṃgaḷiṃ pravīraṃ kolvudaṃ kaṃḍu bilgoṃḍu kōpadiṃde ॥
bēgadiṃ pradyumna sātyaki vr̥ṣadvajasu । vēgānusālva kr̥tavarmādi paṭubhaṭar ॥ tāgidar kalvamēghaṃgaḷiṃ taḍeviṭṭamaḷeyenal kaṇegareyute
ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ । ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ । ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇವೇಳ್ವೆನು ।
ಈ ಪ್ರಭಾಕರಕಿರಣಮೀ ವಾಯುಸಂಚರಣ । ಮೀ ಪ್ರವಹಿಸುವ ನದಿಗಳೀ ಗಗನಮೀ ಧರೆ ಮ । ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು
ā pravīraṃ baḷikanibarellaroḍane nā । nāprakārada samaradoḷ kādalitta sē । nāpratatisahita nīladhvajaṃ nagaramaṃ poremaṭṭanēvēḷvenu ।
ī prabhākarakiraṇamī vāyusaṃcaraṇa । mī pravahisuva nadigaḷī gaganamī dhare ma । hāpraḷayakaḍaguvaṃtaḍagi bhuvanatrayaṃ baridūḷimayavāgalu
ಮೊಗಸಿದರ್ ಪರಬಲವನಾಗಳ್ ಪ್ರವೀರನಂ । ತೆಗೆಸಿದರ್ ಪಿನ್ನೆಲೆಗೆ ರಿಪುಸೈನ್ಯದಳವಿಯಂ ! ತೆಗೆಸಿದರ್ ತಮತಮಗೆ ಕೈಕೊಂಡು ವಾರಣ ವರೂಥ ವರವಾಜಿಗಳನು ॥
ಪುಗಿಸಿದರ್ ವೈರಿಮೋಹರದೊಳಗೆ ಸಾಹಸಂ । ಮಿಗಿಸಿದರ್ ಪೊಯ್ದಾಡಿ ತದವೀರರಸದಿಂದೆ । ಸೊಗಸಿದರ್ ಧುರಧೀರ ನೀಲಧ್ವಜನ ಮನೆಯ ಚತುರ ಚತುರಂಗದವರು
mogasidar parabalavanāgaḷ pravīranaṃ । tegesidar pinnelege ripusainyadaḷaviyaṃ ! tegesidar tamatamage kaikoṃḍu vāraṇa varūtha varavājigaḷanu ॥
pugisidar vairimōharadoḷage sāhasaṃ । migisidar poydāḍi tadavīrarasadiṃde । sogasidar dhuradhīra nīladhvajana maneya catura caturaṃgadavaru
ಮಗ್ಗಿದರ್ ಮಸಗಿದಂಬುಧಿಯ ತೆರೆಯಂತೆ ಸಲೆ । ಮುಗ್ಗಿದರ್ ಮುಗಿಲಮೊಗ್ಗರದಂತೆ ಭೋಂಕರಿಸು । ತೊಗ್ಗಿದರ್ ಕವಿದು ಜೇನ್ನೊಣದಂತೆ ಪೊಯ್ದಾಡಿ ರಿಪುಸೈನ್ಯಕಾನನವನು ॥
ನೆಗ್ಗಿದರ್ ನೆಲೆಗೆಡಿಸಿ ಬಿರುಗಾಳಿಯಂತೈದೆ । ನುಗ್ಗಿದರ್ ನುಚ್ಚುನುರಿಯಾಗೆಬರಸಿಡಿಲಂತೆ । ಹಿಗ್ಗಿದರ್ ಪಚ್ಚಿವೀರಾವೇಶದಿಂದೆ ಪಟುಭಟರಾಗಳಾಹವದೊಳು
maggidar masagidaṃbudhiya tereyaṃte sale । muggidar mugilamoggaradaṃte bhōṃkarisu । toggidar kavidu jēnnoṇadaṃte poydāḍi ripusainyakānanavanu ॥
neggidar nelegeḍisi birugāḷiyaṃtaide । nuggidar nuccunuriyāgebarasiḍilaṃte । higgidar paccivīrāvēśadiṃde paṭubhaṭarāgaḷāhavadoḷu
ಪೊಯ್ದಾಡಿ ಮಡಿದ ಕಲಿಗಳ ಶರೀರಂಗಳಂ । ಪೊಯ್ದೆಳೆದು ಪರಿತಿಂಬ ಮರುಳ್ಗಳಂ ಮೇಣವರ । ನೊಯ್ದಲ್ಲಿ ದಿವ್ಯತನುಗಳೊಳಪ್ಪಿ ಚುಂಬಿಸುವ ಸುರಸತಿಯರಂ ಕಾಣುತೆ ॥
ಮೆಯ್ದೆಗೆದಪರ ವೀರರೆಂದೋರ್ವರೊರ್ವರಂ । ಬಯ್ದು ಮೂದಲಿಸಿ ರಣರಂಗದೊಳ್ ಪಟುಭಟರ್ । ಕಯ್ದೋರುತಿರ್ದರೊಟೆವೆರಸಿ ಕೇಶಾಕೇಶಿಯುದ್ಧದಿಂದಳವಳಿಯದೆ
poydāḍi maḍida kaligaḷa śarīraṃgaḷaṃ । poydeḷedu paritiṃba maruḷgaḷaṃ mēṇavara । noydalli divyatanugaḷoḷappi cuṃbisuva surasatiyaraṃ kāṇute ॥
meydegedapara vīrareṃdōrvarorvaraṃ । baydu mūdalisi raṇaraṃgadoḷ paṭubhaṭar । kaydōrutirdaroṭeverasi kēśākēśiyuddhadiṃdaḷavaḷiyade
ಕೃತವರ್ಮನುರವಣೆಯನನುಸಾಲ್ವನುಬ್ಬಟೆಯ । ನತಿಬಲಸುವೇಗನ ಪರಾಕ್ರಮವನಾದಿತ್ಯ । ಸುತಸುತನ ಶೌರ್ಯಮಂ ಸಾತ್ಯಕಿಯ ವೀರ್ಯಮಂ ವರಯೌವನಾಶ್ವನೃಪನ ॥
ಆತುಳವಿಕ್ರಮವನನಿರುದ್ಧನಾಟೋಪಮಂ । ಪ್ರತಿಭಟಭಯಂಕರ ಪ್ರದ್ಯುಮ್ನನದಟನು । ನ್ನತಿಗೆಡಿಸಿತಾಗ ನೀಲಧ್ವಜನ ಪರಿವಾರಮೆವೇಳ್ವೆನಾಹವದೊಳು
kr̥tavarmanuravaṇeyananusālvanubbaṭeya । natibalasuvēgana parākramavanāditya । sutasutana śauryamaṃ sātyakiya vīryamaṃ varayauvanāśvanr̥pana ॥
ātuḷavikramavananiruddhanāṭōpamaṃ । pratibhaṭabhayaṃkara pradyumnanadaṭanu । nnatigeḍisitāga nīladhvajana parivāramevēḷvenāhavadoḷu
ಅರ್ಜುನಂ ಕಂಡನಹಿತ ಪ್ರಬಲಬಲಮಸುರ । ನಿರ್ಜರರ್ಗರಿದೆನೆ ಕಠೋರಮಾಗಲ್ ತನ್ನ । ವರ್ಜಯಿಸಲರಿಯರೇನೆಂದು ಕಡುಗೋಪದಿಂ ಚಾಪಮಂ ಪಿಡಿದು ಮಿಡಿದು ॥
ಗರ್ಜನೆಯೊಳೆಯ್ದೆ ಕಡೆಗಾಲದೊಳ್ ಮಳೆಗರೆವ । ಪರ್ಜನ್ಯನಂತಾರ್ದಿಸುತೆ ನಡೆಯಲಿದಿರಾಂಪ । ವರ್ಜಗದೊಳುಂಟೆ ಮುರಿದುದು ಪುರಕೆ ನೀಲಧ್ವಜನ ಸೇನೆ ಕೆಟ್ಟು ಕೆದರಿ
arjunaṃ kaṃḍanahita prabalabalamasura । nirjarargaridene kaṭhōramāgal tanna । varjayisalariyarēneṃdu kaḍugōpadiṃ cāpamaṃ piḍidu miḍidu ॥
garjaneyoḷeyde kaḍegāladoḷ maḷegareva । parjanyanaṃtārdisute naḍeyalidirāṃpa । varjagadoḷuṃṭe muridudu purake nīladhvajana sēne keṭṭu kedari
ಮುರಿದು ಬಹಸೇನೆಯಂ ಕಂಡಾ ಪ್ರವೀರನುರೆ । ಜರೆದು ಕೋದಂಡಮಂ ಕೊಂಡು ಕೌಂತೇಯನಂ । ತರುಬಲಡಹಾಯ್ದು ವೃಷಕೇತು ಬರಲಾತನೊಳ್ ಸರಿಯಾಗಿ ಕಾದುತಿರಲು ॥
ಪೆರಗಿಕ್ಕಿ ಕರ್ಣಿಯಂ ಮುಂದೆ ನಿಂದನುಸಾಲ್ವ । ನುರುಬಿದೊಡವಂ ನೋಯೆ ನೀಲಧ್ವಜಂ ತಾನೆ । ತುರುಗಿದಗ್ಗದ ಸಕಲಬಲ ಸಹಿತ ನೂಕಿದಂ ಫಲಗುಣನ ಪಡೆಯ ಮೇಲೆ
muridu bahasēneyaṃ kaṃḍā pravīranure । jaredu kōdaṃḍamaṃ koṃḍu kauṃtēyanaṃ । tarubalaḍahāydu vr̥ṣakētu baralātanoḷ sariyāgi kādutiralu ॥
peragikki karṇiyaṃ muṃde niṃdanusālva । nurubidoḍavaṃ nōye nīladhvajaṃ tāne । turugidaggada sakalabala sahita nūkidaṃ phalaguṇana paḍeya mēle
ವಾನರವರಧ್ವಜಂ ಮುಳಿದು ನೀಲಧ್ವಜನ । ಸೇನೆಯಂ ತಡೆಗಡಿಯುತಾತನಂ ಮುಸುಕಿದನ । ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ॥
ನೀನಳಿಯನಾಗಿರ್ದುಮೆನಗಿನಿತಪಾಯಮೇ । ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ । ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು
vānaravaradhvajaṃ muḷidu nīladhvajana । sēneyaṃ taḍegaḍiyutātanaṃ musukidana । nūnaśarajāladiṃ baḷikavaṃ kaṃgeṭṭu pāvakaṃ poreyoḷiralu ॥
nīnaḷiyanāgirdumenaginitapāyamē । kīnarana deseya bhayamaṃ biḍisabēkene kr̥ । śānu kēḷdāga suḍatoḍagidaṃ tāne pokkarjunana sainikavanu
ಛತ್ರ ಚಾಮರ ಹರಿಗೆ ಹಕ್ಕರಿಗೆ ಹಲ್ಲಣ ವಿ । ಚಿತ್ರದ ಪತಾಕೆ ಸೀಗುರಿ ಸಿಂಧ ಸೀಸಕ ತ । ನುತ್ರ ರಂಜಿಕೆ ಪಾಶ ವಸ್ತ್ರ ವಾಹನ ವಾದ್ಯ ಕೈದು ಬತ್ತಳಿಕೆ ಬಂಡಿ ॥
ಪತ್ರ ಬಂದುರ ಬಾಣ ಕೋದಂಡ ರಥ ರಥಾಂ । ಗ ತ್ರಿವೇಣುಕ ಯುಗಾಂಕ್ಷಂಗಳುರಿಗೊಳೆ ಪಾಂಡು । ಪುತ್ರಸೇನೆಯೊಳೆಲ್ಲರುಂ ಬೆದರಿದರ್ ಕೆಟ್ಟು ಕೆದರಿದರ್ ಕಿಡಿಯನೊದರಿ
chatra cāmara harige hakkarige hallaṇa vi । citrada patāke sīguri siṃdha sīsaka ta । nutra raṃjike pāśa vastra vāhana vādya kaidu battaḷike baṃḍi ॥
patra baṃdura bāṇa kōdaṃḍa ratha rathāṃ । ga trivēṇuka yugāṃkṣaṃgaḷurigoḷe pāṃḍu । putrasēneyoḷellaruṃ bedaridar keṭṭu kedaridar kiḍiyanodari
ಹೊಗೆಹೊಗೆದು ಹೊಗೆ ಸುತ್ತಿ ಹೊಗುವ ದೆಸೆ ದೆಸೆಗಳಂ । ಮೊಗೆಮೊಗೆದು ಮಗಸಿ ಪಲಮೊಗದೊಳವ್ವಳಿಸಿ ಪುಟ । ನೆಗೆನೆಗೆದು ನೆಗಳ್ದು ಸೋನೆಗಳಾಗಿ ಸುರಿವ ಕಿರುಗಿಡಿಗಳ ತುಷಾರದಿಂದೆ ॥
ಧಗಧಗಧಗನೆ ಪೊತ್ತುವಾ ಜ್ವಾಲೆಗಳ ಮಾಲೆ । ಭುಗುಭುಗುಭುಗಿಲ್ಭುಗಿಲ್ಭುಗಿಲೆಂದು ಡಾವರಿಸೆ । ತೆಗೆತೆಗೆದು ತಗುಳ್ದೆಲ್ಲರಂ ದಹಿಸತೊಡಗಿದವು ದಳ್ಳುರಿ ನರನ ಬಲದೊಳು
hogehogedu hoge sutti hoguva dese desegaḷaṃ । mogemogedu magasi palamogadoḷavvaḷisi puṭa । negenegedu negaḷdu sōnegaḷāgi suriva kirugiḍigaḷa tuṣāradiṃde ॥
dhagadhagadhagane pottuvā jvālegaḷa māle । bhugubhugubhugilbhugilbhugileṃdu ḍāvarise । tegetegedu taguḷdellaraṃ dahisatoḍagidavu daḷḷuri narana baladoḷu
ಕಟ್ಟುಗ್ರಕೋಪದಿಂ ಮುಳಿದಂದು ರಾಘವಂ । ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ । ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ ಪಾಂಡವನ ಸೇನೆ ॥
ಅಟ್ಟಿ ಸುಡುವನಲ ಧೂಮಜ್ವಾಲೆಗೊಡನೆ ಗೋ । ಳಿಟ್ಟು ಹೊದಕುಳಿಗೊಂಡು ಹೊರಳುತಿರಲುಬ್ಬೆಗಂ । ಬಟ್ಟು ಪಾರ್ಥಂ ಚಿಂತಿಸಿದನೆತ್ತಣದ್ಭುತಮಿದೆಂದು ಪಾವಕನುರುಬೆಗೆ
kaṭṭugrakōpadiṃ muḷidaṃdu rāghavaṃ । toṭṭa bāṇada moneya daḷḷuriya jaḷake kaṃ । geṭṭu siḍimiḍigoṃḍa sāgarada jīvāḷiyaṃte pāṃḍavana sēne ॥
aṭṭi suḍuvanala dhūmajvālegoḍane gō । ḷiṭṭu hodakuḷigoṃḍu horaḷutiralubbegaṃ । baṭṭu pārthaṃ ciṃtisidanettaṇadbhutamideṃdu pāvakanurubege
ಭಗ್ನರಾದರ್ ಕೆಲರ್ ಕವಚಾದಿಗಳ್ ಬೆಂದು । ನಗ್ನರಾದರ್ ಕೆಲರ್ ಪೆಚ್ಚಿದುರಿಗಿಚ್ಚಿನೊಳ್ । ಮಗ್ನರಾದರ್ ಕೆಲರ್ ತನ್ನ ಸೇನೆಯೊಳಕಟ ಧರ್ಮಜನ ಹಯಮೇಧಕೆ ॥
ವಿಘ್ನಮಾದುದೆ ಶಿವಶಿವೆನುತೆ ಚಿಂತಿಸಿದನಿದ । ಕಗ್ನಿಯಂ ಭಜಿಸಿ ನೋಡುವೆನೆಂದು ನಿಜ ಕಂ ವಿ । ಲಗ್ನ ಚಾಪವನಿಳುಹಿ ಶುಚಿಯಾಗಿ ಪಾವಕನನರ್ಜುನಂ ಪ್ರಾರ್ಥಿಸಿದನು
bhagnarādar kelar kavacādigaḷ beṃdu । nagnarādar kelar peccidurigiccinoḷ । magnarādar kelar tanna sēneyoḷakaṭa dharmajana hayamēdhake ॥
vighnamādude śivaśivenute ciṃtisidanida । kagniyaṃ bhajisi nōḍuveneṃdu nija kaṃ vi । lagna cāpavaniḷuhi śuciyāgi pāvakananarjunaṃ prārthisidanu
ಬಳಿಕನಲ ಸೂಕ್ತಗಳಿಂದೆ ನುತಿಗೆಯ್ದು ಭೂ । ತಳಕೊಂದಿ ಸಾಷ್ಟಾಂಗದಿಂದೆರಗಿ ನಿಂದು ನೀಂ । ಮುಳಿಯಲೇಖೀ ಮಖಂ ನಿನಗೈಸಲೇ ನಿನ್ನ ದೆಸೆಯಿಂದಖೀಳ ಸುರರ್ಗೆ ॥
ತಳೆವುದು ಹವಿರ್ಭಾಗಮೀ ಚರಾಚರದ ಪೊರೆ । ಗೊಳಗೆಲ್ಲಮುಂ ನೀನೆ ನಿನ್ನಂದ ಮೂಲೋಕ । ದಳಿವುಳಿವು ಸಾಕದಂತಿರಲೆನಗೆ ಮಾರ್ಗಮಂ ಕೊಟ್ಟುಳೂಹಬೇಕೆಂದನು
baḷikanala sūktagaḷiṃde nutigeydu bhū । taḷakoṃdi sāṣṭāṃgadiṃderagi niṃdu nīṃ । muḷiyalēkhī makhaṃ ninagaisalē ninna deseyiṃdakhīḷa surarge ॥
taḷevudu havirbhāgamī carācarada pore । goḷagellamuṃ nīne ninnaṃda mūlōka । daḷivuḷivu sākadaṃtiralenage mārgamaṃ koṭṭuḷūhabēkeṃdanu
ದೇವ ನೀನಂದು ಗಾಂಡೀವಮಂ ತನಗಿತ್ತೆ । ಭಾವಿಸಲ್ ಪಾಂಚಾಲೆ ನಿನ್ನೊಳುದ್ಭವಿಸಿದಳ್ । ನಾವು ಲೋಗರೆ ನಿನಗೆ ಪೇಳೆಂದು ನುತಿಸಿ ಕುಂತೀಸುತಂ ಬೇಡಿಕೊಳಲು ॥
ಪಾವಕಂ ಮೆಚ್ಚಿ ನುಡಿದಂ ಪಾರ್ಥ ಕೇಳಾದೊ । ಡಾವು ಮುಳಿಯೆವು ನಿಮಗೆ ಹರಿ ಸಮೀಪದೊಳಿರ್ದು । ಮೀ ವಾಜಿಮೇಧಮೇಕಮೃತಮಿರಲಳೆಗೆಳೆಸಿದಂತಾಯ್ತು ನಿಮಗೆಂದನು
dēva nīnaṃdu gāṃḍīvamaṃ tanagitte । bhāvisal pāṃcāle ninnoḷudbhavisidaḷ । nāvu lōgare ninage pēḷeṃdu nutisi kuṃtīsutaṃ bēḍikoḷalu ॥
pāvakaṃ mecci nuḍidaṃ pārtha kēḷādo । ḍāvu muḷiyevu nimage hari samīpadoḷirdu । mī vājimēdhamēkamr̥tamiralaḷegeḷesidaṃtāytu nimageṃdanu
ಅಹುದು ನೀವೆಂಬುದಂ ಮೀರಬರ್ಪುದೆ ಹರಿಯ । ಸಹವಾಸಮೇ ಸಾಕು ಜಗದೊಳ್ ಸ್ವಧರ್ಮಮಂ । ವಹಯಿಸದವರಾರು ಮುನಿವರನಾಜ್ಞೆಯಾದಪುದು ಮೇಣಂತುಮಲ್ಲದೆಮಗೆ ॥
ವಿಹಗೇಂದ್ರವಾಹನಂ ಮಾಡವೇಳ್ಕೆಂದನು । ಗ್ರಹಿಸಿದಂ ಮಖಮನಿದಕೆಂತೆಂದು ನರನೆನಲ್ । ದಹಿಪುದು ಮಾಣ್ದೆನೆಂದಭಯಮಿತ್ತಗ್ನಿ ನೀಲಧ್ವಜಗಿಂತೆಂದನು
ahudu nīveṃbudaṃ mīrabarpude hariya । sahavāsamē sāku jagadoḷ svadharmamaṃ । vahayisadavarāru munivaranājñeyādapudu mēṇaṃtumallademage ॥
vihagēṃdravāhanaṃ māḍavēḷkeṃdanu । grahisidaṃ makhamanidakeṃteṃdu naranenal । dahipudu māṇdeneṃdabhayamittagni nīladhvajagiṃteṃdanu
ಸಂಗರಂ ಬೇಡ ನರನೊಡನೆ ಸಾಕಾತನ ತು । ರಂಗಮವ ಬಿಡು ನಡೆ ನಗರಕೆಂದು ವೈಶ್ವಾನ । ರಂ ಗುಣದೊಳರಸನಂ ತಿರುಗಿಸಿದನತ್ತಲರ್ಜುನನುರಿಯ ಡಾವರವನು ।
ಭಂಗಿಸಿದನೆಚ್ಚು ನಾರಾಯಣಾಸ್ತ್ರದೊಳನ್ನೆ । ಗಂ ಗಗನ ಮಣಿ ಪಶ್ಚಿಮಾಂಗನೆಯ ಬೈತಲೆಯ । ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು
saṃgaraṃ bēḍa naranoḍane sākātana tu । raṃgamava biḍu naḍe nagarakeṃdu vaiśvāna । raṃ guṇadoḷarasanaṃ tirugisidanattalarjunanuriya ḍāvaravanu ।
bhaṃgisidaneccu nārāyaṇāstradoḷanne । gaṃ gagana maṇi paścimāṃganeya baitaleya । raṃgu māṇikadaṃte kaṇge kāṇisutirdudastagiri mastakadoḷu
ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ । ಗುಂಜಾಭರಣಮೊ ಮೇಣ್ ಗಗನಾಂಬುದಿಯ ತಡಿಯ । ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೊ ॥
ಅಂಜನೇಭದ ಸಿಂಧುರವೊ ಶೀವನ ಮಸ್ತಕದ। ಕಂಚೆಡೆಯೊ ವಿಷ್ಣು ಪದ ಪಂಕರುಹದರುಣತೆಯೊ । ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಕಾಬೈಗುಗೆಂಪೆಸೆದುದು
raṃjisuva paścimācala kirātaṃ toṭṭa । guṃjābharaṇamo mēṇ gaganāṃbudiya taḍiya । maṃju vidruma lateyo mēṇapara digvadhuvinaṃga kuṃkuma lēpavo ॥
aṃjanēbhada siṃdhuravo śīvana mastakada। kaṃceḍeyo viṣṇu pada paṃkaruhadaruṇateyo । saṃjeveṇṇuṭṭa raktāṃbaravo pēḷenalkābaigugeṃpesedudu
ಬಿಚ್ಚುವೆಣೆವಕ್ಕಿಗಳಹೃದಯಮಂಬೇಯಿಸುವ । ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ । ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ್ದ ॥
ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ । ನಚ್ಚಿನವಳೀ ರಾತ್ರಿ ವಧುವೆಂದು ಹಿಮಕರಂ । ಮೆಚ್ಚಿ ಮುಂಗಳುಪಿದೆಳಮಾಣಿಕಗಳೆಂಬಂತೆ ಸಂಜೆದಾರೆಗಳೆಸೆದುವು
biccuveṇevakkigaḷahr̥dayamaṃbēyisuva । pocca posakeṃḍaṃgaḷene lōkamaṃ nuṃga । liccayisi bappa kattaleyeṃba kāḷarakkasi kōpadiṃdugaḷda ॥
kiccina kedargiḍigaḷene tanna bāḷuvege । naccinavaḷī rātri vadhuveṃdu himakaraṃ । mecci muṃgaḷupideḷamāṇikagaḷeṃbaṃte saṃjedāregaḷeseduvu
ಓಡಿದುವು ಪಕ್ಷಿಗಳ್ ಗೂಡಿಂಗೆ ದೆಸೆಗಳಂ । ನೋಡಿದುವು ಘೂಕಂಗಳಳಿಗಳಂ ಸೆರೆಗೆಯ್ದು । ಪೂಡಿದುವು ಬಾಗಿಲಂ ಕಮಲಂಗಳರಲ್ದು ವಿಂದೀವರಂಗಳ್ ನಭದೊಳು ॥
ಮೂಡಿದುವು ತಾರೆಗಳ್ ಚಕ್ರವಾಕಂಗಳಂ । ಕಾಡಿದುವು ವಿರಹತಾಪಂಗಳಿಳೆಯೆಲ್ಲಮಂ । ತೀಡಿದುವು ಕತ್ತಲೆಗಳಲ್ಲಿಗಲ್ಲಿಗೆ ಮನೆಮನೆಗೆ ಸೊಡರ್ ಕಣ್ಗೆಸೆದುವು
ōḍiduvu pakṣigaḷ gūḍiṃge desegaḷaṃ । nōḍiduvu ghūkaṃgaḷaḷigaḷaṃ seregeydu । pūḍiduvu bāgilaṃ kamalaṃgaḷaraldu viṃdīvaraṃgaḷ nabhadoḷu ॥
mūḍiduvu tāregaḷ cakravākaṃgaḷaṃ । kāḍiduvu virahatāpaṃgaḷiḷeyellamaṃ । tīḍiduvu kattalegaḷalligallige manemanege soḍar kaṇgeseduvu
ರವಿ ಪಶ್ಚಿಮಾದ್ರಿಯಂ ಮರೆಗೊಳೆ ತಮಸ್ತೋಮ । ಮವನಿಯಂ ಮುಸುಕಿತೀ ತೆರೆದೊಳಸಿತಧ್ವಜಂ । ಬವರದೊಳ್ ಮುರಿದು ಭಂಗಿತನಾಗಿ ತಿರುಗಿದಂ ತನ್ನ ಪಟ್ಟಣಕಿತ್ತಲು ॥
ಪವನ ಸಖನಂ ಬೇಡಿಕೊಂಡು ನಾರಾಯಣಾ । ಸ್ತ್ರವನೆಚ್ಚು ಪೆರ್ಚಿದುರಿಯಂ ಕಿಡಿಸಿ ನಿಜ ಸೈನಿ । ಕವನೆಲ್ಲ ಬಿಡಿಸಿದಂ ದೇವಪುರ ಲಕ್ಷ್ಮೀಪತಿಯ ಮೈದುನಂ ಮುದದೊಳು
ravi paścimādriyaṃ maregoḷe tamastōma । mavaniyaṃ musukitī teredoḷasitadhvajaṃ । bavaradoḷ muridu bhaṃgitanāgi tirugidaṃ tanna paṭṭaṇakittalu ॥
pavana sakhanaṃ bēḍikoṃḍu nārāyaṇā । stravaneccu perciduriyaṃ kiḍisi nija saini । kavanella biḍisidaṃ dēvapura lakṣmīpatiya maidunaṃ mudadoḷu
Keys: ← → turn the page, J K step through the verses.
Illustration: Verse & Place (Project-owned).