Jaimini Bharata 8.26
ಕಟ್ಟಿರ್ದ ಕುದುರೆಯಂ ಕಂಡು ಕಾಪಿನ ಭಟರ್ । ದಟ್ಟಿಸಿದೊಡಾ ಪ್ರವೀರಂ ಕೆರಳ್ದಾಹವಂ । ಗೊಟ್ಟೆನಾರ್ಪೊಡೆ ಬರಲಿ ತನ್ನೊಡನೆ ಕಾಳಗಕೆ ಪಡೆಸಹಿತ ಪಾರ್ಥನೆಂದು ॥ ತೊಟ್ಟಂ ಶರಾಸನದೊಳಂಬನವನೀ ಮಾತು । ಮುಟ್ಟದುದು ಫಲುಗುಣಂಗೆಳನಗೆಯ ಕೋಪದಿಂ । ದಟ್ಟಿ ನೋಡಿದೊಡಾಗ ನಡೆದುದು ಚತುರ್ಬಲಂ ಸರ್ವಸನ್ನಾಹದಿಂದೆ
kaṭṭirda kudureyaṃ kaṃḍu kāpina bhaṭar । daṭṭisidoḍā pravīraṃ keraḷdāhavaṃ । goṭṭenārpoḍe barali tannoḍane kāḷagake paḍesahita pārthaneṃdu ॥ toṭṭaṃ śarāsanadoḷaṃbanavanī mātu । muṭṭadudu phaluguṇaṃgeḷanageya kōpadiṃ । daṭṭi nōḍidoḍāga naḍedudu caturbalaṃ sarvasannāhadiṃde