ಭೀಮ ದುರ್ಯೋಧನರ ಸೆಣಸಿನ ತಾಮಸಿಕೆ ಹೆಚ್ಚಿದುದು ಕದನೋ ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ --
bhīma duryōdhanara seṇasina tāmasike heccidudu kadanō ddāmarastrābhyāsavanu māḍidaru drōṇanali --
ಆದಿ ಪರ್ವ — ಸಂಧಿ ೬ · ಆದಿ ಪರ್ವ — ಸಂಧಿ ೬
ādi parva — saṃdhi 6
The complete adi parva · sandhi 6 in Kannada.
46 passagesKannada with transliteration
Invocation
ಭೀಮ ದುರ್ಯೋಧನರ ಸೆಣಸಿನ ತಾಮಸಿಕೆ ಹೆಚ್ಚಿದುದು ಕದನೋ ದ್ದಾಮರಸ್ತ್ರಾಭ್ಯಾಸವನು ಮಾಡಿದರು ದ್ರೋಣನಲಿ --
bhīma duryōdhanara seṇasina tāmasike heccidudu kadanō ddāmarastrābhyāsavanu māḍidaru drōṇanali --
ಕೇಳು ಜನಮೇಜಯ ಮಹೀಪತಿ ಬಾಲಕರು ನೂರಾರು ಮೆರೆದರು ಬಾಲಕೇಳೀವ್ಯಸನಿಗಳು ಹೊರ ವಳಯದಲಿ ಪುರದ ಆಳಿನೇರಿಕೆ ಹಿಡಿಗವಡೆ ಗುರಿ ಯಾಳು ಚೆಂಡಿನ ಹೊಣಕೆ ಚಿಣಿಕೋ ಲಾಳು ಗೊತ್ತಿನ ದಂಡೆಯನೆ ನಾನಾ ವಿನೋದದಲಿ
kēḷu janamējaya mahīpati bālakaru nūrāru meredaru bālakēḷīvyasanigaḷu hora vaḷayadali purada āḷinērike hiḍigavaḍe guri yāḷu ceṃḍina hoṇake ciṇikō lāḷu gottina daṃḍeyane nānā vinōdadali
ಗುಡುಗು ಗುತ್ತಿನಚೆಂಡು ಗುಮ್ಮನ ಬಡಿವ ಕತ್ತಲೆ ಗುದ್ದುಗಂಬದ ಗಡಣೆ ಕಣ್ಮುಚ್ಚಸಗವರಿ ಹರಿಹಲಗೆ ನಿಡುಗವಣೆ ಕೆಡಹು ಕುಟ್ಟಿಗನಾದಿಯಾದವ ಗಡ ವಿನೋದದಲಾಡಿದರು ಪಂ ಗಡದಲೈವರು ನೂರ್ವರಿವರಿತ್ತಂಡವೊಂದಾಗಿ
guḍugu guttinaceṃḍu gummana baḍiva kattale guddugaṃbada gaḍaṇe kaṇmuccasagavari harihalage niḍugavaṇe keḍahu kuṭṭiganādiyādava gaḍa vinōdadalāḍidaru paṃ gaḍadalaivaru nūrvarivarittaṃḍavoṃdāgi
ಅದರೊಳೊಬ್ಬನೆ ಭೀಮನನಿಬರ ಸದೆವ ತಾ ಸತರೆ ವಿಭಾಡಿಸಿ ಕೆದರುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು ಸದೆದು ಬಿಡುವನು ಮುನ್ನ ಭೀಷ್ಮಂ ಗೊದರಿ ದೂರವನನಿಬರನು ಮೇ ಳದಲಿ ಮಗುಳೊಂದಾಗಿ ಸಂಗಡವಹರು ಸೂರುಳಿದು
adaroḷobbane bhīmananibara sadeva tā satare vibhāḍisi kedaruvanu geddōḍidare beṃbatti hiḍideḷedu sadedu biḍuvanu munna bhīṣmaṃ godari dūravananibaranu mē ḷadali maguḷoṃdāgi saṃgaḍavaharu sūruḷidu
ಕೆಣಕಿ ದುರ್ಯೋಧನನ ನೆತ್ತಿಯ ನಣೆದು ಹಾಯ್ವನು ನಿಮ್ಮ ನೂರ್ವರ ಬಣಗುಗಳಿಗೆಡಗಾಲ ತೊಡರಿದೆ ಬನ್ನಿ ನೀವೆನುತ ಗುಣವ ನುಡಿದೊಂದಾಗಿ ಕೆಳೆಗೊಂ ಡಣಕಿಸದೆ ಮೆಮರೆಸಿ ಮರೆಯಲಿ ಹಣಿದು ಬಿಡುವರು ಭೀಮನನು ದುರ್ಯೋಧನಾದಿಗಳು
keṇaki duryōdhanana nettiya naṇedu hāyvanu nimma nūrvara baṇagugaḷigeḍagāla toḍaride banni nīvenuta guṇava nuḍidoṃdāgi keḷegoṃ ḍaṇakisade memaresi mareyali haṇidu biḍuvaru bhīmananu duryōdhanādigaḷu
ಹೇಳುವರು ಯಮಜಂಗೆ ನಿನ್ನವ ನೂಳಿಗವ ನಿಲಿಸೆಂದು ಪಾರ್ಥಗೆ ಹೇಳುವರು ಬಳಿಕವರು ಭೀಮನ ಕರೆದು ಗಾರುಡಿಸೆ ಕೇಳುವನು ಹೈಯೆಂದು ತನ್ನಯ ಸೋಲದಲಿ ಮೈಯೊಡ್ಡುವನು ಮೇ ಲಾಳನೇರಿಸಿ ಹರಿದು ಸದೆವನು ಗುತ್ತಿನಲಿ ಕೆಡಹಿ
hēḷuvaru yamajaṃge ninnava nūḷigava niliseṃdu pārthage hēḷuvaru baḷikavaru bhīmana karedu gāruḍise kēḷuvanu haiyeṃdu tannaya sōladali maiyoḍḍuvanu mē lāḷanērisi haridu sadevanu guttinali keḍahi
ಅಳುತ ಧೃತರಾಷ್ಟ್ರಂಗೆ ಭೀಮನು ಕಳೆದ ಹಲುಗಳನೊಡೆದ ಮೊಳಕಾ ಲ್ಗಳನು ತೋರಿಸಿ ದೂರುವರು ದುರ್ಯೋಧನಾದಿಗಳು ಮುಳು ಮೊನೆಗಳಲಿ ಗೀರಿ ನೆತ್ತರ ಗಳೆದು ಹುಡಿಯಲಿ ಹೊರಳಿ ತಾ ಬಂ ದಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ
aḷuta dhr̥tarāṣṭraṃge bhīmanu kaḷeda halugaḷanoḍeda moḷakā lgaḷanu tōrisi dūruvaru duryōdhanādigaḷu muḷu monegaḷali gīri nettara gaḷedu huḍiyali horaḷi tā baṃ daḷuta dhr̥tarāṣṭraṃge bhīṣmage dūruvanu bhīma
ಆಕೆವಾಳರು ಭೀಷ್ಮ ಎದುರರು ಸಾಕು ನಿಮ್ಮೊಳು ನೂರು ನಾಲ್ವರು ಆ ಕುಮಾರರು ಬೇರೆ ನೀನಿಹುದೊಬ್ಬ ಬೇರೆಂದು ನೂಕಿ ಸೂರುಳು ಮಾಡಿ ಬಿಟ್ಟರೆ ನಾಕು ಜಾವದೊಳಿಹರು ಮರುದಿನ ವಾ ಕುಮಾರರು ತಮ್ಮೊಳೊಂದಾಗಿಹರು ಗೆಳೆಯಾಗಿ
ākevāḷaru bhīṣma eduraru sāku nimmoḷu nūru nālvaru ā kumāraru bēre nīnihudobba bēreṃdu nūki sūruḷu māḍi biṭṭare nāku jāvadoḷiharu marudina vā kumāraru tammoḷoṃdāgiharu geḷeyāgi
ಒಂದು ದಿನ ನೂರಾರು ಮಾನಿಸ ರೊಂದು ಗೆಳೆಯಲಿ ಪುರದ ಹೊರಗಿಹು ದೊಂದು ಠಾವು ಪ್ರಮಾಣ ವೃಕ್ಷವ ಕಂಡು ನಡೆತರಲು ಬಂದು ನಿಂದರು ಕೋಲ ಬಿಸುಟೀ ವೃಂದ ಹತ್ತಿತು ಮರನನಿವನೈ ತಂದು ತಂದೆಡೆಯಾಡಿ ಬಳಲಿದು ನೋಡಿದನು ಭೀಮ
oṃdu dina nūrāru mānisa roṃdu geḷeyali purada horagihu doṃdu ṭhāvu pramāṇa vr̥kṣava kaṃḍu naḍetaralu baṃdu niṃdaru kōla bisuṭī vr̥ṃda hattitu marananivanai taṃdu taṃdeḍeyāḍi baḷalidu nōḍidanu bhīma
ಮರನ ಹಿಡಿದಲುಗಿದರೆ ಬಿದ್ದರು ಭರತಕುಲ ಪಾಲಕರು ನೂರೈ ವರು ಮಹಾವಾತದಲಿ ತರುಫಲನಿಕರ ಬೀಳ್ವಂತೆ ಶಿರವೊಡೆದು ಬೆನ್ನೊಡೆಯ ಮೊಳಕಾ ಲ್ಜರಿಯ ಕೈಗಳು ಮುರಿದು ನೆತ್ತರು ಸುರಿದು ಧೃತರಾಷ್ಟ್ರಂಗೆ ದೂರಿದರನಿಬರೀ ಹದನ
marana hiḍidalugidare biddaru bharatakula pālakaru nūrai varu mahāvātadali taruphalanikara bīḷvaṃte śiravoḍedu bennoḍeya moḷakā ljariya kaigaḷu muridu nettaru suridu dhr̥tarāṣṭraṃge dūridaranibarī hadana
ದುರುಳನವನೊಡನಾಡ ಬೇಡಂ ದರಸನನಿಬರೆ ಸಂತವಿಟ್ಟನು ಹಿರಿದು ಹೆಚ್ಚಿತು ಭೀಮ ದುರ್ಯೋಧನರಿಗತಿ ವೈರ ಮರಳಿ ತಾವೊಂದಾಗುತಾತನ ಕರೆಸಿ ವಿವಿಧ ಕ್ರೀಡೆಯಲಿ ಮೈ ಮರೆಸಿ ಭೀಮನ ಕಟ್ಟಿ ಹಾಯ್ದಿದರೊಂದು ಮಡುವಿನಲಿ
duruḷanavanoḍanāḍa bēḍaṃ darasananibare saṃtaviṭṭanu hiridu heccitu bhīma duryōdhanarigati vaira maraḷi tāvoṃdāgutātana karesi vividha krīḍeyali mai maresi bhīmana kaṭṭi hāydidaroṃdu maḍuvinali
ಪಾಶವನು ಹರಿದೆದ್ದು ಬಂದತಿ ರೋಷಿ ಸದೆದನು ಮತ್ತೆ ತಮ್ಮೊಳು ಭಾಷೆಗಳಲೊಂದಾಗಿ ಕೂಡಿದರೊಂದು ದಿವಸದಲಿ ಆ ಸಿತಗ ಮೈಮರೆದ ಹೊತ್ತು ಮ ಹಾಸುರದ ಫಣಿಗಳಲಿ ಕಚ್ಚಿಸಿ ಘಾಸಿ ಮಾಡಲು ಬದುಕಿ ಬೇಸರನಡಿಗಡಿಗೆ ಭೀಮ
pāśavanu harideddu baṃdati rōṣi sadedanu matte tammoḷu bhāṣegaḷaloṃdāgi kūḍidaroṃdu divasadali ā sitaga maimareda hottu ma hāsurada phaṇigaḷali kaccisi ghāsi māḍalu baduki bēsaranaḍigaḍige bhīma
ಅರಸ ಕೇಳ್ ಆಯುಷ್ಯವುಳ್ಳರೆ ಹರಿಹರ ಬ್ರಹ್ಮಾದಿಗಳು ಸಂ ಹರಿಸಲರಿಯರು ಬರಿದೆ ದೈನ್ಯಂಬಡುವುದೀ ಲೋಕ ಭರತ ವಂಶದ ಬಾಹಿರರು ನಿ ಮ್ಮ ರಸುಗಳು ಭೀಮಂಗೆ ಮಾಡಿದ ಹುರಿಯನಾ ಹುರಿ ಹರಿದ ಪರಿಯನು ಮತ್ತೆ ಕೇಳೆಂದ
arasa kēḷ āyuṣyavuḷḷare harihara brahmādigaḷu saṃ harisalariyaru baride dainyaṃbaḍuvudī lōka bharata vaṃśada bāhiraru ni mma rasugaḷu bhīmaṃge māḍida huriyanā huri harida pariyanu matte kēḷeṃda
ಕಾಳಕೂಟ ಹಲಾಹಲವ ಕಾ ರ್ಕೊಲ ದಾರದ ವತ್ಸನಾಭಿ ಕ ರಾಳ ಸೌರಾಷ್ಟ್ರಿಕವ ಶೌಕ್ಲಿಕ ಸುಪ್ರದೀಪಕವ ಹೇಳಲರಿದೆನಿಪೆಂಟು ವಿಷವನು ಮೇಳವಿಸಿ ಬಳಿಕುಳಿದ ಮಧುರ ವಿ ಶಾಲ ವಸ್ತುಗಳಿಂದ ಕಜ್ಜಾಯಗಳ ಮಾಡಿಸಿದ
kāḷakūṭa halāhalava kā rkola dārada vatsanābhi ka rāḷa saurāṣṭrikava śauklika supradīpakava hēḷalaridenipeṃṭu viṣavanu mēḷavisi baḷikuḷida madhura vi śāla vastugaḷiṃda kajjāyagaḷa māḍisida
ದಿಟ್ಟಿಸಿದರೆವೆ ಸೀವುದಂಗೈ ಮುಟ್ಟಿದರೆ ಹುಗುಳಹುದು ಬಳಿಕವ ನಟ್ಟ ಕೈ ಕರಣದ ಸುವಾರದ ವಿದ್ಯವೇನರಿದೊ ಕೊಟ್ಟ ರೀತಂಗೆಲ್ಲವನು ಜಗ ಜಟ್ಟಿ ಹಾಯಿಕಿ ಕೊಂಡು ನುಣ್ಣನೆ ಚಿಟ್ಟುಮುರಿಯಾಟದಲಿ ಸದೆದನು ಮತ್ತೆ ಕೌರವರ
diṭṭisidareve sīvudaṃgai muṭṭidare huguḷahudu baḷikava naṭṭa kai karaṇada suvārada vidyavēnarido koṭṭa rītaṃgellavanu jaga jaṭṭi hāyiki koṃḍu nuṇṇane ciṭṭumuriyāṭadali sadedanu matte kauravara
ಮಡುವಿನಲಿ ಹಾಯ್ಕಿದಿರಿ ಹಾವಿನ ಹೆಡೆಯ ಕೊಂಡೂರಿದಿರಿ ಬಲು ವಿಷ ದಡಿಗೆಗಳ ಮೆಲಿಸಿದಿರಿ ಬಲ್ಲಂದದ ವಿಕಾರದಲಿ ಕೆಡಹಲನು ಮಾಡಿದಿರಿ ನೂರ್ವರ ಕಡಿದು ಶಾಕಿನಿಯರಿಗೆ ರಕುತವ ಕುಡಿಸಿದಲ್ಲದೆ ಮುನ್ನ ಸಾವೆನೆ ಕೇಳಿ ನೀವೆಂದ
maḍuvinali hāykidiri hāvina heḍeya koṃḍūridiri balu viṣa daḍigegaḷa melisidiri ballaṃdada vikāradali keḍahalanu māḍidiri nūrvara kaḍidu śākiniyarige rakutava kuḍisidallade munna sāvene kēḷi nīveṃda
ಒಳಗೆ ಬೆಳೆದುದು ವೈರಶಿಖಿ ಕಡೆ ಗಳಕೆ ಹಾಯ್ದುದು ಜನನಿ ಜನಕರ ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು ಬಲುಹುಗುಂದದೆ ಭೀಷ್ಮ ವಿದುರರ ಬಳಕೆಯಲಿ ತಾವಡಗಿ ಗುಣದಲಿ ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು
oḷage beḷedudu vairaśikhi kaḍe gaḷake hāydudu janani janakara balu nuḍigaḷali nūrvarirdaru śakuni mataviḍidu baluhuguṃdade bhīṣma vidurara baḷakeyali tāvaḍagi guṇadali kelana meccisi naḍedarivaru yudhiṣṭhirādigaḷu
ಆಟದಲಿ ತೊಡಗಿದರು ಮೊದಲಲಿ ತೋಟಿಯನು ಸಾಕೀತಗಳ ಕಾ ಲಾಟವನು ನಿಲಿಸುವೆನು ಶಸ್ತ್ರಾಸ್ತ್ರ ಪ್ರಸಂಗದಲಿ ಆಟವಿಕರಿವದಿರಲಿ ಬಲಿದೊಳ ತೋಟಿ ಬರಿದೇ ಬಿಡದು ಮೃತ್ಯುವಿ ನೂಟ ಮುಂದಿಹುದೆಂದು ಕರೆಕರೆಗುಂದಿದನು ಭೀಷ್ಮ
āṭadali toḍagidaru modalali tōṭiyanu sākītagaḷa kā lāṭavanu nilisuvenu śastrāstra prasaṃgadali āṭavikarivadirali balidoḷa tōṭi baridē biḍadu mr̥tyuvi nūṭa muṃdihudeṃdu karekareguṃdidanu bhīṣma
ಧರಣಿಪತಿ ಚಿತ್ತೈಸು ಗೌತಮ ವರಮುನಿಗೆ ಜನಿಸಿದ ಶರದ್ವನು ಪರಮಋಷಿಯಾತನು ತಪೋಯುತನಾಗಿ ಧನು ಸಹಿತ ಇರುತ ಕಂಡನು ದೈವ ಗತಿಯಲಿ ಸುರವಧುವನಾ ಕ್ಷಣಕೆ ಕಾಮ ಜ್ವರಿತನಾದನು ಚಲಿಸಿತಾತನ ವೀರ್ಯವವನಿಯಲಿ
dharaṇipati cittaisu gautama varamunige janisida śaradvanu paramar̥ṣiyātanu tapōyutanāgi dhanu sahita iruta kaṃḍanu daiva gatiyali suravadhuvanā kṣaṇake kāma jvaritanādanu calisitātana vīryavavaniyali
ಅದು ಶರಸ್ತಂಭದಲಿ ನೆಲೆಯಾ ದುದು ಮುನಿಚ್ಯುತ ವೀರ್ಯ ಮುನಿಸುತ ರುದಿಸಿದರು ಶಂತನು ಮಹೀಪತಿ ಕಂಡು ಕೃಪೆಯಿಂದ ಸದನದಲಿ ತನ್ಮಿಥುನವನು ಸಲ ಹಿದನು ಕೃಪ ಕೃಪೆಯೆಂಬ ಹೆಸರಾ ದುದು ಮಹಾಬಲನಾದನಾತನ ಕರೆಸಿದನು ಭೀಷ್ಮ
adu śarastaṃbhadali neleyā dudu municyuta vīrya munisuta rudisidaru śaṃtanu mahīpati kaṃḍu kr̥peyiṃda sadanadali tanmithunavanu sala hidanu kr̥pa kr̥peyeṃba hesarā dudu mahābalanādanātana karesidanu bhīṣma
ಆ ಕೃಪಾಚಾರಿಯನ ದೆಸೆಯಿಂ ದೀ ಕುಮಾರರು ನಿಖಿಳ ತರ್ಕ ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯಗಳನರಿದು ಲೋಕ ವೈದಿಕ ಮುಖ್ಯ ಸಕಲ ಕ ಲಾ ಕುಶಲರಾದರು ಧನುಃಪ್ರವಿ ವೇಕ ನಿಪುಣರನರಸುತಿದ್ದನು ಮತ್ತೆ ಗಾಂಗೇಯ
ā kr̥pācāriyana deseyiṃ dī kumāraru nikhiḷa tarka vyākaraṇa modalene caturdaśa vidyagaḷanaridu lōka vaidika mukhya sakala ka lā kuśalarādaru dhanuḥpravi vēka nipuṇaranarasutiddanu matte gāṃgēya
ಮುನಿ ಭರದ್ವಾಜಾಖ್ಯನಿರ್ದನು ಘನ ತಪೋ ನಿಷ್ಠೆಯಲಿ ದಿವಿಜಾಂ ಗನೆಯ ಕಂಡನು ಗಾಯವಡೆದನು ಮದನನೆಸುಗೆಯಲಿ ತನು ಪರಿಚ್ಯುತ ವೀರ್ಯವನು ಸ ತ್ಕನಕ ಕಲಶದೊಳಿರಿಸಲಲ್ಲಿಯೆ ಜನಿಸಿದನು ದ್ರೋಣಾಭಿಧಾನನು ಮುನಿಯ ದೆಸೆಯಿಂದ
muni bharadvājākhyanirdanu ghana tapō niṣṭheyali divijāṃ ganeya kaṃḍanu gāyavaḍedanu madananesugeyali tanu paricyuta vīryavanu sa tkanaka kalaśadoḷirisalalliye janisidanu drōṇābhidhānanu muniya deseyiṃda
ದ್ರೋಣಕಲಶದೊಳಾದ ದೆಸೆಯಿಂ ದ್ರೋಣನಾದನು ಬಳಿಕ ಮುನಿಯಾ ದ್ರೋಣಗುಪನಯನಾದಿ ವಿಪ್ರಕ್ರಿಯೆಗಳನು ರಚಿಸಿ ದ್ರೋಣನೊಡನೋದಿಸಿ ನೃಪಾಲ ಶ್ರೇಣಿಯನು ಶಸ್ತ್ರಾಸ್ತ್ರ ಕಳೆಯಲಿ ಜಾಣರನು ಮಾಡಿದನು ಭಾರಧ್ವಾಜ ಮುನಿಯಂದು
drōṇakalaśadoḷāda deseyiṃ drōṇanādanu baḷika muniyā drōṇagupanayanādi viprakriyegaḷanu racisi drōṇanoḍanōdisi nr̥pāla śrēṇiyanu śastrāstra kaḷeyali jāṇaranu māḍidanu bhāradhvāja muniyaṃdu
ಕೃಪನನುಜೆಯನು ತಂದು ದ್ರೋಣಂ ಗುಪಯಮವ ಮಾಡಿದನು ಹರ್ಷದಿ ದ್ರುಪದ ಬಂದೀ ದ್ರೋಣನೊಡನರಿದನು ಧನುಶ್ರುತಿಯ ಕೃಪೆಯಲೀ ದ್ರೋಣಂಗೆ ಜನಿಸಿದ ನಪರ ಶಂಕರ ರೂಪನಾಹವ ನಿಪುಣನಶ್ವತ್ಥಾಮ ಭಾರದ್ವಾಜ ಗೋತ್ರದಲಿ
kr̥pananujeyanu taṃdu drōṇaṃ gupayamava māḍidanu harṣadi drupada baṃdī drōṇanoḍanaridanu dhanuśrutiya kr̥peyalī drōṇaṃge janisida napara śaṃkara rūpanāhava nipuṇanaśvatthāma bhāradvāja gōtradali
ತಂದೆಯೊಳ್ ಶ್ರಮ ಮಾಡಿದರು ನೃಪ ವೃಂದ ಸಹಿತೀ ದ್ರೋಣ ದ್ರುಪದರು ನಿಂದನಾ ದ್ರುಪದಾಖ್ಯನಯ್ಯನು ದಿವಿಜ ನಗರಿಯಲಿ ಅಂದು ಸಖ್ಯಪ್ರೀತಿಯನು ಸಾ ನಂದದಲಿ ದ್ರೋಣಂಗೆ ವಿರಚಿಸಿ ಬಂದು ನಿಜ ರಾಜ್ಯಾಭಿಷೇಕವ ಧರಿಸಿದನು ದ್ರುಪದ
taṃdeyoḷ śrama māḍidaru nr̥pa vr̥ṃda sahitī drōṇa drupadaru niṃdanā drupadākhyanayyanu divija nagariyali aṃdu sakhyaprītiyanu sā naṃdadali drōṇaṃge viracisi baṃdu nija rājyābhiṣēkava dharisidanu drupada
ಇತ್ತಲೀ ದ್ರೋಣನ ಪಿತನು ಸುರ ರತ್ತ ಸರಿದನು ಕೆಲವು ದಿವಸಕೆ ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ ಹೊತ್ತ ದಾರಿದ್ರ್ಯದಲಿ ಮನ ಮರು ಗುತ್ತ ದೇಶಾಂತರದೊಳಗೆ ತೊಳ ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ ದ್ರೋಣ
ittalī drōṇana pitanu sura ratta saridanu kelavu divasake tattapōvanadalli viprakriyegaḷanu māḍi hotta dāridryadali mana maru gutta dēśāṃtaradoḷage toḷa lutta baṃdanu tanna maga sahitaḍaviyali drōṇa
ಪರಶುರಾಮಾಶ್ರಮಕೆ ಮುನಿಯೈ ತರಲು ಭಾರದ್ವಾಜನನು ಸ ತ್ಕರಿಸಿ ನುಡಿದನು ಜಾಮದಗ್ನ್ಯನು ಮಧುರ ವಚನದಲಿ ಧರೆಯನಿತ್ತೆನು ದ್ವಿಜರಿಗೀಯವ ಸರದೊಳಾ ನಿರ್ಧನನು ನೀನೇ ಪರಮ ಋಷಿಯಾತಿಥ್ಯ ಪೂಜೆಗಭಾಗ್ಯ ನಾನೆಂದ
paraśurāmāśramake muniyai taralu bhāradvājananu sa tkarisi nuḍidanu jāmadagnyanu madhura vacanadali dhareyanittenu dvijarigīyava saradoḷā nirdhananu nīnē parama r̥ṣiyātithya pūjegabhāgya nāneṃda
ಧನರಹಿತ ನಾ ಹೊತ್ತ ಭಾರಿಯ ಧನುವಿದೊಂದಿದೆ ದಿವ್ಯಶರವಿದೆ ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ ಎನಗೆ ನಿಮ್ಮಡಿಗಳ ಕೃಪಾಲೋ ಕನವಲೇ ಪರಿಯಾಪ್ತಿ ಲೋಕದ ಜನಮನೋರಂಜನವೆ ಬೇಹುದು ಶರವ ಕೊಡಿಯೆಂದ
dhanarahita nā hotta bhāriya dhanuvidoṃdide divyaśaravide manake baṃduda varisu nīnene drōṇa nasunaguta enage nimmaḍigaḷa kr̥pālō kanavalē pariyāpti lōkada janamanōraṃjanave bēhudu śarava koḍiyeṃda
ಇವು ಮಹಾ ನಿಸ್ಸೀಮತರ ವೈ ಷ್ಣವವಲೇ ದಿವ್ಯಾಸ್ತ್ರ ನಿವಹವ ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ ಇವು ಮಹಾರಣರಂಗದಲಿ ಶಾ ತ್ರವ ನಿವಾರಣವೈಸಲೆಮ್ಮೀ ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ
ivu mahā nissīmatara vai ṣṇavavalē divyāstra nivahava navaru koṭṭaru koṃḍanucita vidhānadali drōṇa ivu mahāraṇaraṃgadali śā trava nivāraṇavaisalemmī vyavahr̥tige tānēnupāyavenutta ciṃtisida
ಮಗನೆ ಬಲ್ಲೈ ದ್ರುಪದ ಭೂಪತಿ ಮಗುವುತನದಿಂದೆಮ್ಮ ಸಖನೋ ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ ಹೊಗುವ ನಡೆ ಪಂಚಾಲರಾಯನ ನಗರಿಯನು ನಾವೆಂದು ಮುನಿಮೌ ಳಿಗಳ ಮಣಿಯನು ಬೀಳುಕೊಂಡನು ರೇಣುಕಾ ಸುತನ
magane ballai drupada bhūpati maguvutanadiṃdemma sakhanō lagisuvevu nāvalli salahane mitra bhāvadali hoguva naḍe paṃcālarāyana nagariyanu nāveṃdu munimau ḷigaḷa maṇiyanu bīḷukoṃḍanu rēṇukā sutana
ಬಂದನೀತನು ದ್ರುಪದ ರಾಯನ ಮಂದಿರಕೆಯಾ ಬಾಗಿಲವನೊಡ ನೆಂದನೆಲವೋ ನಾವು ನಿಮ್ಮರಸಂಗೆ ಪೂರ್ವದಲಿ ಸಂದ ಮಿತ್ರರು ದ್ರೋಣಮುನಿಪತಿ ಯೆಂದು ನಮ್ಮಭಿದಾನ ನೀ ಹೇ ಳೆಂದು ಕಳುಹಲು ಬಂದು ಬಿನ್ನಹ ಮಾಡಿದನು ಹದನ
baṃdanītanu drupada rāyana maṃdirakeyā bāgilavanoḍa neṃdanelavō nāvu nimmarasaṃge pūrvadali saṃda mitraru drōṇamunipati yeṃdu nammabhidāna nī hē ḷeṃdu kaḷuhalu baṃdu binnaha māḍidanu hadana
ಸಿರಿಯ ಮದವಧಿಕ ಪ್ರತಾಪೋ ತ್ಕರದ ಮದ ಮೊದಲಾದ ಮದ ಸಂ ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ ತಿರಿವ ಹಾರುವರೊಡನೆ ಭೂಮೀ ತ್ವರರಿಗೆತ್ತಣ ಮೈತ್ರಿ ಹೋಗಲಿ ಕರೆಯ ಬೇಡೆನೆ ಬಂದು ಬಾಗಿಲಲವ ನಿವಾರಿಸಿದ
siriya madavadhika pratāpō tkarada mada modalāda mada saṃ caraṇa rajadali māsitītana manada maḍi varga tiriva hāruvaroḍane bhūmī tvararigettaṇa maitri hōgali kareya bēḍene baṃdu bāgilalava nivārisida
ಮರೆದನೇ ತಪ್ಪೇನು ನಾ ಕಂ ಡರುಹಿ ಮರಳುವೆವೈಸಲೇಯೆನು ತುರುಬಿದರೆ ತರುಬಿದರು ಕಂಬಿಯನಿಕ್ಕಿ ಬಾಗಿಲಲಿ ಒರೆಯನುಗುಳಿಚಿ ಖಡ್ಗದಲಿ ಬಿಡ ದರಿದನಿಕ್ಕೆಲದವರನೋಲಗ ಕುರವಣಿಸಿದನು ಮುಂದೆ ನಿಂದನು ದ್ರುಪದ ಭೂಪತಿಯ
maredanē tappēnu nā kaṃ ḍaruhi maraḷuvevaisalēyenu turubidare tarubidaru kaṃbiyanikki bāgilali oreyanuguḷici khaḍgadali biḍa daridanikkeladavaranōlaga kuravaṇisidanu muṃde niṃdanu drupada bhūpatiya
ಏನೆಲವೊ ಪಾಂಚಾಲ ಚಿಕ್ಕಂ ದಾನು ನೀನೊಂದಾಗಿ ತಂದೆಯೊ ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ ಏನು ಬಂದಿರಿಯೆಂಬ ಗುಣವ ನಾನುರಾಗವು ಸಾಲದೇ ಧನ ವೇನು ಫಲ ಕಕ್ಕುಲಿತೆಯೆಮಗಿಲ್ಲೆಂದನಾ ದ್ರೋಣ
ēnelavo pāṃcāla cikkaṃ dānu nīnoṃdāgi taṃdeyo ḷēnanaridevu maredu kaḷedā hā mahādēva ēnu baṃdiriyeṃba guṇava nānurāgavu sāladē dhana vēnu phala kakkuliteyemagilleṃdanā drōṇa
ಸೂರಿಗಳಿಗತಿ ಮೂರ್ಖರಿಗೆ ಗಂ ಭೀರರಿಗೆ ಭಂಡರಿಗೆ ವೇದಾ ಚಾರ ಸಂಯುಕ್ತರಿಗನಾಚಾರ ಪ್ರಸಕ್ತರಿಗೆ ಧೀರರಿಗೆ ಹಂದೆಗಳಿಗೆತ್ತಣ ಸೇರುವೆಗಳೈ ಭೂಪರಿಗೆ ಬಡ ಹಾರುವರಿಗೆತ್ತಣದು ಸಖತನವೆಂದನಾ ದ್ರುಪದ
sūrigaḷigati mūrkharige gaṃ bhīrarige bhaṃḍarige vēdā cāra saṃyuktariganācāra prasaktarige dhīrarige haṃdegaḷigettaṇa sēruvegaḷai bhūparige baḍa hāruvarigettaṇadu sakhatanaveṃdanā drupada
ಎಲವೊ ನಿನ್ನಾಸ್ಥಾನ ಸಹಿತೀ ಹೊಳಲ ಸುಡುವೆನು ನಿನ್ನ ಸೀಳಿದು ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ ಕಲಿತ ವಿದ್ಯದ ಕೋಲ ಮಕ್ಕಳ ಕಳುಹಿ ಕಟ್ಟಿಸಿ ವಾಮಪಾದದಿ ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ
elavo ninnāsthāna sahitī hoḷala suḍuvenu ninna sīḷidu baliya koḍuvenu bhūtagaṇakidiralla nīnenage kalita vidyada kōla makkaḷa kaḷuhi kaṭṭisi vāmapādadi taleyanodevenu mareyadiru nīneṃdanā drōṇa
ಎಂದು ಭಾಷೆಯ ಮಾಡಿ ತನ್ನಯ ನಂದನನನೊಡಗೊಂಡು ಜನಪದ ವೃಂದ ಹಲವನು ಕಳೆದು ಬಂದನು ಹಸ್ತಿನಾಪುರಿಗೆ ಅಂದು ಸಕಲ ಕುಮಾರಕರು ನಲ ವಿಂದ ನಗರಿಯ ಹೊರಗೆ ಗುರಿಗಳ ಮುಂದುವರಿದೆಸುತಿರಲು ಮುದದಲಿ ಕಂಡನಾ ದ್ರೋಣ
eṃdu bhāṣeya māḍi tannaya naṃdanananoḍagoṃḍu janapada vr̥ṃda halavanu kaḷedu baṃdanu hastināpurige aṃdu sakala kumārakaru nala viṃda nagariya horage gurigaḷa muṃduvaridesutiralu mudadali kaṃḍanā drōṇa
ಬೆರಸಿದನು ನೆರವಿಯನು ನೋಡು ತ್ತಿರೆ ಯುಧಿಷ್ಠಿರನೃಪನ ಹರಳುಂ ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ ನೆರೆದು ತಡಿಯಲಿ ನಿಂದು ನೂರರು ವರು ನಿರೀಕ್ಷಿಸಿ ಸಾಧ್ಯವಲ್ಲೆನು ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು
berasidanu neraviyanu nōḍu ttire yudhiṣṭhiranr̥pana haraḷuṃ gura vighātiyoḷugidu biddudagādha kūpadali neredu taḍiyali niṃdu nūraru varu nirīkṣisi sādhyavallenu tire magaṃge munīṃdraneṃdanu bēga tegeyeṃdu
ಸರಳ ತೊಡಚಿ ತದೀಯ ಮಣಿ ಬಂ ಧುರದ ಮುದ್ರಿಟೆಗೆಚ್ಚು ಹಿಳುಕಿನ ಶಿರಕೆ ತರವಾ ಹಿಳುಕಿನಲಿ ಕಣೆಯೆಚ್ಚು ಬಂಧದಲಿ ಸರಳ ಸಂದರ್ಭದಲಿ ನಿಮಿಷಾಂ ತರಕೆ ಫಣಿಪನ ಹೆಡೆವಣಿಯನು ದ್ಧರಿಸುವಂತಿರೆ ತೆಗೆದು ಬಿಸುಟನು ರತುನಮುದ್ರಿಕೆಯ
saraḷa toḍaci tadīya maṇi baṃ dhurada mudriṭegeccu hiḷukina śirake taravā hiḷukinali kaṇeyeccu baṃdhadali saraḷa saṃdarbhadali nimiṣāṃ tarake phaṇipana heḍevaṇiyanu ddharisuvaṃtire tegedu bisuṭanu ratunamudrikeya
ಕಂಡು ಬೆರಗಾದುದು ಕುಮಾರರ ತಂಡ ತನತನಗೈದಿ ಭೀಷ್ಮನ ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು ಚಂಡ ಭುಜಬಲನವರ ಕಾಣಿಸಿ ಕೊಂಡು ಕೊಟ್ಟನು ಭೀಷ್ಮನವರಿಗೆ ಖಂಡ ವಿಭವವನತುಳ ಧನಪತಿಯಾದನಾ ದ್ರೋಣ
kaṃḍu beragādudu kumārara taṃḍa tanatanagaidi bhīṣmana naṃḍaledudī muniyanīgale saṃtaviḍiyeṃdu caṃḍa bhujabalanavara kāṇisi koṃḍu koṭṭanu bhīṣmanavarige khaṃḍa vibhavavanatuḷa dhanapatiyādanā drōṇa
ವರ ಮುಹೂರ್ತದೊಳವರ ನೂರರು ವರನು ಕೊಟ್ಟನು ಶಸ್ತ್ರವಿದ್ಯಾ ಪರಿಣತರ ಮಾಡೆಂದು ದ್ರೋಣನ ಕೈಯಲಾ ಭೀಷ್ಮ ಗರುಡಿ ಕಟ್ಟಿತು ನೂರು ಯೋಜನ ವರೆಯ ವಿಸ್ತಾರದಲಿ ಸಾವಿರ ಕುರಿಯ ಹೊಯ್ದರು ಪೂಜಿಸಿದರಾ ಚದುರ ಚಂಡಿಕೆಯ
vara muhūrtadoḷavara nūraru varanu koṭṭanu śastravidyā pariṇatara māḍeṃdu drōṇana kaiyalā bhīṣma garuḍi kaṭṭitu nūru yōjana vareya vistāradali sāvira kuriya hoydaru pūjisidarā cadura caṃḍikeya
ಗರುಡಿ ಪೂಜಾ ವಿಭವ ಸಮನಂ ತರದಲನಿಬರು ಸಮವ ತೊಡಗಿದ ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ ಬರುತಲಿದ್ದರು ಕೂಡೆ ಹಸ್ತಿನ ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ
garuḍi pūjā vibhava samanaṃ taradalanibaru samava toḍagida rarasu makkaḷu kēḷidaru nānā digaṃtadali barutaliddaru kūḍe hastina purige vidyārthigaḷu pārthiva vara kumāraru baṃdu kaṃḍaru śastra paṃḍitana
ರಾಯ ಬಲ್ಲೈ ಮುನ್ನ ಶಿಶುವನು ತಾಯಿ ಬಿಸುಟಳು ಗಂಗೆಯಲಿ ರಾ ಧೇಯನಾದನು ರಾಧೆಯೆಂಬವಳೊಲಿದು ಸಾಕಿದರೆ ಆಯತಾಕ್ಷನು ಪರಶುರಾಮನೊ ಳಾಯುಧದ ಶ್ರಮಗಲಿತು ಬಳಿಕದು ವಾಯವಾದೊಡೆ ಬಂದನಾ ಗಜಪುರಿಗೆ ಕಲಿಕರ್ಣ
rāya ballai munna śiśuvanu tāyi bisuṭaḷu gaṃgeyali rā dhēyanādanu rādheyeṃbavaḷolidu sākidare āyatākṣanu paraśurāmano ḷāyudhada śramagalitu baḷikadu vāyavādoḍe baṃdanā gajapurige kalikarṇa
ಬಂದು ಹಸ್ತಿನಪುರಿಗೆ ರಾಧಾ ನಂದನನು ದುರ್ಯೋಧನನನೈ ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ ಅಂದು ಮೊದಲಾಗವರ ಸಖ್ಯಕೆ ಸಂದ ಕಾಣೆನು ಕರ್ಣ ಕುರುಪತಿ ಗೊಂದೆ ಜೀವನವೊಂದೆ ಮನ ಮತವೊಂದೆ ಕೇಳೆಂದ
baṃdu hastinapurige rādhā naṃdananu duryōdhanananai taṃdu kaṃḍanu kauravēśvaranivara kāṇisida aṃdu modalāgavara sakhyake saṃda kāṇenu karṇa kurupati goṃde jīvanavoṃde mana matavoṃde kēḷeṃda
ಬೇಟೆ ಕರ್ಣನ ಕೂಡೆ ಹಗಲಿರು ಳಾಟ ಕರ್ಣನ ಕೂಡೆ ಷಡು ರಸ ದೂಟ ಕರ್ಣನ ಕೂಡೆ ಶಸ್ತ್ರಾಭ್ಯಾಸವವ ಕೂಡೆ ತೋಟ ಮನದಲಿ ನಗೆಯ ಮಧುರದ ನೋಟ ಕಣ್ಣಿನೊಳುಳಿದವರ ಕೂ ಡಾಟಗಳು ತಾವಿಬ್ಬರೊಂದೆನಿಸಿದರು ಜಗವರಿಯೆ
bēṭe karṇana kūḍe hagaliru ḷāṭa karṇana kūḍe ṣaḍu rasa dūṭa karṇana kūḍe śastrābhyāsavava kūḍe tōṭa manadali nageya madhurada nōṭa kaṇṇinoḷuḷidavara kū ḍāṭagaḷu tāvibbaroṃdenisidaru jagavariye
ಸುರಗಿ ಸಬಳ ಕಠಾರಿಯುಬ್ಬಣ ಹರಿಗೆ ಹಿರಿಯುಬ್ಬಣವಡಾಯುಧ ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ ಪರಶು ಕಕ್ಕಡೆ ಮುಸಲ ಹಲ ಮು ದ್ಗರ ಧನುರ್ದಂಡಾದಿ ಶಸ್ತ್ರೋ ತ್ಕರದಲನಿಬರು ಕುಶಲರಾದರು ಮುನಿಯ ಗರುಡಿಯಲಿ
suragi sabaḷa kaṭhāriyubbaṇa harige hiriyubbaṇavaḍāyudha parigha cakra musuṃḍi tōmara bhiṃḍivāḷa caya paraśu kakkaḍe musala hala mu dgara dhanurdaṃḍādi śastrō tkaradalanibaru kuśalarādaru muniya garuḍiyali
ಜನಪ ಕೇಳೈ ಭೀಮ ದುರ್ಯೋ ಧನರು ಗದೆಯಲಿ ಮಿಗಿಲು ಕರ್ಣಾ ರ್ಜುನರು ಧನುವಿನಲಧಿಕರಾದರು ನೃಪ ಕುಮಾರರಲಿ ತನತನಗೆ ಸರ್ವಾಯುಧಂಗಳ ಲನಿಬರರಿದರು ಕೂಡೆ ಗುರುವಿನ ಮನಕೆ ಹತ್ತೆಯವಾದನರ್ಜುನನಸ್ತ್ರ ಶಿಕ್ಷೆಯಲಿ
janapa kēḷai bhīma duryō dhanaru gadeyali migilu karṇā rjunaru dhanuvinaladhikarādaru nr̥pa kumārarali tanatanage sarvāyudhaṃgaḷa lanibararidaru kūḍe guruvina manake hatteyavādanarjunanastra śikṣeyali
Keys: ← → turn the page, J K step through the verses.
Illustration: Verse & Place (Project-owned).