ಅವನಿಯದಿರಿತು ಗಗನ ತಾರಾ ನಿವಹವದು ಬಿದಿರಿತ್ತು ವರಪಾಂ ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಟಣಿಸೆ
avaniyadiritu gagana tārā nivahavadu bidirittu varapāṃ ḍavaru kaṇanoḷu veṃṭhaṇisidaru kamaṭha ṭeṃṭaṇise
ಉದ್ಯೋಗ ಪರ್ವ — ಸಂಧಿ ೧೨ · ಉದ್ಯೋಗ ಪರ್ವ — ಸಂಧಿ ೧೨
udyōga parva — saṃdhi 12
The complete udyoga parva · sandhi 12 in Kannada.
49 passagesKannada with transliteration
Invocation
ಅವನಿಯದಿರಿತು ಗಗನ ತಾರಾ ನಿವಹವದು ಬಿದಿರಿತ್ತು ವರಪಾಂ ಡವರು ಕಣನೊಳು ವೆಂಠಣಿಸಿದರು ಕಮಠ ಟೆಂಟಣಿಸೆ
avaniyadiritu gagana tārā nivahavadu bidirittu varapāṃ ḍavaru kaṇanoḷu veṃṭhaṇisidaru kamaṭha ṭeṃṭaṇise
ಕೇಳು ಜನಮೇಜಯ ಧರಿತ್ರೀ ಪಾಲ ಸಂಧಿಯ ಮುರಿದು ಲಕ್ಷ್ಮೀ ಲೋಲನೈತರುತಿವರ ಹೊರೆಗಟ್ಟಿದನು ಸಾತ್ಯಕಿಯ ಕೇಳಿದನು ಮುರಹರನ ಬರುವನು ಮೌಳಿಮಸ್ತಕದಖಿಳ ಧರಣೀ ಪಾಲರೊಡನಿದಿರಾಗಿ ಬಂದನು ಧರ್ಮ ನಂದನನು
kēḷu janamējaya dharitrī pāla saṃdhiya muridu lakṣmī lōlanaitarutivara horegaṭṭidanu sātyakiya kēḷidanu muraharana baruvanu mauḷimastakadakhiḷa dharaṇī pālaroḍanidirāgi baṃdanu dharma naṃdananu
ದೂರದಲಿ ದುಮ್ಮಾನಿಸಿದ ವದ ನಾರವಿಂದವ ಕಂಡು ಸಂಧಿಗೆ ಸೇರರವದಿರು ಬಲಿದುದಾಹವವೀತನಂಗದಲಿ ಶೌರಿಗಾಯ್ತವಮಾನವಿದೆಲೇ ಮಾರಿಗುತ್ಸವವೆನುತ ಬಂದನು ಮಾರುತನಮಗನಸುರಮರ್ದನ ನಿಂಗಿತವನರಿದು
dūradali dummānisida vada nāraviṃdava kaṃḍu saṃdhige sēraravadiru balidudāhavavītanaṃgadali śaurigāytavamānavidelē mārigutsavavenuta baṃdanu mārutanamaganasuramardana niṃgitavanaridu
ದರುಶನವ ನೀಡಿದನು ಕೃಷ್ಣನ ಚರಣದಲಿ ಮೈಯಿಕ್ಕಿದರು ಮಿ ಕ್ಕರಸುಗಳು ದ್ರುಪದಾದಿ ನಾಯಕರೆರಗಿದರು ಪದಕೆ ಪರಮ ಬಾಂಧವರೆಲ್ಲ ಜೀವಂ ತರೆ ನದೀಸುತ ವಿದುರ ಗುರು ನೃಪ ಗುರು ತನುಜ ಧೃತರಾಷ್ತ್ರರೆಂದನು ಧರ್ಮನಂದನನು
daruśanava nīḍidanu kr̥ṣṇana caraṇadali maiyikkidaru mi kkarasugaḷu drupadādi nāyakareragidaru padake parama bāṃdhavarella jīvaṃ tare nadīsuta vidura guru nr̥pa guru tanuja dhr̥tarāṣtrareṃdanu dharmanaṃdananu
ಭೂಮಿಪತಿ ನಿಜಬಾಂಧವರು ಸು ಕ್ಷೇಮಿಗಳು ತಾವೆಲ್ಲ ನಿಮ್ಮೀ ಕ್ಷೇಮ ಕುಶಲವ ಕೇಳಿದರು ಕಳುಹಿದರು ಹರಕೆಗಳ ಆ ಮಹಾ ಸಂಗ್ರಾಮ ಮುಖದಲಿ ತೋಮರದ ಕಾಣಿಕೆಗಳಲಿ ಸು ಪ್ರೇಮವನು ಬೆಸಸುವುದು ದುರ್ಯೋಧನನ ಮತವೆಂದ
bhūmipati nijabāṃdhavaru su kṣēmigaḷu tāvella nimmī kṣēma kuśalava kēḷidaru kaḷuhidaru harakegaḷa ā mahā saṃgrāma mukhadali tōmarada kāṇikegaḷali su prēmavanu besasuvudu duryōdhanana mataveṃda
ಭೂಮಿಯೊಳಗರ್ಧವನು ಬೇಡಿದೊ ಡಾ ಮಹೀಪತಿಯೈವರಿಗೆ ಸಂ ಗ್ರಾಮ ಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು ಸಾಮದಲಿ ಸೊಗಸಿಲ್ಲ ನೀವ್ ನಿ ಸ್ಸೀಮರಾದೊಡೆ ಜೋಡಿಸುವುದು ದ್ಧಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ
bhūmiyoḷagardhavanu bēḍido ḍā mahīpatiyaivarige saṃ grāma bhūmiyanaide koṭṭanu nimmoḷapriyanu sāmadali sogasilla nīv ni ssīmarādoḍe jōḍisuvudu ddhāma kurubhūmiyali kuḷavaridavara patikarisi
ಮುನಿದೊಡೆಯು ನಿಮ್ಮೊಳಗೆ ನೀವೇ ಮನಕತವ ಮಾಡುವಿರಿಯಗ್ರಜ ರನುಜರಲಿ ಕದಡಾದೊಪಶಮಿಸುವಿರಿ ನಿಮ್ಮೊಳಗೆ ಎನಗೆ ನಿಮ್ಮಯ ದೂಸರಿಂದಾ ಯ್ತನಿತು ಸಭೆಯಲಿ ಮಾನಹಾನಿಗ ಳೆನಲು ನೊಂದನು ಧರ್ಮಸುತನಿಂತೆಂದ ನಸುನಗುತ
munidoḍeyu nimmoḷage nīvē manakatava māḍuviriyagraja ranujarali kadaḍādopaśamisuviri nimmoḷage enage nimmaya dūsariṃdā ytanitu sabheyali mānahāniga ḷenalu noṃdanu dharmasutaniṃteṃda nasunaguta
ಮುಳಿದು ಸುರಗಿಯನುಗಿದು ಗಗನಕೆ ನಿಲುಕಿ ಮಾಡುವುದೇನು ನಿಮ್ಮಡಿ ಗಳಿಗೆ ತಪ್ಪಿದ ತರಳರಖಿಳವ್ಯಾಪ್ತಿಯೇಗುವುದು ಖಳರು ಮಾಡಿದ ಖತಿಯನೆನ್ನೊಳು ತಿಳಿದು ಮರೆಯಲುಬೇಕು ಕರುಣಾ ಜಲಧಿ ನೀನೆಂದಂಘ್ರಿಗಳ ಹಿಡಿದನು ಯುಧಿಷ್ಥಿರನು
muḷidu suragiyanugidu gaganake niluki māḍuvudēnu nimmaḍi gaḷige tappida taraḷarakhiḷavyāptiyēguvudu khaḷaru māḍida khatiyanennoḷu tiḷidu mareyalubēku karuṇā jaladhi nīneṃdaṃghrigaḷa hiḍidanu yudhiṣthiranu
ಬರಿದೆ ಕಾಡದಿರೇಳು ಮನದಲಿ ಮರೆದೆವಾಗಳೆ ಕೌರವನು ಮುಂ ದರಿಯದವಗಡಿಸಿದನು ಹೋಗಲಿ ನಿಮ್ಮ ದೂರೇಕೆ ನೆರವಣಿಗೆಯುಂಟಾದಡಿಂದಿನ ಮರುದಿವಸ ಸಂಗ್ರಾಮ ಸೈರಿಸ ಲರಿಯರವದಿರು ನಡೆ ಕುರುಕ್ಷೇತ್ರಕ್ಕೆ ಬೇಗದಲಿ
baride kāḍadirēḷu manadali maredevāgaḷe kauravanu muṃ dariyadavagaḍisidanu hōgali nimma dūrēke neravaṇigeyuṃṭādaḍiṃdina marudivasa saṃgrāma sairisa lariyaravadiru naḍe kurukṣētrakke bēgadali
ಹಗೆಯನು ನೀ ಹೊತ್ತು ಭೈತರ ಮಾನವನು ಪತಿಕರಿಸಬೇಡಿದರು ತಾನೊಡೆಯನಾದಡಗ ಗುಣವೊಪ್ಪೊಡೆಯು ನೀನಾಗಿ ಮಾನಭಂಗವ ಧರಿಯುಮೃಷಭಿ ಮಾನವನು ನೀನಳಹದಕ್ಷ ಸಂ ಧಾನವನು ಸೇರಿವಡೆ ಸೈರಿದೆಯದನಾಸೆ ಭೀಮ
hageyanu nī hottu bhaitara mānavanu patikarisabēḍidaru tānoḍeyanādaḍaga guṇavoppoḍeyu nīnāgi mānabhaṃgava dhariyumr̥ṣabhi mānavanu nīnaḷahadakṣa saṃ dhānavanu sērivaḍe sairideyadanāse bhīma
ಮಾರಿಯರಕೆಗಳಡಗದಂತಕ ನೂರು ತುಂಬದೆ ಶಾಕಿನಿಯರೊಡ ಲೋರೆ ನನೆಯದೆ ಡಾಕಿನಿಯರಿಗೆ ಡೊಳ್ಳು ಸಾಲಿಡದೆ ಕೌರವನ ತನಿಗರುಳ ದಂಡೆಯ ತೋರಣದ ಬಾಗಿಲಿನ ವಿಭವದಿ ವಾರಣಾಹ್ವಯ ನಗರಿಯನು ಹೊಗದಿಹೆನೆ ಹೇಳೆಂದ
māriyarakegaḷaḍagadaṃtaka nūru tuṃbade śākiniyaroḍa lōre naneyade ḍākiniyarige ḍoḷḷu sāliḍade kauravana tanigaruḷa daṃḍeya tōraṇada bāgilina vibhavadi vāraṇāhvaya nagariyanu hogadihene hēḷeṃda
ತೋರುನಡೆ ಗಜಬಜಿಸಲೇ ಕಿ ನ್ನಾರು ತಿಂಗಳೆ ನಾಳೆ ಪಯಣಕೆ ಸಾರಿಸೇಳೆಂದವರುಪಪ್ಲವ್ಯಕ್ಕೆ ನಡೆತಂದು ಬೇರೆ ಬೇರವನೀಶರಿಗೆ ಪಡಿ ಹಾರರನು ಕಳುಹಿದನು ಕೃಷ್ಣನ ದೂರು ಬರಲಳವಡಿಸಿದರು ಸಂಗ್ರಾಮ ಸಾಧನವ
tōrunaḍe gajabajisalē ki nnāru tiṃgaḷe nāḷe payaṇake sārisēḷeṃdavarupaplavyakke naḍetaṃdu bēre bēravanīśarige paḍi hāraranu kaḷuhidanu kr̥ṣṇana dūru baralaḷavaḍisidaru saṃgrāma sādhanava
ಗುಡಿಯ ಮಂಡವಿಗೆಗಳ ಹೊರೆಗೆ ಗ ಳೊಡನೊಡನೆ ಸಂಭ್ರಮಿಸಿದವು ಬರ ಸಿಡಿಲು ಬೊಬ್ಬಿಡುವಂತೆ ಮಸೆದವು ಕೂಡೆ ಕೈದುಗಳು ದಡಿಯ ಬಲಿಸುವ ಗುಳವ ರೆಂಚೆಯ ಗಡಣಿಸುವ ಬಲುಗೀಲಗಾಲಿಯ ತೊಡಿಸುವುತ್ಸವವಾಯ್ತುಪಪ್ಲಾವ್ಯದೊಳು ರಭಸದೊಳು
guḍiya maṃḍavigegaḷa horege ga ḷoḍanoḍane saṃbhramisidavu bara siḍilu bobbiḍuvaṃte masedavu kūḍe kaidugaḷu daḍiya balisuva guḷava reṃceya gaḍaṇisuva balugīlagāliya toḍisuvutsavavāytupaplāvyadoḷu rabhasadoḷu
ಹಿಳುಕ ತಿದ್ದುವ ಬಿಲ್ಲಬಾಗಿನ ಹೊಳಹನೊಯ್ಯಾರಿಸುವ ಮಾರ್ತಿರು ಗಳನು ಜೋಡಿಸುವಖಿಳ ಕೈದುವ ಮಸೆವ ಮಂಡಲಿಯ ಕಳಕಳಿಕೆ ಬಲುಹಾಯ್ತು ರಾವುತ ರಲಿ ಗಜಾರೋಹಕರ ರಥಿಕಾ ವಳಿಯಲವರವರಂಗದಲಿ ಸಂವರಣೆಯೊಪ್ಪಿದವು
hiḷuka tidduva billabāgina hoḷahanoyyārisuva mārtiru gaḷanu jōḍisuvakhiḷa kaiduva maseva maṃḍaliya kaḷakaḷike baluhāytu rāvuta rali gajārōhakara rathikā vaḷiyalavaravaraṃgadali saṃvaraṇeyoppidavu
ಜೋಳಿ ಹರಿದುದು ದೆಸೆದೆಸೆಗೆ ಭೂ ಪಾಲರಿಗೆ ರಾಯಸದ ಹದನನು ಕೇಳಿದಾಗಳೆ ಕವಿದು ಬಂದರು ತಮ್ಮ ದಳ ಸಹಿತ ಸೂಳವಿಸಿದವು ಸನ್ನೆಯಲಿ ನಿ ಸ್ಸಾಳವಂದಿನ ಮರುದಿವಸ ವೈ ಹಾಳಿಯನು ಹೊರವಂಟರನಿಬರು ದೈತ್ಯರಿಪು ಸಹಿತ
jōḷi haridudu desedesege bhū pālarige rāyasada hadananu kēḷidāgaḷe kavidu baṃdaru tamma daḷa sahita sūḷavisidavu sanneyali ni ssāḷavaṃdina marudivasa vai hāḷiyanu horavaṃṭaranibaru daityaripu sahita
ಎಲೆಲೆ ನೆಲ ಬೆಸಲಾದುದೆನೆ ಬಲು ದಳದ ತೆರಳಿಕೆ ತೀವಿತವನಿಯ ತಳಪಟದ ಹಬ್ಬುಗೆಯೊಳಬ್ಬರಿಸಿದವು ಬೊಬ್ಬೆಗಳು ತಲೆವರೆಯ ತೂಕದೊಳು ಫಣಿಪತಿ ಯಳುಕೆ ತೊಟ್ಟನು ತರಣಿ ಸೇನೋ ಚ್ಚಳಿತ ಧೂಳಿಯ ಝಗೆಯನದ್ಭುತವಾಯ್ತು ದೆಖ್ಖಾಳ
elele nela besalādudene balu daḷada teraḷike tīvitavaniya taḷapaṭada habbugeyoḷabbarisidavu bobbegaḷu talevareya tūkadoḷu phaṇipati yaḷuke toṭṭanu taraṇi sēnō ccaḷita dhūḷiya jhageyanadbhutavāytu dekhkhāḷa
ಹಿಣಿಲ ಹಾಹೆಯ ಬಿರುದುಗಳ ಡಾ ವಣಿಯ ನಾಯಕವಾಡಿಗಳ ಸಂ ದಣಿಯ ಸುಕರದ ಕೈದುಗಳ ವರವೀರ ನೂಪುರದ ಕುಣಿವ ಸುಭಟರ ಪಳರವದ ಡೊಂ ಕಣಿಯ ಖೇಟಕ ಖಡ್ಗ ಬಲು ಬಿಲು ಗಣೆಯ ತಿಳಿವೊಡಸಂಖ್ಯೆಯಹ ಕಾಲಾಳ ನೋಡಿದರು
hiṇila hāheya birudugaḷa ḍā vaṇiya nāyakavāḍigaḷa saṃ daṇiya sukarada kaidugaḷa varavīra nūpurada kuṇiva subhaṭara paḷaravada ḍoṃ kaṇiya khēṭaka khaḍga balu bilu gaṇeya tiḷivoḍasaṃkhyeyaha kālāḷa nōḍidaru
ಅಳವಿಗೊಟ್ಟೊಡೆ ರವಿಯ ತುರಗವ ನುಳುಹಿ ಮುಂಚುವ ಜವದ ನೊಸಲೊಳು ಹೊಳೆದ ಕನ್ನಡಿಗಳ ಖುರಾಂತದ ಜಡಿವ ಜೋಡುಗಳ ಬಿಳಿಯ ಚೌರಿಯ ಜಲ್ಲಿಗಳ ಹ ತ್ತಳದ ರಾಹುತ ಸನ್ನೆಯೊಳು ನೆಲ ನಲುಗೆ ನಿಗುರುವ ನಿಲುವ ನಿರುಪಮ ಹಯವ ನೋಡಿದರು
aḷavigoṭṭoḍe raviya turagava nuḷuhi muṃcuva javada nosaloḷu hoḷeda kannaḍigaḷa khurāṃtada jaḍiva jōḍugaḷa biḷiya cauriya jalligaḷa ha ttaḷada rāhuta sanneyoḷu nela naluge niguruva niluva nirupama hayava nōḍidaru
ಶೈಲದೆಡಬಲದೊರತೆಯೆನಲು ಕ ಪೋಲದೊಳು ದಾರಿಡುವ ಮದಜಲ ದಾಳಿಗಳ ಭರಿಕೈಯ ಲವುಡಿಯ ವಜ್ರಮುಷ್ಟಿಗಳ ನಾಳಿವಿಲುಗಳ ರಾಯಜೋದರ ಮೇಲುಗಣೆಗಳ ಚಿತ್ರಗತಿ ಶುಂ ಡಾಲಗಳ ನೋಡಿದರು ಗಜಸೇನಾ ಸಮುದ್ರದಲಿ
śailadeḍabaladorateyenalu ka pōladoḷu dāriḍuva madajala dāḷigaḷa bharikaiya lavuḍiya vajramuṣṭigaḷa nāḷivilugaḷa rāyajōdara mēlugaṇegaḷa citragati śuṃ ḍālagaḷa nōḍidaru gajasēnā samudradali
ಥಳಥಳಿಪ ಸೂಲಿಗೆಯ ಮುಮ್ಮೊನೆ ಗಳ ರಥಾಂಗದ ಮೇಲು ಪಸರದ ಪಳಹರದ ಖುರಗತಿಯ ಜೋಡ ಜವಾಯ್ಲ ಕುದುರೆಗಳ ಬಲದ ಬದ್ದರಗೊಟ್ಟಿದಂಬಿನ ಹೊಳೆವ ಹೊದೆಗಳ ಸೂತರುರವಣೆ ಗಳ ಸುರೇಖೆಯ ಗತಿಯ ವಾಜಿಯ ರಥವ ನೋಡಿದರು
thaḷathaḷipa sūligeya mummone gaḷa rathāṃgada mēlu pasarada paḷaharada khuragatiya jōḍa javāyla kuduregaḷa balada baddaragoṭṭidaṃbina hoḷeva hodegaḷa sūtaruravaṇe gaḷa surēkheya gatiya vājiya rathava nōḍidaru
ಅವನಿಪಾಲರ ಮಕುಟ ಮಣಿಗಣ ನಿವಹವೆತ್ತಿಗ ಖಡ್ಗ ಪರಶುಗ ಳವಿರಳದ ತೆರೆಗಳ ಪತಾಕಾವಳಿಯ ಬೆಳುನೊರೆಯ ವಿವಿಧಗಜ ಯಹ ಜಲ ಚರೌಘದ ಪವನಜನ ಕೈಸನ್ನೆಗಳ ಘನ ಪವನಗತಿಯಲಿ ಲಹರಿಮಸಗಿತು ಬಹಳ ಬಲಜಲಧಿ
avanipālara makuṭa maṇigaṇa nivahavettiga khaḍga paraśuga ḷaviraḷada teregaḷa patākāvaḷiya beḷunoreya vividhagaja yaha jala caraughada pavanajana kaisannegaḷa ghana pavanagatiyali laharimasagitu bahaḷa balajaladhi
ಹರಿಯುಧಿಷ್ಠಿರರೊಂದು ಗಜಕಂ ಧರದೊಳಿದ್ದರು ನಿಖಿಳಸೇನೆಯ ತೆರಳಿಕೆಯ ತೋರಿಸುತೆ ಬಂದರು ಭೀಮ ಫಲುಗುಣರು ಬಿರುದ ಧೃಷ್ಟದ್ಯುಮ್ನ ಮೊದಲಾ ಗಿರೆ ಕುತೂಹಲಿ ದ್ರುಪದ ಭೂವರ ನುರವಣಿಸಿ ತೋರಿಸಿದನೊಂದ ಕ್ಷೋಹಿಣೀ ಬಲವ
hariyudhiṣṭhiraroṃdu gajakaṃ dharadoḷiddaru nikhiḷasēneya teraḷikeya tōrisute baṃdaru bhīma phaluguṇaru biruda dhr̥ṣṭadyumna modalā gire kutūhali drupada bhūvara nuravaṇisi tōrisidanoṃda kṣōhiṇī balava
ವರ ಯುಧಾಯನ್ಯೂತ್ತಮೌಜಸ ರುರು ಶಿಖಂಡಿ ಸುಚೇಕಿತಾನ ಸ ಮರ ದುರಂಧರ ವೀರ ಪಾಂಚಾಲ ಕ್ಷಿತೀಶ್ವರರು ತುರಗ ಗಜರಥ ಪಾಯದಳ ಸಾ ಗರದ ಸಂರಂಭದೊಳು ನಿಜಸಂ ವರಣೆಯನು ತೋರಿದರು ತಮ್ಮಕ್ಷೋಹಿಣೀ ಬಲವ
vara yudhāyanyūttamaujasa ruru śikhaṃḍi sucēkitāna sa mara duraṃdhara vīra pāṃcāla kṣitīśvararu turaga gajaratha pāyadaḷa sā garada saṃraṃbhadoḷu nijasaṃ varaṇeyanu tōridaru tammakṣōhiṇī balava
ವರ ವಿರಾಟನು ಶಂಖ ನೃಪನು ತ್ತರ ಶತದ್ಯುಮ್ನಕನು ಶತ ಚಂ ದ್ರರು ಶತಾನೀಕರು ಶತಾಯುಧರೆನಿಪ ನೃಪವರರು ತುರುಕರುರು ಸಾಹಣ ಸಮುದ್ರದ ವರುಯವನ ಖುರಸಾಣ ಕಾಶೀ ಶ್ವರರು ತಮ್ಮಕ್ಷೋಹಿಣಿಯ ತೋರಿದರು ಧರ್ಮಜಗೆ
vara virāṭanu śaṃkha nr̥panu ttara śatadyumnakanu śata caṃ draru śatānīkaru śatāyudharenipa nr̥pavararu turukaruru sāhaṇa samudrada varuyavana khurasāṇa kāśī śvararu tammakṣōhiṇiya tōridaru dharmajage
ಜಯಸಮರ ಸಾಮಗ್ರ ಬಲ ಕೈ ಕಯ ನೃಪಾಲರು ತಮ್ಮೊಳಕ್ಷೋ ಣಿಯನು ತೋರಿದರಿಅವರಿಭಕಂದರದ ಭೂಪತಿಗೆ ಭಯವಿಹೀನನು ಪಾಂಡ್ಯನೃಪ ಸೃಂ ಜಯರು ಸೋಮಕ ಭೂಪರಕ್ಷೋ ಣಿಯನು ತೋರಿದರವನಿ ಕುಸಿದುದು ದಳದ ಪದಹತಿಗೆ
jayasamara sāmagra bala kai kaya nr̥pālaru tammoḷakṣō ṇiyanu tōridariavaribhakaṃdarada bhūpatige bhayavihīnanu pāṃḍyanr̥pa sr̥ṃ jayaru sōmaka bhūparakṣō ṇiyanu tōridaravani kusidudu daḷada padahatige
ಚೈದ್ಯದೇಶದ ಧೃಷ್ಟಕೇತು ಬ ಲೋದಧಿಯನಕ್ಷೋಹಿಣಿಯ ಮೊದ ಲಾದುದೆನೆ ತೋರಿದನು ಕುಂತೀಭೋಜನಕ್ಷೋಣಿ ಆದವೇಳಕ್ಷೋಣಿ ಬಲ ಬೇ ರಾದ ನಾಯಕ ವಾಡಿಯಲಿ ಹಿರಿ ದಾದುದಾಹವ ಸೇನೆ ಗೋಚರವಲ್ಲ ಗಣನೆಯಲಿ
caidyadēśada dhr̥ṣṭakētu ba lōdadhiyanakṣōhiṇiya moda lādudene tōridanu kuṃtībhōjanakṣōṇi ādavēḷakṣōṇi bala bē rāda nāyaka vāḍiyali hiri dādudāhava sēne gōcaravalla gaṇaneyali
ಕ್ಷತ್ರಧರ್ಮನು ನೀಲನು ಬೃಹ ತ್ಕ್ಷತ್ರ ಶೌರಿಯ ತನುಜ ವತ್ಸಜ ಚಿತ್ರವರ್ಮ ಹಿರಣ್ಯವರ್ಮನು ಚಾರು ಚೇಷ್ಟಕನು ಶತ್ರುಮಥನನು ವಿಂಧ್ಯಗಿರಿಯ ಸು ಹೋತ್ರನನ್ವಯದವರು ಪಾಂಡವ ಮಿತ್ರರೊದಗಿತು ಕೇಳು ಜನಮೇಜಯ ಮಹೀಪಾಲ
kṣatradharmanu nīlanu br̥ha tkṣatra śauriya tanuja vatsaja citravarma hiraṇyavarmanu cāru cēṣṭakanu śatrumathananu viṃdhyagiriya su hōtrananvayadavaru pāṃḍava mitrarodagitu kēḷu janamējaya mahīpāla
ವೀರ ಪಾರ್ಥನಿಗಿರುಳು ಸೋತಂ ಗಾರವರ್ಮನು ಗಗನಚರ ಪರಿ ವಾರ ಬಹಳದಿ ಬಂದು ಕಂಡನು ಕಲಿ ಯುಧಿಷ್ಠಿರನ ಕೌರವೇಂದ್ರನ ನೋಯಿಸಿದ ಧುರ ಧೀರ ಸಾಹಸ ಚಿತ್ರಸೇನನು ದಾರ ಗುಣನಿಧಿ ಬಂದು ಕಂಡನು ಮಿತ್ರಭಾವದಲಿ
vīra pārthanigiruḷu sōtaṃ gāravarmanu gaganacara pari vāra bahaḷadi baṃdu kaṃḍanu kali yudhiṣṭhirana kauravēṃdrana nōyisida dhura dhīra sāhasa citrasēnanu dāra guṇanidhi baṃdu kaṃḍanu mitrabhāvadali
ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ ದಾಡೆಗ ಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪುಗಳ ಭಾರಿ ದೇಹನು ಭಟಭಯಂಕರ ತೋರಹತ್ತನು ದೈತ್ಯಕುಲ ಪರಿ ವಾರ ಬಹಳದಿ ಬಂದು ಕಂಡನು ಕಲಿ ಘಟೋತ್ಕಚನು
kāriruḷa paṭṭaṇake caṃdrana tōraṇava bigidaṃte dāḍega ḷōraṇada hoḷahugaḷa hogariḍuvoḍala kappugaḷa bhāri dēhanu bhaṭabhayaṃkara tōrahattanu daityakula pari vāra bahaḷadi baṃdu kaṃḍanu kali ghaṭōtkacanu
ಬಲದ ದೆಖ್ಖಾಳವನು ನೋಡಿದ ರೊಲವಿನಲಿ ನಿಜಸೇನೆ ಸಹಿತತಿ ಬಲುರುಪಪ್ಲವ್ಯಕ್ಕೆ ಬಂದರು ಹೊಕ್ಕರಾಲಯವ ಬಳಿಕ ಸುಮುಹೂರ್ತದಲಿ ಹೊರಗುಡಿ ಗಳನು ಹಾಯ್ಕಿದರಂದು ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ
balada dekhkhāḷavanu nōḍida rolavinali nijasēne sahitati balurupaplavyakke baṃdaru hokkarālayava baḷika sumuhūrtadali horaguḍi gaḷanu hāykidaraṃdu yadukula tilaka gadugina vīranārāyaṇana karuṇadali
ಪರಿಮಿತಕೆ ತನ್ನಾಪ್ತ ಸಚಿವರ ಕರೆಸಿಕೊಂಡನು ಕೃಷ್ಣರಾಯಂ ಗರಸ ಬಿನ್ನಹ ಮಾಡಿದನು ನೃಪಕಾರ್ಯ ಸಂಗತಿಯ ಧುರಕೆ ಸೇನಾನಾಥರಿಲ್ಲದೆ ನೆರೆದ ಬಲ ಸಾಲಿರುಹೆ ಮುರಿದೊಡೆ ಹರೆವವೊಲು ಹುರುಳಿಲ್ಲ ದಳಪತಿ ಯಾವನಹನೆಂದ
parimitake tannāpta sacivara karesikoṃḍanu kr̥ṣṇarāyaṃ garasa binnaha māḍidanu nr̥pakārya saṃgatiya dhurake sēnānātharillade nereda bala sāliruhe muridoḍe harevavolu huruḷilla daḷapati yāvanahaneṃda
ದ್ರುಪದನಾಗಲಿಯೆಂದು ಕೆಲಬರು ವಿಪುಳ ಬಲದ ವಿರಾಟನಾಗಲಿ ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು ಅಪರಿಮಿತ ಮತವಾಗೆ ಸಮರ ವೃಷಗತಾರಿ ಸುರೇಂದ್ರ ಸುತನೀ ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತೆವೆಂದ
drupadanāgaliyeṃdu kelabaru vipuḷa balada virāṭanāgali nr̥pa śikhaṃḍiyeyeṃdu kelabaru bhīmasutaneṃdu aparimita matavāge samara vr̥ṣagatāri surēṃdra sutanī drupadasuta sēnādhipatiyahudemma mateveṃda
ಬಿಂಬವನು ಬೇರಿರಿಸಿ ಬಹುಮತ ವೆಂಬ ಬಿಸಿಲಲಿ ರಾಜನಯವೆಂ ದೆಂಬ ನೈದೆಲು ನಲವುಗೆಟ್ಟುದು ಕೃಷ್ಣ ಹೇಳೆನಲು ಎಂಬುದೇನಿನ್ನಿಲ್ಲಿ ಸುಭಟಕ ದಂಬದಧಿಪತಿತನಕೆ ಫಲುಗುಣ ನೆಂಬ ಮಾತೆಮ್ಮಭಿಮತವು ಭೂಪಾಲ ಕೇಳೆಂದ
biṃbavanu bēririsi bahumata veṃba bisilali rājanayaveṃ deṃba naidelu nalavugeṭṭudu kr̥ṣṇa hēḷenalu eṃbudēninnilli subhaṭaka daṃbadadhipatitanake phaluguṇa neṃba mātemmabhimatavu bhūpāla kēḷeṃda
ಕರೆಸಿ ಧೃಷ್ಟದ್ಯುಮ್ನನನು ಸಂ ಗರಕೆ ಸೇನಾಪತ್ಯವನು ವಿ ಸ್ತರದಿನಳವಡಿಸಿದರು ಸುಮುಹೂರ್ತದೆ ಸರಾಗದೊಳು ಪುರಕೆ ಗುಡಿ ನೆಗಹಿದವು ಭೂ ಸುರರು ವಿಮಳಾಮ್ನಾಯರವ ವಿ ಸ್ತರಿಸಲಳವಡಿಸಿದರು ಮಂಗಳ ವಿಹಿತ ವಸ್ತುಗಳ
karesi dhr̥ṣṭadyumnananu saṃ garake sēnāpatyavanu vi staradinaḷavaḍisidaru sumuhūrtade sarāgadoḷu purake guḍi negahidavu bhū suraru vimaḷāmnāyarava vi starisalaḷavaḍisidaru maṃgaḷa vihita vastugaḷa
ಸೂಳವಿಸಿದವು ಕಟಕದೊಳು ನಿ ಸ್ಸಾಳ ಕೋಟಿಗಳಳ್ಳಿರಿಯೆ ಹೆ ಗ್ಗಾಳೆಗಳು ಸಾರಿದವು ಭಟರುಬ್ಬಟೆಯ ಬಿರುದುಗಳ ಬಾಲಕಿಯರಾರತಿಯ ತಳಿಗೆಗ ಳೋಳಿ ಸಂದಣಿಸಿದವು ವರ ಪಾಂ ಚಾಲತನುಜಂಗೆಸಗಿದರು ಮೂರ್ಧಾಭೀಷೇಚನವ
sūḷavisidavu kaṭakadoḷu ni ssāḷa kōṭigaḷaḷḷiriye he ggāḷegaḷu sāridavu bhaṭarubbaṭeya birudugaḷa bālakiyarāratiya taḷigega ḷōḷi saṃdaṇisidavu vara pāṃ cālatanujaṃgesagidaru mūrdhābhīṣēcanava
ದರುಶನವನಿತ್ತಖಿಳ ಧರಣೀ ಶ್ವರರು ಕಂಡರು ಸೂತ ಮಾಗಧ ವರವಿಬುಧವೈತಾಳಿಕರ ಕಾರ್ಪಣ್ಯವಡಗಿದವು ಧುರಕೆ ಧೃಷ್ಟದ್ಯುಮ್ನನಾಜ್ಞೆಯೊ ಳಿರವು ನಿಮಗೆಂದೈದೆ ಭೂಪಾ ಲರ ನಿವಾಸಂಗಳೊಳು ಹೊಯ್ಸಿದರಂದು ಡಂಗುರವ
daruśanavanittakhiḷa dharaṇī śvararu kaṃḍaru sūta māgadha varavibudhavaitāḷikara kārpaṇyavaḍagidavu dhurake dhr̥ṣṭadyumnanājñeyo ḷiravu nimageṃdaide bhūpā lara nivāsaṃgaḷoḷu hoysidaraṃdu ḍaṃgurava
ರೂಢಿಸಿದ ಸುಮುಹೂರ್ತದೊಳು ಹೊರ ಬೀಡ ಬಿಟ್ಟರು ರಣಕೆ ಪಯಣವ ಮಾಡಲೋಸುಗ ಸಾರಿದರು ನೃಪಪಾಳೆಯಂಗಳೊಳು ಕೂಡಿತಾಹವ ಸೈನ್ಯಸಾಗರ ವೀಡಿರಿದು ನಡೆಗೊಂಡುದುದಧಿಯ ನೋಡಿಸುವ ಜೋಡಿಗಳ ಜೋಕೆಯ ಘನರವಂಗಳೊಳು
rūḍhisida sumuhūrtadoḷu hora bīḍa biṭṭaru raṇake payaṇava māḍalōsuga sāridaru nr̥papāḷeyaṃgaḷoḷu kūḍitāhava sainyasāgara vīḍiridu naḍegoṃḍududadhiya nōḍisuva jōḍigaḷa jōkeya ghanaravaṃgaḷoḷu
ಹರಿಯ ಚರಣಕ್ಕೆರಗಿ ವಿಜಯದ ಹರಕೆಗಳ ಕೈಕೊಂಡು ರಥವನು ತುರಗಗಜವನು ಗಡಣ ಮಿಗಲೇರಿದರು ಪಾಂಡವರು ಗರುಡ ಸಿಂಧವನೆತ್ತಿ ದಾರುಕ ನಿರದೆ ರಥವನು ಸುಳಿಸೆ ಯದುಮೋ ಹರದ ಮಧ್ಯದೊಳಸುರ ಧೂಳೀಪಟಲ ಸೇರಿದನು
hariya caraṇakkeragi vijayada harakegaḷa kaikoṃḍu rathavanu turagagajavanu gaḍaṇa migalēridaru pāṃḍavaru garuḍa siṃdhavanetti dāruka nirade rathavanu suḷise yadumō harada madhyadoḷasura dhūḷīpaṭala sēridanu
ಮುಂದೆ ಹರಿರಥವಸುರ ವೈರಿಯ ಹಿಂದೆ ಧರ್ಮಜನೆಡಬಲದಲಾ ನಂದನರು ಕೆಲಬಲದಲಾ ಭೀಮಾರ್ಜುನಾದಿಗಳು ಸಂದಣಿಸಿದುದು ಸೇನೆ ಸೈರಿಸಿ ನಿಂದನಾದಡೆ ಫಣಿಗೆ ಸರಿಯಿ ಲ್ಲೆಂದು ಸುರಕುಲವುಲಿಯೆ ನಡೆದರು ಪಾಂಡುನಂದನರು
muṃde harirathavasura vairiya hiṃde dharmajaneḍabaladalā naṃdanaru kelabaladalā bhīmārjunādigaḷu saṃdaṇisidudu sēne sairisi niṃdanādaḍe phaṇige sariyi lleṃdu surakulavuliye naḍedaru pāṃḍunaṃdanaru
ಸಿಡಿಲು ಸಿಗುರೆದ್ದಂತೆ ಬಾರಿಸಿ ಜಡಿವ ಕೈದುಗಳುಗಿದುವಬುಧಿಯ ಕಡುದೆರೆಯ ಲಹರಿಯ ವೊಲುರವಣಿಸಿದವು ಬೊಬ್ಬೆಗಳು ನಡುಗಿತವನಿಯಜಾಂಡ ಖರ್ಪರ ವೊಡೆಯಲವನಿಯ ಲಗ್ಗೆ ಸೂಳಿನ ಹೊಡೆಗುಳಿನೊಳಬ್ಬರಿಸಿದವು ನಿಸ್ಸಾಳ ಕೋಟಿಗಳು
siḍilu sigureddaṃte bārisi jaḍiva kaidugaḷugiduvabudhiya kaḍudereya lahariya voluravaṇisidavu bobbegaḷu naḍugitavaniyajāṃḍa kharpara voḍeyalavaniya lagge sūḷina hoḍeguḷinoḷabbarisidavu nissāḷa kōṭigaḷu
ಪ್ರಳಯಜಲನಿಧಿಯಂತೆ ದಳ ಬರ ಲಿಳೆ ಕುಸಿಯೆ ಕಮಠಗೆ ಮೇಲುಸು ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ ಬಲಮಹಾಂಬುಧಿ ಬಲುಗಡಲ ಮು ಕ್ಕುಳಿಸಿ ನಡೆದುದು ಕಡುಭರದ ಕಾ ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು
praḷayajalanidhiyaṃte daḷa bara liḷe kusiye kamaṭhage mēlusu ruliye digudaṃtigaḷu moṇakālūri managuṃde balamahāṃbudhi balugaḍala mu kkuḷisi naḍedudu kaḍubharada kā lduḷiya kadanāḷāpakara kāhurate hosatāytu
ಗಜರ ಬೃಂಹಿತರವದ ವಾಜಿ ವ್ರಜದ ಹೇಷಾಧ್ವನಿಯ ತೇರಿನ ವಿಜಯ ಚೀತ್ಕೃತಿರವದ ಬಿಲು ಟಂಕಾರ ಕಳಕಳದ ಗಜಬಜಿಕೆ ಗಾಢಿಸಿತು ಬೊಬ್ಬೆಯ ಗಜರುಗಳ ಗರ್ಜನೆಗೆ ನಡುಗಿತು ತ್ರಿಜಗವೆನಲೈದಿದರು ಪಯಣದ ಮೇಲೆ ಪಯಣದಲಿ
gajara br̥ṃhitaravada vāji vrajada hēṣādhvaniya tērina vijaya cītkr̥tiravada bilu ṭaṃkāra kaḷakaḷada gajabajike gāḍhisitu bobbeya gajarugaḷa garjanege naḍugitu trijagavenalaididaru payaṇada mēle payaṇadali
ಅರರೆ ನಡೆದುದು ರಾಯ ಕಟಕದ ತೆರಳಿಕೆಯ ಸೌರಂಭವಿಳೆಗ ಚ್ಚರಿಯ ಬೀರಿತು ವರಕುರುಕ್ಷೇತ್ರಕ್ಕೆ ಗಮಿಸಿದರು ಅರಿವಿಜಯಿಗಳು ನೆಲನ ಗೆಲಿದರು ಹರಿಯ ನೇಮದಲೆಡೆಯರಿದು ಬಲ ಶರಧಿ ಬಿಟ್ಟುದು ಕಳನ ಪಶ್ಚಿಮ ದೆಸೆಯ ಪಸರದಲಿ
arare naḍedudu rāya kaṭakada teraḷikeya sauraṃbhaviḷega ccariya bīritu varakurukṣētrakke gamisidaru arivijayigaḷu nelana gelidaru hariya nēmadaleḍeyaridu bala śaradhi biṭṭudu kaḷana paścima deseya pasaradali
ಸೂಳವಿಸಿದವು ಸನ್ನೆಯಲಿ ನಿ ಸ್ಸಾಳ ಲಗ್ಗೆಗಳಡಗಿದವು ಕಿರು ಗಾಳೆ ಸನ್ನೆಯಲೂದಿದವು ಮಾಣಿಸಿದವಬ್ಬರವ ಕೇಳು ಜನಮೇಜಯ ಧರಿತ್ರೀ ಪಾಲ ಮಾರ್ಗಶ್ರಮದ ಸೇನಾ ಜಾಲ ಸೈವೆರಗಾಗಿ ನಿಂದುದು ಕಳನ ಮಧ್ಯದಲಿ
sūḷavisidavu sanneyali ni ssāḷa laggegaḷaḍagidavu kiru gāḷe sanneyalūdidavu māṇisidavabbarava kēḷu janamējaya dharitrī pāla mārgaśramada sēnā jāla saiveragāgi niṃdudu kaḷana madhyadali
ಮೇಲು ಗುಡಿಗಳ ಭದ್ರದುಪ್ಪರ ಶಾಲೆಗಳ ಮಂಡವಿಗೆಗಳ ಬ ಲ್ಲಾಳ ದಡ್ಡಿಯ ಚಂಪೆಯದ ಗೂಡಾರದೋವರಿಯ ಸಾಲುಕಳಸದ ಮೇಲುಗಟ್ಟಿನ ಕೀಲಣದ ಹೊಂಗೆಲಸದಲಿ ರಾ ಜಾಲಯವನನುಕರಿಸಿದರು ಕುಂತೀಕುಮಾರರಿಗೆ
mēlu guḍigaḷa bhadraduppara śālegaḷa maṃḍavigegaḷa ba llāḷa daḍḍiya caṃpeyada gūḍāradōvariya sālukaḷasada mēlugaṭṭina kīlaṇada hoṃgelasadali rā jālayavananukarisidaru kuṃtīkumārarige
ಅರಮನೆಯ ಕೆಲದಲಿ ಮುರಾಂತಕ ನರಮನೆಗಳಾ ಕೆಲದೊಳರ್ಜುನ ನಿರವು ಹಿಂದಣ ಭಾಗದಲಿ ನಕುಲಂಗೆ ಗುಡಾರ ಅರಿಭಯಕರ ಭೀಮಸೇನನ ನಿರುಪಮಾಲಯವೆಡದ ಕಡೆಯಲಿ ಸರಿಸದಲಿ ಸೂತ್ರಿಸಿತು ಸಹದೇವರಿಗೆ ನೃಪಭವನ
aramaneya keladali murāṃtaka naramanegaḷā keladoḷarjuna niravu hiṃdaṇa bhāgadali nakulaṃge guḍāra aribhayakara bhīmasēnana nirupamālayaveḍada kaḍeyali sarisadali sūtrisitu sahadēvarige nr̥pabhavana
ವೀರ ಪಾಂಡವರಿವರರಸುಕು ಮಾರ ವರ್ಗದ ಮಂಡವಿಗೆ ಗೂ ಡಾರಗಳನೊಳಕೊಂಡು ಬಿಗಿದವು ತಳಿಯ ಕಟ್ಟುಗಳು ವಾರಣದ ಸಾಲುಗಳ ಸುತ್ತಲು ಭಾರಿಸಿತು ಪಾಂಚಾಲ ಮತ್ಸ್ಯರ ಭೂರಿ ಬಲ ಬಿಟ್ಟುದು ಮಹೀಶನ ಗುಡಿಯ ಬಳಸಿನಲಿ
vīra pāṃḍavarivararasuku māra vargada maṃḍavige gū ḍāragaḷanoḷakoṃḍu bigidavu taḷiya kaṭṭugaḷu vāraṇada sālugaḷa suttalu bhārisitu pāṃcāla matsyara bhūri bala biṭṭudu mahīśana guḍiya baḷasinali
ಕೇಳು ಜನಮೇಜಯ ಧರಿತ್ರೀ ಪಾಲ ಬೀಡಿನ ತೆಕ್ಕೆ ಬಿಗಿದುದು ಪಾಳಯದ ಬಲುಹೊದಕೆ ಹೊರವಳಯದೊಳು ಕಲುಗೋಟೆ ಮೇಲೆ ಪಡಿಯಗಳಾಶ್ರಯಕೆ ಮುಳು ವೇಲಿ ದೀಹದ ಸಿಂಹ ಶರಭ ವ್ಯಾಳ ಶಾರ್ದೂಲಾವಳಿಯ ಸುಯಿದಾನಮೊಪ್ಪಿದುದು
kēḷu janamējaya dharitrī pāla bīḍina tekke bigidudu pāḷayada baluhodake horavaḷayadoḷu kalugōṭe mēle paḍiyagaḷāśrayake muḷu vēli dīhada siṃha śarabha vyāḷa śārdūlāvaḷiya suyidānamoppidudu
ಎರಡು ಬಾಗಿಲ ಸೂತ್ರದಲಿ ವಿ ಸ್ತರಿಸಿದಂಗಡಿ ಸೋಮ ವೀಧಿಯ ತರಣಿ ವೀಧಿಯ ಲವರವರ ಪಾಳೆಯಕೆ ಮುರಿವುಗಳ ಸುರರು ಸೃಷ್ಟಿಸ ಬಾರದಿನ್ನೀ ನರರುಗಳ ಪಾಡೇನು ಕೌಂತೇ ಯರ ಸಮಗ್ರದ ಬೀಡು ಕುರುಭೂಮಿಯಲಿ ರಂಜಿಸಿತು
eraḍu bāgila sūtradali vi starisidaṃgaḍi sōma vīdhiya taraṇi vīdhiya lavaravara pāḷeyake murivugaḷa suraru sr̥ṣṭisa bāradinnī nararugaḷa pāḍēnu kauṃtē yara samagrada bīḍu kurubhūmiyali raṃjisitu
ಬಲದ ಮುಂಗುಡಿ ಭೀಮನದು ಪಿಂ ತಿಳೆಯೊಳಾತನ ಕಾಹು ಬೀಡಿನ ವಳಯದಾರೈಕೆಗಳು ಸಾತ್ಯಕಿ ನಕುಲ ಪಾರ್ಥರಿಗೆ ಬಲಮಹಾಂಬುಧಿಯೊಳಗಿರುಳು ಮೇ ಲ್ತಳವರನು ಹೈಡಿಂಬಿ ಪಾಂಡವ ರುಳಿವು ಗದುಗಿನ ವೀರನಾರಾಯಣನ ಸುಯಿದಾನ
balada muṃguḍi bhīmanadu piṃ tiḷeyoḷātana kāhu bīḍina vaḷayadāraikegaḷu sātyaki nakula pārtharige balamahāṃbudhiyoḷagiruḷu mē ltaḷavaranu haiḍiṃbi pāṃḍava ruḷivu gadugina vīranārāyaṇana suyidāna
Keys: ← → turn the page, J K step through the verses.
Illustration: Verse & Place (Project-owned).