ವೈರಿ ಭಟಕುಲ ವಿಲಯ ರುದ್ರನು ದಾರಿತೇಜೋಭದ್ರನಾ ಭಾ ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ
vairi bhaṭakula vilaya rudranu dāritējōbhadranā bhā gīrathīsuta dharisidanu kurusēneyoḍetanava
ಭೀಷ್ಮ ಪರ್ವ — ಸಂಧಿ ೧ · ಭೀಷ್ಮ ಪರ್ವ — ಸಂಧಿ ೧
bhīṣma parva — saṃdhi 1
The complete bhishma parva · sandhi 1 in Kannada.
64 passagesKannada with transliteration
Invocation
ವೈರಿ ಭಟಕುಲ ವಿಲಯ ರುದ್ರನು ದಾರಿತೇಜೋಭದ್ರನಾ ಭಾ ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ
vairi bhaṭakula vilaya rudranu dāritējōbhadranā bhā gīrathīsuta dharisidanu kurusēneyoḍetanava
ಕೇಳು ಜನಮೇಜಯ ಧರಿತ್ರೀ ಪಾಲ ಕೌರವರಾಯನಲ್ಲಿಗೆ ಕಾಳೆಗದ ಕಾತರಿಗರಿವರಟ್ಟಿದರು ಭಟ್ಟರನು ಕೇಳಿದನು ಕುರುಭೂಮಿಯಲಿ ರಿಪು ಜಾಲದುದಯವನಂದು ಕುರುಕುಲ ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ
kēḷu janamējaya dharitrī pāla kauravarāyanallige kāḷegada kātarigarivaraṭṭidaru bhaṭṭaranu kēḷidanu kurubhūmiyali ripu jāladudayavanaṃdu kurukula mauḷi karesidanāptaranu parimitake maṃtrigaḷa
ರವಿಜ ಗುರುಸುತ ಶಲ್ಯ ಕಲಶೋ ದ್ಭವರು ಸೌಬಲರಾದಿಯಾದವ ರವನಿಪಾಲನ ಕಂಡರಂದೇಕಾಂತ ಭವನದಲಿ ಅವನಿಪತಿ ಹದನೇನು ರಿಪುಪಾಂ ಡವರ ಬೀಡಿನ ಗುಪ್ತದನುಮಾ ನವನು ಚಿತ್ತಯಿಸಿದರೆ ಬೆಸಸುವುದೆನಲು ನೃಪ ನುಡಿದ
ravija gurusuta śalya kalaśō dbhavaru saubalarādiyādava ravanipālana kaṃḍaraṃdēkāṃta bhavanadali avanipati hadanēnu ripupāṃ ḍavara bīḍina guptadanumā navanu cittayisidare besasuvudenalu nr̥pa nuḍida
ಸಂದಣಿಸಿ ಕುರುಭೂಮಿಯಲಿ ತಾ ಮಂದಿ ಬಿಟ್ಟುದು ನಾಡ ಗಾವಳಿ ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು ನಂದಗೋಪನ ಮಗನ ಕೊಂಡೆಯ ದಿಂದ ಕಲಿಯೇರಿದರು ಕೃಪಣರ ಕೊಂದಡಹುದಪಕೀರ್ತಿಯಿದಕಿನ್ನೇನು ಹದನೆಂದ
saṃdaṇisi kurubhūmiyali tā maṃdi biṭṭudu nāḍa gāvaḷi baṃdudallige kaḷuhidaru dūtaranu durjanaru naṃdagōpana magana koṃḍeya diṃda kaliyēridaru kr̥paṇara koṃdaḍahudapakīrtiyidakinnēnu hadaneṃda
ಭೂರಿ ನೆರೆದುದು ನಾಡ ಗಾವಳಿ ಭಾರ ದೃಷ್ಟದ್ಯುಮ್ನನದು ಗಡ ಚಾರದೇವನ ಜೋಕೆ ಮಂದಿಯ ಕಾಹು ಕಟ್ಟ ಗಡ ಧಾರುಣಿಯ ಲಂಪಟರು ಕದನವ ಹಾರಿ ಬಂದರು ಗಡ ಕೃತಾಂತನ ಭೂರಿ ಭೂತದ ಧಾತುವಾಯಿತು ಲೇಸು ಲೇಸೆಂದ
bhūri neredudu nāḍa gāvaḷi bhāra dr̥ṣṭadyumnanadu gaḍa cāradēvana jōke maṃdiya kāhu kaṭṭa gaḍa dhāruṇiya laṃpaṭaru kadanava hāri baṃdaru gaḍa kr̥tāṃtana bhūri bhūtada dhātuvāyitu lēsu lēseṃda
ನಾಡ ಮನ್ನೆಯ ಗಿನ್ನೆಯರುಗಳ ಕೂಡಿಕೊಂಡೆಮ್ಮೊಡನೆ ಕಲಹವ ಬೇಡಿ ಮಹಿಪಾಲನೆಯ ಪಟ್ಟಕೆ ನೊಸಲನೊಡ್ಡುವರು ನೋಡಿರೈ ನಿರುಪಮವಲಾ ಕಾ ದಾಡಿಗಳ ಕಲಿತನವನೆನೆ ಮಾ ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ
nāḍa manneya ginneyarugaḷa kūḍikoṃḍemmoḍane kalahava bēḍi mahipālaneya paṭṭake nosalanoḍḍuvaru nōḍirai nirupamavalā kā dāḍigaḷa kalitanavanene mā tāḍidanu kalikarṇanātana manada maisiriya
ನೆರೆದ ದೊದ್ದೆಯನೊರಸಬಬಹುದೇ ನರಿದು ಜೀಯ ವಿರೋಧಿರಾಯರ ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ ಕರಿಗಳಿಗೆ ಪ್ರತ್ಯೇಕವಿವೆ ಕೇ ಸರಿಗಳೆಮ್ಮನು ಕಳುಹಿ ನಿಮ್ಮಡಿ ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ
nereda doddeyanorasababahudē naridu jīya virōdhirāyara neravi tānēguvudu gahanave ninna vīrarige karigaḷige pratyēkavive kē sarigaḷemmanu kaḷuhi nimmaḍi parimitake baralāva bhāravideṃdanā karṇa
ಕಲಕುವೆನು ಪಾಂಡವರ ಸೇನಾ ಜಲಧಿಯನು ತೇರಿನಲಿ ತಲೆಗಳ ಕಳುಹುವೆನು ಕದನದಲಿ ಕೈದೋರಿದ ಕುಠಾರಕರ ಹೊಳಲ ಹೊರಶೂಲದಲಿ ರಿಪುಗಳ ಸೆಳಸುವೆನು ತಾ ವೀಳೆಯವನೆಂ ದಲಘುಭುಜಬಲ ಕರ್ಣ ನುಡಿದನು ಕೌರವೇಂದ್ರಂಗೆ
kalakuvenu pāṃḍavara sēnā jaladhiyanu tērinali talegaḷa kaḷuhuvenu kadanadali kaidōrida kuṭhārakara hoḷala horaśūladali ripugaḷa seḷasuvenu tā vīḷeyavaneṃ dalaghubhujabala karṇa nuḍidanu kauravēṃdraṃge
ಕುಲಿಶ ಪರಿಯಂತೇಕೆ ನೇಗಿಲ ಬಳಿಯ ಹುಲುವೆಟ್ಟಕೆ ವಿರೋಧಿಗ ಳಳಿಬಲಕೆ ಕಲಿಕರ್ಣ ನೀ ಪರಿಯಂತ ಸಂಗರವೆ ಹೊಳಲ ಪರಿವಾರಕ್ಕೆ ಸಾರಿಸು ಕೆಳಬಲದ ರಾಯರಿಗೆ ದೂತರ ಕಳುಹಿ ನೆರಹಿಸು ಕಾದಿಸೆಂದನು ಕೌರವರ ರಾಯ
kuliśa pariyaṃtēke nēgila baḷiya huluveṭṭake virōdhiga ḷaḷibalake kalikarṇa nī pariyaṃta saṃgarave hoḷala parivārakke sārisu keḷabalada rāyarige dūtara kaḷuhi nerahisu kādiseṃdanu kauravara rāya
ಮೂಗಿನಲಿ ಬೆರಳಿಟ್ಟು ಮಕುಟವ ತೂಗಿದನು ಚತುರಂಗಬಲವನು ಬೇಗದಲಿ ಕೊಳುಗುಳಕೆ ಕಳುಹಿಸು ಗೆಲಿಸು ಕಾಳೆಗವ ತಾಗಿ ಬಾಗದ ಮರುಳುತನದು ದ್ಯೋಗವಿದಕೇನೆಂಬೆನಕಟಕಟ ಟೀಗಲದ್ದುದು ಕೌರವಾನ್ವಯವೆಂದನಾ ದ್ರೋಣ
mūginali beraḷiṭṭu makuṭava tūgidanu caturaṃgabalavanu bēgadali koḷuguḷake kaḷuhisu gelisu kāḷegava tāgi bāgada maruḷutanadu dyōgavidakēneṃbenakaṭakaṭa ṭīgaladdudu kauravānvayaveṃdanā drōṇa
ಹಿಂದೆ ಗಳುಹುವನಿವನು ಬಾಯಿಗೆ ಬಂದ ಪರಿಯಲಿ ಪಾಂಡುತನಯರ ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ ಹಿಂದೆ ಹಮ್ಮಿದ ಸಮರದೊಳು ನಡೆ ತಂದು ಖೇಚರನಡಸಿ ಕಟ್ಟಿದ ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ
hiṃde gaḷuhuvanivanu bāyige baṃda pariyali pāṃḍutanayara koṃdanāgaḷe karṇaninnāroḍane saṃgrāma hiṃde hammida samaradoḷu naḍe taṃdu khēcaranaḍasi kaṭṭida ḍaṃdu ninnanu biḍisidavanarjunano ravisutano
ಸಾಹಸಿಗಳಿಲ್ಲಿಲ್ಲ ಹರಿ ತುರು ಗಾಹಿ ಪಾಂಡವರೈವರವಡವಿಯ ಮೇಹುಗಾರರು ಬಂದ ಭೂಭುಜರೆಲ್ಲ ತಾ ನೆರವಿ ಅಹವಕೆ ನಿನ್ನೂರ ತಳವರ ಗಾಹಿನವರನು ಕಳುಹುವುದು ಸಂ ದೇಹವೇ ನೀನಿಲ್ಲಿ ಸುಖದಲಿ ರಾಜ್ಯ ಮಾಡೆಂದ
sāhasigaḷillilla hari turu gāhi pāṃḍavaraivaravaḍaviya mēhugāraru baṃda bhūbhujarella tā neravi ahavake ninnūra taḷavara gāhinavaranu kaḷuhuvudu saṃ dēhavē nīnilli sukhadali rājya māḍeṃda
ಎಲೆ ಸುಯೋಧನ ಕಾಳುಗೆಡೆದರೆ ಫಲವನಿದರಲಿ ಕಾಣೆನಹಿರತರ ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು ನಳಿನನಾಭನ ಮಂತ್ರಶಕ್ತಿಯ ಬಲುಹು ನೀವ್ ನಿರ್ದೈವರವರ ಗ್ಗಳ ಸದೈವರು ಕೆಟ್ಟಿರಿನ್ನೇನೆಂದನಾ ದ್ರೋಣ
ele suyōdhana kāḷugeḍedare phalavanidarali kāṇenahiratara balada bhāraṇe biguhu bhīmārjunaru ballidaru naḷinanābhana maṃtraśaktiya baluhu nīv nirdaivaravara ggaḷa sadaivaru keṭṭirinnēneṃdanā drōṇa
ಅಸುರರಿಪುವಿನ ಮಾತ ನೀ ಮ ನ್ನಿಸದೆ ಕೌರವಕುಲವನದ್ದಿದೆ ನುಸಿಗಳಿವದಿರು ಮುನಿದು ಪಾರ್ಥನನೇನ ಮಾಡುವರು ಅಸುರರಲಿ ಸುರರಲಿ ಭುಜಂಗ ಪ್ರಸರದಲಿ ಭೀಮಾರ್ಜುನರ ಸೈ ರಿಸುವರುಂಟೇ ಕೆಟ್ಟಿರಿನ್ನೇನೆಂದನಾ ದ್ರೋಣ
asuraripuvina māta nī ma nnisade kauravakulavanaddide nusigaḷivadiru munidu pārthananēna māḍuvaru asurarali surarali bhujaṃga prasaradali bhīmārjunara sai risuvaruṃṭē keṭṭirinnēneṃdanā drōṇa
ಅವರಿಗಸುರಾತಂಕ ಸಹಾಯನು ನಿವಗೆ ಗಂಗಾಸುತನ ಬಲವಾ ಹವವನೀತನ ನೇಮದಲಿ ನೆಗಳುವದು ನೀತಿಯಿದು ಅವರಿವರ ಮಾತಿನಲಿ ಫಲವಿ ಲ್ಲವನಿಪತಿ ಕೇಳೆನಲು ಕಲಶೋ ದ್ಭವನ ಮತದಲಿ ಬಳಿಕ ಮಣಿದನು ಕೌರವರ ರಾಯ
avarigasurātaṃka sahāyanu nivage gaṃgāsutana balavā havavanītana nēmadali negaḷuvadu nītiyidu avarivara mātinali phalavi llavanipati kēḷenalu kalaśō dbhavana matadali baḷika maṇidanu kauravara rāya
ಮತವಹುದು ತಪ್ಪಲ್ಲ ಗಂಗಾ ಸುತನ ತಿಳುಹುವ ವೀರಪಟ್ಟವ ನತುಳ ಬಲ ಭೀಷ್ಮಂಗೆ ಕಟ್ಟುವೆನೆನುತ ಕುರುರಾಯ ಮತದ ನಿಶ್ಚಯದಿಂದ ಗುರು ಗುರು ಸುತನ ಕಳುಹಿದನಿತ್ತಲಬುಜ ಪ್ರತತಿಯುತ್ಸಹವಡಗೆ ಪಡುವಣ ಕಡಲೊಳಿನನಿಳಿದ
matavahudu tappalla gaṃgā sutana tiḷuhuva vīrapaṭṭava natuḷa bala bhīṣmaṃge kaṭṭuvenenuta kururāya matada niścayadiṃda guru guru sutana kaḷuhidanittalabuja pratatiyutsahavaḍage paḍuvaṇa kaḍaloḷinaniḷida
ವಿನುತ ಸಂಧ್ಯಾದೇವಿಗಭಿವಂ ದನ ಜಪಾದಿ ಸಮಸ್ತ ದೇವಾ ರ್ಚನೆಯ ಮಾಡಿಯೆ ರವಿತನೂಜನ ಕರಸಿ ಪಂತಿಯಲಿ ಜನಪನಾರೋಗಿಸಿದನಾಪ್ತಾ ವನಿಪ ಸಚಿವರು ಸಹಿತ ಭೀಷ್ಮನ ಮನೆಗೆ ಬಂದನು ಕೌರವೇಶ್ವರನಂದಿನಿರುಳಿನಲಿ
vinuta saṃdhyādēvigabhivaṃ dana japādi samasta dēvā rcaneya māḍiye ravitanūjana karasi paṃtiyali janapanārōgisidanāptā vanipa sacivaru sahita bhīṣmana manege baṃdanu kauravēśvaranaṃdiniruḷinali
ಮುಂದೆ ಹರಿದರು ಕೈಯ ಕಂಬಿಯ ಸಂದಣಿಯ ಪಡೆವಳರು ಗಂಗಾ ನಂದನಂಗೀ ಹದನನರುಹಲು ಬಂದನಿದಿರಾಗಿ ಕಂದುಮೋರೆಯ ರಾಯನನು ತೆಗೆ ದಂದಣದೊಳಾಲಂಗಿಸುತ ನಲ ವಿಂದ ಮನ್ನಿಸಿ ತಂದನರಮನೆಗುಚಿತವಚನದಲಿ
muṃde haridaru kaiya kaṃbiya saṃdaṇiya paḍevaḷaru gaṃgā naṃdanaṃgī hadananaruhalu baṃdanidirāgi kaṃdumōreya rāyananu tege daṃdaṇadoḷālaṃgisuta nala viṃda mannisi taṃdanaramanegucitavacanadali
ಏನಿರುಳು ನೀ ಬಂದ ಹದನೆಲೆ ಮಾನನಿಧಿ ಬೇಕಾದರೆಮ್ಮನು ನೀನು ಕರೆಸುವುದರುಪುವುದು ನಿಜಕಾರ್ಯ ಸಂಗತಿಯ ಏನ ಹೇಳುವೆ ನಗೆಯನನುಸಂ ಧಾನದಲಿ ಪಾಂಡವರು ಕುರುಭೂ ಮೀನಿವಾಸಕೆ ಬಂದು ಬಿಟ್ಟರು ಕಿರಿದು ದಳಸಹಿತ
ēniruḷu nī baṃda hadanele mānanidhi bēkādaremmanu nīnu karesuvudarupuvudu nijakārya saṃgatiya ēna hēḷuve nageyananusaṃ dhānadali pāṃḍavaru kurubhū mīnivāsake baṃdu biṭṭaru kiridu daḷasahita
ಹರಿಯ ಹಿಸುಣಿಕೆಯವರ ಚಿತ್ತವ ಬೆರಸಿ ವೈರವ ಬೆಳಸಿ ಬಂದರು ಧರೆಯ ಭಾಗವ ಬೇಡಿ ಕದನವ ಮಸೆದರೆಮ್ಮೊಡನೆ ಹರನ ಸಮದಂಡಿಗಳು ನೀವೆಮ ಗಿರಲು ಜಯಿಸುವ ವೀರನಾವನು ಮರುಳುತನವನು ಧರ್ಮಪುತ್ರನೊಳರಿಯಲಾಯ್ತೆಂದ
hariya hisuṇikeyavara cittava berasi vairava beḷasi baṃdaru dhareya bhāgava bēḍi kadanava masedaremmoḍane harana samadaṃḍigaḷu nīvema giralu jayisuva vīranāvanu maruḷutanavanu dharmaputranoḷariyalāyteṃda
ಬಂದರೇ ಪಾಂಡವರು ಸುದ್ದಿಯ ತಂದರೇ ನಿನ್ನವರು ನಿನಗೇ ನೆಂದು ಭಾಷೆಯ ಕೊಟ್ಟರೀ ಕರ್ಣಾದಿ ನಾಯಕರು ಇಂದು ಸಂತತಿ ಗುರುವರಲ್ಲಾ ಬಂದರೇನಪರಾಧವೇ ಇ ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ
baṃdarē pāṃḍavaru suddiya taṃdarē ninnavaru ninagē neṃdu bhāṣeya koṭṭarī karṇādi nāyakaru iṃdu saṃtati guruvarallā baṃdarēnaparādhavē i nneṃdu pariyaṃtavaru navevaru eṃdanā bhīṣma
ಜಗದ ಗುರುವಲ್ಲಾ ಮುರಾಂತಕ ನಗಣಿತೋಪಮಮಹಿಮನಲ್ಲಾ ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು ವಿಗಡಿಸಲು ಜಯವಹುದೆ ಜಾಣರ ಬಗೆಗೆ ಬಹುದೇ ನಿನ್ನ ಮತವೆಲೆ ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ
jagada guruvallā murāṃtaka nagaṇitōpamamahimanallā saguṇa nirguṇanā mahātmananaṃta rūpavanu vigaḍisalu jayavahude jāṇara bagege bahudē ninna matavele magane maruḷādai madāṃdhara mātugaḷa kēḷi
ಮಿಕ್ಕ ಮಾತೇಕಿನ್ನು ನೀ ಹಿಂ ದಿಕ್ಕಿ ಕೊಂಬರೆ ಕೊಲುವನಾವನು ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ ಹೊಕ್ಕು ಹಗೆಗಳ ಹೊಯ್ದ ದಿಗುಬಲಿ ಯಿಕ್ಕಿ ನನ್ನಯ ಹರುಷಜಲಧಿಯ ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ
mikka mātēkinnu nī hiṃ dikki koṃbare koluvanāvanu makkaḷāvenabēḍa ballevu ninna vikramava hokku hagegaḷa hoyda digubali yikki nannaya haruṣajaladhiya nukkisalu bēkenalu kēḷidu bhīṣmaniṃteṃda
ದೈವಬಲವವರಲ್ಲಿ ನೀವೇ ದೈವಹೀನರು ಧರ್ಮಪರರವ ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು ಮುಯ್ವನಾನುವುದವರ್ಗೆ ಭುವನವು ಬೈವುದೈ ನಿಮ್ಮಿನಿಬರನು ನಿಮ ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ
daivabalavavaralli nīvē daivahīnaru dharmapararava raivarū satpuruṣaśīlaru nīvadhārmikaru muyvanānuvudavarge bhuvanavu baivudai nimminibaranu nima gaivaḍiya sahasigaḷavaru durbalaru nīveṃda
ದಯವನತ್ತಲು ತಿದ್ದಿ ನಮ್ಮನು ಭಯಮಹಾಬ್ದಿಯೊಳದ್ದಿ ಸಮರದ ಜಯವನವರಿಗೆ ಮಾಡಿ ನಮ್ಮಭಿಮತವ ನೀಗಾಡಿ ನಯವ ನೀವೊಡ್ಡುವರೆ ನಿಮ್ಮನು ನಿಯಮಿಸುವರಾರುಂಟು ಭಾಗ್ಯೋ ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ
dayavanattalu tiddi nammanu bhayamahābdiyoḷaddi samarada jayavanavarige māḍi nammabhimatava nīgāḍi nayava nīvoḍḍuvare nimmanu niyamisuvarāruṃṭu bhāgyō dayavihīnanu tānenuta kururāya bisusuyda
ಉಚಿತವನು ನಾನರಿಯೆ ವಾರ್ಧಕ ರಚಿತ ನಿಜವನು ನುಡಿಯೆ ನಿನಗವು ರುಚಿಸವೇ ಮಾಣಲಿಯದಂತಿರಲೀ ಕುಮಂತ್ರಿಗಳ ವಚನವತಿಗಾಢದಲಿ ನಟ್ಟುದು ಸಚಿವ ನಯವಿನ್ನೇಕೆ ಸೇನಾ ನಿಚಯಕೆಮ್ಮನು ಮೊದಲಿಗನ ಮಾಡರಸ ಹೋಗೆಂದ
ucitavanu nānariye vārdhaka racita nijavanu nuḍiye ninagavu rucisavē māṇaliyadaṃtiralī kumaṃtrigaḷa vacanavatigāḍhadali naṭṭudu saciva nayavinnēke sēnā nicayakemmanu modaligana māḍarasa hōgeṃda
ಖಳನ ಕಳುಹಿದನತಿಬಳನು ತ ನ್ನೊಳಗೆ ನೆನೆದನು ಪಾಂಡುನಂದನ ರುಳಿವು ತನ್ನದು ಮೀರಿ ಕಾದುವಡಸುರರಿಪುವಿಹನು ಅಳುಕಿ ಕಾದುವಡಿತ್ತ ಹಾವಿನ ಹಳವಿಗೆಯ ಕಡಮೂರ್ಖನಿಗೆ ಬೆಂ ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸುತ
khaḷana kaḷuhidanatibaḷanu ta nnoḷage nenedanu pāṃḍunaṃdana ruḷivu tannadu mīri kāduvaḍasuraripuvihanu aḷuki kāduvaḍitta hāvina haḷavigeya kaḍamūrkhanige beṃ balava kāṇenu tanage hadanēnenuta ciṃtisuta
ಆದಡೇನಿದಿರಾದ ರಿಪುಬಲ ವಾದುದನು ಸಂಹರಿಸಿ ಮಕ್ಕಳ ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ ಆದುದಾಗಲಿ ಬಳಿಕ ಮಾಡುವ ಭೇದ ಬೇರಿಲ್ಲೆನುತ ಹೃತ್ಸಂ ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ
ādaḍēnidirāda ripubala vādudanu saṃharisi makkaḷa kādu bisuḍuvenoḍalanā saṃgrāmabhūmiyali ādudāgali baḷika māḍuva bhēda bērillenuta hr̥tsaṃ vādavanu bīḷkoṭṭu gaṃgāsūnu pavaḍisida
ಮಗನೊಡನೆ ಮೂದಲಿಸಿ ಭೀಷ್ಮನು ಹೊಗುವ ಗಡ ಪರಸೇನೆಯನು ಕಾ ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ ನಗೆಯುಡಗಿ ನಾಚಿದವು ಕುಮುದಾ ಳಿಗಳು ಮುಂಗಾಣಿಕೆಯ ಹರುಷದೊ ಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು
maganoḍane mūdalisi bhīṣmanu hoguva gaḍa parasēneyanu kā ḷegava nōḍuveneṃbavolu taledōridanu dinapa nageyuḍagi nācidavu kumudā ḷigaḷu muṃgāṇikeya haruṣado ḷagidu virahava bīḷukoṭṭavu jakkavakkigaḷu
ಅರಸನುಪ್ಪವಡಿಸಿದನವನೀ ಶ್ವರವಿಹಿತಸತ್ಕರ್ಮವನು ವಿ ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ ಚರರನಟ್ಟಿದನಖಿಳಧರಣೀ ಶ್ವರ ನಿಕಾಯಕೆ ಸಕಲ ಸುಭಟರ ಬರಿಸಿದನು ತರಿಸಿದನು ಪಟ್ಟಕೆ ಬೇಹ ವಸ್ತುಗಳ
arasanuppavaḍisidanavanī śvaravihitasatkarmavanu vi starisidanu cāvaḍige baṃdanu haruṣadubbinali cararanaṭṭidanakhiḷadharaṇī śvara nikāyake sakala subhaṭara barisidanu tarisidanu paṭṭake bēha vastugaḷa
ಗುರುತನುಜ ರವಿಸೂನು ಮಾದ್ರೇ ಶ್ವರ ಕೃಪದ್ರೋಣಾದಿಗಳು ಬಂ ದರಮನೆಗೆ ಹೊಕ್ಕರು ನದೀನಂದನನ ಬಳಿವಿಡಿದು ನೆರೆದರವನೀ ನಿರ್ಜರರು ಕೇ ಸರಿಯ ಪೀಠವ ರಚಿಸಿ ವೈದಿಕ ಪರಿಣಿತರ ಮತದಿಂದ ವಿಸ್ತರಿಸಿದರು ಮಂಗಳವ
gurutanuja ravisūnu mādrē śvara kr̥padrōṇādigaḷu baṃ daramanege hokkaru nadīnaṃdanana baḷiviḍidu neredaravanī nirjararu kē sariya pīṭhava racisi vaidika pariṇitara matadiṃda vistarisidaru maṃgaḷava
ಕಮಲಜನ ಹೋಲುವೆಯ ಧಾರಿಣಿ ಯಮರಕರದಲಿ ನಿಗಮ ಪೂತೋ ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ ಕಮಲಜನ ಕರದಿಂದ ಗಂಗಾ ವಿಮಲನದಿಯಿಳಿತಂದು ಸಾರ್ದುದೊ ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ
kamalajana hōluveya dhāriṇi yamarakaradali nigama pūtō ttama suvārigaḷiḷidavajasannibhana mastakake kamalajana karadiṃda gaṃgā vimalanadiyiḷitaṃdu sārdudo himagiriyaneṃbaṃtiriḷidudu paṭṭadabhiṣēka
ಆರತಿಯನೆತ್ತಿದರು ತಂದು ಪ್ಪಾರತಿಯ ಸೂಸಿದರು ನೃಪಪರಿ ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ ಕೌರವೇಂದ್ರನ ಮೋಹರದ ಗುರು ಭಾರ ಭೀಷ್ಮಂಗಾಯ್ತು ಸಮರದ ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ
āratiyanettidaru taṃdu ppāratiya sūsidaru nr̥papari vāravellavu baṃdu kaṃḍudu kāṇikeya nīḍi kauravēṃdrana mōharada guru bhāra bhīṣmaṃgāytu samarada vīrapaṭṭavanāṃtanācāryādigaḷu naliye
ಈ ನದೀನಂದನನ ಬಲದಲಿ ಸೇನೆ ಶಿವಗಂಜುವುದೇ ಕುಂತೀ ಸೂನುಗಳಿಗಾರಣ್ಯಜಪವಿನ್ನವರಿಗಿಳಿಯೇಕೆ ಮಾನನಿಧಿ ಭೀಷ್ಮಂಗೆ ಸಮರ ಸ ಮಾನಭಟನಿನ್ನಾವನೆಂದು ಮ ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ
ī nadīnaṃdanana baladali sēne śivagaṃjuvudē kuṃtī sūnugaḷigāraṇyajapavinnavarigiḷiyēke mānanidhi bhīṣmaṃge samara sa mānabhaṭaninnāvaneṃdu ma nōnurāgada mēle kauravarāya baṇṇisida
�ಎಲೆ ಮರುಳೆ ಭೂಪಾಲ ಕೌರವ ಕುಲಪಿತಾಮಹನಹನು ಧರ್ಮಂ ಗಳಲಿ ಪರಿಣಿತನಹನು ಕಾಳಿಗವೆತ್ತಲಿವರೆತ್ತ ಗಳದ ಗರಳನ ದೊರೆಯ ಭಟಮಂ ಡಲಿಯೊಳಗೆ ಮನ್ನಣೆಯೆ ಹೇಳೈ ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ
�ele maruḷe bhūpāla kaurava kulapitāmahanahanu dharmaṃ gaḷali pariṇitanahanu kāḷigavettalivaretta gaḷada garaḷana doreya bhaṭamaṃ ḍaliyoḷage mannaṇeye hēḷai kaḷida hareyaṃgeṃdu gahagahisidanu kalikarṇa
ತೊಗಲು ಸಡಿಲಿದ ಗಲ್ಲ ಬತ್ತಿದ ಹೆಗಲು ನರುಕಿದ ನರೆತ ಮೀಸೆಯ ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವಯದ ಅಗಿಯಲಲುಗುವ ತಲೆಯ ಮುಪ್ಪಿನ ಮುಗುದನೀತನು ಕಾದಹೇಳಿದು ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ
togalu saḍilida galla battida hegalu narukida nareta mīseya jaguḷda halugaḷa hāyidelugaḷa neggidavayavayada agiyalaluguva taleya muppina mugudanītanu kādahēḷidu nageya suridai rāya kaṭakadoḷeṃdanā karṇa
ಇಲ್ಲಿ ಭೀಷ್ಮನು ರಾಘವನ ಬಲ ದಲ್ಲಿ ಜಾಂಬವನುಭಯವೀರರು ಬಲ್ಲಿದರು ಬಳಿಕುಳಿದ ಸುಭಟರ ಶೌರ್ಯವೊಪ್ಪುವುದೆ ನಿಲ್ಲು ನೀ ಕೊಲಲೆಳಸುವರೆ ಹಗೆ ಯಲ್ಲಿಗೊಪ್ಪಿಸಿ ಕೊಲಿಸಲೇತಕೆ ಬಿಲ್ಲಿನಲಿ ಬಡಿದಡ್ಡಗೆಡಹುವೆನೆಂದನಾ ಕರ್ಣ
illi bhīṣmanu rāghavana bala dalli jāṃbavanubhayavīraru ballidaru baḷikuḷida subhaṭara śauryavoppuvude nillu nī kolaleḷasuvare hage yalligoppisi kolisalētake billinali baḍidaḍḍageḍahuveneṃdanā karṇa
ಹಾ ನುಡಿಯದಿರು ನಿನ್ನ ಹವಣಿನ ಮಾನಿಸನೆ ಸುರಸಿಂಧುಜನು ತಾ ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ ನೀನು ಸರಿಯೇ ರಾಮಕಟಕದ ಹಾನಿಯನು ತಲೆಗಾಯ್ದ ಚಾಂಬವ ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ್ಯ
hā nuḍiyadiru ninna havaṇina mānisane surasiṃdhujanu tā nīnu mige mēlariye javvanadubbugobbinali nīnu sariyē rāmakaṭakada hāniyanu talegāyda cāṃbava gēnu korateyenutta jaredanu garuḍiyācārya
ರಣದೊಳೊಡ್ಡಿದರಾತಿಗಳನೀ ಹಣೆಯ ಪಟ್ಟದ ವೀರ ಜಯಿಸಲು ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ ರಣದೊಳಿವನಡಗೆಡೆದನಾದರೆ ಮಣಿಯದಿರಿದಪೆನನ್ನೆಬರ ಮಾ ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ
raṇadoḷoḍḍidarātigaḷanī haṇeya paṭṭada vīra jayisalu haṇavigānōlaise māḍuvenaḍaviyali tapava raṇadoḷivanaḍageḍedanādare maṇiyadiridapenannebara mā rgaṇeyanāhavadoḷage saṃdhiseneṃdanā karṇa
ಗಳಹಧಿರು ರಾಧೇಯ ನಿನ್ನಯ ಕುಲವ ನೋಡದೆ ಮೇರೆದಪ್ಪುವ ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ ಕಲಿಗಳುಳಿದಂತೆನ್ನ ಸರಿಸಕೆ ನಿಲುವನಾವನು ದೇವದಾನವ ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ
gaḷahadhiru rādhēya ninnaya kulava nōḍade mēredappuva salugeyidalē svāmisaṃpattina sagāḍhatana kaligaḷuḷidaṃtenna sarisake niluvanāvanu dēvadānava roḷage ninnoḍanorali phalavēneṃdanā bhīṣma
ಕೇಳು ನೃಪ ಕೇಳೈ ಜಯದ್ರಥ ಕೇಳು ಗುರುಸುತ ಶಲ್ಯ ಕುಂಭಜ ಕೇಳು ದುಶ್ಯಾಸನ ವಿಕರ್ಣ ಸುಲೋಚನಾದಿಗಳು ಕಾಳೆಗದೊಳರಿ ದಶಸಹಸ್ರ ನೃ ಪಾಲಕರ ಮಣಿಖಚಿತನಿರ್ಮಲ ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ
kēḷu nr̥pa kēḷai jayadratha kēḷu gurusuta śalya kuṃbhaja kēḷu duśyāsana vikarṇa sulōcanādigaḷu kāḷegadoḷari daśasahasra nr̥ pālakara maṇikhacitanirmala mauḷigaḷa digubaliya koḍuvenu divasa divasadali
ಹರಿಯ ಚಕ್ರವ ತುಡುಕಿಸುವೆ ವಾ ನರಪತಾಕನ ರಥವ ಹಿಂದಕೆ ಮುರಿಯಲಿಸುವೆನು ಮಹಿಮರಿಬ್ಬರ ನಡೆವಳಿಯ ಕೆಡಿಸಿ ಸುರನರೋರಗರೊಳಗೆ ಮೀಟಾ ದರಿಗೆ ಕಟ್ಟಿದ ತೊಡರು ಇವನು ಬ್ಬರಿಸಿ ನುಡಿದರೆ ನೊರಜ ಕೊಲುವರೆ ಕೈದುವೇಕೆಂದ
hariya cakrava tuḍukisuve vā narapatākana rathava hiṃdake muriyalisuvenu mahimaribbara naḍevaḷiya keḍisi suranarōragaroḷage mīṭā darige kaṭṭida toḍaru ivanu bbarisi nuḍidare noraja koluvare kaiduvēkeṃda
ಜಲಧಿಯುಬ್ಬಿದವೊಲು ಸಭಾಮಂ ಡಲಿಯ ಸೌಹೃದವಾಗ್ವಿವಾದದ ಕಳಕಳಿಕೆ ದಿಗುತಟವ ಗಬ್ಬರಿಸಿದುದು ಗಾಢದಲಿ ಕೆಲರು ಭೀಷ್ಮನನಿನತನೂಜನ ಕೆಲರು ಕೊಂಡಾಡಿದರು ಕೌರವ ನಳುಕಿ ಭೀಷ್ಮನ ಬೇಡಿಕೊಂಡನು ವಿನಯಪರನಾಗಿ
jaladhiyubbidavolu sabhāmaṃ ḍaliya sauhr̥davāgvivādada kaḷakaḷike digutaṭava gabbarisidudu gāḍhadali kelaru bhīṣmananinatanūjana kelaru koṃḍāḍidaru kaurava naḷuki bhīṣmana bēḍikoṃḍanu vinayaparanāgi
ಬೀಳುಕೊಂಡುದು ರಜನಿ ಮರುದಿನ ವಾಳು ಕುದುರೆಯ ನೆರಹಿ ಧರಣೀ ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ ಸೂಳವಿಸಿದವು ಲಗ್ಗೆಯಲಿ ನಿ ಸ್ಸಾಳಕೋಟಿಗಳುರುಚತುರ್ಬಲ ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು
bīḷukoṃḍudu rajani marudina vāḷu kudureya nerahi dharaṇī pāla sumuhūrtadali hoysidanaṃdu horaguḍiya sūḷavisidavu laggeyali ni ssāḷakōṭigaḷurucaturbala mēḷavisi naḍedudu samasta mahāmahīśvararu
ವೀರ ಧೃತರಾಷ್ಟ್ರಂಗೆ ವರ ಗಾಂ ಧಾರಿಗೆರಗಿದನವರ ಹರಕೆಯ ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ ಚಾರುಚಮರದ ನಿಕರದವರೊ ಯ್ಯಾರಿಸಲು ಜಯವರದ ರಭಸದು ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ
vīra dhr̥tarāṣṭraṃge vara gāṃ dhārigeragidanavara harakeya bhūrigaḷa kaikoṃḍanavanīsurarigabhinamisi cārucamarada nikaradavaro yyārisalu jayavarada rabhasadu dāra mereyalu bīḷukoṃḍanu rājamaṃdirava
ಒಡನೊಡನೆ ಕರಿತುರಗವೇರಿದ ರೊಡನೆ ಹುಟ್ಟಿದ ಶತಕುಮಾರರು ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು ಅಡಸಿದವಿ ಸೀಗುರಿಗಳಭ್ರವ ತುಡುಕಿದವು ಝಲ್ಲರಿಗಳಂತ್ಯದ ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ
oḍanoḍane karituragavērida roḍane huṭṭida śatakumāraru gaḍaṇadāptaru karṇa śakuni jayadrathādigaḷu aḍasidavi sīgurigaḷabhrava tuḍukidavu jhallarigaḷaṃtyada kaḍalavolu paḍe naḍeye hastinapurava horavaṃṭa
ಭುಗುಭುಗಿಪ ಚಂಬಕನ ಗಜ ಕೋ ಟಿಗಳ ಮುಂದಣ ಡೌಡೆಗಳ ಭೂ ಗಗನವೊಡನೊಡನೊದರೆ ಮೊರೆವ ಗಭೀರಭೇರಿಗಳ ಅಗಿವ ಪಟಹ ಮೃದಂಗ ಕಹಳಾ ದಿಗಳ ಕಳಕಳ ರಭಸ ದಶದಿ ಕ್ಕುಗಳ ಮಾತಾಡಿಸೆ ಮಹಾಬಲ ತೆರಳಿತಿಭಪುರಿಯ
bhugubhugipa caṃbakana gaja kō ṭigaḷa muṃdaṇa ḍauḍegaḷa bhū gaganavoḍanoḍanodare moreva gabhīrabhērigaḷa agiva paṭaha mr̥daṃga kahaḷā digaḷa kaḷakaḷa rabhasa daśadi kkugaḷa mātāḍise mahābala teraḷitibhapuriya
ಅಗಿವ ವಜ್ರದ ಹೊಳೆಕೆಗಳೊ ದಿಟ ಹಗಲ ತಗಡೋ ಮೇಣು ಮಿಂಚಿನ ಬಗೆಯ ಸೆಕ್ಕೆಯೋ ಸೂರ್ಯಕಾಂತಚ್ಛವಿಯ ತೆಕ್ಕೆಗಳೊ ಜಗುಳಿದೊರೆಗಳ ಜಾಳಿಗೆಯ ಹೊಗ ರೊಗಲು ಝಳಪಿಸೆ ಹೊಳೆಹೊಳೆವ ಕೈ ದುಗಳ ಹಬ್ಬುಗೆನೆಳಗು ಗಬ್ಬರಿಸಿದುದು ದಿಗುತಟವ
agiva vajrada hoḷekegaḷo diṭa hagala tagaḍō mēṇu miṃcina bageya sekkeyō sūryakāṃtacchaviya tekkegaḷo jaguḷidoregaḷa jāḷigeya hoga rogalu jhaḷapise hoḷehoḷeva kai dugaḷa habbugeneḷagu gabbarisidudu digutaṭava
ಜಲಧಿಗಳ ಕುಡಿದುದು ನಭೋಮಂ ಡಲವ ಸೆಳೆದುದು ಸುರನದಿಯ ಮು ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು ನೆಲನ ಸವೆಸಿತು ನೇಸರಿನ ಕಂ ಗಳನು ಕದುಕಿತು ನೆನೆಯ ಬಾರದು ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ
jaladhigaḷa kuḍidudu nabhōmaṃ ḍalava seḷedudu suranadiya mu kkuḷisitakhilādrigaḷa nuṃgitu divavanaḷukisitu nelana savesitu nēsarina kaṃ gaḷanu kadukitu neneya bāradu naḷinabhava haranādanenaluccaḷise padadhūḷi
ಸುರಿವ ಗಜಮದಧಾರೆಯಲಿ ಹೊಸ ಶರಧಿಗಳು ಸಂಭವಿಸಿದವು ನೃಪ ವರರ ಮುಕುಟದ ಮಣಿಯೊಳಾದರು ಚಂದ್ರಸೂರಿಯರು ಗಿರಿಗಳಾದವು ದಂತಿಯಲಿ ಪಡಿ ಧರಣಿಯಾದವು ಛತ್ರ ಚಮರದ ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ
suriva gajamadadhāreyali hosa śaradhigaḷu saṃbhavisidavu nr̥pa varara mukuṭada maṇiyoḷādaru caṃdrasūriyaru girigaḷādavu daṃtiyali paḍi dharaṇiyādavu chatra camarada larare nūtana sr̥ṣṭiyāytu viriṃcasr̥ṣṭiyali
ಅರರೆ ನಡೆದುದು ಸೇನೆ ಕುಲಗಿರಿ ಯೆರಡು ಕೂರುಮ ಫಣಿಪರಿಬ್ಬಿ ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ ಸರಸಿಜೋದ್ಭವ ಸೃಜಿಸಿದಿರ್ದರೆ ಧರಿಸಲಾಪುದೆ ಧರಣಿಯೆನೆ ಕುರು ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ
arare naḍedudu sēne kulagiri yeraḍu kūruma phaṇiparibbi bbara diśāmātaṃgagaḷa hadināranaḷavaḍisi sarasijōdbhava sr̥jisidirdare dharisalāpude dharaṇiyene kuru dharege baṃdudu sēne payaṇada mēle payaṇadali
ನಡೆದು ಬಂದುದು ಕೌರವೇಂದ್ರನ ಪಡೆ ಕುರುಕ್ಷೇತ್ರಕ್ಕೆ ಮೂಡಣ ಕಡೆಯಲಳವಡಿಸಿದರು ಬೀಡಾಯಿತ್ತು ವಹಿಲದಲಿ ಗುಡಿಗಳನು ಬಿಡಿಸಿದರು ಲೋಹದ ತಡಿಕೆಗಳನಳವಡಿಸಿ ಬೀಡಿನ ನಡುವೆ ರಚಿಸಿದರವನಿಪಾಲನ ರಾಜಮಂದಿರವ
naḍedu baṃdudu kauravēṃdrana paḍe kurukṣētrakke mūḍaṇa kaḍeyalaḷavaḍisidaru bīḍāyittu vahiladali guḍigaḷanu biḍisidaru lōhada taḍikegaḷanaḷavaḍisi bīḍina naḍuve racisidaravanipālana rājamaṃdirava
ಅಳವಿ ನಾಲ್ವತ್ತೆಂಟರೊಳಗೆ ಟ್ಟಳಿಸಿ ಬಿಟ್ಟುದು ಸೇನೆ ಕೋಟಾ ವಳಯವಗಳಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು ಕೆಲದೊಳೊಪ್ಪುವ ಭೋಗವತಿ ನಿ ರ್ಮಲ ಗಭೀರೋದಕದ ನದಿ ಕುರು ಬಲದ ಪಾಳಯದಂಗವಿದು ಕೇಳೈ ಮಹೀಪಾಲ
aḷavi nālvatteṃṭaroḷage ṭṭaḷisi biṭṭudu sēne kōṭā vaḷayavagaḷallalli taḷi muḷuvēli paḍiyagaḷu keladoḷoppuva bhōgavati ni rmala gabhīrōdakada nadi kuru balada pāḷayadaṃgavidu kēḷai mahīpāla
ಪಡೆಯ ಮುಂಗುಡಿ ಭೀಷ್ಮನದು ಬಲ ನೆಡನು ಪಿಂಗುಡಿಯಾತನದು ನೃಪ ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ ನಡೆವಡಾತನ ನೇಮ ಮರಳಿದು ಬಿಡುವಡಾತನ ಮಾತು ಕೌರವ ಪಡೆಗೆ ಭಾರಿಯ ವಜ್ರ ಪಂಜರವಾದನಾ ಭೀಷ್ಮ
paḍeya muṃguḍi bhīṣmanadu bala neḍanu piṃguḍiyātanadu nr̥pa gaḍaṇabīḍina kāhu gaṃgāsutana gurubhāra naḍevaḍātana nēma maraḷidu biḍuvaḍātana mātu kaurava paḍege bhāriya vajra paṃjaravādanā bhīṣma
ಕೇಳು ಜನಮೇಜಯ ಧರಿತ್ರೀ ಪಾಲ ಧೃತರಾಷ್ಟ್ರಂಗೆ ಮಕ್ಕಳ ಮೇಲೆ ನೆನೆಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ ಕಾಳೆಗದೊಳೇನಾದರೋ ಭೂ ಪಾಲತಿಲಕರು ದೃಗುವಿಹೀನರ ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ
kēḷu janamējaya dharitrī pāla dhr̥tarāṣṭraṃge makkaḷa mēle nenehāytadhikaśōkōdrēka pallavise kāḷegadoḷēnādarō bhū pālatilakaru dr̥guvihīnara bāḷikeya suḍalenuta tannoḷu hiridu ciṃtisida
ಆ ಸಮಯದಲಿ ರಾಯ ವೇದ ವ್ಯಾಸಮುನಿ ನಡೆತಂದು ಗತಪರಿ ತೋಷವನು ಸಂತೈಸಿ ಕರೆಸಿದನಂದು ಸಂಜಯನ ಆ ಸಮರವೃತ್ತಾಂತ ನಿನಗೆ ಸ ಮಾಸ ವಿಸ್ತರವಾಗಿರಲಿ ಭೂ ಮೀಶತಿಲಕಂಗರುಹುವುದು ನೀನೆಂದು ನೇಮಿಸಿದ
ā samayadali rāya vēda vyāsamuni naḍetaṃdu gatapari tōṣavanu saṃtaisi karesidanaṃdu saṃjayana ā samaravr̥ttāṃta ninage sa māsa vistaravāgirali bhū mīśatilakaṃgaruhuvudu nīneṃdu nēmisida
ಪರಮ ವೇದವ್ಯಾಸ ಮುನಿಪನ ಕರುಣವಾಗಲು ಕಂಗಳಿಗೆ ಗೋ ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ ಧುರದ ವೃತ್ತಾಂತವನು ಚಿತ್ತೈ ಸರಸ ತಿಳುಹುವೆನೆಂದು ಸಲೆ ವಿ ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರ ಭೂಪತಿಗೆ
parama vēdavyāsa munipana karuṇavāgalu kaṃgaḷige gō carisitī bhārata mahāsaṃgrāma sauraṃbha dhurada vr̥ttāṃtavanu cittai sarasa tiḷuhuveneṃdu sale vi starisa bagedanu saṃjayanu dhr̥tarāṣṭra bhūpatige
ಅವಧರಿಸು ಧೃತರಾಷ್ಟ್ರ ಗಂಗಾ ಭವನ ನೇಮದಲಂದು ಮಹದಾ ಹವಕೆ ನಡೆದದು ಕಟಕವಲ್ಲಿಯುಲೂಕನೆಂಬುವನು ಇವರು ಕಳುಹಿದೊಡವರು ರಿಪು ಪಾಂ ಡವರ ಹೊರಗೈತಂದನಿನ್ನಾ ಹವಕೆ ನಿಂದರು ಧರ್ಮಪುತ್ರ ವಿಳಂಬವೇಕೆಂದ
avadharisu dhr̥tarāṣṭra gaṃgā bhavana nēmadalaṃdu mahadā havake naḍedadu kaṭakavalliyulūkaneṃbuvanu ivaru kaḷuhidoḍavaru ripu pāṃ ḍavara horagaitaṃdaninnā havake niṃdaru dharmaputra viḷaṃbavēkeṃda
ಅಗ್ಗಳೆಯನೆಮ್ಮ ರಸ ಸಂಪ್ರತಿ ನೆಗ್ಗಿ ಕೆಟ್ಟಿರಿ ನೀವು ನಿಮಗೀ ಹುಗ್ಗಿಗರು ಹುರಿಗೂಡಿ ಗೆಲಿದಿನ್ನೆಳೆಯ ಕೊಡಿಸುವರೆ ಅಗ್ಗಿ ತಾ ಮಾತೇಕೆ ರಣದಲಿ ನುಗ್ಗು ನುಗ್ಗಾಗದೆ ಸಹೋದರ ರೊಗ್ಗು ಮುರಿಯದೆ ಮಾಣದರೆಗೇಡಾಯ್ತು ನಿಮಗೆಂದ
aggaḷeyanemma rasa saṃprati neggi keṭṭiri nīvu nimagī huggigaru hurigūḍi gelidinneḷeya koḍisuvare aggi tā mātēke raṇadali nuggu nuggāgade sahōdara roggu muriyade māṇadaregēḍāytu nimageṃda
ಬೆಂಬಲಕೆ ತಾನೆಂದ ಬಯಲ ವಿ ಡಂಬದಲಿ ಕಾಳೆಗವ ಮಸೆದರೆ ನಂಬಿ ಕೆಟ್ಟರಿ ಕೃಷ್ಣನನು ನೀವೇನ ಮಾಡುವಿರಿ ಇಂಬುಗೆಟ್ಟುದು ರೀತಿ ರಣಕೆ ತ್ರಿ ಯಂಬಕನನಮರಾಧಿಪನ ಕೈ ಕೊಂಬನೇ ಕೌರವನೆನಲು ಖತಿಗೊಂಡನಾ ಭೀಮ
beṃbalake tāneṃda bayala vi ḍaṃbadali kāḷegava masedare naṃbi keṭṭari kr̥ṣṇananu nīvēna māḍuviri iṃbugeṭṭudu rīti raṇake tri yaṃbakananamarādhipana kai koṃbanē kauravanenalu khatigoṃḍanā bhīma
ಸೀಳು ಕುನ್ನಿಯ ಬಾಯನೆಲವೋ ತೋಳ ತೀಟೆಯನವನ ನೆತ್ತಿಯ ಮೇಲೆ ಕಳೆವೆನು ಕುಲಕುವೆನು ಕೌರವ ಬಲಾಂಬುಧಿಯ ಹೇಳು ಹೋಗೀ ನಾಯನಾಡಿಸಿ ಕೇಳುತಿರಲೇಕಹಿತ ಕುರುಕುಲ ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ
sīḷu kunniya bāyanelavō tōḷa tīṭeyanavana nettiya mēle kaḷevenu kulakuvenu kaurava balāṃbudhiya hēḷu hōgī nāyanāḍisi kēḷutiralēkahita kurukula kālabhairavaneṃdu ninnoḍeyaṃge hēḷeṃda
ಮಾಡಲಿದ್ದುದು ಬಹಳ ಪೌರುಷ ವಾಡಿ ಕೆಡಿಸಲದೇಕೆ ಕೌರವ ರಾಡಿ ಕೆಡಿಸಲಿ ಮಾಡಿ ಕೆಡಿಸಲಿ ಚಿಂತೆ ನಮಗೇಕೆ ಮಾಡಿದೆವು ಗುರುಭಾರವನು ಮುರ ಗೇಡಿಯಲಿ ರಣಪಾರಪತ್ಯವ ಮಾಡುವಾತನು ಕೃಷ್ಣನೆಂದನು ಧರ್ಮಸುತ ನಗುತ
māḍaliddudu bahaḷa pauruṣa vāḍi keḍisaladēke kaurava rāḍi keḍisali māḍi keḍisali ciṃte namagēke māḍidevu gurubhāravanu mura gēḍiyali raṇapārapatyava māḍuvātanu kr̥ṣṇaneṃdanu dharmasuta naguta
ವೈರಿದೂತನ ಕಳುಹಿದನು ಕೈ ವಾರಿಗಳು ಜಯಜಯಯೆನಲು ಹೊಂ ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ ವಾರುದದ ಖುರನಾಲ್ಕರಲಿ ಮಣಿ ಚಾರು ಕನಕವ ಸುರಿದು ಧರ್ಮಜ ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು
vairidūtana kaḷuhidanu kai vārigaḷu jayajayayenalu hoṃ dēra tarasidanabujanābhana padayugake namisi vārudada khuranālkarali maṇi cāru kanakava suridu dharmaja tēranēridanodaridavu nissāḷa kōṭigaḷu
ಹರಿಯ ಬಲವಂದಣ್ಣನಂಘ್ರಿಗೆ ಶಿರವ ಚಾಚಿ ನಿಜಾಯುಧವ ವಿ ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ ಧುರಕೆ ನಡೆದರು ದ್ರುಪದ ಸಾತ್ಯಕಿ ವರ ವಿರಾಟಾದಿಗಳು ಚೂಣಿಯೊ ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ
hariya balavaṃdaṇṇanaṃghrige śirava cāci nijāyudhava vi starisi pavanaja pārthamādrīsutaru rathavēri dhurake naḍedaru drupada sātyaki vara virāṭādigaḷu cūṇiyo ḷuravaṇisidaru sēne naḍedudu muṃde saṃdaṇisi
ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ ಳಳವಿಗೊಟ್ಟುದು ಸೇನೆ ಮೂಡಣ ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ ಪಳಹರದ ತೋಮರದ ಕುಂತಾ ವಳಿಯ ಚಮರಚ್ಛತ್ರಮಯ ಸಂ ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ
baḷika dhr̥ṣṭadyumnanājñeyo ḷaḷavigoṭṭudu sēne mūḍaṇa jaladhigāṃtudu paścimōdadhiyeṃba rabhasadali paḷaharada tōmarada kuṃtā vaḷiya camaracchatramaya saṃ kuḷadinādudu bhūta nālkākāśagatavāgi
Keys: ← → turn the page, J K step through the verses.
Illustration: Verse & Place (Project-owned).