Shunya Sampadane 16.p162
ಕದಳಿ ಎಂಬುದು ತನು, ಕದಳಿ ಎಂಬುದು ಮನ, ಕದಳಿ ಎಂಬುದು ವಿಷಯಂಗಳು, ಕದಳಿ ಎಂಬುದು ಭವ ಘೋರಾರಣ್ಯ, ಕದಳಿ ಎಂಬುದ ಗೆದ್ದು, ತವೆ ಬದುಕಿ ಬಂದು ಕದಳಿಯ ಬನದಲ್ಲಿ ಭವಹರನ ಕಂಡೆನು. ಭವಗೆಟ್ಟು ಬಂದೆಯಾ ಮಗಳೇ ಎಂದು ಕರುಣದಿಂ ತೆಗೆದು ಬಿಗಿದಪ್ಪಿದರೆ ಚನ್ನಮಲ್ಲಿಕಾರ್ಜುನನ ಹೃದಯ ಕಮಲದಲ್ಲಿ ಅಡಗಿದೆನು ॥
kadaḷi eṃbudu tanu, kadaḷi eṃbudu mana, kadaḷi eṃbudu viṣayaṃgaḷu, kadaḷi eṃbudu bhava ghōrāraṇya, kadaḷi eṃbuda geddu, tave baduki baṃdu kadaḷiya banadalli bhavaharana kaṃḍenu. bhavageṭṭu baṃdeyā magaḷē eṃdu karuṇadiṃ tegedu bigidappidare cannamallikārjunana hr̥daya kamaladalli aḍagidenu ॥