ಅದೆಂತೆಂದೊಡಾ ಪ್ರಭುದೇವರು ಬಸವರಾಜದೇವರು ಚಿಕ್ಕದಣ್ಣಾಯಕರು ಸಿದ್ಧರಾಮಯ್ಯ ದೇವರು
ಘಟ್ಟಿವಾಳಯ್ಯಗಳು ನಿರ್ವಯಲ ಸಮಾಧಿಯನೈದುವದಂ ಕಂಡು ಹರುಷಾನಂದ ಶರಧಿಯೊಳು ತೇಂಕಾಡುತ್ತಂ
ಮಹಾನುಭಾವಗೋಷ್ಠಿಯಂ ಮಾಡುತ್ತಿರಲು, ಕೆಲ ಬಲದಲ್ಲಿ ಸೊಡ್ಡಳ ಬಾಚರಸರು ಹಡಪದಪ್ಪಣ್ಣಗಳು ಪಡಿಹಾರಿ ಉತ್ತಣ್ಣ
ಅಕ್ಕನಾಗಾಯಿಗಳು ಮೋಳಿಗೆಯ ಮಾರಯ್ಯ ಡೋಹರ ಕಕ್ಕಯ್ಯ ಕಿನ್ನರ ಬೊಮ್ಮಣ್ಣ ಕನ್ನದ ಮಾರಯ್ಯ ಮಿಂಡಮಲ್ಲಿನಾಥ
ಕೋಲಶಾಂತಯ್ಯ ಮೊಗವಾಡವ ಕೇಶಿರಾಜದೇವರು ಖಂಡೆಯದ ಕೇಶಿರಾಜದೇವರು, ಮುಖ್ಯವಾದ ಅಸಂಖ್ಯಾತ
ಮಹಾಗಣಂಗಳೆಲ್ಲರು ಮಹಾನುಭಾವ ಪ್ರಸಂಗಮಂ ಕೇಳಿ ನಿಜ ತತ್ವದಲ್ಲಿ ಸಮರಸವಾಗಿ, ಪರಮಾನಂದದಲ್ಲಿ
ಓಲಾಡುತ್ತಿರಲು, ಇತ್ತಲು ಪರಮೇಶ್ವರನ ನಿರೂಪದಿಂದ ಒಬ್ಬ ರುದ್ರ ಕರ್ನಿಕೆ ಮರ್ತ್ಯದಲ್ಲಿ ಒಗೆದು ಉಡುತಡೆಯ
ಮಹದೇವಿಯಕ್ಕನೆಂಬ ನಾಮಮಂ ಧರಿಸಿ, ಲಿಂಗಧಾರಣವಾಗಲೊಲ್ಲೆವೆಂದ ಭವಿಯ ಸೋಂಕದೆ ಅಂಗ ಸಂಗಮಂ ತೊರೆದು,
ಲಿಂಗಸಂಗದೊಳು ಅವಿರಳ ಸಂಗಿಯಾಗಿ, ತನ್ನ ದಿವ್ಯ ರೂಪ ಲಾವಣ್ಯವನೆಡೆಗೊಂಡು, ಷೋಡಶ ಪ್ರಾಯದ ಯೌವ್ವನದ ಸುಖದ
ಸುಗ್ಗಿ ಶಿವನೊಳ್ಪರವಶವನೈದಿ ಸರ್ವ ಕರಣಂಗಳ ಅರುವಿಂಗಾಹುತಿಯನಿಕ್ಕಿ ದಿಗಂಬರದುಡಿಗೆಯನುಟ್ಟು ತನ್ನ
ಕೇಶವೆಂಬಂಬರವ ಮುಸುಕಿಟ್ಟು ಕರಸ್ಥಲದೊಳಗಿಪ್ಪ ಇಷ್ಟಲಿಂಗದೊಳು ದೃಷ್ಟಿ ನಟ್ಟು ಮನಮುಟ್ಟಿ ಭಾವ ಕರಿಗೊಂಡು
ಲೌಕಿಕ ಲಜ್ಜಾಭಾವಮಂ ತೊರೆದು ಭವಸಾಗರಮಂ ದಾಂಟಿ ಚನ್ನಮಲ್ಲಿಕಾರ್ಜುನನ ವಿಕಳಾವಸ್ಥೆಯೊಳ್ ತನ್ನ ಮರೆದು
ಮಹಾವೈರಾಗ್ಯಮಂ ಬೀರುತ್ತ ಕರುಣರಸಮಂ ಹೀರುತ್ತೆ ನಿಶ್ಚಲಬುದ್ಧಿಯನೆಡೆಗೊಂಡು ಭಕ್ತಿಯ ಭಾಗ್ಯವೆನಿಪ ಮುಕ್ತಿಯ
ತವರ್ಮನೆ ಎನಿಪ ಶಿವಭಾವ ಸಂಪನ್ನೆ ಪ್ರಸಾದದ ಮೇರುವೆ ತತ್ವಶಿಖಾಮಣಿ, ಪುಣ್ಯದ ಪುಂಜೆ ನೈಷ್ಠೆಯ ಕಣಿ, ಸತ್ಯದ
ಸದನ, ಶಾಂತಿಯ ನಿಧಿ, ಚಿದಂಬರ ಸಂಯುತೆ, ಸ್ವಾನುಭಾವದ ಸಾಗರ, ನಿತ್ಯದ ನಿವಾಸೆ, ಎನಿಪ ಮಹದೇವಿಯಕ್ಕಗಳು
adeṃteṃdoḍā prabhudēvaru basavarājadēvaru cikkadaṇṇāyakaru siddharāmayya dēvaru
ghaṭṭivāḷayyagaḷu nirvayala samādhiyanaiduvadaṃ kaṃḍu haruṣānaṃda śaradhiyoḷu tēṃkāḍuttaṃ
mahānubhāvagōṣṭhiyaṃ māḍuttiralu, kela baladalli soḍḍaḷa bācarasaru haḍapadappaṇṇagaḷu paḍihāri uttaṇṇa
akkanāgāyigaḷu mōḷigeya mārayya ḍōhara kakkayya kinnara bommaṇṇa kannada mārayya miṃḍamallinātha
kōlaśāṃtayya mogavāḍava kēśirājadēvaru khaṃḍeyada kēśirājadēvaru, mukhyavāda asaṃkhyāta
mahāgaṇaṃgaḷellaru mahānubhāva prasaṃgamaṃ kēḷi nija tatvadalli samarasavāgi, paramānaṃdadalli
ōlāḍuttiralu, ittalu paramēśvarana nirūpadiṃda obba rudra karnike martyadalli ogedu uḍutaḍeya
mahadēviyakkaneṃba nāmamaṃ dharisi, liṃgadhāraṇavāgalolleveṃda bhaviya sōṃkade aṃga saṃgamaṃ toredu,
liṃgasaṃgadoḷu aviraḷa saṃgiyāgi, tanna divya rūpa lāvaṇyavaneḍegoṃḍu, ṣōḍaśa prāyada yauvvanada sukhada
suggi śivanoḷparavaśavanaidi sarva karaṇaṃgaḷa aruviṃgāhutiyanikki digaṃbaraduḍigeyanuṭṭu tanna
kēśaveṃbaṃbarava musukiṭṭu karasthaladoḷagippa iṣṭaliṃgadoḷu dr̥ṣṭi naṭṭu manamuṭṭi bhāva karigoṃḍu
laukika lajjābhāvamaṃ toredu bhavasāgaramaṃ dāṃṭi cannamallikārjunana vikaḷāvastheyoḷ tanna maredu
mahāvairāgyamaṃ bīrutta karuṇarasamaṃ hīrutte niścalabuddhiyaneḍegoṃḍu bhaktiya bhāgyavenipa muktiya
tavarmane enipa śivabhāva saṃpanne prasādada mēruve tatvaśikhāmaṇi, puṇyada puṃje naiṣṭheya kaṇi, satyada
sadana, śāṃtiya nidhi, cidaṃbara saṃyute, svānubhāvada sāgara, nityada nivāse, enipa mahadēviyakkagaḷu
Editor's note: Lines 1–15 of original source paragraph 3.