Skip to content

Shunya Sampadane 20.p114

ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ ಚಕೋರನ ಧ್ಯಾನವೆಂತಪ್ಪುದು ಅಂತಾಗಿದ್ದೆ ನಾನು. ರಾತ್ರೆಯೊಳ್ಮುಗಿದ ಪದ್ಮಪತ್ರದ ಭ್ರಮರನ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಮಾತೆ ವಿಯೋಗದ ಶಿಸುವಿನ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದೃಷ್ಟ ಕೇಸರಿಯ ಧ್ಯಾನದ ಮದಹಸ್ತಿಯಂತಿಪ್ಪುದು ಅಂತಾಗಿದ್ದೆ ನಾನು. ನೋಟವನಗಲಿದ ನೇಹದ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣು ಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು ಗುಹೇಶ್ವರ ಲಿಂಗ ಸಂಗನಬಸವಣ್ಣನೊಳಗೆ ಲೀಯನಹ ಭರದಲ್ಲಿ ಏನೆಂದರಿಯದಿದ್ದೆ ನಾನು.॥

iṃduvina beḷagina saṃpattaniṃbugoṃḍa cakōrana dhyānaveṃtappudu aṃtāgidde nānu. rātreyoḷmugida padmapatrada bhramarana dhyānaveṃtippudu aṃtāgidde nānu. māte viyōgada śisuvina dhyānaveṃtippudu aṃtāgidde nānu. svapnadalli dr̥ṣṭa kēsariya dhyānada madahastiyaṃtippudu aṃtāgidde nānu. nōṭavanagalida nēhada dhyānaveṃtippudu aṃtāgidde nānu. brahmapāśa viṣṇu māyavanatigaḷeda chaladalli ēneṃdariyadidde nānu guhēśvara liṃga saṃganabasavaṇṇanoḷage līyanaha bharadalli ēneṃdariyadidde nānu.॥

Report an error