Skip to content

(ವಿಂಶತ್ಯುಪದೇಶ) · ಶರಣರವಸಾನ ಪರಾಮರಿಕೆ ಸಂಪಾದನೆ

śaraṇaravasāna parāmarike saṃpādane

śaraṇaravasāna parāmarike saṃpādane

The complete original prose, dialogue and poems of teaching 20.

114 passagesKannada with transliteration

An open manuscript beneath an arch for Shunya Sampadane.

ಶ್ರೀ ಗುರು ಬಸವ ಲಿಂಗಾಯ ನಮಃ ॥ಕಂದ॥ ಸಂಗನ ಬಸವಣ್ಣಗೆ ಘನ ಲಿಂಗದೊಳವಿರಳ ನಿಜೈಕ್ಯಮಂ ಶರಣ ಸ್ತೋತ್ರ ಮಂಗಳ ಅವಸಾನವ ಪ್ರಭುಲಿಂಗಂ ಪೇಳಿದ ಸುಬೋಧೆಯೆಂತೆನೆ ಪೇಳ್ವೆಂ॥

śrī guru basava liṃgāya namaḥ ॥kaṃda॥ saṃgana basavaṇṇage ghana liṃgadoḷaviraḷa nijaikyamaṃ śaraṇa stōtra maṃgaḷa avasānava prabhuliṃgaṃ pēḷida subōdheyeṃtene pēḷveṃ॥

Report an error

ಅದೆಂತೆಂದೊಡಾ ಎಲ್ಲಿ ಗಣಂಗಳು ಸ್ತೋತ್ರ ಮಾಡುತ್ತಿರಲು ಪ್ರಭುದೇವರು ಬರಿಯ ಸ್ತೋತ್ರವ ಮಾಡಿ ಫಲವೇನು? ನಿಃಶಬ್ದ ಬ್ರಹ್ಮವು ನುಡಿಯ ಗಡಣಕ್ಕೆ ಸಾಧ್ಯವಪ್ಪುದೆ ಎದೆ ಮರುಳಗಳಿರಾ? ಆದಿಯಲ್ಲಿ ಪರಶಿವನ ತದ್ರೂಪವಾದ ಸ್ಥೂಲ ತತ್ವವೇ ಮರ್ತ್ಯ ಲೋಕದ ಮಹಾಮನೆಯನುದ್ಧರಿಸಲೆಂದು ರುದ್ರ ಗಣ ಪ್ರಮಥ ಗಣಂಗಳು ಮೊದಲಾದ ಸಮಸ್ತ ಗಣನಿಕರ ಸಹಿತಲೈತಂದು ಕಲ್ಯಾಣವೆಂಬ ಕಟಕವ ಶಿವಪುರವ ಮಾಡಿ ರುದ್ರ ಗಣ ಮೊದಲಾದ ಪ್ರಮಥ ಗಣವಸಂಖ್ಯಾತರೆಂದು ಹೆಸರಿಟ್ಟು ಕರೆದು ಶಿವಾಚಾರ ಧ್ವಜವನೆತ್ತಿ ಭಕ್ತಿಯ ಕುಳಸ್ಥಳ ವಕೃತ ದೃಷ್ಟ ಪವಾಡವ ತೋರಿ ಶಿವಲೋಕಕ್ಕೆ ತಾನೆ ನಿಚ್ಚಣಿಕೆಯಾಗಿ ಮೆರೆದು ಮರ್ತ್ಯವ ಪಾವನವ ಮಾಡಿದ ಬಳಿಕ ಇನ್ನು ಮರ್ತ್ಯದ ಹಂಗೇತಕ್ಕೆ? ತನಿರಸವ ತುಂಬಿ ಫಳ ಒಮ್ಮಿಂಗೆ ತೊಟ್ಟು ಬಿಡುವಂತೆ ಬಂದ ಮಣಿಹ ಪೂರೈಸಿತ್ತು ನೋಡಿರೆ. ಅಸಂಖ್ಯಾತರು ಇನ್ನು ನಿಮ್ಮ ನೀವೆ ತಿಳಿದು ನಿರಾಳದಲ್ಲಿ ನಿಜವನೈದಿ ಸಾವನ್ನಕ್ಕರ ಸಾಧನೆಯ ಕಲಿತರೆ ಕಾದುವ ದಿನವಿನ್ನಾವುದೆಂದು ಪ್ರಭುದೇವರು ತಮ್ಮ ಅವತಾರದ ಅವಸಾನಮಂ ನಿರೂಪಿಸುವ ಪ್ರಸ್ಥಾವದ ವಚನ॥

adeṃteṃdoḍā elli gaṇaṃgaḷu stōtra māḍuttiralu prabhudēvaru bariya stōtrava māḍi phalavēnu? niḥśabda brahmavu nuḍiya gaḍaṇakke sādhyavappude ede maruḷagaḷirā? ādiyalli paraśivana tadrūpavāda sthūla tatvavē martya lōkada mahāmaneyanuddharisaleṃdu rudra gaṇa pramatha gaṇaṃgaḷu modalāda samasta gaṇanikara sahitalaitaṃdu kalyāṇaveṃba kaṭakava śivapurava māḍi rudra gaṇa modalāda pramatha gaṇavasaṃkhyātareṃdu hesariṭṭu karedu śivācāra dhvajavanetti bhaktiya kuḷasthaḷa vakr̥ta dr̥ṣṭa pavāḍava tōri śivalōkakke tāne niccaṇikeyāgi meredu martyava pāvanava māḍida baḷika innu martyada haṃgētakke? tanirasava tuṃbi phaḷa ommiṃge toṭṭu biḍuvaṃte baṃda maṇiha pūraisittu nōḍire. asaṃkhyātaru innu nimma nīve tiḷidu nirāḷadalli nijavanaidi sāvannakkara sādhaneya kalitare kāduva dinavinnāvudeṃdu prabhudēvaru tamma avatārada avasānamaṃ nirūpisuva prasthāvada vacana॥

Report an error

ಅನುವನರಿಯದೆ ಆದಿಯ ವಿಚಾರಿಸದೆ ಅನಾದಿಯಲ್ಲಿ ತಾನಾರೆಂಬುದ ನೋಡದೆ ಸ್ತೋತ್ರಮಂ ಮಾಡಿ ಫಲವೇನು? ನಿಃಶಬ್ದ ಬ್ರಹ್ಮ ಮುಖ್ಯತೆ ಎಂಬ ಘನವು ಹೊಗಳಿಕೆಗೆ ಸಿಕ್ಕುವದೆ? ಎಲೆ ಮರುಳುಗಳಿರಾ ಅನಾದಿಯಲ್ಲಿ ಬಸವಣ್ಣನು ಏಳನೂರೆಪ್ಪತ್ತು ಅಮರಗಣಂಗಳು ಸಹಿತ ಮರ್ತ್ಯಕ್ಕೆ ಬಂದನೊಂದು ಕಾರಣದಿಂದ ಬಂದ ಮಣಿಹ ಪೂರೈಸಿತ್ತು. ಸಂದ ಪುರಾತರೆಲ್ಲರು ಕೇಳಿ ಇಂದು ನೀವೆಲ್ಲರು ನಿಮ್ಮ ನೀವೆ ತಿಳಿದು ನೋಡಿ ನಿಜವನೈದುವುದು ಇಂದು ನಮ್ಮ ಗುಹೇಶ್ವರ ಲಿಂಗಕ್ಕೆ ಸುಳುಹಿಲ್ಲ. ॥

anuvanariyade ādiya vicārisade anādiyalli tānāreṃbuda nōḍade stōtramaṃ māḍi phalavēnu? niḥśabda brahma mukhyate eṃba ghanavu hogaḷikege sikkuvade? ele maruḷugaḷirā anādiyalli basavaṇṇanu ēḷanūreppattu amaragaṇaṃgaḷu sahita martyakke baṃdanoṃdu kāraṇadiṃda baṃda maṇiha pūraisittu. saṃda purātarellaru kēḷi iṃdu nīvellaru nimma nīve tiḷidu nōḍi nijavanaiduvudu iṃdu namma guhēśvara liṃgakke suḷuhilla. ॥

Report an error

ಮತ್ತಂ, ಸಾವನ್ನಕ್ಕರ ಸಾಧನವ ಮಾಡಿದರೆ ಕಾದುವ ದಿನವಿನ್ನಾವುದು? ಬಾಳುವನ್ನಕ್ಕರ ಭಜಿಸುತ್ತಿದ್ದರೆ ತಾನಹ ದಿನವಿನ್ನಾವುದು? ಅರ್ಥವುಳ್ಳನ್ನಕ್ಕರ ಅರಿವುತ್ತಿದ್ದರೆ ನಿಜವನೈದುವ ದಿನವಿನ್ನಾವುದು? ಕಾರ್ಯಕ್ಕೆ ಬಂದು ಕಾರ್ಯ ಕೈಸಾರಿದ ಬಳಿಕ ಇನ್ನು ಮರ್ತ್ಯಲೋಕದ ಹಂಗೇತಕ್ಕೆ? ತನಿರಸ ತುಂಬಿದ ಅಮೃತ ಫಲ ಒಮ್ಮಿಗೆ ತೊಟ್ಟು ಬಿಡುವದು. ನೋಡಿರೆ ದೃಷ್ಟಾಂತವ. ಬಸವಣ್ಣ ಚನ್ನಬಸವಣ್ಣ ಮೊದಲಾದ ಪ್ರಮಥರು ಗುಹೇಶ್ವರ ಲಿಂಗದಲ್ಲಿ ನಿಜವನೈದಿ ನಿಶ್ಚಿಂತರಾಗಿರಯ್ಯ. ॥

mattaṃ, sāvannakkara sādhanava māḍidare kāduva dinavinnāvudu? bāḷuvannakkara bhajisuttiddare tānaha dinavinnāvudu? arthavuḷḷannakkara arivuttiddare nijavanaiduva dinavinnāvudu? kāryakke baṃdu kārya kaisārida baḷika innu martyalōkada haṃgētakke? tanirasa tuṃbida amr̥ta phala ommige toṭṭu biḍuvadu. nōḍire dr̥ṣṭāṃtava. basavaṇṇa cannabasavaṇṇa modalāda pramatharu guhēśvara liṃgadalli nijavanaidi niściṃtarāgirayya. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸುತ್ತಿರಲು, ಬಸವರಾಜದೇವರು ತಮ್ಮ ಲಿಂಗಾಂಗಸಮರಸೈಕ್ಯವೆಂತೆಂದು ಬೆಸಗೊಂಬ ಪ್ರಸ್ಥಾವದ ವಚನ.

hīgeṃdu prabhudēvaru nirūpisuttiralu, basavarājadēvaru tamma liṃgāṃgasamarasaikyaveṃteṃdu besagoṃba prasthāvada vacana.

Report an error

ದೇವದೇವ ಮಹಾ ಪ್ರಸಾದ ಅವಧರಿಸು ದೇವ ಎನ್ನ ಬಿನ್ನಪವ. ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ. ಎನ್ನ ಆಗು ನಿಮ್ಮ ಲೀಲಾ ವಿನೋದ. ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರು ಕಾರುಣ್ಯವ ಮಾಡಿ ಗುರು ಲಿಂಗ ಜಂಗಮ ತ್ರಿವಿಧ ಭಕ್ತಿಯ ಘನವ ತೋರಿಸಿ ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿಸಿದಿರಿ. ಅದು ನಿಮ್ಮ ಲೀಲಾ ವಿನೋದ. ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೂವತ್ತಾರು ಕೊಂಡೆಯರ ಪರಿಹರಿಸಿ ಎಂಭತ್ತೆಂಟು ಪವಾಡವ ಮೆರೆದಿರಿ. ಅದು ನಿಮ್ಮ ಲೀಲಾ ವಿನೋದ. ಎನ್ನ ಮನದ ಮಲಿನವ ತೊಳೆಯಲೆಂದು ಬಂದು ಶೂನ್ಯ ಸಿಂಹಾಸನದ ಮೇಲೆ ಮೂರ್ತಿಗೊಂಡು ನಿಮ್ಮ ನಿಜ ಮಹಿಮೆಯನೆಲ್ಲ ಪ್ರಮಥರ ಮುಂದೆ ತೋರಿ ಎನ್ನ ಪಾವನವ ಮಾಡಿ ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ಎನ್ನ ನಿಮ್ಮಂತೆ ಮಾಡಿದಿರಿ. ಅದು ನಿಮ್ಮ ಲೀಲಾ ವಿನೋದ. ಕೂಡಲ ಸಂಗಮ ದೇವ ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ ಎನಗೊಮ್ಮೆ ತಿಳುಗಿಕೊಟ್ಟು ಎನ್ನ ನುಳುಹಿಕೊಳ್ಳಾ ಪ್ರಭುವೆ ॥

dēvadēva mahā prasāda avadharisu dēva enna binnapava. kāyada māyada saḍagaradalli huṭṭisidiri. enna āgu nimma līlā vinōda. ā kāyada māyada taleya civuṭi śrīguru kāruṇyava māḍi guru liṃga jaṃgama trividha bhaktiya ghanava tōrisi nimma pādōdaka prasādavanittu rakṣisidiri. adu nimma līlā vinōda. paravādi bijjaḷa oregallādalli munnūraruvattu satta prāṇavanetti mūvattāru koṃḍeyara pariharisi eṃbhatteṃṭu pavāḍava merediri. adu nimma līlā vinōda. enna manada malinava toḷeyaleṃdu baṃdu śūnya siṃhāsanada mēle mūrtigoṃḍu nimma nija mahimeyanella pramathara muṃde tōri enna pāvanava māḍi ṣaḍusthalamaṃ enna sarvāṃgadalli pratiṣṭhisi enna nimmaṃte māḍidiri. adu nimma līlā vinōda. kūḍala saṃgama dēva enna varmada sakīlava nīve ballirāgi enagomme tiḷugikoṭṭu enna nuḷuhikoḷḷā prabhuve ॥

Report an error

ಇದಕ್ಕೆ ಪ್ರಭುದೇವರ ಪ್ರತ್ಯುತ್ತರ. ಕಾಯದೊಳಗೆ ಕಾಯವಾಗಿ, ಪ್ರಾಣದೊಳಗೆ ಪ್ರಾಣವಾಗಿ, ಮನದೊಳಗೆ ಮನವಾಗಿ, ಭಾವದೊಳಗೆ ಭಾವವಾಗಿ, ಅರುಹಿನೊಳಗೆ ಅರುಹಿನ ತಿರುಳಾಗಿ, ಮರಹು ಮಾರುಗೊಂಡು ನಿಜ ಪದವು ಸಾಧ್ಯವಾದ ಬಳಿಕ ಆವುದು ವರ್ಮ ಅವುದು ಕರ್ಮ ಆವುದು ಬೋಧೆ ಆವುದು ಸಂಬಂಧವೆಂದು ಹೇಳಲಿಲ್ಲ ನೀ ಕೇಳಲಿಲ್ಲ. ಅದೇನು ಕಾರಣವೆಂದರೆ ಬೇಸರಗೊಂಬ ತೆರಹಿಲ್ಲವಾಗಿ ಗುಹೇಶ್ವರ ಲಿಂಗದಲ್ಲಿ ತೆರೆಮರೆ ಆವುದು ಹೇಳಯ್ಯ ಬಸವಣ್ಣಾ ॥

idakke prabhudēvara pratyuttara. kāyadoḷage kāyavāgi, prāṇadoḷage prāṇavāgi, manadoḷage manavāgi, bhāvadoḷage bhāvavāgi, aruhinoḷage aruhina tiruḷāgi, marahu mārugoṃḍu nija padavu sādhyavāda baḷika āvudu varma avudu karma āvudu bōdhe āvudu saṃbaṃdhaveṃdu hēḷalilla nī kēḷalilla. adēnu kāraṇaveṃdare bēsaragoṃba terahillavāgi guhēśvara liṃgadalli teremare āvudu hēḷayya basavaṇṇā ॥

Report an error

ಇದಕ್ಕೆ ಬಸವರಾಜ ದೇವರ ಪ್ರತ್ಯುತ್ತರ॥

idakke basavarāja dēvara pratyuttara॥

Report an error

ಅರಿದಿಹೆನೆಂದರೆ ಅರಿಹಿಂಗಸಾಧ್ಯ. ನೆನೆದಿಹೆನೆಂದರೆ ನೆನಹಿಂಗಸಾಧ್ಯ. ಭಾವಿಸಿಹೆನೆಂದರೆ ಭಾವಕ್ಕಸಾಧ್ಯ. ವಾಙ್ಮನಕ್ಕಗೋಚರ ಲಿಂಗವ ನರಿವ ಪರಿ ಎಂತಯ್ಯ? ಗುರು ತೋರದನ್ನಕ್ಕರ ಗುರು ಶಿಷ್ಯರ ಮಥನದಲ್ಲಿ ಸ್ವಯಂ ಜ್ಯೋತಿ ಲಿಂಗವು ಉದಯವಪ್ಪುದೆಂಬ ಶೃತಿ ಹುಸಿಯೆ? ಕೂಡಲ ಸಂಗಮ ದೇವ ನಿಮ್ಮ ಮಹಾನುಭಾವರ ಮಥನದಿಂದೆ ಎನ್ನಲ್ಲಿ ನಿಜವ ನೆಲೆ ಗೊಳಿಸಾ ಪ್ರಭುವೆ. ॥

aridiheneṃdare arihiṃgasādhya. nenediheneṃdare nenahiṃgasādhya. bhāvisiheneṃdare bhāvakkasādhya. vāṅmanakkagōcara liṃgava nariva pari eṃtayya? guru tōradannakkara guru śiṣyara mathanadalli svayaṃ jyōti liṃgavu udayavappudeṃba śr̥ti husiye? kūḍala saṃgama dēva nimma mahānubhāvara mathanadiṃde ennalli nijava nele goḷisā prabhuve. ॥

Report an error

ಇದಕ್ಕೆ ಪ್ರಭುದೇವರ ಪ್ರತ್ಯುತರ॥

idakke prabhudēvara pratyutara॥

Report an error

ಮಥನದ ಲೀಲೆಯಲ್ಲಿ ಹುಟ್ಟುವದೆ ಬ್ರಹ್ಮವು? ಶೃತಿ ಸ್ಮೃತಿಗಳಿಗೆ ಅಳವಡದು ನೋಡಾ. ಪೃಥ್ವಿಯೊಳಗಿಲ್ಲದೆ ಅಚಳವಪ್ಪ ಲಿಂಗವನು ಸಚರಾಚರದಲ್ಲಿ ಭರಿತವೆಂತೆಂಬೆ? ಇಲ್ಲದ ಲಿಂಗವನಲ್ಲಲ್ಲಿಗೆ ಉಂಟೆಂಬ ಲಿಂಗ ವಾರ್ತೆ ಗುಹೇಶ್ವರನೆಂಬ ಲಿಂಗವು ಸಾಧ್ಯವಾಗದು ಕಾಣಾ ಸಂಗನ ಬಸವಣ್ಣಾ. ॥

mathanada līleyalli huṭṭuvade brahmavu? śr̥ti smr̥tigaḷige aḷavaḍadu nōḍā. pr̥thviyoḷagillade acaḷavappa liṃgavanu sacarācaradalli bharitaveṃteṃbe? illada liṃgavanallallige uṃṭeṃba liṃga vārte guhēśvaraneṃba liṃgavu sādhyavāgadu kāṇā saṃgana basavaṇṇā. ॥

Report an error

ಇದಕ್ಕೆ ಬಸವರಾಜ ದೇವರ ಪ್ರತ್ಯುತ್ತರ॥

idakke basavarāja dēvara pratyuttara॥

Report an error

ಅನುಭಾವವಿಲ್ಲದ ಭಕ್ತಿ ಅರುವಿಂಗೆ ಬಾರದು. ಅನುಭಾವವಿಲ್ಲದ ಸಂಗ ಸಮರಸ ಸುಖಕ್ಕೆ ನಿಲುಕದು. ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದ ಅನುಭಾವ ಇಲ್ಲದೆ ಏನೇನು ಅರಿಯಬಾರದು. ತನ್ನಲ್ಲಿ ಸನಿಹಿತ ಉಳ್ಳಡೆ ಶಿವ ಶರಣರ ಸಂಗವೇತಕ್ಕೆನಲುಂಟೆ? ಕೂಡಲ ಸಂಗಮ ದೇವಯ್ಯ ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೇ ಪ್ರಭುವೆ? ॥

anubhāvavillada bhakti aruviṃge bāradu. anubhāvavillada saṃga samarasa sukhakke nilukadu. anubhāvavillada prasāda pariṇāmava koḍada anubhāva illade ēnēnu ariyabāradu. tannalli sanihita uḷḷaḍe śiva śaraṇara saṃgavētakkenaluṃṭe? kūḍala saṃgama dēvayya nimma anubhāva mātina mathanaveṃdu nuḍiyabahudē prabhuve? ॥

Report an error

ಇದಕ್ಕೆ ಪ್ರಭುದೇವರ ಪ್ರತ್ಯುತ್ತರ॥

idakke prabhudēvara pratyuttara॥

Report an error

ನೆಲದ ಮುಂದಣ ಬಾಗಿಲು ಮೂರು ಮೊನೆಯ ಕಂಭದ ಶೈಲದಲ್ಲಿ ಒಂದು ದೇಗುಲ. ಅಲ್ಲಿ ಒಳಗಣ ಹುತ್ತಿನ ಕಲ್ಲಿನಲ್ಲಿ ಸಿಲುಕಿತ್ತು. ನಾದ ಮೂರುತಿ ಲಿಂಗವಿಪ್ಪುದು. ಒಂದು ಮಾತನಾಡುವರಳುಕಿ ನುಡಿವುದು ಗುಹೇಶ್ವರ ಮೆಚ್ಚಲು ಬಹು ಮಾತಿನ ಮಾಲೆಯ ಅನುಭಾವಕ್ಕೆ ನಾಚುವೆನು ಕಾಣಾ ಸಂಗನ ಬಸವಣ್ಣಾ ॥

nelada muṃdaṇa bāgilu mūru moneya kaṃbhada śailadalli oṃdu dēgula. alli oḷagaṇa huttina kallinalli silukittu. nāda mūruti liṃgavippudu. oṃdu mātanāḍuvaraḷuki nuḍivudu guhēśvara meccalu bahu mātina māleya anubhāvakke nācuvenu kāṇā saṃgana basavaṇṇā ॥

Report an error

ಇದಕ್ಕೆ ಬಸವರಾಜದೇವರ ಪ್ರತ್ಯುತ್ತರ. ॥

idakke basavarājadēvara pratyuttara. ॥

Report an error

ಅರವಿಂದಲರಿದೆನೆಂದರೆ ಅರವಿಂಗಸಾಧ್ಯ. ಅರಿಯದೆ ಅರಿದ ಪರಿ ಎಂತಯ್ಯ? ಭಾವಿಸುವೆನೆಂದರೆ ಭಾವ ನಿರ್ಭಾವವೆಂದುದಾಗಿ ಮತ್ತೆ ಭಾವಿಯಲ್ಲದೆ ಕಾರಣ ಬಾರದಯ್ಯಾ. ವಾಙ್ಮನಕ್ಕಗೋಚರನೆಂದಡೆ ನುಡಿಯಲಿಲ್ಲದೆ ನಡೆ ಸಾಧ್ಯವಹ ಪರಿ ಎಂತು ಹೇಳಾ ಅಯ್ಯಾ? ಹಲವು ಮಾತಿನ ನಿಲವು ಒಂದೆಂಬ ನುಡಿ ಗಡಣದ ನಿಜವ ಬಲ್ಲವರಾರು ಹೇಳಯ್ಯ? ನಿಮ್ಮ ಮಾತೆಂಬ ಪರತತ್ವ ಒಂದಲ್ಲದೆ ಎರಡುಂಟೆ? ಕೂಡಲ ಸಂಗಮದೇವ ಕಡೆ ಮುಟ್ಟು ನೋಡುವಡೆ ನುಡಿಗೆಡೆಯಿಲ್ಲ. ಕೃಪೆಯಿಂದ ಕರುಣವ ಮಾಡಯ್ಯ ಪ್ರಭುವೆ ॥

araviṃdalarideneṃdare araviṃgasādhya. ariyade arida pari eṃtayya? bhāvisuveneṃdare bhāva nirbhāvaveṃdudāgi matte bhāviyallade kāraṇa bāradayyā. vāṅmanakkagōcaraneṃdaḍe nuḍiyalillade naḍe sādhyavaha pari eṃtu hēḷā ayyā? halavu mātina nilavu oṃdeṃba nuḍi gaḍaṇada nijava ballavarāru hēḷayya? nimma māteṃba paratatva oṃdallade eraḍuṃṭe? kūḍala saṃgamadēva kaḍe muṭṭu nōḍuvaḍe nuḍigeḍeyilla. kr̥peyiṃda karuṇava māḍayya prabhuve ॥

Report an error

ಇದಕ್ಕೆ ಪ್ರಭುದೇವರ ಪ್ರತ್ಯುತ್ತರ ॥

idakke prabhudēvara pratyuttara ॥

Report an error

ಪ್ರಸಾದಲಿಂಗವುಳ್ಳನ್ನಕ್ಕರ ಪ್ರಾಣಲಿಂಗವೆಂಬ ವಾರ್ತೆಭಂಗನೋಡಾ. ಸಂಗನ ಬಸವಣ್ಣ ಬೀದಿಯಲ್ಲಿ ಕೊಡನ ನೊಡದು ಬಯಲ ನುಡುಗಿದರೆ ಉಂಟೆ ಹೇಳಾ? ಗುಹೇಶ್ವರ ಲಿಂಗವ ಬೇರು ಮಾಡಿ ಅರಸಲುಂಟೆ ಬಸವಣ್ಣಾ ॥

prasādaliṃgavuḷḷannakkara prāṇaliṃgaveṃba vārtebhaṃganōḍā. saṃgana basavaṇṇa bīdiyalli koḍana noḍadu bayala nuḍugidare uṃṭe hēḷā? guhēśvara liṃgava bēru māḍi arasaluṃṭe basavaṇṇā ॥

Report an error

ಇದಕ್ಕೆ ಬಸವರಾಜದೇವರ ಪ್ರತ್ಯುತ್ತರ.॥

idakke basavarājadēvara pratyuttara.॥

Report an error

ಆದಿಯಲ್ಲಿ ಸಾಧ್ಯವೆಂಬೆನೆ? ಅಲ್ಲಿಂದತ್ತತ್ತ ಸಾಧ್ಯಾಸಾಧ್ಯ ಸೂತಕ ಶಬ್ದಕ್ಕತೀತ. ಆ ಲಿಂಗವೆ ಆಲಿಂಗನವಾಗಿ ಅವಿರಳ ಸಂಪನ್ನನಾದಲ್ಲಿ ಭೇದ ಭಾವವುಂಟೆಂಬೆನೆ? ಅದೇ ಭವಕ್ಕೆ ಬೀಜ. ಎನ್ನ ಪ್ರಾಣಲಿಂಗ ನೀವೆಂದಿಪ್ಪೆನಯ್ಯ ಕೂಡಲ ಸಂಗಮದೇವಾ.॥

ādiyalli sādhyaveṃbene? alliṃdattatta sādhyāsādhya sūtaka śabdakkatīta. ā liṃgave āliṃganavāgi aviraḷa saṃpannanādalli bhēda bhāvavuṃṭeṃbene? adē bhavakke bīja. enna prāṇaliṃga nīveṃdippenayya kūḍala saṃgamadēvā.॥

Report an error

ಇದಕ್ಕೆ ಪ್ರಭುದೇವರ ಪ್ರತ್ಯುತ್ತರ॥

idakke prabhudēvara pratyuttara॥

Report an error

ಬಸವಣ್ಣನೆ ಪ್ರಾಣಲಿಂಗವೆಂದು ಭಾವಿಸಿ ದೃಷ್ಟಿ ನಟ್ಟು ಸೈವೆರಗಾದುದ ಕಂಡೆ. ಕಲ್ಪಿಸಿ ಮನ ನಟ್ಟುದು ನಿಬ್ಬೆರಗಾಯಿತ್ತಯ್ಯ. ಗುಹೇಶ್ವರ ನಿಮ್ಮಲ್ಲಿ ಸರ್ವ ನಿರ್ವಾಣಿ ಸಂಗನ ಬಸವಣ್ಣನೆ ಎನ್ನ ಪ್ರಾಣಲಿಂಗವೆಂದರಿದು ನೀನೆನ್ನನೊಳಕೊಂಡ ಗುರುವೆಂದು ಕಂಡೆನಯ್ಯ. ನಿಮ್ಮ ಧರ್ಮ ನಿಮ್ಮ ಧರ್ಮ. ॥

basavaṇṇane prāṇaliṃgaveṃdu bhāvisi dr̥ṣṭi naṭṭu saiveragāduda kaṃḍe. kalpisi mana naṭṭudu nibberagāyittayya. guhēśvara nimmalli sarva nirvāṇi saṃgana basavaṇṇane enna prāṇaliṃgaveṃdaridu nīnennanoḷakoṃḍa guruveṃdu kaṃḍenayya. nimma dharma nimma dharma. ॥

Report an error

ಮತ್ತಂ॥ ಎತ್ತೆತ್ತ ನೊಡಿದರೆ ಬಸವನೆಂಬ ಬಳ್ಳಿ. ಆ ಬಳ್ಳಿಯ ಹಿಡಿದೆತ್ತಿದ್ದರೆ ಲಿಂಗವೆಂಬ ಗೊಂಚಲು. ಆ ಲಿಂಗದ ಗೊಂಚಲ ಹಿಡಿದೆತ್ತಿದರೆ ಭಕ್ತಿ ರಸವಾಯಿತ್ತಯ್ಯ. ಇದಾರಯ್ಯ? ಅಮಳೋಕ್ಯವ ಮಾಡಬಲ್ಲವರು ಇದಾರಯ್ಯ? ಹೊರಗೆ ಪ್ರಜ್ವಲಿಸಿ ತೋರಬಲ್ಲವರು ಬಸವ ಗುರು ಎನ್ನ ಕರಸ್ಥಲದ ಲಿಂಗದ ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ ನಿಲವ ನಿನ್ನಿಂದಲರಿದೆ. ಈ ಉಳಿದ ಲೋಕಾದಿಲೋಕಂಗಳೆಲ್ಲ ಎನ್ನ ಮುಖದಲ್ಲಿ ಕಿಂಚಿತ್ತು. ॥

mattaṃ॥ ettetta noḍidare basavaneṃba baḷḷi. ā baḷḷiya hiḍidettiddare liṃgaveṃba goṃcalu. ā liṃgada goṃcala hiḍidettidare bhakti rasavāyittayya. idārayya? amaḷōkyava māḍaballavaru idārayya? horage prajvalisi tōraballavaru basava guru enna karasthalada liṃgada ādiyanaruhi tōrida kāraṇa guhēśvara liṃgada nilava ninniṃdalaride. ī uḷida lōkādilōkaṃgaḷella enna mukhadalli kiṃcittu. ॥

Report an error

ಮತ್ತಂ॥ ‘ಬ’ ಎಂಬಲ್ಲಿ ಭವ ಹರಿಯಿತ್ತಯ್ಯ, ‘ಸ’ ಎಂಬಲ್ಲಿ ಸರ್ವಜ್ಞಾನಿಯಾದೆನು. ‘ವ’ ಎಂಬಲ್ಲಿ ವಚಿಸುವರೆ ಚೈತನ್ಯಾತ್ಮಕನಾದೆನು. ಇಂತೀ ಬಸವಕ್ಷರತ್ರಯ ಎನ್ನ ಸರ್ವಾಂಗದಲ್ಲಿ ತೊಳಗಿ ಬೆಳಗುವ ಭೇದವನರಿದು ಆನು ಬಸವ ಬಸವ ಎನುತಿರ್ದೆನು ಕಾಣಾ ಗುಹೇಶ್ವರಾ. ॥

mattaṃ॥ ‘ba’ eṃballi bhava hariyittayya, ‘sa’ eṃballi sarvajñāniyādenu. ‘va’ eṃballi vacisuvare caitanyātmakanādenu. iṃtī basavakṣaratraya enna sarvāṃgadalli toḷagi beḷaguva bhēdavanaridu ānu basava basava enutirdenu kāṇā guhēśvarā. ॥

Report an error

ಮತ್ತಂ, ಅಳಿಯ ಬಳಿಯ ಸುಳಿವನಲ್ಲ ಪ್ರಳಯವಿಲ್ಲದ ವಿಜಯನು. ಕಳಾಕುಳದ ಆತ್ಮನ ಅಂಗಸಂಗಿಯಲ್ಲ. ಸುಳುಹಿನೊಳಗಣ ಸೂಕ್ಷ್ಮವ ತಿಳಿದು ನೋಡುವರೆ ಅಣಿಮಾದಿ ಗುಣ ವಿರಹಿತನ ಅಕಲ್ಪಿತ ಮಹಿಮನನೇನೆಂಬೆನು? ನೆಲದ ಕಳವಳದ ಬಳಿಯ ಭಾವ ರೂಪನಲ್ಲ. ಬೆಳಗಿನೊಳಗಣ ಬೆಳಗು ಗುಹೇಶ್ವನೆಂಬ ನಿಲವು ಸಂಗನ ಬಸವಣ್ಣನ ಕರಸ್ಥಲದೊಳಗೆ ತೊಳಗಿ ಬೆಳಗುತ್ತಿದ್ದಿತ್ತು ॥

mattaṃ, aḷiya baḷiya suḷivanalla praḷayavillada vijayanu. kaḷākuḷada ātmana aṃgasaṃgiyalla. suḷuhinoḷagaṇa sūkṣmava tiḷidu nōḍuvare aṇimādi guṇa virahitana akalpita mahimananēneṃbenu? nelada kaḷavaḷada baḷiya bhāva rūpanalla. beḷaginoḷagaṇa beḷagu guhēśvaneṃba nilavu saṃgana basavaṇṇana karasthaladoḷage toḷagi beḷaguttiddittu ॥

Report an error

ಮತ್ತಂ, ಅಂಗದ ಕೈಯ್ಯಲ್ಲಿ ಲಿಂಗ. ಮನದ ಕೈಯ್ಯಲ್ಲಿ ನಿಸ್ಸಂಸಾರ ಎಂತಯ್ಯ. ಪ್ರಾಣ ಲಿಂಗ ಲಿಂಗಪ್ರಾಣವೆಂಬುದು ಭಿನ್ನವಿಟ್ಟು ನುಡಿವೆನು. ಹೊರಗೆ ಕುರುಹಾಗಿ ತೋರುತ್ತಿದೆ. ಇದು ಕೃತಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ. ಇದು ತ್ರೇತಾಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ. ಇದು ದ್ವಾಪರದಲ್ಲಿ ಮೂರ್ತಿಯಾದ ಕರಸ್ಥಲವಲ್ಲ. ಇದು ಕಲಿಯುಗದಲ್ಲಿ ಮೂರ್ತಿಯಾದ ಕರಸ್ಥಲವಲ್ಲ. ಕೆಳಗೇಳು ಲೋಕ ಮೇಲೇಳು ಲೋಕ ಹುಟ್ಟದಲಿಂದತ್ತ ಮುನ್ನ ಮುನ್ನಲಾದ ಕರಸ್ಥಲವು. ಸಂಗನ ಬಸವಣ್ಣನ ಕರ ಸ್ಥಲದೊಳಗೆ ಗುಹೇಶ್ವರನೆಂಬ ಲಿಂಗದೊಳಗೆ ಬೆಳಗುತಿರ್ದುದ ಕಂಡು ನಮೋ ನಮೋ ಎನುತಿರ್ದೆನು ॥

mattaṃ, aṃgada kaiyyalli liṃga. manada kaiyyalli nissaṃsāra eṃtayya. prāṇa liṃga liṃgaprāṇaveṃbudu bhinnaviṭṭu nuḍivenu. horage kuruhāgi tōruttide. idu kr̥tayugadalli mūrtiyāda karasthalavalla. idu trētāyugadalli mūrtiyāda karasthalavalla. idu dvāparadalli mūrtiyāda karasthalavalla. idu kaliyugadalli mūrtiyāda karasthalavalla. keḷagēḷu lōka mēlēḷu lōka huṭṭadaliṃdatta munna munnalāda karasthalavu. saṃgana basavaṇṇana kara sthaladoḷage guhēśvaraneṃba liṃgadoḷage beḷagutirduda kaṃḍu namō namō enutirdenu ॥

Report an error

ಮತ್ತಂ, ಜಗತ್ಸ್ವಯಂಭುವೆಂಬ ಗಣೇಶ್ವರನ ಕರಸ್ಥಲದಲ್ಲಿ ಹಿಡಿದಾಡುತ್ತಿದ್ದಾರೆ. ಆದಿ ಲಿಂಗವೆಂದು ಬಗೆಯಲದು ಲೋಕವೆಲ್ಲ ಗುಹೇಶ್ವರ ನಿಮ್ಮ ಶರಣ ಬಸವಣ್ಣನಚ್ಚ ಲಿಂಗವ ಹಿಡಿದ ಕಾರಣ ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ ॥

mattaṃ, jagatsvayaṃbhuveṃba gaṇēśvarana karasthaladalli hiḍidāḍuttiddāre. ādi liṃgaveṃdu bageyaladu lōkavella guhēśvara nimma śaraṇa basavaṇṇanacca liṃgava hiḍida kāraṇa bariya liṃgada mastakavāyittu trijagadoḷage ॥

Report an error

ಮತ್ತಂ, ಎನ್ನ ಕರಸ್ಥಲದೊಳಗೊಂದು ಮಹಾ ಬೆಳಗ ಕಂಡೆನಯ್ಯ. ಮಹಾ ಮಂಗಳ ನಿಳಯವಾಗಿ ತೋರುತ್ತಿದೆ. ಗುಹೇಶ್ವರ ಲಿಂಗದ ಕಂಗಳ ಕಾಂತಿಗಳು ಸಂಗನ ಬಸವಣ್ಣನ ನಿವಾಳಿಸುತ್ತಿದ್ದವಯ್ಯ॥

mattaṃ, enna karasthaladoḷagoṃdu mahā beḷaga kaṃḍenayya. mahā maṃgaḷa niḷayavāgi tōruttide. guhēśvara liṃgada kaṃgaḷa kāṃtigaḷu saṃgana basavaṇṇana nivāḷisuttiddavayya॥

Report an error

ಮತ್ತಂ, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲ ಅಡಗಿತ್ತಲ್ಲಿ. ಸಂಗನ ಬಸವಣ್ಣನ ಕರಸ್ಥಲದೊಳಗೆ ಇನ್ನಾರಿಗಹುದೀ ಭಕ್ತಿಸ್ಥಲ? ಇನ್ನಾರಿಗೆ ಸಾರಿಹುದೇ ಭಕ್ತಿಸ್ಥಲ? ಗುಹೇಶ್ವರ ಸಂಗನ ಬಸವಣ್ಣನ ಮರೆಹೊಕ್ಕು ಬದುಕಿದೆನು ॥

mattaṃ, gurusthala liṃgasthala jaṃgamasthala prasādasthala aḍagittalli. saṃgana basavaṇṇana karasthaladoḷage innārigahudī bhaktisthala? innārige sārihudē bhaktisthala? guhēśvara saṃgana basavaṇṇana marehokku badukidenu ॥

Report an error

ಪ್ರಭುದೇವರು ಬಸವರಾಜದೇವರ ಐಕ್ಯಸ್ಥಲಮಂ ಕೊಂಡಾಡಿದ ಪ್ರಸ್ಥಾನದ ವಚನ॥

prabhudēvaru basavarājadēvara aikyasthalamaṃ koṃḍāḍida prasthānada vacana॥

Report an error

ಅವಸ್ಥೆ ಅವಸ್ಥೆಯ ಕೂಡಿ ಬಿಂದು ನಾದವ ಕೂಡಿ ಕಳೆ ಕಳೆಗಳು ಒಂದಾದ ಪರಿಯ ನೋಡಾ. ಅದು ಲಿಂಗದ ಅನುಮಿಷ ಆನೆಂಬ ಗುರುಪಾದವಾದೆನಯ್ಯ. ಹಿಂದು ಮುಂದು ಒಂದು ಮಾಡಿದ ಮೂರ್ತಿಯಾಗಿ ಲಿಂಗ ಜಂಗಮವಾದ ಪರಿಯ ನೋಡಾ. ಗುಹೇಶ್ವರನ ಅಮಳೋಕ್ಯವಾದ ಸಂಗನ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ॥

avasthe avastheya kūḍi biṃdu nādava kūḍi kaḷe kaḷegaḷu oṃdāda pariya nōḍā. adu liṃgada anumiṣa āneṃba gurupādavādenayya. hiṃdu muṃdu oṃdu māḍida mūrtiyāgi liṃga jaṃgamavāda pariya nōḍā. guhēśvarana amaḷōkyavāda saṃgana basavaṇṇana śrīpādakke namō namō eṃbenu ॥

Report an error

ಮತ್ತಂ, ಕೈಲಾಸಕ್ಕೆ ಹೋದವರೆಲ್ಲ ಕೈಸೆರೆಯಾದರು. ಲಿಂಗದಲ್ಲಿ ಲೀಯವಾದವರೆಲ್ಲರು ಬಂಧನಕ್ಕೊಳಗಾದರು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದವರೆಲ್ಲರು ಎಡೆಯಾಡುತ್ತಿದ್ದರು. ಗುಹೇಶ್ವರ ನಿಮ್ಮ ಶರಣ ಸಂಗನ ಬಸವಣ್ಣ ಜಂಗಮ ಪ್ರಸಾದಿಯಾದನಾಗಿ ಸ್ವಯಂಭು ಲಿಂಗವಾದಾ ॥

mattaṃ, kailāsakke hōdavarella kaisereyādaru. liṃgadalli līyavādavarellaru baṃdhanakkoḷagādaru. sālōkya sāmīpya sārūpya sāyujyadavarellaru eḍeyāḍuttiddaru. guhēśvara nimma śaraṇa saṃgana basavaṇṇa jaṃgama prasādiyādanāgi svayaṃbhu liṃgavādā ॥

Report an error

ಮತ್ತಂ॥ ಪ್ರಭುದೇವರು ಬಸವರಾಜ ದೇವರ ನಿರ್ವಯಲ ಜ್ಞಾನ ಶೂನ್ಯಮಂ ನಿರೂಪಿಸಿದ ವಚನ॥

mattaṃ॥ prabhudēvaru basavarāja dēvara nirvayala jñāna śūnyamaṃ nirūpisida vacana॥

Report an error
p35॥pada॥ rāga nāṭa|

ತಾನಿದಿರೆಂಬೆರಡರಿಯದೆ ಧ್ಯಾನ ನಷ್ಟವಾಗಿ, ಜ್ಞಾತೃ, ಜ್ಞಾನ, ಜ್ಞೇಯವೆಂಬ ತ್ರಿವಿಧವ ನರಿತ ಮಹಿಮಾ.

tānidireṃberaḍariyade dhyāna naṣṭavāgi, jñātr̥, jñāna, jñēyaveṃba trividhava narita mahimā.

Editor's note: Traditional rubric: ||ಪದ||

Report an error

ಹೊರಗೊಳಗೆಂಬೆರಡರ ಬಗೆಯನ್ನರಸದೆ ಎರಡರ ತೆರನೆಂಬ ನುಡಿಯಂ ಮುನ್ನವೆ ತಾನರಿಯದೆ ಅರಿವಿನ ಮೂಲವ ಹರಿದು ಮನವೆ ನಷ್ಟವಾದ ಅರಿವು ಅರಿವಿನ ಮರವೆಯ ಕುರುಹಳಿದ ನಿಶ್ಚಿಂತಾ. ॥

horagoḷageṃberaḍara bageyannarasade eraḍara teraneṃba nuḍiyaṃ munnave tānariyade arivina mūlava haridu manave naṣṭavāda arivu arivina maraveya kuruhaḷida niściṃtā. ॥

Report an error

ಉಲುಹಡಗಿದ ಸಮುದ್ರದ ನಿಲುವಿನ ಘಾತದಂತೆ ತಿಳಿವಿನ ಮಹ ಘನ ವಿವೇಕ ಹರಿಹಂಚಾಗಿ ಉಳಿದೆನೆಂಬಾ ಉಳುಮೆಯ ಮೂಲವ ಮರೆದು ಕಳೆಯ ಬೆಳೆಗಳಿದು ನಿಜದೊಳು ನಿಂದ ಮಹಿಮಾ. ॥

uluhaḍagida samudrada niluvina ghātadaṃte tiḷivina maha ghana vivēka harihaṃcāgi uḷideneṃbā uḷumeya mūlava maredu kaḷeya beḷegaḷidu nijadoḷu niṃda mahimā. ॥

Report an error

ಉರಿ ಕರ್ಪುರದ ಒಡಗೂಡಿ ಎರಡು ಅಳಿದ ಬಳಿಕ ಮರಳಿ ನೋಡಿಹೆನೆಂದರೆ ಭಸ್ಮವಿಲ್ಲ ನೋಡಾ. ಅರಿವ ನರಿದಿಹೆನೆಂಬ ಅರಿವಿನ ಮೂಲವ ಧರಿಸಿ ಧರಿಸಿದ ಜ್ಞಾನ ಭಸ್ಮವೆಂಬುದಿಲ್ಲದ ಮಹಿಮಾ. ॥

uri karpurada oḍagūḍi eraḍu aḷida baḷika maraḷi nōḍiheneṃdare bhasmavilla nōḍā. ariva naridiheneṃba arivina mūlava dharisi dharisida jñāna bhasmaveṃbudillada mahimā. ॥

Report an error

ನಿಜದಲ್ಲಿ ನಿರ್ಣಯವಡಗಿದ ಗತಿ ಮತಿ ನಷ್ಟವಾಗಿ ಕಳೆಯೊಳಗಣ ಬೆಳಗು ತಾನೆಂದು ತೋರುತಲಿರ್ಪ ತೊಳಗಿ ಬೆಳಗುವ ಚೈತನ್ಯ ತನ್ನಲ್ಲಿ ತಾನೆ ನಿಃಕಳೆಯಾಗಿ ನಿಜದೊಳು ನಿಃಶೂನ್ಯವಾದ ಮಹಿಮಾ. ॥

nijadalli nirṇayavaḍagida gati mati naṣṭavāgi kaḷeyoḷagaṇa beḷagu tāneṃdu tōrutalirpa toḷagi beḷaguva caitanya tannalli tāne niḥkaḷeyāgi nijadoḷu niḥśūnyavāda mahimā. ॥

Report an error

ತನ್ನೊಳು ತಾನೆಯಾಗಿ ಎನ್ನಲ್ಲಿ ನಾನರಿದೆನೆಂಬ ಅರುಹಿಗೆ ತೆರಹುಗೊಡದೆ ಬಿಂದು ಬೀಸರವಾಗಿ ಹಮ್ಮು ಶೂನ್ಯ ನಷ್ಟವಾಗಿ ನಿರ್ಮಳ ನಿಜ ಪದವಾದ ಉಪಮಾತೀತ ಮಹಿಮಾ. ॥

tannoḷu tāneyāgi ennalli nānarideneṃba aruhige terahugoḍade biṃdu bīsaravāgi hammu śūnya naṣṭavāgi nirmaḷa nija padavāda upamātīta mahimā. ॥

Report an error

ಜ್ಞಾನಜ್ಯೋತಿಯ ಪ್ರಭೆ ತಾನಾಗಿ ನಿಂದಿರ್ದು ತಾನಾಗಿದ್ದೆನೆಂಬ ಜ್ಞಾನ ಶೂನ್ಯವಾಗಿ ತಾನೆ ತನ್ನೊಳು ಮೈಮರೆದೊರಗಿರ್ದ ನಿರಾಳ ಜ್ಞಾನಾತೀತ ನಿರ್ಮಲ ನಿಶ್ಚಲ ನಿರ್ಭೇದ್ಯ. ॥

jñānajyōtiya prabhe tānāgi niṃdirdu tānāgiddeneṃba jñāna śūnyavāgi tāne tannoḷu maimaredoragirda nirāḷa jñānātīta nirmala niścala nirbhēdya. ॥

Report an error

ಶಬ್ದ ನಿಃಶಬ್ದವಾಗಿ ನಿಃಶಬ್ದವನಹತವಾಗಿ, ಶಬ್ದ ನಿಃಶಬ್ದವೆಂಬ ಬುದ್ಧಿ ನಿರ್ವಯಲಾಗಿ, ಇದ್ದುದ ಹೋದುದನರಿಯದೆ ಮೇರೆಗೆಟ್ಟ ನಿಃಶಬ್ದ ಗಂಭೀರ ಗುಹೇಶ್ವರ ನಿಮ್ಮ ಬಸವ ॥

śabda niḥśabdavāgi niḥśabdavanahatavāgi, śabda niḥśabdaveṃba buddhi nirvayalāgi, idduda hōdudanariyade mēregeṭṭa niḥśabda gaṃbhīra guhēśvara nimma basava ॥

Report an error

ಇಂತು ಪ್ರಭುದೇವರು ಬಸವರಾಜದೇವರಿಗೆ ಲಿಂಗಾಂಗ ಸಮರಸದ ನಿರ್ವಯಲ ನಿಜ ಸಮಾಧಿಯ ನಿರ್ಣಯವನರುಹಿ ತೋರಲು, ಆ ಬಸವರಾಜ ದೇವರು ಕೃತ ನಿಶ್ಚಯವನೈದಿದ ವಚನ॥

iṃtu prabhudēvaru basavarājadēvarige liṃgāṃga samarasada nirvayala nija samādhiya nirṇayavanaruhi tōralu, ā basavarāja dēvaru kr̥ta niścayavanaidida vacana॥

Report an error

ಆರತವಡಗಿತ್ತೆನ್ನ. ಬಯಕೆ ಸಮನಿಸಿತ್ತೆನ್ನ. ಸಂಕಲ್ಪ ಸಮನಿಸಿತ್ತೆನ್ನ. ಸ್ವಯವು ದೊರಕೊಂಡಿತ್ತೆನ್ನ. ನಿಮ್ಮ ನೋಡಿ ಎನ್ನ ಕಂಗಳು ಮಂಗಳಮಯದ ಸುಖಸಂಗವಾಯಿತ್ತಯ್ಯ? ಒಳಹೊರಗೆಂಬುದ ತಿಳಿದು ಪ್ರಭುವಿನ ಕರುಣದಿಂದ ಕೂಡಲಸಂಗಮದೇವರಲ್ಲಿ ತೆರಹಿಲ್ಲದಿರ್ದೆನು.॥

āratavaḍagittenna. bayake samanisittenna. saṃkalpa samanisittenna. svayavu dorakoṃḍittenna. nimma nōḍi enna kaṃgaḷu maṃgaḷamayada sukhasaṃgavāyittayya? oḷahorageṃbuda tiḷidu prabhuvina karuṇadiṃda kūḍalasaṃgamadēvaralli terahilladirdenu.॥

Report an error

ಆ ಪ್ರಸ್ಥಾವದೊಳು ಚನ್ನ ಬಸವ ರಾಜ ದೇವರು ಬಸವ ರಾಜ ದೇವರ ನಿರ್ವಯಲ ಪ್ರಸಾದದ ಕೃತನಿಶ್ಚಯವ ಕಂಡು ಸ್ತೋತ್ರಮಂ ಮಾಡುವ ವಚನ॥ಪದಂಗಳು॥

ā prasthāvadoḷu canna basava rāja dēvaru basava rāja dēvara nirvayala prasādada kr̥taniścayava kaṃḍu stōtramaṃ māḍuva vacana॥padaṃgaḷu॥

Report an error
p46rāga bhūpāḷi.

ಮಹಾ ಘನ ಲಿಂಗದೊಳಗೆ ಮಹಾಘನ ತದ್ರೂಪವಾಗಿ ಸಹಜ ಪರಿಣಾಮ ಪ್ರಸಾದವನಾರೋಗಿಸಿ ನಿರ್ವಯಲಾದ ಬಸವಣ್ಣ ಗುರುವೆ. (ಪದ)

mahā ghana liṃgadoḷage mahāghana tadrūpavāgi sahaja pariṇāma prasādavanārōgisi nirvayalāda basavaṇṇa guruve. (pada)

Report an error

ಇತರೇತರ ಭಾವವ ನರಿಯದೆ, ಸತತ ವಿಧಾನವೆಂದರಿಯದೆ ಕೃತನಿಶ್ಚಯವ ಪರಿಣಾಮ ಪ್ರಸಾದವನಾರೋಗಿಸಿ ನಿರ್ವಯಲಾದ. ॥

itarētara bhāvava nariyade, satata vidhānaveṃdariyade kr̥taniścayava pariṇāma prasādavanārōgisi nirvayalāda. ॥

Report an error

ನಿಂದ ಸುಖವ ನಿಂದೆ ನಿಂದೆಂಬ ಸಂಶಯ ಭಾವವ ಮರೆದು ನಿಂದ ನಿಜ ಪರಿಣಾಮ ಪ್ರಸಾದದೊಳೊಂದಿ ನಜಿ ಗ್ರಾಹಕನಾದ ಸುಖಿಯಾ ॥

niṃda sukhava niṃde niṃdeṃba saṃśaya bhāvava maredu niṃda nija pariṇāma prasādadoḷoṃdi naji grāhakanāda sukhiyā ॥

Report an error

ಅರ್ಪಿತವಿಲ್ಲದ ಮುನ್ನವೆ ಅರ್ಪಿತ ನಿಜ ರೂಪಾಗಿ ಅರ್ಸಿತ ಪರಿಣಾಮದ ಪ್ರಸಾದದ ತವನಿಧಿಯೆ॥

arpitavillada munnave arpita nija rūpāgi arsita pariṇāmada prasādada tavanidhiye॥

Report an error

ಮುಟ್ಟದ ಮುನ್ನವೆ ಪ್ರಸಾದ ಗ್ರಾಹಕನಾಗಿ ಮುಟ್ಟಿದೆನೆಂದೆಂಬುದನರಿಯದೆ ಬಟ್ಟ ಬಯಲ ಪರಮಾನಂದದಿ ದೃಷ್ಟಿ ಮುಟ್ಟದ ನಿಜವೆ ॥

muṭṭada munnave prasāda grāhakanāgi muṭṭideneṃdeṃbudanariyade baṭṭa bayala paramānaṃdadi dr̥ṣṭi muṭṭada nijave ॥

Report an error

ನಿರ್ಣಯ ನಿರ್ಲಯವಾದ ನಿರಂಜನ ಸನ್ನಿಹಿತ ಕೂಡಲ ಚನ್ನ ಸಂಗನಲ್ಲಿ ನಿತ್ಯ ತೃಪ್ತನಾದ ಪರಿಣಾಮಿ ಬಸವಣ್ಣ ತಂದೆ ॥

nirṇaya nirlayavāda niraṃjana sannihita kūḍala canna saṃganalli nitya tr̥ptanāda pariṇāmi basavaṇṇa taṃde ॥

Report an error

ಮತ್ತಂ, ಅಪ್ಪುವನಪ್ಪಿದ ಶರಣ ವಾರಿ ಕಲ್ಲಿನಂತೆ ವಾಯುವನಪ್ಪಿದ ಪರಿಮಳದಂತೆ ಲಿಂಗವನಪ್ಪಿದ ಶರಣನ ದೇಹಿ ಎನಬಹುದೆ? ಅನಲನಪ್ಪಿದ ಕರ್ಪುರದಂತೆ ಕೂಡಲ ಚನ್ನಸಂಗೈಯ್ಯ ನಿಮ್ಮ ಶರಣ ಬಸವಣ್ಣನ ನಿಲವು॥

mattaṃ, appuvanappida śaraṇa vāri kallinaṃte vāyuvanappida parimaḷadaṃte liṃgavanappida śaraṇana dēhi enabahude? analanappida karpuradaṃte kūḍala cannasaṃgaiyya nimma śaraṇa basavaṇṇana nilavu॥

Report an error

ಮತ್ತಂ, ತಾನೆಲ್ಲ ಜಗಜಗವೆಲ್ಲ. ತಾನೆಂಬ ಅರಿವರತು ಮನ ವೇದ್ಯ ರೂಪಾಗಿ ಅನ್ಯವಿಲ್ಲದ ಅನ್ಯವನರಿಯೆ. ಎಲ್ಲಿಯದು ನಿರಂಜನನ ನಿಜ ಚಿದ್ರೂಪಾಗಿ ಅರಿವು ತಾನೆಂಬ ಮಮತೆಗೆ ತೆರಹಿಲ್ಲೆಂದು ಆನೆನ್ನ ತಾನೆನ್ನ ದುಳಿದುಳಮೆಯನುಪಮಿಸಬಹುದೆ? ಅನುಪಮ ಸುಖ ಸಾರಾಯ ಕೂಡಲ ಸಂಗೈಯ್ಯ ನಿಮ್ಮ ಶರಣ ಬಸವಣ್ಣನು ॥

mattaṃ, tānella jagajagavella. tāneṃba arivaratu mana vēdya rūpāgi anyavillada anyavanariye. elliyadu niraṃjanana nija cidrūpāgi arivu tāneṃba mamatege terahilleṃdu ānenna tānenna duḷiduḷameyanupamisabahude? anupama sukha sārāya kūḍala saṃgaiyya nimma śaraṇa basavaṇṇanu ॥

Report an error

ಮತ್ತಂ, ವೇದ ವೇದಾರ್ಥ ಸಾರಾಯದಿಂದೆ ಹದಿನಾರು ಶಾಸ್ತ್ರ ಪುರಾಣಂಗಳಾದವು. ಆ ಪುರಾಣಂಗಳ ಸಾರಾಯವನರಿವುದರಿಂದ ಜ್ಯೋತಿ ಜ್ಞಾನವಾಯಿತ್ತು. ಆ ಜ್ಯೋತಿಜ್ಞಾನದಿಂದೆ ಮತಿಜ್ಞಾನ ಶೃತಜ್ಞಾನ ಮನ ಪರಿಪೂರ್ಣ ಜ್ಞಾನ ಅವಧಿಜ್ಞಾನ ಕೇವಲಜ್ಞಾನ ಇಂತೀ ಪಂಚಜ್ಞಾನವೆ ಪಂಚ ಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ. ಶೃತಜ್ಞಾನವುಳ್ಳಾತನೆ ಮಹೇಶ್ವರ. ಮನ ಪರಿಪೂರ್ಣಜ್ಞಾನವುಳ್ಳಾತನೆ ಪ್ರಸಾದಿ. ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ. ಕೇವಲ ಜ್ಞಾನವುಳ್ಳಾತನೆ ಶರಣ. ಶರಣ ಸ್ಥಲವೆಂಬುದು ಭವಂ ನಾಸ್ತಿ. ಈ ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ಞಾನವೆ ಪಂಚಸ್ಥಲದಲ್ಲಿ ಏಕಾಕಾರದ ಐಕ್ಯನು. ಇಂತೆಂದುದಾಗಿ ಕೂಡಲ ಚನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು.॥

mattaṃ, vēda vēdārtha sārāyadiṃde hadināru śāstra purāṇaṃgaḷādavu. ā purāṇaṃgaḷa sārāyavanarivudariṃda jyōti jñānavāyittu. ā jyōtijñānadiṃde matijñāna śr̥tajñāna mana paripūrṇa jñāna avadhijñāna kēvalajñāna iṃtī paṃcajñānave paṃca sthalavāyittu. matijñānavuḷḷātane bhakta. śr̥tajñānavuḷḷātane mahēśvara. mana paripūrṇajñānavuḷḷātane prasādi. avadhijñānavuḷḷātane prāṇaliṃgi. kēvala jñānavuḷḷātane śaraṇa. śaraṇa sthalaveṃbudu bhavaṃ nāsti. ī paṃcajñānakke mūlavāda jyōtijñānave paṃcasthaladalli ēkākārada aikyanu. iṃteṃdudāgi kūḍala cannasaṃgayyanalli paṃcasthalada neleya balla aikya basavaṇṇaṃge namō namō eṃbenu.॥

Report an error

ಆ ಪ್ರಸ್ಥಾವದೊಳು ಬಸವರಾಜದೇವರ ಪರಾಮರಿಕೆಯನೇನೆಂಬೆ ನೇನೆಂಬೆ? ಒಂದೆರಡಾದುದ ಎಂತೆಂಬೆ? ಎಂತೆಂಬೆ ಎರಡೊಂದಾದುದ? ಅವಿರಳ ಘನ ಲಿಂಗೈಕ್ಯ ಮಹಾದಾನಿ ಕೂಡಲ ಸಂಗಮದೇವಯ್ಯ ತಾನೆಬಲ್ಲ. ॥

ā prasthāvadoḷu basavarājadēvara parāmarikeyanēneṃbe nēneṃbe? oṃderaḍāduda eṃteṃbe? eṃteṃbe eraḍoṃdāduda? aviraḷa ghana liṃgaikya mahādāni kūḍala saṃgamadēvayya tāneballa. ॥

Report an error

ಮತ್ತಂ, ಘನ ಗಂಭೀರ ಮಹಾ ಘನದೊಳಗೆ ಘನಕ್ಕೆ ಘನವಾಗಿದ್ದೆನಯ್ಯ. ಕೂಡಲ ಸಂಗಮದೇವಯ್ಯನೆಂಬ ಮಹಾ ಬೆಳಗಿನೊಳಗೆ ಬೆಳಗಾಗಿರ್ದೆನೆಂಬ ಶಬ್ದ ಮುಗ್ಧವಾಗಿರ್ದುದ ನೇನೆಂಬೆನಯ್ಯ. ॥

mattaṃ, ghana gaṃbhīra mahā ghanadoḷage ghanakke ghanavāgiddenayya. kūḍala saṃgamadēvayyaneṃba mahā beḷaginoḷage beḷagāgirdeneṃba śabda mugdhavāgirduda nēneṃbenayya. ॥

Report an error

ಮತ್ತಂ, ದೆಸೆದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯ. ಲಿಂಗ ಮಧ್ಯಂ ಜಗತ್ಸರ್ವಂ ಎಂಬುದ ನಾನರಿಯೆನಯ್ಯ. ಲಿಂಗಸೋಂಕಿನ ಸುಖದೊಳಗೆ ಶಿವ ಶಿವ ಎನುತಿರ್ದೆನಯ್ಯ. ಅಂಬುಧಿಯೊಳಗೆ ಬಿದ್ದ ವಾರಿಕಲ್ಲಿನಂತೆ ಭಿನ್ನ ಭಾವವಿಲ್ಲದೆ ಶಿವ ಶಿವ ಎನುತಿರ್ದೆನು ಕಾಣಾ ಕೂಡಲಸಂಗಮದೇವಾ.॥

mattaṃ, desedikku dhare gaganaveṃbuda nānariyenayya. liṃga madhyaṃ jagatsarvaṃ eṃbuda nānariyenayya. liṃgasōṃkina sukhadoḷage śiva śiva enutirdenayya. aṃbudhiyoḷage bidda vārikallinaṃte bhinna bhāvavillade śiva śiva enutirdenu kāṇā kūḍalasaṃgamadēvā.॥

Report an error

ಮತ್ತಂ, ಅರಿವನ್ನಕ್ಕರ ಅರ್ಚಿಸಿದೆ; ಅರಿವನ್ನಕ್ಕರ ಪೂಜಿಸಿದೆ; ಅರಿವನ್ನಕ್ಕರ ಹಾಡಿದೆ, ಹೊಗಳಿದೆ; ಅರಿವು ಗೆಟ್ಟು ಮರಹು ನಷ್ಟವಾಗಿ, ಭಾವ ನಿರ್ಭಾವವಾಗಿ ನಿಜ ಒಳಕೊಂಡಿತ್ತಾಗಿ ಕೂಡಲ ಸಂಗೈಯ್ಯನಲ್ಲಿ ಸರ್ವ ನಿವಾಸಿಯಾದೆನು. ॥

mattaṃ, arivannakkara arciside; arivannakkara pūjiside; arivannakkara hāḍide, hogaḷide; arivu geṭṭu marahu naṣṭavāgi, bhāva nirbhāvavāgi nija oḷakoṃḍittāgi kūḍala saṃgaiyyanalli sarva nivāsiyādenu. ॥

Report an error

ಮತ್ತಂ, ಅರಿಯಲಿಲ್ಲದ ಅರಿವು ಅವಗ್ರಹಿಸಿತ್ತಾಗಿ ಅರಿಯಲಿಲ್ಲದ ಮರೆಯಲಿಲ್ಲದ ನಿಜವು ನಿಂದಿತ್ತಾಗಿ ನಿರ್ನಾಮವಾಯಿತು. ನಿಷ್ಪತ್ತಿಯಾಯಿತ್ತು, ಅಗಮ್ಯದಲ್ಲಿ ಮನಗೆಟ್ಟಿತ್ತು, ನಿಂದಲ್ಲಿ ನಿರಾಳವಾಯಿತು. ಕೂಡಲ ಸಂಗಮದೇವರಲ್ಲಿ ಶಬ್ದ ಮುಗ್ಧವಾಯಿತ್ತು. ॥

mattaṃ, ariyalillada arivu avagrahisittāgi ariyalillada mareyalillada nijavu niṃdittāgi nirnāmavāyitu. niṣpattiyāyittu, agamyadalli manageṭṭittu, niṃdalli nirāḷavāyitu. kūḍala saṃgamadēvaralli śabda mugdhavāyittu. ॥

Report an error

ಮತ್ತಂ, ಅಂತರಂಗ ಬಹಿರಂಗ ಆತ್ಮ ಸಂಗ ಒಂದೇ ಅಯ್ಯ. ಆರೂಢದ ಸುಖವನು ಕೂಡಲ ಸಂಗಮದೇವ ತಾನೆ ಬಲ್ಲನು. ॥

mattaṃ, aṃtaraṃga bahiraṃga ātma saṃga oṃdē ayya. ārūḍhada sukhavanu kūḍala saṃgamadēva tāne ballanu. ॥

Report an error

ಮತ್ತಂ, ಸಮಸ್ತ ಕತ್ತಲೆಯ ಮಸಕವ ಕಳೆದಪ್ಪ ಇರವ ನೋಡಾ! ಬೆಳಗಿನ ಬೆಳಗು ಸಿಂಹಾಸನವ ಕೂಡಿದ ಕೂಟವ ಕೂಡಲ ಸಂಗೈಯ್ಯ ತಾನೇ ಬಲ್ಲನು. ॥

mattaṃ, samasta kattaleya masakava kaḷedappa irava nōḍā! beḷagina beḷagu siṃhāsanava kūḍida kūṭava kūḍala saṃgaiyya tānē ballanu. ॥

Report an error

ಮತ್ತಂ॥ ಚಿಕ್ಕದಣ್ಣಾಯಕರ ಸಮರಸ. ಅರಿವಿನಾಶ್ರಯ ಸಂಗ ಅರಿತು ನೆರೆ ಮಾಡಲು ಭಾವದಲ್ಲಿ ಸರ್ಪ ದಷ್ಟವಾಗಿ ಆಕಾರ ಪ್ರಾಣದಲ್ಲಿ ವಿಶ್ರಮಿಸಿತ್ತು. ಭಾವದಲ್ಲಿ ಭರಿತ ನಿರ್ಭಾವದಲ್ಲಿ ನಿರುತ ಕೂಡಲಚನ್ನಸಂಗಯ್ಯ ಸಕಳಾಶ್ರಯದಲ್ಲಿ ನಿರ್ಣಯ. ॥

mattaṃ॥ cikkadaṇṇāyakara samarasa. arivināśraya saṃga aritu nere māḍalu bhāvadalli sarpa daṣṭavāgi ākāra prāṇadalli viśramisittu. bhāvadalli bharita nirbhāvadalli niruta kūḍalacannasaṃgayya sakaḷāśrayadalli nirṇaya. ॥

Report an error

ಮತ್ತಂ, ನೇಹದ ಸುಖವ ನೋಟ ನುಂಗಿತ್ತು. ನೋಟದ ಸುಖವ ಕೂಟ ನುಂಗಿತ್ತು. ಕೂಟದ ಸುಖವ ಆಲಿಂಗನ ನುಂಗಿತ್ತು. ಆಲಿಂಗನದ ಸುಖವ ಸಂಗ ನುಂಗಿತ್ತು. ಸಂಗಸುಖವ ಸಮರಸ ನಂಗಿತ್ತು. ಸಮರಸದ ಸುಖವ ಪರವಶ ನುಂಗಿತ್ತು. ಪರವಶದ ಸುಖವ ಕೂಡಲ ಚನ್ನ ಸಂಗಯ್ಯ ತಾನೆ ಬಲ್ಲ ॥

mattaṃ, nēhada sukhava nōṭa nuṃgittu. nōṭada sukhava kūṭa nuṃgittu. kūṭada sukhava āliṃgana nuṃgittu. āliṃganada sukhava saṃga nuṃgittu. saṃgasukhava samarasa naṃgittu. samarasada sukhava paravaśa nuṃgittu. paravaśada sukhava kūḍala canna saṃgayya tāne balla ॥

Report an error

ಮತ್ತಂ, ಅರಿಯಲಿಲ್ಲದ ಅರಿವು, ಮರೆಯಲಿಲ್ಲದ ಮರಹು, ನೋಡಲಿಲ್ಲದ ನೋಟ, ಕೂಡಲಿಲ್ಲದ ಕೂಟ, ಬೆರಿಸಲಿಲ್ಲದ ಬೆರಗು ನಿಂದುದು ಕೂಡಲ ಚನ್ನ ಸಂಗಯ್ಯ ಲಿಂಗೈಕ್ಯವು॥

mattaṃ, ariyalillada arivu, mareyalillada marahu, nōḍalillada nōṭa, kūḍalillada kūṭa, berisalillada beragu niṃdudu kūḍala canna saṃgayya liṃgaikyavu॥

Report an error

ಮತ್ತಂ, ಅರುಹಿಂದಾದ ಮರಹಿನ ಶಬ್ದ ವರಿಯಲಾಗದು, ಅರಿದಡೆ ಅದಕ್ಕದೆ ಭಂಗವು. ಅರಿವರತು ಮರಹು ನಷ್ಟವಾಗಿ ಜ್ಞಾನವೆಂದಲ್ಲಿ ನಿರ್ಣಯವಿಲ್ಲಯ್ಯ. ಜ್ಞಾನದೊಳಗಣ ಬುದ್ಧಿಯ ಭಸ್ಮವಾಗಿ ಧರಿಸಿ ಕೂಡಲ ಚೆನ್ನ ಸಂಗಯ್ಯ ಸರ್ವನಿವಾಸಿ ॥

mattaṃ, aruhiṃdāda marahina śabda variyalāgadu, aridaḍe adakkade bhaṃgavu. arivaratu marahu naṣṭavāgi jñānaveṃdalli nirṇayavillayya. jñānadoḷagaṇa buddhiya bhasmavāgi dharisi kūḍala cenna saṃgayya sarvanivāsi ॥

Report an error

ಮತ್ತಂ, ಏನೆಂಬೆನೇನೆಂಬೆನಾಶ್ರಯ ವಿರಹಿತನ? ಏನೆಂಬೆನೇನೆಂಬೆ ನಾಮ ನಿರ್ನಾಮನ? ಏನೆಂಬೆನೇನೆಂಬೆ? ಸಂಸಾರ ಭರಿತ ನಲ್ಲದುದನೇನೆಂಬೆ? ದೇವಾ ಕ್ರಿಯೆ ಮೀರಿದ ಸಂಬಂಧ ಕೂಡಲಿ ಚನ್ನಸಂಗಮ ದೇವ ನಾನೆಂಬುದಿಲ್ಲದುದನೇನೆಂದಪಮಿಸುವೆನು? ॥

mattaṃ, ēneṃbenēneṃbenāśraya virahitana? ēneṃbenēneṃbe nāma nirnāmana? ēneṃbenēneṃbe? saṃsāra bharita nalladudanēneṃbe? dēvā kriye mīrida saṃbaṃdha kūḍali cannasaṃgama dēva nāneṃbudilladudanēneṃdapamisuvenu? ॥

Report an error

ಮತ್ತಂ, ಎನ್ನ ಮನದಲ್ಲಿ ಇದೇ ತಥ್ಯವಯ್ಯ. ಬೆರಸುವರೆ ಪ್ರಾಣದ ಮಥನ ಭಾವದ ನಷ್ಟ ತನು ಸ್ಥಿತಿಯ ಮರೆದು ಭ್ರಾಂತ ಸೂತಕವೆಲ್ಲ ವಿವರಿಸಿ ಹೋದವು. ಶೂನ್ಯ ಸಿಂಹಾಸನದ ಮೇಲೆ ಕೂಡಲ ಚನ್ನಸಂಗಮ ನಿಮ್ಮ ಶರಣನ ಪ್ರಭೆಯಿಂದ ॥

mattaṃ, enna manadalli idē tathyavayya. berasuvare prāṇada mathana bhāvada naṣṭa tanu sthitiya maredu bhrāṃta sūtakavella vivarisi hōdavu. śūnya siṃhāsanada mēle kūḍala cannasaṃgama nimma śaraṇana prabheyiṃda ॥

Report an error

ಮತ್ತಂ॥ ದೃಷ್ಟಿ ನಷ್ಟವಾದುದಕ್ಕೇನು ದೃಷ್ಟ? ಭಾವ ನಷ್ಟವಾದುದೇ ದೃಷ್ಟ. ಭಾವ ನಷ್ಟವಾದುದಕ್ಕೇನು ದೃಷ್ಟ? ಸ್ವಯ ಪರವರಿಯದುದೇ ದೃಷ್ಟ. ಸ್ವಯ ಪರವರಿಯದುದಕ್ಕೇನು ದೃಷ್ಟ? ಕೂಡಲ ಚನ್ನ ಸಂಗಯ್ಯನ ನೆನೆದುದೇ ದೃಷ್ಟ. ॥

mattaṃ॥ dr̥ṣṭi naṣṭavādudakkēnu dr̥ṣṭa? bhāva naṣṭavādudē dr̥ṣṭa. bhāva naṣṭavādudakkēnu dr̥ṣṭa? svaya paravariyadudē dr̥ṣṭa. svaya paravariyadudakkēnu dr̥ṣṭa? kūḍala canna saṃgayyana nenedudē dr̥ṣṭa. ॥

Report an error

ಮತ್ತಂ॥ ಸಹಜವೆನ್ನದೆ ನಿಜವೆನ್ನದೆ ಖಂಡಿತವೆನ್ನದೆ ಪರಿಪೂರ್ಣವೆನ್ನದೆ ಏನು ಎನ್ನದೆ ಕೂಡಲ ಚನ್ನ ಸಂಗಯ್ಯ ಲಿಂಗೈಕ್ಯವು. ॥

mattaṃ॥ sahajavennade nijavennade khaṃḍitavennade paripūrṇavennade ēnu ennade kūḍala canna saṃgayya liṃgaikyavu. ॥

Report an error

ಮತ್ತಂ॥ ಆನೆಂಬುದಿಲ್ಲ, ನೀನೆಂಬುದಿಲ್ಲ, ಸ್ವಯವೆಂಬುದಿಲ್ಲ, ಪರವೆಂಬುದಿಲ್ಲ, ಅರಿವೆಂಬುದಿಲ್ಲ, ಮರಹೆಂಬುದಿಲ್ಲ, ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ ಕೂಡಲ ಚನ್ನ ಸಂಗಯ್ಯನೆಂಬ ಶಬ್ದ ಮುನ್ನಿಲ್ಲ. ॥

mattaṃ॥ āneṃbudilla, nīneṃbudilla, svayaveṃbudilla, paraveṃbudilla, ariveṃbudilla, maraheṃbudilla, oḷageṃbudilla, horageṃbudilla kūḍala canna saṃgayyaneṃba śabda munnilla. ॥

Report an error

ಮತ್ತಂ॥ ತನು ಬಯಲು ನಿರ್ವಯಲೊಳಗಡಗಿತ್ತು. ಮನ ಬಯಲು ನಿರ್ವಯಲೊಳಗಡಗಿತ್ತು. ಭಾವ ಬಯಲು ನಿರ್ವಯಲೊಳಗಡಗಿತ್ತು. ಬಯಲು ಬಯಲ ಬೆರಸಿ ಬಯಲೆಯಾಯಿತ್ತು. ಕೂಡಲ ಚನ್ನ ಸಂಗಯ್ಯನೆಂಬ ನುಡಿಯಡಗಿತ್ತು. ॥

mattaṃ॥ tanu bayalu nirvayaloḷagaḍagittu. mana bayalu nirvayaloḷagaḍagittu. bhāva bayalu nirvayaloḷagaḍagittu. bayalu bayala berasi bayaleyāyittu. kūḍala canna saṃgayyaneṃba nuḍiyaḍagittu. ॥

Report an error

ಮಡಿವಾಳಯ್ಯಗಳ ಪರಾಮರಿಕೆ. ನಿತ್ಯ ಸತ್ಯದೊಳಗಡಗಿ ಸತ್ಯ ಆಚಾರದೊಳಗಡಗಿ ಆಚಾರ ಅನುಭಾವದೊಳಗಡಗಿ ಅನುಭಾವ ಜ್ಞಾನದೊಳಗಡಗಿ ಮಹಾಜ್ಞಾನ ಮನೋಲಯದೊಳಗಡಗಿ ಮನೋಲಯವೆ ಮಹಾ ಘನವಾಯಿತ್ತು ಕಲಿ ದೇವರ ದೇವ ನಿಮ್ಮ ನಿಜೈಕ್ಯ. ॥

maḍivāḷayyagaḷa parāmarike. nitya satyadoḷagaḍagi satya ācāradoḷagaḍagi ācāra anubhāvadoḷagaḍagi anubhāva jñānadoḷagaḍagi mahājñāna manōlayadoḷagaḍagi manōlayave mahā ghanavāyittu kali dēvara dēva nimma nijaikya. ॥

Report an error

ತನು ನಷ್ಟ ಮನ ನಷ್ಟ ನೆನಹು ನಷ್ಟ ಭಾವ ನಷ್ಟ ಜ್ಞಾನ ನಷ್ಟ ಇಂತೀ ಪಂಚ ನಷ್ಟದೊಳಗೆ ನಾ ನಷ್ಟವಾದೆನು. ಆ ನಷ್ಟದೊಳಗೆ ನೀನು ನಷ್ಟವಾದೆ. ಕಲಿ ದೇವರ ದೇವನೆಂಬ ನುಡಿ ನಿಃಶಬ್ದ ಬ್ರಹ್ಮಮುಚ್ಯತೆ ॥

tanu naṣṭa mana naṣṭa nenahu naṣṭa bhāva naṣṭa jñāna naṣṭa iṃtī paṃca naṣṭadoḷage nā naṣṭavādenu. ā naṣṭadoḷage nīnu naṣṭavāde. kali dēvara dēvaneṃba nuḍi niḥśabda brahmamucyate ॥

Report an error

ಅರಿವಿನೊಳಗಣ ಕುರುಹು ಮರಹಿಂಗೆ ಬೀಜ. ಕುರುಹಿನ ಮರಹನರಿವು ನುಂಗಿ ಘನಕ್ಕೆ ಘನ ವೇದ್ಯವಾದ ಬಳಿಕ ನಿತ್ಯ ಪರಿಪೂರ್ಣತಾನೆ. ಕಲಿದೇವರ ದೇವನು ವಾಙ್ಮನಕ್ಕಗೋಚರನು. ॥

arivinoḷagaṇa kuruhu marahiṃge bīja. kuruhina marahanarivu nuṃgi ghanakke ghana vēdyavāda baḷika nitya paripūrṇatāne. kalidēvara dēvanu vāṅmanakkagōcaranu. ॥

Report an error

ಮತ್ತಂ, ಎನ್ನ ಆಯತ ಅವಧಾನಗೆಟ್ಟಿತ್ತಯ್ಯ. ಎನ್ನ ಸ್ವಾಯತ ಸಂದಳಿಯಿತ್ತಯ್ಯ. ಎನ್ನ ಸಮಾಧಾನ ತರ ಹರವಾಯಿತ್ತಯ್ಯ ಎನ್ನ ಅರಿವು ನಿಜದಲ್ಲಿ ನಿಷ್ಪತ್ತಿಯಾಯಿತ್ತಯ್ಯ ಕಲಿ ದೇವರ ದೇವಯ್ಯ ನಿಮ್ಮ ಶಬ್ದ ಮುಗ್ಧವಾಗಿದ್ದೆನು ॥

mattaṃ, enna āyata avadhānageṭṭittayya. enna svāyata saṃdaḷiyittayya. enna samādhāna tara haravāyittayya enna arivu nijadalli niṣpattiyāyittayya kali dēvara dēvayya nimma śabda mugdhavāgiddenu ॥

Report an error

ಮತ್ತಂ, ತನುವಳಿಯಿತ್ತು. ಮನವಳಿಯಿತ್ತು. ಭಾನವಳಿಯಿತ್ತು. ಬಯಕೆಯಳಿಯಿತ್ತು. ನಿಜವೆಂಬುದಳಿಯಿತ್ತು. ನಾಮ ಸೀಮೆಯ ಬಯಲಲ್ಲಿ ಕಲಿದೇವರ ದೇವನಲ್ಲಿ ಬೆರಸಿ ಬೇರಿಲ್ಲದಿರ್ದೆನು ॥

mattaṃ, tanuvaḷiyittu. manavaḷiyittu. bhānavaḷiyittu. bayakeyaḷiyittu. nijaveṃbudaḷiyittu. nāma sīmeya bayalalli kalidēvara dēvanalli berasi bērilladirdenu ॥

Report an error

ಮತ್ತಂ, ತ್ರಿವಿಧ ಮಧ್ಯ ಶೇಷ ತ್ರಿಕೂಟ ಬೆಳಸು ದಿವ್ಯ ಮಧ್ಯದ ಪರಿಯಾಣ ನಿರ್ಭಾವ ಮಧ್ಯ ಧ್ಯಾನವನೆ ತಂದು ರತ್ನಾಭರಣದ ಭಾಜನದಲ್ಲಿ ಇವನೆಲ್ಲವನು ಸಂಹರಿಸುವೆನು. ಹಿಂದೆ ನೋಡಿಯು ಆರನು ಕಾಣೆ. ಮುಂದೆ ನೋಡಿಯು ಆರನು ಕಾಣೆ. ಮಧ್ಯದಲ್ಲಿ ನೋಡು. ವೈಸ್ಯಕ್ಕರನ ಮಾಡಿದ ಭಕ್ತಿಯ ಬೇಡವೆಂದು ಒಬ್ಬ ಜಂಗಮ ಬಂದರೆ ಕೊಟ್ಟು, ಆ ಭಕ್ತಿಯ ಶೇಷ ಪ್ರಸಾದದಿಂದೆ ಶುದ್ಧನಾದೆನು ಕಾಣಾ ಕಲಿ ದೇವರ ದೇವಾ ॥

mattaṃ, trividha madhya śēṣa trikūṭa beḷasu divya madhyada pariyāṇa nirbhāva madhya dhyānavane taṃdu ratnābharaṇada bhājanadalli ivanellavanu saṃharisuvenu. hiṃde nōḍiyu āranu kāṇe. muṃde nōḍiyu āranu kāṇe. madhyadalli nōḍu. vaisyakkarana māḍida bhaktiya bēḍaveṃdu obba jaṃgama baṃdare koṭṭu, ā bhaktiya śēṣa prasādadiṃde śuddhanādenu kāṇā kali dēvara dēvā ॥

Report an error

ಮತ್ತಂ ಬಹುರೂಪಿ ಚೌಡಯ್ಯಗಳ ಸಮರಸದ ವಚನ॥

mattaṃ bahurūpi cauḍayyagaḷa samarasada vacana॥

Report an error

ಷಡುಚಕ್ರವಳಯದೊಳಗೆ ನಾನಾಡುವೆ. ಬಹು ರೂಪಭ್ರೂಮಧ್ಯ ಮಂಡಲ ಹೃದಯ ಕಮಲ ಮಧ್ಯದ ಅಬ್ಜ ಸ್ವರದ ಮಣಿ ಪೂರಕದ ಮೇಲೆ ನಾನಾಡುವೆ. ಬಹು ರೂಪ ನುರಿಯುಂಡ ಕರ್ಪುರದಂತೆ ನಾನಾಡುವೆ. ಬಹು ರೂಪ ಬಯಲ ಬೆರಸಿದ ಮರೀಚಿಯಂತೆ ನಾನಾಡುವೆ. ಬಹುರೂಪ ರೇಕಣ್ಣ ಪ್ರಿಯನಾಗಿ ನಾಥ ಬಸವಣ್ಣನಿಂದೆ ಬದುಕಿದೆನು ॥

ṣaḍucakravaḷayadoḷage nānāḍuve. bahu rūpabhrūmadhya maṃḍala hr̥daya kamala madhyada abja svarada maṇi pūrakada mēle nānāḍuve. bahu rūpa nuriyuṃḍa karpuradaṃte nānāḍuve. bahu rūpa bayala berasida marīciyaṃte nānāḍuve. bahurūpa rēkaṇṇa priyanāgi nātha basavaṇṇaniṃde badukidenu ॥

Report an error

ಮತ್ತಂ, ನಿಷ್ಪತ್ತಿ ಬಂದು ಹಾಳಕೊಂಡಿದ್ದಲ್ಲಿ ನಿರಾಶ್ರಯ ಬಂದು ಹೊದಕೆಯಾದಲ್ಲಿ ನಿರಾಲಂಬವಾಯಿತ್ತಯ್ಯ. ಎನ್ನ ಬಹು ರೂಪು ನಿರು ಹರಣ ಮಧ್ಯದಲ್ಲಿ ಅಡಗಿದ್ದುದಲ್ಲ. ಎನ್ನ ಬಹುರೂಪಕ್ಕೆ ಪ್ರಾಣಲಿಂಗ ಬಸವಣ್ಣ ಕಾಣಾ. ರೇಕಣ್ಣ ಪ್ರಿಯ ನಾಗಿನಾಥ ಬಸವಣ್ಣನಿಂದೆ ಬದುಕಿದೆನು ॥

mattaṃ, niṣpatti baṃdu hāḷakoṃḍiddalli nirāśraya baṃdu hodakeyādalli nirālaṃbavāyittayya. enna bahu rūpu niru haraṇa madhyadalli aḍagiddudalla. enna bahurūpakke prāṇaliṃga basavaṇṇa kāṇā. rēkaṇṇa priya nāginātha basavaṇṇaniṃde badukidenu ॥

Report an error

ಮತ್ತಂ, ಇಂದು ಬಂದ ಬಹುರೂಪ ನೋಡಿರಯ್ಯ. ಗತಿಯ ಹೊದ್ದದೆ ಸ್ಥಿತಿಯ ಹೊದ್ದದೆ ಸ್ಥಾನವ ಹೊದ್ದದೆ ಐವರು ಕಟ್ಟಿದ ಕಟ್ಟಳೆಯ ಮೀರಿ ನಾನಾಡುವೆ. ಬಹುರೂಪ ರೇಕಣ್ಣ ಪ್ರಿಯ ನಾಗಿನಾಥ ಬಸವಣ್ಣನಿಂದ ಬದುಕಿದೆನು ॥

mattaṃ, iṃdu baṃda bahurūpa nōḍirayya. gatiya hoddade sthitiya hoddade sthānava hoddade aivaru kaṭṭida kaṭṭaḷeya mīri nānāḍuve. bahurūpa rēkaṇṇa priya nāginātha basavaṇṇaniṃda badukidenu ॥

Report an error

ಮತ್ತಂ, ಇನ್ನಾಡುವೆ ಜಂಗು ಬಹುರೂಪ ಅಲ್ಲಮನಂತೆ. ಆಡುವೆ ಬಹುರೂಪು ಅಜಗಣ್ಣನಂತೆ. ಆಡುವೆ ಬಹುರೂಪ ಮುಖವಾಡದಯ್ಯಗಳಂತೆ. ಆಡುವೆ ಬಹುರೂಪ ಪುರುಷಂಗಣ ಮೆಟ್ಟಿ ಆಡುವೆ. ಬಹುರೂಪ ರೇಕಣ್ಣ ಪ್ರಿಯ ನಾಗಿನಾಥ ಬಸವಣ್ಣನಿಂದ ಬುದುಕಿತ್ತೀ ಲೋಕವೆಲ್ಲಾ ॥

mattaṃ, innāḍuve jaṃgu bahurūpa allamanaṃte. āḍuve bahurūpu ajagaṇṇanaṃte. āḍuve bahurūpa mukhavāḍadayyagaḷaṃte. āḍuve bahurūpa puruṣaṃgaṇa meṭṭi āḍuve. bahurūpa rēkaṇṇa priya nāginātha basavaṇṇaniṃda budukittī lōkavellā ॥

Report an error

ಮತ್ತಂ, ಶೂನ್ಯ ಸನ್ನಿಹಿತನಾದಲ್ಲಿ ಶೂನ್ಯ ಪದಾರ್ಥವಾದಲ್ಲಿ ಬಸವನ ಪ್ರಸಾದವೆಂದು ಬಸವನ ಕೂಡೆ ಆಡುತ್ತಿರ್ದ ರೇಕಣ್ಣ ಪ್ರಿಯನಾಗಿ ನಾಥ ಬಸವಣ್ಣನಿಂದ ಬದುಕಿ ಲೋಕವೆಲ್ಲಾ ॥

mattaṃ, śūnya sannihitanādalli śūnya padārthavādalli basavana prasādaveṃdu basavana kūḍe āḍuttirda rēkaṇṇa priyanāgi nātha basavaṇṇaniṃda baduki lōkavellā ॥

Report an error

ಶುದ್ಧವೇ ಜವನಿಕೆಯಾಗಿ ಶುದ್ಧವೇ ಸಿಂಹಾಸನವಾಗಿ ಪ್ರಸಿದ್ಧ ಹೊದಕೆಯ ಹೊದ್ದು ನಾನಾಡುತ್ತಿರ್ದ್ದೆ. ಬಹುರೂಪ ಶುದ್ಧ ವಿಡಿದಲ್ಲಿ ಇದ್ದ ನಿಜ ನಾಸ್ತಿಯಾಯಿತ್ತೆನ್ನ ಬಹುರೂಪ, ಸಿದ್ಧವೆಂಬ ಸಿಂಹಾಸನವಳಿದಲ್ಲಿ ಬುದ್ಧಿಗೆಟ್ಟು ಅಡುತಿರ್ದುದಯ್ಯ ಎನ್ನ ಬಹು ರೂಪು ಪ್ರಸಿದ್ಧ ಹೊದೆಕೆಯ ಹರಿದಲ್ಲಿ ನಾ ಬಸವನ ಕೂಡೆ ಆಡುತಿದೆ ಕಾಣಾ ರೇಕಣ್ಣ ಪ್ರಿಯನಾಗಿ ನಾಥ ಬಸವಣ್ಣನಿಂದ ಬದುಕಿ ಲೋಕವೆಲ್ಲಾ. ॥

śuddhavē javanikeyāgi śuddhavē siṃhāsanavāgi prasiddha hodakeya hoddu nānāḍuttirdde. bahurūpa śuddha viḍidalli idda nija nāstiyāyittenna bahurūpa, siddhaveṃba siṃhāsanavaḷidalli buddhigeṭṭu aḍutirdudayya enna bahu rūpu prasiddha hodekeya haridalli nā basavana kūḍe āḍutide kāṇā rēkaṇṇa priyanāgi nātha basavaṇṇaniṃda baduki lōkavellā. ॥

Report an error

ಮತ್ತಂ, ಸರದೊಳಗೆ ಸರಗಟ್ಟಿ ಸರ ಹರಿದವ ನಾನಯ್ಯ. ಮಹದಲ್ಲಿ ಮನೆ ಗಟ್ಟಿ ಮನೆ ಬೆಂದವ ನಾನಯ್ಯ. ಕಿಚ್ಚಿನೊಳಗೆ ಕಿಚ್ಚನೊಟ್ಟಿ ಕಾದವ ನಾನಯ್ಯ. ಆ ಕಿಚ್ಚಿನೊಳಗೆ ಬಿದ್ದು ಉರಿದವ ನಾನಯ್ಯ. ಬಸವಣ್ಣನು ಎನ್ನ ಬಹುರೂಪಕ್ಕೆ ಸೂತ್ರಧಾರಿಯಾದ. ಸೂಕ್ಷ್ಮವಾಗಿ ಹೋದೆ ನಾ ಬಸವನಿಂದ ಕೆಟ್ಟೆ ಕಾಣಾ ರೇಕಣ್ಣ ಪ್ರಿಯನಾಗಿ ನಾಥ ಬಸವಣ್ಣನಿಂದ ಬದುಕಿ ಲೋಕವೆಲ್ಲಾ ॥

mattaṃ, saradoḷage saragaṭṭi sara haridava nānayya. mahadalli mane gaṭṭi mane beṃdava nānayya. kiccinoḷage kiccanoṭṭi kādava nānayya. ā kiccinoḷage biddu uridava nānayya. basavaṇṇanu enna bahurūpakke sūtradhāriyāda. sūkṣmavāgi hōde nā basavaniṃda keṭṭe kāṇā rēkaṇṇa priyanāgi nātha basavaṇṇaniṃda baduki lōkavellā ॥

Report an error

ಹಡಪದಪ್ಪಣ್ಣಗಳ ಪರಾಮರಿಕೆ. ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು, ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು, ಎನ್ನರಿವು ನಿಮ್ಮ ಘನದಲ್ಲಿ ಸವೆದು ನಿಶ್ಚಲ ನಿಜೈಕ್ಯವಾಗಿ ಬಸವ ಪ್ರಿಯ ಕೂಡಲ ಚನ ಸಂಗಯ್ಯ, ನಾ ನೀನೆಂಬುದು ಏನಾಯಿತ್ತೆಂದರಿಯೆ. ॥

haḍapadappaṇṇagaḷa parāmarike. enna tanu nimma sēveyalli savedu, enna mana nimma nenahinalli savedu, ennarivu nimma ghanadalli savedu niścala nijaikyavāgi basava priya kūḍala cana saṃgayya, nā nīneṃbudu ēnāyitteṃdariye. ॥

Report an error

ಮತ್ತಂ, ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತವಾದವು ಎನ್ನ ಅವಧಾನ ಅನುಭಾವ ಬಸವಣ್ಣಂಗರ್ಪಿತವಾದವು. ಎನ್ನ ಸರ್ವಾಚಾರ ಸಂಪತ್ತು ಬಸವಣ್ಣನಲ್ಲಿ ವೇದ್ಯವಾಯಿತ್ತು. ಬಸವಪ್ರಿಯ ಕೂಡಲ ಚನ್ನ ಸಂಗಮದೇವರಲ್ಲಿ ನಿಜ ನಿವಾಸಿಯಾಗಿರ್ದೆನು. ॥

mattaṃ, enna ācāra vicāra basavaṇṇaṃgarpitavādavu enna avadhāna anubhāva basavaṇṇaṃgarpitavādavu. enna sarvācāra saṃpattu basavaṇṇanalli vēdyavāyittu. basavapriya kūḍala canna saṃgamadēvaralli nija nivāsiyāgirdenu. ॥

Report an error

ಮತ್ತಂ, ಹರಿದು ಹತ್ತಿ ಮುಟ್ಟಲಿಲ್ಲ. ಮುಟ್ಟಿ ಮರಳಿ ಇಳಿಯಲಿಲ್ಲ. ಬೆರಸಿದೆನೆಂದು ನೆನೆಯಲಿಲ್ಲ. ಬಸವ ಪ್ರಿಯ ಕೂಡಲ ಚನ್ನಸಂಗಯ್ಯನಲ್ಲಿ ಶಬ್ದಕ್ಕೆ ಇಂಬಿಲ್ಲದಿದ್ದೆನು. ॥

mattaṃ, haridu hatti muṭṭalilla. muṭṭi maraḷi iḷiyalilla. berasideneṃdu neneyalilla. basava priya kūḍala cannasaṃgayyanalli śabdakke iṃbilladiddenu. ॥

Report an error

ಸೊಡ್ಡಳ ಬಾಚರಸರ ಪರಾಮರಿಕೆ. ಎನ್ನ ಕಾಯವೆಂಬ ಸಿಂಹಾಸನದಲ್ಲಿ ಪ್ರಾಣ ಲಿಂಗವ ಮೂರ್ತಿಗೊಳಿಸಿ, ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು, ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿದ ನಾನೆಂಬ ಭೇದವಳಿದು ಮಹಾದಾನಿ ಸೊಡ್ಡಳನಲ್ಲಿ ನಿಜಲಿಂಗೈಕ್ಯವಾಯಿತ್ತು. ॥

soḍḍaḷa bācarasara parāmarike. enna kāyaveṃba siṃhāsanadalli prāṇa liṃgava mūrtigoḷisi, dhyānaveṃba hastadalli muṭṭi pūjisuttiralu, mellamellane sutti muttida saṃsāra bayala berasida nāneṃba bhēdavaḷidu mahādāni soḍḍaḷanalli nijaliṃgaikyavāyittu. ॥

Report an error

ಮತ್ತಂ, ಅಂಗ ಲಿಂಗಕ್ಕೆ ಗೂಡಾಯಿತ್ತು. ಲಿಂಗ ಅಂಗಕ್ಕೆ ಗೂಡಾಯಿತ್ತು. ಅಂಗ ಲಿಂಗ ಸಂಗವೆಂಬ ಸಂದಳಿದು ನಿಜ ಲಿಂಗೈಕ್ಯವಾಯಿತ್ತು. ಭಾವ ನಿರ್ಭಾವ ನಿಷ್ಪತ್ತಿಯಲ್ಲಿ ಮಹಾದಾನಿ ಸೊಡ್ಡಳಂಗೆ ಸರ್ವ ನಿರ್ಮಾಣವಾಯಿತ್ತು. ॥

mattaṃ, aṃga liṃgakke gūḍāyittu. liṃga aṃgakke gūḍāyittu. aṃga liṃga saṃgaveṃba saṃdaḷidu nija liṃgaikyavāyittu. bhāva nirbhāva niṣpattiyalli mahādāni soḍḍaḷaṃge sarva nirmāṇavāyittu. ॥

Report an error

ಮತ್ತಂ, ಎನ್ನ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗು ಹರಿದು ಸೋಹಂ ಸೋಹಂ ಎನುತ್ತಿದ್ದಿತು. ಸೋಹಂ ಎಂಬ ಸುಖದ ಮಹಾ ಸವಿಯ ಮಹಾದಾನಿ ಸೊಡ್ಡಳ ಆರೋಗಣೆಯ ಮಾಡಿ ನಿಜ ನಿವಾಸಿಯಾದ ಕಾರಣ ನಾನು ನಾಮ ಸೀಮೆ ಗೆಟ್ಟೆನು. ॥

mattaṃ, enna aṣṭavidhārcane ṣōḍaśōpacārada haṃgu haridu sōhaṃ sōhaṃ enuttidditu. sōhaṃ eṃba sukhada mahā saviya mahādāni soḍḍaḷa ārōgaṇeya māḍi nija nivāsiyāda kāraṇa nānu nāma sīme geṭṭenu. ॥

Report an error

ಮತ್ತಂ, ಅಕ್ಕ ನಾಗಾಯಿಗಳ ಪರವಶ ಎನ್ನ ತನು ಚನ್ನಬಸವಣ್ಣನ ಬಯಲ ಬೆರಸಿತ್ತು. ಎನ್ನ ಮನ ಸಂಗನಬಸವಣ್ಣನ ನಿಜಪದವ ಬೆರಸಿತ್ತು. ಎನ್ನ ಪ್ರಾಣ ಪ್ರಭುದೇವರ ಬಯಲ ಬೆರಸಿತ್ತು. ಬಸವಣ್ಣ ಪ್ರಿಯ ಚನ್ನಸಂಗನ ಶರಣರು ಒಬ್ಬರೊಬ್ಬರೊಂದೊಂದ ಹಂಚಿ ಕೊಂಡ ಕಾರಣ ಎನಗೇನು ಎನಗೇನು ಇಲ್ಲದೆ ಮಹಾ ಘನದಲ್ಲಿ ನಿಜ ನಿವಾಸಿಯಾಗಿದ್ದೆನು. ॥

mattaṃ, akka nāgāyigaḷa paravaśa enna tanu cannabasavaṇṇana bayala berasittu. enna mana saṃganabasavaṇṇana nijapadava berasittu. enna prāṇa prabhudēvara bayala berasittu. basavaṇṇa priya cannasaṃgana śaraṇaru obbarobbaroṃdoṃda haṃci koṃḍa kāraṇa enagēnu enagēnu illade mahā ghanadalli nija nivāsiyāgiddenu. ॥

Report an error

ಮತ್ತಂ॥ ಎನ್ನ ಕುಲ ಸೂತಕವನಳಿದ ಬಸವಣ್ಣ. ಎನ್ನ ಛಲಸೂತ ಕವನಳಿದ ಬಸವಣ್ಣ. ಎನ್ನ ತನು ಸೂತಕವನಳಿದ ಬಸವಣ್ಣ. ಎನ್ನ ಮನಸೂತಕವನಳಿದ ಬಸವಣ್ಣ. ಎನ್ನ ಪ್ರಾಣಸೂತಕವ ಕಳೆದ ಬಸವಣ್ಣ. ಎನ್ನ ಭಾವ ಸೂತಕವ ಕಳೆದ ಬಸವಣ್ಣ. ಎನ್ನ ಅರಿವು ಮರಹಿನ ಸಂದ ಬಿಡಿಸಿದ ಬಸವಣ್ಣ. ಎನ್ನ ತನ್ನಲ್ಲಿ ಇಂಬಿಟ್ಟುಕೊಂಡ ಬಸವಣ್ಣ. ತನ್ನ ಎನ್ನಲ್ಲಿ ಇಂಬಿಟ್ಟುಕೊಂಡ ಬಸವಣ್ಣ. ನಿಜ ನಿರ್ವಯಲ ಸಮಾಧಿಯ ನಿಜ ನಿವಾಸದ ಬಾಗಿಲ ತೋರಿದ ಬಸವಣ್ಣ. ಬಸವಣ್ಣ ಪ್ರಿಯ ಕೂಡಲ ಚನ್ನ ಸಂಗಯ್ಯನ ಹೃದಯ ಕಮಲದಲ್ಲಿ ಸಮವಾಗಿರಿಸಿದ ಎನ್ನ ತಂದೆ ಸಂಗನ ಬಸವಣ್ಣನು. ॥

mattaṃ॥ enna kula sūtakavanaḷida basavaṇṇa. enna chalasūta kavanaḷida basavaṇṇa. enna tanu sūtakavanaḷida basavaṇṇa. enna manasūtakavanaḷida basavaṇṇa. enna prāṇasūtakava kaḷeda basavaṇṇa. enna bhāva sūtakava kaḷeda basavaṇṇa. enna arivu marahina saṃda biḍisida basavaṇṇa. enna tannalli iṃbiṭṭukoṃḍa basavaṇṇa. tanna ennalli iṃbiṭṭukoṃḍa basavaṇṇa. nija nirvayala samādhiya nija nivāsada bāgila tōrida basavaṇṇa. basavaṇṇa priya kūḍala canna saṃgayyana hr̥daya kamaladalli samavāgirisida enna taṃde saṃgana basavaṇṇanu. ॥

Report an error

ಮೋಳಿಗೆಯ ಮಾರಯ್ಯಗಳ ಪರವಶ॥ ಎನ್ನರಿವು ಮರಹು ಬಸವಣ್ಣರಿಗರ್ಪಿತ, ಎನ್ನ ಆಚಾರ ವಿಚಾರ ಬಸವಣ್ಣಂಗರ್ಪಿತ, ಎನ್ನ ಭಾವ ನಿರ್ಭಾವ ಬಸವಣ್ಣಂಗರ್ಪಿತ, ಎನ್ನಂತರಂಗ ಬಹಿರಂಗ ಬಸವಣ್ಣಂಗರ್ಪಿತ, ನೀ ನಾನೆಂಬುದು ಬಸವಣ್ಣಂಗರ್ಪಿತ ಇಂತು ಎನ್ನನೆ ಬಸವಣ್ಣಂಗೆ ನಿವೇದಿಸಿ ಆವಾವವ ಲಂಬವು ಇಲ್ಲದೆ ನಿರಾಲಂಬದಲ್ಲಿ ನಿಜನಿವಾಸಿಯಾದೆನು ಕಾಣಾ ನಿಃಕಳಂಕ ಮಲ್ಲಿಕಾರ್ಜುನ. ॥

mōḷigeya mārayyagaḷa paravaśa॥ ennarivu marahu basavaṇṇarigarpita, enna ācāra vicāra basavaṇṇaṃgarpita, enna bhāva nirbhāva basavaṇṇaṃgarpita, ennaṃtaraṃga bahiraṃga basavaṇṇaṃgarpita, nī nāneṃbudu basavaṇṇaṃgarpita iṃtu ennane basavaṇṇaṃge nivēdisi āvāvava laṃbavu illade nirālaṃbadalli nijanivāsiyādenu kāṇā niḥkaḷaṃka mallikārjuna. ॥

Report an error

ಮತ್ತಂ॥ ‘ಬ’ ಎಂಬಲ್ಲಿ ಬಳಿ ಸಂದೆನು. ‘ಸ’ ಎಂಬಲ್ಲಿ ಸಯವಾದೆನು ‘ವ’ ಎಂಬಲ್ಲಿ ನಿರವಯವಾದೆನು. ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು. ॥

mattaṃ॥ ‘ba’ eṃballi baḷi saṃdenu. ‘sa’ eṃballi sayavādenu ‘va’ eṃballi niravayavādenu. niḥkaḷaṃka mallikārjuna basavaṇṇana nijapadadalli saṃdillade berasi namō namō eṃba haṃgaḷiduḷidenu. ॥

Report an error

ಡೋಹರ ಕಕ್ಕಯ್ಯಗಳ ಪರವಶ॥ ಎನ್ನ ಕಷ್ಟ ಕುಲ ಸೂತಕ ನಿಮ್ಮ ಹಸ್ತ ಮುಟ್ಟಿದಲ್ಲಿ ಬಯಲಾಯಿತ್ತು. ಶುಕ್ಲ ಶೋಣಿತದಿಂದಾದ ಸೂತಕ ಲಿಂಗ ಮುಟ್ಟಲೊಡನೆ ಬಯಲಾಯಿತ್ತು. ತಟ್ಟಿದ ಮುಟ್ಟಿದ ಸುಖಂಗಳ ಲಿಂಗಮುಖಕ್ಕೆ ಅರ್ಪಿಸಿದೆನಾಗಿ ಎನ್ನ ಪಂಚೇಂದ್ರಿಯಂಗಳು ಬಯಲಾಯಿತ್ತು. ಎನ್ನಂತರಂಗದಲ್ಲಿ ಜ್ಞಾನಜ್ಯೋತಿ ಎಡೆಗೊಂಡಿತ್ತಾಗಿ ಒಳಗು ಬಯಲಾಯಿತ್ತು. ಸಂಸಾರ ಸಂಗವಾದ ಅವಸ್ಥೆ ಮೀರಿದ ಕ್ರಿಯದಲ್ಲಿ ತರ ಹರವಾಯಿತ್ತಾಗಿ, ಬಹಿರಂಗ ಬಯಲಾಯಿತ್ತು. ಅಭಿನವ ಮಲ್ಲಿಕಾರ್ಜುನ ನಿಮ್ಮ ಮುಟ್ಟಿದ ಕಾರಣ ನಾನು ಬಯಲಾದೆನು. ॥

ḍōhara kakkayyagaḷa paravaśa॥ enna kaṣṭa kula sūtaka nimma hasta muṭṭidalli bayalāyittu. śukla śōṇitadiṃdāda sūtaka liṃga muṭṭaloḍane bayalāyittu. taṭṭida muṭṭida sukhaṃgaḷa liṃgamukhakke arpisidenāgi enna paṃcēṃdriyaṃgaḷu bayalāyittu. ennaṃtaraṃgadalli jñānajyōti eḍegoṃḍittāgi oḷagu bayalāyittu. saṃsāra saṃgavāda avasthe mīrida kriyadalli tara haravāyittāgi, bahiraṃga bayalāyittu. abhinava mallikārjuna nimma muṭṭida kāraṇa nānu bayalādenu. ॥

Report an error

ಮತ್ತಂ॥ ನೆಯಲರಿಯೆ, ನಿರ್ಧರಿಸಲರಿಯೆ. ಮನವಿಲ್ಲ ಭಾವಿಸಲರಿಯೆ ಬಳಸಲರಿಯೆ ಭಾವ ನಿರ್ಭಾವವಾಯಿತ್ತಾಗಿ, ಧಾನ ಮೌನವನರಿಯೆ, ಧ್ಯಾನಾತೀತ ತಾನೆಯಾಯಿತ್ತಾಗಿ, ಜ್ಞಾತೃ ಜ್ಞಾನ, ಸ್ತ್ರೀಯಂಗಳೆಲ್ಲವ ಮೀರಿ ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾದೆನು. ॥

mattaṃ॥ neyalariye, nirdharisalariye. manavilla bhāvisalariye baḷasalariye bhāva nirbhāvavāyittāgi, dhāna maunavanariye, dhyānātīta tāneyāyittāgi, jñātr̥ jñāna, strīyaṃgaḷellava mīri abhinava mallikārjunanalli parama sukhiyādenu. ॥

Report an error

ಇಂತು ಎಲ್ಲ ಗಣಂಗಳು ತಮ್ಮ ನಿಜ ಪದದ ನಿಲುಕಡೆಯ ಪೇಳಿ ತದನಂತರದಲ್ಲಿ ಚನ್ನ ಬಸವ ರಾಜ ದೇವರು ಬಿನ್ನೈಸುವ ಅವಸಾನವ ಸೂಚನೆಯ ಪದಂಗಳು.

iṃtu ella gaṇaṃgaḷu tamma nija padada nilukaḍeya pēḷi tadanaṃtaradalli canna basava rāja dēvaru binnaisuva avasānava sūcaneya padaṃgaḷu.

Report an error
p99rāga śrī rāga.

ಏನ ಹೇಳುವೆನಕ್ಕೆ ಕನಸನೂ ಮಾನವರಿಗೆ ತಿಳಿವಡಸಾಧ್ಯ ತರವಲ್ಲಾ

ēna hēḷuvenakke kanasanū mānavarige tiḷivaḍasādhya taravallā

Editor's note: Traditional rubric: ||ಪಲ್ಲ||

Report an error

ನಾನೊಂದು ಕನಸ ಕಂಡೆನು ಕೇಳೆಲೆ ಯಕ್ಕ ಮಾನದೊಳಗೆ ಒಂದಾನೆಯೂ ಆನೆ ನಿಂತುದು ಮಾವತಿಗೆ ಮಾನವ ಹೊಕ್ಕು ಕಾನನದೊಳು ತೊಳಲುದ ಕಂಡೆನಕ್ಕಾ. ॥

nānoṃdu kanasa kaṃḍenu kēḷele yakka mānadoḷage oṃdāneyū āne niṃtudu māvatige mānava hokku kānanadoḷu toḷaluda kaṃḍenakkā. ॥

Report an error

ದಾರಿವಿಡಿದು ಬರೆ ಬರೆ ಸರವರ ಕಂಡೆ. ಸರವರದೊಳಗೊಂದು ಕಮಲವ ಸರವರ ಕಮಲ ಕರ್ನಿಕೆಯ ಮಧ್ಯದೊಳೊಂದು ಉರಿಯ ಬೀಜವ ಕಂಡೆನಿದಿರೊಳು ॥

dāriviḍidu bare bare saravara kaṃḍe. saravaradoḷagoṃdu kamalava saravara kamala karnikeya madhyadoḷoṃdu uriya bījava kaṃḍenidiroḷu ॥

Report an error

ಉರಿಯ ಬೀಜವ ಸರಗೊಳಿಸಿ ಕೊರಳೊಳಿಟ್ಟು ಪರವೂರರಸನ ಸಮುಖವಾಗಿ ಬರುತ ಬರುತ ಬರೆ ಬರೆ ಘನದುರಿ ಎದ್ದು ನೆರದ ಮನೆಯ ಹುಲ್ಲುರಿದುದಾ ॥

uriya bījava saragoḷisi koraḷoḷiṭṭu paravūrarasana samukhavāgi baruta baruta bare bare ghanaduri eddu nerada maneya hulluridudā ॥

Report an error

ನೆಲೆಗೆಟ್ಟು ಶೂನ್ಯದ ಸುಖವ ಬಯಸಿ ಬಂದು ಹಲವು ಬಣ್ಣದ ನೂಲ ಹುರಿ ಮಾಡಿ ತವೆ ಕಾವಿಯೊಳಗೊಂದಮೃತದ ಸೇದೆಯ ಬಾವಿ ತೊಲಗಲೀಯದು ಜಾಲಗಾರನನೂ ॥

nelegeṭṭu śūnyada sukhava bayasi baṃdu halavu baṇṇada nūla huri māḍi tave kāviyoḷagoṃdamr̥tada sēdeya bāvi tolagalīyadu jālagārananū ॥

Report an error

ಬಟ್ಟ ಬಯಲ ತುಟ್ಟ ತುದಿಯ ಕೊನೆಯ ಮೇಲೆ ಉಟ್ಟುದ ತೊರೆದು ನಿಂದುದ ಕಂಡೆ ಮುಟ್ಟಿ ಕೂಡಲ ಚನ್ನಸಂಗನ ಶರಣರು ಹುಟ್ಟಿ ಮುರಿದು ಹೋದುದ ಕಂಡೆನಮ್ಮಾ ॥

baṭṭa bayala tuṭṭa tudiya koneya mēle uṭṭuda toredu niṃduda kaṃḍe muṭṭi kūḍala cannasaṃgana śaraṇaru huṭṭi muridu hōduda kaṃḍenammā ॥

Report an error

ಆ ಪ್ರಸ್ಥಾವದೊಳು ಪ್ರಭುದೇವರು ತಮ್ಮ ಪರಾಮರಿಕೆಯ ಹೇಳುವ ವಚನ ॥

ā prasthāvadoḷu prabhudēvaru tamma parāmarikeya hēḷuva vacana ॥

Report an error

ಮನದ ಕೊನೆಯ ಮೊನೆಯ ಮೇಲೆ ನೆನದ ನೆನಹು ಜನನ ಮರಣವ ನಿಲಿಸಿ ಜ್ಞಾನ ಜ್ಯೋತಿ ಉದಯ ಭಾನು ಕೋಟೆಯ ಮೀರಿ ಸ್ವಾನುಭಾವದ ಉದಯ ಜ್ಞಾನ ಶೂನ್ಯದಲಡಗಿದ ಘನವನೇನೆಂಬೆನು ಗುಹೇಶ್ವರಾ. ॥

manada koneya moneya mēle nenada nenahu janana maraṇava nilisi jñāna jyōti udaya bhānu kōṭeya mīri svānubhāvada udaya jñāna śūnyadalaḍagida ghanavanēneṃbenu guhēśvarā. ॥

Report an error

ಮತ್ತಂ, ನಿರ್ವಿಕಲ್ಪವೆಂಬ ನಿಜದೊಳಗೈಯ್ಯ ನಿರಹಂಭಾವದಲ್ಲಿ ನಾನಿದ್ದೆನಯ್ಯ. ನೋಡಿಹೆನೆಂದರೆ ನೋಡಲಿಲ್ಲ. ಕೇಳಿಹೆನೆಂದರೆ ಕೇಳಲಿಲ್ಲ. ಘನ ನಿರಂಜನ ಬೆಳಗಿಂದಲಾದುದ ಏನೆಂಬೆನು ಗುಹೇಶ್ವರ ॥

mattaṃ, nirvikalpaveṃba nijadoḷagaiyya nirahaṃbhāvadalli nāniddenayya. nōḍiheneṃdare nōḍalilla. kēḷiheneṃdare kēḷalilla. ghana niraṃjana beḷagiṃdalāduda ēneṃbenu guhēśvara ॥

Report an error

ಮತ್ತಂ, ಘನವ ಕಂಡು ಮನ ವ್ರತ ವಹಿಸಿತ್ತು. ಕಂಡು ಕಂಡು ಮಹ ಘನವಾಯಿತ್ತು. ತತ್ತಲೀಭ್ಯವಾಯಿತ್ತು. ತದುಗತವಾಯಿತ್ತು. ಶಬ್ದ ಮುಗ್ಧವಾಯಿತ್ತು ಗುಹೇಶ್ವರಾ. ॥

mattaṃ, ghanava kaṃḍu mana vrata vahisittu. kaṃḍu kaṃḍu maha ghanavāyittu. tattalībhyavāyittu. tadugatavāyittu. śabda mugdhavāyittu guhēśvarā. ॥

Report an error

ಮತ್ತಂ, ಬಯಲ ಬೆರಗಿನ ಸುಖದ ಸವಿಯ ಬೆರೆದಲ್ಲದೆ ಕಾಣೆ. ಕಾಣೆನೆಂಬ ನುಡಿಗೆಡೆಯ ಕಾಣೆ. ಕುರುಹಳಿದು ಅರಿವ ನೆರೆ ಅರಿದು ಬೆರಿಸಿದೆನೆಂಬ ಬಿರುನುಡಿಯ ನುಡಿಗೆ ನಾಚಿದೆನಯ್ಯ ಗುಹೇಶ್ವರಾ. ॥

mattaṃ, bayala beragina sukhada saviya beredallade kāṇe. kāṇeneṃba nuḍigeḍeya kāṇe. kuruhaḷidu ariva nere aridu berisideneṃba birunuḍiya nuḍige nācidenayya guhēśvarā. ॥

Report an error

ಉಪಮೆ ಉಪಮಿಸಲರಿಯದೆ, ಉಪಮಾತೀತವೆನುತಿದ್ದಿತ್ತು. ಅರಿವು ಅರಿವಿನಲ್ಲಿ ಮರೆಯಲಿದ್ದುದನರಿಯದೆ ಅರಿವು ಪರಪರಾ ಎನ್ನುತ್ತಿದ್ದಿತು. ಧ್ಯಾನ ಧ್ಯಾನಿಸಲರಿಯದೆ ಧ್ಯಾನ ರೂಪಾತೀತನೆಂದು ತದ್ಧ್ಯಾನಗೊಂಡಿತ್ತು. ಜ್ಞಾತೃ ಜ್ಞಾನ ಜ್ಞೇಯವೆಂಬುದಕೆ ಇನ್ನಾವ ಜ್ಞಾನವು ವೇದ ವಿಜ್ಞಾನವೆಂದುದಾಗಿ ತತ್ವಮಸಿ ವಾಕ್ಯಂಗಳೆಲ್ಲವು ಹುಸಿಯಾಗಿ ಹೋದವು. ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತ ವಾದಿಗಳೆಲ್ಲರು ಸಂಹಾರವಾಗಿ ಹೋದರು. ಬಂದೂ ಬಾರದು, ಹೊಂದಿಯೂ ಹೊಂದದು. ನಿಂದ ನಿರಾಳ ಗುಹೇಶ್ವರಾ. ॥

upame upamisalariyade, upamātītavenutiddittu. arivu arivinalli mareyaliddudanariyade arivu paraparā ennuttidditu. dhyāna dhyānisalariyade dhyāna rūpātītaneṃdu taddhyānagoṃḍittu. jñātr̥ jñāna jñēyaveṃbudake innāva jñānavu vēda vijñānaveṃdudāgi tatvamasi vākyaṃgaḷellavu husiyāgi hōdavu. saccidānaṃdaveṃdudāgi dvaitādvaita vādigaḷellaru saṃhāravāgi hōdaru. baṃdū bāradu, hoṃdiyū hoṃdadu. niṃda nirāḷa guhēśvarā. ॥

Report an error

ಮತ್ತಂ, ಗುರುವಿನಿಂದಾದ ಕಾಯವ ಬಿರಿಸಿ ಗುರುವನರಿಯದದೇನಯ್ಯ? ಲಿಂಗದಿಂದಾದ ಜೀವನ ಬೆರಿಸಿ ಲಿಂಗವನರಿಯದದೇನಯ್ಯ? ಜಂಗಮದಿಂದಾದ ಮನವ ಬೆರಿಸಿ ಜಂಗಮವನರಿಯದದೇನಯ್ಯ? ಈ ತ್ರಿವಿಧ ಭಕ್ತಿಯನರುಹಿಸಿಕೊಟ್ಟ ಸಂಗನಬಸವಣ್ಣನ ಬೆರಿಸಿ ನೀನು ನಾನು ಬದುಕಿದೆನು ಕಾಣಾ ಗುಹೇಶ್ವರಾ. ॥

mattaṃ, guruviniṃdāda kāyava birisi guruvanariyadadēnayya? liṃgadiṃdāda jīvana berisi liṃgavanariyadadēnayya? jaṃgamadiṃdāda manava berisi jaṃgamavanariyadadēnayya? ī trividha bhaktiyanaruhisikoṭṭa saṃganabasavaṇṇana berisi nīnu nānu badukidenu kāṇā guhēśvarā. ॥

Report an error

ಮತ್ತಂ, ನಾನೆಂಬುದು ಪ್ರಮಾಣ. ನೀನೆಂಬುದು ಪ್ರಮಾಣ. ಸ್ವಯವೆಂಬುದು ಪ್ರಮಾಣ. ಪರವೆಂಬುದು ಪ್ರಮಾಣ. ಪ್ರಮಾಣವೆಂಬುದು ಪ್ರಮಾಣ ಗುಹೇಶ್ವರನೆಂಬುದು ಅಪ್ರಮಾಣ. ॥

mattaṃ, nāneṃbudu pramāṇa. nīneṃbudu pramāṇa. svayaveṃbudu pramāṇa. paraveṃbudu pramāṇa. pramāṇaveṃbudu pramāṇa guhēśvaraneṃbudu apramāṇa. ॥

Report an error

ಇಂತು ಪ್ರಭುದೇವರು ತಮ್ಮ ಪರಾಮರಿಕೆಯ ಹೇಳಿ ತಾವು ಲಿಂಗೈಕ್ಯವಾಗುವ ಅವಸ್ಥೆಯ ನಿರೂಪಿಸಿದ ವಚನ॥

iṃtu prabhudēvaru tamma parāmarikeya hēḷi tāvu liṃgaikyavāguva avastheya nirūpisida vacana॥

Report an error

ಇಂದುವಿನ ಬೆಳಗಿನ ಸಂಪತ್ತನಿಂಬುಗೊಂಡ ಚಕೋರನ ಧ್ಯಾನವೆಂತಪ್ಪುದು ಅಂತಾಗಿದ್ದೆ ನಾನು. ರಾತ್ರೆಯೊಳ್ಮುಗಿದ ಪದ್ಮಪತ್ರದ ಭ್ರಮರನ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಮಾತೆ ವಿಯೋಗದ ಶಿಸುವಿನ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಸ್ವಪ್ನದಲ್ಲಿ ದೃಷ್ಟ ಕೇಸರಿಯ ಧ್ಯಾನದ ಮದಹಸ್ತಿಯಂತಿಪ್ಪುದು ಅಂತಾಗಿದ್ದೆ ನಾನು. ನೋಟವನಗಲಿದ ನೇಹದ ಧ್ಯಾನವೆಂತಿಪ್ಪುದು ಅಂತಾಗಿದ್ದೆ ನಾನು. ಬ್ರಹ್ಮಪಾಶ ವಿಷ್ಣು ಮಾಯವನತಿಗಳೆದ ಛಲದಲ್ಲಿ ಏನೆಂದರಿಯದಿದ್ದೆ ನಾನು ಗುಹೇಶ್ವರ ಲಿಂಗ ಸಂಗನಬಸವಣ್ಣನೊಳಗೆ ಲೀಯನಹ ಭರದಲ್ಲಿ ಏನೆಂದರಿಯದಿದ್ದೆ ನಾನು.॥

iṃduvina beḷagina saṃpattaniṃbugoṃḍa cakōrana dhyānaveṃtappudu aṃtāgidde nānu. rātreyoḷmugida padmapatrada bhramarana dhyānaveṃtippudu aṃtāgidde nānu. māte viyōgada śisuvina dhyānaveṃtippudu aṃtāgidde nānu. svapnadalli dr̥ṣṭa kēsariya dhyānada madahastiyaṃtippudu aṃtāgidde nānu. nōṭavanagalida nēhada dhyānaveṃtippudu aṃtāgidde nānu. brahmapāśa viṣṇu māyavanatigaḷeda chaladalli ēneṃdariyadidde nānu guhēśvara liṃga saṃganabasavaṇṇanoḷage līyanaha bharadalli ēneṃdariyadidde nānu.॥

Report an error

Illustration: Verse & Place (Project-owned).