Shunya Sampadane 20.p54
ಮತ್ತಂ, ವೇದ ವೇದಾರ್ಥ ಸಾರಾಯದಿಂದೆ ಹದಿನಾರು ಶಾಸ್ತ್ರ ಪುರಾಣಂಗಳಾದವು. ಆ ಪುರಾಣಂಗಳ ಸಾರಾಯವನರಿವುದರಿಂದ ಜ್ಯೋತಿ ಜ್ಞಾನವಾಯಿತ್ತು. ಆ ಜ್ಯೋತಿಜ್ಞಾನದಿಂದೆ ಮತಿಜ್ಞಾನ ಶೃತಜ್ಞಾನ ಮನ ಪರಿಪೂರ್ಣ ಜ್ಞಾನ ಅವಧಿಜ್ಞಾನ ಕೇವಲಜ್ಞಾನ ಇಂತೀ ಪಂಚಜ್ಞಾನವೆ ಪಂಚ ಸ್ಥಲವಾಯಿತ್ತು. ಮತಿಜ್ಞಾನವುಳ್ಳಾತನೆ ಭಕ್ತ. ಶೃತಜ್ಞಾನವುಳ್ಳಾತನೆ ಮಹೇಶ್ವರ. ಮನ ಪರಿಪೂರ್ಣಜ್ಞಾನವುಳ್ಳಾತನೆ ಪ್ರಸಾದಿ. ಅವಧಿಜ್ಞಾನವುಳ್ಳಾತನೆ ಪ್ರಾಣಲಿಂಗಿ. ಕೇವಲ ಜ್ಞಾನವುಳ್ಳಾತನೆ ಶರಣ. ಶರಣ ಸ್ಥಲವೆಂಬುದು ಭವಂ ನಾಸ್ತಿ. ಈ ಪಂಚಜ್ಞಾನಕ್ಕೆ ಮೂಲವಾದ ಜ್ಯೋತಿಜ್ಞಾನವೆ ಪಂಚಸ್ಥಲದಲ್ಲಿ ಏಕಾಕಾರದ ಐಕ್ಯನು. ಇಂತೆಂದುದಾಗಿ ಕೂಡಲ ಚನ್ನಸಂಗಯ್ಯನಲ್ಲಿ ಪಂಚಸ್ಥಲದ ನೆಲೆಯ ಬಲ್ಲ ಐಕ್ಯ ಬಸವಣ್ಣಂಗೆ ನಮೋ ನಮೋ ಎಂಬೆನು.॥
mattaṃ, vēda vēdārtha sārāyadiṃde hadināru śāstra purāṇaṃgaḷādavu. ā purāṇaṃgaḷa sārāyavanarivudariṃda jyōti jñānavāyittu. ā jyōtijñānadiṃde matijñāna śr̥tajñāna mana paripūrṇa jñāna avadhijñāna kēvalajñāna iṃtī paṃcajñānave paṃca sthalavāyittu. matijñānavuḷḷātane bhakta. śr̥tajñānavuḷḷātane mahēśvara. mana paripūrṇajñānavuḷḷātane prasādi. avadhijñānavuḷḷātane prāṇaliṃgi. kēvala jñānavuḷḷātane śaraṇa. śaraṇa sthalaveṃbudu bhavaṃ nāsti. ī paṃcajñānakke mūlavāda jyōtijñānave paṃcasthaladalli ēkākārada aikyanu. iṃteṃdudāgi kūḍala cannasaṃgayyanalli paṃcasthalada neleya balla aikya basavaṇṇaṃge namō namō eṃbenu.॥