Skip to content

Shunya Sampadane 20.p6

ದೇವದೇವ ಮಹಾ ಪ್ರಸಾದ ಅವಧರಿಸು ದೇವ ಎನ್ನ ಬಿನ್ನಪವ. ಕಾಯದ ಮಾಯದ ಸಡಗರದಲ್ಲಿ ಹುಟ್ಟಿಸಿದಿರಿ. ಎನ್ನ ಆಗು ನಿಮ್ಮ ಲೀಲಾ ವಿನೋದ. ಆ ಕಾಯದ ಮಾಯದ ತಲೆಯ ಚಿವುಟಿ ಶ್ರೀಗುರು ಕಾರುಣ್ಯವ ಮಾಡಿ ಗುರು ಲಿಂಗ ಜಂಗಮ ತ್ರಿವಿಧ ಭಕ್ತಿಯ ಘನವ ತೋರಿಸಿ ನಿಮ್ಮ ಪಾದೋದಕ ಪ್ರಸಾದವನಿತ್ತು ರಕ್ಷಿಸಿದಿರಿ. ಅದು ನಿಮ್ಮ ಲೀಲಾ ವಿನೋದ. ಪರವಾದಿ ಬಿಜ್ಜಳ ಒರೆಗಲ್ಲಾದಲ್ಲಿ ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೂವತ್ತಾರು ಕೊಂಡೆಯರ ಪರಿಹರಿಸಿ ಎಂಭತ್ತೆಂಟು ಪವಾಡವ ಮೆರೆದಿರಿ. ಅದು ನಿಮ್ಮ ಲೀಲಾ ವಿನೋದ. ಎನ್ನ ಮನದ ಮಲಿನವ ತೊಳೆಯಲೆಂದು ಬಂದು ಶೂನ್ಯ ಸಿಂಹಾಸನದ ಮೇಲೆ ಮೂರ್ತಿಗೊಂಡು ನಿಮ್ಮ ನಿಜ ಮಹಿಮೆಯನೆಲ್ಲ ಪ್ರಮಥರ ಮುಂದೆ ತೋರಿ ಎನ್ನ ಪಾವನವ ಮಾಡಿ ಷಡುಸ್ಥಲಮಂ ಎನ್ನ ಸರ್ವಾಂಗದಲ್ಲಿ ಪ್ರತಿಷ್ಠಿಸಿ ಎನ್ನ ನಿಮ್ಮಂತೆ ಮಾಡಿದಿರಿ. ಅದು ನಿಮ್ಮ ಲೀಲಾ ವಿನೋದ. ಕೂಡಲ ಸಂಗಮ ದೇವ ಎನ್ನ ವರ್ಮದ ಸಕೀಲವ ನೀವೆ ಬಲ್ಲಿರಾಗಿ ಎನಗೊಮ್ಮೆ ತಿಳುಗಿಕೊಟ್ಟು ಎನ್ನ ನುಳುಹಿಕೊಳ್ಳಾ ಪ್ರಭುವೆ ॥

dēvadēva mahā prasāda avadharisu dēva enna binnapava. kāyada māyada saḍagaradalli huṭṭisidiri. enna āgu nimma līlā vinōda. ā kāyada māyada taleya civuṭi śrīguru kāruṇyava māḍi guru liṃga jaṃgama trividha bhaktiya ghanava tōrisi nimma pādōdaka prasādavanittu rakṣisidiri. adu nimma līlā vinōda. paravādi bijjaḷa oregallādalli munnūraruvattu satta prāṇavanetti mūvattāru koṃḍeyara pariharisi eṃbhatteṃṭu pavāḍava merediri. adu nimma līlā vinōda. enna manada malinava toḷeyaleṃdu baṃdu śūnya siṃhāsanada mēle mūrtigoṃḍu nimma nija mahimeyanella pramathara muṃde tōri enna pāvanava māḍi ṣaḍusthalamaṃ enna sarvāṃgadalli pratiṣṭhisi enna nimmaṃte māḍidiri. adu nimma līlā vinōda. kūḍala saṃgama dēva enna varmada sakīlava nīve ballirāgi enagomme tiḷugikoṭṭu enna nuḷuhikoḷḷā prabhuve ॥

Report an error