Skip to content

(ತೃತೀಯೋಪದೇಶ.) · ಸಿದ್ಧರಾಮಯ್ಯ ದೇವರ ಸಂಪಾದನೆ.

siddharāmayya dēvara saṃpādane.

siddharāmayya dēvara saṃpādane.

The complete original prose, dialogue and poems of teaching 3.

256 passagesKannada with transliteration

An open manuscript beneath an arch for Shunya Sampadane.

ಗುಡಿ ಗೋಪುರ ಕೆರೆಯಾರವೆ| ಗಡಣಗಳಂ ಬಿಡಿಸಿಯಲ್ಲಮ ಪ್ರಭುರಾಯನು॥ ಮೃಡ ಸಿದ್ಧರಾಮಗೊಲವಿಂ| ಸಡಗರದಿ ನಿಜವನಿತ್ತುದೆಂತೆನೆ ಪೇಳ್ವೆಂ ॥

guḍi gōpura kereyārave| gaḍaṇagaḷaṃ biḍisiyallama prabhurāyanu॥ mr̥ḍa siddharāmagolaviṃ| saḍagaradi nijavanittudeṃtene pēḷveṃ ॥

Editor's note: Traditional rubric: ||ಕಂದ||

Report an error

ಅದೆಂತೆಂದೊಡಾ ಪ್ರಭುದೇವರು ಮುಕ್ತಾಯಕ್ಕಗಳ ಪ್ರಲಾಪಮಂ ನಿಲಿಸಿ, ಮಹಾನುಭಾವಮಂ ಬೋಧಿಸಿ, ಅಜಗಣ್ಣ ದೇವರ ನಿಲವನು ಆಕೆಯ ಸರ್ವಾಂಗದೊಳು ಪ್ರತಿಷ್ಠಿಸಿ, ತೋರಿ, ನಿರವಯಲ ಸಮಾಧಿಯೊಳು ನಿಲಿಸಿ, ಅಲ್ಲಿಂ ಸೊನ್ನಲಿಗೆಯ ಪುರಕ್ಕೆ ಅಭಿಮುಖವಾಗಿ ಬರುತ್ತಿರಲತ್ತ ಕೈಲಾಸದಲ್ಲಿ ಪರಮೇಶ್ವರನ ಶುದ್ಧ ಸಾತ್ವಿಕವೇ ಜಗಹಿತಾರ್ಥವಾಗಿ ಬರುತ್ತ, ಮರ್ತ್ಯಕ್ಕೆ ಅವತರಿಸಿ, ಸಿದ್ಧರಾಮೇಶ್ವರನೆಂಬಭಿಧಾನದಿಂದ ಕೆರೆ ಅರವಟಿಗೆ ಗುಡಿ ಗೋಪುರಂಗಳಂ ರಚಿಸುತ್ತಿರಲು, ಅಲ್ಲಿಗೆ ಪ್ರಭುದೇವರು ಬಂದು ಆ ಪುರದ ಜನಪದದ ನೆರವಿಯಂ ಕಂಡು, ವಿಡಂಬಿಸುವ ಪ್ರಸ್ಥಾವದ ವಚನ॥

adeṃteṃdoḍā prabhudēvaru muktāyakkagaḷa pralāpamaṃ nilisi, mahānubhāvamaṃ bōdhisi, ajagaṇṇa dēvara nilavanu ākeya sarvāṃgadoḷu pratiṣṭhisi, tōri, niravayala samādhiyoḷu nilisi, alliṃ sonnaligeya purakke abhimukhavāgi baruttiralatta kailāsadalli paramēśvarana śuddha sātvikavē jagahitārthavāgi barutta, martyakke avatarisi, siddharāmēśvaraneṃbabhidhānadiṃda kere aravaṭige guḍi gōpuraṃgaḷaṃ racisuttiralu, allige prabhudēvaru baṃdu ā purada janapadada neraviyaṃ kaṃḍu, viḍaṃbisuva prasthāvada vacana॥

Report an error

ಧರೆಯ ಮೇಲೊಂದು ಪಿರಿದಪ್ಪ ಸಂತೆಯ ನೆರವಿಗೆ ಬಂದವರನೇನೆಂಬೆನು? ಪರಿಪರಿಯ ಭಂಡದ ವ್ಯವಹಾರದೊಳಗೆ ಕೊಡಲಿಲ್ಲ ಕೊಳಲಿಲ್ಲ. ವೃಥಾ ವಿಲಾಸವಿದೇನೋ? ಅರಿ ಮರುಳೆಂಬ ಶಿವನು ನೆರೆ ಮರುಳೆಂಬ ಜಗವ ಹುಟ್ಟಿಸಿದ ಪರಿಯ ಕಂಡು ಬೆರಗಾದೆ ಗುಹೇಶ್ವರಾ. ॥

dhareya mēloṃdu piridappa saṃteya neravige baṃdavaranēneṃbenu? paripariya bhaṃḍada vyavahāradoḷage koḍalilla koḷalilla. vr̥thā vilāsavidēnō? ari maruḷeṃba śivanu nere maruḷeṃba jagava huṭṭisida pariya kaṃḍu beragāde guhēśvarā. ॥

Editor's note: Original numbered segment 1 in source paragraph 4.

Report an error

ಮತ್ತಂ, ಸಾಗರದೊಳಗಿಪ್ಪ ಪ್ರಾಣಿಗಳು ಮತ್ತೊಂದೆಡೆಯಲ್ಲಿ ಇರಬಲ್ಲವೆ? ಭವಸಾಗರದೊಳಗಿಪ್ಪ ಜೀವಿಗಳಿಗೆ ಅದೇ ಗತಿಯಯಲ್ಲದೆ, ಬೇರೆ ಮತ್ತೊಂದೆಡೆಯುಂಟೆ? ಗುಹೇಶ್ವರನ ಲೀಲೆ ಜಗನ್ಮಯವಾದಡೆ ನಾನು ಬೆರಗಾದೆನು. ॥

mattaṃ, sāgaradoḷagippa prāṇigaḷu mattoṃdeḍeyalli iraballave? bhavasāgaradoḷagippa jīvigaḷige adē gatiyayallade, bēre mattoṃdeḍeyuṃṭe? guhēśvarana līle jaganmayavādaḍe nānu beragādenu. ॥

Editor's note: Original numbered segment 2 in source paragraph 4.

Report an error

ಇಂತು ಪುರ ಜನಂಗಳಂ ನೋಡಿ ವಿಡಂಬಿಸುತ್ತ ಬರಲು, ಮುಂದೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶಿವಾಲಯಂಗಳಂ ಮಾಡುತಿಪ್ಪರಂ ಕಂಡು, ವಿಡಂಬಿಸುವ ಪ್ರಸ್ಥಾವದ ವಚನ॥

iṃtu pura janaṃgaḷaṃ nōḍi viḍaṃbisutta baralu, muṃde lakṣada mēle toṃbattāru sāvira śivālayaṃgaḷaṃ māḍutipparaṃ kaṃḍu, viḍaṃbisuva prasthāvada vacana॥

Report an error

ಕಲ್ಲ ದೇವರ ಮಾಡಿ, ಕಲ್ಲ ಮನೆಯ ಮಾಡಿ, ಆ ಕಲ್ಲು ಕಲ್ಲ ಮೇಲೆ ಕೆಡೆದರೆ, ದೇವರೆತ್ತ ಹೋದರೋ? ಲಿಂಗ ಪ್ರತಿಷ್ಠೆಯ ಮಾಡುವವರಿಗೆ ನಾಯಕ ನರಕ ತಪ್ಪದು ಗುಹೇಶ್ವರಾ. ॥

kalla dēvara māḍi, kalla maneya māḍi, ā kallu kalla mēle keḍedare, dēvaretta hōdarō? liṃga pratiṣṭheya māḍuvavarige nāyaka naraka tappadu guhēśvarā. ॥

Editor's note: Original numbered segment 1 in source paragraph 6.

Report an error

ಮತ್ತಂ, ದೇಹವೆ ದೇಗುಲವಾಗಿರಲು, ಬೇರೆ ಮತ್ತೆ ದೇಗುಲವೇಕಯ್ಯ? ಪ್ರಾಣವೆ ಲಿಂಗವಾಗಿರಲು, ಬೇರೆ ಮತ್ತೆ ಲಿಂಗವೇಕಯ್ಯ? ಹೇಳಲಿಲ್ಲ ಕೇಳಲಿಲ್ಲ. ಗುಹೇಶ್ವರ ನೀನು ಕಲ್ಲಾದರೆ ನಾನೇನಪ್ಪೆನಯ್ಯ? ॥

mattaṃ, dēhave dēgulavāgiralu, bēre matte dēgulavēkayya? prāṇave liṃgavāgiralu, bēre matte liṃgavēkayya? hēḷalilla kēḷalilla. guhēśvara nīnu kallādare nānēnappenayya? ॥

Editor's note: Original numbered segment 2 in source paragraph 6.

Report an error

ಇಂತು ಶಿವಾಲಯ ಪ್ರತಿಷ್ಠೆಯಂ ನೋಡಿ ಹಾಸ್ಯಮಂ ಮಾಡುತ್ತ ಬರಲು ಮುಂದೆ ಕೆರೆಯ ಕಟ್ಟಿಸುವವರ ಕಂಡು ವಿಡಂಬಿಸುವ ಪ್ರಸ್ಥಾವದ ವಚನ॥

iṃtu śivālaya pratiṣṭheyaṃ nōḍi hāsyamaṃ māḍutta baralu muṃde kereya kaṭṭisuvavara kaṃḍu viḍaṃbisuva prasthāvada vacana॥

Report an error

ಅನ್ನವನಿಕ್ಕಿ ನನ್ನಿಯ ನುಡಿದು, ಅರವಟಿಗೆಯ ನಿಕ್ಕಿ ಕೆರೆಯ ಕಟ್ಟಿಸಿದರೆ, ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ, ಶಿವನ ನಿಜವು ಸಾಧ್ಯವಾಗದು. ಗುಹೆಶ್ವರನ ಅರಿದ ಶರಣಂಗೆ ಆವ ಫಲವು ಇಲ್ಲ. ॥

annavanikki nanniya nuḍidu, aravaṭigeya nikki kereya kaṭṭisidare, maraṇadiṃda mēle svarga uṃṭallade, śivana nijavu sādhyavāgadu. guheśvarana arida śaraṇaṃge āva phalavu illa. ॥

Report an error

ಸಿದ್ಧರಾಮಯ್ಯ ದೇವರು ಕೆರೆಯ ಕಟ್ಟಿಸುವದನು ವಿಡಂಬಿಸಿ ನಾನೊಂದು ಕೆರೆಯ ಕಟ್ಟಿಸಿದೆನೆಂದು ಪರಮಾರ್ಥ ಸೂಚಕವಾಗಿ ನಿರೂಪಿಸಿದ ಪ್ರಸ್ಥಾವದ ವಚನ॥

siddharāmayya dēvaru kereya kaṭṭisuvadanu viḍaṃbisi nānoṃdu kereya kaṭṭisideneṃdu paramārtha sūcakavāgi nirūpisida prasthāvada vacana॥

Report an error

ತನುವೆಂಬ ಏರಿಗೆ ಮನವೆಂಬ ಕಟ್ಟೆ, ಆಚಾರವೆಂಬ ಸೋಪಾನ, ಪರಮಾನಂದವೆಂಬ ಜಲವ ತುಂಬಿ, ಕೆರೆಯ ಕಟ್ಟಬಲ್ಲವರನಾರನು ಕಾಣೆ. ನಾನು ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರ ನಿಮ್ಮಾಣೆ. ॥

tanuveṃba ērige manaveṃba kaṭṭe, ācāraveṃba sōpāna, paramānaṃdaveṃba jalava tuṃbi, kereya kaṭṭaballavaranāranu kāṇe. nānu kaṭṭida kere sthiravāyittu guhēśvara nimmāṇe. ॥

Editor's note: Original numbered segment 1 in source paragraph 10.

Report an error

ಮತ್ತಂ, ವಿಡಂಬನ ಕೆರೆಯ ಕಟ್ಟಿಸುವ ಒಡ್ಡಿನ ಪ್ರತಾಪವನೇನೆಂಬೆನಯ್ಯ? ನೆಲವನಗಿದು ಜಲವ ತೆಗೆದೆನೆಂಬ ಬಳಲಿಕೆಯ ನೋಡಾ! ಒಂದ ಕಲ್ಲ ಕಡಿದು ಮತ್ತೊಂದು ಕಲ್ಲಿಗೆ ಭೋಗವ ಕೊಟ್ಟಿಹೆನೆಂಬ ಅಜ್ಞಾನವಿದೇನೋ, ಗುಹೇಶ್ವರಾ? ಈ ಇರವಿನ ಪರಿಗೆ ಬೆರಗಾದೆನು. ॥

mattaṃ, viḍaṃbana kereya kaṭṭisuva oḍḍina pratāpavanēneṃbenayya? nelavanagidu jalava tegedeneṃba baḷalikeya nōḍā! oṃda kalla kaḍidu mattoṃdu kallige bhōgava koṭṭiheneṃba ajñānavidēnō, guhēśvarā? ī iravina parige beragādenu. ॥

Editor's note: Original numbered segment 2 in source paragraph 10.

Report an error

ಇಂತು ಕೆರೆಯ ಕಟ್ಟಿಸುವದನು ವಿಡಂಬಿಸುತ್ತಿರಲು, ಆ ಕೆರೆಯ ಕಟ್ಟುವ ಒಡ್ಡರುಗಳೊಡನೆ ಒಡ್ಡ ರಾಮಯ್ಯನಿದ್ದಹನೆ ಎಂದು ಬೆಸಗೊಂಬ ಪ್ರಸ್ಥಾವದ ವಚನ॥

iṃtu kereya kaṭṭisuvadanu viḍaṃbisuttiralu, ā kereya kaṭṭuva oḍḍarugaḷoḍane oḍḍa rāmayyaniddahane eṃdu besagoṃba prasthāvada vacana॥

Report an error

ಒಳಗೆ ತೊಳೆದು ಜಲವ ತುಂಬಲರಿಯದ ಅರಿ ಮರುಳನೇನಾದ ಹೇಳಿ. ಜಲವ ಸಂಗವ ತೊಳೆಯಲರಿಯದೆ, ಜಲವ ಬಯಸುವನೆಂತಿರ್ದಹ ಹೇಳಿರೆ? ನೆಲನ ಶೋಧಿಸಿ, ನೆಲೆಯನರಿಯದೆ ಕೆರೆಯ ಕಟ್ಟಿಸುವ ಒಡ್ಡರಾಮಯ್ಯನ ಇರವೆಂತು ಹೇಳಿರೆ? ನಮ್ಮ ಗುಹೇಶ್ವರನ ನಿಲವನರಿಯದ ಸಿದ್ಧರಾಮನೆಂತಿರ್ದಹ ಹೇಳಿರೆ? ॥

oḷage toḷedu jalava tuṃbalariyada ari maruḷanēnāda hēḷi. jalava saṃgava toḷeyalariyade, jalava bayasuvaneṃtirdaha hēḷire? nelana śōdhisi, neleyanariyade kereya kaṭṭisuva oḍḍarāmayyana iraveṃtu hēḷire? namma guhēśvarana nilavanariyada siddharāmaneṃtirdaha hēḷire? ॥

Report an error

ಇಂತು ಒಡ್ಡರಾಮಯ್ಯನೇನಾಗಿರ್ದಹನೆಂದು ಪ್ರಭುದೇವರು ಕೆರೆಯ ಕಟ್ಟಿಸುವಂತಹ ಗುಡ್ಡರುಗಳ ಬೆಸಗೊಳಲು, ಅವರೆಲ್ಲರು ಗುರುನಿಂದೆಯ ಕೇಳಿ ಸುಮ್ಮನಿರಬಾರದೆಂದು ಕಲ್ಲು ಗುಂಡು ಬಡಿಗೆಗಳಿಂದಿಟ್ಟು ನೋಯಿಸಲು ಆ ಪ್ರಭುದೇವರ ತಾಗಿದಂತಹ ಗಾಯಗಳೆಲ್ಲವು ಮರಳಿ ಗುಡ್ಡರುಗಳನೆ ತಾಗಲು, ಆ ಪ್ರಸ್ಥಾವಕ್ಕೆ ಪ್ರಭುದೇವರು ಪೇಳಿದ ವಚನ॥

iṃtu oḍḍarāmayyanēnāgirdahaneṃdu prabhudēvaru kereya kaṭṭisuvaṃtaha guḍḍarugaḷa besagoḷalu, avarellaru guruniṃdeya kēḷi summanirabāradeṃdu kallu guṃḍu baḍigegaḷiṃdiṭṭu nōyisalu ā prabhudēvara tāgidaṃtaha gāyagaḷellavu maraḷi guḍḍarugaḷane tāgalu, ā prasthāvakke prabhudēvaru pēḷida vacana॥

Report an error

ಗುರುವೆಂದರಿಯರು, ಹಿರಿಯರೆಂದರಿಯರು, ದೇವರೆಂದರಿಯರು, ಭಕ್ತರೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು, ಬಂದವರನರಿಯರು, ನಿಂದವರ ನಿಲವನರಿಯರು. ಶಿವಶರಣರ ನೋಯಿಸುವ ಪಾತಕರನೇನೆಂಬೆ? ಗುಹೇಶ್ವರ ನಿಮ್ಮ ಮನ ನೊಂದ ನೋವು ಬರಿದೆ ಹೋಗದು. ॥

guruveṃdariyaru, hiriyareṃdariyaru, dēvareṃdariyaru, bhaktareṃdariyaru, liṃgaveṃdariyaru, jaṃgamaveṃdariyaru, baṃdavaranariyaru, niṃdavara nilavanariyaru. śivaśaraṇara nōyisuva pātakaranēneṃbe? guhēśvara nimma mana noṃda nōvu baride hōgadu. ॥

Editor's note: Original numbered segment 1 in source paragraph 14.

Report an error

ಮತ್ತಂ, ಸಹಜವ ನುಡಿದರೆ ಸೇರುವರಿಲ್ಲ ಕಾಣಿರಣ್ಣ. ಅಸಹಜಕ್ಕಲ್ಲದೆ ಲೋಕ ಭಜಿಸದು. ಕೆರೆಯ ಕಟ್ಟಿಸುವವನ ಕಂಡು, ಒಡ್ಡ ರಾಮಯ್ಯನೆಂದರೆ ಮುಳಿಸಿಂದ ಲಿಂಗ ತನುವ ನೋಯಿಸುವರೆ? ನಮ್ಮ ಗುಹೇಶ್ವರ ಲಿಂಗವು ಜಗದೊಳಗೆ ಪರಿಪೂರ್ಣವಾದ ಕಾರಣ ಶರಣನ ನೋವು ಮರಳಿ ಪಾತಕರ ತಾಗಿದರೆ, ಅಲ್ಲಯ್ಯ ನೋಡಿ ನಗುತಿರ್ದನು ॥

mattaṃ, sahajava nuḍidare sēruvarilla kāṇiraṇṇa. asahajakkallade lōka bhajisadu. kereya kaṭṭisuvavana kaṃḍu, oḍḍa rāmayyaneṃdare muḷisiṃda liṃga tanuva nōyisuvare? namma guhēśvara liṃgavu jagadoḷage paripūrṇavāda kāraṇa śaraṇana nōvu maraḷi pātakara tāgidare, allayya nōḍi nagutirdanu ॥

Editor's note: Original numbered segment 2 in source paragraph 14.

Report an error

ಮತ್ತಂ, ತಾಯಿಗಾವ ಸುಖ ದುಃಖಂಗಳು ಬಸಿರ ಶಿಸುವಿಂಗೆ ನೋಡಯ್ಯ! ಶಿವಶರಣರಿಗೆ ಮಾಡಿದ ಸುಖ ದುಃಖಂಗಳು ಶಿವನ ತಾಗುವವು ಕರಣವುಳ್ಳವರು. ಮರಣವಿಲ್ಲದವಂಗೆ ಮುನಿದರೆ ತನುವುಳ್ಳವರ ಮುಟ್ಟುವದಲ್ಲದೆ, ಒಡಲಿಲ್ಲದಾತನ ಮುಟ್ಟಬಲ್ಲುದೆ? ಗುಹೇಶ್ವರ, ಕೆಂಡವ ಗೊರಲೆ ಮುಟ್ಟಬಲ್ಲುದೆ? ॥

mattaṃ, tāyigāva sukha duḥkhaṃgaḷu basira śisuviṃge nōḍayya! śivaśaraṇarige māḍida sukha duḥkhaṃgaḷu śivana tāguvavu karaṇavuḷḷavaru. maraṇavilladavaṃge munidare tanuvuḷḷavara muṭṭuvadallade, oḍalilladātana muṭṭaballude? guhēśvara, keṃḍava gorale muṭṭaballude? ॥

Editor's note: Original numbered segment 3 in source paragraph 14.

Report an error

ಇಂತಪ್ಪ ಅಜ್ಞಾನಿಗಳಿಗೆ ಉಪದೇಶವ ಮಾಡಿದ ಸಿದ್ಧರಾಮಯ್ಯನನು, ಆ ಶಿಷ್ಯರು ಮಾಡಿದ ಪಾಪ ತಾಗುವದೆಂದು ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

iṃtappa ajñānigaḷige upadēśava māḍida siddharāmayyananu, ā śiṣyaru māḍida pāpa tāguvadeṃdu prabhudēvaru nirūpisida prasthāvada vacana॥

Report an error

ಜಗದ ಜನರ ಹಿಡಿದುಕೊಂಡು, ಒಂದು ಉಪದೇಶವ ಮಾಡಿದ ಗುರುವಿಂಗೆ ಆ ಉಪದೇಶವ ಕೊಟ್ಟು ಕೊಂಡ ಮಾರಿಂಗೆ ಹೋಹುದಲ್ಲದೆ, ಅಲ್ಲಿ ನಿಜವಳವಡದು. ತೆರನರಿಯದ ಸಂಸಾರ ಜೀವಿಗಳು ಮಾಡಿದ ದೋಷ ತಮ್ಮ ನುಂಗಿ, ಆ ಗುರುವಿಂಗೆ ಉಪಹತಿಯ ಮಾಡುವುದು, ನೋಡಾ! ಗುಹೇಶ್ವರ ತಾನಿಟ್ಟ ಬೇತಾಳ ತನ್ನನೆ ತಿಂದರೆ ಬೇಕು ಬೇಡೆನಲುಂಟೆ? ॥

jagada janara hiḍidukoṃḍu, oṃdu upadēśava māḍida guruviṃge ā upadēśava koṭṭu koṃḍa māriṃge hōhudallade, alli nijavaḷavaḍadu. teranariyada saṃsāra jīvigaḷu māḍida dōṣa tamma nuṃgi, ā guruviṃge upahatiya māḍuvudu, nōḍā! guhēśvara tāniṭṭa bētāḷa tannane tiṃdare bēku bēḍenaluṃṭe? ॥

Report an error

ಇಂತು ಪ್ರಭುದೇವರ ನೋಯಿಸಿದ ನೋವು ಆ ಗುಡ್ಡಗಳನೆ ಮರಳಿ ತಾಗಲು, ಆ ಘಾಯಂಗಳ ವೇದನೆಯಿಂ ಗೋಳಿಡುತ್ತ, ಓಡಿ ಬಂದು ಸಿದ್ಧರಾಮಯ್ಯ ದೇವರಿಗೆ ಮೊರೆ ಇಟ್ಟು ದೂರಿ ದೇವ ಆವನೋ ಓರ್ವ ಇಂದ್ರ ಜಾಲಕನು ನಿಮ್ಮನು ಬಾಯಿಗೆ ಬಂದಂತೆ ನಿಂದಿಸುತ್ತಿರಲು, ನಾವೆಲ್ಲರು ಗುರುನಿಂದೆಯಂ ಕೇಳಿ ಸುಮ್ಮನೆ ಇರಬಾರದೆಂದು ಕಲ್ಲು ಗುಂಡುಗಳನಿಟ್ಟು ನೋಯಿಸಲು, ಆತನ ತಾಗಿದಂತ ಘಾಯಗಳೆಲ್ಲವು ನಮ್ಮನೆ ತಾಗಿ ದೆಸೆದೆಸೆಯಿಂದೆಲ್ಲರು ನೊಂದು ಗಾಸಿಯಾದೆವೆಂದು ಬಿನೈಸಲು, ಸಿದ್ಧರಾಮ ತಂದೆಗಳು ಬಂದು, ಈತನು ಪ್ರಭುದೇವರೆಂದು ವಿಚಾರಿಸಿ ನೋಡದೆ, ಕ್ರೋಧಕ್ಕೆ ಮನವನೆಡೆಗೊಟ್ಟು, ಆ ಗುಡ್ಡರುಗಳ ನೋವೆ ತನ್ನ ನೋವಾಗಿ, ಕೈಕೊಂಡು ನುಡಿದ ಪ್ರಸ್ಥಾವದ ವಚನ॥

iṃtu prabhudēvara nōyisida nōvu ā guḍḍagaḷane maraḷi tāgalu, ā ghāyaṃgaḷa vēdaneyiṃ gōḷiḍutta, ōḍi baṃdu siddharāmayya dēvarige more iṭṭu dūri dēva āvanō ōrva iṃdra jālakanu nimmanu bāyige baṃdaṃte niṃdisuttiralu, nāvellaru guruniṃdeyaṃ kēḷi summane irabāradeṃdu kallu guṃḍugaḷaniṭṭu nōyisalu, ātana tāgidaṃta ghāyagaḷellavu nammane tāgi desedeseyiṃdellaru noṃdu gāsiyādeveṃdu binaisalu, siddharāma taṃdegaḷu baṃdu, ītanu prabhudēvareṃdu vicārisi nōḍade, krōdhakke manavaneḍegoṭṭu, ā guḍḍarugaḷa nōve tanna nōvāgi, kaikoṃḍu nuḍida prasthāvada vacana॥

Report an error

ಎಲೆಯಯ್ಯ, ನಿಮ್ಮವರ ನೋವೆ ಎನ್ನ ನೋವು ನೋಡಾ. ಕಂಡು ಕಂಡು ಸೈರಿಸಲಾರದೆ ನೊಂದೆನಯ್ಯ| ನಿಮ್ಮವರೊಡನೆ ವರ ಸೊರಸಾಗಿಪ್ಪವರ ಕಂಡರೆ ನಾನವರಿಗೆ ಮುನಿವೆ ನೋಡಾ. ಕಪಿಲಸಿದ್ಧ ಮಲ್ಲಿನಾಥ ನೀನವರಲ್ಲಿಪ್ಪೆಯಾಗಿ॥

eleyayya, nimmavara nōve enna nōvu nōḍā. kaṃḍu kaṃḍu sairisalārade noṃdenayya| nimmavaroḍane vara sorasāgippavara kaṃḍare nānavarige munive nōḍā. kapilasiddha mallinātha nīnavarallippeyāgi॥

Report an error

ಇಂತು ಕ್ರೋಧಿಸಿ ಸಿದ್ಧರಾಮಯ್ಯ ದೇವರು ನೊಸಲ ಕಣ್ಣ ತೆಗೆವ ಪ್ರಸ್ಥಾವದ ವಚನ॥

iṃtu krōdhisi siddharāmayya dēvaru nosala kaṇṇa tegeva prasthāvada vacana॥

Report an error

ಯಕ್ಕೆ ವಿಂಡುಗಳೆಂಬವರು ಮುಕ್ಕಣ್ಣ ನಿಮ್ಮ ಗಣಂಗಳು ಬತ್ತಿದ ಕೆರೆಗೆ ಬಾಯ ಬಿಟ್ಟಂತೆ ಮೊರೆ ಇಟ್ಟು ಬರಲು, ಹೊತ್ತಿದ ಅಂಗಾಲ ಕಿಚ್ಚು ನೆತ್ತಿಗೆ ಮುಟ್ಟಿದರೆ ಚಕ್ಕನೆ ಕಪಿಲಸಿದ್ಧ ಮಲ್ಲಿನಾಥ ನೊಸಲ ಕಣ್ಣ ತೆಗೆದನು. ॥

yakke viṃḍugaḷeṃbavaru mukkaṇṇa nimma gaṇaṃgaḷu battida kerege bāya biṭṭaṃte more iṭṭu baralu, hottida aṃgāla kiccu nettige muṭṭidare cakkane kapilasiddha mallinātha nosala kaṇṇa tegedanu. ॥

Report an error

ಇಂತು ನೊಸಲ ಕಣ್ಣ ತೆಗೆದ ಸಿದ್ಧರಾಮಯ್ಯ ದೇವರು ಆ ನೊಸಲ ಕಣ್ಣಿಗೆ ಬೆಸನಿತ್ತ ಪ್ರಸ್ಥಾವದ ವಚನ॥

iṃtu nosala kaṇṇa tegeda siddharāmayya dēvaru ā nosala kaṇṇige besanitta prasthāvada vacana॥

Report an error

ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ, ಇಂದ್ರನಾದಡಾಗಲಿ, ಚಂದ್ರನಾದಡಾಗಲಿ, ಎಮ್ಮ ಶಿವಶರಣರ ನೋವು ಎಮ್ಮ ನೋವು ನೋಡಾ! ಅವರನೊರಸುವೆ ನುರುಹುವೆನೆಂದು ಕಪಿಲ ಸಿದ್ಧಮಲ್ಲಿಕಾರ್ಜುನ ತನ್ನ ನೊಸಲ ಕಣ್ಣಿಂಗೆ ಬೆಸನ ನಿತ್ತರೆ ನಿಲಬಲ್ಲ ಗರುವರನಾರನು ಕಾಣೆ. ॥

brahmanādaḍāgali, viṣṇuvādaḍāgali, iṃdranādaḍāgali, caṃdranādaḍāgali, emma śivaśaraṇara nōvu emma nōvu nōḍā! avaranorasuve nuruhuveneṃdu kapila siddhamallikārjuna tanna nosala kaṇṇiṃge besana nittare nilaballa garuvaranāranu kāṇe. ॥

Report an error

ಇಂತು ನೊಸಲ ಕಣ್ಣಿನ ಕಿಚ್ಚಿಂಗೆ ಬೆಸನ ನಿತ್ತ ಸಿದ್ಧರಾಮಯ್ಯ ದೇವರು ಆ ನೊಸಲ ಕಣ್ಣಿನ ಮಹಾ ಜ್ವಾಲಾ ಜ್ವಾಲೆಯ ನೋಡಿ ನೋಡಿ, ಆಶ್ಚರ್ಯಬಡುತ್ತಿರ್ದ ಪ್ರಸ್ಥಾವದ ವಚನ॥

iṃtu nosala kaṇṇina kicciṃge besana nitta siddharāmayya dēvaru ā nosala kaṇṇina mahā jvālā jvāleya nōḍi nōḍi, āścaryabaḍuttirda prasthāvada vacana॥

Report an error

ಅಯ್ಯ ನಿಮ್ಮ ಮೂರ್ತಿಯ ನೋಡಿಹೆನೆಂದರೆ ದೃಷ್ಟಿಯಾನವು. ನಿಮ್ಮ ತೇಜವನಾರು ನೋಡಲಂಮರಯ್ಯ! ನಿಮ್ಮ ತೇಜವ ನೋಡುವವರಿಗೆಯುಪಮಿಸಬಾರದು. ನೀವು ಮುನಿದು ನೊಸಲ ಕಣ್ಣ ತೆರೆದರೆ ಅದಕ್ಕೆ ಇದಿರಪ್ಪರು ಇನ್ನಾರು ಹೇಳಯ್ಯ? ಕಪಿಲ ಸಿದ್ಧಮಲ್ಲಿಕಾರ್ಜುನ ನಿಮ್ಮ ತೇಜ ಮೂರು ಲೋಕವ ನುಂಗಿದರೆ, ನಾನು ನೋಡಿ ಕಣ್ಣ ಮುಚ್ಚುತಿರ್ದೆನು. ॥

ayya nimma mūrtiya nōḍiheneṃdare dr̥ṣṭiyānavu. nimma tējavanāru nōḍalaṃmarayya! nimma tējava nōḍuvavarigeyupamisabāradu. nīvu munidu nosala kaṇṇa teredare adakke idirapparu innāru hēḷayya? kapila siddhamallikārjuna nimma tēja mūru lōkava nuṃgidare, nānu nōḍi kaṇṇa muccutirdenu. ॥

Report an error

ಇಂತು ಸಿದ್ಧರಾಮಯ್ಯ ದೇವರ ನೊಸಲ ಕಣ್ಣಿನ ಮಹಾ ಜ್ವಾಲೆಯ ದಾಳಿ ಬ್ರಹ್ಮಾಂಡ ಮಂಡಲಮಂ ಮುಸುಕುತ ಬಪ್ಪುದಂ ಕಂಡು, ಅಲ್ಲಮ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

iṃtu siddharāmayya dēvara nosala kaṇṇina mahā jvāleya dāḷi brahmāṃḍa maṃḍalamaṃ musukuta bappudaṃ kaṃḍu, allama prabhudēvaru nirūpisida prasthāvada vacana॥

Report an error

ಕಾಡಗಿಚ್ಚೆದ್ದರೆ ಅಡವಿಯೆ ಗುರಿ. ನೀರುಗಿಚ್ಚೆದ್ದರೆ ಸಮುದ್ರವೆ ಗುರಿ. ಒಡಲಗಿಚ್ಚೆದ್ದರೆ ಆ ತನುವೇ ಗುರಿ. ಕಾಲಾಗ್ನಿ ಎದ್ದರೆ ಆ ಲೋಕಂಗಳೆ ಗುರಿ. ಶಿವಶರಣರ ಮನದಲ್ಲಿ ಕೋಪಾಗ್ನಿ ಎದ್ದರೆ ನಿಂದಕರೆ ಗುರಿ. ಗುಹೇಶ್ವರ ನಿಮ್ಮ ಮಾಯೆಯ ಹೊಡಗಿಚ್ಚಿಂಗೆ ನಾನು ಗುರಿಯಲ್ಲ ಕೇಳಾ ॥

kāḍagicceddare aḍaviye guri. nīrugicceddare samudrave guri. oḍalagicceddare ā tanuvē guri. kālāgni eddare ā lōkaṃgaḷe guri. śivaśaraṇara manadalli kōpāgni eddare niṃdakare guri. guhēśvara nimma māyeya hoḍagicciṃge nānu guriyalla kēḷā ॥

Report an error

ಇಂತು ಭೂಮಿ ಆಕಾಶ ಮಂಡಲಮಂ ತುಡುಂಕುತಂ ಬಪ್ಪ ಮಹಾ ಜ್ವಾಲೆಯನು ಇದೆಲ್ಲಿಯದೆಂದು ತಿಳಿದು ನೋಡಿ, ಸಿದ್ಧರಾಮಯ್ಯ ದೇವರ ನೊಸಲ ಕಣ್ಣ ಕಿಚ್ಚೆಂದರಿದ ಪ್ರಸ್ಥಾವದ ವಚನ ॥

iṃtu bhūmi ākāśa maṃḍalamaṃ tuḍuṃkutaṃ bappa mahā jvāleyanu idelliyadeṃdu tiḷidu nōḍi, siddharāmayya dēvara nosala kaṇṇa kicceṃdarida prasthāvada vacana ॥

Report an error

ಕಾಯ ಗುಣವಳಿದು, ಮಾಯೆಯ ಮದವ ಮುರಿದು, ಕಾಮಕ್ರೋಧಂಗಳೆಲ್ಲವು ಹೆರೆ ಹಿಂಗಿ ಹೋದವು. ಅಂಗವೆಲ್ಲವು ಲಿಂಗ ಲಿಯ್ಯವಾಗಿ, ಕಂಗಳ ಕಳೆಯ ಬೆಳಗಳಿದು, ಗುಹೇಶ್ವರನ ವಿರಹದುರಿಯೊಳಗೆ ಬೆಂದವರ ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳ ನೋಡಾ. ॥

kāya guṇavaḷidu, māyeya madava muridu, kāmakrōdhaṃgaḷellavu here hiṃgi hōdavu. aṃgavellavu liṃga liyyavāgi, kaṃgaḷa kaḷeya beḷagaḷidu, guhēśvarana virahaduriyoḷage beṃdavara maraḷi suṭṭiheneṃba siddharāmayya maruḷa nōḍā. ॥

Report an error

ಮತ್ತಂ, ತಾಪತ್ರಯದಲ್ಲಿ ಬೆಂದ ಒಡಲ ಹಿಡಿದು ತಂದು, ಜ್ಞಾನವೆಂಬ ಉರಿಗೆ ಆಹುತಿಯ ಕೊಟ್ಟವನ ಜ್ಞಾನವೆಂಬ ಕಾಯವ ಹಿಡಿದು, ನಿಃಶೂನ್ಯವೆಂಬ ತೇಜದಲ್ಲಿ ಸುಟ್ಟವನ, ನಿಃಶೂನ್ಯವೆಂಬ ಶಬ್ದವ ಸುಟ್ಟು ಭಸ್ಮವ ಧರಿಸಿದ ಲಿಂಗೈಕ್ಯನ, ಲೋಕದ ಸ್ಥಿತಿಗತಿಯ ಮರೆದು ನಿರ್ವಾಣದಲ್ಲಿ ನಿಂದವನ, ಗುಹೇಶ್ವರ ಲಿಂಗದಲ್ಲಿ ತನ್ನ ಮರೆದ ಅಲ್ಲಯ್ಯನ, ಕೋಪದ ಕಿಚ್ಚಿನಲ್ಲಿ ಸುಟ್ಟಿಹೆನೆಂಬ ಸಿದ್ಧರಾಮಯ್ಯನನೇನೆಂಬೆನು? ॥

mattaṃ, tāpatrayadalli beṃda oḍala hiḍidu taṃdu, jñānaveṃba urige āhutiya koṭṭavana jñānaveṃba kāyava hiḍidu, niḥśūnyaveṃba tējadalli suṭṭavana, niḥśūnyaveṃba śabdava suṭṭu bhasmava dharisida liṃgaikyana, lōkada sthitigatiya maredu nirvāṇadalli niṃdavana, guhēśvara liṃgadalli tanna mareda allayyana, kōpada kiccinalli suṭṭiheneṃba siddharāmayyananēneṃbenu? ॥

Report an error

ಇಂತು ತನ್ನ ಮಹಾತ್ಮೆಯ ನಿರೂಪಿಸುತ್ತಿರ್ದ ಪ್ರಭುದೇವರು ಸಿದ್ಧರಾಮಯ್ಯ ದೇವರ ಗರ್ವಮಂ ಮುರಿದು, ನೊಸಲ ಕಣ್ಣಿನ ಮಹಾ ಜ್ವಾಲೆಯಂ ತಮ್ಮ ಶ್ರೀಪಾದದೊಳಗಡಗಿಸಿಕೊಂಡ ಪ್ರಸ್ಥಾವದ ವಚನ॥

iṃtu tanna mahātmeya nirūpisuttirda prabhudēvaru siddharāmayya dēvara garvamaṃ muridu, nosala kaṇṇina mahā jvāleyaṃ tamma śrīpādadoḷagaḍagisikoṃḍa prasthāvada vacana॥

Report an error

ನಿಮ್ಮ ಶಕ್ತಿ ಜಗದೊಳಗಿಪ್ಪುದು. ಜಗದ ಶಕ್ತಿ ನಿಮ್ಮೊಳಗಿಪ್ಪುದು. ಜಗಕ್ಕೆ ನಿನಗೆ ಭೇದವಾದುದಕ್ಕೆ ಬೆರಗಾದೆನು. ಅಂದೊಮ್ಮೆ ತ್ರಿಪುರವ ಸುಟ್ಟಲ್ಲಿ ನಾಚಿತ್ತು ಎನ್ನ ಮನವು. ಕಾಮನನುರುಹಿ ಕರ್ಮ ಹರನೆನಿಸಿಕೊಂಡರೆ ನಿನ್ನ ಅಹಂಕಾರವ ನೋಡಿ, ಹೇಸಿತ್ತು ಎನ್ನ ಮನವು. ಕಾಲನ ಸುಟ್ಟು ಬೊಟ್ಟನಿಟ್ಟರೆ, ಎನಗೆ ನಗೆಗೆಡೆಯಾಯಿತ್ತು. ನಿಮ್ಮ ಘನವೆನಗೆ ಗುಹೇಶ್ವರ ನೀ ಮುನಿದು ನೊಸಲ ಕಣ್ಣ ತೆರೆದರೆ, ಎನ್ನಂಗಾಲೊಳಗಡಗಿತ್ತಯ್ಯ ನಿಮ್ಮ ಕೋಪಾ. ॥

nimma śakti jagadoḷagippudu. jagada śakti nimmoḷagippudu. jagakke ninage bhēdavādudakke beragādenu. aṃdomme tripurava suṭṭalli nācittu enna manavu. kāmananuruhi karma haranenisikoṃḍare ninna ahaṃkārava nōḍi, hēsittu enna manavu. kālana suṭṭu boṭṭaniṭṭare, enage nagegeḍeyāyittu. nimma ghanavenage guhēśvara nī munidu nosala kaṇṇa teredare, ennaṃgāloḷagaḍagittayya nimma kōpā. ॥

Report an error

ಇಂತು ನೊಸಲ ಕಣ್ಣಿನ ಮಹಾ ಜ್ವಾಲೆಯನು ಪ್ರಭುದೇವರು ತಮ್ಮಂಗಾಲೊಳಗೆ ಅಡಗಿಸಿಕೊಂಡು ಸಿದ್ಧರಾಮಯ್ಯ ದೇವರ ಶಕ್ತಿಯ ನೋಡಬೇಕೆಂದು ತಾವು ತಮ್ಮ ಅಂಗಾಲೊಳಗೆ ಉರಿಗಣ್ಣ ತೆಗೆದಿಹೆನೆಂದು ಉದ್ಯೋಗಿಸಿದ ಪ್ರಸ್ಥಾವದ ವಚನ॥

iṃtu nosala kaṇṇina mahā jvāleyanu prabhudēvaru tammaṃgāloḷage aḍagisikoṃḍu siddharāmayya dēvara śaktiya nōḍabēkeṃdu tāvu tamma aṃgāloḷage urigaṇṇa tegediheneṃdu udyōgisida prasthāvada vacana॥

Report an error

ಹರನ ಕರುಣವ ಪಡೆದ ಸಾಮರ್ಥ್ಯದ ಬಲುಹಿಂದ ಶಿವಶರಣರೊಡನೆ ಸೆಣಸಿದರೆ ಲೇಸುಂಟೆ? ಅಘಟಿತ ಘಟಿತರಿಗೆ ಅಘಟಿತರುಂಟು ನೋಡಾ! ನೊಸಲಲೊಬ್ಬರು ಕಣ್ಣ ತೆಗೆದರೆ ಅಂಗಾಲಲೊಬ್ಬರು ಕಣ್ಣ ತೆಗೆವರು. ಗುಹೇಶ್ವರನ ಶರಣರು ಉಪಮಾತೀತರು. ॥

harana karuṇava paḍeda sāmarthyada baluhiṃda śivaśaraṇaroḍane seṇasidare lēsuṃṭe? aghaṭita ghaṭitarige aghaṭitaruṃṭu nōḍā! nosalalobbaru kaṇṇa tegedare aṃgālalobbaru kaṇṇa tegevaru. guhēśvarana śaraṇaru upamātītaru. ॥

Report an error

ಈ ಹೀಗೆಂದು ಪ್ರಭುದೇವರು ಅಂಗಾಲ ಕಣ್ಣ ತೆಗೆದ ಪ್ರಸ್ಥಾವದ ವಚನ॥

ī hīgeṃdu prabhudēvaru aṃgāla kaṇṇa tegeda prasthāvada vacana॥

Report an error

ಎರಡು ಕಣ್ಣುಳ್ಳರೆ ಚತುರ್ಭುಜನೆಂಬೆನು. ಮೂರು ಕಣ್ಣುಳ್ಳರೆ ಮಹೇಶ್ವರನೆಂಬೆನು. ಮೈ ಎಲ್ಲ ಕಣ್ಣಾದರೆ ಸದಾಶಿವನೆಂಬೆನು. ಗುಹೇಶ್ವರ ನಿಮ್ಮ ಶರಣಂಗೆ ಅಂಗಾಲ ಕಣ್ಣು ಮೂಡಿದರೆ, ನಿರುಪಮ ಮಹಿಮ ಅಲ್ಲಯ್ಯನೆಂಬೆನು. ॥

eraḍu kaṇṇuḷḷare caturbhujaneṃbenu. mūru kaṇṇuḷḷare mahēśvaraneṃbenu. mai ella kaṇṇādare sadāśivaneṃbenu. guhēśvara nimma śaraṇaṃge aṃgāla kaṇṇu mūḍidare, nirupama mahima allayyaneṃbenu. ॥

Report an error

ಇಂತು ಅಂಗಾಲೊಳಗೆ ಮೂಡಿದ ಕಂಗಳ ತೇಜವ ನೋಡಿ ಪ್ರಭುದೇವರು ಕೊಂಡಾಡುತಿರ್ದ ಪ್ರಸ್ಥಾವದ ವಚನ॥

iṃtu aṃgāloḷage mūḍida kaṃgaḷa tējava nōḍi prabhudēvaru koṃḍāḍutirda prasthāvada vacana॥

Report an error

ನಿಮ್ಮ ತೇಜವ ನೋಡಲೆಂದು ಹೆರೆಸಾರಿ ನೋಡುತ್ತಿರಲು, ಶತಕೋಟಿ ಸೂರ್ಯರು ಮೂಡಿದಂತಿರ್ದುದಯ್ಯ! ಮಿಂಚಿನ ಬಳ್ಳಿಯ ಸಂಚವ ಕಂಡೆ. ಎನಗಿದು ಸೋಜಿಗವಾಯಿತ್ತು. ಗುಹೇಶ್ವರ ನೀನು ಜ್ಯೋತಿರ್ಲಿಂಗನಾದರೆ ಉಪಮಿಸಿ ನೋಡಬಲ್ಲವರಿಲ್ಲಯ್ಯ. ॥

nimma tējava nōḍaleṃdu heresāri nōḍuttiralu, śatakōṭi sūryaru mūḍidaṃtirdudayya! miṃcina baḷḷiya saṃcava kaṃḍe. enagidu sōjigavāyittu. guhēśvara nīnu jyōtirliṃganādare upamisi nōḍaballavarillayya. ॥

Report an error

ಇಂತಪ್ಪ ಅಂಗಾಲ ಕಣ್ಣಿನ ಮಹಾ ಜ್ವಾಲೆಯಂ ಪ್ರಭುದೇವರು ಸಿದ್ಧರಾಮಯ್ಯ ದೇವರ ಬಳಿಗೆ ಹೋಗೆಂದು ಬೆಸಸಿ ಕಳುಹುವ ಪ್ರಸ್ಥಾವದ ವಚನ॥

iṃtappa aṃgāla kaṇṇina mahā jvāleyaṃ prabhudēvaru siddharāmayya dēvara baḷige hōgeṃdu besasi kaḷuhuva prasthāvada vacana॥

Report an error

ಕಾಲಾಗ್ನಿ ಎಂಬ ಕಾಡಗಿಚ್ಚೆದ್ದು ಲೋಕವ ಸುಟ್ಟಿತ್ತೆಂದರೆ, ಶಿವಶರಣರಂಜರು. ಶಶಿಧರ ಮುನಿದು ಬಿಸಿಗಣ್ಣ ತೆರೆದರೆ ಶಿವಶರಣರದನು ಮನಸಿಂಗೆ ತಾರರು. ಅಸಮಾಕ್ಷ ಲಿಂಗವ ತನ್ನ ವಶಕ್ಕೆ ತಂದ ಶರಣರು ಮುನಿದು ಉರಿಗಣ್ಣ ತೆರೆದರೆ, ಚತುರ್ದಶ ಭುವನದೊಳಗೆ ಆರು ಗುರಿ ಇಲ್ಲ. ಗುಹೇಶ್ವರ ನಿಮ್ಮ ಅರುಹಿನ ಬೆಳಗು ಬಿಸಿಯಾದರೆ ಸಿದ್ಧರಾಮಯ್ಯ ದೇವರೆಂಬ ಶಿವಯೋಗಿಯ ಹೃದಯವೆ ಗುರಿ ಎಂದು ಬೆಸಸಿದನಲ್ಲಮಯ್ಯನು. ॥

kālāgni eṃba kāḍagicceddu lōkava suṭṭitteṃdare, śivaśaraṇaraṃjaru. śaśidhara munidu bisigaṇṇa teredare śivaśaraṇaradanu manasiṃge tāraru. asamākṣa liṃgava tanna vaśakke taṃda śaraṇaru munidu urigaṇṇa teredare, caturdaśa bhuvanadoḷage āru guri illa. guhēśvara nimma aruhina beḷagu bisiyādare siddharāmayya dēvareṃba śivayōgiya hr̥dayave guri eṃdu besasidanallamayyanu. ॥

Report an error

ಇಂತು ತೇಜೋಮಯವಾಗಿ ಅಷ್ಟ ದಿಕ್ಕುಗಳನಾಲಿಂಗಿಸುತ್ತ, ಧರೆಯಾಕಾಶವನಾಗುಳಿಸಿ ನುಂಗುತ್ತ, ಸಚರಾಚರಂಗಳ ನುಃಪೆಂದು ಊದುತ್ತ, ಸಪ್ತ ಸಮುದ್ರಂಗಳನಾಪೋಷಣಂಗೊಳ್ಳುತ್ತ, ಭುಗಿತ್ ಭುಗಿಲೆಂಬ ಮಹಾ ರಭಸಕ್ಕೆ ಬ್ರಹ್ಮಾಂಡ ಕಟಾಹಂ ಬೀರುತ್ತ, ಚತುರ್ದಶ ಭುವನವೆಲ್ಲಂ ಪ್ರಳಯಕಾಲ ತುಂಬದ ಮುನ್ನವೆ ಮಹಾ ಪ್ರಳಯ ಬಂದಿತ್ತೆಂದು ಜಗ್ಗನೆ ಉರಿವುತ್ತ, ಹರಿ ಏರಿಂಚಿ ಮೊದಲಾದ ಸಮಸ್ತ ದೇವರ್ಕಳೆಲ್ಲ ಶಿವಧೋ ಎಂದು ಕೈಲಾಸದತ್ತಲೋಡುತ್ತ ಮಿರಲನಂತಮುಖ ಒಂದೇ ಮುಖವಾಗಿ, ಒಂದೆ ಮುಖ ಅನಂತ ಮುಖವಾಗಿ ಬಪ್ಪ ಮಹಾ ತೇಜೋರಾಶಿಯಂ ಕಂಡು, ಸಿದ್ಧರಾಮ ತಂದೆಗಳು ಇದೆಲ್ಲಿಯ ಮಹಾ ಜ್ವಾಲೆಯೆಂದು, ವಿವೇಕದಿಂ ತಿಳಿದು, ಈತನು ಶಿವನಲಾ ಎಂದು ಅರಿದು, ಅನುತಾಪಿಸುತ್ತಿರ್ದ ಪ್ರಸ್ಥಾವದ ವಚನ॥

iṃtu tējōmayavāgi aṣṭa dikkugaḷanāliṃgisutta, dhareyākāśavanāguḷisi nuṃgutta, sacarācaraṃgaḷa nuḥpeṃdu ūdutta, sapta samudraṃgaḷanāpōṣaṇaṃgoḷḷutta, bhugit bhugileṃba mahā rabhasakke brahmāṃḍa kaṭāhaṃ bīrutta, caturdaśa bhuvanavellaṃ praḷayakāla tuṃbada munnave mahā praḷaya baṃditteṃdu jaggane urivutta, hari ēriṃci modalāda samasta dēvarkaḷella śivadhō eṃdu kailāsadattalōḍutta miralanaṃtamukha oṃdē mukhavāgi, oṃde mukha anaṃta mukhavāgi bappa mahā tējōrāśiyaṃ kaṃḍu, siddharāma taṃdegaḷu idelliya mahā jvāleyeṃdu, vivēkadiṃ tiḷidu, ītanu śivanalā eṃdu aridu, anutāpisuttirda prasthāvada vacana॥

Report an error

ಯುಗ ಜುಗ ಮಡಿದಂದು ಧಿಗಿಲು ಭುಗಿಲೆಂದು ಮುಸುಕಿದ ಮಹಾ ಜ್ವಾಲೆ ಇದೇನೋ? ಇದೆನ್ನ ಕಂಗೆ ಗೋಚರವಾಯಿತ್ತಲೆಯಯ್ಯ! ನೀವೆಂದರಿಯೆನಯ್ಯ ! ನಾ ಎನ್ನ ಕಾಯದ ಕಳವಳದಲ್ಲಿ ಇದ್ದೆನಲ್ಲದೆ ನೀವೆಂಬ ಬಗೆದೋರದೆ ಕೆಟ್ಟನೆಲೆಯಯ್ಯ! ಆಳ್ದನೊಡನೆ ಆಳು ಮುನಿದರೆ ಆರು ಕೆಡುವರು ಹೇಳಾ ಕಪಿಲ ಸಿದ್ಧಮಲ್ಲಿಕಾರ್ಜುನಾ?॥

yuga juga maḍidaṃdu dhigilu bhugileṃdu musukida mahā jvāle idēnō? idenna kaṃge gōcaravāyittaleyayya! nīveṃdariyenayya ! nā enna kāyada kaḷavaḷadalli iddenallade nīveṃba bagedōrade keṭṭaneleyayya! āḷdanoḍane āḷu munidare āru keḍuvaru hēḷā kapila siddhamallikārjunā?॥

Editor's note: Original numbered segment 1 in source paragraph 41.

Report an error

ಮತ್ತಂ, ಅರಿಯಬಾರದ ಘನವನರಿದು ಸಾಧಿಸಿದೆ. ಘನಮಹಿಮ ಶರಣರ ಮುಂದೆ ಎನ್ನ ಪ್ರತಾಪ ನಿಲುಕದೆ ಅವರಿಪ್ಪರು. ಲಿಂಗದ ಪ್ರಭೆಯೊಳಗೆ ನಾನಿಪ್ಪೆನು. ಅಹಂಕಾರದ ಪಂಜರದೊಳಗೆ ಎನ್ನ ನೊಸಲ ಕಣ್ಣಿನ ಕಿಚ್ಚುಡಿಗಿ, ಲಜ್ಜಿತನಾಗಿ ಮರಳಿ ಬಂದೆನ್ನ ಸುತ್ತಿ ಮುತ್ತಿತ್ತು. ನಾನು ಶರಣೆಂಬ ಗುರುವಚನ ವಿದಿರೆದ್ದು ಕೊಲುವರೆ ಕಪಿಲ ಸಿದ್ಧಮಲ್ಲಿನಾಥನೊಳಗೆ ಅಳಿದೆನಲ್ಲದೆ ಉಳಿವನಲ್ಲ. ॥

mattaṃ, ariyabārada ghanavanaridu sādhiside. ghanamahima śaraṇara muṃde enna pratāpa nilukade avaripparu. liṃgada prabheyoḷage nānippenu. ahaṃkārada paṃjaradoḷage enna nosala kaṇṇina kiccuḍigi, lajjitanāgi maraḷi baṃdenna sutti muttittu. nānu śaraṇeṃba guruvacana vidireddu koluvare kapila siddhamallināthanoḷage aḷidenallade uḷivanalla. ॥

Editor's note: Original numbered segment 2 in source paragraph 41.

Report an error

ಮತ್ತಂ, ಅನುತಾಪಗೈದ ಪ್ರಸ್ಥಾವದ ವಚನ॥

mattaṃ, anutāpagaida prasthāvada vacana॥

Report an error

ಕಾಲವೇಕೆ ಬಾರದಯ್ಯ! ಇಂದಿನ ಅವಸ್ಥೆಗೆ ಲಿಖಿತವೇಕೆ ತೊಡೆಯದಯ್ಯ! ಇಂದಿನ ಅವಸ್ಥೆಗೆ ಇನಿತು ಲೇಸು ಬಾರದೇಕಯ್ಯ! ಎನ್ನದೇವ ಕಪಿಲ ಸಿದ್ಧಮಲ್ಲಿಕಾರ್ಜುನ ನಿಮಗೆ ಕೂರ್ತು ಅವಸ್ಥೆಯೊಳಗೆ ಲಿಖಿತ ತೊಡೆಯದು, ಪ್ರಾಣ ಬಿಡದು. ಇಂತಿರಿಸದಿರಾ ಎನ್ನ ದೇವರ ದೇವಾ॥

kālavēke bāradayya! iṃdina avasthege likhitavēke toḍeyadayya! iṃdina avasthege initu lēsu bāradēkayya! ennadēva kapila siddhamallikārjuna nimage kūrtu avastheyoḷage likhita toḍeyadu, prāṇa biḍadu. iṃtirisadirā enna dēvara dēvā॥

Editor's note: Original numbered segment 1 in source paragraph 43.

Report an error

ಮತ್ತಂ, ಕಳವಳದ ಕಂದೆರವೆ ಗೋಳು ಮಾಡಿದೆ. ಹಾ! ಹಾ! ಎಲೆ ಅಯ್ಯ, ಎನ್ನ ವಿಕಾರದಲ್ಲಿ ಗುರಿ ಮಾಡಿದಿರಯ್ಯ, ಕೋಪದ ಕಾಡಗಿಚ್ಚಿಗೆ ಅಡವಿಯ ಗುರಿ ಮಾಡಿದಿರಯ್ಯ ಎನ್ನ ಕಪಿಲ ಸಿದ್ಧ ಮಲ್ಲಿಕಾರ್ಜುನಃ ॥

mattaṃ, kaḷavaḷada kaṃderave gōḷu māḍide. hā! hā! ele ayya, enna vikāradalli guri māḍidirayya, kōpada kāḍagiccige aḍaviya guri māḍidirayya enna kapila siddha mallikārjunaḥ ॥

Editor's note: Original numbered segment 2 in source paragraph 43.

Report an error

ಇಂತು ಅನುತಾಪಮಂ ಸಂತೈಸಿಕೊಂಡು, ಪ್ರಭುದೇವರ ಶ್ರೀಪಾದದಲ್ಲಿಗೆ ಅರಿಸಿಕೊಂಡು ಬರುತ್ತಿರ್ಪ ಪ್ರಸ್ಥಾವದ ವಚನ॥

iṃtu anutāpamaṃ saṃtaisikoṃḍu, prabhudēvara śrīpādadallige arisikoṃḍu baruttirpa prasthāvada vacana॥

Report an error

ನಟ್ಟಡವಿಯೊಳಗೆ ಇರುಳು ಹಗಲೆನ್ನದೆ ನಾನು ಅಪ್ಪಾ ಅಯ್ಯ ಎಂದು ಅರಸುತ್ತ ಹೋದರೆ, ನಾನಿದ್ದೇನೆ ಬಾ ಮಗನೆ ಎಂದು ಕರದೆನ್ನ ಕಂಬನಿ ತೊಡೆದು ನಿಜವ ತೋರಿದ ದೇವನ ಪಾದವಿಂದೆನ್ನಲ್ಲಿಗೆ ನಡೆದು ಬಂದರೆ, ನಾನರಿಯದೆ ಮರುಳುಗೊಂಡೆನೆಂದು ಎನ್ನ ಮನದೊಳಗೆಚ್ಚರ ಮಾಡಿದ ಆತನನರಿಸಿಕೊಂಡು ಬಂದೆನ್ನ ಹೃದಯದಲ್ಲಿ ಇಂಬಿಟ್ಟುಕೊಂಬೆ ಎನ್ನ ಕಪಿಲ ಸಿದ್ಧಮಲ್ಲಿಕಾರ್ಜುನ॥

naṭṭaḍaviyoḷage iruḷu hagalennade nānu appā ayya eṃdu arasutta hōdare, nāniddēne bā magane eṃdu karadenna kaṃbani toḍedu nijava tōrida dēvana pādaviṃdennallige naḍedu baṃdare, nānariyade maruḷugoṃḍeneṃdu enna manadoḷageccara māḍida ātananarisikoṃḍu baṃdenna hr̥dayadalli iṃbiṭṭukoṃbe enna kapila siddhamallikārjuna॥

Editor's note: Original numbered segment 1 in source paragraph 45.

Report an error

ಮತ್ತಂ, ತನ್ನನರಸಿ ಬಪ್ಪವರ ತಾನರಸಿ ಬಪ್ಪ ನೋಡಾ! ಎನ್ನ ದೇವನೆಲ್ಲಿದ್ದನಲ್ಲಿಗೆ ಹೋಗಿ ಬಾರಾ ಎಂದು ಮನದೊಳಗೆ ಅಚ್ಚೊತ್ತಿಕೊಂಬೆನೆನ್ನ ಕಪಿಲ ಸಿದ್ಧಮಲ್ಲಿಕಾರ್ಜುನಾ॥

mattaṃ, tannanarasi bappavara tānarasi bappa nōḍā! enna dēvanelliddanallige hōgi bārā eṃdu manadoḷage accottikoṃbenenna kapila siddhamallikārjunā॥

Editor's note: Original numbered segment 2 in source paragraph 45.

Report an error

ಇಂತು ಪ್ರಭುದೇವರನರಸಿಕೊಂಡು ಬರುತ್ತಿಪ್ಪ ಸಿದ್ಧರಾಮಯ್ಯ ದೇವರೊಡನೆ ಗುಡ್ಡಗಳು ದೇವಾ ಆತನು ನಿಂದಿರೆ ನೆಳಲಿಲ್ಲ, ಸುಳಿದರೆ ಹೆಜ್ಜೆ ಇಲ್ಲ. ಕಾಯವಿದ್ದು ಕಾಯವಿಲ್ಲ. ನೀವಿನ್ನು ಆವ ಪರಿಯಲ್ಲಿ ಮುನಿಸ ತಿಳುಹಿತಿಪ್ಪಿರಿ ಎಂದೆನೆ, ಆ ಗುಡ್ಡಗಳೊಡನೆ ನುಡಿವ ಪ್ರಸ್ಥಾವದ ವಚನ॥

iṃtu prabhudēvaranarasikoṃḍu baruttippa siddharāmayya dēvaroḍane guḍḍagaḷu dēvā ātanu niṃdire neḷalilla, suḷidare hejje illa. kāyaviddu kāyavilla. nīvinnu āva pariyalli munisa tiḷuhitippiri eṃdene, ā guḍḍagaḷoḍane nuḍiva prasthāvada vacana॥

Report an error

ಅವನಾದ ಗತಿಯ ನಾನಪ್ಪೆ. ಅವನಿಂದ ನಿಲುವ ನಿಲುವೆನು. ಆತ ಬಿಟ್ಟುದ ಬಿಡುವೆನು. ಅವನ ಬೆಂಬಳಿಯ ಸಲಿಸುವೆ. ಎನ್ನ ಮನಃ ಪ್ರಾಣವನವನ ಮೇಲಿಕ್ಕಿ ನೆರೆವೆ. ಕಪಿಲ ಸಿದ್ಧಮಲ್ಲಿಕಾರ್ಜುನ॥

avanāda gatiya nānappe. avaniṃda niluva niluvenu. āta biṭṭuda biḍuvenu. avana beṃbaḷiya salisuve. enna manaḥ prāṇavanavana mēlikki nereve. kapila siddhamallikārjuna॥

Editor's note: Original numbered segment 1 in source paragraph 47.

Report an error

ಮತ್ತಂ, ಮದಹಸ್ತಿ ಮದಹಸ್ತಿಯ ಹಿಡಿವುದಲ್ಲದೆ, ಮತ್ತೊಂದ ಹಿಡಿಯದು. ಅರೂಪು ಅರೂಪ ಹಿಡಿವುದಲ್ಲದೆ, ಮತ್ತೊಂದ ಹಿಡಿಯದು. ರೂಪಿಲ್ಲದಾತನ ರೂಪಿಗೆ ಹಿಡಿವೆನು ಕಪಿಲ ಸಿದ್ಧಮಲ್ಲಿಕಾರ್ಜುನ॥

mattaṃ, madahasti madahastiya hiḍivudallade, mattoṃda hiḍiyadu. arūpu arūpa hiḍivudallade, mattoṃda hiḍiyadu. rūpilladātana rūpige hiḍivenu kapila siddhamallikārjuna॥

Editor's note: Original numbered segment 2 in source paragraph 47.

Report an error

ಹರಿದು ಹತ್ತುವೆನವನ. ಹತ್ತಿ ಮನಮುಟ್ಟಿ ಹಿಡಿವನವನ. ಮಹಾ ಪ್ರಚಂಡ ಮನದಿಂದೆ ಕಪಿಲಸಿದ್ಧ ಮಲ್ಲಿಕಾರ್ಜುನನ ಹಿಡಿವೆನು ॥

haridu hattuvenavana. hatti manamuṭṭi hiḍivanavana. mahā pracaṃḍa manadiṃde kapilasiddha mallikārjunana hiḍivenu ॥

Editor's note: Original numbered segment 3 in source paragraph 47.

Report an error

ಹೀಗೆಂದು ನುಡಿವ ಸಿದ್ಧರಾಮ ತಂದೆಗಳೊಡನೆ, ಆ ಗುಡ್ಡಗಳು ದೇವಾ ಆತನ ಕೋಪಾರೂಢಿಯಿಂದೊಗೆದ ಅಂಗಾಲ ಕಣ್ಣಿನ ಜ್ವಾಲೆಯ ನಿಲಿಸುವ ಪರಿ ಎಂತನೆ, ಅವರಿಗೆ ಕೊಟ್ಟ ಪ್ರತ್ಯುತ್ತರ.

hīgeṃdu nuḍiva siddharāma taṃdegaḷoḍane, ā guḍḍagaḷu dēvā ātana kōpārūḍhiyiṃdogeda aṃgāla kaṇṇina jvāleya nilisuva pari eṃtane, avarige koṭṭa pratyuttara.

Report an error

ಅಂಗಾಲ ಕೋಪನ ಮನಕ್ಕೆ ತಂದಿಪ್ಪವನ, ಮನದ ಕೋಪವ ಹೃದಯದಲ್ಲಿ ಇಟ್ಟುಕೊಂಡಿಪ್ಪವನ, ಅವನ ಪಾದಕ್ಕೆ ಎನ್ನ ನೊಸಲ ತಂಪು ತಂದು ತಳಿವೆ. ಎನ್ನ ನೊಸಲ ಅಮೃತದಿಂದ ಅವನ ತಿಳುಹುವೆನು ಕಪಿಲ ಸಿದ್ಧ ಮಲ್ಲಿಕಾರ್ಜುನಾ.॥

aṃgāla kōpana manakke taṃdippavana, manada kōpava hr̥dayadalli iṭṭukoṃḍippavana, avana pādakke enna nosala taṃpu taṃdu taḷive. enna nosala amr̥tadiṃda avana tiḷuhuvenu kapila siddha mallikārjunā.॥

Report an error

ಇಂತು ಗುಡ್ಡಗಳೊಡನೆ ಪ್ರಸಂಗಿಸುತ್ತ ಬಂದು ಸಿದ್ಧಮಯ್ಯದೇವರು ಪ್ರಭುದೇವರ ದರುಶನವಾಗಿ ಅವರ ಶ್ರೀ ಮೂರ್ತಿಯ ನೋಡಿ ನೋಡಿ, ಹರುಷಾಶೃಗಳೊಳಗೆ ಓಲಾಡುತ್ತಿರ್ದ ಪ್ರಸ್ಥಾವದ ವಚನ॥

iṃtu guḍḍagaḷoḍane prasaṃgisutta baṃdu siddhamayyadēvaru prabhudēvara daruśanavāgi avara śrī mūrtiya nōḍi nōḍi, haruṣāśr̥gaḷoḷage ōlāḍuttirda prasthāvada vacana॥

Report an error

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯಿದಂತೆ, ಎಲೆ ಅಯ್ಯ ನಿಮ್ಮ ಕಂಡು ಕಂಗಳು ಕಡೆಗೋಡಿವರಿದವಯ್ಯ! ಎನ್ನ ಮನಕ್ಕೆ ಮನ ವೇದ್ಯವಾದರೆ, ಕೈಮರೆದೆನೆಲೆ ಹಾ ಅಯ್ಯ. ಕಪಿಲ ಸಿದ್ಧಮಲ್ಲಿನಾಥನ ಕಂಡ ಸುಖವು ಆರಿಗೆಯು ಇಲ್ಲ.॥

aralugoṃḍa kerege tore baṃdu hāyidaṃte, ele ayya nimma kaṃḍu kaṃgaḷu kaḍegōḍivaridavayya! enna manakke mana vēdyavādare, kaimaredenele hā ayya. kapila siddhamallināthana kaṃḍa sukhavu ārigeyu illa.॥

Editor's note: Original numbered segment 1 in source paragraph 51.

Report an error

ಮತ್ತಂ, ಅಯ್ಯ ನಿಮ್ಮ ಕಂಡು ಕಂಗಳು ನೋಡಲಮ್ಮದೆ ಬೆಚ್ಚಿ ಬೆದರಿದವಯ್ಯ! ನೀನು ಶತಕೋಟಿ ಸೂರ್ಯ ಪ್ರಕಾಶಕೃತೀತನು. ನಿನ್ನ ಕಂಡ ಬಳಿಕ ಕರ್ಮ ಉಂಟೆ ಕಪಿಲ ಸಿದ್ಧಮಲ್ಲಿಕಾರ್ಜುನ?॥

mattaṃ, ayya nimma kaṃḍu kaṃgaḷu nōḍalammade becci bedaridavayya! nīnu śatakōṭi sūrya prakāśakr̥tītanu. ninna kaṃḍa baḷika karma uṃṭe kapila siddhamallikārjuna?॥

Editor's note: Original numbered segment 2 in source paragraph 51.

Report an error

ಇಂತು ಪ್ರಭುದೇವರ ಮೂರ್ತಿಯಂ ಕಂಡು, ಸಿದ್ಧರಾಮಯ್ಯ ದೇವರು ಆ ಪ್ರಭುದೇವರ ಶ್ರೀಪಾದಕ್ಕೆ ನಮಸ್ಕಾರಮಂ ಮಾಡುವ ಪ್ರಸ್ಥಾವದ ವಚನ॥

iṃtu prabhudēvara mūrtiyaṃ kaṃḍu, siddharāmayya dēvaru ā prabhudēvara śrīpādakke namaskāramaṃ māḍuva prasthāvada vacana॥

Report an error

ಎಲೆ ಅಯ್ಯ ಎನ್ನ ಶಿರ ನಿಮ್ಮ ಚರಣವ ಮುಟ್ಟಿದ ಬಳಿಕ, ಎನ್ನಲ್ಲಿ ಗುಣದೋಷವನರಸುವರೆ?ಭೃತ್ಯಾಪರಾಧ ಸ್ವಾಮಿನೋ ದಂಡ ಕಪಿಲಸಿದ್ಧ ಮಲ್ಲಿಕಾರ್ಜುನದೇವ ತ್ರಾಹಿ ತಾಹಿ ಕಾಯಯ್ಯ.॥

ele ayya enna śira nimma caraṇava muṭṭida baḷika, ennalli guṇadōṣavanarasuvare?bhr̥tyāparādha svāminō daṃḍa kapilasiddha mallikārjunadēva trāhi tāhi kāyayya.॥

Report an error

ಇಂತು ನಮಸ್ಕಾರದೊಳು ತನ್ನುವ ಮರೆದು ಸ್ತೋತ್ರಮಂ ಮಾಡುವ ಪ್ರಸ್ಥಾವದ ವಚನ॥

iṃtu namaskāradoḷu tannuva maredu stōtramaṃ māḍuva prasthāvada vacana॥

Report an error

ನಿಮ್ಮ ನಿಜದಂತ್ಯವನಾರು ಬಲ್ಲರಯ್ಯ! ಚತುರ್ದಶ ಭುವನಂಗಳೆಲ್ಲವು ನಿಮ್ಮ ಕರಸ್ಥಲದೊಳಡಗಿಪ್ಪವಯ್ಯ! ನಿಮಗೆಣೆಯಪ್ಪ ದೇವರುಂಟೆ ಕಪಿಲ ಸಿದ್ಧಮಲ್ಲಿಕಾರ್ಜುನಾ?॥

nimma nijadaṃtyavanāru ballarayya! caturdaśa bhuvanaṃgaḷellavu nimma karasthaladoḷaḍagippavayya! nimageṇeyappa dēvaruṃṭe kapila siddhamallikārjunā?॥

Editor's note: Original numbered segment 1 in source paragraph 55.

Report an error

ಮತ್ತಂ, ಹರಿ ಎಂಬಾತ ನಿಮ್ಮ ಚರಣವನರಿಯ. ಬ್ರಹ್ಮನೆಂಬಾತ ನಿಮ್ಮ ಮುಕುಟವನರಿಯ. ಯತಿವ್ರತಿಗಳೆಂಬವರು ನಿಮ್ಮ ಹೊಗಳಲರಿಯರು. ಸಮಸ್ತ ದೇವರ್ಕಳು ನಿಮ್ಮ ರೋಮ ಪ್ರಮಾಣವನರಿಯರು. ಶತಕೋಟಿ ಸೂರ್ಯರು ನಿಮ್ಮ ಬೆಳಗ ಕಾಣಲರಿಯರು. ಕಪಿಲ ಸಿದ್ಧ ಮಲ್ಲಿಕಾರ್ಜುನ ನಾ ನಿಮ್ಮ ಅರಿಯಬಲ್ಲವನೇ ಅಯ್ಯ?॥

mattaṃ, hari eṃbāta nimma caraṇavanariya. brahmaneṃbāta nimma mukuṭavanariya. yativratigaḷeṃbavaru nimma hogaḷalariyaru. samasta dēvarkaḷu nimma rōma pramāṇavanariyaru. śatakōṭi sūryaru nimma beḷaga kāṇalariyaru. kapila siddha mallikārjuna nā nimma ariyaballavanē ayya?॥

Editor's note: Original numbered segment 2 in source paragraph 55.

Report an error

ನೆನಿಸುವೆ ಮರಸುವೆ. ಎನ್ನ ಗುಣದೋಷ ನಿಮ್ಮದು. ಕೇಳಯ್ಯ ಎನ್ನ ಬಿನ್ನಪವ! ನಿಮ್ಮ ನೆನವ ನಾನಲ್ಲ ಕಂಡಯ್ಯ. ನಿಮ್ಮಿಂದ ನಿಮ್ಮ ನೆನೆವೆನು. ಕೃಪೆ ಮಾಡಾ ಕಪಿಲ ಸಿದ್ಧಮಲ್ಲಿಕಾರ್ಜುನ॥

nenisuve marasuve. enna guṇadōṣa nimmadu. kēḷayya enna binnapava! nimma nenava nānalla kaṃḍayya. nimmiṃda nimma nenevenu. kr̥pe māḍā kapila siddhamallikārjuna॥

Editor's note: Original numbered segment 3 in source paragraph 55.

Report an error

ಮತ್ತಂ, ಕೈಗಳ ಬಿಚ್ಚಿ ಬಿಸಾಟರೆ ಬಿಡೆನು. ಮೈಗಳ ಕಡಿದು ಹರಹಿದಡೆ ಬಿಡೆನು ನಿಮ್ಮ ಚರಣವನಿನ್ನು. ಎನ್ನ ತನುವಳಿದರೆ ನಿಮ್ಮ ಜ್ಞಾನ ತನುವಿಂದ ಹೊದ್ದುವೆನು ಕಾಣಾ ಕಪಿಲ ಸಿದ್ಧಮಲ್ಲಿಕಾರ್ಜುನ ॥

mattaṃ, kaigaḷa bicci bisāṭare biḍenu. maigaḷa kaḍidu harahidaḍe biḍenu nimma caraṇavaninnu. enna tanuvaḷidare nimma jñāna tanuviṃda hodduvenu kāṇā kapila siddhamallikārjuna ॥

Editor's note: Original numbered segment 4 in source paragraph 55.

Report an error

ಇಂತು ಸಿದ್ಧರಾಮಯ್ಯ ದೇವರು ಸ್ತೋತ್ರಮಂ ಮಾಡುತ್ತಿರಲು, ಆ ಪ್ರಭುದೇವರು ಆ ಸ್ತೋತ್ರಮಂ ಜರಿದು ತಮ್ಮ ನಿಲವ ಹೇಳುವ ಪ್ರಸ್ಥಾವದ ವಚನ॥

iṃtu siddharāmayya dēvaru stōtramaṃ māḍuttiralu, ā prabhudēvaru ā stōtramaṃ jaridu tamma nilava hēḷuva prasthāvada vacana॥

Report an error

ಕಾಯಗೊಂಡ ಮಾನವರಂತೆ ಕೈಗೆ ಸಿಲುಕ. ಪ್ರಾಣವಿಡಿದ ಜೀವಿಗಳಂತೆ ಎಡೆಯಾಡದಿಪ್ಪ. ಕಾಂಬಡೆ ಕಂಗಳತೆ ಇಲ್ಲ. ಕೇಳುವಡೆ ಕಿವಿಗಳತೆ ಇಲ್ಲ. ಗುಹೇಶ್ವರನ ನಿಲವು ಬರಿಯ ಸ್ತೋತ್ರಕ್ಕೆ ನಿಲುಕದು ಕಾಣಾ ಸಿದ್ಧರಾಮಯ್ಯ.॥

kāyagoṃḍa mānavaraṃte kaige siluka. prāṇaviḍida jīvigaḷaṃte eḍeyāḍadippa. kāṃbaḍe kaṃgaḷate illa. kēḷuvaḍe kivigaḷate illa. guhēśvarana nilavu bariya stōtrakke nilukadu kāṇā siddharāmayya.॥

Editor's note: Original numbered segment 1 in source paragraph 57.

Report an error

ಮತ್ತಂ, ಕಣ್ಣಿಂಗೆ ಕಾಂಬಡೆ ರೂಪಲ್ಲ. ಕೈಗೆ ಸಿಲುಕುವರೆ ದೇಹಿಯಲ್ಲ. ನಡೆದಡೆ ಗಮನಿಯಲ್ಲ. ನುಡಿದಡೆ ವಾಚಾಳನಲ್ಲ. ನಿಂದಿಸಿದವಗೆ ಹಗೆಯಲ್ಲ. ಹೊಗಳಿದವಗೆ ಕೆಳೆಯಲ್ಲ. ಗುಹೇಶ್ವರನ ನಿಲವು ಮಾತಿನ ಮಾಲೆಗೆ ಸಿಲುಕುವುದೆ? ಸಿದ್ಧರಾಮಯ್ಯ ನೀನು ಮರುಳಾದೆಯಲ್ಲ.॥

mattaṃ, kaṇṇiṃge kāṃbaḍe rūpalla. kaige silukuvare dēhiyalla. naḍedaḍe gamaniyalla. nuḍidaḍe vācāḷanalla. niṃdisidavage hageyalla. hogaḷidavage keḷeyalla. guhēśvarana nilavu mātina mālege silukuvude? siddharāmayya nīnu maruḷādeyalla.॥

Editor's note: Original numbered segment 2 in source paragraph 57.

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಸಿದ್ಧರಾಮಯ್ಯದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu prabhudēvaru nirūpisalu, siddharāmayyadēvaru koṭṭa pratyuttara.

Report an error

ಸ್ತೋತ್ರವೆಂಬವು ನೀ ಮಾಡಲಾದವು ಕಂಡಯ್ಯ! ಮೂರ್ತಿ ಎಂಬುದು ನೀ ನೆನೆದಡಾದುದು ಕಂಡಯ್ಯ! ಆ ಮೂರ್ತಿ ಎಂಬುದು ನಿನ್ನ ಸ್ವಾನುಭಾವ ಕಂಡಯ್ಯ! ಎನ್ನ ಹೃತ್ಕಮಲದೊಳಗೆ ಹುಟ್ಟುವ ಸ್ಮರಣೆ ನಿನ್ನ ಗತಿ ನೋಡಯ್ಯ! ಕಪಿಲ ಸಿದ್ಧಮಲ್ಲಿನಾಥಯ್ಯ ನೀನು ಸ್ತೋತ್ರಪ್ರಿಯನಲ್ಲದೆ ಇದ್ದರೆ, ಬಾಣಮಯೂರ ಹಲಾಯುಧಂಗೆ ಒಲಿದೆ ಎಂತು ಹೇಳಯ್ಯ. ॥

stōtraveṃbavu nī māḍalādavu kaṃḍayya! mūrti eṃbudu nī nenedaḍādudu kaṃḍayya! ā mūrti eṃbudu ninna svānubhāva kaṃḍayya! enna hr̥tkamaladoḷage huṭṭuva smaraṇe ninna gati nōḍayya! kapila siddhamallināthayya nīnu stōtrapriyanallade iddare, bāṇamayūra halāyudhaṃge olide eṃtu hēḷayya. ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu siddharāmayya dēvaru binnaisalu, adakke prabhudēvaru koṭṭa pratyuttara.

Report an error

ವಚನದ ರಚನೆ ಎಂಬ ಮಾತಿನ ಬಣಬೆಯ ಪರಿಯಲ್ಲ ನೋಡಾ! ಹೊಗಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದಶಾಸ್ತ್ರ ಶೃತಿಸ್ಮೃತಿಗಳು ಹೊಗಳಿ ಕಾಣವೆಂಬುದ ಗುಹೇಶ್ವರ ಸಾಕ್ಷಿಯಾಗಿ, ಮೂರು ಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯ. ॥

vacanada racane eṃba mātina baṇabeya pariyalla nōḍā! hogaḷi kaṃḍavarellaru mūrtigoḷagādaru. vēdaśāstra śr̥tismr̥tigaḷu hogaḷi kāṇaveṃbuda guhēśvara sākṣiyāgi, mūru lōka balludu kāṇā siddharāmayya. ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃdu prabhudēvaru nirūpisalu, adakke siddharāmayya dēvara binnaha.

Report an error

ವೇದಪ್ರಿಯನಲ್ಲಯ್ಯ ನೀನು, ಶಾಸ್ತ್ರಪ್ರಿಯನಲ್ಲಯ್ಯ ನೀನು, ನಾದಪ್ರಿಯನಲ್ಲಯ್ಯ ನೀನು, ಸ್ತೋತ್ರಪ್ರಿಯನಲ್ಲಯ್ಯ ನೀನು, ಮುಕ್ತಿಪ್ರಿಯನಲ್ಲಯ್ಯ ನೀನು, ಯುಕ್ತಿಪ್ರಿಯನಲ್ಲಯ್ಯ ನೀನು. ನೀನು ಇವೆಲ್ಲಕ್ಕ ಸಾಧ್ಯ ಕಂಡಯ್ಯ! ನೀನು ಭಕ್ತಿಪ್ರಿಯನೆಂದು ಮರೆಹೊಕ್ಕೆ ಕಾಯಯ್ಯ ನೀನು ಕಪಿಲ ಸಿದ್ಧಮಲ್ಲಿಕಾರ್ಜುನ.॥

vēdapriyanallayya nīnu, śāstrapriyanallayya nīnu, nādapriyanallayya nīnu, stōtrapriyanallayya nīnu, muktipriyanallayya nīnu, yuktipriyanallayya nīnu. nīnu ivellakka sādhya kaṃḍayya! nīnu bhaktipriyaneṃdu marehokke kāyayya nīnu kapila siddhamallikārjuna.॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ನೀನು ಭಕ್ತಿಪ್ರಿಯನೆಂದು ನಂಬಿದೆನೆಂದು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu siddharāmayya dēvaru nīnu bhaktipriyaneṃdu naṃbideneṃdu binnaisalu, adakke prabhudēvaru koṭṭa pratyuttara.

Report an error

ಭಕ್ತಿ ಯುಕ್ತಿಯನಾರು ಬಲ್ಲರು? ಬಲ್ಲವರನಾರನು ಕಾಣೆ. ತನ್ನ ಮರೆದು ಇದಿರ ಹರಿದು ಇರಬಲ್ಲರೆ, ಆತ ಭಕ್ತ. ಆ ಶಿವಭಕ್ತಂಗೆ ಶಿವನೊಲಿವನು. ನುಡಿಯಲ್ಲಿ ಭಕ್ತಿಯನಾಡಿ ನಡೆಯಲಿಲ್ಲದಿರ್ದಡೆ ಕಡೆಮುಟ್ಟ. ಶಿವನೊಲಿವುದು ಹುಸಿ, ಮರೆದು, ಕೋಪದುರಿಯನುಗುಳಿ ಅರಿದು ಬಂದೆರಗಿದೆನೆಂಬ ನುಡಿಗೆ ಒಲಿವನೇ ನಮ್ಮ ಗುಹೇಶ್ವರಲಿಂಗವು? ॥

bhakti yuktiyanāru ballaru? ballavaranāranu kāṇe. tanna maredu idira haridu iraballare, āta bhakta. ā śivabhaktaṃge śivanolivanu. nuḍiyalli bhaktiyanāḍi naḍeyalilladirdaḍe kaḍemuṭṭa. śivanolivudu husi, maredu, kōpaduriyanuguḷi aridu baṃderagideneṃba nuḍige olivanē namma guhēśvaraliṃgavu? ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃdu prabhudēvaru nirūpisalu, adakke siddharāmayya dēvara binnaha.

Report an error

ಎನ್ನ ಕೋಪವೆಂಬುದು ಎನ್ನ ಕಣ್ಣು ನೋಡಯ್ಯ! ನಾನೇತರೊಗೇನು ಹೇಳಯ್ಯ! ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವೇತರದು ಹೇಳಯ್ಯ ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯ ! ಎನ್ನಸಟೆಯ ಭಕ್ತಿಯು ನಿಮ್ಮ ರೂಪು ಕಂಡಯ್ಯ ! ಎನಗೆ ಬೇರೆ ಸ್ವತಂತ್ರ ಉಂಟೆ ಕಪಿಲ ಸಿದ್ಧಮಲ್ಲಿನಾಥಾ ?॥

enna kōpaveṃbudu enna kaṇṇu nōḍayya! nānētarogēnu hēḷayya! nimma jñānada tējada muṃde ennarivētaradu hēḷayya ! enna diṭada bhakti nimma rūpu kaṃḍayya ! ennasaṭeya bhaktiyu nimma rūpu kaṃḍayya ! enage bēre svataṃtra uṃṭe kapila siddhamallināthā ?॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu siddharāmayya dēvaru binaisalu, adakke prabhudēvaru koṭṭa pratyuttara.

Report an error

ಕೋಪ ತಾಪವೆಂಬುದು ಅರಿವಿನೊಳಗೆ. ಭಕ್ತಿ ಮುಕ್ತಿ ಎಂಬುದು ನಿತ್ಯದೊಳಗೆ. ಭಾವದ ಬಗೆಗೆ ಬಣ್ಣವಿಟ್ಟುಕೊಂಡರೆ ನಿರ್ಭಾವಿಕಂ ಗೆಲಿದು ಸಹಜವಹುದೆ? ಬಂದ ಶರಣರ ನಿಲವನರಿದು, ಸಂದುಸಂಶಯವನಳಿದು ನಂಬದಿದ್ದರೆ ಹಿಂದುಮುಂದಾಗಿ ಹೋಹನು ಕಾಣಾ ನಮ್ಮ ಗುಹೇಶ್ವರಲಿಂಗವು. ॥

kōpa tāpaveṃbudu arivinoḷage. bhakti mukti eṃbudu nityadoḷage. bhāvada bagege baṇṇaviṭṭukoṃḍare nirbhāvikaṃ gelidu sahajavahude? baṃda śaraṇara nilavanaridu, saṃdusaṃśayavanaḷidu naṃbadiddare hiṃdumuṃdāgi hōhanu kāṇā namma guhēśvaraliṃgavu. ॥

Report an error

ಈ ಹೀಗೆಂದು ಪ್ರಭುವೇವರು ಮುನಿದು ಹಿಂದು ಮುಂದಾಗಲು ಸಿದ್ಧರಾಮ ತಂದೆಗಳು ಅಡ್ಡ ಬಿದ್ದು ಬಿನೈಸುವ ಪ್ರಸ್ಥಾವದ ವಚನ॥

ī hīgeṃdu prabhuvēvaru munidu hiṃdu muṃdāgalu siddharāma taṃdegaḷu aḍḍa biddu binaisuva prasthāvada vacana॥

Report an error

ಹಿರಿದು ಆಗ್ರಹದಿಂದೆ ನೀನೆನ್ನ ಮೇಲಿಕ್ಕೆ ಒಲ್ಲೆ ಸಾರೆಂದರೆ ಹೋಹೆ ಕಾಣಾ ಅಯ್ಯ! ಕೈಯ್ಯ ಹಿಡಿದರೆ ಅಂತು ಮುರುಚುವೆ. ಎನ್ನ ಉರದಲಪ್ಪಿ ಹಿಡಿದಡೆಂತು ಮುರುಚುವೆ? ನೀನಿಂತು ಹೋಹ ಪರಿಯ ನಿಲಿಸುವೆನು ಕೇಳ ಗಡಾ! ಸೂಕ್ಷ್ಮತನುವಿನಲ್ಲಿ ಹಿಡಿದರೆ, ಎಂತು ಮುರುಚುವೆ ಹೇಳಾ, ಕಪಿಲ ಸಿದ್ಧಮಲ್ಲಿಕಾರ್ಜುನಾ? ॥

hiridu āgrahadiṃde nīnenna mēlikke olle sāreṃdare hōhe kāṇā ayya! kaiyya hiḍidare aṃtu murucuve. enna uradalappi hiḍidaḍeṃtu murucuve? nīniṃtu hōha pariya nilisuvenu kēḷa gaḍā! sūkṣmatanuvinalli hiḍidare, eṃtu murucuve hēḷā, kapila siddhamallikārjunā? ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu siddharāmayya dēvaru binnaisalu, adakke prabhudēvaru koṭṭa pratyuttara.

Report an error

ಅಂಗದಲಪ್ಪಿದೆನೆಂದರೆ ಸಿಲುಕದು. ಪ್ರಾಣದಲಿ ಅಪ್ಪಿದೆನೆಂದರೆ ಸಿಲುಕದು, ಭಾವದಲ್ಲಿ ಅಪ್ಪಿದೆನೆಂದರೆ ಸಿಲುಕದು. ಸೂಕ್ಷ್ಮ ತನುವಿನ ಮನದ ಕೊನೆಯ ಮೇಲೆ ಅಪ್ಪಿದೆನೆಂದರೆ ಸಿಲುಕದು. ಭಾವಾತೀತವಾದ ನಿರಾಕಾರದ ಘನವು ಸುಜ್ಞಾನಮುಖಕ್ಕಸಾಧ್ಯನೋಡಾ! ಗುಹೇಶ್ವರನ ಶರಣರ ನಿನ್ನಾವ ಪರಿಯಲ್ಲಿ ತಡೆದು ನಿಲಿಸುವೆ ಹೇಳಾ ಸಿದ್ಧರಾಮಯ್ಯ? ॥

aṃgadalappideneṃdare silukadu. prāṇadali appideneṃdare silukadu, bhāvadalli appideneṃdare silukadu. sūkṣma tanuvina manada koneya mēle appideneṃdare silukadu. bhāvātītavāda nirākārada ghanavu sujñānamukhakkasādhyanōḍā! guhēśvarana śaraṇara ninnāva pariyalli taḍedu nilisuve hēḷā siddharāmayya? ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

ī hīgeṃdu prabhudēvaru nirūpisalu, adakke siddharāmayyadēvaru binnaisida prasthāvada vacana॥

Report an error

ಎನ್ನನಾಗಳೆ ಬಂದಿವಿಡಿದೆ ಗಡಾ ನೀನು. ನಮ್ಮ ಹಿಡಿವರೆ ಹಿಡಿವ ತನುವಿರೆ ತನು ಬೇರಾದವರು ನಿಮ್ಮ ಹಿಡಿವರೆ ಹಿಡಿವರು. ಕೈಯ್ಯರೆ ಕೈ ಬೇರಾದವರು ನಿಮ್ಮ ಹಿಡಿವರೆ ಹಿಡಿವರು. ಕಣ್ಣಿರೆ ಕಣ್ಣು ಬೇರಾದವರು ಇನಿಸುಳ್ಳರು ಮೊದಲಾಗಿ ನಿಮ್ಮ ಹಿಡಿಯಲಾರರು. ಕಪಿಲ ಸಿದ್ಧಮಲ್ಲಿನಾಥ ನಿಮ್ಮ ಹಿಡಿದು ತಡೆಯದವನೇತರವನಲ್ಲ. ಕರುಣದಿ ಬಾರಾ ಎನ್ನ ದೇವರ ದೇವಾ. ॥

ennanāgaḷe baṃdiviḍide gaḍā nīnu. namma hiḍivare hiḍiva tanuvire tanu bērādavaru nimma hiḍivare hiḍivaru. kaiyyare kai bērādavaru nimma hiḍivare hiḍivaru. kaṇṇire kaṇṇu bērādavaru inisuḷḷaru modalāgi nimma hiḍiyalāraru. kapila siddhamallinātha nimma hiḍidu taḍeyadavanētaravanalla. karuṇadi bārā enna dēvara dēvā. ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನಪಂಗೈದು ತಮ್ಮ ಮಠಕ್ಕೆ ಬಿಜಯಂಗೈವುದು ಎಂದೆನಲು, ಪ್ರಭುದೇವರು ನಿಮ್ಮ ಮಠವೆಂದೇನು? ಇದ್ದ ಠಾವಿನಲ್ಲಿದ್ದು ಭಕ್ತಿಯ ಮಾಡಿ, ಪರಿಣಾಮಿಸುವದಲ್ಲದೆ, ನಾವತ್ತ ಬರಲಾರೆವೆಂದು, ನಿರೂಪಿಸಿದ ಪ್ರಸ್ಥಾವದ ವಚನ॥

ī hīgeṃdu siddharāmayya dēvaru binnapaṃgaidu tamma maṭhakke bijayaṃgaivudu eṃdenalu, prabhudēvaru nimma maṭhaveṃdēnu? idda ṭhāvinalliddu bhaktiya māḍi, pariṇāmisuvadallade, nāvatta baralāreveṃdu, nirūpisida prasthāvada vacana॥

Report an error

ಗತಿಗೆಟ್ಟು, ಧೃತಿಗೆಟ್ಟು, ಮತಿಗೆಟ್ಟವ ನಾನೈಯ್ಯ. ನಡೆವರೆ ಶಕ್ತಿ ಇಲ್ಲ. ನುಡಿವರೆ ಜಿಹ್ವೆ ಇಲ್ಲ. ಇದಿರಲೊಬ್ಬರ ಉಪಚಾರ ಸೇರದು ನೋಡಾ! ಎಮಗೆ ಬಂದ ಬರವನರಿದು, ನಿಂದ ನಿಲವನರಿದು, ಕೂಡ ಬಲ್ಲರೆ ಶರಣಂಗೆ ಬೇರೊಂದೇಕಾಂತವೆಂಬ ಸಂದೇಹ ಉಂಟೆ? ತೆರಹಿಲ್ಲದ ಘನವನೊಳಕೊಂಡ ಬಳಿಕ ಬರಲೆಡೆಯುಂಟೆ ನಮ್ಮ ಗುಹೇಶ್ವರ ಲಿಂಗಕ್ಕೆ? ॥

gatigeṭṭu, dhr̥tigeṭṭu, matigeṭṭava nānaiyya. naḍevare śakti illa. nuḍivare jihve illa. idiralobbara upacāra sēradu nōḍā! emage baṃda baravanaridu, niṃda nilavanaridu, kūḍa ballare śaraṇaṃge bēroṃdēkāṃtaveṃba saṃdēha uṃṭe? terahillada ghanavanoḷakoṃḍa baḷika baraleḍeyuṃṭe namma guhēśvara liṃgakke? ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ. ಭಕ್ತವತ್ಸಲನೆನಿಸಿ ಇಲ್ಲಿಯ ಪರಿಯಂತರ ಬಿಜಯಂಗೈದು, ಇನ್ನು ಬಾರೆನೆಂಬುದಕ್ಕೆ ಕಾರಣವೇನು ಹೇಳೆಂದು ಬೆಸಗೊಂಬ ಪ್ರಸ್ಥಾವದ ವಚನ॥

ī hīgeṃdu prabhudēvaru nirūpisalu, adakke siddharāmayya dēvara binnaha. bhaktavatsalanenisi illiya pariyaṃtara bijayaṃgaidu, innu bāreneṃbudakke kāraṇavēnu hēḷeṃdu besagoṃba prasthāvada vacana॥

Report an error

ತೆರಹಿಲ್ಲದ ಘನ ತೆರಹಿಲ್ಲದ ಕುರುಹಿಂಗೆ ಬಂದ ಕಾರಣವೇನು ಹೇಳಾ ಎಲೆ ಅಯ್ಯ? ಭಕ್ತಿಕಾರಣದ ಇಚ್ಛೆಗೆ ಬಂದ ಬಳಿಕ ಉಪಚಾರಕ್ಕೆ ತೆರಹುಂಟೆ? ಕಪಿಲ ಸಿದ್ಧಮಲ್ಲಿನಾಥ ಬಿಜಯಮಾಡು ಕರುಣೆಗಳರಸಾ ॥

terahillada ghana terahillada kuruhiṃge baṃda kāraṇavēnu hēḷā ele ayya? bhaktikāraṇada icchege baṃda baḷika upacārakke terahuṃṭe? kapila siddhamallinātha bijayamāḍu karuṇegaḷarasā ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

ī hīgeṃdu siddharāmayya dēvaru binnaisalu, adakke prabhudēvaru koṭṭa pratyuttara.

Report an error

ಭೃತ್ಯನಿದ್ದ ಠಾವಿಂಗೆ ಕರ್ತು ಬಂದರೆ ಅತ್ತಿತ್ತ ಹರಿಯದೆ, ನಂಬ ಬೇಕು ನೋಡಾ! ಕರ್ತನ ಕಂಡು ಭೃತ್ಯನುರಿಯನುಗುಳಿದರೆ, ಬಳಿಕ ಕರ್ತೃತನ ಭೃತ್ಯಭಾವಕ್ಕೆ ಸಂಬಂಧವೇನು? ತಪ್ಪಿ ತಪ್ಪಿ ತಿದ್ದಿಕೊಂಡಿಹೆನೆಂದರೆ ಹಸನಾಗಬಲ್ಲುದೆ? ಗುಹೇಶ್ವರ ಲಿಂಗನ ಶರಣನಾರೆಂಬುದ ನೀನೆತ್ತ ಬಲ್ಲೆ ಹೋಗಾ ಮರುಳ ಸಿದ್ಧರಾಮಾ? ॥

bhr̥tyanidda ṭhāviṃge kartu baṃdare attitta hariyade, naṃba bēku nōḍā! kartana kaṃḍu bhr̥tyanuriyanuguḷidare, baḷika kartr̥tana bhr̥tyabhāvakke saṃbaṃdhavēnu? tappi tappi tiddikoṃḍiheneṃdare hasanāgaballude? guhēśvara liṃgana śaraṇanāreṃbuda nīnetta balle hōgā maruḷa siddharāmā? ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಸಿದ್ಧರಾಮಯ್ಯ ದೇವರು ನೊಂದು ಅತ್ಯಂತ ಭೀತಿಯನೈದಿ, ಬಿನೈಸಿದ ಪ್ರಸ್ಥಾವದ ವಚನ॥

ī hīgeṃdu prabhudēvaru nirūpisalu, siddharāmayya dēvaru noṃdu atyaṃta bhītiyanaidi, binaisida prasthāvada vacana॥

Report an error

ಎನ್ನ ಒಳಗು ಮಾಡಿ ನೋಡುವಿರಿ. ಎನ್ನಲ್ಲೇನುಂಟಯ್ಯ? ನುಡಿ ಇಲ್ಲದ ಭವ ನೀನು ನುಡಿಗಲಿತನೆಂದರೆ, ನಿಮ್ಮ ನೊಡಂಬಡಿಸಲಾನು ಸಮರ್ಥನೆ? ಅನಂತ ವೇದಂಗಳೆಲ್ಲವು ನಿಮ್ಮ ಮುಂದೆ ಉಸುರಿಕ್ಕಲಮ್ಮದೆ ಮೂಗರಾಗಿದ್ದವು. ನಿಮಗಾನಿದಿರುತ್ತರ ಕೊಟ್ಟು ಕೆಟ್ಟಕೇಡಿಂಗೆ ಏನೆಂಬೆನೆಲೆಯಯ್ಯ? ಕಪಿಲ ಸಿದ್ಧಮಲ್ಲಿಕಾರ್ಜುನ ನಾನುಭಯ ಭ್ರಷ್ಟನೆಂಬುದ ನೀವೇ ಬಲ್ಲಿರಿ. ॥

enna oḷagu māḍi nōḍuviri. ennallēnuṃṭayya? nuḍi illada bhava nīnu nuḍigalitaneṃdare, nimma noḍaṃbaḍisalānu samarthane? anaṃta vēdaṃgaḷellavu nimma muṃde usurikkalammade mūgarāgiddavu. nimagānidiruttara koṭṭu keṭṭakēḍiṃge ēneṃbeneleyayya? kapila siddhamallikārjuna nānubhaya bhraṣṭaneṃbuda nīvē balliri. ॥

Editor's note: Original numbered segment 1 in source paragraph 83.

Report an error

ಮತ್ತಂ, ಅಯ್ಯ ನಿನ್ನ ಕಂಡಾಕ್ಷಣದಲ್ಲಿ ನಂಬಿ ನಚ್ಚಿ ಶರಣು ಹೋಗಲರಿಯದೆ ಕೆಮ್ಮನೆ ಕೆಟ್ಟೆ. ಅಹಂಕಾರವ ಹೊತ್ತುಕೊಂಡು ಕೆಟ್ಟೆನಯ್ಯ. ಕೆಡಿಸಿ ಮರುಗಿ ಅರಿಸಿಹೆನೆಂಬ ಮರುಳ ನಾನಯ್ಯ ! ಕಪಿಲ ಸಿದ್ಧಮಲ್ಲಿನಾಥಯ್ಯ ಹಾಲಲದ್ದು ನೀರಲದ್ದು. ನೀನೇ ಗತಿ ಮತಿ. ॥

mattaṃ, ayya ninna kaṃḍākṣaṇadalli naṃbi nacci śaraṇu hōgalariyade kemmane keṭṭe. ahaṃkārava hottukoṃḍu keṭṭenayya. keḍisi marugi arisiheneṃba maruḷa nānayya ! kapila siddhamallināthayya hālaladdu nīraladdu. nīnē gati mati. ॥

Editor's note: Original numbered segment 2 in source paragraph 83.

Report an error

ಮತ್ತಂ, ಎನ್ನ ಭರಭಾರ ನಿಮ್ಮದಯ್ಯ! ಎನ್ನ ಹಾನಿವೃದ್ಧಿ ನಿಮ್ಮದಯ್ಯ! ಎನ್ನ ಕರಕರ ಕಾಡದಿರು ತಂದೆ. ನಿನ್ನ ಕಾಟ ಎನ್ನ ಪ್ರಾಣದೋಟ. ಕಪಿಲ ಸಿದ್ಧಮಲ್ಲಿನಾಥ ಕೊಲ್ಲು ಕಾಯಿ. ನಿನ್ನ ಧರ್ಮದವ ನಾನು. ॥

mattaṃ, enna bharabhāra nimmadayya! enna hānivr̥ddhi nimmadayya! enna karakara kāḍadiru taṃde. ninna kāṭa enna prāṇadōṭa. kapila siddhamallinātha kollu kāyi. ninna dharmadava nānu. ॥

Editor's note: Original numbered segment 3 in source paragraph 83.

Report an error

ಇಂತು ಕಿಂಕುರ್ವಾಣತೆಯಲ್ಲಿ ಸಿದ್ಧರಾಮಯ್ಯ ದೇವರು ಪ್ರಭುದೇವರ ಚರಣದ ಮೇಲೆ ಬಿದ್ದು ಅಳುತ್ತಿರಲು, ಆ ಪ್ರಭುದೇವರು ಕರುಣದಿಂ ಶಿರವ ಹಿಡಿದೆತ್ತಿದ ಪ್ರಸ್ಥಾವದ ವಚನ.

iṃtu kiṃkurvāṇateyalli siddharāmayya dēvaru prabhudēvara caraṇada mēle biddu aḷuttiralu, ā prabhudēvaru karuṇadiṃ śirava hiḍidettida prasthāvada vacana.

Report an error

ಹೊರಗಾಡಿ ಬಂದನೆಂದು ನುಡಿಸಲೊಲ್ಲದೆ ಸುಮ್ಮನಿದ್ದೆನು. ಎನ್ನ ಮನ ನೊಂದು ತಾಗಿದರೆ, ನಿಮ್ಮ ಮುಂದಾದೆನು. ಬಿಕ್ಕುತ್ತ ಬೆದರುತ್ತ ಕಾಲ ಮೇಲೆ ಬಿದ್ದರೆ, ಕಂಗಳ ಉದಕ ಮಜ್ಜನಕ್ಕೆರೆದಂತಾಯಿತ್ತು. ಅಂತಿದ್ದರೆ ಕಂಡು, ನೆಗಹಿದೆನು ನನ್ನ ಗುಹೇಶ್ವರಲಿಂಗವು. ॥

horagāḍi baṃdaneṃdu nuḍisalollade summaniddenu. enna mana noṃdu tāgidare, nimma muṃdādenu. bikkutta bedarutta kāla mēle biddare, kaṃgaḷa udaka majjanakkeredaṃtāyittu. aṃtiddare kaṃḍu, negahidenu nanna guhēśvaraliṃgavu. ॥

Report an error

ಇಂತು ಅಳುತ್ತಿಪ್ಪ ಸಿದ್ಧರಾಮಯ್ಯ ದೇವರು ಬಿನ್ನೈಸಿದ ವಚನ॥

iṃtu aḷuttippa siddharāmayya dēvaru binnaisida vacana॥

Report an error

ಎನ್ನ ತನು ಕರಗಿ ಮನ ಕೊರಗಿದ ದುಃಖವಿದಾರದಯ್ಯ! ಅಯ್ಯಯ್ಯ ಎಂದು ಅಳುವ ಅಕ್ಕೆ ಇದಾರದಯ್ಯ ! ಮರವೆಂಬ ಕೂರಸಿಗೆ ಗುರಿ ಮಾಡಿದವರಾರಯ್ಯಾ! ಹಾ! ಹಾ!! ಎಂಬ ಧ್ವನಿಯ ಕೇಳಲಾರದೆ ಕಂಡು ಕರುಣದಿಂದೆ ಶಿರವ ಹಿಡಿದೆತ್ತಿ ಎನ್ನ ಕಣ್ಣ ನೀರ ತೊಡೆದನು ಕಪಿಲ ಸಿದ್ಧಮಲ್ಲಿನಾಥಯ್ಯನು. ॥

enna tanu karagi mana koragida duḥkhavidāradayya! ayyayya eṃdu aḷuva akke idāradayya ! maraveṃba kūrasige guri māḍidavarārayyā! hā! hā!! eṃba dhvaniya kēḷalārade kaṃḍu karuṇadiṃde śirava hiḍidetti enna kaṇṇa nīra toḍedanu kapila siddhamallināthayyanu. ॥

Report an error

ಇಂತು ಸಿದ್ಧರಾಮಯ್ಯ ದೇವರ ಕಿಂಕುರ್ವಾಣತೆಯಂ ಕಂಡು ಕೃಪೆಯಿಂದ ಶಿರನ ಹಿಡಿದೆತ್ತಿ ಕಣ್ಣ ನೀರ ತೊಡೆದು ಆ ಪ್ರಭುದೇವರು ಪ್ರಸನ್ನರಾಗಿ, ಪರಮಯೋಗಿ, ಶುದ್ಧ ಸಾತ್ವಿಕಯೋಗಿ, ಸಚ್ಚಿದಾನಂದ ಯೋಗಿ, ನಿತ್ಯ ಪರಿಪೂರ್ಣ ಯೋಗಿ, ಶಿವಯೋಗಾಮೃತ ಸೇವ್ಯ ಸಂತುಷ್ಟಯೋಗಿ, ಪರಮಾನಂದಯೋಗಿ, ಸಕಲ ಕರಣಗುಣ ರಹಿತಯೋಗಿ, ಸರ್ವೇಂದ್ರಿಯ ಸುಖ ನಿರ್ಮಲಯೋಗಿ, ಸಂಸಾರ ವನದಾವಾನಲಯೋಗಿ, ಮಾಯಾಹರ ಯೋಗಿ, ಮಾಯಾ ಮದ ದೂರ ಮಾಯಾ ಮದ ಮಥನಯೋಗಿ, ಸಗುಣಯೋಗಿ, ಸನ್ನಿಧಾನಯೋಗಿ, ನಿರ್ಗುಣಯೋಗಿ, ನಿರಂಜನಯೋಗಿ, ಸಕಲ ನಿಃಕಲತತ್ವ ಶಿರೋರತ್ನಯೋಗಿ, ಅಖಂಡ ಪರಿಪೂರ್ಣಯೋಗಿ, ಅಪ್ರಮಾಣ ಗುಣಭರಿತಯೋಗಿ, ಅಪ್ರತರ್ಕ್ಯ ಚಾರಿತ್ರಯೋಗಿ, ಅಸಾಧ್ಯ ಸಾಧಕಯೋಗಿ, ಅಭೇದ್ಯಭೇದಕಯೋಗಿ, ಸುಜ್ಞಾನ ಪ್ರಭಾಮಯಯೋಗಿ, ಮಹಾಜ್ಞಾನೈಕ್ಯ ಚೈತನ್ಯಯೋಗಿ, ಕಾಯಗುಣ ಧರ್ಮ ಕರ್ಮ ಸಂಹಾರಯೋಗಿ, ಬ್ರಹ್ಮಾಂಡ ಸಂದೋಹ ಸಂಭೂತ ಕಾರಣಯೋಗಿ, ನಿರವಯ ನಿರ್ಲೇಪ ನಿಃಪಾಪಯೋಗಿ, ಇಹಲೋಕ ಪರ ಲೋಕ ಗತಿ ರಹಿತಯೋಗಿ, ಎಂದು ಕೊಂಡಾಡಿ, ಆ ಸಿದ್ಧರಾಮಯ್ಯ ದೇವರ ಬಿಗಿದಪ್ಪಿಕೊಂಡ ಪ್ರಸ್ಥಾವದ ವಚನ॥

iṃtu siddharāmayya dēvara kiṃkurvāṇateyaṃ kaṃḍu kr̥peyiṃda śirana hiḍidetti kaṇṇa nīra toḍedu ā prabhudēvaru prasannarāgi, paramayōgi, śuddha sātvikayōgi, saccidānaṃda yōgi, nitya paripūrṇa yōgi, śivayōgāmr̥ta sēvya saṃtuṣṭayōgi, paramānaṃdayōgi, sakala karaṇaguṇa rahitayōgi, sarvēṃdriya sukha nirmalayōgi, saṃsāra vanadāvānalayōgi, māyāhara yōgi, māyā mada dūra māyā mada mathanayōgi, saguṇayōgi, sannidhānayōgi, nirguṇayōgi, niraṃjanayōgi, sakala niḥkalatatva śirōratnayōgi, akhaṃḍa paripūrṇayōgi, apramāṇa guṇabharitayōgi, apratarkya cāritrayōgi, asādhya sādhakayōgi, abhēdyabhēdakayōgi, sujñāna prabhāmayayōgi, mahājñānaikya caitanyayōgi, kāyaguṇa dharma karma saṃhārayōgi, brahmāṃḍa saṃdōha saṃbhūta kāraṇayōgi, niravaya nirlēpa niḥpāpayōgi, ihalōka para lōka gati rahitayōgi, eṃdu koṃḍāḍi, ā siddharāmayya dēvara bigidappikoṃḍa prasthāvada vacana॥

Report an error

ನಿಮ್ಮಲ್ಲಿ ಸನ್ನಿಹಿತನಾಗಿ, ನಿಜವನರಿತು ಬೆರಸಿದ ಶಿವಯೋಗಿಯ ಕಂಡರೆ, ಎನ್ನ ಮನನಗಲಲಾರದಯ್ಯ! ಎನ್ನ ತನು ಒಪ್ಪದಿರಲಾರದಯ್ಯ! ಎನ್ನ ಶಬುದ ಹೊಗಳಿದಲ್ಲದೆ ಸೈರಿಸದಯ್ಯ. ಗುಹೇಶ್ವರ, ನಿಮ್ಮ ಶರಣ ಸಿದ್ಧರಾಮಯ್ಯನನಪ್ಪಿನೊಪ್ಪಳಿದು, ನಮೋ ನಮೋ ಎನುತಿರ್ದೆನು. ॥

nimmalli sannihitanāgi, nijavanaritu berasida śivayōgiya kaṃḍare, enna mananagalalāradayya! enna tanu oppadiralāradayya! enna śabuda hogaḷidallade sairisadayya. guhēśvara, nimma śaraṇa siddharāmayyananappinoppaḷidu, namō namō enutirdenu. ॥

Editor's note: Original numbered segment 1 in source paragraph 89.

Report an error

ಮತ್ತಂ, ಕಾಯದೊಳಗೆ ಕರಣವಿಲ್ಲ. ಪ್ರಾಣದೊಳಗೆ ಭಾವವಿಲ್ಲ. ಭಾವದೊಳಗೆ ಭ್ರಮೆ ಇಲ್ಲ. ನವನಾಳದೊಳಗೆ ಸುಳುಹು ಮುನ್ನಿಲ್ಲ. ಬ್ರಹ್ಮರಂಧ್ರದಲ್ಲಿ ಅರಿವರತ ಶಿವಯೋಗಿ ಗುಹೇಶ್ವರನ ಶರಣ ಸಿದ್ಧರಾಮಯ್ಯ, ನಿನ್ನ ಕಂಡೆನ್ನ ಭವಂ ನಾಸ್ತಿಯಾಯಿತ್ತು ಕೇಳಾ.॥

mattaṃ, kāyadoḷage karaṇavilla. prāṇadoḷage bhāvavilla. bhāvadoḷage bhrame illa. navanāḷadoḷage suḷuhu munnilla. brahmaraṃdhradalli arivarata śivayōgi guhēśvarana śaraṇa siddharāmayya, ninna kaṃḍenna bhavaṃ nāstiyāyittu kēḷā.॥

Editor's note: Original numbered segment 2 in source paragraph 89.

Report an error

ಮತ್ತಂ, ಯೋಗ ಶಿವಯೋಗವೆಂದೆಂಬರು. ಯೋಗದ ಹೊಲಬನಾರು ಬಲ್ಲರಯ್ಯ! ಹೃದಯ ಕಮಲಪತ್ರದಲ್ಲಿ ಭ್ರಮಿಸುವನ ಕಳೆದಲ್ಲದೆ, ಯೋಗವೆಂತಪ್ಪುದೋ? ಐವತ್ತೆರಡಕ್ಷರದ ಲಿಪಿಯ ನೋಡಿ ನೋಡಿ, ಆರು ನೆಲೆಯ ಮೇಲಿಪ್ಪ ಮಣಿಮಾಡದೊಳಗೆ ಇರಬಲ್ಲರೆ ಅದು ಯೋಗ. ಸೋಹಂಮೆಂಬಲ್ಲಿ ಸುಳುಹಡಗಿ, ಮನ ನಷ್ಟವಾಗಿರಬಲ್ಲ ಕಾರಣ ಗುಹೇಶ್ವರ ಲಿಂಗದಲ್ಲಿ ನೀನು ಸ್ವತಂತ್ರ ಧೀರನೆಂಬುದು ಕಾಣ ಬಂದಿತ್ತು ಕಾಣಾ ಸಿದ್ಧರಾಮಯ್ಯ. ॥

mattaṃ, yōga śivayōgaveṃdeṃbaru. yōgada holabanāru ballarayya! hr̥daya kamalapatradalli bhramisuvana kaḷedallade, yōgaveṃtappudō? aivatteraḍakṣarada lipiya nōḍi nōḍi, āru neleya mēlippa maṇimāḍadoḷage iraballare adu yōga. sōhaṃmeṃballi suḷuhaḍagi, mana naṣṭavāgiraballa kāraṇa guhēśvara liṃgadalli nīnu svataṃtra dhīraneṃbudu kāṇa baṃdittu kāṇā siddharāmayya. ॥

Editor's note: Original numbered segment 3 in source paragraph 89.

Report an error

ಈ ಹೀಗೆಂದ ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃda prabhudēvaru nirūpisalu, adakke siddharāmayya dēvara binnaha.

Report an error

ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯ! ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿ ವಿಯೋಗವಾದ ಯೋಗವಿಲ್ಲವಯ್ಯ! ಹೃದಯಕಮಲದಲ್ಲಿ ಭ್ರಮಿಸದೆ ಇಪ್ಪಾತ ನೀನೆಯಲ್ಲದೆ ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ ಕಪಿಲ ಸಿದ್ಧಮಲ್ಲಿಕಾರ್ಜುನ. ॥

yōgada holaba nānetta ballenayya! yōga śivaśakti saṃpuṭavāgippudallade, śivaśakti viyōgavāda yōgavillavayya! hr̥dayakamaladalli bhramisade ippāta nīneyallade enage bēre svataṃtravilla kēḷā kapila siddhamallikārjuna. ॥

Editor's note: Original numbered segment 1 in source paragraph 91.

Report an error

ಉತ್ಪತ್ತಿ ಸ್ಥಿತಿಲಯವಿಲ್ಲದಭವ ನೀನು, ಕಂಡಯ್ಯ! ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ. ನಿನ್ನ ಇಚ್ಛಾಮಾತ್ರದಿಂದ ನಾನಿಪ್ಪೆನು. ಹಿರಿಯ ನೀನೇ ದೇವಾ ಕಪಿಲ ಸಿದ್ದಮಲ್ಲಿಕಾರ್ಜುನ ನಾನೇತರೊಳಗಪ್ಪನು ಹೇಳಾ ಪ್ರಭುವೆ. ॥

utpatti sthitilayavilladabhava nīnu, kaṃḍayya! enage bēre svataṃtravilla kēḷā. ninna icchāmātradiṃda nānippenu. hiriya nīnē dēvā kapila siddamallikārjuna nānētaroḷagappanu hēḷā prabhuve. ॥

Editor's note: Original numbered segment 2 in source paragraph 91.

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

ī hīgeṃdu siddharāmayya dēvaru binnaisalu, prabhudēvaru nirūpisida prasthāvada vacana॥

Report an error

ಮನಮನ ಬೆರಿಸಿದವರೆಂತಿಪ್ಪರವರ ಪರಿಯನರಿಯ ಬಾರದು ಕೇಳಾ! ಇದಿರಿಂಗೆ ಇಚ್ಛೆಯರಿಯದಿಪ್ಪರು. ಒಳಗೆ ನೋಡಿದರೆ ಬಟ್ಟ ಬಯಲಲಿಪ್ಪರು, ಗುಹೇಶ್ವರನ ಶರಣರು ತಾವಿಲ್ಲದ ಮಹಿಮರೆಂಬುದ ನಿನ್ನಿಂದರಿದೆ ನೋಡಾ ಸಿದ್ಧರಾಮಯ್ಯ. ॥

manamana berisidavareṃtipparavara pariyanariya bāradu kēḷā! idiriṃge iccheyariyadipparu. oḷage nōḍidare baṭṭa bayalalipparu, guhēśvarana śaraṇaru tāvillada mahimareṃbuda ninniṃdaride nōḍā siddharāmayya. ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃdu prabhudēvaru nirūpisalu, adakke siddharāmayya dēvara binnaha.

Report an error

ಅಪ್ಪುದನಲ್ಲದುದನೊಪ್ಪವ ಮಾಡುವಿರಿ. ಅಯ್ಯ ನಿನ್ನೊಲವು ಛಲವು ಕಂಡಯ್ಯ! ನೀನಿಂತು ನೋಡಿದವರವರಂತಿಪ್ಪುದಲ್ಲ ವೆಂಬನರಿಲ್ಲ ಕಾಣಾ ಕಪಿಲ ಸಿದ್ಧಮಲ್ಲಿಕಾರ್ಜುನ. ॥

appudanalladudanoppava māḍuviri. ayya ninnolavu chalavu kaṃḍayya! nīniṃtu nōḍidavaravaraṃtippudalla veṃbanarilla kāṇā kapila siddhamallikārjuna. ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಆ ಪ್ರಭುದೇವರು ಸಂತೋಷಿಸಿದ ಪ್ರಸ್ಥಾವದ ವಚನ.॥

ī hīgeṃdu siddharāmayya dēvaru binnaisalu, ā prabhudēvaru saṃtōṣisida prasthāvada vacana.॥

Report an error

ಸ್ವತಂತ್ರ ಸರತಂತ್ರಕ್ಕೆ ಆವುದು ಚಿನ್ಹ ನೋಡಾ! ತಾನೆಂಬುದಳಿದು, ಇದಿರೆಂಬುದ ಮರೆದು, ಭಾವ ದಗ್ಧವಾಗಿರ ಬಲ್ಲರೆ, ಅದು ಸ್ವತಂತ್ರ. ನೀನೆಂಬುದ ಧಿಃಕರಿಸಿ, ತಾನೆಂಬುದ ನಿಃಕರಿಸಿ ಉಭಯ ಭಾವದಲ್ಲಿ ಸನ್ನಿಹಿತನಾಗಿರ ಬಲ್ಲಡೆ ಪರತಂತ್ರ. ಪರತಂತ್ರ ಸ್ವತಂತ್ರವೆಂಬರಡನು ವಿವರಿಸದೆ ತನ್ನ ಮರೆದಿಪ್ಪನೆ ಉಪಮಾತೀತನು. ಗುಹೇಶ್ವರನ ಶರಣರು ದೇಹವಿಲ್ಲದ ನಿರ್ದೇಹಿಗಳೆಂಬುದು ಇಂದೆನಗೆ ಕಾಣ ಬಂದಿತ್ತು ನೋಡಾ ಸಿದ್ಧ ರಾಮಯ್ಯ. ॥

svataṃtra sarataṃtrakke āvudu cinha nōḍā! tāneṃbudaḷidu, idireṃbuda maredu, bhāva dagdhavāgira ballare, adu svataṃtra. nīneṃbuda dhiḥkarisi, tāneṃbuda niḥkarisi ubhaya bhāvadalli sannihitanāgira ballaḍe parataṃtra. parataṃtra svataṃtraveṃbaraḍanu vivarisade tanna maredippane upamātītanu. guhēśvarana śaraṇaru dēhavillada nirdēhigaḷeṃbudu iṃdenage kāṇa baṃdittu nōḍā siddha rāmayya. ॥

Report an error

ನೀನು ನಿರ್ದೇಹಿ ಎಂದು ಎನಗೆ ಅರಿದು ಬಂದಿತ್ತೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

nīnu nirdēhi eṃdu enage aridu baṃditteṃdu prabhudēvaru nirūpisalu, adakke siddharāmayya dēvaru binnaisida prasthāvada vacana॥

Report an error

ಮಾತುಳ್ಳನ್ನಕ್ಕರ ದೇಹ ಹಿಂಗದು. ನೆನಹುಳ್ಳನ್ನಕ್ಕರ ಪ್ರಾಣಸೂತಕ ಬಿಡದು. ಕಾಯದ ಜೀವದ ಹೊಲಿಗೆಯ ಸಂದ ಬಿಚ್ಚಲರಿಯದವನು ಆನು ನಿರ್ದೇಹಿ ಎಂದರೆ ನಗರೇ ನಿಮ್ಮ ಪ್ರಮಥರು? ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ ನಿನ್ನಂತೆ ಮಾಡಿದಡಾನುಳುವೆನಲ್ಲದೆ ಬೇರೆ ಗತಿಯ ಕಾಣೆ ನೋಡಯ್ಯ. ಕಪಿಲ ಸಿದ್ಧಮಲ್ಲಿನಾಥ ಹಿಂದೆ ಇಲ್ಲದಡೇನು ಮುಂದೆ ತಪ್ಪದು. ॥

mātuḷḷannakkara dēha hiṃgadu. nenahuḷḷannakkara prāṇasūtaka biḍadu. kāyada jīvada holigeya saṃda biccalariyadavanu ānu nirdēhi eṃdare nagarē nimma pramatharu? enna aṃtaraṃgadaluḷḷa avaguṇava hiṃgisi ninnaṃte māḍidaḍānuḷuvenallade bēre gatiya kāṇe nōḍayya. kapila siddhamallinātha hiṃde illadaḍēnu muṃde tappadu. ॥

Report an error

ಈ ಬಿನ್ನಹಕ್ಕೆ ಪ್ರಭುದೇವರು ಮುಚ್ಚಿ ಆ ಸಿದ್ಧರಾಮಯ್ಯ ದೇವರ ಕೈವಿಡಿದುಕೊಂಡು, ಏಕಾಂತ ಸಮಾಧಿಸ್ಥಾನಕ್ಕೆ ಬಿಜಯಂಗೈದ ಪ್ರಸ್ಥಾವದ ವಚನ.॥

ī binnahakke prabhudēvaru mucci ā siddharāmayya dēvara kaiviḍidukoṃḍu, ēkāṃta samādhisthānakke bijayaṃgaida prasthāvada vacana.॥

Report an error

ಅಹುದಹುದು. ಭಕ್ತಿಭಾವದ ಭಜನೆ ಎಂತಿಹುದೆಂದರೆ, ಅಂತರಂಗದ ಅರುಹಿಂಗೆ ಆಚಾರವೇ ಕಾಯ. ಆಚಾರ ಕಾಯವಿಲ್ಲದಡೆ, ಅರಿವಿಂಗಾಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದರೆ, ಪಂಚ ಮಹಾ ಪಾತಕ. ನಿನ್ನ ಅರಿವಿಂಗೆ ಅಚ್ಚಾಗಿ ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು. ನಿನ್ನ ಸುಖಸಮಾಧಿಯ ತೋರಬಾರಾ ಸಿದ್ಧರಾಮಯ್ಯ. ॥

ahudahudu. bhaktibhāvada bhajane eṃtihudeṃdare, aṃtaraṃgada aruhiṃge ācāravē kāya. ācāra kāyavilladaḍe, ariviṃgāśrayavilla. arivu ācāradalli samavēdhisida liṃgaikyana kriyābaddhaneṃdu nuḍidare, paṃca mahā pātaka. ninna ariviṃge accāgi ācārakke āḷāgi namma guhēśvaranu ninna kaivaśakke oḷagādanu. ninna sukhasamādhiya tōrabārā siddharāmayya. ॥

Report an error

ಇಂತು ಸಿದ್ಧರಾಮಯ್ಯ ದೇವರ ಕೈವಿಡಿದುಕೊಂಡು, ಪ್ರಭುದೇವರು ಏಕಾಂತ ಸಮಾಧಿಗೆ ಬಿಜಯಂಗೈವ ಪ್ರಸ್ಥಾವದೊಳು ಸಿದ್ಧರಾಮಯ್ಯ ತಂದೆಗಳು ಬಿನ್ನೈಸಿದ ಪ್ರಸ್ಥಾವದ ವಚನ.॥

iṃtu siddharāmayya dēvara kaiviḍidukoṃḍu, prabhudēvaru ēkāṃta samādhige bijayaṃgaiva prasthāvadoḷu siddharāmayya taṃdegaḷu binnaisida prasthāvada vacana.॥

Report an error

ಎನ್ನ ನಲ್ಲನೊಲಿದು ಒಲಿಸಿ ಕಾಡುತ್ತಿದ್ದರೆ, ಬಾರಾ ಬಾರಾ ಎಂದೆನ್ನ ಕರಣ ಹರಣವ ತೋರಿದರೆ, ತಾನೇ ಒಲಿದು ಬಂದೆನ್ನ ತಲೆಯ ಹಿಡಿದು, ನೆಗಹಿ ಎನ್ನ ಮನೆಗೆ ಬಂದ ಕಪಿಲ ಸಿದ್ಧಮಲ್ಲಿನಾಥನ ಒಲುಮೆಯ ಘನವನೇನೆಂದುಪಮಿಸುವೆನು? ॥

enna nallanolidu olisi kāḍuttiddare, bārā bārā eṃdenna karaṇa haraṇava tōridare, tānē olidu baṃdenna taleya hiḍidu, negahi enna manege baṃda kapila siddhamallināthana olumeya ghanavanēneṃdupamisuvenu? ॥

Report an error

ಇಂತು ಪ್ರಭುದೇವರು ಮಠಕ್ಕೆ ಬಿಜಯಂಗೈದಲ್ಲಿ ಆ ಸಿದ್ಧರಾಮಯ್ಯ ದೇವರು ತಮ್ಮ ಮೇಲಣ ಕೃಪೆಯಿಂದ ಬಂದರೆಂದು ಬಿನ್ನೈಸುವ ಪ್ರಸ್ಥಾವದ ವಚನ॥

iṃtu prabhudēvaru maṭhakke bijayaṃgaidalli ā siddharāmayya dēvaru tamma mēlaṇa kr̥peyiṃda baṃdareṃdu binnaisuva prasthāvada vacana॥

Report an error

ಅಂಗವಳಿದು ನಿಂದವನೆಂದು ನಾನರಿಯೆ. ಘನಲಿಂಗದಲ್ಲಿ ಸಲೆ ಸಂದವನೆಂದು ನಾನರಿಯೆ. ಆವ ವೇಷದಲ್ಲಿ ನೀ ಬಂದು ನಿಂದ ಠಾವ ನಾನರಿಯೆ. ಕ್ರೋಧವೆಂಬ ಸಂಸಾರ ಸಾಗರದಲ್ಲಿ ಸಾಧನೆಯ ಮಾಡಲಾಗಿ, ಪ್ರಭುದೇವರ ಸುಳುಹು ಅಘಟಿತವಾಯಿತ್ತು ಕಪಿಲ ಸಿದ್ಧ ಮಲ್ಲಿಕಾರ್ಜುನ. ॥

aṃgavaḷidu niṃdavaneṃdu nānariye. ghanaliṃgadalli sale saṃdavaneṃdu nānariye. āva vēṣadalli nī baṃdu niṃda ṭhāva nānariye. krōdhaveṃba saṃsāra sāgaradalli sādhaneya māḍalāgi, prabhudēvara suḷuhu aghaṭitavāyittu kapila siddha mallikārjuna. ॥

Report an error

ಇಂತು ಸಿದ್ಧರಾಮಯ್ಯ ದೇವರು ಪ್ರಭುದೇವರಿಗೆ ತಮ್ಮ ಹೃದಯಕಮಲವೆಂಬ ಸಿಂಹಾಸನವನ್ನಿಕ್ಕಿ ಪಾದಾರ್ಚನೆಯಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ, ಪಾದೋದಕವಂ ಕೊಂಡು ಪರಮ ಹರುಷವನೈದಿದ ಪ್ರಸ್ತಾವದ ವಚನ.॥

iṃtu siddharāmayya dēvaru prabhudēvarige tamma hr̥dayakamalaveṃba siṃhāsanavannikki pādārcaneyamāḍi, aṣṭavidhārcane ṣōḍaśōpacāradiṃdarcisi, pādōdakavaṃ koṃḍu parama haruṣavanaidida prastāvada vacana.॥

Report an error

ಅಯ್ಯ ಅಯ್ಯ ನೀವು ಬಾರದಿರ್ದಡೆ ಅಂತು ಹಂಬಲಿಸುತ್ತಿದೆ. ನೀನೆನ್ನ ಹಂಬಲವ ಕೇಳಿ ಕರುಣದಿಂದೆ ಭೋರನೆ ಬಂದರೆ ಆನು ತಳವೆಳಗಾಗಿ ಅವಗುಣವೆಂಬ ರಜನ ಕಳೆದು, ಕಂಬಳಿಯ ಪೀಠವನೊಲ್ಲದೆ ಹೃದಯ ಪೀಠವನಿಕ್ಕಿ ಮೇಲುಪ್ಪರಿಗೆಯ ಒರತೆಯ ಅಗ್ಗಣಿಯ ತಂದು, ಪಾದಾರ್ಚನೆಯ ಮಾಡಿ, ಎರಡೆಸಳ ಕಮಲವನೆರಡು ಪಾದಕ್ಕೆ ಪೂಜಿಸಿ, ಕಂಗಳ ತಿರುಳ ತೆಗೆದು, ಆರತಿಯನೆತ್ತಿ, ಉಸಿರ ನುಂಗಿದ ಪರಿಮಳದ ಧೂಪವ ಬೀಸಿ, ನೆತ್ತಿಯಾ ಪರಿಯಾಣದೊಳಿಟ್ಟು, ಬೋನವ ಗಡಣಿಸಿದರೆ, ಸುಯಿಧಾನ ಸವೆಯದೆ ಆರೋಗಣೆಯ ಮಾಡಿ ಉಂಡು, ಬಾಯ್ದೊಳೆದರೆ ಸಂದೇಹವಾದುದೆಂದು ಮೇಲು ಸೆರಗಿನೊಳು ತೊಡೆದುಕೊಂಡು, ಬಾಯ ಮುಚ್ಚಳದೆಗೆಯದೆ, ತ್ರಿಕರಣವೆಂಬ ತಾಂಬೂಲವನವಧರಿಸಿದ ಭಾವದ ಕನ್ನಡವ ಹರಿದು ಹಾಯ್ಕಿದಾತನ ಪಾದಕ್ಕೆ ನಾನು ಶರಣೆಂದು ಪಾದೋದಕವ ಕೊಂಡೆ. ಆತನ ಪ್ರಸಾದಕ್ಕೆನ್ನ ಸೆರಗ ಹಾಸಿ ಆರೋಗಿಸಿ ಸುಖಿಯಾದೆನು. ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಪ್ರಭು ದೇವರ ಕರುಣವೆನಗೆ ಸಾಧ್ಯವಾದ ಪರಿಯನೇನೆಂದುಪಮಿಸುವೆನು? ॥

ayya ayya nīvu bāradirdaḍe aṃtu haṃbalisuttide. nīnenna haṃbalava kēḷi karuṇadiṃde bhōrane baṃdare ānu taḷaveḷagāgi avaguṇaveṃba rajana kaḷedu, kaṃbaḷiya pīṭhavanollade hr̥daya pīṭhavanikki mēlupparigeya orateya aggaṇiya taṃdu, pādārcaneya māḍi, eraḍesaḷa kamalavaneraḍu pādakke pūjisi, kaṃgaḷa tiruḷa tegedu, āratiyanetti, usira nuṃgida parimaḷada dhūpava bīsi, nettiyā pariyāṇadoḷiṭṭu, bōnava gaḍaṇisidare, suyidhāna saveyade ārōgaṇeya māḍi uṃḍu, bāydoḷedare saṃdēhavādudeṃdu mēlu seraginoḷu toḍedukoṃḍu, bāya muccaḷadegeyade, trikaraṇaveṃba tāṃbūlavanavadharisida bhāvada kannaḍava haridu hāykidātana pādakke nānu śaraṇeṃdu pādōdakava koṃḍe. ātana prasādakkenna seraga hāsi ārōgisi sukhiyādenu. kapilasiddha mallikārjunayya nimma śaraṇa prabhu dēvara karuṇavenage sādhyavāda pariyanēneṃdupamisuvenu? ॥

Report an error

ಇಂತು ಪ್ರಭುದೇವರ ಶ್ರೀಪಾದವನು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಪೂಜಿಸಿದ ಸಿದ್ಧರಾಮಯ್ಯದೇವರು ಕೃಪೆಯಿಂದಲೆನ್ನ ಬೋಧಿಸಿ ಎಂದು ಬಿನೈಸುವ ಪ್ರಸ್ಥಾವದ ವಚನ॥

iṃtu prabhudēvara śrīpādavanu aṣṭavidhārcane ṣōḍaśōpacāradiṃda pūjisida siddharāmayyadēvaru kr̥peyiṃdalenna bōdhisi eṃdu binaisuva prasthāvada vacana॥

Report an error

ಆದಿಯಲ್ಲಿ ನಿಮ್ಮಿಂದಲಾದೆನಯ್ಯ ! ಅನಾದಿಯಲ್ಲಿ ನಿಮ್ಮಲ್ಲಿ ತದ್ಗತನಾಗಿ ಇದ್ದೆನಯ್ಯ ! ನಿಮ್ಮ ಹಸ್ತ ಮುಟ್ಟಿದಲ್ಲಿ ನಿಮ್ಮನೆನ್ನ ಮನದೊಳಗಿಟ್ಟುಕೊಂಡಿದ್ದೆನಯ್ಯ ! ಕಾಯವೆಂಬ ಕಪಟವನೊಡ್ಡಿ ನಿಮ್ಮನರಸಿಕೊಂಡಿದ್ದರೆ, ನಿನ್ನ ಬೆಂಬಳಿಯ ಸಂಮ ಕಂಡೆನಯ್ಯ ! ಕಪಿಲ ಸಿದ್ಧ ಮಲ್ಲಿನಾಥಯ್ಯ, ಎನ್ನ ಅಂತರಂಗವ ಶುದ್ಧವ ಮಾಡಿ ತಿಳುಹಾ ನಿಮ್ಮ ಧರ್ಮ॥

ādiyalli nimmiṃdalādenayya ! anādiyalli nimmalli tadgatanāgi iddenayya ! nimma hasta muṭṭidalli nimmanenna manadoḷagiṭṭukoṃḍiddenayya ! kāyaveṃba kapaṭavanoḍḍi nimmanarasikoṃḍiddare, ninna beṃbaḷiya saṃma kaṃḍenayya ! kapila siddha mallināthayya, enna aṃtaraṃgava śuddhava māḍi tiḷuhā nimma dharma॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ನಿರೂಪ.

ī hīgeṃdu siddharāmayya dēvaru binnaisalu, adakke prabhudēvara nirūpa.

Report an error

ಆದಿಯಲ್ಲಿ ಗುರುಬೀಜವಾದ ಪಿಂಡಕ್ಕೆ ಅನಾದಿ ಎಂಬುದನೊಬ್ಬರು ತಿಳುಹಲುಂಟೆ? ಆದಿ ಕಾಯ ಅನಾದಿ ಪ್ರಾಣವಾಗಿಪ್ಪ ಯೋಗವ ಭೇದಿಸಿ ತನ್ನೊಳಗೆ ತಾನೆ ತಿಳಿದು ನೋಡಲು, ಕೋಹಂ ಮೆಂಬುದು ತಾನೆ ಸತ್ಯ ನೋಡಾ! ಗುಹೇಶ್ವರಲಿಂಗದ ನಿಲವು ಹೇಳಿ ಕಂಡಿಹೆನೆಂದರೆ ಅಸಾಧ್ಯ ಕಾಣಾ ಸಿದ್ಧರಾಮಯ್ಯ ॥

ādiyalli gurubījavāda piṃḍakke anādi eṃbudanobbaru tiḷuhaluṃṭe? ādi kāya anādi prāṇavāgippa yōgava bhēdisi tannoḷage tāne tiḷidu nōḍalu, kōhaṃ meṃbudu tāne satya nōḍā! guhēśvaraliṃgada nilavu hēḷi kaṃḍiheneṃdare asādhya kāṇā siddharāmayya ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು ಅದಕ್ಕೆ ಸಿದ್ಧರಾಮ ದೇವರ ಬಿನ್ನಹ.

ī hīgeṃdu prabhudēvaru nirūpisalu adakke siddharāma dēvara binnaha.

Report an error

ಎಲೆ ಅಯ್ಯ ನಿನ್ನ ಕಂಡ ಬೆಳಗಿನ ಪರಿಯ ಕೇಳು ಕಂಡಾ! ನಾನಾರೆಂಬುದ ತಿಳಿದು ನೋಡಿ ಕಂಡುಕಂಡು ಬೆಳಗು ಕಾಂಬ ಪರಿ ಎಂತು ಹೇಳಾ! ಕಂಡುದ ಕಂಡು, ಕಾಯದೊಳಗೆ ಸಂತವಿಡುವ ಪರಿ ಎಂತಯ್ಯ! ಕಪಿಲ ಸಿದ್ಧಮಲ್ಲಿನಾಥಯ್ಯ, ನೀನೆನ್ನ ಮನವ ತಿಳಿವಡೆ, ಅಸಾಧ್ಯ ಉಂಟೆ ದೇವರ ದೇವಾ॥

ele ayya ninna kaṃḍa beḷagina pariya kēḷu kaṃḍā! nānāreṃbuda tiḷidu nōḍi kaṃḍukaṃḍu beḷagu kāṃba pari eṃtu hēḷā! kaṃḍuda kaṃḍu, kāyadoḷage saṃtaviḍuva pari eṃtayya! kapila siddhamallināthayya, nīnenna manava tiḷivaḍe, asādhya uṃṭe dēvara dēvā॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ವಚನ.॥

ī hīgeṃdu siddharāmayya dēvaru binnaisalu, adakke prabhudēvaru nirūpisida vacana.॥

Report an error

ತನ್ನನರಿಯೆನೆಂಬುದು ಅಜ್ಞಾನ ನೋಡಾ! ಅರಿಯದೆ ಅಜ್ಞಾನವನತಿಗಳೆದು, ಜ್ಞಾನವ ಕಾಣೆನೆಂಬುದು ವಿಪರೀತ ಭಾವ ನೋಡಾ! ಎಲ್ಲವನು ತೋರುವ ಘನವನೆಲ್ಲಿಯೂ ಕಾಣಬಾರದು. ಕಾಣಬಾರದ ನಿಜವ ತೋರಬಾರದು. ತೋರಬಾರದ ಮಹವ ತಿಳಿಯಬಹುದೆ? ಗುಹೇಶ್ವರ ಲಿಂಗದಲ್ಲಿ ಬಯಕೆಯುಳ್ಳನ್ನಕ್ಕರ ತವಕವೆಡೆಗೊಂಡಿಪ್ಪ ಕಾರಣ, ತಿಳುಹಲಿಲ್ಲವೆಂಬುದ ನಿನ್ನ ನೀ ತಿಳಿದು ನೋಡಾ ಸಿದ್ಧರಾಮಯ್ಯ॥

tannanariyeneṃbudu ajñāna nōḍā! ariyade ajñānavanatigaḷedu, jñānava kāṇeneṃbudu viparīta bhāva nōḍā! ellavanu tōruva ghanavanelliyū kāṇabāradu. kāṇabārada nijava tōrabāradu. tōrabārada mahava tiḷiyabahude? guhēśvara liṃgadalli bayakeyuḷḷannakkara tavakaveḍegoṃḍippa kāraṇa, tiḷuhalillaveṃbuda ninna nī tiḷidu nōḍā siddharāmayya॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

ī hīgeṃdu prabhudēvaru nirūpisalu adakke siddharāmayya dēvaru binnaisida prasthāvada vacana॥

Report an error

ಕಂಡ ಕನಸು ದಿಟವಾಗಿ ಕಂಡೆನೆಂಬೆ. ಕಂಡೆನೆಂಬುದು ಬೆನ್ನಬಿಡದು. ಕಂಡುದ ಕಾಣೆನೆಂಬುದ ಎರಡನು ಅರಿಯದೆ, ತವಕ ತಲ್ಲಣಕ್ಕೆ ಎಡೆಯಾದೆನು. ತವಕದ ಕೂಟ ನಿಮ್ಮಲ್ಲಿ ತದ್ಗತವಾದೆನು. ಕಪಿಲ ಸಿದ್ಧಮಲ್ಲಿನಾಥಯ್ಯ, ನಿಮ್ಮ ಕರುಣವೆನಗೆ ಸಾಧ್ಯವಾಯಿತ್ತು ॥

kaṃḍa kanasu diṭavāgi kaṃḍeneṃbe. kaṃḍeneṃbudu bennabiḍadu. kaṃḍuda kāṇeneṃbuda eraḍanu ariyade, tavaka tallaṇakke eḍeyādenu. tavakada kūṭa nimmalli tadgatavādenu. kapila siddhamallināthayya, nimma karuṇavenage sādhyavāyittu ॥

Report an error

ಕೂಡುವ ತವಕವೆ ನಿಮ್ಮಲ್ಲಿ ಸಮರಸವಾಯಿತ್ತೆಂದು ಸಿದ್ಧರಾಮಯ್ಯದೇವರು ಬಿನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

kūḍuva tavakave nimmalli samarasavāyitteṃdu siddharāmayyadēvaru binaisalu, adakke prabhudēvaru nirūpisida prasthāvada vacana॥

Report an error

ಬಯಕೆ ಎಂಬುದು ದೂರದ ಕೂಟ. ಬಯಸೆನೆಂಬುದು ಕೂಟದ ಸಂದು. ಈ ಉಭಯವು ಕಪಟದ ಕನ್ನಡವಲ್ಲದೆ ಸಹಜವಲ್ಲ. ಕೂಡಿ ಕಂಡ ಪರಿಯೆಂತು ಹೇಳಾ! ಇನ್ನು ಲಿಂಗೈಕ್ಯವನು ಕೂಪ ಠಾವಿನಲ್ಲಿ ಪರವಶನಾದೆನೆಂಬ ಮಾತು ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು?॥

bayake eṃbudu dūrada kūṭa. bayaseneṃbudu kūṭada saṃdu. ī ubhayavu kapaṭada kannaḍavallade sahajavalla. kūḍi kaṃḍa pariyeṃtu hēḷā! innu liṃgaikyavanu kūpa ṭhāvinalli paravaśanādeneṃba mātu meccuvane namma guhēśvaraliṃgavu?॥

Report an error

ಇಂತು ಲಿಂಗದಲ್ಲಿ ಕೂಪರಾಗಿದ್ದಲ್ಲಿ ಭೇದ ಬುದ್ಧಿ ಎಡೆಗೊಂಡಿಪ್ಪುದಲ್ಲದೆ, ಸಮರಸಭಾವವಿಲ್ಲೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

iṃtu liṃgadalli kūparāgiddalli bhēda buddhi eḍegoṃḍippudallade, samarasabhāvavilleṃdu prabhudēvaru nirūpisalu, adakke siddharāmayya dēvaru binnaisida prasthāvada vacana॥

Report an error

ನೀ ಕೂಪನಾಗಿದ್ದಲ್ಲಿ ಕೂಪೆ ನೋಡಯ್ಯ! ನೀ ಒಲ್ಲದಿದ್ದರೆ ಒಲ್ಲೆ ನೋಡಯ್ಯ ! ಎನ್ನರಿವು ಮರವೆ ಇಬ್ಬರಿಗೂ ಸಮ ನೋಡಯ್ಯ. ಎನ್ನ ಬಯಕೆಯೊಳಗಣ ಬಯಕೆಯ ನಿಧಾನವು ನೀನೆಂದು ಕಂಡ ಬಳಿಕ ಬಯಸುವಾತ ನೀನೆ ಕಾಣಾ ಕಪಿಲ ಸಿದ್ಧ ಮಲ್ಲಿನಾಥಯ್ಯಾ. ॥

nī kūpanāgiddalli kūpe nōḍayya! nī olladiddare olle nōḍayya ! ennarivu marave ibbarigū sama nōḍayya. enna bayakeyoḷagaṇa bayakeya nidhānavu nīneṃdu kaṃḍa baḷika bayasuvāta nīne kāṇā kapila siddha mallināthayyā. ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

ī hīgeṃdu siddharāmayya dēvaru binnaisalu, adakke prabhudēvaru nirūpisida prasthāvada vacana॥

Report an error

ಬಯಸುವ ಬಯಕೆ ನೀನಾದ ಪರಿ ಎಂತು ಹೇಳಾ! ಅರಸುವ ಅರಿಕೆ ನೀನಾದ ಪರಿ ಎಂತು ಹೇಳಾ! ಕಾಯವೆ ಲಿಂಗ, ಪ್ರಾಣವೆ ಶರಣನಾದ ಶರಣಂಗೆ, ಬೇರೆ ದೇವಾಲಯವ ಮಾಡಿಸಲೇಕೆ ಹೇಳಾ? ಗುಹೇಶ್ವರ ಲಿಂಗವು ಸಾಧ್ಯವಾಯಿತ್ತೆಂಬುದ ಮಾತಿನಲ್ಲಿ ಕಂಡೆನಲ್ಲದೆ ಕಾರ್ಯದಲ್ಲಿ ಕಾಣೆ ನೋಡಾ ಸಿದ್ಧರಾಮಯ್ಯ. ॥

bayasuva bayake nīnāda pari eṃtu hēḷā! arasuva arike nīnāda pari eṃtu hēḷā! kāyave liṃga, prāṇave śaraṇanāda śaraṇaṃge, bēre dēvālayava māḍisalēke hēḷā? guhēśvara liṃgavu sādhyavāyitteṃbuda mātinalli kaṃḍenallade kāryadalli kāṇe nōḍā siddharāmayya. ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ ॥

ī hīgeṃdu prabhudēvaru nirūpisalu adakke siddharāmayya dēvaru binnaisida prasthāvada vacana ॥

Report an error

ಅಣುವಿನೊಳಗೆ ಅಣುವಾಗಿಪ್ಪಿರಿ, ಎಲೆ ದೇವಾ ನೀವು. ಮನದೊಳಗೆ ಘನವಾಗಿಪ್ಪಿರಿ, ಎಲೆ ದೇವಾ. ಜಗದೊಳಗೆಲ್ಲಿಯು ನೀವಿಲ್ಲದೆಡೆಯುಂಟೆ? ಎಂಬತ್ತುನಾಲ್ಕು ಲಕ್ಷ ಶಿವಾಲಯಂಗಳ ನೀವು ಮಾಡಿ ಒಳಗಿಪ್ಪುದ ಕಂಡು ನಾನು ಮಾಡಿದೆನಲ್ಲದೆ, ಕಪಿಲ ಸಿದ್ಧಮಲ್ಲಿನಾಥಯ್ಯ ಎನಗೆ ಬೇರೆ ಸ್ವತಂತ್ರವಿಲ್ಲವೆಂದರಿಯೆನು. ॥

aṇuvinoḷage aṇuvāgippiri, ele dēvā nīvu. manadoḷage ghanavāgippiri, ele dēvā. jagadoḷagelliyu nīvilladeḍeyuṃṭe? eṃbattunālku lakṣa śivālayaṃgaḷa nīvu māḍi oḷagippuda kaṃḍu nānu māḍidenallade, kapila siddhamallināthayya enage bēre svataṃtravillaveṃdariyenu. ॥

Report an error

ಈ ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ಪ್ರತ್ಯುತ್ತರ.

ī hīgeṃdu siddharāmayya dēvaru binnaisalu, adakke prabhudēvara pratyuttara.

Report an error

ಕಡೆನಾಡ ಲಿಂಗವ ನಡುನಾಡಿಗೆ ತಂದೆನೆಂದೆಂಬ ಅಹಂಕಾರ ಮುಂದುಗೊಂಡು ಇದ್ದೆಯಲ್ಲ! ಎಂಬತ್ತುನಾಲ್ಕು ಲಕ್ಷ ಶಿವಾಲಯಂಗಳೆಂಬ ಬಯಲ ಭ್ರಮೆ ಇದೇನು ಹೇಳಾ? ಆ ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು ಶಿವಾಲಯವ ಮಾಡಬಲ್ಲವೆ? ನಿನ್ನ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಲಿಂಗವ ನಿನ್ನ ಎದೆಯಲ್ಲಿ ಇರಿಸಿಕೊಳ್ಳಲರಿಯದ ಕಾರಣ ಗುಹೇಶ್ವರ ಲಿಂಗವು ನಿನ್ನ ತಪ್ಪಿಸಿ ಹೋದುದ ಮರೆದೆಯಲ್ಲಿ ಸಿದ್ಧರಾಮಯ್ಯ. ॥

kaḍenāḍa liṃgava naḍunāḍige taṃdeneṃdeṃba ahaṃkāra muṃdugoṃḍu iddeyalla! eṃbattunālku lakṣa śivālayaṃgaḷeṃba bayala bhrame idēnu hēḷā? ā mahāghanaliṃgakke jagada jīvarāśigaḷu śivālayava māḍaballave? ninna lakṣada mēle toṃbattāru sāvira liṃgava ninna edeyalli irisikoḷḷalariyada kāraṇa guhēśvara liṃgavu ninna tappisi hōduda maredeyalli siddharāmayya. ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃdu prabhudēvaru nirūpisalu, adakke siddharāmayya dēvara binnaha.

Report an error

ಸಕಲ ಲಿಂಗವ ಹಿಡಿದು ಅಗಲದೆ ನಡೆ ಎಂದಿರಾ ನಡೆವುತ್ತಿರ್ದೆನು. ಲಿಂಗ ಪ್ರತಿಷ್ಠೆಯ ಮಾತೆಂದು ಎನಗೆ ನಿರೂಪಿಸುತ್ತಿರ್ದ ಕಾರಣ ಮಾಡುತ್ತಿರ್ದೆನಲ್ಲದೆ ಎನಗೆ ಬೇರೆ ಸ್ವತಂತ್ರ ಉಂಟೆ? ಹಿಂದೆ ನೀವು ಕೊಟ್ಟ ನಿರೂಪ ನಿಮಗೆ ಹುಸಿಯಾದರೆ ಇನ್ನು ಮುಂದೆ ಸ್ವಯವಪ್ಪಂತೆ ನಡಿಸಾ ಕಪಿಲ ಸಿದ್ಧಮಲ್ಲಿನಾಥಯ್ಯ. ॥

sakala liṃgava hiḍidu agalade naḍe eṃdirā naḍevuttirdenu. liṃga pratiṣṭheya māteṃdu enage nirūpisuttirda kāraṇa māḍuttirdenallade enage bēre svataṃtra uṃṭe? hiṃde nīvu koṭṭa nirūpa nimage husiyādare innu muṃde svayavappaṃte naḍisā kapila siddhamallināthayya. ॥

Report an error

ಇಂತು ನಾನು ಮಾಡುವುದೆಲ್ಲವು ನಿಮ್ಮಾಧೀನವಲ್ಲದೆ, ಎನಗೆ ಬೇರೆ ಸ್ವತಂತ್ರ ಉಂಟೆ? ಮುಂದೆ ನಿಮ್ಮಲ್ಲಿ ನಿಜವಳವಡುವಂತೆ ಮಾಡಾ, ಎಂದುದೆ ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

iṃtu nānu māḍuvudellavu nimmādhīnavallade, enage bēre svataṃtra uṃṭe? muṃde nimmalli nijavaḷavaḍuvaṃte māḍā, eṃdude siddharāmayya dēvaru binnaisalu, adakke prabhudēvaru nirūpisida prasthāvada vacana॥

Report an error

ಕೆರೆ ದೇಗುಲಂಗಳೆಲ್ಲವು ಹಿಂದಣ ಅಡಿವಜ್ಜೆಗೊಳಗು. ಕರ್ಮಕಾಂಡ ಯೋಗಂಗಳೆಲ್ಲವು ಭವದ ತೆಕ್ಕೆಗೆ ಒಳಗು. ಹಿಂದಣ ಮುಂದಣ ಸಂದನಳಿದು, ಗುಹೇಶ್ವರ ಲಿಂಗದಲ್ಲಿ ಸಂದಿರಬೇಕು ಸಿದ್ಧರಾಮಯ. ॥

kere dēgulaṃgaḷellavu hiṃdaṇa aḍivajjegoḷagu. karmakāṃḍa yōgaṃgaḷellavu bhavada tekkege oḷagu. hiṃdaṇa muṃdaṇa saṃdanaḷidu, guhēśvara liṃgadalli saṃdirabēku siddharāmaya. ॥

Report an error

ಈ ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ī hīgeṃdu prabhudēvaru nirūpisalu, adakke siddharāmayya dēvara binnaha.

Report an error

ಕೃಪೆಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೋ? ಕರ್ಮ ಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತೋ? ಬೇಯದೆ ಅಶನವನುಂಬ ಠಾವಾವುದು ಕಪಿಲ ಸಿದ್ಧಮಲ್ಲಿಕಾರ್ಜುನ ಲಿಂಗಕ್ಕೆ? ॥

kr̥peya māḍi uṇṇade hasivu hariva pari inneṃtō? karma yōgava māḍade nirmala sucittavanariva pari inneṃtō? bēyade aśanavanuṃba ṭhāvāvudu kapila siddhamallikārjuna liṃgakke? ॥

Report an error

ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

adakke prabhudēvaru nirūpisida prasthāvada vacana॥

Report an error

ಕರ್ಮವೇ ಪ್ರಾಣವೆಂದು ಮಾಡುವಾಗ ಜ್ಞಾನವನರಿವ ನೆಲೆ ಶುದ್ಧವಿನ್ನಾವುದು? ಸಾವನ್ನಕ್ಕ ಸಾಧನೆಯ ಮಾಡಿ, ಕಾದುವ ಠಾವಿನ್ನಾವುದು? ಅರಿದುದನತಿಗಳೆದು ಮೇಲರಿದುದ ಕರಿಗೊಳುತ್ತ ತುಪ್ಪವ ನೀಡಿದ ತಂಡುಲದಂತೆ ಕಾಯದ ದೆಸೆ ಶುದ್ಧವಾಗಿರಬೇಕು ಗುಹೇಶ್ವರ ಲಿಂಗವನರಿವುದಕ್ಕೆ ಸಿದ್ಧರಾಮಯ್ಯ. ॥

karmavē prāṇaveṃdu māḍuvāga jñānavanariva nele śuddhavinnāvudu? sāvannakka sādhaneya māḍi, kāduva ṭhāvinnāvudu? aridudanatigaḷedu mēlariduda karigoḷutta tuppava nīḍida taṃḍuladaṃte kāyada dese śuddhavāgirabēku guhēśvara liṃgavanarivudakke siddharāmayya. ॥

Report an error

ಇದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

idakke siddharāmayya dēvaru binnaisida prasthāvada vacana॥

Report an error

ಕೈಯಲ್ಲಿ ಹಿಡಿದು ಕಾಂಬುದು ಕರ್ಮದ ಪೂಜೆಯಲ್ಲವೆ? ಮನದಲ್ಲಿ ನೆನೆದು ಮಾಡುವದೆಲ್ಲವು ಕಾಯದ ಕರ್ಮವಲ್ಲವೆ? ಭಾವ ಶುದ್ಧವನರಿವ ಪರಿ ಇನ್ನಾವುದು ಕಪಿಲ ಸಿದ್ಧ ಮಲ್ಲಿಕಾರ್ಜುನ? ॥

kaiyalli hiḍidu kāṃbudu karmada pūjeyallave? manadalli nenedu māḍuvadellavu kāyada karmavallave? bhāva śuddhavanariva pari innāvudu kapila siddha mallikārjuna? ॥

Report an error

ಇದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

idakke prabhudēvaru nirūpisida prasthāvada vacana॥

Report an error

ಚಿನ್ನವನೊರೆಯ ಬಹುದಲ್ಲದೆ, ಬಣ್ಣವನೊರೆಯಬಹುದೆ? ಹೂವ್ವ ಮುಡಿಯ ಬಹುದಲ್ಲದೆ, ಗಂಧವ ಮುಡಿಯಬಹುದೆ? ಕರ್ಮವ ಮಾಡಬಹುದಲ್ಲದೆ ವಸ್ತುವನರಿಯಬಹುದೆ? ಗುಹೇಶ್ವರನ ನೆನೆಯ ಬಹುದಲ್ಲದೆ ಲಿಂಗವು ತಾನಾಗಬಾರದು ಸಿದ್ಧರಾಮಯ್ಯ. ॥

cinnavanoreya bahudallade, baṇṇavanoreyabahude? hūvva muḍiya bahudallade, gaṃdhava muḍiyabahude? karmava māḍabahudallade vastuvanariyabahude? guhēśvarana neneya bahudallade liṃgavu tānāgabāradu siddharāmayya. ॥

Report an error

ಅದಕ್ಕೆ ಸಿದ್ಧರಾಮಯ್ಯ ದೇವರ ಪ್ರತ್ಯುತ್ತರ.

adakke siddharāmayya dēvara pratyuttara.

Report an error

ಬಣ್ಣವಿಲ್ಲದ ಚಿನ್ನ ನಾಮಕ್ಕರ್ಹವಾದ ಪರಿ ಇನ್ನೆಂತಯ್ಯ! ಹೂವೊಡೆದು ವಾಸನೆ ಮೂಡಿದ ಠಾವಿನಲ್ಲಿ ವಾಸನೆ ನಿಂದುದಿಲ್ಲವೆ? ಅಯ್ಯ, ಕ್ರಿಯಾ ಶುದ್ಧವಾದಲ್ಲಿ ಕಪಿಲ ಸಿದ್ಧಮಲ್ಲಿಕಾರ್ಜುನ ಲಿಂಗವು ಭಾವ ಶುದ್ಧವಾಗಿಪ್ಪನು. ॥

baṇṇavillada cinna nāmakkarhavāda pari inneṃtayya! hūvoḍedu vāsane mūḍida ṭhāvinalli vāsane niṃdudillave? ayya, kriyā śuddhavādalli kapila siddhamallikārjuna liṃgavu bhāva śuddhavāgippanu. ॥

Report an error

ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

adakke prabhudēvaru koṭṭa pratyuttara.

Report an error

ರಾಗವಡಗಿ ತಾಮಸ ನಿಂದು ಅಹಂಕಾರದ ಗಿರಿಯುಡುಗಿ, ಮಾತಿನ ಬಣಬೆಯ ಮೆದೆಯ ಸುಟ್ಟು, ಕಾಯ ಕರ್ಮದಲ್ಲಿ ಸವೆಯುತ್ತ, ಜೀವ ಸಕಲ ಸಂಸಾರದಲ್ಲಿ ನೋವುತ್ತ, ಮತ್ತೆ ಭಾವ ಶುದ್ಧ ಉಂಟೆ ಗುಹೇಶ್ವರ ಲಿಂಗಕ್ಕೆ? ॥

rāgavaḍagi tāmasa niṃdu ahaṃkārada giriyuḍugi, mātina baṇabeya medeya suṭṭu, kāya karmadalli saveyutta, jīva sakala saṃsāradalli nōvutta, matte bhāva śuddha uṃṭe guhēśvara liṃgakke? ॥

Report an error

ಇದಕ್ಕೆ ಸಿದ್ಧರಾಮಯ್ಯ ದೇವರು ಕೊಟ್ಟ ಪ್ರತ್ಯುತ್ತರ.

idakke siddharāmayya dēvaru koṭṭa pratyuttara.

Report an error

ನುಡಿದಿಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂದು ತಿರುಗಿ ಕಂಡಿಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು ಉಭಯದ ತೋಟಿಯ ನಾನಿನ್ನಾರಿಗೆ ಹೇಳುವೆ ಕಪಿಲ ಸಿದ್ಧಮಲ್ಲಿಕಾರ್ಜುನ? ॥

nuḍidiheneṃba uluhina galabheya tōṭi biḍadu. uttama madhyama kaniṣṭhaveṃdu tirugi kaṃḍiheneṃba kālina eḍeyāṭa biḍadu. enage garva modalādalli nimage garva veggaḷavāyittu ubhayada tōṭiya nāninnārige hēḷuve kapila siddhamallikārjuna? ॥

Report an error

ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

adakke prabhudēvaru nirūpisida prasthāvada vacana॥

Report an error

ಕ್ಷೀರಕ್ಕೆ ತವರಾಜನ ಹೊಯಿದಲ್ಲಿ ಬೇರೆ ಬೇಸು ಕಷ್ಟವನರಸುವರೆ? ಅಂಗಕ್ಕೆ ತಿಮಿರವಾದಲ್ಲಿ ಅಂಗುಲಿ ಮುಟ್ಟಿ ಅಂಗದ ತಿಮಿರವ ಕೆಡಿಸಿದರೆ, ಅಂಗಕ್ಕೆ ಮಿಥ್ಯ ಉಂಟೆ? ಎನ್ನಂಗವು ತಾನಾದ ಕಾರಣ ನೀನೆಂಬ ನಾಮ ಬೇರಿಲ್ಲ, ಗುಹೇಶ್ವರ ಲಿಂಗವು ನೀನಾದ ಕಾರಣ.॥

kṣīrakke tavarājana hoyidalli bēre bēsu kaṣṭavanarasuvare? aṃgakke timiravādalli aṃguli muṭṭi aṃgada timirava keḍisidare, aṃgakke mithya uṃṭe? ennaṃgavu tānāda kāraṇa nīneṃba nāma bērilla, guhēśvara liṃgavu nīnāda kāraṇa.॥

Editor's note: Original numbered segment 1 in source paragraph 147.

Report an error

ಮತ್ತಂ, ಕರಚರಣಾದಿಗಳು ಬೇರಾದವಲ್ಲದೆ, ಅರಿದು ಮುಟ್ಟುವದೊಂದೇ ಆತ್ಮವು. ಬಿಂದುವಿನೊಂದು ಸಾರದಲ್ಲಿ ಸಸಿ ಹಲವು ನಾನು ಬೆಳೆವಂತೆ ಗುಹೇಶ್ವರ ಲಿಂಗದಲ್ಲಿ ನಾ ನೀನೆಂಬ ಭಾವವಿಲ್ಲ ಸಿದ್ಧರಾಮಯ್ಯ ॥

mattaṃ, karacaraṇādigaḷu bērādavallade, aridu muṭṭuvadoṃdē ātmavu. biṃduvinoṃdu sāradalli sasi halavu nānu beḷevaṃte guhēśvara liṃgadalli nā nīneṃba bhāvavilla siddharāmayya ॥

Editor's note: Original numbered segment 2 in source paragraph 147.

Report an error

ಅದಕ್ಕೆ ಸಿದ್ಧರಾಮಯ್ಯ ದೇವರು ಕೊಟ್ಟ ಪ್ರತ್ಯುತ್ತರ.

adakke siddharāmayya dēvaru koṭṭa pratyuttara.

Report an error

ಭೂಮಿಯೊಂದೇ ಎಂದಡೆ ಬೆಳೆವ ವೃಕ್ಷ ಹಲವು ತೆರನುಂಟು. ಉದಕ ಒಂದೇ ಎಂದಡೆ, ಸವಿ ಸಾರದ ಸಂಪದ ಬೇರುಂಟು. ನಿನ್ನ ಒಳಗು ನಾನಾದೊಡೆ ತಾಮಸದ ರಾಗ ವಿರಾಗವಾಗದು. ಕಪಿಲ ಸಿದ್ಧಮಲ್ಲಿಕಾರ್ಜುನ ಲಿಂಗವೆಂಬ ಪುರುಷ ರತಿ ಕೂಟಸ್ಥವಿಲ್ಲ ॥

bhūmiyoṃdē eṃdaḍe beḷeva vr̥kṣa halavu teranuṃṭu. udaka oṃdē eṃdaḍe, savi sārada saṃpada bēruṃṭu. ninna oḷagu nānādoḍe tāmasada rāga virāgavāgadu. kapila siddhamallikārjuna liṃgaveṃba puruṣa rati kūṭasthavilla ॥

Report an error

ಇಂತು ನಿನ್ನೊಳಗೆ ನಾನಾದೊಡೆ ಲಿಂಗದಲ್ಲಿ ಏಕತ್ವ ಘಟಿಸದೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಭಿನ್ನ ದೃಕ್ಕಿಂದರಿವ ಲಿಂಗತ್ರಯದ ಸಂದಳಿದಲ್ಲದೆ ಘನಲಿಂಗದಲ್ಲಿ ಏಕತ್ವ ಘಟಿಸದೆಂದು ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ.

iṃtu ninnoḷage nānādoḍe liṃgadalli ēkatva ghaṭisadeṃdu siddharāmayya dēvaru binnaisalu, bhinna dr̥kkiṃdariva liṃgatrayada saṃdaḷidallade ghanaliṃgadalli ēkatva ghaṭisadeṃdu prabhudēvaru nirūpisida prasthāvada vacana.

Report an error

ಕಂಗಳು ಜ್ಯೋತಿರ್ಲಿಂಗೈಕ್ಯದಲ್ಲಿ ಉಭಯ ಪ್ರತಿಷ್ಠೆಯ ಲಿಂಗ, ಬ್ರಹ್ಮರಂಧ್ರದಲ್ಲಿ ಅಮೃತಲಿಂಗ ಉಂಟೆಂಬ ತ್ರಿವಿಧದ ಸಂದನಳಿಯಬೇಕು. ಸಿದ್ಧರಾಮಯ್ಯ ಗುಹೇಶ್ವರಲಿಂಗವನರಿಯಬೇಕು. ॥

kaṃgaḷu jyōtirliṃgaikyadalli ubhaya pratiṣṭheya liṃga, brahmaraṃdhradalli amr̥taliṃga uṃṭeṃba trividhada saṃdanaḷiyabēku. siddharāmayya guhēśvaraliṃgavanariyabēku. ॥

Report an error

ಅದಕ್ಕೆ ಸಿದ್ಧರಾಮಯ್ಯ ದೇವರ ಪ್ರತ್ಯುತ್ತರ.

adakke siddharāmayya dēvara pratyuttara.

Report an error

ಕಾಯ ಸೊನೆಯರತಲ್ಲದೆ ಹಣ್ಣಿನ ಸೊನೆ ರಸ ಚಿನ್ಹ ದೋರದು. ಕಾಯದ ಕರ್ಮವ ಮಾಡಿ ಜೀವಜ್ಞಾನವನರಿದು, ತ್ರಿವಿಧ ಭಾವಶುದ್ಧಿಯಾದಲ್ಲದೆ ಮೇಲೆ ಕಾಣಲಿಲ್ಲ ಕಪಿಲ ಸಿದ್ಧಮಲ್ಲಿಕಾರ್ಜುನ ಲಿಂಗವಾ ॥

kāya soneyaratallade haṇṇina sone rasa cinha dōradu. kāyada karmava māḍi jīvajñānavanaridu, trividha bhāvaśuddhiyādallade mēle kāṇalilla kapila siddhamallikārjuna liṃgavā ॥

Report an error

ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

adakke prabhudēvaru koṭṭa pratyuttara.

Report an error

ಇಕ್ಷು ದಂಡಕ್ಕೆ ಕೀಳು ಮೇಲಲ್ಲದೆ, ಸರ್ಕರೆಯ ದಂಡಕ್ಕೆ ಕೀಳು ಮೇಲುಂಟೆ? ಪರುಷ ಪಾಷಾಣಕ್ಕೆ ಕೀಳು ಮೇಲಲ್ಲದೆ, ಕಡೆಯಾಣಿ ಗುಂಟೆ? ವಾರಿಗಲ್ಲು ಉಂಟು ಇಲ್ಲವೆಂಬ ಸಂದೇಹ ನಿಂದಲ್ಲಿ ಗುಹೇಶ್ವರಲಿಂಗವು ತಾನೆ ಸಿದ್ಧರಾಮಯ್ಯ ॥

ikṣu daṃḍakke kīḷu mēlallade, sarkareya daṃḍakke kīḷu mēluṃṭe? paruṣa pāṣāṇakke kīḷu mēlallade, kaḍeyāṇi guṃṭe? vārigallu uṃṭu illaveṃba saṃdēha niṃdalli guhēśvaraliṃgavu tāne siddharāmayya ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ತ್ರಿವಿಧಲಿಂಗ ಸಂಬಂಧವಳವಡುವಂತೆ ಮಾಡಾ ಎಂದು ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ.

hīgeṃdu prabhudēvaru nirūpisalu, trividhaliṃga saṃbaṃdhavaḷavaḍuvaṃte māḍā eṃdu siddharāmayya dēvaru binnaisida prasthāvada vacana.

Report an error

ನಾನೇನ ಮಾಡುವದೆಲ್ಲವನು ನೀನೆಂದೆ ಇದ್ದೆನಯ್ಯ. ನಾನೇನ ಮಾಡುವದೆಲ್ಲವನು ನೀನೆಯಲ್ಲವೆಂದರೆ ಅದು ಮಾಣಲಿ. ನಿಮ್ಮಾಣತೆ ಕಾಣಬಾರದ ಘನವ ಕಾಯದಲ್ಲಿ ಧರಿಸಿ ಹೇಳಬಾರದ ನಿಜನ ಮನದಲ್ಲಿ ನೆಲೆಗೊಳಿಸಿ ತೋರಬಾರದ ಕುರುಹ ಎನ್ನರಿವಿನಲ್ಲಿರಿಸಿ, ಇನ್ನು ನಿಮ್ಮ ಕಾಂಬಂತೆ ಮಾಡಾ ಕಪಿಲ ಸಿದ್ಧಮಲ್ಲಿನಾಥಯ್ಯ, ॥

nānēna māḍuvadellavanu nīneṃde iddenayya. nānēna māḍuvadellavanu nīneyallaveṃdare adu māṇali. nimmāṇate kāṇabārada ghanava kāyadalli dharisi hēḷabārada nijana manadalli nelegoḷisi tōrabārada kuruha ennarivinallirisi, innu nimma kāṃbaṃte māḍā kapila siddhamallināthayya, ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ಪ್ರತ್ಯುತ್ತರ.

hīgeṃdu siddharāmayya dēvaru binnaisalu, adakke prabhudēvara pratyuttara.

Report an error

ತೋರಬಾರದ ಘನವ ಹೇಳಲೆಂದೆನೈಯ್ಯ. ಹೇಳಬಾರದ ಘನವ ತೋರಲೆಂದೆನಯ್ಯ. ಶರ ಸಂಧಾನದ ಪರಿಯ ನೋಡಾ! ಗುಹೇಶ್ವರ ಲಿಂಗವು ಕಲ್ಪಿತವಲ್ಲ ನೋಡಯ್ಯ, ॥

tōrabārada ghanava hēḷaleṃdenaiyya. hēḷabārada ghanava tōraleṃdenayya. śara saṃdhānada pariya nōḍā! guhēśvara liṃgavu kalpitavalla nōḍayya, ॥

Report an error

ಪರಬ್ರಹ್ಮವೆಂಬುದನು ಕಲ್ಪಿಸಿ ಹೇಳಬಾರದು ನೋಡಯ್ಯ. ಕಲ್ಪಿಸಿ ತೋರಬಾರದೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

parabrahmaveṃbudanu kalpisi hēḷabāradu nōḍayya. kalpisi tōrabāradeṃdu prabhudēvaru nirūpisalu, adakke siddharāmayya dēvara binnaha.

Report an error

ಬೆರಿಸಿ ಬೆಚ್ಚಾತನ ಕಂಡೆನಯ್ಯ. ಆತನ ಬಟ್ಟೆಯ ಕಾಣೆ ನೋಡಯ್ಯ! ಶರೀರವಿಡಿದಿಪ್ಪ ಶತಕೋಟಿ ಜೀವಂಗಳ ಭೇದವನರಿಯೆನು. ನಿಮ್ಮ ನಾನು ಬಲ್ಲೆನಯ್ಯ? ನೀವು ಮಾಡಿದ ಬೆಂಬಳಿಯಲ್ಲಿ ಹೊರೆಗಾಣೆದಿಪ್ಪೆನಲ್ಲದೆ ನಾ ಬೇರೆ ಕಾಂಬುದು ಹುಸಿ. ನೀ ತೋರಯ್ಯ ಎನಗೆ ಕಪಿಲ ಸಿದ್ಧಮಲ್ಲಿನಾಥಯ್ಯ, ॥

berisi beccātana kaṃḍenayya. ātana baṭṭeya kāṇe nōḍayya! śarīraviḍidippa śatakōṭi jīvaṃgaḷa bhēdavanariyenu. nimma nānu ballenayya? nīvu māḍida beṃbaḷiyalli horegāṇedippenallade nā bēre kāṃbudu husi. nī tōrayya enage kapila siddhamallināthayya, ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

hīgeṃdu siddharāmayya dēvaru binnaisalu, adakke prabhudēvaru nirūpisida prasthāvada vacana॥

Report an error

ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ, ಒಳಗಣ ಮಾತಲ್ಲ, ಹೊರಗಣ ಮಾತಲ್ಲ. ಇದರಂಗವನರಿಯದೆ, ಅನುಭಾವವ ಮಾಡಿ ಫಲವೇನಯ್ಯ? ಗುಹೇಶ್ವರ ಲಿಂಗವು ಉಪಮಾತೀತ ನೋಡಾ ಸಿದ್ಧರಾಮಯ್ಯಾ. ॥

abhyāsada mātalla, śrōtrada sukhavalla, śāstrada anubhāvada mātalla, oḷagaṇa mātalla, horagaṇa mātalla. idaraṃgavanariyade, anubhāvava māḍi phalavēnayya? guhēśvara liṃgavu upamātīta nōḍā siddharāmayyā. ॥

Report an error

ಇಂತು ಪರಬ್ರಹ್ಮವೆಂಬುದು ಆರಿಗು ತೋರಬಾರದ ಉಪಮಾತೀತವೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ॥

iṃtu parabrahmaveṃbudu ārigu tōrabārada upamātītaveṃdu prabhudēvaru nirūpisalu, adakke siddharāmayya dēvaru binnaisida prasthāvada vacana॥

Report an error

ಉಪಮೆ ಅನುಪಮೆ ಎಂಬುದು ನಿಮ್ಮಾಧೀನ ಕಂಡಯ್ಯ! ಹೇಳಿಹೆ ಕೇಳಿಹೆನೆಂಬುದು ನೀವೆ ಕಂಡಯ್ಯ! ಎನ್ನಂತರಂಗಕ್ಕೆ ಬಹಿರಂಗಕ್ಕೆ ನೀವೆ ಕರ್ತರಾದ ಕಾರಣ ನಿಮ್ಮ ನಿಜವ ಹೇಳದಿರ್ದಡೆ, ಎಂತುಳಿವೆನಯ್ಯ ಕಪಿಲ ಸಿದ್ಧಮಲ್ಲಿನಾಥಯ್ಯ? ॥

upame anupame eṃbudu nimmādhīna kaṃḍayya! hēḷihe kēḷiheneṃbudu nīve kaṃḍayya! ennaṃtaraṃgakke bahiraṃgakke nīve kartarāda kāraṇa nimma nijava hēḷadirdaḍe, eṃtuḷivenayya kapila siddhamallināthayya? ॥

Editor's note: Original numbered segment 1 in source paragraph 165.

Report an error

ಮತ್ತಂ, ಕಾಯವಿಡಿದಿಹನ್ನಕ್ಕ ಕಾಮವೆ ಮೂಲ. ಜೀವ ವಿಡಿದಿಹನ್ನಕ್ಕ ಕ್ರೋಧವೇ ಮೂಲ. ವ್ಯಾಪ್ತಿಯುಳ್ಳನ್ನಕ್ಕ ಸಕಲ ವಿಷಯಕ್ಕೆ ಆಸೆಯೇ ಮೂಲ. ಎನ್ನ ಆಸೆಯ ಪಾಶ ಗಾಸಿಮಾಡುತ್ತಿದೆ. ಶಿವಯೋಗದ ಲೇಸಿನ ಠಾವ ತೋರಾ ಕಪಿಲ ಸಿದ್ಧಮಲ್ಲಿಕಾರ್ಜುನ. ॥

mattaṃ, kāyaviḍidihannakka kāmave mūla. jīva viḍidihannakka krōdhavē mūla. vyāptiyuḷḷannakka sakala viṣayakke āseyē mūla. enna āseya pāśa gāsimāḍuttide. śivayōgada lēsina ṭhāva tōrā kapila siddhamallikārjuna. ॥

Editor's note: Original numbered segment 2 in source paragraph 165.

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕಾಯದ ಜೀವದ ಸಂದುಭೇದವ ವಿವರಿಸಿ ತೋರುವ ಪ್ರಸ್ಥಾವದ ವಚನ॥

hīgeṃdu siddharāmayya dēvaru binnaisalu, adakke prabhudēvaru kāyada jīvada saṃdubhēdava vivarisi tōruva prasthāvada vacana॥

Report an error

ದೇಹ ಭಾವವಳಿದಲ್ಲದೆ, ಜೀವ ಭಾವವಳಿಯದು. ಜೀವ ಭಾವವಳಿದಲ್ಲದೆ ಭಕ್ತಿ ಭಾವವಳವಡದು. ಭಕ್ತಿ ಭಾವವಳವಟ್ಟಲ್ಲದೆ, ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ, ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ, ಮಾಯೆ ಹಿಂಗದು. ಇದು ಕಾರಣ ಕಾಯದ ಜೀವದ ಹೊಲಿಗೆಯಳಿದ ಭೇದವ ತಿಳಿಯ ಬಲ್ಲರೆ ಗುಹೇಶ್ವರಲಿಂಗದ ಅರಿವು ಸಾಧ್ಯವಪ್ಪುದು ಕಾಣಾ ಸಿದ್ಧರಾಮಯ್ಯ. ॥

dēha bhāvavaḷidallade, jīva bhāvavaḷiyadu. jīva bhāvavaḷidallade bhakti bhāvavaḷavaḍadu. bhakti bhāvavaḷavaṭṭallade, arivu taledōradu. arivu taledōridallade, kuruhu naṣṭavāgadu. kuruhu naṣṭavādallade, māye hiṃgadu. idu kāraṇa kāyada jīvada holigeyaḷida bhēdava tiḷiya ballare guhēśvaraliṃgada arivu sādhyavappudu kāṇā siddharāmayya. ॥

Report an error

ಕಾಯದ ಜೀವದ ಸಂದು ಭೇದವಳಿದು, ನೋಡ ಬಲ್ಲರೆ, ನಿಜವು ಸಾಧ್ಯವಹುದೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

kāyada jīvada saṃdu bhēdavaḷidu, nōḍa ballare, nijavu sādhyavahudeṃdu prabhudēvaru nirūpisalu, adakke siddharāmayya dēvara binnaha.

Report an error

ನೀರು ಕ್ಷೀರದ ಸಂದುಗಳ ಹಂಸೆ ಬಿಚ್ಚಬಲ್ಲುದು ನೊಡಯ್ಯ! ದೇಹದ ಜೀವನ ಸಂದುಗಳ ನೀವು ಬಿಚ್ಚಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ? ನೀನಿಕ್ಕಿದ ತೊಡಕ ಬಿಡಿಸ ಬಾರದು. ನೀ ಬಿಡಿಸಿದ ತೊಡಕ ನಿಕ್ಕ ಬಾರದು. ಕಪಿಲ ಸಿದ್ಧಮಲ್ಲಿನಾಥಯ್ಯ ನೀನೆನ್ನ ಕಾಯದ ಜೀವದ ಹೊಲಿಗೆಯ ಬಿಡಿಸಾ ನಿಮ್ಮ ಧರ್ಮ. ॥

nīru kṣīrada saṃdugaḷa haṃse biccaballudu noḍayya! dēhada jīvana saṃdugaḷa nīvu biccaballirallade nānetta ballenayya? nīnikkida toḍaka biḍisa bāradu. nī biḍisida toḍaka nikka bāradu. kapila siddhamallināthayya nīnenna kāyada jīvada holigeya biḍisā nimma dharma. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

hīgeṃdu siddharāmayya dēvaru binnaisalu, adakke prabhudēvaru nirūpisida prasthāvada vacana॥

Report an error

ಕಾಯದ ಕಳವಳವ ಕಾಣೆನೆಂದಲ್ಲಿ ಹೋಯಿತ್ತು. ಜೀವದ ದುಷ್ಕೃತ ದೂರವೆಂದಲ್ಲಿ ಹೋಯಿತ್ತು. ಕಾಯ ಜೀವವೆಂಬ ಸೂತಕ ಮನ ನಿರ್ಮಲವಾದಲ್ಲಿ ಹೋಯಿತ್ತು. ಗುಹೇಶ್ವರನೆಂಬ ಲಿಂಗವನರಿಯ ಬೇಕಾದರೆ, ನಿನ್ನೊಳಗೆ ತಿಳಿದು ನೋಡಾ ಸಿದ್ಧರಾಮಯ್ಯ. ॥

kāyada kaḷavaḷava kāṇeneṃdalli hōyittu. jīvada duṣkr̥ta dūraveṃdalli hōyittu. kāya jīvaveṃba sūtaka mana nirmalavādalli hōyittu. guhēśvaraneṃba liṃgavanariya bēkādare, ninnoḷage tiḷidu nōḍā siddharāmayya. ॥

Editor's note: Original numbered segment 1 in source paragraph 171.

Report an error

ನಿನ್ನೊಳಗೆ ತೊಳೆದು ನಿರ್ಮಲವ ಮಾಡಲು ಸರ್ವ ಸಂದೇಹವಳಿದು, ಶಿವತತ್ವ ಸಾಧ್ಯವಪ್ಪುದೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

ninnoḷage toḷedu nirmalava māḍalu sarva saṃdēhavaḷidu, śivatatva sādhyavappudeṃdu prabhudēvaru nirūpisalu, adakke siddharāmayya dēvara binnaha.

Editor's note: Original numbered segment 2 in source paragraph 171.

Report an error

ಅಯ್ಯ ಮನದ ರಜದ ಮಣ್ಣಗಳೆದುದಯ ಶಾಂತಿಯ ಉದಕವ ತೆಗೆವೆನಯ್ಯ? ಜಳಕವನೆ ಮಾಡಿ ಯೋಗಕಂಪನಿಕ್ಕಿ ಹುದುಗುವೆನಯ್ಯ. ಅದನೊಂದು ಎಡೆಗೆ ತಂದು, ಬಟ್ಟ ಗಾಣದಲ್ಲಿಕ್ಕಿ ಹಿಳಿವೆನಯ್ಯ. ಹಿಳಿದ ರಸದ ಕಂಪ ಕೊಡುವ ಒಡೆಯ ನೀನೇ ಕಪಿಲಸಿದ್ಧಮಲ್ಲಿನಾಥಾ॥

ayya manada rajada maṇṇagaḷedudaya śāṃtiya udakava tegevenayya? jaḷakavane māḍi yōgakaṃpanikki huduguvenayya. adanoṃdu eḍege taṃdu, baṭṭa gāṇadallikki hiḷivenayya. hiḷida rasada kaṃpa koḍuva oḍeya nīnē kapilasiddhamallināthā॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಇದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ॥

hīgeṃdu siddharāmayya dēvaru binnaisalu, idakke prabhudēvaru nirūpisida prasthāvada vacana॥

Report an error

ಮನವ ತೊಳೆದು, ನಿರ್ಮಲವ ಮಾಡಿಹೆನೆಂಬ ಯೋಗವೆಂತುಂಟೋ? ಮನವ ಹಿಡಿದು ತಡೆದಿಹೆನೆಂಬವರ ಮರುಳ್ಮಾಡಿ ಕಾಡಿತ್ತು ನೋಡಾ ಮನವು. ಮನವ ವಿಕಲ್ಪಜ್ಞಾದಿಂದ ಅರಿದು ಆದ ಶುದ್ಧವ ಮಾಡಿಹೆನೆಂಬುದು ತಾನೆ ಮನ ನೋಡಾ! ನಮ್ಮ ಗುಹೇಶ್ವರ ಲಿಂಗದ ಅನುವನರಿದಿಹೆನೆಂಬರೆ ಮನವಿಲ್ಲದಿರಬೇಕು ನೋಡು ಸಿದ್ಧರಾಮಯ್ಯ ॥

manava toḷedu, nirmalava māḍiheneṃba yōgaveṃtuṃṭō? manava hiḍidu taḍediheneṃbavara maruḷmāḍi kāḍittu nōḍā manavu. manava vikalpajñādiṃda aridu āda śuddhava māḍiheneṃbudu tāne mana nōḍā! namma guhēśvara liṃgada anuvanaridiheneṃbare manavilladirabēku nōḍu siddharāmayya ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಪ್ರತ್ಯುತ್ತರ.

hīgeṃdu prabhudēvaru nirūpisalu, adakke siddharāmayya dēvara pratyuttara.

Report an error

ಮನವೆಂಬ ಸಂಕಲ್ಪವ ನರಿಯೆನು, ಸಂಕಲ್ಪ ಸಿದ್ಧಿಯಾಯಿತ್ತಾಗಿ. ಸಂಕಲ್ಪವೆಂಬ ಸಂಬಂಧವನರಿಯೆನು, ನಿಮ್ಮ ವಿಚಾರ ಎಡೆಗೊಂಡಿತ್ತಾಗಿ. ನಿಮ್ಮ ವಿಚಾರವೇ ಅಂತರಂಗದೊಳಗೆ ತುಂಬಿತ್ತಾಗಿ, ಎನ್ನ ಮನದ ಮುಂದೆಯಲ್ಲ ನೀನೆಯಾಗಿರ್ದೆಯಾಗಿ ಕಪಿಲಸಿದ್ಧ ಮಲ್ಲಿನಾಥಯ್ಯ ॥

manaveṃba saṃkalpava nariyenu, saṃkalpa siddhiyāyittāgi. saṃkalpaveṃba saṃbaṃdhavanariyenu, nimma vicāra eḍegoṃḍittāgi. nimma vicāravē aṃtaraṃgadoḷage tuṃbittāgi, enna manada muṃdeyalla nīneyāgirdeyāgi kapilasiddha mallināthayya ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ಪ್ರತ್ಯುತ್ತರ.

hīgeṃdu siddharāmayya dēvaru binnaisalu, adakke prabhudēvara pratyuttara.

Report an error

ವಿಚಾರವೆಂಬುದು ಸಂದೇಹಕ್ಕೊಳಗು ನೋಡಾ! ವಿಚಾರಿಸುವನ್ನಕ್ಕರ ನೀ ನಾನೆಂಬುದೆತ್ತ ಬಲ್ಲೆ? ಮರುಳೆ ವಾಙ್ಮನಾತೀತವಾದ ಘನವು ವಿಚಾರಕ್ಕೆ ಸಿಲುಕುವುದೆ? ಗುಹೇಶ್ವಲಿಂಗವು ತನ್ನ ತಿಳಿದು ನೋಡಿಹೆನೆಂಬವರ ವಿಚಾರವೆಂಬ ಬಲೆಯಲ್ಲಿ ಕೆಡಹಿದನು. ॥

vicāraveṃbudu saṃdēhakkoḷagu nōḍā! vicārisuvannakkara nī nāneṃbudetta balle? maruḷe vāṅmanātītavāda ghanavu vicārakke silukuvude? guhēśvaliṃgavu tanna tiḷidu nōḍiheneṃbavara vicāraveṃba baleyalli keḍahidanu. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ.

hīgeṃdu prabhudēvaru nirūpisalu, adakke siddharāmayya dēvaru binnaisida prasthāvada vacana.

Report an error

ವಿವೇಕ ವೆಂಬುದು ಬೇರಿಲ್ಲ ಕಂಡಯ್ಯ! ವಿವೇಕ ನವನಾಳದ ಸುಳುಹು. ತೊಡೆದು ಸುನಾಳವ ಶುದ್ಧವ ಮಾಡುವೆ. ಅಷ್ಟದಳ ಕಮಲವನು ಊರ್ಧ್ವಮುಖವ ಮಾಡಿ, ನಿಜಪದದಲ್ಲಿ ನಿಲಿಸಿದೆ. ಐವತ್ತೆರಡಕ್ಷರವ ತಿಳಿದು ನೋಡಿ ಏಕಾಕ್ಷರದಲ್ಲಿ ನಿಲಿಸುವೆ. ಕಪಿಲ ಸಿದ್ಧಮಲ್ಲಿನಾಥ ಎನ್ನ ವಿಚಾರದ ಹವಣ ನೀವೇ ಬಲ್ಲಿರಿ. ॥

vivēka veṃbudu bērilla kaṃḍayya! vivēka navanāḷada suḷuhu. toḍedu sunāḷava śuddhava māḍuve. aṣṭadaḷa kamalavanu ūrdhvamukhava māḍi, nijapadadalli niliside. aivatteraḍakṣarava tiḷidu nōḍi ēkākṣaradalli nilisuve. kapila siddhamallinātha enna vicārada havaṇa nīvē balliri. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ಪ್ರತ್ಯುತ್ತರ.

hīgeṃdu siddharāmayya dēvaru binnaisalu, adakke prabhudēvara pratyuttara.

Report an error

ಯೋಗ ವಿಯೋಗವೆಂಬ ಹೊಲಬ ಬಲ್ಲವರನಾರನು ಕಾಣೆನು. ನವನಾಳದ ಸುಳುಹ ತಿಳಿದೆನೆಂಬುದು ಯೋಗವಲ್ಲ. ಐವತ್ತೆರಡಕ್ಷರದ ಶಾಸನವ ತಿಳಿದು ನೋಡಿ ಹೃದಯ ಕಮಲದ ಕರ್ನಿಕೆಯಲ್ಲಿ ಸಿಕ್ಕಿದೆನೆಂಬುದು ಯೋಗವಲ್ಲ. ಬಹಿರಂಗವೆಂಬರೆ ಕ್ರಿಯಾ ರಹಿತ. ಅಂತರಂಗವೆಂಬರೆ ವಾಙ್ಮನಾತೀತ. ಗುಹೇಶ್ವರನೆಂಬ ಲಿಂಗವು ಷಡುಚಕ್ರದ ಮೇಲಿಲ್ಲ ಕಾಣಾ ಸಿದ್ಧರಾಮಯ್ಯ. ॥

yōga viyōgaveṃba holaba ballavaranāranu kāṇenu. navanāḷada suḷuha tiḷideneṃbudu yōgavalla. aivatteraḍakṣarada śāsanava tiḷidu nōḍi hr̥daya kamalada karnikeyalli sikkideneṃbudu yōgavalla. bahiraṃgaveṃbare kriyā rahita. aṃtaraṃgaveṃbare vāṅmanātīta. guhēśvaraneṃba liṃgavu ṣaḍucakrada mēlilla kāṇā siddharāmayya. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

hīgeṃdu prabhudēvaru nirūpisalu, adakke siddharāmayya dēvara binnaha.

Report an error

ಅಂತರಂಗದಲ್ಲಿ ನಿಮ್ಮ ನೋಡುವನಲ್ಲ ಕೇಳು ಕಂಡಾ. ಎಲೆ ಅಯ್ಯ ಬಹಿರಂಗದಲ್ಲಿ ಬಳಸುವನಲ್ಲ ಕೇಳು ಕಂಡಾ. ಎಲೆ ಅಯ್ಯ ಸುಷುಮ್ನದ ಬಟ್ಟೆಯ ತುದಿಯ ನಡರಿ ಸಾವಿರ ದಳದ ಮಂಟಪದಲ್ಲಿ ನಿಮ್ಮ ನೆಲೆಗೊಂಡಿಪ್ಪೆ ನೋಡಾ ಕಪಿಲ ಸಿದ್ಧ ಮಲ್ಲಿನಾಥಯ್ಯ. ॥

aṃtaraṃgadalli nimma nōḍuvanalla kēḷu kaṃḍā. ele ayya bahiraṃgadalli baḷasuvanalla kēḷu kaṃḍā. ele ayya suṣumnada baṭṭeya tudiya naḍari sāvira daḷada maṃṭapadalli nimma nelegoṃḍippe nōḍā kapila siddha mallināthayya. ॥

Report an error

ಹೀಗೆಂದು ಸಿದ್ಧರಾಮಯ್ಯದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರ ಪ್ರತ್ಯುತ್ತರ.

hīgeṃdu siddharāmayyadēvaru binnaisalu, adakke prabhudēvara pratyuttara.

Report an error

ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದ ನೆಟ್ಟೆಲುವ ಮುರಿದು ನಿಷ್ಠೆಯಿಂದ ಹಿಂದಣ ಬಟ್ಟೆಯ ತೆಗೆದು ಅಮೃತವನುಂಡಿಹೆನೆಂಬವರ ಕೇಡಿಂಗೆ ಕಡೆ ಇಲ್ಲ. ಅತ್ಯತಿಷ್ಠದ್ದಶಾಂಗುಲವೆಂಬ ಶೃತಿಯ ನೋಡಲು, ಮುಟ್ಟಿ ನೆಲೆಗೊಳಿಸುವ ಠಾವುಂಟೆ? ಸ್ಥಾನ ಮಾನವೆಂಬ ಮಾತಿಂಗೆ ದೂರವಾದ ಘನವ ಬ್ರಹ್ಮರಂಧ್ರದಲ್ಲಿ ಕಂಡೆನೆಂದರೆ ಕಾಣಬಹುದು. ನಮ್ಮ ಗುಹೇಶ್ವರ ಲಿಂಗವು ಕಲ್ಪಿತಕ್ಕೆ ದೂರ ಕೇಳಾ ಸಿದ್ಧರಾಮಯ್ಯ. ॥

svastha padmāsanadalli kuḷḷirda neṭṭeluva muridu niṣṭheyiṃda hiṃdaṇa baṭṭeya tegedu amr̥tavanuṃḍiheneṃbavara kēḍiṃge kaḍe illa. atyatiṣṭhaddaśāṃgulaveṃba śr̥tiya nōḍalu, muṭṭi nelegoḷisuva ṭhāvuṃṭe? sthāna mānaveṃba mātiṃge dūravāda ghanava brahmaraṃdhradalli kaṃḍeneṃdare kāṇabahudu. namma guhēśvara liṃgavu kalpitakke dūra kēḷā siddharāmayya. ॥

Report an error

ಪರಬ್ರಹ್ಮವೆಂಬುದನು ಬ್ರಹ್ಮರಂಧ್ರದಲ್ಲಿ ನೆಲೆಗೊಳಿಸಿದೆನೆಂಬುದು ಕಲ್ಪಿತವಲ್ಲದೆ ನಿರ್ವಿಕಲ್ಪಿತವಲ್ಲವೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

parabrahmaveṃbudanu brahmaraṃdhradalli nelegoḷisideneṃbudu kalpitavallade nirvikalpitavallaveṃdu prabhudēvaru nirūpisalu, adakke siddharāmayya dēvara binnaha.

Report an error

ನಾ ನಿನ್ನ ರೂಪ ವಿಚಾರಿಸುವನಲ್ಲ ಕೇಳಾ! ನಿಮ್ಮ ಧ್ಯಾನದಲ್ಲಿ ಇಪ್ಪಾತನಲ್ಲ ಕೇಳಾ! ಅತ್ಯತಿಷ್ಠದ್ದಶಾಂಗುಲದಲ್ಲಿ ನಿಮ್ಮ ನೆಲಿಸಿ ನಾನೊಂದೆಡೆಯಲ್ಲಿ ಇಪ್ಪಾತನಲ್ಲ ಕೇಳಾ. ಓಂಕಾರವೆಂಬ ಪೀಠಕ್ಕೆ ನಾನಾಗಿ ನಿಃಶಬ್ದವೆಂಬ ಲಿಂಗವ ನೆಲೆಗೊಳಿಸಿ ಬೆರಸಿ ಬೇರಿಲ್ಲದೆ ಇಪ್ಪೆ ನೋಡಯ್ಯ ಕಪಿಲ ಸಿದ್ಧಮಲ್ಲಿನಾಥಯ್ಯ ನೀನು ಪ್ರಣವ ರೂಪಾಗಿ. ॥

nā ninna rūpa vicārisuvanalla kēḷā! nimma dhyānadalli ippātanalla kēḷā! atyatiṣṭhaddaśāṃguladalli nimma nelisi nānoṃdeḍeyalli ippātanalla kēḷā. ōṃkāraveṃba pīṭhakke nānāgi niḥśabdaveṃba liṃgava nelegoḷisi berasi bērillade ippe nōḍayya kapila siddhamallināthayya nīnu praṇava rūpāgi. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು ಅದಕ್ಕೆ ಪ್ರಭು ದೇವರ ಪ್ರತ್ಯುತ್ತರ.

hīgeṃdu siddharāmayya dēvaru binnaisalu adakke prabhu dēvara pratyuttara.

Report an error

ಬಿಂದುವೇ ಪೀಠವಾಗಿ, ನಾದವೇ ಲಿಂಗವಾಗಿರೆ, ಅದು ಭಿನ್ನಲಿಂಗ ನೋಡಾ! ಕಳೆ ಎಂಬ ಪೂಜೆ ನಿರ್ಮೂಲ್ಯವಾಗಿ ನಾದಬಿಂದು ಕಳಾತೀತ ನೋಡಾ! ಮಹಾಘನ ಲಿಂಗೈಕ್ಯವು ಅಲ್ಲಿ ಇಲ್ಲಿ ಸಿಲುಕದು. ಅಚಳವಪ್ಪ ನಿರಾಳಪ್ರಣಮ ರೂಪೆಂದು ಹೆಸರಿಡಬಹುದೆ? ನಮ್ಮ ಗುಹೇಶ್ವರನ ನಿಲವು ನಿಃಶಬ್ದ ಬ್ರಹ್ಮಮುಚ್ಯತೆ ಎಂಬುದನರಿಯಾ ಸಿದ್ಧರಾಮಯ್ಯ? ॥

biṃduvē pīṭhavāgi, nādavē liṃgavāgire, adu bhinnaliṃga nōḍā! kaḷe eṃba pūje nirmūlyavāgi nādabiṃdu kaḷātīta nōḍā! mahāghana liṃgaikyavu alli illi silukadu. acaḷavappa nirāḷapraṇama rūpeṃdu hesariḍabahude? namma guhēśvarana nilavu niḥśabda brahmamucyate eṃbudanariyā siddharāmayya? ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರ ಬಿನ್ನಹ.

hīgeṃdu prabhudēvaru nirūpisalu, adakke siddharāmayya dēvara binnaha.

Report an error

ನಾದ ಬಿಂದು ಎಂಬಲ್ಲಿ ಅಂಗಲಿಂಗಸಂಬಂಧವೆಂಬೆನಯ್ಯ! ನಾದಪ್ರಾಣಬಿಂದು ಕಾಯವಾದ ಕಾರಣನಾದ ಸ್ವರವಲ್ಲ ಬಿಂದು ಕಾಯವಲ್ಲ. ಉಭಯ ಸೂತಕ ರಹಿತ ಕಂಡಯ್ಯ! ನಾದ ಬಿಂದುವಿನ ಒಡ್ಡತೋರಿ ಮನ ಮಗ್ನವಾದ ನಿಲವ ಕಪಿಲ ಸಿದ್ಧಮಲ್ಲಿಕಾರ್ಜುನ ನೀನೆ ಬಲ್ಲೆ. ॥

nāda biṃdu eṃballi aṃgaliṃgasaṃbaṃdhaveṃbenayya! nādaprāṇabiṃdu kāyavāda kāraṇanāda svaravalla biṃdu kāyavalla. ubhaya sūtaka rahita kaṃḍayya! nāda biṃduvina oḍḍatōri mana magnavāda nilava kapila siddhamallikārjuna nīne balle. ॥

Editor's note: Original numbered segment 1 in source paragraph 192.

Report an error

ನಾದಬಿಂದು ಕಳಾತೀತವಾದ ಮಹಾ ಘನದೊಳಗೆ ಮನ ಮಗ್ನವಾಗಿ ನಾನಿದ್ದೆನೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ.

nādabiṃdu kaḷātītavāda mahā ghanadoḷage mana magnavāgi nāniddeneṃdu siddharāmayya dēvaru binnaisalu, adakke prabhudēvaru koṭṭa pratyuttara.

Editor's note: Original numbered segment 2 in source paragraph 192.

Report an error

ಅರಿವನರಿದು, ಮರಹ ಮರೆದು, ಸಂಕಲ್ಪ ಸಂಶಯವಳಿದ ನಿಲನನರಿವ ಪರಿ ಎಂದು ಹೇಳಾ? ಅರಿವೆನೆಂದರೆ ಜ್ಞಾನಕ್ಕೆ ದೂರ. ಮರೆವೆನೆಂದರೆ ಮನಕ್ಕೆ ದೂರ. ಅರಿದು ಮರೆದೆನೆಂದರೆ ಉಪಮೆಗೆ ದೂರ. ನಿರ್ಭಾವದ ಹೊಲಿಗೆಯಲ್ಲಿ ಭಾವ ಸಂಕಲ್ಪ ಬಿಡದು. ನಮ್ಮ ಗುಹೇಶ್ವರ ಲಿಂಗದಲ್ಲಿ ಮನ ಮಗ್ನಯೋಗ ನಿನಗೆಂತು ಸಾಧ್ಯವಾಯಿತ್ತು ಹೇಳಾ ಸಿದ್ಧರಾಮಯ್ಯ? ॥

arivanaridu, maraha maredu, saṃkalpa saṃśayavaḷida nilananariva pari eṃdu hēḷā? ariveneṃdare jñānakke dūra. mareveneṃdare manakke dūra. aridu maredeneṃdare upamege dūra. nirbhāvada holigeyalli bhāva saṃkalpa biḍadu. namma guhēśvara liṃgadalli mana magnayōga ninageṃtu sādhyavāyittu hēḷā siddharāmayya? ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಬಿನ್ನೈಸಿದ ಪ್ರಸ್ಥಾವದ ವಚನ.

hīgeṃdu prabhudēvaru nirūpisalu, adakke siddharāmayya dēvaru binnaisida prasthāvada vacana.

Report an error

ಎನ್ನ ಮನಕ್ಕೆ ಮತ್ತೊಂದು. ಇಂಬಿಲ್ಲ ಕಂಡಯ್ಯ. ನಿಮ್ಮ ನೆನೆವೆ ನಾನು. ನೀನು ಎನ್ನ ನೆನೆವೆ ಕಂಡಯ್ಯ. ನಿನಗೆಯು ಎನಗೆಯು ಒಮ್ಮನ ನೋಡಯ್ಯ! ನೀ ಮನಮುಕ್ತನಾದ ಕಾರಣ ನಿನ್ನೊಡನೆ ಎನ್ನ ಮನಮುಕ್ತ ನೋಡಯ್ಯ ಕಪಿಲಸಿದ್ಧಮಲ್ಲಿನಾಥಯ್ಯ. ॥

enna manakke mattoṃdu. iṃbilla kaṃḍayya. nimma neneve nānu. nīnu enna neneve kaṃḍayya. ninageyu enageyu ommana nōḍayya! nī manamuktanāda kāraṇa ninnoḍane enna manamukta nōḍayya kapilasiddhamallināthayya. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಮನಮುಗ್ನವಪ್ಪ ಮಹಾನುಭಾವನಂ ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥

hīgeṃdu siddharāmayya dēvaru manamugnavappa mahānubhāvanaṃ binnaisalu, adakke prabhudēvaru nirūpisida prasthāvada vacana. ॥

Report an error

ಮನ ಉಂಟೆ ಮರುಳೇ ಶಿವಯೋಗಿಗೆ? ಮತ್ತೊಮ್ಮೆ ಮನ ಮಗ್ನ ಉಂಟೆ ಶಿವಯೋಗಿಗೆ? ಇಲ್ಲದ ಮನ ಉಂಟೆಂದು ನುಡಿದು ಅಡಗಿಸಿದೆನೆಂಬ ಮಾತು ಮನವ ನೆಲೆ ಮಾಡಿ ತೋರುತ್ತಿದೆ ಗುಹೇಶ್ವರನನರಿದ ಶರಣಂಗೆ ತೋರಲಿಲ್ಲ ಅಡಗಲಿಲ್ಲ ಕೇಳಾ. ॥

mana uṃṭe maruḷē śivayōgige? mattomme mana magna uṃṭe śivayōgige? illada mana uṃṭeṃdu nuḍidu aḍagisideneṃba mātu manava nele māḍi tōruttide guhēśvarananarida śaraṇaṃge tōralilla aḍagalilla kēḷā. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಿದ ಮಹಾನುಭಾವದ ನಿಃಪತಿಗೆ ಸಿದ್ಧರಾಮಯ್ಯ ದೇವರು ಬಿನೈಸಿದ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisida mahānubhāvada niḥpatige siddharāmayya dēvaru binaisida prasthāvada vacana. ॥

Report an error

ಮನ ಮಗ್ನವಾದ ಯೋಗವೆಂದಡೇನು ಕೊರತೆ ಹೇಳಾ ಎಲೆ ಅಯ್ಯ? ಮನವಿಲ್ಲದ ಬಚ್ಚಬರಿಯ ಬೊಮ್ಮವೆಂದಡೇನು ಹೆಚ್ಚು ಹೇಳಾ ಎಲೆ ಅಯ್ಯ? ನುಡಿದ ಮಾತಿನಲ್ಲಿ ವಿವರ ತೋರುತ್ತಿದೆ ಎಂದಡೆ ತಾತ್ಪರ್ಯವಂತಪ್ಪುದೆ ಕಪಿಲ ಸಿದ್ಧಮಲ್ಲಿನಾಥ? ॥

mana magnavāda yōgaveṃdaḍēnu korate hēḷā ele ayya? manavillada baccabariya bommaveṃdaḍēnu heccu hēḷā ele ayya? nuḍida mātinalli vivara tōruttide eṃdaḍe tātparyavaṃtappude kapila siddhamallinātha? ॥

Report an error

ಹೀಗೆಂದು ಬಿನೈಸಿದ ಸಿದ್ಧರಾಮಯ್ಯ ದೇವರ ನಿಜಾನುಭಾವಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥

hīgeṃdu binaisida siddharāmayya dēvara nijānubhāvakke prabhudēvaru nirūpisida prasthāvada vacana. ॥

Report an error

ಮನ ಮಗ್ನವೆಂತಪ್ಪುದು, ಅಂತೆ ಇರಬೇಕಲ್ಲದೆ ಮತ್ತೊಂದು ಮನವೆಂಬುದುಂಟೆ ಹೇಳಾ! ಅರಿದು ಮರೆದುದ ಅರಿದು ಮರೆದೆನೆಂಬ ಜ್ಞಾನ ಉಂಟೆ? ಗುಹೇಶ್ವರ ಲಿಂಗವು ಅರಿದೆನೆಂಬಲ್ಲಿಯೇ ಮನವ ಮರೆಮಾಡಿ ಕಾಡುವನು. ॥

mana magnaveṃtappudu, aṃte irabēkallade mattoṃdu manaveṃbuduṃṭe hēḷā! aridu mareduda aridu maredeneṃba jñāna uṃṭe? guhēśvara liṃgavu arideneṃballiyē manava maremāḍi kāḍuvanu. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಿದ ಮಹಾ ವಾಕ್ಯಕ್ಕೆ ಸಿದ್ಧರಾಮಯ್ಯ ದೇವರು ಬಿನೈಸಿದ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisida mahā vākyakke siddharāmayya dēvaru binaisida prasthāvada vacana. ॥

Report an error

ಅಂಗದಂತೆ ಲಿಂಗ ಲಿಂಗದಂತೆ ಅಂಗವಾದ ಬಳಿಕ, ಅಂಗದಂತೆ ಲಿಂಗೈಕ್ಯ ಲಿಂಗದಂತೆ ಅಂಗೈಕ್ಯ. ಮನವೆ ಲಿಂಗ ಲಿಂಗವೇ ಮನವಾದ ಬಳಿಕ ಮಾತು ಮಾತುಗಳೆಲ್ಲ ಹೊಳ್ಳಾದ ಕಾರಣ ಲಿಂಗೈಕ್ಯವೆ? ಸ್ವರಶಬ್ದ ಸಂದಣಿಗೆ ಇನ್ನು ತೆರಹುಂಟೆ? ಕಪಿಲ ಸಿದ್ಧಮಲ್ಲಿನಾಥ ಇನ್ನು ನಿಮ್ಮ ದೇವರೆಂದು ಅರಸಲುಂಟೇ ಇಲ್ಲವೇ ಎಂಬುದನ್ನು ತಿಳುಹಿಕೊಡಾ ಎಲೆ ಅಯ್ಯ. ॥

aṃgadaṃte liṃga liṃgadaṃte aṃgavāda baḷika, aṃgadaṃte liṃgaikya liṃgadaṃte aṃgaikya. manave liṃga liṃgavē manavāda baḷika mātu mātugaḷella hoḷḷāda kāraṇa liṃgaikyave? svaraśabda saṃdaṇige innu terahuṃṭe? kapila siddhamallinātha innu nimma dēvareṃdu arasaluṃṭē illavē eṃbudannu tiḷuhikoḍā ele ayya. ॥

Report an error

ಹೀಗೆಂದು ಪರತತ್ವದ ಅರಿವಿಂಗೆ ಹರಿವ ನುಡಿದು ನಿಮ್ಮನರಸಲುಂಟೊ ಇಲ್ಲವೋ ಎಂಬುದ ನೀವೆ ನಿರೂಪಿಸಿ ಎನಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥

hīgeṃdu paratatvada ariviṃge hariva nuḍidu nimmanarasaluṃṭo illavō eṃbuda nīve nirūpisi enalu, adakke prabhudēvaru nirūpisida prasthāvada vacana. ॥

Report an error

ಕರ್ಪುರದ ಗಿರಿಯನುರಿ ಹಿಡಿದ ಬಳಿಕ ಇದ್ದಿಲುಂಟೆ? ಮಂಜಿನ ಶಿವಾಲಯಕ್ಕೆ ಬಿಸಿಲ ಕಲಶ ಉಂಟೇ? ಕೆಂಡದ ಗಿರಿಯ ಅರಗಿನ ಬಾಣದಲೆಚ್ಚಡೆ ಬಳಿಕ ಮರಳಿ ಬಾಣವನರಸಲುಂಟೆ? ಗುಹೇಶ್ವರ ಲಿಂಗವನರಿದಬಳಿಕ, ದೇವರೆಂದು ಅರಸಲುಂಟೆ ಸಿದ್ಧರಾಮಯ್ಯ? ॥

karpurada giriyanuri hiḍida baḷika iddiluṃṭe? maṃjina śivālayakke bisila kalaśa uṃṭē? keṃḍada giriya aragina bāṇadaleccaḍe baḷika maraḷi bāṇavanarasaluṃṭe? guhēśvara liṃgavanaridabaḷika, dēvareṃdu arasaluṃṭe siddharāmayya? ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಿದ ಮಹಾನುಭಾವಕ್ಕೆ ಸಿದ್ಧರಾಮಯ್ಯದೇವರು ಬಿನ್ನೈಸಿದ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisida mahānubhāvakke siddharāmayyadēvaru binnaisida prasthāvada vacana. ॥

Report an error

ಅಯ್ಯ, ನಿಮ್ಮ ದೇವರೆಂದು ಭಾವಿಸಲರಿಯೆನು ಕೇಳಾ. ಎನ್ನ ಮನವ ನುಂಗಿದೆ ಎಂದು ಹಿಂದೆ ನಿಮಗಾನು ಬಿನ್ನಹವ ಮಾಡಿದ ಕಾರಣ ಎನ್ನ ಒಳಹೊರಗೆ ನೀನೆ ಕಂಡಯ್ಯ! ನಿಮ್ಮೊಳಗೆ ಅಡಗಿದ ನುಡಿಯನೊಳಕೊಂಡ ಅರಿವು ಅರಿದರಿದು ಮರೆದ ಪರಿ ಎಂತಯ್ಯ ಕಪಿಲ ಸಿದ್ಧಮಲ್ಲಿನಾಥಯ್ಯ. ॥

ayya, nimma dēvareṃdu bhāvisalariyenu kēḷā. enna manava nuṃgide eṃdu hiṃde nimagānu binnahava māḍida kāraṇa enna oḷahorage nīne kaṃḍayya! nimmoḷage aḍagida nuḍiyanoḷakoṃḍa arivu aridaridu mareda pari eṃtayya kapila siddhamallināthayya. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರ ಶಿವಾದ್ವೈತ ವಾಕ್ಯಕ್ಕೆ ಪ್ರಭು ದೇವರು ಸರ್ವಶೂನ್ಯ ಸಮಾಧಿಯ ನಿಲವ ನಿರೂಪಿಸಿದ ಪ್ರಸ್ಥಾವದ ವಚನ. ॥

hīgeṃdu siddharāmayya dēvara śivādvaita vākyakke prabhu dēvaru sarvaśūnya samādhiya nilava nirūpisida prasthāvada vacana. ॥

Report an error

ಅರಿದೆನೆಂಬುದು ತಾ ಬಯಲು. ಅರಿಯೆನೆಂಬುದು ತಾ ಬಯಲು. ಮರೆದೆನೆಂಬುದು ತಾ ಬಯಲು. ಅರುಹಿನ ಕುರುಹಿನ ಮರಹಿನೊಳಗೆ ಗುಹೇಶ್ವರನೆಂಬುದು ತಾ ಬಯಲು. ॥

arideneṃbudu tā bayalu. ariyeneṃbudu tā bayalu. maredeneṃbudu tā bayalu. aruhina kuruhina marahinoḷage guhēśvaraneṃbudu tā bayalu. ॥

Report an error

ಇಂತು ಪ್ರಭುದೇವರು ನಿರೂಪಿಸಿದ ಮಹಾ ವಾಕ್ಯವಾದ ಸ್ವಾನುಭಾವೋಪದೇಶದಿಂ. ಸಿದ್ಧರಾಮಯ್ಯ ದೇವರು ಪ್ರಸನ್ನತ್ವಮಂ ಪಡೆದು ಪರಬ್ರಹ್ಮದೊಳು ನಿರ್ಮಾಣವೆಂತಪ್ಪುದೆಂದು ಪ್ರಭುದೇವರ ಬೆಸಗೊಂಡ ಪ್ರಸ್ಥಾವದ ವಚನ. ॥

iṃtu prabhudēvaru nirūpisida mahā vākyavāda svānubhāvōpadēśadiṃ. siddharāmayya dēvaru prasannatvamaṃ paḍedu parabrahmadoḷu nirmāṇaveṃtappudeṃdu prabhudēvara besagoṃḍa prasthāvada vacana. ॥

Report an error

ಅಯ್ಯ, ಕಬ್ಬುನ ನೀರನೊಳಕೊಂಡಂತೆ, ಶಬ್ದ ನಿರಾಳವನೊಳಕೊಂಡಂತೆ, ಮರೀಚಿಯ ಬಯಲನೊಳಕೊಂಡಂತೆ, ಎನ್ನನೆಂದೊಳಕೊಂಬೆ ಹೇಳಾ ಕಪಿಲ ಸಿದ್ಧ ಮಲ್ಲಿಕಾರ್ಜುನ? ॥

ayya, kabbuna nīranoḷakoṃḍaṃte, śabda nirāḷavanoḷakoṃḍaṃte, marīciya bayalanoḷakoṃḍaṃte, ennaneṃdoḷakoṃbe hēḷā kapila siddha mallikārjuna? ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ನಿರೂಪಿಸಿದ ಮಹಾನುಭಾವದ ವಾಕ್ಯವೆಂತಿರ್ದುದೆಂದೊಡೆ, ಆ ಪ್ರಸ್ಥಾವದ ವಚನ ॥

hīgeṃdu siddharāmayya dēvaru binnaisalu, adakke prabhudēvaru nirūpisida mahānubhāvada vākyaveṃtirdudeṃdoḍe, ā prasthāvada vacana ॥

Report an error

ತೆರಹಿಲ್ಲದ ಘನವ ಮನ ಒಳಕೊಂಡು, ತೆರಹಿಲ್ಲದ ಮನವ ಘನ ಒಳಕೊಂಡು, ತನಗೆ ತಾ ತರಹರವಾದ ಬಳಿಕ, ಮರಳಿ ಇನ್ನು ಇಂಬುಗೊಡಲುಂಟೆ? ಗುಹೇಶ್ವರನ ಲೀಲೆ ಮಾಬನ್ನಕ್ಕರ ಉರಿಯೊಳಗಣ ಕರ್ಪುರದಂತೆ ಇರಬೇಕು ಕಾಣಾ ಸಿದ್ಧರಾಯಯ್ಯ. ॥

terahillada ghanava mana oḷakoṃḍu, terahillada manava ghana oḷakoṃḍu, tanage tā taraharavāda baḷika, maraḷi innu iṃbugoḍaluṃṭe? guhēśvarana līle mābannakkara uriyoḷagaṇa karpuradaṃte irabēku kāṇā siddharāyayya. ॥

Report an error

ಇಂತು ಪ್ರಭುದೇವರು ನಿರ್ವಾಣದ ನಿಲುಕಡೆಯ ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಇಂತೀ ಕರ್ಮಕ್ರಿಯೆಗಳಿಂದ ನಿಮ್ಮ ಕಂಡೆನು, ಸುಕೃತದ ದೆಸೆಯಿಂದ ಎನಗೆ ನಿಜವು ಸಾಧ್ಯವಾಯಿತ್ತೆಂದು ಬಿನ್ನೈಸಿದ ಪ್ರಸ್ಥಾವದ ವಚನ. ॥

iṃtu prabhudēvaru nirvāṇada nilukaḍeya nirūpisalu, adakke siddharāmayya dēvaru iṃtī karmakriyegaḷiṃda nimma kaṃḍenu, sukr̥tada deseyiṃda enage nijavu sādhyavāyitteṃdu binnaisida prasthāvada vacana. ॥

Report an error

ಕೆರೆ ತೊರೆ ದೇಗುಲದ ಕಡೆಯಿಂದ ನಿಮ್ಮ ಕಂಡೆ, ಎಡಹುವ ಕಲ್ಲ ತೆಗೆವ ಮರೆಯಲ್ಲಿ ನಿಧಾನವ ಕಂಡಂತೆ, ಎನ್ನ ಮರವೆಯ ತಮದ ಅದ್ರಿಗೆ ದಿನಮಣಿ ಜನಸಿದಂತೆ, ಕಪಿಲ ಸಿದ್ಧಮಲ್ಲಿಕಾರ್ಜುನ ಲಿಂಗವೆಂಬ ಭ್ರಾಂತು ಸ್ವಯವಾಯಿತ್ತು ಪ್ರಭುದೇವರ ಕಾರುಣ್ಯದಿಂದೆ. ॥

kere tore dēgulada kaḍeyiṃda nimma kaṃḍe, eḍahuva kalla tegeva mareyalli nidhānava kaṃḍaṃte, enna maraveya tamada adrige dinamaṇi janasidaṃte, kapila siddhamallikārjuna liṃgaveṃba bhrāṃtu svayavāyittu prabhudēvara kāruṇyadiṃde. ॥

Report an error

ಇಂತು ಸಿದ್ಧರಾಮಯ್ಯ ದೇವರು ನಿಮ್ಮಿಂದ ಪರಬ್ರಹ್ಮಸ್ವರೂಪಾದೆನೆಂದು, ಬಿನೈಸಲು ಅದಕ್ಕೆ ಪ್ರಭುದೇವರು ಆ ಸಿದ್ಧರಾಮಯ್ಯ ದೇವರ ಸಮರಸವ ಕಂಡು ಕೊಂಡಾಡಿದ ಪ್ರಸ್ಥಾವದ ವಚನ ॥

iṃtu siddharāmayya dēvaru nimmiṃda parabrahmasvarūpādeneṃdu, binaisalu adakke prabhudēvaru ā siddharāmayya dēvara samarasava kaṃḍu koṃḍāḍida prasthāvada vacana ॥

Report an error

ನಿರ್ವಿಕಲ್ಪ ಅದ್ವೈತವ ನೋಡಿರೆ. ಬೆಳಗಿನ ಬೆಳಗು ಅಡಗಿತ್ತು ನೋಡಿರೆ. ಚಂದ್ರ ಸೂರ್ಯರು ಭೂಲೋಕದೊಳಂದಾರುವ ಕಾಣೆ. ಜ್ಯೋತಿ ಇಲ್ಲದ ಬೆಳಗಿನ ಪ್ರಭೆಯೋ ಗುಹೇಶ್ವರಲಿಂಗದಲ್ಲಿ ಸಿದ್ಧರಾಮಯ್ಯ ದೇವರ ಮಹಾಘನವ ನಾನೇನೆಂಬೆನು. ॥

nirvikalpa advaitava nōḍire. beḷagina beḷagu aḍagittu nōḍire. caṃdra sūryaru bhūlōkadoḷaṃdāruva kāṇe. jyōti illada beḷagina prabheyō guhēśvaraliṃgadalli siddharāmayya dēvara mahāghanava nānēneṃbenu. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಸಿದ್ಧರಾಮಯ್ಯ ದೇವರು ಪ್ರಭುದೇವರ ಕರಸ್ಥಲದ ಲಿಂಗದ ಆದ್ಯಂತಮಂ ಕೇಳಿದ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisalu, siddharāmayya dēvaru prabhudēvara karasthalada liṃgada ādyaṃtamaṃ kēḷida prasthāvada vacana. ॥

Report an error

ಅಯ್ಯ ನಿಮ್ಮ ಸರ ಉಂಡ ಸಬುದವೆನ್ನ ಮನಕ್ಕೆ ವೇದ್ಯವಾಯಿತ್ತು. ನಿಮ್ಮ ನಿಜ ಉಂಡ ನಿಲವು ಎನ್ನ ಮತಿಗೆ ವೇದ್ಯವಾಯಿತ್ತು. ನಿಮ್ಮ ಕರುಣ ಪ್ರಸಾದವನ್ನ ಸರ್ವಾಂಗಕ್ಕೆ ವೇದ್ಯವಾಯಿತ್ತು. ನಿಮ್ಮ ಕಾಯವಿಡಿದಿಪ್ಪ ಕರಸ್ಥಲದ ಕಾರಣವ ಹೇಳಾ ಕಪಿಲ ಸಿದ್ಧಮಲ್ಲಿನಾಥ ॥

ayya nimma sara uṃḍa sabudavenna manakke vēdyavāyittu. nimma nija uṃḍa nilavu enna matige vēdyavāyittu. nimma karuṇa prasādavanna sarvāṃgakke vēdyavāyittu. nimma kāyaviḍidippa karasthalada kāraṇava hēḷā kapila siddhamallinātha ॥

Report an error

ಇಂತು ಸಿದ್ಧರಾಮಯ್ಯ ದೇವರು ಬಿನ್ನಪಂಗೈಯ್ಯಲು, ಪ್ರಭುದೇವರು ತಮ್ಮ ಕರಸ್ಥಲದ ಅನಾದಿ ಸಂಸಿದ್ಧಮಂ ನಿರೂಪಿಸುತ್ತಿರ್ದ ಪ್ರಸ್ಥಾವದ ವಚನ. ॥

iṃtu siddharāmayya dēvaru binnapaṃgaiyyalu, prabhudēvaru tamma karasthalada anādi saṃsiddhamaṃ nirūpisuttirda prasthāvada vacana. ॥

Report an error

ಅನಾದಿ ಗಣನಾಥನ ಶಿಷ್ಯನು ಆದಿಗಣನಾಥನು. ಆದಿಗಣನಾಥನ ಶಿಷ್ಯನು ಅಧ್ಯಾತ್ಮಗಣನಾಥನು. ಅಧ್ಯಾತ್ಮಗಣನಾಥನ ಶಿಷ್ಯನು ಆತ್ಮಗಣನಾಥನು. ಆತ್ಮಗಣನಾಥನ ಶಿಷ್ಯನು ವ್ಯೋಮಸಿದ್ಧಗಣನಾಥನು. ವ್ಯೋಮಸಿದ್ಧಗಣನಾಥನ ಶಿಷ್ಯನು ಬಸವನೆಂಬ ಗಣನಾಥನು. ಬಸವನೆಂಬ ಗಣನಾಥನ ಶಿಷ್ಯನು ಅನುಮಿಷನೆಂಬ ಗಣನಾಥನು. ಅನುಮಿಷನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು. ಇಂತು ಅನಾದಿವಿಡಿದು ಬಂದ ಅನುಪಮಲಿಂಗವು ಗುಹೇಶ್ವರನೆಂಬ ಹೆಸರನೊಳಕೊಂಡು ಎನ್ನ ಕರಸ್ಥಲಕ್ಕೆ ಸಾಧ್ಯವಾಯಿತ್ತು ಕಾಣಾ ಸಿದ್ಧರಾಮಯ್ಯ. ॥

anādi gaṇanāthana śiṣyanu ādigaṇanāthanu. ādigaṇanāthana śiṣyanu adhyātmagaṇanāthanu. adhyātmagaṇanāthana śiṣyanu ātmagaṇanāthanu. ātmagaṇanāthana śiṣyanu vyōmasiddhagaṇanāthanu. vyōmasiddhagaṇanāthana śiṣyanu basavaneṃba gaṇanāthanu. basavaneṃba gaṇanāthana śiṣyanu anumiṣaneṃba gaṇanāthanu. anumiṣaneṃba gaṇanāthana śiṣyanu allamaprabhuveṃba gaṇanāthanu. iṃtu anādiviḍidu baṃda anupamaliṃgavu guhēśvaraneṃba hesaranoḷakoṃḍu enna karasthalakke sādhyavāyittu kāṇā siddharāmayya. ॥

Report an error

ಹೀಗೆಂದು ಪ್ರಭುದೇವರು ತನ್ನ ಕರಸ್ಥಲದ ಲಿಂಗದ ಪೂರ್ವಾಪರಮಂ ತಿಳಿಯ ಹೇಳಲು, ಸಿದ್ಧರಾಮಯ್ಯ ದೇವರು ಇಷ್ಟಲಿಂಗವಿಡಿದು, ನಿಜಲಿಂಗೈಕ್ಯವ ಕಾಂಬ ಪರಿ ಹೇಗೆಂದು ಬೆಸಗೊಂಬ ಪ್ರಸ್ಥಾವದ ವಚನ. ॥

hīgeṃdu prabhudēvaru tanna karasthalada liṃgada pūrvāparamaṃ tiḷiya hēḷalu, siddharāmayya dēvaru iṣṭaliṃgaviḍidu, nijaliṃgaikyava kāṃba pari hēgeṃdu besagoṃba prasthāvada vacana. ॥

Report an error

ಕಾಯವೇ ಪೀಠಿಕೆ ಪ್ರಾಣವೆ ಲಿಂಗವಾಗಿರಲು, ಬೇರೆ ಮತ್ತೆ ಕುರುಹೇಕಯ್ಯ? ಕುರುಹುವಿಡಿದು ಕೂಡುವ ನಿರವಯಲುಂಟೆ? ಜಗದೊಳಗೆ ನಷ್ಟವ ಕೈಯ್ಯಲ್ಲಿ ಹಿಡಿದು ದೃಷ್ಟವ ಕಂಡಿಹೆನೆಂದರೆ ಕಪಿಲ ಸಿದ್ಧಮಲ್ಲಿನಾಥಯ್ಯನು ಸಾಧ್ಯವಹ ಪರಿಯ ಹೇಳಾ ಪ್ರಭುವೇ. ॥

kāyavē pīṭhike prāṇave liṃgavāgiralu, bēre matte kuruhēkayya? kuruhuviḍidu kūḍuva niravayaluṃṭe? jagadoḷage naṣṭava kaiyyalli hiḍidu dr̥ṣṭava kaṃḍiheneṃdare kapila siddhamallināthayyanu sādhyavaha pariya hēḷā prabhuvē. ॥

Report an error

ಇಂತು ಕುರುಹಿಡಿದು ನಿರವಯಲಿಂಗವನರಿವ ಪರಿ ಹೇಗೆಂದು ಸಿದ್ಧರಾಮಯ್ಯ ದೇವರು ಬಿನ್ನೈಸಲು ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ.॥

iṃtu kuruhiḍidu niravayaliṃgavanariva pari hēgeṃdu siddharāmayya dēvaru binnaisalu adakke prabhudēvaru nirūpisida prasthāvada vacana.॥

Report an error

ಇಷ್ಟಲಿಂಗದ ಪ್ರಾಣಲಿಂಗದ ಭೇದವನಾರು ಬಲ್ಲರು ಹೇಳಾ? ಅಂತರಂಗವೆಂಬ ಶಬುದಕ್ಕೆ ಬಹಿರಂಗ ಮುಂದುಗೊಂಡಿಪ್ಪುದು ಮನವನೆಡೆಗೊಂಡ ಲಿಂಗವು ವಿಚಾರ ವ್ಯಾಕುಳಕ್ಕೆ ಒಳಗಾಗಬಾರದೆಂದು ಮನ ಭಾವ ಜ್ಞಾನ ನೋಟವ ತಂದು ಕರಸ್ಥಲದಲ್ಲಿ ನಿಕ್ಷೇಪಿಸಿ ಅಂತರಂಗ ಬಹಿರಂಗವೆಂಬುದನರಿಯದೆ ಅನುಮಿಷನಾಗಿಪ್ಪನಾ ಶರಣನು. ಪ್ರಾಣಲಿಂಗದ ಪ್ರಸನ್ನಮುಖವ ನೋಡಿ ಪರಿಣಾಮಿಸಲೋಸುಗ ಕರತೇಜವೆಂಬ ದರ್ಪಣವ ಹಿಡಿದು, ಇರ್ಪನು ನೋಡಾ ಗುಹೇಶ್ವರ ಲಿಂಗದಲ್ಲಿ ನಿಜವನೈದಿಹೆನೆಂದರೆ ಕುರುಹುವಿಡಿದು, ಕುರುಹುಗೆಡಬೇಕು ಸಿದ್ಧರಾಮಯ್ಯ. ॥

iṣṭaliṃgada prāṇaliṃgada bhēdavanāru ballaru hēḷā? aṃtaraṃgaveṃba śabudakke bahiraṃga muṃdugoṃḍippudu manavaneḍegoṃḍa liṃgavu vicāra vyākuḷakke oḷagāgabāradeṃdu mana bhāva jñāna nōṭava taṃdu karasthaladalli nikṣēpisi aṃtaraṃga bahiraṃgaveṃbudanariyade anumiṣanāgippanā śaraṇanu. prāṇaliṃgada prasannamukhava nōḍi pariṇāmisalōsuga karatējaveṃba darpaṇava hiḍidu, irpanu nōḍā guhēśvara liṃgadalli nijavanaidiheneṃdare kuruhuviḍidu, kuruhugeḍabēku siddharāmayya. ॥

Report an error

ಹೀಗೆಂದು ಪ್ರಭುದೇವರು ತನ್ನ ಕರಸ್ಥಲದ ಇಷ್ಟಲಿಂಗದ ಸಂಬಂಧದ ಘನ ವಿವೇಕಮುಖದಿಂದ ತಿಳುಹಿ ತೋರಲು, ಆ ಸಿದ್ಧರಾಮಯ್ಯ ದೇವರು ಪರಮ ಹರುಷಿತರಾಗಿ ಆ ಕರಸ್ಥಲದ ಲಿಂಗದಲ್ಲಿ ಅಡಗಿರ್ಪ ನಿರ್ದೆಶ ಎಷ್ಟು ಭೇದವೆಂದು, ಬೆಸಗೊಂಬ ಪ್ರಸ್ಥಾವದ ವಚನ. ॥

hīgeṃdu prabhudēvaru tanna karasthalada iṣṭaliṃgada saṃbaṃdhada ghana vivēkamukhadiṃda tiḷuhi tōralu, ā siddharāmayya dēvaru parama haruṣitarāgi ā karasthalada liṃgadalli aḍagirpa nirdeśa eṣṭu bhēdaveṃdu, besagoṃba prasthāvada vacana. ॥

Report an error

ಅಯ್ಯ ನಿಮ್ಮ ಕರಸ್ಥಲದ ಘನಲಿಂಗವನುಪಮಿಸ ಬಲ್ಲವರಿಲ್ಲವಯ್ಯ. ನಿಮ್ಮ ಮಹಿಮೆಯನರಿವರೆ ನಾನೇತರೊಳಗೇನಯ್ಯ! ಆ ಇಷ್ಟಲಿಂಗದೊಳಗೆ ಮುಟ್ಟಿದ ಶರಣನೊಳಗೆ ಮುಟ್ಟಿದ ಕರಸ್ಥಲವೆಷ್ಟೆಂಬುದ ತಿಳುಹಿ ಎನ್ನನುಳುಹಿಕೊಳ್ಳಾ ಕಪಿಲ ಸಿದ್ಧಮಲ್ಲಿಕಾರ್ಜುನ. ॥

ayya nimma karasthalada ghanaliṃgavanupamisa ballavarillavayya. nimma mahimeyanarivare nānētaroḷagēnayya! ā iṣṭaliṃgadoḷage muṭṭida śaraṇanoḷage muṭṭida karasthalaveṣṭeṃbuda tiḷuhi ennanuḷuhikoḷḷā kapila siddhamallikārjuna. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ಇಷ್ಟಲಿಂಗದೊಳಗಣ ಸೂಕ್ಷ್ಮ ಭೇದವ ಕೇಳಲು, ಆ ಪ್ರಭುದೇವರು ಸೂಕ್ಷ್ಮದ ಸ್ಥಿತಿಯನ್ನು ಸಂಗನಬಸವಣ್ಣ ಬಲ್ಲ. ಆತನಲ್ಲಿ ನಿನಗೆ ತಿಳುಹಿ ಕೊಡುಹುವೆ ನಡೆ ಎಂದು ನಿರೂಪಿಸಿದ ಪ್ರಸ್ಥಾವದ ವಚನ ॥

hīgeṃdu siddharāmayya dēvaru iṣṭaliṃgadoḷagaṇa sūkṣma bhēdava kēḷalu, ā prabhudēvaru sūkṣmada sthitiyannu saṃganabasavaṇṇa balla. ātanalli ninage tiḷuhi koḍuhuve naḍe eṃdu nirūpisida prasthāvada vacana ॥

Report an error

ಆಯತಲಿಂಗನಿಡಿದು, ಸ್ವಾಯತಲಿಂಗವ ಕಾಣಬೇಕು ಸಿದ್ಧರಾಮಯ್ಯ. ಸ್ವಾಯತಲಿಂಗವಿಡಿದು, ಜಂಗಮ ಲಿಂಗವ ಕಾಣಬೇಕು ಸಿದ್ಧರಾಮಯ್ಯ. ಜಂಗಮಲಿಂಗವಿಡಿದು, ಗುರುಲಿಂಗವ ಕಾಣಬೇಕು ಸಿದ್ಧರಾಮಯ್ಯ. ಗುರುಲಿಂಗವಿಡಿದು, ಶಿವಲಿಂಗವ ಕಾಣಬೇಕು ಸಿದ್ಧರಾಮಯ್ಯ. ಶಿವಲಿಂಗವಿಡಿದು ಪ್ರಸಾದಲಿಂಗವ ಕಾಣಬೇಕು ಸಿದ್ಧರಾಮಯ್ಯ. ಇಂತು ಷಟ್‌ಸ್ಥಲದಂತುವ ಸಂಧಿಸಿ ಒಂದು ಮಾಡಿಕೊಂಡಿಪ್ಪ ಕರಸ್ಥಲದನುವನು ಗುಹೇಶ್ವರನ ಶರಣ ಸಂಗನಬಸವಣ್ಣ ಬಲ್ಲ, ಬೆಸಗೊಂಬ ಬಾರಾ ಸಿದ್ಧರಾಮಯ್ಯ. ॥

āyataliṃganiḍidu, svāyataliṃgava kāṇabēku siddharāmayya. svāyataliṃgaviḍidu, jaṃgama liṃgava kāṇabēku siddharāmayya. jaṃgamaliṃgaviḍidu, guruliṃgava kāṇabēku siddharāmayya. guruliṃgaviḍidu, śivaliṃgava kāṇabēku siddharāmayya. śivaliṃgaviḍidu prasādaliṃgava kāṇabēku siddharāmayya. iṃtu ṣaṭsthaladaṃtuva saṃdhisi oṃdu māḍikoṃḍippa karasthaladanuvanu guhēśvarana śaraṇa saṃganabasavaṇṇa balla, besagoṃba bārā siddharāmayya. ॥

Report an error

ಇಂತು ಬಸವರಾಜ ದೇವರ ದರುಶನವಾಗಬೇಕು ನಡೆ ಎಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಸಿದ್ಧರಾಮಯ್ಯ ದೇವರು ಪರಮಹರುಷಿತರಾಗಿ ಬಿನ್ನೈಸಿದ ಪ್ರಸ್ಥಾವದ ವಚನ ॥

iṃtu basavarāja dēvara daruśanavāgabēku naḍe eṃdu prabhudēvaru nirūpisalu, adakke siddharāmayya dēvaru paramaharuṣitarāgi binnaisida prasthāvada vacana ॥

Report an error

ಅಯ್ಯ ಕರಸ್ಥಲದ ಘನ ನಿಮ್ಮಲ್ಲಿರಲಿ. ಅಯ್ಯ, ನಿಮ್ಮ ಪರಸ್ಥಲದ ಘನವ ನಿಮ್ಮಲ್ಲಿರಲಿ. ಕರಸ್ಥಲವನೊಲ್ಲೆ, ಪರಸ್ಥಲವನೊಲ್ಲೆ. ಆವುದನು ಒಲ್ಲೆ ನೋಡಯ್ಯ. ಕಪಿಲ ಸಿದ್ಧಮಲ್ಲಿನಾಥಯ್ಯ, ನೀ ಒಲಿದು ಸಂಗನಬಸವಣ್ಣನ ಶ್ರೀ ಪಾದವ ತೋರಿಹೆನೆಂಬ ಮಾತಿಂಗೆ ಮಾರುವೋದೆನು. ಇನ್ನು ತೋರಿ ಎನ್ನನುಳುಹಿಕೊಳ್ತಾ ಎನ್ನ ದೇವರ ದೇವಾ ॥

ayya karasthalada ghana nimmallirali. ayya, nimma parasthalada ghanava nimmallirali. karasthalavanolle, parasthalavanolle. āvudanu olle nōḍayya. kapila siddhamallināthayya, nī olidu saṃganabasavaṇṇana śrī pādava tōriheneṃba mātiṃge māruvōdenu. innu tōri ennanuḷuhikoḷtā enna dēvara dēvā ॥

Report an error

ಇಂತು ಸಿದ್ಧರಾಮಯ್ಯ ದೇವರು ಬಿನ್ನೈಸಲು, ಪ್ರಭುದೇವರು ಸಿದ್ಧರಾಮಯ್ಯ ದೇವರನೊಡಗೊಂಡು, ಕಲ್ಯಾಣದತ್ತಲಭಿಮುಖವಾಗಿ ಬರುತ್ತಿರ್ಪ ಪ್ರಸ್ಥಾವದ ವಚನ ॥

iṃtu siddharāmayya dēvaru binnaisalu, prabhudēvaru siddharāmayya dēvaranoḍagoṃḍu, kalyāṇadattalabhimukhavāgi baruttirpa prasthāvada vacana ॥

Report an error

ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನು. ಆಚಾರದಲ್ಲಿ ಪ್ರಾಣವ ಸ್ವಾಯತವ ಮಾಡಿಕೊಂಡನು, ಪ್ರಾಣದಲ್ಲಿ ಲಿಂಗವ ಸ್ವಾಯತವ ಮಾಡಿಕೊಂಡನು. ಲಿಂಗದಲ್ಲಿ ಜಂಗಮವ ಸ್ವಾಯತವ ಮಾಡಿಕೊಂಡನು. ಜಂಗಮದಲ್ಲಿ ಪ್ರಸಾದವ ಸ್ವಾಯತವ ಮಾಡಿಕೊಂಡನು. ಪ್ರಸಾದದಲ್ಲಿ ನಿತ್ಯವ ಸ್ವಾಯತವ ಮಾಡಿಕೊಂಡನು. ನಿತ್ಯದಲ್ಲಿ ದಾಸೋಹವ ಸ್ವಾಯತವ ಮಾಡಿಕೊಂಡನು. ದಾಸೋಹದಲ್ಲಿ ತನ್ನ ಮರೆದು ನಿಶ್ಚಿಂತನಿವಾಸಿಯಾಗಿ ಐದಾನೆ. ನಮ್ಮ ಗುಹೇಶ್ವರಲಿಂಗದಲ್ಲಿ ಸಂಗನ ಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಧನ್ಯರಾಗಬೇಕು ನಡೆ ಸಿದ್ಧರಾಮಯ್ಯ. ॥

aṃgadalli ācārava svāyatava māḍikoṃḍanu. ācāradalli prāṇava svāyatava māḍikoṃḍanu, prāṇadalli liṃgava svāyatava māḍikoṃḍanu. liṃgadalli jaṃgamava svāyatava māḍikoṃḍanu. jaṃgamadalli prasādava svāyatava māḍikoṃḍanu. prasādadalli nityava svāyatava māḍikoṃḍanu. nityadalli dāsōhava svāyatava māḍikoṃḍanu. dāsōhadalli tanna maredu niściṃtanivāsiyāgi aidāne. namma guhēśvaraliṃgadalli saṃgana basavaṇṇana śrīpādakke śaraṇeṃdu dhanyarāgabēku naḍe siddharāmayya. ॥

Report an error

Illustration: Verse & Place (Project-owned).