ಚನ್ನಬಸವೇಶಗೊಲವಿಂ ನನ್ನಿಯೊಳುಪದೇಶವ ಶರಣ ಬಸವೇಶ್ವರ ತಾಂ॥ ಸನ್ನುತಮಾಗಿತ್ತುದನೊಲವಿಂ ಬಿನ್ನವಿಸುವೆ ಶರಣಗಣರು ಅಹುದಹುದೆನಲು. ॥
cannabasavēśagolaviṃ nanniyoḷupadēśava śaraṇa basavēśvara tāṃ॥ sannutamāgittudanolaviṃ binnavisuve śaraṇagaṇaru ahudahudenalu. ॥
(ಚತುರ್ಥೋಪದೇಶ.) · ಬಸವನು ಚನ್ನಬಸವನಿಗೆ ಉಪದೇಶ ಸಂಪಾದನೆ.
basavanu cannabasavanige upadēśa saṃpādane.
The complete original prose, dialogue and poems of teaching 4.
74 passagesKannada with transliteration
ಚನ್ನಬಸವೇಶಗೊಲವಿಂ ನನ್ನಿಯೊಳುಪದೇಶವ ಶರಣ ಬಸವೇಶ್ವರ ತಾಂ॥ ಸನ್ನುತಮಾಗಿತ್ತುದನೊಲವಿಂ ಬಿನ್ನವಿಸುವೆ ಶರಣಗಣರು ಅಹುದಹುದೆನಲು. ॥
cannabasavēśagolaviṃ nanniyoḷupadēśava śaraṇa basavēśvara tāṃ॥ sannutamāgittudanolaviṃ binnavisuve śaraṇagaṇaru ahudahudenalu. ॥
ಅದೆಂತೆಂದೊಡೆ ಪ್ರಭುದೇವರು ಸಿದ್ಧರಾಮಯ್ಯ ದೇವರು ಬಸವ ರಾಜದೇವರ ಮಹಾತ್ಮೆಯಂ ಕೊಂಡಾಡುತ್ತ ಪರಮಾನಂದದೊಳೋಲಾಡುತ್ತ ಬರುತ್ತಿರಲತ್ತ, ಅಖಂಡಾದ್ವಯ ನಿತ್ಯ ನಿರವಯ ನಿಃಶೂನ್ಯವಪ್ಪ ನಿಃಕಲ ಪರಶಿವನ ಸ್ಥೂಲತತ್ವವೇ ಮರ್ತ್ಯಲೋಕದಲ್ಲಿ ಜಗಹಿತಾರ್ಥವಾಗಿ ಬಸವೇಶ್ವರ ನಾಮದಿಂದವತರಿಸಿ ಷಡುದರುಶನ ಷಣ್ಮತ ಷಟ್ಸಮಯಗಳಿಂದ ವೀರಶೈವ ಸದ್ಭಕ್ತಿ ಮಸುಳಿಸಿರಲಾ ಶಿವಭಕ್ತಿಯನುದ್ಧರಿಸಿ, ಸರ್ವಾಚಾರವನಿಂಬುಗೊಂಡು ಕಲ್ಯಾಣ ಪಟ್ಟಣದಲ್ಲಿ ಗುರುಲಿಂಗಜಂಗಮ ಭಕ್ತಿಯ ಮಾಡುತ್ತ, ನಿತ್ಯವೆಂಬತ್ತೆಂಟು ಪವಾಡಂಗಳಂ ಜಯಿಸುತ್ತಿರ್ಪ ಬಸವೇಶನೆಂತಾತನೆಂದೊಡೆ,
adeṃteṃdoḍe prabhudēvaru siddharāmayya dēvaru basava rājadēvara mahātmeyaṃ koṃḍāḍutta paramānaṃdadoḷōlāḍutta baruttiralatta, akhaṃḍādvaya nitya niravaya niḥśūnyavappa niḥkala paraśivana sthūlatatvavē martyalōkadalli jagahitārthavāgi basavēśvara nāmadiṃdavatarisi ṣaḍudaruśana ṣaṇmata ṣaṭsamayagaḷiṃda vīraśaiva sadbhakti masuḷisiralā śivabhaktiyanuddharisi, sarvācāravaniṃbugoṃḍu kalyāṇa paṭṭaṇadalli guruliṃgajaṃgama bhaktiya māḍutta, nityaveṃbatteṃṭu pavāḍaṃgaḷaṃ jayisuttirpa basavēśaneṃtātaneṃdoḍe,
ಶೈವಂಗೆದೆಗೊಂತ, ವೈಷ್ಣವ ಜೀಮೂತ ಜಂಝಾ ಮಾರುತ, ಚಾರ್ವಾಕ ಚೌದಂತಶೃಣಿ, ಬೌದ್ಧ ಧರ್ದುರ ಫಣಿ, ಕ್ಷಪಣ ವನದಾವಾನಲ, ನೈಯಾಯಿಕ ಹರಿಣ ಶಾರ್ದೂಲ, ಭಾಟ್ಟ ಗೋಮತ ಶರಧಿಕುಂಭಜ, ಪ್ರಭಾಕರ ಕದಳೀ ಮತ್ತಗಜ, ಮೀಮಾಂಸ ಹಿಮ ಚೈತ್ರ, ವೈಶೇಷ ಲತಾಲವಿತ್ರ, ಕಪಾಲಿ ಕುಮುದ ಮಾರ್ತಂಡ, ಸಾಂಖ್ಯ ಮತ ಶರಭ ಬೇರುಂಡ, ಕರ್ಮವಾದ ಕುಧರ ಕುಲಿಶ, ಕಾಲವಾದ ಕಮಲತಾರೇಶ, ಮಂತ್ರವಾದ ಮಸ್ತಕಶೂಲ, ಮಾಯಾವಾದ ಮೂಲ ಕುದ್ದಾಲ, ಕೌಳಮತ ತರುಪರಶು, ಕಾಳಾಮುಖ ಕಂತ ಪಾಶ, ಶಾಕ್ತೇಯ ತಿಮಿರ ದೀಪ, ಸೌರಮತ ಪನ್ನಗ ಖಗಾಧಿಪನೆನಿಸಿ, ವೀರಶೈವ ಸದ್ಭಕ್ತಿಯ ವರ್ಧನಂಗೈವುತ್ತ ಶಿವ ಶರಣ ಸಾಗರಕ್ಕೆ ಪೂರ್ಣೇಂದುವಾಗಿ, ಸುಖಮಿರುತ್ತಲೊಂದುದಿನ ಶಿವಲಿಂಗಾರ್ಚನೆಯಂ ಮಾಡುತ್ತ, ಲಿಂಗದೋಳ್ತಿಳಿದು ಆ ಲಿಂಗದ ಕಳೆ ಏಕವಾಗಿ, ವಾರಿ ವಾರಿ ಕೂಡಿದಂತೆ ಕ್ಷೀರ ಕ್ಷೀರ ಬೆರೆದಂತೆ, ರತ್ನದೋಳ್ಕಳೆ ಬೆರಸಿಪ್ಪಂತೆ, ಅಂತರಂಗದ ಜ್ಞಾನ ಬಹಿರಂಗದ ಕ್ರಿ ಒಂದಾಗಿ, ಇಷ್ಟಲಿಂಗದ ಕಳೆ ಪ್ರಾಣಲಿಂಗಕ್ಕೆ ವೇದಿಸಿ, ಪ್ರಾಣಲಿಂಗ ಸಂಬಂಧವಪ್ಪ ಭೇದವು ಶರಣ ಸಂಗದಿಂದಲ್ಲದೆ, ದೊರೆಕೊಳ್ಳದೆಂದು ಜ್ಞಾನಮುಖದೊಳು ನಿರೀಕ್ಷಿಸುತ್ತಿರಲು, ನಿಃಕಲ ಪರಶಿವನ ಸೂಕ್ಷ್ಮತತ್ವವೆ ಚನ್ನಬಸವೇಶ್ವರನೆಂಬ ನಾಮದಿಂದ ಮರ್ತ್ಯಕ್ಕವತರಿಸಿ, ಸಕಲ ಪ್ರಮಥರ್ಗೆ ಷಡುಸ್ಥಲವಂ ಬೋಧಿಸುವದಕ್ಕೆ ತಾನೇ ಕಾರಣವಾಗಿ, ಅಲ್ಲಮ ಪ್ರಭುದೇವರ ಬರವಿಂಗೆ ತಾನೆ ಮೂಲಿಗನಾಗಿ ಬಂದು ಆ ಬಸವೇಶ್ವರನ ಸ್ತೋತ್ರಮಂ ಮಾಡಿ, ಅನುಗ್ರಹಮಂ ಪಡೆದರದೆಂತೆಂದೊಡೆ ಆ ಪ್ರಸ್ಥಾವದ ವಚನ ॥
śaivaṃgedegoṃta, vaiṣṇava jīmūta jaṃjhā māruta, cārvāka caudaṃtaśr̥ṇi, bauddha dhardura phaṇi, kṣapaṇa vanadāvānala, naiyāyika hariṇa śārdūla, bhāṭṭa gōmata śaradhikuṃbhaja, prabhākara kadaḷī mattagaja, mīmāṃsa hima caitra, vaiśēṣa latālavitra, kapāli kumuda mārtaṃḍa, sāṃkhya mata śarabha bēruṃḍa, karmavāda kudhara kuliśa, kālavāda kamalatārēśa, maṃtravāda mastakaśūla, māyāvāda mūla kuddāla, kauḷamata taruparaśu, kāḷāmukha kaṃta pāśa, śāktēya timira dīpa, sauramata pannaga khagādhipanenisi, vīraśaiva sadbhaktiya vardhanaṃgaivutta śiva śaraṇa sāgarakke pūrṇēṃduvāgi, sukhamiruttaloṃdudina śivaliṃgārcaneyaṃ māḍutta, liṃgadōḷtiḷidu ā liṃgada kaḷe ēkavāgi, vāri vāri kūḍidaṃte kṣīra kṣīra beredaṃte, ratnadōḷkaḷe berasippaṃte, aṃtaraṃgada jñāna bahiraṃgada kri oṃdāgi, iṣṭaliṃgada kaḷe prāṇaliṃgakke vēdisi, prāṇaliṃga saṃbaṃdhavappa bhēdavu śaraṇa saṃgadiṃdallade, dorekoḷḷadeṃdu jñānamukhadoḷu nirīkṣisuttiralu, niḥkala paraśivana sūkṣmatatvave cannabasavēśvaraneṃba nāmadiṃda martyakkavatarisi, sakala pramatharge ṣaḍusthalavaṃ bōdhisuvadakke tānē kāraṇavāgi, allama prabhudēvara baraviṃge tāne mūliganāgi baṃdu ā basavēśvarana stōtramaṃ māḍi, anugrahamaṃ paḍedaradeṃteṃdoḍe ā prasthāvada vacana ॥
ಮೀನಜ ರೋಮಜ ಋಷಿಯರು ಮೊದಲಾಗಿ ಅನಂತ ಕೋಟಿ ಹರಿಬ್ರಹ್ಮರಿಲ್ಲದಂದು, ಅಲ್ಲಿಂದತ್ತತ್ತ ನೀನೇಕೋ? ಲಿಂಗ ಒಬ್ಬನೆ ಶರಣ ಗುರುವೆ ಪರಮ ಗುರುವೆ ನೀನೆ, ಗತಿಯಯ್ಯ! ಆದಿ ಕುಳಕೆ ನೀನೆ ಮೂಲಿಗನಾಗಿ ಸುಳುಹುದೋರಿ ಪಾವನವ ಮಾಡಬಂದಿರಿ. ಬಹು ಮುಖ ಜೀವರಿಗೆ ಬಹು ಮುಖ ಪ್ರಸಾದವ ತೋರಿದಿರಯ್ಯ! ಭುವನವ ಸಲಹಲೆಂದು ಅವತರಿಸಿ ಆದಿಲಿಂಗ ಅನಾದಿ ಶರಣನೆಂಬುದು ತಪ್ಪದು. ನೀವು ಪುಟ್ಟಿಸಿದ ಘಟಕ್ಕೆ ಕಾರುಣ್ಯವ ಮಾಡಿ ಸಲಹಯ್ಯ ಕೂಡಲ ಚನ್ನಸಂಗಮ ದೇವಾ. ॥
mīnaja rōmaja r̥ṣiyaru modalāgi anaṃta kōṭi haribrahmarilladaṃdu, alliṃdattatta nīnēkō? liṃga obbane śaraṇa guruve parama guruve nīne, gatiyayya! ādi kuḷake nīne mūliganāgi suḷuhudōri pāvanava māḍabaṃdiri. bahu mukha jīvarige bahu mukha prasādava tōridirayya! bhuvanava salahaleṃdu avatarisi ādiliṃga anādi śaraṇaneṃbudu tappadu. nīvu puṭṭisida ghaṭakke kāruṇyava māḍi salahayya kūḍala cannasaṃgama dēvā. ॥
ಇಂತು ಚಿಕ್ಕದಂಣಾಯಕರು ಉಪಾವಸ್ಥೆಯಂ ಮಾಡಲು ಬಸವರಾಜದೇವರು ಭಕ್ತಿಭಾವ ಸಂಪನ್ನನಾಗಿ ಸರ್ವವೂ ಸಂಗಮನಾಥನೆಂಬ ಭಾವದಿಂದೆ ನಾನು ಉಪದೇಶವ ಮಾಡಲಮ್ಮೆನೆಂದು ನಿರೂಪಿಸಿದ ಪ್ರಸ್ಥಾವದ ವಚನ. ॥
iṃtu cikkadaṃṇāyakaru upāvastheyaṃ māḍalu basavarājadēvaru bhaktibhāva saṃpannanāgi sarvavū saṃgamanāthaneṃba bhāvadiṃde nānu upadēśava māḍalammeneṃdu nirūpisida prasthāvada vacana. ॥
ಹೋ ಹೋ ನಾನೊಬ್ಬರಿಗೆ ಉಪದೇಶವ ಮಾಡಲಮ್ಮೆನು. ಮುನ್ನಲಾದವರು ತಮ್ಮಿಂದ ತಾವಾದರು. ಅವರೆಲ್ಲರು ನಿಜಲಿಂಗೈಕ್ಯರು. ನಾನೇನು ಮಾಡಲಿಲ್ಲ. ತತ್ವವ ಹಿಡಿದವರಿಗೆ ತೊತ್ತಾಗಿ ನಡೆವೆನು. ಅಮರಗಣಂಗಳೇ ಸಾಕ್ಷಿ. ಕೂಡಲ ಸಂಗಮದೇವರ ಮುಂದೆ ಭಾಷೆ ಪ್ರಸಾದವನಿಕ್ಕಲಮ್ಮೆನಯ್ಯ ಚನ್ನಬಸವಣ್ಣಾ. ॥
hō hō nānobbarige upadēśava māḍalammenu. munnalādavaru tammiṃda tāvādaru. avarellaru nijaliṃgaikyaru. nānēnu māḍalilla. tatvava hiḍidavarige tottāgi naḍevenu. amaragaṇaṃgaḷē sākṣi. kūḍala saṃgamadēvara muṃde bhāṣe prasādavanikkalammenayya cannabasavaṇṇā. ॥
ಹೀಗೆಂದು ಬಸವರಾಜದೇವರು ನಿರೂಪಿಸಲು ಅದಕ್ಕೆ ಚನ್ನಬಸವಣ್ಣನು ನಿಮ್ಮ ಕರುಣದಿಂದೆ ಅನುಗ್ರಹವ ಪಡೆವನಲ್ಲದೆ ಬಿಡುವನಲ್ಲ ಅನಾದಿವಿಡಿದು ನಿಮ್ಮ ಶಿಷ್ಯನೆಂಬ ಭೇದವ ತೋರಿಸಿ ಒಡಂಬಡಿಸಿ ಉಪಾವಸ್ಥೆಯಂ ಮಾಡುವ ಪ್ರಸ್ಥಾವದ ವಚನ. ॥
hīgeṃdu basavarājadēvaru nirūpisalu adakke cannabasavaṇṇanu nimma karuṇadiṃde anugrahava paḍevanallade biḍuvanalla anādiviḍidu nimma śiṣyaneṃba bhēdava tōrisi oḍaṃbaḍisi upāvastheyaṃ māḍuva prasthāvada vacana. ॥
ಅಂಜದಿರಿ ಅಂಜದಿರಿ ನಿಮ್ಮ ಪ್ರಮಥರ ಮುಂದೆ ನಿನಗೆ ಅಹುದಹುದೆನಲು, ನಿಮಗನಾದಿಯ ಶಿಸು ನಾನಯ್ಯ ಅದೆಂತೆಂದೊಡೆ, ಜಲಗರ ಬೆಳೆಯಿತ್ತೆಂದು ಅಂಜಿ ಹೇಮರಸವ ಕುಡಿದಲ್ಲಿ ಒಳಗಿದ್ದ ಕಪಿಶೃಂಗಾರವ ಮಾಡನೆ? ಕೆಡುವುದೆ ಗುರುವಿನುಪದೇಶ? ಪಿಂಡವ ಮರೆವುದೆ ಶಿವಜ್ಞಾನವು? ಹಿಂದೆ ಏಳುನೂರು ವರುಷ ಮಂಡೋದರಿಯ ಬಸಿರಲ್ಲಿ ಉದಯಂಗಯ್ಯನೆ ಇಂದ್ರಜಿತು? ನೀವು ನಾನು ಹೊಟ್ಟೆಯಲ್ಲಿರ್ದಂದು ವಿಭೂತಿಯ ಪಟ್ಟವ ಕಟ್ಟಿದಂದೆ ಅನುಗ್ರಹವಾಯಿತ್ತು ಕೂಡಲ ಚನ್ನಸಂಗಮದೇವಯ್ಯ ನಿಮ್ಮ ತೊತ್ತಿನ ತೊತ್ತು ಚನ್ನಬಸವಣ್ಣನು. ॥
aṃjadiri aṃjadiri nimma pramathara muṃde ninage ahudahudenalu, nimaganādiya śisu nānayya adeṃteṃdoḍe, jalagara beḷeyitteṃdu aṃji hēmarasava kuḍidalli oḷagidda kapiśr̥ṃgārava māḍane? keḍuvude guruvinupadēśa? piṃḍava marevude śivajñānavu? hiṃde ēḷunūru varuṣa maṃḍōdariya basiralli udayaṃgayyane iṃdrajitu? nīvu nānu hoṭṭeyallirdaṃdu vibhūtiya paṭṭava kaṭṭidaṃde anugrahavāyittu kūḍala cannasaṃgamadēvayya nimma tottina tottu cannabasavaṇṇanu. ॥
ಹೀಗೆಂದು ಚಿಕ್ಕದಣ್ಣಾಯಕರು ಬಿನ್ನೈಸಲು, ಬಸವರಾಜ ದೇವರು ಎಲ್ಲ ಶಿವಭಕ್ತರಿಗು ಶಿಸುವಲ್ಲದೆ ಒಬ್ಬರಿಗೆ ನಾನು ಗುರುವಲ್ಲವೆಂದು ನಿರೂಪಿಸಿದ ಪ್ರಸ್ಥಾವದ ವಚನ ॥
hīgeṃdu cikkadaṇṇāyakaru binnaisalu, basavarāja dēvaru ella śivabhaktarigu śisuvallade obbarige nānu guruvallaveṃdu nirūpisida prasthāvada vacana ॥
ಆದಿ ಅನಾದಿಯಿಂದತ್ತತ್ತ ಮುನ್ನ ಲಿಂಗಜಂಗಮವೆಂಬುದನಾರು ಬಲ್ಲವರಿಲ್ಲೆಂದು, ಇದರ ಸಕೀಲ ಸಂಬಂಧವ ತಿಳುಹಲೆಂದು ಮರ್ತ್ಯಕ್ಕೆ ಕಳುಹಿದನು ಶಶಿಧರನು. ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನಲ್ಲದೆ ಮತ್ತಾರನು ಕಾಣೆ. ಶಿಷ್ಯಂಗೆ ಗುರು ಉಪದೇಶ ಮಾಡಬೇಕಲ್ಲದೆ, ಗುರುವಿಂಗೆ ಶಿಷ್ಯ ಅನುಗ್ರಹವ ಮಾಡಿದ ಠಾವುಂಟೆ? ಎನ್ನ ಅರುಹಿನ ಆದಿಗೆ ನೀನೇ ಕರ್ತನೆಂದು ನಾನಿರುತ್ತಿರಲು, ನಿನಗೆ ನಾನಿನ್ನು ಅನುಗ್ರಹವ ಮಾಡುವ ಪರಿ ಎಂತಯ್ಯ ಕೂಡಲ ಸಂಗಮದೇವರ ಸ್ವರೂಪೆಂದು, ನಿನ್ನ ಕಂಡಿಪ್ಪೆ ಕಾಣಾ ಚನ್ನಬಸವಣ್ಣಾ. ॥
ādi anādiyiṃdattatta munna liṃgajaṃgamaveṃbudanāru ballavarilleṃdu, idara sakīla saṃbaṃdhava tiḷuhaleṃdu martyakke kaḷuhidanu śaśidharanu. aṃgada mēle liṃgavuḷḷudellavu saṃgamanāthanallade mattāranu kāṇe. śiṣyaṃge guru upadēśa māḍabēkallade, guruviṃge śiṣya anugrahava māḍida ṭhāvuṃṭe? enna aruhina ādige nīnē kartaneṃdu nāniruttiralu, ninage nāninnu anugrahava māḍuva pari eṃtayya kūḍala saṃgamadēvara svarūpeṃdu, ninna kaṃḍippe kāṇā cannabasavaṇṇā. ॥
ಹೀಗೆಂದು ಬಸವರಾಜ ದೇವರು ನಿರೂಪಿಸಲು, ಚಿಕ್ಕದಣ್ಣಾಯಕರು ಬಿನ್ನೈಸಿದ ಪ್ರಸ್ಥಾವದ ವಚನ. ॥
hīgeṃdu basavarāja dēvaru nirūpisalu, cikkadaṇṇāyakaru binnaisida prasthāvada vacana. ॥
ಆದಿ ಲಿಂಗ ಅನಾದಿ ಶರಣನೆಂಬುದು ತಪ್ಪದು. ಆದಿ ಗುರು ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ಹೇಳಾ ದೇವಾ? ಮುಳ್ಳು ಗುತ್ತುವರೆ ತೆರಹಿಲ್ಲದ ಪರಿಪೂರ್ಣದ ಘನವು ಒಬ್ಬರಲ್ಲಿ ಒಂದು ಭಾವ ಉಂಟೆ? ಎನ್ನೊಳಗೆ ಬೆಳಗುವ ಜ್ಞಾನ ನಿನ್ನ ಹೃದಯ ಕಮಲದೊಳಗಣ ಅವ್ಯಕ್ತಲಿಂಗ ನಿನ್ನೊಳಗೆ ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನ ಸುಜ್ಞಾನಲಿಂಗ ಒಂದರಲ್ಲಿ ಒಂದು ಬಿಚ್ಚಿ ಬೇರು ಮಾಡಬಾರದಾಗಿ, ಪ್ರಾಣಲಿಂಗ ಒಂದೆ ಉಪದೇಶ, ಒಂದೆ ಕ್ರಿಯಾಕರ್ಮ, ಒಂದೆ ನೀವಿನ್ನು ಅವುದು ಬೇರು ಮಾಡಿ ನುಡಿವಿರಯ್ಯ! ಕಾಯದಲ್ಲಿ ಗುರುವಾಗಿ ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕೈಯಿಂದ ಮಾಡಲಮ್ಮೆನೆಂದರೆ ಹೋಹುದೆ ಕೂಡಲ ಚನ್ನಸಂಗಮದೇವರು ಸಾಕ್ಷಿಯಾಗಿ, ಎನಗೆ ನೀವು ಉಪದೇಶವ ಮಾಡಿದರೆ ಮರ್ತ್ಯಲೋಕದ ಮಹಾಗಣಂಗಳ ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಬಸವಣ್ಣಾ. ॥
ādi liṃga anādi śaraṇaneṃbudu tappadu. ādi guru anādi śiṣyaneṃbudu tappadu. guruviṃge śiṣyaṃge ēnu dūra hēḷā dēvā? muḷḷu guttuvare terahillada paripūrṇada ghanavu obbaralli oṃdu bhāva uṃṭe? ennoḷage beḷaguva jñāna ninna hr̥daya kamaladoḷagaṇa avyaktaliṃga ninnoḷage toḷagi beḷaguva jyōtirliṃga enna sujñānaliṃga oṃdaralli oṃdu bicci bēru māḍabāradāgi, prāṇaliṃga oṃde upadēśa, oṃde kriyākarma, oṃde nīvinnu avudu bēru māḍi nuḍivirayya! kāyadalli guruvāgi aṃtaraṃgakke sujñānōpadēśava munnave māḍida baḷika kaiyiṃda māḍalammeneṃdare hōhude kūḍala cannasaṃgamadēvaru sākṣiyāgi, enage nīvu upadēśava māḍidare martyalōkada mahāgaṇaṃgaḷa kaiyalli ahudahudenisuve kāṇā basavaṇṇā. ॥
ಹೀಗೆಂದು ಚಿಕ್ಕದಣ್ಣಾಯಕರು ಬಿನ್ನೈಸಲು, ಅದಕ್ಕೆ ಬಸವರಾಜ ದೇವರು ನಿರೂಪಿಸಿದ ಪ್ರಸ್ಥಾವದ ವಚನ ॥
hīgeṃdu cikkadaṇṇāyakaru binnaisalu, adakke basavarāja dēvaru nirūpisida prasthāvada vacana ॥
ಗುರುವಿಂಗೆ ನೀನೆ ಕರ್ತ. ಲಿಂಗಕ್ಕೆ ನೀನೆ ಕರ್ತ. ಜಂಗಮಕ್ಕೆ ನೀನೆ ಕರ್ತ. ಪ್ರಸಾದಕ್ಕೆ ನೀನೆ ಕರ್ತ. ಉಪದೇಶಕ್ಕೆ ನೀನೆ ಕರ್ತ. ಕೂಡಲ ಸಂಗಮದೇವರು ಸಾಕ್ಷಿಯಾಗಿ ಎನಗೆಯು ನೀನೆ ಕರ್ತನಾದ ಕಾರಣ ನಾನು ಬೇಕೆನಲಮ್ಮೆ. ಬೇಡೆನಲಮ್ಮೆ ಕಾಣಾ ಚನ್ನಬಸವಣ್ಣಾ. ॥
guruviṃge nīne karta. liṃgakke nīne karta. jaṃgamakke nīne karta. prasādakke nīne karta. upadēśakke nīne karta. kūḍala saṃgamadēvaru sākṣiyāgi enageyu nīne kartanāda kāraṇa nānu bēkenalamme. bēḍenalamme kāṇā cannabasavaṇṇā. ॥
ಎನಗೆ ನೀನೇ ಕರ್ತನಾದ ಕಾರಣ ನೀನೆ ಹಗೆ ಮಾಡಿದಡೆ ಆ ಹಗೆಯ ಪ್ರಸಾದವೆಂಬೆನಲ್ಲದೆ, ಬೇರೆ ಸ್ವತಂತ್ರವನರಿಯೆನೆಂದು ಬಸವರಾಜ ದೇವರು ನಿರೂಪಿಸಲು, ಚಿಕ್ಕದಣ್ಣಾಯಕರು ಆ ಉತ್ತರಕ್ಕೆ ಮಹಾ ಪ್ರಸಾದವೆಂದು ಅನುಗ್ರಹವ ಮಾಡಿಸಿಕೊಂಬ ಪ್ರಸ್ಥಾವದ ವಚನ ॥
enage nīnē kartanāda kāraṇa nīne hage māḍidaḍe ā hageya prasādaveṃbenallade, bēre svataṃtravanariyeneṃdu basavarāja dēvaru nirūpisalu, cikkadaṇṇāyakaru ā uttarakke mahā prasādaveṃdu anugrahava māḍisikoṃba prasthāvada vacana ॥
ದೇವ ದೇವ ಮಹಾಪ್ರಸಾದ ತನ್ನ ರೂಪ ತಿಳಿದು ನೋಡಬೇಕೆಂದು ಕನ್ನಡಿಯನುಪಾವಸ್ಥೆಯಂ ಮಾಡಲು, ಆ ಕನ್ನಡಿ ಬೇಕು ಬೇಡೆಂಬುದೇ ಅಯ್ಯ? ಪತಿಯಾಜ್ಞೆಯಿಂದ ಸತಿಪತಿಭಾವ ಧರಿಸೆಂದರೆ ಸಂಯೋಗ ಕಾಲದಲ್ಲಿ ಅಲ್ಲವೆಂದೆನಬಹುದೇ? ನೀವೆ ಮಾಡಿದರೆ ನೀವೆ ಮಾಡಿದುದು. ನಾನೆ ಮಹಾಪ್ರಸಾದವ ಸ್ವೀಕರಿಸಿದರೂ ನೀವೆ ಮಾಡಿದುದು. ಅಂಗೈಯ್ಯ ಲಿಂಗದ ಲಕ್ಷಣವ ನೋಡಿ ಎಂದು ಕೈಯ್ಯಲ್ಲಿ ಕೊಟ್ಟರೆ, ಲಿಂಗದ ಲಕ್ಷಣವ ನೋಡಲಾಗದೆಂದು ಚನ್ನಸಂಗಮನಾಥನಕೋ ಎಂದು ಕೊಟ್ಟರೆ ಮಹಾಪ್ರಸಾದವೆಂದು ಕೈಕೊಂಡೆನು. ಗುರು ಬೆದರಿ ಅಂಜಿದರೆ ಮನವ ಸಂತೈಸಿ, ಏಕಾರ್ಥದ ಭೇದವ ತೋರಿ ಬಿನ್ನಹವ ಮಾಡಿದೆನು. ಕೂಡಲ ಚನ್ನಸಂಗಮ ದೇವರ ಮಹಾ ಮನೆಯ ಗಣಂಗಳು ಮೆಚ್ಚಲು ಸಂಗನ ಬಸವಣ್ಣನ ಕರುಣದ ಶಿಸುವೆಂಬುದ ಮೂರು ಲೋಕವೆಲ್ಲವು ಅರಿದು ಜಯಜಯ ಎನುತಿದ್ದಿತು. ॥
dēva dēva mahāprasāda tanna rūpa tiḷidu nōḍabēkeṃdu kannaḍiyanupāvastheyaṃ māḍalu, ā kannaḍi bēku bēḍeṃbudē ayya? patiyājñeyiṃda satipatibhāva dhariseṃdare saṃyōga kāladalli allaveṃdenabahudē? nīve māḍidare nīve māḍidudu. nāne mahāprasādava svīkarisidarū nīve māḍidudu. aṃgaiyya liṃgada lakṣaṇava nōḍi eṃdu kaiyyalli koṭṭare, liṃgada lakṣaṇava nōḍalāgadeṃdu cannasaṃgamanāthanakō eṃdu koṭṭare mahāprasādaveṃdu kaikoṃḍenu. guru bedari aṃjidare manava saṃtaisi, ēkārthada bhēdava tōri binnahava māḍidenu. kūḍala cannasaṃgama dēvara mahā maneya gaṇaṃgaḷu meccalu saṃgana basavaṇṇana karuṇada śisuveṃbuda mūru lōkavellavu aridu jayajaya enutidditu. ॥
ಮತ್ತಂ, ಕೃತಾಯುಗ, ತ್ರೇತಾಯುಗ, ದ್ವಾಪರ ಕಲಿಯುಗವಿಲ್ಲದಿಂದತ್ತತ್ತ ನೋಡಾ! ಧರೆಯು ಬ್ರಹ್ಮಾಂಡವು ಮೂರುತಿಗೊಳ್ಳದಲಿಂದತ್ತತ್ತಲಾದ ಮಹಾಪ್ರಸಾದವ ಸಾಧಿಸಿ ತಂದು ಎನ್ನ ಕೈಯಲ್ಲಿ ಕೊಟ್ಟನಯ್ಯ ನಿಕ್ಷೇಪವಾಗಿ ಕೂಡಲ ಚನ್ನಸಂಗೈಯ್ಯನಲ್ಲಿ ಬಸವಣ್ಣನೆಂಬ ಗುರುಲಿಂಗವು. ॥
mattaṃ, kr̥tāyuga, trētāyuga, dvāpara kaliyugavilladiṃdattatta nōḍā! dhareyu brahmāṃḍavu mūrutigoḷḷadaliṃdattattalāda mahāprasādava sādhisi taṃdu enna kaiyalli koṭṭanayya nikṣēpavāgi kūḍala cannasaṃgaiyyanalli basavaṇṇaneṃba guruliṃgavu. ॥
ಇಂತು ಬಸವರಾಜ ದೇವರ ಕೈಯ್ಯಲ್ಲಿ ಉಪದೇಶವ ಪಡೆದು ಲಿಂಗಾನುಗ್ರಹವ ತಾಳ್ದ ಚಿಕ್ಕದಣ್ಣಾಯಕರು ತಮಗೆ ಲಿಂಗಸ್ವಾಯತ ಸಂಬಂಧ ಸ್ವಯವಾದ ಭೇದಮಂ ವಿವೇಕದಿಂ ಪ್ರತಿಷ್ಠಿಸಿಕೊಂಡ ಪ್ರಸ್ಥಾವದ ವಚನ ॥
iṃtu basavarāja dēvara kaiyyalli upadēśava paḍedu liṃgānugrahava tāḷda cikkadaṇṇāyakaru tamage liṃgasvāyata saṃbaṃdha svayavāda bhēdamaṃ vivēkadiṃ pratiṣṭhisikoṃḍa prasthāvada vacana ॥
ಭಾವದಲ್ಲಿ ಗಮನ, ಪ್ರಾಣದಲ್ಲಿ ಲೋಭ, ಜಿಹ್ವೆಯಲ್ಲಿ ರುಚಿ, ಶ್ರೋತ್ರದಲ್ಲಿ ಕುಶಬ್ದ, ನಾಸಿಕದಲ್ಲಿ ದುರ್ಗಂಧ, ನೋಟದಲ್ಲಿ ಕಾಮ, ಶಬ್ದದಲ್ಲಿ ವಿರೋಧ, ಇಂತಹ ಭವಿಯ ಕಳೆದು, ಭಕ್ತನ ಮಾಡಿದ ಪರಿ ಎಂತೆಂದಡೆ, ಆಕಾರವಿಲ್ಲದಂದಿನ, ನಿರಾಕಾರವಿಲ್ಲದಂದಿನ, ಕಾಮನ ಸುಟ್ಟ ಭಸ್ಮವಿಲ್ಲದಂದಿನ, ತ್ರಿಪುರವ ಸುಟ್ಟ ಭಸ್ಮವಿಲ್ಲದಂದಿನ, ಕಾಲನ ಸುಟ್ಟ ಭಸ್ಮವಿಲ್ಲದಂದಿನ, ಆದಿ ಆಧಾರವಿಲ್ಲದಂದಿನ, ಚಿದ್ವಿಭೂತಿಯನೆ ತಂದು, ಪಟ್ಟವ ಕಟ್ಟಿದರೆ, ಭಾವಕ್ಕೆ ಗುರುವಾಯಿತ್ತು. ಪ್ರಾಣಕ್ಕೆ ಲಿಂಗವಾಯಿತ್ತು. ಜಿಹ್ವೆಗೆ ಪ್ರಸಾದವಾಯಿತ್ತು. ಶ್ರೋತ್ರಕ್ಕೆ ಶಿವಮಂತ್ರವಾಯಿತ್ತು. ನಾಸಿಕಕ್ಕೆ ಸುಗಂಧವಾಯಿತ್ತು. ನೋಟಕ್ಕೆ ಜಂಗಮವಾಯಿತ್ತು. ಶಬ್ದಕ್ಕೆ ಸಂಭಾಷಣೆಯಾಯಿತ್ತು. ಇಂತು ಪೂರ್ವದ ಗುಣಂಗಳೆಲ್ಲವಕಳೆದು, ಪುನರ್ಜಾತನಾದ ಕಾರಣ ಕೂಡಲ ಚನ್ನಸಂಗಯ್ಯನಲ್ಲಿ ಬಸವಣ್ಣನಿಂದೆ ಸರ್ವಾಂಗ ಲಿಂಗವಾದೆನು. ॥
bhāvadalli gamana, prāṇadalli lōbha, jihveyalli ruci, śrōtradalli kuśabda, nāsikadalli durgaṃdha, nōṭadalli kāma, śabdadalli virōdha, iṃtaha bhaviya kaḷedu, bhaktana māḍida pari eṃteṃdaḍe, ākāravilladaṃdina, nirākāravilladaṃdina, kāmana suṭṭa bhasmavilladaṃdina, tripurava suṭṭa bhasmavilladaṃdina, kālana suṭṭa bhasmavilladaṃdina, ādi ādhāravilladaṃdina, cidvibhūtiyane taṃdu, paṭṭava kaṭṭidare, bhāvakke guruvāyittu. prāṇakke liṃgavāyittu. jihvege prasādavāyittu. śrōtrakke śivamaṃtravāyittu. nāsikakke sugaṃdhavāyittu. nōṭakke jaṃgamavāyittu. śabdakke saṃbhāṣaṇeyāyittu. iṃtu pūrvada guṇaṃgaḷellavakaḷedu, punarjātanāda kāraṇa kūḍala cannasaṃgayyanalli basavaṇṇaniṃde sarvāṃga liṃgavādenu. ॥
ಮತ್ತ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಪಂಚಭೂತಂಗಳಲ್ಲಿ ಪಂಚಲಿಂಗ ಪ್ರತಿಷ್ಠೆಯ ಮಾಡಿದನಯ್ಯ ! ಮನ, ಬುದ್ಧಿ, ಚಿತ್ತ, ಅಹಂಕಾರವೆಂಬ ಅಂತಃಕರಣ ಚತುಷ್ಟಯದಲ್ಲಿ ಚತುರ್ಮುಖ ಲಿಂಗವನು ಪ್ರತಿಷ್ಠೆಯ ಮಾಡಿದನಯ್ಯ!. ಬಹಿರಂಗ ಹತವ ಮಾಡಿ ಶ್ರೋತ್ರ, ಘ್ರಾಣ, ತ್ವಕ್ಕು, ಜಿಹ್ವೆ, ನೇತ್ರ, ವಾಕ್ಕು, ಪಾಣಿ, ಪಾದ, ಪಾಯು, ಗುಹ್ಯಗಳೆಂಬ ದಶ ಇಂದ್ರಿಯಂಗಳಲ್ಲಿ ದಶಮುಖ ಲಿಂಗಪ್ರತಿಷ್ಠೆಯ ಮಾಡಿದನಯ್ಯ! ಅಂತರಂಗ ಬಹಿರಂಗ ಹತವ ಮಾಡಿದನಯ್ಯ, ಕೂಡಲ ಚನ್ನಸಂಗಮದೇವ ಎನ್ನ ಶ್ರೀಗುರು ಬಸವಣ್ಣನು. ॥
matta, pr̥thvi, appu, tēja, vāyu, ākāśaveṃba paṃcabhūtaṃgaḷalli paṃcaliṃga pratiṣṭheya māḍidanayya ! mana, buddhi, citta, ahaṃkāraveṃba aṃtaḥkaraṇa catuṣṭayadalli caturmukha liṃgavanu pratiṣṭheya māḍidanayya!. bahiraṃga hatava māḍi śrōtra, ghrāṇa, tvakku, jihve, nētra, vākku, pāṇi, pāda, pāyu, guhyagaḷeṃba daśa iṃdriyaṃgaḷalli daśamukha liṃgapratiṣṭheya māḍidanayya! aṃtaraṃga bahiraṃga hatava māḍidanayya, kūḍala cannasaṃgamadēva enna śrīguru basavaṇṇanu. ॥
ಮತ್ತಂ, ಹಸ್ತ ಮಸ್ತಕ ಸಂಯೋಗವಾಗದ ಮುನ್ನ, ಯೌವ್ವನ ಮಥನವಾಯಿತ್ತು. ಆವುದು ಅಂತರಂಗವೆಂಬೆ? ಆವುದು ಬಹಿರಂಗವೆಂಬೆ? ಆವುದು ಆತ್ಮಸಂಗವೆಂಬೆ? ಹಸ್ತಮಸ್ತಕ ಸಂಯೋಗವೆಂಬುದೆ ಬಹಿರಂಗ. ಮನ ಸಂಯೋಗವೆಂಬುದೆ ಅಂತರಂಗ. ಕೂಡಲ ಚನ್ನಸಂಗೈಯ್ಯನಲ್ಲಿ ಆತ್ಮ ಸಂಗವಾಯಿತ್ತು. ॥
mattaṃ, hasta mastaka saṃyōgavāgada munna, yauvvana mathanavāyittu. āvudu aṃtaraṃgaveṃbe? āvudu bahiraṃgaveṃbe? āvudu ātmasaṃgaveṃbe? hastamastaka saṃyōgaveṃbude bahiraṃga. mana saṃyōgaveṃbude aṃtaraṃga. kūḍala cannasaṃgaiyyanalli ātma saṃgavāyittu. ॥
ಚನ್ನಬಸವರಾಜ ದೇವರು ತಮಗೆ ಉಪದೇಶವ ಮಾಡಿದ ಮಹಾತ್ಮೆಯನು ವಿವೇಕಮುಖದಿಂದರಿದರಿದು, ಪರಿಣಾಮಿಸಿ ಕೃತನಿಶ್ಚಯವನೈದಿದ ಪ್ರಸ್ಥಾವದ ವಚನ ॥
cannabasavarāja dēvaru tamage upadēśava māḍida mahātmeyanu vivēkamukhadiṃdaridaridu, pariṇāmisi kr̥taniścayavanaidida prasthāvada vacana ॥
ಪ್ರಥಮ ಗುರು ಕಾಣುವಿಕೆಯಾಗಿ ಕರ್ಮಂಗಳು ಬಿಚ್ಚಿಬೆದರಿದವು. ಹುಸಿಯಾಮಿಷ ತಾಮಸ ಕುಟಿಲಂಗಳು ಕಳೆದು, ತಮಗೆ ನಿಂದಿರೆ ಠಾವಿಲ್ಲೆನುತ್ತಿರ್ದವು. ಸದ್ಗುರು ಕಾರುಣ ಹಸ್ತ ಮಸ್ತಕ ಸಂಯೋಗವಾದಲ್ಲಿ ಪೂರ್ವಗುಣವಳಿದು ಪುನರ್ಜಾತನಾಗಿ ಕರಣಾದಿ ಗುಣಂಗಳ ಕಳೆದು, ಶಿವಲಿಂಗದಲ್ಲಿ ಉಳಿದು, ಅನುಪಮ ಸುಖಸಾರಾಯ ಶರಣನೆನಿಸಿದರೆ ಇದನರಿದು ಲಿಂಗದಲ್ಲಿ ತದ್ಗತನಾಗಿರ್ದೆನು. ಜಂಗಮದಲ್ಲಿ ಕರುಣವ ಪಡೆದು, ಭವಿಯನೊಲ್ಲೆನೆಂದು ಬೇರೆ ನಿಂದ ಕಾರಣ ಕೂಡಲ ಚನ್ನಸಂಗಮದೇವ ನಿಮ್ಮ ಶರಣ ಬಸವಣ್ಣ ಭವ ಕಲ್ಪಿತವ ಕಳೆದನು. ॥
prathama guru kāṇuvikeyāgi karmaṃgaḷu biccibedaridavu. husiyāmiṣa tāmasa kuṭilaṃgaḷu kaḷedu, tamage niṃdire ṭhāvillenuttirdavu. sadguru kāruṇa hasta mastaka saṃyōgavādalli pūrvaguṇavaḷidu punarjātanāgi karaṇādi guṇaṃgaḷa kaḷedu, śivaliṃgadalli uḷidu, anupama sukhasārāya śaraṇanenisidare idanaridu liṃgadalli tadgatanāgirdenu. jaṃgamadalli karuṇava paḍedu, bhaviyanolleneṃdu bēre niṃda kāraṇa kūḍala cannasaṃgamadēva nimma śaraṇa basavaṇṇa bhava kalpitava kaḷedanu. ॥
ಮತ್ತಂ, ಚರಣವಿಡಿದಂಗೆ ಕರುಣಿ ಕಂದೆರವೆಯ ಮಾಡಬೇಕೆಂದು, ಮರಹಿಂದ ಬಂದ ಕಾಯದ ಕರ್ಮವ ಕಳೆದು, ಕರುಣಿ ಕಂದೆರವೆಯ ಮಾಡಿದ ಪ್ರಾಣಲಿಂಗ ಸಂಗವೆಂತಿದ್ದುದೆಂದರೆ, ಆಲಿ ನುಂಗಿದ ನೋಟದಂತೆ, ಬಯಲ ನುಂಗಿದ ಬ್ರಹ್ಮಾಂಡದಂತೆ, ಮುತ್ತನುಂಗಿದ ಉದಕದಂತೆ, ಪುಷ್ಪ ನುಂಗಿದ ಪರಿಮಳದಂತೆ ಇಪ್ಪ ಮಹಾನುಭಾವಿಗಳಿಗೆನ್ನ ಒಡಲ ಗುರಿ ಮಾಡಿದೆಯಾಗಿ ಎನ್ನ ಒಡಲ ಪರಿಯಾಯ ಕೆಟ್ಟಿತ್ತಯ್ಯ ಕೂಡಲ ಚನ್ನಸಂಗಮದೇವಾ. ॥
mattaṃ, caraṇaviḍidaṃge karuṇi kaṃderaveya māḍabēkeṃdu, marahiṃda baṃda kāyada karmava kaḷedu, karuṇi kaṃderaveya māḍida prāṇaliṃga saṃgaveṃtiddudeṃdare, āli nuṃgida nōṭadaṃte, bayala nuṃgida brahmāṃḍadaṃte, muttanuṃgida udakadaṃte, puṣpa nuṃgida parimaḷadaṃte ippa mahānubhāvigaḷigenna oḍala guri māḍideyāgi enna oḍala pariyāya keṭṭittayya kūḍala cannasaṃgamadēvā. ॥
ಹರ ತನ್ನ ರೂಪವ ತೋರಬೇಕೆಂದು ಗುರುರೂಪಾಗಿ ಮರ್ತ್ಯಕ್ಕೆ ಬಂದು ಮನಸ್ಥಲಕ್ಕೆ ಮಂತ್ರವಾದನು. ತನುಸ್ಥಲಕ್ಕೆ ಪ್ರಸಾದವಾದನು. ಕರಸ್ಥಲಕ್ಕೆ ಲಿಂಗವಾದನು. ಪ್ರಾಣಸ್ಥಲಕ್ಕೆ ಜಂಗಮವಾದನು. ಇಂತೀ ಚತುರ್ವಿಧ ಸ್ವಾಯತವಾದನು ಕೂಡಲ ಚನ್ನಸಂಗನಬಸವಣ್ಣನು. ॥
hara tanna rūpava tōrabēkeṃdu gururūpāgi martyakke baṃdu manasthalakke maṃtravādanu. tanusthalakke prasādavādanu. karasthalakke liṃgavādanu. prāṇasthalakke jaṃgamavādanu. iṃtī caturvidha svāyatavādanu kūḍala cannasaṃganabasavaṇṇanu. ॥
ಮತ್ತಂ, ಮಾಂಸಪಿಂಡವೆಂದೆನಿಸದೆ, ಮಂತ್ರಪಿಂಡವೆಂದೆನಿಸಿದನು ಬಸವಣ್ಣನು. ವಾಯು ಪ್ರಾಣಿಯೆಂದೆನಿಸದೆ, ಲಿಂಗ ಪ್ರಾಣಿಯೆಂದೆನಿಸಿದಾತ ಬಸವಣ್ಣನು. ಲಿಂಗ ಭರಿತನೆಂಬ ಶಬ್ದಕ್ಕೆ ಅಂಗವಿಸದೆ ಶರಣ ಭರಿತ ಲಿಂಗವೆಂದೆನಿಸಿದನು ಕೂಡಲ ಚನ್ನಸಂಗನಲ್ಲಿ ಎನ್ನ ಪರಮ ಗುರು ಬಸವಣ್ಣನು. ॥
mattaṃ, māṃsapiṃḍaveṃdenisade, maṃtrapiṃḍaveṃdenisidanu basavaṇṇanu. vāyu prāṇiyeṃdenisade, liṃga prāṇiyeṃdenisidāta basavaṇṇanu. liṃga bharitaneṃba śabdakke aṃgavisade śaraṇa bharita liṃgaveṃdenisidanu kūḍala cannasaṃganalli enna parama guru basavaṇṇanu. ॥
ಮತ್ತಂ, ಆದಿ ಬಸವಣ್ಣ ಅನಾದಿ ಲಿಂಗವೆಂದೆಂಬರು. ಹುಸಿ ಹುಸಿ. ಈ ನುಡಿಯ ಕೇಳಲಾಗದು. ಆದಿ ಲಿಂಗ ಅನಾದಿ ಬಸವಣ್ಣನು. ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು. ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು. ಪ್ರಸಾದವು ಬಸವಣ್ಣನನುಕರಿಸಲಾಯಿತ್ತು. ಇಂತೀ ತ್ರಿವಿಧಕ್ಕೆ ಬಸವಣ್ಣನೆ ಕಾರಣನೆಂದರಿದೆನಯ್ಯ ಕೂಡಲ ಚನ್ನಸಂಗಮದೇವಾ. ॥
mattaṃ, ādi basavaṇṇa anādi liṃgaveṃdeṃbaru. husi husi. ī nuḍiya kēḷalāgadu. ādi liṃga anādi basavaṇṇanu. liṃgavu basavaṇṇana udaradalli huṭṭittu. jaṃgamavu basavaṇṇana udaradalli huṭṭittu. prasādavu basavaṇṇananukarisalāyittu. iṃtī trividhakke basavaṇṇane kāraṇaneṃdaridenayya kūḍala cannasaṃgamadēvā. ॥
ಮತ್ತಂ, ಲಿಂಗದ ಪೂರ್ವಾಶ್ರಯವಂ ಕಳೆದು, ಇದು ಪ್ರಾಣಲಿಂಗವೆಂದು ತೋರಬಂದನಯ್ಯ ಬಸವಣ್ಣನು. ಲಾಂಛನದ ಪೂರ್ವಾಶ್ರಯವ ಕಳೆದು ಲಿಂಗಜಂಗಮವೆಂದು, ತೋರ ಬಂದನಯ್ಯ ಬಸವಣ್ಣನು. ಪ್ರಸಾದದ ಪೂರ್ವಾಶ್ರಯವ ಕಳೆದು, ಇದು ಮಹಾ ಪ್ರಸಾದವೆಂದು ತೋರಬಂದನಯ್ಯ ಬಸವಣ್ಣನು. ಲಿಂಗ ಜಂಗಮ ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಮರ್ತ್ಯಕ್ಕೆ ಜನಿಸಿದನಯ್ಯ ಕೂಡಲ ಚನ್ನಸಂಗನಲ್ಲಿ ಬಸವಣ್ಣನು. ॥
mattaṃ, liṃgada pūrvāśrayavaṃ kaḷedu, idu prāṇaliṃgaveṃdu tōrabaṃdanayya basavaṇṇanu. lāṃchanada pūrvāśrayava kaḷedu liṃgajaṃgamaveṃdu, tōra baṃdanayya basavaṇṇanu. prasādada pūrvāśrayava kaḷedu, idu mahā prasādaveṃdu tōrabaṃdanayya basavaṇṇanu. liṃga jaṃgama prasādada pūrvāśrayava kaḷeyaleṃdu martyakke janisidanayya kūḍala cannasaṃganalli basavaṇṇanu. ॥
ಮತ್ತಂ, ಸ್ತೋತ್ರ ಒಮ್ಮೆಯು ಶ್ರೀಗುರುವಿನ ಚರಣವ ನೆನೆಯಲೊಡನೆ ಭವಬಂಧನ ಬಿಡುವುದು. ಗುರುವೆ ಶರಣು ಗುರುಲಿಂಗವೆ ಶರಣು ಹರಿಬ್ರಹ್ಮಾದಿಗಳಿಗೆ ಅಗೋಚರವಾದ ಕೂಡಲ ಚನ್ನಸಂಗನೆಂಬ ಲಿಂಗವ ತೋರಿದ ಬಸವಣ್ಣ ಗುರುವೆ ಶರಣು. ॥
mattaṃ, stōtra ommeyu śrīguruvina caraṇava neneyaloḍane bhavabaṃdhana biḍuvudu. guruve śaraṇu guruliṃgave śaraṇu haribrahmādigaḷige agōcaravāda kūḍala cannasaṃganeṃba liṃgava tōrida basavaṇṇa guruve śaraṇu. ॥
ಮತ್ತಂ, ನಮಃ ಶಿವಾಯ ಲಿಂಗ, ಓಂ ನಮಃ ಶಿವಾಯ ಬಸವಣ್ಣನು, ನಮಃ ಶಿವಾಯ ಲಿಂಗವು, ಓಂ ನಮಃ ಶಿವಾಯ ಬಸವಣ್ಣನು, ಎನ್ನ ಮನಸ್ಥಲದೊಳಗೆ ಬೆಳಗಿ ತೋರಿದೆಯಾಗಿ, ಇದುಕಾರಣ ಕೂಡಲ ಚನ್ನಸಂಗಯ್ಯ, ಆದಿ ಆಧಾರವಿಲ್ಲದಂದು ಮೊದಲಾಗಿ, ಓಂ ನಮಃ ಶಿವಾಯ ಎನುತಿರ್ದೆನು. ॥
mattaṃ, namaḥ śivāya liṃga, ōṃ namaḥ śivāya basavaṇṇanu, namaḥ śivāya liṃgavu, ōṃ namaḥ śivāya basavaṇṇanu, enna manasthaladoḷage beḷagi tōrideyāgi, idukāraṇa kūḍala cannasaṃgayya, ādi ādhāravilladaṃdu modalāgi, ōṃ namaḥ śivāya enutirdenu. ॥
ಮತ್ತಂ, ಬಸವಣ್ಣನು ಓಂಕಾರದಿಂದತ್ತತ್ತ ನಾದಬಿಂದುಕಳೆಗಳಿಂದತ್ತತ್ತ, ಪ್ರಥಮಾಚಾರಿ ನೀನೆ. ಲಿಂಗಾಚಾರಿ ನೀನೆ. ಜಂಗಮಾಚಾರಿ ನೀನೆ. ಪ್ರಸಾದಾಚಾರಿ ನೀನೆ, ಎನಗೆ ಸರ್ವಾಚಾರಿಯು ನೀನೆ. ಗತಿಮತಿಯಾಗಿ ಎನ್ನನುಳುಹಿದ ಕಾರಣ ಕೂಡಲ ಚನ್ನಸಂಗಮದೇವಾ, ಆವ ನಿರ್ಣಯವಿಲ್ಲದಂದು ಓಂ ನಮಃ ಶಿವಾಯ ಎನುತಿರ್ದೆನು. ॥
mattaṃ, basavaṇṇanu ōṃkāradiṃdattatta nādabiṃdukaḷegaḷiṃdattatta, prathamācāri nīne. liṃgācāri nīne. jaṃgamācāri nīne. prasādācāri nīne, enage sarvācāriyu nīne. gatimatiyāgi ennanuḷuhida kāraṇa kūḍala cannasaṃgamadēvā, āva nirṇayavilladaṃdu ōṃ namaḥ śivāya enutirdenu. ॥
ಇಂತು ಚಿಕ್ಕದಣ್ಣಾಯಕರು ಬಸವರಾಜ ದೇವರ ಕೈಯ್ಯಲ್ಲಿ ಅನುಗ್ರಹಮಂ ಪಡೆದು, ಪ್ರಾಣಲಿಂಗ ಸಂಬಂಧವಳವಟ್ಟು, ಅಂತರಂಗದ ಜ್ಞಾನ ಬಹಿರಂಗದ ಕ್ರಿಯಲ್ಲಿ ಸಮರಸವನೈದಿ ಸರ್ವಾಚಾರ ಸಂಪನ್ನನಾಗಿ ಕೃತಾರ್ಥನಾದ ಪರಮ ಹರುಷದಿಂದೆ ಬಸವರಾಜ ದೇವರ ಮಹಾತ್ಮಗೆ ನಮಸ್ಕಾರಮಂ ಮಾಡಿ, ಸ್ತೋತ್ರಮಂ ಮಾಡುತ್ತಿರಲು, ಆ ಬಸವರಾಜ ದೇವರು ಚನ್ನಬಸವಣ್ಣನ ಮಹಾತ್ಮೆಯಂ ನೋಡಿ ನೋಡಿ, ಪರಮ ಹರುಷಿತರಾಗಿರ್ದ ಪ್ರಸ್ಥಾವದ ವಚನ ॥
iṃtu cikkadaṇṇāyakaru basavarāja dēvara kaiyyalli anugrahamaṃ paḍedu, prāṇaliṃga saṃbaṃdhavaḷavaṭṭu, aṃtaraṃgada jñāna bahiraṃgada kriyalli samarasavanaidi sarvācāra saṃpannanāgi kr̥tārthanāda parama haruṣadiṃde basavarāja dēvara mahātmage namaskāramaṃ māḍi, stōtramaṃ māḍuttiralu, ā basavarāja dēvaru cannabasavaṇṇana mahātmeyaṃ nōḍi nōḍi, parama haruṣitarāgirda prasthāvada vacana ॥
ಬಿತ್ತದೆ ಬೆಳೆಯದೆ ಬೆಳೆದ ಹೆಬ್ಬೆಳಸಿನ ರಾಸಿಯ ನೋಡಾ! ಸುಗಂಧ ಬಂಧ ಬಂಧುರದಂತೆ ಹುಟ್ಟುತ್ತವೆ ಪರಿಮಳ. ಆದಿ ಅನಾದಿ ಇಲ್ಲದ ಮುನ್ನವೆ ತನ್ನಿಂದವೆ ತಾನಾಗಿರ್ದ ಕಾರಣ ಮುಟ್ಟದೆ ತಟ್ಟದೆ ಗುರುಕಾರುಣ್ಯವ ಪಡೆದು, ಲಿಂಗಸ್ವಯವಾಗಿ, ಎನಗೆ ಗತಿ ಪಥವ ತೋರಿಸಬೇಕೆಂದು ಹಾಗಾದನು ಕೂಡಲ ಸಂಗಮದೇವರಲ್ಲಿ ಚನ್ನಬಸವಣ್ಣನು. ॥
bittade beḷeyade beḷeda hebbeḷasina rāsiya nōḍā! sugaṃdha baṃdha baṃdhuradaṃte huṭṭuttave parimaḷa. ādi anādi illada munnave tanniṃdave tānāgirda kāraṇa muṭṭade taṭṭade gurukāruṇyava paḍedu, liṃgasvayavāgi, enage gati pathava tōrisabēkeṃdu hāgādanu kūḍala saṃgamadēvaralli cannabasavaṇṇanu. ॥
ಮತ್ತಂ, ನಾನಾ ಸ್ಥಾನದಲ್ಲಿ ಬಂದು ತೊಳಲಿ ಬಳಲಿ ಅಳಿದುಳಿದು ನಿಂದ ನಿಲದವನಲ್ಲ. ಮರ್ತ್ಯಲೋಕದಲ್ಲಿ ಶಿವಾಚಾರದ ಘನವು ಹೂಳೆ ಹೋಯಿತ್ತೆಂದು ಕರ್ತನು ತಾನೆ ಮಹಾಪ್ರಸಾದಿಯಾಗಿ ಉದಯವಾದನು. ಹಸ್ತ ಮಸ್ತಕ ಸಂಯೋಗವಿಲ್ಲದ ಮುನ್ನವೆ ಆದಿ ಗುರು ಅನಾದಿ ಶಿಷ್ಯನೆಂಬುದ ನೆಲೆಮಾಡಿ ಸಂಗಮನಾಥನೆಂಬ ಲಿಂಗವನೆನ್ನ ಕೈಯ್ಯಲ್ಲಿ ಕೊಟ್ಟು ಸಾಮರ್ಥ್ಯದಿಂದೆ ಅನುಗ್ರಹಿಸಿಕೊಂಡನು. ಎನ್ನ ಹಿಂದಣ ಪೂರ್ವಾಪರವನೆತ್ತಿ ತೋರಿ ತನ್ನತ್ತ ತೆಗೆದುಕೊಂಡನು ಕೂಡಲ ಚನ್ನ ಸಂಗಮದೇವರಲ್ಲಿ ಚನ್ನಬಸವಣ್ಣನು. ॥
mattaṃ, nānā sthānadalli baṃdu toḷali baḷali aḷiduḷidu niṃda niladavanalla. martyalōkadalli śivācārada ghanavu hūḷe hōyitteṃdu kartanu tāne mahāprasādiyāgi udayavādanu. hasta mastaka saṃyōgavillada munnave ādi guru anādi śiṣyaneṃbuda nelemāḍi saṃgamanāthaneṃba liṃgavanenna kaiyyalli koṭṭu sāmarthyadiṃde anugrahisikoṃḍanu. enna hiṃdaṇa pūrvāparavanetti tōri tannatta tegedukoṃḍanu kūḍala canna saṃgamadēvaralli cannabasavaṇṇanu. ॥
ಮತ್ತಂ, ಅಯ್ಯ ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆ ನೆನೆದು ಸುಖಿಯಾಗಿ ಆನು ಬದುಕಿದೆನಯ್ಯ! ಅದೇನು ಕಾರಣ ತಂದೆ ಎಂದರಿದೆನಯ್ಯ! ಎನ್ನ ಕಾರಣ ತಂದೆ ಎಂದರಿದೆನಯ್ಯ ಅರಿದರಿದು ನಿಮ್ಮ ಶರಣನು ಆಚರಿಸುವ ಆಚರಣೆಯ ಕಂಡು ಕಣ್ದೆರೆದೆನಯ್ಯ ಕೂಡಲ ಸಂಗಮದೇವಾ. ॥
mattaṃ, ayya nimma śaraṇana martyakke taṃdeyāgi nene nenedu sukhiyāgi ānu badukidenayya! adēnu kāraṇa taṃde eṃdaridenayya! enna kāraṇa taṃde eṃdaridenayya aridaridu nimma śaraṇanu ācarisuva ācaraṇeya kaṃḍu kaṇderedenayya kūḍala saṃgamadēvā. ॥
ಮತ್ತಂ, ಇಂದು ಹುಟ್ಟಿದ ಕೂಸಿಂಗೆ ಇಂದೇ ಜವ್ವನವಾಯಿತ್ತಯ್ಯ! ಆ ಕೂಸು ಬೀದಿಯಲ್ಲಿ ಒತ್ತೆಗೊಳಲು ನಿಂದಿತ್ತಯ್ಯ. ಇದರ ಸಂಗಸುಖದನುಭವವನು ಕೂಡಲ ಸಂಗಮದೇವ ತಾನೆ ಬಲ್ಲ. ॥
mattaṃ, iṃdu huṭṭida kūsiṃge iṃdē javvanavāyittayya! ā kūsu bīdiyalli ottegoḷalu niṃdittayya. idara saṃgasukhadanubhavavanu kūḍala saṃgamadēva tāne balla. ॥
ಇಂತು ಬಸವರಾಜದೇವರು ಚಿಕ್ಕದಣ್ಣಾಯಕರ ಸ್ತೋತ್ರಮಂ ಮಾಡಲು, ಆ ತನ್ನ ಬಸವರಾಜ ದೇವರು ಬಸವರಾಜ ದೇವರ ಪೂರ್ವಾಪರ ಸಂಬಂಧಮಂ ತಿಳಿಯ ಪೇಳಿ ಕೊಂಡಾಡುತ್ತಿರ್ದ ಪ್ರಸ್ಥಾವದ ವಚನ. ॥
iṃtu basavarājadēvaru cikkadaṇṇāyakara stōtramaṃ māḍalu, ā tanna basavarāja dēvaru basavarāja dēvara pūrvāpara saṃbaṃdhamaṃ tiḷiya pēḷi koṃḍāḍuttirda prasthāvada vacana. ॥
ಪ್ರಥಮ ಕಾಲದಲ್ಲಿ ನಿರಾಲಂಬಿಯಾಗಿರ್ದರಯ್ಯ! ದ್ವಿತೀಯ ಕಾಲದಲ್ಲಿ ತೇಜೋಮೂರ್ತಿಯಾಗಿರ್ದಿರಯ್ಯ! ತೃತೀಯ ಕಾಲದಲ್ಲಿ ನಾದಮೂರ್ತಿಯಾಗಿರ್ದಿರಯ್ಯ! ಚತುರ್ಥ ಕಾಲದಲ್ಲಿ ಚೈತನ್ಯರೂಪ ತಾಳಿರ್ದಿರಯ್ಯ! ಪಂಚಮ ಕಾಲದಲ್ಲಿ ಧರ್ಮಮೂರ್ತಿಯಾಗಿರ್ದಿರಯ್ಯ! ಷಷ್ಠಮ ಕಾಲದಲ್ಲಿ ನೀವು ಪರಮಪುರುಷಾರ್ಥ ಸಾಧನವಾಗಿ ತ್ರಿವಿಧ ಭಕ್ತಿಗೆ ನೀವೆ ಕಾರಣವಾಗಿ ಬಂದಿರಿ. ನೀವು ಪ್ರಮಥರು ಸಹಿತ ಮುಟ್ಟಿ ಪ್ರಾಣಲಿಂಗದ ಹರಿವ ತೋರಿಸಬೇಕೆಂಬ ನಿಮಿತ್ಯ ಬೆಸನವಿಡಿದು, ನಿಮ್ಮ ಕರುಣದ ಶಿಸುವಾಗಿ ಹುಟ್ಟಿದೆ. ನಿಮ್ಮ ಕರಸ್ಥಲದಲ್ಲಿ ಕೂಡಲ ಚನ್ನ ಸಂಗಮದೇವ ನಿಮ್ಮ ಮಹಿಮೆಗೆ ನಮೋ ನಮೋ ಎನುತಿರ್ದೆನು. ॥
prathama kāladalli nirālaṃbiyāgirdarayya! dvitīya kāladalli tējōmūrtiyāgirdirayya! tr̥tīya kāladalli nādamūrtiyāgirdirayya! caturtha kāladalli caitanyarūpa tāḷirdirayya! paṃcama kāladalli dharmamūrtiyāgirdirayya! ṣaṣṭhama kāladalli nīvu paramapuruṣārtha sādhanavāgi trividha bhaktige nīve kāraṇavāgi baṃdiri. nīvu pramatharu sahita muṭṭi prāṇaliṃgada hariva tōrisabēkeṃba nimitya besanaviḍidu, nimma karuṇada śisuvāgi huṭṭide. nimma karasthaladalli kūḍala canna saṃgamadēva nimma mahimege namō namō enutirdenu. ॥
ಇಂತೀ ಚಿಕ್ಕದಣ್ಣಾಯಕರು ಪ್ರಾಣಲಿಂಗ ಸಂಬಂಧದ ಹರಿವ ತೋರಿಸಬೇಕೆಂಬ ನಿಮಿತ್ಯ ಬೆಸನವಿಡಿದು ಬಂದಿರೆಂದು ಬಿನ್ನೈಸಲು, ಅದಕ್ಕೆ ಬಸವರಾಜ ದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥
iṃtī cikkadaṇṇāyakaru prāṇaliṃga saṃbaṃdhada hariva tōrisabēkeṃba nimitya besanaviḍidu baṃdireṃdu binnaisalu, adakke basavarāja dēvaru nirūpisida prasthāvada vacana. ॥
ಲಿಂಗ ಪ್ರಾಣದ ಸಕೀಲ ಸಂಬಂಧವೆಂತಿಪ್ಪುದೆಂದರಿಯೆನು. ಪ್ರಾಣಲಿಂಗದ ಸಕೀಲ ಸಂಬಂಧವೆಂತಿಪ್ಪುದೆಂದರಿಯೆನು. ಹುಸಿ ಹುಂಡನ ಮಾಡಿ, ಹೊರಗನೆ ಪೂಜಿಸಿ, ವೃಥಾ ದಿನಂಗಳು ಸವೆದು ಹೋದವು. ಕೂಡಲ ಸಂಗಮದೇವರಲ್ಲಿ ಎನ್ನ ಪ್ರಾಣ ನಿಕ್ಷೇಪವಹ ಭೇದವ ತೋರಾ ಚನ್ನಬಸವಣ್ಣಾ. ॥
liṃga prāṇada sakīla saṃbaṃdhaveṃtippudeṃdariyenu. prāṇaliṃgada sakīla saṃbaṃdhaveṃtippudeṃdariyenu. husi huṃḍana māḍi, horagane pūjisi, vr̥thā dinaṃgaḷu savedu hōdavu. kūḍala saṃgamadēvaralli enna prāṇa nikṣēpavaha bhēdava tōrā cannabasavaṇṇā. ॥
ಹೀಗೆಂದು ಬಸವರಾಜ ದೇವರು ಬಿನ್ನೈಸಲು, ಅದಕ್ಕೆ ಚಿಕ್ಕದಣ್ಣಾಯಕರು ಪ್ರಾಣಲಿಂಗ ಸಂಬಂಧದ ಭೇದಮಂ ತಿಳುಹುತಿರ್ದ ಪ್ರಸ್ಥಾವದ ವಚನ ॥
hīgeṃdu basavarāja dēvaru binnaisalu, adakke cikkadaṇṇāyakaru prāṇaliṃga saṃbaṃdhada bhēdamaṃ tiḷuhutirda prasthāvada vacana ॥
ಹೋ ಹೋ, ಗುರುವೇ ನಿಮ್ಮ ಕರಕಮಲದಲ್ಲಿ ಉದಯಿಸಿ ಅಂಗದ ಮೇಲೆ ಲಿಂಗವ ಧರಿಸಿ, ಆ ಲಿಂಗದಲ್ಲಿ ಅಂಗವಾಗಿ, ಪ್ರಾಣಲಿಂಗ ಲಿಂಗಪ್ರಾಣವೆಂಬುದ ನಾನು ಕಂಡೆನು. ನಿಮಗಾನು ತೋರಲು ಸಮರ್ಥನೆ? ಆಚಾರ ಅಂಗದ ಮೇಲೆ ನೆಲೆಗೊಂಡು ಇಷ್ಟಲಿಂಗದಲ್ಲಿ ದೃಷ್ಟಿನಟ್ಟು ಭಾವ ಸಂಪನ್ನನಾಗಿಪ್ಪ ನಿಮ್ಮ ಘನವ ನಾನೆತ್ತ ಬಲ್ಲೆನು? ಸುಜ್ಞಾನ ಸಮಾಧಿಯೊಳಗೆ ಬಯಕೆಯಡಗಿ ಪರಿಣಾಮ ಲಿಂಗದಲ್ಲಿ ಮನಸು ಲಯವಾಗಿ, ನಿಜಲಿಂಗಸಂಗದಲ್ಲಿ ತೃಪ್ತರಾಗಿಪ್ಪಿರಿ ನೀವು. ನಿಮ್ಮ ಘನವ ನಾನೆತ್ತ ಬಲ್ಲೆನು? ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂದಲ್ಲಿ ಜಂಗಮಲಿಂಗ ಪ್ರಾಣಿಯಾಗಿಪ್ಪಿರಿ ನೀವು. ನಿಮ್ಮ ಘನವ ನಾನೆತ್ತ ಬಲ್ಲೆನಯ್ಯ? ಲಿಂಗಕ್ಕೆ ಬಂದ ಪದಾರ್ಥವಲ್ಲದೆ ಕೊಳ್ಳೆನೆಂದು ಮನೆ ಮೀಸಲು ತನು ಮೀಸಲು ಮಾಡಿ, ಸರ್ವಾಂಗವೆಲ್ಲವನ್ನು ಪ್ರಾಣದಲ್ಲಿ ಆರ್ಪಿಸಿ ನೀವು ತೊಲಗಿ ನಿರಾಭಾರಿಯಾಗಿ ಪ್ರಸಾದಲಿಂಗ ಪ್ರಾಣಿಯಾಗಿರ್ಪಿರಿ. ನಿಮ್ಮ ಘನವ ನಾನು ಬಲ್ಲೆನಯ್ಯ? ಅನಾದಿ ಶಿವಂಗೆ ಆಧಾರ ವಿಲ್ಲೆಂದು, ಅಖಂಡಿತವ ನಿನ್ನ ರೋಮದ ಕೊನೆಯಲ್ಲಿ ಧರಿಸಿ, ಮಹಾ ಲಿಂಗ ಪ್ರಾಣಿಯಾಗಿಪ್ಪಿರಿ ನೀವು. ನಿಮ್ಮ ಘನವ ನಾನೆತ್ತ ಬಲ್ಲೆನಯ್ಯ! ಕೂಡಲ ಚನ್ನಸಂಗಯ್ಯ ಸಾಕ್ಷಿಯಾಗಿ, ನಿಮ್ಮ ಪ್ರಾಣಲಿಂಗ ಸಂಬಂಧದ ಸೆರಗು ಸೋಂಕಿನ ಒಕ್ಕುಮಿಕ್ಕ ಪ್ರಸಾದಿ ನಾನು ಕಾಣಾ ಸಂಗನಬಸವಣ್ಣ. ॥
hō hō, guruvē nimma karakamaladalli udayisi aṃgada mēle liṃgava dharisi, ā liṃgadalli aṃgavāgi, prāṇaliṃga liṃgaprāṇaveṃbuda nānu kaṃḍenu. nimagānu tōralu samarthane? ācāra aṃgada mēle nelegoṃḍu iṣṭaliṃgadalli dr̥ṣṭinaṭṭu bhāva saṃpannanāgippa nimma ghanava nānetta ballenu? sujñāna samādhiyoḷage bayakeyaḍagi pariṇāma liṃgadalli manasu layavāgi, nijaliṃgasaṃgadalli tr̥ptarāgippiri nīvu. nimma ghanava nānetta ballenu? aṃgada mēle liṃgavuḷḷudellavu saṃgamanāthaneṃdalli jaṃgamaliṃga prāṇiyāgippiri nīvu. nimma ghanava nānetta ballenayya? liṃgakke baṃda padārthavallade koḷḷeneṃdu mane mīsalu tanu mīsalu māḍi, sarvāṃgavellavannu prāṇadalli ārpisi nīvu tolagi nirābhāriyāgi prasādaliṃga prāṇiyāgirpiri. nimma ghanava nānu ballenayya? anādi śivaṃge ādhāra villeṃdu, akhaṃḍitava ninna rōmada koneyalli dharisi, mahā liṃga prāṇiyāgippiri nīvu. nimma ghanava nānetta ballenayya! kūḍala cannasaṃgayya sākṣiyāgi, nimma prāṇaliṃga saṃbaṃdhada seragu sōṃkina okkumikka prasādi nānu kāṇā saṃganabasavaṇṇa. ॥
ಇಂತು ಪ್ರಾಣಲಿಂಗ ಸಂಬಂಧದ ನಿರ್ಣಯಮಂ ಉಪಾಯದಿಂ ಸ್ತೋತ್ರಮುಖದಿಂದವೆ ಚಿಕ್ಕದಣ್ಣಾಯಕರು ಹೇಳದ ಹಾಗೆ ಹೇಳಿ ತೋರಲು, ಅದಕ್ಕೆ ಬಸವರಾಜ ದೇವರು ಪ್ರಾಣಲಿಂಗದಲ್ಲಿ ಸಂಬಂಧದ ಭೇದಮಂ ತನ್ನೊಳು ತಾನೆ ಕಂಡು ಹಾರೈಸಿ ಹರುಷಂ ಬಟ್ಟು ಆ ಚಿಕ್ಕದಣ್ಣಾಯಕರ ಕೊಂಡಾಡಿದ ಪ್ರಸ್ಥಾವದ ವಚನ ॥
iṃtu prāṇaliṃga saṃbaṃdhada nirṇayamaṃ upāyadiṃ stōtramukhadiṃdave cikkadaṇṇāyakaru hēḷada hāge hēḷi tōralu, adakke basavarāja dēvaru prāṇaliṃgadalli saṃbaṃdhada bhēdamaṃ tannoḷu tāne kaṃḍu hāraisi haruṣaṃ baṭṭu ā cikkadaṇṇāyakara koṃḍāḍida prasthāvada vacana ॥
ಅಯ್ಯ, ಮರದೊಳಗೆ ಅಗ್ನಿ ಇದ್ದರೇನಯ್ಯ! ಮಥನಿಸಿ ತೋರುವರಿಲ್ಲದನ್ನಕ್ಕರ ಕಾಣಬಹುದೆ? ಜಗದೊಳಗೆ ಕೂಡಿ ಪರಿಪೂರ್ಣ ಶಿವನೆಂದರೆ ಅಂತರಂಗದಲ್ಲಿ ಕಾಣಬಹುದೆ? ಆದಿಲಿಂಗ ಅನಾದಿಶರಣನ ಭೇದವ ತಿಳುಹಿ ನಿಜಪ್ರಾಣದೊಳಗಿಪ್ಪ ಸುಜ್ಞಾನ ಲಿಂಗವ ಕರಸ್ಥಲಕ್ಕೆ ತಂದು, ಆ ಕರಸ್ಥಲದ ಲಿಂಗವೆನ್ನ ಸರ್ವಾಂಗದೊಳಗೆ ಪ್ರತಿಷ್ಠಿಸಿ ತೋರಿ ನಿತ್ಯ ನಿತ್ಯ ನಿಜಲಿಂಗೈಕ್ಯವಹ ಹೊಲಬಿನ ಹರಿವ ತೋರಿಸಿ ಮರ್ತ್ಯಲೋಕದೊಳಗೆಲ್ಲ ಇಂದು ಮೊದಲಾಗಿ, ಪ್ರಾಣಲಿಂಗದ ಘನವ ಹರಹಿ ಶಿವ ಭಕ್ತಿಯನುದ್ಧರಿಸಿದನು. ಕೂಡಲ ಸಂಗಮದೇವರಲ್ಲಿ ಚನ್ನಬಸವಣ್ಣನನ್ನ ನಾಗುಮಾಡಿ ಉಳುಹಿದನಾಗಿ, ನಾನು ಕೃತಾರ್ಥನಾದೆನೆಂದು ಬಸವರಾಜ ದೇವರು ನಿರೂಪಿಸಲು, ಅದಕ್ಕೆ ಚಿಕ್ಕದಣ್ಣಾಯಕರು ಬಿನ್ನೈಸಿದ ಪ್ರಸ್ಥಾವದ ವಚನ ॥
ayya, maradoḷage agni iddarēnayya! mathanisi tōruvarilladannakkara kāṇabahude? jagadoḷage kūḍi paripūrṇa śivaneṃdare aṃtaraṃgadalli kāṇabahude? ādiliṃga anādiśaraṇana bhēdava tiḷuhi nijaprāṇadoḷagippa sujñāna liṃgava karasthalakke taṃdu, ā karasthalada liṃgavenna sarvāṃgadoḷage pratiṣṭhisi tōri nitya nitya nijaliṃgaikyavaha holabina hariva tōrisi martyalōkadoḷagella iṃdu modalāgi, prāṇaliṃgada ghanava harahi śiva bhaktiyanuddharisidanu. kūḍala saṃgamadēvaralli cannabasavaṇṇananna nāgumāḍi uḷuhidanāgi, nānu kr̥tārthanādeneṃdu basavarāja dēvaru nirūpisalu, adakke cikkadaṇṇāyakaru binnaisida prasthāvada vacana ॥
ಮರ್ತ್ಯಲೋಕ ಶಿವಲೋಕವೆಂಬುದೊಂದು ನಿಚ್ಚಣಿಕೆಯಾದವು ನೋಡಾ! ದೇವ, ನೀವೀಕಲ್ಯಾಣಕ್ಕೆ ಬಂದವತರಿಸಿದಲ್ಲಿ ಸತ್ಯ ಶರಣರೆಲ್ಲರನು ಪಾವನವ ಮಾಡಲೆಂದು ಬಂದರೆ ಜನ್ಮದಲ್ಲಿ ಬಂದನೆಂದು ನುಡಿಯಬಹುದೆ? ಕರ್ತು ರೂಪು ನೃತ್ಯಂಗೆ ಬಂದಲ್ಲಿ ಆ ಭೃತ್ಯ ಕರ್ತನನರಸಿಕೊಂಡು ಬಂದವನಲ್ಲ. ಸತ್ಯ ಸದಾಚಾರವ ಹರಹಿ ಮರ್ತ್ಯರ ಪಾವನವ ಮಾಡಿ, ನಿಜಲಿಂಗ ಸಮಾಧಿಯೊಳು ನಿಲ್ಲುವರಿನ್ನಾರು ಹೇಳಾ ನೀನಲ್ಲದೆ? ಕೂಡಲ ಚನ್ನಸಂಗಮದೇವರು ಸಾಕ್ಷಿಯಾಗಿ, ನಿಮಗೆ ಭವ ಉಂಟೆಂದು ಮನದಲ್ಲಿ ಹಿಡಿದರೆ ಸಂಗನಬಸವಣ್ಣ ನಿಮ್ಮ ಶ್ರೀಪಾದ ದಾಣೆ. ॥
martyalōka śivalōkaveṃbudoṃdu niccaṇikeyādavu nōḍā! dēva, nīvīkalyāṇakke baṃdavatarisidalli satya śaraṇarellaranu pāvanava māḍaleṃdu baṃdare janmadalli baṃdaneṃdu nuḍiyabahude? kartu rūpu nr̥tyaṃge baṃdalli ā bhr̥tya kartananarasikoṃḍu baṃdavanalla. satya sadācārava harahi martyara pāvanava māḍi, nijaliṃga samādhiyoḷu nilluvarinnāru hēḷā nīnallade? kūḍala cannasaṃgamadēvaru sākṣiyāgi, nimage bhava uṃṭeṃdu manadalli hiḍidare saṃganabasavaṇṇa nimma śrīpāda dāṇe. ॥
ನೀವು ಮರ್ತ್ಯಕ್ಕೆ ಬಂದರೇನು? ಶಿವಲೋಕದಲ್ಲಿ ಇದ್ದರೇನು? ನಿಮಗೆ ಭವಂಗಳಿಲ್ಲವೆಂದು ಚಿಕ್ಕದಣ್ಣಾಯಕರು ಬಿನ್ನೈಸಲು, ಅದಕ್ಕೆ ಬಸವರಾಜ ದೇವರು ಪರಮ ಹರುಷಿತರಾಗಿ ನಿಜ ಸಮಾಧಿಯೊಳು ಬೆರಿಸುವ ಭೇದ ಎನಗೆಂದು ಸಯವಪ್ಪುದೆಂದು ಉಪಾವಸ್ಥೆಯಂ ಮಾಡುವ ಪ್ರಸ್ಥಾವದ ವಚನ ॥
nīvu martyakke baṃdarēnu? śivalōkadalli iddarēnu? nimage bhavaṃgaḷillaveṃdu cikkadaṇṇāyakaru binnaisalu, adakke basavarāja dēvaru parama haruṣitarāgi nija samādhiyoḷu berisuva bhēda enageṃdu sayavappudeṃdu upāvastheyaṃ māḍuva prasthāvada vacana ॥
ಲಿಂಗವ ಪೂಜಿಸಿ ಫಲವೆನಯ್ಯ ಸಮರತಿ ಸಮಕಳೆ ಇಲ್ಲದನ್ನಕ್ಕರ? ಲಿಂಗವ ಪೂಜಿಸಿ ಫಲವೇನಯ್ಯ ಕೂಡಲ ಸಂಗಮದೇವರಲ್ಲಿ ನದಿಯೊಳಗೆ ನದಿ ಬೆರೆಯದನಕ್ಕರಾ? ॥
liṃgava pūjisi phalavenayya samarati samakaḷe illadannakkara? liṃgava pūjisi phalavēnayya kūḍala saṃgamadēvaralli nadiyoḷage nadi bereyadanakkarā? ॥
ಇಂತು ಬಸವರಾಜ ದೇವರು ಲಿಂಗದೊಳು ಒಡವೆರಸಿ ಬೆರಸಿ, ಸಮರಸೈಕ್ಯ ಮನ ಮಗ್ನ ಯೋಗವೆಂದಾಗುವದೆಂದು ಚನ್ನಬಸವರಾಜ ದೇವರ ಬೆಸಗೊಳಲು, ಆ ಚನ್ನಬಸವರಾಜ ದೇವರು ಸುಜ್ಞಾನ ದೃಷ್ಟಿಯಿಂ ನೋಡಿ ಆ ಲಿಂಗದ ಪರಮಕಳಾ ಚೈತನ್ಯವೆ ಜಂಗಮ, ಆ ಜಂಗಮನೆ ಅನಾದಿ ಗಣನಾಥ ಅಲ್ಲಮಪ್ರಭುದೇವರು ನೀವು ಜಂಗಮ ಪ್ರಾಣಿ ಎಂಬುದ ನೋಡಿ ಅರಸಿಕೊಂಡು, ಬರುತ್ತಿಹರೆ ಅವರ ಬರವನೀಗವೆ ತೋರುವೆನೆಂದು ಬಿನ್ನೈಸುವ ಪ್ರಸ್ಥಾವದ ವಚನ. ॥
iṃtu basavarāja dēvaru liṃgadoḷu oḍaverasi berasi, samarasaikya mana magna yōgaveṃdāguvadeṃdu cannabasavarāja dēvara besagoḷalu, ā cannabasavarāja dēvaru sujñāna dr̥ṣṭiyiṃ nōḍi ā liṃgada paramakaḷā caitanyave jaṃgama, ā jaṃgamane anādi gaṇanātha allamaprabhudēvaru nīvu jaṃgama prāṇi eṃbuda nōḍi arasikoṃḍu, baruttihare avara baravanīgave tōruveneṃdu binnaisuva prasthāvada vacana. ॥
ಲಿಂಗಜಂಗಮ, ಜಂಗಮಲಿಂಗದ ಮುಖವ ನೀವಲ್ಲದೆ ಇನ್ನು ಬಲ್ಲವರಾರಯ್ಯ? ಅಂಗದ ಮೇಲೆ ಲಿಂಗವುಳ್ಳುದೆಲ್ಲವು ಸಂಗಮನಾಥನೆಂದಲ್ಲಿ ಪರವಾದಿ ಬಿಜ್ಜಳನು ಒರೆದು ನೋಡಲೆಂದಟ್ಟಿದರೆ ಹಗರಣಿಗರ ಜಂಗಮ ಮುಖದಲ್ಲಿ ಲಿಂಗವ ಮಾಡಿದರಾರು ಹೇಳಾ ನೀವಲ್ಲದೆ? ಮರೆದ ಮಾನೀಶನ ಕರೆದು, ಓ ಎನಿಸಿ, ನುಡಿಸಿ, ಉಣಿಸಿ, ಜಂಗಮಲಿಂಗಪ್ರಾಣಿ ಸಂಗನ ಬಸವಣ್ಣನೆಂಬ ಧ್ವಜವನೆತ್ತಿ ಮೆರೆದವರಾರು ಹೇಳಾ ಈ ಕಲ್ಯಾಣದಲ್ಲಿ ನೀವಲ್ಲದೆ? ಜಂಗಮ ಮುಖದಿಂದಲ್ಲದೆ ಲಿಂಗವನರಿಯೆನೆಂದು ಎನ್ನ ಮನಕ್ಕೆ ಸಂದೇಹವನೊಡ್ಡಿ ಜಾರಿದರೆ ನಾನು ಸೈರಿಸಬಲ್ಲೆನೆ? ನೀನು ಜಂಗಮ ಮುಖ ಲಿಂಗಸಂಬಂಧಿ ಎಂಬುದಕ್ಕೆ ಆದಿ ಗಣನಾಥನು ಅಲ್ಲಮಪ್ರಭುವೆಂಬ ನಾಮವ ಧರಿಸಿ ನಿನ್ನನರಸಿಕೊಂಡು ಬರುತ್ತಲೈದಾನೆ ಕೂಡಲ ಚನ್ನಸಂಗಮದೇವರು ಸಾಕ್ಷಿಯಾಗಿ, ಸಂಗನ ಬಸವಣ್ಣ ನೀನೆ ಜಂಗಮ ಪ್ರಾಣಿ ಎಂದು ನಾನು ನಂಬಿದೆನು. ॥
liṃgajaṃgama, jaṃgamaliṃgada mukhava nīvallade innu ballavarārayya? aṃgada mēle liṃgavuḷḷudellavu saṃgamanāthaneṃdalli paravādi bijjaḷanu oredu nōḍaleṃdaṭṭidare hagaraṇigara jaṃgama mukhadalli liṃgava māḍidarāru hēḷā nīvallade? mareda mānīśana karedu, ō enisi, nuḍisi, uṇisi, jaṃgamaliṃgaprāṇi saṃgana basavaṇṇaneṃba dhvajavanetti meredavarāru hēḷā ī kalyāṇadalli nīvallade? jaṃgama mukhadiṃdallade liṃgavanariyeneṃdu enna manakke saṃdēhavanoḍḍi jāridare nānu sairisaballene? nīnu jaṃgama mukha liṃgasaṃbaṃdhi eṃbudakke ādi gaṇanāthanu allamaprabhuveṃba nāmava dharisi ninnanarasikoṃḍu baruttalaidāne kūḍala cannasaṃgamadēvaru sākṣiyāgi, saṃgana basavaṇṇa nīne jaṃgama prāṇi eṃdu nānu naṃbidenu. ॥
ಅಲ್ಲಮಪ್ರಭುದೇವರು ನಿಮ್ಮನರಸಿಕೊಂಡು ಬಪ್ಪುದನೀಗಳೆ ತೋರಿದಪೆನೆಂದು ಚಿಕ್ಕದಣ್ಣಾಯಕರು ಬಿನ್ನೈಸಲು ಅದಕ್ಕೆ ಬಸವರಾಜ ದೇವರು ಪರಮ ಹರುಷಿತರಾದ ಪ್ರಸ್ಥಾವದ ವಚನ. ॥
allamaprabhudēvaru nimmanarasikoṃḍu bappudanīgaḷe tōridapeneṃdu cikkadaṇṇāyakaru binnaisalu adakke basavarāja dēvaru parama haruṣitarāda prasthāvada vacana. ॥
ಜಂಗಮಲಿಂಗವೆಂಬ ಭಾವ ಫಲಿಸಿದರೆ ಇಂದಿನ ಪುಣ್ಯಕ್ಕೆ ಸರಿಯುಂಟೆ? ಲಿಂಗದ ಒಡಲ ಮನೆ ಮಾಡಿಪ್ಪ ಜಂಗಮವೆನ್ನ ಕಣ್ಣ ಮುಂದೆ ತೋರಿದರೆ ಇಂದೆನ್ನ ಭಾಗ್ಯಕ್ಕೆ ಕಡೆ ಇಲ್ಲ. ಆ ಜಂಗಮವೆ ದಿಟಕ್ಕೆನ್ನ ಮನೆಗೆ ಬಂದಡೆ ಕೂಡಲ ಸಂಗಮದೇವರಲ್ಲಿ ಸಲುಗೆಯ ವರವ ಹಡೆವೆನು ಕಾಣಾ ಚನ್ನಬಸವಣ್ಣ ನೀನಹುದೆನಲು. ॥
jaṃgamaliṃgaveṃba bhāva phalisidare iṃdina puṇyakke sariyuṃṭe? liṃgada oḍala mane māḍippa jaṃgamavenna kaṇṇa muṃde tōridare iṃdenna bhāgyakke kaḍe illa. ā jaṃgamave diṭakkenna manege baṃdaḍe kūḍala saṃgamadēvaralli salugeya varava haḍevenu kāṇā cannabasavaṇṇa nīnahudenalu. ॥
ಹೀಗೆಂದು ಚಿಕ್ಕದಣ್ಣಾಯಕರು ಹಿರಿಯದಣ್ಣಾಯಕರು ತಮ್ಮೊಳಗೆ ತಾವು ಜ್ಞಾನಾನುಭಾವವ ಸಂಬಂಧಿಸಿ ನೋಡಿ ಕಂಡು ಈಗಳೆ ಪ್ರಭುದೇವರ ಬರವು ತಪ್ಪಲರಿಯದೆಂದು ಮಹಾನುಭಾವ ಗೋಷ್ಠಿಯೊಳಗೋಲಾಡುತ್ತಿರಲು, ಇತ್ತಲಾ ನಿಃಕಲ ಪರಶಿವತತ್ವದ ಕಾರಣಾವತಾರದ ಪ್ರಭುದೇವರು ಸಿದ್ಧರಾಮಯ್ಯ ದೇವರು ಸೊನ್ನಲಿಗೆಯ ಪುರಮಂ ಪೊರಮಟ್ಟು ಅನಂತ ದೇಶಂಗಳೊಳು ದೇಶಾಂತರಮಂ ಮಾಡುತ್ತ ಹಲಕೆಲವು ದಿವಸಂಗಳಂ ಕಳೆವುತ್ತ ಬಂದು ಮರ್ತ್ಯಲೋಕದ ಸಕಲೈಶ್ವರ್ಯದ ಭಂಡಾರದ ನಿಜ ನಿಳಯವೆನಿಸಿಪ್ಪ, ಮತ್ತಂ, ಭೂಮಿಗೆ ಹೃತ್ಕಮಲಕರ್ಣಿಕಾವಾಸಮೆನಲೊಪ್ಪುವ ವಾಣಿಯ ಮುಖದರ್ಪಣವೆನಿಸಿರ್ಪ ಸಕಲ ಕರ್ಮಂಗಳಂ ತೀವುವ ಕರಂಡವೆನಿಸಿರ್ಪ ಸತ್ಯದ ಸಾಗರ, ಭಕ್ತಿಯ ತವರ್ಮನೆ, ಮುಕ್ತಿಗೆ ಮುಖ, ಪುಣ್ಯದ ಪುಂಜ, ಅಭಿನವ ಕೈಲಾಸವೆನಿಸಿಪ್ಪ ಶ್ರೀಕಲ್ಯಾಣಮಂ ಕಂಡು ಪೊಕ್ಕು ಇಲ್ಲಿ ಬಸವರಾಜ ದೇವರು ಮೂರ್ತಿಗೊಂಡು ಇರುತಿರ್ಪರೆಂದು ಅರಿದು ಆ ಪುರಕ್ಕೆ ವಂದನೆಯ ಮಾಡಿ ಸ್ತುತಿಸುತ್ತ ಆ ಪ್ರಭುದೇವರು ಸಿದ್ಧರಾಮಯ್ಯ ದೇವರಿಗೆ ಆ ಕಲ್ಯಾಣಪುರಮಂ ತೋರಿಸಿ ಕೊಂಡಾಡುತಿರ್ದ ಪ್ರಸ್ಥಾವದ ವಚನ.
hīgeṃdu cikkadaṇṇāyakaru hiriyadaṇṇāyakaru tammoḷage tāvu jñānānubhāvava saṃbaṃdhisi nōḍi kaṃḍu īgaḷe prabhudēvara baravu tappalariyadeṃdu mahānubhāva gōṣṭhiyoḷagōlāḍuttiralu, ittalā niḥkala paraśivatatvada kāraṇāvatārada prabhudēvaru siddharāmayya dēvaru sonnaligeya puramaṃ poramaṭṭu anaṃta dēśaṃgaḷoḷu dēśāṃtaramaṃ māḍutta halakelavu divasaṃgaḷaṃ kaḷevutta baṃdu martyalōkada sakalaiśvaryada bhaṃḍārada nija niḷayavenisippa, mattaṃ, bhūmige hr̥tkamalakarṇikāvāsamenaloppuva vāṇiya mukhadarpaṇavenisirpa sakala karmaṃgaḷaṃ tīvuva karaṃḍavenisirpa satyada sāgara, bhaktiya tavarmane, muktige mukha, puṇyada puṃja, abhinava kailāsavenisippa śrīkalyāṇamaṃ kaṃḍu pokku illi basavarāja dēvaru mūrtigoṃḍu irutirpareṃdu aridu ā purakke vaṃdaneya māḍi stutisutta ā prabhudēvaru siddharāmayya dēvarige ā kalyāṇapuramaṃ tōrisi koṃḍāḍutirda prasthāvada vacana.
ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿರ್ದಿತೈಯ್ಯ ಶಿವನ ಪ್ರತಾಪ. ಆ ಬೆಳಗಿನೊಳು ಒಪ್ಪುತ್ತಿರ್ದನಯ್ಯ ಅಸಂಖ್ಯಾತ ಭಕ್ತ ಮಹಾಗಣಂಗಳು. ಶಿವ ಭಕ್ತರಿರ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವೆಂಬುದು ಹುಸಿಯೆ? ಶಿವ ಭಕ್ತರಿರ್ದ ದೇಶ ಪಾವನವೆಂಬುದು ಹುಸಿಯೆ? ಗುಹೇಶ್ವರ ಲಿಂಗದಲ್ಲಿ ಎನ್ನ ಪರಮಾರಾಧ್ಯರು ಸಂಗನಬಸವಣ್ಣನ ಮಹಿಮೆಯ ನೋಡಾ ಸಿದ್ಧರಾಮಯ್ಯ. ॥
kalyāṇaveṃba praṇateyalli bhaktirasaveṃba tailavaneredu, ācāraveṃba battiyalli basavaṇṇaneṃba jyōtiya muṭṭisalu toḷagi beḷaguttirditaiyya śivana pratāpa. ā beḷaginoḷu opputtirdanayya asaṃkhyāta bhakta mahāgaṇaṃgaḷu. śiva bhaktarirda kṣētra avimukta kṣētraveṃbudu husiye? śiva bhaktarirda dēśa pāvanaveṃbudu husiye? guhēśvara liṃgadalli enna paramārādhyaru saṃganabasavaṇṇana mahimeya nōḍā siddharāmayya. ॥
ಇಂತು ಪ್ರಭುದೇವರು ಸಿದ್ಧರಾಮಯ್ಯ ದೇವರಿಗೆ ಕಲ್ಯಾಣಪುರದ ಮಹಾತ್ಮೆಯಂ ಹೇಳಿ ಕೊಂಡಾಡುತಿರ್ಪ ತತ್ಕಾಲೋಚಿತದೊಳು ಆ ಪುರದದ್ವಾರವಟ್ಟದ ಮುಂದೆ ಶಾಸನದೊಳು ಕಲ್ಯಾಣದ ಮಹಾತ್ಮೆಯನು ಚನ್ನಬಸವರಾಜ ದೇವರು ವಿವರವಾಗಿ ವಚನ ರೂಪಕವಾಗಿ ಬರೆದಿರಲು, ಅದಂ ಪ್ರಭುದೇವರು ಕಂಡು ಓದಿ ನೋಡಿದ ಪ್ರಸ್ಥಾವದ ವಚನ.
iṃtu prabhudēvaru siddharāmayya dēvarige kalyāṇapurada mahātmeyaṃ hēḷi koṃḍāḍutirpa tatkālōcitadoḷu ā puradadvāravaṭṭada muṃde śāsanadoḷu kalyāṇada mahātmeyanu cannabasavarāja dēvaru vivaravāgi vacana rūpakavāgi barediralu, adaṃ prabhudēvaru kaṃḍu ōdi nōḍida prasthāvada vacana.
ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತ ಶ್ರೀಮತ್ಕಲ್ಯಾಣಪುರದ ಮಹಾತ್ಮೆ ಎಂತೆಂದೊಡೆ, ವಿಸ್ತರಿಸಿ ಪೇಳುವೆನು ಎಲ್ಲ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯ. ಹದಿನಾಲ್ಕು ಭುವನಕ್ಕೆ ಕಲಶವೆಂದೆನಿಸುವೆ ರುದ್ರಲೋಕವ ಮರ್ತ್ಯಲೋಕಕ್ಕೆ ತಂದು, ಕಲ್ಯಾಣವೆಂಬ ಪುರವಾಗಿ ಹುಟ್ಟಿತ್ತು ನೋಡಿರಯ್ಯ! ಅಲ್ಲಿ ಸತ್ಯರು, ಸಾತ್ವಿಕರು, ನಿತ್ಯರು, ನಿಜೈಕ್ಯರು, ಮಹಾಜ್ಞಾನಿಗಳು, ಪರಮ ಶಿವಯೋಗಿಗಳು, ಶಿವಾನುಭಾವಸಂಪನ್ನರು, ಶಿವಲಿಂಗ ಪ್ರಾಣಿಗಳು, ಶಿವಪ್ರಸಾದ ಪಾದೋದಕ ಸಂಬಂಧಿಗಳು, ಶಿವಾಚಾರ ವೇದ್ಯರು, ಶಿವಾಗಮಸಾಧ್ಯರು, ಶಿವಸಮಯ ಪಕ್ಷರುಗಳಲ್ಲದೆ ಮತ್ತಾರು ಅಲ್ಲಿಲ್ಲ ನೋಡಿರಯ್ಯಾ. ಪಾಪಿಗಳು, ಕೋಪಿಗಳು, ಅಸತ್ಯರು, ಅನಾಚಾರಿಗಳು ಹೋಗಬಾರದು ಕಲ್ಯಾಣವ. ಮೀರಿ ಹೊಕ್ಕಿಹೆನೆಂಬವರಿಗೆ ಬಾಳಬಾಯಿಧಾರೆ ನೋಡಯ್ಯ. ಆ ಮಹಾಕಲ್ಯಾಣದ ವಿಸ್ತಾರ ತಾನೆಂತೆಂದೊಡೆ, ಹನ್ನೆರಡು ಯೋಜನ ಪರಿ ಪ್ರಮಾಣದ ವಿಸ್ತೀರ್ಣ ಪಟ್ಟಣಕ್ಕೆ ಮುನ್ನೂರರುವತ್ತು ಬಾಗಿಲುವಾಡ, ಆ ಬಾಗಿಲಿಂಗೆ ನೂರುಐವತ್ತೈದು ವಜ್ರದ ಹಾರೆಯ ಕದಂಗಳು, ಇನ್ನೂರಿಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ ನಾನೂರುಐವತ್ತು ಸುವರ್ಣದ ಕೆಲಸದ ಕದಂಗಳು, ಅಲ್ಲಿ ನೂರುಹದಿನೈದು ಜೋರಗಂಡಿ, ಅದಕ್ಕೆ ನೂರುಹದಿನೈದು ಮೊಳೆಯ ಕಂದಗಳು, ಇಪ್ಪತ್ತು ಬಾಗಿಲು, ಆವಾರಿಯಾಗಿಪ್ಪವಾಗಿ, ಅದಕ್ಕೆ ಕದಂಗಳಿಲ್ಲ. ಆ ಪಟ್ಟಣಕ್ಕೆ ಬಳಸಿ ಬಂದ ಕೋಟೆ ನಾಲ್ವತ್ತೆಂಟು ಯೋಜನ ಪರಿ ಪ್ರಮಾಣು, ಬಾಹತ್ತರಮನೆ ಲಕ್ಷ, ಮಾಂಡಲಿಕರ ಮನೆ ಲಕ್ಷ, ಸಾವಂತರ ಮನೆ ಲಕ್ಷ, ರಾಯ ರಾವುತರ ಮನೆಯೊಳಗಡಗಿಹ ಮನೆಗಳಿಗೆ ಲೆಕ್ಕವಿಲ್ಲ. ದ್ವಾದಶ ಯೋಜನ ವಿಸ್ತೀರ್ಣ ಸೂರ್ಯವೀಧಿ ನೂರಿಪ್ಪತ್ತು. ದ್ವಾದಶ ಯೋಜನ ಸೋಮವೀಧಿ ನೂರಿಪ್ಪತ್ತೈದು. ಅದಕ್ಕಿಮ್ಮಿಗಲಾದ ಒಳಕೇರಿ ಹೊರಕೇರಿಗೆ ಗಣನೆ ಇಲ್ಲ. ಆ ಪಟ್ಟಣದೊಳಗೆ ಲಕ್ಷದ ಮೇಲೆ
svasti samasta praśasti sahita śrīmatkalyāṇapurada mahātme eṃteṃdoḍe, vistarisi pēḷuvenu ella śivagaṇaṃgaḷu kēḷi kr̥tārtharāgirayya. hadinālku bhuvanakke kalaśaveṃdenisuve rudralōkava martyalōkakke taṃdu, kalyāṇaveṃba puravāgi huṭṭittu nōḍirayya! alli satyaru, sātvikaru, nityaru, nijaikyaru, mahājñānigaḷu, parama śivayōgigaḷu, śivānubhāvasaṃpannaru, śivaliṃga prāṇigaḷu, śivaprasāda pādōdaka saṃbaṃdhigaḷu, śivācāra vēdyaru, śivāgamasādhyaru, śivasamaya pakṣarugaḷallade mattāru allilla nōḍirayyā. pāpigaḷu, kōpigaḷu, asatyaru, anācārigaḷu hōgabāradu kalyāṇava. mīri hokkiheneṃbavarige bāḷabāyidhāre nōḍayya. ā mahākalyāṇada vistāra tāneṃteṃdoḍe, hanneraḍu yōjana pari pramāṇada vistīrṇa paṭṭaṇakke munnūraruvattu bāgiluvāḍa, ā bāgiliṃge nūruaivattaidu vajrada hāreya kadaṃgaḷu, innūrippattaidu kalugelasada dvāravaṭṭakke nānūruaivattu suvarṇada kelasada kadaṃgaḷu, alli nūruhadinaidu jōragaṃḍi, adakke nūruhadinaidu moḷeya kaṃdagaḷu, ippattu bāgilu, āvāriyāgippavāgi, adakke kadaṃgaḷilla. ā paṭṭaṇakke baḷasi baṃda kōṭe nālvatteṃṭu yōjana pari pramāṇu, bāhattaramane lakṣa, māṃḍalikara mane lakṣa, sāvaṃtara mane lakṣa, rāya rāvutara maneyoḷagaḍagiha manegaḷige lekkavilla. dvādaśa yōjana vistīrṇa sūryavīdhi nūrippattu. dvādaśa yōjana sōmavīdhi nūrippattaidu. adakkimmigalāda oḷakēri horakērige gaṇane illa. ā paṭṭaṇadoḷage lakṣada mēle
Editor's note: Lines 1–14 of original source paragraph 56. The 1930 print gives ಇ(ಎ?)ಪ್ಪತ್ತೆಂಟು, marking ಎ as an editorial alternative to ಇ. The main reading is retained here.
ತೊಂಭತ್ತಾರು ಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕ ದೇವರ ಶಿವಾಲಯ. ಮುನ್ನೂರರುವತ್ತು ಪದ್ಮಪತ್ರ ತೀವಿದ ಸರೋವರಂಗಳು ಎರಡು ಲಕ್ಷವು. ಎಂಭತ್ತೈದು ಸಾವಿರದ ಏಳನೂರೆಪ್ಪತ್ತು ದಾಸೋಹದ ಮಠಗಳು. ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜ ದೇವರ ಮಠದ ವಿಸ್ತೀರ್ಣ ಎಂತೆಂದೊಡೆ, ಯೋಜನವರೆಯ ಬಿನ್ನಾಣದ ಕಲುಗೆಲಸದ ಪೌಳಿ, ಅತಿಸೂಕ್ಷ್ಮದ ಕುಸುರಿಗೆಲಸದ ದ್ವಾರವಟ್ಟವೈದು, ಪಂಚಾಕ್ಷರದ ಶಾಸನ ಮಿಸುನಿಯ ಕಂಭದ ತೋರಣಂಗಳಲ್ಲಿ ರುದ್ರಾಕ್ಷೆಯ ಸೂಸಕ, ಆ ಬಾಗಿಲುವಾಡದಲ್ಲಿ ಒಪ್ಪುತಿಪ್ಪವಯ್ಯ. ನಂದಿಯ ಕಂಭದ ಸುವರ್ಣದುಪ್ಪುರಿಗೆ ದ್ವಜ, ಉಪ್ಪರಗುಡಿ ಪತಾಕೆ, ವ್ಯಾಸನ ಧ್ವಜ ಒಪ್ಪುತಿಪ್ಪವಯ್ಯ! ಅದರ ಮಧ್ಯದಲ್ಲಿ ಬಸವರಾಜ ದೇವರ ಸಿಂಹಾಸನದ ವಿಸ್ತೀರ್ಣದ ಪ್ರಮಾಣು, ಸಹಸ್ರ ಕಂಭದ ಸುವರ್ಣದುಪ್ಪರಿಗೆ, ಆ ಮನೆಗೆತ್ತಿದ ಹೊನ್ನ ಕಲಶ ಸಾವಿರ, ಗುರಲಿಂಗಜಂಗಮಕೆ ಪಾದಾರ್ಚನೆಯ ಮಾಡುವ ಹೊಕ್ಕರಣೆ, ನಾಲ್ಕು ಪುರುಷ ಪ್ರಮಾಣದ ಘಾತ, ಅಲ್ಲಿ ತುಂಬಿದ ಪಾದೋದಕದ ತುಂಬನುಚ್ಚಲು, ಬೆಳೆವ ರಾಜಸಾಲೆಯ ಗದ್ದೆ ಹನ್ನೆರಡು ಖಂಡಗ, ಆ ಯೋಜನವರೆಯ ಬಿನ್ನಾಣದ ಅರಮನೆಯ ವಿಸ್ತೀರ್ಣದೊಳಗೆ ಲಿಂಗಾರ್ಚನೆಯ ಮಾಡುವ ಮಠದ ಕಟ್ಟಳೆ ಲಕ್ಷದ ಮೇಲೆ ತೊಂಭತ್ತಾರು ಸಾವಿರ, ಇಂತೀ ಬಸವರಾಜ ದೇವರು ಮುಖ್ಯವಾದ ಅಸಂಖ್ಯಾತರ ಮಠಗಳು, ಆ ಕಲ್ಯಾಣದೊಳಗೆ ಎಷ್ಟು ಎಂದರೆ, ಹನ್ನೆರಡು ಸಾವಿರ ಕಟ್ಟಳೆಯ ನೇಮದ ಭಕ್ತರ ಮಠಂಗಳು, ಇಪ್ಪತ್ತೆಂಟು ಸಾವಿರ ಮಹಾಮನೆಗಳು, ಆ ಕಲ್ಯಾಣದೊಳಗೆ ಹತ್ತುಸಾವಿರ ನಿತ್ಯ ನೇಮಿಗಳ ಮಠಂಗಳು, ಹದಿನ್ನೆದು ಸಾವಿರ ಚಿಲುಮೆಯ ಅಗ್ಗವಣೆಯ ವ್ರತಸ್ತರ ಮಠಂಗಳು, ಐದುಸಾವಿರ ವ್ರತನೇಮಿಗಳ ಕಟ್ಟಳೆಯ ಮಠಂಗಳು, ಹನ್ನೆರಡು ಸಾವಿರ ಅಚ್ಚಪ್ರಸಾದಿಗಳ ಮಠಂಗಳು ಒಂದು ಸಾವಿರ. ಅರವತ್ತು ನಾಲ್ಕು ಶೀಲಸಂಪನ್ನರ ಮಠಂಗಳು ಒಂದುಸಾವಿರ. ಜಂಗಮಕ್ಕೆ ಆರೋಗಣೆಯ ಮಾಡಿಸುವ ದಾಸೋಹಿಗಳ ಮಠಂಗಳು
toṃbhattāru sāvira śivālaya. ā śivālayaṃgaḷige mukhyavāda tripurāṃtaka dēvara śivālaya. munnūraruvattu padmapatra tīvida sarōvaraṃgaḷu eraḍu lakṣavu. eṃbhattaidu sāvirada ēḷanūreppattu dāsōhada maṭhagaḷu. ā dāsōhada maṭhaṃgaḷige mukhyavāda basavarāja dēvara maṭhada vistīrṇa eṃteṃdoḍe, yōjanavareya binnāṇada kalugelasada pauḷi, atisūkṣmada kusurigelasada dvāravaṭṭavaidu, paṃcākṣarada śāsana misuniya kaṃbhada tōraṇaṃgaḷalli rudrākṣeya sūsaka, ā bāgiluvāḍadalli opputippavayya. naṃdiya kaṃbhada suvarṇaduppurige dvaja, upparaguḍi patāke, vyāsana dhvaja opputippavayya! adara madhyadalli basavarāja dēvara siṃhāsanada vistīrṇada pramāṇu, sahasra kaṃbhada suvarṇadupparige, ā manegettida honna kalaśa sāvira, guraliṃgajaṃgamake pādārcaneya māḍuva hokkaraṇe, nālku puruṣa pramāṇada ghāta, alli tuṃbida pādōdakada tuṃbanuccalu, beḷeva rājasāleya gadde hanneraḍu khaṃḍaga, ā yōjanavareya binnāṇada aramaneya vistīrṇadoḷage liṃgārcaneya māḍuva maṭhada kaṭṭaḷe lakṣada mēle toṃbhattāru sāvira, iṃtī basavarāja dēvaru mukhyavāda asaṃkhyātara maṭhagaḷu, ā kalyāṇadoḷage eṣṭu eṃdare, hanneraḍu sāvira kaṭṭaḷeya nēmada bhaktara maṭhaṃgaḷu, ippatteṃṭu sāvira mahāmanegaḷu, ā kalyāṇadoḷage hattusāvira nitya nēmigaḷa maṭhaṃgaḷu, hadinnedu sāvira cilumeya aggavaṇeya vratastara maṭhaṃgaḷu, aidusāvira vratanēmigaḷa kaṭṭaḷeya maṭhaṃgaḷu, hanneraḍu sāvira accaprasādigaḷa maṭhaṃgaḷu oṃdu sāvira. aravattu nālku śīlasaṃpannara maṭhaṃgaḷu oṃdusāvira. jaṃgamakke ārōgaṇeya māḍisuva dāsōhigaḷa maṭhaṃgaḷu
Editor's note: Lines 15–29 of original source paragraph 56.
ಮೂವತ್ತೆರಡು ಸಾವಿರ. ನಿತ್ಯ ಐನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ಸದಾಚಾರಿಗಳ ಮಠಂಗಳು ಐವತ್ತೆಂಟು ಸಾವಿರ. ನಿತ್ಯ ಸಾವಿರದ ನೂರು ಜಂಗಮಕ್ಕೆ ಒಲಿದು ದಾಸೋಹವ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ. ನಿತ್ಯ ಆವಾರಿಯಿಂದ ಮಾಡುವ ಮಾಟ ಕೂಟದ ಸದ್ಭಕ್ತರ ಮಠಂಗಳು ಒಂದು ಲಕ್ಷ. ಜಂಗಮ ಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ ಜಂಗಮ ಭಕ್ತರ ಮಠ ಎರಡು ಸಾವಿರದ ಏಳನೂರೆಪ್ಪತ್ತು. ಅಂತು ಎರಡು ಲಕ್ಷವು ಎಂಬತ್ತೈದು ಸಾವಿರದ ಎಳುನೂರೆಪ್ಪತ್ತು ಅಸಂಖ್ಯಾತರಿಗೆ ಮುಖ್ಯವಾಗಿ ರುದ್ರಲೋಕದಿಂದಿಳಿತಂದ ಪ್ರಮಥ ಗಣಂಗಳ ಮಠಂಗಳು ಏಳುನೂರೆಪ್ಪತ್ತು. ಇಂತಿ ಮಹಾಪ್ರಮಥರಿಗೆ ಪುರಾತರಿಗೆ ಅಸಂಖ್ಯಾತ ಮಹಾಗಣಂಗಳಿಗೆ ಪ್ರಮಥ ನಾಯಕನಾಗಿ, ಏಕಮುಖ, ದಶಮುಖ, ಶತಮುಖ, ಸಹಸ್ರಮುಖ, ಲಕ್ಷಮುಖ, ಕೋಟಿಮುಖ, ಅನಂತ ಕೋಟಿ ಮುಖವಾಗಿ, ಭಕ್ತರಿಗೆ ಒಡನಾಡಿಯಾಗಿಪ್ಪನು ಸಂಗನಬಸವಣ್ಣನು ಜಗದಾರಾಧ್ಯ ಬಸವಣ್ಣನು, ಪ್ರಮಥ ಗುರು ಬಸವಣ್ಣನು, ಶರಣ ಸನ್ನಿಹಿತ ಬಸವಣ್ಣ, ಸತ್ಯಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡುಸ್ಥಲಸಂಪನ್ನ ಬಸವಣ್ಣ, ಸರ್ವಾಚಾರಸಂಪನ್ನ ಬಸವಣ್ಣ, ಸರ್ವಾಂಗ ಲಿಂಗಿ ಬಸವಣ್ಣ, ಸುಜ್ಞಾನ ಭರಿತ ಬಸವಣ್ಣ, ನಿತ್ಯ ಪ್ರಸಾದಿ ಬಸವಣ್ಣ, ಸಚ್ಚಿದಾನಂದ ಮೂರ್ತಿ ಬಸವಣ್ಣ, ಸದ್ಯೋನ್ಮುಕ್ತಿ ರೂಪು ಬಸವಣ್ಣ, ಅಖಂಡ ಪರಿಪೂರ್ಣ ಬಸವಣ್ಣ, ಅಕಾಯ ಚಾರಿತ್ರ ಬಸವಣ್ಣ, ಅಸಾಧ್ಯ ಸಾಧ್ಯಕ ಬಸವಣ್ಣ, ಅಭೇದ್ಯ ಭೇದಕ ಬಸವಣ್ಣ, ಅನಾಮಯ ಮೂರ್ತಿ ಬಸವಣ್ಣ, ಮಹಾಮನೆಯ ಮಾಡಿದಾತ ಬಸವಣ್ಣ, ರುದ್ರಲೋಕವ ಮರ್ತ್ಯಲೋಕಕ್ಕೆ ತಂದಾತ ಬಸವಣ್ಣ, ಶಿವಾಚಾರದ ಘನವ ಮೆರೆದಾತ ಬಸವಣ್ಣ, ಇಂತಹ ಬಸವಣ್ಣನ ಭಕ್ತಿಯನು ಒರೆದೊರೆದು ನೋಡಿ, ಪ್ರಬಲಿತವ ಮಾಡುವ ಅಶ್ವಪತಿ ಜಗಪತಿ ನರಪತಿರಾಯ ರಾಜಾಧಿರಾಜ ಬಿಜ್ಜಳರಾಯನು, ಆ ಬಸವಣ್ಣನು ಆ ಕಲ್ಯಾಣ ಪಟ್ಟಣದೊಳಗೆ ಸುಖಸಂಕಥಾ ವಿನೋದದಿಂದ
mūvatteraḍu sāvira. nitya ainūru jaṃgamakke olidu dāsōhava māḍuva sadācārigaḷa maṭhaṃgaḷu aivatteṃṭu sāvira. nitya sāvirada nūru jaṃgamakke olidu dāsōhava māḍuva dāsōhigaḷa maṭhaṃgaḷu hannoṃdu sāvira. nitya āvāriyiṃda māḍuva māṭa kūṭada sadbhaktara maṭhaṃgaḷu oṃdu lakṣa. jaṃgama sahita samayācāradiṃda liṃgārcaneya māḍuva jaṃgama bhaktara maṭha eraḍu sāvirada ēḷanūreppattu. aṃtu eraḍu lakṣavu eṃbattaidu sāvirada eḷunūreppattu asaṃkhyātarige mukhyavāgi rudralōkadiṃdiḷitaṃda pramatha gaṇaṃgaḷa maṭhaṃgaḷu ēḷunūreppattu. iṃti mahāpramatharige purātarige asaṃkhyāta mahāgaṇaṃgaḷige pramatha nāyakanāgi, ēkamukha, daśamukha, śatamukha, sahasramukha, lakṣamukha, kōṭimukha, anaṃta kōṭi mukhavāgi, bhaktarige oḍanāḍiyāgippanu saṃganabasavaṇṇanu jagadārādhya basavaṇṇanu, pramatha guru basavaṇṇanu, śaraṇa sannihita basavaṇṇa, satyasātvika basavaṇṇa, nityanijaikya basavaṇṇa, ṣaḍusthalasaṃpanna basavaṇṇa, sarvācārasaṃpanna basavaṇṇa, sarvāṃga liṃgi basavaṇṇa, sujñāna bharita basavaṇṇa, nitya prasādi basavaṇṇa, saccidānaṃda mūrti basavaṇṇa, sadyōnmukti rūpu basavaṇṇa, akhaṃḍa paripūrṇa basavaṇṇa, akāya cāritra basavaṇṇa, asādhya sādhyaka basavaṇṇa, abhēdya bhēdaka basavaṇṇa, anāmaya mūrti basavaṇṇa, mahāmaneya māḍidāta basavaṇṇa, rudralōkava martyalōkakke taṃdāta basavaṇṇa, śivācārada ghanava meredāta basavaṇṇa, iṃtaha basavaṇṇana bhaktiyanu oredoredu nōḍi, prabalitava māḍuva aśvapati jagapati narapatirāya rājādhirāja bijjaḷarāyanu, ā basavaṇṇanu ā kalyāṇa paṭṭaṇadoḷage sukhasaṃkathā vinōdadiṃda
Editor's note: Lines 30–44 of original source paragraph 56.
ರಾಜ್ಯಂಗೈವುತ್ತಿರಲು, ಆ ಕಲ್ಯಾಣದ ನಾಮವಪಿಡಿದು, ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೇ ಕೈಲಾಸವೆನಿಸಿತ್ತು. ಇಂತಪ್ಪ ಕಲ್ಯಾಣದ ದರುಶನವ ಮಾಡಿದರೆ, ಭವಂ ನಾಸ್ತಿ. ಇಂತಪ್ಪ ಕಲ್ಯಾಣವ ನೆನೆದರೆ ಪಾಪಕ್ಷಯ. ಇಂತಪ್ಪ ಕಲ್ಯಾಣದ ಮಹತ್ವವ ಕೇಳಿದರೆ ಕರ್ಮಕ್ಷಯವಹುದು. ಮೋಕ್ಷ ಸಾಧ್ಯವಹುದು. ಇದು ಕಾರಣ ಕೂಡಲ ಚನ್ನಸಂಗಮದೇವ ನಿಮ್ಮ ಭಕ್ತ ಬಸವಣ್ಣನಿದ್ದ ಠಾವೆ ಮಹಾ ಕಲ್ಯಾಣವೆಂದರಿದು ದಿವ್ಯಶಾಸನವ ಬರೆದು ಪಠಿಸಿದ ಕಾರಣ ಎನ್ನ ಭವಂ ನಾಸ್ತಿಯಾಯಿತ್ತಯ್ಯ. ॥
rājyaṃgaivuttiralu, ā kalyāṇada nāmavapiḍidu, vivāhakke kalyāṇaveṃba nāmavāyittu. lōkadoḷage kalyāṇavē kailāsavenisittu. iṃtappa kalyāṇada daruśanava māḍidare, bhavaṃ nāsti. iṃtappa kalyāṇava nenedare pāpakṣaya. iṃtappa kalyāṇada mahatvava kēḷidare karmakṣayavahudu. mōkṣa sādhyavahudu. idu kāraṇa kūḍala cannasaṃgamadēva nimma bhakta basavaṇṇanidda ṭhāve mahā kalyāṇaveṃdaridu divyaśāsanava baredu paṭhisida kāraṇa enna bhavaṃ nāstiyāyittayya. ॥
Editor's note: Lines 45–49 of original source paragraph 56.
ಇಂತು ಪ್ರಭುದೇವರು ಕಲ್ಯಾಣಪುರದ ದ್ವಾರವಟ್ಟದ ಮುಂದಣ ಶಾಸನಮಂ ಓದಿ ನೋಡಿ ಪರಮ ಹರುಷಿತರಾಗಿ, ಬಸವರಾಜ ದೇವರ ಮಹಾತ್ಮೆಯನು ಸ್ತೋತ್ರಮಂ ಮಾಡುತ್ತ ಸಿದ್ಧರಾಮಯ್ಯ ತಂದೆಗಳೊಡನೆ ನಿರೂಪಿಸುತ್ತಿರ್ದ ಪ್ರಸ್ಥಾವದ ವಚನ. ॥
iṃtu prabhudēvaru kalyāṇapurada dvāravaṭṭada muṃdaṇa śāsanamaṃ ōdi nōḍi parama haruṣitarāgi, basavarāja dēvara mahātmeyanu stōtramaṃ māḍutta siddharāmayya taṃdegaḷoḍane nirūpisuttirda prasthāvada vacana. ॥
ಆದಿ ಆಧಾರವಿಲ್ಲದ ಆಗಮ ನಾಸ್ತಿಯಾಗಿಪ್ಪ ಸಾಗರ ವಿರಹಿತನನಾರು ಅರಿಯರಲ್ಲ. ದಶಮುಖದ ಮಾಣಿಕದ ಎಸಳು ಕಂಗಳು ಪರ್ಬಿ ಪಸರಿಸಿದುದನಾರು ಅರಿಯರಲ್ಲ. ಹಿರಿದೊಂದು ವೃಕ್ಷವು ಅತಿಶಯದ ರೂಪಾಗಿ ಪೃಥ್ವಿಗಿಂಬಾಗಿರ್ದುದನಾರು ಅರಿಯರಲ್ಲ. ಅಂತರಂಗದ ಭುವನವ ಮೆಟ್ಟಿ ನೋಡುತ್ತ ಬೆಡಗಿನ ತಾವರೆಯ ಮಧ್ಯದ ತಾರಕಿಯನಾರು ಅರಿಯರಲ್ಲ. ಇನಶಶಿಗಳಿಬ್ಬರು ನಯನ ನೋಟದ ಪುಷ್ಪ ಪರಿಮಳವಾಗಿರ್ದುದನಾರು ಅರಿಯರಲ್ಲ. ಇಂಬು ನಯನದಲ್ಲಿ ಸಂಭ್ರಮವಿಲ್ಲದ ರೂಪು ಮಹತ್ತಾಗಿರ್ದುದನಾರು ಅರಿಯರಲ್ಲ. ಸಾಗರದೊಳಗಣ ಜ್ಯೋತಿಯಂತೆ ಗುಹೇಶ್ವರ ಲಿಂಗದೊಳಗೆ ಎನ್ನ ಪರಮಾರಾಧ್ಯರು ಸಂಗನ ಬಸವಣ್ಣನು ನಿಂದ ನಿಲವನುಪಮಿಸಬಾರದು ಕಾಣಾ ಸಿದ್ಧರಾಮಯ್ಯ. ॥
ādi ādhāravillada āgama nāstiyāgippa sāgara virahitananāru ariyaralla. daśamukhada māṇikada esaḷu kaṃgaḷu parbi pasarisidudanāru ariyaralla. hiridoṃdu vr̥kṣavu atiśayada rūpāgi pr̥thvigiṃbāgirdudanāru ariyaralla. aṃtaraṃgada bhuvanava meṭṭi nōḍutta beḍagina tāvareya madhyada tārakiyanāru ariyaralla. inaśaśigaḷibbaru nayana nōṭada puṣpa parimaḷavāgirdudanāru ariyaralla. iṃbu nayanadalli saṃbhramavillada rūpu mahattāgirdudanāru ariyaralla. sāgaradoḷagaṇa jyōtiyaṃte guhēśvara liṃgadoḷage enna paramārādhyaru saṃgana basavaṇṇanu niṃda nilavanupamisabāradu kāṇā siddharāmayya. ॥
ಇಂತೀ ಪ್ರಭುದೇವರು ಸಿದ್ಧರಾಮಯ್ಯ ದೇವರೊಡನೆ ಬಸವರಾಜ ದೇವರ ಮಹಾತ್ಮೆಯಂ ಕೊಂಡಾಡಿ ಹೇಳುತ್ತಿರಲು, ಆ ಸಿದ್ಧರಾಮಯ್ಯ ದೇವರು ಪ್ರಭುದೇವರೊಡನೆ ಬಸವರಾಜ ದೇವರ ಮಹಾತ್ಮೆಯಂ ಕೊಂಡಾಡಿ ಹೇಳುತ್ತಿರ್ದ ಪ್ರಸ್ಥಾವದ ವಚನ. ॥
iṃtī prabhudēvaru siddharāmayya dēvaroḍane basavarāja dēvara mahātmeyaṃ koṃḍāḍi hēḷuttiralu, ā siddharāmayya dēvaru prabhudēvaroḍane basavarāja dēvara mahātmeyaṃ koṃḍāḍi hēḷuttirda prasthāvada vacana. ॥
ಯತ್ರ ಯತ್ರ ಮಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ ಎಲೆ ಅಯ್ಯ. ಸತ್ಯ ವಚನವು ತಪ್ಪುವದೆ ಎಲೆ ಅಯ್ಯ? ಕಪಿಲ ಸಿದ್ಧಮಲ್ಲಿನಾಥ ನಿಮ್ಮ ಶರಣರು ಮೆಟ್ಟಿನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯ ಬಂದಿತ್ತೈಯ್ಯ. ॥
yatra yatra mahēśvararirda grāma tatra tatra śivalōka nōḍā ele ayya. satya vacanavu tappuvade ele ayya? kapila siddhamallinātha nimma śaraṇaru meṭṭiniṃda dhare pāvanaveṃbudu iṃdenage ariya baṃdittaiyya. ॥
ಮತ್ತಂ, ಜಲದಲುದಯಿಸಿ ಮತ್ತೆ ಜಲವು ತಾನಲ್ಲ. ಜಲವೆಂದಿಪ್ಪರು ಲೋಕದವರು. ಪರಮಗುರು ಬಸವಣ್ಣ ಜಗವ ಪಾಲಿಸ ಬರಲು, ಎನ್ನ ಪರಿಭವದ ದಂದುಗ ಹರಿಯಿತೈಯ್ಯ. ಆ ಸುದ್ದಿಯನರಿಯದೆ, ಬೇಕಾದ ಪರಿಯಲ್ಲಿ ಅನೇಕ ಜಡರೆಲ್ಲರು ನುಡಿವುತ್ತಿಹರು. ಸತ್ತ ಪ್ರಾಣವನೆತ್ತಿ ಒಪ್ಪಿಪ್ಪ ನಿಶ್ಚಯವು ಮರ್ತ್ಯದವರಿಗುಂಟೆ ಶಿವಂಗಲ್ಲದೆ? ಶಿವ ಗುರು ಬಸವಣ್ಣ, ಬಸವ ಗುರು ಶಿವನಾಗಿ ದೆಸೆಗೆಟ್ಟ ದೇವತಾಪಶುಗಳಿಗೆ ಪತಿಯಾದನು. ಬಸವಣ್ಣನ ನೆನಹು ಸುಖ ಸಮುದ್ರವಯ್ಯ ಕಪಿಲ ಸಿದ್ಧಮಲ್ಲಿನಾಥ ಬಸವಣ್ಣನ ತೋರಿದಿರಾಗಿ ನಾನು ಬದುಕಿದೆನು. ॥
mattaṃ, jaladaludayisi matte jalavu tānalla. jalaveṃdipparu lōkadavaru. paramaguru basavaṇṇa jagava pālisa baralu, enna paribhavada daṃduga hariyitaiyya. ā suddiyanariyade, bēkāda pariyalli anēka jaḍarellaru nuḍivuttiharu. satta prāṇavanetti oppippa niścayavu martyadavariguṃṭe śivaṃgallade? śiva guru basavaṇṇa, basava guru śivanāgi desegeṭṭa dēvatāpaśugaḷige patiyādanu. basavaṇṇana nenahu sukha samudravayya kapila siddhamallinātha basavaṇṇana tōridirāgi nānu badukidenu. ॥
ಇಂತು ಸಿದ್ಧರಾಮಯ್ಯ ದೇವರು ಬಸವರಾಜ ದೇವರ ಮಹಾತ್ಮೆಯಂ ಕೊಂಡಾಡುತ್ತ ಬರುತ್ತಿರಲು, ಆ ಬಸವರಾಜ ದೇವರ ದ್ವಾರವಟ್ಟದ ಮುಂದೆ ನಿಂದಲ್ಲಿ ಪ್ರಭುದೇವರು ಆ ಬಸವರಾಜ ದೇವರ ಮಠವ ಕೊಂಡಾಡುವ ಪ್ರಸ್ಥಾವನ ವಚನ. ॥
iṃtu siddharāmayya dēvaru basavarāja dēvara mahātmeyaṃ koṃḍāḍutta baruttiralu, ā basavarāja dēvara dvāravaṭṭada muṃde niṃdalli prabhudēvaru ā basavarāja dēvara maṭhava koṃḍāḍuva prasthāvana vacana. ॥
ಕರ್ಮವಿಲ್ಲದ ಕಾಯ, ಕರಣವಿಲ್ಲದ ಪ್ರಾಣ, ಮಥನವಿಲ್ಲದ ಶಬ್ದ, ಗಮನವಿಲ್ಲದ ಮನ, ಗುಹೇಶ್ವರನ ಬರವು ಸಂಗನಬಸವಣ್ಣನ ಅಂಗಳವ ಕಂಡಲ್ಲಿ ತರಹರವಾಯಿತ್ತು ಕಾಣಾ ಸಿದ್ಧರಾಮಯ್ಯ, ॥
karmavillada kāya, karaṇavillada prāṇa, mathanavillada śabda, gamanavillada mana, guhēśvarana baravu saṃganabasavaṇṇana aṃgaḷava kaṃḍalli taraharavāyittu kāṇā siddharāmayya, ॥
ಮತ್ತಂ, ಉಪಪಾತಕ ಮಹಾಪಾತಕಂಗಳ ಮಾಡಿದ ಕರ್ಮಂಗಳು ಕೋಟಾನು ಕೋಟಿ ಒಬ್ಬ ಶಿವಭಕ್ತನ ಅಂಗಳವ ಕಂಡಲ್ಲಿ ಅಳಿದು ಹೋಹುದು ನೋಡಾ ! ಅದೇನು ಕಾರಣವೆಂದಡೆ, ಆ ಶರಣನ ಅಂತರಂಗದಲ್ಲಿ ಶಿವನಿಪ್ಪನು. ಆ ಶಿವನಿದ್ದಲ್ಲಿ ಕೈಲಾಸವಿಪ್ಪುದು. ಆ ಕೈಲಾಸವಿದ್ದಲ್ಲಿ ಮಹಾ ರುದ್ರಗಣಂಗಳಿಪ್ಪರು. ಅಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲಸಿಪ್ಪವು. ಇಂತಪ್ಪ ಶರಣ ಸಂಗನಬಸವಣ್ಣನ ಅಂಗಳವ ಕಂಡೆನಾಗಿ ಗುಹೇಶ್ವರ ಲಿಂಗಕ್ಕೆ ಕಂಗಳ ತೃಪ್ತಿಯಾಯಿತ್ತು ಕಾಣಾ ಸಿದ್ಧರಾಮಯ್ಯ. ॥
mattaṃ, upapātaka mahāpātakaṃgaḷa māḍida karmaṃgaḷu kōṭānu kōṭi obba śivabhaktana aṃgaḷava kaṃḍalli aḷidu hōhudu nōḍā ! adēnu kāraṇaveṃdaḍe, ā śaraṇana aṃtaraṃgadalli śivanippanu. ā śivaniddalli kailāsavippudu. ā kailāsaviddalli mahā rudragaṇaṃgaḷipparu. alli aṣṭāṣaṣṭi tīrthaṃgaḷu nelasippavu. iṃtappa śaraṇa saṃganabasavaṇṇana aṃgaḷava kaṃḍenāgi guhēśvara liṃgakke kaṃgaḷa tr̥ptiyāyittu kāṇā siddharāmayya. ॥
ಹೀಗೆಂದು ಪ್ರಭುದೇವರು ಬಸವರಾಜ ದೇವರ ಮಠಮಂ ಕೊಂಡಾಡಿ ಸಿದ್ದರಾಮಯ್ಯ ದೇವರಿಗೆ ಹೇಳಿ ತೋರುತ್ತಿರಲು, ಆ ಸಿದ್ಧರಾಮಯ್ಯ ದೇವರು ಬಸವರಾಜ ದೇವರ ಗೃಹಮಂ ಕೊಂಡಾಡಿ ಪ್ರಭುದೇವರಿಗೆ ಬಿನ್ನೈಸುವ ಪ್ರಸ್ಥಾವದ ವಚನ. ॥
hīgeṃdu prabhudēvaru basavarāja dēvara maṭhamaṃ koṃḍāḍi siddarāmayya dēvarige hēḷi tōruttiralu, ā siddharāmayya dēvaru basavarāja dēvara gr̥hamaṃ koṃḍāḍi prabhudēvarige binnaisuva prasthāvada vacana. ॥
ನಿಶ್ಚಲ ಶರಣನ ಮನೆಯ ಅಂಗಳದಲ್ಲಿ ಅಷ್ಟಾಷಷ್ಟಿ ತೀರ್ಥಂಗಳು ನೆಲಸಿರ್ಪವಯ್ಯ ! ನೀನು ಇನಿಸುವೆರಸಿ ಒಲಿದಲ್ಲಿ ನೆಲಸಿಪ್ಪವಯ್ಯ ಕಪಿಲ ಸಿದ್ಧಮಲ್ಲಿನಾಥಯ್ಯ. ॥
niścala śaraṇana maneya aṃgaḷadalli aṣṭāṣaṣṭi tīrthaṃgaḷu nelasirpavayya ! nīnu inisuverasi olidalli nelasippavayya kapila siddhamallināthayya. ॥
ಇಂತು ಸಿದ್ಧರಾಮಯ್ಯ ದೇವರು ಬಸವರಾಜ ದೇವರ ಅಂಗಳವೇ ಅವಿಮುಕ್ತ ಕ್ಷೇತ್ರವೆಂದು ಕೊಂಡಾಡುತ್ತಿರಲು, ಆ ಬಸವರಾಜ ದೇವರ ಮಠದಲ್ಲಿ ಶಿವಗಣಂಗಳ ತಿಂಥಿಣಿಯಾದುದಂ ಕಂಡು, ಪ್ರಭುದೇವರು ಸಿದ್ಧರಾಮಯ್ಯ ದೇವರಿಗೆ ತೋರಿಸಿ ಕೊಂಡಾಡಿ ಹೇಳುವ ಪ್ರಸ್ಥಾವದ ವಚನ.
iṃtu siddharāmayya dēvaru basavarāja dēvara aṃgaḷavē avimukta kṣētraveṃdu koṃḍāḍuttiralu, ā basavarāja dēvara maṭhadalli śivagaṇaṃgaḷa tiṃthiṇiyādudaṃ kaṃḍu, prabhudēvaru siddharāmayya dēvarige tōrisi koṃḍāḍi hēḷuva prasthāvada vacana.
ಮರ್ತ್ಯಲೋಕದ ಮಹಾ ಮನೆ ಹಾಳಾಗಿ ಹೋಗಬಾರದೆಂದು ಕರ್ತ ನಟ್ಟಿದನಯ್ಯ ಒಬ್ಬ ಶಿವಶರಣನ. ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ, ರುದ್ರಗಣ ಪ್ರಮಥ ಗಣಂಗಳೆಲ್ಲರ ಹಿಡಿತಂದು, ಅಸಂಖ್ಯಾತರೆಂದು ಹೆಸರಿಟ್ಟು ಕರೆದು ಭಕ್ತಿಯ ಕುಳಸ್ಥಳವ ಶೃತ ದೃಷ್ಟ ಪವಾತದಿಂ ಮೆರೆದು ತೋರಿ, ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ ಮರ್ತ್ಯಲೋಕ ಶಿವಲೋಕವೆರಡಕ್ಕೆ ನಿಚ್ಚಣಿಕೆಯಾದನು. ಶಿವಶರಣರ ಮನೆಯೊಳಗಿಪ್ಪ ಶಿವಗಣಂಗಳ ತಿಂಥಿಣಿಯಂ ಕಂಡು, ಎನ್ನ ಮನವು ಉಬ್ಬಿ ಕೊಬ್ಬಿ ಓಲಾಡುತ್ತಿರ್ದೆನಯ್ಯ. ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣನ ದಾಸೋಹದ ಘನವನೇನೆಂದೆನ್ನಬಹುದು ನೋಡಾ, ಸಿದ್ಧರಾಮಯ್ಯ. ॥
martyalōkada mahā mane hāḷāgi hōgabāradeṃdu karta naṭṭidanayya obba śivaśaraṇana. ā śaraṇa baṃdu kalyāṇaveṃba śivapurava kailāsava māḍi, rudragaṇa pramatha gaṇaṃgaḷellara hiḍitaṃdu, asaṃkhyātareṃdu hesariṭṭu karedu bhaktiya kuḷasthaḷava śr̥ta dr̥ṣṭa pavātadiṃ meredu tōri, jagavariyalu śivācārada dhvajavanettisi martyalōka śivalōkaveraḍakke niccaṇikeyādanu. śivaśaraṇara maneyoḷagippa śivagaṇaṃgaḷa tiṃthiṇiyaṃ kaṃḍu, enna manavu ubbi kobbi ōlāḍuttirdenayya. namma guhēśvarana śaraṇa saṃgana basavaṇṇana dāsōhada ghanavanēneṃdennabahudu nōḍā, siddharāmayya. ॥
ಇಂತು ಪ್ರಭುದೇವರು ಬಸವರಾಜ ದೇವರ ಗೃಹದ ಗಣ ತಿಂಥಿಣಿಯಂ ಕಂಡು, ಹೃದಯ ಕಮಲವರಳುತ್ತ ಪರಮಾನಂದ ರಸದೊಳ್ಮುಳುಂಗಿ ತೇಂಕಾಡುತ್ತ ಸಿದ್ಧರಾಮಯ್ಯ ದೇವರೊಡನೆ ಪ್ರಭುದೇವರು ಮರಳಿ ಆ ಬಸವರಾಜ ದೇವರ ಗೃಹಮಂ ಕೊಂಡಾಡಿದ ಪ್ರಸ್ಥಾವದ ವಚನ. ॥
iṃtu prabhudēvaru basavarāja dēvara gr̥hada gaṇa tiṃthiṇiyaṃ kaṃḍu, hr̥daya kamalavaraḷutta paramānaṃda rasadoḷmuḷuṃgi tēṃkāḍutta siddharāmayya dēvaroḍane prabhudēvaru maraḷi ā basavarāja dēvara gr̥hamaṃ koṃḍāḍida prasthāvada vacana. ॥
ಆದಿಯ ಲಿಂಗವ ಮೇದಿನಿಗೆ ತಂದು ಮರ್ತ್ಯಲೋಕದಲ್ಲಿ ಮಹಮನೆಯ ಮಾಡಿ ಕಟ್ಟಿದನಯ್ಯ ಸಂಗನಬಸವಣ್ಣನು. ಆ ಮನೆಯ ನೋಡಲೆಂದು ಹೋದರೆ ಆ ಮನೆಯ ಹೊಗದ ಮುನ್ನವೆ ಎನ್ನ ನುಂಗಿತ್ತೈಯ್ಯ. ಅದಕ್ಕೆ ಕಂಭ ಒಂದು, ತೊಲೆ ಆರು, ಜಂತೆವಲಗೆ ಮೂವತ್ತಾರು, ಧರೆ ಆಕಾಶ ಹೊದ್ದದ ಕೆಸರುಗಲ್ಲು ಒಂಭತ್ತು ಬಾಗಿಲ ಬಿಯ್ಯಗವಿಕ್ಕಿಹವು. ಬೇರೊಂದು ಬಾಗಿಲು ಉರಿಯನುಗುಳುತ್ತಿಹುದು. ಮುತ್ತಿನ ಕಂಭದ ಮೇಲುಕಟ್ಟಿನ ಮೇಲೆ ಮಾಣಿಕ್ಯದ ಶಿಖರ, ಆ ಶಿಖರದ ತುದಿಯಲ್ಲಿ ಹೊಂಗಳಸವಿಪ್ಪುದು. ಅದು ಕಾಬರಿಗೆ ಕಾಣಬಾರದು. ಕಾಣಬಾರದವರಿಗೆ ಕಾಣಬಪ್ಪುದು. ಅಲ್ಲಿ ಹತ್ತುಮಂದಿ ಪರಿಚಾರಕರು ಎದೆಯಾಡುತ್ತಿದ್ದರು. ಇಬ್ಬರು ದಡಿಕಾರರು ಬಾಗಿಲ ಕಾಯ್ದಿಪ್ಪರು. ಒಬ್ಬಳು ಎಡೆಯಾಡುತ್ತಿದ್ದಳು. ಒಬ್ಬಳೆ ಲಿಂಗಾರ್ಚನೆಗೆ ನೀಡುತ್ತಿರ್ಪಳು. ಒಬ್ಬಳೆ ಸುಯಿಧಾನಂಗಳೆಲ್ಲವ ಶೋಧಿಸಿ ತಂದುಕೊಡುತ್ತಿಪ್ಪಳು. ಒಬ್ಬಳೆ ಉರಿ ಇಲ್ಲದಗ್ನಿಯಲ್ಲಿ ಪಾಕ ಮಾಡುತ್ತಿಪ್ಪಳು. ಒಬ್ಬಳೆ ಲಿಂಗಜಂಗಮಕ್ಕೆ ಮಾಡಿ ನೀಡಿ ಉಡಿಸಿ ತೃಪ್ತಿಯ ಮಾಡುತ್ತಿಪ್ಪಳು. ಒಂದಡ್ಡಣಿಗೆಯ ಮೇಲೆ ಐದು ಅಗಲೊಳಗೆ ಇಟ್ಟ ಬೋನವ ಒಬ್ಬನುಂಡಡೆ ಪ್ರಮಥ ಗಣಂಗಳೆಲ್ಲರು ಆತನ ಒಕ್ಕುದ ಕೊಳ್ಳಲೆಂದು ಬಂದು ಆ ಮನೆಯ ಪೊಕ್ಕು ನಿಶ್ಚಿಂತ ನಿವಾಸಿಗಳಾಗಿಪ್ಪರು. ಗುಹೇಶ್ವರ ಶರಣನ ಸಂಗನಬಸವಣ್ಣನ ಮಹಾಮನೆಯ ಕಂಡು ಧನ್ಯನಾದೆನು ಕಾಣಾ ಸಿದ್ಧರಾಮಯ್ಯ. ॥
ādiya liṃgava mēdinige taṃdu martyalōkadalli mahamaneya māḍi kaṭṭidanayya saṃganabasavaṇṇanu. ā maneya nōḍaleṃdu hōdare ā maneya hogada munnave enna nuṃgittaiyya. adakke kaṃbha oṃdu, tole āru, jaṃtevalage mūvattāru, dhare ākāśa hoddada kesarugallu oṃbhattu bāgila biyyagavikkihavu. bēroṃdu bāgilu uriyanuguḷuttihudu. muttina kaṃbhada mēlukaṭṭina mēle māṇikyada śikhara, ā śikharada tudiyalli hoṃgaḷasavippudu. adu kābarige kāṇabāradu. kāṇabāradavarige kāṇabappudu. alli hattumaṃdi paricārakaru edeyāḍuttiddaru. ibbaru daḍikāraru bāgila kāydipparu. obbaḷu eḍeyāḍuttiddaḷu. obbaḷe liṃgārcanege nīḍuttirpaḷu. obbaḷe suyidhānaṃgaḷellava śōdhisi taṃdukoḍuttippaḷu. obbaḷe uri illadagniyalli pāka māḍuttippaḷu. obbaḷe liṃgajaṃgamakke māḍi nīḍi uḍisi tr̥ptiya māḍuttippaḷu. oṃdaḍḍaṇigeya mēle aidu agaloḷage iṭṭa bōnava obbanuṃḍaḍe pramatha gaṇaṃgaḷellaru ātana okkuda koḷḷaleṃdu baṃdu ā maneya pokku niściṃta nivāsigaḷāgipparu. guhēśvara śaraṇana saṃganabasavaṇṇana mahāmaneya kaṃḍu dhanyanādenu kāṇā siddharāmayya. ॥
ಇಂತು ಪ್ರಭುದೇವರು ಬಸವರಾಜ ದೇವರ ಗೃಹಮಂ ಕಂಡು ಕೊಂಡಾಡಿ ಸಿದ್ಧರಾಮಯ್ಯ ದೇವರೊಡನೆ ಹೇಳುತ್ತಿರಲು, ಆ ಸಿದ್ಧರಾಮಯ್ಯ ದೇವರು ಆ ಗೃಹವಂ ಕೊಂಡಾಡಿ ಪ್ರಭುದೇವರಿಗೆ ಬಿನ್ನಹಂ ಮಾಡುವ ಪ್ರಸ್ಥಾವದ ವಚನ.
iṃtu prabhudēvaru basavarāja dēvara gr̥hamaṃ kaṃḍu koṃḍāḍi siddharāmayya dēvaroḍane hēḷuttiralu, ā siddharāmayya dēvaru ā gr̥havaṃ koṃḍāḍi prabhudēvarige binnahaṃ māḍuva prasthāvada vacana.
ಅಯ್ಯ ನಿಮ್ಮ ಶರಣರಲ್ಲದವರ ಮನೆ ಕೆಮ್ಮನೆ ಕಂಡಯ್ಯ! ನಿಮ್ಮ ಶರಣರ ಮನೆಯೆ ನೆಲೆವನೆ ನೋಡಾ! ಎನಗೆ ಸಿರಿಯಾಳನ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ ದಾಸಿಮಯ್ಯನ ಮನೆಗಟ್ಟಿ ವ್ಯವಹಾರವನಾಡಿ ಹೋದ ಸಿಂಧುಬಲ್ಲಾಳನ ಮನೆಗಟ್ಟಿ ಕೈ ಕೂಲಿಗಾರನಾಗಿ ಹೋದ, ಗಂಗೆ ವಾಳುಕರ ಮನೆಗಟ್ಟಿ ಲಿಂಗದ ಹೊಲಬನರಿಯದೆ ಹೋದರು. ಇವರೆಲ್ಲರು ಮನೆಯ ಮಾಡಿ ಮಹವನರಿಯದೆ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಪದವಿಗೊಳಗಾದರು. ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದರೆ, ಮರ್ತ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು. ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು ನಿಜಲಿಂಗಪದಮಂ ಪಡೆದರು. ಆ ಗೃಹವ ನೋಡಬೇಕೆಂದು ನಾನು ಹಲಕಾಲ ತಪಸಿದ್ದೆನು. ಕಪಿಲ ಸಿದ್ಧಮಲ್ಲಿನಾಥ ನಿಮ್ಮ ಶರಣ ಸಂಗನಬಸವಣ್ಣನ ಮಹಮನೆಗೆ ನಮೋ ನಮೋ ಎಂದು ಬದುಕಿದೆನು ॥
ayya nimma śaraṇaralladavara mane kemmane kaṃḍayya! nimma śaraṇara maneye nelevane nōḍā! enage siriyāḷana manegaṭṭi bērūrige okkalu hōda dāsimayyana manegaṭṭi vyavahāravanāḍi hōda siṃdhuballāḷana manegaṭṭi kai kūligāranāgi hōda, gaṃge vāḷukara manegaṭṭi liṃgada holabanariyade hōdaru. ivarellaru maneya māḍi mahavanariyade sālōkya sāmīpya sārūpya sāyujyaveṃba padavigoḷagādaru. nimma saṃganabasavaṇṇa baṃdu kalyāṇadalli maneya kaṭṭidare, martyalōkavellavu bhaktisāmrājyavāyittu. ā manege talevāgi hokkavarellaru nijaliṃgapadamaṃ paḍedaru. ā gr̥hava nōḍabēkeṃdu nānu halakāla tapasiddenu. kapila siddhamallinātha nimma śaraṇa saṃganabasavaṇṇana mahamanege namō namō eṃdu badukidenu ॥
Keys: ← → turn the page, J K step through the verses.
Illustration: Verse & Place (Project-owned).