Skip to content

(ಷಷ್ಟಮೋಪದೇಶ.) · ಮರುಳ ಶಂಕರದೇವರ ಸಂಪಾದನೆ.

maruḷa śaṃkaradēvara saṃpādane.

maruḷa śaṃkaradēvara saṃpādane.

The complete original prose, dialogue and poems of teaching 6.

93 passagesKannada with transliteration

An open manuscript beneath an arch for Shunya Sampadane.

ವರಬಸವ ದಂಡನಾಥನ | ನಿರಹಂಭಾವಕ್ಕೆ ಮೆಚ್ಚಿ ಬರುತಿರ್ಪ್ಪ ಪ್ರಭು ॥ ಮರುಳುಶಂಕರನಿಗೈಕ್ಯವ | ನಿರದಿತ್ತುದ ಪೇಳ್ವೆ ಶರಣಜನಕತಿಶಯದಿಂ ॥

varabasava daṃḍanāthana | nirahaṃbhāvakke mecci barutirppa prabhu ॥ maruḷuśaṃkaranigaikyava | niradittuda pēḷve śaraṇajanakatiśayadiṃ ॥

Editor's note: Traditional rubric: ||ಕಂದ||

Report an error

ಅದೆಂತೆಂದೊಡಾ ಪ್ರಭುದೇವರು ಬಸವರಾಜದೇವರು ಮಾಡುವ ಸ್ತೋತ್ರಕ್ಕಂ ಮೆಚ್ಚಿ ಮುಂದಕ್ಕೆ ಗಮಿಸುತ್ತಿರಲು, ಅಲ್ಲಿ ಪ್ರಮಥರ ತಿಂಥಿಣಿಯಿಂ ಅನುಭಾವ ಸದ್ಗೋಷ್ಠಿಯಿಂ ಉಘೆ ಚಾಂಗು ಭಲಾ ಎಂಬ ಶಬ್ದದ ಸಡಗರದಿಂ ಬಸವರಾಜದೇವರ ರಾಜಭವನಕ್ಕೆ ಅತ್ಯಂತ ಸಂಭ್ರಮದಿಂ ಪೋಪ ಪ್ರಸ್ಥಾವದೊಳು ಮುಂದೆ ಅಂಗಳದಲ್ಲಿ ಪ್ರಸಾದದ ಕುಂಡ ಸಮೀಪಸ್ಥವಾಗುಅ, ಲಲ್ಲಿರ್ದ ಮರುಳು ಶಂಕರದೇವರು ಶರಣ ತಿಂಥಿಣಿಯಂ ಪ್ರಭುದೇವರ ಶ್ರೀ ಮೂರ್ತಿಯಂ ಕಂಡು, ಮೆಲ್ಲನೆ ಆ ಪ್ರಸಾದದ ಕುಂಡದಿಂ ಪೊರಮಡುತಿರ್ದರದೆಂತೆನೆ ॥

adeṃteṃdoḍā prabhudēvaru basavarājadēvaru māḍuva stōtrakkaṃ mecci muṃdakke gamisuttiralu, alli pramathara tiṃthiṇiyiṃ anubhāva sadgōṣṭhiyiṃ ughe cāṃgu bhalā eṃba śabdada saḍagaradiṃ basavarājadēvara rājabhavanakke atyaṃta saṃbhramadiṃ pōpa prasthāvadoḷu muṃde aṃgaḷadalli prasādada kuṃḍa samīpasthavāgua, lallirda maruḷu śaṃkaradēvaru śaraṇa tiṃthiṇiyaṃ prabhudēvara śrī mūrtiyaṃ kaṃḍu, mellane ā prasādada kuṃḍadiṃ poramaḍutirdaradeṃtene ॥

Report an error

ವಸಂತ ಮಾರುತ ಬರಲು, ಚೂತದಿಂದಂಕುರಂ ಪೊರಮಡುವಂತೆ, ಸ್ವಾತಿಯ ವರ್ಷದ ದಿನಕ್ಕೆ ಅಂಬುಧಿಯೊಳಗಿರ್ದ ಮೌಕ್ತಿಕಶಂಖ ಅಂಬುಧಿಯೊಳಗಿರ್ದ ಕಾಣಬಪ್ಪಂತೆ, ಸೂಜಿಕಲ್ಲ ಕಾಣುತ್ತ ಸೂಜಿ ಮೆಲ್ಲನೆ ತನ್ನ ಸ್ಥಾನದಿಂದೇಳುವಂತೆ, ಶಿವಯೋಗಾನಂದದಲ್ಲಿ ತನುವ ಮರೆದಿರ್ದ ಶಿವಯೋಗಿ ತನಗೆ ಶಿವಪ್ರಸನ್ನವಾಗಲು, ಮುಂದೆ ಶ್ರೀ ಶಿವನ ಚರಣಕಮಲಮಂ ಕಂಗಳಿಂದೊತ್ತಿಕೊಂಬೆನೆಂಬ ತೆರನಂತೆ ಪೌರ್ಣಮೀ ಚಂದ್ರಮನುದಯಕ್ಕೆ ಸಿಂಧು ಮೆಲ್ಲನೆ ಮುಂದಕುಬ್ಬಿ ನಡೆದು ಬಪ್ಪಂತೆ, ಮರುಳು ಶಂಕರ ದೇವರು ಪ್ರಸಾದಕುಂಡದಿಂ ಪೊರಮಡುತಿರ್ದ ಪ್ರಸ್ಥಾವದೊಳು, ಅಲ್ಲಿ ಅಲ್ಲಮಪ್ರಭುದೇವರಿಗೆ ಅವರ ನಿಲವ ತೋರಿದದೆಂತೆನೆ. ॥

vasaṃta māruta baralu, cūtadiṃdaṃkuraṃ poramaḍuvaṃte, svātiya varṣada dinakke aṃbudhiyoḷagirda mauktikaśaṃkha aṃbudhiyoḷagirda kāṇabappaṃte, sūjikalla kāṇutta sūji mellane tanna sthānadiṃdēḷuvaṃte, śivayōgānaṃdadalli tanuva maredirda śivayōgi tanage śivaprasannavāgalu, muṃde śrī śivana caraṇakamalamaṃ kaṃgaḷiṃdottikoṃbeneṃba teranaṃte paurṇamī caṃdramanudayakke siṃdhu mellane muṃdakubbi naḍedu bappaṃte, maruḷu śaṃkara dēvaru prasādakuṃḍadiṃ poramaḍutirda prasthāvadoḷu, alli allamaprabhudēvarige avara nilava tōridadeṃtene. ॥

Report an error

ಜ್ಞಾನಚಕ್ಷುವಿಂಗೆ ಆತ್ಮನ ನಿಲವು ತೋರಿದಂತೆ, ಅಂಜನವುಳ್ಳವನಿಗೆ ಕಡವರದಿರವ ತೋರಿದಂತೆ, ಅಲ್ಲಮಪ್ರಭುದೇವರಿಗೆ ಮರುಳುಶಂಕರ ದೇವರ ನಿಲವು ಕಡೆಹೋಗಿ ತೋರುತ್ತಿರಲು, ಅಲ್ಲಿ ಪ್ರಭುದೇವರು ನಿಂತು ಬಸವರಾಜದೇವರು ಮಾಡುವ ಸ್ತೋತ್ರಂಗಳಂ ಸಾಕೆಂದು ನಿರೂಪಿಸಿದ ಪ್ರಸ್ಥಾವದ ವಚನ ॥

jñānacakṣuviṃge ātmana nilavu tōridaṃte, aṃjanavuḷḷavanige kaḍavaradirava tōridaṃte, allamaprabhudēvarige maruḷuśaṃkara dēvara nilavu kaḍehōgi tōruttiralu, alli prabhudēvaru niṃtu basavarājadēvaru māḍuva stōtraṃgaḷaṃ sākeṃdu nirūpisida prasthāvada vacana ॥

Report an error

ಮನಮನ ಒಂದಾಗಿ ಅರಿಯು ಸಮವಾದ ಬಳಿಕ ಕೊಂಡಾಡಲಿಕ್ಕೆ ಇಂಬುಂಟೆ ಹೇಳಾ? ಶಬ್ದಕ್ಕೆ ತೆರಹಿಲ್ಲ. ಗುಹೇಶ್ವರ ಲಿಂಗದಲ್ಲಿ ಬೆರಸಿ ಬೇರಿಲ್ಲ ಕಾಣಾ ಸಂಗನ ಬಸವಣ್ಣಾ ॥

manamana oṃdāgi ariyu samavāda baḷika koṃḍāḍalikke iṃbuṃṭe hēḷā? śabdakke terahilla. guhēśvara liṃgadalli berasi bērilla kāṇā saṃgana basavaṇṇā ॥

Report an error

ಮತ್ತಂ, ಪ್ರಭುದೇವರು ಸ್ತೋತ್ರಮಂ ನಿಲಿಸಿ ಒಂದಾಶ್ಚರ್ಯಮಂ ಕಂಡೆನೆಂದು ನುಡಿದ ಪ್ರಸ್ಥಾವದ ವಚನ. ॥

mattaṃ, prabhudēvaru stōtramaṃ nilisi oṃdāścaryamaṃ kaṃḍeneṃdu nuḍida prasthāvada vacana. ॥

Report an error

ನೀರು ಕ್ಷೀರದಂತೆ ಕೂಡಿದ ಭೇದವನಾರಿಗು ಹೇಳಲಿಲ್ಲ ಕೇಳಲಿಲ್ಲ. ಬೆಳುಗಾರ ಬೆರಸಿ ಬೆಚ್ಚ ಬಂಗಾರಕ್ಕೆ ಸಂದುಂಟೆ ಹೇಳಾ? ಉರಿಯುಂಡ ಕರ್ಪುರದ ಪರಿಯಂತಿರ್ದುವನಿದಿರಿಂಗೆ ಕೊಂಡಾಡಿ ಹೇಳಲುಂಟೆ? ಅದಂತಿರಲಿ. ನಮ್ಮ ಗುಹೇಶ್ವರ ಲಿಂಗದ ಕಣ್ಣ ಮುಂದೆ ನಿಮ್ಮ ಧರ್ಮದಿಂದೆ ಒಂಡಾಶ್ಚರ್ಯಮಂ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ. ॥

nīru kṣīradaṃte kūḍida bhēdavanārigu hēḷalilla kēḷalilla. beḷugāra berasi becca baṃgārakke saṃduṃṭe hēḷā? uriyuṃḍa karpurada pariyaṃtirduvanidiriṃge koṃḍāḍi hēḷaluṃṭe? adaṃtirali. namma guhēśvara liṃgada kaṇṇa muṃde nimma dharmadiṃde oṃḍāścaryamaṃ kaṃḍu badukidenu kāṇā saṃganabasavaṇṇā. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಬಸವರಾಜದೇವರು ನೀವು ಕಂಡಾಶ್ಚರ್ಯವಾವುದೆಂದು ಬೆಸಗೊಂಬ ಪ್ರಸ್ಥಾವದ ವಚನ.॥

hīgeṃdu prabhudēvaru nirūpisalu, basavarājadēvaru nīvu kaṃḍāścaryavāvudeṃdu besagoṃba prasthāvada vacana.॥

Report an error

ದೇವದೇವ ಮಹಾ ಪ್ರಸಾದ ನೀವೆಂದಂತೆ ನಿಮ್ಮ ಚರಣದಲ್ಲಿ ಸಂದು ಭೇದವಿಲ್ಲದೆ ಇಪ್ಪೆನಲ್ಲದೆ, ಬೇರೆ ಭಿನ್ನವಾಗಿರ್ದೆನಾದರೆ ನೀವೆ ಸಾಕ್ಷಿ. ನಿಮ್ಮ ಶ್ರೀಪಾದವ ಕಂಡೆನ್ನ ಭವಂ ನಾಸ್ತಿಯಾಯಿತ್ತು. ಕೂಡಲ ಸಂಗಮದೇವ ನಿಮ್ಮಿಂದೊಂದಾಶ್ಚರ್ಯವಿಲ್ಲೆಂದು ಕೃತಿ ಹೊಗಳುತ್ತಿರಲಾಗಿ, ನೀವು ಕಂಡಾಶ್ಚರ್ಯವಾವುದೆನಗೊಮ್ಮೆ ನಿರೂಪಿಸಾ ಪ್ರಭುವೆ. ॥

dēvadēva mahā prasāda nīveṃdaṃte nimma caraṇadalli saṃdu bhēdavillade ippenallade, bēre bhinnavāgirdenādare nīve sākṣi. nimma śrīpādava kaṃḍenna bhavaṃ nāstiyāyittu. kūḍala saṃgamadēva nimmiṃdoṃdāścaryavilleṃdu kr̥ti hogaḷuttiralāgi, nīvu kaṃḍāścaryavāvudenagomme nirūpisā prabhuve. ॥

Report an error

ಇಂತು ಬಸವರಾಜದೇವರು ಮರುಳು ಶಂಕರದೇವರು ಗೋಪ್ಯದೊಳಿರ್ದು ಪೊರಮಡುವದಂ ಕಂಡು ಆಶ್ಚರ್ಯಂ ಬಟ್ಟು ಅನುಭಾವದ ಬೆಡಗಿನಿಂ ನುಡಿವ ಪ್ರಸ್ಥಾವದ ವಚನ. ॥

iṃtu basavarājadēvaru maruḷu śaṃkaradēvaru gōpyadoḷirdu poramaḍuvadaṃ kaṃḍu āścaryaṃ baṭṭu anubhāvada beḍaginiṃ nuḍiva prasthāvada vacana. ॥

Report an error

ಓಹೋ ನಮಃಶಿವಾಯ ಮಹಾದಾಕಾರದ ಮರೆಯಲ್ಲಿರ್ದ ಶಾಂತಾರ್ಕನ ನಿಲವು ದಶಮರುತನ ಹೊಯಿಲಿಲ್ಲದೆ ಬೆಳಗುವ ಲಿಂಗದಜ್ಞಾನ ಜ್ಯೋತಿಯ ನಿಲವೊ, ತನ್ನಿಂದ ತಾನಾಗಿ ಮುಕ್ತಿಯೇ ಕರಿಗೊಂಡುದೋ, ಧವಳದ ಕಾಂತಿಯ ನಿಲವೋ, ರುದ್ರಾಕ್ಷಿಯ ಹಂಗುಬೇಡವೆಂದು ಹೊದ್ದ ಚರ್ಮದ ಹೊದಕೆಯಂ ತೆಗೆದ ಗಿಟಿಗಿಟಿ ಜಂತ್ರದ ನಿಲವೋ, ಅಲ್ಲಿ ತನ್ನ ನಿಲವನರಿಯದೆ ವಾದಿಸುತ್ತಿರಲು, ಉರಿಲಿಂಗೋದ್ಭವವಾದ ಉರಿಲಿಂಗದ ನಿಲವೋ, ಆವ ನಿಲವೆಂದರಿಯ ಬಾರದು ಗುಹೇಶ್ವರನ ಕಂಗಳಿಗೆ ಒಂದಾಶ್ಚರ್ಯ ತೋರಿತ್ತು ಕಾಣಾ ಸಂಗನಬಸವಣ್ಣಾ. ॥

ōhō namaḥśivāya mahādākārada mareyallirda śāṃtārkana nilavu daśamarutana hoyilillade beḷaguva liṃgadajñāna jyōtiya nilavo, tanniṃda tānāgi muktiyē karigoṃḍudō, dhavaḷada kāṃtiya nilavō, rudrākṣiya haṃgubēḍaveṃdu hodda carmada hodakeyaṃ tegeda giṭigiṭi jaṃtrada nilavō, alli tanna nilavanariyade vādisuttiralu, uriliṃgōdbhavavāda uriliṃgada nilavō, āva nilaveṃdariya bāradu guhēśvarana kaṃgaḷige oṃdāścarya tōrittu kāṇā saṃganabasavaṇṇā. ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಇದಕ್ಕೆ ಬಸವರಾಜ ದೇವರು ನಿಮ್ಮಿಂದೊಂದಾಶ್ಚರ್ಯವಾವುದೆಂದು ಪ್ರಭುದೇವರು ಕೊಂಡಾಡುವ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisalu, idakke basavarāja dēvaru nimmiṃdoṃdāścaryavāvudeṃdu prabhudēvaru koṃḍāḍuva prasthāvada vacana. ॥

Report an error

ದೇವರ ದೇವ ಮಲಯಜದಿಂದಂ ಮೇಲೆ, ಮಲಯಜ ಉಂಟೆ? ಪರುಷದಿಂದಂ ಮೇಲೆ ಪರುಷವಾವುದುಂಟು ಅಯ್ಯ? ಅಮೃತ ಹಾರದಿಂದಂ ಮೇಲೆ ಭೋಜನ ಉಂಟೆ ಅಯ್ಯ? ನಿಮ್ಮಿಂದೊಂದಾಶ್ಚರ್ಯವ ಕಂಡೆನೆಂಬುದ ಎನಗೆ ನಿರೂಪಿಸಾ ಕೂಡಲ ಸಂಗಮದೇವಾ ಪ್ರಭುವೆ ॥

dēvara dēva malayajadiṃdaṃ mēle, malayaja uṃṭe? paruṣadiṃdaṃ mēle paruṣavāvuduṃṭu ayya? amr̥ta hāradiṃdaṃ mēle bhōjana uṃṭe ayya? nimmiṃdoṃdāścaryava kaṃḍeneṃbuda enage nirūpisā kūḍala saṃgamadēvā prabhuve ॥

Report an error

ಇಂತು ಬಸವರಾಜದೇವರು ನಿಮ್ಮಿಂದೊಂದಾಶ್ಚರ್ಯವಾವುದೆಂದು ಬಿನ್ನೈಸಲು ಅದಕ್ಕೆ ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥

iṃtu basavarājadēvaru nimmiṃdoṃdāścaryavāvudeṃdu binnaisalu adakke prabhudēvaru nirūpisida prasthāvada vacana. ॥

Report an error

ಎಲೆ ಬಸವಣ್ಣ, ನಾವು ಬಾಹುದಕ್ಕೆ ಮುನ್ನವೆ ಬಂದಿಹರೆಂದು ಶುಭ ಸೂಚನೆ ತೋರಿತ್ತಂದೆ. ಮನವ ಮೀರಿ ಮುಂದಿಹದೇನು ಎಂಬುದ ತಿಳಿ ಗುಹೇಶ್ವರ ಲಿಂಗದಲ್ಲಿ ಸಂಗನಬಸವಣ್ಣಾ.॥

ele basavaṇṇa, nāvu bāhudakke munnave baṃdihareṃdu śubha sūcane tōrittaṃde. manava mīri muṃdihadēnu eṃbuda tiḷi guhēśvara liṃgadalli saṃganabasavaṇṇā.॥

Report an error

ಮತ್ತಂ, ಮರುಳ ಶಂಕರದೇವರು ಘನ ಪ್ರಸಾದದ ಕುಳಿಯೊಳಗೆ ಒಕ್ಕು ಮಿಕ್ಕ ಪ್ರಸಾದಮಂ ಸ್ವೀಕರಿಸಿ ಹನ್ನೆರಡು ವರುಷ ಪರಿಯಂತರ ತಮ್ಮ ನಿಜಸ್ವರೂಪಮಂ ಮರಸಿಕೊಂಡಿರುತ್ತಿರಲು, ಆ ಭೇದವಾರಿಗೂ ಕಾಣಬಾರದೆಂದು ಪ್ರಭುದೇವರು ನಿರೂಪಿಸಿದ ಪ್ರಸ್ಥಾವದ ವಚನ. ॥

mattaṃ, maruḷa śaṃkaradēvaru ghana prasādada kuḷiyoḷage okku mikka prasādamaṃ svīkarisi hanneraḍu varuṣa pariyaṃtara tamma nijasvarūpamaṃ marasikoṃḍiruttiralu, ā bhēdavārigū kāṇabāradeṃdu prabhudēvaru nirūpisida prasthāvada vacana. ॥

Report an error

ಬೀದಿಯಲ್ಲಿ ಬಿದ್ದ ಮಾಣಿಕ್ಯವು ಹೂಳಿದ್ದ ನಿಧಾನವಾರಿಗು ಕಾಣಬಾರದು ನೋಡಾ! ಮರಣವುಳ್ಳವರಿಗೆ ಮರುಜೀವಣಿ ಸಿಕ್ಕುವದೆ? ಪಾಪಿಯ ಕಣ್ಣಿಂಗೆ ಪರುಷ ಕಲ್ಲಾಗಿ ಇಪ್ಪಂತೆ ಇಪ್ಪರಯ್ಯ ಶಿವಶರಣರು. ನಮ್ಮ ಗುಹೇಶ್ವರನ ಶರಣ ಮರುಳು ಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ. ॥

bīdiyalli bidda māṇikyavu hūḷidda nidhānavārigu kāṇabāradu nōḍā! maraṇavuḷḷavarige marujīvaṇi sikkuvade? pāpiya kaṇṇiṃge paruṣa kallāgi ippaṃte ipparayya śivaśaraṇaru. namma guhēśvarana śaraṇa maruḷu śaṃkaradēvara nilava nōḍā saṃganabasavaṇṇā. ॥

Report an error

ಮತ್ತಂ, ಅಂಗಳದ ಬಾಗಿಲದ ನೆರೆಯಲ್ಲಿ ನಿಂದಿರ್ದ ಲಿಂಗವನರಿದುದಿಲ್ಲವೆ? ಸುಸಂಗಿ ನಿರಂಗ ನಿಃಕಳಬ್ರಹ್ಮ ಮರುಳು ಶಂಕರಲಿಂಗ ಪ್ರಸಾದದ ಕುಳಿಯಲ್ಲಿ ನಿಜನಿವಾಸದಂಗವ ನೋಡು ಗುಹೇಶ್ವರಲಿಂಗದಲ್ಲಿ ಸಂಗನಬಸವಣ್ಣಾ. ॥

mattaṃ, aṃgaḷada bāgilada nereyalli niṃdirda liṃgavanaridudillave? susaṃgi niraṃga niḥkaḷabrahma maruḷu śaṃkaraliṃga prasādada kuḷiyalli nijanivāsadaṃgava nōḍu guhēśvaraliṃgadalli saṃganabasavaṇṇā. ॥

Report an error

ಮತ್ತಂ, ಆದಿಯನಂಗ ಮುಖಕರ್ಪಿಸಿ, ಅನಾದಿಯ ಪ್ರಾಣ ಮುಖಕರ್ಪಿಸಿ ಮರವೆಂಬುದ ಅರುಹಿನ ಮುಖಕರ್ಪಿಸಿ, ತಾನೆಂಬುದ ನಿರಾಕಾರದಲ್ಲಿ ನಿಲಿಸಿ, ಪರಿಣಾಮ ಪ್ರಸಾದದಲ್ಲಿ ತದ್ಗತನಾಗಿ ಪ್ರಸಾದವೆ ಪ್ರಾಣವಾಗಿ, ಪ್ರಸಾದವೆ ಕಾಯವಾಗಿ, ಪ್ರಸಾದವೆ ಜ್ಞಾನವಾಗಿ, ಪ್ರಸಾದವೇ ಧ್ಯಾನವಾಗಿ, ಪ್ರಸಾದವೆ ಲಿಂಗಭೋಗೋಪಭೋಗಿಯಾಗಿಪ್ಪ ನಮ್ಮ ಗುಹೇಶ್ವರಲಿಂಗದಲ್ಲಿ ನಿಜಪ್ರಸಾದಿ ಮರುಳು ಶಂಕರದೇವರ ನಿಲವ ನೋಡಾ ಸಂಗನಬಸವಣ್ಣಾ. ॥

mattaṃ, ādiyanaṃga mukhakarpisi, anādiya prāṇa mukhakarpisi maraveṃbuda aruhina mukhakarpisi, tāneṃbuda nirākāradalli nilisi, pariṇāma prasādadalli tadgatanāgi prasādave prāṇavāgi, prasādave kāyavāgi, prasādave jñānavāgi, prasādavē dhyānavāgi, prasādave liṃgabhōgōpabhōgiyāgippa namma guhēśvaraliṃgadalli nijaprasādi maruḷu śaṃkaradēvara nilava nōḍā saṃganabasavaṇṇā. ॥

Report an error

ಹೀಗೆಂದು ಪ್ರಭುದೇವರು ಬಸವರಾಜದೇವರಿಗೆ ನಿರೂಪಿಸುತ್ತಿರಲು, ಆ ಸಮಯದಲ್ಲಿ ಮರುಳು ಶಂಕರದೇವರು ಪ್ರಸಾದ ಕುಂಡದಿಂದ ನಲಿ ನಲಿದು ಬಂದು ಪ್ರಭುದೇವರಿಗೆ ನಮಸ್ಕಾರಮಂ ಮಾಡಿದ ಪ್ರಸ್ಥಾವದ ವಚನ ॥

hīgeṃdu prabhudēvaru basavarājadēvarige nirūpisuttiralu, ā samayadalli maruḷu śaṃkaradēvaru prasāda kuṃḍadiṃda nali nalidu baṃdu prabhudēvarige namaskāramaṃ māḍida prasthāvada vacana ॥

Report an error

ಜಯ ಜಯ ತ್ರಾಹಿ ತ್ರಾಹಿ ಗರ್ಭದೊಳಗಣ ಶಿಸುವು ನವ ಮಾಸವ ಹಾರೈಸಿ ಕೊಂಡಿರ್ದಂತೆ ಇದ್ದೆನಯ್ಯ ! ಎನ್ನ ಜನ್ಮ ಸಫಲವಾಯಿತ್ತು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೇ ಶಾಂತ ಮಲ್ಲಿಕಾರ್ಜುನ ದೇವಯ್ಯ ಬಸವರಾಜದೇವರ ದಯದಿಂದ ಪ್ರಭುದೇವರ ಶ್ರೀಮೂರ್ತಿಯಂ ಕಂಡು ಬದುಕಿದೆನು. ನಿಮ್ಮ ಧರ್ಮ ನಿಮ್ಮ ಧರ್ಮ ಶರಣುಶರಣಾರ್ಥಿ ಸಕಲ ಪುರಾತರಿಗೆ ॥

jaya jaya trāhi trāhi garbhadoḷagaṇa śisuvu nava māsava hāraisi koṃḍirdaṃte iddenayya ! enna janma saphalavāyittu. śuddha siddha prasiddha prasanna prabhuvē śāṃta mallikārjuna dēvayya basavarājadēvara dayadiṃda prabhudēvara śrīmūrtiyaṃ kaṃḍu badukidenu. nimma dharma nimma dharma śaraṇuśaraṇārthi sakala purātarige ॥

Report an error

ಮತ್ತಂ, ಎನಗೆ ಹರಿಯಿತ್ತು ತಮವೆಂಬ ಸಂಸಾರದ ಬಂಧ. ಅಡಗಿ ಉಡಿಗಿ ಕಂಡಿಹೆನೆಂಬ ಭ್ರಮೆಭಾವಕ್ಕೆ ಬಯಲಾಯಿತ್ತು. ನಿತ್ಯ ನಿರಂಜನ ಪರಂಜ್ಯೋತಿ ಪ್ರಕಾಶವಾಯಿತ್ತು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಮಲ್ಲಿಕಾರ್ಜುನ ದೇವಯ್ಯ, ಪ್ರಭುದೇವರ ಕಾರುಣ್ಯದಿಂದೆ ಬದುಕಿದೆನು. ॥

mattaṃ, enage hariyittu tamaveṃba saṃsārada baṃdha. aḍagi uḍigi kaṃḍiheneṃba bhramebhāvakke bayalāyittu. nitya niraṃjana paraṃjyōti prakāśavāyittu. śuddha siddha prasiddha prasanna prabhuve śāṃta mallikārjuna dēvayya, prabhudēvara kāruṇyadiṃde badukidenu. ॥

Report an error

ಇಂತು ಮರುಳ ಶಂಕರ ದೇವರು ಸ್ತುತಿಸುತ್ತಿರಲು ಅದಕ್ಕೆ ಪ್ರಭುದೇವರು ಮರುಳು ಶಂಕರದೇವರ ನಿಲವ ಬಸವರಾಜದೇವರಿಗೆ ನಿರೂಪಿಸಿದ ಪ್ರಸ್ಥಾವದ ವಚನ ॥

iṃtu maruḷa śaṃkara dēvaru stutisuttiralu adakke prabhudēvaru maruḷu śaṃkaradēvara nilava basavarājadēvarige nirūpisida prasthāvada vacana ॥

Report an error

ಕಂಡೆಯಾ ಬಸವಣ್ಣ ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ, ಗುಂದಣದೊಳಡಗಿ ತೋರುವ ಮೃದು ಛಾಯದಂತೆ, ನವನೀತದೊಳಡಗಿದ ಸಾರದ ಸವಿಯಂತೆ, ಅಂಗವಿಲ್ಲದ ಕುರುಹು ಭಾವವಿಲ್ಲದ ಬಯಲು, ಬೆಳಗನರಿಯದ ಜ್ಯೋತಿಯ ಕಂಡೆಯಾ ಗುಹೇಶ್ವರ ಲಿಂಗದಲ್ಲಿ ಮರುಳ ಶಂಕರದೇವರ ಸಂಗನಬಸವಣ್ಣಾ. ॥

kaṃḍeyā basavaṇṇa kaṇṇinoḷagaṇa boṃbeya sūtrada iravinaṃte, guṃdaṇadoḷaḍagi tōruva mr̥du chāyadaṃte, navanītadoḷaḍagida sārada saviyaṃte, aṃgavillada kuruhu bhāvavillada bayalu, beḷaganariyada jyōtiya kaṃḍeyā guhēśvara liṃgadalli maruḷa śaṃkaradēvara saṃganabasavaṇṇā. ॥

Report an error

ಹೀಗೆಂದು ಪ್ರಭುದೇವರು ಬಸವರಾಜದೇವರಿಗೆ ಕೊಂಡಾಡಿ ಹೇಳುತ್ತಿರಲು, ಆ ಮರುಳು ಶಂಕರದೇವರು ನಿರಹಂಭಾವದಿಂ ಬಿನ್ನೈಸಿದ ಪ್ರಸ್ಥಾವದ ವಚನ. ॥

hīgeṃdu prabhudēvaru basavarājadēvarige koṃḍāḍi hēḷuttiralu, ā maruḷu śaṃkaradēvaru nirahaṃbhāvadiṃ binnaisida prasthāvada vacana. ॥

Report an error

ಸಿಂಬೆಗೆ ರಂಬೆತನ ಉಂಟೆ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ? ಡಿಂಗರಿಗಂಗೆ ಸಮವೆಂಬ ಸಂಭ್ರಮ ಉಂಟೆ ? ಪರುಷದ ದೆಸೆಯಿಂ ಪಾಷಾಣದ ಕುಲ ಹರಿವಂತೆ ಬಂದೆಯಲ್ಲಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಭುವೆ ಶಾಂತಮಲ್ಲಿಕಾರ್ಜುನ ದೇವಯ್ಯ ಪ್ರಭುದೇವರ ಕಾರುಣ್ಯದಿಂದೆ ಬದುಕಿದೆನು. ॥

siṃbege raṃbetana uṃṭe? saṃbhramavaḷidudakke navarasadaṃgada kaḷeyuṃṭe? ḍiṃgarigaṃge samaveṃba saṃbhrama uṃṭe ? paruṣada deseyiṃ pāṣāṇada kula harivaṃte baṃdeyalli śuddha siddha prasiddha prabhuve śāṃtamallikārjuna dēvayya prabhudēvara kāruṇyadiṃde badukidenu. ॥

Report an error

ಇಂತು ಮರುಳು ಶಂಕರದೇವರು ನಿರಹಂಭಾವದಿಂದೆ ಬಿನ್ನೈಸಲು ಅದಕ್ಕೆ ಪ್ರಭುದೇವರು ಮರುಳ ಶಂಕರದೇವರ ಸ್ತುತಿಸಿದ ಪ್ರಸ್ಥಾವದ ವಚನ. ॥

iṃtu maruḷu śaṃkaradēvaru nirahaṃbhāvadiṃde binnaisalu adakke prabhudēvaru maruḷa śaṃkaradēvara stutisida prasthāvada vacana. ॥

Report an error

ಕಂಡೆನಲ್ಲ ಕರುಳಿಲ್ಲದ ಕಲಿಯಾ ಕಂಡೆನಲ್ಲ ಯವ್ವನವಿಲ್ಲದ ದೇಹವ. ಕಂಡೆನಲ್ಲ ಕೈದುವಿಲ್ಲದ ಕಲಿತನವ. ಕಂಡೆನಲ್ಲ ಕುಸುಮವಿಲ್ಲದ ಗಂಧವ. ಕಂಡೆನಲ್ಲ ಗುಹೇಶ್ವರನ ಲಿಂಗದಲ್ಲಿ ಮರುಳು ಶಂಕರದೇವರೆಂಬ ನಾಮವಾ. ॥

kaṃḍenalla karuḷillada kaliyā kaṃḍenalla yavvanavillada dēhava. kaṃḍenalla kaiduvillada kalitanava. kaṃḍenalla kusumavillada gaṃdhava. kaṃḍenalla guhēśvarana liṃgadalli maruḷu śaṃkaradēvareṃba nāmavā. ॥

Report an error

ಹೀಗೆಂದು ಪ್ರಭುದೇವರು ಸ್ತುತಿಸುತ್ತಿರಲು, ಅದಕ್ಕೆ ಮರುಳು ಶಂಕರದೇವರ ಬಿನ್ನಹ,

hīgeṃdu prabhudēvaru stutisuttiralu, adakke maruḷu śaṃkaradēvara binnaha,

Report an error

ಬೆಟ್ಟವ ನೆಮ್ಮಿ ಕಟ್ಟಿಗೆಯ ತಳ್ಳುವದು ಅದಾವಚ್ಚರಿ? ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವದು ಅದಾವಚ್ಚರಿ? ಪರಕಾಯವ ತೊಟ್ಟಿದ್ದಲ್ಲಿ ಅದು ಅಚ್ಚರಿ. ಆದಿ ಬಿರಿದ ನಿಮ್ಮ ಕಾರುಣ್ಯವಾಗಿದ್ದಲ್ಲಿ ಎನಗೆಲ್ಲಿಯು ಸುಖ? ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನ ದೇವಯ್ಯ ಪ್ರಭುದೇವರ ದಯದಿಂದೆ ಬದುಕಿದೆನು. ॥

beṭṭava nemmi kaṭṭigeya taḷḷuvadu adāvaccari? prāṇakke hoṇeyādalli kāduvadu adāvaccari? parakāyava toṭṭiddalli adu accari. ādi birida nimma kāruṇyavāgiddalli enagelliyu sukha? śuddhasiddha prasiddha prasanna prabhuve śāṃta cannamallikārjuna dēvayya prabhudēvara dayadiṃde badukidenu. ॥

Report an error

ಇಂತು ಮರುಳು ಶಂಕರದೇವರು ಪ್ರಭುದೇವರ ಸ್ತುತಿಸುತ್ತಿರಲು, ಆ ಸಮಯದೊಳು ಎಲ್ಲ ಪುರಾತರು ಕಂಡು, ಅತ್ಯಂತ ಆಶ್ಚರ್ಯಮಂ ಬಡುತ್ತಿರಲು, ಅಲ್ಲಿ ಬಸವರಾಜದೇವರು ಮರುಳು ಶಂಕರದೇವರ ನಿಲವ ಕಂಡು, ಚಿಂತಾಕ್ರಾಂತರಾಗಿ ನಡನಡುಗಿ ಇನಿತು ದಿನವೆನ್ನ ಅಂಗಳದಲ್ಲಿ ಮಹಾಲಿಂಗೈಕ್ಯನಪ್ಪ ಶರಣನಿರುತ್ತಿರಲು, ಈತನ ನಿಲವನರಿಯದೆ ಕೆಟ್ಟೆನೆಂದು ಅನುತಾಪಂ ಬಟ್ಟ ಪ್ರಸ್ಥಾವದ ವಚನ ॥

iṃtu maruḷu śaṃkaradēvaru prabhudēvara stutisuttiralu, ā samayadoḷu ella purātaru kaṃḍu, atyaṃta āścaryamaṃ baḍuttiralu, alli basavarājadēvaru maruḷu śaṃkaradēvara nilava kaṃḍu, ciṃtākrāṃtarāgi naḍanaḍugi initu dinavenna aṃgaḷadalli mahāliṃgaikyanappa śaraṇaniruttiralu, ītana nilavanariyade keṭṭeneṃdu anutāpaṃ baṭṭa prasthāvada vacana ॥

Report an error

ಅಯ್ಯ ನಿನ್ನ ಶರಣರು ಬಂದೆನ್ನ ಅಂಗಳದೊಳಗೆ ರಕ್ಷಿಸಿಹೆನೆಂದಿರಲು, ನಾನು ತೆರಹು ಮರಹಾಗಿರ್ದು ಕೆಟ್ಟೆನಯ್ಯ! ನಾನು ಕೆಟ್ಟ ಕೇಡಿಂಗೆ ಕಡೆ ಇಲ್ಲವಯ್ಯ, ಕೂಡಲ ಸಂಗಮದೇವ, ಎನ್ನ ಭಕ್ತಿ ಸಾವಿರ ನೋಂಪಿಯ ನೋಂತು ಹಾದರದಲ್ಲಿ ಅಳಿದಂತಾಯಿತ್ತಯ್ಯ. ॥

ayya ninna śaraṇaru baṃdenna aṃgaḷadoḷage rakṣisiheneṃdiralu, nānu terahu marahāgirdu keṭṭenayya! nānu keṭṭa kēḍiṃge kaḍe illavayya, kūḍala saṃgamadēva, enna bhakti sāvira nōṃpiya nōṃtu hādaradalli aḷidaṃtāyittayya. ॥

Report an error

ಮತ್ತಂ, ಕಾಯದ ಕಪಟವು ಬಿಡದೆನಗೆಂತಯ್ಯ, ಮಾಯಾ ಪ್ರಪಂಚಿನ ಬಲೆಯೊಳಗೆ ಸಿಲುಕಿದೆ. ವಾಯದ ಸಂಭ್ರಮವ ಹಿಡಿದವಗೆ ಇದಾವ ಭಾವದ ಮುಖವೆಂದರಿಯದೆ ಜ್ಞಾನಶೂನ್ಯನಾಗಿರ್ದೆನಯ್ಯ. ಅಷ್ಟಮದಂಗಳನು ಸೃಷ್ಟಿಸಿ ಇದ್ದಿರಾಗಿ, ಕಟ್ಟುಗ್ರದಿಂದೆ ನಿಮ್ಮ ಕಾಣಲೀಯವು. ಎನ್ನ ತನುವಿನ ಅವಗುಣವು ಮನದ ಮರ್ಕಟತನವು ಬಿಡದು. ನೀನೆ ಗತಿ. ಕೂಡಲಸಂಗಮದೇವ ನಿಮ್ಮ ಶರಣರ ಇರವನರಿಯದೆ, ಭವದುಃಖಯಾದೆನಯ್ಯ ॥

mattaṃ, kāyada kapaṭavu biḍadenageṃtayya, māyā prapaṃcina baleyoḷage silukide. vāyada saṃbhramava hiḍidavage idāva bhāvada mukhaveṃdariyade jñānaśūnyanāgirdenayya. aṣṭamadaṃgaḷanu sr̥ṣṭisi iddirāgi, kaṭṭugradiṃde nimma kāṇalīyavu. enna tanuvina avaguṇavu manada markaṭatanavu biḍadu. nīne gati. kūḍalasaṃgamadēva nimma śaraṇara iravanariyade, bhavaduḥkhayādenayya ॥

Report an error

ಮತ್ತಂ, ಬಸವರಾಜದೇವರು ಈ ಮರುಳು ಶಂಕರದೇವರ ಕೃಪೆ ಎನಗಿನ್ನೆಂತಪ್ಪುದೊ ಎಂದು ಪ್ರಭುದೇವರ ಬೆಸಗೊಂಬ ಪ್ರಸ್ಥಾವದ ವಚನ ॥

mattaṃ, basavarājadēvaru ī maruḷu śaṃkaradēvara kr̥pe enaginneṃtappudo eṃdu prabhudēvara besagoṃba prasthāvada vacana ॥

Report an error

ನಡುತೊರೆಯೊಳಗೆ ಹರುಗೋಲನಿಳಿದಂತಾಯಿತ್ತೆನ್ನ ಭಕ್ತಿ. ಮರನೇರಿ ಕೈಯ್ಯ ಬಿಟ್ಟಂತಾಯಿತ್ತೆನ್ನ ಭಕ್ತಿ. ಶಿವಶಿವ ಕೆಟ್ಟೆನಲ್ಲ ಗುರುವೆ. ಕೂಡಲ ಸಂಗಮದೇವ ಈ ಮರುಳಶಂಕರದೇವರ ಕೃಪೆ ಎನಗಿನ್ನೆಂತಪ್ಪುದು ಹೇಳಾ ಪ್ರಭುವೆ? ॥

naḍutoreyoḷage harugōlaniḷidaṃtāyittenna bhakti. maranēri kaiyya biṭṭaṃtāyittenna bhakti. śivaśiva keṭṭenalla guruve. kūḍala saṃgamadēva ī maruḷaśaṃkaradēvara kr̥pe enaginneṃtappudu hēḷā prabhuve? ॥

Report an error

ಹೀಗೆಂದು ಬಸವರಾಜದೇವರು ಬಿನ್ನೈಸಲು, ಅದಕ್ಕೆ ಪ್ರಭುದೇವರು ಕೊಟ್ಟ ಪ್ರತ್ಯುತ್ತರ ॥

hīgeṃdu basavarājadēvaru binnaisalu, adakke prabhudēvaru koṭṭa pratyuttara ॥

Report an error

ಹೂಮಿಡಿಯ ಹರಿದು, ಒತ್ತಿ ಹಣ್ಣ ಮಾಡಿಹೆನೆಂದರೆ ಹಣ್ಣಾಗಬಲ್ಲುದೆ? ಪರಿಮಳವಿಲ್ಲದ ನನೆಯನರಳಿಸಿ ಮುಡಿದಿಹೆನೆಂದರೆ ಸೌರಭ ಉಂಟೆ? ಶಿವಶರಣರ ನಿಲವ ಕಾಂಬ ಕಾಲಕ್ಕೆ ಕಾಣಬಹುದಲ್ಲದೆ, ಎಲ್ಲ ಹೊತ್ತು ಕಾಣಬಹುದೆ? ಆಹ ಕಾಲಕ್ಕೆ ತಾನೆಯಪ್ಪುದು. ಗುಹೇಶ್ವರನ ಶರಣರ ನಿಲವ ಕಂಡ ಬಳಿಕ ಮರಹು ಬೆಳಗ ಕಂಡ ಕತ್ತಲೆಯಂತೆ ನೋಡ ನೋಡಾ ಹರಿವುದು ನೋಡಾ ಸಂಗನಬಸವಣ್ಣಾ ॥

hūmiḍiya haridu, otti haṇṇa māḍiheneṃdare haṇṇāgaballude? parimaḷavillada naneyanaraḷisi muḍidiheneṃdare saurabha uṃṭe? śivaśaraṇara nilava kāṃba kālakke kāṇabahudallade, ella hottu kāṇabahude? āha kālakke tāneyappudu. guhēśvarana śaraṇara nilava kaṃḍa baḷika marahu beḷaga kaṃḍa kattaleyaṃte nōḍa nōḍā harivudu nōḍā saṃganabasavaṇṇā ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಬಸವರಾಜದೇವರು ಮರುಳ ಶಂಕರದೇವರ ಶ್ರೀಪಾದಕ್ಕೆ ಶರಣೆಂಬ ಪ್ರಸ್ಥಾವದ ವಚನ ॥

hīgeṃdu prabhudēvaru nirūpisalu, adakke basavarājadēvaru maruḷa śaṃkaradēvara śrīpādakke śaraṇeṃba prasthāvada vacana ॥

Report an error

ಮುಗಿಲ ಮರೆಯ ಮಿಂಚಿನಂತೆ, ಒಡಲ ಮರೆಯ ಆತ್ಮನಂತೆ, ನೆಲದ ಮರೆಯ ನಿಧಾನದಂತೆ ಇಪ್ಪ ನಿಮ್ಮ ನಿಲವನಾರು ಬಲ್ಲರು? ದೇವ ನಿಮ್ಮ ನಿಲವ ಹಲಕಾಲದಿಂದ ಕಂಡು ಕಂಡು ಕಡೆಗಾಣಿಸಿ ಮರೆದು ಮತಿಗೆಟ್ಟು ಮರುಳಾದೆನು. ಎನ್ನ ತಪ್ಪಿಂಗೆ ಕಡೆ ಇಲ್ಲ ಕಾಣಾ ತ್ರಾಹಿ ತ್ರಾಹಿ ಕಾಯಯ್ಯ ಕೂಡಲಸಂಗಮದೇವಾ ॥

mugila mareya miṃcinaṃte, oḍala mareya ātmanaṃte, nelada mareya nidhānadaṃte ippa nimma nilavanāru ballaru? dēva nimma nilava halakāladiṃda kaṃḍu kaṃḍu kaḍegāṇisi maredu matigeṭṭu maruḷādenu. enna tappiṃge kaḍe illa kāṇā trāhi trāhi kāyayya kūḍalasaṃgamadēvā ॥

Report an error

ನಿಮ್ಮ ಶರಣರ ಇರವನರಿಯೆನೆಂದು ಬಸವರಾಜದೇವರು ನೊಂದು ಪ್ರಭುದೇವರಿಗೆ ಬಿನ್ನೈಸುತ್ತಿರಲು, ಅಲ್ಲಿ ಮರುಳುಶಂಕರದೇವರು ಬಸವರಾಜದೇವರ ಕೊಂಡಾಡಿದ ಪ್ರಸ್ಥಾವದ ವಚನ ॥

nimma śaraṇara iravanariyeneṃdu basavarājadēvaru noṃdu prabhudēvarige binnaisuttiralu, alli maruḷuśaṃkaradēvaru basavarājadēvara koṃḍāḍida prasthāvada vacana ॥

Report an error

ಏಕ ಬೀಜಸಮಾವೃಕ್ಷಂ, ಏಕ ಲಿಂಗಂ ತು ಪೂಜನಂ ॥ ಏಕ ಧ್ಯಾನ ಸಮಾಚಿತ್ತಂ ಊರ್ಧ್ವಲಿಂಗಂ ತು ಪೂಜನಂ | ಏಕಾಕ್ಷರಂ ತು ಪೂಜಾನಾಂ | ಮಹಾಲಿಂಗಂತು ದರ್ಶನಂ | ಇಂತೆಂದುದಾಗಿ ಇದು ಕಾರಣ ನಿಮ್ಮ ಶರಣ ಬಸವಣ್ಣನು ಲೋಕದ ಮರ್ತ್ಯನೆಂದರೆ ಅಘೋರ ನರಕ ಕಾಣಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಮಲ್ಲಿಕಾರ್ಜುನದೇವಯ್ಯ ನಿಮ್ಮ ಶರಣ ಬಸವಣ್ಣನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತಬಲ್ಲೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ. ॥

ēka bījasamāvr̥kṣaṃ, ēka liṃgaṃ tu pūjanaṃ ॥ ēka dhyāna samācittaṃ ūrdhvaliṃgaṃ tu pūjanaṃ | ēkākṣaraṃ tu pūjānāṃ | mahāliṃgaṃtu darśanaṃ | iṃteṃdudāgi idu kāraṇa nimma śaraṇa basavaṇṇanu lōkada martyaneṃdare aghōra naraka kāṇā. śuddha siddha prasiddha prasanna prabhuve śāṃtamallikārjunadēvayya nimma śaraṇa basavaṇṇana nilavina pariya nīve ballirallade nānettaballenayya nimma dharma nimma dharma. ॥

Report an error

ಇಂತು ಮರುಳುಶಂಕರದೇವರು ಬಸಮಾಜದೇವರ ಕೊಂಡಾಡುತ್ತಿರಲು, ಆ ಬಸವರಾಜದೇವರು ಮರುಳುಶಂಕರದೇವರ ಘನವನು ಚನ್ನಬಸವರಾಜದೇವರಿಗೆ ನುಡಿದು ತೋರುವ ಹಾಗೆ ಕೊಂಡಾಡುತ್ತಿರ್ದ ಪ್ರಸ್ಥಾವದ ವಚನ ॥

iṃtu maruḷuśaṃkaradēvaru basamājadēvara koṃḍāḍuttiralu, ā basavarājadēvaru maruḷuśaṃkaradēvara ghanavanu cannabasavarājadēvarige nuḍidu tōruva hāge koṃḍāḍuttirda prasthāvada vacana ॥

Report an error

ಕಂಗಳೊಳಗೆ ಕರುಳಿಲ್ಲ. ಕಾಯದೊಳಗೆ ಮಾಯವಿಲ್ಲ. ಮನದೊಳಗೆ ಅಹಂಕಾರವಿಲ್ಲ. ದೇಹವೆಂದರಿಯೆ. ನಿರ್ದೇಹವೆಂದರಿಯೆ ಜಂತ್ರದ ಸೂತ್ರದಂತಿಪ್ಪ ನಿಬ್ಬೆರಗಿನ ಮೂರ್ತಿಯ ನೋಡಾ. ಲಿಂಗಜಂಗಮದ ಒಕ್ಕು ಮಿಕ್ಕಪ್ರಸಾದವ ಕೊಂಡು ಮಿಕ್ಕು ಮೀರಿನಿಂದ ಮಹಾಪ್ರಸಾದಿಯ ನೋಡಾ! ತನ್ನ ಕಂಡಹರೆಂದು ಜಗದ ಕಣ್ಣಿಂಗೆ ಮಾಯದ ಮಂಜ ಕವಿಸಿ ನಿಜಪದದಲ್ಲಿ ತದುಗತನಾದನು. ಕೂಡಲಸಂಗಮದೇವರಲ್ಲಿ ಮರುಳು ಶಂಕರ ದೇವರ ನಿಲವ ನೋಡಾ ಸಂಗನಬಸವಣ್ಣಾ ॥

kaṃgaḷoḷage karuḷilla. kāyadoḷage māyavilla. manadoḷage ahaṃkāravilla. dēhaveṃdariye. nirdēhaveṃdariye jaṃtrada sūtradaṃtippa nibberagina mūrtiya nōḍā. liṃgajaṃgamada okku mikkaprasādava koṃḍu mikku mīriniṃda mahāprasādiya nōḍā! tanna kaṃḍahareṃdu jagada kaṇṇiṃge māyada maṃja kavisi nijapadadalli tadugatanādanu. kūḍalasaṃgamadēvaralli maruḷu śaṃkara dēvara nilava nōḍā saṃganabasavaṇṇā ॥

Report an error

ಹೀಗೆಂದು ಬಸವರಾಜದೇವರು ನಿರೂಪಿಸಲು, ಆ ಚನ್ನಬಸವರಾಜ ದೇವರು ಮರುಳುಶಂಕರದೇವರ ನಿಲವ ನಿಮ್ಮಿಂದ ಕಂಡೆನೆಂದು, ಬಸವರಾಜ ದೇವರಿಗೆ ಬಿನ್ನೈಸಿದ ಪ್ರಸ್ಥಾವದ ವಚನ ॥

hīgeṃdu basavarājadēvaru nirūpisalu, ā cannabasavarāja dēvaru maruḷuśaṃkaradēvara nilava nimmiṃda kaṃḍeneṃdu, basavarāja dēvarige binnaisida prasthāvada vacana ॥

Report an error

ಅಂಗವನಾಚಾರಕರ್ಪಿಸಿ, ಆಚಾರವನಂಗಕರ್ಪಿಸಿ, ಆಚಾರ ಲಿಂಗ ಪ್ರಸಾದಿಯಾದ. ಪ್ರಾಣಲಿಂಗನ ಅಂಗದಲ್ಲಿ ಆರ್ಪಿಸಿ ಆ ಲಿಂಗವ ಪ್ರಾಣಕ್ಕೆ ಅರ್ಪಿಸಿ ಪ್ರಾಣಲಿಂಗ ಪ್ರಸಾದಿಯಾದ. ದೇಹಭಾವದ ಅಹಂಕಾರ ದಾಸೋಹ ಭಾವದೊಳಗಲ್ಲದೆ ಅಳಿಯದೆಂದು ಲಿಂಗಜಂಗಮಕ್ಕೆ ತೊತ್ತು ಒಟ್ಟು ಲಿಂಗ ಜಂಗಮ ಪ್ರಸಾದಿಯಾದ ಸತ್ಯ ಶರಣರ ಅಂಗಳದೊಳಗೆ ಬಿದ್ದ ಅಗುಳನೆತ್ತಿಕೊಂಡಿಪ್ಪೆನೆಂದು ನಿಮ್ಮ ಪ್ರಸಾದವ ಕುಳಿಯೊಳಗೆ ಹನ್ನೆರಡು ವರುಷ ಪರಿಯಂತರ ಪ್ರಸಾದಿಯಾಗಿರ್ದ ಕೂಡಲಸಂಗಮದೇವರಲ್ಲಿ ಮರುಳುಶಂಕರ ದೇವರ ಶ್ರೀಪಾದದ ಘನವನು ನಿಮ್ಮಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ. ॥

aṃgavanācārakarpisi, ācāravanaṃgakarpisi, ācāra liṃga prasādiyāda. prāṇaliṃgana aṃgadalli ārpisi ā liṃgava prāṇakke arpisi prāṇaliṃga prasādiyāda. dēhabhāvada ahaṃkāra dāsōha bhāvadoḷagallade aḷiyadeṃdu liṃgajaṃgamakke tottu oṭṭu liṃga jaṃgama prasādiyāda satya śaraṇara aṃgaḷadoḷage bidda aguḷanettikoṃḍippeneṃdu nimma prasādava kuḷiyoḷage hanneraḍu varuṣa pariyaṃtara prasādiyāgirda kūḍalasaṃgamadēvaralli maruḷuśaṃkara dēvara śrīpādada ghanavanu nimmiṃda kaṃḍu badukidenu kāṇā saṃganabasavaṇṇā. ॥

Report an error

ಮರುಳಶಂಕರದೇವರ ಘನವ ನಿಮ್ಮಿಂದ ಕಂಡು ಬದುಕಿದನೆಂದು, ಚನ್ನಬಸವರಾಜದೇವರು ಬಸವರಾಜದೇವರ ಕೂಡ ಬಿನ್ನಹಂ ಮಾಡುತ್ತಿರಲು, ಮತ್ತಂ ಮರುಳಶಂಕರದೇವರು ಚನ್ನಬಸವರಾಜದೇವರ ಸ್ತುತಿಯನೊಳಕೊಂಡು ನಿರೂಪಿಸಿದ ಪ್ರಸ್ಥಾವದ ವಚನ. ॥

maruḷaśaṃkaradēvara ghanava nimmiṃda kaṃḍu badukidaneṃdu, cannabasavarājadēvaru basavarājadēvara kūḍa binnahaṃ māḍuttiralu, mattaṃ maruḷaśaṃkaradēvaru cannabasavarājadēvara stutiyanoḷakoṃḍu nirūpisida prasthāvada vacana. ॥

Report an error

ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣೈಕ್ಯ ಇಂತು ಷಡುಸ್ಥಲ ಚಕ್ರವರ್ತಿಯಯ್ಯ ಚನ್ನಬಸವಣ್ಣನು. ಷೋಡಶಾಧಾರಂ ಸರ್ವಭೇದಂ, ಸರ್ವಾಚಾರಂ ತು ಲಿಂಗಯೊ ॥ ಷಡೂರ್ಮಿತ್ರಿವಿಧಂ ಏಕಂ ತಸ್ಮಾತ್ ಲಿಂಗಪ್ರಯೋಜನಂ ॥ ಇಂತೆಂದುದಾಗಿ, ಇಂತಪ್ಪ ಲಿಂಗಾಂಗಿಯಯ್ಯ ಚನ್ನಬಸವಣ್ಣನು. ಆಚಾರವೆ ಕಾಯ, ಆಚಾರವೆ ಪ್ರಾಣ, ಆಚಾರವೆ ಲಿಂಗ, ಆಚಾರವೆ ಸಂಗ, ಇಂತಪ್ಪ ಆಚಾರಸನ್ನಿಹಿತನಯ್ಯ ನಮ್ಮ ಚನ್ನಬಸವಣ್ಣನು. ಶುದ್ಧ, ಸಿದ್ಧ, ಪ್ರಸಿದ್ಧ, ಪ್ರಸನ್ನ, ಪ್ರಭುವೆ ಶಾಂತ ಮಲ್ಲಿಕಾರ್ಜುನ ದೇವಯ್ಯ, ನಿಮ್ಮ ಚನ್ನಬಸವಣ್ಣನು ಸರ್ವಾಚಾರಸಂಪನ್ನನು. ಇಂತಪ್ಪ ಚನ್ನಬಸವಣ್ಣನ ನಿಲವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ ನಿಮ್ಮ ಧರ್ಮ, ನಿಮ್ಮ ಧರ್ಮ. ॥

bhakta, mahēśvara, prasādi, prāṇaliṃgi, śaraṇaikya iṃtu ṣaḍusthala cakravartiyayya cannabasavaṇṇanu. ṣōḍaśādhāraṃ sarvabhēdaṃ, sarvācāraṃ tu liṃgayo ॥ ṣaḍūrmitrividhaṃ ēkaṃ tasmāt liṃgaprayōjanaṃ ॥ iṃteṃdudāgi, iṃtappa liṃgāṃgiyayya cannabasavaṇṇanu. ācārave kāya, ācārave prāṇa, ācārave liṃga, ācārave saṃga, iṃtappa ācārasannihitanayya namma cannabasavaṇṇanu. śuddha, siddha, prasiddha, prasanna, prabhuve śāṃta mallikārjuna dēvayya, nimma cannabasavaṇṇanu sarvācārasaṃpannanu. iṃtappa cannabasavaṇṇana nilava nīve ballirallade nānetta ballenayya nimma dharma, nimma dharma. ॥

Report an error

ಮತ್ತಂ, ಮರುಳುಶಂಕರದೇವರ ನಿಲವ ಚನ್ನಬಸವರಾಜ ದೇವರು ಪ್ರಭುದೇವರಿಗೆ ಬಿನ್ನೈಸಿದ ವಚನ ॥

mattaṃ, maruḷuśaṃkaradēvara nilava cannabasavarāja dēvaru prabhudēvarige binnaisida vacana ॥

Report an error

ತುದಿಮೊದಲಿಲ್ಲದ ಘನವ ನೋಡಾ. ಒಳಹೊರಗಿಲ್ಲದ ಅನುವ ನೋಡಾ. ಗುರುಲಿಂಗಜಂಗಮ ತಾನೆಯಾಗಿ, ಮತ್ತೆ ತಾನೆಂಬುದೇನು ಇಲ್ಲದೆ ಇಪ್ಪ ಪರಿಯ ನೋಡಾ! ತನ್ನ ತಾ ನಿರ್ದೇಶವ ಮಾಡಿಕೊಂಡು ನಿಜಪದವನೈದಿಪ್ಪ ಪರಿಯ ನೋಡಾ ! ಕೂಡಲಸಂಗಮದೇವರಲ್ಲಿ ಪರಮ ಪ್ರಸಾದಿಯಾಗಿಪ್ಪ ಮರುಳಶಂಕರದೇವರ ನಿಲವ ನೋಡಾ ಪ್ರಭುವೆ. ॥

tudimodalillada ghanava nōḍā. oḷahoragillada anuva nōḍā. guruliṃgajaṃgama tāneyāgi, matte tāneṃbudēnu illade ippa pariya nōḍā! tanna tā nirdēśava māḍikoṃḍu nijapadavanaidippa pariya nōḍā ! kūḍalasaṃgamadēvaralli parama prasādiyāgippa maruḷaśaṃkaradēvara nilava nōḍā prabhuve. ॥

Report an error

ಇದಕ್ಕೆ ಪ್ರಭುದೇವರು ಪರಮ ಪ್ರಸಾದಿಯಾಗಿಪ್ಪ ಮರುಳುಶಂಕರದೇವರ ನಿಲವ ಬಸವರಾಜದೇವರಿಂದೆ ಕಂಡೆನೆಂದು ಸಿದ್ಧರಾಮಯ್ಯ ದೇವರೊಡನೆ ನಿರೂಪಿಸಿದ ಪ್ರಸ್ಥಾವದ ವಚನ. ॥

idakke prabhudēvaru parama prasādiyāgippa maruḷuśaṃkaradēvara nilava basavarājadēvariṃde kaṃḍeneṃdu siddharāmayya dēvaroḍane nirūpisida prasthāvada vacana. ॥

Report an error

ಅಂಗವಿಡಿದಂಗಿ ಎಂಬೆನೆ? ಆರನೊಳಕೊಂಡನುಪಮನ ನೋಡಾ? ಮೂರರ ಹೊಲಿಗೆಯ ಬಿಚ್ಚಿ ಎಂಟಾತ್ಮ ಹರಿಗಳ ತನ್ನಿಚ್ಚೆಯೊಳ್ನಿಲಿಸಿದ ನಿಜಸುಖಿಯ ನೋಡಾ! ತತ್ವ ಮೂವತ್ತಾರ ಮೀರಿ ಅತ್ತತ್ತಲೆ ತೋರ್ಪ ಅಗಮ್ಯನ ನೋಡಾ! ನಮ್ಮ ಗುಹೇಶ್ವರನ ಶರಣ ಅಲ್ಲಯ್ಯನ ಇರವನೊಳಕೊಂಡ ಪರಮ ಪ್ರಸಾದಿ ಮರುಳುಶಂಕರದೇವರ ನಿಲವ ಬಸವಣ್ಣನಿಂದೆ ಕಂಡೆ ನೋಡಾ ಸಿದ್ಧರಾಮಯ್ಯ, ॥

aṃgaviḍidaṃgi eṃbene? āranoḷakoṃḍanupamana nōḍā? mūrara holigeya bicci eṃṭātma harigaḷa tannicceyoḷnilisida nijasukhiya nōḍā! tatva mūvattāra mīri attattale tōrpa agamyana nōḍā! namma guhēśvarana śaraṇa allayyana iravanoḷakoṃḍa parama prasādi maruḷuśaṃkaradēvara nilava basavaṇṇaniṃde kaṃḍe nōḍā siddharāmayya, ॥

Report an error

ಹೀಗೆಂದು ಸಿದ್ಧರಾಮಯ್ಯದೇವರೊಡನೆ ಪ್ರಭುದೇವರು ನಿರೂಪಿಸುತ್ತಿರಲು, ಅದಕ್ಕೆ ಬಸವರಾಜದೇವರು ಸಿದ್ಧರಾಮಯ್ಯದೇವರಿಂದೆ ಪ್ರಭುದೇವರ ಕಂಡೆ. ಪ್ರಭುದೇವರಿಂದ ಮರುಳುಶಂಕರದೇವರ ಕಂಡೆನೆಂದು ಕೊಂಡಾಡುವ ಪ್ರಸ್ಥಾವದ ವಚನ.॥

hīgeṃdu siddharāmayyadēvaroḍane prabhudēvaru nirūpisuttiralu, adakke basavarājadēvaru siddharāmayyadēvariṃde prabhudēvara kaṃḍe. prabhudēvariṃda maruḷuśaṃkaradēvara kaṃḍeneṃdu koṃḍāḍuva prasthāvada vacana.॥

Report an error

ಸತ್ಯಮುಕ್ತಿಯ ಕಳೆಯ ನೋಡಾ. ನಿತ್ಯ ತತ್ವದ ಇರವನೋಡಾ! ಮೂರೊಂದಾದ ಆರೂಢನ ನೋಡಾ. ಕೂಡಲ ಸಂಗಮದೇವರಲ್ಲಿ ತದ್ಗತವಾಗಿಪ್ಪ ಮರುಳುಶಂಕರದೇವರ ನಿಲವ ಪ್ರಭು ಸಿದ್ಧರಾಮಯ್ಯ ದೇವರಿಂದ ಕಂಡು ಬದುಕಿದೆನು ಬದುಕಿದೆನು. ॥

satyamuktiya kaḷeya nōḍā. nitya tatvada iravanōḍā! mūroṃdāda ārūḍhana nōḍā. kūḍala saṃgamadēvaralli tadgatavāgippa maruḷuśaṃkaradēvara nilava prabhu siddharāmayya dēvariṃda kaṃḍu badukidenu badukidenu. ॥

Report an error

ಇಂತು ಬಸವರಾಜದೇವರು, ಮರುಳುಶಂಕರದೇವರ ನಿಲವ ಪ್ರಭು ಸಿದ್ಧರಾಮಯ್ಯ ದೇವರಿಂದೆ ಕಂಡು ಬದುಕಿದೆನೆಂದು ಸ್ತುತಿಸುತ್ತಿರಲು, ಇದಕ್ಕೆ ಸಿದ್ಧರಾಮಯ್ಯದೇವರು ಮರುಳುಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡೆನೆಂದು, ಸ್ತುತಿಸಿದ ವಚನ. ॥

iṃtu basavarājadēvaru, maruḷuśaṃkaradēvara nilava prabhu siddharāmayya dēvariṃde kaṃḍu badukideneṃdu stutisuttiralu, idakke siddharāmayyadēvaru maruḷuśaṃkaradēvara nilava prabhu basavaṇṇaniṃda kaṃḍeneṃdu, stutisida vacana. ॥

Report an error

ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ. ಅಂಗವಿದ್ದು ಅಂಗವಿಲ್ಲ. ಸಂಗ ಘನಪದದಲ್ಲಿ ವೇದ್ಯವಾದ ಮರುಳುಶಂಕರದೇವರ ನಿಲವ ಪ್ರಭು ಬಸವಣ್ಣನಿಂದೆ ಕಂಡು ಬದುಕಿದೆನು ಕಾಣಾ ಕಪಿಲಸಿದ್ಧ ಮಲ್ಲಿಕಾರ್ಜುನ. ॥

ādiya mūrtiyalla, anādiya baccabariya śūnyavalla. aṃgaviddu aṃgavilla. saṃga ghanapadadalli vēdyavāda maruḷuśaṃkaradēvara nilava prabhu basavaṇṇaniṃde kaṃḍu badukidenu kāṇā kapilasiddha mallikārjuna. ॥

Report an error

ಹೀಗೆಂದು ಸಿದ್ಧರಾಮಯ್ಯ ದೇವರು ನಿರೂಪಿಸಲು, ಮತ್ತು, ಬಸವರಾಜ ದೇವರು ಹಡಪದಪ್ಪಣ್ಣಗಳಿಂದೆ ಪ್ರಭು ಸಿದ್ಧರಾಮಯ್ಯ ದೇವರುಗಳ ನಿಲವ ಕಂಡೆ. ಮತ್ತಂ, ಪ್ರಭು ಸಿದ್ಧರಾಮಯ್ಯ ದೇವರಿಂದೆ ಮರುಳುಶಂಕರ ಜೀವರ ಇರವ ಕಂಡೆನ್ನ ಜನ್ಮ ಸಫಲವಾಯಿತ್ತೆಂದು ಸ್ತುತಿಸಿದ ಪ್ರಸ್ಥಾವದ ವಚನ ॥

hīgeṃdu siddharāmayya dēvaru nirūpisalu, mattu, basavarāja dēvaru haḍapadappaṇṇagaḷiṃde prabhu siddharāmayya dēvarugaḷa nilava kaṃḍe. mattaṃ, prabhu siddharāmayya dēvariṃde maruḷuśaṃkara jīvara irava kaṃḍenna janma saphalavāyitteṃdu stutisida prasthāvada vacana ॥

Report an error

ಏನೆಂದುಪಮಿಸುವೆನಯ್ಯ ! ತನ್ನಿಂದ ತೋರದೆ ಗುರುಮುಖದಿಂದ ತೋರಿದ ತನ್ನ ನಿಲವ ನಿರೂಪನು ಶಬ್ದ ಮುಗ್ಧವಾಗಿದ್ದೆಡೆಯನಿದಿರಿಂಗೆ ತೋರದೆ ಇರವೆ ಪರವಾಗಿರ್ದ ಅಜಡನು ಇನನುದಯ ಕಾಲಕ್ಕೆ ಕುಕ್ಕುಟಧ್ವನಿದೋರುವಂತೆ ಘನಮಹಿಮರ ದರುಶನದಿಂದೆ ಸತ್ಪ್ರಣಮವೆ ತಾನಾಗಿ ನುಡಿದ ಮೂಲಿಗನು. ಕೂಡಲಸಂಗಮದೇವರಲ್ಲಿ ಬೆರಸಿ ಬೇರಿಲ್ಲದಿಪ್ಪ ಮರುಳಶಂಕರದೇವರ ನಿಲವ ಪ್ರಭು ಸಿದ್ಧರಾಮಯ್ಯದೇವರು ಹಡಪದಪ್ಪಣ್ಣನಿಂದ ಕಂಡು, ಎನ್ನ ಜನ್ಮ ಸಫಲವಾಯಿತ್ತಯ್ಯ. ॥

ēneṃdupamisuvenayya ! tanniṃda tōrade gurumukhadiṃda tōrida tanna nilava nirūpanu śabda mugdhavāgiddeḍeyanidiriṃge tōrade irave paravāgirda ajaḍanu inanudaya kālakke kukkuṭadhvanidōruvaṃte ghanamahimara daruśanadiṃde satpraṇamave tānāgi nuḍida mūliganu. kūḍalasaṃgamadēvaralli berasi bērilladippa maruḷaśaṃkaradēvara nilava prabhu siddharāmayyadēvaru haḍapadappaṇṇaniṃda kaṃḍu, enna janma saphalavāyittayya. ॥

Report an error

ಹೀಗೆಂದು ಬಸವರಾಜದೇವರು ಮರುಳುಶಂಕರದೇವರ ಕೊಂಡಾಡುತ್ತಿರಲು ಇದಕ್ಕೆ ಹಡಪದಪ್ಪಣ್ಣಗಳು ಪ್ರಭುದೇವರಿಂದೆ ಬಸವಣ್ಣನಿಂದೆ ಮರುಳುಶಂಕರ ದೇವರ ಇರವ ಕಂಡು, ಬದುಕಿದೆನೆಂದು ಕೊಂಡಾಡಿದ ಪ್ರಸ್ಥಾವದ ವಚನ ॥

hīgeṃdu basavarājadēvaru maruḷuśaṃkaradēvara koṃḍāḍuttiralu idakke haḍapadappaṇṇagaḷu prabhudēvariṃde basavaṇṇaniṃde maruḷuśaṃkara dēvara irava kaṃḍu, badukideneṃdu koṃḍāḍida prasthāvada vacana ॥

Report an error

ಯುಗಜುಗಂಗಳ ಅಳಿವು ಶಿವನರಿಯದೆ ಹಗಲಿರುಳೆಂಬ ನೆನಹಿನಲು ಅರಿಯದೆ ಲಿಂಗದಲ್ಲಿ ಪರವಶನಾಗಿರ್ದ ಪರಮ ಪರಿಣಾಮಿ ಏನೆಂದುಪಮಿಸುವೆನಯ್ಯ ! ಆಹಾ ಎನ್ನ ಮುಕ್ತಿಯ ಮುಕುರದ ಇರವ ನೋಡಾ. ಆಹಾ ಎನ್ನ ಸತ್ಯದ ಸ್ವಾನುಭಾವದ ಕಳೆಯ ನೋಡಾ. ಆಹಾ ಅಷ್ಟಮದಂಗಳ ಹಂಗನುಳಿದು ನಿಷ್ಠೆ ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ! ಬಸವಪ್ರಿಯ ಕೂಡಲ ಚನ್ನಸಂಗಮದೇವಯ್ಯ ಪರಮ ಪ್ರಸಾದಿ ಮರುಳು ಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಬದುಕಿದೆನು. ॥

yugajugaṃgaḷa aḷivu śivanariyade hagaliruḷeṃba nenahinalu ariyade liṃgadalli paravaśanāgirda parama pariṇāmi ēneṃdupamisuvenayya ! āhā enna muktiya mukurada irava nōḍā. āhā enna satyada svānubhāvada kaḷeya nōḍā. āhā aṣṭamadaṃgaḷa haṃganuḷidu niṣṭhe nibberagāgi niṃda citsukhiya nōḍā! basavapriya kūḍala cannasaṃgamadēvayya parama prasādi maruḷu śaṃkaradēvara nilava prabhu basavaṇṇaniṃda kaṃḍu badukidenu badukidenu. ॥

Report an error

ಹೀಗೆಂದು ಹಡಪದಪ್ಪಣ್ಣಗಳು ಮರುಳಶಂಕರದೇವರ ಇರವ ಕೊಂಡಾಡುತ್ತಿರಲು, ಅದಕ್ಕೆ ಮಡಿವಾಳಯ್ಯಗಳು ಪರಮ ಪರಿತೋಷರಾಗಿ ಮರುಳುಶಂಕರದೇವರ ನಿಲವ ಬಸವಣ್ಣನಿಂದೆ ಕಂಡು ಬದುಕಿದೆನೆಂದು ಕೊಂಡಾಡುವ ಪ್ರಸ್ಥಾವದ ವಚನ.॥

hīgeṃdu haḍapadappaṇṇagaḷu maruḷaśaṃkaradēvara irava koṃḍāḍuttiralu, adakke maḍivāḷayyagaḷu parama paritōṣarāgi maruḷuśaṃkaradēvara nilava basavaṇṇaniṃde kaṃḍu badukideneṃdu koṃḍāḍuva prasthāvada vacana.॥

Report an error

ಮೂರನೊಳಕೊಂಡ ಅರ ಮೀರಿ ನಿಂದ ಘನವನೇನೆಂಬೆನಯ್ಯ? ನುಡಿದರೆ ವಾಚಾತೀತ, ನೋಡುವರೆ ಕಂಗಳೆರಡ ಇದವಯ್ಯ! ಮಹದ ಬೆಳಗೆ ತಾನಾಗಿ ನಿಂದ ಮರುಳಶಂಕರದೇವರ ನಿಲವ ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ ಕಲಿದೇವರ ದೇವಾ. ॥

mūranoḷakoṃḍa ara mīri niṃda ghanavanēneṃbenayya? nuḍidare vācātīta, nōḍuvare kaṃgaḷeraḍa idavayya! mahada beḷage tānāgi niṃda maruḷaśaṃkaradēvara nilava basavaṇṇaniṃda kaṃḍu badukidenu kāṇā kalidēvara dēvā. ॥

Report an error

ಹೀಗೆಂದು ಮರುಳುಶಂಕರದೇವರ ನಿಲವ ಮಡಿವಾಳಯ್ಯಗಳು ಕೊಂಡಾಡುತ್ತಿರಲು, ಅಲ್ಲಿ ಬಸವರಾಜದೇವರು ಮಡಿವಾಳಯ್ಯಗಳಿಂದ ಮರುಳುಶಂಕರದೇವರ ಇರವ ಕಂಡು ಬದುಕಿದೆನೆಂದು ಕಿನ್ನರ ಬ್ರಹ್ಮಯ್ಯಗಳ ಕೂಡೆ ನಿರೂಪಿಸಿದ ಪ್ರಸ್ಥಾವದ ವಚನ. ॥

hīgeṃdu maruḷuśaṃkaradēvara nilava maḍivāḷayyagaḷu koṃḍāḍuttiralu, alli basavarājadēvaru maḍivāḷayyagaḷiṃda maruḷuśaṃkaradēvara irava kaṃḍu badukideneṃdu kinnara brahmayyagaḷa kūḍe nirūpisida prasthāvada vacana. ॥

Report an error

ಎನ್ನ ವಚನದ ರಚನೆಯ ಮೆಚ್ಚ. ಅಡಿಗಡಿಗೆನ್ನ ಮನದ ಮೈಲಿಗೆಯ ತೊಳೆದು ಹೋದ. ಪ್ರಾಣವ ಮರಳಿ ತಂದು ರಕ್ಷಿಸಿದ. ಕೂಡಲಸಂಗಮದೇವಯ್ಯ ಮಡಿವಾಳಯ್ಯಗಳ ಕರುಣದಿಂದ ಮರುಳುಶಂಕರದೇವರ ನಿಲವ ಕಂಡು ಬದುಕಿದೆನು ಕಾಣಾ ಕಿನ್ನರ ಬ್ರಹ್ಮಯ್ಯ. ॥

enna vacanada racaneya mecca. aḍigaḍigenna manada mailigeya toḷedu hōda. prāṇava maraḷi taṃdu rakṣisida. kūḍalasaṃgamadēvayya maḍivāḷayyagaḷa karuṇadiṃda maruḷuśaṃkaradēvara nilava kaṃḍu badukidenu kāṇā kinnara brahmayya. ॥

Report an error

ಹೀಗೆಂದು ಬಸವರಾಜದೇವರು ನಿರೂಪಿಸಲು, ಅದಕ್ಕೆ ಕಿನ್ನರಬ್ರಹ್ಮಯ್ಯಗಳು ಬಸವರಾಜದೇವರ ನುಡಿಯನೊಳಕೊಂಡು ಮರುಳುಶಂಕರ ದೇವರ ಕೊಂಡಾಡಿದ ಪ್ರಸ್ಥಾವದ ವಚನ. ॥

hīgeṃdu basavarājadēvaru nirūpisalu, adakke kinnarabrahmayyagaḷu basavarājadēvara nuḍiyanoḷakoṃḍu maruḷuśaṃkara dēvara koṃḍāḍida prasthāvada vacana. ॥

Report an error

ಆಕಾರವೆಂಬೆನೆ? ನಿರಾಕಾರವಾಗಿದೆ. ನಿರಾಕಾರನೆಂಬೆನೆ? ಅತ್ತತ್ತ ತೋರುತ್ತದೆ. ತನ್ನನಳಿದು ನಿಜ ಉಳಿದು ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು, ಒಳಕೊಂಡ ಮರುಳುಶಂಕರದೇವರ ಮೂರ್ತಿಯನ್ನು ನಿನ್ನಿಂದ ಕಂಡು ಬದುಕಿದೆನು ಕಾಣಾ ಸಂಗನಬಸವಣ್ಣಾ. ॥

ākāraveṃbene? nirākāravāgide. nirākāraneṃbene? attatta tōruttade. tannanaḷidu nija uḷidu mahāliṃga tripurāṃtakana nilava kaṃḍu, oḷakoṃḍa maruḷuśaṃkaradēvara mūrtiyannu ninniṃda kaṃḍu badukidenu kāṇā saṃganabasavaṇṇā. ॥

Report an error

ಮತ್ತಂ, ಬಸವರಾಜದೇವರಿಂದೆ ಮರುಳುಶಂಕರದೇವರ ನಿಲವ ಕಂಡೆನೆಂದು ಕಿನ್ನರಬ್ರಹ್ಮಯ್ಯಗಳು ನಿರೂಪಿಸಲು, ಅದಕ್ಕೆ ಬಸವರಾಜ ದೇವರು ಕಿನ್ನರಬ್ರಹ್ಮಯ್ಯಗಳಿಂದೆ ಮರುಳುಶಂಕರದೇವರ ನಿಲವ ಕಂಡು ಬದುಕಿದೆನೆಂದು ಸ್ತುತಿಸಿದ ಪ್ರಸ್ಥಾವದ ವಚನ. ॥

mattaṃ, basavarājadēvariṃde maruḷuśaṃkaradēvara nilava kaṃḍeneṃdu kinnarabrahmayyagaḷu nirūpisalu, adakke basavarāja dēvaru kinnarabrahmayyagaḷiṃde maruḷuśaṃkaradēvara nilava kaṃḍu badukideneṃdu stutisida prasthāvada vacana. ॥

Report an error

ನಾನಾ ಯುಗಂಗಳಲ್ಲಿ ಬಂದಲ್ಲಿ ಇಂತಪ್ಪ ನಿಲವ ಕಂಡುದಿಲ್ಲವಯ್ಯ! ಅಂಗಮನ ಭಾವಕರಣಂಗಳ ಮಾದು, ಕೂಡಲ ಸಂಗಮದೇವರ ನಿಲವನೊಳಕೊಂಡ ಮರುಳುಶಂಕರದೇವರ ನಿಲವ ನಿಮ್ಮಿಂದ ಕಂಡು ಬದುಕಿದೆನು ಕಾಣಾ ಕಿನ್ನರಬ್ರಹ್ಮಯ್ಯ. ॥

nānā yugaṃgaḷalli baṃdalli iṃtappa nilava kaṃḍudillavayya! aṃgamana bhāvakaraṇaṃgaḷa mādu, kūḍala saṃgamadēvara nilavanoḷakoṃḍa maruḷuśaṃkaradēvara nilava nimmiṃda kaṃḍu badukidenu kāṇā kinnarabrahmayya. ॥

Report an error

ಹೀಗೆಂದು ಎಲ್ಲ ಗಣಂಗಳು ಮರುಳಶಂಕರದೇವರ ಸ್ತುತಿಸುತ್ತಿರಲು, ಅಲ್ಲಿ ಮರುಳುಶಂಕರದೇವರು ತನ್ನ ಸ್ತುತಿಸಿದ ಗಣಂಗಳ ಒಂದೇ ವಚನದಲ್ಲಿ ಕೊಂಡಾಡಿದ ಪ್ರಸ್ಥಾವದ ವಚನ ॥

hīgeṃdu ella gaṇaṃgaḷu maruḷaśaṃkaradēvara stutisuttiralu, alli maruḷuśaṃkaradēvaru tanna stutisida gaṇaṃgaḷa oṃdē vacanadalli koṃḍāḍida prasthāvada vacana ॥

Report an error

ಎನ್ನ ಜ್ಞಾನಾತ್ಮ ಚೇತನನಯ್ಯ ಪ್ರಭುದೇವರು. ಎನ್ನ ಪರಮಾತ್ಮ ಚೇತನನಯ್ಯ ಸಿದ್ಧರಾಮಯ್ಯದೇವರು. ಎನ್ನ ಚಿನ್ಮಯಾತ್ಮ ಚೇತನನಯ್ಯ ಸಂಗನಬಸವಣ್ಣನು. ಎನ್ನ ನಿರ್ಮಲಾತ್ಮ ಚೇತನನಯ್ಯ ಷಡುಸ್ಥಲ ಬ್ರಹ್ಮ ಚನ್ನಬಸವಣ್ಣನು. ಎನ್ನ ಮಹದಾತ್ಮ ಚೇತನನಯ್ಯ ಬಸವಣ್ಣನ ನಿಜಸುಖಿ ಅಪ್ಪಣ್ಣನು. ಎನ್ನ ಜೀವಾತ್ಮ ಚೇತನನಯ್ಯ ಮಡಿವಾಳ ಮಾಚಯ್ಯನು. ಎನ್ನರಿವಿನ ಚೇತನಾತ್ಮಕನಯ್ಯ ಕಿನ್ನರಯ್ಯನು. ಇಂತಪ್ಪ ಪ್ರಮಥರೆ ಕರುಣದಿಂದೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಭುವೆ ಚನ್ನಮಲ್ಲಿಕಾರ್ಜುನ ದೇವಯ್ಯ ಬದುಕಿದೆನು ಕಾಣಾ ನಿಮ್ಮ ಧರ್ಮ ನಿಮ್ಮ ಧರ್ಮ. ॥

enna jñānātma cētananayya prabhudēvaru. enna paramātma cētananayya siddharāmayyadēvaru. enna cinmayātma cētananayya saṃganabasavaṇṇanu. enna nirmalātma cētananayya ṣaḍusthala brahma cannabasavaṇṇanu. enna mahadātma cētananayya basavaṇṇana nijasukhi appaṇṇanu. enna jīvātma cētananayya maḍivāḷa mācayyanu. ennarivina cētanātmakanayya kinnarayyanu. iṃtappa pramathare karuṇadiṃde śuddha siddha prasiddha prabhuve cannamallikārjuna dēvayya badukidenu kāṇā nimma dharma nimma dharma. ॥

Report an error

ಮತ್ತಂ, ಸರ್ಪನ ಹೆಡೆಯ ಮೇಲಿಪ್ಪ ಇಪ್ಪತ್ತೇಳು ಲೋಕವ ಕಂಡೆ. ಇಪ್ಪತ್ತೇಳು ಲೋಕದೊಳಿರ್ಪ ಎಪ್ಪತ್ತೇಳು ಕರ್ಪುರದ ಗಿರಿಯ ಕಂಡೆ. ಎಪ್ಪತ್ತೇಳು ಕರ್ಪುರದ ಗಿರಿಯ ಮೇಲಿಪ್ಪ ಎಪ್ಪತ್ತೇಳು ಉರಿಯ ಕಂಭವ ಕಂಡೆ. ಎಪ್ಪತ್ತೇಳು ಉರಿಯ ಕಂಭದ ಮೇಲಿರ್ಪ ಎಪ್ಪತ್ತೇಳು ಅರಗಿನ ಪುತ್ಥಳಿಯ ಕಂಡೆ. ಆ ಎಪ್ಪತ್ತೇಳು ಅರಗಿನ ಪುತ್ಥಳೆ ಕರಗಿ ಹೋದವು. ಎಪ್ಪತ್ತೇಳು ಕರ್ಪುರದ ಗಿರಿ ಉರಿದು ಹೋದವು. ಎಪ್ಪತ್ತೇಳು ಲೋಕ ಹಾಳಾದವು. ಆ ಸರ್ಪ ಬೆಂದು ಸತ್ತು ಹೋಯಿತು. ಇನ್ನು ನಿಷ್ಪತ್ತಿ ನಿರಾಳವೆಂಬ ನಿಜ ಒಳಕೊಂಡ ಬಳಿಕ ನಾನೆತ್ತ ಹೋದೆನಂದರಿಯೆನಯ್ಯ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನ ದೇವಯ್ಯ ನಿಮ್ಮರ್ಪಣದ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ. ॥

mattaṃ, sarpana heḍeya mēlippa ippattēḷu lōkava kaṃḍe. ippattēḷu lōkadoḷirpa eppattēḷu karpurada giriya kaṃḍe. eppattēḷu karpurada giriya mēlippa eppattēḷu uriya kaṃbhava kaṃḍe. eppattēḷu uriya kaṃbhada mēlirpa eppattēḷu aragina putthaḷiya kaṃḍe. ā eppattēḷu aragina putthaḷe karagi hōdavu. eppattēḷu karpurada giri uridu hōdavu. eppattēḷu lōka hāḷādavu. ā sarpa beṃdu sattu hōyitu. innu niṣpatti nirāḷaveṃba nija oḷakoṃḍa baḷika nānetta hōdenaṃdariyenayya. śuddha siddha prasiddha prasanna prabhuve śāṃta cannamallikārjuna dēvayya nimmarpaṇada pariya nīve ballirallade nānetta ballenayya nimma dharma nimma dharma. ॥

Report an error

ಮತ್ತಂ, ಮರುಳುಶಂಕರದೇವರ ಐಕ್ಯ ॥

mattaṃ, maruḷuśaṃkaradēvara aikya ॥

Report an error

ಸಂಸಾರವೆಂಬ ಸಾಗರವ ದಾಂಟುವರೆ ಆರುಹೆಂಬ ಹರಿಗೋಲಸಿಕ್ಕಿ ಜ್ಞಾನವೆಂಬ ಅಂಬಿಗ ಇಹರು ಗೋಲೊಳಗೆ ಕುಳಿರ್ದು ಸುಜ್ಞಾನವೆಂಬ ಸಟ್ಟುಗವ ಪಿಡಿದು ಮಹಾಜ್ಞಾನವೆಂಬ ಗಾತಗಳೆಯ ಪಿಡಿದು, ನಾನೀ ಹೊಳೆಯಂ ಕಂಡು ಅಂಬಿಗನ ಕೇಳಿದರೆ ನಾ ನಿನ್ನ ಹಾಯಿಸಿಕೊಟ್ಟಿಹೆನೆಂದನು. ನಾನು ನಿನ್ನ ನಂಬಿ ಹರಿಗೋಲನೇರಿದೆನು. ಕಾಣಾ ಅಂಬಿಗರಣ್ಣಾ, ಇಂದು ನಾನು ಹರಿಗೋಲಲ್ಲಿ ಕುಳ್ಳಿರ್ದು ನಡುಹೊಳೆಯಲ್ಲಿ ಹೋಗಲಿಕೆ ಕಾಮವೆಂಬ ಕೊರಡು ಅಡ್ಡ ಬಿದ್ದಿತ್ತು. ಕ್ರೋಧವೆಂಬ ಸುಳುಹಿನೊಳಗೆ ಸಿಲ್ಕಿತ್ತು. ಅಹಂಕಾರವೆಂಬ ಮೀನ ಬಂದು ನಿಂದಿತ್ತು. ಮಾಯೆ ಎಂಬ ಮೊಸಳೆ ಬಾಯ ಬಿಡುತ್ತಿದ್ದಿತ್ತು. ಮೋಹವೆಂಬ ನೊರೆ ತೆರೆ ಹೆಚ್ಚಿ ಬರುತ್ತಿದ್ದಿತ್ತು. ಲೋಭವೆಂಬ ಕಾಡ್ಗಡಲಿಗಳ ದೊಯ್ವುತ್ತಿದ್ದಿತ್ತು. ಮದವೆಂಬ ಮರಹು ನೂಕುತ್ತಿದ್ದಿತ್ತು. ಮತ್ಸರವೆಂಬ ಗಾಳಿ ತಲೆಕೆಳಗು ಮಾಡುತ್ತಿದ್ದಿತ್ತು. ಇವೆಲ್ಲವ ಪರಿಹರಿಸಿ ಎನ್ನ ಹೊಳೆಯ ದಾಂಟಿಸಿದನು ಅಂಬಿಗರಣ್ಣನು. ಈ ಹೊಳೆಯ ದಾಂಟಿಸಿದ ಕೂಲಿಯನೆನ್ನ ಬೇಡಿದರೆ ಕೂಲಿಯ ಕೊಡಲೇನು ಇಲ್ಲ ಎಂದರೆ ಕೈಸೆರೆಯಾಗಿ ಎನ್ನೊಳದೊಯ್ದನಯ್ಯ ! ಅರುವೆಯ ಕೊಟ್ಟು ಕೂಲಿಗೆ ಕರುವ ಕಾಯಿಕೊಂಡನಯ್ಯ! ಅರಿಯದೆ ಹರುಗೊಲನೇರಿ ತೊರೆ ದಾಂಟಿದ ಕೂಲಿಗೆ ಕರುವ ಕಾದೆ ಕಾಣಾ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಮಲ್ಲಿಕಾರ್ಜನ ದೇವಯ್ಯ, ನಿಮ್ಮ ನಂಬಿ ನಾನು ಕೆಟ್ಟು ನಾನು ಬಟ್ಟ ಬಯಲಾದೆನಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ. ॥

saṃsāraveṃba sāgarava dāṃṭuvare āruheṃba harigōlasikki jñānaveṃba aṃbiga iharu gōloḷage kuḷirdu sujñānaveṃba saṭṭugava piḍidu mahājñānaveṃba gātagaḷeya piḍidu, nānī hoḷeyaṃ kaṃḍu aṃbigana kēḷidare nā ninna hāyisikoṭṭiheneṃdanu. nānu ninna naṃbi harigōlanēridenu. kāṇā aṃbigaraṇṇā, iṃdu nānu harigōlalli kuḷḷirdu naḍuhoḷeyalli hōgalike kāmaveṃba koraḍu aḍḍa biddittu. krōdhaveṃba suḷuhinoḷage silkittu. ahaṃkāraveṃba mīna baṃdu niṃdittu. māye eṃba mosaḷe bāya biḍuttiddittu. mōhaveṃba nore tere hecci baruttiddittu. lōbhaveṃba kāḍgaḍaligaḷa doyvuttiddittu. madaveṃba marahu nūkuttiddittu. matsaraveṃba gāḷi talekeḷagu māḍuttiddittu. ivellava pariharisi enna hoḷeya dāṃṭisidanu aṃbigaraṇṇanu. ī hoḷeya dāṃṭisida kūliyanenna bēḍidare kūliya koḍalēnu illa eṃdare kaisereyāgi ennoḷadoydanayya ! aruveya koṭṭu kūlige karuva kāyikoṃḍanayya! ariyade harugolanēri tore dāṃṭida kūlige karuva kāde kāṇā śuddha siddha prasiddha prasanna prabhuve śāṃta mallikārjana dēvayya, nimma naṃbi nānu keṭṭu nānu baṭṭa bayalādenayya, nimma dharma nimma dharma. ॥

Report an error

ಮತ್ತಂ, ಮರುಳುಶಂಕರದೇವರು ತಮ್ಮ ಐಕ್ಯದಲ್ಲಿ ಪ್ರಭುದೇವರ ಸ್ತೋತ್ರಮಂ ಮಾಡಿದ ಪ್ರಸ್ಥಾವದ ವಚನ. ॥

mattaṃ, maruḷuśaṃkaradēvaru tamma aikyadalli prabhudēvara stōtramaṃ māḍida prasthāvada vacana. ॥

Report an error

ನಿಸ್ಸಂಗತ್ವಂ ನಿರಾಭಾರಿ | ನಿಸ್ಸೀಮಂ ನಿರುಪಾಧಿಕಂ ॥ ನಿರ್ಲೇಹಂ ನಿರ್ಮಳಂ ನಿತ್ಯಂ | ಸತ್ಯ ಜಂಗಮ ಲಕ್ಷಣಂ ॥ ಇಂತೆಂದುದಾಗಿ, ಶುದ್ಧ, ಸಿದ್ಧ, ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚನ್ನಮಲ್ಲಿಕಾರ್ಜುನ ದೇವಯ್ಯ, ನಿಮ್ಮ ಘನಕ್ಕೆ ಘನವಾದ ಪ್ರಭುದೇವರ ಘನವ ನೀವೆ ಬಲ್ಲಿರಿ. ನಾನೆತ್ತ ಬಲ್ಲೆನಯ್ಯ ನಿಮ್ಮ ಧರ್ಮ, ನಿಮ್ಮ ಧರ್ಮ. ॥

nissaṃgatvaṃ nirābhāri | nissīmaṃ nirupādhikaṃ ॥ nirlēhaṃ nirmaḷaṃ nityaṃ | satya jaṃgama lakṣaṇaṃ ॥ iṃteṃdudāgi, śuddha, siddha, prasiddha prasanna prabhuve śāṃta cannamallikārjuna dēvayya, nimma ghanakke ghanavāda prabhudēvara ghanava nīve balliri. nānetta ballenayya nimma dharma, nimma dharma. ॥

Report an error

ಮತ್ತಂ, ಮರುಳುಶಂಕರದೇವರ ಐಕ್ಯ ॥ ಸಾಕ್ಷಿ ॥ ಮಹಾಲಿಂಗಂ ತ್ರಯೋರ್ಲಿಂಗಂ | ತ್ರಿವಿಧಂ ಷಡ್ವಿಧೋರ್ಮುಖಂ ॥ ತ್ರಿವಿಧೇಕ ಮುಖೋಲಿಂಗಂ | ಮಹಾಲಿಂಗಂತುದರ್ಶನಂ ॥ ಇಂತೆಂದುದಾಗಿ, ಒಂದು ಮೂರು ಮಾಡಿಕೊಂಡನಯ್ಯ ನಮ್ಮ ಬಸವಣ್ಣನು. ಮೂರು ಆರ ಮಾಡಿಕೊಂಡನಯ್ಯ ನಮ್ಮ ಬಸವಣ್ಣನು. ಆರ ಮೂರ ಮಾಡಿಕೊಂಡನಯ್ಯ ನನ್ನ ಬಸವಣ್ಣನು. ಮೂರ ಒಂದ ಮಾಡಿಕೊಂಡನಯ್ಯ ನಮ್ಮ ಬಸವಣ್ಣನು! ಇಂತಪ್ಪ ಸರ್ವಾವಧಾನಿಯಯ್ಯ ನಮ್ಮ ಬಸವಣ್ಣನು. ಇಂತಪ್ಪ ಸರ್ವ ಸಂಗ ಪರಿತ್ಯಾಗಿಯಯ್ಯ ನಮ್ಮ ಬಸವಣ್ಣನು. ಇಂತಪ್ಪ ಸರ್ವ ಕರಣ ನಿರ್ಮೂಲನಯ್ಯ ನಮ್ಮ ಬಸವಣ್ಣನು. ಇಂತಪ್ಪ ಕಾರುಣ್ಯ ಪ್ರಸಾದಿಯಯ್ಯ ನಮ್ಮ ಬಸವಣ್ಣನು. ಇಂತಪ್ಪ ಸರ್ವಾಂಗಲಿಂಗಿಯಯ್ಯ ನಮ್ಮ ಬಸವಣ್ಣನು. ಇಂತಪ್ಪ ಸರ್ವನಿರ್ವಾಣಿಯಯ್ಯ ನಮ್ಮ ಬಸವಣ್ಣನು. ಇಂತಪ್ಪ ಬಸವಣ್ಣನ ಮಹಿಮೆಯ ನೀವೆ ಬಲ್ಲಿರಿ. ಅಸಂಖ್ಯಾತ ಮಹಾ ಪುರಾತನರು ಪ್ರಭುದೇವರು ಮುಖ್ಯವಾದ ನಿಲವಿನ ಶ್ರೀ ಚರಣಕ್ಕೆ ನಾನು ಶರಣಾರ್ಥಿ ಶರಣಾರ್ಥಿ ಎಂದು ಶಬ್ದ ಮುಗ್ಧವಾಗಿ ಉರಿಉಂಡ ಕರ್ಪುರದಂತೆ ನಿಮ್ಮ ಶ್ರೀಚರಣವನೈದಿದೆನಯ್ಯ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಮಲ್ಲಿಕಾರ್ಜುನದೇವಯ್ಯ, ನಿಮ್ಮ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯ ನಿಮ್ಮ ಧರ್ಮ, ನಿಮ್ಮ ಧರ್ಮ.॥

mattaṃ, maruḷuśaṃkaradēvara aikya ॥ sākṣi ॥ mahāliṃgaṃ trayōrliṃgaṃ | trividhaṃ ṣaḍvidhōrmukhaṃ ॥ trividhēka mukhōliṃgaṃ | mahāliṃgaṃtudarśanaṃ ॥ iṃteṃdudāgi, oṃdu mūru māḍikoṃḍanayya namma basavaṇṇanu. mūru āra māḍikoṃḍanayya namma basavaṇṇanu. āra mūra māḍikoṃḍanayya nanna basavaṇṇanu. mūra oṃda māḍikoṃḍanayya namma basavaṇṇanu! iṃtappa sarvāvadhāniyayya namma basavaṇṇanu. iṃtappa sarva saṃga parityāgiyayya namma basavaṇṇanu. iṃtappa sarva karaṇa nirmūlanayya namma basavaṇṇanu. iṃtappa kāruṇya prasādiyayya namma basavaṇṇanu. iṃtappa sarvāṃgaliṃgiyayya namma basavaṇṇanu. iṃtappa sarvanirvāṇiyayya namma basavaṇṇanu. iṃtappa basavaṇṇana mahimeya nīve balliri. asaṃkhyāta mahā purātanaru prabhudēvaru mukhyavāda nilavina śrī caraṇakke nānu śaraṇārthi śaraṇārthi eṃdu śabda mugdhavāgi uriuṃḍa karpuradaṃte nimma śrīcaraṇavanaididenayya. śuddha siddha prasiddha prasanna prabhuve śāṃta mallikārjunadēvayya, nimma basavaṇṇana prasādava koṃḍu nānu badukidenu. basavaṇṇana muṃde bayalāgi hōdenayya nimma dharma, nimma dharma.॥

Report an error

ಇಂತು ಮರುಳುಶಂಕರದೇವರು ನಿರ್ವಯಲಾಗಲು, ಚನ್ನಬಸವರಾಜದೇವರು ಕೊಂಡಾಡಿದ ಪ್ರಸ್ಥಾವದ ವಚನ. ॥

iṃtu maruḷuśaṃkaradēvaru nirvayalāgalu, cannabasavarājadēvaru koṃḍāḍida prasthāvada vacana. ॥

Report an error

ಮಾಡಬಾರದ ಭಕ್ತಿಯನೆ ಮಾಡಿ, ನೋಡಬಾರದ ನೋಟವನೆ ನೋಡಿ, ಕೂಡಬಾರದ ಕೂಟವನೆ ಕೂಡಿ, ಸ್ತುತಿಸುವರೆ ಸ್ತುತಿಗೆ ಬಾರದೆ ಮುಟ್ಟುವರಿಗೆ ಮುಟ್ಟಬಾರದೆ, ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಕೂಡಲ ಚನ್ನಸಂಗಮದೇವಾ. ॥

māḍabārada bhaktiyane māḍi, nōḍabārada nōṭavane nōḍi, kūḍabārada kūṭavane kūḍi, stutisuvare stutige bārade muṭṭuvarige muṭṭabārade, baṭṭabayalāgi hōda maruḷuśaṃkaradēvara mahātmege namō namō eṃdu badukidenu kāṇā kūḍala cannasaṃgamadēvā. ॥

Report an error

ಇಂತು ಚನ್ನಬಸವರಾಜದೇವರು ಮರುಳುಶಂಕರದೇವರು ನಿರ್ವಯಲನೈದಿದಲ್ಲಿ ಕೊಂಡಾಡುತ್ತಿರಲು, ಆ ಪ್ರಸ್ಥಾವದೊಳು ಪ್ರಭುದೇವರು ಬಸವರಾಜದೇವರೊಡನೆ ನಿರೂಪಿಸಿದ ಪ್ರಸ್ಥಾವದ ವಚನ ॥

iṃtu cannabasavarājadēvaru maruḷuśaṃkaradēvaru nirvayalanaididalli koṃḍāḍuttiralu, ā prasthāvadoḷu prabhudēvaru basavarājadēvaroḍane nirūpisida prasthāvada vacana ॥

Report an error

ಕಾಮನ ಕಣ್ಣ ಮುಳ್ಳ ಕಳೆದು, ಭೂಮಿಯ ತೈಲದ ಸೀಮೆಯ ಕೆಡಿಸಿ, ಹೋಮವನುರುಹಿ, ದಕ್ಷನ ತಲೆಯ ನರಿದ ನಿಸ್ಸೀಮ ಶರಣರ ನಿಲವನರಿಯಬಹುದೆ? ಅನುವಿಂಗೆ ಸಾಧ್ಯ ಉಪಮೆಗೆ ಕಡೆ ಮುಟ್ಟರು. ಗುಹೇಶ್ವರನ ಶರಣರೆಂತಹರೆಂಬುದ ಕಂಡಾ ಸಂಗನಬಸವಣ್ಣಾ? ॥

kāmana kaṇṇa muḷḷa kaḷedu, bhūmiya tailada sīmeya keḍisi, hōmavanuruhi, dakṣana taleya narida nissīma śaraṇara nilavanariyabahude? anuviṃge sādhya upamege kaḍe muṭṭaru. guhēśvarana śaraṇareṃtahareṃbuda kaṃḍā saṃganabasavaṇṇā? ॥

Report an error

ಹೀಗೆಂದು ಪ್ರಭುದೇವರು ನಿರೂಪಿಸಲು, ಅದಕ್ಕೆ ಬಸವರಾಜದೇವರು ನಿರಾಕಾರವಾಗಿರ್ದ ಪ್ರಣಮವನು ನಿರವಯವನೈದುವದು ಸಾಮ್ಯವಲ್ಲದೆ ಕಾಯವು ಜಡವು ನಿರವಯವಹ ಭೇದವೆಂತೆಂದು ಪ್ರಭುದೇವರು ಬೆಸಗೊಂಬ ಪ್ರಸ್ಥಾವದ ವಚನ. ॥

hīgeṃdu prabhudēvaru nirūpisalu, adakke basavarājadēvaru nirākāravāgirda praṇamavanu niravayavanaiduvadu sāmyavallade kāyavu jaḍavu niravayavaha bhēdaveṃteṃdu prabhudēvaru besagoṃba prasthāvada vacana. ॥

Report an error

ಲಿಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲಿಯ್ಯವಾಯಿತ್ತೆಂದರೆ ಅಂಗವ ಲಿಂಗದಲ್ಲಿ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯ? ಶರಣಂಗೆ ಪ್ರಾಣಲಿಂಗದಲ್ಲಿ ಸಮನಿಸಿ ನಿರವಯವಾಗಬಹುದಲ್ಲದೆ, ಕರ್ಮದಿಂದ ಕಾಯವ ಸವೆಸಿ ಸ್ವಯವಪ್ಪ ಸರಿ ಎಂತು ಹೇಳಯ್ಯ? ಕೂಡಲಸಂಗಮ ದೇವಯ್ಯ ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯರಾಗಿಪ್ಪುದೆ ಹೇಳಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ. ॥

liṃgadalli arpitavāda sukhavu liṃgadalli liyyavāyitteṃdare aṃgava liṃgadalli nikṣēpisiheneṃba kāraṇavēkayya? śaraṇaṃge prāṇaliṃgadalli samanisi niravayavāgabahudallade, karmadiṃda kāyava savesi svayavappa sari eṃtu hēḷayya? kūḍalasaṃgama dēvayya nimma śaraṇaru kāyaviḍidirdu nirmāyarāgippude hēḷayya nimma dharma nimma dharma. ॥

Report an error

ನಿಮ್ಮ ಶರಣರು ಶರೀರವಿರ್ದು ನಿಜದಲ್ಲಿ ನಿಂದ ಭೇದವ ನಿರೂಪಿಸಿ ಎಂತು ಬಸವರಾಜದೇವರು ಬಿನ್ನಹಂ ಮಾಡಲು, ಇದಕ್ಕೆ ಪ್ರಭುದೇವರು ಮರುಳುಶಂಕರದೇವರೆಂಬ ಶರಣರ ಮಹಾತ್ಮೆಯಂ ನಿರೂಪಿಸಿದ ಪ್ರಸ್ಥಾವದ ವಚನ ॥

nimma śaraṇaru śarīravirdu nijadalli niṃda bhēdava nirūpisi eṃtu basavarājadēvaru binnahaṃ māḍalu, idakke prabhudēvaru maruḷuśaṃkaradēvareṃba śaraṇara mahātmeyaṃ nirūpisida prasthāvada vacana ॥

Report an error
p83padaṃgaḷu ॥ rāga. bahuḷi

ಕರ್ಮಕಾಯನು ಅಲ್ಲ. ಬ್ರಹ್ಮಮೂರುತಿ ಅಲ್ಲ. ಪರಬ್ರಹ್ಮವನು ನುಡಿವಲ್ಲಿ ತಾನಿಲ್ಲದ ನಿರ್ಮೊಹಿ ಮಾತಾಪಿತರುಗಳುದುರಜಾತಜನಿತನು ಅಲ್ಲ. ಶ್ವೇತ ಪೀತ ಕಪೋತ ಷಡುವರ್ಣರಹಿತ | ನವಮಾಸ ತುಂಬಿದ ಮೂರುತಿಯು ತಾನಲ್ಲ | ಅವಿರಳ ಲಿಂಗದ ಕಳೆಯ ಬೆಳಗು ತಾ ಶರಣಾ ॥

karmakāyanu alla. brahmamūruti alla. parabrahmavanu nuḍivalli tānillada nirmohi mātāpitarugaḷudurajātajanitanu alla. śvēta pīta kapōta ṣaḍuvarṇarahita | navamāsa tuṃbida mūrutiyu tānalla | aviraḷa liṃgada kaḷeya beḷagu tā śaraṇā ॥

Editor's note: Original numbered segment 1 in source paragraph 85. Traditional rubric: ||ಪಲ್ಲ||

Report an error

ನಡೆಯ ಕಲಿವಲ್ಲಿ ನೋಡಿಳೆಯ ಹಂಗಿಗನಲ್ಲ | ನುಡಿಯ ಸಡಗರದಲಾದ ಬಿಂದು ತಾನಲ್ಲ ॥ ಪದುಮ ಪರಿಮಳಕೆರಗುವ ಭ್ರಮರತಾನಲ್ಲ | ಭವದ ಕುಳವನು ಗೆದ್ದ ನಿಭ್ರಾಂತ ಶರಣಾ ॥

naḍeya kalivalli nōḍiḷeya haṃgiganalla | nuḍiya saḍagaradalāda biṃdu tānalla ॥ paduma parimaḷakeraguva bhramaratānalla | bhavada kuḷavanu gedda nibhrāṃta śaraṇā ॥

Editor's note: Original numbered segment 2 in source paragraph 85.

Report an error

ಜಾಗ್ರ ಸ್ವಪ್ನ ಸುಷುಪ್ತಿಯಾಗು ಆನುಮಿಷನಲ್ಲ| ಆಗಮ ಕುಳದಲಾದ ಭೋಗಿ ತಾನಲ್ಲ ॥ ತೇಜಸ್ಸು ರಂಜನೆಯಗಣಿತ ಗುಣಿತನು ಅಲ್ಲ| ಸಹಜ ನಿತ್ಯನುತಾನ ಭೇದ್ಯ ಶರಣಾ॥

jāgra svapna suṣuptiyāgu ānumiṣanalla| āgama kuḷadalāda bhōgi tānalla ॥ tējassu raṃjaneyagaṇita guṇitanu alla| sahaja nityanutāna bhēdya śaraṇā॥

Editor's note: Original numbered segment 3 in source paragraph 85.

Report an error

ಬಿಂದುಕಳೆ ಸುಖದ ಸಂಪರ್ಕದವ ತಾನಲ್ಲ | ಒಂದು ಛಂದದಲಿ ಕಂದಮೂಲವನು ಗೆಲಿದ ॥ ಸಂದಳಿದ ಸ್ವಯ ಸುಖವನೊಂದು ಮಾಡುತಲಿ ತ್ರಿ | ಬಂಧ ಭೇದವ ಗೆಲಿದ ನಿಷ್ಕಾಮಿ ಶರಣಾ. ॥

biṃdukaḷe sukhada saṃparkadava tānalla | oṃdu chaṃdadali kaṃdamūlavanu gelida ॥ saṃdaḷida svaya sukhavanoṃdu māḍutali tri | baṃdha bhēdava gelida niṣkāmi śaraṇā. ॥

Editor's note: Original numbered segment 4 in source paragraph 85.

Report an error

ಚಂದ್ರಧರನು ಅಲ್ಲ, ಚಂದ್ರಪೂರಿತನಲ್ಲ, ಇಂದ್ರ ಚಾಪದ ಪರಿಪ್ರಭವ ತಾನಲ್ಲ | ಭೃಂಗನುಂಗಿದ ರುಚಿಯನೊಂದು ಮಾಡಿದ ಗುಹೇಶ್ವರನೆಂಬ ಲಿಂಗದ ಹಂಗಳಿದ ಶರಣಾ. ॥

caṃdradharanu alla, caṃdrapūritanalla, iṃdra cāpada pariprabhava tānalla | bhr̥ṃganuṃgida ruciyanoṃdu māḍida guhēśvaraneṃba liṃgada haṃgaḷida śaraṇā. ॥

Editor's note: Original numbered segment 5 in source paragraph 85.

Report an error

ಇಂತು ಪ್ರಭುದೇವರು ಮರುಳುಶಂಕರದೇವರ ಶರಣತ್ವದ ಮಹಾತ್ಮೆಯ ನಿರೂಪಿಸಿದ ಪ್ರಸ್ಥಾವದ ವಚನದಲ್ಲಿ ಬಸವರಾಜದೇವರು ಬಿನ್ನೈಸಿದ ಪ್ರಸ್ಥಾವದ ವಚನ. ॥

iṃtu prabhudēvaru maruḷuśaṃkaradēvara śaraṇatvada mahātmeya nirūpisida prasthāvada vacanadalli basavarājadēvaru binnaisida prasthāvada vacana. ॥

Report an error

ಅಯ್ಯ ನಿಮ್ಮ ಶರಣರು ಪರಮ ಸುಖಿಗಳಯ್ಯ. ಅಯ್ಯ ನಿಮ್ಮ ಶರಣರು ಕಾಯವೆಂಬ ಕರ್ಮಕ್ಕೆ ಹೊದ್ದದ ನಿಃಕಾಮಿಗಳಯ್ಯ. ಅಯ್ಯ ನಿಮ್ಮ ಶರಣರು ಮನದಲ್ಲಿ ನಿರ್ಲೇಪ ಜ್ಞಾನಿಗಳಯ್ಯ! ಕೂಡಲಸಂಗಮದೇವಯ್ಯ ನಿಮ್ಮ ಶರಣರ ಘನವನೆನಗೆ ಹೇಳಲು ನಾನು ಕೇಳಲಮ್ಮದೆ ನಮೋ ನಮೋ ಎನುತಿರ್ದೆನು ಕಾಣಾ ಪ್ರಭುವೆ. ॥

ayya nimma śaraṇaru parama sukhigaḷayya. ayya nimma śaraṇaru kāyaveṃba karmakke hoddada niḥkāmigaḷayya. ayya nimma śaraṇaru manadalli nirlēpa jñānigaḷayya! kūḍalasaṃgamadēvayya nimma śaraṇara ghanavanenage hēḷalu nānu kēḷalammade namō namō enutirdenu kāṇā prabhuve. ॥

Report an error

ಮತ್ತಂ, ಅಯ್ಯ ನಿಮ್ಮ ಶರಣರ ನಿಲವ ಸ್ವರ್ಗ ಮರ್ತ್ಯ ಪಾತಾಳದೊಳಗೆ ಬಲ್ಲವರಿಲ್ಲವಯ್ಯ! ಅಘಟಿತಘಟತರು ಅಖಂಡಿತ ಮಹಿಮರು. ನಿಜದಲ್ಲಿ ನಿರ್ಲೇಪ ಭಾವಕರು. ಕೂಡಲಸಂಗಮದೇವ ನಿಮ್ಮ ಶರಣರ ನಿಲವನರಿವಡೆ ನಾನೇತರವನಯ್ಯ? ॥

mattaṃ, ayya nimma śaraṇara nilava svarga martya pātāḷadoḷage ballavarillavayya! aghaṭitaghaṭataru akhaṃḍita mahimaru. nijadalli nirlēpa bhāvakaru. kūḍalasaṃgamadēva nimma śaraṇara nilavanarivaḍe nānētaravanayya? ॥

Report an error

ಇಂತು ಮರುಳುಶಂಕರ ದೇವರ ಘನವನ್ನು ಪ್ರಭುದೇವರು ಬಸವರಾಜದೇವರು ಆಶ್ಚರ್ಯಂಗೊಂಡು ಕೊಂಡಾಡುತ್ತಿರಲು, ಅಲ್ಲಿ ಚಿಕ್ಕದಣ್ಣಾಯಕರು, ಬಿನ್ನೈಸಿದ ಪ್ರಸ್ಥಾನದ ವಚನ. ॥

iṃtu maruḷuśaṃkara dēvara ghanavannu prabhudēvaru basavarājadēvaru āścaryaṃgoṃḍu koṃḍāḍuttiralu, alli cikkadaṇṇāyakaru, binnaisida prasthānada vacana. ॥

Report an error

ಕಾಯವಳಿದರೇನು? ಕಾಯ ಉಳಿದರೇನು? ಕಾಯ ಬಯಲಾದರೇನು? ಮನ ಮನ ಲಯವಾಗಿ ಘನಕ್ಕೆ ಘನವಾದ ಶರಣರ ಕಂಡಡೆ ಕೂಡಲ ಚನ್ನಸಂಗನೆಂದು ಶಬುದ ಮುಗುದವಾಗಿರಬೇಕಲ್ಲದೆ ಚೋದ್ಯಕ್ಕೆ ಕಾರಣವೇನು ಹೇಳಾ ಸಂಗನಬಸವಣ್ಣಾ? ॥

kāyavaḷidarēnu? kāya uḷidarēnu? kāya bayalādarēnu? mana mana layavāgi ghanakke ghanavāda śaraṇara kaṃḍaḍe kūḍala cannasaṃganeṃdu śabuda mugudavāgirabēkallade cōdyakke kāraṇavēnu hēḷā saṃganabasavaṇṇā? ॥

Report an error

ಮತ್ತಂ, ಆದಿಯಲ್ಲಿ ಹುಟ್ಟಿತ್ತಲ್ಲ. ಅನಾದಿಯಲ್ಲಿ ಬೆಳೆಯಿತ್ತಲ್ಲ. ಮೂರ್ತಿಯಲ್ಲಿ ನಿಂದುದಲ್ಲ. ಆ ಮೂರ್ತಿಯಲಿ ಭಾವಿಯಲ್ಲ. ಅರವಿನೊಳಗೆ ಅರಿದುದಲ್ಲ. ಮರಹಿನೊಳಗೆ ಮರೆದುದಲ್ಲ. ಎಂತಿರ್ದಂತೆ ಪರ ಬ್ರಹ್ಮ ನೋಡಾ. ಮನಮನಲಿಯ್ಯವಾಗಿ ಘನಕ್ಕೆ ಘನ ಒಂದಾದರೆ ಮತ್ತೆ ಮನಕ್ಕೆ ವಿಸ್ಮಯವ ಮಾಡಲುಂಟೆ? ಕೂಡಲ ಚನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದರೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ? ॥

mattaṃ, ādiyalli huṭṭittalla. anādiyalli beḷeyittalla. mūrtiyalli niṃdudalla. ā mūrtiyali bhāviyalla. aravinoḷage aridudalla. marahinoḷage maredudalla. eṃtirdaṃte para brahma nōḍā. manamanaliyyavāgi ghanakke ghana oṃdādare matte manakke vismayava māḍaluṃṭe? kūḍala cannasaṃgana śaraṇaru kāyaveṃba kaṃtheya kaḷeyade bayalādare nijaveṃdu pariṇāmisabēkallade aṃtiṃtenaluṃṭe saṃganabasavaṇṇā ? ॥

Report an error

Illustration: Verse & Place (Project-owned).