Shunya Sampadane 6.p81
ಲಿಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲಿಯ್ಯವಾಯಿತ್ತೆಂದರೆ ಅಂಗವ ಲಿಂಗದಲ್ಲಿ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯ? ಶರಣಂಗೆ ಪ್ರಾಣಲಿಂಗದಲ್ಲಿ ಸಮನಿಸಿ ನಿರವಯವಾಗಬಹುದಲ್ಲದೆ, ಕರ್ಮದಿಂದ ಕಾಯವ ಸವೆಸಿ ಸ್ವಯವಪ್ಪ ಸರಿ ಎಂತು ಹೇಳಯ್ಯ? ಕೂಡಲಸಂಗಮ ದೇವಯ್ಯ ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯರಾಗಿಪ್ಪುದೆ ಹೇಳಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ. ॥
liṃgadalli arpitavāda sukhavu liṃgadalli liyyavāyitteṃdare aṃgava liṃgadalli nikṣēpisiheneṃba kāraṇavēkayya? śaraṇaṃge prāṇaliṃgadalli samanisi niravayavāgabahudallade, karmadiṃda kāyava savesi svayavappa sari eṃtu hēḷayya? kūḍalasaṃgama dēvayya nimma śaraṇaru kāyaviḍidirdu nirmāyarāgippude hēḷayya nimma dharma nimma dharma. ॥