Jaimini Bharata 22.29
ಎದ್ದು ನಭದೊಳ್ ಪಳಂಚುವರೊಮ್ಮೆ ಭೂತಳದೊ । ಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದೆ । ಹೊದ್ದಿ ಹೋರುವರೊಮ್ಮೆ ತಗಳುಮಗುಳಾಗಿತಾಗುವರೊಮ್ಮೆ ಸರಿಬರಿಯೊಳು ॥ ತಿದ್ದಿ ತುಡುಕುವರೊಮ್ಮೆ ಬಾಣಾಂಬುಧಿಯ ತೆರೆಯೊ । ಳದ್ದಿ ಪೊಣರುವರೊಮ್ಮೆ ಮೂರ್ಛೆಯಿಂ ಮೈಮರೆದು । ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣ ಪಾರ್ಥರ ತನಯರಾಹವದೊಳು
eddu nabhadoḷ paḷaṃcuvaromme bhūtaḷado । ḷiddu heṇaguvaromme baḷasi maṃḍaladiṃde । hoddi hōruvaromme tagaḷumaguḷāgitāguvaromme saribariyoḷu ॥ tiddi tuḍukuvaromme bāṇāṃbudhiya tereyo । ḷaddi poṇaruvaromme mūrcheyiṃ maimaredu । biddu cētarisi kāduvaromme kr̥ṣṇa pārthara tanayarāhavadoḷu