ಸಂಧಿ ೨೨ · ಸಂಧಿ ೨೨
Sandhi 22
saṃdhi 22
॥
Lakshmisha continues the story of the horse sacrifice in sandhi 22.
47 verses·Kannada with transliteration
ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ ।
ತರಿಸಿದ ಸುವಸ್ತುಗಳ ನಧ್ವರದ ತುರಗಮಂ ।
ತಿರುಗಿ ನಿಜನಗರಿಗೆ ಕಳುಹಿ ಬಭ್ರುವಾಹನಂ ಸಮರಕನುವಾಗಿ ನಿಲಲು ॥
ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ ।
ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ ।
ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮುಸುಕಿತು
arasa kēḷarjunaṃ baidu nūkida baḷika ।
tarisida suvastugaḷa nadhvarada turagamaṃ ।
tirugi nijanagarige kaḷuhi babhruvāhanaṃ samarakanuvāgi nilalu ॥
dharaṇimaṃḍalamaṃ caturbalaṃ gīrvāṇa ।
saraṇi maṃḍalamaṃ dhvaja chatra cāmaraṃ ।
taraṇimaṃḍalamaṃ camū pada hatōddhūta rēṇuvrajaṃ musukitu
ಅರ್ಬುದಗಜಂ ಪತ್ತು ಕೋಟಿ ಸುವರೂಥಮೆರೆ ।
ದರ್ಬುದ ತುರಂಗಮಂ ಕೂಡಿತು ಪದಾತಿ ಮೂ ।
ರರ್ಬುದಂ ಜೋಡಿಸಿದ ರಾಹವಪ್ರೌಢರ್ ಸುಬುದ್ಧಿ ಮೊದಲಾದ ಭಟರು ॥
ಸರ್ಬಸ್ನಾಹದಿಂದೊತ್ತಿರಿಸಿದೆತ್ತಣ ಚ ।
ತುರ್ಬಲಮೊ ಕಮಲಜನ ಸೃಷ್ಟಿಯೊಳದೃಷ್ಟಮೆನೆ ।
ಪರ್ಬಿದುದು ನೆಲದಗಲಕಾ ಬಭ್ರುವಾಹನಂ ತರಿಸಿದಂ ಮಣಿರಥವನು
arbudagajaṃ pattu kōṭi suvarūthamere ।
darbuda turaṃgamaṃ kūḍitu padāti mū ।
rarbudaṃ jōḍisida rāhavaprauḍhar subuddhi modalāda bhaṭaru ॥
sarbasnāhadiṃdottirisidettaṇa ca ।
turbalamo kamalajana sr̥ṣṭiyoḷadr̥ṣṭamene ।
parbidudu neladagalakā babhruvāhanaṃ tarisidaṃ maṇirathavanu
ಚಿತ್ರಶೋಭಿತಮಾದ ಮಣಿಮಯ ವರೂಥಮಂ ।
ಚಿತ್ರಾಂಗದೆಯ ತನೂಭವ ನಡರ್ದಂ ಕೂಡೆ ।
ಚಿತ್ರಮಾದುದು ಸಮರ ಮೆರಡುಥಟ್ಟಿನ ಚೂಣಿ ಸಂದಣಿಸಿತುರವಣೆಯೊಳು ॥
ಮಿತ್ರಮಂಡಲವನೊಡೆದೈದುವತಿಭರದಿಂದೆ ।
ಮಿತ್ರಭಟರಂ ತಾಗಿದರ್ ಕಡುಗಲಿಗಳಾಗ ।
ಮಿತ್ರಭಾವದ ನೇಹದಿಂದೆ ಮರುಗದೆ ಮಾಣವಂಭೋರುಹಂಗಳೆನಲು
citraśōbhitamāda maṇimaya varūthamaṃ ।
citrāṃgadeya tanūbhava naḍardaṃ kūḍe ।
citramādudu samara meraḍuthaṭṭina cūṇi saṃdaṇisituravaṇeyoḷu ॥
mitramaṃḍalavanoḍedaiduvatibharadiṃde ।
mitrabhaṭaraṃ tāgidar kaḍugaligaḷāga ।
mitrabhāvada nēhadiṃde marugade māṇavaṃbhōruhaṃgaḷenalu
ತೇರ ವಂಗಡದ ಜರ್ಜಾರವಂ ಗಜದ ಘಂ ।
ಟಾರವಂ ಹಯದ ಹೇಷಾರವಂ ನಡೆವ ಸೇ ।
ನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ ॥
ಜ್ಯಾರವಂ ಭಟರ ಬಾಹಾರವಂ ದಳದ ಬಂ ।
ಭಾರವಂ ರಣ ಕಿಲಕಿಲಾ ರವಂ ಪಟಹ ಢ ।
ಕ್ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು
tēra vaṃgaḍada jarjāravaṃ gajada ghaṃ ।
ṭāravaṃ hayada hēṣāravaṃ naḍeva sē ।
nāravaṃ bhēriya mahāravaṃ bahaḷa kahaḷāravaṃ saṃgaḍisida ॥
jyāravaṃ bhaṭara bāhāravaṃ daḷada baṃ ।
bhāravaṃ raṇa kilakilā ravaṃ paṭaha ḍha ।
kkāravaṃ pudida nānā ravaṃ kivigati kaṭhōravaṃ tīvitaṃdu
ಸಿಂಧ ಸೀಗುರಿ ಛತ್ರಚಾಮರ ಪತಾಕೆಗಳ್ ।
ಸಂದಣಿಸಿ ಗಗನಮಂ ಮುಸುಗಲ್ಕೆ ತವೆ ಮೂಡಿ ।
ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಂತಿಗಳ್ ಭೂಪರ ॥
ಕೆಂದೂಳಡರ್ದು ನಭಮಂ ಮುಸುಕಿತಾಗ ಸುರ ।
ಸಿಂಧುಪ್ರವಾಹ ಮುತ್ತುಂಗ ಶೋಣಾಚಲದ ।
ಬಂಧುರ ತಟಪ್ರದೇಶದೊಳೊಪ್ಪುವೊಜ್ಜರದ ನದಿಯೆಂಬ ತೆರನಾಗಲು
siṃdha sīguri chatracāmara patākegaḷ ।
saṃdaṇisi gaganamaṃ musugalke tave mūḍi ।
daṃdhakāraṃgaḷaṃ kiḍisiduvu ratnābharaṇakāṃtigaḷ bhūpara ॥
keṃdūḷaḍardu nabhamaṃ musukitāga sura ।
siṃdhupravāha muttuṃga śōṇācalada ।
baṃdhura taṭapradēśadoḷoppuvojjarada nadiyeṃba teranāgalu
ಚೂಣಿಯೊಳ್ ಬೆರಸಿ ಪೊಯ್ದಾಡಿದರ್ ತಮತಮಗೆ ।
ಬಾಣ ತೋಮರ ಪರಶೂ ಚಕ್ರವಸಿ ಮುದ್ಗರ ಕೃ ।
ಪಾಣ ಡೊಂಕಣಿ ಕುರಿತ ಸುರಗಿ ಸಲ್ಲೆಹ ಶಕ್ತಿ ಮೊದಲಾದ ಕೈದುಗಳೊಳು ॥
ಕೇಣಮಿಲ್ಲದೆ ಚಾರಿ ಚಳಕ ಚಾಳೆಯ ಚದುರ್ ।
ಪಾಣಿಲಾಘವ ಪಂಥ ಪಾಡುಗಳನರಿದು ಬಿ ।
ನ್ನಾಣದಿಂ ಗಾಯಗಾಣಿಸಿದರತಿಬಲರಲ್ಲಿ ನಾನಾ ಪ್ರಹಾರದಿಂದ
cūṇiyoḷ berasi poydāḍidar tamatamage ।
bāṇa tōmara paraśū cakravasi mudgara kr̥ ।
pāṇa ḍoṃkaṇi kurita suragi salleha śakti modalāda kaidugaḷoḷu ॥
kēṇamillade cāri caḷaka cāḷeya cadur ।
pāṇilāghava paṃtha pāḍugaḷanaridu bi ।
nnāṇadiṃ gāyagāṇisidaratibalaralli nānā prahāradiṃda
ತೂಳಿಸಿದರಾನೆಯಂ ಜೋದರುರವಣಿಸಿ ದೂ ।
ವಾಳಿಸಿದರುಬ್ಬೆದ್ದು ರಾವುತರ್ ತೇಜಿಯಂ ।
ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು॥
ಏಳಿಸಿದರಾಳ್ ತನದ ಪಂತಮಂ ಕಾಲವರ್ ।
ಬೀಳಿಸಿದ ರಹಿತರಂ ಪೊಯ್ದಾಡಿ ತಲೆಯಂ ನಿ ।
ವಾಳಿಸಿದ ರಾಳ್ದಂಗೆ ಕೈದುಗಳ ಹೋರಟೆಯ ಖಣಿ ಕಟಿಲ ರಭಸದಿಂದೆ
tūḷisidarāneyaṃ jōdaruravaṇisi dū ।
vāḷisidarubbeddu rāvutar tējiyaṃ ।
kēḷisidarāhavada nāṭyamaṃ raṇaraṃgadoḷ caṭula paṭurathikaru॥
ēḷisidarāḷ tanada paṃtamaṃ kālavar ।
bīḷisida rahitaraṃ poydāḍi taleyaṃ ni ।
vāḷisida rāḷdaṃge kaidugaḷa hōraṭeya khaṇi kaṭila rabhasadiṃde
ಕಾರ್ಮುಗಿಲ ಸಿಡಿಲ ರವದಂದಮಾಗಿರೆ ಕರೆದ ।
ಕಾರ್ಮುಕಧ್ವನಿ ಮಿಂಚಿನಂತೆ ಪೊಳೆಪೊಳೆವ ಪೊಂ ।
ದೇರ್ಮೆರೆಯೆ ಶರವರ್ಷಮಂ ಕರೆಯುತರ್ಜುನನ ಸಮ್ಮುಖಕೆ ಬಂದು ನಿಂದ ॥
ಮಾರ್ಮಲೆಯಬಾರದಯ್ಯನೊಳೆಂದು ಕಂಡು ನಾಂ ।
ಕೂರ್ಮೆಯಂದೆರಗಿದೊಡೆ ಜರೆದೆಲಾ ರಣದೊಳಿ ।
ನ್ನಾರ್ಮೊಗೆದೊಡಂ ಜೈಸದೊಡೆ ನಿನ್ನಸುತನಲ್ಲೆನುತೆ ಪಾರ್ಥಿ ತೆಗೆದೆಚ್ಚನು
kārmugila siḍila ravadaṃdamāgire kareda ।
kārmukadhvani miṃcinaṃte poḷepoḷeva poṃ ।
dērmereye śaravarṣamaṃ kareyutarjunana sammukhake baṃdu niṃda ॥
mārmaleyabāradayyanoḷeṃdu kaṃḍu nāṃ ।
kūrmeyaṃderagidoḍe jaredelā raṇadoḷi ।
nnārmogedoḍaṃ jaisadoḍe ninnasutanallenute pārthi tegedeccanu
ಪಾರ್ಥಿವರ ಪಂಥಮಲ್ಲೆಂದು ಪೇಳಲ್ಕೆ ಪುರು ।
ಷಾರ್ಥಮಂ ಮಾಳ್ಪೆಲಾ ನಿನ್ನ ಪೌರುಷವ ನಪ ।
ಕೀರ್ತಿಗಂಜುವನಲ್ಲ ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು ॥
ಧೂರ್ತನಹೆ ನೀನೆನುತೆ ನಸುನಗೆಯೊಳಿದಿರಾಗಿ ।
ಸುಕುಮಾರನಂ ಘಾತಿಸಿದನೊಂಬತ್ತು ।
ಕಾರ್ತಸ್ವರಾಂಕಿತ ಸುಪುಂಖದಿಂದೆಸೆವ ಬಾಣಗಳಿಂದನುಸಾಲ್ವನು
pārthivara paṃthamalleṃdu pēḷalke puru ।
ṣārthamaṃ māḷpelā ninna pauruṣava napa ।
kīrtigaṃjuvanalla pitanaṃ pacārisuve matte kāḷagake baṃdu ॥
dhūrtanahe nīnenute nasunageyoḷidirāgi ।
sukumāranaṃ ghātisidanoṃbattu ।
kārtasvarāṃkita supuṃkhadiṃdeseva bāṇagaḷiṃdanusālvanu
ಕೈತವದೆಸುಗೆಯೊ ನಿಜ ಸಾಹಸಮಿನಿತೊ ನಿನ್ನ ।
ಮೈತಲೆಗಲಸಿ ಬಂದುದಾಹವಕೆ ಪೊಸತೆನುತ ।
ಕೈತವಕದಿಂದೆಚ್ಚ ನನುಸಾಲ್ವನಂ ನೂರುಬಾಣದಿಂ ಪಾರ್ಥಸೂನು ॥
ಐತರಲವಂ ಮಧ್ಯಮಾರ್ಗದೊಳ್ ತಡೆಗಡಿದು ।
ದೈತೇಯರಾಜಂ ಕನಲ್ದಾಗ ಬರಸಿಡಿಲ ।
ಹೊಯ್ತೆಗಿಮ್ಮಡಿಯಾಗಿ ಕಣೆಗಳಂ ಕವಿಸಿದಂ ಬಭ್ರುವಾಹನನ ಮೇಲೆ
kaitavadesugeyo nija sāhasaminito ninna ।
maitalegalasi baṃdudāhavake posatenuta ।
kaitavakadiṃdecca nanusālvanaṃ nūrubāṇadiṃ pārthasūnu ॥
aitaralavaṃ madhyamārgadoḷ taḍegaḍidu ।
daitēyarājaṃ kanaldāga barasiḍila ।
hoytegimmaḍiyāgi kaṇegaḷaṃ kavisidaṃ babhruvāhanana mēle
ಉಬ್ಬಿದುದು ಮೈರೋಷದಿಂದೆ ಗಂಟಿಕ್ಕಿದುವು ।
ಹುಬ್ಬುಗಳ್ ಬಭ್ರುವಾಹಂಗೆ ತೆಗೆತೆಗೆದಿಸುತೆ ।
ಬೊಬ್ಬಿರಿದನುನುಸಾಲ್ವನಂ ಮುಸುಕಿದುವು ಕೋಟಿಸಂಖ್ಯೆಯ ಪೊಗರ್ಗಣೆಗಳು ॥
ಅಬ್ಬರಿಸಿ ದೈತ್ಯನದಕಿಮ್ಮಡಿಸಿ ಕೋಲ್ಗರೆದ ।
ನೊಬ್ಬೊಬ್ಬರಂ ಜಯಿಸುವಾತುರದೊಳೆಚ್ಚಾಡ ।
ಲಿಬ್ಬರಂಗದೊಳಿಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು
ubbidudu mairōṣadiṃde gaṃṭikkiduvu ।
hubbugaḷ babhruvāhaṃge tegetegedisute ।
bobbiridanunusālvanaṃ musukiduvu kōṭisaṃkhyeya pogargaṇegaḷu ॥
abbarisi daityanadakimmaḍisi kōlgareda ।
nobbobbaraṃ jayisuvāturadoḷeccāḍa ।
libbaraṃgadoḷiḍiduvaṃbugaḷ baṃduvaruṇāṃbugaḷ saṃgaradoḷu
ಬಾಣದೊಳ್ ಬಣಿತೆಯೊಳ್ ಬಿಲ್ಗಾರತನದ ಬಿ ।
ನ್ನಾಣದೊಳ್ ಬಿಂಕದೊಳ್ ತಾಳಿಕೆಯೊಳುರುತರ ।
ತ್ರಾಣದೊಳ್ ಜಯದೊಳ್ ಚಮತ್ಕೃತಿಯೊಳದಟಿನೊಳ್ ವೀರದೊಳ್ ಭಾರಣೆಯೊಳು ॥
ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್ ।
ಕಾಣೆ ನವರಿರ್ವರ್ಗೆ ಸುಮರಾದ ಕಲಿಗಳಂ ।
ಕ್ಷೋಣಿಯೊಳೆನಲ್ ಬಭ್ರುವಾಹಾನುಸಾಲ್ವರೆಚ್ಚಾಡಿದರ್ ಕೊಳುಗುಳದೊಳು
bāṇadoḷ baṇiteyoḷ bilgāratanada bi ।
nnāṇadoḷ biṃkadoḷ tāḷikeyoḷurutara ।
trāṇadoḷ jayadoḷ camatkr̥tiyoḷadaṭinoḷ vīradoḷ bhāraṇeyoḷu ॥
pāṇilāghavadoḷ parākramada paṃtadoḷ ।
kāṇe navarirvarge sumarāda kaligaḷaṃ ।
kṣōṇiyoḷenal babhruvāhānusālvareccāḍidar koḷuguḷadoḷu
ಕಾಳಗಂ ಸಮಮಾಗಿ ಬರೆ ಕೆರಳ್ದನುಸಾಲ್ವ ।
ನೇಳಂಬಿನಿಂ ಪಾರ್ಥಸುತನ ಬತ್ತಳಿಕೆಯಂ ।
ಕೋಲೆಂಟರಿಂದೆ ಟೆಕ್ಕೆಯವ ನೀರೇಳು ಮಾರ್ಗಣದಿಂದ ಕಾರ್ಮುಕವನು ॥
ಬೀಳಲಿಕ್ಕಡಿಯಾಗಿ ಕತ್ತರಿಸಿ ಕವಚಮಂ ।
ಸೀಳಿದಂ ಕೈಯೊಡನೆ ಸಾಸಿರ ಸರಲ್ಗಳಿಂ ।
ಪೂಳಿದಂ ಸಾರಥಿ ವರೂಥ ವಾಜಿಗಳಂ ಶಿಲೀಮುಖ ವ್ರಾತದಿಂದೆ
kāḷagaṃ samamāgi bare keraḷdanusālva ।
nēḷaṃbiniṃ pārthasutana battaḷikeyaṃ ।
kōleṃṭariṃde ṭekkeyava nīrēḷu mārgaṇadiṃda kārmukavanu ॥
bīḷalikkaḍiyāgi kattarisi kavacamaṃ ।
sīḷidaṃ kaiyoḍane sāsira saralgaḷiṃ ।
pūḷidaṃ sārathi varūtha vājigaḷaṃ śilīmukha vrātadiṃde
ಕ್ಷಣದೊಳಾಗಲೆ ಬಭ್ರುವಾಹನಂ ಮತ್ತೊಂದು ।
ಮಣಿವರೂಥವನಡರ್ದಿಸುತಿರ್ದ ನಿತ್ತಲುರ ।
ವಣಿಸುವನುಸಾಲ್ವ ವಿರಥನಾಗಿ ಕೊಂಡನುರುಗದೆಯ ನೀ ಪಾರ್ಥಸುತನ ॥
ರಣ ಚಮತ್ಕಾರಮೆಂತುಟೊ ತನ್ನ ಮೇಲಕಿ ।
ಟ್ಟಣಿಸಿ ಬಹ ದಾನವನನೆಚ್ಚೊಡುಚ್ಚಳಿಸಿ ಕೂ ।
ರ್ಗಣಿಗಳಡಗಿದುವಿಳೆಯೊಳಸುರೇಂದ್ರನಸವಳಿದು ವಸುಧೆಯಂ ಪಸೆಗೆಯ್ದನು
kṣaṇadoḷāgale babhruvāhanaṃ mattoṃdu ।
maṇivarūthavanaḍardisutirda nittalura ।
vaṇisuvanusālva virathanāgi koṃḍanurugadeya nī pārthasutana ॥
raṇa camatkārameṃtuṭo tanna mēlaki ।
ṭṭaṇisi baha dānavananeccoḍuccaḷisi kū ।
rgaṇigaḷaḍagiduviḷeyoḷasurēṃdranasavaḷidu vasudheyaṃ pasegeydanu
ಅನುಸಾಲ್ವನಳವಳಿಯೆ ಚಾಪಮಂ ಜೇಗೈದು ।
ದನುಜಾರಿತನಯ ನಿದಿರಾಗಿ ನಿಲ್ಲೆಲವೊ ತ ।
ನ್ನನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯ ವನು ॥
ತನುವನುರೆ ನೋಯಿಸೆಂ ಮೈದುನನಲಾ ಸರಸ ।
ಕನುವರದೊಳೆಚ್ಚಾಡಿ ನೋಡುವೆಂ ಕಂಗೆಡದಿ ।
ರೆನುತೆ ನಾಲ್ಕೈದು ಬಾಣಮಗಳಂ ಬೀರಿದಂ ಬಭ್ರವಾಹನನ ಮೇಲೆ
anusālvanaḷavaḷiye cāpamaṃ jēgaidu ।
danujāritanaya nidirāgi nillelavo ta ।
nnane modale vaṃdisade pārthanaṃ kaṃḍu keḍiside rājakāriya vanu ॥
tanuvanure nōyiseṃ maidunanalā sarasa ।
kanuvaradoḷeccāḍi nōḍuveṃ kaṃgeḍadi ।
renute nālkaidu bāṇamagaḷaṃ bīridaṃ babhravāhanana mēle
ಸರಸಭಾವದೊಳೆ ಭಾವಿಸೆ ಭಾವನವರಿಗಿದು।
ವಿರಸವಾಗದೆ ಮಾಣದೀಗ ಸಂಗ್ರಮದೋ।
ಳ್ಸರಸ ಕಾರ್ಮುಕಮಿಲ್ಲ ಸರಸ ಸಿಂಜನಿಯಿಲ್ಲ ಸರಸ ಬಾಣಂಗಳಿಲ್ಲ॥
ಸರಸ ಯುವತಿಯ ಕಟಾಕ್ಷದ ನೆಮ್ಮಗೆಗಳಿಲ್ಲ।
ಪರುಷಮಾಗದೆ ನೋಡುರಣವೆನುತ ಪತ್ತು ಸಾ ।
ಸಿರ ಕೋಲ್ಗಳಂ ಮುಸುಕಿಹರಿತನಯಂದಿಟದನಂಗನೆನಿಸಿದನಾರ್ಜುನಿ
sarasabhāvadoḷe bhāvise bhāvanavarigidu।
virasavāgade māṇadīga saṃgramadō।
ḷsarasa kārmukamilla sarasa siṃjaniyilla sarasa bāṇaṃgaḷilla॥
sarasa yuvatiya kaṭākṣada nemmagegaḷilla।
paruṣamāgade nōḍuraṇavenuta pattu sā ।
sira kōlgaḷaṃ musukiharitanayaṃdiṭadanaṃganenisidanārjuni
ಮುಸುಕಿದ ಸರಳ್ಗಳಂ ಕುಸುರಿದರಿದಂ ಕೂಡೆ ।
ದೆಸೆಗಳೇನಾದುವಾಗಸಮೆತ್ತಲಡಗಿದುದು ।
ವಸುಮತಿಯದೆಲ್ಲಿಹುದು ಶಶಿರವಿಗಳೆಡೆಯಾಟದೆಸಕಂಗಳಾವೆಡೆಯೊಳು ॥
ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ ।
ಪೆಸರುಳ್ಳವರ ಸಮರದಿಸುಗೆಯೊಳ್ ಕಾಣಿನಿದು ।
ಪೊಸತೆಂಬ ತೆರನಾಗೆ ವಿಶಿಖಮಂ ಕೆದರಿದಂ ಬಿಸರುಹಾಕ್ಷನ ತನಯನು
musukida saraḷgaḷaṃ kusuridaridaṃ kūḍe ।
desegaḷēnāduvāgasamettalaḍagidudu ।
vasumatiyadellihudu śaśiravigaḷeḍeyāṭadesakaṃgaḷāveḍeyoḷu ॥
asuraroḷ nirjara prasaradoḷ manujaroḷ ।
pesaruḷḷavara samaradisugeyoḷ kāṇinidu ।
posateṃba teranāge viśikhamaṃ kedaridaṃ bisaruhākṣana tanayanu
ಕರ್ಕಶದೊಳೆಸುವ ಕೃಷ್ಣಾತ್ಮಜನ ಬಾಣಸಂ ।
ಪರ್ಕದಿಂದಾದ ಕತ್ತಲೆಯಂ ಕೆಡಿಸಿದುವಮ ।
ರರ್ಕಳಹುದೆನೆ ಸವ್ಯಸಾಚಿಯ ತನುಜನ ಪೊಸಮಸೆಯ ವಿಶಿಖಪ್ರಭೆಗಳು ॥
ಅರ್ಕರಶ್ಮಿಗಳಂಧಕಾರಂಗಳಡಿಗಡಿಗೆ ।
ತರ್ಕಮಂ ಮಾಳ್ಪಂತೆ ಕಂಗೊಳಿಸಲಾಗ ವೀ ।
ರರ್ಕಳೆಚ್ಚಾಡಿದರ್ ಬಭ್ರುವಾಹನ ರುಕ್ಮಿಣೀಸುತರ್ ಸಂಗರದೊಳು
karkaśadoḷesuva kr̥ṣṇātmajana bāṇasaṃ ।
parkadiṃdāda kattaleyaṃ keḍisiduvama ।
rarkaḷahudene savyasāciya tanujana posamaseya viśikhaprabhegaḷu ॥
arkaraśmigaḷaṃdhakāraṃgaḷaḍigaḍige ।
tarkamaṃ māḷpaṃte kaṃgoḷisalāga vī ।
rarkaḷeccāḍidar babhruvāhana rukmiṇīsutar saṃgaradoḷu
ಅಚ್ಚರಿಯನಿನ್ನು ಜನಮೇಜಯ ನರೇಂದ್ರ ಕೇ ।
ಳಚ್ಯುತನ ಸುತನ ಬಾಣಂಗಳಂ ನಡುವೆ ಮುರಿ ।
ಯೆಚ್ಚನಾತನ ಮಣಿ ವರೂಥ ಭೈತ್ರವ ನಂಬಿನಂಬುಧಿಯ ವೀಚಿಯಿಂದೆ ॥
ಮುಚ್ಚಿದನೊಡನೆ ಮದನನಂಗದೊಳ್ ಕಣಿಗಳಂ ।
ಪೊಚ್ಚಿದಂ ಕೆಲಬಲದೊಳಿಡಿದ ರಿಪುಸೇನೆಯಂ ।
ಕೊಚ್ಚಿದಂ ಕೊಂದನಗಣಿತಬಲವನಾ ಬಭ್ರುವಾಹನಂ ಕೊಳುಗುಳದೊಳು
accariyaninnu janamējaya narēṃdra kē ।
ḷacyutana sutana bāṇaṃgaḷaṃ naḍuve muri ।
yeccanātana maṇi varūtha bhaitrava naṃbinaṃbudhiya vīciyiṃde ॥
muccidanoḍane madananaṃgadoḷ kaṇigaḷaṃ ।
poccidaṃ kelabaladoḷiḍida ripusēneyaṃ ।
koccidaṃ koṃdanagaṇitabalavanā babhruvāhanaṃ koḷuguḷadoḷu
ಕಂಡುರೆ ಕನಲ್ದಾತನಿಸುವಿಸುವ ಕೋಲ್ಗಳಂ ।
ಖಂಡಿಸುತೆ ಮಿಡುಕದಂತವನ ತೇರೊಡನೊಡನೆ ।
ಚಂಡ ಶರಜಾಲಮಂ ಸೈಗೆರೆಯುತುಚ್ಚಳಿಸಿ ಮತ್ತೆ ರಿಪುಬಲದ ಮೇಲೆ ॥
ಹಿಂಡುಗಣೆಯಂ ಕವಿಸಿ ಮಂದಿಯಂ ಕೊಲುತಿರ್ದ ।
ನಂಡಲೆದು ಮೂಜಗವನೈದೆ ಕುಸುಮಾಸ್ತ್ರದಿಂ ।
ದಿಂಡುರುಳ್ಚವ ಶಂಬರಾರಿಗಿದಿರಾರೆನಲ್ ಪುಂಡರೀಕಾಕ್ಷಸೂನು
kaṃḍure kanaldātanisuvisuva kōlgaḷaṃ ।
khaṃḍisute miḍukadaṃtavana tēroḍanoḍane ।
caṃḍa śarajālamaṃ saigereyutuccaḷisi matte ripubalada mēle ॥
hiṃḍugaṇeyaṃ kavisi maṃdiyaṃ kolutirda ।
naṃḍaledu mūjagavanaide kusumāstradiṃ ।
diṃḍuruḷcava śaṃbarārigidirārenal puṃḍarīkākṣasūnu
ಕಡಿಯೆ ರಾವುತರ ತಲೆ ನೆಲಕುದುರೆ ಕುದುರೆಗಳ್ ।
ಮಡಿಯೆ ಜೋದರ್ ಕೆಡೆಯಲಾನೆಗಳ್ ನೆಗಳ್ದರ್ ರಣ ।
ದೆಡೆಯೊಳ್ ಪೊರಳ್ ಶಿರಂ ಪರಿಯಲ್ಕೆ ಸಾರಥಿಯ ರಥಿಯ ತನು ಸೀಳ್ಗಳಾಗೆ ॥
ಕಡುಪಾಂತ ಕಾಲಾಳ್ಗಳೊಡಲಳಿಯೆಲಳಿಯೆದ್ದು ।
ಪಡೆಯನುರೆ ಕೊಂದವು ಶರಧಿ ಭವನ ಭವನ ಪೊಗ
ರಿಡಿದಂಬುಗಳ್ ಪ್ರಳಯ ಶತಕೋಟಿ ಕೋಟಿಯಂ ಪೊಲ್ತು ಸಂಗರದೊಳು
kaḍiye rāvutara tale nelakudure kuduregaḷ ।
maḍiye jōdar keḍeyalānegaḷ negaḷdar raṇa ।
deḍeyoḷ poraḷ śiraṃ pariyalke sārathiya rathiya tanu sīḷgaḷāge ॥
kaḍupāṃta kālāḷgaḷoḍalaḷiyelaḷiyeddu ।
paḍeyanure koṃdavu śaradhi bhavana bhavana poga
riḍidaṃbugaḷ praḷaya śatakōṭi kōṭiyaṃ poltu saṃgaradoḷu
ಧರಣಿತಳದಂತೆ ನವಖಂಡ ಮಯಮಾಗಿ ಯಮ ।
ಪುರದಂತೆ ಬಹು ನರಕಪಾಲಮಯಮಾಗಿ ಸಾ ।
ಗರದಂತೆ ಭೂರಿಜೀವನ ಭಂಗ ಮಯಮಾಗಿ ಸಂಸಾರಚಕ್ರದಂತೆ ॥
ಭರಿತ ಪಾತಕ ಬಂಧ ಮಯದೂಗಿ ಕೈಲಾಸ ।
ಗಿರಿಯಂತೆ ಶಿವಗಣ ವಿಲಾಸ ಮಯಮಾಗಿ ವಿ ।
ಸ್ತರದ ನೈಮಿಶದಂತೆ ಪ್ರಾವೃತ ವಿರಕ್ತ ಮಯವಾಗಿ ರಣಮೆಸೆದಿರ್ದುದು
dharaṇitaḷadaṃte navakhaṃḍa mayamāgi yama ।
puradaṃte bahu narakapālamayamāgi sā ।
garadaṃte bhūrijīvana bhaṃga mayamāgi saṃsāracakradaṃte ॥
bharita pātaka baṃdha mayadūgi kailāsa ।
giriyaṃte śivagaṇa vilāsa mayamāgi vi ।
starada naimiśadaṃte prāvr̥ta virakta mayavāgi raṇamesedirdudu
ಪೆಣಮಯಂ ಮೀರಿ ಮೆದೆಗೆಡೆದಿರ್ದ ವಾಜಿ ವಾ ।
ರಣಮಯಂ ಬಿಡದೆ ಕುಣಿದಾಡುವಟ್ಟೆಗಳ ರಿಂ ।
ಗಣಮಯಂ ನಿಡುಗರುಳ್ ಖಂಡಮಿದುಳಡಗು ಸುಂಟಿಗೆ ಮಜ್ಜೆ ಮಾಂಸಗಳ ॥
ನೆಣಮಯಂ ಪರಿವ ನೆತ್ತರ ಬಸೆಯ ಜಿಗಿಯ ದಾ ।
ರುಣ ಮಯಂ ಯಕ್ಷರಾಕ್ಷಸ ಭೂತಭೇತಾಳ ।
ಗಣಮಯಂ ಸಲೆ ಭಯಂಕರಮಾದುದಂದು ರಣರಂಗಮಾ ಪ್ರದ್ಯುಮ್ನನ
peṇamayaṃ mīri medegeḍedirda vāji vā ।
raṇamayaṃ biḍade kuṇidāḍuvaṭṭegaḷa riṃ ।
gaṇamayaṃ niḍugaruḷ khaṃḍamiduḷaḍagu suṃṭige majje māṃsagaḷa ॥
neṇamayaṃ pariva nettara baseya jigiya dā ।
ruṇa mayaṃ yakṣarākṣasa bhūtabhētāḷa ।
gaṇamayaṃ sale bhayaṃkaramādudaṃdu raṇaraṃgamā pradyumnana
ಅರಿದ ಸುಂಡಿಲ ಕಹಳೆವಿಡಿದೂದಿದವು ಕೆಲವು ।
ಕರಿಯ ರದನಂಗಳ್ಗೆ ತಲೆಯೋಡ ಸೊರೆಗಟ್ಟಿ ।
ನರದ ತಂತ್ರಿಯ ಪೂಡಿ ದಂಡಿಗೆವಿಡಿದು ಪಾಡಿದುವು ಕೆಲವು ತುರಗಂಗಳ ॥
ಖರಮಂ ಪಿಡಿದು ತಾಳವಿಕ್ಕಿದುವು ಕೆಲವು ಕುಂ ।
ಜರಶಿರದ ಮುರಜಂಗಳಂ ಬಾರಿಸಿದುವು ಕೆಲ ।
ವಿರದೆ ಕುಣಿದಾಡಿದುವು ಮರುಳ್ಗಳಾ ರಣಗಂಗದೊಳ್ ನಾಟ್ಯರಚನೆ ಮೆರೆಯೆ
arida suṃḍila kahaḷeviḍidūdidavu kelavu ।
kariya radanaṃgaḷge taleyōḍa soregaṭṭi ।
narada taṃtriya pūḍi daṃḍigeviḍidu pāḍiduvu kelavu turagaṃgaḷa ॥
kharamaṃ piḍidu tāḷavikkiduvu kelavu kuṃ ।
jaraśirada murajaṃgaḷaṃ bārisiduvu kela ।
virade kuṇidāḍiduvu maruḷgaḷā raṇagaṃgadoḷ nāṭyaracane mereye
ಹರಿಸುತಂ ತನ್ನ ಮೋಹಕರವನಿಂತೈದೆ ಸಂ ।
ಹರಿಸುತಂತಕನೊಲಿರೆ ಕಾಣುತೆ ವರೂಥಮಂ ।
ಹರಿಸುತಂತಾ ಬಭ್ರುವಾಹನಂ ಖಾತಿಯಂ ಕೈಕೊಂಡು ಕಣೆಗೆರೆಯುತೆ ॥
ಪರದಳವನೊಳಪೊಕ್ಕು ಸುಭಟರಂ ಸದೆದು ಸೂ ।
ಪ್ಪರೆದಳವಳಿಸಲಾಗ ಭೀತಿಯಿಂ ದೆಸೆದೆಸೆಗೆ ।
ಪರೆದಳವಡಿಸಿದರ್ ಪಲಾಯನವನತಿಬಲರ್ ಪಾರ್ಥನ ಪತಾಕಿನಿಯೊಳು
harisutaṃ tanna mōhakaravaniṃtaide saṃ ।
harisutaṃtakanolire kāṇute varūthamaṃ ।
harisutaṃtā babhruvāhanaṃ khātiyaṃ kaikoṃḍu kaṇegereyute ॥
paradaḷavanoḷapokku subhaṭaraṃ sadedu sū ।
pparedaḷavaḷisalāga bhītiyiṃ desedesege ।
paredaḷavaḍisidar palāyanavanatibalar pārthana patākiniyoḷu
ಕೆಡೆದ ಕರಿಗಳ ಬೆಟ್ಟವಳಿಯ ಗುಂಡುಗಳೊಳಗೆ ।
ಮಡಿದ ಕುದುರೆಗಳ ಪೊಡೆಗಲ್ಲ ಪೊರಳಿಗಳೊಳಗೆ ।
ಕಡಿದ ಕೈಕಾಲ ನರರಟ್ಟೆಗಳ ತುಂಡುಗಳ ಮರಮಟ್ಟೆಗಳ ನೆಳೆಯುತ ॥
ಒಡೆದ ತಲೆಯೋಡದೋಣಿಗಳಿಂದೆ ತಡಿಗೈದು ।
ತಿಡಿದ ಪೆಣವಸೆ ಮಿದುಳ್ಗಳ ಕರ್ದಮಂಗಳಿಂ ।
ಬಿಡದೆ ರುಧಿರ ಪ್ರವಾಹಂ ಪರಿಯೆ ಸವರಿದಂ ಪಾರ್ಥಜಂ ಪರಬಲವನು
keḍeda karigaḷa beṭṭavaḷiya guṃḍugaḷoḷage ।
maḍida kuduregaḷa poḍegalla poraḷigaḷoḷage ।
kaḍida kaikāla nararaṭṭegaḷa tuṃḍugaḷa maramaṭṭegaḷa neḷeyuta ॥
oḍeda taleyōḍadōṇigaḷiṃde taḍigaidu ।
tiḍida peṇavase miduḷgaḷa kardamaṃgaḷiṃ ।
biḍade rudhira pravāhaṃ pariye savaridaṃ pārthajaṃ parabalavanu
ಶಕ್ರತನಯನ ಸಂಭವಂ ಬಳಿಕ ರೋಷದಿಂ ।
ಚಕ್ರಾಯುಧನ ಸುತನ ಸೂತನಂ ಕುದುರೆಯಂ ।
ನಕ್ರಧ್ವಜನ ನತುಲ ಚಾಪಮಂ ಕತ್ತಿರಿಸಿ ವಿರಥನಂ ಮಾಡೆ ಕೂಡೆ ॥
ವಿಕ್ರಮದೊಳಾಗ ಮತ್ತೊಂದು ಮಣಿರಥದಿಂದು ।
ಪಕ್ರಮಿಸಿದಂ ಕಾಳಗಕೆ ಕೃಷ್ಣನಂದನನ ।
ತಿಕ್ರಮಿಸಿ ಮಗುಳಾ ವರೂಥಮಂ ತಡೆಗಡಿದನಾಪಾರ್ಥಿ ಕೊಳುಗುಳದೊಳು
śakratanayana saṃbhavaṃ baḷika rōṣadiṃ ।
cakrāyudhana sutana sūtanaṃ kudureyaṃ ।
nakradhvajana natula cāpamaṃ kattirisi virathanaṃ māḍe kūḍe ॥
vikramadoḷāga mattoṃdu maṇirathadiṃdu ।
pakramisidaṃ kāḷagake kr̥ṣṇanaṃdanana ।
tikramisi maguḷā varūthamaṃ taḍegaḍidanāpārthi koḷuguḷadoḷu
ಪೊಸರಥವನಳವಡಿಸಿ ತಂದು ಹರಿಸೂನು ಬಂ ।
ದಿಸುವನಾ ತೇರನೊಡನೊಡನೆ ಪಾರ್ಥನ ಸುತಂ ।
ಕುಸುರಿದರಿವಂ ಧುರದೊಳಿಂತು ಬಯಲಾದುದು ವರೂಥಮೆಪ್ಪತ್ತು ಬಳಿಕ ॥
ಅಸವಳಿದನಾ ಬಭ್ರುವಾಹನನ ಬಾಣದಿಂ ।
ದಸುರಾರಿ ನಂದನಂ ಕೂಡೆ ಸಂತೈಸಿಕೊಂ ।
ಡಸಮ ಬಲನೊಳ್ ಪಳಂಚಿದನಾಗಳಿರ್ವರ್ಗೆ ಮಸೆದುದಂಕಂ ಖತಿಯೊಳು
posarathavanaḷavaḍisi taṃdu harisūnu baṃ ।
disuvanā tēranoḍanoḍane pārthana sutaṃ ।
kusuridarivaṃ dhuradoḷiṃtu bayalādudu varūthameppattu baḷika ॥
asavaḷidanā babhruvāhanana bāṇadiṃ ।
dasurāri naṃdanaṃ kūḍe saṃtaisikoṃ ।
ḍasama balanoḷ paḷaṃcidanāgaḷirvarge masedudaṃkaṃ khatiyoḷu
ಎದ್ದು ನಭದೊಳ್ ಪಳಂಚುವರೊಮ್ಮೆ ಭೂತಳದೊ ।
ಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದೆ ।
ಹೊದ್ದಿ ಹೋರುವರೊಮ್ಮೆ ತಗಳುಮಗುಳಾಗಿತಾಗುವರೊಮ್ಮೆ ಸರಿಬರಿಯೊಳು ॥
ತಿದ್ದಿ ತುಡುಕುವರೊಮ್ಮೆ ಬಾಣಾಂಬುಧಿಯ ತೆರೆಯೊ ।
ಳದ್ದಿ ಪೊಣರುವರೊಮ್ಮೆ ಮೂರ್ಛೆಯಿಂ ಮೈಮರೆದು ।
ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣ ಪಾರ್ಥರ ತನಯರಾಹವದೊಳು
eddu nabhadoḷ paḷaṃcuvaromme bhūtaḷado ।
ḷiddu heṇaguvaromme baḷasi maṃḍaladiṃde ।
hoddi hōruvaromme tagaḷumaguḷāgitāguvaromme saribariyoḷu ॥
tiddi tuḍukuvaromme bāṇāṃbudhiya tereyo ।
ḷaddi poṇaruvaromme mūrcheyiṃ maimaredu ।
biddu cētarisi kāduvaromme kr̥ṣṇa pārthara tanayarāhavadoḷu
ಕೃತಚಾಪ ಚಾಪಲರ್ ಶಸ್ತ್ರಾಸ್ತ್ರ ನಿಪುಣರು ।
ನ್ನತ ಸತ್ವಸತ್ವರರ್ ದುಸ್ಸಹರಜೇಯರ ।
ಪ್ರತಿಸಮರ ಸಮರಥರ್ ಸಾಹಸಿಗಳಿರ್ವರುಂ ಗಗನ ಗಮನದ ವೀರರು ॥
ಧೃತಮಾನ ಮಾನಸರ್ ಕುಪಿತ ಮುಖಕರ್ಕಶರ್ ।
ವಿತತ ರಣ ತರಣಕರ್ ಚಂಡಭುಜ ಬಲಯುತರ್ ।
ನುತ ಕಾರ್ಷ್ಣಿ ಕಾರ್ಷ್ಣಿಗಳ್ ಕಡುಪಿಂದೆ ಕಾದಿದರ್ ಬೇಸರದೆ ಸಂಗರಡೊಳು
kr̥tacāpa cāpalar śastrāstra nipuṇaru ।
nnata satvasatvarar dussaharajēyara ।
pratisamara samarathar sāhasigaḷirvaruṃ gagana gamanada vīraru ॥
dhr̥tamāna mānasar kupita mukhakarkaśar ।
vitata raṇa taraṇakar caṃḍabhuja balayutar ।
nuta kārṣṇi kārṣṇigaḷ kaḍupiṃde kādidar bēsarade saṃgaraḍoḷu
ಏಳುವರ್ ಬೀಳುವರ್ ಮೂದಲೆಯ ನುಡಿಗಳಂ ।
ಪೇಳುವರ್ ಕೇಳುವರ್ ನಾಂಟಿದ ಶರಂಗಳಂ ।
ಕೀಳುವರ್ ತಾಳುವರ್ ಗಾಯವಂ ವಿಕ್ರಮಾಗ್ನಿಗೆ ಪಗೆಯೊಡಲ ಹವಿಯನು ।
ಬೇಳುವರ್ ಬಾಳುವರ್ ವೀರಸಿರಿಯಂ ತಳೆದು ।
ಸೀಳುವರ್ ತೂಳುವರ್ ಕಣಿಯಿಂದರುಣ ಜಲದೊ ।
ಳಾಳುವರ್ ಪೊಳುವರ್ ಕೋಲ್ಗಳಿಂದಹಿತರಂ ಪ್ರದ್ಯುಮ್ನ ಪಾರ್ಥ ಸುತರು
ēḷuvar bīḷuvar mūdaleya nuḍigaḷaṃ ।
pēḷuvar kēḷuvar nāṃṭida śaraṃgaḷaṃ ।
kīḷuvar tāḷuvar gāyavaṃ vikramāgnige pageyoḍala haviyanu ।
bēḷuvar bāḷuvar vīrasiriyaṃ taḷedu ।
sīḷuvar tūḷuvar kaṇiyiṃdaruṇa jalado ।
ḷāḷuvar poḷuvar kōlgaḷiṃdahitaraṃ pradyumna pārtha sutaru
ಇಂತೊರ್ವರೊರ್ವರ್ಗೆ ಸೋಲದೆ ಸುಪರ್ಣ ಹನು ।
ಮಂತರ ಕದನದಂತೆ ಧರೆಯೊಳ್ ಪೊಣರ್ದು ಮೇ ।
ಣಂತರಿಕ್ಷವನಡರ್ದುರೆ ಪೆಣಗಿದರ್ ಬಳಿಕ ರೌಕ್ಮಿಣೀಯನ ಚಾಪದ ॥
ತಂತುವಂ ಕತ್ತರಿಸಲಾರ್ಜುನಿಯ ಮೇಲೆ ಗದೆ ।
ಯಂ ತೆಗೆದಿಡಲ್ಕವನದಂ ನಡುವೆ ಕಡಿಗೈಯ್ಯ ।
ಲೆಂತೊದಗಿದನೊ ಮತ್ತೆ ಬಿಲ್ವಿಡಿದು ಹರಿಸೂನು ಪಾರ್ಥಿಯಂ ತೆಗೆದೆಚ್ಚನು
iṃtorvarorvarge sōlade suparṇa hanu ।
maṃtara kadanadaṃte dhareyoḷ poṇardu mē ।
ṇaṃtarikṣavanaḍardure peṇagidar baḷika raukmiṇīyana cāpada ॥
taṃtuvaṃ kattarisalārjuniya mēle gade ।
yaṃ tegediḍalkavanadaṃ naḍuve kaḍigaiyya ।
leṃtodagidano matte bilviḍidu harisūnu pārthiyaṃ tegedeccanu
ಪೊಡವಿಗಧಿನಾಥ ಕೇಳ್ ಬಳಿಕಿರ್ವರುಂ ಗಗನ ।
ಕಡರಿ ನಿಜಸತ್ವದಿಂದನ್ನೋನ್ಯಮಾರ್ದಿಸಲ್ ।
ಸಿಡಿಲ ರಭಸದೊಳಂಬುಗಳ್ ತಾಗಲುಭಯ ವೀರರ್ ಕ್ರೋಶಮಾತ್ರಕಾಗಿ ॥
ಸಿಡಿದಂತರಿಕ್ಷದಿಂ ಧಾರಿಣೀತಳಕೆಪೊಡೆ ।
ಗೆಡೆದರಾಕ್ಷಣದೊಳ್ ಪುರಂದರನ ವಜ್ರದಿಂ ।
ಕಡಿವಡೆದು ಮೇದಿನಿಗೆ ಬೀಳ್ವ ಕುಲಗಿರಿಗಳಂತೊಬ್ಬೂಬ್ಬರೊಂದು ಕಡೆಗೆ
poḍavigadhinātha kēḷ baḷikirvaruṃ gagana ।
kaḍari nijasatvadiṃdannōnyamārdisal ।
siḍila rabhasadoḷaṃbugaḷ tāgalubhaya vīrar krōśamātrakāgi ॥
siḍidaṃtarikṣadiṃ dhāriṇītaḷakepoḍe ।
geḍedarākṣaṇadoḷ puraṃdarana vajradiṃ ।
kaḍivaḍedu mēdinige bīḷva kulagirigaḷaṃtobbūbbaroṃdu kaḍege
ಸಾಸಹಮದೆಂತೊ ಭೂತಳಕೆ ಬೀಳುತೆ ಭಭ್ರು ।
ವಾಹನಂ ತರಹರಿಸುತೆಚ್ಚರಿಕೆಗುಂದದೆ ಮ ।
ಹಾಹವಕೆ ಬೇರೊಂದು ಮಣಿವರೂಥವನಡರ್ದಾಗ ತನ್ನಭಿಮುಖದೊಳು ॥
ಆ ಹರಿಕುಮಾರನಂ ಕಾಣದೆ ಧನಂಜಯನ ।
ಮೋಹರವನೈದಿದಂ ಪಸಿದ ಪೆರ್ಬುಲಿ ಮೃಗಸ ।
ಮೂಹಮಂ ಪುಗುವಂತೆ ಕಾಡಾನೆ ಕದಳಿಗಳ ತುರುಗಳಂ ತುಡುಕುವಂತೆ
sāsahamadeṃto bhūtaḷake bīḷute bhabhru ।
vāhanaṃ taraharisuteccarikeguṃdade ma ।
hāhavake bēroṃdu maṇivarūthavanaḍardāga tannabhimukhadoḷu ॥
ā harikumāranaṃ kāṇade dhanaṃjayana ।
mōharavanaididaṃ pasida perbuli mr̥gasa ।
mūhamaṃ puguvaṃte kāḍāne kadaḷigaḷa turugaḷaṃ tuḍukuvaṃte
ಕವಿದರಾಂತರ್ ನಿಂದರುರುಬಿದರ್ ತರುಬಿದರ್ ।
ತಿವಿದರೆಚ್ಚರ್‍ಪೊಯ್ದುರೊತ್ತಿದರ್ ಮುತ್ತಿದರ್ ।
ವಿವಧಾಯುಧಂಗಳಂ ಬೀರಿದರ್ ಮೀರಿದರ್ ವಿಗ್ರಹಾವೇಶದಿಂದ ॥
ತವೆ ತಾಗಿದರ್ ತಡೆದರಡರಿದರ್ ತೊಡರಿದರ್ ।
ತವಕದಿಂ ತಮತಮಗೆ ಕಾದಿದರ್ ಮೋದಿದರ್ ।
ಬವರದೊಳ್ ಪಾರ್ಥಿಯಂ ಬಳಸಿದರ್ ಸೆಳಸಿದರ್ ನರನ ಸೇನೆಯ ಸುಭಟರು
kavidarāṃtar niṃdarurubidar tarubidar ।
tividareccarpoydurottidar muttidar ।
vivadhāyudhaṃgaḷaṃ bīridar mīridar vigrahāvēśadiṃda ॥
tave tāgidar taḍedaraḍaridar toḍaridar ।
tavakadiṃ tamatamage kādidar mōdidar ।
bavaradoḷ pārthiyaṃ baḷasidar seḷasidar narana sēneya subhaṭaru
ಒತ್ತರಿಸಿ ಫಲುಗುಣನ ಸೂನುವಂ ಭಾನುವಂ ।
ಮುತ್ತಿದುವು ಚಾತುರಂಗಾಳಿಯಂ ಧೂಳಿಯಂ ।
ಬಿತ್ತರದ ಮಣಿಪುರ ಸ್ವಾಮಿಯಂ ಭೂಮಿಯಂ ಸಲೆ ಮುಸುಕಿತಾ ಕ್ಷಣದೊಳು ॥
ಮೊತ್ತದ ಶರಾವಳಿಯ ಸೋನೆಯುಂ ಸೇನೆಯಂ ।
ಮತ್ತೆ ಚಿತ್ರಾಂಗದೆಯ ಜಾತನಂ ಧಾತನಂ ।
ಹತ್ತಿ ಹರಿದುದು ಬಲಮಶೇಷಮುಂ ಘೋಷಮುಂ ಘೋರತರ ಸಂಗರದೊಳು
ottarisi phaluguṇana sūnuvaṃ bhānuvaṃ ।
muttiduvu cāturaṃgāḷiyaṃ dhūḷiyaṃ ।
bittarada maṇipura svāmiyaṃ bhūmiyaṃ sale musukitā kṣaṇadoḷu ॥
mottada śarāvaḷiya sōneyuṃ sēneyaṃ ।
matte citrāṃgadeya jātanaṃ dhātanaṃ ।
hatti haridudu balamaśēṣamuṃ ghōṣamuṃ ghōratara saṃgaradoḷu
ರಿಪುಬಲದ ಮುತ್ತಿಗೆಯ ಕೋಲಾಹಲಂಗಳಂ ।
ವಿಪುಲ ಶಸ್ತ್ರಾಸ್ತ್ರ ಪ್ರಯೋಗಂಗಳುರುಬೆಯಂ ।
ಸಪದಿ ಪ್ರಹಾರದಾಯುಧ ಸಮೂಹಂಗಳಂ ಕಂಡು ಫಲುಗುಣನ ಸೂನು ॥
ಕುಪಿತ ಬುದ್ಧ ಭ್ರಕುಟಿ ಮುಖನಾಗಿ ವಹಿಲದಿಂ ।
ದ್ವಿಪಹಯ ವರೂಥ ಪತ್ತಿಗಳೆನಿತು ಕವಿದುವನಿ ।
ತಪರಿಮಿತ ಬಾಣಮಂ ಸುರಿದನರಿದಂ ಪೊರೆದನಂತಕ ಪುರದ ಸಿರಿಯನು
ripubalada muttigeya kōlāhalaṃgaḷaṃ ।
vipula śastrāstra prayōgaṃgaḷurubeyaṃ ।
sapadi prahāradāyudha samūhaṃgaḷaṃ kaṃḍu phaluguṇana sūnu ॥
kupita buddha bhrakuṭi mukhanāgi vahiladiṃ ।
dvipahaya varūtha pattigaḷenitu kaviduvani ।
taparimita bāṇamaṃ suridanaridaṃ poredanaṃtaka purada siriyanu
ಅರಸ ಕೇಳಾಶ್ಚರ್ಯಮಂ ಬಳಿಕ ಪಾರ್ಥಜನ ।
ಶರವರ್ಷದೊಳ್ ನನೆಯದವರಿಲ್ಲ ಪಾಂಡವನ ।
ಪರಿವಾರದೊಳ್ ಕರಿ ತುರಗ ರಧದ ಪಾಳೆಯದೊಳಿರ್ದ ಜನಜಂಗುಳಿಯೊಳು ॥
ಅರರೆ ಬಿಲ್ಗಾರತನದೇಳ್ಗೆಯೆಂತುಟೊ ಜಗ ।
ದ್ಭರಿತನಾಗಿಹ ವಿಷ್ಣು ಮಾಯಾ ಪ್ರಭಾವದಂ ।
ತಿರೆ ಬಭ್ರುವಾಹನನ ಬಾಣಂಗಳೆಲ್ಲರಂ ಮುಸುಕಿ ಮೋಹಿಸುತಿರ್ದುವು
arasa kēḷāścaryamaṃ baḷika pārthajana ।
śaravarṣadoḷ naneyadavarilla pāṃḍavana ।
parivāradoḷ kari turaga radhada pāḷeyadoḷirda janajaṃguḷiyoḷu ॥
arare bilgāratanadēḷgeyeṃtuṭo jaga ।
dbharitanāgiha viṣṇu māyā prabhāvadaṃ ।
tire babhruvāhanana bāṇaṃgaḷellaraṃ musuki mōhisutirduvu
ರಂಭಾದಿಗಳ ಕುಚದ ಕುಂಕುಮದೊಳಾಳ್ದಹಾ ।
ರಂ ಭಾರಿಯಂಕದೊಳ್ ಮಡಿದ ವೀರಾಂಗ ಪರಿ ।
ರಂಭಾತಿಶಯದ ಸಮ್ಮರ್ದನದೊಳಾತನಂ ಪರಿದು ಸೂಸುವ ತೆರೆದೊಳು ॥
ಕುಂಭಿಕುಂಭದ ಸುಮುಕ್ತಾಫಲಂಗಳ್ ಶಾತ ।
ಕುಂಭ ಚಿತ್ರಿತ ಮಾರ್ಗಣದ ರುಚಿಗಳೊಡನೆ ರಣ ।
ಕುಂಭಿನಿಗೆ ಬೀಳುತಿರ್ದುವು ಬಭ್ರುವಾಹನನ ತೀವ್ರತರದೆಸುಗೆಯಿಂದೆ
raṃbhādigaḷa kucada kuṃkumadoḷāḷdahā ।
raṃ bhāriyaṃkadoḷ maḍida vīrāṃga pari ।
raṃbhātiśayada sammardanadoḷātanaṃ paridu sūsuva teredoḷu ॥
kuṃbhikuṃbhada sumuktāphalaṃgaḷ śāta ।
kuṃbha citrita mārgaṇada rucigaḷoḍane raṇa ।
kuṃbhinige bīḷutirduvu babhruvāhanana tīvrataradesugeyiṃde
ಮುರಿದುವಗಣಿತ ರಥದ ರಾಜಿಗಳ್ ತೇಜಿಗಳ್ ।
ತೊರೆದುವಸುವಂ ಮಡಿದುವಾನೆಗಳ್ ಸೇನೆಗಳ್ ।
ಕುರಿದರಿವೊಲಾದರಿರಿವೀರರೊಳ್ ಪಾರ್ಥ ನಂದನನ ಮುಂದೆ ॥
ಇರಿದು ಮೆರೆಯಲ್ಕಾಣಿನೊರ್ವರು ಸರ್ವರುಂ ।
ನೆರೆ ಗೆಲ್ದತುಳ ಮಾರ್ಗಣದಿಂದೆ ರಣದಿಂದೆ ।
ಹೆರದೆಗೆದು ಕಂಡಕಡೆಗೋಡಿದರ್ ನೋಡಿದರ್ ಜೀವದುಳಿವಂ ಸುಭಟರು
muriduvagaṇita rathada rājigaḷ tējigaḷ ।
toreduvasuvaṃ maḍiduvānegaḷ sēnegaḷ ।
kuridarivolādaririvīraroḷ pārtha naṃdanana muṃde ॥
iridu mereyalkāṇinorvaru sarvaruṃ ।
nere geldatuḷa mārgaṇadiṃde raṇadiṃde ।
heradegedu kaṃḍakaḍegōḍidar nōḍidar jīvaduḷivaṃ subhaṭaru
ತಾಗಿ ದಂದುಗಗೊಂಡ ನನುಸಾಲ್ವನಂಗೈಸಿ ।
ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ ।
ನೀಗಿದಂ ಮಾನಮಂ ಯೌವನಾಶ್ವಂ ತಡೆದು ಸೋಲ್ದಂ ಸುವೇಗನಾಂತು ॥
ಸಾಗಿದಂ ಧುರದಿಂದೆ ಸಿತಕೇತು ಸೆಣಸಿ ತಲೆ ।
ದೂಗಿದಂ ಪರಿಭವಕ್ಕನಿರುದ್ಧ ನಿರದಿಳೆಗೆ ।
ಬಾಗಿದಂ ಮೈಮರೆದು ಕೃತವರ್ಮ ಸಾತ್ಯಕಿ ಗಳಿದಿರಾಗಿ ದೆಸೆಗೆಟ್ಟರು
tāgi daṃdugagoṃḍa nanusālvanaṃgaisi ।
bīgidaṃ karṇajaṃ haṃsadhvajaṃ keṇaki ।
nīgidaṃ mānamaṃ yauvanāśvaṃ taḍedu sōldaṃ suvēganāṃtu ॥
sāgidaṃ dhuradiṃde sitakētu seṇasi tale ।
dūgidaṃ paribhavakkaniruddha niradiḷege ।
bāgidaṃ maimaredu kr̥tavarma sātyaki gaḷidirāgi desegeṭṭaru
ಏನೆಂಬೆನಾರಣ ವಸಂತದೊಳ್ ನೆರೆದ ಜಯ ।
ಮಾನಿನಿ ವಿಮುಖಮಾದ ವಿರಹದಿಂ ತಪಿಸುವ ಭ ।
ಟಾನೀಕಮಂ ಬೆದರಿಸದೆ ಮಾಣದೆಂಬಿನಂ ಪಾರ್ಥಿಯ ಶಿಲೀಮುಖಾಳಿ ॥
ದಾನ ಮಾತಂಗ ಘಟೆಗೆರೆಗಿದುದು ಸ್ಯಂದನ ವಿ ।
ತಾನಮಂ ಡೋರುಗಳೆದು ಗರಿಯ ಗಾಳಿಯಿಂ ।
ಬಾನೆಡೆಗೆ ತೀಡಿದುದು ಶತಪತ್ರದಳದ ಮೇಲೈದಿ ವಿಸಟಂ ಬರಿದುದು
ēneṃbenāraṇa vasaṃtadoḷ nereda jaya ।
mānini vimukhamāda virahadiṃ tapisuva bha ।
ṭānīkamaṃ bedarisade māṇadeṃbinaṃ pārthiya śilīmukhāḷi ॥
dāna mātaṃga ghaṭegeregidudu syaṃdana vi ।
tānamaṃ ḍōrugaḷedu gariya gāḷiyiṃ ।
bāneḍege tīḍidudu śatapatradaḷada mēlaidi visaṭaṃ baridudu
ಜೋದ ರಾವುತ ರಥಿಕರಳಿದಾನೆ ಕುದುರೆ ತೇರ್ ।
ಪೋದುವೆಣ್ದೆಸೆಗೆ ತಮ್ಮಿಚ್ಛೆಯಿಂ ಪಟ್ಟಣದ ।
ಬೀದಿಗರ್ ಕೂಡಿದರ್ ಲಾಯದೊಳ್ ಸೂರೆಗೊಂಡರ್ ಭೂಷಣಾದಿಗಳನು ॥
ಕಾದುವ ಕಲಿಗಳಿಲ್ಲ ಪಡೆಯೊಳ್ ಪಲಾಯನವ ।
ನಾದಿರಿಸಿದರ್ ಭಟರ್ ಪ್ರದ್ಯುಮ್ನ ಮೊದಲಾದ ।
ರಾದಿಯೊಳ್ ಬಿದ್ದು ಮೋಹಿತರಾದರಾ ಬಭ್ರುವಾಹನನ ಕೋಲ್ಗಳಿಂದ
jōda rāvuta rathikaraḷidāne kudure tēr ।
pōduveṇdesege tammiccheyiṃ paṭṭaṇada ।
bīdigar kūḍidar lāyadoḷ sūregoṃḍar bhūṣaṇādigaḷanu ॥
kāduva kaligaḷilla paḍeyoḷ palāyanava ।
nādirisidar bhaṭar pradyumna modalāda ।
rādiyoḷ biddu mōhitarādarā babhruvāhanana kōlgaḷiṃda
ಪಡೆ ಪಡಪುಗೆಟ್ಟು ದೆಸೆದೆಸೆಗೋಡುತಿರ್ಪು ದಂ ।
ತಡೆತಡೆದು ಕಡುಗಲಿಗಳಡಗೆಡಹುತಿರ್ಪು ದಂ ।
ಹೊಡೆಹೊಡೆದು ಪುರಕಾನೆ ಕುದುರೆಯಂ ಕೂಡಿಕೊಳುತಿರ್ಪುದಂ ದೊರೆದೊರೆಗಳು ॥
ನಿಡುನಿಡುಸರಳ್ ನಾಂಟಿ ಮೂರ್ಛೆವಡೆದಿರ್ಪುದಂ ।
ನಡುನಡುಗುತತಿಬಲರ್ ಕೈ ಮರೆಯುತಿರ್ಪುದಂ ।
ಬಿಡಬಿಡದೆ ಫಲುಗುಣಂ ನೋಡಿ ಖತಿಯಿಂದೆ ಘುಡಿಘುಡಿಸಿ ಕಿಡಿಕಿಡಿಯಾದನು
paḍe paḍapugeṭṭu desedesegōḍutirpu daṃ ।
taḍetaḍedu kaḍugaligaḷaḍageḍahutirpu daṃ ।
hoḍehoḍedu purakāne kudureyaṃ kūḍikoḷutirpudaṃ doredoregaḷu ॥
niḍuniḍusaraḷ nāṃṭi mūrchevaḍedirpudaṃ ।
naḍunaḍugutatibalar kai mareyutirpudaṃ ।
biḍabiḍade phaluguṇaṃ nōḍi khatiyiṃde ghuḍighuḍisi kiḍikiḍiyādanu
ಗಾಂಡೀವಮಂ ತುಡುಕಿ ಟಂಕಾರಮಂಬುಜ ಭ ।
ವಾಂಡಮಂ ತುಂಬದಿರನೆಂಬಿನಂ ಜೇಗೈದು ।
ತಾಂಡವದ ಮೃಡನ ಸಾರೂಪ್ಯಮಂ ಕೈಕೊಂಡು ರೋಷತಾಮ್ರಾಕ್ಷನಾಗಿ ॥
ಪಾಂಡವಂ ಮಣಿರಥದೊಳೆಸೆವ ನಡುವಗಲ ಮಾ ।
ರ್ತಾಂಡನಂತುಜ್ವಲಿಸುತೈದಿದಂ ಕಾಳಗಕೆ ।
ಖಾಂಡವದಹನದಂದು ತನ್ನ ಮೇಲಮರಪತಿ ಮುಳಿದು ಕದನಕೆ ಬಹವೊಲು
gāṃḍīvamaṃ tuḍuki ṭaṃkāramaṃbuja bha ।
vāṃḍamaṃ tuṃbadiraneṃbinaṃ jēgaidu ।
tāṃḍavada mr̥ḍana sārūpyamaṃ kaikoṃḍu rōṣatāmrākṣanāgi ॥
pāṃḍavaṃ maṇirathadoḷeseva naḍuvagala mā ।
rtāṃḍanaṃtujvalisutaididaṃ kāḷagake ।
khāṃḍavadahanadaṃdu tanna mēlamarapati muḷidu kadanake bahavolu
ಆ ನರಂ ಕೋಪಮಂ ತಾಳ್ದು ನಿಜಚಾಪಮಂ ।
ಜ್ಯಾ ನಾದಮಂ ಮಾಡೆ ಹಂಸಧ್ವಜಂ ಕೂಡೆ ।
ಸೇನೆ ಸಹಿತುರುಬಿದಂ ಪಾರ್ಥಿಯಂ ತುರುಬಿದಂ ಕೂರ್ಗಣಿಗಳಂ ಕರೆಯುತೆ ॥
ಬಾನೆಡೆಯೊಳೆತ್ತಲುಂ ದೆಸೆದೆಸೆಯ ಸುತ್ತಲುಮ ।
ನೂನ ಶರಜಾಲಮಯಮಾಗಿರ್ದುದಾ ಸಮಯ ।
ಮೇನೆಂಬೆನಚ್ಚರಿಯ ಕಾಳಗದ ಹೊಸಪರಿಯನತಿ ಭಯಂಕರಮಾಗಲು
ā naraṃ kōpamaṃ tāḷdu nijacāpamaṃ ।
jyā nādamaṃ māḍe haṃsadhvajaṃ kūḍe ।
sēne sahiturubidaṃ pārthiyaṃ turubidaṃ kūrgaṇigaḷaṃ kareyute ॥
bāneḍeyoḷettaluṃ desedeseya suttaluma ।
nūna śarajālamayamāgirdudā samaya ।
mēneṃbenaccariya kāḷagada hosapariyanati bhayaṃkaramāgalu
ಬಳಿಕ ಹಂಸಧ್ವಜಂಗಾ ಬಭ್ರುವಾಹನಂ ।
ಗಳವಿಯೊಳ್ ಕಾಳೆಗಂ ಪೂಣ್ದುದು ಕಠೋರಮೆನೆ ।
ದಳಕೆ ದಳಮಗ್ಗಳಿಕೆಗಗ್ಗಳಿಕೆ ಧೃತಿಗೆ ಧೃತಿ ಕೊಲೆಗೆ ಕೊಲೆ ಕೋಲ್ಗೆ ಕೋಲು ॥
ಮುಳಿಸಿಂಗೆ ಮುಳಿಸು ಗಾಯಕೆ ಗಾಯ ಮದಟಿಗದ ।
ಟಳವಡಿಕೆಗಳವಡಿಕೆ ಸಮಮಾಗೆ ದೇವಪುರ ।
ನಿಳಯ ಲಕ್ಷ್ಮೀವರನ ಮೈದುನಂ ತಲೆದೂಗೆ ಮೆಚ್ಚಿ ಸುರರುಲಿಯೆ ಮೇಗೆ
baḷika haṃsadhvajaṃgā babhruvāhanaṃ ।
gaḷaviyoḷ kāḷegaṃ pūṇdudu kaṭhōramene ।
daḷake daḷamaggaḷikegaggaḷike dhr̥tige dhr̥ti kolege kole kōlge kōlu ॥
muḷisiṃge muḷisu gāyake gāya madaṭigada ।
ṭaḷavaḍikegaḷavaḍike samamāge dēvapura ।
niḷaya lakṣmīvarana maidunaṃ taledūge mecci suraruliye mēge
Keys: ← → turn the page, J K step through the verses.
Illustration: Verse & Place (Project-owned).