Jaimini Bharata 7.12
ನರಕಾಂತ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ । ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ । ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು ॥ ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರ । ಸರದ ಸುಯ್ದಾನದಿಂದಿರ್ದನಂದು ಪರಿವಾ । ಸರದ ಸೂರ್ಯೋದಯದೊಳಲ್ಲಿಂದೆ ಯಾದವರ ದಂಡು ನಡೆದುದು ಪಥದೊಳು
narakāṃta kēḷ baḷika rukmiṇiya mātiṃge । narakāṃtakaṃ mecci nasunagute niṃdu vā । narakāṃtakētanāgrajanoḷ sarasavāḍutolaviṃde pāḷeyavanu ॥ sarada suttaṇa tīradoḷ biḍisi subhaṭapra । sarada suydānadiṃdirdanaṃdu parivā । sarada sūryōdayadoḷalliṃde yādavara daṃḍu naḍedudu pathadoḷu