Skip to content

Jaimini Bharata 8.18

ಸಣ್ಣನಡು ಸೈನಿಮಿರೆ ತೋಳಮೊದಲೊಳ್ಪೆಸೆಯೆ । ತಿಣ್ಣಮೊಲೆಗಳ್ ಪೊದಳೆ ಬೆನ್ನ ಸೋರ್ಮುಡಿಯಲೆಯೆ । ಕಣ್ಣ ಬೆಳಗಾಗಸವನಾವರಿಸೆ ಮೊಗಮೆತ್ತಿ ತುದಿಗಾಲ್ಗಳಿಂದೆ ನಿಂದು ॥ ಬಣ್ಣವಳಿಯದ ಪೂಗಳಂ ಕೊಯ್ದು ಬೆಂಡಾಗಿ । ತಣ್ಣೆಲರ್ಗೊಡ್ಡಿ ಮೈಬೆಮರನಾರಿಸಿಕೊಂಡು । ಪೆಣ್ಣುವಿಂಡಾ ಬನದೊಳಲರ್ಗಳಂ ತಮ್ಮ ತನುವಿನ ಕಂಪಿನಿಂ ಪೊರೆದರು

saṇṇanaḍu sainimire tōḷamodaloḷpeseye । tiṇṇamolegaḷ podaḷe benna sōrmuḍiyaleye । kaṇṇa beḷagāgasavanāvarise mogametti tudigālgaḷiṃde niṃdu ॥ baṇṇavaḷiyada pūgaḷaṃ koydu beṃḍāgi । taṇṇelargoḍḍi maibemaranārisikoṃḍu । peṇṇuviṃḍā banadoḷalargaḷaṃ tamma tanuvina kaṃpiniṃ poredaru

Report an error