Jaimini Bharata 8.19
ನಿಲುಕಿ ಪೂಗೊಯ್ವ ಲಲಿತಾಂಗಿಯರ ಬಟ್ಟಬ । ಲ್ಮೊಲೆಗಳಂ ಪೊರಲಾರದಸಿಯ ಸೆಳೆನಡುವಿದು ಶಿ । ಥಿಲಮೆಂದು ಹರಿನೀಲದೆಸೆವೊಂದು ಸಣ್ಣಸರಳಂ ಮನೋಜಂ ನಿರ್ಮಿಸಿ ॥ ನಿಲಿಸಿ ನಿಗಿದನೊ ಮೂರುಕಟ್ಟನೆಡೆಗೆಡೆಗೆನಲ್ । ಸಲೆ ರಾಜಿಸಿತು ವಳಿತ್ರಯದ ಚೆಲ್ವಿಕೆಯಿಂದೆ । ಲಲನೆಯರ ಮಧ್ಯದೊಳೊಗೆದ ಬಾಸೆ ಕುಸುಮಾಪಚಯಸಮಯದೊಳ್ ಪೊಸತೆನೆ
niluki pūgoyva lalitāṃgiyara baṭṭaba । lmolegaḷaṃ poralāradasiya seḷenaḍuvidu śi । thilameṃdu harinīladesevoṃdu saṇṇasaraḷaṃ manōjaṃ nirmisi ॥ nilisi nigidano mūrukaṭṭaneḍegeḍegenal । sale rājisitu vaḷitrayada celvikeyiṃde । lalaneyara madhyadoḷogeda bāse kusumāpacayasamayadoḷ posatene