Jaimini Bharata 8.46
ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ । ಗುಂಜಾಭರಣಮೊ ಮೇಣ್ ಗಗನಾಂಬುದಿಯ ತಡಿಯ । ಮಂಜು ವಿದ್ರುಮ ಲತೆಯೊ ಮೇಣಪರ ದಿಗ್ವಧುವಿನಂಗ ಕುಂಕುಮ ಲೇಪವೊ ॥ ಅಂಜನೇಭದ ಸಿಂಧುರವೊ ಶೀವನ ಮಸ್ತಕದ। ಕಂಚೆಡೆಯೊ ವಿಷ್ಣು ಪದ ಪಂಕರುಹದರುಣತೆಯೊ । ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಕಾಬೈಗುಗೆಂಪೆಸೆದುದು
raṃjisuva paścimācala kirātaṃ toṭṭa । guṃjābharaṇamo mēṇ gaganāṃbudiya taḍiya । maṃju vidruma lateyo mēṇapara digvadhuvinaṃga kuṃkuma lēpavo ॥ aṃjanēbhada siṃdhuravo śīvana mastakada। kaṃceḍeyo viṣṇu pada paṃkaruhadaruṇateyo । saṃjeveṇṇuṭṭa raktāṃbaravo pēḷenalkābaigugeṃpesedudu